Saturday, February 28, 2026
Saturday, February 28, 2026
Home Blog Page 294

Ayanur Manjunath ಶಾಸಕರ ಅಮಾನತ್ತು ವಾಪಸ್, ಸಂವಿಧಾನ ವಿರೋಧಿ‌ ಕ್ರಮ- ಮಾಜಿ ಶಾಸಕ ಆಯನೂರು ಮಂಜುನಾಥ್

0

Ayanur Manjunath ಶಾಸಕರ ಅಮಾನತ್ತು ಹಿಂದೆ ತೆಗೆದುಕೊಂಡಿದ್ದಕ್ಕೆಮಾಜಿ ಶಾಸಕ ಆಯನೂರು ಮಂಜುನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ.

ಅಮಾನತು ವಾಪಸ್ ಪಡೆದುಕೊಂಡಿರುವ ನಿರ್ಣಯ ಸಂವಿಧಾನ ವಿರೋಧಿಯಾಗಿದೆ.
ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಸದನದ ಕೊನೆಯ ಘಳಿಗೆಯಲ್ಲಿ ವಿಧಾನಸಭೆಯ ಕಾರ್ಯವಿಧಾನ 348 ಪ್ರಕಾರ ಪ್ರಸ್ತಾವವನ್ನು ಸದನದಲ್ಲಿ ಮಂಡನೆ ಮಾಡಬೇಕಿತ್ತು.

ನಿನ್ನೆ ಸಭೆಯಲ್ಲಿ ಹಾಜರಿದ್ದವರು ಒಂದು ತೀರ್ಮಾನವನ್ನು ಮಾಡಿ ಅಮಾನತು ವಾಪಸ್ ಪಡೆಯಲಾಗಿದೆ. 348 ನೇ ಪ್ರಸ್ತಾಪವನ್ನು ಸದನದಲ್ಲಿ ಪಡೆಯಲಾಗಿತ್ತು. ಸದನದಲ್ಲಿ ಆದ ಪ್ರಸ್ತಾವವನ್ನು ಸದನದಲ್ಲಿಯೆ ವಾಪಸ್ ಪಡೆಯಬೇಕಿತ್ತು, ಆದರೆ ಹೊರಗಡೆ ತೆಗೆದುಕೊಳ್ಳುವಂತಿಲ್ಲ.ಸದನದ ಹೊರಗೆ ತೀರ್ಮಾನ ಮಾಡಲು ಸ್ಪೀಕರ್ ಗೂ ಬರಲ್ಲ.

ಸನದ ತೆಗೆದುಕೊಂಡ ತೀರ್ಮಾನ ಸದನದ ಹೊರಗೆ ತೆಗೆದುಕೊಳ್ಳಲು ಸ್ಪೀಕರ್ ಗೂ ಅಧಿಕಾರ ಇಲ್ಲ ಎಂದರು. ಇಲ್ಲಿ ಸ್ವಲ್ಪ ಎಡವಿದ್ದಾರೆ. ವಿಧಾನಸಭೆ ಕಾರ್ಯದರ್ಶಿಯವರು ಸದನದ ಹೊರಗೆ ತೀರ್ಮಾನ ಮಾಡಲು ಬರಲ್ಲ ಎಂದು ಹೇಳಿದ್ದಾರೆ.

ಆದರೂ ಅಶೋಕ್ ರವರು ವಿರೋಧ ಪಕ್ಷದ ನಾಯಕ, ಸಿಎಂ, ಕಾನೂನು ಸಚಿವರು ಹಾಗೂ ಸ್ಪೀಕರ್ ಇದ್ದಾರೆಂದು ಹೇಳಿದ್ದಾರೆ.
ಸಂವಿಧಾನ ವಿರೋಧ, ಸದನದ ವಿರೋಧಿ ಆಗಿದೆ. ಯಾರೇ ತಪ್ಪು ಮಾಡಿದ್ರು ಅದು ತಪ್ಪು. ನಿನ್ನೆ ದೊಡ್ಡವರಾಗಿಯೇ ಅವರು ತಪ್ಪು ಮಾಡಿದ್ದಾರೆ. ಇದು ಕೆಟ್ಟ ಸಂಪ್ರದಾಯವಾಗಿದೆ. ಸಂಸದಿಯ ವ್ಯವಸ್ಥೆಯ ದೊಡ್ಡಲೋಪ. ಸಂವಿಧಾನ ತಜ್ಞರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.

Ayanur Manjunath ಸಂವಿಧಾನದ ಹುದ್ದೆಯಲ್ಲಿರುವವರು ಭಾವವೇಶಕ್ಕೆ ಒಳಗಾಗಬಾರದು.
ಮುಂದಿನ ಸದನದ ವೇಳೆ ಇವರನ್ನು ಹೊರಗಿಟ್ಟು. ನಂತರ ತೀರ್ಮಾನ ಮಾಡಿದ ಮೇಲೆ ಒಳಗ ಹೋಗಬೇಕು. ಶಾಸಕರುಗಳು ಸಹ ಇದು ಸರಿ ಇಲ್ಲ ಎಂದು ಹೇಳಿ ಮುಂದಿನ ಅಧಿವೇಶದ ವರೆಗೂ ಒಳಗೆ ಹೋಗಬಾರದು.
ನಿನ್ನೆ ಪಡೆದ ತೀರ್ಮಾನ ವಾಪಸ್ ಪಡೆಯಬೇಕು. ಶಾಸಕರ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಅವರಿಗೆ ಅವಕಾಶ ನೀಡಬೇಕೆಂದರು.

ನಾನು ಹೇಳುತ್ತಿರುವುದು ಸರಿ ಇದೆ. ಈ ಕುರಿತು ಚರ್ಚೆ ನಡೆಯಲಿ. ಒಂದು ತಪ್ಪನ್ನು ಮುಚ್ಚಲು ಇನ್ನೂಂದು ತಪ್ಪು ಮಾಡಬಾರದು ಎಂದರು. ಇದು ನನ್ನ ವೈಯಕ್ತಿಕ ನೆಲೆಯಾಗಿದೆ. ಅಮಾನತು ಆದೇಶ ವಾಪಸ್ ಪಡೆಯಬೇಕು.
ವಿರೋಧ ಪಕ್ಷದ ಶಾಸಕರು ಸದನದ ಒಳಗೆ ಹೋಗಬಾರದು. ಶಾಸನ ಮಾಡುವವರೇ ಶಾಸಕಾಂಗ ಅಪಮಾನ ಮಾಡಬಾರದು ಎಂದು ಆಯನೂರು ಮಂಜುನಾಥ್ ಹೇಳಿದರು.

K.B. Prasanna kumar ಸಾಧನೆಗೆ ಪರಿಶ್ರಮ ಮುಖ್ಯ, ಸತತ ಅಧ್ಯಯನದಿಂದ ಸಾಧನೆ- ಕೆ.ಬಿ.ಪ್ರಸನ್ನ ಕುಮಾರ್

