Monday, August 3, 2026
Monday, August 3, 2026
Home Blog Page 29

ದುಃಶ್ಚಟಗಳಿಗೆ ಬಲಿಯಾಗಿದ್ದೀರ? ಬಿಫಿ,ಅಸ್ತಮ,ಶುಗರ್ ನಿಂದ ಬಳಲಿಕೆಯೆ? ಬನ್ನಿ ಜುಲೈ 12 ರಂದು ಆರೋಗ್ಯ ಮಾಹಿತಿ ಕಾರ್ಯಕ್ರಮಕ್ಕೆ

0

ಧ್ಯಾನ, ಪ್ರಾಣಾಯಾಮ ಮತ್ತು ಯೋಗ ನಿದ್ರಾಭ್ಯಾಸದ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ಪರಿಚಯ ಕಾರ್ಯಕ್ರಮವನ್ನು ಶ್ರೀ ಋಷಿ ಪ್ರಭಾಕರ್ ಗುರುಜಿಯವರಿಂದ ಜುಲೈ 12ರ ಭಾನುವಾರ ಸಂಜೆ 6ಗಂಟೆಗೆ ನಗರದ ಕೋಟೆ ರಸ್ತೆ ಕೋಟೆ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಈ ವಿಶೇಷ ಕಾರ್ಯಕ್ರಮದಲ್ಲಿ ನಿಮಗೆ ಸುಸ್ತಾಗುವ ಅನುಭವವಾಗು ತ್ತಿದೆಯೇ, ಕಾಯಿಲೆ ಏನೂ ಇಲ್ಲದಿದ್ದರೂ ನಿರುತ್ಸಾಹವಾಗು ತ್ತಿದೆಯೆ, ಬಿಡಿ, ಸಿಗರೇಟ್, ಕಾಫಿ, ಟೀ, ತಂಬಾಕು, ಮಧ್ಯಪಾನ ಅಭ್ಯಾಸಗಳಿಂದ ಐರಾಣಾಗಿದ್ದೀರ. ನಿಮಗೆ ದೀರ್ಘ ಕಾಲದಿಂದ ಅಥವಾ ಇತ್ತೀಚೆಗೆ ಬಂದ ಬಿಪಿ-ಶುಗರ್, ಅಸ್ತಮ, ಸಂದಿ ನೋವು, ತಲೆ ನೋವು, ಗ್ಯಾಸ್ಟ್ರಿಟಿಕ್ಸ್ ಮತ್ತಿತರ ಯಾವುದಾದರೂ ಖಾಯಿಲೆ ಇದೆಯೇ. ಮನಸ್ಸಿನ ಏಕಾಗ್ರತೆ ನಿಯಂತ್ರಣದಲ್ಲಿಲ್ಲವೆ. ಮನಸ್ಸಿನಲ್ಲಿ ಯಾವಾಗಲೂ ಉದ್ವೇಗ ಒತ್ತಡದ ಅನುಭವವಾಗುತ್ತಿದೆಯೇ ? ಮತ್ತು ಇನ್ನಿತರ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವ ಸದಾವಕಾಶವನ್ನು ಶಿವಮೊಗ್ಗದ ಜನತೆ ಪಡೆದುಕೊಳ್ಳಲು ಕೋರಲಾಗಿದೆ.
ಮಾಹಿತಿಗೆ ಮೊ. 9986052851, 9342758707ರಲ್ಲಿ ಸಂಪರ್ಕಿಸಿ.

ಸೊರಬದ ಎಚ್.ಮಲ್ಲಿಕಾರ್ಜುನ್ ನಿವಾಸದಲ್ಲಿ “ಮನೆಗೊಂದು ಗ್ರಂಥಾಲಯ” ಉದ್ಘಾಟನೆ

0

ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತ ಸಮಿತಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಪಟ್ಟಣದ ನಿಜಗುಣ ರೆಸಿಡೆನ್ಸಿಯಲ್ ಸಭಾಂಗಣದಲ್ಲಿ ಜು.12 ರಂದು ಸಂಜೆ 5 ಕ್ಕೆ ಎಚ್. ಮಲ್ಲಿಕಾರ್ಜುನ ಅವರ ನಿವಾಸದ ಮನೆಗೊಂದು ಗ್ರಂಥಾಲಯ ಅನುಷ್ಠಾನ, ಮುಂಗಾರು ಜಾನಪದ ಸಂಭ್ರಮ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟಕರಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಆಗಮಿಸಲಿದ್ದಾರೆ.

