Wednesday, November 4, 2026
Wednesday, November 4, 2026
Home Blog Page 2106

ಐಐಎಸ್ಸಿ ಬಗ್ಗೆ ಹೈಕೋರ್ಟ್ ಅಸಮಾಧಾನ

0

ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕೈಗಾರಿಕಾ ಪ್ರದೇಶದಲ್ಲಿನ ಮಾಲಿನ್ಯಕ್ಕೆ ಸಂಬಂಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆಯು ಅತ್ಯಂತ ದುಬಾರಿ ಸಂಸ್ಥೆಯಾಗಿದೆ. ಕೇವಲ ನೀರಿನ ಗುಣಮಟ್ಟದ ಪರಿಶೀಲನೆಗಾಗಿ 20ಲಕ್ಷರೂ ಕೇಳಿರುವ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದ ವಿಚಾರಣೆಯು ಸಿಜೆ ನೇತೃತ್ವದ ನ್ಯಾಯಪೀಠದ ಮುಂದೆ ನಿವಾಸಿಗಳ ಪರವಾಗಿ ಮಂಡಿಸಿದ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ “ಮಾಲಿನ್ಯದ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಹಾಗಾಗಿ ಯಾವುದಾದರೂ ಮೂರನೇ ಏಜೆನ್ಸಿಗೆ ನೀಡುವುದು ಒಳ್ಳೆಯದು. ಐಐಎಸ್ಸಿಗೆ ಬೇಕಾದರೆ ವಹಿಸಬಹುದು” ಎಂದು ಸಲಹೆ ನೀಡಿದರು.

ಪ್ರಶಾಂತ್ ಭೂಷಣ್ ಅವರ ಈ ಸಲಹೆಗೆ ಸಿಜೆ “ಐಐಎಸ್ಸಿ ತುಂಬಾ ದುಬಾರಿ. ಇತ್ತೀಚೆಗೆ ಕೇವಲ ನೀರಿನ ಗುಣಮಟ್ಟದ ಪರಿಶೀಲನೆಗೆ 20ಲಕ್ಷರೂ ಪ್ರಸ್ತಾವನೆ ಕಳುಹಿಸಿದೆ. ಅದೂ ಮುಂಗಡವಾಗಿ ಹಣ ನೀಡಬೇಕಂತೆ. ಹಾಗಾಗಿ ಆ ಸಂಸ್ಥೆಯನ್ನು ಬಿಟ್ಟು ಬಿಡಿ” ಎಂದು ಮೌಖಿಕವಾಗಿ ಹೇಳಿದೆ.

ಕಳೆದ ವಾರ ನಡೆದ ಪ್ರಕರಣವೊಂದರ ವಿಚಾರಣೆ ವೇಳೆಯಲೂ ಸಿಜೆ “ಐಐಎಸ್ಸಿ ಬಗ್ಗೆ ನಮಗೆ ಯಾವುದೇ ಒಲವು ಉಳಿದಿಲ್ಲ. ಮಂಗಳೂರಿನ ಪಚ್ಚನಾಡಿ ಘನತ್ಯಾಜ್ಯ ಘಟಕದಿಂದ ಕುಡಿಯುವ ನೀರು ಕಲುಷಿತಗೊಂಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅದನ್ನು ನೋಡಿದ್ದೇವೆ. ನಮ್ಮ ದೃಷ್ಟಿಯಲ್ಲಿ ಐಐಎಸ್ಸಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ” ಎಂದು ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಬೇಸರ ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಎನ್ಆರ್ ಸಿ ವಿಚಾರಣೆ: ನಿಷ್ಪಕ್ಷಪಾತ ನಡೆ ನನ್ನದು

0

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ತಮ್ಮ ಸೇವೆಯ ಅತ್ಯಂತ ಸುಗಮವಾಗಿ ಸಾಗಿತ್ತು ಎಂದು ನಿವೃತ್ತ ಸಿಜೆಐ ರಂಜನ್ ಗೊಗೊಯ್ ತಿಳಿಸಿದ್ದಾರೆ.

