JCI Shimoga Malnad ಜೆಸಿಐ ಶಿವಮೊಗ್ಗ ಸ್ಟಾರ್ ಮತ್ತು ಜೆಸಿಐ ಶಿವಮೊಗ್ಗ ಚಿರಂತನ ಘಟಕಗಳಿಂದ ನಗರದ ರೋಟರಿ ಮಿಡ್ ಟೌನ್ ರಕ್ತ ನಿಧಿಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಘಟಕಗಳ ಅಧ್ಯಕ್ಷರಾದ ಜೆಸಿ ಗಣೇಶ್ ಪೈ, ಜೆಸಿ ರುದ್ರೇಶ್ ಕೋರಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
JCI Shimoga Malnad ಮುಖ್ಯ ಅತಿಥಿಗಳಾಗಿ ವಲಯ ಅಧ್ಯಕ್ಷರಾದ ಜೆಸಿ ಗೌರೀಶ್ ಭಾರ್ಗವ್ ಮತ್ತು ರಾಷ್ಟ್ರೀಯ ಪೂರ್ವ ಉಪ ಅಧ್ಯಕ್ಷರಾದ ಜೆಸಿ ಎಸ್ ವಿ ಶಾಸ್ತ್ರಿ ಮತ್ತು ಕಾರ್ಯದರ್ಶಿ ಜೆಸಿ ಪ್ರಿಯಾಂಕಾ, ಮಹಿಳಾ ಜೇಸಿ ಜೆಸಿ ಲತಾ , ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
JCI Shimoga Malnad ಜೆಸಿಐ ಶಿವಮೊಗ್ಗ ಸ್ಟಾರ್ ಮತ್ತು ಜೆಸಿಐ ಚಿರಂತನ ಆಶ್ರಯದಲ್ಲಿ ರಕ್ತದಾನ ಶಿಬಿರ
MESCOM ಗಮನಿಸಿ,!ಜೂನ್ 24. ಶಿವಮೊಗ್ಗ ನಗರದ ಪ್ರಮುಖ ಪ್ರದೇಶಗಳಿಗೆ”ಕರೆಂಟ್” ಇಲ್ಲ.
MESCOM ನಗರದ ಎಂಆರ್‌ಎಸ್‌ನ 110/11 ಕೆವಿ ವಿ.ವಿ.ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಜೂ.24 ರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರ ನಗರ, ಶಾಂತಮ್ಮ ಲೇಔಟ್, ವೆಂಕಟೇಶ ನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಎಂಆರ್‌ಎಸ್ ವಾಟರ್ ಸಪ್ಲೇ, ಎಂಆರ್‌ಎಸ್ ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಬಿಹೆಚ್ ರಸ್ತೆ(ಗಾಯಿತ್ರ ಕಲ್ಯಾಣ ಮಂದಿರದಿAದ ಅಮೀರ್ ಅಹಮದ್ ವೃತ್ತ), ನೆಹರು ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆ, ಪಾರ್ಕ್ ಬಡಾವಣೆ, ಸರ್‌ಎಂವಿ ರಸ್ತೆ(ವೀರಭದ್ರೇಶ್ವರ ಚಿತ್ರಮಂದಿರದಿAದ ಮಹಾವೀರ ವೃತ್ತದವರೆಗೆ), ಬಾಲರಾಜ್ ಅರಸ್ MESCOM ರಸ್ತೆ(ಮಹಾವೀರ್ ವೃತ್ತದಿಂದ ಗೋಪಿವೃತ್ತದವರೆಗೆ) ಗಾಂಧಿ ಪಾರ್ಕ್, ಲೂರ್ದು ನಗರ, ಕಾನ್ವೆಂಟ್ ರಸ್ತೆ, ಬಾಪೂಜಿ ನಗರ, ಚರ್ಚ್ ಕಾಂಪೌAಡ್, ಟಿಜಿಎನ್ ಬಡಾವಣೆ, ಜೋಸೆಫ್ ನಗರ, ಟ್ಯಾಂಕ್ ಬೌಂಡ್ ರಸ್ತೆ, ಕುವೆಂಪು ರಂಗಮAದಿರ ಮತ್ತು ಮಹಾನಗರ ಪಾಲಿಕೆ ಕಚೇರಿ ಸುತ್ತಮುತ್ತ, ಮೀನಾಕ್ಷಿ ಭವನ, ಶಂಕರಮಠ ರಸ್ತೆ, ಹಳೆ ಹೊನ್ನಾಳಿ ರಸ್ತೆ, ಬಾಲರಾಜ್‌ರಸ್ತೆ, ಮೆಹದಿ ನಗರ, ಬಾಪೂಜಿ ನಗರ, ಬಸವನಗುಡಿ ವಿನಾಯಕ ಪಾರ್ಕ್, ವಿನಾಯಕ ನಗರ, ಅಮೀರ್‌ಅಹಮದ್ ಕಾಲೋನಿ, ಸೋಮಯ್ಯ ಬಡಾವಣೆ, ಟ್ಯಾಂಕ್ ಬಂಡ್ ರಸ್ತೆ, ಟ್ಯಾಂಕ್ ಮೊಹಲ್ಲಾ, ಕೋರ್ಟ್ ಕಚೇರಿ, ಆರ್‌ಟಿಓ ರಸ್ತೆ ಹಾಗೂ ಸುತ್ತಮುತ್ತಲ್ಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನಗರದ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹ ಇಂಜಿನಿಯರ್ ತಿಳಿಸಿದ್ದಾರೆ.
Karnataka State Govt Employees Association ಜೂನ್ 24. ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಆರೋಗ್ಯ ಸಂಜೀವಿನಿ ಯೋಜನೆ ಬಗ್ಗೆ ಕಾರ್ಯಾಗಾರ.
Karnataka State Govt Employees Association ಕರ್ನಾಟಕ ರಾಜ್ಯ ಸರ್ಕಾರದಲ್ಲಿ HRMS- ತಂತ್ರಾಂಶ-2.0 ಎಂಬ ನೂತನ ವ್ಯವಸ್ಥೆ ಇತ್ತೀಚಿಗೆ ಪರಿಚಯವಾಗಿದ್ದು, ಈ ತಂತ್ರಾಂಶದ ನಿರ್ವಹಣೆ ಮತ್ತು ಸರ್ಕಾರಿ ನೌಕರರಿಗೆ ನಗದುರಹಿತ ಚಿಕಿತ್ಸೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ (KASS) ನೊಂದಣಿ ಕಾರ್ಯವನ್ನು ಸುಗಮವಾಗಿ ನಿರ್ವಹಣೆ ಮಾಡಲು ಸಹಕಾರಿಯಾಗುವಂತೆ ಸರ್ಕಾರಿ ನೌಕರರಲ್ಲಿ ಅರಿವು ಮೂಡಿಸಲು ದಿನಾಂಕ:24-06-2025 ಮಂಗಳವಾರದಂದು ಶಿವಮೊಗ್ಗ ನಗರದ ಸರ್ಕಾರಿ ನೌಕರರ ಸಭಾಂಗಣದಲ್ಲಿ ಬೆಳಗ್ಗೆ 10.00 ರಿಂದ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಾಗಾರದಲ್ಲಿ ಆರ್ಥಿಕ ಇಲಾಖೆಯ HRMS ತಂತ್ರಾಂಶ-02 ನಿರ್ದೇಶನಾಲಯದಿಂದ ವಿಷಯ ತಜ್ಞರು ಹಾಗೂ ಅಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷವಾಗಿ ಶ್ರೀಮತಿ ನಿರ್ಮಲಾ ಯೋಜನಾಧಿಕಾರಿಗಳು ಇವರು ಹೆಚ್.ಆರ್.ಎಂ.ಎಸ್.ತಂತ್ರಾಂಶ ಮತ್ತು ಇ.ಎಸ್.ಆರ್.ಕುರಿತು ಪರಿಚಯಾತ್ಮಕ ತರಬೇತಿ ನೀಡುವರು. ಸುಮಂತ್ ತಾಂತ್ರಿಕ ತರಭೇತುದಾರರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಹೆಚ್.ಆರ್.ಎಂ.ಎಸ್.-02ಕುರಿತು ಹಾಗೂ ಶ್ರೀಮತಿ ಸುಧಾಮಣಿ ಯೋಜನಾಧಿಕಾರಿಗಳು ಇವರು ಕೆ.ಎ.ಎಸ್.ಎಸ್.ನೋಂದಣಿ ಕುರಿತು ತರಬೇತಿ ನೀಡುವರು.
