Saturday, February 28, 2026
Saturday, February 28, 2026
Home Blog Page 287

Shivaganga Yoga Center ಉತ್ತಮ ಆರೋಗ್ಯ ಸಾಮರಸ್ಯ ಶಾಂತಿಗಾಗಿ, ಪ್ರತಿನಿತ್ಯ ಯೋಗ ಪ್ರಾಣಾಯಾಮ ಧ್ಯಾನ ಮಾಡಲೇಬೇಕು: ಸಿ. ಎಸ್. ಷಡಕ್ಷರಿ

0

Shivaganga Yoga Center ನಾವುಗಳು ಉತ್ತಮ ಆರೋಗ್ಯ ಸಾಮರಸ್ಯ ಶಾಂತಿ ನೆಮ್ಮದಿಗಾಗಿ. ಪ್ರತಿನಿತ್ಯ ಯೋಗ ಪ್ರಾಣಾಯಾಮ ಧ್ಯಾನ ಮಾಡಲೇಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ ಎಸ್ ಷಡಕ್ಷರಿ ಅವರು ಅಭಿಮತ ವ್ಯಕ್ತಪಡಿಸಿದರು‌

ಶ್ರೀ ಶಿವಗಂಗಾ ಯೋಗ ಕೇಂದ್ರ. ಜಿಲ್ಲಾ ಸರ್ಕಾರಿ ನೌಕರರ ಸಂಘ ಶಿವಮೊಗ್ಗ ಇವರುಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ದಶಮಾನೋತ್ಸವದ ಅಂಗವಾಗಿ ಸರ್ಕಾರಿ ನೌಕರರ ವಿಕಾಸ ಕೇಂದ್ರ ಬಸವನಗುಡಿಯಲ್ಲಿ ಹಮ್ಮಿಕೊಳ್ಳಲಾದ 15 ದಿನಗಳ
ಉಚಿತ ಯೋಗಾಸನ ಪ್ರಾಣಯಾಮ ಹಾಗೂ ಧ್ಯಾನ ಮತ್ತು ಆರೋಗ್ಯ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಒತ್ತಡದ ಪ್ರಪಂಚದಲ್ಲಿ ಯೋಗ ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿರುತ್ತದೆ ಇಂದು ಚಿಕ್ಕ ಚಿಕ್ಕ ವಯಸ್ಸಿನಲ್ಲಿ ಹೃದಯದಿಂದ ಸಾಕಷ್ಟು ಜನ ನಿಧನರಾಗುತ್ತಿದ್ದಾರೆ ಈ ನಿಟ್ಟಿನಲ್ಲಿ ಆರೋಗ್ಯದ ಮುಂದೆ ಬೇರೆ ಯಾವ ಸಂಪತ್ತು ಇಲ್ಲ ಪ್ರತಿನಿತ್ಯ ನಾವು ಯೋಗ ಅಭ್ಯಾಸ ಮಾಡುವುದರ ಜೊತೆಗೆ ಉತ್ತಮ ಜೀವನ ಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದು ನುಡಿದರು .

ರಾಷ್ಟ್ರ ಪ್ರಶಸ್ತಿ ಹಾಗೂ ರಾಜುೋತ್ಸವ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಸಿವಿ ರುದ್ರಾರಾಧ್ಯ ರವರು ಶಿಬಿರದ ನೇತೃತ್ವವನ್ನು ವಹಿಸಿ ಮಾತನಾಡುತ್ತಾ ಯೋಗದಿಂದ ಮಾನಸಿಕ ಹಾಗೂ ದೈಹಿಕ ಸದೃಢತೆಯ ಜೊತೆಗೆ ನಮ್ಮ ದೇಹದಲ್ಲಿ ಇರುವ ಸಣ್ಣ ಪುಟ್ಟ ಖಾಯಿಲೆಗಳು ನಮಗೆ ಗೊತ್ತಿಲ್ಲದ ಹಾಗೆ ಮಾಯವಾಗುತ್ತವೆ ಪ್ರತಿನಿತ್ಯ ಯೋಗ ಅಭ್ಯಾಸದಿಂದ ದೀರ್ಘಾಯುಷ್ಯ ಉಳ್ಳವರಾಗುತ್ತೇವೆ ಹಾಗೂ ಮುಖದಲ್ಲಿ ಸದಾ ಕಾಂತಿ ಇರುತ್ತದೆ ಈ ನಿಟ್ಟಿನಲ್ಲಿ ಪ್ರತಿ ಮನೆ ಮನೆಗಳಿಗೂ ಸಹ ಯೋಗವನ್ನು ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಬಡಾವಣೆಗಳಲ್ಲೂ ಸಹ ನಮ್ಮ ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾದ ಎಸ್ ರುದ್ರೇಗೌಡರ ಮಾರ್ಗದರ್ಶನದ ಮುಖಾಂತರ ಎಲ್ಲಾ ಬಡಾವಣೆಗಳಲ್ಲೂ ಹಮ್ಮಿಕೊಳ್ಳಲು
ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಬಡಾವಣೆ ನಿವಾಸಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ನುಡಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಆರ್ ಮೋಹನ್ ಕುಮಾರ್ ಅವರು ಮಾತನಾಡುತ್ತಾ ರಾಜ್ಯಮಟ್ಟದ ಕ್ರೀಡೆಗಳಲ್ಲಿ ಯೋಗವನ್ನು ಸಹ ನಾವು ಸೇರಿಸಿ ಅದರ ಬಗ್ಗೆಯೂ ಸಹ ಜಾಗೃತಿಯನ್ನು ಮೂಡಿಸಿದ್ದೇವೆ ಆದ್ದರಿಂದ ಇಲ್ಲಿ ನಿರಂತರವಾಗಿ ಯೋಗವನ್ನು ನಡೆಸಲು ನಮ್ಮ ಸಂಪೂರ್ಣ ಸಹಕಾರವಿದೆ ಎಂದು ನುಡಿದರು.

Shivaganga Yoga Center ಶಿವಗಂಗಾ ಯೋಗ ಕೇಂದ್ರದ ಟ್ರಸ್ಟಿ ಗಳಾದ. ಕೆ ಕಾಂತೇಶ್ ಅವರು ಮಾತನಾಡುತ್ತ ಈಗಾಗಲೇ ಶಿವಮೊಗ್ಗ ನಗರದಲ್ಲಿ 35 ಕೇಂದ್ರಗಳಲ್ಲಿ ಉಚಿತವಾಗಿ ಯೋಗ ಶಿಕ್ಷಣ ನಡೆಯುತ್ತಿದ್ದು ಇಂದು 36ನೇ ಕೇಂದ್ರ ಪ್ರಾರಂಭವಾಗಿದೆ. ಇಂತಹ ಶಿಬಿರಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾದ ಎಸ್ ರುದ್ರೇಗೌಡರು ವಹಿಸಿ ಮಾತನಾಡುತ್ತ ನಮ್ಮ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಆಶಯದಂತೆ 180ಕ್ಕೂ ಹೆಚ್ಚು ದೇಶಗಳು ಯೋಗವನ್ನು ಒಪ್ಪಿ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದಾರೆ ಅದರಲ್ಲಿ 44 ಮುಸ್ಲಿಂ ರಾಷ್ಟ್ರಗಳು ಸಹ ಯೋಗಭ್ಯಾಸವನ್ನು ಒಪ್ಪಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ನಮ್ಮ ಶಿವಗಂಗಾ ಯೋಗ ಕೇಂದ್ರ ಪ್ರಾರಂಭವಾಗಿ 15 ವರ್ಷಗಳು ಕಳೆದಿವೆ. ಈ ನಿಟ್ಟಿನಲ್ಲಿ ಅನೇಕ ಯೋಗದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಯೋಗ ಶಿಕ್ಷಕರಾದ ಕಾಟನ್ ಜಗದೀಶ್ ಕಾರ್ಯಕ್ರಮವನ್ನ ನಿರೂಪಿಸಿದರು ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ಜಿ ಸುಮತಿ ಕುಮಾರಸ್ವಾಮಿ
ಯೋಗ ಶಿಕ್ಷಕರಗಳಾದ ಜಿಎಸ್ ಓಂಕಾರ್. ನೀಲಕಂಠ ರಾವ್. ಹರೀಶ್. ವಿಜಯ ಕೃಷ್ಣ. ಬಾಳೆಕಾಯಿ ಮೋಹನ್ ಶ್ರೀಮತಿ ವಿಜಯ ಬಾಯರ್. ಜಿ ವಿಜಯಕುಮಾರ್ ಶ್ರೀಮತಿ ನಾಗರತ್ನ ಚಂದ್ರಶೇಖರಯ್ಯ ಹಾಗೂ ಯೋಗ ಬಂಧುಗಳು ಉಪಸ್ಥಿತರಿದ್ದು ಲಕ್ಷ್ಮೀನಾರಾಯಣ್ ಕಾರ್ಯಕ್ರಮವನ್ನು ವಂದಿಸಿದರು.

