Wednesday, August 12, 2026
Wednesday, August 12, 2026
Home Blog Page 235

District Consumer Disputes Redressal Commission ಅನಾರೋಗ್ಯದ ಕೋಳಿಮರಿ ವಿತರಣೆ.ಗ್ರಾಹಕರಿಗೆ ಪರಿಹಾರ ನೀಡಲು ಕೋರ್ಮಲ ಹ್ಯಾಚರೀಸ್ ಗೆ ಆದೇಶ

0

District Consumer Disputes Redressal Commission ಅನಾರೋಗ್ಯವಾಗಿರುವ ಕೋಳಿಮರಿಗಳನ್ನು ವಿತರಿಸಿ ನಷ್ಟ ಉಂಟು ಮಾಡಿದ ಎದುರುದಾರ ಕೋರ್ಮಲ ಹ್ಯಾಚರೀಸ್, ಕೆ.ಆರ್ ರಸ್ತೆ ಬೆಂಗಳೂರು ಇವರು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ತಬಸುಮ್ ಸುಲ್ತಾನ ಶಿವಮೊಗ್ಗ ಇವರು ಕೋರ್ಮಲ ಹ್ಯಾಚರೀಸ್, ಕೆ.ಆರ್ ರಸ್ತೆ ಬೆಂಗಳೂರು ಇವರ ವಿರುದ್ದ ದೂರನ್ನು ಸಲ್ಲಿಸಿ ದಿ: 24-12-2024 ರಂದು ರೂ.1,63,200 ಗಳನ್ನು ಪಾವತಿಸಿ 4896 ಬ್ರಾಯಲರ್ ಕೋಳಿ ಮರಿಗಳನ್ನು ಖರೀದಿಸಿದ್ದರು.

ದಿ: 25-12-2024 ರಂದು ಎದುರುದಾರರು ದೂರುದಾರರಿಗೆ ಕೋಳಿಮರಿಗಳನ್ನು ಕೊಡುವಾಗ ಸುಮಾರು 145 ಮರಿಗಳು ಸತ್ತಿರುತ್ತವೆ. ಈ ವಿಷಯವನ್ನು ಎದುರುದಾರರಿಗೆ ತಿಳಿಸಿದಾಗ ಎದುರುದಾರರು ಸತ್ತ ಕೋಳಿಮರಿಗಳ ಹಣವನ್ನು ಹಿಂದಿರುಗಿಸುವುದಾಗಿ ತಿಳಿಸಿರುತ್ತಾರೆ.

ನಂತರದಲ್ಲಿ ದೂರುದಾರರು ಕೋಳಿಮರಿಗಳಿಗೆ ಔಷಧಿ ಮತ್ತು ಆಹಾರವನ್ನು ನೀಡುತ್ತಾ ಬಂದರೂ 03 ವಾರಗಳಲ್ಲಿ ಸುಮಾರು 900 ರಿಂದ 950 ಮರಿಗಳು ಸಾವನಪ್ಪಿರುತ್ತವೆ ಹಾಗೂ ಸುಮಾರು 250 ಮರಿಗಳು 1.2 ರಿಂದ 1.3 ಕೆ ಜಿ ಒಳಗೆ ತೂಕವನ್ನು ಹೊಂದಿರುತ್ತವೆ.

ಈ ವಿಷಯವನ್ನು ದೂರುದಾರರು ಎದುರುದಾರರಿಗೆ ಆಗಾಗ್ಗೆ ತಿಳಿಸಿದ್ದು ಎದುರುದಾರರು ಸಾವನ್ನಪ್ಪಿರುವ ಕೋಳಿಮರಿಗಳ ಮೌಲ್ಯವನ್ನು ಹಿಂದುರಿಗಿಸಿ ಕೊಡುವುದಾಗಿ ಭರವಸೆ ನೀಡಿ, 215+145 ಮರಿಗಳ ಮೊತ್ತ ರೂ.12,240 ಮಾತ್ರ ಹಿಂದಿರುಗಿಸಿರುತ್ತಾರೆ. ನಂತರ ಕರೆ ಮಾಡಿದರೆ ನಂಬರ್ ಬ್ಲಾಕ್ ಮಾಡಿರುತ್ತಾರೆ.
ಆದ್ದರಿಂದ ದೂರುದಾರರು ಎದುರುದಾರರು ಅನಾರೋಗ್ಯವಾಗಿರುವ ಕೋಳಿ ಮರಿಗಳನ್ನು ವಿತರಿಸಿ ನಷ್ಟಕ್ಕೆ ಕಾರಣರಾಗಿದ್ದು ಹಾಗೂ ಸೇವಾ ನ್ಯೂನ್ಯತೆ ಎಸಗಿರುವುದಕ್ಕಾಗಿ ತಮಗೆ ಸೂಕ್ತ ಪರಿಹಾರ ನೀಡುವಂತೆ ಕೋರಿ ಆಯೋಗಕ್ಕೆ ದೂರು ಸಲ್ಲಿಸಿರುತ್ತಾರೆ.

District Consumer Disputes Redressal Commission ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ಇತರೆ ದಾಖಲೆಗಳನ್ನು ಪರಿಶೀಲಿಸಿ, ಉಭಯ ಪಕ್ಷಗಾರರ ವಾದ-ವಿವಾದಗಳನ್ನು ಆಲಿಸಿ, ಎದುರುದಾರರು ದೂರುದಾರರಿಗೆ ಸರಬರಾಜು ಮಾಡಿರುವ ಕೋಳಿಮರಿಗಳ ಆರೋಗ್ಯ ಗುಣಮಟ್ಟದಲ್ಲಿ ಕೊರತೆ ಇರುವುದನ್ನು ಪರಿಗಣಿಸಿ ಎದುರುದಾರರು ದೂರುದಾರರಿಗೆ ರೂ.25000 ಗಳ ವಾರ್ಷಿಕ ಶೇ.9 ರ ಬಡ್ಡಿಯನ್ನು ಸೇರಿಸಿ ದಿ: 13-01-2025 ರಿಂದ ಈ ಆದೇಶವಾದ 45 ದಿನಗಳ ಒಳಗೆ ಪಾವತಿಸಬೇಕು.

ತಪ್ಪಿದಲ್ಲಿ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ನೀಡುವವರೆಗೆ ಪಾವತಿಸಬೇಕು ಹಾಗೂ ರೂ.10,000 ಗಳನ್ನು ದೂರಿನ ಖರ್ಚುವೆಚ್ಚಕ್ಕಾಗಿ ಈ ಆದೇಶವಾದ 45 ದಿಗನಳ ಒಳಗಾಗಿ ಪಾವತಿಸಬೇಕು. ತಪ್ಪಿದಲ್ಲಿ ವಾರ್ಷಿಕ ಶೇ.12 ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ನೀಡುವವರೆಗೆ ಪಾವತಿಸಬೇಕೆಂದು ಆಯೋಗದ ಅಧ್ಯಕ್ಷರಾದ ಶಿವಣ್ಣ ಮತ್ತು ಸದಸ್ಯ

Department of Agriculture & Farmers Welfare ರಾಜ್ಯದ ಕೃಷಿ ಅಭಿವೃದ್ಧಿಗೆ ಅನುದಾನ & ಯೋಜನೆ ಅನುಮೋದನೆಗೆ ಕೇಂದ್ರ ಸಚಿವರನ್ನ ಭೇಟಿ ಮಾಡಿದ ಕೃಷಿಸಚಿವ ಚಲುವರಾಯಸ್ವಾಮಿ

0

Department of Agriculture & Farmers Welfare ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿಯಾಗಿ ರಾಜ್ಯದ ರೈತ ಸಮುದಾಯದ ಹಿತಕ್ಕಾಗಿ ಬಾಕಿ ಇರುವ ಹಲವು ಮಹತ್ವದ ವಿಷಯಗಳನ್ನು ತುರ್ತಾಗಿ ಪರಿಹರಿಸುವಂತೆ ಮನವಿ ಮಾಡಿದರು.

ರಾಜ್ಯದ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚುವರಿ ಅನುದಾನ, ಬಿಡುಗಡೆಯಾಗದ ನಿಧಿ, ಯೋಜನೆಗಳ ಅನುಮೋದನೆ ಹಾಗೂ ಇತರ ಸಮಸ್ಯೆಗಳನ್ನು ವಿವರವಾಗಿ ಚರ್ಚಿಸಿದ ಅವರು, ಸಭೆಯಲ್ಲಿ ಹಲವಾರು ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸಚಿವರ ಮುಂದಿಟ್ಟರು..

