Thursday, February 26, 2026
Thursday, February 26, 2026
Home Blog Page 263

Shivamogga Police ಮಡಿಕೆ ಚೀಲೂರಿನಿಂದ ವ್ಯಕ್ತಿ ನಾಪತ್ತೆ. ಪೊಲೀಸ್ ಮಾಹಿತಿ ಪ್ರಕಟಣೆ

0

Shivamogga Police ಶಿವಮೊಗ್ಗ ತಾಲೂಕು ಹಳೆ ಮಡಿಕೆಚೀಲೂರು ಗ್ರಾಮ ಎ.ಕೆ.ಕಾಲೋನಿ ವಾಸಿ ರತ್ನಮ್ಮ ಬರ್ಮಪ್ಪ ಎಂಬುವವರ ಮಗ 29 ವರ್ಷದ ಅರುಣ್ ಕುಮಾರ್ ಎಂಬುವವರು ಮೇ 22 ರಂದು ಮನೆಯಿಂದ ನಗರಕ್ಕೆ ಹೋಗಿ ಬರುವುದಾಗಿ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.
ಈತನ ಚಹರೆ 5.3 ಅಡಿ ಎತ್ತರ ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಎಡಕಾಲು ಮತ್ತು ಎಡಕೈ ಬೆರಳು ಅಂಕವಿಕಲವಾಗಿದ್ದು, ನೆಲದ ಮೇಲೆ ಬಲಕೈ ಊರಿಕೊಂಡು ತೆವಳುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ತುಂಬುತೋಳಿನ ಶರ್ಟ್, ಕಪ್ಪು ಬಣ್ಣದ ಕಾಟನ್ ಪ್ಯಾಂಟ್ ಧರಿಸಿರುತ್ತಾರೆ.
Shivamogga Police ಈ ವ್ಯಕ್ತಿ ಬಗ್ಗೆ ಸುಳಿವು ದೊರೆತಲ್ಲಿ ಗ್ರಾಮಾಂತರ ವೃತ್ತ ಶಿವಮೊಗ್ಗ ಪೊಲೀಸ್ ಠಾಣೆ ದೂ.ಸಂ.: 08182-261418 /261400/ 9480803332/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

Banu Mushtaq ಬಳ್ಳಾರಿ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಲೇಖಕಿ ಬಾನು ಮುಷ್ತಾಕ್ ಆಯ್ಕೆ

0

Banu Mushtaq ಬೂಕರ್ ಪ್ರಶಸ್ತಿ ಪಡೆದು ಕನ್ನಡದ ಕೀರ್ತೀ ಹೆಚ್ಚಿಸಿದ ಲೇಖಕಿ ಬಾನು ಮುಷ್ತಾಕ್ ಅವರನ್ನು
ಮುಂಬರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಈ ವಿಷಯವನ್ನು ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಷಿ ಪ್ರಕಟಿಸಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ಆಯೋಜಿಸುವ 88ನೇ ಸಾಹಿತ್ಯ ಸಮ್ಮೇಳನಕ್ಕೆ ಬಾನು ಮುಷ್ತಾಕ್ ಹೆಸರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಬಾನು ಮುಷ್ತಾಕ್ ಅವರ ಕಥೆಗಳನ್ನ
Banu Mushtaq ಇಂಗ್ಲೀಷ್ ಗೆ ಅನುವಾದ ಮಾಡಿದ
ಅನುವಾದಕಿ ದೀಪಾ ಬಾಸ್ತಿ ಅವರನ್ನೂ ಸಮ್ಮೇಳನದಲ್ಲಿ ಗೌರವಿಸಲಾಗುತ್ತದೆ ಎಂದು ಕಸಾಪ ಅಧ್ಯಕ್ಷರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Department of School Education ಮಕ್ಕಳ ಶಿಕ್ಷಣದಲ್ಲಿ ದೈಹಿಕ ಶಿಕ್ಷಕರ ಪಾತ್ರಬಹಳ ಮುಖ್ಯ- ರಮೇಶ್

0

Department of School Education ಮಕ್ಕಳ ಶಿಕ್ಷಣದಲ್ಲಿ ದೈಹಿಕ ಶಿಕ್ಷಕರ ಪಾತ್ರಬಹಳ ಮುಖ್ಯ- ರಮೇಶ್ ಮಕ್ಕಳ ಕಲಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ಕರ್ತವ್ಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಅತಿ ಮುಖ್ಯ, ಪ್ರಾತ್ಯಕ್ಷಿಕೆಯ ದೈಹಿಕ ಶ್ರಮದಿಂದ ಮಾತ್ರ ಹಾಗೂ ದೈಹಿಕ ಕಸರತ್ತುಗಳಿಂದ ಮಕ್ಕಳ ಮನೋವಿಜ್ಞಾನ ವೃದ್ಧಿಸಲು ಹೇಗೆ ಸಾಧ್ಯವೋ ಅದರಲ್ಲಿ ಸಕ್ರಿಯರಾಗುವ ದೈಹಿಕ ಶಿಕ್ಷಕರ ಪಾತ್ರ, ಶಿಕ್ಷಣ ವ್ಯವಸ್ಥೆಯಲ್ಲಿ ಅತಿ ಮುಖ್ಯ ಎಂದು ಶಿವಮೊಗ್ಗ ಕ್ಷೇತ್ರಶಿಕ್ಷಣಾಧಿಕಾರಿ ರಮೇಶ್ ತಿಳಿಸಿದರು.

