Karnataka Sahitya Academy ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪತ್ರಕರ್ತರಿಗೆ ಕನ್ನಡ ಸಾಹಿತ್ಯ ಎಂಬ ಹೆಸರಿನಲ್ಲಿ 3 ದಿನಗಳ ಅಧ್ಯಯನ ಶಿಬಿರವನ್ನು, ಆಗಸ್ಟ್ 3ನೇ ವಾರ ಅಥವಾ ಕೊನೆಯ ವಾರದಲ್ಲಿ ನಡೆಸಲು ಉದ್ದೇಶಿಸಿದ್ದು, ಆಸಕ್ತ ಪತ್ರಕರ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತಿಯಿರುವ 20 ರಿಂದ 40 ವರ್ಷ ವಯಸ್ಸುಳ್ಳ ಈಗಾಗಲೇ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವವರು, ಪತ್ರಿಕೋದ್ಯಮ ಪದವಿ ಪಡೆದವರು ಹಾಗೂ ಆಸಕ್ತಿಯುಳ್ಳವರು ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಅರ್ಜಿಸಲ್ಲಿಸಲು ಕೊನೆಯ ಜುಲೈ 25.
Karnataka Sahitya Academy ಆಸಕ್ತ ಅಭ್ಯರ್ಥಿಗಳು ಅಕಾಡೆಮಿಯ ವೆಬ್‌ಸೈಟ್ https://sahithyaacademy.karnataka.gov.in ಯಿಂದ ಅರ್ಜಿ ನಮೂನೆ ಹಾಗೂ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಅಕಾಡೆಮಿಯ ರಿಜಿಸ್ಟಾçರ್ ಕರಿಯಪ್ಪ ಎನ್. ರವರು ತಿಳಿಸಿರುತ್ತಾರೆ.
Karnataka Sahitya Academy ಆಸಕ್ತ ಪತ್ರಕರ್ತರಿಗೆ “ಕನ್ನಡ ಸಾಹಿತ್ಯ ಅಧ್ಯಯನ” ಶಿಬಿರಕ್ಕೆ ಪಾಲ್ಗೊಳ್ಳಲು ಅರ್ಜಿ ಆಹ್ವಾನ
Shivamogga Rangayana ರಂಗಾಯಣ ರೆಪರ್ಟರಿಗೆ ಆಸಕ್ತ ಕಲಾವಿದರ ನೇಮಕಾತಿಗೆ ಅರ್ಜಿ ಆಹ್ವಾನ
Shivamogga Rangayana ಶಿವಮೊಗ್ಗ ರಂಗಾಯಣವು ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ 03 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ಗೌರವ ಸಂಭಾವನೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆಸಕ್ತ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ.
ತಂತ್ರಜ್ಞರ ನೇಮಕದ ನಿಬಂಧನೆಗಳು: ಸಂಗೀತ/ಧ್ವನಿ-ಬೆಳಕು/ರಂಗಸಜ್ಜಿಕೆ/ವಸ್ತ ವಿಭಾಗಗಳಲ್ಲಿ ಕನಿಷ್ಠ 10 ವರ್ಷಗಳ ರಂಗಾನುಭವ ಹೊಂದಿರಬೇಕು. ಕನ್ನಡ ಭಾಷೆಯನ್ನು ಓದುವ, ಬರೆದಯು, ಗ್ರಹಿಸುವ ಸಾಮರ್ಥ್ಯವಿರಬೇಕು. ರಂಗಾನುಭವದ ಜೊತೆಗೆ ಶೈಕ್ಷಣಿಕ ಅರ್ಹತೆಗಳು ಇದ್ದಲ್ಲಿ ಅಂತಹವರಿಗೆ ಆಧ್ಯತೆ ನೀಡಲಾಗುವುದು. ಗೌರವ ಸಂಭಾವನೆಯಾಗಿ ಮಾಸಿಕ ರೂ. 25,000/- ಗಳನ್ನು ನೀಡಲಾಗುತ್ತಿದ್ದು, ಇತರೆ ಯಾವುದೇ ಭತ್ಯೆಗಳು ಹಾಗೂ ಊಟ/ವಸತಿ ವ್ಯವಸ್ಥೆ ಇರುವುದಿಲ್ಲ.