Hotel Mathura Paradise ಆತಿಥ್ಯ ರತ್ನ ಪ್ರಶಸ್ತಿ ಪುರುಸ್ಕೃತ ಎನ್ ಗೋಪಿನಾಥ್ ಅವರಿಗೆ ಕಾರ್ಮಿಕರಿಂದ ಸನ್ಮಾನ

0

Hotel Mathura Paradise ಹೋಟೆಲ್ ಮಥುರಾ ಪ್ಯಾರಡೈಸ್ ನ ಮಾಲೀಕರಾದ ಎನ್ ಗೋಪಿನಾಥ್ ರವರಿಗೆ ಅತ್ಯಂತ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾದ ಆತಿಥ್ಯ ರತ್ನ ಪ್ರಶಸ್ತಿ ದೊರಕಿದ ಹಿನ್ನೆಲೆಯಲ್ಲಿ ಇಂದು ಮಥುರಾ ಪ್ಯಾರಡೈಸ್ ಸಿಬ್ಬಂದಿ ವರ್ಗದವರಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು.

Hotel Mathura Paradise ಕಾರ್ಯಕ್ರಮದಲ್ಲಿ ಮಥುರ ಫುಡ್ ಪ್ರಾಡಕ್ಟ್ ನ ಸಂಸ್ಥಾಪಕರಾದ ಡಾ. ಬಿ ವಿ ಲಕ್ಷ್ಮೀದೇವಿ ಗೋಪಿನಾಥ್. ಸಿಬ್ಬಂದಿಯವರಾದ ಮಥುರಾ ನಾಗರಾಜ್. ಗಜೇಂದ್ರ. ಜಯಶ್ರೀ. ರವಿಕುಮಾರ್. ಅಭಿಷೇಕ್ ಶೆಟ್ಟಿ. ಸಂದೇಶ್. ಸಂದೀಪ್. ಭವಾನಿ. ಕವಿತಾ.
ಹಾಗೂ ಮೊದಲಾದವರು ಉಪಸ್ಥಿತರಿದ್ದರು.

Shikaripura Social Welfare Department ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

0

Shikaripura Social Welfare Department ಶಿಕಾರಿಪುರ ಸಮಾಜ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕಾಗಿ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವ ಮೊದಲು ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ https://scholarships.gov.in ನಲ್ಲಿ ಒನ್‌ಟೈಮ್ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ರಚಿಸುವಂತೆ ಶಿಕಾರಿಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶಿಕಾರಿಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕರ ಕಚೇರಿ ದೂ.ಸಂ.: 08187-295026 ನ್ನು ಸಂಪರ್ಕಿಸುವುದು.

Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರಿಂದ ಅವರ ಮನೋಸಾಮರ್ಥ್ಯ ವೃದ್ಧಿ:ಪಿಜಿಆರ್ ಸಿಂಧ್ಯಾ

0

Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರಿಂದ ಅವರ ಮನೋಸಾಮರ್ಥ್ಯ ವೃದ್ಧಿಯಾಗುತ್ತದೆ. ರಾಜ್ಯಮಟ್ಟದ ರ‍್ಯಾಲಿಗಳಿಂದ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಉತ್ತಮ ಅವಕಾಶ ಲಭಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ, ಮಾಜಿ ಗೃಹಮಂತ್ರಿ ಪಿಜಿಆರ್ ಸಿಂಧ್ಯಾ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ, ಜಿಲ್ಲಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಮೂರು ದಿನಗಳ ರಾಜ್ಯಮಟ್ಟದ ಮುಕ್ತದಳದ ರ‍್ಯಾಲಿಯಲ್ಲಿ ಮಾತನಾಡಿ, ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನೀಯ. ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮ ನಡೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ತರಬೇತುದಾರರಿಗೆ ಅಂತರಾಷ್ಟ್ರೀಯ ಮಟ್ಟದ ವಿಶೇಷ ತರಬೇತಿ ನೀಡಲು ರಾಜ್ಯ ಸಂಸ್ಥೆ ಸಜ್ಜಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಅನೇಕ ವರ್ಷಗಳಿಂದ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಸಮಾಜಮುಖಿ ಕಾರ್ಯಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡುತ್ತಿದೆ. ಮಕ್ಕಳಿಗೆ ಶಿಕ್ಷಣದ ಜತೆ ಇಂತಹ ಚಟುವಟಿಕೆಗಳು ಅತ್ಯಂತ ಅವಶ್ಯಕ ಎಂದು ಹೇಳಿದರು.
ರಾಜ್ಯದ ವಿವಿಧೆಡೆಯಿಂದ 250ಕ್ಕೂ ಹೆಚ್ಚು ಮಕ್ಕಳು ಆಗಮಿಸಿದ್ದರು. ವಸ್ತು ಪ್ರದರ್ಶನವನ್ನು ಕೆ.ವಿ.ಶ್ಯಾಮಲಾ ಉದ್ಘಾಟಿಸಿದರು. ಸಾಹಸ ಚಟುವಟಿಕೆಗಳನ್ನು ಎನ್.ಆರ್.ಅಚಿ ಪ್ರಕಾಶ್ ಉದ್ಘಾಟಿಸಿದರು.
Bharat Scouts and Guides ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ರಾಜ್ಯ ಘಟಕದ ಆಯುಕ್ತರ ಸಲಹೆ, ಮಾರ್ಗದರ್ಶನದ ಮೇರೆಗೆ ಮೂರು ದಿನಗಳ ವಿಶೇಷ ರ‍್ಯಾಲಿ ಅತ್ಯಂತ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಕೆ.ರವಿ, ಚೂಡಾಮಣಿ ಪವಾರ್, ಕಾರ್ಯದರ್ಶಿ ಕೆ.ವಿ.ಚಂದ್ರಶೇಖರ್, ಎಸ್.ಜಿ.ಆನಂದ್, ಶಿವಶಂಕರ್, ಪರಮೇಶ್ವರಯ್ಯ, ರಾಜೇಶ್ ಅವಲಕ್ಕಿ, ಲಕ್ಷ್ಮೀ ರವಿ, ದೊರೆ, ವೈ.ಆರ್.ವೀರೇಶಪ್ಪ, ಕೃಷ್ಣ ಸ್ವಾಮಿ, ರಾಘವೇಂದ್ರ, ಶ್ರೀನಿವಾಸ ವರ್ಮ, ಗೀತಾ ಚಿಕಮಠ್, ಕಾತ್ಯಾಯಿನಿ, ಗೀತಾ ನಟರಾಜ್, ರಾಜ್ಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Shikaripura Horticulture Department ಶಿಕಾರಿಪುರ: ತೋಟಗಾರಿಕೆ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ

0

Shikaripura Horticulture Department ಶಿಕಾರಿಪುರ ತೋಟಗಾರಿಕೆ ಇಲಾಖೆಯು 2025-26ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಸಹಾಯಧನ ಪಡೆದುಕೊಳ್ಳಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದ್ದು, ರೈತರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಶಿಕಾರಿಪುರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಂಗಾಂಶ ಬಾಳೆ, ತರಕಾರಿ, ಹೂ ಬೆಳೆ, ಕಾಳುಮೆಣಸು ಪ್ರದೇಶ ವಿಸ್ತರಣೆ, ಕೃಷಿಹೊಂಡ, ಕಳೆ ಚಾಪೆ (Weed Mat) ಟ್ರ‍್ಯಾಕ್ಟರ್ (20 ಪಿಟಿಓ), ಕೃಷಿಹೊಂಡ, ಸಮಗ್ರ ಪೀಡೆ ನಿರ್ವಹಣೆ ಮತ್ತು ರಾಜ್ಯದೊಳಗೆ ಹಮ್ಮಿಕೊಳ್ಳುವ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ತಾಳೆ ಬೆಳೆ ಯೋಜನೆಯಡಿ ಪ್ರದೇಶ ವಿಸ್ತರಣೆ (ಸ್ವದೇಶಿ ಮತ್ತು ವಿದೇಶಿ ತಳಿಗಳು) ಅಂತರ ಬೆಳೆ, ತಾಳೆ ಹಣ್ಣು ಕೊಯ್ಯಲು ಸಹಾಯಧನ ಕಾರ್ಯಕ್ರಮಗಳಿಗೆ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹಣ್ಣಿನ ಬೆಳೆಗಳು, ತರಕಾರಿ ಮತ್ತು ತೋಟದ ಬೆಳೆಗಳಿಗೆ ಹನಿ ನೀರಾವರಿ ಮತ್ತು ತುಂತುರು ನೀರಾವರಿ ಆಳವಡಿಸಿಕೊಳ್ಳಲು ಆಸಕ್ತ ರೈತರಿಂದ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಕಾಳುಮೆಣಸು ಪ್ರದೇಶ ವಿಸ್ತರಣೆ ಕೈಗೊಳ್ಳಲು ಆಸಕ್ತ ರೈತರಿಂದ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೇಂದ್ರ ಪುರಸ್ಕೃತ ಯೋಜನೆಯಾದ ಕೃಷಿ ವಿಸ್ತರಣೆ ಮತ್ತು ತರಬೇತಿ ಅಭಿಯಾನ ಯೋಜನೆಯಡಿ ಮತ್ತು ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಾಂತ್ರೀಕರಣ ಯೋಜನೆಯಡಿ ಅಡಿಕೆ ಸಿಪ್ಪೆ ಸುಲಿಯುವ ಯಂತ್ರ, ತೆಂಗಿನ ಮರ ಹತ್ತುವ ಯಂತ್ರ, ಕಳೆ ಕೊಚ್ಚುವ ಯಂತ್ರ, ಟ್ರ‍್ಯಾಕ್ಟರ್ ಟ್ರೈಲರ್ ಮತ್ತು ಇನ್ನಿತರೆ ಯಂತ್ರೋಪಕರಣಗಳಿಗೆ ಸಹಾಯಧನ ನೀಡಲು ಆಸಕ್ತ ರೈತರಿಂದ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

Shikaripura Horticulture Department ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ನೀರು ಸಂಗ್ರಹಣಾ ಘಟಕ, ಪ್ಲಾಸ್ಟಿಕ್ ಕ್ರೇಟ್ಸ್, ಸೋಲಾರ್ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಆಸಕ್ತ ರೈತರಿಂದ ಸಹಾಯಧನ ಕೋರಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸಲ್ಲಿಸಲು ದಿನಾಂಕ: 16/06/2025 ಕೊನೆಯ ದಿನಾಂಕ ಆಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಯಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಮತ್ತು ಶಿಕಾರಿಪುರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸುವುದು.

Klive Special Article ಕವಿ ಎಚ್ ಎಸ್ ವಿ.ಗೆ ಕಾವ್ಯಾರ್ಥ ನಮನ

0

ಡಾ.ಎನ್.ಸುಧೀಂದ್ರ.
ಪ್ರಧಾನ ಸಂಪಾದಕ.
ಕೆ ಲೈವ್ ಪೋರ್ಟಲ್.
ಶಿವಮೊಗ್ಗ

Klive Special Article ಇತ್ತೀಚೆಗೆ ನಿಧನರಾದ ಕನ್ನಡದ ಖ್ಯಾತ ಕವಿ ಡಾ ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಪ್ರಸಿದ್ಧ ” ಚಿನ್ನಾರಿ ಮುತ್ತ” ಸಿನಿಮಾ ಗೀತೆ.
ಓದುತ್ತಿದ್ದಂತೆ ನಮಗರಿವಿಲ್ಲದೇ ಏನೇಲ್ಲಾ ನಮ್ಮ ಬಳಿಯುದ್ದರೂ ಅದಕ್ಕೆ ಪೂರಕ,ಪೋಷಕ ಅಂಶಗಳಿರಬೇಕು ಎಂಬ‌ ಅನಿವಾರ್ಯ,ನಿಷ್ಠುರ ಸತ್ಯವನ್ನ ನಮಗೆ ಸರಳ ತಿಳಿಸುವ‌ ಗೀತೆ. ಓದುತ್ತಾ ಹೋಗಿ…
ನಿಮ್ಮದೇ ಯೋಚನಾ‌ ಲಹರಿಗೆ ಚಿಂತನೆಯ ಸಾಮಗ್ರಿ ಒದಗಿಸುವ‌ ಶಕ್ತಿ‌ ಸಾಹಿತ್ಯಕ್ಕಿದೆ.

ಕತೆ,ಕವಿತೆ,ನಾಟಕ, ಮಹಾ ಕಥನ‌ ಕಾವ್ಯ, ವಿಮರ್ಶೆ, ಚಲನಚಿತ್ರ ಕತೆ, ಸಂಭಾಷಣೆ, ನಿರ್ದೇಶನ., ಗಾಯನ, ಮಾತುಗಾರಿಕೆ…ಎಲ್ಲ ಅರಗಿಸಿಕೊಂಡ ಅಪೂರ್ವ‌‌ ಮಾನವೀಯ ಸಂವೇದನೆಗಳ‌ ಸಮ್ಮಿಳನ ಡಾ.ಎಚ್ಎಸ್ ವಿ.

ನೈಸರ್ಗಿಕವಾಗಿ‌ ಜನಿಸುವ ಮನುಷ್ಯ ಜೀವಿಗಳಲ್ಲೆ ಬುದ್ಧಿವಂತ.ನಿಜ. ಆದರೆ ಬುದ್ದಿವಂತಿಕೆ ಒಂದೇ ಸಾಕೆ? ಅದನ್ನ ಅಳವಡಿಸುವ‌
ಕ್ಷೇತ್ರ, ವಿಸ್ತಾರ, ಅಪಾರತೆ ಬೇಕಲ್ಲ? ಆ ಕ್ಷೇತ್ರವೇ ಮನುಷ್ಯನಿಗೆ ಕಾಣಿಸದಿದ್ದರೆ…. ಅವರ ಕವಿತೆಯ ಸಾಲು ಆರಂಭವಾಗುವುದೂ‌
ಹೀಗೆ….

“ರೆಕ್ಕೆ ಇದ್ದರೆ ಸಾಕೆ?
ಹಕ್ಕಿಗೆ ಬೇಕು‌‌ ಬಾನು.
ಬಯಲಲಿ ಹಾರುತ ತಾನು
ಮ್ಯಾಲೆ ಹಾರೋಕೆ?”

