Friends Center Shivamogga ಬದುಕಿನ ಒತ್ತಡಗಳ ನಡುವೆ ಪ್ರವಾಸ, ಚಾರಣಗಳಲ್ಲಿ ಪಾಲ್ಗೊಳ್ಳುವುದರಿಂದ ಜೀವನೋತ್ಸಾಹ ವೃದ್ಧಿಯಾಗುತ್ತದೆ ಎಂದು ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಹೇಳಿದರು.
ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ಮಳೆಗಾಲದ ಪ್ರವಾಸ ಹಾಗೂ ಚಾರಣಗಳನ್ನು ಉದ್ದೇಶಿಸಿ ಮಾತನಾಡಿ, ಪ್ರವಾಸದಿಂದ ಪರಸ್ಪರರಲ್ಲಿ ಒಡನಾಟ ಹಾಗೂ ಪರಿಚಯವಾಗುವ ಜತೆಗೆ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ. ಹೊಸ ಹೊಸ ಸ್ಥಳಗಳ ಪರಿಚಯವಾಗುತ್ತದೆ. ಅಲ್ಲಿಯ ಜನರ ಜೀವನ ಬದುಕು ತಿಳಿಯುತ್ತದೆ. ಆದ್ದರಿಂದ ವರ್ಷದಲ್ಲಿ ಒಂದು ಎರಡು ಬಾರಿ ಪ್ರವಾಸ ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಮಳೆಗಾಲದಲ್ಲಿ ವಿಶೇಷ ಅನುಭವವನ್ನು ನೀಡುವಂತಹ ಸ್ಥಳಗಳು ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಇವೆ. ಅವುಗಳನ್ನು ಭೇಟಿ ಮಾಡಿ ಪ್ರವಾಸಿ ತಾಣಗಳ ಪರಿಚಯ ಮಾಡಿಕೊಳ್ಳಬೇಕು ಎಂದರು.
ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಪ್ರವಾಸ ಹಾಗೂ ಚಾರಣದಿಂದ ದೇಹ ಹಾಗೂ ಮನಸ್ಸು ಸದೃಢವಾಗಿರುತ್ತದೆ. ಮಳೆಗಾಲದಲ್ಲಿ ಪ್ರಕೃತಿ ಮಾತೆಯನ್ನು ನೋಡಲು ಬಹಳ ಸುಂದರವಾಗಿರುತ್ತದೆ. ಪ್ರಕೃತಿಯನ್ನು ನಾವು ಪ್ರೀತಿಸಿ ಗೌರವಿಸಿ ಸಂರಕ್ಷಿಸಬೇಕು. ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜತೆಗೆ ಪ್ರವಾಸಿಗರಿಗೆ ಬೇಕಾದ ಸೂಕ್ತ ವ್ಯವಸ್ಥೆಗಳನ್ನು ಇಲಾಖೆ ವತಿಯಿಂದ ಮಾಡಬೇಕು ಎಂದು ನುಡಿದರು.
Friends Center Shivamogga ಫ್ರೆಂಡ್ಸ್ ಸೆಂಟರ್ ಚೇರ್ಮನ್ ವಿ ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ 84 ಪ್ರಸಿದ್ಧ ಪ್ರವಾಸಿ ತಾಣಗಳು ಇವೆ. ಪ್ರವಾಸೋದ್ಯಮ ಬೆಳೆಯಬೇಕಾದರೆ ಸಾರ್ವಜನಿಕರ ಸಹಕಾರವು ಅಷ್ಟೇ ಮುಖ್ಯವಾಗಿರುತ್ತದೆ. ಅವರಿಗೆ ಸೂಕ್ತ ಹಾಗೂ ಮೂಲ ವ್ಯವಸ್ಥೆಗಳ ಅವಶ್ಯಕತೆ ಇರುತ್ತದೆ. ಪ್ರವಾಸೋದ್ಯಮ ಇಲಾಖೆ ಸಹಕರಿಸಬೇಕಾಗಿದೆ ಎಂದು ಹೇಳಿದರು.
ಮೃಘವಧೆ, ಹರಿಹರಪುರ, ಕುಪ್ಪಳ್ಳಿ, ಶಕಟಾಪುರ, ಶೃಂಗೇರಿ ಹಾಗೂ ಮುಂತಾದ ದಳಗಳಿಗೆ ಏರ್ಪಡಿದ್ದ ಪ್ರವಾಸದಲ್ಲಿ ಫ್ರೆಂಡ್ಸ್ ಸೆಂಟರ್ ಸದಸ್ಯರು ಪಾಲ್ಗೊಂಡು ಪ್ರವಾಸಿ ತಾಣಗಳನ್ನು ಭೇಟಿ ನೀಡಿ ಸಂಭ್ರಮಿಸಿದರು. ಶೃಂಗೇರಿ ಹಾಗೂ ಹರಿಹರಪುರದಲ್ಲಿ ಪ್ರವಾಸಿ ಸ್ಥಳಗಳನ್ನು ಸ್ವಚ್ಛಗೊಳಿಸಿದರು.
ಫ್ರೆಂಡ್ಸ್ ಸೆಂಟರ್ ನೇತ್ರ ಭಂಡಾರದ ಚೇರ್ಮನ್ ವಿ.ನಾಗರಾಜ್, ಮಾಜಿ ಅಧ್ಯಕ್ಷ ಸತ್ಯನಾರಾಯಣ್ ಮಹೇಶ್ವರಪ್ಪ, ರಮೇಶ್, ಸುರೇಶ್, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಬಿಂದು ವಿಜಯ ಕುಮಾರ್, ಎಲ್ ಎಂ ಮೋಹನ್, ಯು ರವೀಂದ್ರನಾಥ್ ಐತಾಳ್, ಎಮ್ ಶಂಕರ್ ಹಿರೇಮಠ್, ದ್ವಾರಕನಾಥ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Friends Center Shivamogga ಚಾರಣಗಳಲ್ಲಿ ಪಾಲ್ಗೊಳ್ಳುವುದರಿಂದ ಜೀವನೋತ್ಸಾಹ ವೃದ್ಧಿ
Pinnacle Data Services ಪಿನಾಕಲ್‌ನಿಂದ ಪರಿಸರ ಜಾಗೃತಿ, ಸಾಮಾಜಿಕ ಸೇವೆ ಕಾರ್ಯಕ್ರಮ
Pinnacle Data Services ಪಿನಾಕಲ್ ಡೇಟಾ ಸರ್ವೀಸ್ ಸಂಸ್ಥೆಯ ಸಿಎಸ್‌ಆರ್ ಸಮಿತಿಯಿಂದ ಶಿವಮೊಗ್ಗದಲ್ಲಿ ಹಸಿರು ಅಭಿಯಾನ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನೂರಾರು ಸಸಿಗಳನ್ನು ನೆಡುವ ಜತೆಯಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಸಾರಲಾಯಿತು.
ಪಿನಾಕಲ್ ಡೇಟಾ ಸರ್ವೀಸ್ ಸಂಸ್ಥೆಯು ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ಸಮಿತಿಯು ಪರಿಸರ ಸಂರಕ್ಷಣೆಯತ್ತ ಮತ್ತು ಸಮಾಜದ ಕಲ್ಯಾಣದತ್ತ ಒತ್ತು ನೀಡುವ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು.
ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ ಹುಲಿ ಮತ್ತು ಸಿಂಹಧಾಮ ಉದ್ಯಾನವನದಲ್ಲಿ ಹಮ್ಮಿಕೊಂಡ ಹಸಿರು ಅಭಿಯಾನದಲ್ಲಿ 102 ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮವನ್ನು ಪಿನಾಕಲ್ ಡೇಟಾ ಸರ್ವೀಸ್ ಸಂಸ್ಥೆ ನಿರ್ದೇಶಕರಾದ ರವಿಕುಮಾರ್ ಎನ್.ಎಸ್., ರೋಹಿತ್, ಬಾಲಕೃಷ್ಣ ನಾಯಕ್ ಮತ್ತು ಆರಾಧನಾ ಆಸ್ಪತ್ರೆಯ ವೈದ್ಯೆ ಡಾ. ಶೋಭಾ ಎಂ.ಎಂ. ನೇತೃತ್ವ ವಹಿಸಿದ್ದರು. ಸಂಸ್ಥೆಯ ನೌಕರರು ಮತ್ತು ಸ್ಥಳೀಯ ಪರಿಸರ ಸಂರಕ್ಷಕರು ಸಹಭಾಗಿಯಾಗಿ ಹಸಿರೀಕರಣ ಕಾರ್ಯಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
Pinnacle Data Services ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ತಂಡವು ಶಿವಮೊಗ್ಗದ ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗೆ ಭೇಟಿ ನೀಡಿ, ಅಲ್ಲಿನ ಮಕ್ಕಳಿಗೆ ಪುಸ್ತಕಗಳು ಮತ್ತು ಹುಡೀಸ್‌ಗಳನ್ನು ವಿತರಿಸಿತು. ಸಮಾನತೆ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳನ್ನು ಸಾರ್ವಜನಿಕರಲ್ಲಿ ಹರಡುವ ಉದ್ದೇಶ ಇಡಲಾಗಿದೆ.
ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮಗಳು ಸ್ಥಳೀಯ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ಪಿನಾಕಲ್ ಸಂಸ್ಥೆಯ ಸಮಾಜಮುಖಿ ದೃಷ್ಟಿಕೋನವನ್ನು ಕಾರ್ಯಕ್ರಮಗಳು ಮತ್ತಷ್ಟು ಬಿಂಬಿಸಿದವು.
JCI Shivamogga ಜೆಸಿಐ ಶಿವಮೊಗ್ಗ ಸಮೃದ್ಧಿ ಘಟಕದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನ ಆಚರಣೆ
JCI Shivamogga ಶಿವಮೊಗ್ಗ ನಗರದ ಸೋಗಾನೆಯಲ್ಲಿರುವ ಕಾರಾಗೃಹ ಇಲಾಖೆ ಮತ್ತು ಸುಧಾರಣಾ ಸೇವಾ ಇಲಾಖೆ, ಮಹಿಳಾ ಕೇಂದ್ರ ಕಾರಾಗೃಹ ಶಿವಮೊಗ್ಗದ ಆವರಣದಲ್ಲಿ ಜೆಸಿಐ ಶಿವಮೊಗ್ಗ ಸಮೃದ್ಧಿ ಘಟಕದ ಜೆಸಿ ನರಸಿಂಹಮೂರ್ತಿಯವರು ಎಲ್ಲಾ ಪದಾಧಿಕಾರಿಗಳೊಂದಿಗೆ ಸಿಬ್ಬಂದಿ ವರ್ಗದವರೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಯೋಗ ಒಂದು ಭೂಮಿ ಒಂದು ಆರೋಗ್ಯ “ಎನ್ನುವ ನುಡಿಯೊಂದಿಗೆ ಉದ್ಘಾಟನೆ ಮಾಡಿರುತ್ತಾರೆ.
ಕಾರಾಗೃಹದ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೆ ಹಾಗೂ ಕಾರಾಗೃಹದ ಮಹಿಳಾ ಕೈದಿಗಳಿಗೆ ಯೋಗ ಹಾಗೂ ಪ್ರಾಣಯಾಮಗಳನ್ನು ಪತಾಂಜಲಿ ಯೋಗ ಕೇಂದ್ರದ ಶಿಕ್ಷಕಿಯಾದ ಜೆಸಿ ಸರಳಾ ವಾಸನ್, ಸಮೃದ್ಧಿ ಘಟಕದ ಕಾರ್ಯದರ್ಶಿಯಾದ ಜೆಸಿ ಗಾಯತ್ರಿ ಯಲ್ಲಪ್ಪಗೌಡ, ಪದಾಧಿಕಾರಿಯಾದ ಜೆಸಿ ಕವಿತಾ ಥೋರತ್, ಜೆಸಿ ಅನ್ನಪೂರ್ಣ ರವರೊಂದಿಗೆ ಯೋಗ ಮತ್ತು ಪ್ರಾಣಾಯಾಮಗಳನ್ನು ಕಲಿಸಿ ಕೊಟ್ಟರು.
