Meteorological Department 2025ರ ಪೂರ್ವ ಮುಂಗಾರು ಪರಿಸ್ಥಿತಿ ಮತ್ತು ಮಳೆ: ಮುನ್ಸೂಚನೆ
ರಾಜ್ಯದಲ್ಲಿ ಪೂರ್ವ ಮುಂಗಾರು ಹಂಗಾಮು 1901 ರಿಂದ ಇಲ್ಲಿಯವರೆಗಿನ ಮಳೆ ಅಂಕಿಅಂಶಗಳನ್ನು ಗಮನಿಸಿದಾಗ 2025ರ ಪೂರ್ವ ಮುಂಗಾರು ಅವಧಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಕಳೆದ 125 ವರ್ಷಗಳಲ್ಲೇ ಪೂರ್ವ ಮುಂಗಾರು ಮತ್ತು ಮೇ ಮಾಹೆಯಲ್ಲಿ ಕಂಡುಬಂದ ಗರಿಷ್ಟ ಪ್ರಮಾಣದ ಮಳೆಯಾಗಿದೆ.
ಪ್ರಮುಖವಾಗಿ ರಾಜ್ಯದಲ್ಲಿ 2025ರ ಮೇ ಮಾಹೆಗೆ ವಾಡಿಕೆಯಾಗಿ 74 ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 219 ಮಿ.ಮೀ ಮಳೆಯಾಗಿದ್ದು ಸರಾಸರಿ ವಾಡಿಕೆ ಮಳೆಗೆ ಹೋಲಿಸಿದಾಗ ಶೇ.197ರಷ್ಟು ಅತ್ಯಧಿಕ ಮಳೆಯಾಗಿದೆ.
2025ರ ಪೂರ್ವ ಮುಂಗಾರು (1ನೇ ಮಾರ್ಚ್ ರಿಂದ 31ನೇ ಮೇ) ಅವಧಿಯಲ್ಲಿ ವಾಡಿಕೆಯಾಗಿ 115ಮಿ.ಮೀ ಮಳೆಯಾಗಬೇಕಿದ್ದು, ವಾಸ್ತವಿಕ 286 ಮಿ.ಮೀ ಮಳೆಯಾಗಿದ್ದು, ಸರಾಸರಿ ವಾಡಿಕೆ ಮಳೆಗೆ ಹೋಲಿಸಿದಾಗ ಶೇ.149ರಷ್ಟು ಅತ್ಯಧಿಕ ಮಳೆಯಾಗಿದೆ.
ಒಟ್ಟಾರೆ, 2025ರ ಪೂರ್ವ ಮುಂಗಾರು (1ನೇ ಮಾರ್ಚ್ ರಿಂದ 31ನೇ ಮೇ) ಅವಧಿಯಲ್ಲಿ ರಾಜ್ಯದಾದ್ಯಂತ ಗುಡುಗು-ಸಿಡಿಲು ಮತ್ತು ಬಿರುಗಾಳಿ ಸಹಿತ, ಮಳೆಯಾಗಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಧಿಕ ಮತ್ತು ಅಧಿಕ ಮಳೆಯಾಗಿರುವುದು ಕಂಡುಬಂದಿದೆ.
- 2025ರ ಮುಂಗಾರು ಮಳೆ ಮುನ್ಸೂಚನೆ :
ಭಾರತ ಹವಾಮಾನ ಇಲಾಖೆಯು, ಮೇ 27 ರಂದು ಪ್ರಕಟಿಸಲಾದ ಪರಿಷ್ಕೃತ 2025ರ ನೈರುತ್ಯ ಮುಂಗಾರು ಮಳೆ ಮುನ್ಸೂಚನೆ ಅನ್ವಯ, ರಾಜ್ಯದಾದ್ಯಂತ 2025ರ ನೈರುತ್ಯ ಮುಂಗಾರು (ಜೂನ್-ಸೆಪ್ಟೆಂಬರ್) ಅವಧಿಗೆ ವಾಡಿಕೆಗಿಂತಾ ಅಧಿಕ ಮಳೆಯಾಗುವ ಸಾಧ್ಯತೆಗಳಿದ್ದು, 2025ರ ಜೂನ್ ಮಾಹೆಯಲ್ಲಿ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆ ಮತ್ತು ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಗಳಿದೆ. - ಜಲಾಶಯಗಳ ನೀರಿನ ಸಂಗ್ರಹಣೆ ಮಟ್ಟ
2025ರ ಮೇ-31ರ ಅನ್ವಯ, ರಾಜ್ಯದ ಪ್ರಮುಖ 14 ಜಲಾಶಯಗಳ ಒಟ್ಟು ಒಟ್ಟು ಸಂಗ್ರಹಣೆ 316.01 ಟಿಎಂಸಿ ಗಳಷ್ಟಿದ್ದು, ಒಟ್ಟು ಒಟ್ಟು ಸಂಗ್ರಹಣೆ ಸಾಮರ್ಥ್ಯದ (895.62 ಟಿಎಂಸಿಯ) ಶೇ.35% ರಷ್ಟಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 179.95 ಟಿಎಂಸಿ (ಸಾಮರ್ಥ್ಯದ ಸರಿ ಸುಮಾರು 20%) ಸಂಗ್ರಹಣೆ ಇತ್ತು.