ಸಿನಿಮಾ ಗೀತೆಗಳು‌ ಅಂದಾಕ್ಷಣ ಅದರಲ್ಲೇನಿದೆ? ಎಂದು ಮೂಗುಮುರಿಯುತ್ತಿದ್ದ ಕಾಲ‌ ಈಗ ಕಳೆದು ಹೋಗಿದೆ. ಕನ್ನಡದ ಪ್ರಮುಖ ಕವಿಗಳ‌ ಕವಿತೆಗಳು ಸಿನಿಮಾಗಳಲ್ಲಿ ಅದ್ಭುತವಾಗಿ‌ ಚಿತ್ರೀಕರಣಗೊಂಡಿವೆ. ರೆಕ್ಕೆ ಅಂದರೆ ಫಕ್ಕನೆ ಹಕ್ಕಿಯ‌ ಪ್ರತಿಮೆ ನಮ್ಮೆದುರು‌‌ ನಿಲ್ಲುತ್ತದೆ. ಇಲ್ಲಿ ಮನುಷ್ಯನೂ ಒಂದು‌ ಹಕ್ಕಿಯೆ!. ಏಕೆಂದರೆ ಹುಟ್ಟಿನಿಂದ ವಿಚಾರಶೀಲ, ಸೃಜನಶೀಲ. ಆದರೆ ನಮ್ಮ‌ಸಾಮಾಜಿಕ ಆವರಣದ ಕೆಲ ಕಟ್ಟುಪಾಡು, ವ್ಯವಸ್ಥೆಯ ನಿರ್ಬಂಧಗಳಿಂದ ಮನುಷ್ಯನ ‌ಚಿಂತನೆ ಒಂದಿಲ್ಲೊಂದು ರೀತಿ‌ ನಿಯಂತ್ರಣಕ್ಕೊಳಪಡುತ್ತಾ ಸಾಗುತ್ತದೆ.

ಅದನ್ನೇ ಮಹಾಕವಿ ಕುವೆಂಪು ಸರಳೀಕರಿಸಿ ಹೇಳಿದ್ದಾರೆ.
” ಪ್ರತಿಯೊಂದು ಮಗು ಹುಟ್ಟುತ್ತಲೇ ವಿಶ್ವ ಮಾನವ.‌ ಬೆಳೆಯುತ್ತ‌ ಅದನ್ನ ಅಲ್ಪ ಮಾನವನನ್ನಾಗಿ‌ ಮಾಡುತ್ತೇವೆ”

Klive Special Article ಹಕ್ಕಿಯದು ರೆಕ್ಕೆ. ರೆಕ್ಕೆಯದು ಬಡಿದು‌ಹಾರುವ ಸ್ವಭಾವ. ಅದಕ್ಕೆ ಗಗನವೇ ಬಯಲು. ‌ಆ ವಿಸ್ತಾರವೇ ಅದರ ಜಗತ್ತು. ಹಾರಿದಷ್ಟು ದೂರ ಅದರ ಬದುಕು. ನೋಡಿದಷ್ಟು ಅಗಲ ಆಳ‌ ಅದರ ಸೃಷ್ಟಿ ಸಾರ್ಥಕ. ಅದಕ್ಕೆ ಹಕ್ಕಿನೋಟ , ಪಕ್ಷನೋಟ ಎಂಬ ಮಾತು‌ ನಮ್ಮಲ್ಲಿದೆ.
ಇಡೀ ಭೂಮಿಯ ಮೇಲ್ಮೈ ಒಂದುಬಾರಿ‌ ವೀಕ್ಷಿಸುವ ಅದರ ದೃಷ್ಟಿಯ ಸಾಧ್ಯತೆ‌ ಮನುಷ್ಯನಿಗೂ‌ ಇದೆ. ಅದೇ ಅವನ ವೈಚಾರಿಕ ಶಕ್ತಿ. ಇದರಿಂದ ಇಡೀ‌ ವಿಶ್ವದ ಬದುಕನ್ನ ಸಹ್ಯ‌ವಾಗಿಸಿಕೊಳ್ಳಬಹುದು.
ಆದರೆ …

” ಬಯಲಲಿ ಹಾರುತ ತಾನು‌ ,ಮ್ಯಾಲೆ ಹಾರೋಕೆ..?” ಎಂಬಲ್ಲಿ‌ ಆ ಬಯಲು‌ ಮನುಷ್ಯನಿಗೆ ವಿಸ್ತಾರವಿಲ್ಲದ, ಕೇವಲ‌ ಸಂಕುಚಿತ ಆವರಣವಾಗಿಬಿಟ್ಟಿದೆ. ಹೀಗಾಗಿ ವಿಹಗದಂತೆ ಹಾರಿದರೂ ವಿಸ್ತಾರ ದೃಷ್ಟಿ ಇಲ್ಲದೇ ರೆಕ್ಕೆ ಬಡಿದದ್ದೇ ಸಾಧನೆ. ಹಾರಿದಷ್ಟು ದೂರವೇ ತನ್ನ ಪ್ರಗತಿ ಎಂಬ ‌ಆತ್ಮರತಿ ಹೊಂದಿದ್ದಾನೆ. ಅದನ್ನೇ ಕವಿ

” ಕಾಲೊಂದಿದ್ದರೆ ಸಾಕೆ? ಚಿಗರೆಗೆ ಬೇಕು‌ ಕಾನು ಜಿಗಿದು‌ ಓಡೋಕೆ?” ಎಂದಿದ್ದಾರೆ.
ಮನುಷ್ಯನೀಗ ಭೂಜೀವಿ , ನಡೆದಾಡುವಷ್ಟು‌ ನೆಲವಿದೆ. ಆದರೆ ವೇಗದ ಜಿಂಕೆಯಾಗಲು ಅವನು‌ ಬಯಸಿದರೆ ಕಾಡು ಬೇಕು.
ಜಿಂಕೆಗೆ ಕಾಡು ಪ್ರದೇಶ,ಹಸಿರು‌.. ಬಹಳ ಪ್ರಿಯ. ಮನುಷ್ಯರಿಗೆ ಕಾಡು ನಾಡು ಎರಡೂ ಪ್ರಿಯ. ಆದರೆ ನಾಡಿನಲ್ಲಿ ಸಂಕುಚಿತ ಪ್ರವೃತ್ತಿ, ಕಾಡಿನ ಬಗ್ಗೆ ಅತೀ ಪ್ರಭುತ್ವ‌ತೋರಿ‌ ದಾಳಿಕೋರತನ ಇವುಗಳ ಬಗ್ಗೆ ಕವಿ‌ ವಿಡಂಬಿಸಿದ್ದಾರೆ.

“ಹೂವೊಂದಿದ್ದರೆ ಸಾಕೆ? ಬ್ಯಾಡವೆ ಗಾಳಿ ನೀವೇ ಹೇಳಿ. ಕಂಪ ಬೀರೋಕೆ? ಮುಖವೊದಿದ್ದರೆ ಸಾಕೆ ದುಂಬಿಯ ತಾವ, ಬ್ಯಾಡವೆ ಹೂವ ಜೇನ ಹೀರೋಕೆ.”

ಈ ಸಾಲುಗಳಲ್ಲಿ ಪ್ರಕೃತಿಯ ಸೃಷ್ಟಿಯಲ್ಲಿನ ಪರಸ್ಪರ ಆಂತರಿಕ ಬೆಸುಗೆಯ‌ ಸಂಬಂಧ ಸೂಚ್ಯವಾಗಿದೆ. ಹೂವರಳಿದರೆ ಕಂಪು ತಾನೇ ಹೊರಸೂಸುತ್ತದೆ. ಆದರೆ ಅದರ ಕಂಪನ್ನ ಹೊತ್ತೊಯ್ಯಲು‌ ವಾಹಕ ಸೌಲಭ್ಯನೀಡುವುದು ಗಾಳಿ.
ಗಾಳಿ ಮಾಧ್ಯಮವಾಗದಿದ್ದರೆ ಹೂಕಂಪು ಯಾರಿಗೂ ತಲುಪದು. ಹಾಗೇ ದುಂಬಿಗೆ ಹೀರುವ ಗುಣವಿದೆ. ಹೂವೇ ಇಲ್ಲದಿದ್ದರೆ
ಅದರ ಮುಖವಿದ್ದೂ ನಿಷ್ಪ್ರಯೋಜಕ ಹೀರಲು, ಮಕರಂದವುಳ್ಳ ಹೂವು ಬೇಕು. ಹೂವು ಕಂಪು,ಗಾಳಿ. ದುಂಬಿ ,ಮಕರಂದ ಆಂತರಂಗಿಕ ಸರಪಳಿ ಸಂಬಂಧ ಹೊಂದಿವೆ.