ಇದೇ ರೀತಿ ಇನ್ನೂ ಐದು ದಿನಗಳವರೆಗೆ ಬೆಳಗ್ಗೆ 8.00 ಗಂಟೆಯಿಂದ 10.00 ಗಂಟೆಯವರೆಗೆ ಯೋಗ ಹಾಗೂ ಪ್ರಾಣಾಯಾಮವನ್ನು ಕಲಿಸಿಕೊಡುವವರಿದ್ದಾರೆ.
JCI Shivamogga ಜೆಸಿ ನರಸಿಂಹಮೂರ್ತಿ, ಜೆಸಿ ಮೋಹನ್ ಮತ್ತು ಪತಾಂಜಲಿ ಯೋಗ ಶಿಕ್ಷಕರಾದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಜೆ. ನಾಗರಾಜ ರವರೊಂದಿಗೆ ಕಾರಾಗೃಹದ ಪುರುಷ ಸಿಬ್ಬಂದಿ ವರ್ಗದವರಿಗೂ ಮತ್ತು ಕೈದಿಗಳಿಗೂ ಯೋಗ ಮತ್ತು ಪ್ರಾಣಾಯಾಮವನ್ನು ಕಲಿಸಿಕೊಟ್ಟರು. ಈ ದಿನದ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಹ ಕಾರಾಗೃಹದ ಸಿಬ್ಬಂದಿ ವರ್ಗದವರಿಗೆ ಈ ಮೂಲಕ ವಂದನೆಗಳನ್ನು ಸಮೃದ್ಧಿ ಘಟಕದ ವತಿಯಿಂದ ಅರ್ಪಿಸಲಾಯಿತು.
Dr. H.B. Manjunath ಜಾಗತಿಕ ಸಮಸ್ಯೆಗಳಿಗೂ ಮಾನಸಿಕ ಅಸ್ವಾಸ್ಥ್ಯಕಾರಣವಾಗುತ್ತದೆ- ಡಾ.ಎಚ್.ಬಿ.ಮಂಜುನಾಥ್
Dr. H.B. Manjunath “ಮಾನಸಿಕ ಅಸ್ವಾಸ್ಥ್ಯವೂ ಜಾಗತಿಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ” -ನಿರಂತರ ಯೋಗ ಕೇಂದ್ರದಲ್ಲಿ ಡಾ. ಎಚ್ ಬಿ ಮಂಜುನಾಥ– ದಾವಣಗೆರೆ.ಜೂ.23. ಮಾನಸಿಕ ಅಸ್ವಾಸ್ಥ್ಯವು ಕೇವಲ ವೈಯಕ್ತಿಕ ಸಮಸ್ಯೆಗಳಿಗಷ್ಟೇ ಅಲ್ಲ ಜಾಗತಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ, ಭಯೋತ್ಪಾದನೆಯಿಂದ ಮೊದಲುಗೊಂಡು ಯುದ್ಧದವರೆಗೂ ಎಲ್ಲ ಸಮಸ್ಯೆಗಳಿಗೂ ಮಾನಸಿಕ ಅಸ್ವಾಸ್ಥ್ಯವೂ ಒಂದು ಕಾರಣವಾಗಿರುತ್ತದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು. ಅವರು ನಗರದ ವಿವೇಕಾನಂದ ಬಡಾವಣೆಯಲ್ಲಿನ ನಿರಂತರ ಯೋಗ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡುತ್ತಾ ಇಂದಿನ ದಿನಮಾನಗಳಲ್ಲಿ ಜನರು ದೈಹಿಕ ಆರೋಗ್ಯಕ್ಕೆ ಕೊಟ್ಟಷ್ಟು ಗಮನವನ್ನು ಮಾನಸಿಕ ಆರೋಗ್ಯದ ಕಡೆಗೆ ಕೊಡುತ್ತಿಲ್ಲ, ಮಾನಸಿಕ ಅಸ್ವಾಸ್ಥ್ಯತೆಯು ಗೃಹ ಕಲಹದಿಂದ ಮೊದಲ್ಗೊಂಡು ಜಾಗತಿಕ ಯುದ್ಧದವರೆಗೂ ಕೊಂಡೊಯ್ಯುತ್ತದೆ, ಮನೋನಿಗ್ರಹವು ಇದಕ್ಕೆಲ್ಲ ಪರಿಹಾರವಾಗಲಿದ್ದು ಅಷ್ಟಾಂಗ ಯೋಗದಲ್ಲಿ ಹೇಳಿರುವ ಯಮ ನಿಯಮಾದಿಗಳ ಸಹಿತವಾದ ಪ್ರತ್ಯಾಹಾರ ಧಾರಣಾದಿಗಳ ಅನುಷ್ಠಾನದಿಂದ ಮಾನಸಿಕ ಆರೋಗ್ಯದ ಪ್ರಾಪ್ತಿ ಇದೆ. ಕೇವಲ ಆಸನಗಳಿಗಷ್ಟೇ ಪ್ರಾಧಾನ್ಯತೆ ಕೊಟ್ಟಲ್ಲಿ Dr. H.B. Manjunath ಅಷ್ಟಾಂಗ ಯೋಗದ ಮಹತ್ವ ಗೌಣವಾಗುತ್ತದೆ, ಬಹಿರೇಂದ್ರಿಯ ನಿಗ್ರಹಕ್ಕೆ ಯಮವೂ, ಅಂತರೇಂದ್ರಿಯ ನಿಗ್ರಹಕ್ಕೆ ನಿಯಮವೂ, ವ್ಯವಸ್ಥಿತ ಉಸಿರಾಟಕ್ಕೆ ಪ್ರಾಣಾಯಾಮವೂ, ಮನೋ ನಿಗ್ರಹಕ್ಕೆ ಪ್ರತ್ಯಾಹಾರ,ಧಾರಣ, ಧ್ಯಾನವು ಸಾಧನವಾಗಿದ್ದು ಅಷ್ಟಾಂಗ ಯೋಗದಲ್ಲಿನ ಇವುಗಳ ಪಾಲನೆಯಿಂದ ಮಾನಸಿಕ ಆರೋಗ್ಯ ಸಾಧಿಸಬಹುದು, ತನ್ಮೂಲಕ ಪ್ರಾಪ್ತವಾಗುವ ಮಾನಸಿಕ ಶಾಂತಿಯೇ ಸಮಾಧಿ ಸ್ಥಿತಿ ಎಂದರು. ಚಂದ್ರಶೇಖರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನಾಗರಾಜ್ ಪ್ರಾರ್ಥನೆ ಮಾಡಿದರು. ಸುರೇಶ್, ಭೀಮಣ್ಣ, ಚಂದ್ರಣ್ಣ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ರವರು ವಂದನೆ ಸಲ್ಲಿಸಿದರು.