ಕಲಾವಿದರ ನೇಮಕದ ನಿಬಂಧನೆಗಳು: 12 ಜನ ಕಲಾವಿದರಲ್ಲಿ ಕನಿಷ್ಠ 4 ಮಹಿಳೆಯರಿಗಾಗಿ ಮೀಸಲಾಗಿದೆ. ಹಾಗೂ 4 ಪ.ಜಾ/ವರ್ಗದ ಕಲಾವಿದರಿಗೆ ಮೀಸಲಿಡಲಾಗಿದೆ. ಕನಿಷ್ಠ 50 ಹುದ್ದೆಗಳನ್ನು ಪ್ರಾದೇಶಿಕ ವಲಯದ ಕಲಾವಿದರಿಗೆ ಮೀಸಲಿಡಲಾಗಿದೆ. ರಂಗ ಪರಿಣತಿಯೇ ಪ್ರಥಮ ಅರ್ಹತೆ ಹಾಗೂ ರಂಗಶಿಕ್ಷಣದ ಅರ್ಹತೆಗಳು ಅಪೇಕ್ಷೀಣಿಯ ಹೊರತು ಕಡ್ಡಾಯವಲ್ಲ. ರಂಗಪ್ರಯೋಗದಲ್ಲಿ ಭಾಗವಹಿಸಿದವರಿಗೆ ಆದ್ಯತೆಯನ್ನು ನೀಡಲಾಗುವುದು. ಆಯ್ಕೆಯಾದ ಕಲಾವಿದರು ರೆಪರ್ಟರಿಯ ಭಾಗವಾಗಿದ್ದು, ರಂಗಶಿಕ್ಷಣದ ಎಲ್ಲಾ ವಿಭಾಗಗಳಲ್ಲಿ ತರಬೇತಿ ಪಡೆಯುವುದರ ಜೊತೆಗೆ ಅಭಿನಯದ ಜವಾಬ್ಧಾರಿಯನ್ನು ನಿಭಾಯಿಸಬೇಕು. ಆಯ್ಕೆಯಾದ ಕಲಾವಿದರಿಗೆ ಮಾಸಿಕ ರೂ. 18,000/- ಗಳನ್ನು ನೀಡಲಾಗುತ್ತಿದ್ದು, ಇತರೆ ಯಾವುದೇ ಭತ್ಯೆಗಳು ಹಾಗೂ ಊಟ/ವಸತಿ ವ್ಯವಸ್ಥೆ ಇರುವುದಿಲ್ಲ. ಕಲಾವಿದರ ವಯಸ್ಸು 18 ರಿಂದ 32 ವರ್ಷದೊಳಗಿರಬೇಕು. ಪಾರಂಪರಿಕ ಕಲೆಯ ಕುಟುಂಬಗಳಿಂದ ಬಂದ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಇಂತಹ ಪ್ರಕರಣದಲ್ಲಿ ವಯೋಮಿತಿಯನ್ನು 5 ವರ್ಷ ಸಡಿಲಿಸಬಹುದು.
Shivamogga Rangayana ಆಯ್ಕೆಯಾದ ತಂತ್ರಜ್ಞರು ಮತ್ತು ಕಲಾವಿದರು ಹಾಗೂ ಆಯಾ ರಂಗಾಯಣದ ನಿರ್ದೇಶಕರ ಆಡಳಿತಾಧಿಕಾರಿಯವರ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ ಹಾಗೂ ತರಬೇತಿಯ ಅವಧಿಯಲ್ಲಿ ನಡವಳಿಕೆ ಅನಪೇಕ್ಷಿತವೆಂದು ಕಂಡು ಬಂದಲ್ಲಿ ಅಂತಹ ಕಲಾವಿದರನ್ನು ತಕ್ಷಣದಲ್ಲಿ ತೆಗೆದು ಹಾಕುವ ಅಧಿಕಾರ ರಂಗಸಮಾಜಕ್ಕಿರುತ್ತದೆ.
ಆಸಕ್ತ ಕಲಾವಿದರು ಮತ್ತು ತಂತ್ರಜ್ಞರು ನಿಗದಿತ ನಮೂನೆ ಅರ್ಜಿಯನ್ನು ಶಿವಮೊಗ್ಗ ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ ಇವರಿಂದ ಖುದ್ದಾಗಿ ಅಥವಾ ಪೇಸ್‌ಬುಕ್ ಐಡಿ Shivamogga Rangayana ಅಥವಾ ವೆಬ್‌ಸೈಟ್ rangayanashivamogga.karnataka.gov.in ಮೂಲಕ ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಜು. 25 ರೊಳಗಾಗಿ ರಂಗಾಯಣ ಕಚೇರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇ-ಮೇಲ್ admin.rangayanashivamogga@gmail.com ಮೂಲಕ ಸಲ್ಲಿಸುವಂತೆ ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-256353 ನ್ನು ಸಂಪರ್ಕಿಸುವುದು.
Department of Information and Public Relations ಬೀದಿನಾಟಕ/ ಜಾನಪದ ಸಂಗೀತ ಕಾರ್ಯಕ್ರಮಗಳ ಮೂಲಕ ಸರ್ಕಾರದ ಯೋಜನೆಗಳ ಪ್ರಚಾರ ಮಾಡಲು ಆಸಕ್ತ ಕಲಾತಂಡಗಳಿಂದ ಅರ್ಜಿ ಆಹ್ವಾನ
Department of Information and Public Relations ಶಿವಮೊಗ್ಗ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2025-26ನೇ ಸಾಲಿನಲ್ಲಿ ಬೀದಿನಾಟಕ ಪ್ರದರ್ಶನ ಮತ್ತು ಜಾನಪದ ಸಂಗೀತ ಕಾರ್ಯಕ್ರಮಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳು/ಕಾರ್ಯಕ್ರಮಗಳ ಕುರಿತಂತೆ ಪ್ರಚಾರ ಕೈಗೊಳ್ಳಲು ಅರ್ಹ ಆಸಕ್ತ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಿದೆ.
ಜಿಲ್ಲಾ ಮಟ್ಟದಲ್ಲಿ ಅಧೀನ ಕಚೇರಿಗಳ ಮೂಲಕ 2025-26ನೆ ಸಾಲಿನಲ್ಲಿ ಬೀದಿನಾಟಕ/ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುಕೂಲವಾಗುವಂತೆ ಪ್ರತಿ ಜಿಲ್ಲೆಯಿಂದ 3 ಬೀದಿನಾಟಕ ಹಾಗೂ 3 ಜಾನಪದ ಸಂಗೀತ ಕಲಾತಂಡಗಳ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಪ್ರತಿ ಬೀದಿನಾಟಕ ತಂಡದಲ್ಲಿ 8 ಜ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರನ್ನೊಳಗೊಂಡಿರಬೇಕು.
ಪ್ರತಿ ಜಾನಪದ ಸಂಗೀತ ಕಲಾತಂಡದಲ್ಲಿ 3 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಒಬ್ಬರು ಮಹಿಳೆಯರು ಹಾಗೂ ಒಬ್ಬರು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಸೇರಿದ ಕಲಾವಿದರು ಇರುವುದು ಕಡ್ಡಾಯವಾಗಿದೆ.
ಕಲಾತಂಡಗಳ ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಮಾಜ ಕಲ್ಯಾಣ, ಪರಿಶಿಷ್ಟ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕೃಷಿ ಇಲಾಖೆಯ ಜಿಲ್ಳಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, 2025ರ ಆಗಸ್ಟ್ 12 ರಂದು ಬೆಳಿಗ್ಗೆ 11 ಗಂಟೆಗೆ ರಾಜ್ಯಾದ್ಯಂತ 31 ಜಿಲ್ಲೆಗಳಲ್ಲಿ ಏಕಕಾಲಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.
Department of Information and Public Relations ಜಿಲ್ಲೆಯ ಆಸಕ್ತ ಬೀದಿ ನಾಟಕ ತಂಡಗಳು ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ದಿ: 05/08/2025 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Agricultural University ಕೋಗಾರ್ ,ಸಿಗಂದೂರು, ಶರಾವತಿ ಹಿನ್ನೀರು ಪ್ರದೇಶಗಳಿಂದ ಶಿವಮೊಗ್ಗಕ್ಕೆ ಬಸ್ ಸಂಚಾರ ಬೇಕು
Agricultural University ಕೋಗಾರ್, ಸಿಗಂದೂರು ತುಮರಿ ಮತ್ತು ಆಸುಪಾಸಿನ ಹಳ್ಳಿಯವರು ಶರಾವತಿ ಹಿನ್ನೀರಿನವರು. ಜಿಲ್ಲಾ ಕೇಂದ್ರವಾದ ಶಿವಮೊಗ್ಗಕ್ಕೆ ನೇರ, ಖಾಸಗಿ ಅಥವಾ ಕೆ.ಎಸ್.ಆರ್.ಟಿ.ಸಿ.ಯ, ಬಸ್ ಸಂಪರ್ಕವಿಲ್ಲ. ಜಿಲ್ಲಾ ಕೇಂದ್ರವಾದ ಶಿವಮೊಗ್ಗಕ್ಕೆ ಬಂದು ಹೋಗಲು ಅನಿವಾರ್ಯವಾಗಿ ಹೊಸನಗರ ಅಥವಾ ಸಾಗರ ಮಾರ್ಗದ ಬಸ್‌ಗಳನ್ನು ಆಶ್ರಯಿಸಬೇಕಾಗಿದೆ. ಈ ಮಾರ್ಗದಲ್ಲಿ ಪ್ರಯಾಣಿಕರು ಸುಮಾರು 25 ಕಿಲೋಮೀಟರ್ ದೂರವನ್ನು ಹೆಚ್ಚುವರಿಯಾಗಿ ಕ್ರಮಿಸಬೇಕು. ಹಾಗಾಗಿ ಈ ಮಾರ್ಗವು, ಸಮಯ ಹಾಗೂ ಹಣದ ದೃಷ್ಟಿಯಿಂದ, ಅವರುಗಳಿಗೆ ದುಬಾರಿಯಾಗಿರುವುದು. ಹಾಗೊಮ್ಮೆ, ಶಿವಮೊಗ್ಗ ದಿಂದ – ಆನಂದಪುರ – ಅಡೂರು – ಹೆಬೈಲು – ಹೆಗ್ಗೋಡು – ನಂದಿಗೋಡು – ಗೆಣಸಿನಕುಣಿ – ಹುಲಿದೇವರಬನ – ಹೊಳೆಬಾಗಿಲು – ಸಿಗಂದೂರು ಮಾರ್ಗವಾಗಿ – ಕೋಗಾರ್‌ಗೆ ಕರ್ನಾಟಕ ರಾಜ್ಯ ಸಾರಿಗೆ ಬಸ್ ಸಂಪರ್ಕ ಕಲ್ಪಿಸಿದಲ್ಲಿ ಈ ಮಾರ್ಗಗಳ ನಡುವೆ ಇರುವ ಊರಿನವರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಪ್ರವಾಸಿಗಳಿಗೆ ಇಲ್ಲಿ ಓಡುವ ಬಸ್ ಸಂಪರ್ಕ ಸೇತುವಾಗಿ ಕಾರ್ಯ ನಿರ್ವಹಿಸುವುದು. Agricultural University ಹಾಗೆಯೇ, ಆನಂದಪುರ ಹೋಬಳಿ ಕೇಂದ್ರ, ಕಿರುವಕ್ಕಿಯಲ್ಲಿರುವ ಕೃಷಿ ವಿಶ್ವವಿದ್ಯಾಲಯ ಹಾಗೂ ಧಾರ್ಮಿಕ ಕೇಂದ್ರವಾದ ಸಿಗಂದೂರಿಗೆ ತಲುಪಲು ಬಹು ಸಮೀಪದ ದಾರಿಯಾಗಿ ಮಾರ್ಗದಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕಾರಣವಾಗುವುದು. ಆದುದರಿಂದ ಶಿವಮೊಗ್ಗ ದಿಂದ – ಆನಂದಪುರ – ಅಡೂರು – ಹೆಬೈಲು- ಹೆಗ್ಗೋಡು – ನಂದಿಗೋಡು – ಗೆಣಸಿನಕುಣಿ – ಹುಲಿದೇವರಬನ – ಹೊಳೆಬಾಗಿಲು – ಸಿಗಂದೂರು ಮಾರ್ಗವಾಗಿ – ಕೋಗಾರ್‌ಗೆ ಕರ್ನಾಟಕ ರಾಜ್ಯ ಸಾರಿಗೆ ಬಸ್ ಸಂಪರ್ಕವನ್ನು, ಬೆಳಿಗ್ಗೆ 08:00, 11:00 ಮತ್ತು ಸಂಜೆ 16:00 ಗಂಟೆಗೆ ಏಕಕಾಲದಲ್ಲಿ ಎರಡೂ ಕಡೆಗಳಿಂದ, ಕಲ್ಪಿಸಲು ತ್ವರಿತವಾಗಿ ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಮ್ರ ವಿನಂತಿಸಲಾಗಿದೆ.
ದೈವಜ್ಞ ಕಲ್ಯಾಣ ಮಂದಿರದಲ್ಲಿ ದೇವಪೂಜೆ & ಸಂಧ್ಯಾವಂದನೆ ಕಲಿಕಾ ಶಿಬಿರ
ದೈವಜ್ಞ ಬ್ರಾಹ್ಮಣ ಗುರುಪೀಠ ಸೇವಾ ಸಮಿತಿಯಿಂದ ನಗರದ ಜೈಲ್ ಸರ್ಕಲ್‌ನಲ್ಲಿರುವ ದೈವಜ್ಞ ಕಲ್ಯಾಣ ಮಂದಿರದಲ್ಲಿ ಜುಲೈ 10ರಿಂದ 13ರವರೆಗೆ ಪ್ರತಿ ದಿನ ಬೆಳಗ್ಗೆ 7ರಿಂದ 8:30 ರವರೆಗೆ ಸಂಧ್ಯಾವಂದನೆ ಮತ್ತು ದೇವಪೂಜೆ ಕಲಿಕಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಜುಲೈ 10ರಂದು ಬೆಳಗ್ಗೆ 8:30 ರಿಂದ ಗುರುಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬ್ರಹ್ಮೋಪದೇಶ ಪಡೆದ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಶಿಬಿರವು ಸಂತೋಷ್ ಎನ್.ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಸಂಧ್ಯಾವಂದನೆ ಮತ್ತು ದೇವಪೂಜಾ ಪರಿಕರಗಳನ್ನು ಶಿಬಿರದಲ್ಲಿ ಪಾಲ್ಗೊಳ್ಳುವವರು ತರಬೇಕು. ಹೆಚ್ಚಿನ ಮಾಹಿತಿಗೆ ಚಂದ್ರಹಾಸ ಪಿ ರಾಯ್ಕರ್ 9448154495 ಹಾಗೂ ಎಸ್.ಪಾಂಡುರಂಗ ಶೇಟ್ 6361846002 ಸಂಪರ್ಕಿಸಬಹುದಾಗಿದೆ.
