Karnataka Legislative Assembly ಕಳೆದ ಅಧಿವೇಶನದ ಅವಧಿಯಲ್ಲಿ ದಿನಾಂಕ: 21.03.2025ರಂದು ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಾ, ಆಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿದ್ದರಿಂದ ಮಾನ್ಯ ವಿಧಾನಸಭಾ ಸದಸ್ಯರುಗಳಾದಂತಹ ಶ್ರೀ ದೊಡ್ಡನಗೌಡ ಹೆಚ್, ಪಾಟೀಲ್, (ವಿರೋಧ ಪಕ್ಷದ ಮುಖ್ಯ ಸಚೇತಕರು), ಡಾ: ಅಶ್ವಥ್‌ನಾರಾಯಣ್ ಸಿ.ಎನ್.. ಶ್ರೀ ಎಸ್.ಆರ್. ವಿಶ್ವನಾಥ್, ಶ್ರೀ ಬಿ.ಎ. ಬಸವರಾಜ, ಶ್ರೀ ಎಂ.ಆರ್. ಪಾಟೀಲ್, ಶ್ರೀ ಚನ್ನಬಸಪ್ಪ (ಚೆನ್ನಿ), ಶ್ರೀ ಬಿ. ಸುರೇಶ್ ಗೌಡ, ಶ್ರೀ ಉಮಾನಾಥ್ ಎ. ಕೋಟ್ಯಾನ್, ಶ್ರೀ ಶರಣು ಸಲಗರ, ಡಾ: ಶೈಲೇಂದ್ರ ಬೆಲ್ದಾಳೆ, ಶ್ರೀ ಸಿ.ಕೆ. ರಾಮಮೂರ್ತಿ, ಶ್ರೀ ಯಶಪಾಲ್ ಎ. ಸುವರ್ಣ, ಶ್ರೀ ಬಿ.ಪಿ. ಹರೀಶ್, ಡಾ: ಭರತ್ ಶೆಟ್ಟಿ ವೈ., ಶ್ರೀ ಮುನಿರತ್ನ, ಶ್ರೀ ಬಸವರಾಜ್, ಮತ್ತಿಮೂಡ್, ಶ್ರೀ ಧೀರಜ್ ಮುನಿರಾಜು ಮತ್ತು ಡಾ: ಚಂದ್ರು ಲಮಾಣಿ ಅವರುಗಳನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 348ರ ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮಂಡಿಸಿದ ಹಾಗೂ ಸದನವು ಅಂಗೀಕರಿಸಿದ ಪ್ರಸ್ತಾವದಂತೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ
ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತ್ತುಗೊಳಿಸಿದ್ದ ನಿರ್ಣಯವನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಮಾನ್ಯ ವಿರೋಧ ಪಕ್ಷದ ನಾಯಕರು ಹಾಗೂ ಅಮಾನತ್ತುಗೊಂಡ ಸದಸ್ಯರು ಸಲ್ಲಿಸಿದ್ದ ಮನವಿಯ ಬಗ್ಗೆ ದಿನಾಂಕ: 25.05.2025ರಂದು ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪ ಮುಖ್ಯಮಂತ್ರಿಯವರು, ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು, ಮಾನ್ಯ ಉಪ ಸಭಾಧ್ಯಕ್ಷರು ಮತ್ತು ಮಾನ್ಯ ವಿರೋಧ ಪಕ್ಷದ ನಾಯಕರೊಂದಿಗೆ ಸನ್ಮಾನ್ಯ ಸಭಾಧ್ಯಕ್ಷರು ಸಭೆ ನಡೆಸಿರುತ್ತಾರೆ.
Karnataka Legislative Assembly ಸದರಿ ಸಭೆಯಲ್ಲಿ, ಅಮಾನತ್ತಿನ ಅವಧಿಯಲ್ಲಿ ಈಗಾಗಲೇ 2 ತಿಂಗಳು ಕಳೆದಿದ್ದು, ಸದರಿ ಅವಧಿಯಲ್ಲಿ ಅಮಾನತ್ತುಗೊಂಡಿರುವ ಸದಸ್ಯರುಗಳು ತಮ್ಮ ನಡೆಯ ಬಗ್ಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದು ಹಾಗೂ ಇನ್ನು ಮುಂದೆ ಸಂವಿಧಾನಾತ್ಮಕವಾಗಿ ಸದನದ ಕಾರ್ಯಕಲಾಪಗಳಲ್ಲಿ ಸಂಯಮದಿಂದ ನಡೆದುಕೊಳ್ಳುವುದಾಗಿ ತಿಳಿಸಿರುವುದನ್ನು ಪರಿಗಣಿಸಿ ಆಡಳಿತ ಪಕ್ಷದ ಶಾಸಕಾಂಗ ನಾಯಕರಾದ ಮಾನ್ಯ ಮುಖ್ಯಮಂತ್ರಿಯವರು, ಮಾನ್ಯ ಉಪ ಮುಖ್ಯಮಂತ್ರಿಯವರು. ಮಾನ್ಯ ವಿರೋಧ ಪಕ್ಷದ ನಾಯಕರು, ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಒಮ್ಮತ ಸೂಚಿಸಿದ ಹಿನ್ನೆಲೆಯಲ್ಲಿ
ಮುಂದಿನ ದಿನಗಳಲ್ಲಿ ಮಾನ್ಯ ಸದಸ್ಯರುಗಳು ಸಂವಿಧಾನತ್ಮಕವಾಗಿ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಅಮಾನತುಗೊಳಿಸಲಾಗಿರುವ ಮಾನ್ಯ ವಿಧಾನಸಭಾ ಸದಸ್ಯರುಗಳಾದಂತಹ ಶ್ರೀ ದೊಡ್ಡನಗೌಡ ಹೆಚ್, ಪಾಟೀಲ್, (ವಿರೋಧ ಪಕ್ಷದ ಮುಖ್ಯ ಸಚೇತಕರು).
