Saturday, February 28, 2026
Saturday, February 28, 2026
Home Blog Page 293

Gangubai Hangal University of Music and Performing Arts ಭರತನಾಟ್ಯ ಪರೀಕ್ಷೆಗಳು ಯಾವ ಗೊಂದಲವಿಲ್ಲದೇ ಯಶಸ್ವಿಯಾಗಿ ಪೂರ್ಣ- ಡಾ.ನಾಗೇಶ್

0

Gangubai Hangal University of Music and Performing Arts ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ನಾಗೇಶ್ ಬೆಟಕೋಟೆ ಇವರು ಪರೀಕ್ಷೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳು ನಮ್ಮ ಮಕ್ಕಳು ಎಂಬ ಭಾವನೆ ಪರೀಕ್ಷಕರಿಗೆ ಇದ್ದರೆ ಯಾವ ಗೊಂದಲಗಳಿಗೂ ಅವಕಾಶ ಇರದೆ ಪರೀಕ್ಷೆಗಳು ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಿಜಿಸ್ಟ್ರಾರ್ ಡಾ ಮಂಜುನಾಥ್, ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಅವಿನಾಶ್, ಡಾ. ಪ್ರಕಾಶ್ ಮರ್ಗನಹಳ್ಳಿ, ಪರೀಕ್ಷಾ ಸಂಯೋಜಕ ಡಾ. ಗಣೇಶ್ ಆರ್ ಕೆಂಚನಾಲ್. ವಿಶ್ವವಿದ್ಯಾಲಯದಿಂದ ಆಗಮಿಸಿದ ಡಾ. ಭುವನೇಶ್ವರಿ ಸೇರಿದಂತೆ ಡಾ ಕೇಶವಕುಮಾರ್ ಪಿಳೈ, ಡಾ.ಶುಭ್ರತಾ ಹಾಗೂ ರಾಜ್ಯದ ನಾನಾ ಭಾಗಗಳಿಂದ ಪರೀಕ್ಷಕರು ಆಗಮಿಸಿದ್ದರು.

ಹಾಗೂ ಇದೇ ಕಾಲೇಜಿನಲ್ಲಿ ಮೇ 17 ಮತ್ತು 18 ರಂದು ರಾಜ್ಯ ಮಟ್ಟದ ನೃತ್ಯ, ಸಂಗೀತ, ತಾಳವಾದ್ಯ, ಜೂನಿಯರ್ ಹಾಗೂ ಸೀನಿಯರ್ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿದ್ದವು.

MESCOM ಮೇ 28. ಕೋಟೆ ರಸ್ತೆ ಸುತ್ತಮುತ್ತ ವಿದ್ಯುತ್ ಸರಬರಾಜು ನಿಲುಗಡೆ, ಮೆಸ್ಕಾಂ ಪ್ರಕಟಣೆ

0

MESCOM ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿ ವಿದ್ಯುತ್ ಉಪಕರಣಗಳ ದುರಸ್ತಿ ಕಾಮಗಾರಿಯನ್ನು ಹಮ್ಮಿಕೊಂಡಿದ್ದು, ಮೇ 28 ರಂದು ಬೆಳಗ್ಗೆ 9.00 ರಿಂದ ಸಂಜೆ 6.00ರವರೆಗೆ ಕೋಟೆರಸ್ತೆ, ಬೆಕ್ಕಿನ ಕಲ್ಮಠ, ಓ.ಬಿ.ಎಲ್.ರಸ್ತೆ, ಅಪ್ಪಾಜಿರಾವ್ ಕಾಂಪೌಂಡ್, ಬಿ.ಹೆಚ್.ರಸ್ತೆ, ಪೆನ್ಷನ್ ಮೊಹಲ್ಲಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Karnataka State Government Employees Association ಸರ್ಕಾರಿ ನೌಕರರ ಸಂಘದಿಂದ ಅರ್ಹ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರಕ್ಕೆಅರ್ಜಿ ಆಹ್ವಾನ

0

Karnataka State Government Employees Association ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಪ್ರತಿಭಾನ್ವಿತ ಸರ್ಕಾರಿ ನೌಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವ ಸಲುವಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಸರ್ಕಾರಿ ನೌಕರರ ಮಕ್ಕಳು ದಿನಾಂಕ: 31-05-2025 ರೊಳಗಾಗಿ ಆನ್ ಲೈನ್ https://ksgeanews.blogspot.com/2025/05/sslc-puc-2025.html ಮೂಲಕ ಅರ್ಜಿ ಸಲ್ಲಿಸುವಂತೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್ ರವರು ಕೋರಿರುತ್ತಾರೆ.

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು : ವಿದ್ಯಾರ್ಥಿಯು 2025ರ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿರಬೇಕು. ವಿದ್ಯಾರ್ಥಿಯ ತಂದೆ/ತಾಯಿ ರಾಜ್ಯ ಸರ್ಕಾರದ ಯಾವುದಾದರೊಂದು ಇಲಾಖೆಯಲ್ಲಿ ಖಾಯಂ ಸರ್ಕಾರಿ ನೌಕರರಾಗಿರಬೇಕು. ನಿಗಮ/ ಮಂಡಳಿ, ಪ್ರಾಧಿಕಾರ, ವಿಶ್ವವಿದ್ಯಾಲಯ, ಖಾಸಗಿ ಹಾಗೂ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ ನೇಮಕವಾಗಿರುವ ನೌಕರರು ಅರ್ಜಿ ಸಲ್ಲಿಸುವಂತಿಲ್ಲ.

ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು: ವಿದ್ಯಾರ್ಥಿಯ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ,ದೃಢೀಕೃತ ಅಂಕಪಟ್ಟಿ, ಇಲಾಖೆಯ ಸೇವಾ ದೃಢೀಕರಣ ಪತ್ರ ಹಾಗೂ ಸಂಘದ ಜಿಲ್ಲಾ/ ತಾಲ್ಲೂಕು/ ಯೋಜನಾ ಶಾಖೆ ಅಧ್ಯಕ್ಷರು / ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರಿಂದ ಪಡೆದ ದೃಢೀಕರಣ ಪತ್ರ. Ksgea news Blogspot ನಲ್ಲಿ PDF File ಈ ಎಲ್ಲಾ ಲಗತ್ತುಗಳನ್ನು ನಿಗದಿತ JPG format ನಲ್ಲಿ ( 1 mb ಮೀರದಂತೆ) ಅಪ್‌ಲೋಡ್ ಮಾಡುವುದು. ಅರ್ಜಿ ಸಲ್ಲಿಕೆ ಯಶಸ್ವಿಗೊಂಡ ನಂತರ ನೊಂದಾಯಿತ ಇ-ಮೇಲ್‌ಗೆ ಸ್ವೀಕೃತಿ ರವಾನೆಯಾಗಲಿದೆ.
ಶೇಕಡವಾರು ಅಂಕಗಳನ್ನು ನಿರ್ಧರಿಸಿ ಅರ್ಜಿಯನ್ನು ಪರಿಗಣಿಸುವ ನಿರ್ಧಾರ ಸಂಘದ್ದಾಗಿರುತ್ತದೆ.

Karnataka State Government Employees Association ಹೆಚ್ಚಿನ ಮಾಹಿತಿಗಾಗಿ 080 22354784/83. 9448617400 ಗಳನ್ನು ಸಂಪರ್ಕಿಸುವುದು.

S.N.Chennabasappa ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸ್ಕೌಟ್ & ಗೈಡ್ಸ್ ಚಳವಳಿ ಪರಿಣಾಮಕಾರಿ- ಶಾಸಕ ಚನ್ನಬಸಪ್ಪ

0

S.N.Chennabasappa ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸ್ಕೌಟ್ ಮತ್ತು ಗೈಡ್ಸ್ ಚಳುವಳಿ ಅತ್ಯಂತ ಪರಿಣಾಮಕಾರಿಯಾಗಿ ಪೂರಕವಾಗಿದೆ ಎಂದು ಶಾಸಕ ಚನ್ನಬಸಪ್ಪನವರು ನುಡಿದರು ಅವರು ಇಂದು ಬೆಳಿಗ್ಗೆ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಕಚೇರಿಯ ಆವರಣದಲ್ಲಿ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾದ ಜಸ್ಟಿಸ್ ಕೆ ಶಂಕರನಾರಾಯಣ ರಾವ್ ಸ್ಮಾರಕ ರಾಜ್ಯಮಟ್ಟದ ಮುಕ್ತ ದಳಗಳ ರ್ಯಾಲಿ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಇಂತಹ ಸೇವಾ ಮನೋಭಾವದ ಅಂತರಾಷ್ಟ್ರೀಯ ಸಂಸ್ಥೆಯ ಚಟುವಟಿಕೆಗಳು ತುಂಬಾ ಅಗತ್ಯವಾಗಿದೆ ಮಕ್ಕಳಲ್ಲಿ ಸಂಸ್ಕಾರದ ಜೊತೆಗೆ ಕ್ರಿಯಾಶೀಲತೆ ಹಾಗೂ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸ್ಕೌಟ್ಸ್ ಅಂಡ್ ಗೈಡ್ಸ್ ಇಂದು ತುಂಬಾ ಅಗತ್ಯವಾಗಿದೆ.

ಈ ಚಳುವಳಿಯೂ ಮನೆ ಮನೆಗಳಲ್ಲಿ ತಲುಪಬೇಕು ಇದರಿಂದ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಲು ಅವಕಾಶದ ಜೊತೆಗೆ ಪರಸ್ಪರರಲ್ಲಿ ಒಡನಾಟ ಹೆಚ್ಚುತ್ತದೆ ಎಂದು ನುಡಿದರು ಇದೇ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಕೆ ಗಂಗಪ್ಪ ಗೌಡ ಮಾತನಾಡುತ್ತಾ 13 ವರ್ಷಗಳ ನಂತರ ಈ ರಾಜ್ಯ ಮಟ್ಟದ ರ್ಯಾಲಿಯನ್ನು ಶಿವಮೊಗ್ಗ ಜಿಲ್ಲಾ ಸಂಸ್ಥೆಯವರು ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು ಇದರಲ್ಲಿ ರಾಜ್ಯದ 10 ಜಿಲ್ಲೆಗಳಿಂದ. ಕಬ್ ಬುಲ್ ಬುಲ್ ಮತ್ತು ಸ್ಕೌಟ್ಸ್ ಗೈಡ್ಸ್ ಹಾಗು ರೋವರ್ಸ್ ರೆಂಜರ್ಸ್ ವಿಭಾಗದ ಮಕ್ಕಳು ಭಾಗವಹಿಸಿದ್ದು ಈ ಮೂರು ದಿನದ ರ್ಯಾಲಿಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಲಿದ್ದಾರೆ ಎಂದು ಜಿಲ್ಲಾ ಸಂಸ್ಥೆಯ ಆಯೋಜಕರನ್ನು ಅಭಿನಂದಿಸಿದರು.

S.N.Chennabasappa ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಅಧ್ಯಕ್ಷರಾದ ಶಕುಂತಲಾ ಚಂದ್ರಶೇಖರ್ ಅವರು ವಹಿಸಿ ಮಾತನಾಡುತ್ತಾ ಈ ಮೂರು ದಿನಗಳ ರ್ಯಾಲಿಯಲ್ಲಿ ಚಾರಣ ಸಾಹಸ ಕ್ರೀಡೆಗಳು ಮಕ್ಕಳಿಗೆ ಬೌದ್ಧಿಕ ಪರೀಕ್ಷೆ ಹಾಗೂ ವಿವಿಧ ರೀತಿಯ ಆಟಗಳು ಜೊತೆಗೆ ಮಾನವೀಯ ಮೌಲ್ಯಗಳನ್ನು ಕಳಿಸಿಕೊಡುವಂತಹ ಕಾರ್ಯಕ್ರಮವಾಗಿದೆ ಎಂದು ನುಡಿದರು.

