JCI Shimoga ಜೆಸಿಐ ಶಿವಮೊಗ್ಗ ಭಾವನ ದಿಂದ ನಗರದ ಹಲವು ಪ್ರಮುಖ ಸ್ಥಳಗಳಲ್ಲಿ ರಸ್ತೆ ಸಂಚಾರ ಸಂಚಾರಿ ನಿಯಮ ಪಾಲನೆಯ ಸೂಚನ ಫಲಕಗಳನ್ನು ಅಳವಡಿಸಿದ್ದು ಈ ಸೂಚನಾ ಫಲಕಗಳನ್ನು ಜೆಸಿಐ ರಾಷ್ಟ್ರೀಯ ಅಧ್ಯಕ್ಷರಾದ ಅಂಕುರ್ ಜಿಜುವಾಲಾ ರವರು ಉದ್ಘಾಟಿಸಿದರು. ಅವರು ಮಾತನಾಡಿ ಸಂಚಾರಿ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸುವುದರಿಂದ ಸುರಕ್ಷತೆಯಿಂದ ಸಂಚರಿಸುದೊಂದಿಗೆ ಅಪಘಾತಗಳನ್ನು ತಡೆಗಟ್ಟಬಹುದು. ಜೆಸಿಐ ಶಿವಮೊಗ್ಗ ಭಾವನ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಸಂಚಾರಿ ನಿಯಮ ಪಾಲನೆ, ಪರಿಸರ ಕಾಳಜಿ , ಸ್ವಚ್ಛತೆ ,ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಸಿಐ ಶಿವಮೊಗ್ಗ ಭಾವನದ ಅಧ್ಯಕ್ಷರಾದ ಜೆಸಿ ರೇಖಾ ರಂಗನಾಥ್ ರವರು ನಮ್ಮ ಜೆಸಿಐ ಶಿವಮೊಗ್ಗ ಭಾವನ ತಂಡವು ಈಗಾಗಲೇ ನಗರದ ಹಲವು ಭಾಗಗಳಲ್ಲಿ ಸಂಚಾರ ನಿಯಮಗಳ ಸೂಚನ ಫಲಕಗಳನ್ನು ಅಳವಡಿಸಿ ಜಾಗೃತಿಯನ್ನು ಮೂಡಿಸುವುದರ ಜೊತೆಗೆ ಸ್ವಚ್ಛತೆ ಪರಿಸರ ಸಂರಕ್ಷಣೆ ಆರೋಗ್ಯ ಹಾಗೂ ಮಹಿಳೆಯರ ಸುರಕ್ಷತೆಗಳ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು ಉತ್ತಮ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು. JCI Shimoga ಈ ಸಂದರ್ಭದಲ್ಲಿ ಜೆಸಿಐ ವಲಯ ಅಧ್ಯಕ್ಷರಾದ ಗೌರೀಶ್ ಭಾರ್ಗವ್, ವಲಯ ಉಪಾಧ್ಯಕ್ಷರಾದ ಸುದರ್ಶನ್ ತಾಯಿ ಮನೆ, ಜೆಸಿಐ ಭಾವನದ ಪ್ರಮುಖರಾದ ರತ್ನ ಲಕ್ಷ್ಮಿ ನಾರಾಯಣ್, ಪುಷ್ಪಾ ಶೆಟ್ಟಿ, ಪ್ರತಿಮಾ ಡಾಕಪ್ಪ, ಮಾಲಾ ರಾಮಪ್ಪ, ವಂದನಾ ದಿನೇಶ್, ಸುಗುಣ ಸತೀಶ್, ಪೂರ್ಣಿಮಾ ಸುನಿಲ್, ಕನ್ನಿಕಾ, ಸುಶೀಲ ಷಣ್ಮುಗಂ , ಉಷಾ, ಪ್ರೇಮ ಹೆಗಡೆ, ಸುಜಾತ ಬಸವರಾಜ್, ದಿವ್ಯ ಪ್ರವೀಣ್, ಜೆಜೆಸಿ ಜನ್ಯ ರಂಗನಾಥ್, ಶ್ರೀನಾಗ್,ವಿಜಯ್ ಕುಮಾರ್ ಸೇರಿದಂತೆ ಹಲವರು ಉಪಸಿತರಿದ್ದರು
Department of Agriculture ಆನ್ ಲೈನ್ ಸೆಸ್ ಪಾವತಿ ಮಾಡಿದ್ದರೆ ಎಪಿಎಂಸಿ ಅಧಿಕಾರಿಗಳ ಸಹಿ,ಸೀಲು ಅಗತ್ಯವಿಲ್ಲ- ಸಚಿವ ಶಿವಾನಂದ ಪಾಟೀಲ್
