Shivamogga Tourism Development ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯಿಂದ 20.07.25 ರ ಭಾನುವಾರ ಶಿವಮೊಗ್ಗದಿಂದ ಸಕ್ರೇಬೈಲು ಆನೆ ಬಿಡಾರ, ಹುಲಿ ಮತ್ತು ಸಿಂಹ ಧಾಮ, ಮತ್ತೂರು ಗಣಪತಿ ದೇವಸ್ಥಾನ, ಗುಡೇಮರಡಿ ಮಲ್ಲೇಶ್ವರ ದೇವಸ್ಥಾನ, ಮತ್ತು ನಿಧಿಗೆಯಲ್ಲಿ ದೋಣಿವಿಹಾರ ಸ್ಥಳಗಳಿಗೆ ಒಂದು ದಿನದ ಪ್ರವಾಸವನ್ನು ಏರ್ಪಡಿಸಲಾಗಿದೆ
ಶಿವಮೊಗ್ಗದಿಂದ ಬೆಳಿಗ್ಗೆ 7:30 ಕ್ಕೆ ಹೊರಟು 06.30 ರ ಒಳಗಾಗಿ ಶಿವಮೊಗ್ಗಕ್ಕೆ ತಲುಪಲಾಗುವುದು ಶುಲ್ಕ ಒಬ್ಬರಿಗೆ ರೂ 725 ಮಾತ್ರ. (ಶುಲ್ಕದಲ್ಲಿ ಬಸ್ ಚಾರ್ಜ್, ಬೆಳಿಗ್ಗೆ ಉಪಹಾರ, ಮದ್ಯಾಹ್ನ ಊಟ, ಸಕ್ರೇಬೈಲು ಮತ್ತು ಹುಲಿ ಮತ್ತು ಸಿಂಹಧಾಮದ ಪ್ರವೇಶ (ಸಫಾರಿ ಹೊರತುಪಡಿಸಿ) ಶುಲ್ಕ ಹಾಗೂ ನಿದಿಗೆ ಕೆರೆ ದೋಣಿ ವಿಹಾರದ ಖರ್ಚು ಸೇರಿರುತ್ತದೆ.) 45 ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು. Shimoga Tourism Development ಆಸಕ್ತರು ತಮ್ಮ ಹೆಸರನ್ನು ದಿಲೀಪ್ ನಾಡಿಗ್ ದೂರವಾಣಿ 6361124316 ಇವರ ಬಳಿ ನೋಂದಾಯಿಸುವಂತೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಕಾರ್ಯದರ್ಶಿ ಎನ್.ಗೋಪಿನಾಥ್ ಅವರು ತಿಳಿಸಿದ್ದಾರೆ.
Keladi Shivappa Nayak University ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಜುಲೈ 14 ರಿಂದ ಆಗಸ್ಟ್ 12 ರವರೆಗೆ 1 ತಿಂಗಳು ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ವಿವಿಧ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್ತು, ಕೋಕೋನಟ್ ಕುಕಿಸ್, ಕೋಕೊನಟ್ ಬಿಸ್ಕತ್ತು, ಮಸಾಲ ಬಿಸ್ಕತ್ತು, ಕೋಕೊನಟ್ ಕ್ಯಾಸಲ್ಸ, ಫ್ರುಟ್ ಕೇಕ್, ಸ್ಪಾಂಜ್‌ಕೇಕ್, ಜೆಲ್‌ಕೇಕ್, ಬಟರ್ ಐಸಿಂಗ್, ಮಿಲ್ಕ ಬ್ರೆಡ್, ಪಪ್‌ಪೇಸ್ಟ್ರಿ, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಬೇಕರಿ ಉತ್ಪನ್ನಗಳ ತಯಾರಿಕೆಯ ಬಗ್ಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಿದೆ. ಆಕಸ್ತರು ತರಬೇತಿ ಶುಲ್ಕ ರೂ. 4500/-ಗಳನ್ನು ಪಾವತಿಸಿ, ಜುಲೈ 12 ರೊಳಗಾಗಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ಕೃಷಿ ಮಹಾವಿದ್ಯಾಲಯವನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಕೃಷಿ ಮತ್ತು ತೋಟಗಾರಿಕೆ ಮಹಾವಿದ್ಯಾಲಯದ ಪ್ರೋಫೆಸರ್ ತಿಳಿಸಿದ್ದಾರೆ. Keladi Shivappa Nayak University ನೋಂದಾವಣೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ಜಯಶ್ರೀ ಎಸ್. -9449187763 ಮತ್ತು ಜಯಶಂಕರ-9686555897 ಇವರುಗಳನ್ನು ಸಂಪರ್ಕಿಸುವುದು.