Dr. G. S. Yadav ಜೈವಿಕ ಸಿಎನ್ ಜಿ ಘಟಕಗಳಿಗೆ ಕಾರ್ಬನ್ ಕ್ರೆಡಿಟ್ಸ್ ಬಳಕೆ ಬಗ್ಗೆ ಸಚಿವರೊಂದಿಗೆ ಡಾ.ಜಿಎಸ್.ಯಾದವ್ ಚರ್ಚೆ
Dr. G. S. Yadav ತರಕಾರಿ ಮತ್ತು ಇತರ ತ್ಯಾಜ್ಯ ಬಳಕೆ ಮಾಡಿ ಬಯೋ ಸಿಎನ್‌ಜಿ ಪ್ಲಾಂಟ್‌ಗಳ ಸ್ಥಾಪನೆಗೆ ಕೇಂದ್ರ ಸರ್ಕಾರದ ಕಾರ್ಬನ್ ಕ್ರೆಡಿಟ್ಸ್ ಅನುದಾನ ಬಳಕೆ ಬಗ್ಗೆ ದೆಹಲಿಯ ಕೊಸ್ಯಾಂಬೋ ( ಕೌನ್ಸಿಲ್ ಆಫ್ ಸ್ಟೇಟ್ ಅಗ್ರಿಕಲ್ಟರ್ ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್) ವ್ಯವಸ್ಥಾಪಕ ನಿರ್ದೇಶಕ ಡಾ. ಜೆ.ಎಸ್. ಯಾದವ್ ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರನ್ನು ಸೋಮವಾರ ಭೇಟಿ ಮಾಡಿ ಚರ್ಚಿಸಿದರು.
ರಾಜ್ಯದಲ್ಲಿ ಬೆಂಗಳೂರಿನ ದಾಸನಪುರ, ಮೈಸೂರು ಮತ್ತು ಕೋಲಾರಗಳಲ್ಲಿ ಈಗಾಗಲೇ ಬಯೋ ಸಿಎನ್‌ಜಿ ಪ್ಲಾಂಟ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಅವರು ಡಾ. ಜೆ.ಎಸ್. ಯಾದವ್ ಅವರ ಗಮನಕ್ಕೆ ತಂದರು.
ತರಕಾರಿ ಮತ್ತಿತರ ತ್ಯಾಜ್ಯ ಬಳಸಿ ಬಯೋ ಗ್ಯಾಸ್ ಉತ್ಪಾದನೆ ಮಾಡುವುದರಿಂದ ಪರಿಸರಕ್ಕೆ ವಿಷಕಾರಿ ಅನಿಲ ಸೇರ್ಪಡೆಯಾಗುವುದನ್ನು ತಡೆಗಟ್ಟಬಹುದು. ಘನ ತ್ಯಾಜ್ಯ ನಿರ್ವಹಣೆ ಕಾಯ್ದೆಗೆ ಕೇಂದ್ರ ಸರ್ಕಾರ ಅಕ್ಟೋಬರ್‌ನಲ್ಲಿ ತಿದ್ದುಪಡಿ ತರಲಿದ್ದು, ಈ ಮೂಲಕ ಲಭ್ಯವಾಗುವ ನೆರವನ್ನು ಬಳಕೆ ಮಾಡಿಕೊಂಡು ಎಪಿಎಂಸಿಗಳಲ್ಲಿ ಬಯೋ ಗ್ಯಾಸ್ ಪ್ಲಾಂಟ್‌ಗಳನ್ನು ನಿರ್ಮಾಣ ಮಾಡುವುದು ಸೂಕ್ತ ಎಂದು ಡಾ. ಜೆ.ಎಸ್. ಯಾದವ್ ಸಲಹೆ ಮಾಡಿದರು.
ಪ್ರತಿದಿನ 50 ಟನ್ ಉತ್ಪಾದನೆ ಮಾಡಿದರೆ ಮಾತ್ರ ಈ ಯೋಜನೆ ಲಾಭದಾಯಕವಾಗಲಿದೆ. ಇದು ಲಾಭದಾಯಕ ಎಂದಾಗ ಮಾತ್ರ ಖಾಸಗಿಯವರೂ ಬಯೋ ಗ್ಯಾಸ್ ಪ್ಲಾಂಟ್ ನಿರ್ಮಿಸಲು ಮುಂದೆ ಬರುತ್ತಾರೆ. ರಾಜ್ಯದ ಯಾವ ಯಾವ ಎಪಿಎಂಸಿಗಳಲ್ಲಿ ಪ್ರತಿದಿನ ಎಷ್ಟು ತ್ಯಾಜ್ಯ ಉತ್ಪಾದನೆಯಾಗುತ್ತದೆ. ಎಲ್ಲೆಲ್ಲಿ ಬಯೋಗ್ಯಾಸ್ ಪ್ಲಾಂಟ್ ನಿರ್ಮಿಸಿದರೆ ಲಾಭದಾಯಕ ಎಂಬುದನ್ನು ಗುರುತಿಸಿ ಯೋಜನೆ ರೂಪಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಯಿತು.
ಅತಿ ಹೆಚ್ಚು ತ್ಯಾಜ್ಯ ಉತ್ಪಾದನೆಯಾಗುವ ಬೆಂಗಳೂರು, ಮೈಸೂರು ಮತ್ತು ಕೋಲಾರಗಳಲ್ಲಿ ಸ್ಥಾಪನೆ ಮಾಡುವುದು ಸೂಕ್ತ ಎಂಬ ಸಲಹೆ ವ್ಯಕ್ತವಾಯಿತು.
ಹಣ್ಣುಗಳ ಪ್ಯಾಕಿಂಗ್ ಮಾಡಲು ಹಾನಿಕಾರಕ ರಾಸಾಯನಿಕ ಬಳಕೆ, ಸೇಬು ಸೇರಿದಂತೆ ಇತರ ಹಲವು ಹಣ್ಣುಗಳ ಬ್ರಾಂಡ್‌ಗಳನ್ನು ಗುರುತಿಸಲು ಅವುಗಳ ಮೇಲೆ ಸ್ಟಿಕ್ಕರ್‌ಗಳನ್ನು ಹಚ್ಚುವುದು ಅಪಾಯಕಾರಿ. ಇಂತಹ ಹಣ್ಣುಗಳ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಈ ಬಗ್ಗೆ ವರ್ತಕರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಬಗ್ಗೆ ಕೂಡ ಚರ್ಚೆ ನಡೆಯಿತು.
Dr. G. S. Yadav ಆಹಾರ ಸುರಕ್ಷತೆ ಕಾಯ್ದೆಯಲ್ಲಿ ಈ ಎಲ್ಲ ಅಂಶಗಳು ಬರುತ್ತವೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಂಶಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ. ಈ ನಿಯಮಗಳನ್ನು ಪಾಲನೆ ಮಾಡಲು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಕಲ್ಲಂಗಡಿ, ಬೆಂಡೆಕಾಯಿ, ಕ್ಯಾರೆಟ್ ಸೇರಿದಂತೆ ಕೆಲವು ಹಣ್ಣು, ತರಕಾರಿಗಳಿಗೆ ಕೃತಕ ಬಣ್ಣ ಬಳಕೆ ಮಾಡಲಾಗುತ್ತಿದೆ. ಗರಿಷ್ಠ ಪ್ರಮಾಣದಲ್ಲಿ ಕೀಟನಾಶಕ ಬಳಸುವುದೂ ಕೂಡ ಅಪಾಯಕಾರಿ. ಆದ್ದರಿಂದ ತರಕಾರಿಗೆ ಕೃತಕ ಬಣ್ಣ ಬಳಕೆ ಮತ್ತು ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಕೀಟನಾಶಕ ಬಳಸುವ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇಲ್ಲವಾದರೆ ಭವಿಷ್ಯದ ದಿನಗಳಲ್ಲಿ ಆರೋಗ್ಯದ ಮೇಲೆ ಗರಿಷ್ಠ ಪ್ರಮಾಣದಲ್ಲಿ ದುಷ್ಪರಿಣಾಮ ಬೀರಲಿದೆ ಎನ್ನುವ ಅಂಶಗಳ ಬಗ್ಗೆ ಕೂಡ ಚರ್ಚೆ ನಡೆಯಿತು.
ತೋಟಗಾರಿಕೆ, ಪುಷ್ಪೋದ್ಯಮ ಮತ್ತು ಹೈನುಗಾರಿಕೆ ಉದ್ಯಮದಲ್ಲಿ ಕರ್ನಾಟಕ ರಾಜ್ಯ ಮಂಚೂಣಿಯಲ್ಲಿದೆ ಎಂದು ಸಚಿವ ಶಿವಾನಂದ ಪಾಟೀಲ ಅವರು ಜೆ.ಎಸ್.ಯಾದವ್ ಅವರ ಗಮನಕ್ಕೆ ತಂದರು. ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಅಧೀಕ್ಷಕ ಅಭಿಯಂತರ ರಘುನಂದನ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ರವಿಪ್ರಕಾಶ್, ಕರ್ನಾಟಕ ಕೃಷಿ ಮಾರಾಟ ಮಹಾ ಮಂಡಳದ ಮುಖ್ಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ್ ಪಾಟೀಲ ಇದ್ದರು.
Sri Shivaganga Yoga Center ಯೋಗ ಗುರು ಸಿ.ವಿ. ರುದ್ರಾರಾಧ್ಯ ಅವರಿಗೆ ಯೋಗರತ್ನಾಕರ ಪ್ರಶಸ್ತಿ ಪ್ರದಾನ
Sri Shivaganga Yoga Center ಶ್ರೀ ಶಿವಗಂಗಾ ಯೋಗ ಕೇಂದ್ರ (ರಿ), ಕಲ್ಲಹಳ್ಳಿ,ವಿನೋಬನಗರ ಶಿವಮೊಗ್ಗ ಇದರ ಸಂಸ್ಥಾಪಕ ಕಾರ್ಯಾಧ್ಯಕ್ಷರಾದ ಯೋಗಾಚಾರ್ಯ ಸಿ.ವಿ. ರುದ್ರಾರಾಧ್ಯ ರವರಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಕರ್ನಾಟಕ ಯೋಗ ಶಿಕ್ಷಕರ ಒಕ್ಕೂಟ, ಮೈಸೂರು, ಇವರು ಆಯೋಜಿಸಿದ್ದ ಕರ್ನಾಟಕ ರಾಜ್ಯಮಟ್ಟದ ಸಮ್ಮೇಳನ 2025 ದಲ್ಲಿ ಯೋಗ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಶ್ರೀಯುತರನ್ನು ಗುರುತಿಸಿ ಯೋಗ ರತ್ನಾಕರ ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಸಮ್ಮೇಳನದ ಸರ್ವಾಧ್ಯಕ್ಷರಾದ ಬೆಂಗಳೂರಿನ ಎಸ್ ವ್ಯಾಸ ಯೋಗ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿಗಳು ಮತ್ತು ಅಧ್ಯಕ್ಷರು, ವೇದ ವಿಜ್ಞಾನ ಗುರುಕುಲಂ ನ ಪ್ರೊ ರಾಮಚಂದ್ರ ಜಿ ಭಟ್ ಕೋಟೆ ಮನೆ ಇವರು ಪ್ರಶಸ್ತಿ ಪ್ರಧಾನ ಮಾಡಿದರು.
Sri Shivaganga Yoga Center ರಾಷ್ಟ್ರಪತಿಯವರಿಂದ ರಾಷ್ಟ್ರಪ್ರಶಸ್ತಿ , ರಾಜ್ಯೋತ್ಸವ ಪ್ರಶಸ್ತಿ ಮತ್ತು ಅನೇಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ರುದ್ರಾರಾಧ್ಯರಿಗೆ ಈ ಸಂದರ್ಭದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರದ ಮಹಾಪೋಷಕರಾದ ಶ್ರೀ ಡಾ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬೆಕ್ಕಿನ ಕಲ್ಮಠ , ಅಧ್ಯಕ್ಷರಾದ ಶ್ರೀ ಎಸ್ ರುದ್ರೇಗೌಡರು, ಕಾರ್ಯಕಾರಿ ಸಮಿತಿಯ ಸದಸ್ಯರಾದ ಹೊಸ ತೋಟ ಸೂರ್ಯನಾರಾಯಣ, ಪೋಷಕರಾದ ಡಾ.ಧನಂಜಯ ಸರ್ಜಿ, ಸಿ.ಎಸ್.ಷಡಕ್ಷರಿ ಇನ್ನು ಹಲವು ಮುಖ್ಯಸ್ಥರು ಮತ್ತು ಯೋಗ ಶಿಕ್ಷಕ ವೃಂದದವರು, ಯೋಗ ಶಿಕ್ಷಣಾರ್ಥಿಗಳು ಹರ್ಷ ವ್ಯಕ್ತಪಡಿಸಿ ಶ್ರೀಯುತರ ಸೇವೆ ಇನ್ನು ಅನೇಕ ವರ್ಷಗಳು ಯೋಗ ಕ್ಷೇತ್ರಕ್ಕೆ ಸಿಕ್ಕಲಿ ಎಂದು ಶುಭ ಹಾರೈಸಿ ಅಭಿನಂದಿಸಿದ್ದಾರೆ
Prisons and Correctional Services ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಸಿಬ್ಬಂದಿಗೆ ಯೋಗ ತರಬೇತಿ ಮಾಹಿತಿ
Prisons and Correctional Services ಶಿವಮೊಗ್ಗ ನಗರದ ಸೋಗಾನೆಯಲ್ಲಿರುವ ಕಾರಾಗೃಹ ಇಲಾಖೆ ಮತ್ತು ಸುಧಾರಣಾ ಸೇವಾ ಇಲಾಖೆ, ಮಹಿಳಾ ಕೇಂದ್ರ ಕಾರಾಗೃಹ ಶಿವಮೊಗ್ಗದ ಆವರಣದಲ್ಲಿ ಜೆಸಿಐ ಶಿವಮೊಗ್ಗ ಸಮೃದ್ಧಿ ಘಟಕದ ಜೆಸಿ ನರಸಿಂಹಮೂರ್ತಿಯವರು ಎಲ್ಲಾ ಪದಾಧಿಕಾರಿಗಳೊಂದಿಗೆ ಸಿಬ್ಬಂದಿ ವರ್ಗದವರೊಂದಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಯೋಗ ಒಂದು ಭೂಮಿ ಒಂದು ಆರೋಗ್ಯ “ಎನ್ನುವ ನುಡಿಯೊಂದಿಗೆ ಉದ್ಘಾಟನೆ ಮಾಡಿರುತ್ತಾರೆ.
ಕಾರಾಗೃಹದ ಎಲ್ಲಾ ಮಹಿಳಾ ಸಿಬ್ಬಂದಿಗಳಿಗೆ ಹಾಗೂ ಕಾರಾಗೃಹದ ಮಹಿಳಾ ಕೈದಿಗಳಿಗೆ ಯೋಗ ಹಾಗೂ ಪ್ರಾಣಯಾಮಗಳನ್ನು ಪತಾಂಜಲಿ ಯೋಗ ಕೇಂದ್ರದ ಶಿಕ್ಷಕಿಯಾದ ಜೆಸಿ ಸರಳಾ ವಾಸನ್, ಸಮೃದ್ಧಿ ಘಟಕದ ಕಾರ್ಯದರ್ಶಿಯಾದ ಜೆಸಿ ಗಾಯತ್ರಿ ಯಲ್ಲಪ್ಪಗೌಡ, ಪದಾಧಿಕಾರಿಯಾದ ಜೆಸಿ ಕವಿತಾ ಥೋರತ್, ಜೆಸಿ ಅನ್ನಪೂರ್ಣ ರವರೊಂದಿಗೆ ಯೋಗ ಮತ್ತು ಪ್ರಾಣಾಯಾಮಗಳನ್ನು ಕಲಿಸಿ ಕೊಟ್ಟರು.
ಇದೇ ರೀತಿ ಇನ್ನೂ ಐದು ದಿನಗಳವರೆಗೆ ಬೆಳಗ್ಗೆ 8.00 ಗಂಟೆಯಿಂದ 10.00 ಗಂಟೆಯವರೆಗೆ ಯೋಗ ಹಾಗೂ ಪ್ರಾಣಾಯಾಮವನ್ನು ಕಲಿಸಿಕೊಡುವವರಿದ್ದಾರೆ.
