Wednesday, February 25, 2026
Wednesday, February 25, 2026
Home Blog Page 260

MESCOM ಮೆಸ್ಕಾಂ ಪ್ರಕಟಣೆ, ಜುಲೈ 5 ರಂದು ಗೋಪಿಶೆಟ್ಟಿಕೊಪ್ಪ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ನಗರದ ಉಪ ವಿಭಾಗ-2 ಘಟಕ-06ರ ವ್ಯಾಪ್ತಿಯಲ್ಲಿ ತುರ್ತು ನಿರ್ವಾಹಣೆಯ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.5 ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಗೋಪಿಶೆಟ್ಟಿಕೊಪ್ಪ, ಸಿದ್ದೇಶ್ವರ ಸರ್ಕಲ್, ಭವಾನಿ ಲೇಔಟ್, ಆಶಯ ಬಡಾವಣೆ, ಚಾಲುಕ್ಯನಗರ, ಕೆಹೆಚ್‌ಬಿ ಕಾಲೋನಿ, ಹಳೆ ಊರು ಗೋಪಿಶೆಟ್ಟಿಕೊಪ್ಪ, ಗದ್ದೆಮನೆ ಲೇಔಟ್, ಮಂಜಪ್ಪ ಬಸಪ್ಪ ಲೇಔಟ್, ಜಿಎಸ್ ಕ್ಯಾಸ್ಟಿಂಗ್, ಸೋಮಣ್ಣ ಫ್ಯಾಕ್ಟರಿ, ಸಲೀಮ್ ಪ್ಯಾಕ್ಟರಿ, ಕಾಮತ್ ಲೇಔಟ್, ಮೇಲಿನ ತುಂಗಾನಗರ ಹಾಗೂ ಸುತ್ತಮುತ್ತಲಿನ ಐಪಿ ಲಿಮಿಟ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Rotary Shivamogga ಶಿವಮೊಗ್ಗ ರೋಟರಿ (ಪೂರ್ವ)ಅಧ್ಯಕ್ಷರಾಗಿ ಡಿ.ಕಿಶೋರ್ ಕುಮಾರ್, ಕಾರ್ಯದರ್ಶಿಯಾಗಿ ಬಿ.ಆರ್.ಧನಂಜಯ್ ಆಯ್ಕೆ

0

Rotary Shivamogga ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ನೂತನ ಅಧ್ಯಕ್ಷರಾಗಿ ಡಿ.ಕಿಶೋರ್‌ಕುಮಾರ್ ಹಾಗೂ ಕಾರ್ಯದರ್ಶಿಯಾಗಿ ಬಿ.ಆರ್.ಧನಂಜಯ್ ಆಯ್ಕೆಯಾಗಿದ್ದಾರೆ.
ನಗರದದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಜುಲೈ 11ರಂದು ಸಂಜೆ 6ಕ್ಕೆ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ. ನಿಯೋಜಿತ ಜಿಲ್ಲಾ ಗವರ್ನರ್ ಬಿ.ಎಂ.ಭಟ್ ಅವರು Rotary Shivamogga ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪದವಿ ಸ್ವೀಕಾರ ಕಾರ್ಯಕ್ರಮ ನಡೆಸಿಕೊಡುವರು.
ರೋಟರಿ ಸಂಸ್ಥೆಯ ವಸಂತ್ ಹೋಬಳಿದಾರ್, ವಲಯ 11ರ ಸಹಾಯಕ ಗವರ್ನರ್ ಲಕ್ಷ್ಮಣ್ ಗೌಡ, ಜೋನಲ್ ಲೆಫ್ಟಿನೆಂಟ್ ಕಿರಣ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್, ನಿಕಟಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, 2025-26ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿರುವರು.

Forest Department ಚಾರಣ ಪ್ರಿಯರೇ ಗಮನಿಸಿ. ! ಜುಲೈ 31ರವರೆಗೆ ಎತ್ತಿನಭುಜ ಚಾರಣಕ್ಕೆ ನಿಷೇಧ

0

Forest Department ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣವಾದ ಎತ್ತಿನಭುಜ ಚಾರಣವನ್ನು ಜುಲೈ 31ರ ವರೆಗೆ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ.

ಮಳೆಯಾಗುತ್ತಿರುವುದರಿಂದ ಹಾಗೂ ದಟ್ಟವಾಗಿ ಮಂಜು ಕವಿಯುತ್ತಿರುವುದರಿಂದ ಪ್ರವಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳು ಇರುತ್ತವೆ ಎಂದು ಅರಣ್ಯ ಇಲಾಖೆ ತಿಳಿಸಿದೆ.