ಅವರು ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ. ಹಾಗೂ ತಾಲ್ಲೂಕಿನ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ತಾಲ್ಲೂಕಿನ ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡುತ್ತಾ, ಪ್ರತಿದಿನ ಮಕ್ಕಳಿಗೆ ಕನಿಷ್ಠ 60 ನಿಮಿಷಗಳ ಕಾಲ ದೈಹಿಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿದಾಗ ಮಕ್ಕಳಲ್ಲಿ ಕಲಿಕೆಯ ಕಲಿಕೆಗೆ ಅಗತ್ಯವಿರುವ ಏಕಾಗ್ರತೆ ಸಾಧಿಸಿ, ಜ್ಞಾಪಕ ಶಕ್ತಿ ಬೆಳೆಯಲು ಸಹಾಯವಾಗುತ್ತದೆ ಎಂದು ಅವರು ಹೇಳಿದರು.

ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಆಯಾ ವಿಷಯಗಳಿಗೆ ಅವುಗಳ ಬೋಧನೆಗೆ ಸಂಬಂಧ ಪಟ್ಟವರಿರುತ್ತಾರೆ. ಆದರೆ ದೈಹಿಕ ಶಿಕ್ಷಕರಿಂದ ಶಾಲೆಯಲ್ಲಿ ಶಿಸ್ತು ಮಾತ್ರವಲ್ಲ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಗುರುತಿಸಿಕೊಳ್ಳುವ ಅವಕಾಶ ಪಡೆದಿರುತ್ತಾರೆ.ಅವರ ಕಲಿಕೆಯಿಂದ ಹಾಗೂ ಅವರ ತರಬೇತಿಯಿಂದ ಮಕ್ಕಳ ಕಲಿಕೆ ಉನ್ನತ ಮಟ್ಟಕ್ಕೆ ತಲುಪಲು ಮೆಟ್ಟಿಲಾಗುತ್ತದೆ ಎಂದು ಹೇಳಿದರು.

ಮಕ್ಕಳಲ್ಲಿ ದೈಹಿಕ ಶ್ರಮದ ಜೊತೆ ಮನೋವಿಜ್ಞಾನದ ಭಾವನೆಗಳನ್ನು ವೃದ್ಧಿಸಿ ಮಾನಸಿಕವಾದ ಸ್ಥಿತಿ ಆತ್ಮಸ್ಥೈರ್ಯ,ಆತ್ಮವಿಶ್ವಾಸ ಮೂಡಿಸುವ ಜೊತೆ ಮಕ್ಕಳ ಕಲಿಕೆಗೆ ಭದ್ರಬುನಾದಿ ಹಾಕಿ ಕೊಡುವ ಏಕಾಗ್ರತೆಯನ್ನು ಇಲ್ಲಿ ಕಲಿಯಲು, ರೂಪಿಸಿಕೊಳ್ಳಲು ಸಾಧ್ಯ ಎಂದರು.

ದೈಹಿಕ ಶಿಕ್ಷಕರು ಈ ಬಗ್ಗೆ ಅತ್ಯಂತ ವಿಶೇಷವಾಗಿ ಗಮನಿಸಬೇಕು ತಮ್ಮನ್ನು ಮಕ್ಕಳು ಅತ್ಯಂತ ಸೂಕ್ಷ್ಮವಾಗಿ ಗುರುತಿಸುತ್ತಾರೆ ಎಂಬುದನ್ನು ಮರೆಯದಿರಿ ತಮ್ಮ ಒಳ್ಳೆಯ ಗುಣಗಳು ಮಕ್ಕಳಿಗೆ ಮಾರ್ಗದರ್ಶಿಯಾಗಲಿ ಎಂದು ಹೇಳಿದರು.

Department of School Education ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ್ ಎಂ. ದೈಹಿಕ ಶಿಕ್ಷಣ ಅಧಿಕಾರಿ,ಬಿ ಎಚ್.ನಿರಂಜನ್ ಮೂರ್ತಿ. ಶಿಕ್ಷಣ ಸಂಯೋಜಕರಾದ ಮೋಹನ್, ಸಂಪನ್ಮೂಲ ವ್ಯಕ್ತಿಗಳಾದ ಕಿರಣ್ ಕುಮಾರ್,ಸಂಘದ ಅಧ್ಯಕ್ಷ ಕಾಳನಾಯ್ಕ್,, ಆನಂದ್, ಕಾರ್ಯದರ್ಶಿ ತಿಮ್ಮಪ್ಪ ಮಹೇಶ್ ಹುಲ್ಲತ್ತಿ, ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ.ತಿಮ್ಮನಹಳ್ಳಿ, ಇನ್ನು ಮುಂತಾದವರು ಉಪಸ್ಥಿತರಿದ್ದರು.

Nursing and GNM Nursing Courses ನರ್ಸಿಂಗ್ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನ

0

Nursing and GNM Nursing Courses 2025-26 ನೇ ಸಾಲಿಗೆ ಬಿಎಸ್.ಸಿ ನರ್ಸಿಂಗ್ ಅಂಡ್ ಜಿಎನ್‌ಎಂ ನರ್ಸಿಂಗ್ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು https://sevasindhuservices.karnataka.gov.in ಲಿಂಕ್ ಮೂಲಕ ಅರ್ಜಿ ಸಲ್ಲಿಸಬೇಕು. ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಆಕ್ಟಿವ್ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.
ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ಜನಾಂಗಕ್ಕೆ ಸೇರಿದವರಾಗಿರಬೇಕು. ಕೋರ್ಸ್ ಅವಧಿ ಪೂರ್ಣಾವಧಿಯದ್ದಾಗಿರುತ್ತದೆ, ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.2.50 ಲಕ್ಷ ಮೀರಿರಬಾರದು.
Nursing and GNM Nursing Courses ಹೆಚ್ಚಿನ ವಿವರಗಳಿಗೆ ವೆಬ್‌ಸೈಟ್https://dom.karnataka.gov.inನ್ನು ವೀಕ್ಷಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.

Akhila Bharatiya Sahitya Parishat ಕನ್ನಡ ಕಾವ್ಯ ಪರಂಪರೆ ಶ್ರೇಷ್ಠ ,ಶ್ರೀಮಂತ, ಮತ್ತೆ ಛಂದೋಬದ್ಧ ಕವಿತಾ ರಚನೆಗೆ ಕಾಲ ಪಕ್ವವಾಗುತ್ತಿದೆ- ತಿಮ್ಮಣ್ಣ ಭಟ್

0

Akhila Bharatiya Sahitya Parishat ನಮ್ಮ ಕನ್ನಡ ಕಾವ್ಯ ರಚನಾ ಪರಂಪರೆಯನ್ನ ಮರೆಯುತ್ತಿದ್ದೇವೆ. ಹೀಗಾಗಿ ನಮ್ಮ ಕನ್ನಡ ಪ್ರಾಚೀನ ಕವಿಗಳ ಕೃತಿಗಳ ಓದು ಕುಸಿಯುತ್ತಿದೆ. ಕವಿತೆ ರಚಿಸುವವರು ಈ ಬಗ್ಗೆ
ವಿವೇಚಿಸಬೇಕಾದ ಸಂಕ್ರಮಣ ಸ್ಥಿತಿ ಎದುರಾಗಿದೆ.
ಕಾವ್ಯಬಂಧದಲ್ಲಿ ಛಂದಸ್ಸಿನ ಬಳಕೆ ಸಹೃದಯರಿಗೆ ಓದಿನ ಆನಂದ ನೀಡುತ್ತದೆ.
ಪಂಪ,ರನ್ನ ,ಕುಮಾರವ್ಯಾಸರ ಕೃತಿಗಳ ಸೌಂದರ್ಯ ಅಡಗಿರುವುದೇ ಛಂದಸ್ಸಿನಲ್ಲಿ. ಅಂತಹ ಕಾವ್ಯ ಲಕ್ಷಣಗಳನ್ನ ನಮ್ಮ ಕವಿತಾ ರಚನಾಕಾರರು ತಮ್ಮ ರಚನಾ ಪ್ರಕ್ರಿಯೆಯಲ್ಲಿ ಪ್ರಯತ್ನಿಸಬಹುದು.
ನಮ್ಮ ಪರಂಪರೆಯ ಕಾವ್ಯಲಕ್ಷಣಗಳನ್ನ ತಮ್ಮ ಬರವಣಿಗೆಯಲ್ಲಿ
ಮುಂದುವರೆಸಲು ಅವಕಾಶ ಹೇರಳವಾಗಿದೆ ಎಂದು
ಬೆಂಗಳೂರಿನ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕಾಲೇಜು ವಿದ್ಯಾರ್ಥಿ ವಿಭಾಗದ
ಪ್ರಚಾರ ಪ್ರಮುಖ್
ಶ್ರೀತಿಮ್ಮಣ್ಣ ಭಟ್ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಶಾಖೆಯ ಆಶ್ರಯದಲ್ಲಿ ಜೂನ್ 28 ರಂದು
ಏರ್ಪಡಿಸಿದ್ದ ಛಂದೋಬದ್ಧ ಕಾವ್ಯ ರಚನಾ ಕಮ್ಮಟದಲ್ಲಿ
ಕಮ್ಮಟಾರ್ಥಿಗಳನ್ನ ಉದ್ದೇಶಿಸಿ ಮಾತನಾಡುತ್ತಿದ್ದರು.

ಕಾವ್ಯ ರಚನಾ ಕಮ್ಮಟದಲ್ಲಿ ಶ್ರೀತಿಮ್ಮಣ್ಣ ಭಟ್ ಮತ್ತು ಕವಿ ಶ್ರೀ ಮೃತ್ಯುಂಜಯ ತೇಜಸ್ವಿ
ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದರು.
ಕನ್ನಡ ಚಲನಚಿತ್ರ ಗೀತೆಗಳು, ಭಾವಗೀತೆಗಳಲ್ಲಿನ ಛಂದಸ್ಸಿನ ಬಳಕೆ ಬಗ್ಗೆ
ಕವಿ ಮೃತ್ಯುಂಜಯ ತೇಜಸ್ವಿ ಸೋದಾಹರಣ ಭಾಷಣ ಮಾಡಿದರು.
” ಲಯ ಮತ್ತು ಗತಿಗಳ ಅನುಸರಣೆ ಕವಿತೆಗಳಿಗೆ
ಗೇಯತೆ ನೀಡುತ್ತದೆ. ಹೀಗಾಗಿ ಛಂದಸ್ಸಿನ ಚೌಕಟ್ಟು ಕವಿಯ ಪ್ರಯೋಗ ಪರಿಣಿತಿ,ಪ್ರತಿಭೆಗೆ ಸಾಕ್ಷಿಯಾಗುತ್ತದೆ ಎಂದು ಕವಿ ಮೃತ್ಯುಂಜಯ ತೇಜಸ್ವಿ ನುಡಿದರು.
ಕನ್ನಡ ಕಾವ್ಯಗಳು, ಈಗಾಗಲೇ ಬಳಸಿರುವ ಸಿನಿಮಾಗೀತೆಗಳು, ಅದರಲ್ಲಿನ ಛಂದಸ್ಸು ,
ಓದಿದಾಗ ಉಂಟಾಗುವ
ಕಾವ್ಯ ಸ್ಪಂದನದ ರಹಸ್ಯವನ್ನ ಎಳೆಎಳೆಯಾಗಿ ಬಿಚ್ಚಿಟ್ಟರು.

Akhila Bharatiya Sahitya Parishat ಶಿವಮೊಗ್ಗದ ಕೋಟೆ ರಸ್ತೆಯ ವಾಸವಿ ವಿದ್ಯಾಲಯದಲ್ಲಿ ಕಮ್ಮಟವನ್ನ ಆಯೋಜಿಸಲಾಗಿತ್ತು.
ಇಪ್ಪತ್ತೇಳು ಆಭ್ಯರ್ಥಿಗಳು ಕಮ್ಮಟದಲ್ಲಿ ಲವಲವಿಕೆಯಿಂದ ಭಾಗವಹಿಸಿದ್ದರು. ಕಮ್ಮಟದಲ್ಲಿ ಕೊನೆಗೆ
ಎಲ್ಲರೂ ಛಂದೋಬದ್ಧ ಕವಿತೆಗಳನ್ನ ರಚಿಸಿ ಪ್ರಸ್ತುತ ಪಡಿಸಿದ ರೀತಿ
ಅತ್ಯಂತ ಆಕರ್ಷಕವಾಗಿತ್ತು.
ಬಹುಪಾಲು ಮಹಿಳೆಯರು ಈ ಕಮ್ಮಟದಲ್ಲಿ ಪಾಲ್ಗೊಂಡಿದ್ದುದು ವಿಶೇಷವಾಗಿ ಗಮನಸೆಳೆಯಿತು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವಿಭಾಗೀಯ ಸಂಚಾಲಕ ಶ್ರೀಹರ್ಷ, ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ಸುಧೀಂದ್ರ, ಕಾರ್ಯದರ್ಶಿಗಳಾದ ಸುರೇಶ್ ಭಟ್, ಶಾಲಿನಿ ಅಜಿತ್,ಮಂಜುನಾಥ ಶರ್ಮ ಮುಂತಾದವರು
ಉಪಸ್ಥಿತರಿದ್ದರು.
ಕಾರ್ಯಕಾರಿ ಸಮಿತಿಯ
ಶ್ರೀಮತಿ ಜಯಶ್ರೀ ಗಣೇಶ್ ಪ್ರಾರ್ಥಿಸಿದರು.
ಡಾ.ಜಿ.ಮುಕುಂದ್ ಅವರು ಸ್ವಾಗತಿಸಿ ಅತಿಥಿಗಳನ್ನ ಪರಿಚಯಿಸಿದರು.
‘ಅಭಾಸಾಪ’ದ ಕಾರ್ಯಕಾರಿ ಸಮಿತಿಯ ಕುಮಾರ ಶಾಸ್ತ್ರಿ ಎಲ್ಲರಿಗೂ ವಂದಿಸಿದರು.

Shivaganga Yoga Center ಯೋಗದಿಂದ ಸಂಸ್ಕಾರ, ಸಂಸ್ಕೃತಿ ಜೊತೆಗೆ ಮಾನಸಿಕ ನೆಮ್ಮದಿ-ಡಾ.ಭರತ್

0

Shivaganga Yoga Center ಯೋಗ ಪ್ರಾಣಯಾಮ ಧ್ಯಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗ ಬೇಕು. ಯೋಗದಿಂದ ಸಂಸಾರ ಸಂಸ್ಕೃತಿಯ ಜೊತೆಗೆ ಮಾನಸಿಕ ನೆಮ್ಮದಿ ದೊರಕುತ್ತದೆ ಎಂದು ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಭಾರತೀಯ ದಂತ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾದ ಡಾ. ಭರತ್ ಅಭಿಮತ ಅರ್ಥಪಡಿಸಿದರು.

ಅವರು ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯಲ್ಲಿ ಪದಾಧಿಕಾರಿಗಳಿಗೆ ಯೋಗ ರತ್ನಾಕರ ಪ್ರಶಸ್ತಿ ಪುರಸ್ಕೃತರಾದ ಯೋಗ ಚಾರ್ಯ. ಸಿ ವಿ ರುದ್ರಾರಾಧ್ಯರಿಗೆ ಹಮ್ಮಿಕೊಳ್ಳಲಾದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು ನರೇಂದ್ರ ಮೋದಿಜಿ ಅವರು ಕಂಡ ಕನಸು ಮನೆ ಮನೆಗಳಿಗೆ ಯೋಗವನ್ನು ತಲುಪಿಸಿ ಅಕ್ರಮ ಮುಖಾಂತರ ಅವರ ಆರೋಗ್ಯವನ್ನು ಸದಾ ಉತ್ತಮವಾಗಿ ಮಾಡಿಕೊಳ್ಳಲು ಪಣ ತೊಟ್ಟಿರುವುದು ಹೆಮ್ಮೆಯ ವಿಷಯವಾಗಿದೆ ಆಗಲೇ ಶಿವಮೊಗ್ಗದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರ ಉಚಿತವಾಗಿ
ನುರಿತ ಶಿಕ್ಷಕರಿಂದ 38 ಶಾಖೆಗಳ ಮುಖಾಂತರ ಸಾವಿರಾರು ಜನರಿಗೆ ಯೋಗ ಪ್ರಾಣಾಯಾಮ ಧ್ಯಾನ ದ ತರಬೇತಿ ನೀಡುತ್ತಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ ಎಂದು ನುಡಿದರು.

ಇದೆ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಯೋಗಾಚಾರ್ಯ ಸಿವಿ ರುದ್ರಾಧ್ಯರು. ಇತ್ತೀಚೆಗೆ ಮೈಸೂರಿನಲ್ಲಿ ಪಡೆದ ಯೋಗ ರತ್ನಾಕರ ಪ್ರಜಾವಾಣಿಯ ಬಗ್ಗೆ ಮಾತನಾಡಿದರು.

ಯೋಗ ಎಂದರೆ ವ್ಯಾಯಾಮವಲ್ಲ ಮನಸ್ಸುಗಳನ್ನ ಒಂದುಗೂಡಿಸುವುದು ಆತ್ಮವಿಶ್ವಾಸ ವೃದ್ಧಿಸುವುದು ನಕಾರಾತ್ಮಕ ಭಾವನೆಗಳನ್ನು ಹೊಡೆದು ಓಡಿಸುವುದು ಮತ್ತು ಒಳ್ಳೆಯ ಮನಸ್ಸುಗಳನ್ನು ಕಟ್ಟುವುದು ಯೋಗವಾಗಿದೆ ಎಂದು ನುಡಿದರು.

ಅವರು ಯೋಗ ಶಾಖೆಗಳನ್ನು ನಡೆಸಲು ಉಚಿತವಾಗಿ ಸ್ಥಳಾವಕಾಶ ಮಾಡಿಕೊಟ್ಟ ಮಹನೀಯರಿಗೆ. ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ತಿನ ಸದಸ್ಯರಾದ
ಎಸ್ ರುದ್ರೇಗೌಡರು ಮಾತನಾಡುತ್ತ ನಮ್ಮ ಕಂಡ ಅಧಿಕಾರ ವಹಿಸಿಕೊಂಡ ಬಳಿಕ ಯೋಗ ಕೇಂದ್ರದಲ್ಲಿ ನೈಸರ್ಗಿಕ ಚಿಕಿತ್ಸೆ ಫಿಜಿಯೋ ತೆರಪಿ. ಹಾಗೂ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಯೋಗ ಶಿಬಿರಾರ್ಥಿಗಳ ಸಹಕಾರ ಅತಿ ಮುಖ್ಯ ಎಂದು ಯೋಗ ಕೇಂದ್ರ ನಡೆದು ಬಂದ ದಾರಿಯನ್ನು ತಿಳಿಸಿದರು.

Shivaganga Yoga Center ಯೋಗ ಮಾಡುವುದರಿಂದ ಆಯಸ್ಸು ಪೂರ್ತಿಯಾಗುವುದರ ಜೊತೆಗೆ ನಾವು ಸದಾ ಕಾಲವಿಕೆನ ಇರುತ್ತೇವೆ ಹಾಗಾಗಿ ಇಂತಹ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಜೊತೆಗೆ ಸದಾ ಆರೋಗ್ಯದಿಂದ ಇರೋಣ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಶಿವಗಂಗಾ ಯೋಗ ಕೇಂದ್ರದ ರಾಘವ ಶಾಖೆಯ ವತಿಯಿಂದ ಶ್ರೀ ರಾಮ ಆರ್ಯವೈಶ್ಯ ಸರ್ಕಾರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಉಮಾಧ್ಯಕ್ಷರಾದ ಈಶ್ವರ್ ಬೂದಾಳ್
ರಂಗನಾಥ್. ಯೋಗ ಶಿಕ್ಷಕರಾದ ಜಿಎಸ್ ಓಂಕಾರ್
ವಿಜಯ ಕೃಷ್ಣ. ಎಚ್ ಕೆ ಹರೀಶ್.. ಜಿ ವಿಜಯಕುಮಾರ್. ಮಹೇಶ್. ನರಸೂಜಿ ರಾವ್. ಶ್ರೀನಿವಾಸ್. ಕಾಟನ್ ಜಗದೀಶ್. ಶಂಕರ್. ಸುಜಾತಾ. ಗಾಯತ್ರಿ. ಆನಂದ್. ಹಾಗೂ ಯೋಗ ಬಂಧು ಗಳು ಉಪಸ್ಥಿತರಿದ್ದರು.

Bharat Scouts and Guides ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಸಹಕರಿಸಿ – ಕಾರ್ತೀಕ್ ರಾಮಚಂದ್ರ

0

Bharat Scouts and Guides ರೋವರ್ಸ್ ಮತ್ತು ರೇಂಜರ್ಸ್ ರವರು ಸ್ಕೌಟ್ ಗೈಡ್ ಚಳುವಳಿಯ ಯೋಜನೆ, ಕಾರ್ಯನುಷ್ಠಾನ ಮತ್ತು ಮೌಲ್ಯಮಾಪನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ – ಶ್ರೀ ಕಾರ್ತಿಕ್ ರಾಮಚಂದ್ರ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ. ಜಿ. ಆರ್. ಸಿಂಧ್ಯಾ ಮತ್ತು ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ದಿನಾಂಕ 21-06-2025ರಂದು ಶಿವಮೊಗ್ಗ ಜಿಲ್ಲಾ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಯುವ ಸಮಿತಿಯ ಕಾರ್ಯಗಾರದಲ್ಲಿ ಕರ್ನಾಟಕ ರಾಜ್ಯ ಯುವ ಸಮಿತಿಯ ಅಧ್ಯಕ್ಷರಾದ ಶ್ರೀ ಕಾರ್ತಿಕ್ ರಾಮಚಂದ್ರರವರು ಆಗಮಿಸಿ ನಗರದ ವಿವಿಧ ಕಾಲೇಜಿನ ರೋವರ್ಸ್ ಮತ್ತು ರೇಂಜಸ್ ರವರೊಂದಿಗೆ ವಿಚಾರ ವಿನಿಮಯ ಮಾಡುತ್ತಾ ಸ್ಕೌಟ್ – ಗೈಡ್ ಚಳುವಳಿಯ ದಳ ಹಂತದಿಂದ ಹಿಡಿದು ತಾಲೂಕು, ಜಿಲ್ಲಾ ಮತ್ತು ರಾಜ್ಯದ ಹಂತದವರೆಗೆ ಯೋಜನೆ, ಅನುಷ್ಠಾನ ಮತ್ತು ಮೌಲ್ಯಮಾಪನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಚಳುವಳಿಯ ಬೆಳವಣಿಗೆಗೆ ಸಹಕರಿಸಬೇಕೆಂದು ತಿಳಿಸಿದರು. ಮುಂದುವರೆದು ರಾಷ್ಟ್ರದ ಮತ್ತು ರಾಜ್ಯದ ಆದ್ಯತೆಗಳಾದ ಆನ್ಲೈನ್ ನೋಂದಣಿ( ಓ.ವೈ.ಎಂ. ಎಸ್.) ಜಿಲ್ಲಾ ರಾಜ್ಯ ಮತ್ತು ರಾಷ್ಟ್ರಮಟ್ಟದ ಸಾಹಸಮಯ ಶಿಬಿರಗಳು, ರಾಷ್ಟ್ರೀಯ ಭಾವೈಕ್ಯತೆ ಶಿಬಿರಿಗಳು, ರೋವರ್ ರೇಂಜರ್ ಸಮಾಗಮ, ಸೇವಾ ಶಿಬಿರಗಳು, ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ತಾವು ಬೆಳೆಯುವುದಲ್ಲದೆ ಚಳುವಳಿಯ ಬೆಳವಣಿಗೆಗೂ ಸಹ ಕೊಡುಗೆ ನೀಡಬೇಕೆಂದು ಕೋರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸ್ಥಾನಿಕ ಆಯುಕ್ತ ( ಸ್ಕೌಟ್ ) ಶ್ರೀ ಘನಶಾಮ ಗಿರಿಮಾಜಿ ರವರು ಶಿವಮೊಗ್ಗ ಜಿಲ್ಲೆಯಲ್ಲಿ ಒಂದು ಸದೃಢ ರೋವರ್ ರೇಂಜರ್ ಪಡೆಯನ್ನ ಕಟ್ಟಿ ಬೆಳೆಸೋಣ ಹಾಗೂ ಸಮಾಜಕ್ಕೆ ಆ ಮೂಲಕ ಒಳ್ಳೆಯ ಸೇವೆ ಸಲ್ಲಿಸೋಣ ಎಂದು ಹೇಳಿದರು. ಶಿವಮೊಗ್ಗ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ವಿ ಅವಲಕ್ಕಿ ತರಬೇತಿ ನಾಯಕ ( ರೋವರ್ ) ರವರು ಈ ಕಾರ್ಯಗಾರರ ಸಂವಹನಕಾರರಾಗಿ ಕಾರ್ಯ ನಿರ್ವಹಿಸಿ ತಮ್ಮ ಸ್ಕೌಟಿಂಗ್ ಮತ್ತು ರೋವರಿಂಗ್ ಜೀವನದ ಅನುಭವವನ್ನು ಹಂಚಿಕೊಂಡು ಪ್ರಸ್ತುತ ವಿದ್ಯಾರ್ಥಿ ಜೀವನದಲ್ಲಿರುವ ರೋವರ್ಸ್ ಮತ್ತು ರೇಂಜರ್ಸ್ರವರು ಪದವಿ ಶಿಕ್ಷಣದ ನಂತರ ಚಳುವಳಿಯಲ್ಲಿ ಯಾವುದಾದರೂ ರೀತಿಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಚಳುವಳಿಗೆ ಮತ್ತು ಸಮಾಜಕ್ಕೆ ತಾವು ಕಲಿತಿದ್ದನ್ನ ಹಿಂದಿರುಗಿಸಬೇಕೆಂದು ತಿಳಿ ಹೇಳುತ್ತಾ ಕಾರ್ಯಗಾರವನ್ನು ಯಶಸ್ವಿಗೊಳಿಸಿಕೊಟ್ಟರು. ಶ್ರೀ ಲೋಹಿತ್ ಪ್ರಸಾದ್ ಹೆಚ್. ವಿ. ಕಬ್ ಮಾಸ್ಟರ್ ಇವರು ಸರ್ವರನ್ನು ಸ್ವಾಗತಿಸಿದರು. ರಾಷ್ಟ್ರಪತಿ ರೋವರ್ ಪದಕ ಪುರಸ್ಕೃತ, ಅಜರ್ಬೈಜನ್ ನಲ್ಲಿ ನಡೆದ್ದಿದ್ದಂತಹ ಅಂತರರಾಷ್ಟ್ರೀಯ ಯುವ ಫೋರಂನಲ್ಲಿ ಭಾಗವಹಿಸಿದ್ದಂತಹ ಶ್ರೀ ಪೃಥ್ವಿರಾಜ್ ಗಿರಿಮಾಜಿ ರವರು ಉಪಸ್ಥಿತರಿದ್ದು ತಮ್ಮ ಅನುಭವವನ್ನು ಹಂಚಿಕೊಂಡರು. Bharat Scouts and Guides ಶಿವಮೊಗ್ಗ ನಗರದ ಎನ್.ಇ.ಎಸ್. ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಪೂಜಿನಗರ ಮತ್ತು ಮಲ್ನಾಡ್ ಓಪನ್ ಗ್ರೂಪಿನ ರೋವರ್ಸ್ ಮತ್ತು ರೇಂಜರ್ಸ್ ಉಪಸ್ಥಿತರಿದ್ದು ಸ್ಥಳೀಯ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಟ್ಟದಲ್ಲಿ ತಾವುಗಳು ಚಳುವಳಿಗೆ ಯಾವ ರೀತಿಯಲ್ಲಿ ಕೊಡುಗೆ ನೀಡಬಹುದು ಮತ್ತು ಸಂಸ್ಥೆಯಿಂದ ನಾವು ಏನು ಬಯಸುತ್ತೇವೆ ಎನ್ನುವುದರ ಬಗ್ಗೆ ವಿಸ್ತೃತವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಶ್ರೀ ವರುಣ್ ಎಂ ಶೇಟ್ ಸರ್ವರಿಗೂ ವಂದಿಸಿದರು.