ಡಾ: ಅಶ್ವಥ್ ನಾರಾಯಣ್ ಸಿ.ಎನ್, ಶ್ರೀ ಎಸ್.ಆರ್. ವಿಶ್ವನಾಥ್, ಶ್ರೀ ಬಿ.ಎ. ಬಸವರಾಜ, ಶ್ರೀ ಎಂ.ಆರ್. ಪಾಟೀಲ್, ಶ್ರೀ ಚನ್ನಬಸಪ್ಪ (ಚೆನ್ನಿ), ಶ್ರೀ ಬಿ. ಸುರೇಶ್ ಗೌಡ, ಶ್ರೀ ಉಮಾನಾಥ್ ಎ. ಕೋಟ್ಯಾನ್, ಶ್ರೀ ಶರಣ ಸಲಗರ, ಡಾ: ಶೈಲೇಂದ್ರ ಬೆಲ್ದಾಳೆ, ಶ್ರೀ ಸಿ.ಕೆ. ರಾಮಮೂರ್ತಿ, ಶ್ರೀ ಯಶಪಾಲ್ ಎ. ಸುವರ್ಣ, ಶ್ರೀ ಬಿ.ಪಿ. ಹರೀಶ್, ಡಾ: ಭರತ್ ಶೆಟ್ಟಿ ವೈ., ಶ್ರೀ ಮುನಿರತ್ನ, ಶ್ರೀ ಬಸವರಾಜ್ ಮತ್ತಿಮೂಡ್, ಶ್ರೀ ಧೀರಜ್ ಮುನಿರಾಜು ಮತ್ತು ಡಾ: ಚಂದು ಲಮಾಣಿ ಅವರುಗಳನ್ನು ಅಮಾನತ್ತುಗೊಳಿಸಲಾಗಿದ್ದ ನಿರ್ಣಯವನ್ನು ಹಿಂತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ.
Karnataka Legislative Assembly 18 ಶಾಸಕರ ಅಮಾನತು ರದ್ದು. ಸಭೆಯಲ್ಲಿ ಸ್ಪೀಕರ್ಯು.ಟಿ.ಖಾದರ್ ಚರ್ಚಿಸಿ ನಿರ್ಧಾರ
Vidhana Soudha ವಿಧಾನಸೌಧ, ಪ್ರವಾಸಿ ದರ್ಶನದಿಂದ ಸಾರ್ವಜನಿಕರಿಗೆ ಆಡಳಿತ ಪಾರದರ್ಶಕತೆ & ಪರಂಪರೆಯ ಪರಿಚಯ- ಸಚಿವ ಎಚ್.ಕೆ.ಪಾಟೀಲ್
Vidhana Soudha ವಿಧಾನ ಸೌಧವು ನಮ್ಮ ರಾಜ್ಯದ ಪ್ರಜಾಪ್ರಭುತ್ವದ ಜೀವಂತ ಕಥೆಯಾಗಿದ್ದು, ಇದನ್ನು ಸಾರ್ವಜನಿಕರಿಗೆ ತೆರೆದಿರುವುದು ಪಾರದರ್ಶಕತೆ, ಪರಂಪರೆ ಮತ್ತು ನಾಗರಿಕ ಹೆಮ್ಮೆಯ ಕಾರ್ಯಕ್ರಮವಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಕರ್ನಾಟಕ ವಿಧಾನ ಸಭೆಯ ಸಚಿವಾಲಯದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಮಾರ್ಗದರ್ಶಿ ನಡಿಗೆ ಪ್ರವಾಸ (Walking Guided Tour) ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ವಿಧಾನ ಸೌಧವು ಇನ್ನು ಮುಂದೆ ಸಾರ್ವಜನಿಕರಿಗೂ ಮುಕ್ತವಾಗಲಿದೆ. ಕಲಾಕೌಶಲ್ಯದ ವಿರಳ ದಾಖಲೆಯಾಗಿ ಇತಿಹಾಸದಲ್ಲಿ ದಾಖಲಾಗಿರುವ ಆಡಳಿತಸೌಧವನ್ನು ದೂರದಿಂದಲೇ ನೋಡಿ ಫೊಟೋ ತೆಗೆದು ಸಂತಸ ಪಡುತ್ತಿದ್ದ ಜನರಿಗೆ ಈಗ ಇದನ್ನ ಹತ್ತಿರದಿಂದ ನೋಡುವ ಸದವಕಾಶ ಲಭ್ಯವಿದೆ ಎಂದರು.
ಇದು ಕೇವಲ ಕಟ್ಟಡವಲ್ಲ. ಜಗತ್ತಿನ ಅತ್ಯಂತ ಸುಂದರವಾದ ಕಟ್ಟಡ, ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಇದರ ದರ್ಶನ ಮಾಡಿಸುವ ದೃಷ್ಟಿಯಿಂದ ಅವಕಾಶವನ್ನು ಕಲ್ಪಸಿಕೊಡಲಾಗುತ್ತಿದೆ. ಇಲ್ಲಿಯವರಿಗೆ ಕೇವಲ ಆಡಳಿತ ಕಾರ್ಯಗಳಿಗಷ್ಟೇ ಸೀಮಿತವಾಗಿದ್ದ ವಿಧಾನಸೌಧವು ಇನ್ನು ಮುಂದೆ ಪ್ರವಾಸಿ, ಪ್ರೇಕ್ಷಣೀಯ ಸ್ಥಳದ ಸಾಲಿಗೆ ಸೇರ್ಪಡೆಯಾಗಲಿದೆ.
ಜೂನ್ 1ರಿಂದ ಸೀಮಿತ ದಿನಗಳಲ್ಲಿ ವಿಧಾನಸೌಧವು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.
ವಿಧಾನಸೌಧ ಪ್ರವಾಸ ಕಾರ್ಯಕ್ರಮವು ಮನೋರಂಜನೆಯ ಪ್ರವಾಸವಾಗಬಾರದು, ಶೈಕ್ಷಣಿಕ ಅಧ್ಯಯನದ ಪ್ರವಾಸವಾಗಬೇಕು. ಪ್ರಜಾಪ್ರಭುತ್ವದ ಮಹತ್ವವನ್ನು ಸಾರ್ವಜನಿಕರು ತಿಳಿದುಕೊಳ್ಳುವಂತಾಗಬೇಕು. ವಿದ್ಯಾರ್ಥಿಗಳು ಮುಂದೆ ರಾಜಕೀಯ ಕ್ಷೇತ್ರಕ್ಕೂ ಬರಬೇಕು, ಉತ್ತಮ ರಾಜಕೀಯ ಪಟುಗಳಾಗಲು ಶಕ್ತಿಸೌಧ ಸ್ಪೂರ್ತಿ ನೀಡುವಂತಾಗಲಿದೆ ಎಂದು ಹೇಳಿದರು.
ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಮಾತನಾಡಿ ವಿಧಾನಸೌಧದ ಕಟ್ಟಡದಲ್ಲಿ ಓಡಾಡಿದ್ರೆ ಅನೇಕ ಪಾರಂಪರಿಕ ಕಟ್ಟಡಗಳು ಕಣ್ಣಿಗೆ ಕಟ್ಟುವಂತೆ ಮಾಡಲಿದೆ. 75 ವರ್ಷಗಳ ಕಾಲ ವಿಧಾನಸೌಧದ ಒಳಗೆ ಯಾರನ್ನೂ ಬಿಟ್ಟಿರಲಿಲ್ಲ. ಸಾರ್ವಜನಿಕರು ಪಾಸ್ ಪಡೆದುಕೊಂಡು ಬರಬೇಕಿತ್ತು.