All India Radio Bhadravati ಜುಲೈ 8. ಆಕಾಶವಾಣಿ ಭದ್ರಾವತಿ ಕೇಂದ್ರದಿಂದ ” ಮಣ್ಣಿನ ಆರೋಗ್ಯ” ಕುರಿತ ಹಲೋ ಆಕಾಶವಾಣಿ ಕಾರ್ಯಕ್ರಮ
All India Radio Bhadravati ಜುಲೈ 8 ರಂದು ಅಂದರೆ ನಾಳೆ ಮಂಗಳವಾರ ಸಂಜೆ 6.51 ರಿಂದ 7.30ರವರೆಗೆ ‘ಹಲೋ ಕಿಸಾನ್‌ವಾಣಿ” ನೇರ ಫೋನ್ ಇನ್ ಕಾರ್ಯಕ್ರಮ ಆಕಾಶವಾಣಿ ಭದ್ರಾವತಿಯಿಂದ ಪ್ರಸಾರವಾಗಲಿದೆ. ಮಣ್ಣಿನ ಆರೋಗ್ಯ ವಿಷಯದ ಬಗ್ಗೆ ಈ ಫೋನ್ ಇನ್ ನೇರ ಪ್ರಸಾರದಲ್ಲಿ ಮಾಹಿತಿ ನೀಡುತ್ತಾರೆ ಶಿವಮೊಗ್ಗ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀಮತಿ ಮಮತಾ ಆರ್. ಎಂದು ಆಕಾಶವಾಣಿ ಭದ್ರಾವತಿ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಫೋನ್ ಮಾಡಲು ದೂರವಾಣಿ ಸಂಖ್ಯೆ: 08282-270282/ 270283, ವಾಟ್ಸಪ್ ಮೆಸೆಜ್ ಮಾಡಲು ದೂರವಾಣಿ ಸಂಖ್ಯೆ: 9481572600.
World Zoonosis Day ಪ್ರಾಣಿಜನ್ಯ ಸೋಂಕುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶವೇ ಝೋನೊಸಸ್ ದಿನಾಚರಣೆ- ಡಾ.ನಟರಾಜ್
World Zoonosis Day ಪ್ರಾಣಿಗಳಿಂದ ಮನುಷ್ಯರಿಗೆ ಹಲವಾರು ಸೋಂಕುಗಳು ಹರಡುವ ಕಾರಣ ಪ್ರಾಣಿಗಳ ಕುರಿತು ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಈ ಕುರಿತು ಹೆಚ್ಚಿನ ಅರಿವು, ಜಾಗೃತಿ ಮತ್ತು ನಿಯಂತ್ರಣದ ಉದ್ದೇಶದಿಂದ ವಿಶ್ವ ಝೂನೋಸಸ್ ದಿನವನ್ನು ಆಚರಿಸಲಾಗುತ್ತಿದೆ ಎಂದು ಡಿಹೆಚ್‌ಓ ಡಾ.ನಟರಾಜ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ, ಪಶುಪಾಲನಾ ಮತ್ತು ಪಶು ವೈದ್ಯಸೇವಾ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಝೋನೊಸಸ್ ದಿನಾಚರಣೆ’ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
World Zoonosis Day ಝೂನೋಸಸ್ ಎಂದರೆ ಪ್ರಾಣಿಗಳಿಂದ ಮನುಷ್ಯರಿಗೆ (ಮತ್ತು ಪ್ರಾಣಿಗಳಿಗೆ) ಸೋಂಕು ಹರಡುವ ರೋಗಗಳು. ಇವು ಬ್ಯಾಕ್ಟೀರಿಯಾ, ವೈರಸ್, ಪರಾವಲಂಬಿ ಅಥವಾ ಫಂಗಸ್ ಕಾರಣದಿಂದ ಉಂಟಾಗುತ್ತವೆ. ನಾಯಿ, ಬೆಕ್ಕು, ಕರಡಿ ಇತರೆ ಪ್ರಾಣಿಗಳಿಂದ ರೇಬೀಸ್, ಹಂದಿಗಳಿಂದ ಸ್ವೈನ್ ಫ್ಲೂ, ಹಾಲು, ಮಾಂಸದಿಂದ ಬ್ರುಸೆಲ್ಲೋಸಿಸ್, ಹುಳುಗಳಿಂದ ಲೈಮ್ ರೋಗ, ಉಣ್ಣೆಗಳಿಂದ ಮಂಗನ ಖಾಯಿಲೆ, ಲೆಪ್ಟೊಸೈರಾ ಬ್ಯಾಕ್ಟಿರಿಯಾದಿಂದ ಇಲಿ ಜ್ವರ ಹೀಗೆ ಪ್ರಾಣಿಗಳಿಂದ ಹಲವಾರು ಸೋಂಕುಗಳು ಮನುಷ್ಯರಿಗೆ ಹರಡುತ್ತದೆ. ಆದ್ದರಿಂದ ಪ್ರಾಣಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕಾಲ ಕಾಲಕ್ಕೆ ನಾಯಿಗಳಿಗೆ ಲಸಿಕೆ ಹಾಕಿಸಬೇಕು. ಒಮ್ಮೆ ರೇಬಿಸ್ ಬಂದರೆ ಎಂತಹ ಬಲಿಷ್ಟರನ್ನು ಸಹ ಇದು ಬಲಿ ತೆಗೆದುಕೊಳ್ಳುತ್ತದೆ. ಆದ್ದರಿಂದ ಬಾರದಂತೆ ಎಚ್ಚರದಿಂದ ಇರಬೇಕು ಎಂದರು.