0

K.B. Prasanna kumar ಪರಿಶ್ರಮ ಮತ್ತು ಸತತ ಅಧ್ಯಯನದಿಂದ ವಿದ್ಯಾರ್ಥಿಯೊಬ್ಬ ಅತ್ಯುನ್ನತ ಸಾಧನೆ ಮಾಡಬಹುದು. ವಿದ್ಯೇ ಎಂಬುದು ಯಾರೂ ಕದಿಯಲಾಗದ ಅಮೂಲ್ಯ ವಸ್ತು ಅದನ್ನು ಗಳಿಸಿಟ್ಟುಕೊಳ್ಳಿ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಕ್ಕಳಿಗೆ ಕರೆ ನೀಡಿದರು.
ನಗರದ ಅನನ್ಯ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕಗಳಿಸಿ ಸಾಧನೆಗೈದ ಮಕ್ಕಳಿಗೆ ಭಾನುವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿ ಮಾತನಾಡಿದರು.
ನಮ್ಮ ಕಾಲದಲ್ಲಿ ವಿದ್ಯಾರ್ಜನೆ ಬಹಳ ಕಷ್ಟಕರವಾದ ಪರಿಸ್ಥಿತಿಯಲ್ಲಿ ಇತ್ತು. ಆದರೆ, ಈಗ ಎಲ್ಲ ಅವಕಾಶಗಳು ವಿದ್ಯಾರ್ಥಿಗಳ ಮುಂದೆ ಇದೆ. ಅದಕ್ಕೆ ಪೋಷಕರ ಸಹಾಕರವೂ ಇರುತ್ತದೆ. ಅದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದಾಗ ಅವರನ್ನು ಓದಿಸಿದ ಗುರುಗಳಿಗೆ ಹಾಗೂ ಶಾಲೆಗೆ ಗೌರವ ಇಮ್ಮಡಿಯಾಗುತ್ತದೆ ಎಂದು ಹೇಳಿದರು.
ಪೋಷಕರು ತಮ್ಮ ಮಕ್ಕಳನ್ನು ಓದಿಸಲು ಇನ್ನಿಲ್ಲದ ಕಷ್ಟ ಪಡುತ್ತಿದ್ದಾರೆ. ತಮ್ಮ ಕಷ್ಟಗಳು ಮಕ್ಕಳಿಗೆ ಬಾರದೇ ಇರಲಿ ಎಂಬ ಕಾರಣಕ್ಕೆ ಎಲ್ಲವನ್ನೂ ಮುಚ್ಚಿಟ್ಟು ಅವರಿಗೆ ಓದಿನ ಸುಖ ಹಾಗೂ ಅನುಭವ ದಕ್ಕುವಂತೆ ಮಾಡಲು ಪ್ರಯತ್ನ ಮಾಡುತ್ತಾರೆ. ಅದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಸಾಧನೆಗೆ ಪರಿಶ್ರಮ ಮುಖ್ಯವಾಗುತ್ತದೆ. ಸತತ ಅಧ್ಯಯನದಿಂದ ಮಾತ್ರ ಸಾಧನೆ ಮಾಡಬಹುದು ಎಂಬುದನ್ನು ಅನನ್ಯ ವಿದ್ಯಾಪೀಠದ ಶಾಲೆಯ ವಿದ್ಯಾರ್ಥಿಗಳು ತೋರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಣ್ಣ ಶಾಲೆಯಿಂದ ಆರಂಭವಾದ ಅನನ್ಯ ವಿದ್ಯಾಪೀಠ ಇಂದು ಅತಿ ದೊಡ್ಡ ಎತ್ತರಕ್ಕೆ ಮುಟ್ಟಿದೆ. ಅದಕ್ಕೆ ಶಾಲೆಯ ಮುಖ್ಯಸ್ಥರಾದ ಗೀರೀಶ ಅವರ ಶ್ರಮ ದೊಡ್ಡದಿದೆ. ಯಾವ ಮಗುವೂ ಕಲಿಯಲಾರದು ಎಂದು ಹೇಳದೇ, ಪ್ರತಿ ಮಗುವಿನ ಸಾಮರ್ಥ್ಯವನ್ನು ಹೊರಗೆಳೆಯುವ ಅವರ ಸೇವಾ ಮನೋಭಾವ ಅವರನ್ನು ಅತಿ ಎತ್ತರಕ್ಕೆ ಬೆಳೆಸಿದೆ. ಮುಂದಿನ ದಿನಗಳಲ್ಲಿ ಅನನ್ಯ ವಿದ್ಯಾಪೀಠ ರಾಜ್ಯದಲ್ಲಿ ಉತ್ತಮ ಶಾಲೆ ಎಂಬ ಹೆಸರುಗಳಿಸಲಿ ಎಂದು ಹಾರೈಸಿದರು.
K.B. Prasanna kumar ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಡಿಡಿಪಿಇ ಮಂಜುನಾಥ ಅವರು, ತಮ್ಮ ಓದಿನ ದಿನಗಳನ್ನು ಮೆಲಕು ಹಾಕಿದರು. ಅನನ್ಯ ವಿದ್ಯಾಪೀಠ ಶಾಲೆಯ ಶಿಕ್ಷಕರು ವಿಭಿನ್ನ ಪ್ರಯತ್ನದ ಮೂಲಕವೇ ಮಕ್ಕಳನ್ನು ತಲುಪಿದ್ದಾರೆ. ಉತ್ತಮವಾಗಿ ಓದುತ್ತಿರುವ ಮಕ್ಕಳನ್ನು ರ‍್ಯಾಂಕ್ ಬರುವಂತೆ ಮಾಡುವುದು ಶಿಕ್ಷಕರ ಕಾರ್ಯವಲ್ಲ. ಬದಲಿಗೆ ಓದಿನಲ್ಲಿ ಹಿಂದುಳಿದ ಮಕ್ಕಳೂ ರ‍್ಯಾಂಕ್ ಬರಬಲ್ಲರು ಎಂಬ ಮನಸ್ಥಿತಿಯನ್ನು ಬೆಳೆಸಿ ಅವರನ್ನು ಸಾಧನೆಯ ಹಾದಿಗೆ ತರುವುದು ದೊಡ್ಡದು. ಆ ದೃಷ್ಟಿಯಲ್ಲಿ ಅನನ್ಯ ವಿದ್ಯಾಪೀಠದ ಗಿರೀಶ ಹಾಗೂ ಶಿಕ್ಷಕರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ ಎಂದು ಅಭಿನಂದನೆ ತಿಳಿಸಿದರು.
ಪೋಷಕರು ಮಕ್ಕಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಬೇಕು. ಹಬ್ಬ ಹರಿದಿನ ಮುಖಾಂತರ ಖರ್ಚುಗಳನ್ನು ಕಡಿಮೆ ಮಾಡಿ ಮಕ್ಕಳ ಓದಿನ ಕಡೆಗೆ ವೆಚ್ಚ ಮಾಡಿ. ಅವರು ಬೆಳೆದು ಉತ್ತಮ ನಾಗರೀಕರಾಗಿ ಬೆಳೆದರೆ ಅದು ಈ ಸಮಾಜಕ್ಕೆ ನೀವು ನೀಡುವ ಅತಿ ದೊಡ್ಡ ಕೊಡಗೆಯಾಗಿದೆ. ಶಿವಮೊಗ್ಗ ನಗರದಲ್ಲಿ ಅನೇಕ ಪತಿಷ್ಠಿತ ಶಾಲೆಗಳು ಇವೆ. ಆದರೆ, ಆ ಎಲ್ಲ ಶಾಲೆಗಳಿಗಿಂತ ಅನನ್ಯ ವಿದ್ಯಾಪೀಠ ಭಿನ್ನವಾಗಿ ನಿಲ್ಲುವುದು ಎಲ್ಲ ವಿದ್ಯಾರ್ಥಿಗಳಿಂದಲೂ ಸಾಧನೆ ಸಾಧ್ಯ ಎಂಬುದನ್ನು ಮಾಡಿ ತೊರಿಸುವುದರಲ್ಲಿ ಇದೆ ಎಂಬುದಾಗಿ ಎಂದರು.
ಉಪನ್ಯಾಸಕ ನಟೇಶ ಅವರು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ, ಅಹಂಕಾರ, ಅನುಮಾನ ಹಾಗೂ ಇತತರನ್ನು ನೋಯಿಸದಿದ್ದರೆ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.
ಶಾಲೆಯ ವಿದ್ಯಾರ್ಥಿನಿಯರಾದ ಕು.ಕನ್ಮಮ್, ಕು.ವರ್ಷ ಹಾಗೂ ಇತರರು ಶಾಲೆಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು, ಉತ್ತಮ ಸಾಧನೆ ಮಾಡಿದ ಸುಮಾರು ೩೦ ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು. ಶಾಲೆಯ ಮುಖ್ಯಸ್ಥರಾದ ಗೀರೀಶ ಅವರು ಎಲ್ಲರನ್ನು ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ, ಶಾಲೆ ಬೆಳೆದು ಬಂದ ರೀತಿಯನ್ನು ವಿವರಿಸಿದರು. ಪೋಷಕರೇ ನಿಜವಾದ ತಮ್ಮ ಬೆಂಬಲಿಗರು, ಅವರ ಪ್ರೋತ್ಸಾಹದಿಂದಲೇ ನಾವು ಬೆಳೆದಿದ್ದೇವೆ. ಸಾಧನೆ ಮಾಡಿದ್ದೇವೆ ಎಂದರು. ಶಾಲೆಯ ಶಿಕ್ಷಕರಾದ ನಾಗಲಕ್ಷ್ಮೀ ಸೇರಿದಂತೆ ಇತರ ಶಿಕ್ಷಕರು ಹಾಗೂ ನೂರಕ್ಕೂ ಹೆಚ್ಚು ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Karnataka Legislative Assembly 18 ಶಾಸಕರ ಅಮಾನತು ರದ್ದು. ಸಭೆಯಲ್ಲಿ ಸ್ಪೀಕರ್ಯು.ಟಿ.ಖಾದರ್ ಚರ್ಚಿಸಿ ನಿರ್ಧಾರ