ಈ ರಾಜ್ಯಮಟ್ಟದ ರ್ಯಾಲಿಯಲ್ಲಿ ವೇದಿಕೆಯಲ್ಲಿ. ಆಯುಕ್ತರಾದ ಎಸ್ ಜಿ ಆನಂದ್. ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ ವಿಜಯಕುಮಾರ್. ಜಿಲ್ಲಾ ಕಾರ್ಯದರ್ಶಿ ಕೆ ವಿ ಚಂದ್ರಶೇಖರ್. ಆಯುಕ್ತರಾದ ಕೆ ರವಿ. ಸರಸ್ವತಿ ನಾಗರಾಜ್. ಶಿವಶಂಕರ್. ರಾಜೇಶ್ ಅವಲಕ್ಕಿ. ಮೀನಾಕ್ಷಮ್ಮ. ಗೀತಾ ಚಿಕ್ ಮಠ. ಜ್ಯೋತಿ. ಮಲ್ಲಿಕಾರ್ಜುನ್ ಖಾನೂರ್. ಲಕ್ಷ್ಮಿ ಕೆ ರವಿ. ವೈ ಆರ್ ವೀರೇಶಪ್ಪ. ಪವನ್ ಕುಮಾರ್. ಚುಡಮಣಿ ಈ ಪವಾರ್ ದೊರೆ. ಬಿಸಿ ವೇಣುಗೋಪಾಲ್ ಕಾತ್ಯಾಯಿನಿ. ಏನ್ ಆರ್ ಚಂದ್ರಶೇಖರ್ ರುದ್ರಪ್ಪ. ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ದಳ ನಾಯಕರು ಮತ್ತು ಮಕ್ಕಳು ಉಪಸ್ಥಿತರಿದ್ದರು.

DC Shivamogga ಹಾವು ಮತ್ತು ನಾಯಿ ಕಡಿತಕ್ಕೆ ಎಲ್ಲಾ ಪ್ರಾಥಮಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯಔಷಧ,ಚಿಕಿತ್ಸೆಗೆ ರೆಡಿಯಾಗಿರಿ- ಗುರುದತ್ತ ಹೆಗಡೆ

0

DC Shivamogga ಹಾವು ಕಡಿತಕ್ಕೊಳಗಾದ ವ್ಯಕ್ತಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಸಾವು ಸಂಭವಿಸಬಹುದಾದ ಕಾರಣಗಳಿಂದಾಗಿ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾವು ಮತ್ತು ನಾಯಿ ಕಡಿತಕ್ಕೆ ಅಗತ್ಯವಿರುವ ಔಷಧಗಳನ್ನು ಸರ್ಕಾರದ ನಿಯಮಾನುಸಾರ ದಾಸ್ತಾನು ಇಟ್ಟುಕೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಇಲಾಖೆಯಿಂದ ಜಿಲ್ಲೆಯಲ್ಲಿನ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಶಿಕಾರಿಪುರ ತಾಲೂಕು ಹೋತನಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೊಳಪಡುವ ಮುಡುಬಸಿದ್ದಾಪುರದ 55ವರ್ಷದ ಮಹಿಳೆ ಲೋಲಾಕ್ಷಮ್ಮ ಇವರು ಹಾವು ಕಡಿತಕ್ಕೆ ಒಳಗಾದ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಶಿಫಾರಸ್ಸು ಮಾಡದೇ ನಾಟಿ ಔಷಧಿ ನೀಡಿ, ಮಹಿಳೆಯ ಸಾವಿಗೆ ಕಾರಣರಾದ ಗೌತಮಪುರ ಸಮೀಪದ ಕಣ್ಣೂರಿನ ನಾಟಿ ವೈದ್ಯ ವಾಸಪ್ಪ ಅವರ ಮೇಲೆ ಮೊಕದ್ದಮೆ ದಾಖಲಿಸುವಂತೆ ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಅತಿಹೆಚ್ಚು ಹಾವು ಕಡಿತ ಮತ್ತು ಸಾವಿನ ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಜನರಲ್ಲಿ ಜಾಗೃತಿ ಮೂಡಿಸಿ, ಸಕಾಲಿಕವಾಗಿ ಚಿಕಿತ್ಸೆ ಕೊಡಿಸಿ, ಅಮೂಲ್ಯ ಜೀವ ರಕ್ಷಣೆಗೆ ಮುಂದಾಗುವಂತೆ ಅವರು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಹಂತದಲ್ಲಿ ಕಾರ್ಯನಿರ್ವಹಿಸುವ ಆಶಾ ಕಾರ್ಯಕರ್ತೆಯರು ಕೇವಲ ಗರ್ಭಿಣಿ, ಬಾಣಂತಿಯರ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸದೇ ಗ್ರಾಮೀಣ ಜನರ ಆರೋಗ್ಯ ಮತ್ತು ಸಾಂದರ್ಭಿಕ ಅವಘಡಗಳ ಸಂದರ್ಭದಲ್ಲಿಯೂ ಅಗತ್ಯ ಸಲಹೆ-ಸೂಚನೆ ನೀಡಿ, ಚಿಕಿತ್ಸೆ ಕೊಡಿಸಲು ಗಮನಹರಿಸುವಂತೆ ಸೂಚಿಸಿದ ಅವರು, ಹಾವು ಮತ್ತು ನಾಯಿ ಕಡಿತದ ಸಂದರ್ಭದಲ್ಲಿ ಜನರಲ್ಲಿ ಆತ್ಮಸ್ಥೈರ್ಯ ತುಂಬಿ, ವಿಳಂಬಕ್ಕೆ ಅವಕಾಶವಿಲ್ಲದಂತೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಕೊಡಿಸಲು ಶ್ರಮಿಸುವಂತೆ ಸೂಚಿಸಿದ ಅವರು, ಗ್ರಾಮೀಣ ಜನರೂ ಕೂಡ ಆರೋಗ್ಯ ಸಂಬಂಧಿಸಿದ ತಮ್ಮ ತಕ್ಷಣದ ಅಗತ್ಯಗಳಿಗೆ ಆಶಾ ಕಾರ್ಯಕರ್ತರ ಸಲಹೆ-ಸಹಕಾರವನ್ನು ಪಡೆದುಕೊಳ್ಳುವಂತೆ ಅವರು ಸೂಚಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ಅವರು ಮಾತನಾಡಿ, ಈ ಸಂಬಂಧ ಜನಸಾಮಾನ್ಯರಿಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಿ. ಎಲ್ಲಾ ವೈದ್ಯರೂ ಕೂಡ ಹಾವು ಮತ್ತು ನಾಯಿ ಕಡಿತಕ್ಕೆ ಚಿಕಿತ್ಸೆ ನೀಡಬಹುದಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವ ಎಲ್ಲಾ ವೈದ್ಯರಿಗೆ ಸೂಕ್ತ ತರಬೇತಿ ನೀಡುವಂತೆಯೂ ಸೂಚಿಸಿದ ಅವರು, ಜಿಂಗಲ್ಸ್ಮೂಲಕ ಜನರಲ್ಲಿ ಅವರು ಮೂಡಿಸಲು ಕ್ರಮ ವಹಿಸುವಂತೆ ಅವರು ಸಲಹೆ ನೀಡಿದರು.