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (PM-RKVY)

ಈ ಯೋಜನೆ ಅಡಿಯಲ್ಲಿ ರೈತರ ಹೆಚ್ಚುತ್ತಿರುವ ಯಾಂತ್ರೀಕರಣ ಬೇಡಿಕೆಯನ್ನು ಗಮನಿಸಿ PM-RKVY-SMAM ಯೋಜನೆಯಡಿ ಈ ವರ್ಷಕ್ಕೆ ಹೆಚ್ಚುವರಿ 250 ಕೋಟಿ ರೂಪಾಯಿ ಅನುದಾನವನ್ನು ಕೋರಿದರು. ಅದೇ ರೀತಿ ಮಳೆಯ ಮೇಲೆ ಅವಲಂಬಿತವಾಗಿರುವ ಕರ್ನಾಟಕದ ಕೃಷಿಯಲ್ಲಿ ಆಗಾಗ ಬೆಳೆ ನಷ್ಟಗಳನ್ನು ತಪ್ಪಿಸಲು ಸೂಕ್ಷ್ಮ ನೀರಾವರಿ ಯೋಜನೆಗೆ (PM-RKVY-PDMC) ಹೆಚ್ಚುವರಿ 250 ಕೋಟಿ ರೂಪಾಯಿ ಬೇಕು ಎಂದು ತಿಳಿಸಿದರು..

ಮೂಲಸೌಕರ್ಯ ಕೇಂದ್ರಿತ ಯೋಜನೆಗಳನ್ನು ಪೂರ್ಣಗೊಳಿಸಲು PM-RKVY-DPR ಅಡಿ 9.45 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಬಿಡುಗಡೆಗೆ ಮನವಿ ಮಾಡಿದರು. ಇದಲ್ಲದೆ PM-RKVY-DPR ಮತ್ತು SMAM ಅಡಿ 2025-26ರಲ್ಲಿ ಬಿಡುಗಡೆಯಾಗಬೇಕಾದ ಬಾಕಿ ನಿಧಿಯನ್ನು ತುರ್ತಾಗಿ ನೀಡುವಂತೆ ಕೋರಿದರು..

ಡಿಪಿಆರ್‌ನಲ್ಲಿ 21.17 ಕೋಟಿ ಮತ್ತು SMAMನಲ್ಲಿ 1.512 ಕೋಟಿ ಸೇರಿ ಒಟ್ಟು 22.682 ಕೋಟಿ ರೂಪಾಯಿ ಕೊರತೆ ಇರುವುದನ್ನು ಮನವರಿಕೆ ಮಾಡಿದರು. 2024-25ರಲ್ಲಿ ಬಾಕಿ ಇದ್ದ 152.98 ಕೋಟಿ ರೂಪಾಯಿ ಬಿಲ್‌ಗಳನ್ನು 2025-26ರಲ್ಲಿ ಪಾವತಿಸಿದ್ದರಿಂದ ಈ ವರ್ಷದ ಅನುದಾನದಲ್ಲಿ ಹೆಚ್ಚಿನ ಕೊರತೆ ಉಂಟಾಗಿದೆ ಎಂದು ವಿವರಿಸಿದರು..

ಡಿಜಿಟಲ್ ಕ್ರಾಪ್ ಸರ್ವೇಗೆ ಕೇಂದ್ರ ಅನುಮೋದಿಸಿದ 25.704 ಕೋಟಿ ರೂಪಾಯಿಯಲ್ಲಿ SCSP ಮತ್ತು TSP ಅಡಿ ಬಿಡುಗಡೆಯಾದ 3.10 ಕೋಟಿ ರೂಪಾಯಿಯನ್ನು ಸಾಮಾನ್ಯ ಶೀರ್ಷಿಕೆಯಡಿ PFMS ಮೂಲಕ ಬಿಡುಗಡೆ ಮಾಡಿ ಹಣದ ಹರಿವನ್ನು ಸುಗಮಗೊಳಿಸುವಂತೆ ಮನವಿ ಮಾಡಿದರು.

ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕತಾ ಅಭಿಯಾನ (NFSNM) ಅಡಿ ಹಸಿರು ಗೊಬ್ಬರ ಬೀಜ ವಿತರಣೆಗೆ ಅನುಮೋದನೆ, ಎತ್ತುಗಳಿಂದ ಎಳೆಯುವ ಉಪಕರಣಗಳು, ಸ್ಥಳೀಯ ನಿರ್ದಿಷ್ಟ ಹಸ್ತಕ್ಷೇಪಗಳಿಗೆ ಅನುಮತಿ ಕೋರಿದರು. ಹಿಂಗಾರು 2025-26ಗೆ ದ್ವಿದಳ ಧಾನ್ಯಗಳ ಅತ್ಮನಿರ್ಭರತಾ ಯೋಜನೆಯ ಪರಿಷ್ಕೃತ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, ನ್ಯೂಟ್ರಿಸಿರಿಯಲ್ಸ್ ಅಡಿ ಅಂತರರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ರಾಜ್ಯದ ಕೆಟಿಪಿಪಿ ಕಾಯ್ದೆಯಂತೆ ಹಣ ಬಳಸಲು ಅನುಮತಿ ಕೋರಲಾಯಿತು.
ಎನ್‌ಎಮ್‌ಇಒ-ಒಎಸ್ ಅಡಿ ಖಾಸಗಿ ಸೂರ್ಯಕಾಂತಿ ಹೈಬ್ರಿಡ್ ಬೀಜಗಳಾದ ADV-363, PAC-334, GK-2002 ಮತ್ತು GK-2008 ಬಳಸಲು ಅನುಮತಿ ಕೋರಿದರು..

Department of Agriculture & Farmers Welfare ರೈತಸಿರಿ ಯೋಜನೆಯನ್ನು ರಾಜ್ಯ ನಿಯಮಗಳಂತೆ ಮಿಲ್ಲೆಟ್ ರೈತರಿಗೆ DBT ಮೂಲಕ ಪ್ರೋತ್ಸಾಹ ನೀಡುವ ರೀತಿಯಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ ಮಾಡುವಂತೆ ಮನವಿ ಮಾಡಿದರು. ಆಗಸ್ಟ್-ನವೆಂಬರ್ 2025ರ ಅವಧಿಗೆ 31,340 ಅರ್ಹ ಫಲಾನುಭವಿಗಳಿಗೆ ಪಿಎಂ ಕಿಸಾನ್ ಸಹಾಯಧನ ಬಿಡುಗಡೆಯಾಗದಿರುವುದನ್ನು ತಿಳಿಸಿ ತಕ್ಷಣ ಸರಿಪಡಿಸುವಂತೆ ಕೋರಿದರು. ಬೆಂಗಳಗ್ರಾಮ್ (ಚಣ)ಗೆ RMS 2025-26ಗೆ MSP ಅನುಷ್ಠಾನ ಹಾಗೂ ಮೆಕ್ಕೆಗೆ KMS 2025-26ಗೆ PDPS ಅನುಷ್ಠಾನಕ್ಕೆ ಅನುಮೋದನೆ ಕೋರಲಾಯಿತು.

ಜಲಾನಯನ ಅಭಿವೃದ್ಧಿ ಘಟಕ 2.0ರಲ್ಲಿ ರಾಜ್ಯ ದೇಶದಲ್ಲಿ ಮೊದಲ ಸ್ಥಾನದಲ್ಲಿದ್ದು, PMKSY-WDC 3.0 ಅಡಿ 10.28 ಲಕ್ಷ ಹೆಕ್ಟೇರ್ ಜಲಾನಯನ ಮತ್ತು 193 ಸ್ಪ್ರಿಂಗ್‌ಶೆಡ್ ಯೋಜನೆಗಳಿಗೆ ಅನುಮೋದನೆ ಕೋರಲಾಯಿತು. ಮಣ್ಣು ಆರೋಗ್ಯ ಕಾರ್ಯಕ್ರಮದ ಅಡಿ ರದ್ದಾಗಿರುವ 4.18 ಕೋಟಿ ರೂಪಾಯಿ ಬಿಡುಗಡೆಗೆ ಒತ್ತಾಯಿಸಿದರು. REWARD ಅಭಿಯಾನವನ್ನು ಜೂನ್ 2027ರವರೆಗೆ ವಿಸ್ತರಿಸುವಂತೆ ಮನವಿ ಮಾಡಿದರು. ಮಂಡ್ಯದ ಹೊಸ ಕೃಷಿ ವಿಶ್ವವಿದ್ಯಾಲಯಕ್ಕೆ ICAR ಅಡಿ ಹೊಸ AICRP ಪ್ರಸ್ತಾವಗಳು ಮತ್ತು ಅನುದಾನಗಳಿಗೆ ಬೆಂಬಲ ಕೋರಿದರು..