Karnataka State Govt Employees Association ಈ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಇವರು ಉದ್ಘಾಟಿಸುವರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿ ಅವರು ಮುಖ್ಯ ಅತಿಥಿಗಳಾಗಿ ಹಾಗೂ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌ಅವರು ಉಪಸ್ಥಿತರಿರುವರು.
ನೌಕರರಿಗೆ ಅತ್ಯುಪಯುಕ್ತವಾಗಿರುವ ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಾಗಾರದ ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಕಾರ್ಯಗಾರದಲ್ಲಿ ಭಾಗವಹಿಸುವ ಅಧಿಕಾರಿ ಹಾಗೂ ನೌಕರರಿಗೆ ಓಓಡಿ ಸೌಲಭ್ಯವನ್ನು ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿರುತ್ತಾರೆ ಎಂದು ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Shadakshari C S ಭಾರತೀಯ ಸೇನೆಯ ಸೇವಾ ಮನೋಭಾವ ದೇಶ ರಕ್ಷಣೆಯಲ್ಲಿ ಮಹತ್ವದ ಪಾತ್ರ- ಸಿ.ಎಸ್.ಷಡಾಕ್ಷರಿ
Shadakshari C S ಸೇನಾ ನೇಮಕಾತಿ ಕಚೇರಿ, ಮಂಗಳೂರು ಇವರು ಇಂದು ಭಾರತೀಯ ಸೇನೆಗೆ ಸೇರಬಯಸುವ ಅಭ್ಯರ್ಥಿಗಳಿಗೆ ಸರ್ಕಾರಿ ನೌಕರರ ಭವನ, ಶಿವಮೊಗ್ಗ ಇಲ್ಲಿ ಕರ್ನಲ್ ಸೋಮು ಮಹಾರಾಜನ್, ನಿರ್ದೇಶಕರು, ಸೇನಾನೇಮಕಾತಿ ಕಛೆರಿ, ಮಂಗಳೂರು, ಮೇಜರ್ ಡಾ. ಅಬಜೀತ ಸಿಂಗ್ ಮಾರ್ಗದರ್ಶನ ಶಿಬಿರ ನಡೆಸಿಕೊಟ್ಟರು. ಕರಾಸನೌಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಕಾರ್ಯಕ್ರಮ ಉದ್ಘಾಟಿಸಿ, ಭಾರತೀಯ ಸೇನೆಯ ಸೇವಾಭಾವ, ದೇಶ ರಕ್ಷಣೆಯಲ್ಲಿ ವಹಿಸುವ ಮಹತ್ವದ ಪಾತ್ರದ ಕುರಿತು ಮಾತನಾಡಿದರು. ಕರಾಸನೌಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನಕುಮಾರ ಅಧ್ಯಕ್ಷತೆ ವಹಿಸಿ, ಭಾರತೀಯ ಸೇನೆಗೆ ಸಂಬಂಧಿಸಿದ Shadakshari C S ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಸೇನೆಯ ಪಾತ್ರವನ್ನು ಶ್ಲಾಘಿಸಿದರು. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ಸ್ವಾಗತಿಸಿದರು. ನಿವೃತ್ತ ಕರ್ನಲ್ ರಾಮಚಂದ್ರ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅನಿಲ ಪಾಮಲಪಾಟಿ ವಂದಿಸಿ, ಸತೀಶ ವೈ.ಎಸ್ ಕಾರ್ಯಕ್ರಮ ನಿರೂಪಿಸಿದರು.
MESCOM ಬೆಜ್ಜುವಳ್ಳಿಯಲ್ಲಿ ಜೂನ್ 24 ರಂದು ಮೆಸ್ಕಾಂ ಜನಸಂಪರ್ಕ ಸಭೆ
MESCOM ಬೆಜ್ಜುವಳ್ಳಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜೂ.24 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬAಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 8277882835.
