National Doctor’s Day ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗಪೂರ್ವ ವತಿಯಿಂದ ಆಶ್ರಮವಾಸಿಗಳಿಗೆ ಆಗಾಗ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ತುಂಬಾ ಅಗತ್ಯವಾಗಿ ಬೇಕಾದ.ಬಿಪಿ ಯಂತ್ರ ಗ್ಲುಕೋಮೀಟರ್. ಮಧುಮೇಹ ತಪಾಸಣೆ ಮಾಡುವ ಸಾಧನ ತೂಕದ ಯಂತ್ರ ಹಾಗೂ ಆಶ್ರಮವಾಸಿಗಳಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದವೀಣಾ ಸುರೇಶ್ ಅವರು ಮಾತನಾಡುತ್ತಾ ತುರ್ತು ಪರಿಸ್ಥಿತಿಯಲ್ಲಿ ಕೂಡಲೇ ನಮ್ಮ ದೇಹ ಏರುಪೇರು ಆದಾಗ ತಕ್ಷಣ ಪರೀಕ್ಷೆ ಮಾಡಿಕೊಂಡು ಮುಂದಿನ ತಪಾಸಣೆಗೆ ಒಳಗಾಗಬಹುದು ಆದ್ದರಿಂದ ಇಂತಹ ಉಪಯುಕ್ತವಾದ ತಪಾಸಣಾ ಯಂತ್ರಗಳು ಎಲ್ಲಾ ಕುಟುಂಬಗಳನ್ನು ಇಟ್ಟುಕೊಳ್ಳಬೇಕು ಇದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು ಎಂದು ನುಡಿದರು. National Doctor’s Day ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್ ಇನ್ನರ್ ವೀಲ್ ಮಾಜಿ ಅಧ್ಯಕ್ಷರುಗಳಾದ ಬಿಂದು ವಿಜಯಕುಮಾರ್. ಜಯಂತಿ ವಾಲಿ . ಶ್ವೇತಾ ಆಶಿತ್. ರಾಜೇಶ್ವರಿ ಪ್ರತಾಪ್. ವೇದಾ ನಾಗರಾಜ್. ವಿನೋದಾ ದಳವೇ. ರೋಟರಿ ಮಾಜಿ ಸಹಾಯಕ ಗೌರ್ನರ್
ಜಿ ವಿಜಯಕುಮಾರ್. ಚೇತನ. ವಿಜಯಶ್ರೀ. ವಿಜಯ ಜವಳಿ ವಾಸಂತಿ. ಸವಿತಾ. ರೇಖಾ. ಉಮಾ. ಹಾಗೂ ಇನ್ನರ್ ವೀಲ್ ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು
National Doctor’s Day ಉಪಯುಕ್ತವಾದ ಆರೋಗ್ಯ ತಪಾಸಣೆ ಉಪಕರಣಗಳನ್ನ ಸಾಧ್ಯವಾದರೆ ಎಲ್ಲಾ ಕುಟುಂಬಗಳು ಇಟ್ಟುಕೊಳ್ಳಬೇಕು – ವೀಣಾ ಸುರೇಶ್
Ashakirana Public School ಕರಾಟೆ ಕಲಿತರೆ ರಕ್ಷಣೆ ಜೊತೆಗೆ ಆತ್ಮವಿಶ್ವಾಸದ ವೃದ್ಧಿ- ಸಿಯಾನ್ ಪಂಚಪ್ಪ
Ashakirana Public School ಕರಾಟೆ ಜನಪ್ರಿಯವಾದ ಸಮರ ಕಲೆಯಾಗಿದ್ದು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕರಾಟೆಯನ್ನು ಕಲಿಯುವುದರಿಂದ ಆತ್ಮರಕ್ಷಣೆಯೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರಾಟೆ ತರಬೇತುದಾರ ಸಿಯಾನ್ ಪಂಚಪ್ಪ ಹೇಳಿದರು.
ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಆಶಾಕಿರಣ ಪಬ್ಲಿಕ್ ಶಾಲೆಯಲ್ಲಿ ಸಾಗರ ಕರಾಟೆ ಇನ್ಸಿ÷್ಟಟ್ಯೂಟ್ ವತಿಯಿಂದ ಹಮ್ಮಿಕೊಂಡ ಕರಾಟೆ ತರಬೇತಿ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಕೇವಲ ಪಠ್ಯದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಮನೋಭಾವದಿಂದ ಪೋಷಕರು ಹೊರ ಬರಬೇಕು. ಶಿಕ್ಷಣ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಲಭಿಸುತ್ತದೆ. ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭೆಗಳಿದ್ದು, ಅವರಿಗೆ ತರಬೇತಿ ನೀಡಿದರೆ ಒಲಂಪಿಕ್‌ನAತಹ ಕ್ರೀಡೆಗಳಲ್ಲೂ ಭಾಗವಹಿಸುವರಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕರಾಟೆ ತರಬೇತಿಯು ಸ್ವರಕ್ಷಣೆಗೆ ಅತ್ಯಂತ ಸೂಕ್ತವಾಗಿದೆ ಎಂದರು.
Ashakirana Public School ಕಾರ್ಯಕ್ರಮ ಉದ್ಘಾಟಿಸಿದ ಆಶಾಕಿರಣ ಪಬ್ಲಿಕ್ ಶಾಲೆ ಮುಖ್ಯಸ್ಥ ಹಾಗೂ ಮಾಜಿ ಯೋಧ ಯು. ಸಂಗಪ್ಪ ಮಾತನಾಡಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ ಮಾತ್ರ ಕಲಿಕೆಯಲ್ಲಿ ಆಸಕ್ತಿ ಮೂಡಲು ಸಾಧ್ಯವಾಗುತ್ತದೆ. ಬಹುಉಪಕಾರಿಯಾದ ಕರಾಟೆ ಹಾಗೂ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕರಾಟೆ ತರಬೇತಿಯಿಂದ ಸಾಮರ್ಥ್ಯವು ಸಹ ಹೆಚ್ಚುತ್ತದೆ ಮತ್ತು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ ಎಂದರು.
ಪೋಷಕ ಪ್ರತಿನಿಧಿ ರಾಜು ಹಿರಿಯಾವಲಿ, ಸಂಸ್ಥೆಯ ಮುಖ್ಯಶಿಕ್ಷಕಿ ಯು. ಶೋಭಾ, ಸಹಶಿಕ್ಷಕರಾದ ಚಂದ್ರಶೇಖರ್, ಹೇಮಾವತಿ, ಸುಮಲತಾ, ಸುಪ್ರಜಾ, ಸಂಪ್ರತಾ, ರಾಧಿಕಾ, ಪ್ರವೀಣ್, ಅಮೃತಾ, ಕರಾಟೆ ತರಬೇತುದಾರರಾದ ಮಧುಕೇಶ್ವರ ಹಾಗೂ ಮಧು ಯು.ಎನ್. ಸೇರಿದಂತೆ ಇತರರಿದ್ದರು.
University Of Mysore ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜಿನ ಬಿವಿಎ ಪದವಿಗೆ ಆನ್ ಲೈನ್ ಅರ್ಜಿಗೆ ಅವಕಾಶ
University Of Mysore ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿದ್ಧಾರ್ಥನಗರ, ಮೈಸೂರು ಸಂಸ್ಥೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ದೃಶ್ಯಕಲೆಯಲ್ಲಿ ಪ್ರಥಮ ಬ್ಯಾಚುಲರ್ ಆರ್ಫ ವಿಜ್ಯುಯಲ್ ಆರ್ಟ್ಸ್ (ಬಿ.ವಿ.ಎ) ನಾಲ್ಕು ವರ್ಷದ ಎಂಟು ಸೆಮಿಸ್ಟರ್‌ಗಳ ಎಸ್.ಇ.ಪಿ.ಪದ್ಧತಿಯ ಪದವಿ ಪ್ರವೇಶಾತಿಗಾಗಿ ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾದ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
University Of Mysore ಜುಲೈ 07 ರಂದು ಬೆಳಗ್ಗೆ 11.00 ಕ್ಕೆ ಅರ್ಹತಾ ಪರೀಕ್ಷೆ ಹಾಗೂ ಮಧ್ಯಾಹ್ನ 2.00 ಕ್ಕೆ ವೈಯಕ್ತಿಕ ಸಂದರ್ಶನ ಇರುತ್ತದೆ.
