Monday, February 23, 2026
Monday, February 23, 2026
Home Blog Page 234

National Health Campaign ಎನ್ ಹೆಚ್ ಎಂ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ ಹುದ್ದೆ ಭರ್ತಿ ತಾತ್ಕಾಲಿಕ ಪಟ್ಟಿ ಪ್ರಕಟಣೆ

0

National Health Campaign ರಾಷ್ಟ್ರೀಯ ಆರೋಗ್ಯ ಅಭಿಯಾನ ಎನ್‌ಹೆಚ್‌ಎಂ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಖಾಲಿಯಿರುವ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ನೇರ ಸಂದರ್ಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳ ರೋಸ್ಟರ್ ಕಂ ಮೇರಿಟ್ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳ ಆಕ್ಷೇಪಣೆ ಇದ್ದಲ್ಲಿ ಲಿಖಿತ ರೂಪದಲ್ಲಿ ಜು.28 ರೊಳಗಾಗಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಎನ್.ಹೆಚ್.ಎಂ. ವಿಭಾಗಕ್ಕೆ ಸಲ್ಲಿಸುವಂತೆ ಸಂಘದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Rotary Organization ಆಟೋ ಚಾಲಕನ ಚಿಕಿತ್ಸೆಗೆ ನೆರವಾದ ರೋಟರಿ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ನಾಯಕ್

0

Rotary Organization ರೋಟರಿ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕೆಲಸಗಳನ್ನು ಮಾಡುವ ಜತೆಯಲ್ಲಿ ಸಂಕಷ್ಟದಲ್ಲಿ ಇರುವವರಿಗೆ ನೆರವು ಒದಗಿಸುವ ಕೆಲಸ ಮಾಡುತ್ತಿದೆ ಎಂದು ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆ ಅಧ್ಯಕ್ಷ ವಿಶ್ವನಾಥ ನಾಯಕ ಹೇಳಿದರು.

ಸವಳಂಗ ರಸ್ತೆಯ ಸುಶೋಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವೀನ್ ಎಂಬ ಪ್ಯಾಸೆಂಜರ್ ಆಟೋ ಚಾಲಕರಿಗೆ ತಕ್ಷಣದ ನೆರವು ಒದಗಿಸಿದರು. ನಂತರ ಮಾತನಾಡಿ, ಸಮಾಜದಲ್ಲಿ ಮಾನವೀಯತೆ, ಸೇವಾ ಮನೋಭಾವ ಮತ್ತು ಸಹಕಾರದ ನಿಜವಾದ ಮಾದರಿಯನ್ನು ತೋರಿಸಿರುವುದು ರೋಟರಿ ಸಂಸ್ಥೆ ಎಂದು ತಿಳಿಸಿದರು.

ವೈದ್ಯಕೀಯ ವೃತ್ತಿಯ ಧರ್ಮವನ್ನು ಕಾಪಾಡಿಕೊಂಡು, ಬಡ ರೋಗಿಗಳಿಗೆ ಸಹಾನುಭೂತಿಯಿಂದ ನೆರವಾಗುತ್ತಿರುವ ಡಾ. ಪ್ರದೀಪ್ ಅವರ ಸೇವಾ ಮನೋಭಾವವು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ನವೀನ್ ಅವರು ಕಿಡ್ನಿ ಮತ್ತು ಲಿವರ್ ವೈಫಲ್ಯದಿಂದ ಬಳಲುತ್ತಿದ್ದು, ಅತೀವ ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ವೈದ್ಯಕೀಯ ವೆಚ್ಚದ ಭಾರವನ್ನು ಹೊರುವ ಸ್ಥಿತಿಯಲ್ಲಿಲ್ಲ. ಈ ವಿಚಾರ ತಿಳಿದು ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಪದಾಧಿಕಾರಿಗಳು ನೆರವು ಒದಗಿಸಿದರು.

ಅಧ್ಯಕ್ಷ ವಿಶ್ವನಾಥ್ ನಾಯಕ ಅವರು ಹೆಚ್ಚಿನ ಮೊತ್ತವನ್ನು ನೀಡಿದರು. ಸದಸ್ಯರಾದ ರುಥ್ವಿಕ್ ಮಲ್ಲೇಶ್, ಇತರ ರೋಟರಿ ಮಿತ್ರರು ಸಹ ಕೈಜೋಡಿಸಿದರು.

Rotary Organization ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆ ಕಾರ್ಯದರ್ಶಿ ನಿತಿನ್ ಯಾದವ್, ಕ್ಲಬ್ ಸರ್ವೀಸ್ ನಿರ್ದೇಶಕ ರಾಜೇಂದ್ರ ಕುಮಾರ್, ಸುಜಯಾ ಇತರರು ಇದ್ದರು.