Prisons and Correctional Services ಜೆಸಿ ನರಸಿಂಹಮೂರ್ತಿ, ಜೆಸಿ ಮೋಹನ್ ಮತ್ತು ಪತಾಂಜಲಿ ಯೋಗ ಶಿಕ್ಷಕರಾದ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಜೆ. ನಾಗರಾಜ ರವರೊಂದಿಗೆ ಕಾರಾಗೃಹದ ಪುರುಷ ಸಿಬ್ಬಂದಿ ವರ್ಗದವರಿಗೂ ಮತ್ತು ಕೈದಿಗಳಿಗೂ ಯೋಗ ಮತ್ತು ಪ್ರಾಣಾಯಾಮವನ್ನು ಕಲಿಸಿಕೊಟ್ಟರು. ಈ ದಿನದ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಂತಹ ಕಾರಾಗೃಹದ ಸಿಬ್ಬಂದಿ ವರ್ಗದವರಿಗೆ ಈ ಮೂಲಕ ವಂದನೆಗಳನ್ನು ಸಮೃದ್ಧಿ ಘಟಕದ ವತಿಯಿಂದ ಅರ್ಪಿಸಲಾಯಿತು.
Youth Hostels Association ಬದಲಾದ ಹವಾಗುಣಕ್ಕನುಗುಣವಾಗಿ ನಾವು ಪ್ರಕೃತಿಯೊಂದಿಗೆ ಬೆರೆಯಬೇಕು-ನಾಗೇಶ್
Youth Hostels Association ವರ್ಷದಲ್ಲಿ ಪ್ರತೀದಿನ ಹವಾಗುಣ ಬದಲಾಗುತ್ತಿರುತ್ತದೆ, ಅದಕ್ಕೆ ಸ್ವಂದಿಸಿ ನಾವು ಪ್ರಕೃತಿಯೊಂದಿಗೆ ಬೆರೆಯಬೇಕು. ಆಗ ಜೀವನದ ಸಾರ್ಥಕತೆ ಎಂದು ತರುಣೋದಯ ಘಟಕ ಏರ್ಪಡಿಸಿದ್ದ ಭೀಮೇಶ್ವರ ಮಳೆಗಾಲದ ಚಾರಣಕ್ಕೆ ಚಾಲನೆ ನೀಡಿದ ಛೇರ್ಮನ್ ವಾಗೇಶ್ ನುಡಿದರು.
ಯೂತ್ ಹಾಸ್ಟೆಲ್ಸ್ ವತಿಯಿಂದ ಅತ್ಯಂತ ಜಾಗೂಕತೆಯಿಂದ, ಕಾರ್ಯಕ್ರಮ ಆಯೋಜಿಸಲಾಗುವುದು. ಇದರಿಂದ ಎಲ್ಲಾ ವಯೋಮಾನದವರು ಭಾಗವಹಿಸಿ ಆನಂದ, ಸಂತೋಷ ಅನುಭವಿಸಬಹುದಾಗಿದೆ ಎಂದರು.
Youth Hostels Association ಈಗ ಮಳೆಗಾಲ, ಅದನ್ನು ಅನುಭವಿಸಲು ಪ್ರತಿ ವರ್ಷ ಅತೀ ಹೆಚ್ಚು ಮಳೆ ಬೀಳುವ ಸ್ಥಳಗಳಿಗೆ ಒಂದು ದಿನದ ಚಾರಣ ಏರ್ಪಡಿಸಿ ಅದರ ಸವಿ ಸವಿಯಲು ಎಲ್ಲಾ ವಯೋಮಾನದವರಿಗೂ ಅವಕಾಶ ನೀಡುತ್ತಾಬಂದಿದ್ದೇವೆ. ಇಂದು ಸಹ ಮೂರು ವರ್ಷದ ಮಗುವಿನಿಂದ ಎಂಬತ್ತು ವರ್ಷದ ವಯೋಮಾನದವರು ಭಾಗವಹಿಸಿದ್ದಾರೆ ಎಂದು ಕಾರ್ಯದರ್ಶಿ ಸುರೇಶ್ ಕುಮಾರ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಘಟಕದ ಸಂಸ್ಥಪಕರಾದ ವೇಣುಗೋಪಾಲ್, ಉಮೇಶ್ ನೀರ್ದೆಶಕರಾದ ಮಲ್ಲಿಕಾರ್ಜುನ್ ಕಾನೂರು, ನಾಗರಾಜ್, ಭಾರತಿ, ಸುಮಾರಾಣಿ, ಮಮತಾ, ಡಾ.ಶ್ರೀಧರ್, ಡಾ.ಸಂಗೀತ, ಡಾ.ಶೈಲಶ್ರೀ, ಕಾಂತರಾಜ್, ಸಂತೋಷ್, ಬಸವರಾಜ್ ಮುಂತಾದವರು ಭಾಗವಹಿಸಿದ್ದರು.
Chamber Of Commerce Shivamogga ಕಾರ್ಮಿಕರು, ಸಿಬ್ಬಂದಿ ಪರಿಶ್ರಮ, ಸಂಘ ಸಂಸ್ಥೆಗಳ ಒಡನಾಟದಿಂದ ಉದ್ಯಮದ ಯಶಸ್ಸು-ಎನ್.ಗೋಪಿನಾಥ್
Chamber Of Commerce Shivamogga ಮಥುರಾ ಗ್ರೂಪ್ ಕಾರ್ಮಿಕರು, ಸಿಬ್ಬಂದಿ ಪರಿಶ್ರಮ, ಸಹಕಾರ ಹಾಗೂ ಸಂಘ ಸಂಸ್ಥೆಗಳ ಓಡನಾಟದಿಂದ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ್ದು, ಆತಿಥ್ಯ ರತ್ನ ಪ್ರಶಸ್ತಿ ಒದಗಿಬಂದಿದೆ ಎಂದು ಮಥುರಾ ಪ್ಯಾರಾಡೈಸ್ ಮಾಲೀಕ ಎನ್.ಗೋಪಿನಾಥ್ ಹೇಳಿದರು.