ಇದಲ್ಲದೆ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯಗಳ ಬಲವರ್ಧನೆಗಾಗಿ ಹೊಸ ಯೋಜನೆ ರೂಪಿಸುವುದು, ಸಬ್ಸಿಡಿ ರಸಗೊಬ್ಬರಗಳಿಗೆ ಫ್ರೈಟ್ ಆನ್ ರೋಡ್ ಸೌಲಭ್ಯ ನೀಡುವುದು ಹಾಗೂ ಫರ್ಟಿಲೈಸರ್ ಫ್ಲೈಯಿಂಗ್ ಸ್ಕ್ವಾಡ್ ವರದಿಗಳಲ್ಲಿ ಸಹಿ-ಸೀಲ್ ಅಗತ್ಯತೆಯ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದರು.

ಈ ಭೇಟಿಯ ಸಂದರ್ಭದಲ್ಲಿ ರಾಜ್ಯದ ರೈತರ ಸಮಸ್ಯೆಗಳನ್ನು ಆದ್ಯತೆಯ ಮೇಲೆ ಪರಿಹರಿಸುವಂತೆ ಮನವಿ ಮಾಡಿದ ಚಲುವರಾಯಸ್ವಾಮಿ ಅವರು, ಕೇಂದ್ರದ ಬೆಂಬಲದಿಂದ ಕರ್ನಾಟಕದ ಕೃಷಿ ವಲಯವು ಇನ್ನಷ್ಟು ಬಲಗೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Scouts and Guides ಸ್ಕೌಟ್ಸ್ & ಗೈಡ್ಸ್ ನಲ್ಲಿ ಭಾಗವಹಿಸುವಿಕೆ: ನಾಯಕತ್ವ ಗುಣ ವೃದ್ಧಿಗೆ ಪ್ರೇರಕ- ರಾಜೇಶ್ ಅವಲಕ್ಕಿ

0

Scouts and Guides ಶಾಲೆಯಲ್ಲಿ ಮಕ್ಕಳು ಪಠ್ಯಪುಸ್ತಕ ತರಬೇತಿ ಜೊತೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ನಂತಹ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವ ಗುಣ ವೃದ್ಧಿಸುತ್ತದೆ ಎಂದು ಸ್ಕೌಟ್ಸ್ ಆಂಡ್ ಗೈಡ್ಸ್ ನ ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿ ರಾಜೇಶ್ ಅವಲಕ್ಕಿ ಹೇಳಿದರು.

ಮೇರಿ ಇಮ್ಯಾಕ್ಯುಲೇಟ್ ಹೈಯರ್ ಪ್ರೈಮರಿ ಸ್ಕೂಲ್ ಓಲ್ಡ್ ಸ್ಟೂಡೆಂಟ್ಸ್ 1982ರ ಬ್ಯಾಚ್ ವಿದ್ಯಾರ್ಥಿಗಳಿಂದ ಶಾಲೆಯ 20 ಮಕ್ಕಳಿಗೆ ಗೈಡ್ಸ್ ಮಕ್ಕಳ ಯೂನಿಫಾರ್ಮ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಹಾಗೂ ಸಮಾಜದಲ್ಲಿ ಬದುಕುವ ರೀತಿ ಕಲಿಸಿಕೊಡುತ್ತದೆ. ಕೌಶಲ್ಯದ ಜೊತೆ ಮನುಕುಲ ಸೇವೆ ಕಲ್ಪಿಸುವ ಸ್ಕೌಟ್ಸ್ ಆಂಡ್ ಗೈಡ್ಸ್ ಇಂದಿನ ಕಾಲಘಟ್ಟಕ್ಕೆ ಪ್ರಸ್ತುತ ಎಂದು ತಿಳಿಸಿದರು.

ಶಾಲೆಯ ಪ್ರಾಚಾರ್ಯ ಸಿಸ್ಟರ್ ಬೆನಿಕ್ಟ ಡಿಸೋಜಾ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು, ದೇಶವಿದೇಶದಲ್ಲಿ ಖ್ಯಾತಿ ಹೊಂದಿದ್ದಾರೆ. ಆದರೆ ಕಡಿಮೆ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರ ನೆನೆದು ಈ ಶಿಕ್ಷಣ ಸಂಸ್ಥೆಗೆ ಅಪಾರ ಸೇವೆ ಸಲ್ಲಿಸುತ್ತ ಬಂದಿದ್ದಾರೆ. 1982ರಲ್ಲಿ ಓದಿದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅವರ ಈ ಶಾಲೆಗೆ ಸ್ವಯಂ ಪ್ರೇರಿತರಾಗಿ ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ ಮತ್ತು ಸಮವಸ್ತ್ರಗಳ ಕೊಡುಗೆ, ವಿದ್ಯಾರ್ಥಿಗಳ ವಾರ್ಷಿಕ ಶುಲ್ಕ ಸಹಾಯ ಮಾಡುತ್ತಿದ್ದಾರೆ. ಇವರ ಸೇವೆ ಶಿಕ್ಷಣ ಸಂಸ್ಥೆಗೆ ನಿರಂತರವಾಗಿ ಮುಂದುವರೆಯಬೇಕು ಎಂದು ತಿಳಿಸಿದರು.

Scouts and Guides ಕಾರ್ಯಕ್ರಮದ ನಿರೂಪಣೆಯನ್ನು ಕ್ರಿಸ್ಟಿನಾ ಶೀಲ ನೆರವೇರಿಸಿದರು. ರವಿ ಕೋಟೋಜಿ, 1982ನೇ ಸಾಲಿನ ವಿದ್ಯಾರ್ಥಿಗಳಾದ ಸಂತೋಷ್, ಧರ್ಮೇಂದ್ರ ಸಿಂಗ್, ಜಾನಿ ಜೋಸೆಫ್, ಟ್ರೆಸ್ಸಿ ಫರ್ನಾಂಡಿಸ್, ಕ್ರಿಸ್ಟಫರ್ ನಟರಾಜ್, ಅಲ್ಲುಲ್ಲ ಖಾನ್, ಸುಹಾಸ್ ಇತರರು ಭಾಗವಹಿಸಿದ್ದರು.

DC Shivamogga ಕೈಗಾರಿಕಾ ವಸಾಹತಿನಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಕ್ರಮ : ಡೀಸಿ‌ ಪ್ರಭುಲಿಂಗ ಕವಳಿಕಟ್ಟಿ

0

DC Shivamogga ಶಿವಮೊಗ್ಗ ನಗರದ ಹೊರವಲಯ ಹಾಗೂ ತಾಲೂಕುಗಳಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ನೀರು, ವಿದ್ಯುತ್‌, ರಸ್ತೆ, ಬೀದಿದೀಪ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ 194ನೇ ಏಕಗವಾಕ್ಷಿ ಸಮಿತಿ ಮತ್ತು ಜಿಲ್ಲಾ ಮಟ್ಟದ 27ನೇ ಕೈಗಾರಿಕಾ ಸ್ಪಂದನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕೈಗಾರಿಕೋದ್ಯಮಿಗಳ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲು
ಶೀಘ್ರದಲ್ಲಿ ದಿನಾಂಕ ನಿಗಧಿಗೊಳಿಸಿ, ಸಭೆ ಆಯೋಜಿಸಲಾಗುವುದು ಎಂದರು. ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ಶೌಚಾಲಯ, ಸ್ವಚ್ಚತೆ, ನೀರು ಸರಬರಾಜು ಮತ್ತಿತರ ಅಗತ್ಯ ವಿಷಯಗಳಿಗಾಗಿ ಮಹಾನಗರಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳುವಂತೆ ಸೂಚಿಸಿದ ಅವರು, ಮಂಡ್ಲಿ ಕೈಗಾರಿಕಾ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಪಾಲಿಕೆಯಿಂದ ಈ ಹಿಂದೆ ಆಯೋಜಿಸಲಾಗಿದ್ದ ಇ-ಖಾತಾ ಅಭಿಯಾನವನ್ನು ಮತ್ತೊಮ್ಮೆ ಆಯೋಜಿಸುವಂತೆಯೂ ಸೂಚಿಸಿದರು.