Department of Agriculture ನಮೂನೆ 35 ಬಿಗೆ ಸಂಬಂಧಿಸಿದ ಸೆಸ್ ಸಮಸ್ಯೆ ಇತ್ಯರ್ಥ್ಯಕ್ಕೆ ಶೀಘ್ರದಲ್ಲಿ ಎಥನಾಲ್ ಫ್ಯಾಕ್ಟರಿ ಮಾಲೀಕರು ಹಾಗೂ ಮೆಕ್ಕೆಜೋಳ ಖರೀದಿದಾರರ ಸಭೆ ಕರೆಯಲಾಗುವುದು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ,ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಬೆಂಗಳೂರಿನ ಕೃಷಿ ಮಾರಾಟ ಇಲಾಖೆ ಕಚೇರಿ ಸಭಾಂಗಣದಲ್ಲಿ ಎಂಎಲ್ಸಿ ಡಿ.ಎಸ್. ಅರುಣ್ ನೇತೃತ್ವದಲ್ಲಿ ಆಗಮಿಸಿದ್ದ ದಾವಣಗೆರೆ, ಶಿವಮೊಗ್ಗ ಚಿತ್ರದುರ್ಗ ಜಿಲ್ಲೆ ಎಪಿಎಂಸಿ ಮೆಕ್ಕೆಜೋಳ ಖರೀದಿದಾರರ ಅಹವಾಲು ಆಲಿಸಿದ ಸಚಿವರು, ಆನ್‌ಲೈನ್ ಮೂಲಕ ಸೆಸ್ ಪಾವತಿ ವ್ಯವಸ್ಥೆ ಈಗಾಗಲೆ ದಾವಣಗೆರೆ ಜಿಲ್ಲೆಯ ಎಲ್ಲ ಎಪಿಎಂಸಿಯಲ್ಲಿ ಜಾರಿಯಲ್ಲಿದ್ದು ಹಂತ ಹಂತವಾಗಿ ರಾಜ್ಯದ ಎಲ್ಲ ಎಪಿಎಂಸಿಗಳಲ್ಲಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ಆನ್‌ಲೈನ್‌ನಲ್ಲಿ ಸೆಸ್ ಪಾವತಿ ಮಾಡಿದ್ದರೆ ಸಂಬಂಧಪಟ್ಟ ರಸೀದಿಗೆ ಎಪಿಎಂಸಿ ಅಧಿಕಾರಿಗಳ ಸಹಿ ಮತ್ತು ಸೀಲಿನ ಅವಶ್ಯಕತೆ ಇರುವುದಿಲ್ಲ. ಈ ಸಂಬಂಧ ಎಲ್ಲ ಎಪಿಎಂಸಿ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ವಿಚಾರದಲ್ಲಿ ಖರೀದಿದಾರರು ಮತ್ತು ಸಂಸ್ಕರಣ ಘಟಕಗಳ ಮಾಲೀಕರ ಸಭೆಯಲ್ಲಿ ತಿಳಿವಳಿಕೆ ನೀಡಲಾಗುವುದು ಎಂದು ಸಚಿವರು ಹೇಳಿದರು.
ಎಪಿಎಂಸಿ ವ್ಯಾಪ್ತಿಯ ಆಸ್ತಿಗಳಿಗೆ ಕಂದಾಯವನ್ನು ನಗರಪಾಲಿಕೆ ಇಲ್ಲವೆ ನಗರಸಭೆಗಳಿಗೆ ಪಾವತಿಸುವ ಬದಲಿಗೆ ಎಪಿಎಂಸಿಗಳಿಗೆ ಪಾವತಿ ಮಾಡಬೇಕು ಎಂಬ ವರ್ತಕರ ಬೇಡಿಕೆ ಗಮನದಲ್ಲಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಕೈಗೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಎಪಿಎಸಿಗಳಲ್ಲಿ ಸಾಕಷ್ಟು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರೈತರು ಮತ್ತು ವರ್ತಕ ಸ್ನೇಹಿ ಪರಿಸರವನ್ನು ನಿರ್ಮಿಸಲಾಗುತ್ತಿದೆ. ಎಲ್ಲ ವ್ಯವಸ್ಥೆಯನ್ನು ಸರಳೀಕರಣಗೊಳಿಸಲಾಗುತ್ತಿದ್ದು, ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ ಎಂದರು.