Vidhana Soudha ಆದರೆ ಈಗ ಕರ್ನಾಟಕ ಮಾತ್ರವಲ್ಲ ದೇಶದ ಜನತೆಗೆ ತೋರಿಸುವ ಕೆಲಸ ಮಾಡಿದ್ದೇವೆ ಎಂದರು.
ಮಾರ್ಗದರ್ಶಿ ಪ್ರವಾಸದ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಇತಿಹಾಸ ಅರ್ಥಮಾಡಿಸುವ ಕೆಲಸವಾಗಲಿದೆ.
ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದವರು ದೇಶದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ವಿಧಾನಸೌಧ ನಮ್ಮದು ಎಂಬ ಭಾವನೆಯನ್ನು ನಮ್ಮ ರಾಜ್ಯದ ಜನರಲ್ಲಿ ಮೂಡುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಸೌಧ, ಬೆಂಗಳೂರಿನ ಪ್ರಮುಖ ಐತಿಹಾಸಿಕ ಮತ್ತು ಆಡಳಿತದ ಸಂಕೇತವಾಗಿದ್ದು. ಮಾರ್ಗದರ್ಶಿ ಪ್ರವಾಸಿ ನಡಿಗೆಯು ಈ ಕಟ್ಟಡದ ಐತಿಹಾಸಿಕದ ಮಹತ್ವ, ಶಿಲ್ಪಕಲೆಯ ವೈಭವ ಮತ್ತು ಅದರ ಪ್ರಮುಖ ಭಾಗಗಳನ್ನು ಪರಿಚಯಿಸುತ್ತದೆ. ಸಾರ್ವಜನಿಕರು ಇದರ ವೀಕ್ಷಣೆ ಮಾಡಬಹುದಾಗಿದೆ.
ನುರಿತ ಗೈಡ್‌ಗಳು ವಿಧಾನಸೌಧ ಆವರಣದ ಕುರಿತು ಸಮಗ್ರ ಪರಿಚಯ ಸಹಿತ ಮಾಹಿತಿಯನ್ನು ಪ್ರವಾಸಿಗರಿಗೆ ಒದಗಿಸಲಿದ್ದಾರೆ ಎಂದು ತಿಳಿಸಿದರು.
ರಾಜಕೀಯ ಅಕಾಡೆಮಿ ತೆರೆಯಲು ಚಿಂತಿಸಲಾಗುತ್ತಿದೆ, ರಾಜಕೀಯ ಕಾಲೇಜು ಆರಂಭಿಸಿ ತರಬೇತಿ ನೀಡುವ ಬಗ್ಗೆ ಕಾನೂನಾತ್ಮಕವಾಗಿ ಚರ್ಚಿಸಿ ಅನುಷ್ಟಾನದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.
ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಬಸವರಾಜ ಎಸ್ ಹೊರಟ್ಟಿ ಮಾತನಾಡಿ ಸಾರ್ವಜನಿಕರಿಗೆ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ. ಶಕ್ತಿ ಸೌಧದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವ ಕೆಲಸವಾಗಲಿದೆ ಎಂದು ಹೇಳಿದರು.
ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸದ ವಿಶೇಷತೆಗಳು:
ಪ್ರತೀ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ವಿಧಾನಸೌಧ ಪ್ರವಾಸ ನಡಿಗೆ ಇರಲಿದೆ. ಇದಕ್ಕಾಗಿ ಆನ್‌ಲೈನ್ ನಲ್ಲಿ ಮುಂಚಿತವಾಗಿ ಟಿಕೆಟ್ ಮಾಡಿಕೊಳ್ಳಬೇಕು. ಜೂನ್ 1 ರಿಂದ ಅಧಿಕೃತ ವಿಧಾನಸೌಧ ಪ್ರವಾಸ ಆರಂಭವಾಗಲಿದೆ. ಪ್ರಾರಂಭಿಕ ದರವು 16 ವರ್ಷ ಮೇಲ್ಪಟ್ಟವರಿಗೆ 50 ರೂಪಾಯಿ ದರ ನಿಗಧಿಯಾಗಿದ್ದು. 15 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳಿಗೆ ಉಚಿತ. ಟಿಕೆಟ್‌ಗಳನ್ನು https://kstdc.co/activities ವೆಬ್‌ಸೈಟ್ ನಲ್ಲಿ ಬುಕ್ ಮಾಡಿಕೊಳ್ಳಬೇಕು. ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಹಾಗೂ ಎಲ್ಲಾ ಭಾನುವಾರಗಳು ವೀಕ್ಷಿಸಬಹುದು.
ಪ್ರವಾಸವು ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಇರಲಿದೆ.
Thawar Chand Gehlot ಶಾಲಾ ಹಂತದಿಂದಲೇವಿಪತ್ತು ಜಾಗೃತಿ ತರಬೇತಿ ಪ್ರಾರಂಭಿಸಬೇಕು- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Thawar Chand Gehlot ವಿಪತ್ತು ನಿರ್ವಹಣೆಯ ಪ್ರಮುಖ ಆಧಾರಸ್ತಂಭವೆಂದರೆ ಸ್ಥಳೀಯ ಸಮುದಾಯ. ಸ್ಥಳೀಯ ಜನರಿಗೆ ಸಬಲೀಕರಣ, ಅರಿವು ಮತ್ತು ತರಬೇತಿ ನೀಡಿದರೆ, ವಿಪತ್ತಿನ ಪರಿಣಾಮವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಜವಾಹರಲಾಲ್ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ವಿಪತ್ತು ನಿರ್ವಹಣಾ ಸಮ್ಮೇಳನದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
” ಶಾಲಾ ಹಂತದಿಂದಲೇ ವಿಪತ್ತು ಜಾಗೃತಿ ತರಬೇತಿಯನ್ನು ಪ್ರಾರಂಭಿಸಬೇಕು. ಗ್ರಾಮ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಬೇಕು ಮತ್ತು ಅವುಗಳಿಗೆ ಅಗತ್ಯ ಸಂಪನ್ಮೂಲಗಳು ಮತ್ತು ತರಬೇತಿಯನ್ನು ಒದಗಿಸಬೇಕು. ಸರ್ಕಾರಗಳು ವಿಪತ್ತು ನಿರ್ವಹಣೆಯನ್ನು ತಮ್ಮ ಅಭಿವೃದ್ಧಿ ನೀತಿಯ ಅವಿಭಾಜ್ಯ ಅಂಗವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಭವಿಷ್ಯದ ವಿಪತ್ತುಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ನಾವು “ಉತ್ತಮವಾಗಿ ಮರಳಿ ನಿರ್ಮಿಸಿ” ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
“ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ಮೋದಿ ಅವರ ನೇತೃತ್ವದಲ್ಲಿ, ನಾವು “ಅಭಿವೃದ್ಧಿ ಹೊಂದಿದ ಭಾರತ”ದತ್ತ ವೇಗವಾಗಿ ಸಾಗುತ್ತಿದ್ದೇವೆ, ಇದರಲ್ಲಿ ವಿಪತ್ತು ನಿರ್ವಹಣೆಯ ಪಾತ್ರ ಬಹಳ ಮುಖ್ಯವಾಗಿದೆ.