ಸೋಗಾನೆ ಕೈಗಾರಿಕಾ ಪ್ರದೇಶದ ಅಭಿವೃದ್ಧಿಪಡಿಸಲು ಹಾಗೂ ಅತಿಕ್ರಮಣವನ್ನು ತೆರವುಗೊಳಿಸಲು ಅಗತ್ಯ ಸಹಕಾರ ನೀಡುವಂತೆ ಹಾಗೂ ತ್ವರಿತವಾಗಿ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕೈಗೊಂಡ ನಿರ್ಣಯದ ವರದಿಯನ್ನು ಕೂಡಲೇ ಒದಗಿಸುವಂತೆ KIADB ಅಧಿಕಾರಿಗಳಿಗೆ ಸೂಚಿಸಿದರು.


ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಹಾಗೂ ಸ್ಥಳೀಯ ಘಟಕಗಳಲ್ಲಿನ ಉತ್ಪನ್ನಗಳ ರಪ್ತು ವಹಿವಾಟನ್ನು ಹೆಚ್ಚಿಸಲು ಅನುಕೂಲವಾಗುವಂತೆ ಜಿಲ್ಲಾ ವ್ಯಾಪ್ತಿಯಲ್ಲಿನ ಕೈಗಾರಿಕಾ ವಸಾಹತುಗಳಲ್ಲಿ ಖಾಲಿ ಇದ್ದ ನಿವೇಶನಗಳ ಹಂಚಿಕೆಗಾಗಿ ಆಕಾಂಕ್ಷಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸ್ಥಳೀಯರಿಗೆ, ಈಗಾಗಲೇ ಕೈಗಾರಿಕೆಗಳನ್ನು ಆರಂಭಿಸಿದವರಿಗೆ ಹಾಗೂ ಸ್ಥಳೀಯವಾಗಿ ಲಭ್ಯವಾಗುವ ಕಚ್ಚಾವಸ್ತುಗಳನ್ನು ಬಳಸಿಕೊಂಡು ವಸ್ತುಗಳನ್ನು ಉತ್ಪಾದಿಸುವ ಘಟಕಗಳು ಸೇರಿದಂತೆ ಇಲಾಖೆಯ ಇತರ ಮಾನದಂಡಗಳನ್ನು ಅನುಸರಿಸಿ, ಹಂಚಿಕೆ ಮಾಡಲಾಗಿದ್ದುದನ್ನು ಕೂಲಂಕಶವಾಗಿ ಪರಿಶೀಲಿಸಿ ಅನುಮೋದನೆ ನೀಡಿದರು.

ಸಿದ್ಲೀಪುರ ಕೈಗಾರಿಕಾ ವಸಾಹತುವಿನಲ್ಲಿ 07ನಿವೇಶನಗಳಿಗಾಗಿ 11ಮಂದಿ, ಸಾಗರದ ಯಲಗಳಲೆಯಲ್ಲಿನ 01ನಿವೇಶನಕ್ಕಾಗಿ 04ಮಂದಿ ಹಾಗೂ ಹೊಸನಗರದ ಕೆರೆಹಳ್ಳಿಯಲ್ಲಿನ 11 ನಿವೇಶನಗಳಿಗಾಗಿ 07ಮಂದಿ ಕೈಗಾರಿಕೋದ್ಯಮಿಗಳು ಅರ್ಜಿ ಸಲ್ಲಿಸಿದ್ದರು. ಸಾಗರ ರಸ್ತೆಯಲ್ಲಿರುವ ಕೆ.ಎಸ್.ಎಸ್.ಐ.ಡಿ.ಸಿ. ಕೈಗಾರಿಕಾ ವಸಾಹತುವಿಗೆ ಸಂಬಂಧಿಸಿದಂತೆ ನಿತ್ಯದ ಕೆಲಸಗಳಿಗಾಗಿ ಆಗಮಿಸುವ ಕಾರ್ಮಿಕರು, ಸಾರ್ವಜನಿಕರು ಹಾಗೂ ವಾಹನಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಅಲ್ಲದೇ ಕೈಗಾರಿಕಾ ಪ್ರದೇಶಕ್ಕೆ ಬರುವ ವಾಹನಗಳ ಸಂಚಾರಕ್ಕೆ ತೀವ್ರ ತರಹದ ಅಡಚಣೆ ಉಂಟಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪೊಲೀಸ್‌ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಅಗತ್ಯ ಕೈಗೊಳ್ಳಲಾಗುವುದು ಎಂದರು.

ಮಂಡ್ಲಿ-ಕಲ್ಲೂರು ಮತ್ತು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಿನ ವಿದ್ಯುತ್‌ಬೇಡಿಕೆ ಇದ್ದು, ಮೆಸ್ಕಾಂ ಅಥವಾ ಕೆ.ಐ.ಎ.ಡಿ.ಬಿ. ಅವರು ಕಲ್ಪಿಸಿಕೊಡಬೇಕು. ಈ ಬಗ್ಗೆ ಅಗತ್ಯವಿರುವ ಭೂಮಿಯ ಲಭ್ಯತೆ ಇದ್ದು, ವಿದ್ಯುತ್‌ಪ್ರಸರಣ ಉಪಕೇಂದ್ರ ಆರಂಭಿಸಬೇಕಾದ ಅಗತ್ಯವಿದೆ. ಈ ಪ್ರದೇಶದಲ್ಲಿ ಇ.ಎಸ್.ಐ.ಚಿಕಿತ್ಸಾಲಯ ತೆರೆಯಬೇಕು ಎಂದು ಕೈಗಾರಿಕೋದ್ಯಮಿಗಳಾದ ಗೋಪಿನಾಥ್‌ ಅವರು ತಿಳಿಸಿದರು.

DC Shivamogga ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶ್ರೀಮತಿ ಶಿಲ್ಪಾ ಅವರು ಮಾತನಾಡಿ, ಫೌಂಡ್ರಿ ಘಟಕಗಳಿಂದ ಉತ್ಪತ್ತಿಯಾಗುವ ಮರಳಿನ ತ್ಯಾಜ್ಯವನ್ನು ಸಂಸ್ಕರಿಸಿ ಪುನರ್‌ಬಳಕೆ ಮಾಡಿಕೊಳ್ಳಬಹುದಾಗಿದೆ ಅಲ್ಲದೇ ಇಟ್ಟಿಗೆ ತಯಾರಿಕೆಯಲ್ಲಿ, ರಸ್ತೆ ನಿರ್ಮಾಣ ಮಿಶ್ರಣಗಳಲ್ಲಿ ಮರುಬಳಕೆ ಮಾಡಿಕೊಳ್ಳಬಹುದಾಗಿದೆ. ತ್ಯಾಜ್ಯ ಮರಳಿನ ಸಂಸ್ಕರಣಾ ಘಟಕವನ್ನು ಅಳವಡಿಸಿಕೊಳ್ಳುವುದರಿಂದ ಮರಳಿನ ತ್ಯಾಜ್ಯ ರಸ್ತೆ ಬದಿಗಳಲ್ಲಿ, ಇತರೆ ಜಲಮೂಲಗಳಲ್ಲಿ ಎಸೆಯುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮಗಳುಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಅಲ್ಲದೇ ಸದರಿ ತ್ಯಾಜ್ಯವನ್ನು ತಮ್ಮ ಘಟಕಗಳ ಆವರಣ ಅಥವಾ ಅವರ ನಿವೇಶನಗಳಲ್ಲಿಯೇ ವಿಲೇ ಮಾಡಿಕೊಳ್ಳಬಹುದಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್‌, ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸುರೇಶ್‌, ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್‌, ಮಲ್ಲಿಕಾರ್ಜುನ, ರಾಮಾಚಾರ್‌, ವಿಶ್ವೇಶ್ವರಯ್ಯ, ಬೆನಕಪ್ಪ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

B.Y. Raghavendra ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ಶ್ರಿಮಂತ ಪರಂಪರೆಯ ಸಂಕೇತ ಮಧುರೆಯ ಮೀನಾಕ್ಷಿ ದೇಗುಲ- ಸಂಸದ ರಾಘವೇಂದ್ರ