ನಮೂನೆ 35 ಬಿ ಪದ್ಧತಿ ಬೇಡ, ನಮೂನೆ 35 ಎ ಪದ್ಧತಿ ಮಾತ್ರ ಜಾರಿಯಲ್ಲಿ ಇರಬೇಕು ಎಂದು ಮೆಕ್ಕೆಜೋಳ ಖರೀದಿ ದಾರರು ಬೇಡಿಕೆ ಇಟ್ಟರು. ನಮೂನೆ 35 ಬಿ ಆನ್‌ಲೈನ್‌ನಲ್ಲಿ ಪಡೆದಿದ್ದರೂ ಸಹಿ ಮತ್ತು ಸೀಲು ಇಲ್ಲ ಎಂಬ ಕಾರಣಕ್ಕೆ ಕೆಲವು ಎಥನಾಲ್ ಕಂಪನಿಯವರು ಮೆಕ್ಕೆಜೋಳ ಖರೀದಿ ಹಣ ಪಾವತಿ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ವರ್ತಕರು ದೂರಿದರು.
ಸಂಸ್ಕರಣ ಘಟಕಗಳ ಮಾಲೀಕರು 35 ಬಿ ಪರಿಶೀಲಿಸಿದ ನಂತರ ಮೆಕ್ಕೆಜೋಳ ಖರೀದಿ ಹಣ ಪಾವತಿ ಮಾಡುತ್ತೆವೆ ಎಂದು ಹೇಳುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದ್ದು, ಮೂರುತಿಂಗಳು ವಿಳಂಬವಾಗುತ್ತಿದೆ. ಈ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕು ಎಂದು ಮನವಿ ಮಾಡಿದರು.
Department of Agriculture ಚಿತ್ರದುರ್ಗದಲ್ಲಿ ವರ್ತಕರು ವಿದ್ಯುತ್ ಶುಲ್ಕವನ್ನು ಎಪಿಎಂಸಿಗೆ ಪಾವತಿ ಮಾಡುತ್ತಿದ್ದು, ಇದೇ ರೀತಿ
ಅಸ್ತಿ ಕಂದಾಯವನ್ನೂ ಎಪಿಎಂಸಿಗೆ ಪಾವತಿ ಮಾಡುವ ವ್ಯವಸ್ಥೆ ಜಾರಿಗೆಬರಲಿ. ನಗರಸಭೆಯಗಳು ಎಪಿಎಂಸಿ ವ್ಯಾಪ್ತಿಯಲ್ಲಿ ಯಾವುದೆ ಸೌಲಭ್ಯ ಕೊಡುವುದಿಲ್ಲ. ಹೀಗಾಗಿ ಇದನ್ನುಬದಲ
ಅವಣೆ ಮಾಡಿ ಎಂದು ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಡಿ.ಎಸ್. ಅರಣ್, ರಾಜ್ಯ ಸರ್ಕಾರ ಎಪಿಎಂಸಿಗಳಲ್ಲಿ ಹಲವಾರು ಸುಧಾರಣೆ ಮಾಡಿದೆ. ಈಸಮಸ್ಯೆಯನ್ನೂ ತ್ವರಿತವಾಗಿ ಪರಿಹರಿಸಬೇಕು ಎಂದು ಮನವಿ ಮಾಡಿದರು. ಕೃಷಿ
ಮಾರಾಟ ಇಲಾಖೆ ನಿರ್ದೇಶಕ ಶಿವಾನಂದ ಕಾಪಸೆ, ಹೆಚ್ಚುವರಿ ನಿರ್ದೇಶಕ ನಜೀಬುಲ್ಲಾಖಾನ್, ವರ್ತಕರಾದ ಕೆ. ಜಾವಿದ್,
ಶ್ರೀನಿವಾಸ್, ನಂಜನಗೌಡ, ಗಿರೀಸ್, ಕುಬೇರಪ್ಪ, ಪ್ರಕಾಶ್ ಮತ್ತಿತರರು ಇದ್ದರು.
District Consumer Disputes Redressal Commission ವೈದ್ಯಕೀಯ ಚಿಕಿತ್ಸೆ ವಿಮಾ ಮೌಲ್ಯ ನೀಡಿಕೆಯಲ್ಲಿ ಸೇವಾ ನ್ಯೂನತೆ, ಗ್ರಾಹಕರ ಪರ ಆಯೋಗದ ತೀರ್ಪು
District Consumer Disputes Redressal Commission ವೀಣಾ ಕೋಂ ಸುಂದರೇಶ ಮತ್ತು ಸುಂದರೇಶ್ ಬಿನ್ ಬಿ.ಆರ್. ಮಂಜಯ್ಯ, ಬೇಡನ ಹಿತ್ತಲು, ತೀರ್ಥಹಳ್ಳಿ, ಶಿವಮೊಗ್ಗ ಜಿಲ್ಲೆ ಇವರು ದಿ ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, ಶಿವಮೊಗ್ಗ, ಮೆಡಿ ಅಸಿಸ್ಟ್ ಟಿಪಿಎ ಪ್ರೈವೇಟ್ ಲಿಮಿಟೆಡ್., ಬೆಂಗಳೂರು ಮತ್ತು ಮಲ್ನಾಡ್ ಅರೆಕಾ ಮಾರ್ಕೆಟಿಂಗ್ ಸೊಸೈಟಿ ಪ್ರೈ. ಲಿ.., ಶಿವಮೊಗ್ಗ ಇವರ ವಿರುದ್ಧ ಸೇವಾ ನ್ಯೂನ್ಯತೆ ಕುರಿತು ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ಆದೇಶಿಸಿದೆ.