ಈ ಪದವಿಯಲ್ಲಿ 3ನೇ ಸೆಮಿಸ್ಟರ್‌ನಿಂದ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅನ್ವಯಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕ ಪದವಿಯಾಗಿರುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://uucms.karnataka.gov.in ಅಥವಾ https://www.cavamysore.karnataka.gov.in ಹಾಗೂ ಕಾರ್ಯಾಲಯದ ಸಹಾಯವಾಣಿ 0821-2438931 ನ್ನು ಸಂಪರ್ಕಿಸುವಂತೆ ಕಾಲೇಜಿನ ಡೀನ್ ತಿಳಿಸಿದ್ದಾರೆ.
Karnataka State Bioenergy Development Board ಸರ್ಕಾರಕ್ಕೆ ಜೈವಿಕ ಅಭಿವೃದ್ಧಿ ಮಂಡಳಿಯಿಂದ ವಾರ್ಷಿಕ ವರದಿ ಸಲ್ಲಿಕೆ
Karnataka State Bioenergy Development Board ವಿಧಾನಸೌಧದ ಉಪ ಮುಖ್ಯಮಂತ್ರಿಯವರ ಕಾರ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸುಧೀಂದ್ರ ಅವರು ಒಂದು ವರ್ಷದ ಕಾರ್ಯಾವಧಿಯಲ್ಲಿ ಕೈಗೊಂಡ ಜೈವಿಕ ಅಭಿವೃದ್ಧಿ ಯೋಜನೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವರದಿ ಸಲ್ಲಿಸಿದರು.
ಈ ವೇಳೆ, ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
CM Siddharamaiah ಭೂ ಸ್ವಾಧೀನ ಪ್ರಕ್ರಿಯೆ ಕುರಿತು ಸೀಎಂ ಸಿದ್ಧರಾಮಯ್ಯ ಅವರಿಂದ ವಿಶೇಷ ಸಭೆ
CM Siddharamaiah ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷತೆಯಲ್ಲಿ ದೇವನಹಳ್ಳಿ, ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆ ವಿಷಯ ಕುರಿತು ಸಭೆ ನಡೆಯಿತು.
ಈ ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೊನ್ನಣ್ಣ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ರೈತ ಮುಖಂಡರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
Inner wheel Club of Shivamogga ಜುಲೈ 7, ಶಿವಮೊಗ್ಗ ಇನ್ನರ್ ವ್ಹೀಲ್ ಕ್ಲಬ್ ನ ಪದಾಧಿಕಾರಿಗಳ ಪದಗ್ರಹಣ
Inner wheel Club of Shivamogga ಇನ್ನರ್‌ವ್ಹೀಲ್ ಕ್ಲಬ್ ಆಫ್ ಶಿವಮೊಗ್ಗನ ನೂತನ ಅಧ್ಯಕ್ಷರಾಗಿ ಲತಾ ರಮೇಶ್ ಹಾಗೂ ಕಾರ್ಯದರ್ಶಿಯಾಗಿ ಶೃತಿ ರಾಕೇಶ್ ಆಯ್ಕೆಯಾಗಿದ್ದಾರೆ.
