Thursday, February 26, 2026
Thursday, February 26, 2026
Home Blog Page 273

B. Y. Raghavendra ದೇಹ-ಮನಸ್ಸು-ಆತ್ಮದ ಸಂಯೋಜನೆಯಾದ ಯೋಗವನ್ನು ಅಳವಡಿಸಿಕೊಳ್ಳಬೇಕು : ಬಿ.ವೈ.ರಾಘವೇಂದ್ರ

0

B. Y. Raghavendra ದೇಹ, ಮನಸ್ಸು, ಮತ್ತು ಆತ್ಮವನ್ನು ಸಂಯೋಜಿಸುವ ಹಾಗೂ ಮಾನವ ಪಂಚೇಂದ್ರಿಯಗಳ ಮೇಲೆ ಹಿಡಿತ ಸಾಧಿಸಲು ಸಹಕರಿಸುವ ಯೋಗವನ್ನು ಎಲ್ಲರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ಕರೆ ನೀಡಿದರು.

ಶಿವಮೊಗ್ಗ ಜಿಲ್ಲಾ ಆಯುಷ್ ಇಲಾಖೆ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂತರಾಷ್ಟ್ರೀಯ ಯೋಗ ದಿನಾಚರಣೆ ಘೋಷಣೆ ನಂತರ ಯೋಗವನ್ನು ಇಡೀ ಪ್ರಪಂಚ ಒಪ್ಪಿದೆ. ಈ ಜಾಗತಿಕ ಆಚರಣೆಯು ಏಕತೆ ಮತ್ತು ಸಾಮರಸ್ಯವನ್ನು ಬೆಳೆಸುತ್ತದೆ. ನಮ್ಮ ದೇಶ ವಿಶ್ವಗುರು ಆಗಬೇಕಾದರೆ ನಾವೆಲ್ಲರೂ ಆರೋಗ್ಯವಂತ ದೇಹ ಮತ್ತು ಮನಸ್ಸು ಹೊಂದುವ ಸಂಕಲ್ಪ ಮಾಡಬೇಕು. ಎಂದರು.

ದೇಶಕ್ಕೆ ಸ್ವಾತಂತ್ರ‍್ಯ ಬಂದು 2047 ಕ್ಕೆ 100 ವರ್ಷ ತುಂಬಲಿದ್ದು ಈ ವೇಳೆಗೆ ದೇಶವು ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಅಭಿವೃದ್ದಿಯ ತೇರನ್ನು ಎಳೆಯೋಣ ಎಂದು ಹೇಳಿದರು.

ವಿಧಾನ ಪರಿಷತ್ ಶಾಸಕರಾದ ಡಿ.ಎಸ್.ಅರುಣ್ ಮಾತನಾಡಿ, ಯೋಗದಿಂದ ಬದುಕು ಉತ್ತಮ ವಾಗಿದೆ. ಸಾವಿರಾರು ವರ್ಷಗಳಿಂದ ದೇಹ ಮತ್ತು ಮನಸ್ಸನ್ನು ಒಟ್ಟುಗೂಡಿಸುವ ಅದ್ಭುತ ಕೆಲಸವನ್ನು ಯೋಗ ಮಾಡುತ್ತಾ ಬಂದಿದೆ. ಪ್ರಸ್ತುತ 177 ದೇಶಗಳಲ್ಲಿ ಯೋಗ ಅಭ್ಯಾಸ ಮಾಡುತ್ತಿರುವುದು ಹೆಗ್ಗಳಿಕೆಯಾಗಿದೆ. ಆರೋಗ್ಯ ಚೆನಾಗಿದ್ದರೆ ಬದುಕು ಚೆನ್ನಾಗಿರುತ್ತದೆ. ಈ ನಿಟ್ಟಿನಲ್ಲಿ ಆಯುಷ್ ಇಲಾಖೆ ಜನರಿಗೆ ಅನುಕೂಲವಾಗುವಂತಹ ಯೋಗಾಭ್ಯಾಸ ಮತ್ತು ಇತರೆ ಚಟುವಟಿಕೆಗಳನ್ನು ಮಾಡುತ್ತಿದ್ದು, ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ನಮ್ಮ ದೇಶ ಯೋಗ ಸೇರಿದಂತೆ ಹಲವಾರು ಉತ್ತಮ ಕೊಡುಗೆಗಳನ್ನು ಪ್ರಪಂಚಕ್ಕೆ ನೀಡಿದೆ. ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ನಮ್ಮದು. ಪ್ರಧಾನಿಯವರು ಇಡೀ ಜಗತ್ತಿಗೇ ಯೋಗವನ್ನು ಪರಿಚಯಿಸಿದ್ದಾರೆ.
ಯೋಗ ದೇಹ ಮತ್ತು ಮನಸ್ಸಿನ ಸಮಾಗಮವಾಗಿದ್ದು ಇದರಿಂದ ಅನೇಕ ಆರೋಗ್ಯದ ಲಾಭಗಳಿವೆ. ಒಂದು ಗಳಿಗೆ ಸರಳ ಯೋಗ ಮಾಡಿದರೆ 150 ಕ್ಯಾಲರಿ ದಹನ ಆಗುತ್ತದೆ. ಯೋಗವು ಒಳಗಿನ ಮನಸ್ಸಿಗೆ ಸಂಸ್ಕೃತಿ ನೀಡುವ ಶಕ್ತಿ ಹೊಂದಿದೆ. ಚಿಂತೆ ಹೋಗಲಾಡಿಸುವ ಶಕ್ತಿ ಯೋಗಕ್ಕಿದೆ.
ನಿದ್ರೆ ಒಂದು ಉತ್ತಮ ಔಷಧವಾಗಿದ್ದು ಯೋಗಾಭ್ಯಾಸ ಮಾಡಿದರೆ ಉತ್ತಮ ನಿದ್ರೆ ಬರುತ್ತದೆ.ಇದು ಸಮತೋಲನ ಹಾಗೂ ನೆನಪಿನ ಶಕ್ತಿ ಕೂಡ ವೃದ್ದಿಸುತ್ತದೆ ಜೊತೆಗೆ ಆತ್ಮ ತೃಪ್ತಿ ಸಿಗುತ್ತದೆ. ಆದ್ದರಿಂದ ಎಲ್ಲರೂ ಯೋಗಾಭ್ಯಾಸ ಮಾಡಬೇಕು ಎಂದು ಕರೆ ನೀಡಿದರು.

B. Y. Raghavendra ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಪ್ರಶಾಂತ್ ಕೆಕುಡ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಬಹುತೇಕ ರಾಷ್ಟ್ರಗಳು ಯೋಗಾಭ್ಯಾಸ ಮಾಡುತ್ತಿದ್ದು 23 ಕೋಟಿಯಷ್ಟು ಜನ ಒಂದೇ ದಿನ ಯೋಗಾಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾಮೂಹಿಕ ಯೋಗಾಭ್ಯಾಸಕ್ಕೆ ಸಂಬಂಧಿಸಿದಂತೆ ಈಗಾಗಲೇ 17 ಗಿನ್ನೆಸ್ ದಾಖಲೆ ಮಾಡಲಾಗಿದ್ದು, ಇನ್ನೊಂದು ಗಿನ್ನೆಸ್ ದಾಖಲೆಗೆ ಸನ್ನದ್ದವಾಗಿದೆ.
ಬಿಡುವಿಲ್ಲದ ಒತ್ತಡದ ಜೀವನದಲ್ಲಿ 2 ರಿಂದ 5 ನಿಮಿಷದ ಯೋಗಾಭ್ಯಾಸ ಮಾಡಲು ‘ವೈ ಬ್ರೇಕ್’ ಮೊಬೈಲ್ ಆ್ಯಪ್ ಪರಿಚಯಗೊಳಿಸಲಾಗಿದೆ. ಯೋಗ ದಿನಾಚರಣೆ ಪ್ರಯುಕ್ತ ಆಯುಷ್ ಇಲಾಖೆ 10 ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಯೋಗಕ್ಕೆ ಸಂಬಂಧಿಸಿದ ವಿವಿಧ ರೀತಿಯ ಸ್ಪರ್ಧೆ ನಡೆಸಲಾಗಿದೆ.