ವಿಪತ್ತು ನಿರ್ವಹಣೆಯು ಒಂದು ಸಾಮೂಹಿಕ ಜಾಗತಿಕ ಪ್ರಯತ್ನವಾಗಿದ್ದು, ನೀತಿ, ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಭಾಗವಹಿಸುವಿಕೆಯ ಸಮನ್ವಯದ ಅಗತ್ಯವಿರುತ್ತದೆ. ಆದ್ದರಿಂದ, ಇಂತಹ ಸಮ್ಮೇಳನಗಳು ಮನುಕುಲದ ಕಲ್ಯಾಣಕ್ಕೆ ಬಹಳ ಮುಖ್ಯವಾಗುತ್ತವೆ” ಎಂದು ಹೇಳಿದರು.
“ಹವಾಮಾನ ಬದಲಾವಣೆ ಮತ್ತು ವಿಕೋಪ ಇಂದು ಜಾಗತಿಕ ಸವಾಲಾಗಿದ್ದು, ನವೆಂಬರ್ ತಿಂಗಳಲ್ಲಿ ನಡೆಯಲಿರುವ ವಿಶ್ವ ವಿಪತ್ತು ನಿರ್ವಹಣಾ ಸಮ್ಮೇಳನದ ಮೂಲಕ ಉತ್ತರಾಖಂಡ ರಾಜ್ಯವು ಇಡೀ ಪ್ರಪಂಚದ ಗಮನವನ್ನು ಆಧ್ಯಾತ್ಮಿಕತೆ, ಜ್ಞಾನ ಮತ್ತು ವಿಜ್ಞಾನದ ನಾಡು ಭಾರತದ ಕಡೆಗೆ ಸೆಳೆಯಲು ಅರ್ಥಪೂರ್ಣ ಪ್ರಯತ್ನ ಮಾಡುತ್ತಿದೆ.
ಈ ಸರಣಿಯಲ್ಲಿ ಬೆಂಗಳೂರಿನಲ್ಲಿರುವ ವಿಶ್ವಪ್ರಸಿದ್ಧ ಸಂಸ್ಥೆಯಾದ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್‌ನಲ್ಲಿ ‘ಹವಾಮಾನ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವಕ್ಕಾಗಿ ತಂತ್ರಜ್ಞಾನ’ ಎಂಬ ವಿಷಯದ ಕುರಿತು ಸಮ್ಮೇಳನವನ್ನು ಆಯೋಜಿಸಲಾಗುತ್ತಿರುವುದು ನನಗೆ ಸಂತೋಷ ತಂದಿದೆ.
ಈ ಸಮ್ಮೇಳನದ ಮುಖ್ಯ ವಿಷಯವು ಅತ್ಯಂತ ಪ್ರಸ್ತುತವಾಗಿದೆ, ಏಕೆಂದರೆ ನಿರಂತರವಾಗಿ ಬದಲಾಗುತ್ತಿರುವ ಸಂದರ್ಭಗಳನ್ನು ನೈಸರ್ಗಿಕ ಸಂಪನ್ಮೂಲಗಳು ಮತ್ತು ತಂತ್ರಜ್ಞಾನದ ಸಹಾಯದಿಂದ ನಿಭಾಯಿಸಬಹುದು. ಇಡೀ ಜಗತ್ತು ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳು ಮತ್ತು ಮಾನವೀಯ ಬಿಕ್ಕಟ್ಟುಗಳೊಂದಿಗೆ ನಿರಂತರವಾಗಿ ಹೋರಾಡುತ್ತಿದೆ ಮತ್ತು ಇಡೀ ಜಗತ್ತು ಅವುಗಳ ಪರಿಹಾರಗಳಿಗಾಗಿ ಭಾರತದ ಕಡೆಗೆ ನೋಡುತ್ತಿದೆ” ಎಂದು ತಿಳಿಸಿದರು.
“ಹವಾಮಾನ ಬದಲಾವಣೆ ಮತ್ತು ವಿಪತ್ತುಗಳು ಇಂದು ಮಾನವೀಯತೆ ಎದುರಿಸುತ್ತಿರುವ ದೊಡ್ಡ ಸವಾಲುಗಳಾಗಿವೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳು ನಿರಂತರವಾಗಿ ಹೆಚ್ಚುತ್ತಿವೆ. ಜಾಗತಿಕ ತಾಪಮಾನ ಏರಿಕೆ, ಸಮುದ್ರ ಮಟ್ಟ ಏರಿಕೆ, ಹವಾಮಾನ ವೈಪರೀತ್ಯಗಳು, ಪ್ರವಾಹಗಳು, ಬರಗಾಲಗಳು, ಭೂಕಂಪಗಳು ಮತ್ತು ಕಾಡಿನ ಬೆಂಕಿ, ಸಾಂಕ್ರಾಮಿಕ ರೋಗಗಳು, ಕೈಗಾರಿಕಾ ಅಪಘಾತಗಳು ಅಥವಾ ತ್ವರಿತ ನಗರೀಕರಣದಿಂದ ಉಂಟಾಗುವ ಸವಾಲುಗಳು ನಿರಂತರವಾಗಿ ಹೆಚ್ಚುತ್ತಿವೆ.
Thawar Chand Gehlot ಇತ್ತೀಚಿನ ವರ್ಷಗಳಲ್ಲಿ, ಹವಾಮಾನ ಬದಲಾವಣೆಯು ವಿಪತ್ತುಗಳ ಆವರ್ತನ ಮತ್ತು ತೀವ್ರತೆ ಎರಡನ್ನೂ ಹೆಚ್ಚಿಸಿದೆ. ಕಳೆದ ಎರಡು ದಶಕಗಳಲ್ಲಿ ನೈಸರ್ಗಿಕ ವಿಕೋಪಗಳ ಸಂಖ್ಯೆ ಬಹುತೇಕ ದ್ವಿಗುಣಗೊಂಡಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ.