ಲೇ: ಆದಿತ್ಯ ಪ್ರಸಾದ್. ಹಿರಿಯ ಛಾಯಾ ಚಿತ್ರಗ್ರಾಹಕರು.ಶಿವಮೊಗ್ಗ.
Klive Special Article ಚಿತ್ರಕಲೆ ಎಂದಾಗ ಅದು ಬರೇ ಬಣ್ಣಗಳಿಂದ ತುಂಬಿದ ಚೌಕಟ್ಟು ಎಂದಲ್ಲ. ಅದು ಒಬ್ಬ ಕಲಾವಿದನ ಕಲ್ಪನೆಯ ಹೃದಯಯದ ಭಾವನೆಗಳ ದೃಶ್ಯಗಳಾಗಿರುತ್ತದೆ. ಹಾಗೆಯೇ ಮಾನವ ಕಲ್ಪನೆಯ ಅಭಿವ್ಯಕ್ತಿಯ ಕಲಾತ್ಮಕ ಸಾಧನವೂ ಹೌದು. ಮಾನವ ಸಂಸ್ಕೃತಿಯ ಪುರಾತನ ಭಾಗವಾಗಿ ರೂಪಾಂತರಗೊಂಡು ಇಂದಿಗೂ ತನ್ನ ಇರುವಿಕೆಯನ್ನ ಉಳಿಸಿಕೊಂಡು ಬಂದ ಒಂದು ಸಾಂಪ್ರದಾಯಿಕ ಕಲೆ ಎನ್ನಬಹುದು. ಬಣ್ಣಗಳ ಮೂಲಕ ಲೋಕವನ್ನು ಹಾಗೆಯೇ ಸಮಾಜದ ಅನೇಕ ಮುಖಗಳನ್ನು ವಿವರವಾಗಿ ತಿಳಿಸಲು ಮತ್ತು ಆಂತರ್ಯದ ಭಾವನೆಗಳನ್ನ ವ್ಯಕ್ತಪಡಿಸಲು ಇರುವ ಮಹೋನ್ನತ ಕಲೆಯಾಗಿದೆ. ಇಂದು ಚಿತ್ರಕಲೆಯು ಹಲವು ಪ್ರಕಾರಗಳನ್ನು ಹೊಂದಿದೆ. ಪೈಂಟಿಂಗ್, ಡಿಜಿಟಲ್ ಆರ್ಟ್, ಸ್ಕೆಚ್, ಕ್ಯಾನ್ವಾಸ್ ಪೇಂಟಿಂಗ್, ವಾಟರ್ ಕಲರ್, ಅಕ್ರಿಲಿಕ್, ಓಯಿಲ್ ಪೇಂಟಿಂಗ್ ಹೀಗೆ ಅನೇಕ ಶೈಲಿಗಳು ಇವೆ. ಅಷ್ಟೆ ಅಲ್ಲದೆ, ಕಾಮಿಕ್ ಬುಕ್ ಇಲೆಸ್ಟ್ರೇಷನ್, ಅನಿಮೇಶನ್, ಗೇಮ್ ಡಿಸೈನ್, ಫ್ಯಾಷನ್ ಡಿಸೈನ್, ವೃತ್ತಿಪರ ಪ್ರಚಾರಚಿತ್ರಗಳು (Advertising Illustration) ಇವೆಲ್ಲವೂ ಚಿತ್ರಕಲೆಯ ಅಸ್ತಿತ್ವವನ್ನೇ ಮುಂದುವರೆಸಿದಂತವು ಎನ್ನಬಹುದು. ಚಿತ್ರಕಲೆ ಒಂದು ಶಾಶ್ವತ ಜಗತ್ತು. ಅದು ಕಾಲವನ್ನು ಮೀರಿ ಜೀವಿಸುತ್ತದೆ. ನಾವು ಅದನ್ನು ನೋಡಬಹುದು, ಭಾವಿಸಬಹುದು, ಅನುಭವಿಸಬಹುದು. ನಾವು ಕಲಾವಿದರ ದೃಷ್ಟಿಕೋನದಿಂದ ಲೋಕವನ್ನು ನೋಡಲು ಕಲಿತರೆ, ಈ ಜಗತ್ತೇ ಬಣ್ಣದಿಂದ ತುಂಬಿರುವ ಕ್ಯಾನ್ವಾಸ್ ಎನ್ನುವ ಭಾವನೆ ಮೂಡುತ್ತದೆ. ಇಂತಹ ಚಿತ್ರಗಳು ನಿನ್ನೆಯ ದಿನ ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಸಂಘ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ವಿಪ್ರ ಯುವ ಮಹೋತ್ಸವದ ಅಂಗವಾಗಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ ನೋಡುಗನ ಮನಸೂರೆಗೊಂಡವು. ಈ ಪ್ರದರ್ಶನದಲ್ಲಿ ಶಿವಮೊಗ್ಗದವರೇ ಆದ ವಿಕ್ರಮ್ ಆರ್ಟ್ಸ್‌ನ ವಾಸು ಅವರ ಹಲವು ಚಿತ್ರಗಳು ಪ್ರದರ್ಶನಗೊಂಡಿದ್ದವು. ಕಲಾಲೋಕದಲ್ಲಿ ತನ್ನದೇ ಶೈಲಿಯಲ್ಲಿ ಚಿತ್ರಗಳನ್ನು ಮೂಡಿಸುವ ವಾಸು ಅವರು ಉಡುಪಿಯ ವೈದಿಕ ಮನೆತನದಿಂದ ಬಂದ ಯು. ನಾರಾಯಣಮೂರ್ತಿ ಹಾಗೂ ಯು. ಶಾರದಾಂಬಾ ದಂಪತಿಗಳಿಗೆ ಜನಿಸಿದ ಮೂವರು ಮಕ್ಕಳಲ್ಲಿ 1962ರ ಏಪ್ರಿಲ್ 3ರಂದು, ಎರಡನೇ ಮಗನಾಗಿ ಜನಿಸಿದರು. ಹಳೇ ಅಂಚೆಕಛೇರಿ ರಸ್ತೆಯಲ್ಲಿದ್ದ ಇವರು ಪ್ರಾಥಮಿಕ ಶಿಕ್ಷಣವನ್ನು ಮೇರಿ ಮ್ಯಾಕ್ಯುಲೇಟ್ ಶಾಲೆಯಲ್ಲಿ ಹಾಗೂ ಬಿ.ಕಾಮ್ ಪದವಿ ಶಿಕ್ಷಣವನ್ನು ಎನ್‌ಇಎಸ್ ಸಂಸ್ಥೆಯ ಸಂಜೆ ಕಾಲೇಜಿನಲ್ಲಿ ಪಡೆದರು. Klive Special Article ಕಲಾವಿದರಾದ ಅವರ ತಂದೆ ಯು. ನಾರಾಯಣಮೂರ್ತಿ ಅವರು 1952ರಲ್ಲೇ ವಿಕ್ರಮ್ ಆರ್ಟ್ಸ್ ಮತ್ತು ಕ್ರಾಫ್ಟ್ ಆರಂಭಿಸಿದರು. ಕಾಲಾನಂತರ 1990ರಲ್ಲಿ ವಾಸು ಅವರು ಅದನ್ನು ಮಾರಿಗದ್ದಿಗೆ ಸಮೀಪ ಸ್ಥಳಾಂತರಿಸಿ ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ.