ನನ್ನ ಸೇವೆಯ ಅವಧಿಯಲ್ಲಿ ರಾಜಕೀಯ ಹಸ್ತಕ್ಷೇಪ ಸನ್ನಿವೇಶಗಳನ್ನು ಎದುರಿಸಿದ್ದು ಅತ್ಯಲ್ಪ. ಆದರೆ ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರದಲ್ಲಿ ಕೋರ್ಟ್ ನಡೆ ಕೊಂಚ ನಿಧಾನವಾಗಿ ಸಾಗಲಿ ಎಂದು ಹಿರಿಯ ಅಧಿಕಾರಿಯೊಬ್ಬರು ಮನವಿ ಮಾಡಿದ್ದರು” ಎಂದು ಸುಪ್ರೀಂಕೋರ್ಟ್ ನ ಉನ್ನತ ಹುದ್ದೆಯಲ್ಲಿದ್ದಾಗ ತಮ್ಮ ಸೇವಾ ಅವಧಿಯಲ್ಲಿ ಈ ಬಗ್ಗೆ ಗೊಗೊಯ್ ಅವರು ನೆನಪು ಮಾಡಿಕೊಂಡರು.

ಹಿರಿಯ ಅಧಿಕಾರಿಯೊಬ್ಬರು ನನ್ನ ಮನೆಗೆ ಬಂದಿದ್ದರು. ಎನ್ ಆರ್ ಸಿ ವಿಚಾರಣೆಯಲ್ಲಿ ಸ್ವಲ್ಪ ವೇಗವನ್ನು ಕಡಿಮೆ ಮಾಡಬೇಕೆಂದು ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ನಾನು ಸುಪ್ರೀಂಕೋರ್ಟ್ ನ ಎರಡನೇ ಅಥವಾ ಮೂರನೇ ಹಿರಿಯ ನ್ಯಾಯಮೂರ್ತಿಯಾಗಿದ್ದೆ. ಎನ್ಆರ್ ಸಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದೆ. ಆದ್ದರಿಂದ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಆದರೆ ನಾನು ನಾನೇಕೆ ಹಾಗೆ ಮಾಡಬೇಕು? ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ನನ್ನ ಕೆಲಸದಲ್ಲಿ ಯಾರ ಹಸ್ತಕ್ಷೇಪವನ್ನು ನಾನು ಇಷ್ಟಪಡುವುದಿಲ್ಲ ಎಂದು ಖಡಕ್ಕಾಗಿ ಉತ್ತರ ಹೇಳಿ ಕಳುಹಿಸಿದ್ದೆ ಎಂದಿದ್ದಾರೆ.

ನಂತರ 2019ರ ಆಗಸ್ಟ್ 31ರಂದು ಭಾರತದ ಅಸಲಿ ಪ್ರಜೆಗಳನ್ನು ಗುರುತಿಸಲು ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆಹಾರಪದ್ಧತಿಯನ್ನು ಹೇರಬೇಡಿ : ಕೋರ್ಟ್ ಕಿವಿಮಾತು

0

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಆಹಾರ ಪದ್ಧತಿಗಳ ಬಗ್ಗೆ ಆಗಾಗ ಕೆಲವೊಂದು ವಿಚಾರಗಳು ಕೇಳಿಬರುತ್ತಿದೆ. ಈ ಬಗ್ಗೆ ಗುಜರಾತ್ ಹೈಕೋರ್ಟ್ ತಿರುವು ಜನರ ಮನಸ್ಸು ಹಾಗೂ ಅಹಂಕಾರ ತಣಿಸಲೆಂದು ಬಹುಸಂಖ್ಯಾತ ಜನರ ಆಹಾರ ಪದ್ಧತಿ ಅಥವಾ ಸೇವನೆ ನಿಯಂತ್ರಿಸುವ ಸಾಹಸಕ್ಕೆ ಮುಂದಾಗಬೇಡಿ. ರಾತ್ರಿ ಕನಸುಬಿತ್ತೆಂದು, ಬೆಳಗ್ಗೆ ಜನರು ಕೆಲವು ವಸ್ತುಗಳನ್ನು ಮಾರಾಟ ಮಾಡಬಾರದೆಂದು ಆದೇಶ ಹೊರಡಿಸಲು ಸಾಧ್ಯವಿಲ್ಲ” ಎಂದು ಅಹಮದಾಬಾದ್ ನಗರಪಾಲಿಕೆಯಿಂದ ತರಾಟೆಗೆ ತೆಗೆದುಕೊಂಡಿದೆ.