ನಗರದಲ್ಲಿ ಭದ್ರಾವತಿ ವಾಸು ಸಾರಥ್ಯದ ಭಾವಗಾನ ಶಿವಮೊಗ್ಗ ಹಾಗೂ ಮಥುರಾ ನಾಗರಾಜ್ ಸಾರಥ್ಯದ ಎಸ್‌ಎಸ್ ಕರೋಕೆ ಗ್ರೂಪ್ ವತಿಯಿಂದ ಮಥುರಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಸಂಗೀತ ಕಲಿಕೆಗೆ ಏಕಾಗ್ರತೆ ಹಾಗೂ ನಿರಂತರ ಅಭ್ಯಾಸ ಮುಖ್ಯ. ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕರೋಕೆ ಹಾಡುಗಾರರ ಸಂಖ್ಯೆ ತುಂಬಾ ಹೆಚ್ಚಾಗುತ್ತಿದೆ. ಆದರೆ ಹಾಡಿನ ಸಾಹಿತ್ಯ, ಸಂಗತಿ, ಹಿನ್ನೆಲೆ ಸಂಗೀತ ಗಮನದಲ್ಲಿರಿಸಿ ಅಭ್ಯಾಸ ಮಾಡಿ ಹಾಡುವುದು ಒಳ್ಳೆಯದು ಎಂದು ತಿಳಿಸಿದರು.
Chamber Of Commerce Shivamogga ಭದ್ರಾವತಿ ವಾಸು ಅವರ ಸಾರಥ್ಯದಲ್ಲಿ ಈಗಾಗಲೇ ಸಾಕಷ್ಟು ಹೊಸ ಹೊಸ ಕಲಾವಿದರು ಅವಕಾಶ ಪಡೆದುಕೊಳ್ಳುತ್ತಿದ್ದಾರೆ. ಅವರ ಪ್ರಯತ್ನ ಶ್ಲಾಘನೀಯ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸೂಕ್ತ ವ್ಯಕ್ತಿಗೆ ಪ್ರತಿಷ್ಠಿತ ಆತಿಥ್ಯ ರತ್ನ ಪ್ರಶಸ್ತಿ ಲಭಿಸಿದೆ. ಮಥುರಾ ಗೋಪಿನಾಥ್ ಅವರ ದೂರದೃಷ್ಟಿ, ಸಂಘ ಸಂಸ್ಥೆಗಳೊಂದಿಗೆ ಹೊಸ ಆಲೋಚನೆಗಳೊಂದಿಗೆ ಕಾರ್ಯ ನಿರ್ವಹಿಸುವ ರೀತಿ ಅಭಿನಂದನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭದ್ರಾವತಿ ವಾಸು ಮಾತನಾಡಿ, ಯಾವುದೇ ಸಂಸ್ಥೆಗಳು ಚಾಲ್ತಿಯಲ್ಲಿರಲು ಸಹಕಾರ, ಅಗತ್ಯ ಪ್ರೋತ್ಸಾಹ ಮುಖ್ಯ. ಗೋಪಿ ಅವರು ಉತ್ತಮ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಿಸುತ್ತಾರೆ ಎಂದು ತಿಳಿಸಿದರು.
ಮಥುರಾ ನಾಗರಾಜ್, ಬುಜಂಗಪ್ಪ, ಡಾ. ಲಕ್ಷ್ಮೀದೇವಿ ಗೋಪಿನಾಥ್, ಆದ್ಯಾ, ಮಮತ, ಪರಶುರಾಮ್, ಪ್ರಶಾಂತ್, ರಾಜಶೇಖರ, ಉಷಾ, ರವಿ, ರವಿ ಚವ್ಹಾಣ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
Shivamogga District Karate Association ಶಿವಮೊಗ್ಗದ ಹಿರಿಯ ಕರಾಟೆ ಪಟು ಬಾಲರಾಜ್ ಗೆ ಸನ್ಮಾನ
Shivamogga District Karate Association ಶಿವಮೊಗ್ಗ ಜಿಲ್ಲಾ ಕರಾಟೆ ಅಸೋಸಿಯೇಷನ್ ವತಿಯಿಂದ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ
ಇಂಟರ್ನ್ಯಾಷನಲ್ ವರ್ಲ್ಡ್ ಕರಾಟೆ ಡೇ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ 60 ವರ್ಷ ವಯಸ್ಸಿನ ಹಿರಿಯ ಕರಾಟೆ ತರಬೇತಿದಾರ ಬಾಲ್ರಾಜ್ ರವರನ್ನು ಸನ್ಮಾನಿಸಲಾಯಿತು.
Shivamogga District Karate Association ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯದ್ಯಕ್ಷ ಸಿ ಎಸ್ ಷಡಾಕ್ಷರಿ ಜಿಲ್ಲಾ ನೌಕರ ಸಂಘದ ಅಧ್ಯಕ್ಷ ಶ್ರೀ ಮೋಹನ್
ಮತ್ತು ನೆಹರು ಕ್ರೀಡಾಂಗಣದ ಸ್ನೇಹ ಬಳಗದ ರಾಜೇಶ್ ಕಾಮತ್ ದಿವಾಕರ್ ಶೆಟ್ಟಿ ಅರುಣ್ ಬಾಬು ವಿಶ್ವನಾಥ್ ಸೇರಿದಂತೆ ಜಿಲ್ಲಾ ಕರಾಟೆ ಅಸೋಸಿಯೇಷನ್ ನ ಗೌರವಧ್ಯಕ್ಷ ಶಿವಮೊಗ್ಗ ವಿನೋದ್ ಖಜಾಂಚಿ ಇರ್ಫಾನ್ ಮತ್ತು ನಿರ್ದೇಶಕರಾದ ಶ್ರೇಯಸ್ ದಿವ್ಯ
ಹರ್ಷಿತ್ ಕಾವ್ಯ ಪ್ರತಿಕ್ಷ ಪ್ರೀತಿಶ್ರೀ ಉಪಸ್ಥಿತರಿದ್ದರು.