ಮೆಗ್ಗಾನ್ ಬೋಧನಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ಪ್ರಾಣಿಗಳು ಅದರಲ್ಲೂ ಸಾಕು ಪ್ರಾಣಿಗಳ ಕುರಿತು ಹೆಚ್ಚಿನ ಎಚ್ಚರಿಕೆ ಅಗತ್ಯ. ನಾಯಿಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸಬೇಕು. ಬೆಕ್ಕು ಪರಚಿರುವುದರಿಂದಲೂ ರೇಬಿಸ್ ಬಂದು ರೋಗಿ ಮೃತಪಟ್ಟಿರುವ ಪ್ರಕರಣಗಳು ಇವೆ. ಆದ್ದರಿಂದ ಸಾಕಷ್ಟು ಎಚ್ಚರಿಕೆ ಅಗತ್ಯವಿದೆ. ಇಲಿ ಜ್ವರದ ಬಗ್ಗೆಯೂ ಜಾಗೃತರಾಗಿರಬೇಕು. ಇಲಿ ಮೂತ್ರವು ಆಹಾರ ಸೇರಿ ಸೋಂಕು ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ನೀರು, ಆಹಾರ, ಕೈ ಕಾಲುಗಳನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು. ಇನ್ನು ಮಲೆನಾಡಿನಲ್ಲಿ ಉಣ್ಣೆಗಳಿಂದ ಮಂಗನ ಕಾಯಿಲೆ ಬರುತ್ತದೆ. ಆದ್ದರಿಂದ ಈ ಕುರಿತು ಅರಿವು ಮತ್ತು ಎಚ್ಚರಿಕೆ ಅತ್ಯಗತ್ಯ. ನಾಯಿ, ಬೆಕ್ಕು ಕಡಿತಕ್ಕೊಳಗಾದ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ. ಈ ದಿನವು ಪ್ರಾಣಿ-ಮಾನವರ ಆರೋಗ್ಯ ಸಂರಕ್ಷಣೆಗೆ ಸಂಬAಧಿಸಿದ ಪ್ರಮುಖ ಅಂಶಗಳನ್ನು ಹಂಚಿಕೊಳ್ಳುವ ದಿನ. ಪ್ರತಿವರ್ಷ ಜುಲೈ 6 ರಂದು ವಿಶ್ವಾದ್ಯಂತ ಝೂನೋಸಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಡಾ. ಲೂಯಿಸ್ ಪಾಶ್ಚರ್ ಅವರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ, ಏಕೆಂದರೆ ಅವರು ಝೂನೋಸಸ್ ರೋಗಗಳ ವಿರುದ್ಧ ಅಭಿವೃದ್ಧಿಪಡಿಸಿದ್ದ ರೇಬಿಸ್ ಲಸಿಕೆಯನ್ನು ಈ ದಿನದಂದು ನೀಡಲಾಗಿತ್ತು. ಆದ್ದರಿಂದ ಈ ದಿನದ ಮೂಲಕ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನಾಚರಣೆ ಮಾಡಲಾಗುತ್ತಿದೆ.
ಪ್ರಾಣಿ-ಮಾನವ ಸೋಂಕು ರೋಗಗಳ ಬಗ್ಗೆ ಅರಿವು ಮೂಡಿಸುವುದು. ರೋಗ ನಿರೋಧನೆ ಮತ್ತು ನಿಯಂತ್ರಣದ ಕ್ರಮಗಳನ್ನು ಪ್ರಚಾರ ಮಾಡುವುದು. ಪ್ರಾಣಿ ಆರೋಗ್ಯ ಮತ್ತು ಮಾನವ ಆರೋಗ್ಯದ ನಡುವಿನ ಸಂಬಂಧವನ್ನು ಒತ್ತಿಹೇಳುವುದು ಈ ದಿನದ ಉದ್ದೇಶವಾಗಿದೆ.
