Thursday, August 13, 2026
Thursday, August 13, 2026
Home Blog Page 262

ಬಸವ ವಸತಿ ಯೋಜನೆ ಸಹಾಯಧನ ಹೆಚ್ಚಿಸಲು ಸರ್ಕಾರದ ಚಿಂತನೆ- ಸಚಿವ ಜಮೀರ್ ಅಹ್ಮದ್

0

ಬಸವ ವಸತಿ ಯೋಜನೆಗೆ ಈಗ ನೀಡುತ್ತಿರುವ ಸಹಾಯಧನವು ಸಾಕಾಗುತ್ತಿಲ್ಲ ಎಂಬ ವಿಚಾರ ಸರ್ಕಾರದ ಗಮನಕ್ಕೆ ಬಂದಿದ್ದು, ಆಯ್ಕೆಯಾದ ಫಲಾನುಭವಿಗಳಿಗೆ ಕನಿಷ್ಠ 3 ರಿಂದ 4 ಲಕ್ಷ ರೂ.ವರೆಗಾದರೂ ಸಹಾಯಧನ ಕೊಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಲು ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಿದ್ದು, ಆದ್ದರಿಂದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳಿಗೆ ಈಗ ನೀಡಲಾಗುತ್ತಿರುವ ಎಂದು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಅಧಿವೇಶನದಲ್ಲಿ
ಸದಸ್ಯ ಪ್ರದೀಪ್ ಶೆಟ್ಟರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರ ಉತ್ತರಿಸಿದರು.

ಸಹಾಯಧನ ಹೆಚ್ಚಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿರುತ್ತದೆ. ಈ ಸಹಾಯಧನ ಹೆಚ್ಚಳ ಸಂಬಂಧ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಈ ಬಗ್ಗೆ ಬರುವ ಬಜೆಟ್‍ನಲ್ಲಿ ಪರಿಗಣಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ಪ್ರಸ್ತುತ ಕೇಂದ್ರ ಸರ್ಕಾರದ ವಸತಿ ಯೋಜನೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ವಸತಿ ಯೋಜನೆಗಳಡಿ ಅನುದಾನ ಬಿಡುಗಡೆ ಮಾಡಲು ಬಾಕಿ ಇರುವುದಿಲ್ಲ. 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳಡಿ ಅಕ್ಟೋಬರ್-2025ರ ಅಂತ್ಯಕ್ಕೆ 1324.26 ರೂ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Shivamogga Police ಮೃತವ್ಯಕ್ತಿಯ ವಾರಸುದಾರರನ್ನ ಪತ್ತೆ ಹಚ್ಚಿ ಸಹಕರಿಸಲು ಸಾರ್ವಜನಿಕರಿಗೆ ಪೊಲೀಸ್ ಠಾಣೆ ಮನವಿ

0

Shivamogga Police ಶಿವಮೊಗ್ಗ ನಗರದ ಎನ್.ಟಿ.ರಸ್ತೆಯ ಎಂಆರ್.ಎಫ್ ಟೈರ್ ಶೋ ರೂಂ ಹತ್ತಿರ ವಾಸ ಮಾಡುತ್ತಿದ್ದ 65 ವರ್ಷ ಸಯ್ಯದ್ ಭಾಷಾ ಎಂಬ ವ್ಯಕ್ತಿಯು ಅನಾರೋಗ್ಯದ ಕಾರಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಡಿ. 10 ರಂದು ಮೃತಪಟ್ಟಿದ್ದಾರೆ.

ಈ ವ್ಯಕ್ತಿಯ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ದೊರಕಿರುವುದಿಲ್ಲ. ಈ ವ್ಯಕ್ತಿಯ ಚಹರೆ 5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ತೆಳುವಾದ ಮೈಕಟ್ಟು ಹೊಂದಿರುತ್ತಾರೆ.