Madhu Bangarappa ಹೊಸ ಜಿಲ್ಲಾ ಆಸ್ಪತ್ರೆ ಸೌಲಭ್ಯ ಕಲ್ಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ – ಮಧು ಬಂಗಾರಪ್ಪ

0

Madhu Bangarappa ಜಿಲ್ಲಾ ಉಸ್ತುವಾರಿ ಹಾಗೂ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಂದೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಬಹಳ ದಿನದಿಂದ ಆಸ್ಪತ್ರೆಗೆ ದಿಢೀರ್ ಬರಬೇಕು ಅಂದುಕೊಂಡಿದ್ದೆ.ಇಂದು ಆಸ್ಪತ್ರೆಗೆ ಬಂದು ಭೇಟಿ ನೀಡಿ, ಮಾಹಿತಿ ಪಡೆದಿದ್ದೇನೆ.ಮೆಗ್ಗಾನ್ ಆಸ್ಪತ್ರೆಗೆ 2.5 ಸಾವಿರ ಜನ ಓಪಿಡಿಗೆ ಬರ್ತಿದ್ದಾರೆ.ಅಕ್ಕಪಕ್ಕದ ಜಿಲ್ಲೆಯಿಂದಲೂ ಕೂಡ ಸಾಕಷ್ಟು ಜನ ಇಲ್ಲಿಗೆ ಬರ್ತಿದ್ದಾರೆ ಎಂದರು.

ಮೆಗ್ಗಾನ್ ಭೋದನಾ ಆಸ್ಪತ್ರೆ ವೈದ್ಯಕೀಯ ಶಿಕ್ಷಣ ವಿಭಾಗಕ್ಕೆ ಬರುತ್ತೆ.ಇನ್ನಷ್ಟು ಸೌಲಭ್ಯಗಳನ್ನು ಮೆಗ್ಗಾನ್ ಆಸ್ಪತ್ರೆಗೆ ನೀಡಬೇಕು.
ಸಾರ್ವಜನಿಕರ ಹಿತದೃಷ್ಟಿಯಿಂದ ಒಂದಷ್ಟು ಸೌಲಭ್ಯ ಬೇಕಿದೆ ಎಂದು ತಿಳಿಸಿದರು.

ಆಸ್ಪತ್ರೆಗೆ ಲೋಡ್ ಹೆಚ್ಚಾಗಿದೆ.
ಹೊಸ ಜಿಲ್ಲಾಸ್ಪತ್ರೆ ಮಾಡುವ ಬಗ್ಗೆ ಚರ್ಚೆಯೂ ನಡೆದಿದೆ.
ಇದರ ಬಗ್ಗೆ ದಿನೇಶ್ ಗುಂಡೂರಾವ್ ಜೊತೆ ಮಾತುಕತೆ ಆಗಿದೆ.
ಜಿಲ್ಲಾ ಆಸ್ಪತ್ರೆ ಇಲ್ಲಿಯೇ ಮಾಡಬೇಕು.
ಬೇರೆ ತಾಲೂಕಿನಲ್ಲಿ ಮಾಡಿದರೆ ಮತ್ತೆ ನಾವು ಈ ಹಿಂದೆ ಆರೋಪ ಮಾಡಿದ ಹಾಗೆ ಮಾಡುತ್ತಾರೆ.ಹಿಂದೆ ಶಿಕಾರಿಪುರದಲ್ಲಿ ಮಾಡಿದ್ದರು.
ಈಗ ಭದ್ರಾವತಿಯಲ್ಲಿ ಹೋಗಿ ಮಾಡಲು ಬರುವುದಿಲ್ಲ.
ಇಲ್ಲಿಯೇ ಜಿಲ್ಲಾ ಆಸ್ಪತ್ರೆ ಮಾಡಲು ಯೋಚಿಸೋಣ
ಸದ್ಯ ಈಗ ಇರುವ ಆಸ್ಪತ್ರೆ
ಅಪ್ ಡೇಟ್ ಮಾಡಬೇಕಿದೆ ಎಂದು ತಿಳಿಸಿದರು.

ಈಗಿರುವ ಮೆಗ್ಗಾನ್ ಆಸ್ಪತ್ರೆ ಸೂಪರ್ ಸ್ಪೆಷಾಲಿಟಿಗೆ ಅಪ್ಡೇಟ್ ಮಾಡುವ ಯೋಚನೆಯಿದೆ.
ಎಂಆರ್‌ಐ ವಿಭಾಗದಿಂದ ರೋಗಿಗಳಿಗೆ ಡೇಟ್ ನೀಡುವ ಬಗ್ಗೆ ದೂರಿದೆ.
ತುರ್ತು ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಮಾಡ್ತಾರೆ.
ಇಲ್ಲವಾದ್ರೇ ನಂತರದ ದಿನಾಂಕ ಕೊಡ್ತಾರೆ.ಒಂದು ಎಂಆರ್‌ಐ ಮಾಡೋಕೆ 45 ನಿಮಿಷ ಬೇಕು. ದಿನಕ್ಕೆ 20-25 ಕೇಸ್ ಆಗುತ್ತೆ.
ಮೆಡಿಸಿನ್ ಆನ್ ಲೈನ್ ಮಾಡಿರುವುದಕ್ಕೆ ಕಷ್ಟ ಆಗಿದೆ.
ಈ ಸಮಸ್ಯೆ ಬಗೆ ಹರಿಸೋಣ.
ಹೆರಿಗೆ ಆಸ್ಪತ್ರೆಯಲ್ಲಿ ನೀರು ಸರಬರಾಜು ಸರಿಯಾಗುತ್ತಿಲ್ಲ ಎಂಬ ದೂರಿದೆ ಎಂದರು.
ಆಸ್ಪತ್ರೆಯಲ್ಲಿ ಲೋಡ್ ಬಹಳ ಇದ್ದಾಗ ಈ ಸಮಸ್ಯೆ ಆಗೋದು ಸಹಜ ಎಂದು ತಿಳಿಸಿದರು.