ಇದರ ಪರಿಣಾಮವು ಜೀವ ಮತ್ತು ಆಸ್ತಿಪಾಸ್ತಿ ನಷ್ಟದ ಜೊತೆಗೆ, ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ದೀರ್ಘಕಾಲೀನ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದರು.
“ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆಯಲ್ಲಿ ತಂತ್ರಜ್ಞಾನವು ನಮ್ಮ ಅತಿದೊಡ್ಡ ಮಿತ್ರನಾಗಿ ಹೊರಹೊಮ್ಮಿದೆ. ಪ್ರಸ್ತುತ , ನಾವು ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ, ಉಪಗ್ರಹ ಚಿತ್ರಣ, GIS ಮ್ಯಾಪಿಂಗ್‌ನಂತಹ ತಂತ್ರಜ್ಞಾನಗಳಿಗೆ ಪ್ರವೇಶವನ್ನು ಹೊಂದಿದ್ದೇವೆ, ಇವು ವಿಪತ್ತುಗಳ ಮುಂಚಿನ ಎಚ್ಚರಿಕೆ, ಮೇಲ್ವಿಚಾರಣೆ ಮತ್ತು ತುರ್ತು ಸಂದರ್ಭಗಳಲ್ಲಿ ಪರಿಹಾರವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಈ ತಂತ್ರಜ್ಞಾನಗಳನ್ನು ಹೆಚ್ಚು ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಬೇಕಾಗಿದೆ. ಬಿಗ್ ಡೇಟಾ ಮತ್ತು ಕೃತಕ ಬುದ್ಧಿಮತ್ತೆಯ ಸಹಾಯದಿಂದ, ವಿಜ್ಞಾನಿಗಳು ಹವಾಮಾನ ಬದಲಾವಣೆಯ ಮಾದರಿಗಳನ್ನು ತ್ವರಿತವಾಗಿ ರಚಿಸಲು ಸಾಧ್ಯವಾಗುತ್ತದೆ, ಇದು ಸಮಯಕ್ಕೆ ಸರಿಯಾಗಿ ನೀತಿಗಳನ್ನು ರೂಪಿಸಲು ನಮಗೆ ಸಹಾಯ ಮಾಡುತ್ತಿದೆ” ಎಂದು ತಿಳಿಸಿದರು.
“ಮಾನವರು ತಲುಪಲು ಕಷ್ಟಕರವಾದ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ವೇಗಗೊಳಿಸಲು ಡ್ರೋನ್‌ಗಳು ಮತ್ತು ರೊಬೊಟಿಕ್ಸ್ ತಂತ್ರಜ್ಞಾನಗಳು ಬಹಳ ಉಪಯುಕ್ತವೆಂದು ಸಾಬೀತಾಗುತ್ತಿವೆ. ಮುಂಚಿನ ಎಚ್ಚರಿಕೆ ವ್ಯವಸ್ಥೆಯ ಮೂಲಕ, ನಾವು ಈಗ ಪ್ರವಾಹ, ಬಿರುಗಾಳಿ ಮತ್ತು ಸುನಾಮಿಯಂತಹ ವಿಪತ್ತುಗಳ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನು ಪಡೆಯುತ್ತೇವೆ. ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು, SMS ಎಚ್ಚರಿಕೆ ವ್ಯವಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು, ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಸಮಯೋಚಿತ ಎಚ್ಚರಿಕೆಗಳನ್ನು ನೀಡಬಹುದು.
ಮರ ನೆಡುವಿಕೆಯನ್ನು ಉತ್ತೇಜಿಸುವ ಮೂಲಕ ನಾವು ಪರಿಸರ ಸಂರಕ್ಷಣೆಯ ಕಡೆಗೆ ಮಹತ್ವದ ಕೆಲಸ ಮಾಡಬಹುದು” ಎಂದು ಹೇಳಿದರು.
ಸಮ್ಮೇಳನದಲ್ಲಿ ಉತ್ತರಾಖಂಡ್ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಮಹಾನಿರ್ದೇಶಕರಾದ ಪ್ರೊಫೆಸರ್ ದುರ್ಗೇಶ್ ಪಂತ್, ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಪ್ರೊ. ಉಮೇಶ್ ವಾಘ್ಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
S.N.Chennabasappa ಶಾಸಕರ ಅಮಾನತ್ತು ಹಿಂಪಡೆದಿರುವುದು ಸ್ವಾಗತಾರ್ಹ- ಶಾಸಕ ಚನ್ನಬಸಪ್ಪ
S.N.Chennabasappa ಶಿವಮೊಗ್ಗದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಶಾಸಕರ ಅಮಾನತ್ತು ವಾಪಸ್ ಪಡೆದಿರುವುದು ಸ್ವಾಗತಾರ್ಹ ಎಂದರು.
ಅಧಿವೇಶನದ ಕೊನೆಯ ದಿನ ನಾವು ನೋವಿನಿಂದ ಒಬ್ಬ ಮಂತ್ರಿಗಳು ಅಭಿಪ್ರಾಯ ಪ್ರಕಟ ಮಾಡಿದಾಗ ನಾವು ಚರ್ಚೆ ಮಾಡಿದ್ದೆವು.ಆಗ ನಾವು 18 ಜನ ಶಾಸಕರು ಅದನ್ನು ಖಂಡಿಸಿದ್ದೆವು
ಸಭಾಧ್ಯಕ್ಷರ ಪೀಠಕ್ಕೆ ಅವಮಾನ ನಾವು ಮಾಡಿದ್ದೆವು ಎಂಬ ಭಾವನೆ ಉಂಟಾಗಿತ್ತು. ಸ್ಪೀಕರ್ ಗೆ ನೋವಾಗಿದೆ ಎಂದು ಅವರು ಅಂದು ಭಾವಿಸಿದ್ದರು.ಆದರೆ ನಾವು ವಿಷಯಾಧಾರಿತವಾಗಿ ನಾವು ವಿರೋಧಿಸಿದ್ದೆವು.
ಈ ಸಲಹೆ ನೀಡಿದ್ದಕ್ಕೆ ಅಮಾನತ್ತು ಆದೇಶ ವಾಪಾಸ್ ಪಡೆದಿದ್ದೆವೆ ಎಂದು ಸಭಾಧ್ಯಕ್ಷರು ಹೇಳಿದ್ದಾರೆ. ನಮ್ಮ ಪಕ್ಷದ ನಾಯಕರು ಮತ್ತು ಅನೇಕರು ಸಭಾಧ್ಯಕ್ಷರ ಬಳಿ ತೆರಳಿ ಈ ಕುರಿತು ಸಲಹೆ ನೀಡಿದ್ದಾರೆ. ಆದರೆ ಹನಿಟ್ರ್ಯಾಪ್ ವಿಚಾರ ಹಾಗೆಯೇ ಉಳಿದಿದೆ.