ಶಿವಮೊಗ್ಗ ಆನಂದಪುರ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ನಿಜಗುಣ ಆಫ್‌ಸೆಟ್ ಪ್ರಿಂಟರ್ಸ್ ಮಾಲಿಕ ಎಚ್. ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಕೆ. ಗುಡ್ಡಪ್ಪ ಜೋಗಿ, ಶ್ರೀಧರ್ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷೆ ರೂಪಾ ಶ್ರೀನಾಥ್, ಪ್ರಮುಖರಾದ ಚಂದ್ರಶೇಖರ ನಿಜಗುಣ, ಹುಚ್ಚರಾಯಪ್ಪ, ಡಾ. ಉಮೇಶ್ ಭದ್ರಾಪುರ, ಸುನಿತಾ ವಿಜಯಪ್ರಸಾದ್ ಆನವಟ್ಟಿ, ಪ್ರಜ್ವಲ್ ಚಂದ್ರಗುತ್ತಿ, ಮಹೇಶ್ ಖಾರ್ವಿ ಸೇರಿದಂತೆ ಮತ್ತಿತರರು ಪಾಲ್ಗೊಳ್ಳುವರು.

ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದ ಎಚ್. ಗುರುಮೂರ್ತಿ ಹಾಗೂ ಗಾಯಕ ಜೈಕುಮಾರ್ ಶಿಗ್ಗಾ ಅವರನ್ನು ಸನ್ಮಾನಿಸಲಾಗುವುದು. ಸಭಾಕಾರ್ಯಕ್ರಮದ ನಂತರ ಕಲಾವಿದರಿಂದ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

ಮಹಿಳೆಯ ಕೊಲಗೈದ ಆರೋಪಿಗೆ ಕೋರ್ಟಿನಿಂದ ತೀರ್ಪು: ಜೀವಾವಧಿ ಶಿಕ್ಷೆ ಮತ್ತು ದಂಡ ಘೋಷಣೆ

0

ದಿನಾಂಕ: 18-12-2022 ರಂದು ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿದರಗೋಡು ಗ್ರಾಮದ ವಾಸಿ ಆರೋಪಿ ರಾಜಪ್ಪ (36 ವರ್ಷ) ಈತನು ಪಾರ್ವತಮ್ಮ (50 ವರ್ಷ) ರವರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಪ್ರಯತ್ನಿಸಿ, ತನ್ನ ಮರ್ಯಾದೆ ತೆಗೆಯುತ್ತಾಳೆಂದು, ಗುದ್ದಲಿಯ ಹೊಡೆದು ಕೊಲೆ ಮಾಡಿ, ಪಾರ್ವತಮ್ಮನ ಮೃತ ದೇಹವನ್ನು ಬಾವಿಗೆ ಹಾಕಿದ್ದು, ಈ ಬಗ್ಗೆ ಗುನ್ನೆ ನಂ 86/2022 ರಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.

ತನಿಖಾಧಿಕಾರಿಗಳಾದ ಶ್ರೀ ಪ್ರವೀಣ್ ನೀಲಮ್ಮನವರ್ ಸಿಪಿಐ ಮಾಳೂರು ವೃತ್ತ ರವರು ಪ್ರಕರಣದ ತನಿಖೆ ಪೂರೈಸಿ, ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

3ನೇ ಹೆಚ್ಚುವರಿ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದ ಸರ್ಕಾರಿ ಅಭಿಯೋಜಕರಾದ ಶ್ರೀ ಶಾಂತರಾಜ್ ರವರು ವಿಚಾರಣೆ ನಡೆಸಿದ್ದು ನಂತರ ಶ್ರೀಮತಿ ಮಮತ ಬಿ ಎಸ್ ರವರು ವಾದ ಮಂಡಿಸಿರುತ್ತಾರೆ. ಆರೋಪಿಯ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಯಶವಂತ ಕುಮಾರ್ ರವರು ದಿನಾಂಕ:09-07-2026 ರಂದು ಆರೋಪಿ ರಾಜಪ್ಪ ಈತನಿಗೆ ಕಲಂ 302, 201 ಐಪಿಸಿ ಕಾಯ್ದೆ ಅಡಿ ಜೀವಾವಧಿ ಶಿಕ್ಷೆ ಮತ್ತು 10,000 ರೂ ದಂಡವನ್ನು ವಿಧಿಸಿ ಆದೇಶಿಸಿರುತ್ತಾರೆ.

