Saturday, November 23, 2024
Saturday, November 23, 2024
Home Blog Page 30

Bhoomi Hunnime Festival ನೋನಿ ಹಬ್ಬ , ಮಲೆನಾಡಿನ ವಿಶಿಷ್ಟ ಆಚರಣೆ

0
ನೋನಿ ಹಬ್ಬ , ಮಲೆನಾಡಿನ ವಿಶಿಷ್ಟ ಆಚರಣೆ
ನೋನಿ ಹಬ್ಬ , ಮಲೆನಾಡಿನ ವಿಶಿಷ್ಟ ಆಚರಣೆ

Bhoomi Hunnime Festival ಮಲೆನಾಡಿನ ಪ್ರದೇಶದಲ್ಲಿ ಅದರಲ್ಲೂ ಹೊಸನಗರ ತಾಲೂಕಿನಲ್ಲಿ ದೀಪಾವಳಿಯಲ್ಲಿ ಗ್ರಾಮ ದೇವರುಗಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಕುರಿಕೋಳಿ ಬಲಿ ನೀಡಿ ಸಂಭ್ರಮದೊಂದಿಗೆ ನೋನಿ ಆಚರಿಸುವುದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಭೂಮಿ ಹುಣ್ಣಿಮೆ ಆಗುತ್ತಿದ್ದಂತೆ ಕೆಲ ಊರುಗಳಲ್ಲಿ ಹೆಣ್ಣು ಮಕ್ಕಳು, ಮಹಿಳೆಯರು, ಗರ್ಭಿಣಿಯರು ಊರು ಬಿಡುವುದು ಪದ್ದತಿ ಕಾರಣ ಗ್ರಾಮ ದೇವರಿಗೆ ಸಾರು ಹಾಕುವ ಮೊದಲು ಅವರನ್ನು ಗ್ರಾಮದಲ್ಲಿನ ಜಮೀನಿನ ಗುಡಿಸಿಲಿನಲ್ಲಿ ಅಥವಾ ಸಂಬಂಧಿಕರ ಮನೆಗಳಿಗೆ ಕಳುಹಿಸುತ್ತಾರೆ ಇನ್ನೂ ಕೆಲವರು ಊರಿನಲ್ಲಿಯೇ ಉಳಿದರೂ ಅವರು ಋತುಮತಿಯಾದರೆ ಅಥವಾ ಸಾವನ್ನಪ್ಪಿದರೆ ಇಲ್ಲವೆ ಹೆರಿಗೆಯಾದರೆ ಆ ಊರಿನಲ್ಲಿ ನೋನಿ ಆಚರಣೆ ಇರುವುದಿಲ್ಲ. ಇನ್ನೂ ಬರುವ ವರ್ಷದ ವರೆಗೂ ಕಾಯಬೇಕಾಗುತ್ತದೆ ಇಂತಹ ಪದ್ದತಿ ಪರಂಪರಾಗತವಾಗಿ ಆಚರಣೆಯಲ್ಲಿರುವುದು ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಾಗಿ ಉಳಿಯುವರೊಂದಿಗೆ ಕಠಿಣ ಆಚರಣೆಯಿಂದಾಗಿ ಗ್ರಾಮದಲ್ಲಿ ಜಾತಿ ಬೇಧ-ಭಾವನೆ ಇಲ್ಲದೆ ಸಹೋದರತ್ವ ಸ್ನೇಹ ಸೌಹಾರ್ದತೆಯಿಂದಿರಲು ನೋನಿ ಕಾರಣವಾಗಿದೆ.

ಎಷ್ಟೇ ದ್ವೇಷ, ಅಸೂಯೆ ಇದ್ದರೂ ನೋನಿ ಆಚರಣೆಯಲ್ಲಿ ಊರು ಜನ ಸಂಘಟಿತರಾಗಿ ಒಂದು ಕಡೆ ಜಮಾಯಿಸಿ ನಿರ್ಧಾರ ಕೈಗೊಂಡು ಗ್ರಾಮ ದೇವರುಗಳಿಗೆ ಪೂಜೆ ಸಲ್ಲಿಸಿ ತಮ್ಮ ಜಮೀನಿನಲ್ಲಿನ ಫಸಲು ಹಾಗೂ ಜನ ಜಾನುವಾರುಗಳಿಗೆ ರೋಗ ರುಜಿನೆ ಬಾರದಂತೆ ರಕ್ಷಣೆ ನೀಡಿ ಗ್ರಾಮದಲ್ಲಿ ಕಳ್ಳತನ ಇನ್ನಿತರ ಅವಘಡಗಳು ಸಂಭವಿಸದಂತೆ ಊರ ಗಡಿರಕ್ಷಣೆ ಮಾಡು ತಾಯಿ ಎಂದು ಪ್ರಾರ್ಥಿಸಿ ಹರಕೆ ಒಪ್ಪಿಸುವುದು ವಾಡಿಕೆ.

ರಿಪ್ಪನ್‌ಪೇಟೆ ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯಾ ಗ್ರಾಮದವರು ಒಂದೊಂದು ದಿನ ತಮ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಕುರಿ ಕೋಳಿ ಬಲಿ ನೀಡುತ್ತಾರೆ.