ಈ ರೋಗಗಳನ್ನು ತಡೆಗಟ್ಟಲು ಪ್ರಾಣಿಗಳಿಗೆ ನಿಯಮಿತ ಲಸಿಕೆ ಹಾಕಿಸಬೇಕು ಸೋಂಕು ಹರಡಿದ ಪ್ರಾಣಿಗಳ ಸಂಪರ್ಕದಿಂದ ದೂರವಿರಬೇಕು. ಮಾಂಸ ಮತ್ತು ಹಾಲನ್ನು ಚೆನ್ನಾಗಿ ಬೇಯಿಸಿ/ಶುದ್ಧೀಕರಿಸಿ ಸೇವಿಸಬೇಕು. ನೀರು ಮತ್ತು ಪರಿಸರದ ಸ್ವಚ್ಛತೆ ಕಾಪಾಡುವುದು. ರೋಗಲಕ್ಷಣಗಳು ಕಂಡಾಗ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.
ಶೇ.60 ಸೋಂಕುಗಳು ಪ್ರಾಣಿಗಳಿಂದ ಹರಡುತ್ತಿದ್ದು ಹೆಚ್ಚು ಜನಸಂಖ್ಯೆ ಇರುವ ಭಾರತದಂತಹ ನಮ್ಮ ದೇಶದಲ್ಲಿ ಜನರು ಪ್ರಾಣಿಗಳ ಕುರಿತು ಎಚ್ಚರಿಕೆ ವಹಿಸಿ ಜಾಗೃತರಾಗಬೇಕು. ಜಿಲ್ಲೆಯಲ್ಲಿ ನಾಯಿ ಕಡಿತದ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. ಕೆಎಫ್‌ಡಿ, ಹಂದಿ ಜ್ವರ, ಇಲಿಜ್ವರ, ಬ್ರುಸೆಲ್ಲೋಸಿಸ್, ಸ್ಕೈಬ್ಟೈಪಸ್ ಸೋಂಕುಗಳು ಸೇರಿದಂತೆ ಇತರೆ ಪ್ರಾಣಿಗಳಿಂದ ಹರಡುವ ಸೋಂಕುಗಳ ಬಗ್ಗೆ ಎಚ್ಚರಿಕೆ ವಹಿಸಿ, ಇತರರಲ್ಲೂ ಅರಿವು ಮೂಡಿಸಬೇಕೆಂದರು.
ಕಾರ್ಯಕ್ರಮದಲ್ಲಿ ಸಿಮ್ಸ್ ವಿಆರ್‌ಡಿಎಲ್ ಸಹ ಪ್ರಾಧ್ಯಾಪಕರಾದ ಡಾ.ಮಲ್ಲಿಕಾರ್ಜುನ ಕೊಪ್ಪದ್ ಹಾಗೂ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸುನೀಲ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡಿದರು.
ವಿಡಿಎಲ್ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಹರ್ಷವರ್ಧನ್, ಸಿಮ್ಸ್ನ ಡಾ.ಪ್ರವೀಣ್ ಭಟ್, ಡಾ.ಕವಿತಾ ರಾಣಿ, ಪಶು ವೈದ್ಯಾಧಿಕಾರಿ ಡಾ.ರೇಖಾ, ನರ್ಸಿಂಗ್ ಕಾಲೇಜಿನ ಮೇರಿ, ಶುಶ್ರೂಕಾಧೀಕ್ಷಕಿ ಎಲಿಜಬೆತ್ , ಆರೋಗ್ಯ ಇಲಾಖೆಯ ದೊಡ್ಡವೀರಪ್ಪ, ಇತರೆ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Test Cricket 2 ನೇ ಕ್ರಿಕೆಟ್ ಟೆಸ್ಟ್, ಭಾರತಕ್ಕೆ ಐತಿಹಾಸಿಕ ಗೆಲುವು ಕ್ಯಾಪ್ಟನ್ ಗಿಲ್ ಗೆಲುವಿನ ಅಲೆಯಲ್ಲಿ
Test Cricket ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಭಾನುವಾರ (ಜುಲೈ 6) ನಡೆದ ಪಂದ್ಯದಲ್ಲಿ ಆಕಾಶ್ ದೀಪ್ ಚೊಚ್ಚಲ ಆರು ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಮೊದಲ ಟೆಸ್ಟ್ ಗೆಲುವು ತಂದುಕೊಟ್ಟರು.
ಶುಭ್‌ಮನ್ ಗಿಲ್ ನೇತೃತ್ವದ ತಂಡವು 608 ರನ್‌ಗಳ ಗುರಿಗೆ ಉತ್ತರವಾಗಿ ಇಂಗ್ಲೆಂಡ್ ಅನ್ನು 271 ರನ್‌ಗಳಿಗೆ ಆಲೌಟ್ ಮಾಡಿ 336 ರನ್‌ಗಳ ಪ್ರಾಬಲ್ಯ ಸಾಧಿಸಿತು.
Test Cricket ಇಂಗ್ಲೆಂಡ್ ಪರ, ವಿಕೆಟ್ ಕೀಪರ್-ಬ್ಯಾಟರ್ ಜೇಮೀ ಸ್ಮಿತ್ 7ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ 99 ಎಸೆತಗಳಲ್ಲಿ 88 ರನ್ ಗಳಿಸುವ ಮೂಲಕ ಸೋಲನ್ನು ತಪ್ಪಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು, ಆದರೆ ಅದು ಫಲಪ್ರದವಾಗಲಿಲ್ಲ.