ಅಹಮದಾಬಾದ್ ನಗರ ಪಾಲಿಕೆಯು 25 ಬೀದಿಬದಿ ವ್ಯಾಪಾರಸ್ಥರ ಮಾಂಸ ಮಾರಾಟದ ಗಾಡಿಗಳನ್ನು ವಶಕ್ಕೆ ಪಡೆದಿರುತ್ತದೆ. ಈ ಕುರಿತಂತೆ ಬೀದಿ ಬದಿ ವ್ಯಾಪಾರಸ್ಥರು ಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರಿದ್ದ ನ್ಯಾಯಪೀಠವು “ರಾಜಕೀಯ ಒತ್ತಡಕ್ಕೆ ಆಹಾರ ಸೇವನೆ ನಿಯಂತ್ರಣಕ್ಕೆ ಪಾಲಿಕೆ ಮುಂದಾಗಬಾರದು. ಆಡಳಿತಾರೂಢ ಪಕ್ಷಕ್ಕೆ ಮೊಟ್ಟೆಗಳ ಸೇವನೆ ಇಷ್ಟವಿಲ್ಲ ಎಂದ ಮಾತ್ರಕ್ಕೆ ಮೊಟ್ಟೆ ಮಾರಾಟ ನಿರ್ಬಂಧಿಸಿ, ಅವುಗಳನ್ನು ವಶಕ್ಕೆ ಪಡೆಯುತ್ತೀರಾ? ನೀವು ಮಾಡುತ್ತಿರುವುದು ಸರಿಯೇ? ನಾನು ನನ್ನ ಮನೆಯ ಹೊರಗಡೆ ಏನನ್ನು ತಿನ್ನಬೇಕು ಎಂದು ನೀವು ನಿರ್ಧರಿಸಲು ಹೇಗೆ ಸಾಧ್ಯ” ಎಂದು ಕಟುವಾಗಿ ಪ್ರಶ್ನಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉದ್ಯೋಗದಲ್ಲಿ ಮಹಿಳೆಯರಿಗೆ ಆದ್ಯತೆ- ಪ್ರಿಯಾಂಕ

0

ವಿಧಾನಸಭಾ ಚುನಾವಣೆಯು ಇನ್ನೇನು ಹತ್ತಿರದಲ್ಲಿಯೇ ಇದೆ. ಪ್ರಿಯಾಂಕ ಗಾಂಧಿ ಅವರು ಈ ಬಗ್ಗೆ ಗೋವಾಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ.

ಗೋವಾದ ಮೊರ್ಪಿರ್ಲಾ ಗ್ರಾಮದಲ್ಲಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಅವರು ಮಾತನಾಡಿ “ಗೋವಾ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 30ರಷ್ಟು ಮೀಸಲು ನೀಡಲಾಗುವುದು” ಎಂದು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾವತ್ ಜೀ ಅಮರ್ ರಹೇ

0

ಡಿ.8ರಂದು ತಮಿಳುನಾಡಿನ ಊಟಿ ಬಳಿ ಸಂಭವಿಸಿದ ಸೇನಾ ಹೆಲಿಕ್ಯಾಪ್ಟರ್ ದುರಂತದಲ್ಲಿ ಹುತಾತ್ಮರಾದ ಭಾರತದ ಸಶಸ್ತ್ರಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಅಧಿಕಾರಿಗಳ ಅಂತ್ಯಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ಶುಕ್ರವಾರ ನಡೆಯಿತು.