ಜುಲೈ 14. ಶಿರಾಳಕೊಪ್ಪ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನಸಂಪರ್ಕ ಸಭೆ

0

ಮೆಸ್ಕಾಂ ಶಿರಾಳಕೊಪ್ಪ ಉಪವಿಭಾಗ ಕಛೇರಿಯಲ್ಲಿ ಜು. 14 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 01 ರವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂ. ಸಂ.; 9448998776. ಸಂಪರ್ಕಿಸಬಹುದೆಂದು ಮೆಸ್ಕಾಂ ತಿಳಿಸಿದೆ.

ಭಾರತೀಯ ಕುಟುಂಬ ಯೋಜನಾ ಸಂಘ, ಶಿವಮೊಗ್ಗ ಶಾಖೆ ಅಧ್ಯಕ್ಷರಾಗಿ ಭಾರತಿ ಚಂದ್ರಶೇಖರ್ ಆಯ್ಕೆ

0

ಶನಿವಾರದಂದು ನಡೆದ ಎಫ್ ಪಿ ಏ ಐ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಸಿ ಶ್ರೀಮತಿ ಭಾರತಿ ಚಂದ್ರಶೇಖರ್ ಅವರು ಆಯ್ಕೆಯಾಗಿದ್ದಾರೆ.

ಅವರು ಈ ಮೊದಲು ಎಫ್ ಪಿ ಎ ಐ ನಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅದೇ ರೀತಿ 2026 – 2029ನೇ ಅವಧಿಗೆ ಶ್ರೀಮತಿ ಭಾರತಿ ಚಂದ್ರಶೇಖರ್ ಅಧ್ಯಕ್ಷರಾಗಿ ಶ್ರೀಮತಿ ಸುರೇಖಾ ಮುರಳಿಧರ್ ಉಪಾಧ್ಯಕ್ಷರಾಗಿ, ಶ್ರೀಮತಿ ಶಶಿಕಲಾ ಕೆ ಎಸ್ ಫೈನಾನ್ಸ್ ಅಡ್ವೈಸರ್ ಆಗಿ, ಮತ್ತು ನಿರ್ದೇಶಕರಾಗಿ ಉದಯ್ ಕದಂಬ, ರೇಖಾ ಜಿಎಂ, ಅನಿತಾ ರವಿಶಂಕರ್ ಮತ್ತು ಯುವ ಸದಸ್ಯರಾಗಿ ಅರುಣಾಚಲಂ ಎಸ್, ಸತ್ಯವತಿ ಡಿ ಮತ್ತು ಸಮೀಹ ಬಾನು ಆಯ್ಕೆಯಾಗಿದ್ದಾರೆ.