ಹಾವು ಕಡಿತದ ಅಮೂಲ್ಯ ಹಾಗೂ ತುರ್ತು ಸಂದರ್ಭದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಧಾವಿಸುವ ರೋಗಿಗೆ ವಿಳಂಬಕ್ಕೆ ಅವಕಾಶವಿಲ್ಲದಂತೆ ಹಾಗೂ ವೈದ್ಯರು ಯಾವುದೇ ನಿರ್ಲಕ್ಷ್ಯ ತೋರದಂತೆ ತ್ವರಿತವಾಗಿ ಚಿಕಿತ್ಸೆ ನೀಡಬೇಕು. ತಾಲೂಕು ವೈದ್ಯಾಧಿಕಾರಿಗಳು ಆಸ್ಪತ್ರೆಗಳಲ್ಲಿ ಸದಾ ಅಗತ್ಯ ಔಷಧಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಈ ಸಂಬಂಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರಚಾರ ಫಲಕಗಳನ್ನು ಅಳವಡಿಸುವಂತೆ ಸೂಚಿಸಿದ ಅವರು, ಮೃತ ಕುಟುಂಬದ ಸದಸ್ಯರಿಗೆ ಸರ್ಕಾರದಿಂದ ಪರಿಹಾರ ಧನ ದೊರೆಯುವಂತಿದ್ದಲ್ಲಿ ಅಗತ್ಯ ಸಲಹೆ-ಸಹಕಾರ ನೀಡುವಂತೆಯೂ ವೈದ್ಯರಿಗೆ ಸೂಚಿಸಿದರು.

108 ವಾಹನಗಳ ಸಿಬ್ಬಂಧಿಗಳೂ ಸಹ ಅನಗತ್ಯವಾಗಿ ವಿಳಂಬ ಮಾಡದೇ, ರೋಗಿಗೆ ಅಗತ್ಯವಾದ ಚಿಕಿತ್ಸೆಯ ಬಗ್ಗೆ ಯಾವ ಆಸ್ಪತ್ರೆಗೆ ಕೊಂಡೊಯ್ಯಬೇಕೆಂಬ ಬಗ್ಗೆ ತಕ್ಷಣದಲ್ಲಿ ನಿರ್ಣಯ ಕೈಗೊಂಡು, ತ್ವರಿತವಾಗಿ ತಮ್ಮ ಸಮೀಪದ ಆಸ್ಪತ್ರೆಗೆ ರೋಗಿಗಳನ್ನು ಕೊಂಡೊಯ್ದು ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಬೇಕು ಎಂದರು.


DC Shivamogga
ನಾಯಿಗಳ ಹಾವಳಿ : ಜಿಲ್ಲೆಯ ಸಾಗರ ತಾಲೂಕಿನಲ್ಲಿ ಅತಿ ಹೆಚ್ಚು ನಾಯಿಗಳ ಕಡಿತದ ಪ್ರಕರಣಗಳು ದಾಖಲಾಗಿವೆ. ಅವುಗಳ ನಿಯಂತ್ರಣಕ್ಕೆ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸೂಕ್ತ ಕೈಗೊಳ್ಳುವಂತೆ ಸೂಚಿಸಿದ ಅವರು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ತಾಲೂಕು ವೈದ್ಯಾಧಿಕಾರಿಗಳ ನಡುವೆ ಸಮನ್ವಯತೆ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಹೆಚ್ಚು ಸಂದರ್ಭದಲ್ಲಿ ಸಾಕು ನಾಯಿಗಳಿಂದಲೆ ಕಡಿತವಾಗಿರುವುದು ಕಂಡುಬರುತ್ತಿದೆ. ತಕ್ಷಣದ ಚಿಕಿತ್ಸೆಗಾಗಿ ರೇಬೀಸ್ಲಸಿಕೆಯನ್ನು ದಾಸ್ತಾನು ಇಟ್ಟುಕೊಂಡು ಕಡಿತಕ್ಕೊಳಗಾದವರಿಗೆ ಚಿಕಿತ್ಸೆ ಕೊಡುವಂತೆ ಸೂಚಿಸಿದ ಅವರು, ಈ ಸಂಬಂಧ ಶಾಲಾ ಮಕ್ಕಳಲ್ಲಿ ಪ್ರಾಥಮಿಕ ಅರಿವು ಮೂಡಿಸುವಂತೆಯೂ ಅವರು ಸಲಹೆ ನೀಡಿದರು.