ಕಾಮರಾಜ್ ಮಾರ್ಗದಲ್ಲಿ ಇರುವಂತಹ ರಾವತ್ ಅವರ ಅಧಿಕೃತ ನಿವಾಸದಲ್ಲಿ ಬಿಪಿನ್ ರಾವತ್ ದಂಪತಿಗಳ ಪಾರ್ಥಿವ ಶರೀರಗಳನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರು ರಾವತ್ ದಂಪತಿಗಳಿಗೆ ಅಂತಿಮ ನಮನ ಸಲ್ಲಿಸಿದರು.

ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲೀಕಾ ರಾವತ್ ಅವರ ಅಂತಿಮಯಾತ್ರೆ ಉದ್ದಕ್ಕೂ ‘ಚಂದ್ರ-ತಾರೆ ಇರುವವರೆಗೂ ರಾವತ್ ಜೀ ಅಮರ’, ‘ವಂದೇ ಮಾತರಂ’, ‘ಭಾರತ್ ಮಾತಾಕೀ ಜೈ’ ಇಂದು ಜನರು ಘೋಷಣೆಗಳನ್ನು ಕೂಗಿದರು. ರಾವತ್ ದಂಪತಿಗಳ ಅಂತಿಮ ಯಾತ್ರೆ ಉದ್ದಕ್ಕೂ ಸಾವಿರಾರು ಜನರು ನೆರೆದಿದ್ದರು.

ಬ್ರಾರ್ ಸ್ಕ್ವೇರ್ ನಲ್ಲಿ ರಾವತ್ ದಂಪತಿಗಳ ಚಿತೆಗೆ ಸೇನಾಪಡೆಗಳ 800 ಸಿಬ್ಬಂದಿಯು ಹಾಜರಿರುವ ಮೂಲಕ ಸಕಲ ಸೇನಾ ಗೌರವ ಸಲ್ಲಿಸಲಾಯಿತು. ’17 ಗನ್
ಸೆಲ್ಯೂಟ್’ ನ ಭಾಗವಾಗಿ ಫಿರಂಗಿಗಳಿಂದ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.ರಾವತ್ ಅವರ ಇಬ್ಬರು ಪುತ್ರಿಯರು ಪುತ್ರಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಅಗ್ನಿಸ್ಪರ್ಷ ಮಾಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉಪ ನೋಂದಣಿ ಕಚೇರಿಗಳಿಗೆ ಕಾವೇರಿ ಕೀ ಕಾರ್ಡ್

0

ರಾಜ್ಯ ಸರ್ಕಾರವು ಆಸ್ತಿ ಅಕ್ರಮಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿದೆ. ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ‘ಬ್ಲಾಕ್ ಚೈನ್ ತಂತ್ರಜ್ಞಾನ’ ವನ್ನು ಕಾರ್ಯರೂಪಕ್ಕೆತಂದಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಕಬಳಿಸುವ, ಯಾರದ್ದೋ ಸ್ವತ್ತನ್ನು ಮತ್ಯಾರಿಗೋ ಮಾರಾಟ ಮಾಡುವ ಹಾಗೂ ಒಂದೇ ಆಸ್ತಿಯನ್ನು ಹಲವರಿಗೆ ಮಾರಾಟ ಮಾಡುವ ಆಸ್ತಿಕೋರರಿಗೆ ಈ ತಂತ್ರಜ್ಞಾನ ಮುಳ್ಳಾಗಿದೆ.