ಹನಿಟ್ರ್ಯಾಪ್ ವಿಚಾರದ ಬಗ್ಗೆ ಸತ್ಯ ಸಂಗತಿ ಹೊರಗೆ ಬಾರದೆ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಂತಾಗಿದೆ.
S.N.Chennabasappa ಸಹಕಾರ ಸಚಿವ ರಾಜಣ್ಣ ಬಹಳ ನೊಂದು ಆ ವಿಷಯ ಪ್ರಸ್ತಾಪಿಸಿದ್ದರು. ಹನಿಟ್ರ್ಯಾಪ್ ಮಾಡುವವರ ಪರ ಮಾತನಾಡುವಂತಿದ್ದ ಸನ್ನಿವೇಶದ ಹಿನ್ನೆಲೆಯಲ್ಲಿ ನಾವು ಸಭೆಯಲ್ಲಿ ಮಾತನಾಡಿದ್ದೆವು.
ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಅಮಾನತ್ತು ಆದೇಶ ವಾಪಾಸ್ ಪಡೆದಿದ್ದಾರೆ ಎಂದು ಶಾಸಕ ಚನ್ನಬಸಪ್ಪ
ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Tunga Reservoir ತುಂಗಾ ಡ್ಯಾಂ ನಿಂದ ಹೆಚ್ಚುವರಿ ನೀರು ಬಿಡುಗಡೆ. ಸಾರ್ವಜನಿಕರಿಗೆ ಎಚ್ಚರಿಕೆ ಮಾಹಿತಿ
Tunga Reservoir ತುಂಗಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿವಸಗಳಿಂದ ಧಾರಕಾರವಾಗಿ ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ಯಾವ ಕ್ಷಣದಲ್ಲಾದರೂ ತುಂಗಾ ಜಲಾಶಯದಿಂದ ನೀರನ್ನು ಬಿಡುವ ಸಂಭವವಿರುತ್ತದೆ.
ಆದ್ದರಿಂದ ತುಂಗಾ ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ಬರುವ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಹಾಗೂ ದನಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡುವುದು ಮಾಡಬಾರದೆಂದು ಹಾಗೂ ತುಂಗಾ ನದಿಯ Tunga Reservoir ಪಾತ್ರದಲ್ಲಿ ಬರುವ ಗ್ರಾಮಗಳ ಪ್ರದೇಶದ ಗ್ರಾಮಸ್ಥರಿಗೆ ನದಿ ಪಾತ್ರದಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆಯಿಂದಿರಲು ಕರ್ನಾಟಕ ನೀರಾವತಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Birur-Talaguppa section Railway ಬೀರೂರು- ತಾಳಗುಪ್ಪ ಸೆಕ್ಷನ್ ರೈಲ್ವೆ ಸಾಮಗ್ರಿಗಳ ಆಂತರಿಕ ಭದ್ರತಾ ಪರಿಶೀಲನೆ
Birur-Talaguppa section Railway ಮೈಸೂರು ವಿಭಾಗದ ಬೀರೂರು-ತಾಳಗುಪ್ಪ ಸೆಕ್ಷನ್‌ನ ರೈಲ್ವೆ ಸಾಮಗ್ರಿಗಳ ಆಂತರಿಕ ಭದ್ರತಾ ಪರಿಶೀಲನೆ ನೈಋತ್ಯ ರೈಲ್ವೆ ಮುಖ್ಯಾಲಯದ ಅಧಿಕಾರಿಗಳ ತಂಡದಿಂದ 2025ರ ಮೇ 22 ಮತ್ತು 23 ರಂದು ನಡೆಸಲಾಯಿತು. ಈ ತಂಡವನ್ನು ಶ್ರೀ ಎಂ. ರಾಮಕೃಷ್ಣ, ಪ್ರಧಾನ ಮುಖ್ಯ ಭದ್ರತಾ ಅಧಿಕಾರಿ ನೇತೃತ್ವವಹಿಸಿದ್ದರು.
ಪರಿಶೀಲನೆಯ ವೇಳೆ, ತಂಡವು ರೈಲ್ವೆ ನಿಲ್ದಾಣಗಳು, ರಿಲೇ ಕೊಠಡಿಗಳು, ಪಾಯಿಂಟ್ ಮತ್ತು ಕ್ರಾಸಿಂಗ್‌ಗಳು, ಸೇತುವೆಗಳು, ರನ್ನಿಂಗ್ ರೂಮ್‌ಗಳು, ಲೆವೆಲ್ ಕ್ರಾಸಿಂಗ್ ಗೇಟ್‌ಗಳು, ಎ ಆರ್ ಎಂ ಇ (ಅಪಘಾತ ಪರಿಹಾರ ವೈದ್ಯಕೀಯ ಉಪಕರಣ), ಟ್ರಾಕ್ಷನ್ ಸಬ್‌ಸ್ಟೇಷನ್‌ಗಳು, ಸೆಕ್ಷನಿಂಗ್ ಪೋಸ್ಟ್‌ಗಳು ಮತ್ತು ಸಬ್‌ಸೆಕ್ಷನಿಂಗ್ ಪೋಸ್ಟ್‌ಗಳು ಸೇರಿದಂತೆ ವಿವಿಧ ರೈಲ್ವೆ ಸಾಮಗ್ರಿಗಳನ್ನು ಪರಿಶೀಲಿಸಲಾಯಿತು. ಭದ್ರತಾ ಕ್ರಮಗಳು ಮತ್ತು ಕಾರ್ಯಾಚರಣಾ ವ್ಯವಸ್ಥೆಗಳ ಸಮಗ್ರ ಪರಿಶೀಲನೆ ನಡೆಸಲಾಯಿತು.
ಈ ತಂಡವು ಭದ್ರತಾ ಪ್ರೋಟೋಕಾಲ್‌ಗಳ ಕುರಿತು ಕ್ಷೇತ್ರದ ಸಿಬ್ಬಂದಿಯ ಅರಿವು ಮತ್ತು ತಿಳಿವಳಿಕೆಯನ್ನು ಮೌಲ್ಯಮಾಪನ ಮಾಡಲು ಅವರೊಂದಿಗೆ ಸಂವಾದ ನಡೆಸಿತು. ಮೈಸೂರು ವಿಭಾಗವು ಭದ್ರತಾ ಮಾನದಂಡಗಳನ್ನು ಕಾಪಾಡುವಲ್ಲಿ ತೆಗೆದುಕೊಂಡಿರುವ ನಿಷ್ಠೆಗೆ ಶ್ಲಾಘನೆ ವ್ಯಕ್ತಪಡಿಸಿದರು.
