Wednesday, June 18, 2025
Wednesday, June 18, 2025

H.S. Sundaresh ನಗರದಲ್ಲಿ ಸೂಡಾ ವತಿಯಿಂದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ- ಹೆಚ್.ಎಸ್.ಸುಂದರೇಶ್

Date:

H.S. Sundaresh ಸೂಡಾ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ಅಭಿವೃದ್ದಿ ಸೇರಿದಂತೆ ಇತರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ನಗರದ ನಿವಾಸಿಗಳು ತಮ್ಮ ಬಡಾವಣೆಗಳ ಉದ್ಯಾನವನಗಳು ಹಾಗೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚ ಮತ್ತು ಸುಂದರವಾಗಿಟ್ಟುಕೊಳ್ಳಬೇಕು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಕರೆ ನೀಡಿದರು.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪಾಧಿಕಾರದ ವತಿಯಿಮದ ಸೋಮವಾರದಂದು ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ಹಾಗೂ ಇತರೆ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸೂಡಾ ವತಿಯಿಂದ ನಗರದ ವಿವಿಧ ಬಡಾವಣೆಗಳಲ್ಲಿನ ಉದ್ಯಾನವನಗಳನ್ನು ಅಭಿವೃದ್ದಿ ಪಡಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಹಾಗೂ ಕೆಲವೆಡೆ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ ಮಾಡಲಾಗುತ್ತಿದೆ.
ಸ್ಥಳೀಯ ನಿವಾಸಿಗಳು ತಮ್ಮ ಬಡಾವಣೆಗಳ ಉದ್ಯಾನವನ, ಸುತ್ತಮುತ್ತಲಿನ ಜಾಗವನ್ನು ಸ್ವಚ್ಚವಾಗಿ ಇಟ್ಟುಕೊಳ್ಳಲು ಸಹಕರಿಸಬೇಕು. ಮನೆಯ ಸುತ್ತಮುತ್ತ ಗಿಡಗಳನ್ನು ನೆಟ್ಟು ಬೆಳೆಸಬೇಕು. ಇದರಿಂದ ಬೇಸಿಗೆಯಲ್ಲಿ ತಂಪು ವಾತಾವರಣ ಸಾಧ್ಯವಾಗುತ್ತದೆ. ಹಾಗೂ ನಗರದ ಸೌಂದರ್ಯವೂ ಹೆಚ್ಚುತ್ತದೆ ಎಂದ ಅವರು ಪಾರ್ಕು, ರಸ್ತೆಯಂತಹ ಸಾರ್ವಜನಿಕ ಆಸ್ತಿ, ನಿವಾಸಿಗಳದ್ದೇ ಆಗಿದ್ದು ಇದನ್ನು ಕಾಪಾಡಿಕೊಂಡು ಹೋಗಬೇಕೆಂದರು.
ಗಾಡಿಕೊಪ್ಪದಲ್ಲಿರುವ ಸಿದ್ದಪ್ಪ ಬಡಾವಣೆಯಲ್ಲಿ ಅಂದಾಜು ರೂ.೨೫ ಲಕ್ಷ ಮೊತ್ತದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು ೦೪ ಸಂಖ್ಯೆ ಡೆಕ್ ಸ್ಲಾಯಬ್ ಹಾಗೂ ೪೫ ಮೀ.ಕಾಂಕ್ರಿಟ್ ಬಾಕ್ಸ್ ಚರಂಡಿ ನಿರ್ಮಾಣ, ೨೮೦ ಮೀ ರಸ್ತೆಗೆ ಡಾಂಬರೀಕರಣ ಮಾಡಲಾಗುವುದು ಎಂದರು.
ವಿದ್ಯಾನಗರದ ಗ್ರಂಥಾಲಯ ಹತ್ತಿರದ ಉದ್ಯಾನವನಕ್ಕೆ ರೂ.೨೦ ಲಕ್ಷ ಮೊತ್ತದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಇಲ್ಲಿಯ ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ ೧೨ ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಪಾರ್ಕ್ಲ್ಲಿ ಹಾಲಿ ಇರುವ ಪಾಥ್‌ವೇಗೆ ಮತ್ತು ಗ್ರಿಲ್ ಫೆನ್ಸಿಂಗ್‌ಗೆ ಬಣ್ಣ ಲೇಪಿಸಿವುದು ಹಾಗೂ ಉದ್ಯಾನವನದಲ್ಲಿ ೦೮ ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು ಎಂದರು.