0

Karnataka Legislative Assembly ಕಳೆದ ಅಧಿವೇಶನದ ಅವಧಿಯಲ್ಲಿ ದಿನಾಂಕ: 21.03.2025ರಂದು ಸದನದಲ್ಲಿ ಪೀಠದ ಆದೇಶವನ್ನು ಲೆಕ್ಕಿಸದೇ ಸದನದ ಕಾರ್ಯಕಲಾಪಗಳಿಗೆ ಅಡ್ಡಿಯುಂಟು ಮಾಡುತ್ತಾ, ಆಶಿಸ್ತಿನಿಂದ ಹಾಗೂ ಅಗೌರವದಿಂದ ನಡೆದುಕೊಂಡಿದ್ದರಿಂದ ಮಾನ್ಯ ವಿಧಾನಸಭಾ ಸದಸ್ಯರುಗಳಾದಂತಹ ಶ್ರೀ ದೊಡ್ಡನಗೌಡ ಹೆಚ್, ಪಾಟೀಲ್‌, (ವಿರೋಧ ಪಕ್ಷದ ಮುಖ್ಯ ಸಚೇತಕರು), ಡಾ: ಅಶ್ವಥ್‌ನಾರಾಯಣ್‌ ಸಿ.ಎನ್.. ಶ್ರೀ ಎಸ್.ಆರ್. ವಿಶ್ವನಾಥ್, ಶ್ರೀ ಬಿ.ಎ. ಬಸವರಾಜ, ಶ್ರೀ ಎಂ.ಆರ್. ಪಾಟೀಲ್, ಶ್ರೀ ಚನ್ನಬಸಪ್ಪ (ಚೆನ್ನಿ), ಶ್ರೀ ಬಿ. ಸುರೇಶ್‌ ಗೌಡ, ಶ್ರೀ ಉಮಾನಾಥ್ ಎ. ಕೋಟ್ಯಾನ್, ಶ್ರೀ ಶರಣು ಸಲಗರ, ಡಾ: ಶೈಲೇಂದ್ರ ಬೆಲ್ದಾಳೆ, ಶ್ರೀ ಸಿ.ಕೆ. ರಾಮಮೂರ್ತಿ, ಶ್ರೀ ಯಶಪಾಲ್ ಎ. ಸುವರ್ಣ, ಶ್ರೀ ಬಿ.ಪಿ. ಹರೀಶ್, ಡಾ: ಭರತ್‌ ಶೆಟ್ಟಿ ವೈ., ಶ್ರೀ ಮುನಿರತ್ನ, ಶ್ರೀ ಬಸವರಾಜ್‌, ಮತ್ತಿಮೂಡ್, ಶ್ರೀ ಧೀರಜ್ ಮುನಿರಾಜು ಮತ್ತು ಡಾ: ಚಂದ್ರು ಲಮಾಣಿ ಅವರುಗಳನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 348ರ ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮಂಡಿಸಿದ ಹಾಗೂ ಸದನವು ಅಂಗೀಕರಿಸಿದ ಪ್ರಸ್ತಾವದಂತೆ ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳುಗಳ
ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತ್ತುಗೊಳಿಸಿದ್ದ ನಿರ್ಣಯವನ್ನು ಹಿಂತೆಗೆದುಕೊಳ್ಳುವಂತೆ ಕೋರಿ ಮಾನ್ಯ ವಿರೋಧ ಪಕ್ಷದ ನಾಯಕರು ಹಾಗೂ ಅಮಾನತ್ತುಗೊಂಡ ಸದಸ್ಯರು ಸಲ್ಲಿಸಿದ್ದ ಮನವಿಯ ಬಗ್ಗೆ ದಿನಾಂಕ: 25.05.2025ರಂದು ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪ ಮುಖ್ಯಮಂತ್ರಿಯವರು, ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು, ಮಾನ್ಯ ಉಪ ಸಭಾಧ್ಯಕ್ಷರು ಮತ್ತು ಮಾನ್ಯ ವಿರೋಧ ಪಕ್ಷದ ನಾಯಕರೊಂದಿಗೆ ಸನ್ಮಾನ್ಯ ಸಭಾಧ್ಯಕ್ಷರು ಸಭೆ ನಡೆಸಿರುತ್ತಾರೆ.
Karnataka Legislative Assembly ಸದರಿ ಸಭೆಯಲ್ಲಿ, ಅಮಾನತ್ತಿನ ಅವಧಿಯಲ್ಲಿ ಈಗಾಗಲೇ 2 ತಿಂಗಳು ಕಳೆದಿದ್ದು, ಸದರಿ ಅವಧಿಯಲ್ಲಿ ಅಮಾನತ್ತುಗೊಂಡಿರುವ ಸದಸ್ಯರುಗಳು ತಮ್ಮ ನಡೆಯ ಬಗ್ಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದು ಹಾಗೂ ಇನ್ನು ಮುಂದೆ ಸಂವಿಧಾನಾತ್ಮಕವಾಗಿ ಸದನದ ಕಾರ್ಯಕಲಾಪಗಳಲ್ಲಿ ಸಂಯಮದಿಂದ ನಡೆದುಕೊಳ್ಳುವುದಾಗಿ ತಿಳಿಸಿರುವುದನ್ನು ಪರಿಗಣಿಸಿ ಆಡಳಿತ ಪಕ್ಷದ ಶಾಸಕಾಂಗ ನಾಯಕರಾದ ಮಾನ್ಯ ಮುಖ್ಯಮಂತ್ರಿಯವರು, ಮಾನ್ಯ ಉಪ ಮುಖ್ಯಮಂತ್ರಿಯವರು. ಮಾನ್ಯ ವಿರೋಧ ಪಕ್ಷದ ನಾಯಕರು, ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಒಮ್ಮತ ಸೂಚಿಸಿದ ಹಿನ್ನೆಲೆಯಲ್ಲಿ
ಮುಂದಿನ ದಿನಗಳಲ್ಲಿ ಮಾನ್ಯ ಸದಸ್ಯರುಗಳು ಸಂವಿಧಾನತ್ಮಕವಾಗಿ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಅಮಾನತುಗೊಳಿಸಲಾಗಿರುವ ಮಾನ್ಯ ವಿಧಾನಸಭಾ ಸದಸ್ಯರುಗಳಾದಂತಹ ಶ್ರೀ ದೊಡ್ಡನಗೌಡ ಹೆಚ್, ಪಾಟೀಲ್, (ವಿರೋಧ ಪಕ್ಷದ ಮುಖ್ಯ ಸಚೇತಕರು).
ಡಾ: ಅಶ್ವಥ್‌ ನಾರಾಯಣ್ ಸಿ.ಎನ್, ಶ್ರೀ ಎಸ್.ಆರ್. ವಿಶ್ವನಾಥ್, ಶ್ರೀ ಬಿ.ಎ. ಬಸವರಾಜ, ಶ್ರೀ ಎಂ.ಆರ್. ಪಾಟೀಲ್‌, ಶ್ರೀ ಚನ್ನಬಸಪ್ಪ (ಚೆನ್ನಿ), ಶ್ರೀ ಬಿ. ಸುರೇಶ್‌ ಗೌಡ, ಶ್ರೀ ಉಮಾನಾಥ್ ಎ. ಕೋಟ್ಯಾನ್, ಶ್ರೀ ಶರಣ ಸಲಗರ, ಡಾ: ಶೈಲೇಂದ್ರ ಬೆಲ್ದಾಳೆ, ಶ್ರೀ ಸಿ.ಕೆ. ರಾಮಮೂರ್ತಿ, ಶ್ರೀ ಯಶಪಾಲ್ ಎ. ಸುವರ್ಣ, ಶ್ರೀ ಬಿ.ಪಿ. ಹರೀಶ್‌, ಡಾ: ಭರತ್‌ ಶೆಟ್ಟಿ ವೈ., ಶ್ರೀ ಮುನಿರತ್ನ, ಶ್ರೀ ಬಸವರಾಜ್ ಮತ್ತಿಮೂಡ್, ಶ್ರೀ ಧೀರಜ್ ಮುನಿರಾಜು ಮತ್ತು ಡಾ: ಚಂದು ಲಮಾಣಿ ಅವರುಗಳನ್ನು ಅಮಾನತ್ತುಗೊಳಿಸಲಾಗಿದ್ದ ನಿರ್ಣಯವನ್ನು ಹಿಂತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ.