Bhoomi Hunnime Festival ಈ ವಾರದಲ್ಲಿ ಪಟ್ಟಣದ ವ್ಯಾಪ್ತಿಯ ಬರುವೆ ಗಾಮದಬನ, ಚಿಕ್ಕಬೀರನಕೆರೆ ಬೂತಪ್ಪ, ಮಲ್ಲಾಪುರದ ಮರುಬಿನಕುಣಿ ಬೂತಪ್ಪ, ಯಕ್ಷಣಿ ಹೀಗೆ ಗವಟೂರು ಬರುವೆ, ಕಣಬಂದೂರು, ಬೆಳಕೋಡು, ಕುಕ್ಕಳಲೇ, ವಡಗೆರೆ, ಬಟ್ಟೆಮಲ್ಲಪ್ಪ, ಹರತಾಳು, ದೊಡ್ಡಿನಕೊಪ್ಪದ ಶೀಲವಂತ ಮಕ್ಕಳ ಚೌಡಿ, ಬೈರಾಪುರ, ಮುಡುಬ, ಬೆನವಳ್ಳಿ, ಲಕ್ಕವಳ್ಳಿ, ಮಾದಾಪುರ, ಆಲವಳ್ಳಿ, ಚೌಡೇಶ್ವರಿ ಬೀದಿಯಲ್ಲಿನ ಯಕ್ಷಿಣಿ, ತಮ್ಮಡಿಕೊಪ್ಪ, ಬಸವಾಪುರ, ಹೆದ್ದಾರಿಪುರ, ಕೊಳವಳ್ಳಿ,ಕೋಟೆತಾರಿಗ, ಬೆಳ್ಳೂರು, ಮೂಲೆಗದ್ದೆ, ವಿಜಾಪುರ, ಕಚ್ಚಿಗೆಬೈಲು, ಕೇಶವಪುರ, ಬಾಳೂರು, ಹಾಲುಗುಡ್ಡೆ ಮಾದ್ಲಾರದಿಂಬ, ನೇರಲುಮನೆ, ಬೆಳಂದೂರು, ಕೆದಲುಗುಡ್ಡೆ ಇನ್ನಿತರ ಗ್ರಾಮಗಳಲ್ಲಿ ಊರು ಹೊರಭಾಗದಲ್ಲಿ ಮತ್ತು ಜಮೀನಿನ ಮೇಲ್ಭಾಗದಲ್ಲಿ ನೆಲಸಿರುವ ಗ್ರಾಮ ದೇವರುಗಳಿಗೆ ನೋನಿಯ ಸಂದರ್ಭದಲ್ಲಿ ಹರಕೆ ಕುರಿ, ಕೋಳಿ, ಹಣ್ಣು-ಕಾಯಿ ಸಮರ್ಪಿಸುವುದು ಪದ್ದತಿ ಇದೆ.

Kannnada Sahitya Parishath ನಮ್ಮ ಮಾತೃಭಾಷೆಯನ್ನ ನಾವು ಎಂದಿಗೂ ಬಿಡಬಾರದು. ಶಾಲೆಗಳಲ್ಲಿ, ಉದ್ಯೋಗ ಸ್ಥಳಗಳಲ್ಲಿ ಕನ್ನಡವನ್ನ ಹೆಚ್ವು‌ ಮಾತಾಡಬೇಕು- ತಹಶೀಲ್ದಾರ್ ಗಿರೀಶ್

0
ನಮ್ಮ ಮಾತೃಭಾಷೆಯನ್ನ ನಾವು ಎಂದಿಗೂ ಬಿಡಬಾರದು. ಶಾಲೆಗಳಲ್ಲಿ, ಉದ್ಯೋಗ ಸ್ಥಳಗಳಲ್ಲಿ ಕನ್ನಡವನ್ನ ಹೆಚ್ವು‌ ಮಾತಾಡಬೇಕು- ತಹಶೀಲ್ದಾರ್ ಗಿರೀಶ್
ನಮ್ಮ ಮಾತೃಭಾಷೆಯನ್ನ ನಾವು ಎಂದಿಗೂ ಬಿಡಬಾರದು. ಶಾಲೆಗಳಲ್ಲಿ, ಉದ್ಯೋಗ ಸ್ಥಳಗಳಲ್ಲಿ ಕನ್ನಡವನ್ನ ಹೆಚ್ವು‌ ಮಾತಾಡಬೇಕು- ತಹಶೀಲ್ದಾರ್ ಗಿರೀಶ್

Kannnada Sahitya Parishath ನಮ್ಮ ಭಾವನೆಯನ್ನು ವ್ಯಕ್ತಪಡಿಸುವ ಹೃದಯಸ್ಪರ್ಶಿ ಭಾಷೆಯಾಗಿದೆ ಎಂದು ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಅವರು ತಿಳಿಸಿದರು.
 ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಜಾನಪದ ಪರಿಷತ್ ,ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ,ಕನ್ನಡಪರ ರೈತ ಕಾರ್ಮಿಕ ಸಂಘಟನೆ , ಎನ್‌ಎಸ್‌ಎಸ್,ಎನ್‌ಸಿಸಿ, ಸ್ಕೌಟ್ ಅಂಡ್ ಗೈಡ್, ರೋಟರಿ, ಲಯನ್ಸ್ ಕ್ಲಬ್, ರೆಡ್ ಕ್ರಾಸ್,ಸ್ತ್ರೀಶಕ್ತಿ ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡದ ರಥಯಾತ್ರೆ ಶಿವಮೊಗ್ಗ ನಗರಕ್ಕೆ ಆಗಮಿಸಿದ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಅವರು ಪುಪ್ಪನಮನ ಸಲ್ಲಿಸುವ ಮೂಲಕ ಸ್ವಾಗತಿಸಿದರು.
Kannnada Sahitya Parishath ಶಿವಮೊಗ್ಗ  ನಗರದ ಅಶೋಕ ವೃತ್ತ, ಶಿವಪ್ಪನಾಯಕ ವೃತ್ತ, ಗೋಪಿ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ಕುವೆಂಪು ರಂಗಮAದಿರದ ವರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳು ವಿವಿಧ ಕಲಾ ಮೇಳದೊಂದಿಗೆ ಅದ್ದೂರಿಯಾಗಿ ರಥಯಾತ್ರೆ ನಡೆಸಲಾಯಿತು.
 ಕುವೆಂಪು ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಭಾಷೆಯನ್ನು ಮಾತನಾಡಿದರೆ ಕೆಲವು ಶಾಲೆಗಳಲ್ಲಿ ದಂಡ ಹಾಕುತ್ತಾರೆ ಎನ್ನುವ ಸುದ್ದಿಗಳನ್ನು ನಾವು ಕೇಳಿದ್ದೇವೆ. ಕನ್ನಡ ನಾಡಿನಲ್ಲಿಯೇ ಈ ಪರಿಸ್ಥಿತಿ ಇದ್ದು, ಇದು ಅತ್ಯಂತ ವಿಷಾಧನೀಯ.ಈ ರೀತಿಯ ಘಟನೆಗಳು ನಡೆಯಬಾರದು. ಕನ್ನಡ ಭಾಷೆಯಲ್ಲಿ ನಮ್ಮ ಭಾವನೆತುಂಬಿರುತ್ತದೆ. ಅನ್ಯಭಾಷೆ ಕಲಿಕೆ ನಮ್ಮ ಜೀವನಕ್ಕೆ ಅಗತ್ಯ ಅದರೆ ನಮ್ಮ ಮಾತೃ ಭಾಷೆಯನ್ನು ನಾವು ಎಂದಿಗೂ ಬಿಡಬಾರದು ಶಾಲೆಗಳಲ್ಲಿ ಹಾಗೂ ನಮ್ಮ ಉದ್ಯೋಗದ ಸ್ಥಳಗಳಲ್ಲಿ ಕನ್ನಡಭಾಷೆಯನ್ನು ನಾವು ಹೆಚ್ಚು ಮಾತನಾಡಬೇಕು ಎಂದರು.
 ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ ಮಂಜುನಾಥ್ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 20,21, ಮತ್ತು 22 ರಂದು ನಡೆಸಲಾಗುತ್ತಿದ್ದು ಅದರ ಅಂಗವಾಗಿ ಇಡೀ ರಾಜ್ಯಾದ್ಯಂತ ಕನ್ನಡ ಜ್ಯೋತಿ ಹೊತ್ತ ರಥ ಸಂಚಾರ ಮಾಡಿ ಕನ್ನಡಿಗರಲ್ಲಿ ಜಾಗೃತಿಯನ್ನು ಮೂಡಿಸುತ್ತಿದೆ. ಕನ್ನಡವನ್ನು ಕಟ್ಟುವ ಕೆಲಸಕ್ಕೆ ಎಲ್ಲರೂ ಜೊತೆಯಾಗಬೇಕು. ವಿದ್ಯಾರ್ಥಿಗಳು ಕನ್ನಡ ಭಾಷೆ ಬಗ್ಗೆ ಅರಿವು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಅಧ್ಯಕ್ಷ ಚಂದ್ರಭೂಪಾಲ್, ಮಾಜಿ ಎಂಎಲ್ಸಿ ಆರ್ ಪ್ರಸನ್ನಕುಮಾರ್, ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಸದಸ್ಯರು, ವಿವಿಧ ಕನ್ನಡಪರ ಸಂಘಟನೆ ಸದಸ್ಯರು ಶಾಲಾ, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