Birur-Talaguppa section Railway ಶ್ರೀ ಮುದಿತ್ ಮಿತ್ತಲ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಮಾರ್ಗದರ್ಶನದಲ್ಲಿ, ಮೈಸೂರು ವಿಭಾಗದ ಶ್ರೀ ವಿನಾಯಕ ರಾ ನಾಯಕ, ಹೆಚ್ಚಳ ಮಂಡಲ ರೈಲ್ವೆ ವ್ಯವಸ್ಥಾಪಕರ ನೇತೃತ್ವದಲ್ಲಿ, ಸಂಬಂಧಿತ ಶಾಖಾ ಅಧಿಕಾರಿಗಳು ತಂಡದಲ್ಲಿ ಭಾಗವಹಿಸಿದ್ದರು.
B. Y. Raghavendra ಭದ್ರಾವತಿ ವಿಐಎಸ್ಎಲ್ ಪುನಶ್ಚೇತನಕ್ಕೆ ಸಚಿವ ಎಚ್ ಡಿಕೆ ಸಂಕಲ್ಪ.ಸಂಸದ ರಾಘವೇಂದ್ರ “ಫುಲ್ ಖುಷ್”
B. Y. Raghavendra ಭದ್ರಾವತಿಯ ವಿಐಎಸ್ಎಲ್ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಇನ್ನು ಎರಡು ತಿಂಗಳ ಒಳಗಾಗಿ ಡಿಪಿಆರ್ ಸಿದ್ದಪಡಿಸಿ ಕಾರ್ಖಾನೆಯನ್ನು ಪುನರ್ ನಿರ್ಮಿಸುವ ಕಾರ್ಯಕ್ಕೆ ಮಾನ್ಯ ಪ್ರಧಾನ ಮಂತ್ರಿಯವರಿಂದಲೇ ಈ ವರ್ಷಾಂತ್ಯದಲ್ಲಿ ಶಂಕುಸ್ಥಾಪನೆ ನೆರವೇರಿಸುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಎಚ್. ಡಿ. ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವುದು ಅತ್ಯಂತ ಸ್ವಾಗತಾರ್ಹ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
Dinesh Gundu Rao ಜನೌಷಧಿ ಕೇಂದ್ರ ಸರ್ಕಾರದ್ದು ಎಂಬ ಕಾರಣಕ್ಕೆ ರಾಜಕೀಯ ಮಾಡುವ ಉದ್ದೇಶವಿಲ್ಲ.ಇನ್ನೂ ರಾಜ್ಯದಲ್ಲಿ 220 ಕೇಂದ್ರಗಳಿವೆ- ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ
Dinesh Gundu Rao ರಾಜ್ಯದಲ್ಲಿ ಸಂಪೂರ್ಣವಾಗಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿಲ್ಲ. ಒಟ್ಟು 1400 ಜನೌಷಧಿ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳನ್ನು ಮಾತ್ರ ತೆರವುಗೊಳಿಸುವ ಬಗ್ಗೆ ಚರ್ಚಿಸಲಾಗಿದೆ.
ಸರ್ಕಾರವೇ ಉಚಿತವಾಗಿ ಔಷಧಿಗಳನ್ನು ನೀಡುವಾಗ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಮಾರಾಟಕ್ಕೆ ಅವಕಾಶ ಕೊಡುವುದು ಸರಿಯಲ್ಲ.
ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳ ಹೊರತಾಗಿ ರಾಜ್ಯದಲ್ಲಿ ಇನ್ನು 1220 ಜನೌಷಧಿ ಕೇಂದ್ರಗಳಿವೆ. ಅಲ್ಲದೇ ತಕ್ಷಣಕ್ಕೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಎಲ್ಲಾ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿ ಎಂದು ಹೇಳಿಲ್ಲ. ಹೊಸದಾಗಿ ಸಲ್ಲಿಕೆಯಾಗಿದ್ದ 31 ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ. ಹಾಲಿ ಆಸ್ಪತ್ರೆಗಳ ಆವರಣದಲ್ಲಿರುವ ಕೇಂದ್ರಗಳು ಇಲಾಖೆ ಮತ್ತು ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಪರಿಶೀಲಿಸಿ ಕ್ರಮ ಜರುಗಿಸಲು ಸೂಚಿಸಲಾಗಿದೆ.
ಜನೌಷಧಿ ಕೇಂದ್ರ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ರಾಜಕೀಯ ಮಾಡುವ ಯಾವುದೇ ಉದ್ದೇಶವಿಲ್ಲ. ಆದರೆ, ಜನೌಷಧಿ ಕೇಂದ್ರಗಳ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ.
Dinesh Gundu Rao ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿಯೇ ಔಷಧಿ ಸಿಗುವಾಗ ಆಸ್ಪತ್ರೆಗಳ ಆವರಣದಲ್ಲಿ ಔಷಧ ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಒಂದೇ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರಿ ಆಸ್ಪತ್ರೆಗಳ ಔಷಧಿ ಕೇಂದ್ರಗಳಲ್ಲಿ ಔಷಧಗಳ ಕೊರತೆಯಿಲ್ಲ. ಕೆಲವು ಕಡಿಮೆ ಬೇಡಿಕೆ ಇರುವ ಔಷಧಿಗಳು ಇಲ್ಲದಿದ್ದರೆ ಅವುಗಳನ್ನು BPPI ನಿಂದ ಖರೀದಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಔಷಧಗಳನ್ನು ಪಡೆಯಬೇಕು. ವೈದ್ಯರು ಚೀಟಿ ಕೊಟ್ಟು ಹೊರಗಡೆಯಿಂದ ಔಷಧಗಳನ್ನು ತರಿಸುವ ಪದ್ಧತಿ ನಿಲ್ಲಬೇಕು.