ಶಾಲೆಗಳಲ್ಲಿ ಬಿಸಿಯೂಟದ ನಂತರ ಉಳಿದ ಆಹಾರ ಪದಾರ್ಥಗಳಿಗಾಗಿ ಬರುವ ನಾಯಿಗಳಿಂದಲೂ ನಾಯಿ ಕಡಿತ ಆಗಬಹುದಾದ ಸಂಭವವಿದ್ದು, ಶಾಲಾ ಶಿಕ್ಷಕರು ಮುಂಜಾಗ್ರತಾ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದವರು ನುಡಿದರು.
ಶಿವಮೊಗ್ಗ ಮಲೆನಾಡು ಪ್ರದೇಶವನ್ನು ಒಳಗೊಂಡಿರುವುದರಿಂದ ನಾಯಿ ಮತ್ತು ಹಾವು ಕಡಿತದ ಔಷಧವನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ಅವರು ವೈದ್ಯರಿಗೆ ಸೂಚಿಸಿದರು.


ರಾಜ್ಯದಲ್ಲಿ ರೂಪಾಂತರಿ ಕೋವೀಡ್ನ ಸೋಂಕು ಪ್ರಕರಣಗಳು ಕಂಡು ಬರುತ್ತಿದ್ದು, ಸಾರ್ವಜನಿಕರು ಸರ್ಕಾರವು ಈಗಾಗಲೇ ಹೊರಡಿಸಿರುವ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ವಿಶೇಷವಾಗಿ ಮಕ್ಕಳು, ವೃದ್ಧರು, ಗರ್ಭಿಣಿ, ಬಾಣಂತಿಯರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸೂಚಿಸಿದರು.

ಶಂಕಿತ ಹಾಗೂ ಜ್ವರ, ಕೆಮ್ಮು, ನೆಗಡಿ, ಶೀತ, ಉಸಿರಾಟ ಮುಂತಾದ ಗುಣಲಕ್ಷಣಗಳು ಕಂಡುಬಂದಲ್ಲಿ ಸ್ಥಳೀಯವಾಗಿ ಕೊರೋನ ಸೋಂಕಿನ ಕಫ ಪರೀಕ್ಷೆ ಮಾಡಿಸಿಕೊಳ್ಳುವಂತೆ ಹಾಗೂ ಇಂದಿನಿಂದಲೇ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಕಫ ಪರೀಕ್ಷೆಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.
ವಾಡಿಕೆಯಂತೆ ಜಿಲ್ಲೆಯಲ್ಲಿ ಸಕಾಲದಲ್ಲಿ ಮುಂಗಾರು ಮಳೆ ಆರಂಭಗೊಂಡಿದ್ದು, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯಾಧಿಕಾರಿಗಳು ವಿಶೇಷ ಗಮನಹರಿಸಬೇಕು. ಜನಜಾಗೃತಿಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಜನರಲ್ಲಿ ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸಬೇಕು ಎಂದವರು ನುಡಿದರು.

ಈ ಸಂದರ್ಭದಲ್ಲಿ ಡಾ|| ಗುಡದಪ್ಪ ಕಸುಬಿ ಅವರು ಮಾತನಾಡಿ, ಜಿಲ್ಲೆಯಾದ್ಯಂತ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಅಗತ್ಯವಿರುವ ಇನ್ನಷ್ಟು ಸಿಬ್ಬಂಧಿಗಳನ್ನು ಬಾಹ್ಯ ಮೂಲದಿಂದ ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಟರಾಜ್, ಡಾ|| ನಾಗರಾಜ್ನಾಯ್ಕ್, ಡಾ|| ಗುಡದಪ್ಪ ಕಸುಬಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಆರೋಗ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿ-ಸಿಬ್ಬಂಧಿಗಳು ಉಪಸ್ಥಿತರಿದ್ದರು.

District Meggan Teaching Hospital ಜಿಲ್ಲೆಯ ಮೆಗ್ಗಾನ್ ಬೋಧನ ಆಸ್ಪತ್ರೆಗೆ ಲೋಕಾಯುಕ್ತ ಪೊಲೀಸ್ ದಿಢೀರ್ ಭೇಟಿ, ಔಷಧ ದಾಸ್ತಾನಿನಲ್ಲಿ ಲೋಪ ಪತ್ತೆ

0

District Meggan Teaching Hospital ದಿನಾಂಕ 26-05-2025 ರಂದು ಸಂಜೆ 04:00 ಗಂಟೆಗೆ ಶ್ರೀ ಮಂಜುನಾಥ್ ಚೌಧರಿ ಎಂ.ಹೆಚ್ ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರು ಶಿವಮೊಗ್ಗ ಲೋಕಾಯುಕ್ತ ಪೋಲೀಸ್ ಠಾಣೆಯ ಅಧಿಕಾರಿಗಳಾದ ಶ್ರೀ ರುದ್ರೇಶ್ ಕೆ.ಪಿ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿಗಳೊಂದಿಗೆ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋದನಾ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿ ಔಷದ ದಾಸ್ತಾನು ವಿಭಾಗಕ್ಕೆ ಭೇಟಿ ಪರಿಶೀಲನೆಯನ್ನು ಕೈಗೊಂಡಿದ್ದರು.