ವಿದ್ಯಾನಗದ ಪ್ರೊ.ದಾನಪ್ಪ ಮನೆ ಹತ್ತಿರದ ಪಾರ್ಕಿನಲ್ಲಿ ಅಂದಾಜು ಮೊತ್ತ ರೂ.೨೦ ಲಕ್ಷ ಅನುದಾನದಲ್ಲಿ ಉದ್ಯಾನವನದ ಮುಂಭಾಗದಲ್ಲಿ ಆಯ್ದ ಭಾಗದಲ್ಲಿ ಕಾಂಕ್ರೀಟ್ ಬಾಕ್ಸ್ ಚರಂಡಿ ನಿರ್ಮಾಣ, ಗ್ರಿಲ್ ಕಾಂಪೌAಡ್ ಹಾಗೂ ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ ೧೦ ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿಗಳ ಅಳವಡಿಕೆ ಮಾಡಲಾಗುವುದು.
ಗುರುಪುರದ ಭುವನೇಶ್ವರಿ ಬಡಾವಣೆಯಲ್ಲಿರುವ ಉದ್ಯಾನವನದಲ್ಲಿ ರೂ.೨೦ ಲಕ್ಷ ವೆಚ್ಚದಲ್ಲಿ ೧೫*೧೦ ಮೀ ಅಳತೆಯ ಯೋಗ ಪ್ಲಾಟ್‌ಫಾರ್ಮ್ ನಿರ್ಮಾಣ, ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ ೧೧ ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಹಾಲಿ ಇರುವ ಪಾಥ್‌ವೇಗೆ ಮತ್ತು ಗ್ರಿಲ್ ಫೆನ್ಸಿಂಗ್‌ಗೆ ಬಣ್ಣ ಲೇಪನ ಮತ್ತು ೦೬ ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು. ಮಲವಗೊಪ್ಪದ ಶಿವಪ್ರಿಯ ಉದ್ಯಾನವನಕ್ಕೆ ರೂ.೨೦ ಲಕ್ಷ ಮೊತ್ತದಲ್ಲಿ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ, ಪಾರ್ಕ್ನ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ ೧೦ ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಪಾರ್ಕಿನಲ್ಲಿ ಹಾಲಿ ಇರುವ ಪಾಥ್‌ವೇಗೆ ಮತ್ತು ಗ್ರಿಲ್ ಫೆನ್ಸಿಂಗ್‌ಗೆ ಬಣ್ಣ ಲೇಪನ ಹಾಗೂ ೭೫ ಮೀ.ಪಾಥ್‌ವೇ ನಿರ್ಮಾಣ ಹಾಗೂ ೮ ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.
H.S. Sundaresh ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನಿವಾಸಿಗಳು ತಮ್ಮ ಬಡಾವಣೆಗಳಲ್ಲಿನ ಉದ್ಯಾನವನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜೊತೆಗೆ ತಮ್ಮ ಮನೆ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕು. ಸುತ್ತಮುತ್ತ ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ನಗರದ ಸೌಂದರ್ಯಕ್ಕೆ ಕೊಡುಗೆ ನೀಡಬೇಕೆಂದರು.
ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಕಾರ್ಯಪಾಲಕ ಅಭಿಯಂತರ ಗಂಗಾಧರ್ ಸ್ವಾಮಿ, ಪಾಲಿಕೆ ಮಾಜಿ ಸದಸ್ಯೆ ಯಮುನಾ ರಂಗೇಗೌಡ,ಇತರೆ ಅಧಿಕಾರಿಗಳು, ನಿವಾಸಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

District Legal Services Authority ಯೋಗಾಭ್ಯಾಸದ ಮಹತ್ವ ಕುರಿತು ಹಿರಿಯ ನಾಗರೀಕರಿಗೆ ಮಾಹಿತಿ ಕಾರ್ಯಕ್ರಮ

District Legal Services Authority ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

MESCOM ಜೂ.20 ರಂದು ಶಿವಮೊಗ್ಗದ ವಿವಿಧೆಡೆ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ ಆರ್.ಎಸ್. ವಿವಿ ಕೇಂದ್ರ ಮುಖ್ಯ ಸ್ವೀಕರಣಾ...