CM Siddharamaiah ಪ್ರಸ್ತುತ ರಾಜ್ಯದ ಜಲಾಶಯಗಳಲ್ಲಿ 871.26 ಟಿಎಂಸಿ ನೀರು ಸಂಗ್ರಹವಿದೆ, ಕಳೆದ ವರ್ಷ 505.81 ಟಿಎಂಸಿ ಇತ್ತು- ಸಿ.ಎಂ.ಸಿದ್ಧರಾಮಯ್ಯ

0
ಪ್ರಸ್ತುತ ರಾಜ್ಯದ ಜಲಾಶಯಗಳಲ್ಲಿ 871.26 ಟಿಎಂಸಿ ನೀರು ಸಂಗ್ರಹವಿದೆ, ಕಳೆದ ವರ್ಷ 505.81 ಟಿಎಂಸಿ ಇತ್ತು- ಸಿ.ಎಂ.ಸಿದ್ಧರಾಮಯ್ಯ
ಪ್ರಸ್ತುತ ರಾಜ್ಯದ ಜಲಾಶಯಗಳಲ್ಲಿ 871.26 ಟಿಎಂಸಿ ನೀರು ಸಂಗ್ರಹವಿದೆ, ಕಳೆದ ವರ್ಷ 505.81 ಟಿಎಂಸಿ ಇತ್ತು- ಸಿ.ಎಂ.ಸಿದ್ಧರಾಮಯ್ಯ

CM Siddharamaiah ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಸಕ್ತ ಸಾಲಿನ ಹಿಂಗಾರು ಅವಧಿಯಲ್ಲಿ ಉಂಟಾದ ಮಳೆಹಾನಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಿ, ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಸುದ್ದಿಗೋಷ್ಠಿಯ ಮುಖ್ಯಾಂಶಗಳು ಹೀಗಿವೆ

ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಅಕ್ಟೋಬರ್‌ 1ರಿಂದ 25ರ ವರೆಗೆ ರಾಜ್ಯದಲ್ಲಿ ಸರಾಸರಿ 181 ಮಿ.ಮೀ ಮಳೆಯಾಗಿದೆ. ಈ ಅವಧಿಯ ವಾಸ್ತವಿಕ ಸರಾಸರಿ ಮಳೆ ಪ್ರಮಾಣ 114 ಮಿ.ಮೀ ಆಗಿದ್ದು, ಶೇ.58 ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ.

ಮುಂಗಾರು ಅವಧಿಯಲ್ಲಿ ಅಂದರೆ ಜೂನ್‌ 1ರಿಂದ ಸೆಪ್ಟಂಬರ್‌ 30ರ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಮಳೆ 852 ಮಿ.ಮೀ ಆಗಿದ್ದು, ಈ ಬಾರಿ 978 ಮಿ.ಮೀ ಮಳೆ ದಾಖಲಾಗಿದೆ. ಮುಂಗಾರು ಅವಧಿಯಲ್ಲೂ ಶೇ.15ರಷ್ಟು ಹೆಚ್ಚುವರಿ ಮಳೆಯಾಗಿತ್ತು.

ಹಿಂಗಾರು ಅವಧಿಯಲ್ಲಿ ಅಂದರೆ ಅಕ್ಟೋಬರ್‌ನಿಂದ ಡಿಸೆಂಬರ್‌ ತಿಂಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಈಗಾಗಲೇ ಮುನ್ಸೂಚನೆ ನೀಡಲಾಗಿದೆ.