Vishveshvaraya Jala Nigam Ltd ವಾಣಿವಿಲಾಸ ಸಾಗರಕ್ಕೆ ಭದ್ರಾ ಮೇಲ್ದಂಡೆ ಕಾಲುವೆ ಮೂಲಕ ಜುಲೈ 27 ರಂದು ನೀರನ್ನು ಹರಿಸಲಾಗುತ್ತದೆ, ಸಾರ್ವಜನಿಕ ಸುರಕ್ಷತೆಗೆ ಮನವಿ

0

Vishveshvaraya Jala Nigam Ltd ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಅಡಿಯಲ್ಲಿ ಬರುವ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯಿಂದ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಗ್ರಾಮಗಳ ಮಾರ್ಗವಾಗಿ ವೇದಾವತಿ ನದಿಗೆ ಸೇರುವ ಹಳ್ಳದ ಮುಖಾಂತರ ವಾಣಿ ವಿಲಾಸ ಸಾಗರಕ್ಕೆ ಸರ್ಕಾರದ ನಿರ್ದೇಶನದಂತೆ ದಿನಾಂಕ: 27-07-2025 ರಿಂದ ನೀರನ್ನು ಹರಿಸಲಾಗುವುದು.
ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯು ಭದ್ರಾ ಜಲಾಶಯದಿಂದ ಪ್ರಾರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕೆರೆ ಕಸಬಾ, ಅಮೃತಾಪುರ, ಅಜ್ಜಂಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಾದು ಹೋಗಿದ್ದು, ಸರ್ಕಾರದ ನಿರ್ದೇಶನದಂತೆ ದಿನಾಂಕ: 27-07-2025 ರಿಂದ ಶಾಂತಿಪುರ ಪಂಪ್ ಹೌಸ್-1, ಜಂಭದಹಳ್ಳ ಅಕ್ವೆಡಕ್ಟ್, ತರೀಕೆರೆ ರೈಲು ಸೇತುವೆ, ಬೆಟ್ಟತಾವರೆಕೆರೆ ಪಂಪ್ ಹೌಸ್-2, ಅಜ್ಜಂಪುರ ಸುರಂಗದ ಮಾರ್ಗವಾಗಿ ಹೆಟ್ಟೂರು ಗ್ರಾಮದ ಹತ್ತಿರವಿರುವ ವೈ-ಜಂಕ್ಷನ್‌ನಿAದ ಹೆದ್ದೂರು, ಕಾಟಿನಗೆರೆ, ಬೆಣಕುಣಿಸೆ, ಮುಗಳಿ, ಬೇಗೂರು, ಆಸಂದಿ, ಹಡಗಲು, ಕಲ್ಕೆರೆ, ಹೆಚ್. ತಿಮ್ಮಾಪುರ, ಕಲ್ಲಹಳ್ಳಿ, ಚಿಕ್ಕಬಳ್ಳೇಕೆರೆ, ಹನುಮನಹಳ್ಳಿ, ಚೌಳಹಿರಿಯೂರು ಮತ್ತು ಹಿ. ತಿಮ್ಮಾಪುರ ಗ್ರಾಮಗಳ ಮಾರ್ಗವಾಗಿ ಹರಿದು ವೇದಾವತಿ ನದಿಗೆ ಸೇರುವ ಹಳ್ಳದ ಮುಖಾಂತರ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸಲಾಗುವುದು.
ಆದ್ದರಿಂದ, ಸಾರ್ವಜನಿಕರ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಕಾಲುವೆ ಹಾಗೂ ಹಳ್ಳದ ಪಾತ್ರಗಳಲ್ಲಿ ಸಾರ್ವಜನಿಕರು ತಿರುಗಾಡುವುದು, ಜನ ಜಾನುವಾರುಗಳನ್ನು ಕಾಲುವೆ ಒಳಗಡೆ ಬಿಡುವುದು ಹಾಗೂ ಇತರೆ ಚಟುವಟಿಕೆಗಳನ್ನು ಮಾಡುವುದು ಮುಂತಾದವುಗಳನ್ನು ನಿಷೇಧಿಸಲಾಗಿದೆ.
Vishveshvaraya Jala Nigam Ltd ಈ ಸೂಚನೆಗಳನ್ನು ಉಲ್ಲಂಘಿಸುವುದು, ನಿಗಮದ ಆಸ್ತಿಯಾದ ನೀರಾವರಿ ಕಾಲುವೆ, ಕಟ್ಟಡಗಳನ್ನು ಜಖಂಗೊಳಿಸುವುದು, ಅನಧಿಕೃತವಾಗಿ ಪಂಪ್‌ಸೆಟ್ ಗಳನ್ನು ಅಳವಡಿಸಿ ನೀರನ್ನು ಎತ್ತುವುದು ನೀರಾವರಿ ಕಾಯ್ದೆಯ ವಿವಿಧ ನಿಯಮಗಳ ಪ್ರಕಾರ ಕಾನೂನು ಬಾಹಿರವಾಗಿದ್ದು, ಇದನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

National Legal Services Authority ಪರಿತ್ಯಕ್ತ ಮಕ್ಕಳಿಗೆ ಆಧಾರ್ ಕಾರ್ಡ್ ಒದಗಿಸಿ. ಸಾಥಿ ಅಭಿಯಾನಕ್ಕೆ ಸಹಕರಿಸಿ- ನ್ಯಾ.ಎಂ.ಎಸ್.ಸಂತೋಷ್

0

National Legal Services Authority ಪರಿತ್ಯಕ್ತ, ಅನಾಥ ಮಕ್ಕಳಿಗೆ ಆಧಾರ್ ಕಾರ್ಡ್ ಒದಗಿಸುವಲ್ಲಿ ಆಗುತ್ತಿರುವ ತೊಡಕುಗಳನ್ನು ನಿವಾರಣೆ ಮಾಡಿ, ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ನೀಡಲು ಸಾಥಿ ಅಭಿಯಾನ ಹಮ್ಮಿಕೊಂಡಿದ್ದು ಎಲ್ಲರೂ ಸಹಕರಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್. ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ನ್ಯಾಯಾಲಯದ ವಿ.ಸಿ. ಕೊಠಡಿಯಲ್ಲಿ ಪಾಲನೆ ಮತ್ತು ಸಂರಕ್ಷಣೆಗೆ ಬೇಕಾಗಿರುವ ಮಕ್ಕಳಿಗೆ ಆಧಾರ್ ನೋಂದಣಿ ಮತ್ತು ಸರ್ಕಾರಿ ಯೋಜನೆಗಳ ಸೇರ್ಪಡೆ ಮತ್ತು ಟ್ಯಾಕಿಂಗ್ ಗಾಗಿ ಸಾಥಿ ಅಭಿಯಾನದ ಅನುಪಾಲನೆ ಹಾಗೂ ಅಭಿಯಾನದ ಅನುಷ್ಠಾನ ಕುರಿತಾದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತಾನಾಡಿದರು.
ಜಿಲ್ಲೆಯಲ್ಲಿ ಪರಿತ್ಯಕ್ತ, ಏಕ ಪೋಷಕ, ಅನಾಥ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಅವರಿಗೆ ಮುಖ್ಯವಾಗಿ ಆಧಾರ್ ಕಾರ್ಡ್ ಅವ್ಯಕತೆಯಿರುವುದರಿಂದ ಆಧಾರ್ ಕಾರ್ಡ್ ಮಾಡಿಸಲು ಇರುವ ತೊಡಕುಗಳನ್ನು ಹೇಗೆ ನಿವಾರಿಸಬೇಕೆಂಬ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಇಲ್ಲದ 324 ಮಕ್ಕಳನ್ನು ಗುರುತಿಸಿದ್ದು ಯಾವುದೇ ಸೌಲಭ್ಯಗಳು ದೊರಕದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗೂ ಆಧಾರ್ ಇಲ್ಲವೆಂಬ ಕಾರಣಕ್ಕೆ ಶಾಲಾ ದಾಖಲಾತಿಯೂ ಸಾಧ್ಯವಾಗದೇ ಇರುವ ಮಕ್ಕಳಿಗೆ ಆಧಾರ್ ಒದಗಿಸಿ ದಾಖಲು ಮಾಡಿಕೊಳ್ಳಬೇಕು. ಆಧಾರ್ ಇಲ್ಲವೆಂಬ ಕಾರಣಕ್ಕೆ ಪರಿತ್ಯಕ್ತ ಮಕ್ಕಳಿಗೆ ಮಕ್ಕಳ ರಕ್ಷಣಾ ಕೇಂದ್ರಗಳಲ್ಲಿಯೂ ದಾಖಲಾತಿ ದೊರಕುತ್ತಿಲ್ಲ. ಆದ್ದರಿಂದ ಆಧಾರ್ ಕಾರ್ಡ್ನ್ನು ನೀಡಲು ಇರುವ ಪರ್ಯಾಯ ಮಾರ್ಗಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು. ಆಧಾರ್ ಕಾರ್ಡ್ ನೀಡಲು ಜನನ ಪ್ರಮಾಣ ಪತ್ರ ಇರದೇ ಇರುವ ಮಕ್ಕಳಿಗೆ ಜನನ ಪ್ರಮಾಣ ಪತ್ರಕ್ಕಾಗಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಹೀಗೆ ಪಡೆದು ಅಂತಹ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಿಕೊಡಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿರುವನ್ವಯ ತಂದೆ-ತಾಯಿ ಇಲ್ಲದಿರುವ ಪರಿತ್ಯಕ್ತ ಮಕ್ಕಳು, ವಲಸೆ ಇನ್ನಾವುದೇ ಕಾರಣಗಳಿಂದ ಆಧಾರ್ ಹೊಂದಿರದ ಮಕ್ಕಳನ್ನು ಗುರುತಿಸಿ ಆಧಾರ್ ಕಾರ್ಡ್ ನೀಡಲು ‘ಸಾಥಿ’ ( ಸರ್ವೇ ಆಫ್ ಆಧಾರ್ ಆಂಡ್ ಆಕ್ಸಸ್ ಟು ಟ್ರಾö್ಯಕಿಂಗ್ ಮತ್ತು ಹೊಲಿಸ್ಟಿಕ್ ಇನ್ಸುಕ್ಲೆಷನ್) ಅಭಿಯಾನವನ್ನು ಕೈಗೊಳ್ಳಲಾಗುತ್ತಿದೆ. ಪರಿತ್ಯಕ್ತ ಮಕ್ಕಳಿಗೆ ಕಾನೂನು ಗುರುತು ಮತ್ತು ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
National Legal Services Authority ಎಷ್ಟೋ ಮಕ್ಕಳಿಗೆ ಜನನ ಪ್ರಮಾಣ ಪತ್ರ ಇಲ್ಲ. ಇಂತಹ ಪ್ರಕರಣದಲ್ಲಿ ಪೋಷಕರು ವಿಶೇಷವಾಗಿ ತಾಯಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮುಂದೆ ಬಂದು ಪೋಷಕರ ಹೆಸರು, ಮಗುವಿನ ಜನ್ಮ ದಿನಾಂಕ, ಜನ್ಮಸ್ಥಳದ ವಿವರ ನೀಡಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಸುವ ಮೂಲಕ ಆಧಾರ್ ಕಾರ್ಡ್ ಪಡೆದು ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶವಿದೆ. ಪೋಷಕರು ಇರುವ ಮಕ್ಕಳಿಗೆ ಪೋಷಕರ ನಿವಾಸ ದೃಢೀಕರಣ, ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ ಅಥವಾ ಇತರೆ ಯಾವುದೇ ಮೂಲ ದಾಖಲಾತಿ ನೀಡಿ ಅವರಿಗೆ ಮೊದಲು ಆಧಾರ್ ನೋಂದಣಿ ಮಾಡಿಸಿ, ನಂತರ ಮಕ್ಕಳಿಗೂ ಮಾಡಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಮಂಜುನಾಥ್ ಆರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಂಜುನಾಥ್ ಎಸ್,ಆರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್, ಆಧಾರ್ ಜಿಲ್ಲಾ ಸಂಯೋಜಕರಾದ ಸತೀಶ್ ಚಂದ್ರ ಎಸ್, ಹಿರಿಯ ಉಪನೋಂದಣಾಧಿಕಾರಿಗಳಾದ ಧನುರಾಜ್ ಬಿ, ಇತರರು ಹಾಜರಿದ್ದರು. ಹಾಗೂ ವಿಸಿ ಮೂಲಕ ಜಿಲ್ಲೆಯ ವಿವಿಧ ತಾಲ್ಲೂಕುಗಳ ಅಧಿಕಾರಿಗಳು , ತಾಲ್ಲೂಕುಗಳ ತಹಶೀಲ್ದಾರರು, ಪಂಚಾಯಿತಿ ಮುಖ್ಯ ಅಧಿಕಾರಿಗಳು, ಬಿಇಓ, ಸಿಡಿಪಿಓ ಗಳು ಪಾಲ್ಗೊಂಡಿದ್ದರು.

Karnataka Science and Technology Academy ರಾಜ್ಯ ವಿಜ್ಞಾನ & ತಂತ್ರಜ್ಞಾನ ಅಕಾಡೆಮಿಯಿಂದ ಮೂರು ದಿನಗಳ ಸರ್ಟಿಫಿಕೇಟ್ ಕೋರ್ಸ್ ಕಾರ್ಯಾಗಾರ

0

Karnataka Science and Technology Academy ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ವತಿಯಿಂದ ಆ.05 ರಿಂದ 07 ರವರೆಗೆ “Science Communication: Strategies for Reaching Diverse Audiences” ಎಂಬ ವಿಷಯದ ಕುರಿತು ಮೂರು ದಿನಗಳ ಸರ್ಟಿಫಿಕೇಟ್ ಕೋರ್ಸ್ ಕಾರ್ಯಾಗಾರವನ್ನು ಅಕಾಡೆಮಿಯ ಕಛೇರಿಯಲ್ಲಿ ಆಯೋಜಿಸಲಾಗುತ್ತಿದೆ.
ಈ ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸಗಳನ್ನು ನೀಡಲಿದ್ದು, ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಶೈಕ್ಷಣಿಕ ತಜ್ಞರು, ಭಾಗವಹಿಸಬಹುದಾಗಿದ್ದು, ಆಸಕ್ತ ಪ್ರತಿನಿಧಿಗಳು Google-form-https://forms.gle/iyPn85smZ81RGGnf6 ಮೂಲಕ ದಿ:02/08/2025 ರೊಳಗಾಗಿ ನೋಂದಾಯಿಸಿಕೊಳ್ಳುವುದು.
ಹೆಚ್ಚಿನ ಮಾಹಿತಿಗಾಗಿ ಕಾರ್ಯಾಗಾರದ ಸಂಯೋಜಕರಾದ ಶ್ರೀನಿವಾಸು ವಿ. ಕೆ. -ಮೊ: 9620767819 ಅಥವಾ ಅಕಾಡೆಮಿಯ ವೆಬ್ ಸೈಟ್ https://kstacademy.in ಸಂಪರ್ಕಿಸಬಹುದಾಗಿದೆ.

Sri Ramakrishna Vidyaniketan School ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯರಿಗೆ ಡಾ.ಶುಭ್ರತಾ ಅವರಿಂದ ಒತ್ತಡ ರಹಿತ ಅಧ್ಯಯನದ ಬಗ್ಗೆ ತಿಳುವಳಿಕೆ

0

Sri Ramakrishna Vidyaniketan School ಶಿವಮೊಗ್ಗ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಭಯ ನಿವಾರಣೆ ಹಾಗೂ ಒತ್ತಡ ರಹಿತ ಅಧ್ಯಯನದ ಬಗ್ಗೆ ಶಿವಮೊಗ್ಗದ ಮನೋರೋಗ ತಜ್ಞೆಯಾದ ಡಾ||ಕೆ.ಎಸ್.ಶುಭ್ರತಾ ತಿಳುವಳಿಕೆ ನೀಡಿದರು.
ಹಾಗೆಯೇ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳು ಕೇಳಿದ ಉತ್ತಮ ಪ್ರಶ್ನೆಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

Nagasubrahmanya Temple ಭಜನೆಯಿಂದ ಮನಸ್ಸಿಗೆ ಶಾಂತಿ, ಭಕ್ತಿಭಾವ ಸ್ಮರಣೆ- ಸಂದೇಶ ಉಪಾದ್ಯ

0

Nagasubrahmanya Temple ಭಜನೆ ಭಕ್ತಿ ಗೀತೆಗಳು ದೇವರ ಆರಾಧನೆಯ ಹಾಡುಗಳು ನಮಗೆ ಮನಸ್ಸಿಗೆ ಶಾಂತಿ ಹಾಗೂ ಭಕ್ತಿ ಭಾವವನ್ನು ಮೂಡಿಸುತ್ತದೆ ಎಂದು ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂದೇಶ್ ಉಪಾಧ್ಯ ನುಡಿದರು. ಅವರು ನಾಗಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ. ಶ್ರೀ ಸ್ವಾಮಿ ವಿವೇಕಾನಂದ ಅಡ್ವೆಂಚರಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಹಾಗೂ ಅರ್ಚಕ ವೃಂದ ಮತ್ತು ಬಜನಾ ಪರಿಷತ್ ಇವರ ಸಹಯೋಗದೊಂದಿಗೆ ಆಷಾಢ ಮಾಸದಲ್ಲಿ ಸತತ ಎಂಟನೇ ವರ್ಷದ ಆಶಾಡ ಭಜನಾೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿಯನ್ನು ಕುರಿತು ಮಾತನಾಡಿದರು. ಶುದ್ಧ ಮನಸ್ಸಿನಿಂದ ಶ್ರದ್ಧೆಯ ಭಕ್ತಿ ಭಾವದಿಂದ ಭಜನೆಯನ್ನು ಮಾಡಿದರೆ ಆ ಜಾಗದಲ್ಲಿ ಸಕಾರಾತ್ಮಕ ಭಾವನೆಗಳು ಮೂಡುತ್ತವೆ ಹಾಗೂ ಖಿನ್ನತೆ ದೂರವಾಗುತ್ತದೆ ದೇವರಲ್ಲಿ ಭಕ್ತಿ ಹೆಚ್ಚುತ್ತದೆ ಎಂದು
ನುಡಿದ ಅವರು ಈಗಾಗಲೇ ಶಿವಮೊಗ್ಗ ನಗರದ ಸಾಕಷ್ಟು ಭಜನಾ ಮಂಡಳಿ ಸದಸ್ಯರು ಈ ಪವಿತ್ರ ಕಾರ್ಯದಲ್ಲಿ ವಿಶೇಷವಾದ ಭಜನೆಗಳನ್ನು ಮಾಡುವುದರ ಮುಖಾಂತರ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಅತಿಥಿಗಳಾಗಿ ಆಗಮಿಸಿ ನಾಳೆ ಸುಬ್ರಮಣ್ಯ ದೇವಸ್ಥಾನ ಒಂದು ಶಕ್ತಿ ಕೇಂದ್ರವಾಗಿದೆ ಇಲ್ಲಿ ಎಲ್ಲಾ ಹಬ್ಬ ಹರಿದಿನಗಳು ಹಾಗೂ ವಿಶೇಷ ಕಾರ್ಯಕ್ರಮಗಳಿಂದ ದೇವಸ್ಥಾನ ಎಲ್ಲಾ ಭಕ್ತರ ಮನಃಶಾಂತಿಯ ತಾಣವಾಗಿದೆ ಒಳ್ಳೆ ಒಳ್ಳೆಯ ಭಜನೆಗಳಿಂದ ನಮ್ಮ ಬದುಕು ಬದಲಾಗುತ್ತದೆ ಪರಸ್ಪರರಲ್ಲಿ ಒಡನಾಟ ಹೆಚ್ಚುತ್ತದೆ ಹಾಗೆ ನಮ್ಮ ಧ್ವನಿ ಕೂಡ ಸಂಸ್ಕರಣವಾಗುತ್ತದೆ ಅಭಿನಂದಿಸಿದರು. Nagasubrahmanya Temple ಇದೇ ಸಂದರ್ಭದಲ್ಲಿ ಜೆಸಿ ನಗರ ಶಿವಮೊಗ್ಗದ ಶ್ರೀ ದುರ್ಗಾ ವಾಹಿನಿ ಭಜನಾ ಮಂಡಳಿ ಕೊಲ್ಲಾಪುರದಮ್ಮ ದೇವಸ್ಥಾನದ ಬದಲಾವಣೆಯ ಸದಸ್ಯರಾದ ಶ್ರೀಮತಿ ಪ್ರಮೀಳಾ ಉಮೇಶ್. ಮಮತಾ. ಮಾಲತಿ. ತೇಜಸ್ವಿನಿ. ರಜನಿ. ಸವಿತಾ. ರೇಖಾ. ಹಾಗೂ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಆಕಾಶವಾಣಿಯ ಕಲಾವಿದರು ಹಾಗೂ ಸದಸ್ಯರು ಉಪಸ್ಥಿಧರಿದ್ದರು.