ಸವಳಂಗ ರಸ್ತೆಯಲ್ಲಿರುವ ನಗರದ ರೋಟರಿ ಯೂತ್ ಸೆಂಟರ್‌ನಲ್ಲಿ ಜುಲೈ 7ರಂದು ಬೆಳಗ್ಗೆ 10.30ಕ್ಕೆ ಇನ್ನರ್‌ವ್ಹೀಲ್ ಕ್ಲಬ್ ಆಫ್ ಶಿವಮೊಗ್ಗ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜನಶಿಕ್ಷಣ ಸಂಸ್ಥೆಯ ನಿರ್ದೇಶಕಿ ಎಸ್.ವೈ.ಅರುಣಾದೇವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇನ್ನರ್‌ವ್ಹೀಲ್ ಕ್ಲಬ್ ಆಫ್ ಶಿವಮೊಗ್ಗನ ನಿಕಟಪೂರ್ವ ಅಧ್ಯಕ್ಷೆ ಗಾಯತ್ರಿ ಸುಮತೀಂದ್ರ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಅನಿತಾ ಸೆಂಥಿಲ್ ವೇಲನ್ ಭಾಗವಹಿಸುವರು.
Health Center Holehonnur ಹೊಳೆಹೊನ್ನೂರಿನಲ್ಲಿ “ಆಶಾಕಿರಣ ದೃಷ್ಟಿ ಕೇಂದ್ರ”ಕ್ಕೆ ಚಾಲನೆ
Health Center Hole honnur ಆರೋಗ್ಯ ಕೇಂದ್ರ ಹೊಳೆ ಹೊನ್ನೂರಿನಲ್ಲಿ “ಆಶಾಕಿರಣ ದೃಷ್ಟಿ ಕೇಂದ್ರ” ಉದ್ಘಾಟನೆ ಕಾರ್ಯಕ್ರಮ ನೆರವೇರಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ದೇವಾನಂದ್ ಆಡಳಿತ ವೈದ್ಯಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಹೊಳೆ ಹೊನ್ನೂರು ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಇಮ್ರಾನ್ ಖಾನ್ ಆರೋಗ್ಯ ರಕ್ಷಾ ಸಮಿತಿ ಸಮಿತಿಯ ಸದಸ್ಯರು ಇವರು ನೆರವೇರಿಸಿದರು. ಆರೋಗ್ಯ ಕೇಂದ್ರದ ಕಚೇರಿ ಅಧೀಕ್ಷಕರಾದ ಶ್ರೀ ಪ್ರಶಾಂತ್, ಶ್ರೀ ನಿರಂಜನ್ ಕುಮಾರ್ ನೇತ್ರಾಧಿಕಾರಿ ಇವರು ಉಪಸ್ಥಿತರಿದ್ದರು.
Health Center Holehonnur ಕಾರ್ಯಕ್ರಮದಲ್ಲಿ ಡಾ. ದೇವಾನಂದ್ ಇವರು ಆಶಾಕಿರಣ ದೃಷ್ಟಿ ಕೇಂದ್ರದವು “ರಾಜ್ಯದ ಪ್ರತಿಯೊಬ್ಬರಿಗೂ ಕಣ್ಣಿನ ಆರೈಕೆ” ನೀಡಲು ಶುಭಾರಂಭ ವಾಗಿರುವ ಕಾರ್ಯಕ್ರಮವಾಗಿದ್ದು, ಕಣ್ಣಿನ ಸಮಸ್ಯೆ ಇರುವವರು ಸಮುದಾಯ ಆರೋಗ್ಯ ಕೇಂದ್ರ ಕೇಂದ್ರ ದಲ್ಲಿರುವ ಅಶಾ ಕಿರಣ ದೃಷ್ಟಿ ಕೇಂದ್ರದಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕಾಗಿ ತಿಳಿಸಿದರು, ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Rotary Club Shimoga ರೋಟರಿ ಕ್ಲಬ್ ವಿಶ್ವಾದಾದ್ಯಂತ ಸಮಾಜಮುಖಿ ಕಾರ್ಯ ಮಾಡುತ್ತಿದೆ- ಅವಿನಾಶ್ ಪೋತದಾರ್
Rotary Club Shimoga ರೋಟರಿ ಅಂತರಾಷ್ಟ್ರೀಯ ಮಟ್ಟದ ಸೇವಾ ಸಂಸ್ಥೆಯಾಗಿದ್ದು, ವಿಶ್ವಾದ್ಯಂತ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಜಿಲ್ಲಾ ಮಾಜಿ ಗವರ್ನರ್ ಅವಿನಾಶ್ ಪೋತದಾರ್ ಹೇಳಿದರು.