ಈ ತಂತ್ರಜ್ಞಾನವು ಆಸ್ತಿ ಸುರಕ್ಷಿತ ನಿಟ್ಟಿನಲ್ಲಿ ಹೊಸ ಮೈಲುಗಲ್ಲಾಗುವ ಭರವಸೆ ಮೂಡಿಸಿದೆ. ಈಗಾಗಲೇ ತುಮಕೂರು ಜಿಲ್ಲೆಯ ಗುಬ್ಬಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಜಗಳೂರು ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಬ್ಲಾಕ್ ಚೈನ್ ತಂತ್ರಜ್ಞಾನ ಅಳವಡಿಸಲಾಗಿದೆ. ‘ಕಾವೇರಿ’ ತಂತ್ರಾಂಶ ಬಳಸಿ ಆಸ್ತಿ ನೋಂದಣಿ ಜಾರಿಗೆ ತರಲಾಗಿದೆ.

ಈ ತಂತ್ರಜ್ಞಾನದ ವಿಶೇಷವೆಂದರೆ ಆಸ್ತಿ ವರ್ಗಾವಣೆ ಪ್ರತಿಯೊಂದು ಪ್ರಕ್ರಿಯೆ ‘ಕಾವೇರಿ ಕೀ ಕಾರ್ಡ್’ ನಲ್ಲಿ ದಾಖಲಾಗುತ್ತದೆ. ದಸ್ತಾವೇಜುಗಳು ನೋಂದಣಿ ಮಾಹಿತಿ 5 ಪ್ರತ್ಯೇಕ ಸರ್ವರ್ ಗಳಲ್ಲಿ ದಾಖಲಾಗುವುದರಿಂದ ಟ್ಯಾಂಪರ್ ( ದಾಖಲಾತಿ ನಾಶ) ಅಸಾಧ್ಯ ಹಾಗೂ ಆಸ್ತಿ ವರ್ಗಾವಣೆ ಪ್ರಕ್ರಿಯೆ ಟ್ರ್ಯಾಕಿಂಗ್ ಮಾಡುವುದು ಸುಲಭವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪೋಲಿಸ್ ಹಾಕಿ ಪಂದ್ಯ: ಕರ್ನಾಟಕ ಪರಾಜಯ

0

70 ನೇ ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್ ಷಿಪ್ ನ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಹಾಕಿ ತಂಡವು ಐಟಿಬಿಪಿ ಜಲಂಧರ್ ತಂಡದ ವಿರುದ್ಧ ಸೋಲು ಕಂಡಿದೆ.

ಅಕ್ಕಿತಿಮ್ಮನಹಳ್ಳಿ ಯಲ್ಲಿರುವ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಐಟಿಬಿಪಿ ತಂಡಗಳು ನಿಗದಿತ ಅವಧಿಯಲ್ಲಿ 1-1 ಗೋಲ್ ಗಳ ಸಮಬಲದ ಹೋರಾಟದ ನೀಡಿದವು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಹಾಕಿ ತಂಡ 0-2 ಅಂತರದಿಂದ ಸೋಲುವ ಮೂಲಕ ಫೈನಲ್ ಪ್ರವೇಶಿಸುವ ಅವಕಾಶ ವಿಫಲವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವರುಣ್ ಸಿಂಗ್ ಬದುಕುಳಿಯಲಿ: ದೇಶಾದ್ಯಂತ ಸ್ಪಂದನ

0

ವಿಧಾನಸಭಾ ಚುನಾವಣೆಯ ಇನ್ನೇನು ಹತ್ತಿರದಲ್ಲಿಯೇ ಇದೆ. ಇದರ ಪ್ರಚಾರದ ಸಲುವಾಗಿ ಗೋವಾಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದರು.

ಆ ಸಂದರ್ಭದಲ್ಲಿ, ಗೋವಾ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 30ರಷ್ಟು ಮೀಸಲು ನೀಡಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವರು ಭರವಸೆ ನೀಡಿದ್ದಾರೆ.