Bharat Scouts and Guides ರಾಜ್ಯಮಟ್ಟದ ಮುಕ್ತದಳದ ರ್ಯಾಲಿ ಯಶಸ್ಸಿಗೆ ಧನ್ಯತೆ ಅರ್ಪಿಸಿದ ಶಕುಂತಳಾ ಚಂದ್ರಶೇಖರ್

0

Bharat Scouts and Guides ರಾಜ್ಯಮಟ್ಟದ ಮುಕ್ತದಳದ ರ‍್ಯಾಲಿ ಯಶಸ್ಸಿಗೆ ನಿಮ್ಮ ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳು, ದಳದ ನಾಯಕರು, ತಾಲೂಕು ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪದಾಧಿಕಾರಿಗಳ ಪ್ರಮುಖರ ಸಹಕಾರ ಕಾರಣ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜಸ್ಟೀಸ್ ಕೆ.ಶಂಕರನಾರಾಯಣರಾವ್ ಸ್ಮಾರಕ ರಾಜ್ಯಮಟ್ಟದ ಮುಕ್ತದಳದ ರ‍್ಯಾಲಿ ರಾಜ್ಯ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆ ಸಹಕಾರದಿಂದ ತುಂಬಾ ಯಶಸ್ವಿಯಾಗಿ ಜರುಗಿತು.

13 ವರ್ಷಗಳ ನಂತರ ನಡೆದ ಕಾರ್ಯಕ್ರಮ ಮೈಲಿಗಲ್ಲಾಗಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ರ‍್ಯಾಲಿಯು ವಿದ್ಯಾರ್ಥಿಗಳಿಗೆ ವಿಶೇಷ ಅನುಭವ, ಸಾಹಸ ಕ್ರೀಡೆಗಳು, ಚಾರಣ, ವಸ್ತು ಪ್ರದರ್ಶನ, ರಸಪ್ರಶ್ನೆ ಕಾರ್ಯಕ್ರಮ, ಕರ ಕೌಶಲ್ಯ, ಆಹಾರ ಮೇಳ, ವಿನೋದಮಯ ಚಟುವಟಿಕೆಗಳು, ರಸ್ತೆ ಸುರಕ್ಷತೆ, ಕೌಶಲ್ಯ ಪ್ರದರ್ಶನ ಹೀಗೆ ವೈವಿಧ್ಯ ವಿಷಯಗಳ ಬಗ್ಗೆ ಅರಿವು ಮೂಡಿಸಲಾಯಿತು ಎಂದರು.

ರೋವರ್ ವಿಭಾಗದ ಆಯುಕ್ತ ಕೆ.ರವಿ ಮಾತನಾಡಿ, ಎರಡು ಮೂರು ತಿಂಗಳ ಸತತ ಪರಿಶ್ರಮದಿಂದ ರಾಜ್ಯಮಟ್ಟದ ರ‍್ಯಾಲಿ ಆಯೋಜಿಸಿದ್ದೇವು. ಚಾಲೆಂಜಿಂಗ್ ಆಗಿದ್ದ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಯಿತು ಎಂದು ಹೇಳಿದರು.

Bharat Scouts and Guides ಜಿಲ್ಲಾ ಸ್ಕೌಟ್ ವಿಭಾಗದ ಆಯುಕ್ತ ಎಸ್.ಜಿ.ಆನಂದ್ ಮಾತನಾಡಿ, ರ‍್ಯಾಲಿಯಲ್ಲಿ ಶ್ರಮಿಸಿದ ಎಲ್ಲ ಪದಾಧಿಕಾರಿಗಳಿಗೂ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಗೈಡ್ ವಿಭಾಗದ ತರಬೇತಿ ಆಯುಕ್ತೆ ಗೀತಾ ಚಿಕ್‌ಮಠ್ ಮೂರು ದಿನದ ರ‍್ಯಾಲಿಯ ಸಂಪೂರ್ಣ ವರದಿ ನೀಡಿದರು. ಸ್ಕೌಟ್ ವಯಸ್ಕ ಸಂಪನ್ಮೂಲ ಆಯುಕ್ತ ಬಿ.ಸಿ.ವೇಣುಗೋಪಾಲ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಜಂಟಿ ಕಾರ್ಯದರ್ಶಿ ಲಕ್ಷ್ಮೀ ಕೆ.ರವಿ, ಸಹ ಕಾರ್ಯದರ್ಶಿ ವೈ.ಆರ್.ವಿರೇಶಪ್ಪ, ತರಬೇತಿ ಆಯುಕ್ತ ಎಚ್.ಶಿವಶಂಕರ್, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಸಂಚಾಲಕ ರಾಜೇಶ್ ಅವಲಕ್ಕಿ, ವರ್ಮ, ದೊರೆ, ಪರಮೇಶ್ವರಯ್ಯ, ಚೂಡಾಮಣಿ ಪವಾರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Inner wheel Shivamogga ಶಿವಮೊಗ್ಗ ಇನ್ನರ್ ವೀಲ್ ಜಿಲ್ಲಾ ಚೇರ್ ಪರ್ಸನ್ ಆಗಿ ಶಬರಿ ಕಡಿದಾಳ್ ಆಯ್ಕೆ

0

Inner wheel Shivamogga ಇನ್ನರ್‌ವ್ಹೀಲ್ ಜಿಲ್ಲಾ ಚೇರ್ಮನ್ ಆಗಿ ಶಬರಿ ಕಡಿದಾಳ್ ಆಯ್ಕೆಯಾಗಿದ್ದಾರೆ. ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಗೆ 2013ರಲ್ಲಿ ಸೇರ್ಪಡೆಯಾಗಿ ದಶಕದಿಂದ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಶಬರಿ ಕಡಿದಾಳ್ ಅವರು ಕ್ಲಬ್ ಐಎಸ್‌ಒ ಆಗಿದ್ದಾಗಲೇ ಸಿಲ್ವರ್ ಐಎಸ್‌ಒ ಕ್ವೀನ್ ಪ್ರಶಸ್ತಿ ವಿಜೇತರಾಗಿದ್ದರು.