Karnataka Sugama Sangeet Bangalore Parishad ಆಗಸ್ಟ್ 2 ರಿಂದ ಮೈಸೂರಿನಲ್ಲಿ 19 ನೇ ಸುಗಮ ಸಂಗೀತ ಸಮ್ಮೇಳನ.ಸರ್ವಾಧ್ಯಕ್ಷರಾಗಿ ಶ್ರೀನಿವಾಸ ಉಡುಪ

0

Karnataka Sugama Sangeet Bangalore Parishad ಕರ್ನಾಟಕ ಸುಗಮ ಸಂಗೀತ ಬೆಂಗಳೂರು ಪರಿಷತ್ತು ವತಿಯಿಂದ ಆ.2 ಮತ್ತು 3 ರಂದು ಮೈಸೂರಿನ ಕಲಾಮಂದಿರ ಆವರಣದಲ್ಲಿ 19ನೇ ಸುಗಮ ಸಂಗೀತ ಸಮ್ಮೇಳನ ನಡೆಯಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಗಾಯಕ ನಗರ ಶ್ರೀನಿವಾಸ ಉಡುಪ ಅವರನ್ನು ಆಯ್ಕೆ ಮಾಡಲಾಗಿದೆ. ನಾಡಿನ 33 ಭಾಗಗಳಿಂದ 300ಕ್ಕೂ ಅಧಿಕ ಸುಗಮ ಸಂಗೀತ ಕಲಾವಿದರು, ಕವಿಗಳು ಭಾಗವಹಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸುಗಮಸಂಗೀತ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಬಿ.ವಿ.ಪ್ರವೀಣ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಆ.2 ರಂದು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಪರಿಷತ್ತು ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಆ.3 ರಂದು ಸಮಾರೋಪದಲ್ಲಿ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಆಯೋಜಿಸಿರುವ ಗೀತೋತ್ಸವ -19, ಸುಗಮ ಸಂಗೀತ ಸಮ್ಮೇಳನದಲ್ಲಿ ಶಿವಮೊಗ್ಗ ಜಿಲ್ಲೆಯ ಸುಗಮ ಸಂಗೀತ ಸದಸ್ಯರು ಗೀತೋತ್ಸವ ವೇದಿಕೆಯಲ್ಲಿ ಹಾಡಲಿದ್ದಾರೆ. ಏಕವ್ಯಕ್ತಿ ಗಾಯನದಲ್ಲಿ ಕೆ.ಯುವರಾಜ್, ಸುರೇಖಾ ಹೆಗಡೆ, ಜಯಶ್ರೀ ಶ್ರೀಧರ್, ಮಥುರಾ ನಾಗರಾಜ್, ಶುಭಾ ಹರ್ಷ, ಧನಪಾಲ್ ಸಿಂಗ್ ರಜಪೂತ್, ಸಾಕೇತ ಶಾಸ್ತ್ರಿ, ಸಾಗರದ ಸುನೀತಾ ಶ್ರೀಪಾದ ರಾವ್ ಹಾಗೂ ವೃಂದಗಾನ ವಿಭಾಗದಲ್ಲಿ ಉಮಾದಿಲೀಪ್, ಲಕ್ಷ್ಮೀಮಹೇಶ್, ನಳಿನಾಕ್ಷಿ, ಬಿಂದು ವಿಜಯಕುಮಾರ್, ಹೇಮಾ ಟಿ., ಮಂಜುನಾಥ್, ಜಿ.ವಿಜಯಕುಮಾರ್ ಬಸವರಾಜ್,ರಾಜಕುಮಾರ್, ಮುರಳಿಧರ್ ಹಾಡಲಿದ್ದಾರೆ.

Karnataka Sugama Sangeet Bangalore Parishad 2023 ಮತ್ತು 2024ನೇ ಸಾಲಿನ ‘ಕಾವ್ಯಶ್ರೀ’ ಮತ್ತು ‘ಭಾವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ‘ಕಾವ್ಯಶ್ರೀ’ ಪ್ರಶಸ್ತಿಗೆ ಕವಿಗಳಾದ ಬಿ.ಆರ್.ಲಕ್ಷ್ಮಣರಾವ್, ಡಾ. ನಾ.ದಾಮೋದರ ಶೆಟ್ಟಿ ಹಾಗೂ ‘ಭಾವಶ್ರೀ’ ಪ್ರಶಸ್ತಿಗೆ ಗಾಯಕಿಯರಾದ ಶ್ರೀಮತಿ ರತ್ನಮಾಲಾ ಪ್ರಕಾಶ್ ಮತ್ತು ಶ್ರೀಮತಿ ಕೆ.ಎಸ್.ಸುರೇಖಾ ಅವರನ್ನು ಆಯ್ಕೆ ಮಾಡಲಾಗಿದೆ.