CM Siddharamaiah ಪ್ರಸ್ತುತ ರಾಜ್ಯದ ಜಲಾಶಯಗಳಲ್ಲಿ 871.26 ಟಿಎಂಸಿ ನೀರು ಸಂಗ್ರಹವಿದೆ, ಕಳೆದ ವರ್ಷ 505.81 ಟಿಎಂಸಿ ಇತ್ತು- ಸಿ.ಎಂ.ಸಿದ್ಧರಾಮಯ್ಯ ರಾಜ್ಯದ ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 895.62 ಟಿಎಂಸಿ ಆಗಿದ್ದು, ಪ್ರಸ್ತುತ 871.26 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 505.81 ಟಿಎಂಸಿ ಇತ್ತು

CM Siddharamaiah ದೀಪಾವಳಿ ಪ್ರಯುಕ್ತ ವಿಶೇಷ ಗೃಹ ಉತ್ಪನ್ನಗಳನ್ನ ಮುಖ್ಯಮಂತ್ರಿಗಳಿಗೆ ನೀಡಿದ ಸಚಿವ ಮಧು ಬಂಗಾರಪ್ಪ

0
CM Siddharamaiah ದೀಪಾವಳಿ ಪ್ರಯುಕ್ತ ವಿಶೇಷ ಗೃಹ ಉತ್ಪನ್ನಗಳನ್ನ ಮುಖ್ಯಮಂತ್ರಿಗಳಿಗೆ ನೀಡಿದ ಸಚಿವ ಮಧು ಬಂಗಾರಪ್ಪ
CM Siddharamaiah ದೀಪಾವಳಿ ಪ್ರಯುಕ್ತ ವಿಶೇಷ ಗೃಹ ಉತ್ಪನ್ನಗಳನ್ನ ಮುಖ್ಯಮಂತ್ರಿಗಳಿಗೆ ನೀಡಿದ ಸಚಿವ ಮಧು ಬಂಗಾರಪ್ಪCM Siddharamaiah ದೀಪಾವಳಿ ಪ್ರಯುಕ್ತ ವಿಶೇಷ ಗೃಹ ಉತ್ಪನ್ನಗಳನ್ನ ಮುಖ್ಯಮಂತ್ರಿಗಳಿಗೆ ನೀಡಿದ ಸಚಿವ ಮಧು ಬಂಗಾರಪ್ಪ

CM Siddharamaiah ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಎಸ್.ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೀಪಾವಳಿ ಪ್ರಯುಕ್ತ ಸಂಜೀವಿನಿ ಯೋಜನೆಯಡಿ ತಯಾರಿಸಲಾದ ಗೃಹ ಉತ್ಪನ್ನಗಳನ್ನು ನೀಡಿದರು.

ಸಂಜೀವಿನಿ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಮನೆಗಳಲ್ಲಿಯೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಅವರ ಜೀವನ ಮಟ್ಟ ಸುಧಾರಿಸುವ ದೃಷ್ಟಿಯಿಂದ “ಶಿವಮೊಗ್ಗ ಜಿಲ್ಲಾ ಪಂಚಾಯತ್ ಹಾಗೂ ಸ್ವಸಹಾಯ ಗುಂಪುಗಳ ಪರವಾಗಿ ಗೃಹ ಉತ್ಪನ್ನಗಳನ್ನು ದೀಪಾವಳಿಯ ಹಬ್ಬದ ಪ್ರಯುಕ್ತ ನೀಡಲಾಯಿತು.

CM Siddharamaiah ಐಎಎಸ್ ಅಧಿಕಾರಿ ದೃಷ್ಟಿ ಜೈಸ್ವಾಲ್, ಶ್ರೀ ಲಕ್ಷ್ಮಿ ಜಲಾನಯನ ಸಂಘ ಈಳಿ, ಸಾಗರದ ಪ್ರತಿನಿಧಿ ಶ್ರೀಮತಿ ಪ್ರತಿಮಾ ಹಾಗೂ ಪ್ರಗತಿ ಸ್ವಸಹಾಯ ಸಂಘದ ಪ್ರತಿನಿಧಿ ಶ್ರೀಮತಿ ಜ್ಯೋತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Karnataka Lokayukta Shivamogga ಸರ್ಕಾರಿ ಸಿಬ್ಬಂದಿ ಹಣದ ಆಮಿಷದಿಂದ ದೂರವಿರುವುದೊಂದೇ ಅಲ್ಲ ಸನ್ನಡತೆಯಿಂದಲೂ ಕರ್ತವ್ಯ ನಿರ್ವಹಿಸಬೇಕು- ಎನ್.ಹೇಮಂತ್

0
ಸರ್ಕಾರಿ ಸಿಬ್ಬಂದಿ ಹಣದ ಆಮಿಷದಿಂದ ದೂರವಿರುವುದೊಂದೇ ಅಲ್ಲ ಸನ್ನಡತೆಯಿಂದಲೂ ಕರ್ತವ್ಯ ನಿರ್ವಹಿಸಬೇಕು- ಎನ್.ಹೇಮಂತ್
ಸರ್ಕಾರಿ ಸಿಬ್ಬಂದಿ ಹಣದ ಆಮಿಷದಿಂದ ದೂರವಿರುವುದೊಂದೇ ಅಲ್ಲ ಸನ್ನಡತೆಯಿಂದಲೂ ಕರ್ತವ್ಯ ನಿರ್ವಹಿಸಬೇಕು- ಎನ್.ಹೇಮಂತ್

Karnataka Lokayukta Shivamogga ಸರ್ಕಾರಿ ಅಧಿಕಾರಿ, ನೌಕರರು ಕೇವಲ ಭ್ರಷ್ಟಾಚಾರ ರಹಿತವಾಗಿ ಮಾತ್ರವಲ್ಲ ಜೊತೆಗೆ ತಮ್ಮ ವೃತ್ತಿಪರವಾದ ಸಣ್ಣ ಸಣ್ಣ ವಿಷಯಗಳನ್ನು ಅರಿತುಕೊಂಡು ಉತ್ತಮ ನಡತೆಯೊಂದಿಗೆ ಕರ್ತವ್ಯ ನಿರ್ವಹಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೇಮಂತ್ ಎನ್ ಹೇಳಿದರು.