Vidhana Soudha ವಿಧಾನಸೌಧ, ಪ್ರವಾಸಿ ದರ್ಶನದಿಂದ ಸಾರ್ವಜನಿಕರಿಗೆ ಆಡಳಿತ ಪಾರದರ್ಶಕತೆ & ಪರಂಪರೆಯ ಪರಿಚಯ- ಸಚಿವ ಎಚ್.ಕೆ.ಪಾಟೀಲ್

0

Vidhana Soudha ವಿಧಾನ ಸೌಧವು ನಮ್ಮ ರಾಜ್ಯದ ಪ್ರಜಾಪ್ರಭುತ್ವದ ಜೀವಂತ ಕಥೆಯಾಗಿದ್ದು, ಇದನ್ನು ಸಾರ್ವಜನಿಕರಿಗೆ ತೆರೆದಿರುವುದು ಪಾರದರ್ಶಕತೆ, ಪರಂಪರೆ ಮತ್ತು ನಾಗರಿಕ ಹೆಮ್ಮೆಯ ಕಾರ್ಯಕ್ರಮವಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರವಾಸೋದ್ಯಮ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಕರ್ನಾಟಕ ವಿಧಾನ ಸಭೆಯ ಸಚಿವಾಲಯದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಮಾರ್ಗದರ್ಶಿ ನಡಿಗೆ ಪ್ರವಾಸ (Walking Guided Tour) ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ವಿಧಾನ ಸೌಧವು ಇನ್ನು ಮುಂದೆ ಸಾರ್ವಜನಿಕರಿಗೂ ಮುಕ್ತವಾಗಲಿದೆ. ಕಲಾಕೌಶಲ್ಯದ ವಿರಳ ದಾಖಲೆಯಾಗಿ ಇತಿಹಾಸದಲ್ಲಿ ದಾಖಲಾಗಿರುವ ಆಡಳಿತಸೌಧವನ್ನು ದೂರದಿಂದಲೇ ನೋಡಿ ಫೊಟೋ ತೆಗೆದು ಸಂತಸ ಪಡುತ್ತಿದ್ದ ಜನರಿಗೆ ಈಗ ಇದನ್ನ ಹತ್ತಿರದಿಂದ ನೋಡುವ ಸದವಕಾಶ ಲಭ್ಯವಿದೆ ಎಂದರು.

ಇದು ಕೇವಲ ಕಟ್ಟಡವಲ್ಲ. ಜಗತ್ತಿನ ಅತ್ಯಂತ ಸುಂದರವಾದ ಕಟ್ಟಡ, ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಇದರ ದರ್ಶನ ಮಾಡಿಸುವ ದೃಷ್ಟಿಯಿಂದ ಅವಕಾಶವನ್ನು ಕಲ್ಪಸಿಕೊಡಲಾಗುತ್ತಿದೆ. ಇಲ್ಲಿಯವರಿಗೆ ಕೇವಲ ಆಡಳಿತ ಕಾರ್ಯಗಳಿಗಷ್ಟೇ ಸೀಮಿತವಾಗಿದ್ದ ವಿಧಾನಸೌಧವು ಇನ್ನು ಮುಂದೆ ಪ್ರವಾಸಿ, ಪ್ರೇಕ್ಷಣೀಯ ಸ್ಥಳದ ಸಾಲಿಗೆ ಸೇರ್ಪಡೆಯಾಗಲಿದೆ.

ಜೂನ್ 1ರಿಂದ ಸೀಮಿತ ದಿನಗಳಲ್ಲಿ ವಿಧಾನಸೌಧವು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.

ವಿಧಾನಸೌಧ ಪ್ರವಾಸ ಕಾರ್ಯಕ್ರಮವು ಮನೋರಂಜನೆಯ ಪ್ರವಾಸವಾಗಬಾರದು, ಶೈಕ್ಷಣಿಕ ಅಧ್ಯಯನದ ಪ್ರವಾಸವಾಗಬೇಕು. ಪ್ರಜಾಪ್ರಭುತ್ವದ ಮಹತ್ವವನ್ನು ಸಾರ್ವಜನಿಕರು ತಿಳಿದುಕೊಳ್ಳುವಂತಾಗಬೇಕು. ವಿದ್ಯಾರ್ಥಿಗಳು ಮುಂದೆ ರಾಜಕೀಯ ಕ್ಷೇತ್ರಕ್ಕೂ ಬರಬೇಕು, ಉತ್ತಮ ರಾಜಕೀಯ ಪಟುಗಳಾಗಲು ಶಕ್ತಿಸೌಧ ಸ್ಪೂರ್ತಿ ನೀಡುವಂತಾಗಲಿದೆ ಎಂದು ಹೇಳಿದರು.

ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಮಾತನಾಡಿ ವಿಧಾನಸೌಧದ ಕಟ್ಟಡದಲ್ಲಿ ಓಡಾಡಿದ್ರೆ ಅನೇಕ ಪಾರಂಪರಿಕ ಕಟ್ಟಡಗಳು ಕಣ್ಣಿಗೆ ಕಟ್ಟುವಂತೆ ಮಾಡಲಿದೆ. 75 ವರ್ಷಗಳ ಕಾಲ ವಿಧಾನಸೌಧದ ಒಳಗೆ ಯಾರನ್ನೂ ಬಿಟ್ಟಿರಲಿಲ್ಲ. ಸಾರ್ವಜನಿಕರು ಪಾಸ್ ಪಡೆದುಕೊಂಡು ಬರಬೇಕಿತ್ತು.

Vidhana Soudha ಆದರೆ ಈಗ ಕರ್ನಾಟಕ ಮಾತ್ರವಲ್ಲ ದೇಶದ ಜನತೆಗೆ ತೋರಿಸುವ ಕೆಲಸ ಮಾಡಿದ್ದೇವೆ ಎಂದರು.

ಮಾರ್ಗದರ್ಶಿ ಪ್ರವಾಸದ ಮೂಲಕ ವಿದ್ಯಾರ್ಥಿಗಳಿಗೆ ನಮ್ಮ ನಾಡಿನ ಇತಿಹಾಸ ಅರ್ಥಮಾಡಿಸುವ ಕೆಲಸವಾಗಲಿದೆ.

ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯದವರು ದೇಶದ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು. ವಿಧಾನಸೌಧ ನಮ್ಮದು ಎಂಬ ಭಾವನೆಯನ್ನು ನಮ್ಮ ರಾಜ್ಯದ ಜನರಲ್ಲಿ ಮೂಡುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಸೌಧ, ಬೆಂಗಳೂರಿನ ಪ್ರಮುಖ ಐತಿಹಾಸಿಕ ಮತ್ತು ಆಡಳಿತದ ಸಂಕೇತವಾಗಿದ್ದು. ಮಾರ್ಗದರ್ಶಿ ಪ್ರವಾಸಿ ನಡಿಗೆಯು ಈ ಕಟ್ಟಡದ ಐತಿಹಾಸಿಕದ ಮಹತ್ವ, ಶಿಲ್ಪಕಲೆಯ ವೈಭವ ಮತ್ತು ಅದರ ಪ್ರಮುಖ ಭಾಗಗಳನ್ನು ಪರಿಚಯಿಸುತ್ತದೆ. ಸಾರ್ವಜನಿಕರು ಇದರ ವೀಕ್ಷಣೆ ಮಾಡಬಹುದಾಗಿದೆ.