ಅಂದಿನ ದಿನಮಾನಗಳಲ್ಲಿ ತಮ್ಮ ಬದುಕು ನಡೆಸಿಕೊಂಡು ಬರಲು ಆಸರೆಯಾಗಿದ್ದ ಕಲಾವಿದನಿಗೆ ವಾಣಿಜ್ಯ ಉದ್ಯಮವಾಗಿ ಬೆಳೆಯಲಾರಂಭಿಸಿದ ಚಿತ್ರಕಲೆಯನ್ನು ಸಾಂಪ್ರದಾಯಿಕ ಶೈಲಿಯಲ್ಲೂ ಕೂಡ ಉಳಿಸಿಕೊಂಡು ಬರುವ ಕಾರ್ಯ ಜತಜತೆಗೇ ನಡೆಸಿಕೊಂಡು ಬಂದಿರುವುದು ಕಲೆಯ ಮೇಲಿನ ಅವರ ಅದಮ್ಯ ಆಸಕ್ತಿ, ಶ್ರದ್ಧೆ ಹಾಗೂ ಗೌರವ ಎನ್ನಬಹುದು. ಇವರ ಕುಂಚದಲ್ಲಿ ಮೂಡಿಬಂದ ಚಿತ್ರಗಳು ನಗರವಲ್ಲದೇ ದೇಶದ ನಾನಾ ಕಡೆಯೂ ರಾರಾಜಿಸುತ್ತಿರುವುದು ವಿಶೇಷ. ಕಂಚಿ ಕಾಮಕೋಟಿ ಪೀಠ ಹಾಗೂ ಮೇಲುಕೋಟೆಗಳಲ್ಲಿಯು ಕೂಡ ಇವರ ಕುಂಚದ ಕಲೆಯನ್ನ ಕಾಣಬಹುದು. ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಏರ್ಪಡಿಸುವ ಪ್ರದರ್ಶನ ಹಾಗೂ ಶಿವಮೊಗ್ಗ ದಸರಾಗಳಲ್ಲಿ ಇವರ ಹಲವು ಕೃತಿಗಳು ಪ್ರದರ್ಶನಗೊಂಡು ಜನಮನ ಗೆದ್ದಿದೆ. ಮುಂದುವರಿಯುತ್ತಿರುವ ಡಿಜಿಟಲ್ ಯುಗದಲ್ಲಿ ಸಾಂಪ್ರದಾಯಿಕವಾದ ಕಲಾಶೈಲಿ ಹಿಂದೆ ಸರಿಯುತ್ತಿರುವುದನ್ನ ಮನಗಂಡು ಇಂದಿನ ಜನತೆಗೆ ಕಲಾಸಕ್ತಿ ಮೂಡಿಸುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನ ಯುವಕರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಆದಿತ್ಯಪ್ರಸಾದ್ ಎಂ ಛಾಯಾಗ್ರಾಹರು, ಹವ್ಯಾಸಿ ಲೇಖಕರು, ಶಿವಮೊಗ್ಗ
Fisheries Training Centre ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್.ಪ್ರಾಜೆಕ್ಟ್ ನಲ್ಲಿ ದಿ:15.07.2025 ರಂದು 01 ದಿನದ “ವಿವಿಧ ಜಲವಿನ್ಯಾಸಗಳಲ್ಲಿ ಮೀನುಮರಿ ಪಾಲನೆ/ಮೀನುಕೃಷಿ” ಕುರಿತು ತರಬೇತಿ ಕಾರ್ಯಕ್ರಮ ಆಯೋಜಿಸಿದ್ದು, ಆಸಕ್ತರು ನೊಂದಾಯಿಸಿಕೊಳ್ಳಬಹುದಾಗಿದೆ. ಈ ಹಿಂದಿನ ನೊಂದಣಿಯ ಪಟ್ಟಿಯೊಂದಿಗೆ ಜೇಷ್ಠತೆ ಆದಾರದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್.ಪ್ರಾಜೆಕ್ಟ್ , ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ಮೀನುಗಾರಿಕೆ ಸಹಾಯವಾಣಿ: 8277200300/ 9483009856/9343458912 ಗಳನ್ನು ಸಂಪರ್ಕಿಸುವುದು.