ಕರ್ನಾಟಕ ಲೋಕಾಯುಕ್ತ ಶಿವಮೊಗ್ಗ ಇವರ ವತಿಯಿಂದ ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಅಧಿಕಾರಿ/ನೌಕರರು ಹಣದ ಆಮಿಷಕ್ಕೆ ಒಳಗಾಗುವುದರಿಂದ ದೂರವಿರುವುದು ಮಾತ್ರವಲ್ಲ, ತಮ್ಮ ವೃತ್ತಿಗೆ ಸಂಬಂಧಿಸಿದ ಮಾನದಂಡಗಳು, ಸಣ್ಣ ಸಣ್ಣ ವಿಷಯಗಳನ್ನು ಅರಿತು, ಸನ್ನಡತೆಯಿಂದ ಕರ್ತವ್ಯ ನಿರ್ವಹಿಸಬೇಕು.

ವಿಜಿಲೆನ್ಸ್-ಜಾಗರೂಕರಾಗಿರುವುದು ಎಂದರೇನೆಂದು ಅರ್ಥ ಮಾಡಿಕೊಳ್ಳಬೇಕು. ಇಂದಿನ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆಗಳ ಕುರಿತು ಅರಿತು, ಯಾವುದೇ ರೀತಿಯ ಸಂದೇಹಗಳಿದ್ದರೆ ಪ್ರಶ್ನಿಸಿ ಪರಿಹರಿಸಿಕೊಂಡು, ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಹನುಮಂತಪ್ಪ ಕೆ.ಟಿ ಮಾತನಾಡಿ, ಸರ್ಕಾರಿ ಅಧಿಕಾರಿ, ನೌಕರರು ತಮ್ಮ ಸೇವೆ, ಕರ್ತವ್ಯ ನಿರ್ವಹಣೆ ವೇಳೆ ತಮಗೆ ಅನ್ವಯಿಸುವ ನಿಯಮಾವಳಿಗಳಿಗೆ ಬದ್ದರಾಗಿರಬೇಕು. ತಮ್ಮ ಮಿತಿಗಳನ್ನು ಅರಿತು ಕರ್ತವ್ಯ ಅನುಷ್ಟಾನ ಮಾಡಬೇಕು.ಸರ್ಕಾರಿ ನೌಕರರು ಎಲ್ಲರಿಗೆ ಉತ್ತರದಾಯಿಯಾಗಿರುತ್ತಾರೆ. ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿದಾಗ್ಯೂ ಕೆಲವೊಮ್ಮೆ ಕೆಲ ಆಪಾದನೆಗಳಿಗೆ ಗುರಿಯಾಗುವ ಸಂದರ್ಭ ಬರುತ್ತದೆ. ಕೆಲವೊಮ್ಮೆ ಗೊತ್ತಿದ್ದೋ ಗೊತ್ತಿಲ್ಲವೋ ಲೋಪಗಳು ಆಗುವ ಸಂಭವ ಇರುತ್ತದೆ. ಆದ್ದರಿಂದ ನಮ್ಮ ಕರ್ತವ್ಯದ ಚೌಕಟ್ಟು, ಆಳ ಮತ್ತು ಮಿತಿಯನ್ನು ಅರಿತು ಕೆಲಸ ಮಾಡಬೇಕು. ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದ ಕಾಯ್ದೆ-ಕಾನೂನುಗಳ ಜ್ಞಾನ ಅತ್ಯಗತ್ಯ. ಅತ್ಯಂತ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಾ, ತಮ್ಮ ಅಧೀನ ಅಧಿಕಾರಿ, ನೌಕರರಿಗೂ ಮಾರ್ಗದರ್ಶನ ಮಾಡಬೇಕೆಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಮಾತನಾಡಿ, ಸರ್ಕಾರಿ ಅಧಿಕಾರಿ/ನೌಕರರು ಕಾನೂನಿನ ಚೌಕಟ್ಟು ಹಾಗೂ ಆತ್ಮಸಾಕ್ಷಿಯೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಕೆಲವೊಮ್ಮೆ ಕಾಯ್ದೆ-ಕಾನೂನಿನ ಆಚೆ ಕೆಲವು ವಿವೇಚನಾ ಅಧಿಕಾರ ಚಲಾಯಿಸುವ ಸಂದರ್ಭ ಒದಗಿಬರುತ್ತದೆ. ಅದನ್ನು ಸಮರ್ಪಕವಾಗಿ, ನ್ಯಾಯಬದ್ದವಾಗಿ ನಿರ್ವಹಿಸಬೇಕು. ವಿವೇಚನಾ ಅಧಿಕಾರದ ದುರುಪಯೋಗ ಆದರೆ ಭ್ರಷ್ಟಾಚಾರ ಜರುಗುತ್ತದೆ. ಸರ್ಕಾರಿ ಅಧಿಕಾರಿ/ನೌಕರರು ಮಾಡುವ ಪ್ರತಿ ಕೆಲಸದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಕರ್ತತ್ಯನಿಷ್ಟೆ ಇರಬೇಕೆಂದು ಅವರು ಕಿವಿ ಮಾತು ಹೇಳಿದರು.

Karnataka Lokayukta Shivamogga ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸವನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ನೀಡಿ ಮಾತನಾಡಿ, ನಾವೆಲ್ಲ ಲೋಕಾಯುಕ್ತ ಸಂಸ್ಥೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಲೋಕಾಯುಕ್ತ ಸಂಸ್ಥೆಯು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 1988 ಮತ್ತು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಅಡಿಯಲ್ಲಿ ತನಿಖೆ ಕೈಗೊಳ್ಳುತ್ತದೆ. ರಾಜ್ಯ ಅಧೀನವಾದ ನಿರ್ಣಯಗಳಿಗೆ ಸಂಬಂಧಿಸಿದಂತೆ ಲೋಕಯುಕ್ತ ತನಿಖೆ ಕೈಗೊಳ್ಳುತ್ತದೆ ಎಂದು ತಿಳಿಸಿದ ಅವರು ಈ ಎರಡು ಕಾಯ್ದೆಗಳ ಕುರಿತು ಮಾಹಿತಿ ನೀಡಿದರು.
ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಎನ್. ಮೃತ್ಯುಂಜಯ ಲೋಕಾಯುಕ್ತ ಕಾನೂನುಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಕಾಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಮಂಜುನಾಥ್ ಚೌದರಿ ಎಂ.ಹೆಚ್ ವಹಿಸಿದ್ದರು. ಲೋಕಾಯುಕ್ತ ಇನ್ಸ್ಪೆಕ್ಟರ್ ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು.