ನುರಿತ ಗೈಡ್‌ಗಳು ವಿಧಾನಸೌಧ ಆವರಣದ ಕುರಿತು ಸಮಗ್ರ ಪರಿಚಯ ಸಹಿತ ಮಾಹಿತಿಯನ್ನು ಪ್ರವಾಸಿಗರಿಗೆ ಒದಗಿಸಲಿದ್ದಾರೆ ಎಂದು ತಿಳಿಸಿದರು.

ರಾಜಕೀಯ ಅಕಾಡೆಮಿ ತೆರೆಯಲು ಚಿಂತಿಸಲಾಗುತ್ತಿದೆ, ರಾಜಕೀಯ ಕಾಲೇಜು ಆರಂಭಿಸಿ ತರಬೇತಿ ನೀಡುವ ಬಗ್ಗೆ ಕಾನೂನಾತ್ಮಕವಾಗಿ ಚರ್ಚಿಸಿ ಅನುಷ್ಟಾನದ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.

ವಿಧಾನ ಪರಿಷತ್ತಿನ ಸಭಾಧ್ಯಕ್ಷರಾದ ಬಸವರಾಜ ಎಸ್ ಹೊರಟ್ಟಿ ಮಾತನಾಡಿ ಸಾರ್ವಜನಿಕರಿಗೆ ವಿಧಾನಸೌಧ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದು ಒಳ್ಳೆಯ ಬೆಳವಣಿಗೆ. ಶಕ್ತಿ ಸೌಧದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವ ಕೆಲಸವಾಗಲಿದೆ ಎಂದು ಹೇಳಿದರು.

ವಿಧಾನಸೌಧ ಮಾರ್ಗದರ್ಶಿ ನಡಿಗೆ ಪ್ರವಾಸದ ವಿಶೇಷತೆಗಳು:

ಪ್ರತೀ ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ವಿಧಾನಸೌಧ ಪ್ರವಾಸ ನಡಿಗೆ ಇರಲಿದೆ. ಇದಕ್ಕಾಗಿ ಆನ್‌ಲೈನ್ ನಲ್ಲಿ ಮುಂಚಿತವಾಗಿ ಟಿಕೆಟ್ ಮಾಡಿಕೊಳ್ಳಬೇಕು. ಜೂನ್ 1 ರಿಂದ ಅಧಿಕೃತ ವಿಧಾನಸೌಧ ಪ್ರವಾಸ ಆರಂಭವಾಗಲಿದೆ. ಪ್ರಾರಂಭಿಕ ದರವು 16 ವರ್ಷ ಮೇಲ್ಪಟ್ಟವರಿಗೆ 50 ರೂಪಾಯಿ ದರ ನಿಗಧಿಯಾಗಿದ್ದು. 15 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಮಕ್ಕಳಿಗೆ ಉಚಿತ. ಟಿಕೆಟ್‌ಗಳನ್ನು https://kstdc.co/activities ವೆಬ್‌ಸೈಟ್ ನಲ್ಲಿ ಬುಕ್ ಮಾಡಿಕೊಳ್ಳಬೇಕು. ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಹಾಗೂ ಎಲ್ಲಾ ಭಾನುವಾರಗಳು ವೀಕ್ಷಿಸಬಹುದು.

ಪ್ರವಾಸವು ಬೆಳಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಇರಲಿದೆ.

Thawar Chand Gehlot ಶಾಲಾ ಹಂತದಿಂದಲೇವಿಪತ್ತು ಜಾಗೃತಿ ತರಬೇತಿ ಪ್ರಾರಂಭಿಸಬೇಕು- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

0

Thawar Chand Gehlot ವಿಪತ್ತು ನಿರ್ವಹಣೆಯ ಪ್ರಮುಖ ಆಧಾರಸ್ತಂಭವೆಂದರೆ ಸ್ಥಳೀಯ ಸಮುದಾಯ. ಸ್ಥಳೀಯ ಜನರಿಗೆ ಸಬಲೀಕರಣ, ಅರಿವು ಮತ್ತು ತರಬೇತಿ ನೀಡಿದರೆ, ವಿಪತ್ತಿನ ಪರಿಣಾಮವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು” ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ಜವಾಹರಲಾಲ್ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ ಆಯೋಜಿಸಿದ್ದ ವಿಶ್ವ ವಿಪತ್ತು ನಿರ್ವಹಣಾ ಸಮ್ಮೇಳನದಲ್ಲಿ ಮುಖ್ಯಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

” ಶಾಲಾ ಹಂತದಿಂದಲೇ ವಿಪತ್ತು ಜಾಗೃತಿ ತರಬೇತಿಯನ್ನು ಪ್ರಾರಂಭಿಸಬೇಕು. ಗ್ರಾಮ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಬೇಕು ಮತ್ತು ಅವುಗಳಿಗೆ ಅಗತ್ಯ ಸಂಪನ್ಮೂಲಗಳು ಮತ್ತು ತರಬೇತಿಯನ್ನು ಒದಗಿಸಬೇಕು. ಸರ್ಕಾರಗಳು ವಿಪತ್ತು ನಿರ್ವಹಣೆಯನ್ನು ತಮ್ಮ ಅಭಿವೃದ್ಧಿ ನೀತಿಯ ಅವಿಭಾಜ್ಯ ಅಂಗವನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಭವಿಷ್ಯದ ವಿಪತ್ತುಗಳನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ನಾವು “ಉತ್ತಮವಾಗಿ ಮರಳಿ ನಿರ್ಮಿಸಿ” ಎಂಬ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

“ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ಮೋದಿ ಅವರ ನೇತೃತ್ವದಲ್ಲಿ, ನಾವು “ಅಭಿವೃದ್ಧಿ ಹೊಂದಿದ ಭಾರತ”ದತ್ತ ವೇಗವಾಗಿ ಸಾಗುತ್ತಿದ್ದೇವೆ, ಇದರಲ್ಲಿ ವಿಪತ್ತು ನಿರ್ವಹಣೆಯ ಪಾತ್ರ ಬಹಳ ಮುಖ್ಯವಾಗಿದೆ.

ವಿಪತ್ತು ನಿರ್ವಹಣೆಯು ಒಂದು ಸಾಮೂಹಿಕ ಜಾಗತಿಕ ಪ್ರಯತ್ನವಾಗಿದ್ದು, ನೀತಿ, ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ಭಾಗವಹಿಸುವಿಕೆಯ ಸಮನ್ವಯದ ಅಗತ್ಯವಿರುತ್ತದೆ. ಆದ್ದರಿಂದ, ಇಂತಹ ಸಮ್ಮೇಳನಗಳು ಮನುಕುಲದ ಕಲ್ಯಾಣಕ್ಕೆ ಬಹಳ ಮುಖ್ಯವಾಗುತ್ತವೆ” ಎಂದು ಹೇಳಿದರು.

“ಹವಾಮಾನ ಬದಲಾವಣೆ ಮತ್ತು ವಿಕೋಪ ಇಂದು ಜಾಗತಿಕ ಸವಾಲಾಗಿದ್ದು, ನವೆಂಬರ್ ತಿಂಗಳಲ್ಲಿ ನಡೆಯಲಿರುವ ವಿಶ್ವ ವಿಪತ್ತು ನಿರ್ವಹಣಾ ಸಮ್ಮೇಳನದ ಮೂಲಕ ಉತ್ತರಾಖಂಡ ರಾಜ್ಯವು ಇಡೀ ಪ್ರಪಂಚದ ಗಮನವನ್ನು ಆಧ್ಯಾತ್ಮಿಕತೆ, ಜ್ಞಾನ ಮತ್ತು ವಿಜ್ಞಾನದ ನಾಡು ಭಾರತದ ಕಡೆಗೆ ಸೆಳೆಯಲು ಅರ್ಥಪೂರ್ಣ ಪ್ರಯತ್ನ ಮಾಡುತ್ತಿದೆ.