ಮುಂದಿನ ಪಂಕ್ತಿಗಳು ಮತ್ತಷ್ಟು ಅರ್ಥಭರಿತವಾಗಿವೆ

” ನೀರೊಂದಿದ್ದರೆ ಸಾಕೆ? ಬ್ಯಾಡವೆ ಹಳ್ಳ ಬಲ್ಲವ ಬಲ್ಲ.ತೊರೆಯು‌ ಹರಿಯೋಕೆ. ಮೋಡ ಇದ್ದರೆ ಸಾಕೆ ಬ್ಯಾಡವೆ ಭೂಮಿ ಹೇಳಿ ಸ್ವಾಮಿ,ಮಳೆಯು ಸುರಿಸೋಕೆ”

ನೀರು ಸುಮ್ಮನೆ ನಿಂತರೆ ಹಳ್ಳ. ಬರೀ‌ ಕೆಸರು. ಆದರೆ ತೊರೆಯಾದರೆ ಹರಿಯುತ್ತದೆ. ಬದುಕು ಚಲನಶೀಲ ಆಗಬೇಕು. ಅದನ್ನೇ ಕವಿ ” ಬಲ್ಲವ ಬಲ್ಲ” ಎಂಬ ಲೋಕನೀತಿ ಹೇಳಿದ್ದಾರೆ. ಮತ್ತೂ ಮುಂದುವರೆದು
ಮೋಡ ಹನಿಗಳೊಡೆಯ.
ಜಲಸಿರಿ ಇದೆ. ಎಲ್ಲಿಗೆ ಸುರಿಯ ಬೇಕು?
ಎಲ್ಲಿಗೆ ಸುರಿಯ ಬೇಕು?
ಎಂದರೆ ಭೂಮಿಗೆ.
ಹಾಗಾಗಿ ನೀರು ಶೇಖರಣಗೊಂಡ ಮೋಡದ ಶ್ರಮ ಪರಿಪೂರ್ಣವಾಗಲು ಭೂಮಿ ಬೇಕೇಬೇಕು.
ಸಿರಿವಂತಿಕೆಯುಳ್ಳ ಜನ ,ನೆಲದ ಬದುಕನ್ನ ಹಸನು ಮಾಡಬೇಕು. ಆ ಕಾರ್ಯವಾಗಬೇಕಾದರೆ ,ಭೂಮಿಯಂತೆ ಹೃದಯ ವೈಶಾಲ್ಯತೆ ಹೊಂದಬೇಕು.
ಅವರೇ ಭೂಮಿಯಾಗಬೇಕು ಇದು ಕವಿಯ ಬಯಕೆ.
ಆದ್ದರಿಂದ
“ರೆಕ್ಕೆ ಇದ್ದರೆ ಸಾಕೆ?”
ಎಂಬ ಪ್ರಶ್ನೆಯ ಹೂಬಾಣ ನಮ್ಮೆಲ್ಲರ ಎದೆಗೆ ಹೂಡಿದ
ಮೃದು ಹೃದಯಿ
ಕವಿ.ಹೆಚ್.ಎಸ್.
ವೆಂಕಟೇಶ ಮೂರ್ತಿ‌
ದೊಡ್ಡ ಪ್ರಶ್ನೆಯನ್ನೇ
ನಮಗೆಲ್ಲಾ ಹಾಕಿ
ತಾವು ತಮ್ಮ ಇಹದ ಯಾತ್ರೆ ಮುಗಿಸಿದರು.
ಕವಿಗೆ ಸಾವಿಲ್ಲ.ಹಾಗಯೇ ಅವರೆತ್ತಿರುವ ಪ್ರಶ್ನೆ, ಅಚ್ಚರಿ, ಆತಂಕ ,
ಅನುಭವ ದ್ರವ್ಯದ ಕೊರತೆಗಳಿಗೆ ಸಹೃದಯರು‌ಉತ್ತರ ಹುಡುಕಬೇಕಿದೆ.

Backward Classes Welfare Department ಯುಪಿಎಸ್ ಸಿ‌‌ ನಾಗರೀಕ ಸೇವೆ ಪರೀಕ್ಷೆಗೆ ಉಚಿತ ಪೂರ್ವ ತರಬೇತಿ. ಹಿಂದುಳಿದ ವರ್ಗಗಗಳ ಇಲಾಖೆ ಪ್ರಕಟಣೆ

0

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಯುಪಿಎಸ್‌ಸಿ ನಾಗರೀಕ ಸೇವೆ ಮತ್ತು ಬ್ಯಾಂಕಿಂಗ್ ಪಿ.ಓ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 2025-26ನೇ ಸಾಲಿನಲ್ಲಿ ಉಚಿತ ಪರೀಕ್ಷಾ ಪೂರ್ವ ತರಬೇತಿ ನೀಡುತ್ತಿದ್ದು, ರಾಜ್ಯ ಹಿಂದುಳಿದ ವರ್ಗಗಳ ಪ್ರವರ್ಗ -1 2(ಎ), 3(ಎ) ಹಾಗೂ 3(ಬಿ)ಗಳಿಗೆ ಸೇರಿದ ಅರ್ಹ ಅಭ್ಯಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಆಸಕ್ತರು ಇಲಾಖಾ ವೆಬ್‌ಸೈಟ್ https://bcwd.karnataka.gov.in ಅಥವಾ sevasindhuservices.karnataka.gov.in ರಲ್ಲಿ ಜೂನ್ 15 ರೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ಅಥವಾ ಸಹಾಯವಾಣಿ 8050370006 ನ್ನು ಸಂಪರ್ಕಿಸುವುದು.

Meteorological Department 2025 ರ ಪೂರ್ವ ಮುಂಗಾರು ಪರಿಸ್ಥಿತಿ & ಮಳೆ ಮುನ್ಸೂಚನೆ

0

Meteorological Department 2025ರ ಪೂರ್ವ ಮುಂಗಾರು ಪರಿಸ್ಥಿತಿ ಮತ್ತು ಮಳೆ: ಮುನ್ಸೂಚನೆ
ರಾಜ್ಯದಲ್ಲಿ ಪೂರ್ವ ಮುಂಗಾರು ಹಂಗಾಮು 1901 ರಿಂದ ಇಲ್ಲಿಯವರೆಗಿನ ಮಳೆ ಅಂಕಿಅಂಶಗಳನ್ನು ಗಮನಿಸಿದಾಗ 2025ರ ಪೂರ್ವ ಮುಂಗಾರು ಅವಧಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಕಳೆದ 125 ವರ್ಷಗಳಲ್ಲೇ ಪೂರ್ವ ಮುಂಗಾರು ಮತ್ತು ಮೇ ಮಾಹೆಯಲ್ಲಿ ಕಂಡುಬಂದ ಗರಿಷ್ಟ ಪ್ರಮಾಣದ ಮಳೆಯಾಗಿದೆ.