0

B.Y. Raghavendra ಗೃಹ ವ್ಯವಹಾರಗಳ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ತಮಿಳುನಾಡಿಗೆ ನಡೆಸಿದ ಅಧ್ಯಯನ ಭೇಟಿಯಲ್ಲಿ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು. ಮಧುರೈ ಜಿಲ್ಲೆಯಲ್ಲಿ ವಿಪತ್ತು ಸನ್ನದ್ಧತೆ ಮತ್ತು ನಿರ್ವಹಣೆ ಕುರಿತು ಚರ್ಚೆಗಳು ನಡೆದವು. ಜೀವಗಳು ಮತ್ತು ಜೀವನೋಪಾಯಗಳನ್ನು ರಕ್ಷಿಸಲು ಸನ್ನದ್ಧತೆ, ಸಮನ್ವಯ ಮತ್ತು ಸಕಾಲಿಕ ಪ್ರತಿಕ್ರಿಯೆಯನ್ನು ಬಲಪಡಿಸುವುದು ಅತ್ಯಗತ್ಯ ಎಂದು ಸಮಿತಿಯ ಮೂಲಕ ಅಭಿಪ್ರಾಯ ನೀಡಲಾಯಿತು.

ಭೇಟಿಯ ಸಮಯದಲ್ಲಿ, ಸಮಿತಿಯ ಅಧ್ಯಕ್ಷರಾದ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ಮತ್ತು ಇತರ ಗೌರವಾನ್ವಿತ ಸದಸ್ಯರೊಂದಿಗೆ ಭಾರತೀಯ ಆಧ್ಯಾತ್ಮಿಕ ನಂಬಿಕೆ, ಶ್ರೀಮಂತ ಸಂಸ್ಕೃತಿ ಮತ್ತು ವಾಸ್ತುಶಿಲ್ಪ ಪರಂಪರೆಯ ಹೆಮ್ಮೆಯ ಸಂಕೇತವಾದ ಪವಿತ್ರ ಮಧುರೈ ಮೀನಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ಬಿ.ವೈ.ರಾಘವೇಂದ್ರ ಪ್ರಾರ್ಥನೆ ಸಲ್ಲಿಸಿದರು.

CM Siddharamaih ಮಹನೀಯರು ಎಳೆದ ಸಾಮಾಜಿಕ ನ್ಯಾಯದ ಬಂಡಿಯನ್ನ ಇನ್ನಷ್ಟು ಮುಂದಕ್ಕೆ ಎಳೆಯುವ ಅವಕಾಶ ಸಿಕ್ಕಿದೆ : ಮುಖ್ಯಮಂತ್ರಿ ಸಿದ್ಧರಾಮಯ್ಯ

0

CM Siddharamaih ಡಿ.ದೇವರಾಜ ಅರಸರು ಅವರು ಮುಖ್ಯಮಂತ್ರಿಗಳಾಗಿ ಏಳು ವರ್ಷ ಏಳು ತಿಂಗಳು ಇಪ್ಪತ್ತಮೂರು ದಿನಗಳ ಕಾಲ ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ರಾಜ್ಯದ ಜನತೆ ನನಗೆ ನೀಡಿದ್ದಾರೆ. ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ, ಯಾರೂ ನೋಡಬಾರದು ಕೂಡಾ. ಇದು ಜನರ ಸೇವೆಗೆ ಸಿಕ್ಕಿರುವ ಅವಕಾಶದ ಭಾಗ್ಯ ಎಂದು ತಿಳಿದುಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಕರ್ನಾಟಕದ
ಮುಖ್ಯಮಂತ್ರಿಗಳಾಗಿ
ದೀರ್ಘಾವಧಿ ಆಡಳಿತದ ಚುಕ್ಕಾಣಿ ಹಿಡಿದ ಪ್ರಥಮ ರಾಜಕಾರಣಿ ಎಂಬ ಖ್ಯಾತಿ ಪಡೆದ ಸಂದರ್ಭದಲ್ಲಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡರು.

ನನ್ನ ರಾಜಕೀಯ ಜೀವನಕ್ಕೆ ಹಲವು ಹಿರಿಯರ ಚಿಂತನೆ ಮತ್ತು ಸಾಧನೆಗಳು ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿವೆ. ಆ ಹಿರಿಯರ ಸಾಲಿನಲ್ಲಿ ದೇವರಾಜ ಅರಸು ಪ್ರಮುಖರು. ನಮ್ಮಿಬ್ಬರ ನಡುವಿನ ಸೈದ್ಧಾಂತಿಕ ಸಹಮತ ಮತ್ತು ನಾನು ಕೂಡಾ ಅವರಂತೆ ಮೈಸೂರಿನ ಮಣ್ಣಿನ ಮಗ ಎನ್ನುವ ಕಾರಣಕ್ಕೆ ನನ್ನ ಹೃದಯದಲ್ಲಿ ಅವರಿಗೆ ವಿಶೇಷವಾದ ಸ್ಥಾನ ಇದೆ.

ಸಾಮಾಜಿಕ ನ್ಯಾಯದ ಬಂಡಿಯ ಪಯಣಕ್ಕೆ ಕರ್ನಾಟಕದಲ್ಲಿ ದೀರ್ಘ ಪರಂಪರೆ ಇದೆ. ಬಸವಣ್ಣನವರಿಂದ ಪ್ರಾರಂಭಗೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಿ.ದೇವರಾಜ ಅರಸು ವರೆಗೆ ಹಲವಾರು ಮಹನೀಯರು ಈ ಬಂಡಿಯನ್ನು ಎಳೆದುಕೊಂಡು ಬಂದಿದ್ದಾರೆ. ಇದನ್ನು ಇನ್ನಷ್ಟು ಮುಂದಕ್ಕೆ ಎಳೆದುಕೊಂಡು ಹೋಗುವ ಅವಕಾಶ ನನಗೆ ಸಿಕ್ಕಿದೆ. ಈ ಅವಕಾಶವನ್ನು ಬದಲಾಗಿರುವ ಸಾಮಾಜಿಕ ಮತ್ತು ರಾಜಕೀಯದ ಸ್ಥಿತ್ಯಂತರಗಳ ಇತಿ-ಮಿತಿಯಲ್ಲಿ ಜವಾಬ್ದಾರಿಯಾಗಿ ನಾನು ಸ್ವೀಕರಿಸಿ, ಮುನ್ನಡೆಯುತ್ತಿದ್ದೇನೆ.

CM Siddharamaih ಅಧಿಕಾರ, ಸಂಪತ್ತು ಮತ್ತು ಅವಕಾಶಗಳ ಹೆಬ್ಬಾಗಿಲನ್ನು ಸರ್ವರಿಗೂ ತೆರೆದು ಸಮಾನವಾಗಿ ಹಂಚಿಕೆ ಮಾಡದ ಹೊರತು ಸುಸ್ಥಿರವಾದ ಅಭಿವೃದ್ದಿಯನ್ನು ಕಾಣಲು ಸಾಧ್ಯ ಇಲ್ಲ ಎನ್ನುವುದು ಅರಸರ ಅಚಲ ನಂಬಿಕೆಯಾಗಿತ್ತು. ಇದಕ್ಕಾಗಿಯೇ ಅವಕಾಶ ವಂಚಿತ ಸಮುದಾಯಗಳಿಗೆ ಸೇರಿರುವ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದರು. ಭೂಸುಧಾರಣೆಯ ಮೂಲಕ ಸಂಪತ್ತಿನ ಸಮಾನ‌ ಹಂಚಿಕೆಯ ಪ್ರಕ್ರಿಯೆ ಪ್ರಾರಂಭಿಸಿದರು. ಮೀಸಲಾತಿಯ ಮೂಲಕ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೂಡಾ ಹೆಚ್ಚಿನ ಪ್ರಾತಿನಿಧ್ಯ ಸಿಗುವಂತೆ ಮಾಡಿದರು. ಜನಪ್ರತಿನಿಧಿಗಳೆಲ್ಲರಿಗೂ ಈ ಸಾಧನೆ ಪ್ರೇರಣೆಯಾಗಬೇಕು.