ಈ ಸರಣಿಯಲ್ಲಿ ಬೆಂಗಳೂರಿನಲ್ಲಿರುವ ವಿಶ್ವಪ್ರಸಿದ್ಧ ಸಂಸ್ಥೆಯಾದ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್‌ನಲ್ಲಿ ‘ಹವಾಮಾನ ಮತ್ತು ವಿಪತ್ತು ಸ್ಥಿತಿಸ್ಥಾಪಕತ್ವಕ್ಕಾಗಿ ತಂತ್ರಜ್ಞಾನ’ ಎಂಬ ವಿಷಯದ ಕುರಿತು ಸಮ್ಮೇಳನವನ್ನು ಆಯೋಜಿಸಲಾಗುತ್ತಿರುವುದು ನನಗೆ ಸಂತೋಷ ತಂದಿದೆ.

ಈ ಸಮ್ಮೇಳನದ ಮುಖ್ಯ ವಿಷಯವು ಅತ್ಯಂತ ಪ್ರಸ್ತುತವಾಗಿದೆ, ಏಕೆಂದರೆ ನಿರಂತರವಾಗಿ ಬದಲಾಗುತ್ತಿರುವ ಸಂದರ್ಭಗಳನ್ನು ನೈಸರ್ಗಿಕ ಸಂಪನ್ಮೂಲಗಳು ಮತ್ತು ತಂತ್ರಜ್ಞಾನದ ಸಹಾಯದಿಂದ ನಿಭಾಯಿಸಬಹುದು. ಇಡೀ ಜಗತ್ತು ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳು ಮತ್ತು ಮಾನವೀಯ ಬಿಕ್ಕಟ್ಟುಗಳೊಂದಿಗೆ ನಿರಂತರವಾಗಿ ಹೋರಾಡುತ್ತಿದೆ ಮತ್ತು ಇಡೀ ಜಗತ್ತು ಅವುಗಳ ಪರಿಹಾರಗಳಿಗಾಗಿ ಭಾರತದ ಕಡೆಗೆ ನೋಡುತ್ತಿದೆ” ಎಂದು ತಿಳಿಸಿದರು.

“ಹವಾಮಾನ ಬದಲಾವಣೆ ಮತ್ತು ವಿಪತ್ತುಗಳು ಇಂದು ಮಾನವೀಯತೆ ಎದುರಿಸುತ್ತಿರುವ ದೊಡ್ಡ ಸವಾಲುಗಳಾಗಿವೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ. ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳು ನಿರಂತರವಾಗಿ ಹೆಚ್ಚುತ್ತಿವೆ. ಜಾಗತಿಕ ತಾಪಮಾನ ಏರಿಕೆ, ಸಮುದ್ರ ಮಟ್ಟ ಏರಿಕೆ, ಹವಾಮಾನ ವೈಪರೀತ್ಯಗಳು, ಪ್ರವಾಹಗಳು, ಬರಗಾಲಗಳು, ಭೂಕಂಪಗಳು ಮತ್ತು ಕಾಡಿನ ಬೆಂಕಿ, ಸಾಂಕ್ರಾಮಿಕ ರೋಗಗಳು, ಕೈಗಾರಿಕಾ ಅಪಘಾತಗಳು ಅಥವಾ ತ್ವರಿತ ನಗರೀಕರಣದಿಂದ ಉಂಟಾಗುವ ಸವಾಲುಗಳು ನಿರಂತರವಾಗಿ ಹೆಚ್ಚುತ್ತಿವೆ.

Thawar Chand Gehlot ಇತ್ತೀಚಿನ ವರ್ಷಗಳಲ್ಲಿ, ಹವಾಮಾನ ಬದಲಾವಣೆಯು ವಿಪತ್ತುಗಳ ಆವರ್ತನ ಮತ್ತು ತೀವ್ರತೆ ಎರಡನ್ನೂ ಹೆಚ್ಚಿಸಿದೆ. ಕಳೆದ ಎರಡು ದಶಕಗಳಲ್ಲಿ ನೈಸರ್ಗಿಕ ವಿಕೋಪಗಳ ಸಂಖ್ಯೆ ಬಹುತೇಕ ದ್ವಿಗುಣಗೊಂಡಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ.

ಇದರ ಪರಿಣಾಮವು ಜೀವ ಮತ್ತು ಆಸ್ತಿಪಾಸ್ತಿ ನಷ್ಟದ ಜೊತೆಗೆ, ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಆರೋಗ್ಯದ ಮೇಲೂ ದೀರ್ಘಕಾಲೀನ ಪರಿಣಾಮ ಬೀರುತ್ತದೆ” ಎಂದು ಅವರು ಹೇಳಿದರು.

“ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆಯಲ್ಲಿ ತಂತ್ರಜ್ಞಾನವು ನಮ್ಮ ಅತಿದೊಡ್ಡ ಮಿತ್ರನಾಗಿ ಹೊರಹೊಮ್ಮಿದೆ. ಪ್ರಸ್ತುತ , ನಾವು ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ, ಉಪಗ್ರಹ ಚಿತ್ರಣ, GIS ಮ್ಯಾಪಿಂಗ್‌ನಂತಹ ತಂತ್ರಜ್ಞಾನಗಳಿಗೆ ಪ್ರವೇಶವನ್ನು ಹೊಂದಿದ್ದೇವೆ, ಇವು ವಿಪತ್ತುಗಳ ಮುಂಚಿನ ಎಚ್ಚರಿಕೆ, ಮೇಲ್ವಿಚಾರಣೆ ಮತ್ತು ತುರ್ತು ಸಂದರ್ಭಗಳಲ್ಲಿ ಪರಿಹಾರವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

ಈ ತಂತ್ರಜ್ಞಾನಗಳನ್ನು ಹೆಚ್ಚು ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಬೇಕಾಗಿದೆ. ಬಿಗ್ ಡೇಟಾ ಮತ್ತು ಕೃತಕ ಬುದ್ಧಿಮತ್ತೆಯ ಸಹಾಯದಿಂದ, ವಿಜ್ಞಾನಿಗಳು ಹವಾಮಾನ ಬದಲಾವಣೆಯ ಮಾದರಿಗಳನ್ನು ತ್ವರಿತವಾಗಿ ರಚಿಸಲು ಸಾಧ್ಯವಾಗುತ್ತದೆ, ಇದು ಸಮಯಕ್ಕೆ ಸರಿಯಾಗಿ ನೀತಿಗಳನ್ನು ರೂಪಿಸಲು ನಮಗೆ ಸಹಾಯ ಮಾಡುತ್ತಿದೆ” ಎಂದು ತಿಳಿಸಿದರು.

“ಮಾನವರು ತಲುಪಲು ಕಷ್ಟಕರವಾದ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ವೇಗಗೊಳಿಸಲು ಡ್ರೋನ್‌ಗಳು ಮತ್ತು ರೊಬೊಟಿಕ್ಸ್ ತಂತ್ರಜ್ಞಾನಗಳು ಬಹಳ ಉಪಯುಕ್ತವೆಂದು ಸಾಬೀತಾಗುತ್ತಿವೆ. ಮುಂಚಿನ ಎಚ್ಚರಿಕೆ ವ್ಯವಸ್ಥೆಯ ಮೂಲಕ, ನಾವು ಈಗ ಪ್ರವಾಹ, ಬಿರುಗಾಳಿ ಮತ್ತು ಸುನಾಮಿಯಂತಹ ವಿಪತ್ತುಗಳ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನು ಪಡೆಯುತ್ತೇವೆ. ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು, SMS ಎಚ್ಚರಿಕೆ ವ್ಯವಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು, ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಸಮಯೋಚಿತ ಎಚ್ಚರಿಕೆಗಳನ್ನು ನೀಡಬಹುದು.