Dinesh Gundu Rao ಸಾರ್ವಜನಿಕೆ ಸ್ಥಳಗಳಲ್ಲಿ ಮಾಸ್ಕ್ ಧರಿಸಿ,ಕೊವಿಡ್ ಬಗ್ಗೆ ಆತಂಕ ಬೇಡ. ಆಸ್ಪತ್ರೆಗಳು ಚಿಕಿತ್ಸೆಗೆ ಸಜ್ಜಾಗಿವೆ- ದಿನೇಶ್ ಗುಂಡೂರಾವ್
Dinesh Gundu Rao ಕಳೆದ ಒಂದು ವಾರದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಸೋಂಕಿತರಲ್ಲಿ ಕೊಂಚ ಏರಿಕೆಯಾಗಿದೆ. ಮುಂಜಾಗ್ರತ ಕ್ರಮಗಳನ್ನ ಸರ್ಕಾರ ತೆಗೆದುಕೊಳ್ಳುತ್ತಿದೆ. ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯದ ಆರೋಗ್ಯ ಮಂತ್ರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆದವರನ್ನ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಗೆ ಒಳಪಡಿಸಲು ಸೂಚಿಸಲಾಗಿದೆ. ಅಗತ್ಯ ಟೆಸ್ಟಿಂಗ್ ಕಿಟ್ ಗಳನ್ನ ತೆಗೆದಿರಿಸಿಕೊಳ್ಳಲು ಅಧಿಕಾರಿಗಳಿಗೆ ನಾನು ಸೂಚಿನೆ ನೀಡಿದ್ದೇನೆ. ಒಂದು ತಿಂಗಳಿಗೆ ಬೇಕಾಗುವ 5 ಸಾವಿರ RTPCR ಹಾಗೂ 5 ಸಾವಿರ VDRL ಟೆಸ್ಟಿಂಗ್ ಕಿಟ್ ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.
Dinesh Gundu Rao ಬಾಣಂತಿಯರು, ಗರ್ಭೀಣಿಯರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಉತ್ತಮ. ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಹೊಂದಿದ 35 ಜನರಲ್ಲಿ ಕೋವಿಡ್ ಗಂಭೀರವಾಗಿಲ್ಲ. ಸೌಮ್ಯ ಸ್ವಭಾವದ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಸಾರ್ವಜನಿಕರು ಕೋವಿಡ್ ಬಂತು ಎಂದು ಆತಂಕಗೊಳ್ಳದೇ ತಮ್ಮ ಸಹಜ ಜೀವನ ನಡೆಸಬಹುದು ಎಂದು ಸಚಿವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
Siddaramaiah ಜನಾಭಿಪ್ರಾಯ ಪಡೆದೇ ರಾಮನಗರ ಜಿಲ್ಲೆ ಹೆಸರು ಬದಲಾಯಿಸಲಾಗಿದೆ – ಸಿದ್ಧರಾಮಯ್ಯ
Siddaramaiah ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಅಲ್ಲಿನ ಜನರ ಜನಾಭಿಪ್ರಾಯವನ್ನು ಪಡೆದೇ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕುಮಾರಸ್ವಾಮಿಯವರು ರಾಮನಗರ ಜಿಲ್ಲೆ ಸೃಜಿಸುವಾಗ ಅಲ್ಲಿನ ಇತಿಹಾಸದ ಬಗ್ಗೆ ಯೋಚಿಸಿರಲಿಲ್ಲವೇ?
ಮುಖ್ಯಮಂತ್ರಿ ಸಿದ್ಧರಾಮಯ್ಯನವರು
ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮರುಪ್ರಶ್ನೆ ಹಾಕಿದ್ದಾರೆ
ಇ.ಡಿ ಯವರು, ಐ.ಟಿ.ಯವರು ತನಿಖೆ ಮಾಡುವುದನ್ನೇ ಆಗಲಿ ಅಥವಾ ಕಪ್ಪು ಹಣ ವ್ಯವಹಾರವನ್ನು ಪತ್ತೆ ಹಚ್ಚುವುದನ್ನೇ ಆಗಲಿ ನಾವು ಆಕ್ಷೇಪಿಸುವುದಿಲ್ಲ. ಆದರೆ ಇ.ಡಿ ಮತ್ತು ಐ.ಟಿ ದಾಳಿಗಳು ರಾಜಕೀಯ ದುರುದ್ದೇಶದಿಂದ ನಡೆಯಕೂಡದು. ಪ್ರಸ್ತುತ ಗೃಹ ಸಚಿವ ಜಿ.ಪರಮೇಶ್ವರ ಅವರ ಶಿಕ್ಷಣ ಸಂಸ್ಥೇಯ ಮೇಲೆ ಇ.ಡಿ.ದಾಳಿ ರಾಜಕೀಯ ಪ್ರೇರಿತ. ಸುಪ್ರೀಂ ಕೋರ್ಟ್ ನವರು ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೀತಿ ಅವಲೋಕಿಸಿದ್ದಾರೆ ಎಂದು ತೀರ್ಪು ಪರಿಶೀಲಿಸಿದ ನಂತರವಷ್ಟೇ ತಿಳಿಯಲಿದೆ ಎಂದು ರಾಜ್ಯದಲ್ಲಿ ನಡೆದಿರುವ ಇಡಿದಾಳಿ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Siddaramaiah ರಾಜ್ಯದಲ್ಲಿ ಅಪರಾಧ ಪ್ರಕರಣಗಳ ವಿರುದ್ಧ ಕಠಿಣ ಕ್ರಮವಾಗುತ್ತಿದೆ. ಆದ್ದರಿಂದ ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದ್ದು, ಬಿಜೆಪಿ ಅವಧಿಗೆ ಹೋಲಿಸಿದರೆ ನಮ್ಮ ಸರ್ಕಾರದ ಅವಧಿಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಿದೆ. ಅಪರಾಧಗಳನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಸರ್ಕಾರ ಖಂಡಿತ ಪ್ರಯತ್ನಿಸುತ್ತದೆ.
ಸಿಂಗಾಪುರ, ಹಾಂಕಾಂಗ್ ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ವಿದೇಶದಿಂದ ಆಗಮಿಸುವವರ ಕೋವಿಡ್ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ವಹಿಸದೇ, ಇಲ್ಲಿಯೂ ಕೋವಿಡ್ ಪ್ರಕರಣಗಳು ಹೆಚ್ಚುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಕೂಡಲೇ ಕೇಂದ್ರ ಸರ್ಕಾರ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಯಂಗ್ ಇಂಡಿಯಾ ಸಂಸ್ಥೆಗೆ ದೇಣಿಗೆ ನೀಡಿರುವ ಕಾರಣಕ್ಕಾಗಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರವರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದು ರಾಜಕೀಯಪ್ರೇರಿತ ನಡೆ. ಯಾವುದೇ ಸಂಸ್ಥೆಗೆ ದೇಣಿಗೆ ನೀಡುವುದು ತಪ್ಪಲ್ಲ ಎಂದು ಡಿ. ಕೆ .ಶಿವ ಕುಮಾರ್ ಮತ್ತು ಡಿ. ಕೆ.ಸುರೇಶ್ ಪರ ಮಾತನಾಡಿದರು.