Department of Youth Empowerment and Sports ತೇನ್ಸಿಂಗ್ ನಾರ್ವೆ ರಾಷ್ಟ್ರೀಯ ಸಾಹಸ ಪ್ರಶಸ್ತಿಗೆ ಅರ್ಜಿ ಆಹ್ವಾನ
Department of Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಮಂತ್ರಾಲಯದಿಂದ 2024-25ನೇ ಸಾಲಿನ ಟೆನ್ಜಿಂಗ್ ನೊರ್ಜಿ ನ್ಯಾಷನಲ್ ಅಡ್ವೆಂಜರ್ ಅವಾರ್ಡ್ (TNNAA) ಗಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
2022 ರಿಂದ 2024ನೇ ಸಾಲಿನಲ್ಲಿ ಜಲ ಸಾಹಸ, ವಾಯು ಸಾಹಸ ಮತ್ತು ಭೂ ಸಾಹಸ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಶಿವಮೊಗ್ಗ Department of Youth Empowerment and Sports ಜಿಲ್ಲೆಯ ಕ್ರೀಡಾಪಟುಗಳು ಈ ಪ್ರಶಸ್ತಿಗೆ ಅರ್ಹರಿದ್ದು, ಆಸಕ್ತರು http://awards.gov.in ವೆಬ್‌ಸೈಟ್ ಮೂಲಕ ಜೂ. 30 ರೊಳಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ ಟ್ರೋಲ್ ಫ್ರೀ ನಂ.: 01123386898 ನ್ನು ಸಂಪರ್ಕಿಸುವುದು.
The Bharat Scouts and Guides Karnataka ದೈಹಿಕ ಕ್ಷಮತೆ, ಮಾನಸಿಕ ಸಧೃಡತೆಗೆ ಯೋಗ ಸಹಕಾರಿ – ಡಾ. ಅಮಿತ್ ಕುಮಾರ್
The Bharat Scouts and Guides Karnataka ಭಾರತ್ ಸ್ಕೌಟ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮತ್ತು ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಜಿಲ್ಲಾ ಸ್ಕೌಟ್ ಭವನದ ಬೇಡನ್ ಪೋವೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನಗರದ ಖ್ಯಾತ ಫಿಸಿಷಿಯನ್ ಮತ್ತು ರಾಷ್ಟ್ರಪತಿ ಸ್ಕೌಟ್ ಪದಕ ಪುರಸ್ಕೃತರಾದ ಡಾಕ್ಟರ್ ಅಮಿತ್ ಕುಮಾರ್ ರವರು ಪ್ರಾತ್ಯಕ್ಷಿತ ಉದ್ಘಾಟಿಸಿ ಮಾತನಾಡುತ್ತಿದ್ದರು . ಚಿಕ್ಕಂದಿನಿಂದಲೇ ಯೋಗಭ್ಯಾಸವನ್ನು ಮಾಡುತ್ತ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಕ್ಕಳಿಗೆ ತಿಳಿಹೇಳಿದರು. ಮೊಬೈಲ್ ನಿಂದ ದೂರವಿದ್ದು ಸ್ಕೌಟ್ ಗೈಡ್ ಚಳುವಳಿಯಲ್ಲಿ ತೊಡಗಿಸಿಕೊಂಡರೆ ಸರ್ವಾಂಗೀಣ ಬೆಳವಣಿಗೆ ಹೊಂದಬಹುದು ಎಂದರು.