ಹಿರಿಯ ಸಾಹಿತಿಗಳಾದ ಡಾ. ಹಂಪ ನಾಗರಾಜಯ್ಯ, ಸಿ.ಪಿ.ಕೃಷ್ಣಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪರಿಷತ್ತಿನ ಗೌರವ ಖಜಾಂಚಿ ಪ್ರಶಾಂತ ಉಡುಪ ಪ್ರಕಟಿಸಿದ್ದಾರೆ. ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಗೀತೋತ್ಸವ ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಶ್ರೀಮತಿ ಶಾಂತಾ ಶೆಟ್ಟಿ ವಿನಂತಿಸಿದ್ದಾರೆ.

Nomadic community of SC and ST ಪರಿಶಿಷ್ಠ ಜಾತಿಯ ಅಲೆಮಾರಿ ಸಮುದಾಯ 150 ಕುಟುಂಬಕ್ಕೆ ತಾಡಪಾಲು ವಿತರಣೆ

0

Nomadic community of SC and ST ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದ ನಿವೇಶನ / ವಸತಿ ರಹಿತ ಬಡ ಕುಟುಂಬದವರು ಟೆಂಟು ಮತ್ತು ಗುಡಿಸಲುಗಳಲ್ಲಿ ಹೊದಿಕೆಯಾಗಿದ್ದ ತಾಡಪಾಲುಗಳು ಶಿಥಿಲಗೊಂಡಿರುವುದು ಗಮನಕ್ಕೆ ಬಂದಿರುತ್ತದೆ. ಶಿವಮೊಗ್ಗ ಜಿಲ್ಲೆಯ ಸಾಗರ ರಸ್ತೆ, ಶ್ರೀ ರಾಂಪುರದಲ್ಲಿ ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯದವರು ವಾಸಿಸುತ್ತಿರುವ 91 ಕುಟುಂಬಗಳಿಗೆ ಹಾಗೂ ಶಿವಮೊಗ್ಗ ನಗರದ ಎಮ್.ಆರ್.ಎಸ್. ಡಬಲ್ ಟ್ಯಾಂಕ್ ಹತ್ತಿರ ಟೆಂಟು, ಗುಡಾರಗಳನ್ನು ನಿರ್ಮಿಸಿಕೊಂಡು ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯದ 44 ಕುಟುಂಬಗಳು ವಾಸಿಸುತ್ತಿದ್ದು. ಈ ನಡುವೆ ಅತಿ ಮಳೆಯಿಂದಾಗಿ ತೊಂದರೆ ಯಾಗುತ್ತಿದ್ದು, ನಿಗಮದಿಂದ ಮೂಲಭೂತ ಸೌಕರ್ಯ ಯೋಜನೆಗೆ ನಿಗದಿ ಪಡಿಸಿದ ಅನುದಾನದಲ್ಲಿ ತಾತ್ಕಾಲಿಕವಾಗಿ ಸುಮಾರು 150 ಕುಟುಂಬಗಳಿಗೆ ತಡಪಾಲುಗಳನ್ನು ಶ್ರೀಮತಿ ಪಲ್ಲವಿ ಜಿ. ಅಧ್ಯಕ್ಷರು, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮರವರು ವಿತರಿಸಿದರು. ಇವರುಗಳಿಗೆ ಶಾಶ್ವತ ನೆಲೆ ಕಲ್ಪಿಸಲು ಶಿದಿಲೀಪುರ ಗ್ರಾಮದ ಹತ್ತಿರ ಸರ್ಕಾರಿ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದ್ದು, ಅದನ್ನು ಹಂಚಿಕೆ ಮಾಡಿ ಅಭಿವೃದ್ಧಿ ಮಾಡುವ ಕಾರ್ಯವು ಪ್ರಗತಿಯಲ್ಲಿರುತ್ತದೆ.
Nomadic community of SC and ST ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಶ್ರೀ ಚನ್ನಬಸಪ್ಪರವರು ಉಪಸ್ಥಿತರಿದ್ದು, ಸದರಿ ಅಲೆಮಾರಿ ಕುಟುಂಬಕ್ಕೆ ನೆಲೆ ಕಲ್ಪಿಸುವ ಸಂಬಂಧ ಸರ್ಕಾರವು ಆಶ್ರಯ ಯೋಜನೆಗೆ ನಿಗಧಿಪಡಿಸಿರುವ ಭೂಮಿಯಲ್ಲಿ ಸದರಿ ಶಾಸಕರು ಮುಂಬರುವ ಅಧಿವೇಶನದ ನಂತರದಲ್ಲಿ ಆದ್ಯತೆಯ ಮೇರೆಗೆ ಈ ಅಲೆಮಾರಿ ಕುಟುಂಬಗಳಿಗೆ ಹಕ್ಕು ಪತ್ರ ಕೊಡಿಸುವ ವರದಿ ನೀಡಿದರು. ಈ ಸಂದರ್ಭದಲ್ಲಿ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಶಿವಮೊಗ್ಗ ಜಿಲ್ಲೆರವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಜಿಲ್ಲೆರವರು ಮತ್ತು ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಇತರೆ ಅಲೆಮಾರಿ ಮುಖಂಡರುಗಳು ಭಾಗಿಯಾಗಿದ್ದರು.