Shivamogga Police ಎರಡು ಕೈಗಳ ಮೇಲೆ ಹಳೆಯ ಗಾಯದ ಗುರುತು ಇರುತ್ತದೆ.
ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Department of Labor ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರಿಗೆ 7 ಲಕ್ಷ ಟೂಲ್ ಕಿಟ್ ವಿತರಿಸಲಾಗಿದೆ- ಸಚಿವ ಸಂತೋಷ್ ಲಾಡ್

0

Department of Labor ಕಾರ್ಮಿಕ ಇಲಾಖೆ ವತಿಯಿಂದ ವಿವಿಧ ವೃತ್ತಿ ಮಾಡುತ್ತಿರುವ ರಾಜ್ಯದ ಕಾರ್ಮಿಕರಿಗೆ 7 ಲಕ್ಷ ಟೂಲ್ ಕಿಟ್ ವಿತರಿಸಲಾಗಿದೆ.

ಒಮ್ಮೆ ಕಾರ್ಮಿಕ ಕಿಟ್ ಪಡೆದರೆ ಮತ್ತ್ತೊಮ್ಮೆ ಅದೇ ಕಾರ್ಮಿಕರಿಗೆ ಕಿಟ್ ನೀಡಲು ಸದ್ಯ ಇರುವ ನಿಯಮಗಳಲ್ಲಿ ಅವಕಾಶವಿಲ್ಲ. ಈ ನಿಯಮಕ್ಕೆ ಮಾರ್ಪಾಡು ತಂದು 5 ವರ್ಷಗಳ ಕಾಲಮಿತಿಯನ್ನು ನಿಗದಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಹರೀಶ್‌ ಪೂಂಜಾ ಅವರ ಪ್ರಶ್ನೆಗೆ ಕಾರ್ಮಿಕ ಸಚಿವರಾದ ಸಂತೋಷ್‌ ಲಾಡ್‌ ಅವರ ಉತ್ತರಿಸಿದರು.

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಟೂಲ್ ಕಿಟ್ ಪಡೆಯುವ ಫಲಾನುಭವಿಗಳಿಗೆ ಕಾಲಮಿತಿ ನಿಗದಿ ಮಾಡಲಾಗುವುದು.

ಶೇ.13ರಷ್ಟು ಕಾರ್ಮಿಕ ಮಹಿಳೆಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಬಂದಿದೆ. ಆದ್ದರಿಂದ ಸರ್ಕಾರ ಪೌಷ್ಠಿಕ ಆಹಾರದ ಕಿಟ್‍ಗಳನ್ನು ನೀಡಲು ಸಿದ್ದತೆ ನಡೆಸಿದೆ.

Department of Labor ವ್ಯಾಸಂಗ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಈ ಹಿಂದೆ ಶಾಲಾ ಕಿಟ್ ನೀಡಲಾಗುತ್ತಿತ್ತು. ಇದರ ಬದಲಾಗಿ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

Shivamooga Police ಅಪರಿಚಿತ ವ್ಯಕ್ತಿಯ ಶವ ಪತ್ತೆ, ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ

0

Shivamooga Police ಶಿವಮೊಗ್ಗ ನಗರದ ಬಿ.ಹೆಚ್.ರಸ್ತೆಯ ಬ್ಲೂಮೂನ್ ವೈನ್ ಶಾಪ್ ಎದುರು ಫುಟ್‌ಪಾತ್ ಮೇಲೆ ಸುಸ್ತಾಗಿ ಮಲಗಿದ್ದ ಸುಮಾರು 35 -40 ವರ್ಷದ ವ್ಯಕ್ತಿಯನ್ನು ಅಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಡಿ. 11 ರಂದು ಮೃತಪಟ್ಟಿರುತ್ತಾನೆ.