ಭಾರತ ತಂಡದ ನಾಯಕತ್ವ ವಹಿಸಿದ ಶುಭ್ಮನ್ ಗಿಲ್ ಅವರಿಗೆ ಇದು ಮೊದಲ ಗೆಲುವಾಗಿದೆ.
Akka Cafe “ಅಕ್ಕ ಕೆಫೆ” ಸ್ಥಾಪನೆಗೆ ಮಂಜೂರಾತಿ & ಲೋಗೋಗಳ ಹಸ್ತಾಂತರ
Akka Cafe ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಹೊಸ ಆಯಾಮ ಸಿಗಲಿದೆ.
ರಾಜ್ಯದಲ್ಲಿ 2.80 ಲಕ್ಷ ಸ್ವ-ಸಹಾಯ ಗುಂಪುಗಳು ಸಕ್ರಿಯ: ಇವು ಸ್ವಯಂ ಉದ್ಯೋಗದ ಮೂಲಕ ನಾವೀನ್ಯತೆ ತರುವಲ್ಲಿ ಯಶಸ್ವಿಯಾಗಿವೆ.
ಅಕ್ಕ ಕೆಫೆ ಸ್ಥಾಪನೆಗೆ ಉದ್ದೇಶ:
ಪ್ರತಿ ಕೇಂದ್ರಕ್ಕೆ ₹15 ಲಕ್ಷ ವೆಚ್ಚದಲ್ಲಿ 50 ‘ಅಕ್ಕ ಕೆಫೆ’ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ.
ಕಾಫಿ ಕಿಯೋಸ್ ಯೋಜನೆ ವಿಸ್ತರಣೆ:
ರಾಜ್ಯಾದ್ಯಂತ 2,500 ‘ಕಾಫಿ ಕಿಯೋಸ್’ ಕೇಂದ್ರಗಳ ಸ್ಥಾಪನೆಗೆ ತಲಾ ₹1 ಲಕ್ಷ ಅನುದಾನ ನೀಡಲಾಗುತ್ತಿದೆ.
Akka Cafe ಸ್ವ-ಸಹಾಯ ಗುಂಪುಗಳಿಗೆ ಹೆಚ್ಚಿನ ಬೆಂಬಲ:
ಈ ಯೋಜನೆಗಳ ಮೂಲಕ ಮಹಿಳಾ ಉದ್ಯೋಗ ಅವಕಾಶ ಹೆಚ್ಚಿಸುವುದರ ಜೊತೆಗೆ ಸ್ವ-ಉದ್ಯೋಗದ ಗತಿ ವೇಗಗೊಳ್ಳಲಿದೆ.
CM Siddaramaiah ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸದಸ್ಯ ಅಷ್ಟೇ ಹೊರತು ಅಧ್ಯಕ್ಷರಾಗಿ ನೇಮಕವಾಗಿಲ್ಲ – ಸಿದ್ಧರಾಮಯ್ಯ ಸ್ಪಷ್ಟನೆ
CM Siddaramaiah ಎಐಸಿಸಿಯ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸದಸ್ಯರಾಗಿ ನನ್ನನ್ನು ನೇಮಕ ಮಾಡಲಾಗಿದೆ. ಮಾಧ್ಯಮಗಳು ಇದನ್ನು ತಪ್ಪಾಗಿ ಅರ್ಥೈಸಿ ಮಂಡಳಿಯ ಅಧ್ಯಕ್ಷರಾಗಿ ನನ್ನ ನೇಮಕ ಮಾಡಲಾಗಿದೆ ಎಂದು ವರದಿ ಮಾಡಿವೆ. ಇದು ತಪ್ಪು ಮಾಹಿತಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟೀಕರಣ ನೀಡಿದ್ದಾರೆ.
CM Siddaramaiah ಸಲಹಾ ಮಂಡಳಿ ಸಭೆ ಎಐಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷರಾದ ಡಾ. ಅನಿಲ್ ಜೈಹಿಂದ್ ಅವರ ಅಧ್ಯಕ್ಷತೆಯಲ್ಲಿ ಜುಲೈ 15ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ನಡೆಯಲಿದೆ. ವಿವಿಧ ರಾಜ್ಯಗಳ ಕಾಂಗ್ರೆಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಮತ್ತು ಮಾಜಿ ಸಂಸದರು, ಶಾಸಕರು ಸೇರಿದಂತೆ 50 ಮಂದಿ ಭಾಗವಹಿಸುವ ಈ ಸಭೆಯ ಆತಿಥ್ಯವನ್ನು ನಾನು ವಹಿಸಿಕೊಂಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡಿದ್ದಾರೆ.