ಸವಳಂಗ ರಸ್ತೆಯಲ್ಲಿರುವ ನಗರದ ರೋಟರಿ ಯೂತ್ ಸೆಂಟರ್‌ನಲ್ಲಿ ಆಯೋಜಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ರೋಟರಿ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸೇವಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷ ಆರ್.ಆನಂದ ಅಧಿಕಾರ ವಹಿಸಿಕೊಂಡು ಮಾತನಾಡಿ, ಎಲ್ಲರಲ್ಲೂ ನಾಯಕತ್ವ ಗುಣಗಳಿರುತ್ತವೆ. ಅದನ್ನು ಗುರುತಿಸುವಂತಹ ಕೆಲಸವಾಗಬೇಕು. ವರ್ಷಪೂರ್ತಿ ನಿರಂತರವಾಗಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ನೀಟ್‌ನಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾನ್ವಿತ 23 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ನೂತನ ಅಧ್ಯಕ್ಷ ಆನಂದ್ ಅವರು ತಂಡದವರನ್ನು ಸಭೆಗೆ ಪರಿಚಯಿಸಿದರು.
Rotary Club Shimoga ವನಿತಾ ಸಂದೀಪ್ ಪ್ರಾರ್ಥನೆ ನಡೆಸಿದರು. ನಿಯೋಜಿತ ಅಧ್ಯಕ್ಷ ಎನ್.ಗೋಪಿನಾಥ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ವಿಶ್ವಾಸ್ ಎಲಬುರ್ಗಿ ಅವರು ವಂದನಾರ್ಪಣೆ ನಡೆಸಿದರು.
ನಿಕಟಪೂರ್ವ ಅಧ್ಯಕ್ಷ ಕೆ.ಸೂರ್ಯನಾರಾಯಣ ಉಡುಪ, ಉಪಾಧ್ಯಕ್ಷೆ ಡಾ. ಕಾಂಚನ ಕುಲಕರ್ಣಿ, ಕಾರ್ಯದರ್ಶಿ ವಿಶ್ವಾಸ್ ಎಲಬುರ್ಗಿ, ನಿಯೋಜಿತ ಅಧ್ಯಕ್ಷ ಎನ್.ಗೋಪಿನಾಥ್, ಸಹಕಾರ್ಯದರ್ಶಿ ಶ್ರೀಕಾಂತ್ ನಾಡಿಗ್, ಖಜಾಂಚಿ ಲಕ್ಷ್ಮೀನಾರಾಯಣ ಭಟ್, ನಿರ್ದೇಶಕರಾಗಿ ಸುನೀತಾ ಶ್ರೀಧರ್, ಸೆಂಥಿಲ್‌ವೇಲನ್, ಕಿಶೋರ್ ಶೀರನಾಳಿ, ಹೆಚ್.ಎಸ್. ಮೋಹನ್, ಎನ್.ಜಿ. ಉಷಾ, ನಾಗೇಶ್ ಎಂ.ವಿ, ವೀರಣ್ಣ ಎ. ಹುಗ್ಗಿ, ಮಂಜುನಾಥ್ ಎಸ್. ಇತರರಿದ್ದರು.
Department of Soldiers Welfare and Rehabilitation ಜುಲೈ 6 ರಂದು ಮಾಜಿ ಸೈನಿಕರ ಕುಂದುಕೊರತೆ ಬಗ್ಗೆ ಸಭೆ
Department of Soldiers Welfare and Rehabilitation ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ಇವರು ದಿನಾಂಕ: 06 ಜುಲೈ 2025ರ ಭಾನುವಾರದಂದು, ಸರ್ಕಾರಿ ನೌಕರರ ಭವನ, ಡಿಸಿ ಕಂಪೌಂಡ್, ಶಿವಮೊಗ್ಗದಲ್ಲಿ ಮುಂಜಾನೆ 10.30 ಗಂಟೆಗೆ ಮಾಜಿ ಸೈನಿಕರ ಅಹವಾಲು ಆಲಿಸಲು ಆಗಮಿಸಲಿದ್ದಾರೆ.
ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ಮಾಜಿ ಸೈನಿಕರು, ಅವರ ಅವಲಂಬಿತರು, ವೀರನಾರಿಯರು ಹಾಗೂ ವಿವಿಧ ಮಾಜಿ ಸೈನಿಕರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರುಗಳು ಉಪಸ್ಥಿತರಿದ್ದು, ತಮ್ಮ ಕುಂದುಕೊರತೆಗಳ ಕುರಿತಂತೆ ಖುದ್ದಾಗಿ ನಿರ್ದೇಶಕರನ್ನು ಭೇಟಿಯಾಗಿ ಮನವಿ ಸಲ್ಲಿಸಬಹುದು ಎಂದು ಡಾ. ಸಿ.ಎ.ಹಿರೇಮಠ, ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Department of Soldiers Welfare and Rehabilitation ಕುಂದುಕೊರತೆಗಳನ್ನು ದಿನಾಂಕ: 05 ಜುಲೈ 2025ರ ಶನಿವಾರ ಸಂಜೆ 5 ಗಂಟೆಯೊಳಗಾಗಿ soldiersshimoga@gmail.com ಗೆ ಮಿಂಚಂಚೆ ಮೂಲಕವೂ ಸಲ್ಲಿಸಲು ಕೋರಿದ್ದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182220925 ನ್ನು ಸಂಪರ್ಕಿಸಲು ಕೋರಲಾಗಿದೆ.
Bhadra Reservoir ಭದ್ರಾ ಜಲಾಶಯದಿಂದ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಕುರಿತು ಸ್ಪಷ್ಟನೆ
Bhadra Reservoir ಭದ್ರಾ ನದಿ ದಂಡೆಯ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಭದ್ರಾ ಜಲಾಶಯದ ಪ್ರದೇಶದಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಒಳಹರಿವಿನ ಪ್ರಮಾಣ 20000-25000 ಕ್ಯೂಸೆಕ್ಸ್ ಇದ್ದು, ಯಾವ ಸಮಯದಲ್ಲಾದರು ಜಲಾಶಯ ಭರ್ತಿಯಾಗುವ ಸಾಧ್ಯತೆ ಇದ್ದು, ಅಣೆಕಟ್ಟು ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು Spill Way Gate ಮುಖಾಂತರ ನದಿಗೆ ಬಿಡಲಾಗುವುದು ಮತ್ತು ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಪ್ರಕಟಣೆ ಹೊರಡಿಸಲಾಗಿರುತ್ತದೆ.
ಆದರೆ, ಅಚ್ಚುಕಟ್ಟು ವ್ಯಾಪ್ತಿಯ ರೈತರು ಜಲಾಶಯದಲ್ಲಿ ನೀರು ಸಂಗ್ರಹಣೆ ಮಾಡದೇ, ನದಿಗೆ ನೀರು ಬಿಡಲಾಗುತ್ತಿದೆ ಎಂದು ಕಛೇರಿಗೆ ಕರೆ ಮಾಡುತ್ತಿರುತ್ತಾರೆ.
Bhadra Reservoir ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರಿನ ಸಂಗ್ರಹಣೆ ಕುರಿತು Rule Curve ಪಾಲನೆ ಮಾಡಲಾಗುತ್ತಿದೆ. Rule Curve ಪ್ರಕಾರ ಜಲಾಶಯದಲ್ಲಿರುವ ನೀರಿನ ಸಂಗ್ರಹ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಾದಲ್ಲಿ, ಹೆಚ್ಚುವರಿ ನೀರನ್ನು ಹೊರಬಿಡಬೇಕಾಗಿರುತ್ತದೆ. ಅದರಂತೆ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಭದ್ರಾ ನದಿಯ ಎಡ ಮತ್ತು ಬಲ ದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ಹೋಗಬೇಕಾಗಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿ ಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸುವಂತ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಆರ್. ರವಿಚಂದ್ರ ಕೋರಿರುತ್ತಾರೆ.