ಪ್ರಮುಖವಾಗಿ ರಾಜ್ಯದಲ್ಲಿ 2025ರ ಮೇ ಮಾಹೆಗೆ ವಾಡಿಕೆಯಾಗಿ 74 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 219 ಮಿ.ಮೀ ಮಳೆಯಾಗಿದ್ದು ಸರಾಸರಿ ವಾಡಿಕೆ ಮಳೆಗೆ ಹೋಲಿಸಿದಾಗ ಶೇ.197ರಷ್ಟು ಅತ್ಯಧಿಕ ಮಳೆಯಾಗಿದೆ.
2025ರ ಪೂರ್ವ ಮುಂಗಾರು (1ನೇ ಮಾರ್ಚ್‌ ರಿಂದ 31ನೇ ಮೇ) ಅವಧಿಯಲ್ಲಿ ವಾಡಿಕೆಯಾಗಿ 115ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 286 ಮಿ.ಮೀ ಮಳೆಯಾಗಿದ್ದು, ಸರಾಸರಿ ವಾಡಿಕೆ ಮಳೆಗೆ ಹೋಲಿಸಿದಾಗ ಶೇ.149ರಷ್ಟು ಅತ್ಯಧಿಕ ಮಳೆಯಾಗಿದೆ.

ಒಟ್ಟಾರೆ, 2025ರ ಪೂರ್ವ ಮುಂಗಾರು (1ನೇ ಮಾರ್ಚ್‌ ರಿಂದ 31ನೇ ಮೇ) ಅವಧಿಯಲ್ಲಿ ರಾಜ್ಯದಾದ್ಯಂತ ಗುಡುಗು-ಸಿಡಿಲು ಮತ್ತು ಬಿರುಗಾಳಿ ಸಹಿತ, ಮಳೆಯಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಧಿಕ ಮತ್ತು ಅಧಿಕ ಮಳೆಯಾಗಿರುವುದು ಕಂಡುಬಂದಿದೆ.

  1. 2025ರ ಮುಂಗಾರು ಮಳೆ ಮುನ್ಸೂಚನೆ :
    ಭಾರತ ಹವಾಮಾನ ಇಲಾಖೆಯು, ಮೇ 27 ರಂದು ಪ್ರಕಟಿಸಲಾದ ಪರಿಷ್ಕೃತ 2025ರ ನೈರುತ್ಯ ಮುಂಗಾರು ಮಳೆ ಮುನ್ಸೂಚನೆ ಅನ್ವಯ, ರಾಜ್ಯದಾದ್ಯಂತ 2025ರ ನೈರುತ್ಯ ಮುಂಗಾರು (ಜೂನ್-ಸೆಪ್ಟೆಂಬರ್) ಅವಧಿಗೆ ವಾಡಿಕೆಗಿಂತಾ ಅಧಿಕ ಮಳೆಯಾಗುವ ಸಾಧ್ಯತೆಗಳಿದ್ದು, 2025ರ ಜೂನ್ ಮಾಹೆಯಲ್ಲಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆ ಮತ್ತು ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದೆ.
  2. ಜಲಾಶಯಗಳ ನೀರಿನ ಸಂಗ್ರಹಣೆ ಮಟ್ಟ
    2025ರ ಮೇ-31ರ ಅನ್ವಯ, ರಾಜ್ಯದ ಪ್ರಮುಖ 14 ಜಲಾಶಯಗಳ ಒಟ್ಟು ಒಟ್ಟು ಸಂಗ್ರಹಣೆ 316.01 ಟಿಎಂಸಿ ಗಳಷ್ಟಿದ್ದು, ಒಟ್ಟು ಒಟ್ಟು ಸಂಗ್ರಹಣೆ ಸಾಮರ್ಥ್ಯದ (895.62 ಟಿಎಂಸಿಯ) ಶೇ.35% ರಷ್ಟಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 179.95 ಟಿಎಂಸಿ (ಸಾಮರ್ಥ್ಯದ ಸರಿ ಸುಮಾರು 20%) ಸಂಗ್ರಹಣೆ ಇತ್ತು.

Meteorological Department ಒಟ್ಟಾರೆ ರಾಜ್ಯದ ಪ್ರಮುಖ ಜಲಾಶಯಗಳಿಗೆ 2025ರ ಮೇ 19 ಮತ್ತು ಮೇ 29ರ ನಡುವೆ, ಸುಮಾರು 718,193 ಕ್ಯೂಸೆಕ್‌ಗಳ (62.05 ಟಿಎಂಸಿಗೆ) ಸಂಚಿತ ಒಳಹರಿವನ್ನು ಕಂಡುಬಂದಿದ್ದು, ಜಲಾನಯನ ಪ್ರದೇಶಗಳಲ್ಲಿನ ವ್ಯಾಪಕ ಮತ್ತು ಭಾರೀ ಮಳೆಯಿಂದಾಗಿ ಮೇ 25ರಿಂದ ಒಳಹರಿವು ಸಾಮಾನ್ಯವಾಗಿ ಹೆಚ್ಚಾಗಿರುವುದು ಕಂಡುಬಂದಿದೆ.

  1. 2025ರ ಮುಂಗಾರು ಹಂಗಾಮು ತುರ್ತು ಪ್ರತಿಕ್ರಿಯೆಗಾಗಿ NDRF ತಂಡದ ಪೂರ್ವ ನಿಯೋಜನೆ:
    ರಾಜ್ಯದಲ್ಲಿ ಒಟ್ಟು 5 NDRF ತಂಡಗಳಿದ್ದು, ಈ ಪೈಕಿ ಕೊಡಗು, ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ ಒಂದರಂತೆ 4 NDRF ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಮತ್ತೊಂದು ತಂಡವು ಬೆಂಗಳೂರಿನಲ್ಲಿದ್ದು, ಇದನ್ನು ಹೊರತು ಪಡಿಸಿ, ಅಗ್ನಿಶಾಮಕ, SDRF ಮತ್ತು ಇನ್ನಿತರ ತುರ್ತು ಸೇವಾ ತಂಡಗಳು ಅಗತ್ಯವಿರುವ ತುರ್ತು ಪ್ರತಿಕ್ರಿಯೆ ಮತ್ತು ರಕ್ಷಣಾ ಕಾರ್ಯಗಳಿಗೆ ಲಭ್ಯವಿರುತ್ತದೆ.
  2. 2025ರ ಏಪ್ರಿಲ್‌ 1 ರಿಂದ 31ನೇ ಮೇ ವರೆಗಿನ ಮಳೆಯಿಂದಾದ ಹಾನಿ ಮತ್ತು ನಷ್ಟದ ವಿವರಗಳು
    2025ರ ಏಪ್ರಿಲ್‌ 1 ರಿಂದ 31ನೇ ಮೇ ವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಕಂಡುಬಂದ ಸಿಡಿಲಿನಿಂದ-48, ಮರ ಉರುಳಿ- 9, ಮನೆ ಕುಸಿತ-5, ನೀರಿನಲ್ಲಿ ಮುಳುಗಿ – 4, ಭೂಕುಸಿತ-4, ವಿದ್ಯುತ್ಪ್ರವಾಹ-1 ಸೇರಿ .ಒಟ್ಟು 71 ಮಾನವ ಜೀವಹಾನಿಯಾಗಿದ್ದು, ಮೃತರ ವಾರಸುದಾರರಿಗೆ ತುರ್ತು ಪರಿಹಾರವಾಗಿ ರೂ.5.00 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ.

702 ಪ್ರಾಣಿಹಾನಿಗಳು ಸಂಭವಿಸಿದ್ದು, ಈ ಪೈಕಿ 698 ಪ್ರಾಣಿಹಾನಿ ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. (ದೊಡ್ಡ ಪ್ರಾಣಿಗಳು-225 ಮತ್ತು ಸಣ್ಣ ಪ್ರಾಣಿಗಳು-477)
2068-ಮನೆ ಹಾನಿಯಾಗಿದ್ದು, ಈ ಪೈಕಿ 1926 ಮನೆಗಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. (ಸಂಪೂರ್ಣ ಹಾನಿ-75 ಮತ್ತು ಭಾಗಶಃ ಹಾನಿ-1993).
ಒಟ್ಟು 15378.32 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, (ಕೃಷಿ ಬೆಳೆ 11915.66 ಹೆಕ್ಟೇರ್ ಮತ್ತು ತೋಟಗಾರಿಕೆ 3462.66 ಹೆಕ್ಟೇರ್) ಬೆಳೆಹಾನಿ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಲು ಅವಕಾಶ ಕಲ್ಪಿಸಲಾಗಿದ್ದು, ಪರಿಹಾರ ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.