Rotary Club Shivamogga ರೋಟರಿ ವಲಯ11ರ ಸಾಂಸ್ಕೃತಿಕ ಸ್ಪೆರ್ಧೆಯಲ್ಲಿ ಶಿವಮೊಗ್ಗ ಸೆಂಟ್ರಲ್ ಗೆ ಚಾಂಪಿಯನ್ ಷಿಪ್

0
Rotary Club Shivamogga ರೋಟರಿ ವಲಯ11ರ ಸಾಂಸ್ಕೃತಿಕ ಸ್ಪೆರ್ಧೆಯಲ್ಲಿ ಶಿವಮೊಗ್ಗ ಸೆಂಟ್ರಲ್ ಗೆಚಾಂಪಿಯನ್ ಷಿಪ್
Rotary Club Shivamogga ರೋಟರಿ ವಲಯ11ರ ಸಾಂಸ್ಕೃತಿಕ ಸ್ಪೆರ್ಧೆಯಲ್ಲಿ ಶಿವಮೊಗ್ಗ ಸೆಂಟ್ರಲ್ ಗೆಚಾಂಪಿಯನ್ ಷಿಪ್

Rotary Club Shivamogga ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ರೋಟರಿ ವಲಯ 11ರ ಸಾಂಸ್ಕೃತಿಕ ಸ್ಪರ್ಧೆ ತುಂಗಾ ಕಲೋತ್ಸವದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವಲಯ 11ರ ಚಾಂಪಿಯನ್ ಆಗಿದೆ.
ವಲಯ 11ರ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಎಲ್ಲ ಎಂಟು ವಿಭಾಗಗಳಲಿ ಭಾಗವಹಿಸಿ ಅತಿ ಹೆಚ್ಚು ಪ್ರಶಸ್ತಿ ಗಳಿಸಿ ವಲಯದ ಚಾಂಪಿಯನ್ ಆಗಿದೆ.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ ಮಾತನಾಡಿ, ಎಲ್ಲ ವಿಭಾಗದಲ್ಲೂ ಭಾಗವಹಿಸಿದ ಸದಸ್ಯರಿಗೆ ಧನ್ಯವಾದ. ಎಲ್ಲರ ಭಾಗವಹಿಸುವಿಕೆಯಿಂದ ಹೆಚ್ಚು ಪ್ರಶಸ್ತಿ ಗಳಿಸಲು ಸಾಧ್ಯವಾಗಿದೆ. ಎಲ್ಲ ಸ್ಪರ್ಧಾಳುಗಳ ಪರಿಶ್ರಮದಿಂದ ನಾವು ಇಂದು ವಲಯದ ಚಾಂಪಿಯನ್ ಆಗಿದ್ದೇವೆ ಎಂದು ಹೇಳಿದರು.
ಸ್ಪರ್ಧಾಳುಗಳು 20 ದಿನಗಳಿಂದ ನಿರಂತರ ಸಮಯ ನೀಡಿ ಕಠಿಣ ಪರಿಶ್ರಮದಿಂದ ವಲಯದಲ್ಲಿ ಪ್ರಶಸ್ತಿ ಗಳಿಸಿದ್ದಾರೆ.

Rotary Club Shivamogga ನಮಗೆ ತರಬೇತಿ ನೀಡಿದಂತಹ ಗಾಯನ ವಿಭಾಗದಲ್ಲಿ ಪ್ರಹ್ಲಾದ್ ದೀಕ್ಷಿತ್, ನೃತ್ಯ ವಿಭಾಗದಲ್ಲಿ ಪ್ರೇಮ್ ಮತ್ತು ಅವರ ತಂಡ ಹಾಗೂ ನಾಟಕ ವಿಭಾಗದಲ್ಲಿ ಶಂಕರ್ ಮತ್ತು ಆಲಿ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.
ನವೆಂಬರ್ 10 ರಂದು ಕುಂದಾಪುರದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಭಾಗವಹಿಸಲಿದೆ.

ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಕಾರ್ಯದರ್ಶಿ ಬಿ.ವಿ.ಈಶ್ವರ್, ಕಲ್ಚರಲ್ ಚೇರ್ಮನ್ ರಾಜಶ್ರೀ ಬಸವರಾಜ್, ಆನ್ ಕ್ಲಬ್ಬಿನ ಅಧ್ಯಕ್ಷೆ ಗೀತಾ ಜಗದೀಶ್, ಕಾರ್ಯದರ್ಶಿ ಶುಭಾ ಚಿದಾನಂದ್ ಇತರರು ಇದ್ದರು.

Madhu Bangarappa ಸರಳ, ಸಹೃದಯಿ ವ್ಯಕ್ತಿ ಸುಭಾಷ್. ಅವರ ನಿಧನ ನೋವು ತಂದಿದೆ- ಸಚಿವ ಮಧು ಬಂಗಾರಪ್ಪ

0
ಸರಳ, ಸಹೃದಯಿ ವ್ಯಕ್ತಿ ಸುಭಾಷ್. ಅವರ ನಿಧನ ನೋವು ತಂದಿದೆ- ಸಚಿವ ಮಧು ಬಂಗಾರಪ್ಪ
ಸರಳ, ಸಹೃದಯಿ ವ್ಯಕ್ತಿ ಸುಭಾಷ್. ಅವರ ನಿಧನ ನೋವು ತಂದಿದೆ- ಸಚಿವ ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ನಗರ ಸಭೆ ಮಾಜಿ ಅಧ್ಯಕ್ಷರು ವೀರಶೈವ ಸಮಾಜದ ಪ್ರಮುಖರೂ ಆದ ಎನ್.ಜೆ.ರಾಜಶೇಖರ್‌ (ಸುಭಾಷ್‌) ನಿಧನಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸರಳ ಮತ್ತು ಸಹೃದಯಿ ವ್ಯಕ್ತಿಯಾಗಿದ್ದ ಸುಭಾಷ್‌ ನಿಧನ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ನೋವು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
Madhu Bangarappa ಶಿವಮೊಗ್ಗ ಜಿಲ್ಲೆಯ ಉದ್ಯಮ ವಲಯಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿರುವ ರಾಜಶೇಖರ್‌ ಕುಟುಂಬ ರಾಜಕೀಯವಾಗಿಯೂ ಸೇವೆ ಸಲ್ಲಿಸಿದೆ. ಶುಭಾಷ್‌ ಹಿರಿಯ ಸೋದರ ಎನ್.ಜೆ.ವೀರಣ್ಣ ಅವರು ತಮ್ಮ ಕುಟುಂಬಕ್ಕೆ ಆತ್ಮೀಯರಾಗಿದ್ದು, ತಂದೆ ಬಂಗಾರಪ್ಪ ಅವರಿಗೆ ಅತ್ಯಾಪ್ತರಾಗಿದ್ದರು ಎಂದು ಹೇಳಿರುವ ಸಚಿವರು,ಸುಭಾಷ್‌ ನಿಧನದಿಂದ ಶಿವಮೊಗ್ಗ ಜಿಲ್ಲೆ ಒಬ್ಬ ಸಭ್ಯ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