ಭದ್ರಾವತಿಯ ಮಹಾತ್ಮಗಾಂಧಿ ಪಾರ್ಕಿಗೆ ಸೈಲ್-ವಿಎಸ್ಎಲ್ ನಿಂದ ಮುಂಚಿನಂತೆ ಸೌಂದರ್ಯೀಕರಣ

0

ಸೈಲ್-ವಿಐಎಸ್‌ಎಲ್‌ನಿಂದ ಮಹಾತ್ಮ ಗಾಂಧಿ ಉದ್ಯಾನವನದ ಸುಂದರೀಕರಣ ಮತ್ತು ನಿರ್ವಹಣೆ
ನಗರದ ನಿವಾಸಿಗಳಿಗೆ ಸ್ವಚ್ಛ, ಸುರಕ್ಷಿತ ಮತ್ತು ಆಹ್ಲಾದಕರ ವಾತಾವರಣವನ್ನು ಒದಗಿಸುವ ಬದ್ಧತೆಯನ್ನು ಪ್ರದರ್ಶಿಸುತ್ತಾ, ಭದ್ರಾವತಿಯ ಸೈಲ್- ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಸ್ಥಾವರದ ನಗರಾಡಳಿತ ಇಲಾಖೆಯು, ಕಾರ್ಯಪಾಲಕ ನಿರ್ದೇಶಕ ಶ್ರೀ ಅನೂಪ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ವ್ಯಾಪಕವಾದ ಶುಚಿಗೊಳಿಸುವಿಕೆ ಮತ್ತು ನಿರ್ವಹಣಾ ಕಾರ್ಯವನ್ನು ಕೈಗೊಂಡಿದೆ.

ಉದ್ಯಾನವನದ ಆವರಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು, ಮಿತಿಮೀರಿ ಬೆಳೆದ ಹುಲ್ಲು – ಪೊದೆಗಳನ್ನು ತೆಗೆದುಹಾಕುವುದು, ಮರದ ಕೊಂಬೆಗಳನ್ನು ಕತ್ತರಿಸುವುದು ಮತ್ತು ವಾಕಿಂಗ್ ಟ್ರ್ಯಾಕ್‌ಗಳು ಮತ್ತು ಸುತ್ತಮುತ್ತಲಿನ ಹಸಿರು ಪ್ರದೇಶಗಳ ಸಾಮಾನ್ಯ ನಿರ್ವಹಣೆಯನ್ನು ಕೈಗೊಂಡಿತ್ತು.

ಈ ಕ್ರಮಗಳು ಉದ್ಯಾನವನದ ಒಟ್ಟಾರೆ ನೋಟವನ್ನು ಸುಂದರವಾಗಿಸಿವೆ.

ಮಹಾತ್ಮ ಗಾಂಧಿ ಉದ್ಯಾನವನವನ್ನು ಮಕ್ಕಳು ಹೊರಾಂಗಣ ಆಟಕ್ಕೆ ಮತ್ತು ನಿವಾಸಿಗಳು ಬೆಳಗ್ಗೆ ಮತ್ತು ಸಂಜೆ ನಡಿಗೆಗೆ ವ್ಯಾಪಕವಾಗಿ ಬಳಸುತ್ತಾರೆ.

ನಿರ್ವಹಣಾ ಕಾರ್ಯವು ಸ್ವಚ್ಛ, ಹಸಿರು ಮತ್ತು ಹೆಚ್ಚು ಆರಾಮದಾಯಕ ವಾತಾವರಣವನ್ನು ಸೃಷ್ಟಿಸಿದೆ. ಆರೋಗ್ಯಕರ ಹೊರಾಂಗಣ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಎಲ್ಲಾ ವಯೋಮಾನದ ಜನರಿಗೆ ಆನಂದದಾಯಕ ಅನುಭವವನ್ನು ಒದಗಿಸುತ್ತದೆ.

ಸೈಲ್-ವಿಐಎಸ್‌ಎಲ್ ನಗರದಲ್ಲಿನ ನಾಗರೀಕ ಸೌಲಭ್ಯಗಳು ಮತ್ತು ಹಸಿರು ಸ್ಥಳಗಳ ನಿರ್ವಹಣೆಗೆ ಹೆಚ್ಚಿನ ಆಧ್ಯತೆಯನ್ನು ನೀಡುವುದನ್ನು ಮುಂದುವರೆಸಿದೆ. ಇಂತಹ ಕ್ರಮಗಳು ಪರಿಸರ ಸುಸ್ಥಿರತೆ, ಸಾರ್ವಜನಿಕ ಯೋಗಕ್ಷೇಮ ಮತ್ತು ನಗರ ನಿವಾಸಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವತ್ತ ಸಂಸ್ಥೆಯ ಬದ್ಧತೆಯನ್ನು ತೋರಿಸುತ್ತದೆ.