World Milk Day ಜೂನ್ 1, ವಿಶ್ವ ಕ್ಷೀರ ದಿನ ಮಾರುಕಟ್ಟೆಗೆ ವಿಶೇಷ ನಂದಿನಿ‌ ಉತ್ಪನ್ನಗಳ ಬಿಡುಗಡೆ

0

World Milk Day “ವಿಶ್ವ ಹಾಲು ದಿನಾಚರಣೆ” ಪ್ರಯುಕ್ತ ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಹಾಗೂ ಶಿಮುಲ್ ವತಿಯಿಂದ ಜೂ.1 ರಂದು 18 ವಿವಿಧ ಮಾದರಿ ನಂದಿನಿ ಕೇಕ್ ಹಾಗೂ ಮಫಿನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ದೊರೆಯುವ ಬೇರೆ ಖಾಸಗಿ ಬ್ರಾಂಡ್‌ನ ಕೇಕ್ ಹಾಗೂ ಮಫಿನ್‌ಗಳಿಗಿಂತ ನಂದಿನಿ ಕೇಕ್ ಹಾಗೂ ಮಫಿನ್‌ಗಳು ಉತ್ತಮ ಗುಣಮಟ್ಟದಲ್ಲಿ ಹಾಗೂ ಸ್ಪರ್ಧಾತ್ಮಕ ಬೆಲೆಗಳಲ್ಲಿ ನೀಡಲಾಗುತ್ತಿದೆ.

ಒಕ್ಕೂಟವು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದಾರ್ಗ ಜಿಲ್ಲೆಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿದ್ದು, ಕಾರ್ಯವ್ಯಾಪ್ತಿಯ ಜಿಲ್ಲೆಗಳ 1325 ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿನಿತ್ಯ 02 ಸರತಿಗಳಲ್ಲಿ ಸರಾಸರಿ 8 ಲಕ್ಷ ಕೆ.ಜಿ ಹಾಲನ್ನು ಸಂಗ್ರಹಿಸಲಾಗುತ್ತಿದೆ.

ಸದರಿ ಹಾಲನ್ನು ಅತ್ಯಾಧುನಿಕ ಯಂತ್ರಗಳಲ್ಲಿ ಸಂಸ್ಕರಿಸಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿರುವ 1836 ಹಾಲಿನ ಡೀಲರ್, 147 ಫ್ರಾಂಚೈಸಿ ಪಾರ್ಲರ್ ಹಾಗೂ 49 ಸ್ವಂತ ಪಾರ್ಲರ್‌ಗಳ ಮೂಲಕ ಪ್ರತಿನಿತ್ಯ 2.85 ಲಕ್ಷ ಲೀಟರ್ ಹಾಲು ಮತ್ತು ಸರಾಸರಿ 65 ಸಾವಿರ ಕೆ.ಜಿ. ಮೊಸರನ್ನು ಮಾರಾಟ ಮಾಡಲಾಗುತ್ತಿದೆ.

ಹಾಲು, ಮೊಸರು, ಮಜ್ಜಿಗೆ, ಲಸ್ಸಿ, ಸಿಹಿ ಹಾಗೂ ಖಾರಾ ಉತ್ಪನ್ನಗಳು ನಂದಿನಿ ಆಳ್ವಾ ಅಲ್ಲದೇ ಬ್ರೇಡ್, ಬನ್, ಐಸ್ ಕ್ರೀಂ ಸೇರಿದಂತೆ ಈಗಾಗಲೇ 150 ಕ್ಕೂ ಹೆಚ್ಚು ವಿವಿಧ ಉತ್ಪನ್ನಗಳನ್ನು ಕೆ.ಎಂ.ಎಫ್ ಹಾಗೂ ಹಾಲು ಒಕ್ಕೂಟಗಳಿಂದ ಮಾರಾಟ ಮಾಡಲಾಗುತ್ತಿದೆ.

ಈಗಾಗಲೇ ಶಿಮುಲ್ ವತಿಯಿಂದ 100 ಗ್ರಾಂ ಪ್ಯಾಕ್‌ನಲ್ಲಿ ಖೋವಾ ಕಡಲೇ ಮಿಠಾಯಿಯನ್ನು ಮಾರಾಟ ಮಾಡಲಾಗುತ್ತಿದ್ದು, ಅದರೊಂದಿಗೆ 12 ಗ್ರಾಂ (ರೂ.5/- ) ಹಾಗೂ 25 ಗ್ರಾಂ (ರೂ.10/-) ಪ್ಯಾಕ್‌ಗಳಲ್ಲಿ ಸಹ ಖೋವಾ ಕಡಲೆ ಮಿಠಾಯಿಯನ್ನು ಉತ್ಪಾದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ. ಉತ್ಪನ್ನದ ಗುಣಮಟ್ಟದ ಬಗ್ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿ ಜನಪ್ರಿಯತೆ ಹೊಂದಿರುವ ನಂದಿನಿ ಉತ್ಪನ್ನಗಳು ಗ್ರಾಹಕರ ಮನ್ನಣೆ ಗಳಿಸಿದ್ದು, ಈ ಸಾಲಿಗೆ ವಿಶ್ವ ಹಾಲು ದಿನದಂದು ನಂದಿನಿ ಕೇಕ್ ಮತ್ತು ಮಫೀನ್‌ಗಳು ಸೇರ್ಪಡೆಯಾಗುತ್ತಿದೆ.

ಗ್ರಾಹಕರು ಎಂದಿನಂತೆ ನಂದಿನಿ ಉತ್ಪನ್ನಗಳನ್ನು ಬಳಸುವ ಮೂಲಕ ರೈತರ ಸಹಕಾರಿ ಸಂಸ್ಥೆ ಬೆಳವಣಿಗೆಗೆ ಸಹಕರಿಸಬೇಕೆಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಜಿ.ಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

World Milk Day ಜೂನ್ 1 ರಂದು 18 ವಿವಿಧ ಮಾದರಿ ನಂದಿನಿ ಕೇಕ್ ಹಾಗೂ ಮಫಿನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದ್ದು, ಅವುಗಳ ದರ : ಸ್ಪಾಂಜಿ ವೆನಿಲ್ಲಾ ಕೇಕ್ 25 ಗ್ರಾಂ ಗೆ ರೂ.10/-, ಫ್ರೂಟಿ ಸ್ಲೈಸ್ ಕೇಕ್ 30 ಗ್ರಾಂ ಗೆ ರೂ.1/-5, ಚಾಕೋ ಕಿತ್ತಲೆ ಸ್ಲೈಸ್ ಕೇಕ್, ವೆನಿಲ್ಲಾ ಸ್ಲೈಸ್ ಕೇಕ್, ಅನಾನಸ್ ಸ್ಲೈಸ್ ಕೇಕ್ 50 ಗ್ರಾಂ ಗೆ ರೂ.15/- ರಿಂದ 20/-, ವೆನಿಲ್ಲಾ ಮಫಿನ್, ಚಾಕಲೇಟ್ ಮಫಿನ್, ಅನಾನಸ್ ಮಫಿನ್, ಸ್ಟ್ರಾಬೆರಿ ಮಫಿನ್, ಮಾವಾ ಮಫಿನ್ 150 ಗ್ರಾಂ ಗೆ ರೂ.50/-, ಪ್ಲಮ್ ಕೇಕ್, ಚಾಕೋ ವೆನಿಲ್ಲಾ ಕೇಕ್ , ಫ್ರೂಟ್ ಕೇಕ್, ವೆನಿಲ್ಲಾ ಕೇಕ್, ಚಾಕೊಲೇಟ್ ಕೇಕ್, ವಾಲ್ನಟ್ ಬನಾನಾ ಕೇಕ್, ಚಾಕಲೆಟ್ ಬೆಲ್ಲದ ಕೇಕ್ ಹಾಗೂ ಕೊಬ್ಬರಿ ಬೆಲ್ಲದ ಕೇಕ್ 200 ಗ್ರಾಂ ಗೆ ರೂ.110/- ದರವನ್ನು ನಿಗದಿಪಡಿಸಲಾಗಿದೆ.