National Health Campaign ರಾಷ್ಟ್ರೀಯ ಆರೋಗ್ಯ ಅಭಿಯಾನ ಎನ್‌ಹೆಚ್‌ಎಂ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ವೈದ್ಯಕೀಯ ಹಾಗೂ ಅರೆವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಜೂನ್ 23 ರಂದು ಮೂಲ ದಾಖಲಾತಿ ಪರಿಶೀಲನೆಗೆ ನೇರ ಸಂದರ್ಶನ ಏರ್ಪಡಿಸಲಾಗಿದ್ದು, ಭಾಗವಹಿಸಿದ್ದ ಅಭ್ಯರ್ಥಿಗಳ ರೋಷ್ಟರ್ ಕಂ ಮೇರಿಟ್ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಈ ಸಂಬಂಧ ಅಭ್ಯರ್ಥಿಗಳ ಆಕ್ಷೇಪಣೆ ಇದ್ದಲ್ಲಿ ಲಿಖಿತ ರೂಪದಲ್ಲಿ ಜು. 15 ರೊಳಗಾಗಿ ಜಿಲ್ಳಾ ಆರ್.ಸಿ.ಹೆಚ್. ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಎನ್.ಹೆಚ್.ಎಂ. ವಿಭಾಗಕ್ಕೆ ಸಲ್ಲಿಸುವಂತೆ ಆರ್.ಸಿ.ಹೆಚ್. ಅಧಿಕಾರಿಗಳು ತಿಳಿಸಿದ್ದಾರೆ.
Shivamogga Cycle Club ಪರಿಸರ ಸಂರಕ್ಷಣೆ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ಸೈಕಲ್ ಜಾಥಾ ನಡೆಸುತ್ತಿರುವ ತುಮಕೂರಿನ ಪರಿಸರ ಪ್ರೇಮಿ ಮಹಾಲಿಂಗ ಅವರಿಗೆ ಶಿವಮೊಗ್ಗ ಸೈಕಲ್ ಕ್ಲಬ್ ವತಿಯಿಂದ. ಗೌರವಿಸಲಾಯಿತು.
ಶಿವಮೊಗ್ಗ ಸೈಕಲ್ ಕ್ಲಬ್ ಪ್ರಮುಖರಾದ ನರಸಿಂಹಮೂರ್ತಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ. ಎಲ್ಲರೂ ಪರಿಸರ ರಕ್ಷಣೆಗೆ ಪೂರಕವಾದ ರೀತಿಯಲ್ಲಿ ಜೀವನಶೈಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸೈಕಲ್ ತುಳಿಯುವುದರಿಂದ ದೇಹ ಹಾಗೂ ಮಾನಸಿಕ ಸದೃಢತೆ ವೃದ್ಧಿಸುತ್ತದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ಶಿವಮೊಗ್ಗ ಸೈಕಲ್ ಕ್ಲಬ್ ನ 50ಕ್ಕೂ ಹೆಚ್ಚು ಜನ ಸದಸ್ಯರು ಗಿನ್ನೆಸ್ ಹಾಗೂ ಲಿಮ್ಕಾ ಪ್ರಶಸ್ತಿ ಪುರಸ್ಕೃತರು ಇದ್ದಾರೆ. ಕರ್ನಾಟಕದಲ್ಲಿ ಒಂದು ಮಾದರಿ ಸೈಕಲ್ ಕ್ಲಬ್ ಆಗಿದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಸುಂದರವಾದ ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು.
Shivamogga Cycle Club ಈಗಾಗಲೇ 20ಕ್ಕೂ ಹೆಚ್ಚು ಜಿಲ್ಲೆಗಳನ್ನು ಪ್ರವಾಸ ಮಾಡಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ನೀಡಿ ಜಿಲ್ಲಾಡಳಿತವನ್ನು ಒತ್ತಾಯಿಸುತ್ತಿದ್ದೇವೆ ಎಂದು ತುಮಕೂರಿನ ಪರಿಸರ ಪ್ರೇಮಿ ಮಹಾಲಿಂಗ ತಿಳಿಸಿದರು.
ಪ್ರಮುಖರಾದ ಮನೋಜ್, ನರಸಿಂಹಮೂರ್ತಿ, ಮಂಜು ಜಾವಳ್ಳಿ, ವಿಘ್ನೇಶ್, ಪ್ರಕಾಶ್ ಮತ್ತಿತರರು ಇದ್ದರು.