ಜಿಲ್ಲಾದ್ಯಂತ ಯೋಗಾಭ್ಯಾಸ ಮತ್ತು ಇತರೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.

ಬಾಪೂಜಿ ಆಯುರ್ವೇದಿಕ್ ಕಾಲೇಜಿನ ವಿದ್ಯಾರ್ಥಿನಿಯರು ಯೋಗ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಯೋಗ ದಿನಾಚರಣೆ ಪ್ರಯುಕ್ತ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿವರಣೆ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್.ರವಿಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಿಂಗರಾಜ ಎಸ್ ಹಿಂಡಸಗಟ್ಟಿ, ಕೆಎಸ್ ಆರ್ ಪಿ ಕಮಾಂಡೆಂಟ್ ಯುವಕುಮಾರ್, ಆರ್ ಎಎಫ್ ಕಮಾಂಡೆಂಡ್ ಪ್ರದೀಪ್, ಡಿಎಚ್‌ಒ ಡಾ. ನಟರಾಜ್, ಯುವ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಇತರೆ ಅಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು. ಯೋಗಾಪಟುಗಳು ಪಾಲ್ಗೊಂಡಿದ್ದರು.

World Yoga Day ಯೋಗ ಬದುಕಿನ ಹಾದಿಯ ಕೈದೀವಿಗೆ : ರೊ. ಕೆ. ಬಿ. ರವಿಶಂಕರ್

0

World Yoga Day ವಿಶ್ವ ಯೋಗ ದಿನಾಚರಾಣೆಯನ್ನು ರೊಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗಾಸನ ಮಾಡುವುದ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರೊಟರಿ ಪೂರ್ವ ಎಜುಕೇಶನಲ್ ಮತ್ತು ಛಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ರೊ. ಕೆ ಬಿ ರವಿಶಂಕರ್ ಮಾತನಡುತ್ತಾ ಯೋಗ ಎಂಬುದು ಬದುಕಿನ ಹಾದಿಯ ಕೈದೀವಿಗೆ ಎಂದು ಸಹಜ ಶುದ್ದ ಬದುಕನ್ನು ಸಾಧ್ಯಮಾಡಿಕೊಳ್ಳುವುದು ಹೇಗೆ ಎಂಬುದಕ್ಕೆ ಯೋಗದಲ್ಲಿ ಉತ್ತರವಿದೆ ಎಂದು, ಪ್ರತಿನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡವಾಗಬಹುದೆಂದು ವಿದ್ಯಾರ್ಥಿಗಳೆಲ್ಲರೂ ಈ ಯೋಗಾಭ್ಯಾಸವನ್ನು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಇದೆ ಸಂದರ್ಭದಲ್ಲಿ ರೊಟರಿ ಪೂರ್ವ ಎಜುಕೇಶನ್ ಮತ್ತು ಛಾರಿಟಬಲ್ ಟ್ರಸ್ಟ್ ನ ಕಾರ್ಯದರ್ಶಿ ರೊ. ಎಸ್ ಸಿ ರಾಮಚಂದ್ರ ರವರು ಮಾತನಾಡುತ್ತಾ ನೂರಾರು ಯೋಗ ಸೂತ್ರಗಳಿದ್ದರೂ ಅವುಗಳೆಲ್ಲವನ್ನು ಕ್ರೂಢೀಕರಿಸಿ ಯೋಗವನ್ನು ಒಂದು ಸೂತ್ರಗಳ ರೂಪದಲ್ಲಿ ಜಗತ್ತಿಗೆ ಪ್ರಚುರ ಪಡಿಸಿದವರು. ಮಹರ್ಷಿ ಪತಂಜಲಿಯವರೆಂದು ಬಹಳ ಮುಖ್ಯವಾಗಿ ಯೊಗದಲ್ಲಿ ಅಷ್ಟಾಂಗಯೊಗ, ಪ್ರಾಣಯಾಮ, ಸೂರ್ಯನಮಸ್ಕಾರ ಮುಂತಾದ ಆಸನಗಳನ್ನು ಜೀವನದಲ್ಲಿ ರೂಢಿಸಿಕೊಂಡರೆ ಈ ಆಸನಗಳು ದೈಹಿಕ ಮತ್ತು ಮಾನಸಿಕ ಕಾಯಿಲೆಯಳಿಗೆ ದಿವ್ಯ ಔಷಧವೆಂದು ತಿಳಿಸಿದರು.
ಯೋಗವೆಂದರೆ ಆಸನ ಪ್ರಾಣಯಾಮಗಳಷ್ಟೇ ಅಲ್ಲದೆ ನಮ್ಮ ರಾಷ್ಟವು ಸಾಕ್ಷತ್‌ಕರಿಸಿಕೊಂಡ ಒಂದು ಜೀವನ ದೃಷ್ಟಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಟ್ರಸ್ಟಿ ಜಂಟಿ ಕಾರ್ಯದರ್ಶಿ(ಆಡಳಿತ) ರೊ ಜಿ ವಿಜಯಕುಮಾರ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಈ ದಿನ ಪ್ರಪಂಚಾದ್ಯಂತ 215 ರಾಷ್ಟಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಪಾಶ್ಚತ್ಯರಿಗೂ ಕೂಡ ಯೋಗದ ಮಹತ್ವದ ಅರಿವಾಗಿದೆ ಎಂದು ಈ ಕಾರಣಕ್ಕಾಗಿಯೇ ಪ್ರಾಚೀನ ಭಾರತದ ಚಿಂತನೆಗಳು ವಿಶ್ವಾದ್ಯಂತ ಹರಡಲು ಯೋಗದ ಮತ್ವವೇ ಕಾರಣವಾಗಿರುತ್ತದೆಂದು ತಿಳಿಸಿದರು.

ಲಿಂಗ ಭೇದವಿಲ್ಲದೇ ಪ್ರತಿಯೋಬ್ಬರು ಯೋಗಾಭ್ಯಾಸಗಳನ್ನು ಮಾಡುವುದರ ಮೂಲಕ ಸದೃಡ ಜೀವನವನ್ನು ಕಟ್ಟಿಕೊಳ್ಳಬೇಕೆಂದು ಕರೆನೀಡಿದರು.

ಇದೇ ಸಂದರ್ಭದಲ್ಲಿ ಟ್ರಸ್ಟಿನ ಉಪಾದ್ಯಕ್ಷರಾದ ರೋ ನಾಗವೇಣಿಯವರು ಮಾತನಾಡುತ್ತಾ ಪ್ರಾಚೀನ ಭಾರತದಮೇಲೆ ಬೌತಿಕ ಮತ್ತು ಸಾಂಸೃತಿ ದಾಳಿಗಳು ನಿರಂತರವಾಗಿ ನಡೇದರೂ ಇಂದಿಗೂ ಯೋಗದಂತಹ ಚಿಂತನೆಗಳು ಉಳಿದುಕೊಂಡಿವೆೆ ಎಂದರೆ ಯೋಗದ ಮಹತ್ವದ ಅರಿವು ಸಾಕ್ಷತ್ಕಾರವಾಗುತ್ತದೆಂದು ಈ ಕಾರಣಕ್ಕಾಗಿ ವಿದ್ಯಾರ್ಥಿಗಳಷ್ಟೇ ಅಲ್ಲದೇ ಶಿಕ್ಷಕರು/ಶಿಕ್ಷಕಿಯರು ಕ್ರಮಬದ್ದ ಜೀವನವನ್ನು ರೂಢಿಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಬೇಕೆಂದು ಕರೆ ನೀಡಿದರು.