ಈ ಸಮಯದಲ್ಲಿ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಕ್ಷ ಕಿರಣ ಕೊಠಡಿಯ ಪಕ್ಕದಲ್ಲಿ ಒಂದು ಕೊಠಡಿಯಲ್ಲ ಅನಧೀಕೃತವಾಗಿ ಔಷದಿಗಳನ್ನು ಸಂಗ್ರಹಿಸಿದ್ದು, ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಭೋಧನಾ ಆಸ್ಪತ್ರೆಯ ಶ್ರೀ ಗೋಪಿನಾಥ, ಸಹಾಯಕ ನಿರ್ದೇಶಕರು ಫಾರ್ಮಸಿ ರವರನ್ನು ವಿಚಾರ ಮಾಡಲಾಗಿ ಸದರಿಯವರು ಯಾವುದೇ ಸಮಂಜಸವಾದ ಮಾಹಿತಿಯನ್ನು ಮತ್ತು ದಾಖಲಾತಿಗಳನ್ನು ನೀಡಿರುವುದಿಲ್ಲ ಮತ್ತು ಸದರಿ ಔಷದಿಗಳು ದಾಸ್ತಾನು ರಿಜಿಸ್ಟರ್‌ನಲ್ಲಿಯೂ ಸಹ ನಮೂದು ಇಲ್ಲದೆ ಇರುವುದು ಕಂಡು ಬಂದಿದ್ದು, ಸದರಿ ಔಷಧಿಗಳ ಮೇಲೆ Not For Sale ಎಂದು ನಮೂದು ಇರುವುದಿಲ್ಲ ಎಲ್ಲಾ ಔಷದಿಗಳ ಮೇಲೆ ಎಂ.ಆರ್.ಪಿ ನಮೂದು ಇದ್ದು, ಇದು ಕಾನೂನು ಬಾಹಿರವಾಗಿರುವುದು ಕಂಡು ಬಂದಿರುತ್ತದೆ. ಹಾಗೂ ಈ ಬಗ್ಗೆ ಆಸ್ಪತ್ರೆಯ
ಫಾರ್ಮಸಿಸ್ಟ್‌ಗಳು ಸಮಂಜಸವಾದ ಉತ್ತರವನ್ನು ನೀಡಿರುವುದಿಲ್ಲ.

District Meggan Teaching Hospital ಸದರಿ ಔಷದಿಗಳ ಅಂದಾಜು ಮೌಲ್ಯ ಸುಮಾರು 3.5 ಲಕ್ಷಗಳಾಗುತ್ತದೆ. ಈ ಬಗ್ಗೆ ದಾಖಲಾತಿಗಳನ್ನು ಸಂಗ್ರಹಿಸಿದ್ದು ಮುಂದಿನ ತನಿಖೆ
ಕೈಗೊಳ್ಳಲಾಗುತ್ತದೆ.

Sagar Social Welfare Department ಮೆಟ್ರಿಕ್ ಪೂರ್ವ/ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶಾತಿ, ಸಾಗರ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ

0

Sagar Social Welfare Department ಸಾಗರ ಸಮಾಜ ಕಲ್ಯಾಣ ಇಲಾಖೆಯು 2025-26ನೇ ಶೈಕ್ಷಣಿಕ ಸಾಲಿಗೆ ಮೆಟ್ರಿಕ್ ಪೂರ್ವ/ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಹ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಂದ ಆನ್‌ಲೈನ್ www.sw.kar.nic.in ಮುಖಾಂತರ ಅರ್ಜಿ ಆಹ್ವಾನಿಸಿದೆ.

ಆಸಕ್ತರು ನಿಗಧಿತ ನಮೂನೆ ಅರ್ಜಿಗಳನ್ನು ಆಯಾ ನಿಲಯ/ವಸತಿ ಶಾಲೆಗಳಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಕಳೆದ ಸಾಲಿನ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ದೂರವಾಣಿ ಸಂಖ್ಯೆ, ಎಸ್‌ಎಟಿಎಸ್ ಐಡಿ (ಮೆ.ಪೂ.ವಿದ್ಯಾರ್ಥಿಯಾಗಿದ್ದಲ್ಲಿ), ಎಸ್‌ಎಸ್‌ಪಿ ಐಡಿ, ಯುನಿರ್ವಸಿಟಿ ಐಡಿ ನಂ. ಮತ್ತು ಯುನಿರ್ವಸಿಟಿ ರಿಜಿಸ್ಟ್ರೇಷನ್ ನಂ. (ಮೆ. ನಂ. ವಿದ್ಯಾರ್ಥಿಯಾಗಿದ್ದಲ್ಲಿ) ದಾಖಲೆಗಳೊಂದಿಗೆ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸುವಂತೆ ¸ಸಾಗರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Sagar Social Welfare Department ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 9480843192 ಅಥವಾ ಸಹಾಯಕ ನಿರ್ದೇಶಕರು, ಸಾಗರ ಸಮಾಜ ಕಲ್ಯಾಣ ಇಲಾಖೆ ಇವರನ್ನು ಸಂಪರ್ಕಿಸುವುದು.

S. N. Channabasappa ನಗರದ 26 ನೇ ವಾರ್ಡಿಗೆ ಶಾಸಕ ಚೆನ್ನಿ ಭೇಟಿ. ಕುಂದುಕೊರತೆ ಪರಿಶೀಲನೆ

0

S. N. Channabasappa ಶಿವಮೊಗ್ಗ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ಸಂಖ್ಯೆ 26ರ ಅಣ್ಣಾ ನಗರ (ಚಾನೆಲ್ ಏರಿಯಾ) ಬಡಾವಣೆಗೆ ಶಾಸಕರಾದ ಎಸ್ಎನ್ ಚೆನ್ನಬಸಪ್ಪ ಅವರು ಭೇಟಿ ನೀಡಿ, ಬಡಾವಣೆಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯ ಕುರಿತು ಸ್ಥಳೀಯ ನಿವಾಸಿಗಳೊಂದಿಗೆ ಮಾತನಾಡಿ ಸಮಸ್ಯೆಯ ಮಾಹಿತಿ ಪಡೆದು, ಈ ಕುರಿತು ಸಂಬಂಧಿತ ಅಧಿಕಾರಿಗಳೊಂದಿಗೆ ತಕ್ಷಣ ಚರ್ಚೆ ನಡೆಸಿ, ಶೀಘ್ರದಲ್ಲಿ ಪರಿಹರಿಸುವಂತೆ ಸೂಚಿಸಿದರು.