ಉದ್ಯಾನವನದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಲು ಕಸ ಹಾಕುವುದನ್ನು ತಪ್ಪಿಸಿ, ಹಸಿರನ್ನು ರಕ್ಷಿಸಿ ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಜವಾಬ್ದಾರಿಯುತವಾಗಿ ಬಳಸಿಕೊಳ್ಳಲು ಎಲ್ಲಾ ನಿವಾಸಿಗಳು ತಮ್ಮ ಪೂರ್ಣ ಸಹಕಾರವನ್ನು ನೀಡಬೇಕೆಂದು ಕಾರ್ಖಾನೆಯ ಆಡಳಿತವು ಮನವಿ ಮಾಡಿದೆ.

ಯಾದವ ಸಂಸ್ಥೆಯಿಂದ ಚೆಸ್ ತರಬೇತಿ ಶಿಬಿರ

0

ಯಾದವ ಸ್ಕೂಲ್ ಆಫ್ ಚೆಸ್ ರವೀಂದ್ರ ನಗರ, ವಿನೋಬನಗರ ಮತ್ತು ಕೃಷಿ ನಗರದಲ್ಲಿ ಬೇಸಿಕ್ ಮತ್ತು ಇಂಟರ್ ಮೀಡಿಯೇಟರ್ ಚೆಸ್ ತರಬೇತಿ ಪ್ರಾರಂಭ ಮಾಡಿದೆ. ತಮ್ಮ ಮಕ್ಕಳನ್ನು ಸೇರಬಯಸುವ ಪೋಷಕರು ಹೆಸರು ನೊಂದಾಯಿಸಲು ಹಾಗೂ ಮಾಹಿತಿಗೆ ಮೊ. 9242401702, 9743819678ರಲ್ಲಿ ಸಂಪರ್ಕಿಸಿ.

Rotary Club of Shivamogga ಸಮಸ್ಯೆಗಳನ್ನ ಅವಕಾಶಗಳಾಗಿ ಪರಿವರ್ತಿಸಿ, ಉದ್ಯಮಿಗಳಾಗಿ : ಎನ್.ಗೋಪಿನಾಥ್

0

Rotary Club of Shivamogga ಸಮಸ್ಯೆಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡು ಉದ್ಯಮಿಗಳಾಗಿ ಎಂದು ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷ ಶ್ರೀ ಎನ್ ಗೋಪಿನಾಥ್ ನುಡಿದರು..ಅವರು ರೋಟರಿ ಕ್ಲಬ್ ಶಿವಮೊಗ್ಗ ಹಾಗೂ ಸ್ವೇದ ಮಹಿಳಾ ಉದ್ಯಮಿಗಳ ಸಂಘದ ವತಿಯಿಂದ ದಿನಾಂಕ ನಗರದ ಕಮಲ ನೆಹರು ಕಾಲೇಜಿನಲ್ಲಿ ಉದ್ಯಮಶೀಲತೆ ಅಭಿವೃದ್ಧಿಗಾಗಿ ಇರುವ ಯೋಜನೆಗಳ ಕುರಿತು ಅರಿವು ಕಾರ್ಯಾಗಾರ ದಲ್ಲಿ ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತನಾಡಿದರು
ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷರಾದ ಹಾಗೂ ರೋಟರಿ ಕ್ಲಬ್ ಶಿವಮೊಗ್ಗದ ಮಾಜಿ ಅಧ್ಯಕ್ಷರಾದ ಡಾ. ಬಿ. ವಿ. ಲಕ್ಷ್ಮೀದೇವಿ ಗೋಪಿನಾಥ್ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿನಿಯರಿಗೆ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳಿದ ಇರುವ ಯೋಜನೆಗಳ ಸುದೀರ್ಘ ವಿವರಗಳನ್ನು ನೀಡಿದರು.
Rotary Club of Shivamogga ಕಮಲಾ ನೆಹರು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಮತಾ ಉಪ ಪ್ರಾಂಶುಪಾಲರಾದ ಶ್ರೀಮತಿ ಆಶಾಲತಾ ,ರೋಟರಿ ಕ್ಲಬ್ ಶಿವಮೊಗ್ಗದ ಮಾಜಿ ಅಧ್ಯಕ್ಷ ರಾದ ವೀರಣ್ಣ ಹುಗ್ಗಿ, ಸಹಕಾರ್ಯದರ್ಶಿ ವಿಜಯಕುಮಾರ್, ಕಲಾಮೃತ, ಶಿವಮೊಗ್ಗ ದಿನ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್ ಉಪಸ್ಥಿತರಿದ್ದರು