World Yoga Day ಈ ವಿಶ್ವಯೋಗ ದಿನಾಚರಣೆ ಸಂದರ್ಭದಲ್ಲಿ ಶಿವಗಂಗ ಯೋಗ ಕೇಂದ್ರದ ಶ್ರೀಮತಿ ಪ್ರೇಮಪೂರ್ಣಚಂದ್ರ ಮತ್ತು ಚಿತ್ರಮಂಜುನಾಥ ರವರು ವಿದ್ಯಾರ್ಥಿಗಳಿಗೆ ಯೋಗಾಸನಗಳ ಪ್ರಾತ್ಯಕ್ಷಿಕೆ ಗಳ ಮೂಲಕ ವಿದ್ಯಾರ್ಥಿಗಳಿಗೆ ಯೋಗಾಸನಗಳ ಪರಿಚಯಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಿನ್ಸಪಾಲರಾದ ಸೂರ್ಯನಾರಾಯಣ್ ಮತ್ತು ಮಾಜಿ ಕಾರ್ಪೂಟರ್ ಶ್ರೀಮತಿ ರೊ. ಅನಿತಾ ರವಿಶಂಕರ್ ಶಾಲೆಯ ಶಿಕ್ಷಕ/ಶಕ್ಷಕಿಯರು ಮತ್ತು ಸಿಬ್ವಂದಿವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Bharat Scouts and Guides ಬೈಕ್ ಟ್ಯಾಕ್ಸಿ ಚಾಲಕರ ಪ್ರತಿಭಟನಾ ರ‍್ಯಾಲಿ

0

Bharat Scouts and Guides ಭಾರತ್ ಸ್ಕೌಟ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮತ್ತು ಆಯುಷ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರದ ಜಿಲ್ಲಾ ಸ್ಕೌಟ್ ಭವನದ ಬೇಡನ್ ಪೋವೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನಗರದ ಖ್ಯಾತ ಫಿಸಿಷಿಯನ್ ಮತ್ತು ರಾಷ್ಟ್ರಪತಿ ಸ್ಕೌಟ್ ಪದಕ ಪುರಸ್ಕೃತರಾದ ಡಾಕ್ಟರ್ ಅಮಿತ್ ಕುಮಾರ್ ರವರು ಪ್ರಾತ್ಯಕ್ಷಿತ ಉದ್ಘಾಟಿಸಿ ಮಾತನಾಡುತ್ತಿದ್ದರು . ಚಿಕ್ಕಂದಿನಿಂದಲೇ ಯೋಗಭ್ಯಾಸವನ್ನು ಮಾಡುತ್ತ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಕ್ಕಳಿಗೆ ತಿಳಿಹೇಳಿದರು. ಮೊಬೈಲ್ ನಿಂದ ದೂರವಿದ್ದು ಸ್ಕೌಟ್ ಗೈಡ್ ಚಳುವಳಿಯಲ್ಲಿ ತೊಡಗಿಸಿಕೊಂಡರೆ ಸರ್ವಾಂಗೀಣ ಬೆಳವಣಿಗೆ ಹೊಂದಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಮೇಡಂ ರವರು ಮಾತನಾಡುತ್ತಾ ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ಹಾಗೂ ಆಯುಷ್ ಇಲಾಖೆಯ ಮಾರ್ಗದರ್ಶನದಲ್ಲಿ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ ಪ್ರತಿ ವರ್ಷವೂ ಯೋಗ ದಿನಾಚರಣೆಯನ್ನು ಆಯೋಜನೆ ಮಾಡಲಾಗುತ್ತಿದ್ದು ಮಕ್ಕಳಿಗೆ ಯೋಗಾಸನಗಳ ಮಹತ್ವವನ್ನ ತಿಳಿಸಿಕೊಡಲಾಗುತ್ತಿದೆ ಜೊತೆಗೆ ಅವರ ಪಾರಮಾರ್ಥಿಕ ಬೆಳವಣಿಗೆಗೆ ಸಂಸ್ಥೆ ಸಹಕಾರ ನೀಡುತ್ತಿದೆ ಎಂದು ಹೇಳಿದರು. ಶ್ರೀ ಚೂಡಾಮಣಿ ಈ. ಪವಾರ್ ಜಿಲ್ಲಾ ಖಜಾಂಚಿ ಅವರು ಸರ್ವರನ್ನು ಸ್ವಾಗತಿಸಿದರು. ಶ್ರೀ ಜಿ ವಿಜಯಕುಮಾರ್ ಕೇಂದ್ರ ಸ್ಥಾನವಿಕ ಆಯುಕ್ತರು ಪ್ರಾಸ್ತವಿಕ ನುಡಿಗಳನಾಡಿದರು. ಶ್ರೀ ಕೆ ವಿ ಚಂದ್ರಶೇಖರಯ್ಯ ಜಿಲ್ಲಾ ಕಾರ್ಯದರ್ಶಿ ಸರ್ವರಿಗೂ ವಂದಿಸಿದರು. ಶ್ರೀ ರಾಜೇಶ್ ವಿ ಅವಲಕ್ಕಿ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಕಾರ್ಯಕ್ರಮವನ್ನು ನಿರೂಪಿಸಿದರು. Bharat Scouts and Guides ಆಯುಷ್ ಇಲಾಖೆಯ ಶ್ರೀ ಮಹೇಂದ್ರ ಕುಮಾರ್, ಕುಮಾರಿ ಮೋನಿಕಾ ಮತ್ತು ಶಿವಗಂಗಾ ಯೋಗ ಕೇಂದ್ರದ ಶ್ರೀಮತಿ ಅಶ್ವಿನಿ ಸಿ. ರವರು ಯೋಗಾಸನಗಳ ಪ್ರಾತ್ಯಕ್ಷಿತೆಯನ್ನು ನಡೆಸಿಕೊಟ್ಟರು. ಶ್ರೀ ಎಸ್. ಜಿ. ಆನಂದ್ ಜಿಲ್ಲಾ ಆಯುಕ್ತರು ಸ್ಕೌಟ್, ಶ್ರೀಮತಿ ಲಕ್ಷ್ಮೀ ರವಿ ಜಿಲ್ಲಾ ಜಂಟಿ ಕಾರ್ಯದರ್ಶಿ , ಶ್ರೀ ವೈ. ಆರ್. ವೀರೇಶಪ್ಪ ಜಿಲ್ಲಾ ಸಹ ಕಾರ್ಯದರ್ಶಿ, ಶ್ರೀಹೆಚ್ ಶಿವಶಂಕರ್ ಜಿಲ್ಲಾ ತರಬೇತಿ ಆಯುಕ್ತ, ಶ್ರೀ ರುದ್ರಪ್ಪ, ಸಹಾಯಕ ಜಿಲ್ಲಾ ಆಯುಕ್ತ ಶ್ರೀ ಮಲ್ಲಿಕಾರ್ಜುನ ಕಾನೂರ್, ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ನಗರದ ನ್ಯಾಷನಲ್ ಪಬ್ಲಿಕ್ ಶಾಲೆ, ಕಸ್ತೂರ್ಬಾ ಪ್ರೌಢಶಾಲೆ, ಮೇರಿ ಇಮ್ಮಕ್ಯುಲೇಟ್ ಹಿರಿಯ ಪ್ರಾಥಮಿಕ ಶಾಲೆ, ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಚಾರ್ಯ ತುಳಿಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಮಲ್ನಾಡ್ ಓಪನ್ ಗ್ರೂಪಿನ ಕಬ್, ಬುಲ್ ಬುಲ್, ಸ್ಕೌಟ್ಸ್, ಗೈಡ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಟ್ಟರು

International Yoga Day ಯೋಗ ದಿನಾಚರಣೆ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ : ಶ್ರೀ ರುದ್ರಾರಾಧ್ಯ ಸಿ ವಿ