ಇಂದಿನ ದಿನದ ವಿಶೇಷ ಸಂದರ್ಭದಲ್ಲಿ ನಮಗೆಲ್ಲ ಪ್ರೇರಣಾದಾಯಿಗಳು ಮತ್ತು ಪೂಜನೀಯರೂ ಆಗಿರುವ ಡಿ.ದೇವರಾಜ ಅರಸು ಅವರಿಗೆ ನಾನು ಗೌರವದ ನಮನಗಳನ್ನು ಸಲ್ಲಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ
ಸಂತಸ ಹಂಚಿಕೊಂಡಿದ್ದಾರೆ.

K.S. Eshwarappa ಕಾರ್ತೀಕ ದೀಪ ಬೆಳಗಲು ಮದ್ರಾಸ್ ಕೋರ್ಟ್ ಅನುಮತಿ. ಸಂತಸ ಪಡುವ ವಿಚಾರ- ಕೆ.ಎಸ್.ಈಶ್ವರಪ್ಪ

0

K.S. Eshwarappa ಮದುರೈನ ತಿರುಪ್ಪರನ್ ಕುಂದ್ರಂ ಬೆಟ್ಟದ ಮೇಲಿನ ಪುರಾತನ ದೀಪ ಸ್ತಂಭಗಳಲ್ಲಿ ಹಿಂದೂಗಳಿಗೆ ಕಾರ್ತಿಕ ದೀಪ ಬೆಳಗಿಸಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿರುವುದು ನನಗೆ ಸಂತಸ ತಂದಿದೆ. ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ತಮಿಳುನಾಡು ದೇಗುಲದಲ್ಲಿ ದೀಪಸ್ತಂಭಗಳಲ್ಲಿ ದೀಪ ಬೆಳಗುವ ವಿವಾದ ಕುರಿತು ಅನುಮತಿಯುಳ್ಳ ತೀರ್ಪು ಮದ್ರಾಸು ನ್ಯಾಯಾಲದಿಂದ ಹೊರಬಿದ್ದ ಸಂದರ್ಭ ಈ ಹೇಳಿಕೆ ನೀಡಿದ್ದಾರೆ.

ಈ ಪವಿತ್ರ ಹಿಂದೂ ಶ್ರದ್ಧಾಕೇಂದ್ರಕ್ಕೆ ಇಂದೇ ಬೇಟಿ ನೀಡುವ ಅವಕಾಶ ಲಭಿಸಿದ್ದು ನಮ್ಮ ಸೌಭಾಗ್ಯ. ಹಿಂದೂ ವಿರೋಧಿ ಮನಃಸ್ಥಿತಿಯ ತಮಿಳುನಾಡು ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿ ಅಲ್ಲಿ ಹಿಂದೂಗಳು ಕಾರ್ತಿಕ ದೀಪೋತ್ಸವ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದವು ಇತ್ತೀಚೆಗೆ ಜಸ್ಟೀಸ್ ಜಿ.ಆರ್.ಸ್ವಾಮಿನಾಥನ್ ಅವರ ಏಕಸದಸ್ಯ ನ್ಯಾಯ ಪೀಠ ತಮಿಳುನಾಡು ಸರ್ಕಾರ ಮತ್ತು ವಕ್ಫ್ ಬೋರ್ಡಿನ ಅರ್ಜಿ ತಿರಸ್ಕರಿಸಿ ಹಿಂದೂಗಳಿಗೆ ದೀಪ ಬೆಳಗಿಸಲು ಅವಕಾಶ ನೀಡಿದ್ದರು ಆದರೆ ಈ ತೀರ್ಪಿನ ವಿರುದ್ಧ ಹೈಕೋರ್ಟಿನ ಮದುರೈ ಪೀಠಕ್ಕೆ ಮೇಲ್ಮನವಿ ಸಲ್ಲಿಕೆ ಆಗಿತ್ತು. K.S. Eshwarappa ಇಂದು ಮಾನ್ಯ ಉಚ್ಚ ನ್ಯಾಯಾಲಯವೂ ಸಹಾ ಹಿಂದೂಗಳ ಪರವಾಗಿ ತೀರ್ಪು ನೀಡಿದೆ. ಈ ಮೊದಲು ತೀರ್ಪು ನೀಡಿದ್ದ ಜಸ್ಟೀಸ್ ಸ್ವಾಮಿನಾಥನ್ ಅವರನ್ನು ಪದಚ್ಯುತಗೊಳಿಸಲು ತಮಿಳುನಾಡು ಸರ್ಕಾರ ಮತ್ತು ಹಿಂದೂ ವಿರೋಧಿಗಳು ಸಜ್ಜಾಗಿದ್ದರು ಇದಕ್ಕೆ 50 ಕ್ಕೂ ಹೆಚ್ಚು ಸಂಸದರು ಸಹಿ ಹಾಕಿದ್ದರು, ಸಹಿ ಹಾಕಿದವರಲ್ಲಿ ಕರ್ನಾಟಕದ ಮೂರು ಸಂಸದರೂ ಸೇರಿದ್ದಾರೆ ಎಂಬುದು ಬೇಸರದ ಸಂಗತಿ. ಇಂದು ಮಾನ್ಯ ಮದ್ರಾಸ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಹಿಂದೂ ವಿರೋಧಿ ಮನಃಸ್ಥಿತಿಗಳ ಬಾಯಿ ಮುಚ್ಚಿಸಿದೆ. ಸತ್ಯಕ್ಕೆ, ಹಿಂದುತ್ವಕ್ಕೆ ಮತ್ತೊಮ್ಮೆ ಜಯವಾಗಿದೆ ಎಂದು ರಾಜ್ಯದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

District Legal Services Authority ಅಪಾಯ & ಸಂಕಷ್ಟ ಪರಿಸ್ಥಿತಿಯಲ್ಲಿನ ಮಹಿಳೆ ಮತ್ತು ಮಕ್ಕಳ ರಕ್ಷಣೆ “ಅಕ್ಕ ಪಡೆ” ಯ ಪ್ರಾಥಮಿಕ ಉದ್ದೇಶ- ಬಿ.ನಿಖಿಲ್.

