Rotary Club Shimoga Midtown ಉದ್ಯಮ ಮತ್ತು ಕೈಗಾರಿಕೆಯ ಆಡಳಿತದಲ್ಲಿ ನವೀನ ಹಣಕಾಸು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಅಳವಡಿಕೆಯಿಂದ ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ ಕ್ಷೇತ್ರದಲ್ಲಿ ಉಂಟಾಗುತ್ತಿರುವ ವ್ಯಾಪಕ ಪರಿಣಾಮದ ಬಗ್ಗೆ ಹೆಚ್ಚಿನ ಅರಿವು ಹೊಂದಿರುವುದು ಅವಶ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ರೋಟರಿ ಮಿಡ್‌ಟೌನ್ ಸಭಾಂಗಣದಲ್ಲಿ ಆಯೋಜಿಸಿದ್ದ ಹಣಕಾಸು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ನಿರಂತರ ನವೀಕರಣಗೊಳ್ಳುತ್ತಿರುವ ತಂತ್ರಜ್ಞಾನವನ್ನು ವ್ಯವಹಾರಗಳಲ್ಲಿ ಅಳವಡಿಸಿಕೊಂಡು ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು ಎಂದು ತಿಳಿಸಿದರು.
50 ವರ್ಷದಲ್ಲಿ ತಂತ್ರಜ್ಞಾನವು ಸಾಕಷ್ಟು ಬದಲಾವಣೆಗೆ ಒಳಗಾಗಿದ್ದು, ನವೀನ ತಂತ್ರಜ್ಞಾನವನ್ನು ಅಳವಡಿಸಿ ಅದಕ್ಕೆ ಹೊಂದಿಕೊಳ್ಳುವವರು ಉದ್ಯಮದಲ್ಲಿ ಯಶಸ್ಸು ಸಾಧಿಸುತ್ತಾರೆ. ಈ ರೀತಿಯ ಸೆಮಿನಾರ್ ಉದ್ಯಮಿಗಳಿಗೆ ಸಹಕಾರಿಯಾಗುತ್ತದೆ ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಸರ್ಕಾರದ ಆಡಳಿತದಲ್ಲಿ ಹಣಕಾಸು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ವ್ಯಾಪಕ ಅಳವಡಿಕೆಯಿಂದ ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳು, ಗ್ರಾಹಕರಲ್ಲಿನ ಹಣಕಾಸು ಕಾರ್ಯಚರಣೆ, ಲೆಕ್ಕಪತ್ರ ನಿರ್ವಹಣೆ ಹಾಗೂ ವ್ಯವಹಾರ ನಡೆಸುವ ವಿಧಾನದಲ್ಲಿನ ಧನಾತ್ಮಕ ಬದಲಾವಣೆ ಆಗುತ್ತದೆ. ಹಣಕಾಸು ತಂತ್ರಜ್ಞಾನ ಹಾಗೂ ಡಿಜಿಟಲ್ ಹಣದ ಆವಿಷ್ಕಾರದಿಂದ ಬ್ಯಾಂಕಿಂಗ್ ವ್ಯವಹಾರವು ವೇಗಗತಿಯಲ್ಲಿ ಬೆಳೆಯುತ್ತಿದೆ ಎಂದರು.
Rotary Club Shimoga Midtown ಸನ್ನದು ಲೆಕ್ಕಪರಿಶೋಧಕ ಎನ್.ಎಲ್.ಪ್ರಸಾದ್ ಮಾತನಾಡಿ, ನವೀನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳದೆ ಇರುವವರಿಗೆ ಮಾತ್ರ ವೃತ್ತಿಯಲ್ಲಿ ಮುಂದುವರಿಯುವುದು ಕಷ್ಟವಾಗಲಿದೆ ಎಂದರು. ಎಸ್‌ಐಆರ್‌ಸಿ ಮಾಜಿ ಚೇರ್ಮನ್ ಎಸ್.ರಮೇಶ್ ಮತ್ತು ಐಸಿಎಂಎ ಮೈಸೂರು ಚೇರ್ಮನ್ ಪುರುಷೋತ್ತಮ್ ಮಾತನಾಡಿದರು.
ವಿಷಯ ತಜ್ಞ ವಿ.ಗುರುಪ್ರಸಾದ್ ಮಾತನಾಡಿ, ಹಣಕಾಸು ಮತ್ತು ಕೃತಕ ಬುದ್ಧಿಮತ್ತೆಯ ನಿಯಂತ್ರಕ ತಂತ್ರಜ್ಞಾನದ ಹತೋಟಿಯನ್ನು ಸರ್ಕಾರವು ಆಡಳಿತದಲ್ಲಿ ಹೇಗೆ ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ. ಇದರಿಂದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿನ ಲೆಕ್ಕಪತ್ರ ನಿರ್ವಹಣೆ ಹಾಗೂ ಹಣಕಾಸು ವಲಯದಲ್ಲಿ ಹೇಗೆ ಬದಲಾವಣೆ ಆಗುತ್ತಿದೆ ಎಂಬುದನ್ನು ಪಿಪಿಟಿ ಮೂಲಕ ವಿಶ್ಲೇಷಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಪ್ರೋಗ್ರಾಮ್ ಕಮಿಟಿ ಚೇರ್ಮನ್ ಶರತ್, ನಿರ್ದೇಶಕರಾದ ಜಿ.ವಿ.ಕಿರಣ್ ಕುಮಾರ್, ವಸಂತ್ ಹೋಬಳಿದಾರ್, ಪ್ರದೀಪ್ ವಿ ಎಲಿ, ಲಕ್ಷ್ಮೀದೇವಿ ಗೋಪಿನಾಥ್, ವಿ.ಕೆ.ಜೈನ್, ಕೆ.ಬಿ.ಶಿವಕುಮಾರ್, ರವಿ ಪ್ರಕಾಶ್ ಜನ್ನಿ, ವಿನೋದ್ ಕೆ. ಜಿ, ಬಿ.ಸುರೇಶ್ ಕುಮಾರ್, ಮಾಜಿ ಅಧ್ಯಕ್ಷರಾದ ಕೆ.ವಿ.ವಸಂತ್ ಕುಮಾರ್, ಅಶ್ವಥ್ ನಾರಾಯಣ್ ಶೆಟ್ಟಿ, ಡಿ.ಎಂ.ಶಂಕ್ರಪ್ಪ, ಎನ್.ಗೋಪಿನಾಥ್, ಹಾಗೂ ಎಂ.ರಾಜು, ಕಮಲಾಕ್ಷರಪ್ಪ, ಸನ್ನದು ಲೆಕ್ಕ ಪರಿಶೋಧಕರು, ಲೆಕ್ಕ ಪರಿಶೋಧಕರು, ತೆರಿಗೆ ಸಲಹೆಗಾರರು, ಲೆಕ್ಕಿಗರು, ಕೈಗಾರಿಕಾ ಸಂಘಗಳ ಪದಾಧಿಕಾರಿಗಳು, ಸಂಘದ ಸಂಯೋಜಿತ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಜೆ ಎನ್ ಎನ್ ಸಿ ಇ ಸಿಬ್ಬಂದಿ ಭಾಗವಹಿಸಿದ್ದರು.