0

International Yoga Day ಅಂತರಾಷ್ಟ್ರೀಯ ಯೋಗ ದಿನ ಒಂದು ರಾಷ್ಟ್ರೀಯ ಹಬ್ಬವಿದ್ದಂತೆ ನಾವೆಲ್ಲರೂ ಯುಗಾದಿ ಹಬ್ಬವನ್ನು ಹೇಗೆ ಆಚರಿಸುತ್ತೇವೋ ಅದೇ ರೀತಿಯಲ್ಲಿ ಇವತ್ತಿನ ದಿನ ನಮ್ಮೆಲ್ಲರಿಗೂ ಕೂಡ ಯೋಗದ ಯೋಗ ಆಚರಿಸುವ ವಿಶೇಷ ಹಬ್ಬದ ಸಂಭ್ರಮವಾಗಿದೆ ಅದಾಗಿಯೂ ಈ ಬಾರಿಯ ವಿಶೇಷ ಎಂದರೆ ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಇವತ್ತು ಯೋಗ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದು ಯೋಗ ಗುರುಗಳಾದ ಶ್ರೀ ರುದ್ರಾರಾಧ್ಯ ಸಿ.ವಿ ಅವರು ಬಣ್ಣಿಸಿದರು.
ಕೇಂದ್ರ ಸಂವಹನ ಇಲಾಖೆ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ ಶಿವಮೊಗ್ಗ ಹಾಗೂ ಶ್ರೀ ಶಿವಗಂಗಾ ಯೋಗ ಕೇಂದ್ರ (ರಿ.) ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಹಾಗೂ ಯೋಗದ ಅನುಭವವನ್ನು ಇಡೀ ಪ್ರಪಂಚಕ್ಕೆ ಮುಟ್ಟಿಸಿದಂತಹ ಹೆಗ್ಗಳಿಕೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜಿ ಅವರಿಗೆ ಸಲ್ಲುತ್ತದೆ ಎಂದು ಹೇಳುತ್ತಾ ಯೋಗದ ಉಪಯೋಗಗಳ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಅವರು ಇವತ್ತಿನ 11ನೇ ಅಂತರಾಷ್ಟ್ರೀಯ ಯೋಗ ದಿನದ ವಿಶೇಷತೆಯನ್ನು ತಿಳಿಸುತ್ತಾ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
International Yoga Day ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಶ್ರೀ ಶಿವಗಂಗಾ ಯೋಗ ಕೇಂದ್ರ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ರುದ್ರೇಗೌಡರು ಮಾತನಾಡುತ್ತಾ ಈ ದಿನ 11ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದೇವೆ, ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರು ಹಾಕಿಕೊಟ್ಟ ಯೋಗ ದಿನಾಚರಣೆಯು ಇವತ್ತು ನಾವು 11ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ ಇದು ಬರಿ ಶಿವಮೊಗ್ಗದಲ್ಲೇ ಅಲ್ಲ ಇಡೀ ಪ್ರಪಂಚದಾದ್ಯಂತ ಈ ದಿನ ಯೋಗ ದಿನವನ್ನಾಗಿ ಆಚರಿಸುವಂತೆ ಎಲ್ಲರನ್ನ ಪ್ರೇರೇಪಿಸಿ ಈ ದಿನವನ್ನು ಹಬ್ಬದ ರೀತಿಯಲ್ಲಿ ನಾವೆಲ್ಲರೂ ಆಚರಣೆಯನ್ನ ಮಾಡುತ್ತಿದ್ದೇವೆ ಎಂದು ಹೇಳುತ್ತಾ ಯೋಗ ಗುರುಗಳಾದ ಶ್ರೀ ರುದ್ರಾರಾಧ್ಯ ಸಿ ವಿ ಅವರ ನಿಸ್ವಾರ್ಥ ಸೇವೆಯೊಂದಿಗೆ ಇವತ್ತು ಶಿವಮೊಗ್ಗದಲ್ಲಿ ನಮ್ಮ ಕೇಂದ್ರದ 36 ಉಪ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಈ ಒಂದು ಬೃಹತ್ ಮಟ್ಟದ ಸಂಖ್ಯೆಯಲ್ಲಿ ಯೋಗ ದಿನವನ್ನು ಆಚರಣೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಯೋಗ ಗುರುಗಳ ಶ್ರಮ ನಿಷ್ಠೆ ಕಾರಣ ಎಂದು ಹೇಳಿದರೆ ತಪ್ಪಾಗಲಾರದು ಎಂದು ಅವರ ಕಾರ್ಯ ಕ್ಷಮತೆಯನ್ನು ಸ್ಮರಿಸುತ್ತಾ ಎಲ್ಲರಿಗೂ ಕೂಡ ಯೋಗ ದಿನದ ಶುಭಾಶಯಗಳನ್ನ ಕೋರಿದರು.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಷಡಕ್ಷರಿ ಯವರು ಯೋಗ ಗುರುಗಳಾದ ಶ್ರೀ ರುದ್ರಾರಾಧ್ಯ ಸಿ ವಿ ಅವರಿಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷರಾದ ಶ್ರೀ ಜಿ.ವಿಜಯಕುಮಾರ್, ಶ್ರೀ ಜ್ಯೋತಿಪ್ರಕಾಶ್, ಪರಿಸರ ನಾಗರಾಜು,
ಹೊಸ ತೋಟ ಸೂರ್ಯನಾರಾಯಣ, ಮೋಹನ್ ಬಾಳೇಕಾಯಿ, ಆನಂದ ಮೂರ್ತಿ. ದೇವೇಂದ್ರಪ್ಪ . ಮನು.
ಪರಮೇಶ್. ಕಾಟನ್ ಜಗದೀಶ್. ಪರೋಪಕಾರಂ ಆನಂದ್ ಕುಮಾರ್, ಡಿಎಸ್ ಚಂದ್ರಶೇಖರ್. ಪ್ರಾರ್ಥನಾ ಹಾಲಪ್ಪ,ಕೇಂದ್ರ ಸಂವಹನ ಇಲಾಖೆ ಭಾರತ ಮತ್ತು ಪ್ರಸಾರ ಸಚಿವಾಲಯದ ಶ್ರೀ ಲಕ್ಷ್ಮಿಕಾಂತ ಸಿವಿ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಯೋಗ ಶಿಕ್ಷಕರು ಯೋಗ ಬಂಧುಗಳು ನಗರದ 36 ಯೋಗ ಕೇಂದ್ರದ ಯೋಗ ಶಿಬಿರಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