Rotary Shivamogga ರೋಟರಿ, ಕೇವಲ ಶ್ರೀಮಂತರ ಸಂಸ್ಥೆಯಲ್ಲ.ಈಗ ಆ ಅಪವಾದ ಹೋಗಿದೆ. ಇದರ ಸದಸ್ಯರು ಹೃದಯ ಶ್ರೀಮಂತಿಕೆಯವರು: ವಸಂತ ಹೋಬಳಿದಾರ್

0

Rotary Shivamogga ರೋಟರಿ ಶಿವಮೊಗ್ಗ ಪೂರ್ವದ 2026 ಮತ್ತು 27 ನೇ ಸಾಲಿನ ನೂತನ ಪದಾಧಿಕಾರಿಗಳ ಸಮಾರಂಭ ಶುಕ್ರವಾರ ಸಾಗರ ರಸ್ತೆಯಲ್ಲಿ ನ ಶಿವಮೊಗ್ಗ ಅರೆಕಾನಟ್ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್ ನಡೆಯಿತು.
ಅಧ್ಯಕ್ಷರಾಗಿ ಡಿ ಕೆ ಶೇಷಗಿರಿ,
, ಕಾರ್ಯದರ್ಶಿಯಾಗಿ ಮನೋಹರ ಆರ್,ಉಪಾಧ್ಯಕ್ಷ ರಾಗಿ ವಿಜಯ ಕುಮಾರ್ ಜಿ ಅಧಿಕಾರ ಸ್ವೀಕರಿಸಿದರು.

ಇವರಿಗೆ ಚುನಾಯಿತ ಜಿಲ್ಲಾ ಗವರ್ನರ್, ವಸಂತ್ ಹೋಬಳಿ ದಾರ್ ಪದಗ್ರಹಣ ಅಧಿಕಾರಿಗಳಾಗಿ ಪ್ರಮಾಣವಚನ ಬೋಧಿಸಿದರು.

ಹಿಂದಿನ ಅಧ್ಯಕ್ಷರಾದ ಡಿ ಕಿಶೋರ್ ಕುಮಾರ್ ಕಾರ್ಯದರ್ಶಿಯಾದ ಧನಂಜಯ ಬಿ ಆರ್ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಸಂತ್ ಹೋಬಳಿದಾರ್
, ರೋಟರಿ ಎಂದರೆ ಬೆಳಕು. ಇದು ಕೇವಲ ಶ್ರೀಮಂತರ ಸಂಸ್ಥೆಯಲ್ಲ, ಆ ಅಪವಾದ ಈಗ ಹೋಗಿದೆ. ಇಲ್ಲಿರುವ ಸದಸ್ಯರು ಹೃದಯ ಶ್ರೀಮಂತಿಕೆ ಹೊಂದಿದ್ದಾರೆ.
ಒಳ್ಳೆಯ ಕೆಲಸ ಮಾಡಿ ಸೇವೆಯನ್ನು ಅಪ್ಪಿ ಕೊಳ್ಳಿ.ಯುವಕರಿಗೆ ಮಾರ್ಗದರ್ಶನ ಮಾಡಿ ನಾಯಕತ್ವ ಕಲಿಸಿ
ಮತ್ತಷ್ಟು ಸಮಾಜ ಸೇವೆ ಮಾಡಿ ಎಂದು ಕರೆ ನೀಡಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅದ್ಯಕ್ಷ ಡಿ ಕೆ ಶೇಷಗಿರಿ , ರೋಟರಿ ಸೇವೆಗೆ ಹೆಸರು ಮಾಡಿದೆ. ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡುವ ಹಂಬಲ ಇದೆ. ಸ್ವಚ್ಛತೆ, ಪರಿಸರ,ಆರೋಗ್ಯ, ಶಿಕ್ಷಣ ಕ್ಕೆ ಹೆಚ್ಚು ಒತ್ತು ಕೊಡುವೆ. ವ ಶಾಶ್ವತ ಕಾರ್ಯಕ್ರಮಗಳನ್ನು ಕೂಡ ಮಾಡುವ ಯೋಜನೆಗಳಿದ್ದು, ನನ್ನ ಹೊಸ ತಂಡದೊಂದಿಗೆ ಪ್ರಾಮಾಣಿಕವಾಗಿ, ಸಮಾಜಮುಖಿಯಾಗಿ ಸೇವೆ ಮಾಡುವೆ,ಇದು ಸೇವೆಯ ಹಬ್ಬವಾಗಲಿದೆ ಎಂದರು.
ಲೆಫ್ಟಿನೆಂಟ್‌ ಮಹೇಶ್ ಆಲೇ ಮನೆ ಮಾತಾನಾಡಿ
ಸೇವೆ ಶಾಶ್ವತವಾಗಿ ರ ಬೇಕು.
ಯೋಜನೆಗಳನ್ನು ರೂಪಿಸಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಹೆಚ್ಚು ಸದ್ಯಸರಾನ್ನಾಗಿ ಮಾಡಿ…
ಮಹಿಳೆಯರಿಗೆ ಆದ್ಯತೆ ಕೊಡಿ ಎಂದರು.
ಅಸಿಸ್ಟೆಂಟ್ ಗವರ್ನರ್ ನಾಗರಾಜ್ ಎಸ್ ಮಾತಾನಾಡಿ
ರೋಟರಿ ಬೆಳೆಯಲು ಎಲ್ಲರ ಸಹಕಾರ ಬೇಕು.ದೇಣಿಗೆ ಹೆಚ್ಚಾಗ ಬೇಕು,ನಾವು ಮಾಡುವ ಕೆಲಸಗಳು ಶಾಶ್ವತ ಪರಿಹಾರ ನೀಡುವಂತಾಗ ಬೇಕು,ಸೇವೆಯಿಂದ ತೃಪ್ತಿ ಸಾದ್ಯ..
ಜಿಲ್ಲಾ ಶಾಶ್ವತ ಕಾರ್ಯಕ್ರಮ ಕ್ಕೂ ಆದ್ಯತೆ ಕೊಡಿ ಎಂದರು.