S. N. Channabasappa ಭೇಟಿಯ ವೇಳೆ ಬಡಾವಣೆಯ ರಾಜಕಾಲುವೆ ಸ್ಥಿತಿಯನ್ನು ಪರಿಶೀಲಿಸಿ, ಮಳೆಗಾಲದಲ್ಲಿ ನೀರಿನ ಸರಾಗ ಹರಿವು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ತುರ್ತು ಸ್ವಚ್ಛತಾ ಕಾರ್ಯಕ್ಕೆ ಹಾಗೂ ಹೂಳು ತೆರವು ಮಾಡುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.

Karnataka Rakshana Vedike ಖಾಸಗಿ ಶಾಲೆಗಳಲ್ಲಿಹೆಚ್ಚ ಶುಲ್ಕ ವಸೂಲಿ. ಕರವೇ ಎಚ್ಚರಿಕೆ ಪತ್ರ

0

Karnataka Rakshana Vedike ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ಮತ್ತು ಅವ್ಯವಸ್ಥೆ ಗೆ
ಸಂಬಂಧಿಸಿದಂತೆ ಖಾಸಗಿ ಶಾಲೆಗಳಲ್ಲಿ ಸರ್ಕಾರ ನಿಗದಿ ಪಡಿಸಿರುವ
ಶುಲ್ಕಕ್ಕಿಂತ ಅಧಿಕ ಶುಲ್ಕ ತೆಗೆದುಕೊಳ್ಳುತ್ತಿದ್ದು ಮತ್ತು ಆ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ
ಬರೆದ ನಂತರ ಪ್ರವೇಶಕ್ಕೆ ಅವಕಾಶವಿರುತ್ತದೆ ಮತ್ತು ಶಾಲೆಯ ಪಟ್ಟಿ ಪುಸ್ತಕ ಹಾಗೂ ಶಾಲೆಯ
ಸಮವಸ್ತ್ರಗಳನ್ನು ಕಡ್ಡಾಯವಾಗಿ ಆ ಶಾಲೆಯಲ್ಲಿ ತೆಗೆದುಕೊಳ್ಳಬೇಕು ಮತ್ತು ಟಿ.ಸಿ.ಎಚ್ ಮತ್ತು
ಬಿ.ಎಡ್ ಮಾಡದೆ ಇರುವ ಶಿಕ್ಷಕರು ಶಿಕ್ಷಕರಾಗಿರುವುದು ವಿಪರ್ಯಾಸ ಹಾಗಾಗಿ ಬಡ ಮತ್ತು
ಕೂಲಿ ಕಾರ್ಮಿಕರ ಮಕ್ಕಳಗೆ ಖಾಸಗಿ ಶಾಲೆಗಳಲ್ಲ ಮಕ್ಕಳ ವಿದ್ಯಾಭ್ಯಾಸ ಮಾಡಿಸಲು ಬಹುದೊಡ್ಡ
ತೊಂದರೆ ಆಗಿರುತ್ತದೆ ಸರ್ಕಾರದ ಆದೇಶದಂತೆ ಈ ಎಲ್ಲಾ ಶಾಲೆಗಳು ನಿಯಮಗಳನ್ನು
Karnataka Rakshana Vedike ಪಾಲಿಸದೆ ಗಾಳಿಯಲ್ಲಿ ತೂರಿರುತ್ತವೆ ಅಂತ ಶಾಲೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು
ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಲೆಗಳು
ಮತ್ತು ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಚ್ಚರಿಕೆ ಎಂದು ಕರ್ನಾಟಕ‌ ರಕ್ಷಣಾ ವೇದಿಕೆ, ಚಿಕ್ಕಮಗಳೂರು ಘಟಕದವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಬರೆದ ಪತ್ರವನಗನ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

H.S. Sundaresh ನಗರದಲ್ಲಿ ಸೂಡಾ ವತಿಯಿಂದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ- ಹೆಚ್.ಎಸ್.ಸುಂದರೇಶ್