The Bharat Scouts and Guides Karnataka ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಮೇಡಂ ರವರು ಮಾತನಾಡುತ್ತಾ ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ ಆಯುಷ್ ಇಲಾಖೆಯ ಮಾರ್ಗದರ್ಶನದಲ್ಲಿ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ ಪ್ರತಿ ವರ್ಷವೂ ಯೋಗ ದಿನಾಚರಣೆಯನ್ನು ಆಯೋಜನೆ ಮಾಡಲಾಗುತ್ತಿದ್ದು ಮಕ್ಕಳಿಗೆ ಯೋಗಾಸನಗಳ ಮಹತ್ವವನ್ನ ತಿಳಿಸಿಕೊಡಲಾಗುತ್ತಿದೆ ಜೊತೆಗೆ ಅವರ ಪಾರಮಾರ್ಥಿಕ ಬೆಳವಣಿಗೆಗೆ ಸಂಸ್ಥೆ ಸಹಕಾರ ನೀಡುತ್ತಿದೆ ಎಂದು ಹೇಳಿದರು. ಶ್ರೀ ಚೂಡಾಮಣಿ ಈ. ಪವಾರ್ ಜಿಲ್ಲಾ ಖಜಾಂಚಿ ಅವರು ಸರ್ವರನ್ನು ಸ್ವಾಗತಿಸಿದರು. ಶ್ರೀ ಜಿ ವಿಜಯಕುಮಾರ್ ಕೇಂದ್ರ ಸ್ಥಾನವಿಕ ಆಯುಕ್ತರು ಪ್ರಾಸ್ತವಿಕ ನುಡಿಗಳನಾಡಿದರು. ಶ್ರೀ ಕೆ ವಿ ಚಂದ್ರಶೇಖರಯ್ಯ ಜಿಲ್ಲಾ ಕಾರ್ಯದರ್ಶಿ ಸರ್ವರಿಗೂ ವಂದಿಸಿದರು. ಶ್ರೀ ರಾಜೇಶ್ ವಿ ಅವಲಕ್ಕಿ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಕಾರ್ಯಕ್ರಮವನ್ನು ನಿರೂಪಿಸಿದರು. ಆಯುಷ್ ಇಲಾಖೆಯ ಶ್ರೀ ಮಹೇಂದ್ರ ಕುಮಾರ್, ಕುಮಾರಿ ಮೋನಿಕಾ ಮತ್ತು ಶಿವಗಂಗಾ ಯೋಗ ಕೇಂದ್ರದ ಶ್ರೀಮತಿ ಅಶ್ವಿನಿ ಸಿ. ರವರು ಯೋಗಾಸನಗಳ ಪ್ರಾತ್ಯಕ್ಷಿತೆಯನ್ನು ನಡೆಸಿಕೊಟ್ಟರು. ಶ್ರೀ ಎಸ್. ಜಿ. ಆನಂದ್ ಜಿಲ್ಲಾ ಆಯುಕ್ತರು ಸ್ಕೌಟ್, ಶ್ರೀಮತಿ ಲಕ್ಷ್ಮೀ ರವಿ ಜಿಲ್ಲಾ ಜಂಟಿ ಕಾರ್ಯದರ್ಶಿ , ಶ್ರೀ ವೈ. ಆರ್. ವೀರೇಶಪ್ಪ ಜಿಲ್ಲಾ ಸಹ ಕಾರ್ಯದರ್ಶಿ, ಶ್ರೀಹೆಚ್ ಶಿವಶಂಕರ್ ಜಿಲ್ಲಾ ತರಬೇತಿ ಆಯುಕ್ತ, ಶ್ರೀ ರುದ್ರಪ್ಪ, ಸಹಾಯಕ ಜಿಲ್ಲಾ ಆಯುಕ್ತ ಶ್ರೀ ಮಲ್ಲಿಕಾರ್ಜುನ ಕಾನೂರ್, ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನಗರದ ನ್ಯಾಷನಲ್ ಪಬ್ಲಿಕ್ ಶಾಲೆ, ಕಸ್ತೂರ್ಬಾ ಪ್ರೌಢಶಾಲೆ, ಮೇರಿ ಇಮ್ಮಕ್ಯುಲೇಟ್ ಹಿರಿಯ ಪ್ರಾಥಮಿಕ ಶಾಲೆ, ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಚಾರ್ಯ ತುಳಿಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಮಲ್ನಾಡ್ ಓಪನ್ ಗ್ರೂಪಿನ ಕಬ್, ಬುಲ್ ಬುಲ್, ಸ್ಕೌಟ್ಸ್, ಗೈಡ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಟ್ಟರು.