ಕಾರ್ಯಕ್ರಮ ದಲ್ಲಿ ನಿಕಟ ಪೂರ್ವ ಅದ್ಯಕ್ಷ ಕಿಶೋರ್ ಕುಮಾರ್, ನೂತನ ಕಾರ್ಯದರ್ಶಿ ಮನೋಹರ್, ನಿಕಟ ಪೂರ್ವ, ಕಾರ್ಯದರ್ಶಿ,ಧನಂಜಯ ಬಿ ಆರ್ ,ಉಪಾಧ್ಯಕ್ಷ ವಿಜಯಕುಮಾರ್ ಜಿ. ಮುಂತಾದವರು
ಮಾತಾನಾಡಿದರು.

ಇದೇ ಸಂದರ್ಭದಲ್ಲಿ
ಹೊಸ ಸದಸ್ಯರಿಗೆ ಗೌರವಿಸಲಾಯಿತು.
ಮತ್ತು ರೋಟರಿಯಲ್ಲಿ ಸೇವೆ ಮಾಡಿವದರನ್ನು,ದೇಣಿಗೆ ನೀಡಿದವರನ್ನು ಅಭಿನಂದಿಸಲಾಯಿತು.
ಹಾಗು ರಘರಾಜ್ ಅವರು ಭಾಸ್ಕರ ಬುಲೆಟಿನ್ ಬಿಡುಗಡೆ ಮಾಡಿದರು.
ಕಾರ್ಯಕ್ರಮ ದಲ್ಲಿ ಶಶಿಕಾಂತ್ ನಾಡಿಗ್,ಆಕ್ರುತ್ ಕೆ.
ಮಂಜುನಾಥ್ ಕದಂಬ್ ಸುನೀಲ್ ಕುಮಾರ್,ಆಕಾಶ್ ,ಕ್ಲಬ್ ಎಡಿಟರ್ ರಘುನಾಥ್ ಹೆಚ್ ಕೆ ಸೇರಿದಂತೆ ಸುಮಾರು ಮುವತ್ತು ಕ್ಕೂ ಹೆಚ್ಚು ಪದಾಧಿಕಾರಿಗಳು ಹಾಜರಿದ್ದರು.
ಡಾ.ಗುಡದಪ್ಪ ಕಸಬಿ,ಸಾದ್ವಿ ಶ್ರೀಕಾಂತ್ ಕಾರ್ಯಕ್ರಮ ನಿರೂಪಿಸಿದರು.