MESCOM ಜೂ.24 ರಂದು ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ನಗರದ ಎಂಆರ್‌ಎಸ್‌ನ 110/11 ಕೆವಿ ವಿ.ವಿ.ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಜೂ.24 ರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಚಿಕ್ಕಲ್ಲು, ಗುರುಪುರ, ಪುರಲೆ, ಸಿದ್ದೇಶ್ವರ ನಗರ, ಶಾಂತಮ್ಮ ಲೇಔಟ್, ವೆಂಕಟೇಶ ನಗರ, ವಿದ್ಯಾನಗರ, ಗಣಪತಿ ಲೇಔಟ್, ಕಂಟ್ರಿಕ್ಲಬ್ ರಸ್ತೆ, ಎಂಆರ್‌ಎಸ್ ವಾಟರ್ ಸಪ್ಲೇ, ಎಂಆರ್‌ಎಸ್ ಕಾಲೋನಿ, ಹರಿಗೆ, ಮಲವಗೊಪ್ಪ, ವಡ್ಡಿನಕೊಪ್ಪ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್, ಬಿಹೆಚ್ ರಸ್ತೆ(ಗಾಯಿತ್ರ ಕಲ್ಯಾಣ ಮಂದಿರದಿಂದ ಅಮೀರ್ ಅಹಮದ್ ವೃತ್ತ), ನೆಹರು ರಸ್ತೆ, ದುರ್ಗಿಗುಡಿ ಮುಖ್ಯ ರಸ್ತೆ, ಪಾರ್ಕ್ ಬಡಾವಣೆ, ಸರ್‌ಎಂವಿ ರಸ್ತೆ(ವೀರಭದ್ರೇಶ್ವರ ಚಿತ್ರಮಂದಿರದಿಂದ ಮಹಾವೀರ ವೃತ್ತದವರೆಗೆ), ಬಾಲರಾಜ್ ಅರಸ್ ರಸ್ತೆ(ಮಹಾವೀರ್ ವೃತ್ತದಿಂದ ಗೋಪಿವೃತ್ತದವರೆಗೆ) ಗಾಂಧಿ ಪಾರ್ಕ್, ಲೂರ್ದು ನಗರ, ಕಾನ್ವೆಂಟ್ ರಸ್ತೆ, ಬಾಪೂಜಿ ನಗರ, ಚರ್ಚ್ ಕಾಂಪೌಂಡ್,ಟಿಜಿಎನ್ ಬಡಾವಣೆ, ಜೋಸೆಫ್ ನಗರ, ಟ್ಯಾಂಕ್ ಬೌಂಡ್ ರಸ್ತೆ, ಕುವೆಂಪುರಂಗಮಂದಿರ ಮತ್ತು ಮಹಾನಗರ ಪಾಲಿಕೆ MESCOM ಕಚೇರಿ ಸುತ್ತಮುತ್ತ, ಮೀನಾಕ್ಷಿ ಭವನ, ಶಂಕರಮಠ ರಸ್ತೆ, ಹಳೆ ಹೊನ್ನಾಳಿ ರಸ್ತೆ, ಬಾಲರಾಜ್‌ರಸ್ತೆ, ಮೆಹದಿ ನಗರ, ಬಾಪೂಜಿ ನಗರ, ಬಸವನಗುಡಿ ವಿನಾಯಕ ಪಾರ್ಕ್, ವಿನಾಯಕ ನಗರ, ಅಮೀರ್‌ಅಹಮದ್ ಕಾಲೋನಿ, ಸೋಮಯ್ಯ ಬಡಾವಣೆ, ಟ್ಯಾಂಕ್ ಬಂಡ್ ರಸ್ತೆ, ಟ್ಯಾಂಕ್ ಮೊಹಲ್ಲಾ, ಕೋರ್ಟ್ ಕಚೇರಿ, ಆರ್‌ಟಿಓ ರಸ್ತೆ ಹಾಗೂ ಸುತ್ತಮುತ್ತಲ್ಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನಗರದ ಉಪವಿಭಾಗ-1ರ ಸಹಾಯಕ ಕಾರ್ಯನಿರ್ವಾಹ ಇಂಜಿನಿಯರ್ ತಿಳಿಸಿದ್ದಾರೆ.

Charaka and Desi Trust ಸಾಂಪ್ರದಾಯಿಕ ನೇಕಾರಿಕೆಗೆ ಸರ್ಕಾರದ ಉತ್ತೇಜನ: ಸಚಿವ ಶಿವಾನಂದ ಪಾಟೀಲ

0

Charaka and Desi Trust ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನ ಯುಗದಲ್ಲಿ ಪಾರಂಪರಿಕ ಉದ್ಯೋಗವನ್ನೂ ಉಳಿಸಿ ಬೆಳೆಸುವ ಅಗತ್ಯವಿದ್ದು, ಸಾಂಪ್ರದಾಯಿಕ ನೇಕಾರಿಕೆಗೆ ಸರ್ಕಾರ ಉತ್ತೇಜನ ನೀಡಲಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಚರಕ ಮತ್ತು ದೇಸಿ ಟ್ರಸ್ಟ್ ಸಂಯುಕ್ತವಾಗಿ ಇಲ್ಲಿನ ಚರ್ಚ್ ಸ್ಟ್ರೀಟ್ ನ ಸಮಗತಾ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಕೊಡು-ಕೊಳ್ಳುವವರ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಔದ್ಯೋಗಿಕ ಬೆಳವಣಿಕೆ ಮತ್ತು ವೈಜ್ಞಾನಿಕ ಬೆಳವಣಿಗೆ ಮುಖ್ಯವಾದರೂ ಪ್ರಕೃತಿ ಸಂರಕ್ಷಣೆಯೊಂದಿಗೆ ಈ ಚಟುವಟಿಕೆಗಳನ್ನು ನಿರ್ಲಕ್ಷ್ಯ ಮಾಡಬಾರದು. ಹೆಗ್ಗೋಡಿನ ಚರಕ ಸಂಸ್ಥೆ ಸಾಂಪ್ರದಾಯಿಕ ನೇಕಾರಿಕೆಯನ್ನು ಉಳಿಸಿ ಬೆಳೆಸಲು ಶ್ರಮಸುತ್ತಿದ್ದು, ಸಂಸ್ಥೆಗೆ ಸರ್ಕಾರ ಅಗತ್ಯ ನೆರವು ಸಹಕಾರ ನೀಡಲು ಬದ್ಧವಿದೆ ಎಂದು ಹೇಳಿದರು.

ವಿದ್ಯುತ್ ಮಗ್ಗ ಅಭಿವೃದ್ಧಿ ನಿಗಮ ಹಾಗೂ ಕೈಮಗ್ಗ ಅಭಿವೃದ್ಧಿ ನಿಗಮ ಎರಡನ್ನೂ ವಿಲೀನಗೊಳಿಸಿ ಏಕ ನಿಗಮ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ನೇಕಾರ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಎರಡರೆಡು ನಿಗಮಗಳಿಂದ ನೇಕಾರರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದಿರುವುದು ಮನಗಂಡು ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ ಎಂದರು.

ಕೈಮಗ್ಗದ ಬಟ್ಟೆಗಳನ್ನು ಸರ್ಕಾರದ ಇಲಾಖೆಗಳು ಖರೀದಿಸಬೇಕೆಂಬ ನಿಯಮ ಇದೆ. ಆದರೆ, ಕೆಲವು ಇಲಾಖೆ ಅಧಿಕಾರಿಗಳ ಹಾಗೂ ಸಚಿವರ ಇಚ್ಛಾಶಕ್ತಿಯ ಕೊರತೆಯಿಂದ ಇದಕ್ಕೆ ಚಾಲನೆ ಸಿಕ್ಕಿಲ್ಲ. ಇವರಿಗೆ ಮನವರಿಕೆ ಮಾಡುವ ಕೆಲಸ ನಡೆದಿದೆ ಎಂದು ಹೇಳಿದರು.

ಈ ಹಿಂದೆ ನರ್ಬಾಡ್ ನೇಕಾರ ಸಮುದಾಯಕ್ಕೆ ಹೆಚ್ಚಿನ‌ ಅನುದಾನ ನೀಡುತ್ತಿತ್ತು. ಈಗ ಅದು ಕಡೆಗಣಿಸಿದೆ: ನಬಾರ್ಡ್‌ ಕೂಡ ವಾಣಿಜ್ಯ ಬ್ಯಾಂಕುಗಳ ಸ್ವರೂಪ ಪಡೆದುಕೊಳ್ಳತೊಡಗಿದೆ. ಕೃಷಿಗೆ ನೀಡುತ್ತಿದ್ದ ನೆರವಿನ ಪ್ರಮಾಣವನ್ನೂ ಕಡಿಮೆ ಮಾಡಿದ್ದು, ಇದು ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದ ಸಚಿವರು, ಭವಿಷ್ಯದಲ್ಲಿ ನರ್ಬಾಡ್ ಮೂಲಕ ನೇಕಾರರಿಗೆ ಹೆಚ್ಚಿನ‌ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆ ಅಭಿವೃದ್ಧಿ ಆಯುಕ್ತೆ ಕೆ. ಜ್ಯೋತಿ ಮಾತನಾಡಿ, ಸರ್ಕಾರ ‘ಮಹಾತ್ಮ ಗಾಂಧಿ ವಸ್ತ್ತೋದ್ಯಮ’ ಯೋಜನೆ ರೂಪಿಸಿದ್ದು, ಇದರಲ್ಲಿ ಕೈಮಗ್ಗ ನೇಕಾರರನ್ನೇ ಷೇರುದಾರರನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ‌ ನೀಡಿದರು.
ಸರ್ಕಾರ ಎರಡು ವರ್ಷದ ಹಿಂದೆ ಈ ಯೋಜನೆಯನ್ನು ಘೋಷಿಸಿತ್ತು. ಆದರೆ, ಅದಕ್ಕೆ ಚಾಲನೆ ಸಿಕ್ಕಿರಲಿಲ್ಲ. ಈಗ ‘ಮಹಾತ್ಮ ಗಾಂಧಿ ವಸ್ತ್ತೋದ್ಯಮ’ ಕೋಶ ಎಂಬ ಲಿಮಿಟೆಡ್ ಕಂಪನಿ ಆರಂಭಿಸಲಾಗುತ್ತಿದೆ ಎಂದರು.