GMS Academy First Grade College ಭಾರತದ ರೂಪಾಯಿಗೂ ಮುಂದೊಮ್ಮೆ ಡಾಲರ್ ನಂತೆ‌ ಜಾಗತಿಕ ಚಲಾವಣಾ ಮೌಲ್ಯ ಸಿಗಬಹುದು- ಡಾ.ಎಚ್.ಬಿ.ಮಂಜುನಾಥ್

0

GMS Academy First Grade College ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಭಾರತವು ಜಿ ಡಿ ಪಿ ಯಲ್ಲಿ ಅಮೆರಿಕ ಮತ್ತು ಚೈನಾ ಕ್ಕಿಂತ ಮುಂದಿದ್ದು ಭಾರತದ ರೂಪಾಯಿಯು ಅಮೆರಿಕದ ಡಾಲರಿನಂತೆ ಜಾಗತಿಕ ಚಲಾವಣಾ ಮೌಲ್ಯ ಹೊಂದುವ ಕಾಲ ಬರಬಹುದು ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ. ಮಂಜುನಾಥ ಹೇಳಿದರು.

ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜಿನ ಪದವೀಧರರಿಗೆ ಬೀಳ್ಕೊಡುವ ಸಮಾರಂಭ ‘ಸಯನಾರಾ 2025’ ರ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಕೇವಲ ಹತ್ತು ವರ್ಷಗಳಲ್ಲಿ ತನ್ನ ಆರ್ಥಿಕ ಶಕ್ತಿಯನ್ನು ದ್ವಿಗುಣಗೊಳಿಸಿಕೊಂಡು ಜಪಾನನ್ನು ಹಿಂದಿಕ್ಕಿ 4.187 ಟ್ರಿಲಿಯನ್ ಡಾಲರು ಆರ್ಥಿಕ ಶಕ್ತಿಯಾಗಿ ವಿಶ್ವದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿರುವ ಭಾರತದ ಆಂತರಿಕ ನಿವ್ಹಳ ಉತ್ಪಾದನಾ ಸಾಮರ್ಥ್ಯವು ಚೀನ ಹಾಗೂ ಅಮೇರಿಕಾದಕ್ಕಿಂತ ಹೆಚ್ಚಾಗಿದ್ದು ಹೀಗೇ ಮುಂದುವರಿದಲ್ಲಿ ಭಾರತದ ರೂಪಾಯಿಗೆ ಡಾಲರ್ ನಂತೆ ಜಾಗತಿಕ ಚಲಾವಣಾ ಮೌಲ್ಯ ಬರುತ್ತದೆ, ಇದರ ಸಾಕಾರದಲ್ಲಿ ಭಾರತದ ಪದವೀಧರರ ಪಾತ್ರ ಮಹತ್ತರವಾಗಿದೆ, ದೇಶದಲ್ಲಿ ವಾರ್ಷಿಕ 15 ಲಕ್ಷದಷ್ಟು ತಾಂತ್ರಿಕ ಪದವೀಧರರು, 85 ಲಕ್ಷದಷ್ಟು ಸಾಮಾನ್ಯ ಪದವೀಧರರು ಹೊರ ಬರುತ್ತಿದ್ದು ಇವರೆಲ್ಲ ಉದ್ಯೋಗವನ್ನು ಅರಸುವುದಕ್ಕಿಂತ ಸ್ವಉದ್ಯೋಗಿಗಳಾಗಿ ಉತ್ಪಾದನಾ ರಂಗವನ್ನು ಅಭಿವೃದ್ಧಿಪಡಿಸಬೇಕು. ಶಿಕ್ಷಣದಿಂದ ಜ್ಞಾನವನ್ನೂ, ಅನುಭವದಿಂದ ಕೌಶಲವನ್ನೂ ಹೊಂದಿದಾಗ ಕೃತಕ ಬುದ್ಧಿಮತ್ತೆ ಯಂತಹ ಆಧುನಿಕ ತಂತ್ರಜ್ಞಾನವೂ ಸವಾಲು ಎನಿಸದೆ ಅಭಿವೃದ್ಧಿಗೆ ಸಹಕಾರಿ ಎನಿಸುತ್ತದೆ ಎಂದರಲ್ಲದೆ ಆರ್ಥಿಕ ಅಭಿವೃದ್ಧಿಯ ಭರದಲ್ಲಿ ಅಧ್ಯಾತ್ಮಿಕತೆಯನ್ನು ಮರೆಯಬಾರದು, ಅಧ್ಯಾತ್ಮ ಎಂದರೆ ತನ್ನನ್ನು ತಾನು ಅರ್ಥ ಮಾಡಿಕೊಂಡು ತನ್ನಂತೆ ಇತರರು ಎಂದು ಭಾವಿಸುವುದು ಧರ್ಮ ಎಂದರೆ ಇತರರಿಗೂ ಅನ್ಯಾಯವಾಗದಂತೆ ಬಾಳುವುದು ಎಂದರು.

GMS Academy First Grade College ಕಾಲೇಜಿನ ಪ್ರಾಂಶುಪಾಲೆ ಡಾ. ಶ್ವೇತಾ ಮರಿಗೌಡರ್ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ಹಾಗೂ ಅಧ್ಯಾಪಕ ವರ್ಗದ ಶಿವಕುಮಾರ್ ಜಿ ಜೆ, ಡಾ. ಸಂತೋಷ್ ಕುಮಾರ್ ಬಿ ಎಮ್, ಡಾ, ಗಂಗಾಧರ ಹೂಗಾರ್, ಪ್ರೊ. ರಮೀಜ್ ರಾಜಾ, ಪ್ರೊ. ರಾಜಶೇಖರ ಜಿ ಸಿ, ಪ್ರೊ. ಸವಿತಾ ಪಿ ಹೆಚ್, ಡಾ. ಶ್ವೇತಾ ಹೆಚ್ ಎಸ್, ಪ್ರೊ ಶಮೀನಾ ಅತ್ತರ್ ಮುಂತಾದವರು ಉಪಸ್ಥಿತರಿದ್ದು ಶ್ರೇಯಾ ಎಸ್ ಎಂ, ಪ್ರೇಕ್ಷಾ ಆರ್ ಯು ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾಗತ ನೃತ್ಯವನ್ನು ಪ್ರಾರ್ಥನಾ ಜಿ ಡಿ ಪ್ರಸ್ತುತಪಡಿಸಿದರೆ ಪ್ರಾರ್ಥನಾ ಗೀತೆಯನ್ನು ಸಿಂಚನಾ ಎಮ್ ಆಚಾರ್ಯ ಹಾಡಿದರು. ಪ್ರಗತಿ ಎನ್‌ ಜಿ ಸ್ವಾಗತ ಕೋರಿದರೆ ಮುಖ್ಯ ಅತಿಥಿಗಳ ಪರಿಚಯವನ್ನು ಎ.ತೇಜಸ್ವಿನಿ ಮಾಡಿದರು. ವಿದ್ಯಾರ್ಥಿಗಳ ಪರವಾಗಿ ಅಪೂರ್ವ ಮಾತನಾಡಿದರು. ವಿವಿಧ ಸ್ಪರ್ಧೆಗಳ ಬಹುಮಾನಗಳ ವಿತರಣೆಯ ನಂತರ ಪ್ರಕೃತಿ ಡಿ ಟಿ ವಂದನೆ ಸಲ್ಲಿಸಿದರು.