Shivamogga News ದುರಸ್ತಿಯಾಗದ ಮಳೆಮಾಪಕ.ಶೀಘ್ರ ಸರಿಪಡಿಸಲು ಸಾಗರದಲ್ಲಿ ಕೃಷಿಕ ಸಮಾಜದಿಂದ ಆಗ್ರಹ.

0

Shivamogga News ಸ್ನೇಹಿತರೆ ನಮಸ್ಕಾರ ಈ ದಿನ 3 ಗಂಟೆಗೆ ಕೃಷಿಕ ಸಮಾಜದ ಅಧ್ಯಕ್ಷರು ವಿಜಿ ಶ್ರೀಧರ್, ಅಡಿಕೆ ಬೆಳೆಗರರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಂಡಿಕ ಮತ್ತು ಸಂಯುಕ್ತ ರೈತ ಸಂಘದ ಅಧ್ಯಕ್ಷರಾದ ಎಂ ಬಿ ಮಂಜಪ್ಪ ಹಿರೇನಲ್ಲೂರ್ ತಾಸಿಲ್ದಾರ್ ಭೇಟಿ ಮಾಡಿ ಮಳೆಮಾಪನ ರಿಪೇರಿಯ ಬಗ್ಗೆ ಮಾಹಿತಿ ಕೇಳಲಾಯಿತು,, ತಾಲೂಕಿನಲ್ಲಿ ಒಟ್ಟು ಮಳೆ ಮಾಪನ ಕೇಂದ್ರ 36, ಇದರಲ್ಲಿ 8 ಸರಿ ಇರುತ್ತವೆ, ಈವರ್ಷ 6 ರಿಪೇರಿಯಾಗಿರುತ್ತವೆ 11 ಕೆ ಟೆಂಡರ್ ಆಗಿದೆ ಇನ್ನು 11 ಟೆಂಡರ್ ಆಗಿಲ, ಜೂಲಾಯ್ ತಿಂಗಳು ಬಂದರು ಇನ್ನು ಟೆಂಡರ್ ಆಗಿಲ್ಲವೆಂದರೆ ರೈತರು ಬೆಳೆ ವಿಮೆ ಕಟ್ಟಲು ರೈತರು ಯಾವ ಆಧಾರದಲ್ಲಿ ಕಟ್ಟಬೇಕು, ಇದರ ಬಗ್ಗೆ ತಹಸಿಲ್ದಾರ್ ಪ್ರತಿಭಾ Shivamogga News ಮೇಡಂ ಅವರ ಜೊತೆ ಚರ್ಚೆ ಮಾಡಲಾಯಿತು, ಅವರ ಪ್ರಕಾರ ಸರ್ಕಾರದ ಮಟ್ಟದಲ್ಲಿ ಟೆಂಡರ್ ಆಗಬೇಕು ಇದು ನಮ್ಮ ಹಿಡಿತದಲ್ಲಿ ಇರುವುದಿಲ್ಲ ಎಂದು ಸಲಹೆ ನೀಡಿದರು, ಇದನ್ನು ರಾಜಕಾರಣಿಗಳು ಮತ್ತು ಉಸ್ತುವಾರಿ ಸಚಿವರು ರೈತರಿಗೆ ಕೂಡಲೇ ಇದರ ಬಗ್ಗೆ ಸರಿಯಾದ ರೀತಿ ಮಾಹಿತಿ ಹೇಳಬೇಕು ಕೂಡಲೇ ಹಾಳಾದ ಮಳೆ ಮಾಪನವನ್ನು ಕೂಡಲೇ ಸರಿಪಡಿಸಬೇಕು ಇಲ್ಲವಾದಲ್ಲಿ ತಹಸಿಲ್ದಾರ್ ಆಫೀಸ್ ಮುಂಬಾಗ ಧರಣಿ ಸತ್ಯಾಗ್ರಹವನ್ನು ನಡೆಸಲಾಗುವುದು