Karnataka Arya Vysya Community ಆರ್ಯವೈಶ್ಯ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಹರಿಂದ ಅರ್ಜಿ ಆಹ್ವಾನ
Karnataka Arya Vysya Community ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ದಿ ನಿಗಮದಿಂದ 2025-26 ನೇ ಸಾಲಿಗೆ ಸಾಲ-ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಬ್ಯಾಂಕ್‌ಗಳ ಸಹಯೋಗದೊಂದಿಗೆ ಆರ್ಯ ವೈಶ್ಯ ಆಹಾರ ವಾಹಿನಿ/ವಾಹಿನಿ ಯೋಜನೆ, ವಾಸತಿ ಜಲಶಕ್ತಿ ಯೋಜನೆ. ಅರಿವು ಶೈಕ್ಷಣಿಕ ಸಾಲ ಯೋಜನೆ-ಸಿಇಟಿ, ಎನ್‌ಇಇಟಿ ಕೌನ್ಸಲಿಂಗ್ ಮುಗಿದ ನಂತರ ಅರ್ಜಿ ಆಹ್ವಾನಿಸಲಾಗುವುದು.
ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೆಕು ಮತ್ತು ನಮೂನೆ-ಜಿ ಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿದ್ದು ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು. ಅರ್ಜಿದಾರರ ಮೊಬೈಲ್ ಸಂಖ್ಯೆಯು ಆಧಾರ್ ಸಂಖ್ಯೆಗೆ ಜೋಡಣೆಯಾಗಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿರಬೇಕು.
Karnataka Arya Vysya Community ಅರ್ಹ ಅರ್ಜಿದಾರರುಗಳನ್ನು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು. 2019-20 ನೇ ಸಾಲಿನಿಂದ 2021-22 ನೇ ಸಾಲಿನವರೆಗೆ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸಾಲ ಪಡೆದು ಸಕಾಲದಲ್ಲಿ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮರುಪಾವತಿಸಿದ ಫಲಾನುಭವಿಗಳಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ನಿಗಮದ ಸಹಾಯವಾಣಿ ಸಂಖ್ಯೆ 9448451111, ವೆಬ್‌ಸೈಟ್ kacdc.karnataka.gov.in ಇಲ್ಲಿ ಹಾಗೂ ಭಾಗ್ಯ ನಿಲಯ, ಭಂಡಾರಿ ಗ್ಯಾಸ್ ಏಜೆನ್ಸಿ ಹತ್ತಿರ, 1ನೇ ಪ್ಯಾರಲಲ್ ರಸ್ತೆ, ಗಾಂಧಿನಗರ, ಶಿವಮೊಗ್ಗ 577201 ನ್ನು ಸಂಪರ್ಕಿಸಬಹುದೆAದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
Kateel Ashok Pai Memorial College ಯೋಗವಿದ್ದಲ್ಲಿ ರೋಗವಿಲ್ಲ : ಡಾಕ್ಟರ್ ಮಲ್ಲಿಕಾರ್ಜುನ್
Kateel Ashok Pai Memorial College ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಟೀಲ್ ಅಶೋಕ್ ಪೈಸ್ಮಾರಕ ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲರಾದ ಡಾಕ್ಟರ್ ಮಲ್ಲಿಕಾರ್ಜುನರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಯೋಗ ಮತ್ತು ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸಿದರು . ಯೋಗ ಗೊತ್ತಿರುವವನಿಗೆ ರೋಗವಿಲ್ಲ ಯೋಗ ಗೊತ್ತಿರುವವನಿಗೆ ನಿದ್ದೆಯ ಭಂಗವಿಲ್ಲ, ಯೋಗ ಗೊತ್ತಿರುವವನಿಗೆ ಆಯಾಸವಿಲ್ಲ ಎಂದು ತಿಳಿಸಿದರು. ಯೋಗವೆಂಬುದು ಶರೀರ ಮತ್ತು ಮನಸುಗಳನ್ನು ಉಲ್ಲಾಸ ಉತ್ಸಾಹ ಹಾಗೂ ಆರೋಗ್ಯ ಪೂರ್ಣವಾಗಿಡಲು ಇರುವ ಮಾಧ್ಯಮ ಎಂದು ಅವರು ಹೇಳಿದರು .ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ಮಾನಸ ಸಂಸ್ಥೆಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಎನ್ಎಸ್ಎಸ್ ರೆಡ್ ಕ್ರಾಸ್ ಐ ಕ್ಯೂಎಸ್‌ಸಿ ಘಟಕ ,ಕಟೀಲ್ ಅಶೋಕ್ ಪೈ ಸ್ಮಾರಕ ಪೂರಕ ಆರೋಗ್ಯ ವಿಜ್ಞಾನಗಳ ಸಂಸ್ಥೆ, ಕಟೀಲ ಅಶೋಕ್ ಪೈಸ್ಮಾರಕ ನರ್ಸಿಂಗ್ ಸಂಸ್ಥೆ ಹಾಗೂ ಮಾನಸ ಒಕೇಶನಲ್ ಟ್ರೈನಿಂಗ್ ಸೆಂಟರ್ ಸಹಯೋಗದಲ್ಲಿ ಯೋಗ ಹಾಗೂ ಮಾನಸಿಕ ಆರೋಗ್ಯ ವಿಷಯದ ಕುರಿತು ಅರಿವು ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಂ ಎಸ್ ಸಿ ಸೈಕಾಲಜಿ ವಿದ್ಯಾರ್ಥಿಗಳಾದ ಕುಮಾರಿ ಕೀರ್ತನ ,ಕುಮಾರಿ ರಕ್ಷಾ ಹಾಗೂ ಕುಮಾರಿ ಪ್ರಜ್ಞ ಮಾನಸಿಕ ಆರೋಗ್ಯಕ್ಕೆ ಅನುಕೂಲವಾಗುವ ವಿವಿಧ ಯೋಗಾಸನ ಹಾಗೂ ಮುದ್ರೆಗಳ ಪ್ರಾತ್ಯಕ್ಷಿಕೆಯನ್ನು ನೀಡಿದರು. ಯೋಗ ಮತ್ತು ಮಾನಸಿಕ ಆರೋಗ್ಯ ಸರ್ಟಿಫಿಕೇಟ್ ಕೋರ್ಸ್ಗಳ ಮೂಲಕ ವಿಶೇಷ ತರಬೇತಿಯನ್ನು ಪಡೆದ ಈ ವಿದ್ಯಾರ್ಥಿಗಳು ಸಮರ್ಥವಾಗಿ ಪ್ರತಿ ಅಸನ ನಮ್ಮ ಮಾನಸ ಮಾನಸಿಕ ಆರೋಗ್ಯಕ್ಕೆ ಹೇಗೆ ಅನುಕೂಲವಾಗಬಲ್ಲದು ಎಂಬ ವಿವರಣೆಯನ್ನು ನೀಡಿದರು. Kateel Ashok Pai Memorial College ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅವರು ಯೋಗ ಎಂಬುದು ಮನಸ್ಸು ಮತ್ತು ಶರೀರಗಳ ಮಧ್ಯೆ ಒಂದು ಆರೋಗ್ಯಪೂರ್ಣವಾದ ಸಂಪರ್ಕ ಹಾಗೂ ಸಂಬಂಧವನ್ನು ಏರ್ಪಡಿಸಬಲ್ಲದು ಎಂದು ಉದಾಹರಣೆಗಳ ಮೂಲಕ ತಿಳಿಸಿದರು. ಯೋಗವು ವ್ಯಾಯಾಮದಿಂದ ಪ್ರಾರಂಭವಾಗಿ ಸಂಕೀರ್ಣ ಆಸನಗಳು ಪ್ರಾಣಾಯಾಮ ಹಾಗೂ ಕೊನೆಗೆ ಸಮಾಧಿ ಎಂಬ ಅಷ್ಟಾಂಗ ಹಂತಗಳನ್ನು ಒಳಗೊಂಡಿದೆ ಆದರೆ ಮನುಷ್ಯನ ದಿನನಿತ್ಯದ ಜೀವನಕ್ಕೆ ಯೋಗ ಪ್ರಾಣಾಯಾಮ ಹಾಗೂ ವ್ಯಾಯಾಮದಂತಹ ಅಭ್ಯಾಸಗಳು ಪ್ರತಿಯೊಬ್ಬರಿಗೂ ಅಗತ್ಯ ಎಂಬುದನ್ನು ತಿಳಿಸಿದರು. ಈ ಕಾರ್ಯಕ್ರಮದ ನಿರೂಪಣೆಯನ್ನು ಎಂ ಎಸ್ ಸಿ ಕ್ಲಿನಿಕಲ್ ಸೈಕಾಲಜಿ ವಿದ್ಯಾರ್ಥಿನಿ ಕುಮಾರಿ ರಾಜೇಶ್ವರಿ ನಡೆಸಿಕೊಟ್ಟರು. ಮಾನಸ ಟ್ರಸ್ಟಿನಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ವಿವಿಧ ಸಿಬ್ಬಂದಿಗಳು ವಿಶ್ವ ಯೋಗ ದಿನಾಚರಣೆಯ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು. ಹಾಗೂ ಯೋಗ ಮತ್ತು ಮಾನಸಿಕ ಆರೋಗ್ಯದ ಕುರಿತು ಸಮುದಾಯದಲ್ಲಿ ಜನರಲ್ಲಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿದರು.