MESCOM ಶಿವಮೊಗ್ಗ ನಗರ ಉಪವೀಭಾಗೀಯ ಮೆಸ್ಕಾಂ ಕಚೇರಿಯಲ್ಲಿ ಅಕ್ಟೋಬರ್ 29 ರಂದು ಸಾರ್ವಜನಿಕ ಸಂಪರ್ಕ ಸಭೆ

0
MESCOM ಶಿವಮೊಗ್ಗ ನಗರ ಉಪವೀಭಾಗೀಯ ಮೆಸ್ಕಾಂ ಕಚೇರಿಯಲ್ಲಿ ಅಕ್ಟೋಬರ್ 29 ರಂದು ಸಾರ್ವಜನಿಕ ಸಂಪರ್ಕ ಸಭೆ
MESCOM ಶಿವಮೊಗ್ಗ ನಗರ ಉಪವೀಭಾಗೀಯ ಮೆಸ್ಕಾಂ ಕಚೇರಿಯಲ್ಲಿ ಅಕ್ಟೋಬರ್ 29 ರಂದು ಸಾರ್ವಜನಿಕ ಸಂಪರ್ಕ ಸಭೆ

MESCOM ಶಿವಮೊಗ್ಗ ನಗರ ಉಪ ವಿಭಾಗ-3ರ ವ್ಯಾಪ್ತಿಯಲ್ಲಿ ಅ.29 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ್ನ 1.00 ರವರೆಗೆ ಗುಡ್‌ಲಕ್ ಸರ್ಕಲ್ ಹತ್ತಿರ, ಎಸ್.ವಿ.ಬಡಾವಣೆಯ ಮೆಸ್ಕಾಂ ಕಚೇರಿಯಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದ್ದು, ಈ ವ್ಯಾಪ್ತಿಯ ಗ್ರಾಹಕರು ತಮ್ಮ ಅಹವಾಲುಗಳನ್ನು ನೀಡಬಹುದಾಗಿದೆ ಎಂದು ಮೆಸ್ಕಾಂ ಇಲಾಖೆ ತಿಳಿಸಿದೆ.

B. Y. Raghavendra ರೈಲ್ವೆ ಕೋಚಿಂಗ್ ಡಿಪೊ ಆರಂಭದ ನಂತರ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಸಂಪರ್ಕ ಸಾಧ್ಯವಾಗಲಿದೆ- ಸಂಸದ ರಾಘವೇಂದ್ರ

0
ರೈಲ್ವೆ ಕೋಚಿಂಗ್ ಡಿಪೊ ಆರಂಭದ ನಂತರ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಸಂಪರ್ಕ ಸಾಧ್ಯವಾಗಲಿದೆ- ಸಂಸದ ರಾಘವೇಂದ್ರ
ರೈಲ್ವೆ ಕೋಚಿಂಗ್ ಡಿಪೊ ಆರಂಭದ ನಂತರ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಸಂಪರ್ಕ ಸಾಧ್ಯವಾಗಲಿದೆ- ಸಂಸದ ರಾಘವೇಂದ್ರ