0

H.S. Sundaresh ಸೂಡಾ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ಅಭಿವೃದ್ದಿ ಸೇರಿದಂತೆ ಇತರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ನಗರದ ನಿವಾಸಿಗಳು ತಮ್ಮ ಬಡಾವಣೆಗಳ ಉದ್ಯಾನವನಗಳು ಹಾಗೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚ ಮತ್ತು ಸುಂದರವಾಗಿಟ್ಟುಕೊಳ್ಳಬೇಕು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಕರೆ ನೀಡಿದರು.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪಾಧಿಕಾರದ ವತಿಯಿಮದ ಸೋಮವಾರದಂದು ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ಹಾಗೂ ಇತರೆ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸೂಡಾ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿನ ಉದ್ಯಾನವನಗಳನ್ನು ಅಭಿವೃದ್ದಿ ಪಡಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗೂ ಕೆಲವೆಡೆ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ ಮಾಡಲಾಗುತ್ತಿದೆ.
ಸ್ಥಳೀಯ ನಿವಾಸಿಗಳು ತಮ್ಮ ಬಡಾವಣೆಗಳ ಉದ್ಯಾನವನ, ಸುತ್ತಮುತ್ತಲಿನ ಜಾಗವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಲು ಸಹಕರಿಸಬೇಕು. ಮನೆಯ ಸುತ್ತಮುತ್ತ ಗಿಡಗಳನ್ನು ನೆಟ್ಟು ಬೆಳೆಸಬೇಕು. ಇದರಿಂದ ಬೇಸಿಗೆಯಲ್ಲಿ ತಂಪು ವಾತಾವರಣ ಸಾಧ್ಯವಾಗುತ್ತದೆ. ಹಾಗೂ ನಗರದ ಸೌಂದರ್ಯವೂ ಹೆಚ್ಚುತ್ತದೆ ಎಂದ ಅವರು ಪಾರ್ಕು, ರಸ್ತೆಯಂತಹ ಸಾರ್ವಜನಿಕ ಆಸ್ತಿ, ನಿವಾಸಿಗಳದ್ದೇ ಆಗಿದ್ದು ಇದನ್ನು ಕಾಪಾಡಿಕೊಂಡು ಹೋಗಬೇಕೆಂದರು.
ಗಾಡಿಕೊಪ್ಪದಲ್ಲಿರುವ ಸಿದ್ದಪ್ಪ ಬಡಾವಣೆಯಲ್ಲಿ ಅಂದಾಜು ರೂ.೨೫ ಲಕ್ಷ ಮೊತ್ತದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು ೦೪ ಸಂಖ್ಯೆ ಡೆಕ್ ಸ್ಲಾಯಬ್ ಹಾಗೂ ೪೫ ಮೀ.ಕಾಂಕ್ರಿಟ್ ಬಾಕ್ಸ್ ಚರಂಡಿ ನಿರ್ಮಾಣ, ೨೮೦ ಮೀ ರಸ್ತೆಗೆ ಡಾಂಬರೀಕರಣ ಮಾಡಲಾಗುವುದು ಎಂದರು.
ವಿದ್ಯಾನಗರದ ಗ್ರಂಥಾಲಯ ಹತ್ತಿರದ ಉದ್ಯಾನವನಕ್ಕೆ ರೂ.೨೦ ಲಕ್ಷ ಮೊತ್ತದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಇಲ್ಲಿಯ ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ ೧೨ ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಪಾರ್ಕ್ಲ್ಲಿ ಹಾಲಿ ಇರುವ ಪಾಥ್‌ವೇಗೆ ಮತ್ತು ಗ್ರಿಲ್ ಫೆನ್ಸಿಂಗ್‌ಗೆ ಬಣ್ಣ ಲೇಪಿಸಿವುದು ಹಾಗೂ ಉದ್ಯಾನವನದಲ್ಲಿ ೦೮ ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು ಎಂದರು.
ವಿದ್ಯಾನಗದ ಪ್ರೊ.ದಾನಪ್ಪ ಮನೆ ಹತ್ತಿರದ ಪಾರ್ಕಿನಲ್ಲಿ ಅಂದಾಜು ಮೊತ್ತ ರೂ.೨೦ ಲಕ್ಷ ಅನುದಾನದಲ್ಲಿ ಉದ್ಯಾನವನದ ಮುಂಭಾಗದಲ್ಲಿ ಆಯ್ದ ಭಾಗದಲ್ಲಿ ಕಾಂಕ್ರೀಟ್ ಬಾಕ್ಸ್ ಚರಂಡಿ ನಿರ್ಮಾಣ, ಗ್ರಿಲ್ ಕಾಂಪೌAಡ್ ಹಾಗೂ ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ ೧೦ ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿಗಳ ಅಳವಡಿಕೆ ಮಾಡಲಾಗುವುದು.
ಗುರುಪುರದ ಭುವನೇಶ್ವರಿ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ರೂ.೨೦ ಲಕ್ಷ ವೆಚ್ಚದಲ್ಲಿ ೧೫*೧೦ ಮೀ ಅಳತೆಯ ಯೋಗ ಪ್ಲಾಟ್‌ಫಾರ್ಮ್ ನಿರ್ಮಾಣ, ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ ೧೧ ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಹಾಲಿ ಇರುವ ಪಾಥ್‌ವೇಗೆ ಮತ್ತು ಗ್ರಿಲ್ ಫೆನ್ಸಿಂಗ್‌ಗೆ ಬಣ್ಣ ಲೇಪನ ಮತ್ತು ೦೬ ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು. ಮಲವಗೊಪ್ಪದ ಶಿವಪ್ರಿಯ ಉದ್ಯಾನವನಕ್ಕೆ ರೂ.೨೦ ಲಕ್ಷ ಮೊತ್ತದಲ್ಲಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಪಾರ್ಕ್ನ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ ೧೦ ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಪಾರ್ಕಿನಲ್ಲಿ ಹಾಲಿ ಇರುವ ಪಾಥ್‌ವೇಗೆ ಮತ್ತು ಗ್ರಿಲ್ ಫೆನ್ಸಿಂಗ್‌ಗೆ ಬಣ್ಣ ಲೇಪನ ಹಾಗೂ ೭೫ ಮೀ.ಪಾಥ್‌ವೇ ನಿರ್ಮಾಣ ಹಾಗೂ ೮ ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.
H.S. Sundaresh ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಿವಾಸಿಗಳು ತಮ್ಮ ಬಡಾವಣೆಗಳಲ್ಲಿನ ಉದ್ಯಾನವನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ತಮ್ಮ ಮನೆ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕು. ಸುತ್ತಮುತ್ತ ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ನಗರದ ಸೌಂದರ್ಯಕ್ಕೆ ಕೊಡುಗೆ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಕಾರ್ಯಪಾಲಕ ಅಭಿಯಂತರ ಗಂಗಾಧರ್ ಸ್ವಾಮಿ, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ,ಇತರೆ ಅಧಿಕಾರಿಗಳು, ನಿವಾಸಿಗಳು ಪಾಲ್ಗೊಂಡಿದ್ದರು.