World Doctor’s Day ಮೂಳೆಗಳು ದೇಹದ ನಿರಂತರ ಬೆಳವಣಿಗೆ & ಬದಲಾವಣೆಯ ರೂವಾರಿ – ಡಾ.ಗಿರೀಶ್

0

World Doctor’s Day ಮೂಳೆಗಳು ದೇಹದ ಅವಿಭಾಜ್ಯ ಅಂಗಾಂಶ. ಮೂಳೆಗಳು ಸಂಯೋಜಕ ಅಂಗಾಂಶದ ಒಂದು ವಿಧವಾಗಿದ್ದು, ದೇಹಕ್ಕೆ ಆಧಾರ, ಆಕಾರ, ರಕ್ಷಣೆಯನ್ನು ನೀಡುತ್ತದೆ.ಮಾತ್ರವಲ್ಲದೆ ಅಗತ್ಯವಾದ ಖನಿಜಾಂಶಗಳ ಸಂಗ್ರಹಿಸುವಿಕೆ, ರಕ್ತ ಕಣಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಮೂಳೆ ಅಂಗಾಂಶವು ಕಾರ್ಟಿಕಲ್ ಮೂಳೆ – ಗಟ್ಟಿಯಾದ ಹೊರ ಪದರ, ಕ್ಯಾನ್ಸಲಸ್ ಮೂಳೆ – ಸ್ಪಂಜಿನಂತಹ ಮೃದುವಾದ ಒಳ ಪದರ, ಮೂಳೆ ಮಜ್ಜೆ – ಕೆಂಪು ಮತ್ತು ಹಳದಿ ಮೂಳೆ ಮಜ್ಜೆ ಎಂಬ ಮೂರು ಮುಖ್ಯ ಭಾಗಗಳನ್ನು ಹೊಂದಿದ್ದುರಕ್ತ ಕಣಗಳನ್ನು ಉತ್ಪಾದಿಸುತ್ತದೆ.ಆದ್ದರಿಂದ ಪ್ರತಿಯೊಂದು ಜೀವಿಯ ಬೆಳವಣಿಗೆ, ಉಳಿಯುವಿಕೆಯಲ್ಲಿ, ದೇಹ ರಚನೆಯಲ್ಲಿ ಮೂಳೆಗಳು ಪ್ರಮುಖ ಪಾತ್ರವಹಿಸುತ್ತದೆ. ಮೂಳೆ ಸವೆತ, ವಿಶೇಷವಾಗಿ ಮಂಡಿ ನೋವು: 60 ವರ್ಷ ಮೇಲ್ಪಟ್ಟವರಿಗೆ ಈ ಸಮಸ್ಯೆ ಕಾಡಬೇಕು. ಆದರೆ ಇತ್ತೀಚೆಗೆ 40 ವರ್ಷ ಆದ ಕೂಡಲೇ ಈ ಸಮಸ್ಯೆಗೆ ಜಾರುವವರ ಸಂಖ್ಯೆ ಹೆಚ್ಚುತ್ತಿದೆ. ಕಾರಣ? ದೇಹದ ಮೇಲಾಗುವ ಪರಿಣಾಮ, ದೈನಂದಿನ ಚಟುವಟಿಕೆಗಳಲ್ಲಿ ಆಗುವ ಸಮಸ್ಯೆ, ಪರಿಹಾರ ಕುರಿತು ಸಮಗ್ರ ವಿವರಣೆಯನ್ನು ಆರಾಧನಾ ಆಥೋಪೆಡಿಕ್ ಸೆಂಟರ್, ಶಿವಮೊಗ್ಗದ ಮುಖ್ಯಸ್ಥರು, ಚೀಪ್ ಕನಸ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಕೆ.ಎಂ.ಸಿ.ಯವರೂ ಆದ ಡಾ: ಗಿರೀಶ್ ಕೆ ಇವರು “ವಿಶ್ವ ವೈದ್ಯರ ದಿನಾಚರಣೆ” ಜುಲೈ ಒಂದರ ಪ್ರಯುಕ್ತ ಮಿತ್ರೆ.. ಕಾಸ್ಮೋ ಕ್ಲಬ್ ಮಹಿಳಾ ಬಳಗದವರು ಆರಾಧನಾ ಆರ್ಥೋಪೆಡಿಕ್ ಸೆಂಟರ್‌ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಮಹಿಳೆ : ಮೂಳೆ ಸವೆತ ಮತ್ತು ಮಂಡಿ ನೋವು” ವಿಚಾರವಾಗಿ ತಜ್ಞ ಮಾಹಿತಿಯನ್ನು ವಿವಿಧ ವೀಡಿಯೋಗಳ ಮೂಲಕ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.

World Doctor’s Day ಚಯಾಪಚಯ ಕ್ರಿಯೆಯ್ನು ಹೊಂದಿರುವ ಮೂಳೆಗಳ ಮರುರೂಪಿಸುವಿಕೆ, ಜೀವಕೋಶಗಳ ಪ್ರಭಾವ, ತಿನ್ನುವ ಆಹಾರ ಪದ್ಧತಿ, ಕುಟುಂಬದ ಜೆನೆಟಿಕ್ಸ್,.ಮಹಿಳೆಯರಲ್ಲಿ ಋತುಬಂಧದ ನಂತರ ಮೂಳೆಯ ದ್ರವ್ಯರಾಶಿಯ ನಷ್ಟಕ್ಕೆ ಒಳಗಾಗುವ ಬಗ್ಗೆ ವಿವರಿಸಿದರು.ಮೂಳೆ ಜೀವಂತ ಕ್ರಿಯಾತ್ಮಕ ಅಂಗಾಂಶ. ಜೀವಿತಾವಧಿಯಲ್ಲಿ ವ್ಯಾಪಕವಾದ ಪುನ್ರಚನೆಗೆ ಒಳಗಾಗುತ್ತಲೇ ಇರುತ್ತದೆ.ಆಸ್ಟಿಯೋಬ್ಲಾಸ್ಟ್ನಿಂದ ಮೂಳೆಯ ರಚನೆ ಆದರೆ, ಆಸ್ಟಿಯೋಕ್ಲಾಸ್ಟ್ನಿಂದ ಮೂಳೆ ಮರುಹೀರಿಕೆ ಆಗುತ್ತದೆ.ಇವೆರಡರ ಕ್ರಿಯೆಯಿಂದ ಬಿಗಿಯಾದ ನಿಯಂತ್ರಣ ದೇಹವನ್ನು ಹೊಂದಿದ್ದು, ಕ್ರಿಯಾತ್ಮಕ ಅಸ್ಥಿಪಂಜರದ ವ್ಯವಸ್ಥೆಯನ್ನು ನಿರ್ವಹಿಸಲು, ಹಿಡಿದಿಡಲು ಸಹಾಯಮಾಡುತ್ತದೆ.

ಡಾ: ಉಮೇಶ್, ಚೀಫ್ ಕನ್ಸಲ್ಟೆಂಟ್, ಫಿಸಿಯೋಥೆರಪಿಸ್ಟ್ ಇವರು ಮೂಳೆರೋಗ ಸಮಸ್ಯೆಯಿಂದ ಬಳಲುತ್ತಿದ್ದೇವೆ ಎಂದು ಗೊತ್ತಾಗುವುದರೊಳಗೆ ಸಮಸ್ಯೆಯ ಮೂರನೇ ಹಂತ ತಲುಪಿರುತ್ತೇವೆ. ವ್ಯಾಯಾಮ, ನಡಿಗೆ ನಿತ್ಯ ಅನುಷ್ಠಾನದಲ್ಲಿರಬೇಕು.ನಲ್ಲಿಸಿದರೆ ನಮ್ಮ ದೇಹದ ತೂಕ ಹೆಚ್ಚುತ್ತದೆ.ಆಗಬೊಜ್ಜು ಹೆಚ್ಚಿ, ಮೂಳೆಗಳು ಸಾಮರ್ಥ್ಯವನ್ನು ಕುಗ್ಗಿಸಿಕೊಂಡು, ಹಾಸಿಗೆ ಹಿಡಿದು ಮಲಗುವ ಸ್ಥಿತಿ ಬರುತ್ತದೆ.ಮೂಳೆ ಸವೆತ, ಮಂಡಿಯ ಸವೆತ ಎರಡೂ ಪ್ರತ್ಯೇಕ ಸಮಸ್ಯೆಗಳು.ದೇಹದ ಮೂಳೆಗಳ ಸಾಮರ್ಥ್ಯವನ್ನು 90 ವರ್ಷವಾದರೂ ದೃಢವಾಗಿ ಇಟ್ಟುಕೊಳ್ಳಬಹುದು ಎಂಬುದಾದರೆ ನಿತ್ಯ ಕನಿಷ್ಠ 30 ನಿಮಿಷದ ದೇಹದ ವ್ಯಾಯಾಮ, ಕನಿಷ್ಠ ೩೦ ನಿಮಿಷದ ನಡಿಗೆಯಿಂದ ಮಾತ್ರ ಸಾಧ್ಯ ಎಂದರು.

ಡಾ: ಹರೀಶ್ ಹೆಚ್.ಕೆ. ಕನ್ಸಲ್ಟೆಂಟ್ ಫಿಸಿಯೋ ಥೆರಪಿಸ್ಟ್ರವರು ಸವೆದ ಮೂಳೆಗಳ ಸರಿಪಡಿಸಿಕೊಳ್ಳಲು ಅಗತ್ಯವಾದ ವ್ಯಾಯಾಮ, ನಿತ್ಯ ಚಟುವಟಿಕೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿ; ನಮಗರಿವಿಲ್ಲದಂತೆ ದೇಹದಲ್ಲಿ ಒಂದು ಪ್ರಕ್ರಿಯೆ ನಡೆಯುತ್ತದೆ. ಪ್ರಕೃತಿ ನಮಗೆ ನೀಡಿರುವ ನಿಗೂಡ ಕೊಡುಗೆಯದು.ಅದುವೇ ದೇಹದಲ್ಲಿ ಹೊಸ ಮೂಳೆಗಳು ನಿರಂತರವಾಗಿ ಬೆಳೆಯುತ್ತಲೇ ಇರುತ್ತದೆ. ಹಳೇ ಮೂಳೆಗಳು ನಿರಂತರವಾಗಿ ಒಡೆಯುತ್ತಲೇ ಇದ್ದು ಅದು ಲವಣ ರೂಪದಲ್ಲಿ ದೇಹದಿಂದ ಹೊರ ಹೋಗುತ್ತದೆ. ಈ ಪ್ರಕ್ರಿಯೆಗೆ ನಿರಂತರ ಮರು ರೂಪಿಸುವಿಕೆ ಎನ್ನುತ್ತೇವೆ ಎಂದು ಮಾಹಿತಿ ನೀಡಿ, ಅಡುಗೆ ಮಾಡುವಾಗ ಕೂಡ ಮಾಡಬಹುದಾದ ಲಘು ವ್ಯಾಯಾಮದ ಬಗ್ಗೆ ತಿಳಿಸಿದರು.ಡಾ: ಸೈಮಾ ಫಿಸಿಯೋ ಥೆರಪಿಸ್ಟ್ ಇವರು ಕೂಡ ಜೊತೆಗಿದ್ದು ಸಹಕಾರ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದ ಅಧ್ಯಕ್ಷರಾದ ಶ್ರೀಮತಿ.ಶ್ರೀರಂಜಿನಿ ದತ್ತಾತ್ರಿಯವರುಈ ಕಾರ್ಯಕ್ರಮವು ಅತ್ಯಂತ ಉಪಯುಕ್ತವಾಗಿದ್ದುಜವಾಬ್ದಾರಿಗಳ ನಡುವೆ ಕಳೆದುಹೋಗುವ ನಾವು ನಮ್ಮ ಆರೋಗ್ಯ ಸಂರಕ್ಷಣೆ ಬಗ್ಗೆ ಗಮನ ನೀಡುವುದು ಕಡಿಮೆ.ಒಂದು ದಿನ ವ್ಯಾಯಾಮ ಮಾಡಿದ ನಾವು, ಐದು ದಿನ ಅದರಿಂದ ದೂರ ಉಳಿಯುತ್ತೇವೆ. ನಮ್ಮ ಜೀವನದ ಚಟುವಟಿಕೆಗಳನ್ನು ಯಂತ್ರೋಪಕರಣಗಳಿಗೆ ಅಳವಡಿಸಿಕೊಂಡಿದ್ದೇವೆ. ಇದರಿಂದಾಗಿ ಹೃದಯ ರೋಗದ ಸಮಸ್ಯೆ, ಮೂಳೆ ರೋಗದ ಸಮಸ್ಯೆಗೆ ತುತ್ತಾಗುವವರ ಸಂಖ್ಯೆ ಹೆಚ್ಚುತ್ತಿದೆ.ವ್ಯಾಯಾಮ, ನಡಿಗೆ ದೇಹದ ಮೂಳೆ ಸದೃಢತೆಗೆ ಬಹಳ ಮುಖ್ಯ..ಮೂಳೆಯ ಆರೋಗ್ಯ ಸಂರಕ್ಷಣೆ ಜಾಗ್ರತೆವಹಿಸಿ, ಆಹಾರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಾಯ್ದುಕೊಂಡು ನಮ್ಮ ಕುಟುಂಬದ ಸದಸ್ಯರಲ್ಲಿಯೂ ಜಾಗೃತಿ ಮೂಡಿಸೋಣ ಎಂದರು.

ಕಾರ್ಯದರ್ಶಿ ದೀಪಾಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿ, ವಿನುತಾ ಪ್ರಾರ್ಥಿಸಿ, ಸುನಿತಾ ಅರುಣ್ ಸ್ವಾಗತಿಸಿ, ಮನು ಪ್ರೀತಮ್ ವಂದಿಸಿದರು.

ಮಿತ್ರೆ..ಕಾಸ್ಮೋ ಕ್ಲಬ್ ಮಹಿಳಾ ಬಳಗದಿಂದ, ಡಾ: ಗಿರೀಶ್, ಡಾ: ಶೋಭಾ ಗಿರೀಶ್, ಡಾ: ಉಮೇಶ್, ಡಾ: ಹರೀಶ್ ರವರನ್ನು ಆತ್ಮೀಯವಾಗಿ ವ್ಯದ್ಯರ ದಿನಾಚರಣೆ ಅಂಗವಾಗಿ ಗೌರವಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಿತ್ರೆಯರು ಆಗಮಿಸಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

Delhi World School  ಶಾಲಾ ಮಕ್ಕಳಿಂದ ವಿನೂತನವಾಗಿ ವೈದ್ಯರ ದಿನಾಚರಣೆ

0

Delhi World School  ಶಿವಮೊಗ್ಗ ಗಾಡಿಕೊಪ್ಪದಲ್ಲಿರುವ ಡೆಲ್ಲಿ ವರ್ಲ್ಡ್ ಶಾಲೆಯಲ್ಲಿ ಮಕ್ಕಳಿಂದ ವಿಭಿನ್ನವಾಗಿ, ವಿಶೇಷವಾಗಿ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು.

ವೈದ್ಯ ದಿನಾಚರಣೆಯ ಅಂಗವಾಗಿ ಡೆಲ್ಲಿ ವರ್ಲ್ಡ್ ಶಾಲೆಯ ಮಕ್ಕಳು ಮ್ಯಾಕ್ಸ್ , ವಾತ್ಸಲ್ಯ , ಅರೈಕೆ ಆಸ್ಪತ್ರೆಗೆ, ತೆರಳಿ ವೈದ್ಯರಿಗೆ ಶುಭಾಶಯಗಳನ್ನು ಕೋರಿದರು.

Delhi World School  ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲೆ ದಿವ್ಯಾಶೆಟ್ಟಿ, ಶಾಲೆಯ ಶಿಕ್ಷಕರು ಸೇರಿದಂತೆ ಹಲವರಿದ್ದರು.

Shivamogga Sharavathi Women’s Council ಶಿವಮೊಗ್ಗ ಶರಾವತಿ ಮಹಿಳಾ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ

0

Shivamogga Sharavathi Women’s Council ಶಿವಮೊಗ್ಗ ಶರಾವತಿ ಮಹಿಳಾ ಮಂಡಳಿಯು 25ನೇ ವರ್ಷಕ್ಕೆ ಪಾದರ್ಪಣೆ ಮಾಡಿದ ಈ ಶುಭ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಶಶಿಕಲಾ, ಕಾರ್ಯದರ್ಶಿಯಾಗಿ ಶೋಭಾ ಯೋಗೆಂದ್ರ ಖಜಾಂಜಿಯಾಗಿ ನಯನಾ ರಾಜೇಶ್, ಉಪಾಧ್ಯಕ್ಷರಾಗಿ ವಿದ್ಯಾವೀರಣ್ಣ ಮತ್ತು ನಿರ್ಮಲಮಹದೇವ್, ನಿರ್ದೇಶಕರುಗಳಾಗಿ ಸುಷ್ಮ ನಿರಂಜನ್, ಗೀತಾ ರಾಜಶೇಖರ್, ಗೀತಾ ಶೆಟ್ಟಿ, ಜ್ಯೋತಿ ಪ್ರಕಾಶ್, ಅನಿತಾ ರವಿ ಅವರು ಆಯ್ಕೆಯಾಗಿದ್ದಾರೆ.

ಈ ಎಲ್ಲಾ ಕಾರ್ಯಕಾರಿ ಮಂಡಳಿಯವರಿಗೆ ಗೌರವ ಅಧ್ಯಕ್ಷರಾದ ಪುಷ್ಪ ಎಸ್. ಶೆಟ್ಟಿ ಅವರು ಅಭಿನಂದಿಸಿ, ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Dr. Manmohan Singh ಬೆಂಗಳೂರು ನಗರ ವಿವಿ ಗೆ ಇನ್ನುಮುಂದೆ “ಡಾ. ಮನ್ ಮೋಹನ್ ಸಿಂಗ್” ಹೆಸರು

0

Dr. Manmohan Singh ದೇಶದ ಪ್ರಧಾನಿಗಳಾಗಿ ಬೆಂಗಳೂರು ನಗರದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಮತ್ತು ಕೊಡುಗೆಗಳನ್ನು ನೀಡಿದ್ದ ಆರ್ಥಿಕ ತಜ್ಞ ಡಾ. ಮನಮೋಹನ್‌ ಸಿಂಗ್‌ ಅವರನ್ನು ಸ್ಮರಿಸಿ, ಗೌರವಿಸುವ ಕೆಲಸವನ್ನು ಮಾಡುವುದು ಒಂದು ಸರ್ಕಾರವಾಗಿ ಮಾತ್ರವಲ್ಲ, ಕನ್ನಡಿಗನಾಗಿಯೂ ನಮ್ಮ ಕರ್ತವ್ಯ. ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ನಂದಿಗಿರಿ ಧಾಮದಲ್ಲಿ ಆಯೋಜಿಸಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ.

ಈ ಸಭೆಯಲ್ಲಿ ನಾವು ಹಲವು ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಬೆಂಗಳೂರು ಉತ್ತರ ಜಿಲ್ಲೆ ಎಂದು ನಾಮಕರಣ ಮಾಡಿದ್ದೇವೆ.

ಬಾಗೇಪಲ್ಲಿ ಪಟ್ಟಣದ ಹೆಸರನ್ನು ಭಾಗ್ಯನಗರ ಎಂದು ಹೆಸರಿಡಲು ತೀರ್ಮಾನಿಸಿದ್ದೇವೆ.
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾಲಯ ಎಂದು ಮರು ನಾಮಕರಣ ಮಾಡಲು ತೀರ್ಮಾನಿಸಿದ್ದೇವೆ.
ಎಂದು
ನಂದಿಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು .

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಇದುವರೆಗೆ ಆಗಿರುವ ಪ್ರಗತಿ, ಆಗಬೇಕಾಗಿರುವ ಕ್ರಮಗಳು ಸೇರಿದಂತೆ ಹಲವು ವಿಷಯಗಳ ಕುರಿತು ಪರಿಶೀಲಿಸಲು ಹೆಚ್.ಕೆ. ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದೆ.

Dr. Manmohan Singh ಒಟ್ಟಾರೆ ಈ ಭಾಗದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು / ಕಾರ್ಯಕ್ರಮಗಳನ್ನು ತೆಗೆದುಕೊಳ್ಳಲು ಈ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.
ಎಂದು ಮಾಹಿತಿ ನೀಡಿದರು.

Inner Wheel Shivamogga ವೈದ್ಯರ ಆತ್ಮವಿಶ್ವಾಸದ ನುಡಿ ಜೀವ ಉಳಿಸುತ್ತದೆ – ಲತಾ ರಮೇಶ್

0

Inner Wheel Shivamogga ಪ್ರತಿದಿನ ನಮ್ಮ ಒತ್ತಡದ ಬದುಕಿನಲ್ಲಿ ಜಂಜಾಟದಲ್ಲಿ ಬಳಲುತ್ತಿರುವಾಗ ಸಕಾಲದಲ್ಲಿ ಸರಿಯಾದ ಮಾರ್ಗದರ್ಶನ ಸಿಗುವುದು ವೈದ್ಯರಲ್ಲಿ ಮಾತ್ರ ವೈದ್ಯರ ಒಂದು ಆತ್ಮವಿಶ್ವಾಸದ ನುಡಿ ನಮ್ಮ ಜೀವವನ್ನು ಉಳಿಸುತ್ತದೆ ಎಂದು ಇನ್ನರ್ ವೀಲ್ ಕ್ಲಬ್ ಶಿವಮೊಗ್ಗದ ಅಧ್ಯಕ್ಷರಾದ ಲತಾ ರಮೇಶ ಅವರು ನುಡಿದರು.

ಅವರು ಮ್ಯಾಕ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ಇನ್ನರ್ ವೀಲ್ ಶಿವಮೊಗ್ಗದ ವತಿಯಿಂದ ಹಮ್ಮಿಕೊಳ್ಳಲಾದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಪ್ರಖ್ಯಾತ ವೈದ್ಯರುಗಳಾದ ಡಾಕ್ಟರ್ ನಾರಾಯಣ ಪಂಜಿ. ಹೃದ್ರೋಗ ತಜ್ಞರಾದ ಡಾಕ್ಟರ್ ಸುಧೀರ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಮಾತನಾಡಿದರು.

ಶತಮಾನಗಳಿಂದಲೂ ಸಹ ವೈದ್ಯೋ ನಾರಾಯಣ ಹರಿ ಎನ್ನುವ ನಾಣ್ನುಡಿಯಂತೆ ಅವರ ಸೇವೆ ಅನನ್ಯವಾಗಿದೆ ಅವರನ್ನು ಅವರ ಸೇವೆಯನ್ನು ಗೌರವಿಸೋಣ ವೈದ್ಯರಿಲ್ಲದ ಸಮಾಜವನ್ನು ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ ಎಂದು ನುಡಿದರು.

ಸನ್ಮಾನ ಸ್ವೀಕರಿಸಿದ ವೈದ್ಯರುಗಳು ಮಾತನಾಡಿ ಸಂತೋಷ ವ್ಯಕ್ತಪಡಿಸಿದರು ನಮ್ಮ ಆರೋಗ್ಯವನ್ನು ನಾವು ಸದಾ ಸದೃಢವಾಗಿ ಇಟ್ಟುಕೊಳ್ಳಲು ಉತ್ತಮವಾದ ಆರೋಗ್ಯ ಶೈಲಿ ಜೀವನ ಶೈಲಿ ಆಹಾರ ಪದ್ಧತಿಗಳು ಹಾಗೂ ಒತ್ತಡದಿಂದ ದೂರವಿರಬೇಕು ಹಾಗೂ ನಿರಂತರವಾಗಿ ನಮಗಾಗಿ ಪ್ರತಿನಿತ್ಯ 45 ನಿಮಿಷಗಳ ಕಾಲ ಯೋಗ ಪ್ರಾಣಾಯಾಮ ಧ್ಯಾನ ಹಾಗೂ ದೈಹಿಕ ಶ್ರಮ ಮಾಡಲೇಬೇಕು ಎಂದು ನುಡಿದರು.

Inner Wheel Shivamogga ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹಾಗೂ ಅಂಕಣಕಾರರಾದ
ಶ್ರೀ ರಂಜಿನಿ ದತ್ತಾತ್ರಿ. ಯಶೋಧ ಶೇಖರ್. ಸುಧಾ ಹೆಗಡೆ. ಜ್ಯೋತಿ ಪವಾರ್. ಶೃತಿ ರಾಕೇಶ್ ಹಾಗೂ ಇನ್ನರ್ವೀಲ್ ಕ್ಲಬ್ಬಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

CM Siddaramaiah ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ -ಸಿದ್ಧರಾಮಯ್ಯ

0

CM Siddaramaiah ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೇನೆ. ಈ ಬಗ್ಗೆ ಅನುಮಾನ ಬರುವಂತದ್ದು ಏನಿದೆ? ಕೇಂದ್ರದಲ್ಲಿನ ಬಿಜೆಪಿಯವರು ನಮ್ಮ ಹೈಕಮಾಂಡ್ ಅಲ್ಲ, ಅವರು ಹೇಳಿದಂಗೆಲ್ಲ ನಮ್ಮಲ್ಲಿ ನಡೆಯಲ್ಲ ಎಂದು ಸಿದ್ಧರಾಮಯ್ಯ ಅವರು ಸದ್ಯ ಎದ್ದಿರುವ ಸಿಎಂ ಪಟ್ಟದ ವಿವಾದಗಳ ಬಗ್ಗೆ ಪೂರ್ಣ ವಿರಾಮ ಹಾಕಿದ್ದಾರೆ.

ಸರ್ಕಾರದಲ್ಲಿ ಅಧಿಕಾರ ಬದಲಾವಣೆ ಬಗ್ಗೆ ರಾಜ್ಯ ಬಿಜೆಪಿ ಹಗಲುಗನಸು ಕಾಣುತ್ತಿದೆ. ಬಿಜೆಪಿಯವರು ಸುಳ್ಳನ್ನು ಮಾತ್ರ ನಂಬುತ್ತಾರೆ, ಸತ್ಯವನ್ನಲ್ಲ. ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿರುವ ಬಿಜೆಪಿಯವರಿಗೆ ಸತ್ಯ ಹೇಳಿ ಗೊತ್ತೇ ಇಲ್ಲ. ಅವರು ನಂಬುತ್ತಾರೋ, ಬಿಡುತ್ತಾರೆ ನಾವೆಲ್ಲಾ ಒಟ್ಟಾಗಿದ್ದೇವೆ. ನಮ್ಮ ಸರ್ಕಾರ ಬಂಡೆಯಂತೆ ಐದು ವರ್ಷ ಆಡಳಿತ ನಡೆಸಲಿದೆ.

ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ಸಾಕ್ಷಿಗುಡ್ಡೆಯನ್ನು ಬಿಟ್ಟುಹೋಗಿದ್ದಾರೆ? ಅವರು ನೀರಾವರಿ, ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಏನು ಮಾಡಿದ್ದಾರೆ? ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿತ್ತು. ಎಚ್ ಡಿ ಕುಮಾರಸ್ವಾಮಿಯವರು ಒಂದು ವರ್ಷ ಎರಡು ತಿಂಗಳು ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರದಲ್ಲಿದ್ದರು. ಏನು ಮಾಡಿದ್ದಾರೆ? ಏನೂ ಮಾಡದೇ ಸುಳ್ಳು ಹೇಳಿಕೊಂಡು ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಪಕ್ಷಗಳಿಗೆ ಮಾತಿನ ಚಾಟಿ ಬೀಸಿದ್ದಾರೆ.

CM Siddaramaiah 2 ವರ್ಷದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಮಳೆಯಿದ್ದರೂ ಸುಮಾರು ಮೂರು ಲಕ್ಷಕ್ಕಿಂತ ಹೆಚ್ಚು ಜನ ಸೇರಿದ್ದರು. ಜನರು ಸರ್ಕಾರದ ಪರವಾಗಿ ಸುಮ್ಮನೆ ಬರುತ್ತಾರೆಯೇ?
ಎಂದು ತಮ್ಮ ಸರ್ಕಾರದ ಜನಪ್ರಿಯತೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ

Madhu Bangarappa ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ. ಶಿವಮೊಗ್ಗ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳಿಗೆ ಅನುಮೋದನೆ- ಮಧು ಬಂಗಾರಪ್ಪ