ಈ ವ್ಯಕ್ತಿಯ ಹೆಸರು, ವಿಳಾಸ ಮತ್ತು ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ದೊರಕಿರುವುದಿಲ್ಲ. ಈ ವ್ಯಕ್ತಿಯ ಚಹರೆ 5.5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈಬಣ್ಣ, ದುಂಡುಮುಖ, ತೆಳುವಾದ ಮೈಕಟ್ಟು ಹೊಂದಿರುತ್ತಾರೆ. ಎದೆಯ ಮೇಲೆ “ಹುಲುಗಪ್ಪ” ಮತ್ತು ಅಂಜನಪ್ಪ” ಹಾಗೂ ಎಡಗೈನ ಒಳಭಾಗದಲ್ಲಿ “ಈರಮ್ಮ” ಹಾಗೂ ಬಲಗೈನ ಒಳಭಾಗದಲ್ಲಿ ‘ಅಪ್ಪ’ ಮತ್ತು ತ್ರಿಶೂಲದ ಚಿಹ್ನೆಯಿರುವ ಹಚ್ಚೆ ಗುರುತುಗಳು ಇರುತ್ತದೆ.

ಮೈಮೇಲೆ ಬಿಳಿಬಣ್ಣದ ಕಪ್ಪು ಚುಕ್ಕೆಯಿರುವ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.

Shivamooga Police ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

Shamanur Shivashankarappa ದಾವಣಗೆರೆಯ ದೀಪದಂತಿದ್ದ ಶಾಮನೂರು ಶಿವಶಂಕರಪ್ಪ

0

Shamanur Shivashankarappa ದಾವಣಗೆರೆಯ ಹಿರಿಯ ಸಮಾಜ ಸೇವಾಧುರಂಧರ ರಾಜಕಾರಣಿ ಶಾಮನೂರು ಶಿವಶಂಕರಪ್ಪ ನಿಧನರಾಗಿದ್ದಾರೆ. ವಯೋಸಹಜ ಅಸ್ವಸ್ಥತೆಯಿಂದ ಅವರು ಬಳಲುತ್ತಿದ್ದರು
ಎಂದು ಕುಟುಂಬ ವಲಯದವರು ಹೇಳಿದ್ದಾರೆ.
ತೊಂಭತ್ತೈದು ವರ್ಷದ ಹಿರಿಯ ಚೇತನ ,ದಾವಣಗೆರೆಯ ದೀನರ ದೀಪವಾಗಿದ್ದ
ಶಿವಶಂಕರಪ್ಪ ಅಗಲಿಕೆ ನಾಡಿಗೆ ಅಪಾರ ನಷ್ಟವುಂಟುಮಾಡಿದೆ.
ದಾವಣಗೆರೆಯ ನಗರಸಭೆಯ ಸದಸ್ಯರಾಗಿ ,ಜನಾನುರಾಗಿ ಬೆಳೆದವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಸ್ಥಳೀಯ ಮತ್ತು ನಾಡಿನ ರಾಜಕೀಯ ಕ್ಷೇತ್ರ ಅವರನ್ನ ಬರಮಾಡಿಕೊಂಡಿತು.
ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಸಮುದಾಯದ ಗಟ್ಟಿ ದನಿಯಾಗಿದ್ದರು.
ಉದ್ಯಮಿಯಾಗಿ ಅಪಾರ ಜ್ಞಾನ,ಅನುಭವ ಶ್ರೀಮಂತರಾಗಿದ್ದರು.
ಸಮಾಜ ಸೇವೆಯಲ್ಲಂತೂ ಶಾಮನೂರು ಎಂಬ ಹೆಸರೇ ಸಾಕು ಅಸಂಖ್ಯ ವ್ಯಕ್ತಿಗಳು,ಕುಟುಂಬಗಳು, ಸಂಘ ಸಂಸ್ಥೆಗಳಿಗೆ ಉದಾರ ದೇಣಿಗೆ ನೀಡಿದ ದಾನಶೂರ ಕರ್ಣನಂತೆ ಮಿಂಚಿದ್ದರು.
Shamanur Shivashankarappa ಶಿಕ್ಷಣ ಕ್ಷೇತ್ರದಲ್ಲಿ ಅವರು ಮುನ್ನಡೆಸಿದ ಬಾಪೂಜಿ ಶಿಕ್ಷಣ ಸಂಸ್ಥೆ ದೇಶದಲ್ಲೇ ಖ್ಯಾತಿ ಹೊಂದಿದೆ.
ವೈದ್ಯಕೀಯ ,ಕಾನೂನು ,ಪದವಿ, ತಾಂತ್ರಿಕ ಕಾಲೇಜುಗಳ ಸ್ಥಾಪನೆಯಿಂದ ವಿದ್ಯಾಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ್ದರು. ಪ್ರಸ್ತುತ
ವಿಧಾನಸಭೆಯ ಹಿರಿಯ ಸದಸ್ಯರಾಗಿದ್ದರು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಶಾಮನೂರರ ಸೇವೆ ದಾಖಲೆಯಾಗಿದೆ.
ಶಾಮನೂರು ಶಿವಶಂಕರಪ್ಪನವರ ನಿಧನಕ್ಕೆ ನಾಡಿನ ಗಣ್ಯಾತಿಗಣ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಸಂಪುಟದ ಸದಸ್ಯರು, ಶಾಸಕ ವೃಂದ, ಸಂಸದರು ಶಾಮನೂರರ ನಿಧನಕ್ಕೆ ಕಂಬಿನಿ ಮಿಡಿದಿದ್ದಾರೆ.
ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶಿವಶಂಕರಪ್ಪನವರ ಜನಪರ ಕಾಳಜಿ ಮತ್ತು ಸಾಧನೆಗಳನ್ನ ಕೊಂಡಾಡಿದ್ದಾರೆ.

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

0

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ
ಸಂಘ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇವರ ಸಹಯೋಗದಲ್ಲಿ ಡಿ.೧೫ರಂದು ಸಂಜೆ
೫.೩೦ಕ್ಕೆ ಅಲ್ಲಮಪ್ರಭು ಬಯಲಿ (ಫ್ರೀಡಂ ಪಾರ್ಕ್)ನಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವದ
ಮೂಲಕ ನಮ್ಮ ಶ್ರೇಷ್ಟ ಪರಂಪರೆ ಮತ್ತು ಸಾಂಸ್ಕೃತಿಕ ಅನಾವರಣಗೊಳ್ಳಲಿದೆ.

ಆಳ್ವಾಸ್ ಸಾಂಸ್ಕೃತಿಕ ವೈಭವದಿಂದದು ನಮ್ಮ ದೇಶದ ಸಾಂಸ್ಕೃತಿಕ ಸೊಗಡನ್ನು
ಬಿಂಬಿಸುವ ಹಾಗೂ ಈ ಮೂಲಕ ಕಲೆ, ಸಂಗೀತ, ನೃತ್ಯ, ಯಕ್ಷಗಾನ ಸಂಸ್ಕೃತಿಯನ್ನು
ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮವಾಗಿದ್ದು, ಸುಮಾg ೫೦೦ ವಿದ್ಯಾರ್ಥಿ-
ವಿದ್ಯಾರ್ಥಿನಿಯರು ಸತತ ಮೂರು ಗಂಟೆಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳನ್ನು
ನಡೆಸಿಕೊಡಲಿದ್ದಾರೆ.

Alvas Cultural Fest ಇದೊಂದು ಅಪರೂಪದ ಹಾಗೂ ಮಾಗಿಯ ಛಳಿಯಲ್ಲಿ ಬೆಚ್ಚಗಿನ ಕಾರ್ಯಕ್ರಮ.
ವಿಶೇಷವೆಂದರೆ, ಈ ಕಾರ್ಯಕ್ರಮಕ್ಕೆ ನಗರದ ಮೂವತ್ತಕ್ಕೂ ಹೆಚ್ಚು ಸಾಮಾಜಿಕ ಮತ್ತು ಸಂಸ್ಕೃತಿ ಸಂಘ ಸಂಸ್ಥೆಗಳು ಕೈ ಜೋಡಿಸಿವೆ.
ಈಗಾಗಲೇ ನಗರದ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಸಂಘ
ಸಂಸ್ಥೆಗಳು, ವ್ಯಾಪಾರಸ್ಥರುಗಳಿಗೆ ವೈಯಕ್ತಿಕವಾಗಿ ಆಹ್ವಾನ ನೀಡಲಾಗಿದೆ. ಸರಿ ಸುಮಾರು
ಮೂವತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸೇರುವ ನಿರೀಕ್ಷೆಯಿದ್ದು, ಆಹ್ವಾನಿತ ಗಣ್ಯರಿಗೆ,
ಸಾರ್ವಜನಿಕರಿಗೆ
ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ನಮ್ಮ ಪರಂಪರೆಯ ಶ್ರೇಷ್ಟ ಕಲಾ ಪ್ರಕಾರಗಳಾದ, ಶಾಸ್ತ್ರೀಯ ನೃತ್ಯ, ಬಡಗುತಿಟ್ಟು ಯಕ್ಷಗಾನ-ಶ್ರೀರಾಮ ಪಟ್ಟಾಭಿಷೇಕ, ಗುಜರಾತಿನ
ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಹಾಗೂ ರೋಪ್
ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ ಕಥಕ್ ನೃತ್ಯ-ವರ್ಷಧಾರೆ, ಪುರುಲಿಯಾ
ತೆಂಕು ತಿಟ್ಟು ಯಕ್ಷಗಾನ-ಅಗ್ರಪೂಜೆ, ಬೊಂಬೆ ವಿನೋದಾವಳಿಗಳು ತೆರೆದುಕೊಳ್ಳಲಿದೆ.
ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿದ್ದು, ಕೇವಲ ಹತ್ತಿಪ್ಪತು ್ತ
ನಿಮಿಷಗಳ ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ವೈಭವದ ಅನಾವರಣವಾಗಲಿದೆ.
ಕಾರ್ಯಕ್ರಮ ಸರಿಯಾಗಿ ೫.೩೦ಕ್ಕೆ ಆರಂಭವಾಗಲಿದ್ದು, ನಂತರ ೦೬ ಗಂಟೆಯಿAದ ೦೯
ಗಂಟೆಯವರೆಗೆ ನಿರಂತರವಾಗಿ ಸಾಂಸ್ಕೃತಿಕ ವೈಭವದ ಅನಾವರಣಗೊಳ್ಳಲಿದೆ.
ಸಾರ್ವಜನಿಕರು ೧೦ ನಿಮಿಷ ಮುಂಚಿತವಾಗಿಯೇ ಬಂದು ಆಸೀನರಾಗುವಂತೆ
ವಿನಂತಿಸಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ
ತಿಂಡಿ-ತಿನಿಸುಗಳ ಸ್ಪಾಲ್‌ಗಳನ್ನು ತೆರೆಯಲಾಗಿದೆ.
ಈಗಾಗಲೇ ಹಲವು ಬಾರಿ ನಗರದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಗಳು
ನಡೆದಿವೆ. ಆದರೆ ಈಗಿನಷ್ಟು ಇಷ್ಟು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವುದು ಇದೇ ಮೊದಲು.

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

0

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ ಡಿ. ೧೨ ರಿಂದ ೧೪ ರವರೆಗೆ ಪರಂಪರೆ ದೇಸಿ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.
ಶಿವಮೊಗ್ಗದ ಗಾಂಧಿನಗರ ಮುಖ್ಯ ರಸ್ತೆಯಲ್ಲಿರುವ ಟಾಟಾ ಪವರ್ ಸೋಲಾರ್ ಎಸ್ ಎಸ್ ಏಜೆನ್ಸೀಸ್ ಸ್ಟಾಲ್‌ನ್ನು ವಿಧ್ಯುಕ್ತವಾಗಿ ಡಾ. Shimoga News ಸಿ.ಹೆಚ್. ಭಾಸ್ಕರ್ ನಾಯ್ಕ್ ಅವರು ಸೋಲಾರ್ ಬುಕ್ ಮಾಡುವ ಮುಖಾಂತರ ಚಾಲನೆ ನೀಡಿದರು. ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ವಿತರಿಸುವ ಜೊತೆಗೆ ಲಕ್ಕಿ ಬಹುಮಾನ ಗಳು ಇರುತ್ತದೆ ಎಂದು ವ್ಯವಸ್ಥಾಪಕ ಸುರೇಶ್ ಶಣೈ ಅವರು ತಿಳಿಸಿದ್ದಾರೆ. ಸೋಲಾರ್ ರೂಫ್ ಟಾಪ್‌ನ್ನು ಗ್ರಾಹಕ ರಮೇಶ್ ಶಣೈ ಮತ್ತು ಜಗದೀಶ್ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಕಂಪನಿಯ ಸುರಕ್ಷಿತ ರೈ, ಮಾರುತಿ ರಾವ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

0

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನವನ್ನು ಪಾವತಿಸದೆ ನಡೆಯುತ್ತಿರುವ ಗಂಭೀರ ಅಕ್ರಮವನ್ನು ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳು , ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಪ್ರತಿನಿಧಿಗಳಾದ ಡಿ.ಎಸ್.ಅರುಣ್ ಅವರು ಇಂದು ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದರು.

ರಾಜ್ಯಾದ್ಯಂತ ಸಾವಿರಾರು ಗ್ರಂಥಪಾಲಕರು ತಿಂಗಳ ಕನಿಷ್ಠ ವೇತನಕ್ಕೂ ವಂಚಿತರಾಗುತ್ತಿರುವ ಬಗ್ಗೆ ಹಲವು ಜಿಲ್ಲೆಗಳಿಂದ ಬಂದಿರುವ ದೂರುಗಳು ಭಾರೀ ಆತಂಕಕ್ಕೆ ಕಾರಣವಾಗಿದ್ದು, ಕೆಲವು ಗ್ರಂಥಪಾಲಕರು ಆರ್ಥಿಕ ಬಿಕ್ಕಟ್ಟಿನಲ್ಲಿ ಪ್ರಾಣ ಕಳೆದುಕೊಂಡಿರುವ ಘಟನೆಗಳು ವರದಿಯಾದ ಹಿನ್ನೆಲೆ ವಿಷಯ ಮತ್ತಷ್ಟು ಗಂಭೀರವಾಗಿದೆ ಎಂದು ಮಾನ್ಯ ಶಾಸಕರು ಉಲ್ಲೆಕಿಸಿದರು.

ವೇತನ ಪಾವತಿ ಕಡಿಮೆ ಆಗಲು ಕಾರಣವಾಗಿರುವ ಆಡಳಿತಾತ್ಮಕ ಗೊಂದಲಗಳು, ಹಣ ಬಿಡುಗಡೆ ವಿಳಂಬ ಮತ್ತು ವರ್ಗೀಕರಣದ ದೋಷಗಳು ಕುರಿತು ಸರ್ಕಾರ ತಕ್ಷಣ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು. ಜೊತೆಗೆ, ಬಾಕಿ ಉಳಿದ ವೇತನ ಹಾಗೂ arrears ಪಾವತಿಗೆ ನಿಗದಿತ ಅವಧಿ ಪ್ರಕಟಿಸಬೇಕೆಂಬ ಬೇಡಿಕೆಯನ್ನು ಮಂಡಿಸಿದರು.

ಗ್ರಾಮೀಣ ಶಿಕ್ಷಣ ಮತ್ತು ಮಾಹಿತಿಗಾರಿಕೆಯ ಗುಣಮಟ್ಟ ಕಾಪಾಡಲು, ಗ್ರಂಥಪಾಲಕರಿಗೆ ಕನಿಷ್ಠ ವೇತನ ಹಕ್ಕನ್ನು ಪೂರ್ಣವಾಗಿ ಜಾರಿಗೊಳಿಸುವುದು ಸರ್ಕಾರದ ತುರ್ತು ಜವಾಬ್ದಾರಿ ಎಂದು ಮಾನ್ಯ ಡಿ. ಎಸ್ ಅರುಣ್ ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

D S Arun ಇದೇ ಸಂದರ್ಭದಲ್ಲಿ, ಗ್ರಂಥಪಾಲಕರ ಹಿತವನ್ನು ಗಟ್ಟಿಯಾಗಿ ರಕ್ಷಿಸಲು ಶ್ರೀ ಅರುಣ್ ಅವರು ಇನ್ನೂ ಕೆಲವು ಮಹತ್ವದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದರು . ESI ಮತ್ತು PF ಅಂತಹ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಗ್ರಂಥಪಾಲಕರಿಗೆ ತಕ್ಷಣ ಜಾರಿಗೊಳಿಸಬೇಕು, ಗ್ರಂಥಪಾಲಕರಿಗೆ ಪ್ರತ್ಯೇಕ ಸೇವಾ ನಿಯಮಾವಳಿ (Service Rules) ರೂಪಿಸಬೇಕು ಮತ್ತು ರಾಜ್ಯ ಬಜೆಟ್‌ನಲ್ಲಿ ಇವರಿಗಾಗಿ ಪ್ರತ್ಯೇಕ ವಿನಿಯೋಗ ಒದಗಿಸಬೇಕು ಎಂದು ಸ್ಪಷ್ಟವಾಗಿ ಹೇಳಿದರು. ಈ ಮೂರು ಕ್ರಮಗಳು ಈಗಿನ ಪರಿಸ್ಥಿತಿಯಲ್ಲಿ ಅತಿ ಅವಶ್ಯಕವಾಗಿವೆ ಎಂದು ಹೇಳಿದರು.

ವೇತನ ಪಾವತಿಯಲ್ಲಿ ಪಾರದರ್ಶಕತೆ ಹಾಗೂ ವಿಳಂಬ ನಿವಾರಣೆಗಾಗಿ ನೇರ ಲಾಭ ವರ್ಗಾವಣೆ (DBT) ವ್ಯವಸ್ಥೆ ಜಾರಿಗೆ ತರಬೇಕೆಂದು ಕೂಡ ಅವರು ಸರ್ಕಾರಕ್ಕೆ ಸಲಹೆ ನೀಡಿದರು. ಲಕ್ಷಾಂತರ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿರುವ DBT ಮಾದರಿಯನ್ನು, ರಾಜ್ಯವು ಕೇವಲ ಆರು ಸಾವಿರಕ್ಕೂ ಕಡಿಮೆಯಿರುವ ಗ್ರಂಥಪಾಲಕರಿಗೆ ಜಾರಿಗೊಳಿಸುವುದು ಬಹಳ ಸುಲಭ ಮತ್ತು ಪರಿಣಾಮಕಾರಿ ಎಂಬುದನ್ನು ಡಿ. ಎಸ್. ಅರುಣ್ ಅವರು ಉದಾಹರಣೆ ನೀಡಿದರು.

RDPR ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ, ಅವರ ಪರವಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಉತ್ತರ ನೀಡುತ್ತಾ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಡಿ.ಎಸ್.ಅರುಣ್ ಅವರ ಸೂಚನೆಗಳನ್ನು ಸಂಪೂರ್ಣವಾಗಿ ಸಮರ್ಥಿಸಿ, RDPR ಸಚಿವರು ಮತ್ತು ಇಲಾಖೆಯೊಂದಿಗೆ ಚರ್ಚಿಸಿ DBT ವ್ಯವಸ್ಥೆ ಸೇರಿದಂತೆ ಸಲ್ಲಿಸಿದ ಶಿಫಾರಸುಗಳ ಮೇಲೆ ಶೀಘ್ರವೇ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ವಂದನೆಗಳೊಂದಿಗೆ