Nalanda Chess Academy ನಳಂದ ಚೆಸ್ ಅಕಾಡೆಮಿ ವತಿಯಿಂದ ಅಂತರ ಶಾಲಾ ಚೆಸ್ ಪಂದ್ಯಾವಳಿಯನ್ನು ಜು, 13ರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
Nalanda Chess Academy ಈ ಪಂದ್ಯಾವಳಿಯಲ್ಲಿ 8, 10, 12, 14,ಮತ್ತು 16 ವರ್ಷದೊಳಗಿನ ಬಾಲಕ-ಬಾಲಕಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಪ್ರಥಮ ಸ್ಥಾನ ಪಡೆದ ಮಕ್ಕಳಿಗೆ 2025-26 ರ ರೋಲಿಂಗ್ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹೊಸಮನೆ 1ನೇ ಅಡ್ಡ ರಸ್ತೆಯ ನಳಂದ ಚೆಸ್ ಅಕಾಡೆಮಿಗೆ ಸಂಪರ್ಕಿಸಬಹುದು. ಹೆಸರು ನೋದಾಯಿಸಲು ಜು,11 ರೊಳಗೆ ಮೊ. ೯೮೪೪೪೩೬೨೨೭೬, ೯೯೪೫೮೦೯೬೨ ರವರಿಗೆ ಸಂಪರ್ಕಿಸಲು ಕೋರಲಾಗಿದೆ.
Patanjali Yoga and Nature Institute ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಶಿವಮೊಗ್ಗ ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರದ ವತಿಯಿಂದ ಕೆಪಿಸಿಸಿ ಸಂಯೋಜಕಿ, ಅಸಂಘಟಿತ ಕೂಲಿ ಕಾರ್ಮಿಕರ ಮಹಿಳಾ ಜಿಲ್ಲಾಧ್ಯಕ್ಷೆ ಕವಿತಾ ಥೋರತ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪತಂಜಲಿ ಜೆ.ನಾಗರಾಜ್, ಪತಂಜಲಿ ಆಡಳಿತಾಧಿಕಾರಿ ಎಂ.ಪೂವಯ್ಯ, ಗಾಯಿತ್ರಿಗೌಡ, ನರಸಿಂಹ, ಸರಳ, ಸನ್ಮಾನಿತರು ಸೇರಿದಂತೆ ಹಲವರು ಉಪಸ್ಥಿತರಿದ್ದರು
Department of Social Welfare ಸಾಗರ ಸಮಾಜ ಕಲ್ಯಾಣ ಇಲಾಖೆಯು ತಾಲೂಕು ಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದ ನಿರ್ವಹಣಾ ಸಮಿತಿಗೆ ಪರಿಶಿಷ್ಟ ಜಾತಿಗೆ ಸೇರಿದ ಮೂರು ಜನ ನಾಮನಿರ್ದೇಶಿತ ಸದಸ್ಯರನ್ನು ಆಯ್ಕೆ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಜು. 15 ರೊಳಗಾಗಿ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಸಾಗರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 9480843192 ನ್ನು ಸಂಪರ್ಕಿಸುವುದು.
Department of Empowerment of Persons with Disabilities ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2025-26ನೇ ಸಾಲಿನ ಮೆಟ್ರಿಕ್ ಪೂರ್ವ ಮತ್ತು ನಂತರದ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತ ವಿದ್ಯಾರ್ಥಿಗಳು ಪೋರ್ಟಲ್‌ನಲ್ಲಿ https://ssp.postmatric.karnataka.gov.in/homepage.aspx , ಪ್ರಿ-ಮೆಟ್ರಿಕ್ ವಿದ್ಯಾರ್ಥಿಗಳು https://ssp.postmatric.karnataka.gov.in/ssppre, ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿಗಳು https://ssp.postmatric.karnataka.gov.in/post sa/signing.aspx ಮೂಲಕ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
Department of Empowerment of Persons with Disabilities ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಆಲ್ಕೋಳ ಸರ್ಕಲ್, ಬಿ.ಎಸ್.ಎನ್.ಎಲ್. ಕಚೇರಿ ಪಕ್ಕ, ಸಾಗರ ರಸ್ತೆ, ಶಿವಮೊಗ್ಗ, ದೂ.ಸಂ.: 08182- 251676 ಹಾಗೂ ಶಿವಮೊಗ್ಗ -9980150110, ಭದ್ರಾವತಿ-7899137243, ಶಿಕಾರಿಪುರ-9741161346, ಸಾಗರ-9535247757, ಸೊರಬ-9110493122, ತೀರ್ಥಹಳ್ಳಿ-9480767638 ಹಾಗೂ ಹೊಸನಗರ-9731922693 ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರುಗಳನ್ನು ಸಂಪರ್ಕಿಸಬಹುದು.