ಮರ ನೆಡುವಿಕೆಯನ್ನು ಉತ್ತೇಜಿಸುವ ಮೂಲಕ ನಾವು ಪರಿಸರ ಸಂರಕ್ಷಣೆಯ ಕಡೆಗೆ ಮಹತ್ವದ ಕೆಲಸ ಮಾಡಬಹುದು” ಎಂದು ಹೇಳಿದರು.

ಸಮ್ಮೇಳನದಲ್ಲಿ ಉತ್ತರಾಖಂಡ್ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಮಹಾನಿರ್ದೇಶಕರಾದ ಪ್ರೊಫೆಸರ್ ದುರ್ಗೇಶ್ ಪಂತ್, ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಪ್ರೊ. ಉಮೇಶ್ ವಾಘ್ಮಾರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

S.N.Chennabasappa ಶಾಸಕರ ಅಮಾನತ್ತು ಹಿಂಪಡೆದಿರುವುದು ಸ್ವಾಗತಾರ್ಹ- ಶಾಸಕ ಚನ್ನಬಸಪ್ಪ

0

S.N.Chennabasappa ಶಿವಮೊಗ್ಗದಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅವರು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಶಾಸಕರ ಅಮಾನತ್ತು ವಾಪಸ್ ಪಡೆದಿರುವುದು ಸ್ವಾಗತಾರ್ಹ ಎಂದರು.

ಅಧಿವೇಶನದ ಕೊನೆಯ ದಿನ ನಾವು ನೋವಿನಿಂದ ಒಬ್ಬ ಮಂತ್ರಿಗಳು ಅಭಿಪ್ರಾಯ ಪ್ರಕಟ ಮಾಡಿದಾಗ ನಾವು ಚರ್ಚೆ ಮಾಡಿದ್ದೆವು.ಆಗ ನಾವು 18 ಜನ ಶಾಸಕರು ಅದನ್ನು ಖಂಡಿಸಿದ್ದೆವು
ಸಭಾಧ್ಯಕ್ಷರ ಪೀಠಕ್ಕೆ ಅವಮಾನ ನಾವು ಮಾಡಿದ್ದೆವು ಎಂಬ ಭಾವನೆ ಉಂಟಾಗಿತ್ತು. ಸ್ಪೀಕರ್ ಗೆ ನೋವಾಗಿದೆ ಎಂದು ಅವರು ಅಂದು ಭಾವಿಸಿದ್ದರು.ಆದರೆ ನಾವು ವಿಷಯಾಧಾರಿತವಾಗಿ ನಾವು ವಿರೋಧಿಸಿದ್ದೆವು.

ಈ ಸಲಹೆ ನೀಡಿದ್ದಕ್ಕೆ ಅಮಾನತ್ತು ಆದೇಶ ವಾಪಾಸ್ ಪಡೆದಿದ್ದೆವೆ ಎಂದು ಸಭಾಧ್ಯಕ್ಷರು ಹೇಳಿದ್ದಾರೆ. ನಮ್ಮ ಪಕ್ಷದ ನಾಯಕರು ಮತ್ತು ಅನೇಕರು ಸಭಾಧ್ಯಕ್ಷರ ಬಳಿ ತೆರಳಿ ಈ ಕುರಿತು ಸಲಹೆ ನೀಡಿದ್ದಾರೆ. ಆದರೆ ಹನಿಟ್ರ್ಯಾಪ್ ವಿಚಾರ ಹಾಗೆಯೇ ಉಳಿದಿದೆ.
ಹನಿಟ್ರ್ಯಾಪ್ ವಿಚಾರದ ಬಗ್ಗೆ ಸತ್ಯ ಸಂಗತಿ ಹೊರಗೆ ಬಾರದೆ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಂತಾಗಿದೆ.

S.N.Chennabasappa ಸಹಕಾರ ಸಚಿವ ರಾಜಣ್ಣ ಬಹಳ ನೊಂದು ಆ ವಿಷಯ ಪ್ರಸ್ತಾಪಿಸಿದ್ದರು. ಹನಿಟ್ರ್ಯಾಪ್ ಮಾಡುವವರ ಪರ ಮಾತನಾಡುವಂತಿದ್ದ ಸನ್ನಿವೇಶದ ಹಿನ್ನೆಲೆಯಲ್ಲಿ ನಾವು ಸಭೆಯಲ್ಲಿ ಮಾತನಾಡಿದ್ದೆವು.
ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಅಮಾನತ್ತು ಆದೇಶ ವಾಪಾಸ್ ಪಡೆದಿದ್ದಾರೆ ಎಂದು ಶಾಸಕ ಚನ್ನಬಸಪ್ಪ
ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Tunga Reservoir ತುಂಗಾ ಡ್ಯಾಂ ನಿಂದ ಹೆಚ್ಚುವರಿ ನೀರು ಬಿಡುಗಡೆ. ಸಾರ್ವಜನಿಕರಿಗೆ ಎಚ್ಚರಿಕೆ ಮಾಹಿತಿ

0

Tunga Reservoir ತುಂಗಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿವಸಗಳಿಂದ ಧಾರಕಾರವಾಗಿ ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ಯಾವ ಕ್ಷಣದಲ್ಲಾದರೂ ತುಂಗಾ ಜಲಾಶಯದಿಂದ ನೀರನ್ನು ಬಿಡುವ ಸಂಭವವಿರುತ್ತದೆ.
ಆದ್ದರಿಂದ ತುಂಗಾ ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ಬರುವ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಹಾಗೂ ದನಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡುವುದು ಮಾಡಬಾರದೆಂದು ಹಾಗೂ ತುಂಗಾ ನದಿಯ Tunga Reservoir ಪಾತ್ರದಲ್ಲಿ ಬರುವ ಗ್ರಾಮಗಳ ಪ್ರದೇಶದ ಗ್ರಾಮಸ್ಥರಿಗೆ ನದಿ ಪಾತ್ರದಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆಯಿಂದಿರಲು ಕರ್ನಾಟಕ ನೀರಾವತಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Birur-Talaguppa section Railway ಬೀರೂರು- ತಾಳಗುಪ್ಪ ಸೆಕ್ಷನ್ ರೈಲ್ವೆ ಸಾಮಗ್ರಿಗಳ ಆಂತರಿಕ ಭದ್ರತಾ ಪರಿಶೀಲನೆ

0

Birur-Talaguppa section Railway ಮೈಸೂರು ವಿಭಾಗದ ಬೀರೂರು-ತಾಳಗುಪ್ಪ ಸೆಕ್ಷನ್‌ನ ರೈಲ್ವೆ ಸಾಮಗ್ರಿಗಳ ಆಂತರಿಕ ಭದ್ರತಾ ಪರಿಶೀಲನೆ ನೈಋತ್ಯ ರೈಲ್ವೆ ಮುಖ್ಯಾಲಯದ ಅಧಿಕಾರಿಗಳ ತಂಡದಿಂದ 2025ರ ಮೇ 22 ಮತ್ತು 23 ರಂದು ನಡೆಸಲಾಯಿತು. ಈ ತಂಡವನ್ನು ಶ್ರೀ ಎಂ. ರಾಮಕೃಷ್ಣ, ಪ್ರಧಾನ ಮುಖ್ಯ ಭದ್ರತಾ ಅಧಿಕಾರಿ ನೇತೃತ್ವವಹಿಸಿದ್ದರು.

