Wednesday, February 25, 2026
Wednesday, February 25, 2026
Home Blog Page 259

Basavaraj Horatti ವಿಧಾನ ಪರಷತ್ ಸದಸ್ಯರಾಗಿ 45 ವರ್ಷ ಪೂರೈಸಿದ ಹಿರಿಯ ಬಸವರಾಜ ಹೊರಟ್ಟಿ ಅವರಿಗೆ ಶಿಕ್ಷಕ ಸಮುದಾಯದಿಂದ ಅಭಿನಂದನೆ

0

Basavaraj Horatti ಎಂಟು ಬಾರಿ ನಿರಂತರವಾಗಿ ಶಿಕ್ಷಕರ ಮತಕ್ಷೇತ್ರದಿಂದ ಆಯ್ಕೆಯಾಗುತ್ತಾ ವಿಶ್ವದಾಖಲೆ ನಿರ್ಮಿಸಿರುವ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ತಿನ ಸದಸ್ಯರಾಗಿ ಯಶಸ್ವಿ 45 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಇಂದು ನಾಡಿನಲ್ಲೆಡೆಯ ಜನರು ಹೊರಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಿ ಅಭಿನಂದನೆಗಳನ್ನು ಸಲ್ಲಿಸಿದರು.

1980 ಜೂನ್ 30 ರಂದು ಪ್ರಪ್ರಥಮ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿ ತಮ್ಮ ಸಂಸದೀಯ ಪಯಣವನ್ನು ಆರಂಭಿಸಿದ ಬಸವರಾಜ ಹೊರಟ್ಟಿ ಅವರು ತಮ್ಮ ಆಯುಷ್ಯದ ಅರ್ಧ ಶತಮಾನವನ್ನೇ ವಿಧಾನ ಪರಿಷತ್‌ನ ಸದಸ್ಯರಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಕರ ಹಾಗೂ ಸಾರ್ವಜನಿಕರ ಗಟ್ಟಿ ಧ್ವನಿಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.

Basavaraj Horatti ಈ ಸಂದರ್ಭದಲ್ಲಿ ಬೆಳಗಾವಿ, ಬಾಗಲಕೋಟೆಯಿಂದ ಆಗಮಿಸಿದ ರೈತರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಶಿಕ್ಷಕರು, ಶಿಕ್ಷಕರ ಸಂಘದ ಪ್ರತಿನಿಧಿಗಳು ಬಸವರಾಜ ಹೊರಟ್ಟಿ ಅವರನ್ನು ಗೌರವಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಲವರು ಬಸವರಾಜ ಹೊರಟ್ಟಿ ಅವರು ಶಿಕ್ಷಕರ ಸಮುದಾಯದ ಆಸ್ತಿಯಾಗಿದ್ದು, ಸದಾಕಾಲ ಶಿಕ್ಷಕರ ಹಾಗೂ ಸಾರ್ವಜನಿಕರ ದೂರು ದುಮ್ಮಾನಗಳಿಗೆ ಕಿವಿಯಾಗಿ ಕೆಲಸ ಮಾಡುತ್ತಿರುವ ಕ್ರೀಯಾಶೀಲ ವ್ಯಕ್ತಿಯಾಗಿದ್ದಾರೆ. ಶಿಕ್ಷಕರೊಬ್ಬರು ಶಾಸಕರಾಗಿ, 5 ಖಾತೆಗಳ ಸಚಿವರಾಗಿ ಹಾಗೂ 3ನೇ ಬಾರಿಗೆ ಸಭಾಪತಿಯಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಹೊಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಕರ್ನಾಟಕ ರಾಜ್ಯ ಮಹಿಳಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಹತ್ತು ಹಲವು ಸಂಘಟನೆಗಳ ಪದಾಧಿಕಾರಿಗಳು ಬಸವರಾಜ ಹೊರಟ್ಟಿ ಅವರನ್ನು ಗೌರವದಿಂದ ಸತ್ಕರಿಸಿ 5 ದಶಕಗಳ ಕಾಲ ಸಾರ್ವಜನಿಕ ಬದುಕಿನಲ್ಲಿ ಒಂದೇ ಒಂದು ಕಳಂಕವನ್ನು ಹೊಂದಿರದ ನಿಷ್ಕಳಂಕ ವ್ಯಕ್ತಿಯಾಗಿದ್ದಾರೆ. ತಮ್ಮ ನೇರ ನಡೆ-ನುಡಿಯ ಮೂಲಕ ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಠ ಛಾಪನ್ನು ಮೂಡಿಸಿರುವ ಅಪರೂಪದ ಜನಸೇವಕರಾಗಿರುವ ಬಸವರಾಜ ಹೊರಟ್ಟಿ ಅವರು 1980 ರಿಂದ ಇಂದಿನವರೆಗೆ ಸತತವಾಗಿ 45 ವರ್ಷಗಳ ಕಾಲ ತಮ್ಮದೇ ಆದ ಸಾರ್ಥಕ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಧೀಮಂತ ನಾಯಕ ಎಂದು ಬಣ್ಣಿಸಿದರು.

Tunga River ತುಂಗಾ ನದಿಗೆ ಬಾಗಿನ,ನದಿಪೂಜಾ ಪರಂಪರೆಯ ಸಂಸ್ಕೃತಿಯ ಪ್ರತೀಕ- ಶಾಸಕ ಚೆನ್ನಿ

0

Tunga River “ಮಲೆನಾಡಿನ ಹೃದಯ ನಾಡಿ – ತುಂಗಾ ನದಿ” ಸಕಲ ದೇವಾನುದೇವತೆಗಳ ಅನುಗ್ರಹದಿಂದ ಜಿಲ್ಲೆ ಹಾಗೂ ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಶಿವಮೊಗ್ಗದ ಜೀವನಾಡಿಯಾದ ತಾಯಿ ತುಂಗಾ ಮಾತೆಯು ಮೈದುಂಬಿ ಹರಿಯುತ್ತಿರುವ ಈ ಪವಿತ್ರ ಸಂದರ್ಭದಲ್ಲಿ, ನದಿಯ ಪರಿಪೂರ್ಣತೆಯ ಗೌರವಾರ್ಥವಾಗಿ ಹಾಗೂ ಪ್ರಕೃತಿ ಪ್ರತಿಯೊಂದು ಕಣಕ್ಕೂ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ, ಬಿಜೆಪಿ ಶಿವಮೊಗ್ಗ ನಗರ ಸಮಿತಿಯಿಂದ ಕೋರ್ಪಲಯ್ಯ ಛತ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ತುಂಗಾ ನದಿಗೆ ಬಾಗಿನ ಅರ್ಪಣೆ’ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಭಾಗವಹಿಸಿ, ಬಾಗಿನ ಅರ್ಪಣೆ ಮಾಡಿದರು.

ತುಂಗಾ ನದಿ ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನದ ಪ್ರಮುಖ ಮೂಲವಾಗಿದ್ದು, ತುಂಗೆಗೆ ಬಾಗಿನ ಅರ್ಪಿಸುವ ಸಂಸ್ಕೃತಿ ನಮ್ಮ ನಾಡಿನ ನದೀಪೂಜಾ ಪರಂಪರೆಯ ಪ್ರತಿಬಿಂಬವಾಗಿದೆ.

Tunga River ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಹಾಗೂ ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಜಿಲ್ಲೆ ಹಾಗೂ ನಗರದ ಸಮಿತಿಯ ಪ್ರಮುಖರು, ವಿವಿಧ ಮೋರ್ಚಾಗಳ ಸದಸ್ಯರು, ಧಾರ್ಮಿಕ ಮುಖಂಡರು, ನಮ್ಮ ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

Madhu Bangarappa ಹಸಿರುಮಕ್ಕಿ ಸೇತುವೆ ನಿರ್ಮಾಣದಿಂದ ಈ ಭಾಗದ ಜನರ ಕನಸು ನನಸಾಗಿದೆ- ಮಧು ಬಂಗಾರಪ್ಪ

0

Madhu Bangarappa ಹಸಿರುಮಕ್ಕಿ ಸೇತುವೆ ನಿರ್ಮಾಣದಿಂದಾಗಿ ಈ ಭಾಗದ ಜನರ ಕನಸು ನನಸಾಗುತ್ತಿದೆ. ಶೇ.೮೦ ರಷ್ಟು ಕೆಲಸ ಆಗಿದ್ದು ಮೇ ತಿಂಗಳ ವೇಳೆಗೆ ಸೇತುವೆ ಲೋಕಾರ್ಪಣೆಗೊಳ್ಳಲಿದೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ತಿಳಿಸಿದರು.
ಶುಕ್ರವಾರ ಸಾಗರ ತಾಲ್ಲೂಕಿನ ಹಸುರುಮಕ್ಕಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಣೆ ಮಾಡಿ ಅವರು ಮಾತನಾಡಿದರು.
ಸಾಗರ ತಾಲ್ಲೂಕಿನ ಹಸಿರುಮಕ್ಕಿಯಲ್ಲಿ
ರಾಜ್ಯ ಸರ್ಕಾರದಿಂದ ರೂ. 125.67 ಕೋಟಿ ಮೊತ್ತದಲ್ಲಿ‌ ಹಸಿರುಮಕ್ಕಿ‌ ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. 1.115 ಕಿ ಲೋ ಮೀಟರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಸಿರುಮಕ್ಕಿ ಕಡೆ 345 ಮೀ ,ಕೊಲ್ಲೂರು ಕಡೆ 165 ಮೀ ಕಾಮಗಾರಿ ನಡೆಯುತ್ತಿದೆ. ಸೇತುವೆ ಅಗಲ ೮.೫೦ ಮೀ(ದ್ವಿಪಥ ಸಂಚಾರ), ೩೪ ತಳಪಾಯಗಳಿವೆ.
ಈಗ ಶೇ. 80 ಕಾಮಗಾರಿ ಪೂರ್ಣಗೊಂಡಿದೆ.
ರೂ. 25 ಕೋಟಿ ಹಣ ಬಿಡುಗಡೆ ಬಾಕಿ ಇದೆ.
ನಮ್ಮ ಸರ್ಕಾರ ಬಂದ ಮೇಲೆ ಕ್ಷಿಪ್ರಗತಿಯಲ್ಲಿ, ಗುಣಮಟ್ಟದ ಕಾಮಗಾರಿ ನಡೆಯುತ್ತಿದ್ದು, ಹಣದ ಕೊರತೆ ಇಲ್ಲ. ಆದಷ್ಟು ಬೇಗ ಸಾರ್ವಜನಿಕರ ಉಪಯೋಗಕ್ಕೆ ಬರಲಿದೆ.
Madhu Bangarappa ಕೆಲವು ಶರಾವತಿ ಸಂತ್ರಸ್ತರಿಂದ ತಮ್ಮ ಭಾಗದಲ್ಲಿ‌ ಸರ್ವೇ ಆಗಿಲ್ಲ, ತಮ್ಮ ಬ್ಲಾಕ್ ನ್ನು ಸರ್ವೇ ಯಲ್ಲಿ ಸೇರಿಸಿಲ್ಲವೆಂಬ ದೂರುಗಳಿವೆ. ನಾವು ಸಂತ್ರಸ್ತರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಲಿಕ್ಕೆ ಬಿಡುವುದಿಲ್ಲ. ನಿಮ್ಮ ಜೊತೆ ನಾವಿದ್ದೇವೆ. ಏನೇ ಸಮಸ್ಯೆಗಳಿದ್ದರೂ ಅಹವಾಲು ನೀಡಿ, ಸಮಸ್ಯೆಗಳನ್ನು‌ ಖಂಡಿತವಾಗಿ ಬಗೆಹರಿಸುತ್ತೇವೆ. ಆತಂಕಕ್ಕೆ ಒಳಗಾಗುವುದು ಬೇಡ ಎಂದು ಭರವಸೆ ನೀಡಿದರು.
ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಮಾತನಾಡಿ, ನೆನೆಗುದಿಗೆ ಬಿದ್ದಿದ್ದ ಈ ಸೇತುವೆ ಕಾಮಗಾರಿ ಬಗ್ಗೆ ಬೆಳಗಾಂ ಅಧಿವೇಶನದಲ್ಲಿ ಮಾತನಾಡಿ, ಕಾಮಗಾರಿ ಚುರುಕುಗೊಳಿಸಲು ಅನುದಾನಕ್ಕೆ ಕೋರಿಕೆ ಸಲ್ಲಿಸಿದ ಮೇರೆಗೆ ಸರ್ಕಾರ ಮೊದಲ ಹಂತದಲ್ಲಿ‌ ರೂ. 45 ಕೋಟಿ ಹಣ ಬಿಡುಗಡೆ ಮಾಡಿದ್ದು,
ಪ್ರಸ್ತುತ ಸರ್ಕಾರದ ಅವಧಿಯಲ್ಲಿ‌ ಕ್ಷಿಪ್ರಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನು
26 ಮೀಟರ್ ರಸ್ತೆ ಮಾತ್ರ ಬಾಕಿ ಇದೆ. ಹಸಿರುಮಕ್ಕಿ ಸೇತುವೆ ನಿರ್ಮಾಣದಿಂದ ಮದ್ಯ ಕರ್ನಾಟಕ (ದಕ್ಷಿಣ ಒಳನಾಡಿಗೆ), ಉತ್ತರ ಕರ್ನಾಟಕದಿಂದ ಕರಾವಳಿ ಭಾಗಕ್ಕೆ ಸಂಪರ್ಕ ಸಾಧ್ಯ ವಾಗಲಿದೆ. ಮಂಗಳೂರು ಪಟ್ಟಣ, ಮಂಗಳೂರು ಬಂದರು, ಕುಂದಾಪುರ ಪಟ್ಟಣಗಳಿಗೆ ಸಹ ಸಮೀಪವಾಗಲಿದೆ. ಸಾಗರ ತಾಲ್ಲೂಕಿನಿಂದ ಕೊಲ್ಲೂರು, ಉಡುಪಿ ಮುಂತಾದ ಯಾತ್ರಾಸ್ಥಳಗಳಿಗೆ ತೆರಳುವ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಸ್ಥಳೀಯ ಶಾಲಾ ಮಕ್ಕಳು ಶಾಲೆಗೆ ಹೋಗಲು ಹಾಗೂ ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ ಎಂದರು.
ಈ ವೇಳೆ ಸ್ಥಳೀಯ ಜನ ಪ್ರತಿನಿಧಿಗಳು, ಮುಖಂಡರು, ಅಧಿಕಾರಿಗಳು ಹಾಜರಿದ್ದರು.
ಸಿಗಂಧೂರು ಸೇತುವೆ ಕಾಮಗಾರಿ ವೀಕ್ಷಣೆ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಸಿಗಂಧೂರು ಸೇತುವೆ ನಿರ್ಮಾಣ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಿದರು.

VSK Karnataka ಕಾರಣಗಿರಿ ಕಲಾದರ್ಶನ ಪತ್ರಿಕೆ ವಾರ್ಷಿಕೋತ್ಸವ. ಹಿರಿಯ ಪತ್ರಕರ್ತರಿಗೆ ನಾರದ ಪುರಸ್ಕಾರ ಪ್ರದಾನ

0

VSK Karnataka ದಿನಾಂಕ 2-7-25 ರಂದು ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆಯ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ನಾರದ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಆರು ಹಿರಿಯ ಪತ್ರಕರ್ತರಿಗೆ ನಾರದ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿ ವರ್ಷ ಈ ಕಾರ್ಯಕ್ರಮ ನಡೆಸಲಾಗುವದು. ವಿಶ್ವ ಸಂವಾದ ಕೇಂದ್ರದ ಪ್ರಮುಖರಾದ ಶ್ರೀ ರಾಜೇಶ್ ಪದ್ಮಾರ್ ಮುಖ್ಯ ಅಭ್ಯಾಗತರಾಗಿ ತುಂಬಾ ಚನ್ನಾಗಿ ಮಾತನಾಡಿದರು. ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಹಾದಿಗಲ್ಲು ಲಕ್ಷ್ಮೀ ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಕಿನ್ನಿಗೋಳಿಯ ಅನಂತ ಪ್ರಕಾಶ ಪತ್ರಿಕೆ ಸಂಪಾದಕ ಶ್ರೀ ಸಚ್ಚಿದಾನಂದ ಉಡುಪ, ಟೈಮ್ಸ್ ಆಫ್ ಇಂಡಿಯಾ, ಪಿಟಿಐ ನ ಹಿರಿಯ ವರದಿಗಾರರಾಗಿದ್ದ ಶಿವಮೊಗ್ಗದ ಶ್ರೀ ಸಿ. ವಿ. ರಾಘವೇಂದ್ರ ರಾವ್, ಬೆಂಗಳೂರಿನ ಪತ್ರಕರ್ತ ಶ್ರೀ ಹಿರಿಯೂರು ರಾಘವೇಂದ್ರ, ಕಟೀಲಿನ ಯಕ್ಷಪ್ರಭಾ ಪತ್ರಿಕೆ ಉಪಸಂಪಾದಕ, ಯಕ್ಷಗಾನ ಕಲಾವಿದ, ಶ್ರೀ ಶ್ರುತಕೀರ್ತಿರಾಜ, ಹೊಸನಗರದ ಹಿರಿಯ ಪತ್ರಕರ್ತರುಗಳಾದ ಶ್ರೀ ರಾಮಕೃಷ್ಣ ಮೂರ್ತಿ, ಶ್ರೀ ಸದಾನಂದ ಇವರುಗಳಿಗೆ ನಾರದ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಲಾಭಾರತಿ ತಂಡದ ಪ್ರಾರ್ಥನೆ, VSK Karnataka ರಾಷ್ಟ್ರೋತ್ಥಾನಬಳಗದ ಅಧ್ಯಕ್ಷ ಶ್ರೀ ನಳಿನಚಂದ್ರರ ಸ್ವಾಗತ, ಗ್ರಾಮಭಾರತಿ ಟ್ರಸ್ಟ್ ಕಾರಣಗಿರಿ ಯ ಅಧ್ಯಕ್ಷರು ಹಾಗೂ ಕಾರಣಗಿರಿ ಕಲಾದರ್ಶನ ಪತ್ರಿಕೆ ಸಂಪಾದಕ ಶ್ರೀ ಹನಿಯರವಿಯವರ ಪ್ರಾಸ್ತಾವಿಕ ನುಡಿ, ಕೊನೆಯಲ್ಲಿ ಕಲಾದರ್ಶನ ಬಳಗದ ವಿನಾಯಕ ಪ್ರಭು ಅವರಿಂದ ವಂದನಾರ್ಪಣೆ ಹಾಗೂ ಉಪನ್ಯಾಸಕರು, ಲೇಖಕರೂ, ಕಲಾದರ್ಶನ ಬಳಗದ ಶ್ರೀಮತಿ ವಸುಧಾ ಚೖತನ್ಯರ ಉತ್ತಮ ನಿರೂಪಣೆಯ ಅಚ್ಚುಕಟ್ಟಾದ ಕಾರ್ಯಕ್ರಮ. ಗ್ರಾಮಭಾರತಿ ಟ್ರಸ್ಟಿನ ಆಶ್ರಯದಲ್ಲಿ ಅನೇಕ ಲೇಖಕ, ಚಿಂತಕ, ಗಣ್ಯಮಾನ್ಯರ ಸಮ್ಮುಖದಲ್ಲಿ ಯಶಸ್ವಿ ಕಾರ್ಯಕ್ರಮ ನಡೆಯಿತು. ಪತ್ರಿಕೆಯ ಪೋಷಕರು, ಚಂದಾದಾರರು, ಓದುಗರು ಪಾಲ್ಗೊಂಡು ನಮ್ಮ ಮನಸ್ಸಂತೋಷಪಡಿಸಿದರು.

JCI SHIMOGA MALNAD ಶಿವಮೊಗ್ಗ ಜೆಸಿಐ ಘಟಕ ಸದಸ್ಯರಿಂದ ತುಂಬಿದ ತುಂಗೆಗೆ ಬಾಗಿನ ಅರ್ಪಣೆ

0

JCI SHIMOGA MALNAD ತುಂಬಿ ಹರಿಯುತ್ತಿರುವ ಮಲೆನಾಡಿನ ಜೀವನದಿ ತುಂಗೆಗೆ ಶಿವಮೊಗ್ಗ ಜೆ ಸಿ ಐ ಭಾವನದಿಂದ ಬಾಗಿನ ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಜೀವನದಿಯಾದ ತುಂಗಾ ನದಿಯು ರಾಜ್ಯದ ಕೃಷಿ, ಕುಡಿಯುವ ನೀರು ಮತ್ತು ಪರಿಸರ ಸಮತೋಲನದ ಮತ್ತು ಜಾನುವಾರುಗಳಿಗೆ ಪ್ರಮುಖ ಮೂಲವಾಗಿದ್ದು,ಸಕಲ ದೇವಾನುದೇವತೆಗಳ ಅನುಗ್ರಹದಿಂದ ಮಳೆಗೆ ಮೈದುಂಬಿ ಹರಿಯುತ್ತಿರುವ ತುಂಗಿಗೆ ಇಂದು ಬೆಳಗ್ಗೆ ನಗರದ ಕೋರ್ಪಲ್ಲಯ್ಯನ ಛತ್ರದ ತುಂಗಾ ಮಂಟಪದಲ್ಲಿ ಜೆಸಿಐ ಶಿವಮೊಗ್ಗ ಭಾವನದಿಂದ ಅಧ್ಯಕ್ಷರಾದ ಜೆಸಿ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು ಈ JCI SHIMOGA MALNAD ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಜೆ ಸಿ ಚೈತ್ರ ಪಿ ಸಜ್ಜನ ಜೆ ಸಿ ಸುರೇಖಾ ಮುರಳಿಧರ್ ಜೆಸಿ ಪುಷ್ಪ ಶೆಟ್ಟಿ ,ಜೆಸಿ ಮಾಲರಾಮಪ್ಪ ,ಜೆಸಿ ಲಲಿತ ಗುರುಮೂರ್ತಿ, ಜೆಸಿ ಕರಿಬಸಮ್ಮ, ಜೆಸಿ ವಂದನಾ ದಿನೇಶ್ , ಜೆಸಿ ಪೂರ್ಣಿಮಾ ಸುನಿಲ್ ಜೆಸಿ ಸುಶೀಲಾ ಷಣ್ಮುಗಂ ಜೆಸಿ ಮಂಜುಳಾರವಿ ಜೆಸಿ ಯಶೋದಾ ನಾಗರಾಜ್ ಜೆ ಸಿ ನಿರೀಕ್ಷಾ ರಾಮಚಂದ್ರ ಜೆಜೆಸಿ ಜನ್ಯ ರಂಗನಾಥ್ ಜೊತೆಗೋಡಿದ್ದರು

Karnataka State Powerlifting Association ಪವರ್ ಲಿಫ್ಟಿಂಗ್ ಸ್ಪರ್ಧೆ, ಚಾಂಪಿಯನ್ ಶಿಪ್ ಪಡೆದ ಶಿವಮೊಗ್ಗದ ಅಪ್ಪ- ಮಗಳು

0

Karnataka State Powerlifting Association ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್‌ನಿಂದ ಬೆಂಗಳೂರಿನಲ್ಲಿ ನಡೆಸಿದ ಎಪಿಎಲ್ ಚಾಂಪಿಯನ್ ಶಿಪ್ ಸ್ಪರ್ಧೆಯ 93ಕೆ.ಜಿ. ವಿಭಾಗದಲ್ಲಿ ಶಿವಮೊಗ್ಗ ನಗರದ ಲಕ್ಷ್ಮೀ ಗೆಲಾಕ್ಸಿಯಲ್ಲಿರುವ ಫಿಟ್ ಕೇರ್‌ನ ಜಗದೀಶ್ ಜಿ.ಸಿ. ಪ್ರಥಮ ಸ್ಥಾನ ಮತ್ತು 60ರಿಂದ 70ಕೆ.ಜಿ. ವಿಭಾಗದಲ್ಲಿ ನಯನ ಜೆ. ಅವರು ಪ್ರಥಮ ಸ್ಥಾನದೊಂದಿಗೆ ಪದಕ ಪಡೆದು ಛಾಂಪಿಯನ್ ಆಗಿದ್ದಾರೆ.

ಶಿವಮೊಗ್ಗದಲ್ಲಿ ಕಳೆದ 30ವರ್ಷಗಳಿಂದ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪವರ್ ಲಿಫ್ಟಿಂಗ್‌ನಲ್ಲಿ 1ಪದಕ, ರಾಷ್ಟ್ರ ಮಟ್ಟದಲ್ಲಿ 12ಪದಕ ರಾಜ್ಯಮಟ್ಟದಲ್ಲಿ 25ಪದಕ ಪಡೆದು ಸಾಧನೆ ಮಾಡಿರುವ ಜಗದೀಶ್ ಅವರು, ನಗರದಲ್ಲಿ ಗೂಡ್ಸ್ ವಾಹನ ಚಾಲಕರಾಗಿದ್ದಾರೆ. ಸಾಧನೆಗೆ ಗುರಿ ಮುಖ್ಯ, ಯಾವ ಕೆಲಸವಾದರೇನು ಗುರಿ ಸಾಧನೆಗೆ ಶ್ರದ್ಧೇ ಮತ್ತು ನಿಷ್ಠೆ ಇರಬೇಕೆಂದು ಅವರು ಹೇಳಿದ್ದಾರೆ.

Karnataka State Powerlifting Association ವಿಶೇಷವೆಂದರೆ ಶಿವಮೊಗ್ಗ ಜಿಲ್ಲೆಗೆ ಹೆಮ್ಮೆ ತಂದಿರುವ ಛಾಂಪಿಯನ್ ಶಿಪ್ ಪಡೆದ ನಯನ ಜೆ. ಅವರು. ಚಾಂಪಿಯನ್ ಜಗದೀಶ್ ಮತ್ತು ಲಕ್ಷ್ಮೀ ದಂಪತಿಗಳ ಪುತ್ರಿಯಾಗಿದ್ದಾರೆ.

Friends Centre ಸ್ತನ ಕ್ಯಾನ್ಸರ್ ಗೆ ಬದಲಾಗಿರುವ ಅನಿಯಮಿತ ಜೀವನ ಶೈಲಿಯೂ ಪ್ರಮುಖ ಕಾರಣ- ಡಾ.ಸ್ವಾತಿ

0

Friends Centre ಭಾರತದಲ್ಲಿ ಸ್ತನ ಕ್ಯಾನ್ಸರ್ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿ ರೂಪುಗೊಂಡಿದೆ. ಪ್ರಸ್ತುತ ಭಾರತೀಯ ಮಹಿಳೆಯರಲ್ಲಿ ಅತಿಯಾದ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದೆ ಎಂದು ಕ್ಯಾನ್ಸರ್ ತಜ್ಞೆ ಡಾ. ಸ್ವಾತಿ ಹೇಳಿದರು.
ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗ ಹಾಗೂ ಫ್ರೆಂಡ್ ಸೆಂಟರ್, ನೇತ್ರ ಹಾಗೂ ರಕ್ತ ಭಂಡಾರದ ವತಿಯಿಂದ ಆಯೋಜಿಸಿದ್ದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ಸಾವಿರಾರು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ನಗರದ ಪ್ರದೇಶಗಳಲ್ಲಿ 29 ಮಹಿಳೆಯರಲ್ಲಿ ಒಬ್ಬರಿಗೆ ಸ್ತನ ಕ್ಯಾನ್ಸರ್ ಉಂಟಾಗುತ್ತದೆ ಎಂಬ ಅಂದಾಜಿದೆ ಎಂದು ತಿಳಿಸಿದರು.
40 ವರ್ಷ ಮೇಲ್ಪಟ್ಟವರು, ಕುಟುಂಬದಲ್ಲೇ ಇತರರಿಗೆ ಕಾನ್ಸರ್ ಇರುವುದು, ಮುಂಚಿತ ಋತುಸ್ರಾವ ಪ್ರಾರಂಭ, ತಡವಾಗಿ ಗರ್ಭಧಾರಣೆ ಅಥವಾ ಗರ್ಭಧಾರಣೆಯಿಲ್ಲದಿರುವುದು, ತಾಯಿ ಹಾಲು ನೀಡದಿರುವುದು, ಹಾರ್ಮೋನಲ್ ಔಷಧಿ ಸೇವನೆ, ಹೆಚ್ಚು ಕೊಬ್ಬು ತಿನ್ನುವುದು ಮತ್ತು ಅನಿಯಮಿತ ಜೀವನಶೈಲಿ ಕ್ಯಾನ್ಸರ್‌ಗೆ ಪ್ರಮುಖ ಕಾರಣವಾಗಿವೆ ಎಂದು ಹೇಳಿದರು.
Friends Centre ಸ್ತನ ಕ್ಯಾನ್ಸರ್ ಅನ್ನು ತಡವಾಗಿ ಪತ್ತೆಹಚ್ಚಿದರೆ ಚಿಕಿತ್ಸೆ ಕಠಿಣವಾಗಬಹುದು. ಆದ್ದರಿಂದ ಪ್ರತಿ ಮಹಿಳೆ ತಿಂಗಳಲ್ಲಿ ಒಮ್ಮೆ ಸ್ವಯಂ ಸ್ತನ ತಪಾಸಣೆ ಮಾಡುವುದು ಬಹುಮುಖ್ಯ. ಗಡ್ಡೆ ಅಥವಾ ಬದಲಾವಣೆಗಳ ಪತ್ತೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಸಮಯಕ್ಕೆ ಮುಂಚಿತವಾಗಿ ಪತ್ತೆ ಹಚ್ಚಿದರೆ ಚಿಕಿತ್ಸೆ ಫಲಕಾರಿಯಾಗಬಹುದು ಮತ್ತು ಜೀವಿತಾವಧಿ ಹೆಚ್ಚಬಹುದು ಎಂದರು.
ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷೆ ಸ್ವಪ್ನ ಬದ್ರಿನಾಥ್, ಕಾರ್ಯದರ್ಶಿ ಸ್ಮಿತಾ ನವೀನ್, ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್, ನೇತ್ರ ಭಂಡಾರದ ಅಧ್ಯಕ್ಷ ವಿ.ನಾಗರಾಜ್, ಕಾರ್ಯದರ್ಶಿ ಜಿ.ವಿಜಯಕುಮಾರ್, ಭಾಗ್ಯವತಿ, ಡಾ. ಮನೀಷಾ, ಡಾ. ಸುಷ್ಮಿತಾ, ಡಾ. ವಿದ್ಯಾಶ್ರೀ, ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಸುನಿತಾ, ವೀಣಾ, ಸುಷ್ಮಾ, ಭಾಗ್ಯ ಭಟ್, ಭಾಗ್ಯ ವಿಜಯೇಂದ್ರ, ಸಂಧ್ಯಾ, ಬರ್ಕ ಮುಲಾನಿ, ಶ್ರೀನಿವಾಸ್ ಹಾಗೂ ಫ್ರೆಂಡ್ ಸೆಂಟರ್ ಸದಸ್ಯರು ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.

Shakhahaari Film “ಜನಮೆಚ್ಚಿದ ಚಿತ್ರ” ವಾಗಿ ” ಶಾಖಾಹಾರಿ” ಚಿತ್ರಕ್ಕೆ & ಚಿತ್ರ ತಂಡಕ್ಕೆ ಪ್ರತಿಷ್ಠಿತ ಪ್ರಜಾವಾಣಿ ಸಿನಿ ಸಮ್ಮಾನ್ ಟ್ರೋಫಿ

0

Shakhahaari Film ಪ್ರಜಾವಾಣಿ ಸಿನಿ ಸಮ್ಮಾನ ಇದು ಕನ್ನಡ ಚಲನಚಿತ್ರೋದ್ಯಮದಲ್ಲಿನ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ, ಕನ್ನಡದ ಪ್ರಮುಖ ದಿನಪತ್ರಿಕೆಯಾದ ಪ್ರಜಾವಾಣಿ ನೀಡುವ ವಾರ್ಷಿಕ ಪ್ರಶಸ್ತಿಯಾಗಿದೆ. ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸುವ ಮತ್ತು ಕಲಾವಿದರು ಹಾಗೂ ತಂತ್ರಜ್ಞರ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
2025ನೇ ಸಾಲಿನ ಪ್ರಶಸ್ತಿ ಪ್ರದಾನ ನಡೆದಿದ್ದು, ಜನ ಮೆಚ್ಚಿದ ಚಲನಚಿತ್ರ ಪ್ರಶಸ್ತಿಯು ಶಾಖಾಹಾರಿ ಗೆ ದೊರೆತಿದೆ. ಅತ್ಯುತ್ತಮ ಪೋಷಕ ನಟ: ಗೋಪಾಲಕೃಷ್ಣ ದೇಶಪಾಂಡೆ, ಹಾಗೂ ಶಾಖಾಹಾರಿ ಚಿತ್ರದ ನಟನೆಗಾಗಿ ಜನಮೆಚ್ಚಿದ ನಟ ಪ್ರಶಸ್ತಿ: ರಂಗಾಯಣ ರಘು ಅವರಿಗೆ ಲಭಿಸಿದೆ. ಒಟ್ಟು ಮೂರು ವಿಭಾಗಗಳಲ್ಲಿ ಶಾಖಾಹಾರಿ ಚಿತ್ರ ತಂಡವು ಪ್ರಜಾವಾಣಿ ಸಿನಿ ಸನ್ಮಾನ ಟ್ರೋಪಿಯನ್ನು ತನ್ನದಾಗಿಸಿಕೊಂಡಿದೆ.

Grama One Centre ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

0

Grama One Centre ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನಾಲೂರು (ಕೊಳಗಿ), ಶೆಡ್ಗಾರು, ಹಾರೊಗುಳಿಗೆ, ಸಾಗರ ತಾಲ್ಲೂಕಿನ ಎಸ್.ಎಸ್.ಬೋಗ್, ಹೀರೆನೆಲ್ಲೂರ, ಹೊಸನಗರ ತಾಲ್ಲೂಕಿನ ಯದೂರು, ತ್ರಿನಿವೆ, ರಿಪ್ಪನ್‌ಪೇಟೆಯಲ್ಲಿ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶವಿದ್ದು, ಆಸಕ್ತರು https://www.karnatakaone.gov.in/Public/GramOneFranchiseeTrems ವೆಬ್‌ಸೈಟ್ ಮೂಲಕ ಜು.15 ರೊಳಗಾಗಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Operation Sindoor “ಆಪರೇಷನ್ ಸಿಂಧೂರ” ದಲ್ಲಿ ಪಾಲ್ಗೊಂಡು ರಜೆಯಲ್ಲಿ ಬಂದ ದಂಪತಿಗಳಿಗೆ ತವರಲ್ಲಿ ಸನ್ಮಾನ

0

Operation Sindoor ಬಿ.ಆರ್. ಪ್ರಾಜೆಕ್ಟ್‌ನಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾಗವಹಿಸಿ ತವರಿಗೆ ರಜೆಯ ಮೇಲೆ ಮರಳಿದ್ದ ಅಲ್ಲಾಸಬ್ ಹಾಗೂ ಅವರ ಧರ್ಮಪತ್ನಿಗೆ ಆತ್ಮೀಯ ಸ್ನೇಹಿತರಿಂದ ಸನ್ಮಾನ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಉಮೇಶ್‌ಕುಮಾರ್ ಯು.ವಿ., ಮೋಹನ್ ಬಿ., ನಿರಂಜನ್ ಎಸ್., ಪ್ರಮೋದ್ ಎಲ್, ಚಂದ್ರಶೇಖರ್, ವಿಜಯಕುಮಾರ್, ವಸಂತಕುಮಾರ್, ಸುರೇಶ್, ರಮೇಶ್, ವೆಂಕಟೇಶ್ ಎಲ್, ಸುಭಾಷ್‌ಚಂದ್ರ, ಪ್ರದೀಪ್ ಎಂ.ಎನ್., ಈರಣ್ಣ., ಕುಮಾರ್., ನಾಗರಾಜ್., ಶಿವಾಜಿರಾವ್ ಮತ್ತು ಸುಧಾ ಇವರುಗಳು ಉಪಸ್ಥಿತರಿದ್ದರು.