ಮೊಪಿರ್ಲಾ ಎಂಬ ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಿಯಾಂಕ ಅವರು ಮಾತನಾಡಿದರು. ” ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರ ಕುರಿತು ವಿಶೇಷ ಗಮನ ನೀಡಲಾಗುವುದು. ಅಭಿವೃದ್ಧಿ ಹಾಗೂ ಪರಿಸರದ ನಡುವೆ ಸಮತೋಲನ ಕಾಪಾಡಿಕೊಳ್ಳುವುದು” ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಓಮಿಕ್ರಾನ್: ಸಾಧಾರಣ ಪ್ರಸರಣ ಜಾಗ್ರತೆಯಾಗಿರಬೇಕು

0

ವಿಶ್ವವನ್ನೇ ಬೆಚ್ಚಿ ಬಿಳಿಸುತ್ತಿರುವ ಕೋವಿಡ್ ವೈರಸ್ ನ ರೂಪಾಂತರಿ ತಳಿ ಓಮಿಕ್ರಾನ್ ದೇಶದಲ್ಲಿ ಈವರೆಗೆ 26 ಪ್ರಕರಣಗಳು ಪತ್ತೆಯಾಗಿದೆ. ಎಲ್ಲಾ ಪ್ರಕರಣಗಳಲ್ಲೂ ರೋಗ ಲಕ್ಷಣಗಳು ಸಾಧಾರಣವಾಗಿದೆ ಇಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ 11, ರಾಜಸ್ಥಾನದಲ್ಲಿ 9, ಗುಜರಾತ್ ನಲ್ಲಿ 3, ಕರ್ನಾಟಕದಲ್ಲಿ 2 ಮತ್ತು ದೆಹಲಿಯಲ್ಲಿ 1 ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದೆ.

ದೇಶದಲ್ಲಿ ಕೊರೋನಾ ವೈರಸ್ ನ ರೂಪಾಂತರಿ ತಳಿ ಡೆಲ್ಟಾ ‘ಎವೈ.4.2’ ಕಡಿಯ 18 ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಕೋವಿಡ್-19 ವಿರುದ್ದ ಲಸಿಕೆಯನ್ನು ಮಕ್ಕಳಿಗೆ ನೀಡುವ ಬಗ್ಗೆ ರಾಷ್ಟ್ರೀಯ ಸಲಹಾ ಸಮಿತಿಯು ಸೂಚನೆ ನೀಡಿಲ್ಲ. ಈವರೆಗೂ ದೇಶದಲ್ಲಿ ಶೇ.86.2 ರಷ್ಟು ವಯಸ್ಕರಿಗೆ ಮೊದಲ ಡೋಸ್ ನೀಡಲಾಗಿದೆ. ಶೇ.53.5 ರಷ್ಟು ವಯಸ್ಕರು 2 ಡೋಸ್ ಲಸಿಕೆ ಪಡೆದಿದ್ದಾರೆ ಹಾಗೂ ಕಳೆದ 43 ದಿನಗಳಿಂದ ಕೂರೋನಾ ವೈರಸ್ ಸೋಂಕಿತರ ಸಂಖ್ಯೆ 15,000ಕ್ಕಿಂತ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮನಕ್ಕೊಪ್ಪುವ ಕಪ್ಪೆಗಳ ಹಬ್ಬ.

1

ಮಳೆಗಾಲದ ಸಮಯದಲ್ಲಿ ಮಲೆನಾಡಿನಲ್ಲಿ ಎಲ್ಲೆಲ್ಲೂ ಕಪ್ಪೆಗಳ ವಟಗುಟ್ಟುವಿಕೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಜನರು ಆಡುಮಾತಿನಲ್ಲಿ ಕಪ್ಪೆ ತರಹ ವಟಗುಟ್ಟಬೇಡ ಎನ್ನುವುದುಂಟು. ನಾವು ನಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬಣ್ಣಬಣ್ಣದ ಕಪ್ಪೆಗಳು,ಅಲ್ಲಿನ ಪರಿಸರಕ್ಕೆ ಹೊಂದಾಣಿಕೆಯಾಗುವಂತಹ ಕಪ್ಪೆಗಳು, ಹೀಗೆ ನಾನಾಬಗೆಯ ಕಪ್ಪೆಗಳನ್ನು ನೋಡಿರುತ್ತೇವೆ. ಆದ್ರೆ ಪಶ್ಚಿಮ ಘಟ್ಟದಲ್ಲಿ ಕಪ್ಪೆಗಳ ಸಂತತಿ ಅಳಿವಿನಂಚಿಗೆ ಬಂದು ನಿಂತಿದೆ. ಇವುಗಳ ಬಗ್ಗೆ ಅಧ್ಯಯನ ನಡೆಸಲು ‘ಕಪ್ಪೆ ಹಬ್ಬ ವೇದಿಕೆ’ ನೆರವಾಗಲಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು, ಜೋಗ್ ಕಾರ್ಗಲ್ ಸಮೀಪದ ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿ ಡಿ. 18 ಹಾಗೂ 19 ರಂದು ಕಪ್ಪೆ ಹಬ್ಬ ನಡೆಯಲಿದೆ.

ರಾಜ್ಯದಲ್ಲಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ವಿಶ್ವ ಕಪ್ಪೆ ದಿನ ಎಂದು ಆಚರಿಸಲಾಗಿದೆ. ಆದರೆ ಇದುವರೆಗೂ ವಿಸ್ತೃತ ಚರ್ಚೆ, ದೃಶ್ಯ ಪ್ರಚಾರಕ್ಕೆ ಅವಕಾಶ ಒದಗಿಸುವ ಅಂತಹ ಕಪ್ಪೆ ಹಬ್ಬ ನಡೆದಿಲ್ಲ. ಅದಕ್ಕಾಗಿ ಅರಣ್ಯ ಇಲಾಖೆಯ ಶಿವಮೊಗ್ಗದ ವನ್ಯಜೀವಿ ವಿಭಾಗ ಮತ್ತು ಕಾರ್ಗಲ್ ವನ್ಯಜೀವಿ ವಿಭಾಗಗಳು ಹಮ್ಮಿಕೊಂಡಿರುವ ಮೊದಲ ಕಾರ್ಯಕ್ರಮ ಇದಾಗಿದೆ.

ರಾಜ್ಯದಲ್ಲೇ, ಇದೇ ಮೊದಲು ‘ಕಪ್ಪೆ ಹಬ್ಬ’ ಆಚರಿಸಲಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿರುವ ಉಭಯವಾಸಿ ಜೀವಿಗಳ ಕುರಿತು ಅಧ್ಯಯನ ನಡೆಸುವುದಲ್ಲದೆ ಕಪ್ಪೆಗಳ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಅಳಿವಿನಂಚಿನಲ್ಲಿರುವ ಕಪ್ಪೆಗಳ ಕುರಿತು ತಿಳುವಳಿಕೆ ನೀಡುವುದು. ಪರಿಸರದಲ್ಲಿ ಕಪ್ಪೆಯ ಪಾತ್ರವನ್ನು ಮನದಟ್ಟು ಮಾಡಿಕೊಡಲಾಗುವುದು ಎಂದು ಶಿವಮೊಗ್ಗದ ಡಿಸಿಎಫ್, ವನ್ಯಜೀವಿ ವಿಭಾಗ ಅಧಿಕಾರಿ ಐ.ಎಂ. ನಾಗರಾಜ್ ಅವರು ತಿಳಿಸಿದ್ದಾರೆ.

ಪರಿಸರದಲ್ಲಿ ಆಹಾರ ಸರಪಳಿಯ ಕ್ರಿಯೆಯಲ್ಲಿ ಕಪ್ಪೆಗಳ ಪಾತ್ರ ಬಹುದೊಡ್ಡದಾಗಿದೆ. ಅವುಗಳು ಪರಿಸರದ ಆರೋಗ್ಯ ಸೂಚಕ ಜೀವಿಗಳು. ಕೀಟ ಸಾಂದ್ರತೆ ನಿಯಂತ್ರಣದಲ್ಲಿಡುವ ಶಕ್ತಿ ಇವುಗಳಿಗಿದೆ. ಹಾಗೂ ಇವುಗಳನ್ನು ರೈತನ ಮಿತ್ರ ಎಂದು ಸಹ ಕರೆಯಬಹುದು.

ಕಪ್ಪೆ ಸಂತತಿ ಗಳು ಒಂದು ವೇಳೆ ಇಲ್ಲವಾದರೆ, ಕೀಟಗಳ ಸಂಖ್ಯೆ ಏರಿಕೆಯಾಗಿ ಬಹುದೊಡ್ಡ ಸಮಸ್ಯೆ ಎದುರಾಗಬಹುದು. ಇಂತಹ ಕಪ್ಪೆಗಳ ಕುರಿತು ನಿರೀಕ್ಷಿತ ಅಧ್ಯಯನ ನಡೆದಿಲ್ಲ.
ಆದ್ದರಿಂದ ಪರಿಸರ ಪ್ರೇಮಿ ಉಳ್ಳವರು ಇಂತಹ ಕಾರ್ಯಕ್ರಮದ ಮೂಲಕ ಪ್ರಭೇದಗಳ ಕುರಿತು ಜನರಿಗೆ ಮಾಹಿತಿ ನೀಡಬೇಕಾಗಿದೆ.

ಪಶ್ಚಿಮ ಘಟ್ಟದಲ್ಲಿ ಪ್ರಾಣಿ ಜಗತ್ತಿನ ಬಗ್ಗೆ ಬೆಳಕಿಗೆ ಬಾರದ ಅದೆಷ್ಟೋ ರಹಸ್ಯಗಳಿವೆ. ಅದರಲ್ಲೂ ಪ್ರಮುಖ ಪ್ರಭೇದದ ಕಪಿಗಳ ಮೇಲೆ ನಡೆಯಬೇಕಾದ ಸಂಶೋಧನೆ, ಹೊಸ ತಳಿಗಳು ಹುಡುಕಾಟ ಹೀಗೆ ಹಲವಾರು ವಿಚಾರಗಳಿಗೆ ಕಪ್ಪೆ ಹಬ್ಬ ಬುನಾದಿಯಾಗುವ ನಿರೀಕ್ಷೆಯಿದೆ.

ಎರಡು ದಿನದ ಕಾಲ ಕಪ್ಪೆ ಹಬ್ಬ ನಡೆಯಲಿದೆ. ಈ ಹಬ್ಬದಲ್ಲಿ ನುರಿತ ತಜ್ಞರು ಕಪ್ಪೆಗಳ ಬಗ್ಗೆ ಅಧ್ಯಯನ ನಡೆಸಿದವರು ಭಾಗವಹಿಸಲಿದ್ದಾರೆ. ಕಪ್ಪೆಗಳ ಕುರಿತು ಚಿತ್ರೀಕರಣಗೊಂಡಿರುವ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಜೊತೆಗೆ ಕಪ್ಪೆ ಮತ್ತು ಪತಂಗಗಳ ವೀಕ್ಷಣೆ ಕೂಡ ಇರಲಿದೆ.

ಪಶ್ಚಿಮ ಘಟ್ಟದಲ್ಲಿ 104 ಕ್ಕೂ ಹೆಚ್ಚು ಮತ್ತು ಇಡೀ ಪಶ್ಚಿಮ ಘಟ್ಟದಲ್ಲಿ ನಾನೂರಕ್ಕೂ ಅಧಿಕ ಉಭಯವಾಸಿ ಜೀವಿಗಳಿವೆ ಎಂದು ಪತ್ತೆ ಹಚ್ಚಲಾಗಿದೆ. ಇಲ್ಲಿ ಇನ್ನು ಸಾಕಷ್ಟು ಸಂಖ್ಯೆಯಲ್ಲಿ ಉಭಯವಾಸಿ ಗಳಿವೆ. ಇಲ್ಲಿ ನಿರೀಕ್ಷಿತ ಮಟ್ಟದ ಸಂಶೋಧನೆ ನಡೆಯಬೇಕಿದೆ.