International Yoga Day ಯೋಗವು ಜೀವನಕ್ಕೆ ಸಂಜೀವಿನಿ ಇದ್ದಂತೆ”- ಶಿಕ್ಷಕ ಕಬ್ಬೂರ
International Yoga Day “ಯೋಗವೆಂದರೆ ಅದು ಕೇವಲ ವ್ಯಾಯಾಮವಲ್ಲ, ಅದೊಂದು ಸಂಜೀವಿನಿ, ಯೋಗವು ದೇಹ ಮತ್ತು ಆತ್ಮದೊಂದಿಗೆ ಮನಸ್ಸನ್ನು ಏಕೀಕರಿಸುವ ಸಾಧನವಾಗಿದ್ದು, ಅದು ನಮ್ಮ ದೇಹ ಮತ್ತು ಪ್ರಜ್ಞೆಯನ್ನು ಒಗ್ಗುಡಿಸುತ್ತದೆ, ಆದ್ದರಿಂದ ಇಂದಿನ ಜಗತ್ತಿನಲ್ಲಿ ಸಾಮರಸ್ಯ ಮತ್ತು ವಿಶ್ವ ಶಾಂತಿಗಾಗಿ ಯೋಗವು ಅತೀ ಅವಶ್ಯಕವಾಗಿದೆ. ಯೋಗದಿಂದ ನಾಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಆರೋಗ್ಯದಲ್ಲಿ ಸುಧಾರಣೆ ಸಾಧ್ಯ, ಯೋಗವು ಭಾರತೀಯ ಸಂಸ್ಕೃತಿಯ ಪ್ರತೀಕ ಎಂಬುದು ನಮ್ಮ ಹೆಮ್ಮೆ” ಎಂದು ಶಿಕ್ಷಕ ಹಾಗೂ ನೌಕರ ಸಂಘದ ಕಾರ್ಯದರ್ಶಿ ಎನ್.ಎನ್.ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಪಟ್ಟಣದ ಸ.ಕಿ.ಪ್ರಾ ಕನ್ನಡ ಶಾಲೆ ನಂ-6 ರಲ್ಲಿ “ಅಂತರರಾಷ್ಟ್ರೀಯ ಯೋಗ ದಿನಾಚರಣೆ”ಯಲ್ಲಿ ಮಾತನಾಡಿದ ಅವರು ಯೋಗದಲ್ಲಿನ ನಿಂತು ಮಾಡುವ ಆಸನಗಳು, ಕುಳಿತು ಮಾಡುವ ಆಸನಗಳು, ಮಲಗಿ ಮಾಡುವ ಆಸನಗಳು, ಪ್ರಾಣಾಯಾಮ, ಧ್ಯಾನಗಳ ಮಹತ್ವ ಮತ್ತು ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಿದರು.
ನಂತರ ಕೇಲವು ಆಸನಗಳನ್ನು ಮಕ್ಕಳಿಂದ ಪ್ರಾಯೋಗಿಕವಾಗಿ ಮಾಡಿಸಲಾಯಿತು. ಈ ವೇಳೆ ಶಿಕ್ಷಕಿ ಎಮ್.ಆರ್.ಫಂಡಿ, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಯವರು, ಪಾಲಕ-ಪೋಷಕರು ಮತ್ತು ಉಪಸ್ಥಿತರಿದ್ದರು.