ಈ ಹಿಂದೆ ಹತ್ತಿ, ರೇಷ್ಮೆ, ಉಣ್ಣೆ ಕೈಮಗ್ಗ ನೇಕಾರರು ರಾಜ್ಯದಲ್ಲಿ 40 ಸಾವಿರ ಜನ ಇದ್ದರು: ಈಗ 20 ಸಾವಿರಕ್ಕೆ ಬಂದಿದೆ. ಈಗ ಮತ್ತೊಮ್ಮೆ ಕೈಮಗ್ಗ ನೇಕಾರರ ಸರ್ವೇ ನಡೆಸಲಾಗುವುದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚರಕ ಸಂಸ್ಥೆ ಸಂಸ್ಥಾಪಕ ಪ್ರಸನ್ನ, ಸರ್ಕಾರ ಕೈಮಗ್ಗ ನೇಕಾರರ ಅನುಕೂಲಕ್ಕಾಗಿ ಮಹಾತ್ಮ ಗಾಂಧಿ ವಸ್ತ್ತೋದ್ಯಮ’ ಜಾರಿಗೆ ಮುಂದಾಗಿದೆ. ಇದು ಕೈಮಗ್ಗ ನೇಕಾರರ ಬದುಕಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದರು.

ಭಾರತ ದೇಶ ಹತ್ತಿ ಕೈಮಗ್ಗದಲ್ಲಿ ಅತ್ಯಂತ ಪ್ರಖ್ಯಾತಿ ಹೊಂದಿದ್ದು, ಬ್ರಿಟಿಷರ ಕಾಲದಲ್ಲೇ ಗರಿಷ್ಠ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತಿತ್ತು. ಆದರೆ ಈಗ ಸಾಂಪ್ರದಾಯಕ ನೇಕಾರಿಕೆ ಸಂಕಷ್ಟದಲ್ಲಿದೆ. ಹೀಗಾಗಿ ಪರಿಹಾರ ಕಂಡುಕೊಳ್ಳಲು ಚರಕ ಸಂಸ್ಥೆ ಕಳೆದ ೩೦ ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂದರು.

Charaka and Desi Trust ಸಮಾರಂಭದಲ್ಲಿ ನರ್ಬಾಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ. ಸುರೇಂದ್ರ ಬಾಬು ಮಾತನಾಡಿದರು. ಕೈಮಗ್ಗ ಮತ್ತು ಜವಳಿ‌ ಇಲಾಖೆ ನಿವೃತ್ತ ಆಯುಕ್ತ ಬಿ.ಎಫ್. ಪಾಟೀಲ್, ನೇಕಾರ ಸೇವಾ ಕೇಂದ್ರದ ಮುಖ್ಯಸ್ಥ ಪ್ರಭಾಕರ್, ಚರಕ ಸಂಸ್ಥೆ ಅಧ್ಯಕ್ಷೆ ಮಹಾಲಕ್ಷ್ಮಿ, ಡಿಕನಿ ಡೈರಿಯ ಗೋಪಿ, ದೇಸಿ ಟ್ರಸ್ಟ್ನ ಶಾರದಾ ಮತ್ತಿತರರು ಉಪಸ್ಥಿತರಿದ್ದರು. ಪದ್ಮಶ್ರೀ ನಿರೂಪಿಸಿದರು.

Malenadu Development Foundation ಸಾಧಿಸುವ ಧೈರ್ಯದೊಂದಿಗೆ ವಿದ್ಯಾರ್ಥಿಗಳು ಜೀವನೋತ್ಸಾಹ ಬೆಳೆಸಿಕೊಳ್ಳಬೇಕು- ಡಾ.ಗುರುರಾಜ ಕರ್ಜಗಿ