B. Y. Raghavendra ಬೀರೂರು ಮತ್ತು ಶಿವಮೊಗ್ಗ ರೈಲ್ವೆ ಮಾರ್ಗದ ಡಬ್ಲಿಂಗ್ ಕಾಮಗಾರಿಗೆ ಶೀಘ್ರದಲ್ಲಿ 1,900 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದ್ದು, ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ಆರಂಭದ ನಂತರ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು ಸಂಪರ್ಕ ಸಾಧ್ಯವಾಗಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಡಬ್ಲಿಂಗ್ ಕೆಲಸ, ಶಿವಮೊಗ್ಗ ಮತ್ತು ರಾಣೆಬೆನ್ನೂರು ರೈಲು ಮಾರ್ಗ ಪೂರ್ಣವಾದರೆ ರೈಲ್ವೆ ನಕ್ಷೆಯಲ್ಲಿ ಶಿವಮೊಗ್ಗ ಹೆಚ್ಚು ಪ್ರಗತಿ ಸಾಧಿಸಲಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರಂತರವಾಗಿ ಗಮನ ವಹಿಸಿದ ಪರಿಣಾಮ ಮಹತ್ತರ ಯೋಜನೆಗಳನ್ನು ಶಿವಮೊಗ್ಗಕ್ಕೆ ತರಲು ಸಾಧ್ಯವಾಯಿತು. ಎಲ್ಲ ಹಂತಗಳಲ್ಲಿ ಗಮನಿಸಿದರೆ ಕಾಮಗಾರಿಗಳು ಶೀಘ್ರವಾಗಿ ಅನುಷ್ಠಾನವಾಗುತ್ತದೆ. ಶಿವಮೊಗ್ಗದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕ ಮತ್ತು ಸಾಫ್ಟ್ವೇರ್ ಉದ್ಯಮಗಳ ಸ್ಥಾಪನೆಗೆ ಸಂಬಂಧಿಸಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹೆಚ್ಚು ಆಸಕ್ತಿ ವಹಿಸುತ್ತಿದೆ. ಅದಕ್ಕೆ ಪೂರಕವಾಗಿ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ಹೊಸನಗರ ಮತ್ತು ಕೊಲ್ಲೂರು ರಸ್ತೆ, ತ್ಯಾವರೆಕೊಪ್ಪ ಮತ್ತು ತಾಳಗುಪ್ಪ ಚತುಷ್ಪಥ ರಸ್ತೆಯು ಮುಂದಿನ ದಿನಗಳಲ್ಲಿ ಗಮನ ಸೆಳೆಯಲಿವೆ. ಸಿಗಂದೂರು ಸೇತುವೆ ಇನ್ನು ಐದಾರು ತಿಂಗಳಲ್ಲಿ ಲೋಕಾರ್ಪಣೆ ಆಗಲಿದೆ. ಸಂಘವು ಆಯೋಜಿಸಲು ಉದ್ದೇಶಿಸಿರುವ ಶಿವಮೊಗ್ಗ ಹಬ್ಬ ಪರಿಕಲ್ಪನೆ ಉತ್ತಮವಾಗಿದ್ದು, ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ನೈಟ್ ಲ್ಯಾಂಡಿಂಗ್ ಕಾಮಗಾರಿಯು ಶಿವಮೊಗ್ಗದಲ್ಲಿ ಇನ್ನೊಂದು ತಿಂಗಳಲ್ಲಿ ಪೂರ್ಣವಾಗಲಿದೆ. ದೆಹಲಿ, ಅಹಮದಾಬಾದ್ ನಡುವೆ ಶಿವಮೊಗ್ಗದಿಂದ ನೇರ ವಿಮಾನಯಾನ ಆರಂಭವಾಗಲಿದೆ. ಮುಂಬೈ ನಗರಕ್ಕೆ ಸಂಬಂಧಿಸಿ ವಿಮಾನ ಸಂಪರ್ಕಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಕೊಡುಗೆ ಅಪಾರ. ರಸ್ತೆ, ರೈಲು, ವಿಮಾನ ಸಂಪರ್ಕ ಕ್ಷೇತ್ರಗಳಲ್ಲಿ ಪ್ರಮುಖ ಯೋಜನೆಗಳು ಅನುಷ್ಠಾನಗೊಂಡಿವೆ. ಜಿಲ್ಲೆಯ ಜನರ ಕನಸು ನನಸಾಗುತ್ತಿದೆ. ಜಿಲ್ಲೆಯ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ತಂದಿದ್ದಾರೆ ಎಂದು ಹೇಳಿದರು.

B. Y. Raghavendra ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ಉದ್ಯಮಿಗಳಿಗೆ ಉತ್ತಮ ವೇದಿಕೆ ಒದಗಿಸುವ ಆಶಯದಿಂದ ಡಿಸೆಂಬರ್‌ನಲ್ಲಿ ಶಿವಮೊಗ್ಗ ಎಕ್ಸ್ಪೋ ಆಯೋಜಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ವಾಣಿಜ್ಯ ಕೈಗಾರಿಕಾ, ಪ್ರವಾಸೋದ್ಯಮ ಪ್ರೋತ್ಸಾಹಿಸಲು 2025ರ ಏಪ್ರಿಲ್‌ನಲ್ಲಿ ಶಿವಮೊಗ್ಗ ಹಬ್ಬ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಶಿವಮೊಗ್ಗ ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅವರು ನಿರಂತರವಾಗಿ ಯೋಜನೆಗಳ ಬಗ್ಗೆ ಆಲೋಚಿಸಿ ಅನುಷ್ಠಾನ ಮಾಡಲು ಪರಿಶ್ರಮ ವಹಿಸಿದ್ದಾರೆ. ಪರಿಣಾಮ ಶಿವಮೊಗ್ಗ ಸಮಗ್ರ ಅಭಿವೃದ್ಧಿಯಲ್ಲಿ ಸಾಗುತ್ತಿದೆ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಸುರೇಶ್ ಎ.ಎಂ., ಖಜಾಂಚಿ ಮನೋಹರ್ ಆರ್., ಜಂಟಿ ಕಾರ್ಯದರ್ಶಿ ಸುಕುಮಾರ್, ಪ್ರಮುಖರಾದ ಉದಯಕುಮಾರ್ ಎಸ್.ಎಸ್., ರುದ್ರೇಶ್.ಪಿ, ವಸಂತ ಹೋಬಳಿದಾರ್, ಪ್ರದೀಪ್ ಎಲಿ, ಗಣೇಶ ಅಂಗಡಿ, ವಿ.ಕೆ.ಜೈನ್, ಕಿರಣ್ ಕುಮಾರ್, ಶಿವಕುಮಾರ್, ಶಂಕರ್ ಎಸ್.ಪಿ., ಸಿ.ಎ.ಶರತ್ ಇತರರಿದ್ದರು.

Karnataka Defense Forum ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಕರವೇ ಕಿರಣ್ ನೇಮಕ

0
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಕರವೇ ಕಿರಣ್ ನೇಮಕ
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಕರವೇ ಕಿರಣ್ ನೇಮಕ

Karnataka Defense Forum ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನೂತನ ಜಿಲ್ಲಾ ಅಧ್ಯಕ್ಷರಾಗಿ ಕರವೇ ಕಿರಣ್ ನೇಮಕ ಮಾಡಲಾಗಿದೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಪಿ ಕೃಷ್ಣೇಗೌಡರು ಸಾಮಾಜಿಕ  ಸೇವೆಯನ್ನು ಪರಿಗಣಿಸಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ  ತಾವುಗಳು ನಾಡು-ನುಡಿ ಜಲ ಭಾಷೆ ಗಡಿ ವಿಚಾರ ರೈತರಪರವಾಗಿ ವಿದ್ಯಾರ್ಥಿಪರವಾಗಿ ನಿರಂತರವಾಗಿ ಇರುವಂತೆ ಹಾಗೂ ಸಂಘಟನೆಯ ಇತರೆ ಪದಾಧಿಕಾರಿಗಳ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಸಹ ವಹಿಸಿ ಸಂಘಟನೆಯನ್ನು ಬಲಪಡಿಸುವಂತೆ ಆದೇಶಿಸಿದ್ದಾರೆ.