0

District Legal Services Authority ಸಮಾಜಘಾತುಕ ಶಕ್ತಿಗಳು ಮಹಿಳೆಯರು ಮತ್ತು ಮಕ್ಳಳಿಗೆ ಕಿರುಕುಳ ನೀಡುವುದು, ಅಸಭ್ಯವಾಗಿ ವರ್ತಿಸುವುದು ಮತ್ತು ಯಾವುದೇ ರೀತಿಯ ದೌರ್ಜನ್ಯವೆಸಗುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ‘ಅಕ್ಕ’ ಪಡೆ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ತಿಳಿಸಿದರು..
ಜಿಲ್ಲಾ ಪೊಲೀಸ್ ಕಚೇರಿಯ ಆವರಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ನೂತನವಾಗಿ ರಚಿಸಲಾಗಿರುವ ‘ಅಕ್ಕ ಪಡೆ’ ಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಅಪಾಯದಲ್ಲಿರುವ ಮತ್ತು ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ನೀಡುವುದು ಅಕ್ಕ ಪಡೆಯ ಪ್ರಾಥಮಿಕ ಉದ್ದೇಶವಾಗಿದೆ. ಇಡೀ ರಾಜ್ಯದಲ್ಲಿ ಬೇರೆ ಬೇರೆ ಹೆಸರಲ್ಲಿ ಈ ಪಡೆ ಕೆಲಸ ಮಾಡುತ್ತಿದೆ. ವಿಶೇಷವಾಗಿ ಶಾಲಾ ಕಾಲೇಜು ಹೆಣ್ಣುಮಕ್ಕಳು, ಮಹಿಳೆಯರ ರಕ್ಷಣೆಗಾಗಿ ಹಾಗೂ ಅವರಿಗೆ ಮಾನಸಿಕ ಧೈರ್ಯ ನೀಡಲು ಪಡೆ ರಚನೆಯಾಗಿದೆ.
ಪ್ರತಿ ದಿನ ಎರಡು ಪಾಳಿಗಳಲ್ಲಿ ಅಕ್ಕ ಪಡೆ ಕೆಲಸ ಮಾಡಲಿದೆ. ಈ ಪಡೆ ಕಾರ್ಯನಿರ್ವಹಣೆಗಾಗಿ ಹೊಸ ವಾಹನವನ್ನು ನೀಡಿದ್ದು, ಈ ವಾಹನವು ಪಡೆಯೊಂದಿಗೆ ಶಾಲಾ-ಕಾಲೇಜು, ಜನ ನಿಭಿಡ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಸಹಾಯವಾಣಿ ಸಂಖ್ಯೆಗಳಾದ 112 ಮತ್ತು 1098 ಕುರಿತು ಹಾಗೂ ಕಾನೂನುಗಳ ಬಗ್ಗೆಯೂ ಜಾಗೃತಿ ಮೂಡಿಸಲಿದೆ. ಮಹಿಳಾ ಗೃಹರಕ್ಷಕಿಯರು ಹಾಗೂ ಮಹಿಳಾ ಅಧಿಕಾರಿಗಳನ್ನೇ ಈ ಪಡೆಗೆ ನೇಮಿಸಲಾಗಿದ್ದು, ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಮತ್ತು ಸ್ವತಂತ್ರವಾಗಿ ಮಾತನಾಡಿ, ಅಕ್ಕ ಪಡೆಯ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ನಂತರ ಅವರು ಸಭೆಯಲ್ಲಿ ಮಾತನಾಡಿ, ತರಬೇತಿ ಪಡೆದ ಅಕ್ಕ ಪಡೆಯು ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ಮತ್ತು ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಸಂಕಷ್ಟದ ಕರೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತದೆ. ಕಿರುಕುಳ, ಕೌಟುಂಬಿಕ ಹಿಂಸೆ, ಈವ್ ಟೀಸಿಂಗ್ ಅಥವಾ ಯಾವುದೇ ರೀತಿಯ ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರು ಮತ್ತು ಹದಿ ಹರೆಯದ ಹೆಣ್ಣು ಮಕ್ಕಳು, ಬಾಲ ಕಾರ್ಮಿಕ ಪದ್ದತಿ, ಭಿಕ್ಷಾಟನೆ, ಮಾದಕ ದ್ರವ್ಯ ಅಥವಾ ನಿಂದನೆಗೆ ಒಳಗಾದ ಮಕ್ಕಳು ಈ ಯೋಜನೆಯ ಉದ್ದೇಶಿತ ಫಲಾನುಭವಿಗಳಾಗಿದ್ದು, ಅಕ್ಕ ಪ್ರತಿ ದಿನ ಎರಡು ಪಾಳಿಗಳಲ್ಲಿ ನಗರ ಮತ್ತು ಹೊರವಲಯದ ಬಸ್ ನಿಲ್ದಾಣ, ಮಾರ್ಕೆಟ್, ದೇವಸ್ಥಾನ, ಪಾರ್ಕ್ಗಳು, ಶಾಲಾ-ಕಾಲೇಜುಗಳ ಬಳಿ, ಲೇಡಿಸ್ ಹಾಸ್ಟೆಲ್, ಜನ ನಿಭಿಡ ಪ್ರದೇಶಗಳು, ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ನಿರ್ವಹಣೆ ಮಾಡಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

District Legal Services Authority ಅಕ್ಕ ಪಡೆ ರಚನೆಯು ಮಹಿಳಾ ಸಬಲೀಕರಣದೆಡೆ ಬಹು ದೊಡ್ಡ ಹೆಜ್ಜೆಯಾಗಿದೆ. ಮಹಿಳೆ ಸಬಲವಾಗಲು ಸರಿಯಾದ ಶಿಕ್ಷಣ ಅಗತ್ಯವಿದ್ದು, ಶಾಲಾ-ಕಾಲೇಜುಗಳಿಗೆ ಹೋಗಿ ಬರುವ ವೇಳೆ ಹಾಗೂ ಸಾಮಾಜಿಕ ಜೀವನದಲ್ಲಿ ಆಕೆಗೆ ಸುರಕ್ಷಿತ ವಾತಾವರಣ ಬೇಕು. ಇಂತಹ ವಾತಾವರಣವನ್ನು ಅಕ್ಕ ಪಡೆ ನಿರ್ಮಿಸಲು ಸಹಕಾರಿಯಾಗಿದೆ.
ಜಿಲ್ಲೆಯಲ್ಲಿ ಹೆಣ್ಣುಮಕ್ಕಳು, ಮಹಿಳೆಯರಿಗೆ ಕಿರುಕುಳ ನೀಡುವಂತಹ ಘಟನೆಗಳು ಕಡಿಮೆ ಇದೆ. ಆದರೂ ಕೆಲವು ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಸಮ್ಮಿತಿಯ ಪ್ರಕರಣಗಳಲ್ಲಿ ತದನಂತರ ಹೆಣ್ಣುಮಕ್ಕಳಿಗೆ ಫೋಟೊ , ವಿಡಿಯೋ ತೋರಿಸಿ ಬ್ಲಾಕ್‌ಮೇಲ್ ಮಾಡುವಂತಹ ಅಪರಾಧಗಳೂ ನಡೆಯುತ್ತಿದ್ದ್ದು, ಅಕ್ಕ ಪಡೆಯಿಂದ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದೆ.
ಪೋಕ್ಸೋ ಪ್ರಕರಣಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ‘ಅಕ್ಕ’ ಸಹಕಾರಿಯಾಗಲಿದೆ. ಹೆಣ್ಣುಮಕ್ಕಳು ತಮಗಾದ ಅನ್ಯಾಯ, ಕಿರುಕುಳ, ದೌರ್ಜನ್ಯ ಕುರಿತು ಅಂಜಿಕೆ ಇಲ್ಲದೇ, ಧೈರ್ಯದಿಂದ ಹೇಳಬೇಕು. ಸಹಾಯವಾಣಿ ಸಂಖ್ಯೆ 112 ಮತ್ತು 1098 ಗೆ ಕರೆ ಮಾಡಿ ತಿಳಿಸಬಹುದು. ಹೀಗೆ ಕರೆ ಮಾಡಿದವರ ಮಾಹಿತಿ, ಕರೆ ಮಾಡಿದ ವಿಷಯಗಳನ್ನೆಲ್ಲ ಗೌಪ್ಯವಾಗಿ ಇಡಲಾಗುವುದು. ಆದ್ದರಿಂದ ತೊಂದರೆಗಳನ್ನು ನಿರ್ಭೀತಿಯಿಂದ ಹೇಳಿಕೊಳ್ಳಿರಿ. ಹಾಗೂ ನಿರ್ಭಯವಾಗಿ ಅಕ್ಕ ಪಡೆ ಸೌಲಭ್ಯವನ್ನು ಬಳಸಿಕೊಳ್ಳಿರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆದ ಸಂತೋಷ್ ಎಂ ಎಸ್, ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಎಸ್‌ಪಿ ಕಾರಿಯಪ್ಪ, ಕೆಎಸ್‌ಆರ್ ಪಿ ಕಮಾಂಡೆಂಟ್ ಯುವಕುಮಾರ್, ಗೃಹರಕ್ಷಕ ಕಮಾಂಡೆಂಟ್ ಚೇತನ್, ಡಿವೈಎಸ್‌ಪಿ ಬಾಬು ಅಂಜಿನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಶಶಿರೇಖಾ, ಡಿಸಿಪಿಓ ಮಂಜುನಾಥ್, ಡಾ.ಸಂತೋಷ್ ಕುಮಾರ್, ಡಿಡಿಪಿಯು, ಡಿಡಿಪಿಐ, ಕಾಲೇಜು ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Shivamogga District Chamber of Commerce and Industry ಮಹಿಳೆಯರು ಸ್ವಾವಲಂಬಿಗಳಾಗಲು ಪ್ರೋತ್ಸಾಹ ಮತ್ತು ಬೆಂಬಲ ಅಗತ್ಯವಿದೆ : ರಮೇಶ್ ಹೆಗಡೆ