0

Malenadu Development Foundation ಸಾಧಿಸುವ ಛಲ, ಧೈರ್ಯದೊಂದಿಗೆ ವಿದ್ಯಾರ್ಥಿಗಳು ಜೀವನೋತ್ಸಾಹ ಬೆಳೆಸಿಕೊಳ್ಳಬೇಕು ಎಂದು ಖ್ಯಾತ ಶಿಕ್ಷಣ ತಜ್ಞ, ನಿವೃತ್ತ ಪ್ರಾಧ್ಯಾಪಕ ಡಾ.ಗುರುರಾಜ ಕರ್ಜಗಿ ಸಲಹೆ ನೀಡಿದರು.
ಸಾಗರ, ಪಟ್ಟಣದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್.ಬಿ.ಮತ್ತು ಎಸ್.ಬಿ.ಎಸ್.ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜೀವನೋತ್ಸಾಹ, ಕಠಿಣ ಪರಿಶ್ರಮ ಮತ್ತು ಸಾಮಾಜಿಕ ಕಾಳಜಿ ಈ ಮೂರು ಗುಣಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.
ಸಾಧಿಸುವ ಮಾರ್ಗದಲ್ಲಿ ಆತ್ಮವಿಶ್ವಾಸ, ಧೈರ್ಯ ಸದಾ ಜೊತೆಗಿರಬೇಕು. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದ ತಕ್ಷಣ ಅಥವಾ ಫೇಲ್ ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಜೀವನ ಅಲ್ಲ. ಯಾವುದೇ ಹಂತದಲ್ಲೂ ಸೋಲನ್ನು ಒಪ್ಪಿಕೊಳ್ಳಬಾರದು. ಇದು ನನ್ನಿಂದ ಸಾಧ್ಯವಿದೆ ಎಂಬ ಮನೋಬಲ ಅಂತರಂಗದಿಂದ ಬರಬೇಕು. ಸುಲಭವಾಗಿ ಯಾವುದೂ ಸಾಧ್ಯವಿಲ್ಲ. ಥಾಮಸ್ ಎಡಿಸನ್ ಸಾವಿರಾರು ಪ್ರಯೋಗದ ನಂತರ ಯಶಸ್ಸು ಕಂಡುಕೊಂಡ. ಮೇರಿಕ್ಯೂರಿ, ಬಾಕ್ಸಿಂಗ್ ಛಾಂಪಿಯನ್ ಮಹಮ್ಮದ ಅಲಿ ಮುಂತಾದವರೆಲ್ಲರೂ ಕಠಿಣ ಪರಿಶ್ರಮದಿಂದಲೇ ಸಾಧನೆ ಮಾಡಿದ್ದಾರೆ. ಆರಂಭದಲ್ಲಿ ಕಷ್ಟ ಎನಿಸಿದರೂ ಮುಂದೆ ಸಂತೋಷ ನಿಮ್ಮ ಪಾಲಿಗೆ ಸಿಗುತ್ತದೆ ಎಂದು ಕೆಲವು ಉದಾಹರಣೆ ಸಹಿತ ಅವರು ವಿವರಿಸಿದರು.
Malenadu Development Foundation ತಮಗೋಸ್ಕರ ಬದುಕಿದವರನ್ನು ಪ್ರಪಂಚ ಮರೆಯುತ್ತದೆ. ಆದರೆ ಬೇರೆಯವರಿಗಾಗಿ ಬದುಕುವವನನ್ನು ಸದಾ ಸ್ಮರಿಸುತ್ತಾರೆ. ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದವರನ್ನು ಜನರು ಯಾವತ್ತೂ ನೆನಪಿಸುತ್ತಾರೆ. ಬೇರೆಯವರ ಕಣ್ಣೀರನ್ನು ಒರೆಸುವ ಮನಸ್ಥಿತಿ ಇಲ್ಲವಾದರೆ ಶಿಕ್ಷಣಕ್ಕೆ ಅರ್ಥವಿಲ್ಲ ಎಂದ ಅವರು, ಸಮಾಜದಲ್ಲಿ ಭ್ರಷ್ಟರಾಗದೆ ಪ್ರಾಮಾಣಿಕವಾಗಿ ಬದುಕಬೇಕು ಎಂದು ಕಿವಿಮಾತು ಹೇಳಿದರು.
ಶಿಕ್ಷಕರಿಗೆ ತಾವು ಕಲಿಸುವ ವಿಷಯದ ಬಗ್ಗೆ ಪ್ರೀತಿ ಇರಬೇಕು. ವಿದ್ಯಾರ್ಥಿಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಶಿಕ್ಷಕರು ಎಷ್ಟು ತಿಳಿದುಕೊಂಡರೂ ಸಾಲದು. ತರಗತಿಗೆ ಹೋಗುವಾಗ ಕಲಿಸುವ ವಿಷಯದ ಬಗ್ಗೆ ಹೆಚ್ಚು ಓದಿಕೊಂಡಿರಬೇಕು. ವೃತ್ತಿ ಬಗ್ಗೆ ಕೀಳರಿಮೆ ಇಟ್ಟುಕೊಳ್ಳದೆ ವೃತ್ತಿ ಗೌರವ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಯ ಅಭಿರುಚಿ ಏನು ಎಂಬುದನ್ನು ಗುರುತಿಸಬೇಕು ಎಂದವರು ಶಿಕ್ಷಕ ಸಮೂಹಕ್ಕೆ ಸಲಹೆ ನೀಡಿದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಗುರುರಾಜ ಕರ್ಜಗಿಯವರು ತಮ್ಮ ಬರಹ ಮತ್ತು ಉಪನ್ಯಾಸಗಳಿಂದ ಸಮಾಜಕ್ಕೆ ಜೀವನ ಪಾಠ ಮತ್ತು ಸಂಸ್ಕೃತಿಯನ್ನು ರಾಜ್ಯದಾದ್ಯಂತ ಬಿತ್ತುತ್ತಿದ್ದಾರೆ. ಅವರ ಚಿಂತನೆಗಳು ನಮ್ಮ ಬದುಕಿಗೆ ಮಾರ್ಗದರ್ಶಿಯಾಗಿವೆ. ವಿಷಯಗಳನ್ನು ಅವರು ಸರಳವಾಗಿ, ಶುದ್ಧವಾಗಿ ಮನದಟ್ಟು ಮಾಡುತ್ತಾರೆ. ಬದುಕು ಹೇಗಿರಬೇಕು ಎಂಬುದನ್ನು ಸರಳವಾಗಿ ಹೇಳುತ್ತ ಸುಸಂಸ್ಕೃತ ಬದುಕಿಗೆ ಬೇಕಾಗುವ ಶಕ್ತಿಯನ್ನು ತುಂಬುತ್ತಿದ್ದಾರೆ. ಅವರು ಹೇಳಿರುವುದನ್ನು ಹೃದಯದಲ್ಲಿಟ್ಟುಕೊಂಡು ಹಾಗೇ ಬದುಕಲು ಪ್ರಯತ್ನಿಸೋಣ ಎಂದರು.
ಇದೇ ಸಂದರ್ಭದಲ್ಲಿ ಡಾ.ಗುರುರಾಜ ಕರ್ಜಗಿ ಅವರನ್ನು ಸಂಸ್ಥೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಎಸ್.ಲಕ್ಮೇಶ್, ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್, ಕೆ.ವೆಂಕಟೇಶ್ ಕವಲಕೋಡು, ಸತ್ಯನಾರಾಯಣ, ರವೀಂದ್ರ ಪುಸ್ತಕಾಲಯದ ವೈ.ಎ.ದಂತಿ, ಶ್ರೀ ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಜಗದೀಶ ಒಡೆಯರ್, ಡಾ.ಬಿ.ಸಿ.ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.
ಡಾ.ಎಚ್.ಎಂ.ಶಿವಕುಮಾರ್ ಸ್ವಾಗತಿಸಿದರು. ಕೆ.ವೆಂಕಟೇಶ್ ವಂದಿಸಿದರು.

MESCOM ಜೂ.23 ರಂದು ಕುಂಸಿ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ತಾಲ್ಲೂಕು, ಕುಂಸಿ ಗ್ರಾಮದ 110/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಕುಂಸಿ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಹಳ್ಳಿಗಳಾದ ಕುಂಸಿ, ಬಾಳೆಕೊಪ್ಪ, ಚೋರಡಿ, ತುಪರು, ಕೋಣಿಹೂಸೂರು, ಹೊರಬೈಲು, ಶೇಟ್ಟಿಕೆರೆ, ರೇಚಿಕೊಪ್ಪ ಇನ್ನಿತರೆ ಸುತ್ತಮುತ್ತಲ ಹಳ್ಳಿಗಳು ಹಾಗೂ ಹರ‍್ನಳ್ಳಿ, ರಾಮನಗರ, ಮುದುವಾಲ, ಯಡವಾಲ, ದೇವಬಾಳು, ತ್ಯಾಜವಳ್ಳಿ, ಕೊನಗವಳ್ಳಿ, ಹಿಟ್ಟೂರು, MESCOM ನಾರಾಯಣಪುರ, ಮಲ್ಲಾಪುರ, ರಟ್ಟೆಹಳ್ಳಿ ಮತ್ತು ಇನ್ನಿತರೆ ಸುತ್ತಮುತ್ತ ಗ್ರಾಮಗಳ ವ್ಯಾಪ್ತಿಯಲ್ಲಿ ಜೂ. 23 ರಂದು ಬೆಳಗ್ಗೆ 10.00 ರಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Shivamogga Horticulture Department ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಸಹಾಯಧನ ಪಡೆಯಲು ರೈತರಿಂದ ಅರ್ಜಿ ಆಹ್ವಾನ

0

Shivamogga Horticulture Department ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖೆಯು 2025-26ನೇ ಸಾಲಿಗೆ ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕಾಗಿ ಪ್ರತಿ ಹೆಕ್ಟರ್‌ಗೆ ರೂ. 1500/- ರಂತೆ ಗರಿಷ್ಟ 2 ಹೆಕ್ಟೆರ್ ಪ್ರದೇಶಕ್ಕೆ ಸಹಾಯಧನ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿಯನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣೆ, ಆಧಾರ್ ಮತ್ತು ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮತ್ತು ಜಾತಿ ಪ್ರಮಾಣ ಪತ್ರದ ಪ್ರತಿಗಳನ್ನು ಲಗತ್ತಿಸಿ ಜೂ. 30 ರೊಳಗಾಗಿ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಹಾ ರೈತ ಸಂಪರ್ಕ ಕೇಂದ್ರದ ತೋಟಗಾರಿಕೆ ಅಧಿಕಾರಿಗಳನ್ನು ಮತ್ತು ಜಿಲ್ಲಾ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸುವುದು.

Shivaganga Yoga Center ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ

0

Shivaganga Yoga Center ಈ ಬಾರಿಯ ಘೋಷ ವಾಕ್ಯ “ಒಂದೇ ಭೂಮಿ ಒಂದೇ ಆರೋಗ್ಯ” ಎಂಬುದಾಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಜೂನ್ 21 ರಂದು ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಆಚರಿಸಲಾಗುವುದು.

ಪ್ರಸ್ತುತ ದಿನಗಳಲ್ಲಿ ಹಲವು ರಾಷ್ಟ್ರಗಳು ಯುದ್ಯೋನ್ಮಾದದಿಂದ ಅಶಾಂತಿಯನ್ನು ತಂದಿಡುತ್ತಿವೆ. ಜೊತೆಯಲ್ಲಿ ಮಾನವ ಕುಲವನ್ನೇ ನಾಶ ಮಾಡುವ ಅಣ್ವಸ್ತ್ರ ಬಳಸುವ ಬೆದರಿಕೆಯೂ ಇದೆ. ಈ ರಸಾಯನಕಗಳನ್ನು ಬಳಸಿ ನಮಗೆ ಜನ್ಮ ನೀಡಿ ಆಸರೆ ನೀಡುತ್ತಿರುವ ಭೂಮಿಯನ್ನೇ ನಾಶಪಡಿಸಿ ಮುಗ್ಧ ಜನರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಬದುಕುಳಿದ ಜನರ ಆರೋಗ್ಯವನ್ನು ಹದಗೆಡಿಸುತ್ತಿವೆ. ಈ ಸಂದರ್ಭದಲ್ಲಿ ವಿಶ್ವ ಯೋಗ ದಿನದ ಘೋಷ ವಾಕ್ಯ ಅತ್ಯಂತ ಅರ್ಥಪೂರ್ಣವಾಗಿದೆ.

ಶ್ರೀ ಶಿವಗಂಗಾ ಯೋಗ ಕೇಂದ್ರದ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಶ್ರೀ ಸಿ.ವಿ.ರುದ್ರಾರಾಧ್ಯರು ಮತ್ತು ವಿಶ್ವಸ್ಥ ಸಮಿತಿ ಅಧ್ಯಕ್ಷರಾದ ಶ್ರೀ ರುದ್ರೇಗೌಡರ ಚಿಂತನೆಗಳು ಹಾಗೂ ಶ್ರೀ ಶಿವಗಂಗಾ ಯೋಗ ಕೇಂದ್ರದ ದೇಯೋದ್ದೇಶಗಳು ಪೂರಕವಾಗಿರುವುದರಿಂದ ಶಿವಮೊಗ್ಗ ನಗರವು ಶಿವ ಯೋಗ ನಗರವಾಗುವುದರಲ್ಲಿ ಸಂದೇಹವೇ ಇಲ್ಲ.

ಆದಿಯೋಗಿಶಿವ ಪ್ರಪಂಚಕ್ಕೆ ಸಪ್ತ ಋಷಿಗಳಿಗೆ ಬೋಧಿಸುವ ಮೂಲಕ ಯೋಗವನ್ನು ಧಾರೆ ಎರೆದಂತ ಆದಿಯೋಗಿ ಶಿವನ ಸುಂದರ ಮೂರ್ತಿ ಸನಿಹದಲ್ಲೇ ಕಾಣುವ ಅಭೀಷ್ಟವರದ ಗಣಪತಿ ಯೋಗದ ದಿವ್ಯಮಾರ್ಗ ತೋರಿದ ಪತಂಜಲಿ ಮಹರ್ಷಿಗಳ ಸುಂದರ ಮೂರ್ತಿಗಳು, ವನಸ್ಪತಿ ಔಷಧಿಯುಕ್ತ, ಫಲಗಳನ್ನು ನೀಡುವ ವಿವಿಧ ಜಾತಿಯ ಹೂಗಳನ್ನು ನೀಡುವ ಸಸ್ಯಗಳು ಹೊಂದಿರುವ ಸುಂದರ ಪರಿಸರದಲ್ಲಿ ಯೋಗ ಕೇಂದ್ರ ಕಣ್ಮನ ಸೆಳೆಯುತ್ತದೆ.

ನಮ್ಮ ಹೆಮ್ಮೆಯ ಯೋಗ ಕೇಂದ್ರದ ಲಾಂಛನದಲ್ಲಿರುವ “ಸಾ ವಿದ್ಯಾ ಯಾ ವಿಮುಕ್ತಯೇ ಎಂಬ ಉಕ್ತಿಯು ಯೋಗಶಾಸ್ತ್ರದ ಮಹತ್ವವನ್ನು ತಿಳಿಸುವುದು. ಅಜ್ಞಾನದಿಂದ ಜ್ಞಾನದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಜ್ಞಾನ ಯೋಗದಲ್ಲಡಗಿದೆ. ಇನ್ನು ಜ್ಯೋತಿ ಶ್ರೀ ಶಿವಗಂಗಾ ಯೋಗ ಕೇಂದ್ರವು ಇಂತಹ ದಿವ್ಯಜೋತಿಯ ಪ್ರತೀಕ. ತ್ರಿಕೋನಾಕೃತಿಯ ಪಿರಮಿಡ್ ದೇಹ ಮತ್ತು ಮನಸ್ಸನ್ನು ಒಂದುಗೂಡಿಸಿ ದೈವತ್ವದ ಕಡೆಗೆ ಕೊಂಡೊಯ್ಯುವ ಸಾಧನ.

ಆಶೀರ್ವಾದದ ಫಲ, ಸಾಧು ಸಂತರು ಹಾಗೂ ಹಿರಿಯರು ಆಶೀರ್ವದಿಸುವಾಗ ನಿಮಗೆ ಆಯುರಾರೋಗ್ಯ ಲಭಿಸಲಿ ಎಂದು ಹರಸುವುದನ್ನು ಕೇಳಿದೇವಲ್ಲವೇ ಹಾಗೆಯೇ ನಮ್ಮ ಶ್ರೀ ಶಿವಗಂಗಾ ಯೋಗ ಕೇಂದ್ರವು ಜಾತಿ ಮತ್ತು ಪಂಥದ ಭೇದವಿಲ್ಲದೆ ಎಲ್ಲರಿಗೂ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಧಾರೆಯೆರೆಯುತ್ತಿದೆ ಎಂದು ಹೆಮ್ಮೆಯಿಂದ ಹೇಳಬಹುದು.

ಇನ್ನು ಯೋಗ ಕೇಂದ್ರದಲ್ಲಿ ಯೋಗ ಶಿಕ್ಷಣ ಪಡೆದ ವ್ಯಕ್ತಿಯ ಧನ್ಯತಾಭಾವದ ಪ್ರತೀಕವೇ ಯೋಗ. ಕೇಂದ್ರದ ದಾರಿಯ ಆರಂಭದ ಸ್ವಾಗತ ಕಮಾನಿನ ಹಿಂಭಾಗದಲ್ಲಿ ರಚನೆಯಾಗಿರುವ ಗುರುವಿನ ರೂಪ ಮತ್ತು ಅದಕ್ಕೆ ಶರಣಾದ ಸಂತೃಪ್ತಿ ಭಾವ ಹೊಂದಿದ ವ್ಯಕ್ತಿಯ ಮನದ ತುಡಿತ, ತನು ಮನವ ಸಂತೈಸಿ ಅರಿವಿನ ಜ್ಯೋತಿ ಬೆಳಗುವ ಗುರುವೇ ನಿಮಗೆ ಶರಣು ಎನ್ನುವ ಭಾವವನ್ನು ವ್ಯಕ್ತಪಡಿಸಲಾಗಿದೆ.

Shivaganga Yoga Center ಯೋಗ ಅಭ್ಯಾಸವನ್ನು ಪ್ರಣವದೊಂದಿಗೆ ಆರಂಭಿಸಿ ಪ್ರಾರ್ಥನೆ, ಆಸನಗಳು, ಪ್ರಾಣಾಯಾಮ, ಧ್ಯಾನವನ್ನು ಕ್ರಮಬದ್ಧವಾಗಿ ಮಾಡಿ, ಮಾನವೀಯತೆಯನ್ನು ಎತ್ತಿ ಹಿಡಿಯುವ ಪ್ರತಿಜ್ಞೆ ಸ್ವೀಕರಿಸಿ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಶಿಕ್ಷಣಾರ್ಥಿಗಳು ಸಾರ್ವಜನಿಕರು ಭಾಗವಹಿಸಲು ಕೋರಲಾಗಿದೆ.