Meteorological Department ಒಟ್ಟಾರೆ ರಾಜ್ಯದ ಪ್ರಮುಖ ಜಲಾಶಯಗಳಿಗೆ 2025ರ ಮೇ 19 ಮತ್ತು ಮೇ 29ರ ನಡುವೆ, ಸುಮಾರು 718,193 ಕ್ಯೂಸೆಕ್‌ಗಳ (62.05 ಟಿಎಂಸಿಗೆ) ಸಂಚಿತ ಒಳಹರಿವನ್ನು ಕಂಡುಬಂದಿದ್ದು, ಜಲಾನಯನ ಪ್ರದೇಶಗಳಲ್ಲಿನ ವ್ಯಾಪಕ ಮತ್ತು ಭಾರೀ ಮಳೆಯಿಂದಾಗಿ ಮೇ 25ರಿಂದ ಒಳಹರಿವು ಸಾಮಾನ್ಯವಾಗಿ ಹೆಚ್ಚಾಗಿರುವುದು ಕಂಡುಬಂದಿದೆ.
- 2025ರ ಮುಂಗಾರು ಹಂಗಾಮು ತುರ್ತು ಪ್ರತಿಕ್ರಿಯೆಗಾಗಿ NDRF ತಂಡದ ಪೂರ್ವ ನಿಯೋಜನೆ:
ರಾಜ್ಯದಲ್ಲಿ ಒಟ್ಟು 5 NDRF ತಂಡಗಳಿದ್ದು, ಈ ಪೈಕಿ ಕೊಡಗು, ದಕ್ಷಿಣ ಕನ್ನಡ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತಲಾ ಒಂದರಂತೆ 4 NDRF ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಮತ್ತೊಂದು ತಂಡವು ಬೆಂಗಳೂರಿನಲ್ಲಿದ್ದು, ಇದನ್ನು ಹೊರತು ಪಡಿಸಿ, ಅಗ್ನಿಶಾಮಕ, SDRF ಮತ್ತು ಇನ್ನಿತರ ತುರ್ತು ಸೇವಾ ತಂಡಗಳು ಅಗತ್ಯವಿರುವ ತುರ್ತು ಪ್ರತಿಕ್ರಿಯೆ ಮತ್ತು ರಕ್ಷಣಾ ಕಾರ್ಯಗಳಿಗೆ ಲಭ್ಯವಿರುತ್ತದೆ. - 2025ರ ಏಪ್ರಿಲ್ 1 ರಿಂದ 31ನೇ ಮೇ ವರೆಗಿನ ಮಳೆಯಿಂದಾದ ಹಾನಿ ಮತ್ತು ನಷ್ಟದ ವಿವರಗಳು
2025ರ ಏಪ್ರಿಲ್ 1 ರಿಂದ 31ನೇ ಮೇ ವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಕಂಡುಬಂದ ಸಿಡಿಲಿನಿಂದ-48, ಮರ ಉರುಳಿ- 9, ಮನೆ ಕುಸಿತ-5, ನೀರಿನಲ್ಲಿ ಮುಳುಗಿ – 4, ಭೂಕುಸಿತ-4, ವಿದ್ಯುತ್ಪ್ರವಾಹ-1 ಸೇರಿ .ಒಟ್ಟು 71 ಮಾನವ ಜೀವಹಾನಿಯಾಗಿದ್ದು, ಮೃತರ ವಾರಸುದಾರರಿಗೆ ತುರ್ತು ಪರಿಹಾರವಾಗಿ ರೂ.5.00 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ.
702 ಪ್ರಾಣಿಹಾನಿಗಳು ಸಂಭವಿಸಿದ್ದು, ಈ ಪೈಕಿ 698 ಪ್ರಾಣಿಹಾನಿ ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. (ದೊಡ್ಡ ಪ್ರಾಣಿಗಳು-225 ಮತ್ತು ಸಣ್ಣ ಪ್ರಾಣಿಗಳು-477)
2068-ಮನೆ ಹಾನಿಯಾಗಿದ್ದು, ಈ ಪೈಕಿ 1926 ಮನೆಗಳಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. (ಸಂಪೂರ್ಣ ಹಾನಿ-75 ಮತ್ತು ಭಾಗಶಃ ಹಾನಿ-1993).
ಒಟ್ಟು 15378.32 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, (ಕೃಷಿ ಬೆಳೆ 11915.66 ಹೆಕ್ಟೇರ್ ಮತ್ತು ತೋಟಗಾರಿಕೆ 3462.66 ಹೆಕ್ಟೇರ್) ಬೆಳೆಹಾನಿ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಲು ಅವಕಾಶ ಕಲ್ಪಿಸಲಾಗಿದ್ದು, ಪರಿಹಾರ ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ.