Thursday, February 26, 2026
Thursday, February 26, 2026
Home Blog Page 271

Prisons and Correctional Services ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸಿಬ್ಬಂದಿಗೆ ಯೋಗ ತರಬೇತಿ ಮಾಹಿತಿ

0

Prisons and Correctional Services ಶಿವಮೊಗ್ಗ ನಗರದ ಸೋಗಾನೆಯಲ್ಲಿರುವ ಕಾರಾಗೃಹ ಇಲಾಖೆ ಮತ್ತು ಸುಧಾರಣಾ ಸೇವಾ ಇಲಾಖೆ, ಮಹಿಳಾ ಕೇಂದ್ರ ಕಾರಾಗೃಹ ಶಿವಮೊಗ್ಗದ ಆವರಣದಲ್ಲಿ ಜೆಸಿಐ ಶಿವಮೊಗ್ಗ ಸಮೃದ್ಧಿ ಘಟಕದ ಜೆಸಿ ನರಸಿಂಹಮೂರ್ತಿಯವರು ಎಲ್ಲಾ ಪದಾಧಿಕಾರಿಗಳೊಂದಿಗೆ ಸಿಬ್ಬಂದಿ ವರ್ಗದವರೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಯೋಗ ಒಂದು ಭೂಮಿ ಒಂದು ಆರೋಗ್ಯ “ಎನ್ನುವ ನುಡಿಯೊಂದಿಗೆ ಉದ್ಘಾಟನೆ ಮಾಡಿರುತ್ತಾರೆ.

ಕಾರಾಗೃಹದ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೆ ಹಾಗೂ ಕಾರಾಗೃಹದ ಮಹಿಳಾ ಕೈದಿಗಳಿಗೆ ಯೋಗ ಹಾಗೂ ಪ್ರಾಣಯಾಮಗಳನ್ನು ಪತಾಂಜಲಿ ಯೋಗ ಕೇಂದ್ರದ ಶಿಕ್ಷಕಿಯಾದ ಜೆಸಿ ಸರಳಾ ವಾಸನ್, ಸಮೃದ್ಧಿ ಘಟಕದ ಕಾರ್ಯದರ್ಶಿಯಾದ ಜೆಸಿ ಗಾಯತ್ರಿ ಯಲ್ಲಪ್ಪಗೌಡ, ಪದಾಧಿಕಾರಿಯಾದ ಜೆಸಿ ಕವಿತಾ ಥೋರತ್, ಜೆಸಿ ಅನ್ನಪೂರ್ಣ ರವರೊಂದಿಗೆ ಯೋಗ ಮತ್ತು ಪ್ರಾಣಾಯಾಮಗಳನ್ನು ಕಲಿಸಿ ಕೊಟ್ಟರು.

ಇದೇ ರೀತಿ ಇನ್ನೂ ಐದು ದಿನಗಳವರೆಗೆ ಬೆಳಗ್ಗೆ 8.00 ಗಂಟೆಯಿಂದ 10.00 ಗಂಟೆಯವರೆಗೆ ಯೋಗ ಹಾಗೂ ಪ್ರಾಣಾಯಾಮವನ್ನು ಕಲಿಸಿಕೊಡುವವರಿದ್ದಾರೆ.

Prisons and Correctional Services ಜೆಸಿ ನರಸಿಂಹಮೂರ್ತಿ, ಜೆಸಿ ಮೋಹನ್ ಮತ್ತು ಪತಾಂಜಲಿ ಯೋಗ ಶಿಕ್ಷಕರಾದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಜೆ. ನಾಗರಾಜ ರವರೊಂದಿಗೆ ಕಾರಾಗೃಹದ ಪುರುಷ ಸಿಬ್ಬಂದಿ ವರ್ಗದವರಿಗೂ ಮತ್ತು ಕೈದಿಗಳಿಗೂ ಯೋಗ ಮತ್ತು ಪ್ರಾಣಾಯಾಮವನ್ನು ಕಲಿಸಿಕೊಟ್ಟರು. ಈ ದಿನದ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಹ ಕಾರಾಗೃಹದ ಸಿಬ್ಬಂದಿ ವರ್ಗದವರಿಗೆ ಈ ಮೂಲಕ ವಂದನೆಗಳನ್ನು ಸಮೃದ್ಧಿ ಘಟಕದ ವತಿಯಿಂದ ಅರ್ಪಿಸಲಾಯಿತು.

Youth Hostels Association ಬದಲಾದ ಹವಾಗುಣಕ್ಕನುಗುಣವಾಗಿ ನಾವು ಪ್ರಕೃತಿಯೊಂದಿಗೆ ಬೆರೆಯಬೇಕು-ನಾಗೇಶ್

0

Youth Hostels Association ವರ್ಷದಲ್ಲಿ ಪ್ರತೀದಿನ ಹವಾಗುಣ ಬದಲಾಗುತ್ತಿರುತ್ತದೆ, ಅದಕ್ಕೆ ಸ್ವಂದಿಸಿ ನಾವು ಪ್ರಕೃತಿಯೊಂದಿಗೆ ಬೆರೆಯಬೇಕು. ಆಗ ಜೀವನದ ಸಾರ್ಥಕತೆ ಎಂದು ತರುಣೋದಯ ಘಟಕ ಏರ್ಪಡಿಸಿದ್ದ ಭೀಮೇಶ್ವರ ಮಳೆಗಾಲದ ಚಾರಣಕ್ಕೆ ಚಾಲನೆ ನೀಡಿದ ಛೇರ್ಮನ್ ವಾಗೇಶ್ ನುಡಿದರು.
ಯೂತ್ ಹಾಸ್ಟೆಲ್ಸ್ ವತಿಯಿಂದ ಅತ್ಯಂತ ಜಾಗೂಕತೆಯಿಂದ, ಕಾರ್ಯಕ್ರಮ ಆಯೋಜಿಸಲಾಗುವುದು. ಇದರಿಂದ ಎಲ್ಲಾ ವಯೋಮಾನದವರು ಭಾಗವಹಿಸಿ ಆನಂದ, ಸಂತೋಷ ಅನುಭವಿಸಬಹುದಾಗಿದೆ ಎಂದರು.
Youth Hostels Association ಈಗ ಮಳೆಗಾಲ, ಅದನ್ನು ಅನುಭವಿಸಲು ಪ್ರತಿ ವರ್ಷ ಅತೀ ಹೆಚ್ಚು ಮಳೆ ಬೀಳುವ ಸ್ಥಳಗಳಿಗೆ ಒಂದು ದಿನದ ಚಾರಣ ಏರ್ಪಡಿಸಿ ಅದರ ಸವಿ ಸವಿಯಲು ಎಲ್ಲಾ ವಯೋಮಾನದವರಿಗೂ ಅವಕಾಶ ನೀಡುತ್ತಾಬಂದಿದ್ದೇವೆ. ಇಂದು ಸಹ ಮೂರು ವರ್ಷದ ಮಗುವಿನಿಂದ ಎಂಬತ್ತು ವರ್ಷದ ವಯೋಮಾನದವರು ಭಾಗವಹಿಸಿದ್ದಾರೆ ಎಂದು ಕಾರ್ಯದರ್ಶಿ ಸುರೇಶ್ ಕುಮಾರ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಘಟಕದ ಸಂಸ್ಥಪಕರಾದ ವೇಣುಗೋಪಾಲ್, ಉಮೇಶ್ ನೀರ್ದೆಶಕರಾದ ಮಲ್ಲಿಕಾರ್ಜುನ್ ಕಾನೂರು, ನಾಗರಾಜ್, ಭಾರತಿ, ಸುಮಾರಾಣಿ, ಮಮತಾ, ಡಾ.ಶ್ರೀಧರ್, ಡಾ.ಸಂಗೀತ, ಡಾ.ಶೈಲಶ್ರೀ, ಕಾಂತರಾಜ್, ಸಂತೋಷ್, ಬಸವರಾಜ್ ಮುಂತಾದವರು ಭಾಗವಹಿಸಿದ್ದರು.

Chamber Of Commerce Shivamogga ಕಾರ್ಮಿಕರು, ಸಿಬ್ಬಂದಿ ಪರಿಶ್ರಮ, ಸಂಘ ಸಂಸ್ಥೆಗಳ ಒಡನಾಟದಿಂದ ಉದ್ಯಮದ ಯಶಸ್ಸು-ಎನ್.ಗೋಪಿನಾಥ್

0

Chamber Of Commerce Shivamogga ಮಥುರಾ ಗ್ರೂಪ್ ಕಾರ್ಮಿಕರು, ಸಿಬ್ಬಂದಿ ಪರಿಶ್ರಮ, ಸಹಕಾರ ಹಾಗೂ ಸಂಘ ಸಂಸ್ಥೆಗಳ ಓಡನಾಟದಿಂದ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ್ದು, ಆತಿಥ್ಯ ರತ್ನ ಪ್ರಶಸ್ತಿ ಒದಗಿಬಂದಿದೆ ಎಂದು ಮಥುರಾ ಪ್ಯಾರಾಡೈಸ್ ಮಾಲೀಕ ಎನ್.ಗೋಪಿನಾಥ್ ಹೇಳಿದರು.
ನಗರದಲ್ಲಿ ಭದ್ರಾವತಿ ವಾಸು ಸಾರಥ್ಯದ ಭಾವಗಾನ ಶಿವಮೊಗ್ಗ ಹಾಗೂ ಮಥುರಾ ನಾಗರಾಜ್ ಸಾರಥ್ಯದ ಎಸ್‌ಎಸ್ ಕರೋಕೆ ಗ್ರೂಪ್ ವತಿಯಿಂದ ಮಥುರಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಸಂಗೀತ ಕಲಿಕೆಗೆ ಏಕಾಗ್ರತೆ ಹಾಗೂ ನಿರಂತರ ಅಭ್ಯಾಸ ಮುಖ್ಯ. ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕರೋಕೆ ಹಾಡುಗಾರರ ಸಂಖ್ಯೆ ತುಂಬಾ ಹೆಚ್ಚಾಗುತ್ತಿದೆ. ಆದರೆ ಹಾಡಿನ ಸಾಹಿತ್ಯ, ಸಂಗತಿ, ಹಿನ್ನೆಲೆ ಸಂಗೀತ ಗಮನದಲ್ಲಿರಿಸಿ ಅಭ್ಯಾಸ ಮಾಡಿ ಹಾಡುವುದು ಒಳ್ಳೆಯದು ಎಂದು ತಿಳಿಸಿದರು.
Chamber Of Commerce Shivamogga ಭದ್ರಾವತಿ ವಾಸು ಅವರ ಸಾರಥ್ಯದಲ್ಲಿ ಈಗಾಗಲೇ ಸಾಕಷ್ಟು ಹೊಸ ಹೊಸ ಕಲಾವಿದರು ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಅವರ ಪ್ರಯತ್ನ ಶ್ಲಾಘನೀಯ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸೂಕ್ತ ವ್ಯಕ್ತಿಗೆ ಪ್ರತಿಷ್ಠಿತ ಆತಿಥ್ಯ ರತ್ನ ಪ್ರಶಸ್ತಿ ಲಭಿಸಿದೆ. ಮಥುರಾ ಗೋಪಿನಾಥ್ ಅವರ ದೂರದೃಷ್ಟಿ, ಸಂಘ ಸಂಸ್ಥೆಗಳೊಂದಿಗೆ ಹೊಸ ಆಲೋಚನೆಗಳೊಂದಿಗೆ ಕಾರ್ಯ ನಿರ್ವಹಿಸುವ ರೀತಿ ಅಭಿನಂದನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭದ್ರಾವತಿ ವಾಸು ಮಾತನಾಡಿ, ಯಾವುದೇ ಸಂಸ್ಥೆಗಳು ಚಾಲ್ತಿಯಲ್ಲಿರಲು ಸಹಕಾರ, ಅಗತ್ಯ ಪ್ರೋತ್ಸಾಹ ಮುಖ್ಯ. ಗೋಪಿ ಅವರು ಉತ್ತಮ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಿಸುತ್ತಾರೆ ಎಂದು ತಿಳಿಸಿದರು.
ಮಥುರಾ ನಾಗರಾಜ್, ಬುಜಂಗಪ್ಪ, ಡಾ. ಲಕ್ಷ್ಮೀದೇವಿ ಗೋಪಿನಾಥ್, ಆದ್ಯಾ, ಮಮತ, ಪರಶುರಾಮ್, ಪ್ರಶಾಂತ್, ರಾಜಶೇಖರ, ಉಷಾ, ರವಿ, ರವಿ ಚವ್ಹಾಣ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Shivamogga District Karate Association ಶಿವಮೊಗ್ಗದ ಹಿರಿಯ ಕರಾಟೆ ಪಟು ಬಾಲರಾಜ್ ಗೆ ಸನ್ಮಾನ

0

Shivamogga District Karate Association ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ವತಿಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ
ಇಂಟರ್ನ್ಯಾಷನಲ್ ವರ್ಲ್ಡ್ ಕರಾಟೆ ಡೇ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ 60 ವರ್ಷ ವಯಸ್ಸಿನ ಹಿರಿಯ ಕರಾಟೆ ತರಬೇತಿದಾರ ಬಾಲ್ರಾಜ್‍ ರವರನ್ನು ಸನ್ಮಾನಿಸಲಾಯಿತು.
Shivamogga District Karate Association ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯದ್ಯಕ್ಷ ಸಿ ಎಸ್ ಷಡಾಕ್ಷರಿ ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಶ್ರೀ ಮೋಹನ್
ಮತ್ತು ನೆಹರು ಕ್ರೀಡಾಂಗಣದ ಸ್ನೇಹ ಬಳಗದ ರಾಜೇಶ್ ಕಾಮತ್ ದಿವಾಕರ್ ಶೆಟ್ಟಿ ಅರುಣ್ ಬಾಬು ವಿಶ್ವನಾಥ್ ಸೇರಿದಂತೆ ಜಿಲ್ಲಾ ಕರಾಟೆ ಅಸೋಸಿಯೇಷನ್ ನ ಗೌರವಧ್ಯಕ್ಷ ಶಿವಮೊಗ್ಗ ವಿನೋದ್ ಖಜಾಂಚಿ ಇರ್ಫಾನ್ ಮತ್ತು ನಿರ್ದೇಶಕರಾದ ಶ್ರೇಯಸ್ ದಿವ್ಯ
ಹರ್ಷಿತ್ ಕಾವ್ಯ ಪ್ರತಿಕ್ಷ ಪ್ರೀತಿಶ್ರೀ ಉಪಸ್ಥಿತರಿದ್ದರು.

Friends Health Care Center ಉಚಿತ ಮಂಡಿ ನೋವು ಹಾಗೂ ಮೂಳೆ ಸವೆತದ ತಪಾಸಣಾ ಶಿಬಿರ

0

Friends Health Care Center ಫ್ರೆಂಡ್ಸ್ ಹೆಲ್ತ್ ಕೇರ್ ಸೆಂಟರ್ ಸುದೇನು ಪಂಚಕರ್ಮ ಚಿಕಿತ್ಸಾಲಯ ಮತ್ತು ಔಷಧಾಲಯ, ಫ್ರೆಂಡ್ಸ್ ಸೆಂಟರ್ ನೇತ್ರ ಹಾಗೂ ರಕ್ತ ಬಂಡಾರದ ವತಿಯಿಂದ ಸಾರ್ವಜನಿಕರಿಗೆ ನುರಿತ ಆಯುರ್ವೇದ ತಜ್ಞರಾದ ಡಾಕ್ಟರ್ ಪಲ್ಲವಿ ಕೆ ಜಿ ಇವರಿಂದ ಉಚಿತ ಮಂಡಿ ನೋವು ಹಾಗೂ ಮೂಳೆ ಸವೆತದ ತಪಾಸಣೆ ಶಿಬಿರವನ್ನುಜೂ.26 ಗುರುವಾರ ರಂದು ಬೆಳಗ್ಗೆ 10.00 ರಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಏರ್ಪಡಿಸಲಾಗಿದೆ.

Friends Health Care Center ಗೋಪಾಲಗೌಡ ಬಡಾವಣೆ, 100 ಅಡಿ ರಸ್ತೆ, ವಿಶಾಲ್ ಮಾರ್ಟ್ ಎದುರುಗಡೆ ಇರುವ ಫ್ರೆಂಡ್ಸ್ ಹೆಲ್ತ್ ಕೇರ್ ಸೆಂಟರ್ ನ ಸುದೇನು ಪಂಚಕರ್ಮ ಚಿಕಿತ್ಸಾಲಯ ಮತ್ತು ಔಷಧಾಲಯದಲ್ಲಿ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ. ಆಸಕ್ತರು ಹೆಸರನ್ನು ನೋಂದಾಯಿಸಲು ದೂರವಾಣಿ ಸಂಖ್ಯೆ : 8792322627 ಹಾಗೂ 9448763818 ನ್ನು ಸಂಪರ್ಕಿಸಬಹುದಾಗಿದೆ.

Ambegalu Short Movie ಅಂಬೆಗಾಲು – 06 ಕಿರುಚಿತ್ರ ಸ್ಪರ್ಧೆ ಫಲಿತಾಂಶ.ಕಬಂಧ ಚಿತ್ರಕ್ಕೆ ಪ್ರಥಮ ಪುರಸ್ಕಾರ.” ಹೊಳೆ ನೀರಿನ ಕಾವು ” ಚಿತ್ರಕ್ಕೆ ದ್ವಿತೀಯ ಸ್ಥಾನ

0

Ambegalu Short Movie ಶಿವಮೊಗ್ಗ ಚಿತ್ರ ಸಮಾಜ ಆಯೋಜಿಸಿದ್ದ ಅಂಬೆಗಾಲು-೬ ಕಿರುಚಿತ್ರ ಸ್ಪರ್ಧೆಯಲ್ಲಿ ಪೃಥ್ವಿಗೌಡ ನಿರ್ದೇಶನದ ಕಬಂಧ ಹಾಗೂ ವಿಘ್ನೇಶ್ ಗೌಡ ನಿರ್ದೇಶನದಹೊಳೆ ನೀರಿನ ಕಾವು’ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಗಳಿಸಿದೆ.
ಜಿಲ್ಲಾ ಕೈಗಾರಿಕಾ ಸಂಘ ಮತ್ತು ವಾಣಿಜ್ಯ ಸಂಘದ ಸಭಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಶಾಸಕ ಚನ್ನಬಸಪ್ಪ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಹೆಸರಾಗಿದ್ದು, ಈಗ ಚಲನಚಿತ್ರ ಕ್ಷೇತ್ರದಲ್ಲಿಯೂ ಕೂಡಾ ದಾಪುಗಾಲಿರಿಸಿದೆ. ಅಂಬೆಗಾಲು ಕಿರುಚಿತ್ರ ಸ್ಪರ್ಧೆ ಅನುಕರಣೀಯವಾದದ್ದು. ಕಳೆದ ಐದು ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದೆ. ಇದು ಶ್ಲಾಘನೀಯ. ಅಂಬೆಗಾಲು ಕಿರುಚಿತ್ರ ಸ್ಪರ್ಧೆಯಲ್ಲಿ ಈ ಹಿಂದೆ ವಿಜೇತರಾದವರು ಚಲನಚಿತ್ರ ಕ್ಷೇತ್ರದಲ್ಲಿ ದಾಪುಗಾಲು ಹಾಕುತ್ತಿರುವುದು ಕೂಡಾ ಪ್ರಶಂಸನೀಯ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಶಾಸಕ ಧನಂಜಯ ಸರ್ಜಿ ಮಾತನಾಡಿ, ಹಿಂದೆ ೩ ಗಂಟೆಗಳ ಕಾಲ ಚಲನಚಿತ್ರ ಪ್ರದರ್ಶನ ನಡೆಯುತ್ತಿತ್ತು. ಈಗ ಅದು ನಿಮಿಷಗಳ ಲೆಕ್ಕಕ್ಕೆ ಬಂದಿದೆ. ಇದು ಪರೋಕ್ಷವಾಗಿ ಪ್ರೇಕ್ಷಕ ಸಮೂಹದಲ್ಲಿ ವ್ಯವದಾನ ಇಲ್ಲ ಎಂಬುದರ ಸಂಕೇತ. ಆದರೆ, ಪರಿಣಾಮಕಾರಿ ಅಭಿವೃದ್ಧಿಗೆ ಸದಭಿರುಚಿಯ ಚಿತ್ರಗಳು ಅತ್ಯಗತ್ಯವಾಗಿದ್ದು, ಇದಕ್ಕೆ ಕಾಲಮಿತಿ ಹಾಕುವುದು ಸರಿಯಲ್ಲ ಎಂದರು.
ಇದೇ ಸಂದರ್ಭದಲ್ಲಿ ಡಿ. ಸತ್ಯಪ್ರಕಾಶ್ ನಿರ್ದೇಶನದ ಗಿ-್ಗ ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ಅನಾವರಣಗೊಳಿಸಿದರು.
ಚಿತ್ರದ ಕಲಾವಿದರಾದ ಬೃಂದ ಆಚಾರ್ಯ, ಆಯನ, ನಾಯಕ ನಟ ಅಥರ್ವ ಪ್ರಕಾಶ್, `ಅಮರ ಪ್ರೇಮಿ ಅರುಣ್’ ಚಿತ್ರದ ನಾಯಕ ನಟ ಹರಿ ಶರ್ವ, ಡಾ. ರಜನಿ ಪೈ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿನಿಮೊಗೆ ಚಿತ್ರ ಸಮಾಜದ ಅಧ್ಯಕ್ಷರು, ಶಾಸಕರೂ ಆದ ಡಿ.ಎಸ್. ಅರುಣ್ ವಹಿಸಿ, ಅಂಬೆಗಾಲು-೬ ಕಿರುಚಿತ್ರ ಸ್ಪರ್ಧೆಗೆ ಸಹಕಾರ ನೀಡಿದ ಎಲ್ಲರನ್ನು ಗೌರವಿಸಿದರು.
ಸ್ಪರ್ಧೆಯಲ್ಲಿ ಈ ಬಾರಿ ೨೫ ಕಿರು ಚಿತ್ರಗಳು ಕಣದಲ್ಲಿದ್ದು, ೧೫ ಚಿತ್ರಗಳನ್ನು ಆಯ್ಕೆ ಸಮಿತಿ ಪರಿಗಣಿಸಿ, ೧೧ ವಿಭಾಗಗಳಲ್ಲಿ ವಿವಿಧ ಪ್ರಶಸ್ತಿಗಳನ್ನು ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದ ಸಂಚಾಲಕ ವೈದ್ಯನಾಥ್‌ರವರು ನಿರೂಪಿಸಿದರು.
ಬಾಕ್ಸ್
Ambegalu Short Movie ಉಳಿದ ವಿಭಾಗಗಳ ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ: ಶ್ರೇಷ್ಟ ನಟ: ವಿಕಾಸ ನಾಯ್ಕ (ತಂದೆಯ ಪಾತ್ರಧಾರಿ) / ಟಾನಿಕ್, ಶ್ರೇಷ್ಟ ನಟಿ: ಐಶ್ ಆರಾಧ್ಯ / ಎಂಥಾ ಲೋಕವಯ್ಯ, ಶ್ರೇಷ್ಟ ಪೋಷಕ ನಟ: ಸೋನ್ಯಾ ನಾಯ್ಕ (ಅಜ್ಜನ ಪಾತ್ರಧಾರಿ) ಋಣ / ರಾಮು ಎನ್. ರಾಥೋಡ್, ಶ್ರೇಷ್ಟ ಪೋಷಕ ನಟಿ: ಮಾನ್ಯ / ನೂರೂ ಜನ್ಮಕೂ… ನೂರಾರು ಜನ್ಮಕೂ… / ವಜ್ರ ಮೂವೀ ಕ್ರಿಯೇಷನ್ಸ್, ಶ್ರೇಷ್ಟ ಚಿತ್ರಕಥೆ : ಜನ್ಯರಾಗ / ಬಿ.ಪಿ. ರಾಹುಲ್, ಶ್ರೇಷ್ಟ ಸಂಗೀತ : ಸುಮೇದ್/ಆರ್ಟಿಸ್ಟ್ /ಇನ್-Áರಂ ಥಿಯೇಟರ್, ಶ್ರೇಷ್ಟ ಛಾಯಾಗ್ರಹಣ: ಗಣೇಶ್ ಭಟ್/ಹೊಳೆ ನೀರಿನ ಕಾವು/ ವಿಘ್ನೇಶ್ ಗೌಡ, ಶ್ರೇಷ್ಟ ಸಂಕಲನ : ಅನುರಂಜನ್ / ಅನಂತರ / ಶಿವಕುಮಾರ್ ಬುದೇಪ್ಪ ರಾಥೋಡ್, ತೀರ್ಪುಗಾರರ ಮೆಚ್ಚುಗೆಯ ಚಿತ್ರ ಮಜ್ನು ಮ್ಯಾರೇಜ್ / ಮಧು ಶಿವಮೊಗ್ಗ, ದ್ವಿತೀಯ ಬಹುಮಾನ ವಿಜೇತ ಚಿತ್ರ: ಹೊಳೆ ನೀರಿನ ಕಾವು / ವಿಘ್ನೇಶ್ ಗೌಡ, ಪ್ರಥಮ ಬಹುಮಾನ ವಿಜೇತ ಚಿತ್ರ : ಕಬಂಧ / ಪೃಥ್ವಿ ಎನ್. ಗೌಡ.

Madhu Bangarappa ಎಲ್ಲಾ ಸಮುದಾಯಗಳ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸುವ ಉದ್ದೇಶವಿದೆ – ಮಧು ಬಂಗಾರಪ್ಪ

0

Madhu Bangarappa ರಾಜ್ಯದಲ್ಲಿನ ವಿವಿಧ ಜಾತಿ ಜನಾಂಗಗಳ, ಅದರಲ್ಲೂ ಮುಖ್ಯವಾಗಿ ಹಿಂದುಳಿದ ವರ್ಗಗಳಲ್ಲಿ ಆಯಾ ಸಮುದಾಯಗಳ ಜನಸಂಖ್ಯೆ ಮತ್ತು ಅವರ ಶೈಕ್ಷಣಿಕ, ಅರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಯ ಆಧಾರದ ಮೇಲೆ ಅವರಿಗೆ ಮೀಸಲಾತಿ ಮತ್ತು ಸರ್ಕಾರಿ ಸೌಲಭ್ಯಗಳನ್ನು ಹಂಚಿಕೆ ಮಾಡಬೇಕು. ಎಲ್ಲಾ ನಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ನಿರ್ಧರಿಸಿ ಅದಕ್ಕೆ ತಕ್ಕಂತೆ ಮೀಸಲಾತಿ ಮತ್ತು ಸರ್ಕಾರಿ ಸೌಲಭ್ಯ ಮತ್ತು ಅವಕಾಶಗಳ ಹಂಚಿಕೆಯಾಗಬೇಕು ಎಂಬ ಸದುದ್ದೇಶದಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ನಗರದ ಹೊರವಲಯ ಮಲ್ಲಿಗೇನಹಳ್ಳಿಯ ಸನ್ನಿಧಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಈಗಾಗಲೇ ನಡೆಸಲಾದ ಸಮೀಕ್ಷೆಯು ದಶಕಗಳ ಹಿಂದಿನದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅನೇಕ ಆಕ್ಷೇಪಗಳಿವೆ. ಈ ಸಮೀಕ್ಷೆಯ ಕುರಿತು ಸಾರ್ವಜನಿಕರಲ್ಲಿ ಅನೇಕ ಪ್ರಶ್ನೆಗಳಿದ್ದು, ಅವರ ಎಲ್ಲಾ ಸಲಹೆ-ಸೂಚನೆಗಳನ್ನು ಸರ್ಕಾರವು ಮುಕ್ತವಾಗಿ ಸ್ವೀಕರಿಸಿ, ಪರಿಶೀಲಿಸಲಿದೆ ಎಂದ ಅವರು, ಸರ್ಕಾರದ ಮಹತ್ವದ ಈ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸುವಂತೆ ಅವರು ಕರೆ ನೀಡಿದರು.
ಭಾರತ ಸಂವಿಧಾನದ ಆಶಯಗಳನ್ನು, ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಸಾರ್ವಜನಿಕ ವಲಯದಲ್ಲಿ ಜಾಗ್ರತಗೊಳಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವರ್ಗದ ಜನರೊಂದಿಗೆ ಸಂವಿಧಾನದ ಪೀಠಿಕೆ ವಾಚನ ಮಾಡುವ ಮೂಲಕ ಅರಿವು ಮೂಡಿಸುವ ಕಾರ್ಯ ಅತ್ಯಂತ ಅರ್ಥಪೂರ್ಣವಾದದ್ದಾಗಿದೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಸ್ವಾಭಿಮಾನದ ಬದುಕನ್ನ ಕಟ್ಟಿಕೊಳ್ಳಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲಾದ ಸಂವಿಧಾನದಲ್ಲಿ ಸಾಮಾಜಿಕವಾಗಿ ಇರುವ ಮಹತ್ವದ ವಿಷಯ ಮತ್ತು ಅನೇಕ ಜನಪರ ಆಶಯಗಳನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದವರು ನುಡಿದರು.
ಸಂವಿಧಾನ ಪೀಠಿಕೆ ವಾಚನವನ್ನು ಆರಂಭಿಸಿದ ದೇಶದ ಮೊದಲ ರಾಜ್ಯ ನಮ್ಮದಾಗಿದೆ. 2023ರ ಸೆಪ್ಟಂಬರ್‌15ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ಪೀಠಿಕೆಯನ್ನು ಓದಲಾಗುತ್ತಿದೆ. ಮಹಾತ್ಮಗಾಂಧಿಯವರ ಆದರ್ಶವನ್ನು ಪರಿಚಯಿಸುವ ಸಪ್ತಪಾತಕಗಳು, ಸಂವಿಧಾನದ ಪೀಠಿಕೆಯನ್ನು ಶಿಕ್ಷಣ ಇಲಾಖೆಯ ಎಲ್ಲಾ ವಿಷಯಗಳ ಸುಮಾರು 10.50ಕೋಟಿ ಪಠ್ಯಪುಸ್ತಕಗಳಲ್ಲಿ ಮುದ್ರಿಸಲಾಗುತ್ತಿದೆ ಎಂದರು.
Madhu Bangarappa ಅನೇಕ ದಶಕಗಳಿಂದ ಇತ್ಯರ್ಥಗೊಳ್ಳದೆ ನೆನೆಗುದಿಗೆ ಬಿದ್ದಿರುವ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ಬದ್ದವಾಗಿದೆ. ಈ ಹಿಂದೆ ಸಂತ್ರಸ್ತರ ಭೂಮಿಯನ್ನು ಜಂಟಿ ಸರ್ವೇ ಮಾಡಿ ಡಿನೋಟಿಫಿಕೇಶನ್ ಮಾಡಲಾಗಿತ್ತು. ಆದರೆ ಕೆಲವು ಕಾರಣಗಳಿಂದ ನ್ಯಾಯಾಲಯ ಸದರಿ ಸರ್ವೇಗೆ ತಡೆಯಾಜ್ಞೆ ನೀಡಿತ್ತು ಎಂದ ಅವರು, ಪುನಃ ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳು ಈ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ವರದಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅದರಂತೆ ಈಗ ಜಿಲ್ಲೆಯಲ್ಲಿನ ಶರಾವತಿ ಸೇರಿದಂತೆ ಎಲ್ಲಾ ಪ್ರದೇಶಗಳಲ್ಲಿನ ಮುಳುಗಡೆ ಸಂತ್ರಸ್ತರ ಸಾಗುವಳಿ ಭೂಮಿ ಜಂಟಿ ಸರ್ವೇ ಮಾಡಲಾಗುತ್ತಿದೆ. ಬಹುತೇಕ ಕಡೆಗಳಲ್ಲಿ ಸರ್ವೇ ಕಾರ್ಯ ಮುಗಿದಿದೆ. ಈ ಮತಹ್ವದ ಕಾರ್ಯದಲ್ಲಿ ಎಲ್ಲರೂ ಸಹಕರಿಸಬೇಕು. ಸಂತ್ರಸ್ಥರು ತಮ್ಮ ಅಹವಾಲುಗಳಿದ್ದಲ್ಲಿ ಸ್ಥಳೀಯ ಸಚಿವರು, ಶಾಸಕರು ಅಥವಾ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದಲ್ಲಿ, ಅದನ್ನು ಸಂದರ್ಭೋಚಿತವಾಗಿ ಸುಪ್ರಿಂ ಕೋರ್ಟಿಗೆ ಸಲ್ಲಿಸಲಾಗುವುದು ಎಂದರು.
ಈ ಸಂಬಂಧ ಮಾನ್ಯ ಜಿಲ್ಲಾಧಿಕಾರಿಗಳು ಈಗಾಗಲೇ ಜಿಲ್ಲೆಯ ಶರಾವತಿ ಸಂತ್ರಸ್ಥರಿರುವ ಪ್ರದೇಶಗಳಿಗೆ ಖುದ್ದು ಬೇಟಿ ನೀಡಿ ಅಲ್ಲಿನ ಸಂತ್ರಸ್ಥರೊಂದಿಗೆ ಸಮಾಲೋಚನೆ ಮುಂದುವರೆಸಿದ್ದಾರೆ ಎಂದ ಅವರು, ಸಂತ್ರಸ್ಥರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ತಮ್ಮ ನೆರವಿಗೆ ಸರ್ಕಾರ ಬದ್ಧವಾಗಿದೆ ಎಂದವರು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರವು ಜನಪರವಾದ, ಸಾರ್ವಜನಿಕರ ಹಿತಕ್ಕೆ ಅಗತ್ಯವಿರುವ ಎಲ್ಲಾ ಕಾರ್ಯಕ್ರಮಗಳನ್ನು ರೂಪಿಸಿ, ಅನುಷ್ಠಾನಗೊಳಿಸುತ್ತಿದೆ. ಶಿಕ್ಷಣ ಕ್ಷೇತ್ರದ ಕುರಿತು ವಿಪಕ್ಷಗಳ ಅನೇಕ ಟೀಕೆಗಳಿಗೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷಾ ಫಲಿತಾಂಶವೇ ಸೂಕ್ತ ಉತ್ತರವಾಗಿದೆ ಎಂದರು.
ಕೆ.ಪಿ.ಎಸ್‌. ಶಾಲೆಗಳನ್ನು ಆರಂಭಿಸಲು ರಾಜ್ಯದಾದ್ಯಂತ ಬೇಡಿಕೆ ಹೆಚ್ಚಾಗಿದೆ. ಪ್ರತಿ ತರಗತಿಗಳಲ್ಲಿ ನಿಗಧಿಪಡಿಸಲಾಗಿದ್ದ ವಿದ್ಯಾರ್ಥಿಗಳ ಸಂಖ್ಯೆಯನ್ನು 30 ರಿಂದ 50ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ ಶಾಲೆಗಳಲ್ಲಿ ದ್ವಿ-ಭಾಷಾ ತರಗತಿಗಳನ್ನು ಆರಂಭಿಸಲು ಸೂಚಿಸಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ 2-3 ಕೆ.ಪಿ.ಎಸ್.‌ ಶಾಲೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ಸಂಖ್ಯೆ ಮುಂದಿನ 5 ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಲಿದೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ. ಮತ್ತು ದ್ವಿಭಾಷಾ ಕಲಿಕೆಗೆ ದಾಖಲಾತಿ ನಡೆಯುತ್ತಿದೆ ವಿದ್ಯಾರ್ಥಿಗಳ ದಾಖಲಾತಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿನ ವ್ಯಾಸಂಗ ಮಾಡುತ್ತಿರುವ ರಾಜ್ಯದ 25000 ವಿದ್ಯಾರ್ಥಿಗಳಿಗೆ ಜೆ.ಇ.ಇ., ಎನ್.ಇ.ಇ.ಟಿ., ಐ.ಐ.ಟಿ. ಸೇರಿ ಉನ್ನತ ಶಿಕ್ಷಣಕ್ಕೆ ಅನುಕೂಲವಾಗುವಂತೆ ಉಚಿತ ತರಬೇತಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಸಂಬಂದ ರಾಜ್ಯದ ಎಲ್ಲಾ ಮಕ್ಕಳಿಗೂ ಉಚಿತವಾಗಿ ತರಬೇತಿ ತರಗತಿಗಳನ್ನು ನಡೆಸುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಕೋರಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುವೆಂಪು ಸಿಂಡಿಕೇಟ್‌ಸದಸ್ಯ ಕೆ.ಪಿ.ಶ್ರೀಪಾಲ್‌, ಮಾಜಿ ಜಿ.ಪಂ. ಸದಸ್ಯೆ ಶ್ರೀಮತಿ ಶ್ವೇತಾಬಂಡಿ, ತೇಜಪ್ಪ ಮುಂತಾದವರು ಉಪಸ್ಥಿತರಿದ್ದರು.

DK Shivakumar ಎತ್ತಿನಹೊಳೆ ಯೋಜನೆ ಕಾಮಗಾರಿ‌ ಪರಿಶೀಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

0

DK Shivakumar ಎತ್ತಿನ ಹೊಳೆ ಯೋಜನೆಯ ಮೂಲಕ ಕುಡಿಯುವ ನೀರನ್ನು ಬರಪೀಡಿತ ಜಿಲ್ಲೆಗಳಾದ ತುಮಕೂರು ,ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಸಂಪರ್ಕವನ್ನು ಕಲ್ಪಿಸಲು ಕಾಮಗಾರಿಗಳು ನಡೆಯುತ್ತಿದ್ದು ಇಂದು ಉಪ‌ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ರವರು ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಬೈರಗೊಂಡಲು ಜಲಾಶಯ ನಿರ್ಮಾಣದ ಕಾಮಗಾರಿಗಳನ್ನು ಹಾಗೂ ದೊಡ್ಡಬಳ್ಳಾಪುರದ ಆಲಪನಹಳ್ಳಿಯ ಮೂಲಕ ಕೋಲಾರಕ್ಕೆ ನೀರನ್ನು ಲಿಪ್ಟ್ ಮಾಡುವ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.

DK Shivakumar ಈ ಸಂದರ್ಭದಲ್ಲಿ ಶಾಸಕರಾದ ದೀರಜ್ ಮುನಿರಾಜು,ಮಾಜಿ ಶಾಸಕ ವೆಂಕಟರಮಣಯ್ಯ, ಜಲನಿಗಮದ ನಿರ್ದೇಶಕರಾದ ಚನ್ನಚಿತ್ತಯ್ಯ,ಹಾಗೂ ಹಿರಿಯ ಅಭಿಯಂತ್ರರರು ಉಪಸ್ಥಿತರಿದ್ದರು.

Royal English Medium School ರಾಯಲ್ ಡೈಮಂಡ್ ಶಾಲೆಯಲ್ಲಿ‌ ನಿತ್ಯ ಯೋಗ ಮಾಡುವ ಸಂಕಲ್ಪ ಸ್ವೀಕಾರ

0

Royal English Medium School ಶಿವಮೊಗ್ಗ ನಗರದ ಹೆಸರಾಂತ ವಿದ್ಯಾಸಂಸ್ಥೆಯಲ್ಲಿ ಒಂದಾದ ರಾಯಲ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು, ಈ ಒಂದು ಸಂದರ್ಭದಲ್ಲಿ ಸುಸ್ಥಿರ ಸಮಾಜ ಹಾಗೂ ಸದೃಢ Royal English Medium School ಆರೋಗ್ಯಕ್ಕಾಗಿ, ಮಕ್ಕಳು ಈ ವರ್ಷದ ಘೋಷ ವಾಕ್ಯದೊಂದಿಗೆ ದಿನನಿತ್ಯ ಯೋಗ ಮಾಡುವ ಸಂಕಲ್ಪವನ್ನು ತೆಗೆದುಕೊಂಡರು, ಈ ಒಂದು ಯೋಗ ದಿನಾಚರಣೆಯಲ್ಲಿ, ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ,ಪೂಜಾ ನಾಗರಾಜ್ ಪರಿಸರ ಮೇಡಮ್, ಮುಖ್ಯ ಶಿಕ್ಷಕರಾದ ಮಂಜುನಾಥ್ ಎಲ್ ಎನ್, ಹಾಗೂ ಎಲ್ಲಾ ಶಿಕ್ಷಕ ,ಶಿಕ್ಷಕೇತರ ವೃಂದದವರು ಭಾಗವಹಿಸಿದ್ದರು.

JCI Shimoga Malnad ಜೆಸಿಐ ಶಿವಮೊಗ್ಗ ಸ್ಟಾರ್ ಮತ್ತು ಜೆಸಿಐ ಚಿರಂತನ ಆಶ್ರಯದಲ್ಲಿ ರಕ್ತದಾನ ಶಿಬಿರ

0

JCI Shimoga Malnad ಜೆಸಿಐ ಶಿವಮೊಗ್ಗ ಸ್ಟಾರ್ ಮತ್ತು ಜೆಸಿಐ ಶಿವಮೊಗ್ಗ ಚಿರಂತನ ಘಟಕಗಳಿಂದ ನಗರದ ರೋಟರಿ ಮಿಡ್ ಟೌನ್ ರಕ್ತ ನಿಧಿಯಲ್ಲಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಘಟಕಗಳ ಅಧ್ಯಕ್ಷರಾದ ಜೆಸಿ ಗಣೇಶ್ ಪೈ, ಜೆಸಿ ರುದ್ರೇಶ್ ಕೋರಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
JCI Shimoga Malnad ಮುಖ್ಯ ಅತಿಥಿಗಳಾಗಿ ವಲಯ ಅಧ್ಯಕ್ಷರಾದ ಜೆಸಿ ಗೌರೀಶ್ ಭಾರ್ಗವ್ ಮತ್ತು ರಾಷ್ಟ್ರೀಯ ಪೂರ್ವ ಉಪ ಅಧ್ಯಕ್ಷರಾದ ಜೆಸಿ ಎಸ್ ವಿ ಶಾಸ್ತ್ರಿ ಮತ್ತು ಕಾರ್ಯದರ್ಶಿ ಜೆಸಿ ಪ್ರಿಯಾಂಕಾ, ಮಹಿಳಾ ಜೇಸಿ ಜೆಸಿ ಲತಾ , ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.