2018-19ರಲ್ಲಿ ಕ್ಲಬ್ ಅಧ್ಯಕ್ಷೆಯಾಗಿ ಡಿಸ್ಟ್ರಿಕ್ ರ‍್ಯಾಲಿ ಮತ್ತು ಐಎಸ್‌ಒ ಮೀಟ್ ಸಂಭ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದರು.

ಶಿವಮೊಗ್ಗದ ನೆಹರು ರಸ್ತೆಯಲ್ಲಿ 17 ಸ್ಥಿತ ಡಸ್‌ಬಿನ್‌ಗಳನ್ನು ಐಡಬ್ಲ್ಯೂ ಲೋಗೋಸಹಿತ ಸ್ಥಾಪಿಸಿ ಮಹತ್ವದ ಸಾರ್ವಜನಿಕ ಸೇವಾ ಯೋಜನೆ ಜಾರಿಗೊಳಿಸಿದ್ದರು.
2020-21ರಲ್ಲಿ ಜಿಲ್ಲಾ ಐಎಸ್‌ಒ ಆಗಿ ಇನ್ನರ್‌ವ್ಹೀಲ್ ಪ್ರಥಮ ವರ್ಚುಯಲ್ ಐಎಸ್‌ಒ ಮೀಟ್ ಆಯೋಜಿಸಿದ್ದರು. 23 ಸ್ಪರ್ಧೆಗಳ ಮೂಲಕ ಭಾರತದ ಎಲ್ಲೆಡೆ ಸದಸ್ಯರನ್ನು ಸಕ್ರಿಯರಾಗಿಸಿದರು.

2021-22ರಲ್ಲಿ ಜಿಲ್ಲಾ ಎಡಿಟರ್ ಆಗಿ 7 ಬುಲೆಟಿನ್‌ಗಳನ್ನು ಹೊರತಂದರು. ಅಸೋಸಿಯೇಷನ್ ಮಟ್ಟದಲ್ಲಿ ಪ್ರಶಂಗೆ ಪಾತ್ರವಾಯಿತು. 2022-23ರಲ್ಲಿ ಜಿಲ್ಲಾ ಖಜಾಂಚಿ, 2023-24ರಲ್ಲಿ ಜಿಲ್ಲಾ ಕಾರ್ಯದರ್ಶಿ, 2024-25ರಲ್ಲಿ ಜಿಲ್ಲಾ ವೈಸ್ ಚೇರ್ಮನ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

Inner wheel Shivamogga ಸಹ್ಯಾದ್ರಿ ವಿದ್ಯಾಸಂಸ್ಥೆ ನಿರ್ದೇಶಕಿ, ಒಕ್ಕಲಿಗರ ಮಹಿಳಾ ವೇದಿಕೆ, ಶಾರದಾ ಕ್ಲಬ್, ಗೆಳತಿ, ಎಲೈಟ್ ಲೇಡೀಸ್ ಕ್ಲಬ್, ಶರಾವತಿ ಸಂಘ, ಐಕ್ಯಾ ಸೇರಿದಂತೆ ಮತ್ತಿತರ ಸಂಘ ಸಂಸ್ಥೆಗಳಲ್ಲಿ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಅನೇಕ ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.

ರೋಟರಿಯನ್ ಕಡಿದಾಳ್ ಗೋಪಾಲ್ ಮತ್ತು ಶೋಭಾ ಕಡಿದಾಳ್ ದಂಪತಿಯ ಪುತ್ರಿ. ಪತಿ ಅನೂಪ್ ಸಿ.ಕೆ.ಅವರು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರು ಪುತ್ರಿಯರಿದ್ದಾರೆ.

Shivamogga Police ಶಿವಮೊಗ್ಗ ಪೊಲೀಸ್ ವತಿಯಿಂದ ಮಾದಕ ವಸ್ತುಗಳ ಕುರಿತು ಜನಜಾಗೃತಿ ಅಭಿಯಾನ

0

Shivamogga Police ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಮಾದಕ ವಸ್ತುಗಳ ಕುರಿತು ಜನಜಾಗೃತಿ ಅಭಿಯಾನದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ Walk and Run (ನಡಿಗೆ ಮತ್ತು ಓಟ) ವನ್ನು ಹಮ್ಮಿಕೊಳ್ಳಲಾಗಿತ್ತು .

ಶ್ರೀ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು Walk and Run ಗೆ ಚಾಲನೆ ನೀಡಿದರು.

DAR ಕವಾಯತು ಮೈದಾನದಿಂದ ಪ್ರಾರಂಭಿಸಿ, ನಡಿಗೆ ಮತ್ತು ಓಟವನ್ನು ಆರಂಭಿಸಿ ಅಶೋಕ ವೃತ್ತ, ಎ ಎ ವೃತ್ತ, ಗೋಪಿ ವೃತ್ತ, ಜೈಲ್ ವೃತ್ತ, ಐ ಬಿ ವೃತ್ತದ ಮುಖಾಂತರ ಪುನಃ ಶಿವಮೊಗ್ಗ DAR ಕವಾಯತು ಮೈದಾನಕ್ಕೆ ಬಂದು ಮುಕ್ತಾಯ ಮಾಡಲಾಯಿತು. Shivamogga Police ಸದರಿ Walk and Run (ನಡಿಗೆ ಮತ್ತು ಓಟ) ನಲ್ಲಿ ಶ್ರೀ ಸಂಜೀವ್ ಕುಮಾರ್ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಕೃಷ್ಣ ಮೂರ್ತಿ ಪೊಲೀಸ್ ಉಪಾಧೀಕ್ಷಕರು CEN ಪೊಲೀಸ್ ಠಾಣೆ ಮತ್ತು ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.