0

Madhu Bangarappa ನಂದಿಬೆಟ್ಟದಲ್ಲಿ ಜು.2 ರಂದು ನಡೆದ ಐತಿಹಾಸಿಕ ಸಚಿವ ಸಂಪುಟ ಸಭೆಯಲ್ಲಿ ಜಿಲ್ಲೆಗೆ ರೂ. 307.80 ಕೋಟಿ ಮೊತ್ತದ ಕುಡಿಯುವ ನೀರು ಸೇರಿದಂತೆ ಇತರೆ ಯೋಜನೆಗಳ ಕಾಮಗಾರಿಗಳಿಗೆ ಆಡಳಿತಾತ್ಮ ಅನುಮೋದನೆ ದೊರೆತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು.
ಗುರುವಾರ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೊಷ್ಟಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸೊರಬ ತಾಲ್ಲೂಕಿನ ದಂಡಾವತಿ ಡ್ಯಾಂ ಮಾರ್ಪಡಿತ ಯೋಜನೆ ಕಾಮಗಾರಿಗಳಿಗೆ ಅನುಮೋದನೆ ದೊರೆತಿದ್ದು ಯಾವುದೇ ರೈತರ ಜಮೀನು ಹಾಗೂ ಮನೆಗಳನ್ನು ಮುಳುಗಡೆಗೊಳಿಸದೇ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದರು.
ಸೊರಬ ತಾಲ್ಲೂಕಿನ ಯಡಗೊಪ್ಪ ಗ್ರಾಮದ ಹತ್ತಿರ ದಂಡಾವತಿ ನದಿಗೆ ರೂ.38.50 ಕೋಟಿ ವೆಚ್ಚದಲ್ಲಿ ಬ್ಯಾರೇಜ್ ನಿರ್ಮಿಸಿ 15 ಕೆರೆಗಳನ್ನು ತುಂಬಿಸುವ ಯೋಜನೆ, ದಂಡಾವತಿ ಮತ್ತು ವರದಾ ನದಿಗಳಿಗೆ ಅಡ್ಡಲಾಗಿ ರೂ.54.70 ಕೋಟಿ ವೆಚ್ಚದಲ್ಲಿ ಬ್ಯಾರೇಜ್ /ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ನಿರ್ಮಿಸುವ ಯೋಜನೆ, ಗುಡವಿ ಗ್ರಾಮದ ಹತ್ತಿರ ವರದಾ ನದಿಗೆ ಅಡ್ಡಲಾಗಿ ರೂ.75.60 ಕೋಟಿ ವೆಚ್ದದಲ್ಲಿ ಬ್ಯಾರೇಜ್ ನಿರ್ಮಿಸಿ 0.1017 ಟಿಎಂಸಿ ನೀರನ್ನೆತ್ತಿ 32 ಕೆರೆಗಳನ್ನು ತುಂಬಿಸುವ ಯೋಜನೆಗೆ ಅನುಮೋದನೆ ದೊರೆತಿದೆ.
ಭದ್ರಾವತಿ ತಾಲ್ಲೂಕಿನ ಗೋಣಿಬೀಡು ಗ್ರಾಮದ ಹತ್ತಿರ ರೂ.54 ಕೋಟಿ ಅಂದಾಜು ವೆಚ್ಚದಲ್ಲಿ ಭದ್ರಾನದಿಯಿಂದ 0.19 ಟಿಎಂಸಿ ನೀರನ್ನು ಕಂಬದಾಳ್ ಹೊಸೂರು ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಂಕರಘಟ್ಟ, ಹುಣಸೆಕಟ್ಟೆ, ಗೋಣಿಬೀಡು, ತಮ್ಮಡಿಹಳ್ಳಿ, ರಾಮಿನಕೊಪ್ಪ ಮತ್ತು ಸುತ್ತಮುತ್ತಲಿನ ಗ್ರಾಮಗಳ 2 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಭದ್ರಾವತಿ ಪಟ್ಟಣದ ಭದ್ರಾನದಿ ಎಡ ಮತ್ತು ಬಲದಂಡೆಯ ಪ್ರಹಾಹಪೀಡಿತ ಪ್ರದೇಶಗಳನ್ನು ರಕ್ಷಿಸಲು ರೂ.50 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಹಾಗೂ ರೂ.35 ಕೋಟಿ ವೆಚ್ಚದಲ್ಲಿ ಭದ್ರಾ ನದಿಗೆ ಅಡ್ಡಲಾಗಿ ರಸ್ತೆ ಸೇತುವೆ ನಿರ್ಮಾಣ ಮತ್ತು ಡೊಣಬಘಟ್ಟ, ಕಾಗೆಕೊಡುಮಗ್ಗೆ, ಹೊಳೆಹೊನ್ನೂರು ಗ್ರಾಮದ ಭದ್ರಾವತಿ ಮುಖ್ಯ ರಸ್ತೆ ನಡುವೆ ಸಂಪರ್ಕ ರಸ್ತೆ ಕಾಮಗಾರಿಗೆ ಅನುಮೋದನೆ ದೊರೆತಿದ್ದು ಇನ್ನು ಒಂದೂವರೆ ವರ್ಷದೊಳಗೆ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.

Madhu Bangarappa ಹಾಗೂ ಸೊರಬ ತಾಲ್ಲೂಕಿನಲ್ಲಿ ರೂ.561 ಕೋಟಿ ಮೊತ್ತದಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಅಂದಾಜು ಪಟ್ಟಿ ಸಿದ್ದಪಡಿಸಿದ್ದು ಮುಂದಿನ ದಿನಗಳಲ್ಲಿ ಅನುಮೋದನೆ ಪಡೆಯಲಾಗುವುದು ಎಂದರು.
ಚಂದ್ರಗುತ್ತಿ ಪ್ರಾಧಿಕಾರ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ದೇವಸ್ಥಾನದ ಅಭಿವೃದ್ದಿಗಾಗಿ 20 ಎಕರೆ ಜಮೀನು ಹಸ್ತಾಂತರ ಗೊಂಡಿರುತ್ತದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಜಿಲ್ಲಾ ಕ್ರೀಡಾ ಅಭಿವೃದ್ದಿಗೆ ವಿವಿಧ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿಗಳು ಹಾಗೂ ವಿವಿಧ ಪ್ರತಿನಿಧಿಗಳೊಂದಿಗೆ ಜೂ.27 ರಂದು ಸಭೆ ನಡೆಸಿ ಸೂಕ್ತ ಸಲಹೆಸೂಚನೆಗಳನ್ನು ನೀಡಿದ್ದೇನೆ. ನೆಹರು ಕ್ರೀಡಾಂಗಣದ ಸಮಗ್ರ ಅಭಿವೃದ್ದಿಗೆ ರೂ.16.25 ಕೋಟಿ ಸೇರಿದಂತೆ ಒಟ್ಟಾರೆ ಜಿಲ್ಲೆಯ ಸಮಗ್ರ ಕ್ರೀಡಾಭಿವೃದ್ದಿಗೆ 32.25 ಕೋಟಿಗಳ ಪ್ರಸ್ತಾವನೆಯನ್ನು ಪಡೆಯಲಾಗಿದೆ ಎಂದರು.