ಪರಿಶೀಲನೆಯ ವೇಳೆ, ತಂಡವು ರೈಲ್ವೆ ನಿಲ್ದಾಣಗಳು, ರಿಲೇ ಕೊಠಡಿಗಳು, ಪಾಯಿಂಟ್ ಮತ್ತು ಕ್ರಾಸಿಂಗ್‌ಗಳು, ಸೇತುವೆಗಳು, ರನ್ನಿಂಗ್ ರೂಮ್‌ಗಳು, ಲೆವೆಲ್ ಕ್ರಾಸಿಂಗ್ ಗೇಟ್‌ಗಳು, ಎ ಆರ್ ಎಂ ಇ (ಅಪಘಾತ ಪರಿಹಾರ ವೈದ್ಯಕೀಯ ಉಪಕರಣ), ಟ್ರಾಕ್ಷನ್ ಸಬ್‌ಸ್ಟೇಷನ್‌ಗಳು, ಸೆಕ್ಷನಿಂಗ್ ಪೋಸ್ಟ್‌ಗಳು ಮತ್ತು ಸಬ್‌ಸೆಕ್ಷನಿಂಗ್ ಪೋಸ್ಟ್‌ಗಳು ಸೇರಿದಂತೆ ವಿವಿಧ ರೈಲ್ವೆ ಸಾಮಗ್ರಿಗಳನ್ನು ಪರಿಶೀಲಿಸಲಾಯಿತು. ಭದ್ರತಾ ಕ್ರಮಗಳು ಮತ್ತು ಕಾರ್ಯಾಚರಣಾ ವ್ಯವಸ್ಥೆಗಳ ಸಮಗ್ರ ಪರಿಶೀಲನೆ ನಡೆಸಲಾಯಿತು.

ಈ ತಂಡವು ಭದ್ರತಾ ಪ್ರೋಟೋಕಾಲ್‌ಗಳ ಕುರಿತು ಕ್ಷೇತ್ರದ ಸಿಬ್ಬಂದಿಯ ಅರಿವು ಮತ್ತು ತಿಳಿವಳಿಕೆಯನ್ನು ಮೌಲ್ಯಮಾಪನ ಮಾಡಲು ಅವರೊಂದಿಗೆ ಸಂವಾದ ನಡೆಸಿತು. ಮೈಸೂರು ವಿಭಾಗವು ಭದ್ರತಾ ಮಾನದಂಡಗಳನ್ನು ಕಾಪಾಡುವಲ್ಲಿ ತೆಗೆದುಕೊಂಡಿರುವ ನಿಷ್ಠೆಗೆ ಶ್ಲಾಘನೆ ವ್ಯಕ್ತಪಡಿಸಿದರು.

Birur-Talaguppa section Railway ಶ್ರೀ ಮುದಿತ್ ಮಿತ್ತಲ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಮಾರ್ಗದರ್ಶನದಲ್ಲಿ, ಮೈಸೂರು ವಿಭಾಗದ ಶ್ರೀ ವಿನಾಯಕ ರಾ ನಾಯಕ, ಹೆಚ್ಚಳ ಮಂಡಲ ರೈಲ್ವೆ ವ್ಯವಸ್ಥಾಪಕರ ನೇತೃತ್ವದಲ್ಲಿ, ಸಂಬಂಧಿತ ಶಾಖಾ ಅಧಿಕಾರಿಗಳು ತಂಡದಲ್ಲಿ ಭಾಗವಹಿಸಿದ್ದರು.

B. Y. Raghavendra ಭದ್ರಾವತಿ ವಿಐಎಸ್ಎಲ್ ಪುನಶ್ಚೇತನಕ್ಕೆ ಸಚಿವ ಎಚ್ ಡಿಕೆ ಸಂಕಲ್ಪ.ಸಂಸದ ರಾಘವೇಂದ್ರ “ಫುಲ್ ಖುಷ್”

0

B. Y. Raghavendra ಭದ್ರಾವತಿಯ ವಿಐಎಸ್ಎಲ್ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಇನ್ನು ಎರಡು ತಿಂಗಳ ಒಳಗಾಗಿ ಡಿಪಿಆರ್ ಸಿದ್ದಪಡಿಸಿ ಕಾರ್ಖಾನೆಯನ್ನು ಪುನರ್ ನಿರ್ಮಿಸುವ ಕಾರ್ಯಕ್ಕೆ ಮಾನ್ಯ ಪ್ರಧಾನ ಮಂತ್ರಿಯವರಿಂದಲೇ ಈ ವರ್ಷಾಂತ್ಯದಲ್ಲಿ ಶಂಕುಸ್ಥಾಪನೆ ನೆರವೇರಿಸುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಎಚ್. ಡಿ. ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವುದು ಅತ್ಯಂತ ಸ್ವಾಗತಾರ್ಹ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.

Dinesh Gundu Rao ಜನೌಷಧಿ ಕೇಂದ್ರ ಸರ್ಕಾರದ್ದು ಎಂಬ ಕಾರಣಕ್ಕೆ ರಾಜಕೀಯ ಮಾಡುವ ಉದ್ದೇಶವಿಲ್ಲ.ಇನ್ನೂ ರಾಜ್ಯದಲ್ಲಿ 220 ಕೇಂದ್ರಗಳಿವೆ- ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

0

Dinesh Gundu Rao ರಾಜ್ಯದಲ್ಲಿ ಸಂಪೂರ್ಣವಾಗಿ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸಿಲ್ಲ. ಒಟ್ಟು 1400 ಜನೌಷಧಿ ಕೇಂದ್ರಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳನ್ನು ಮಾತ್ರ ತೆರವುಗೊಳಿಸುವ ಬಗ್ಗೆ ಚರ್ಚಿಸಲಾಗಿದೆ.

ಸರ್ಕಾರವೇ ಉಚಿತವಾಗಿ ಔಷಧಿಗಳನ್ನು ನೀಡುವಾಗ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಮಾರಾಟಕ್ಕೆ ಅವಕಾಶ ಕೊಡುವುದು ಸರಿಯಲ್ಲ.

ಸರ್ಕಾರಿ ಆಸ್ಪತ್ರೆಗಳಲ್ಲಿರುವ 180 ಕೇಂದ್ರಗಳ ಹೊರತಾಗಿ ರಾಜ್ಯದಲ್ಲಿ ಇನ್ನು 1220 ಜನೌಷಧಿ ಕೇಂದ್ರಗಳಿವೆ. ಅಲ್ಲದೇ ತಕ್ಷಣಕ್ಕೆ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಎಲ್ಲಾ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿ ಎಂದು ಹೇಳಿಲ್ಲ. ಹೊಸದಾಗಿ ಸಲ್ಲಿಕೆಯಾಗಿದ್ದ 31 ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ. ಹಾಲಿ ಆಸ್ಪತ್ರೆಗಳ ಆವರಣದಲ್ಲಿರುವ ಕೇಂದ್ರಗಳು ಇಲಾಖೆ ಮತ್ತು ಆಸ್ಪತ್ರೆಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಪರಿಶೀಲಿಸಿ ಕ್ರಮ ಜರುಗಿಸಲು ಸೂಚಿಸಲಾಗಿದೆ.‌

ಜನೌಷಧಿ ಕೇಂದ್ರ ಸರ್ಕಾರದ ಯೋಜನೆ ಎಂಬ ಕಾರಣಕ್ಕೆ ರಾಜಕೀಯ ಮಾಡುವ ಯಾವುದೇ ಉದ್ದೇಶವಿಲ್ಲ. ಆದರೆ, ಜನೌಷಧಿ ಕೇಂದ್ರಗಳ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ.

Dinesh Gundu Rao ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿಯೇ ಔಷಧಿ ಸಿಗುವಾಗ ಆಸ್ಪತ್ರೆಗಳ ಆವರಣದಲ್ಲಿ ಔಷಧ ಮಾರಾಟಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಒಂದೇ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸರ್ಕಾರಿ ಆಸ್ಪತ್ರೆಗಳ ಔಷಧಿ ಕೇಂದ್ರಗಳಲ್ಲಿ ಔಷಧಗಳ ಕೊರತೆಯಿಲ್ಲ. ಕೆಲವು ಕಡಿಮೆ ಬೇಡಿಕೆ ಇರುವ ಔಷಧಿಗಳು ಇಲ್ಲದಿದ್ದರೆ ಅವುಗಳನ್ನು BPPI ನಿಂದ ಖರೀದಿಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಉಚಿತವಾಗಿ ಔಷಧಗಳನ್ನು ಪಡೆಯಬೇಕು. ವೈದ್ಯರು ಚೀಟಿ ಕೊಟ್ಟು ಹೊರಗಡೆಯಿಂದ ಔಷಧಗಳನ್ನು ತರಿಸುವ ಪದ್ಧತಿ ನಿಲ್ಲಬೇಕು.