0

Shivamogga District Chamber of Commerce and Industry ಉದ್ಯಮ, ಆಹಾರ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಪ್ರೋತ್ಸಾಹ ಹಾಗೂ ಬೆಂಬಲ ನೀಡುವ ಅಗತ್ಯವಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆ ಹೇಳಿದರು.
ಪಂಪ ನಗರದ ಗುತ್ತ್ಯಪ್ಪ ಕಾಲೋನಿಯಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ಅಂತರ ರಾಜ್ಯ ಮಟ್ಟದ ಮಲೆನಾಡು ಮೇಳ2026 ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ ಎಂದು ತಿಳಿಸಿದರು. ಮಹಿಳೆಯರು ಸ್ವಾವಲಂಬಿಗಳಾಗಬೇಕು ತಮ್ಮ ಬದುಕಿನ ಜಂಜಾಟದೊಂದಿಗೆ ಇಂತಹ ಮೇಳಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಹಿಳೆಯರು ಸಮಾಜದಲ್ಲಿ ಪರಿಪೂರ್ಣತೆಯನ್ನು ಹೊಂದುತ್ತಾರೆ ಎಂದು ನುಡಿದರು.
ಒಕ್ಕಲಿಗರ ಮಹಿಳಾ ವೇದಿಕೆಯ ಅಧ್ಯಕ್ಷರಾದ ಪ್ರೇಮಾ ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ , ಇಂತಹ ಮೇಳಗಳ ಆಯೋಜನೆಯಿಂದ ಸಮಾಜದ ಎಲ್ಲರೊಂದಿಗೆ ಓಡನಾಟ ಸಂಪರ್ಕ ಹೆಚ್ಚಲಿದ್ದು, ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು. ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್, ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ ಮಲೆನಾಡು ಮೇಳ ಆಯೋಜಿಸಿದ್ದು, ಈ ಮೇಳದಲ್ಲಿ ಗೃಹಪಯೋಗಿ ವಸ್ತುಗಳು, ಅಲಂಕಾರಿಕ ಸಾಮಾಗ್ರಿಗಳು, ಮನೆಯಲ್ಲಿ ತಯಾರಿಸಿದ ರುಚಿಕರ ಸಸ್ಯಾಹಾರಿ ಹಾಗು ಮಾಂಸಾಹಾರಿ ತಿನುಸುಗಳ ಪ್ರದರ್ಶನ ಹಾಗೂ ಮಾರಾಟ ಹಮ್ಮಿಕೊಳ್ಳಲಾಗಿದೆ ಈ ಬಾರಿಯ ತುಂಬಾ ವಿಶೇಷ ಅಂದರೆ ವಾರಣಾಸಿಯಿಂದ ವಿಶೇಷ ಬನಾರಸ್ಸು ಸ್ಯಾರಿ ಅಂಗಡಿಯವರು ಬೆಂಗಳೂರು ಮಂಗಳೂರು ಮಡಿಕೇರಿ ಹಾಸನ ದಿಂದ ಮಹಿಳೆಯರೇ ತಯಾರು ಮಾಡಿದ ಕರಕುಶಲ ವಸ್ತುಗಳು ಮಳಿಗೆ ಹಾಕಿರುವುದು ತುಂಬಾ ವಿಶೇಷವಾಗಿದೆ ಎಂದು ನುಡಿದರು.
Shivamogga District Chamber of Commerce and Industry ಒಕ್ಕಲಿಗರ ಮಹಿಳಾ ವೇದಿಕೆಯ ಕಾವ್ಯ ಸತೀಶ್ ಮಾತನಾಡಿ, ಮಹಿಳೆಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಸಾಧನೆ ಮಾಡುತ್ತಿದ್ದು, ಕುಟುಂಬ, ಸ್ನೇಹಿತ ವರ್ಗ ಹಾಗೂ ಎಲ್ಲರ ಸಹಕಾರದಿಂದ ಇನ್ನಷ್ಟು ಸಾಧನೆ ಮಾಡಬೇಕು ಎಂದು ಆಶಿಸಿದರು.
ಬೆಂಗಳೂರು, ಬೇಲೂರು, ಕೊಪ್ಪ, ಶೃಂಗೇರಿ, ಜಯಪುರ, ತರೀಕೆರೆ, ಭದ್ರಾವತಿ, ಸಾಗರ, ತೀರ್ಥಹಳ್ಳಿ. ವಾರಣಾಸಿ ಹಾಸನ ಮಡಿಕೇರಿ ಮಂಗಳೂರು, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು ಸ್ಟಾಲ್‌ಗಳನ್ನು ಹಾಕಿದ್ದರು. ಮನೆಯಲ್ಲಿ ತಯಾರಿಸಿದ ಹಿಟ್ಟು ಉಂಡೆ, ಹುಲ್ಲಿಂದ ತಯಾರಿಸಿದ ಬುಟ್ಟಿಗಳು, ಮನೆಯಲ್ಲಿ ತಯಾರಿಸಿದ ತಿಂಡಿಗಳು ವೈನ್. ಕೇಕ್ ಬಹಳ ದೊಡ್ಡ ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ಸಸ್ಯಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳ ಸ್ಟಾಲ್‌ಗಳು ಇದ್ದವು.
ಡಾಕ್ಟರ್ ಸೌರಭ ಹರ್ಷ , ಖಜಾಂಜಿ ಮಾಮ್ ಕೋಸಿನ ಇಂಜಿನಿಯರ್ ವೀರೇಂದ್ರ ಸುಪ್ರಿಯಾ ರಾಮಪ್ಪ, ಅಂಜು ಸುರೇಶ್, ಅರ್ಚನಾ, ಪ್ರಭಾ ಶ್ರೀನಾಥ್. . ವಿಜಯ ನಾಗೇಶ್. ಡಾಕ್ಟರ್ ಶ್ರೀಕಾಂತ್. ಛಾಯಕ್ಕ ದೇವಂಗಿ ಸುಜಯಾ ಪುರುಷೋತ್ತಮ್ , ಹಾಗೂ. ಇನ್ನರ್ವಿಲ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಕಾರ್ಯಕಾರಿ ಸಮಿತಿಯವರು ಸಂಘದ ಸದಸ್ಯೆಯರು ಉಪಸ್ಥಿತರಿದ್ದರು.

Bharat Scouts And Guides ಶಿವಮೊಗ್ಗ ಸ್ಕೌಟ್ಸ್ & ಗೈಡ್ಸ್ ಘಟಕದಿಂದ ನೂತನ ಡೀಸಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಅಭಿನಂದನೆ

0

Bharat Scouts And Guides ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಗೌರವಾಧ್ಯಕ್ಷರು ಹಾಗೂ ನೂತನ ಜಿಲ್ಲಾಧಿಕಾರಿಗಳಾಗಿ ಶಿವಮೊಗ್ಗಕ್ಕೆ ಆಗಮಿಸಿ ಅಧಿಕಾರ ವಹಿಸಿಕೊಂಡ ಪ್ರಭುಲಿಂಗ ಕವಳಿಕಟ್ಟಿ ಸರ್.ರವರಿಗೆ ಭಾರತ್ ಸ್ಕೌಟ್ಸ್ & ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಇದೇ ತಿಂಗಳು ದಿನಾಂಕ 10 ಮತ್ತು 11ರಂದು. ಸ್ಕೌಟ್ಸ್ ಅಂಡ್ ಗೈಡ್ಸ್ ನ ಶತಮಾನೋತ್ಸವ ಹಾಗೂ ಜಿಲ್ಲಾ ಮಟ್ಟದ ರ್ಯಾಲಿ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಆಮಂತ್ರಣ ಪತ್ರಿಕೆ ನೀಡಿ ವಿನಂತಿಸಿಕೊಳ್ಳಲಾಯಿತು. Bharat Scouts And Guides ಕಾರ್ಯಕ್ರಮದಲ್ಲಿ ಪ್ರಧಾನ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್. ಕೇಂದ್ರ ಸ್ಟಾನಿಕ ಆಯುಕ್ತರುಗಳಾದ ಜಿ ವಿಜಯಕುಮಾರ್. ಕೆ ರವಿ. ಎಸ್ ಜಿ ಆನಂದ್. ಮಲ್ಲಿಕಾರ್ಜುನ ಖಾನೂರ್. ಜಿಲ್ಲಾ ಕಾರ್ಯದರ್ಶಿ ಕೆ ವಿ ಚಂದ್ರಶೇಖರಯ್ಯ ಜಿಲ್ಲಾ ಖಜಾಂಚಿ. ಚೂಡಾಮಣಿ ಈ ಪವಾರ್. ಜಿಲ್ಲಾ ತರಬೇತಿ ಆಯುಕ್ತರಾದ ಚಂದ್ರಶೇಖರಯ್ಯ ಕೃಷ್ಣ ಸ್ವಾಮಿ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳ ಬಗ್ಗೆ ಚರ್ಚಿಸಿ ಸಂಪೂರ್ಣ ಸಹಕಾರ ನೀಡಲು ಕೇಳಿಕೊಳ್ಳಲಾಯಿತು.