ಕಾರ್ಯಾಲಯ:: ಮಾನ್ಯ ಶಾಸಕರು ಡಿ.ಎಸ್.ಅರುಣ್ ವಿಧಾನ ಪರಿಷತ್

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

0

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನ ಕೊಪ್ಪ ಅವರನ್ನು ಆಯ್ಕೆ ಮಾಡಲಾಗಿದ್ದು, ಅವರು ಇಂದು ಅಧಿಕಾರ ವಹಿಸಿಕೊಂಡರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಭಾಗ್ಯ, ಉಪಾಧ್ಯಕ್ಷ ಮಧು, ಮಾಜಿ ಅಧ್ಯಕ್ಷರಾದ ಓಂಕಾರಪ್ಪ, ಲೋಹಿತ್ ಕೆಪಿ ಮಲ್ಲಿಕಾರ್ಜುನ್, ಸದಸ್ಯರಾದ ರೋಹಿಣಿ, ಪ್ರತಿಭಾ, ನೇತ್ರಾವತಿ, ಲಲಿತಮ್ಮ ರಂಗನಾಥ್ ಲಕ್ಷ್ಮಣ್, ಪಿಡಿಒ ವಿಜಯ, ಕಾರ್ಯದರ್ಶಿ ಪರಶುರಾಮ್, ಸಿಬ್ಬಂದಿಗಳಾದ ಅಶ್ವಿನಿ ಚೇತನ್, ಅನ್ನಪೂರ್ಣಮ್ಮ, ರಮೇಶ್, ಸಿದ್ದೇಶ್, ರಾಘವೇಂದ್ರ, ಜಯಪ್ಪ, ಸವಿತಾ ಮುಂತಾದವರಿದ್ದರು

Canara Bank ಉಚಿತ ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ.

0

Canara Bank ಉಚಿತ ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಹೊಳಲೂರು (ಶಿವಮೊಗ್ಗ ತಾಲ್ಲೂಕು) ಇಲ್ಲಿ ಉಚಿತ ತರಬೇತಿಯನ್ನು ಹಮ್ಮಿಕೊಂಡಿದ್ದು ಆಸಕ್ತಿ ಇರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಭ್ಯರ್ಥಿಯು ೧೮ ರಿಂದ ೪೯ ವರ್ಷ ವಯೋಮಿತಿ ಒಳಗಿನವರಾಗಿರಬೇಕು ಮತ್ತು ೮ನೇ ತರಗತಿ ಉತ್ತೀರ್ಣರಾಗಿರಬೇಕು. ಮತ್ತು ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿದು ಉಚಿತ ತರಬೇತಿಯನ್ನು ಪಡೆದ ನಂತರ ಸ್ವ-ಉದ್ಯೋಗವನ್ನು ಪ್ರಾರಂಭ ಮಾಡುವವರಾಗಿರಬೇಕು. ತರಬೇತಿ ಅವಧಿಯಲ್ಲಿ ಉಚಿತ ಊಟ-ವಸತಿ ವ್ಯವಸ್ಥೆ ಇರುತ್ತದೆ. ತರಬೇತಿ ಅವಧಿಯಲ್ಲಿ ಸಂಸ್ಥೆಯಲ್ಲಿ ಉಳಿದುಕೊಳ್ಳುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ತರಬೇತಿಗಳು
ಕ್ರ ಸ
ತರಬೇತಿಗಳು
ಅವದಿ
ಪ್ರಾರಂಬ ದಿನಾಂಕ
೦೧
ದ್ವಿಚಕ್ರ ವಾಹನ ರಿಪೇರಿ ಮತ್ತು ಎಲೆಕ್ಟಿçಕ್ ಬೈಕ್ ಸರ್ವಿಸ್
೩೪ ದಿನ
22/12/2025

Canara Bank ತರಬೇತಿಯು ಪ್ರಾರಂಭವಾಗಲಿದ್ದು ಆಸಕ್ತರು ಹೆಸರು, ವಿಳಾಸ, ಮೊಬೈಲ್ ನಂ. ವಿದ್ಯಾರ್ಹತೆ, ಮತ್ತು ವಯಸ್ಸಿನ ವಿವರಗಳೊಂದಿಗೆ:
ನಿರ್ದೇಶಕರು,
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ -ಉದ್ಯೋಗ ತರಬೇತಿ ಸಂಸ್ಥೆ,
ಹೊನ್ನಾಳಿ ರಸ್ತೆ, ಹೊಳಲೂರು-೫೭೭ ೨೧೬ (ಶಿವಮೊಗ್ಗ ತಾಲ್ಲೂಕು)
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ.9743429595, 8722384541, 9164411580, 8105378735 9449371579, 9481955721,