ದೂರುದಾರರು 10 ವರ್ಷಗಳಿಂದ 3ನೇ ಎದುರುದಾರರಲ್ಲಿ ಶೇರುದಾರರಾಗಿದ್ದು, 1 ಮತ್ತು 2ನೇ ಎದುರುದಾರರು 2020-2021 ನೇ ಸಾಲಿಗೆ ರೂ.7500/-ಗಳನ್ನು ಮತ್ತು 2021-22ನೇ ಸಾಲಿಗೆ ರೂ.15,000/-ಗಳ ಪಾಲಿಸಿ ಪ್ರಿಮಿಯಂ ಹಣವನ್ನು 3ನೇ ಎದುರುದಾರರಿಂದ ಪಡೆದು ಗುಂಪು ವಿಮೆ ಪಾಲಿಸಿಗಳನ್ನು ನೀಡಿರುತ್ತಾರೆ.
ದೂರುದಾರರು ದಿ:01.02.2023 ರಂದು ವೈದ್ಯಕೀಯ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ದಿ:03.02.203ರಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ತದನಂತರ ದೂರುದಾರರು 3ನೇ ಎದುರುದಾರರ ಬಳಿ ವೈದ್ಯಕೀಯ ಚಿಕಿತ್ಸೆಗೆ ಖರ್ಚಾದ ಮೊತ್ತ ರೂ.3,50,000/-ಗಳನ್ನು ಮರುಪಾವತಿಸಿಲು ಕೋರಿ ಎಲ್ಲಾ ದಾಖಲಾತಿಗಳನ್ನು ನೀಡಿರುತ್ತಾರೆ.
ಆಗ 3ನೇ ಎದುರುದಾರರು ಆದಷ್ಟು ಬೇಗ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿರುತ್ತಾರೆ. ಕೆಲವು ದಿನಗಳ ನಂತರ ದೂರುದಾರರು 3ನೇ ಎದುರುದಾರರ ಬಳಿ ವಿಚಾರಿಸಿ, ಇನ್ನೂ ವೈದ್ಯಕೀಯ ವೆಚ್ಚ ಪಾವತಿಸಲು ಕ್ರಮ ಕೈಗೊಳ್ಳದಿರುವುದರಿಂದ 1 ರಿಂದ 3ನೇ ಎದುರುದಾರರಿಗೆ ನೋಟಿಸ್ ನೀಡಿರುತ್ತಾರೆ. 2ನೇ ಎದುರುದಾರರು ನೋಟಿಸಿಗೆ ಉತ್ತರಿಸಿ ವೈದ್ಯಕೀಯ ಚಿಕಿತ್ಸೆ ವಿವರವನ್ನು ಮತ್ತು ಮೂಲ ದಾಖಲಾತಿಗಳನ್ನು ಸಲ್ಲಿಸಲು ತಿಳಿಸಿರುತ್ತಾರೆ. ಆಗ ದೂರುದಾರರು ಮತ್ತೆ 3ನೇ ಎದುರುದಾರರ ಬಳಿ ಹೋಗಿ ವಿಚಾರಿಸಿದಾಗ, ದಾಖಲಾತಿಗಳನ್ನು ಈಗಾಗಲೇ ಕಳುಹಿಸಲಾಗಿದೆ ಎಂದು ತಿಳಿಸಿರುತ್ತಾರೆ.
ದೂರುದಾರರು 3ನೇ ಎದುರುದಾರರ ಬಳಿ ಕ್ಲೇಂ ಅನ್ನು ಬೇಗನೆ ಇತ್ಯರ್ಥಗೊಳಿಸಿಕೊಡಲು ಕೋರಿರುತ್ತಾರೆ. ಆದರೆ ಇದುವರೆವಿಗೂ ವಿಮಾ ಹಣವನ್ನು ನೀಡದೇ ಎಲ್ಲಾ ಎದುರುದಾರರು ಸೇವಾ ನ್ಯೂನತೆಯನ್ನುಂಟು ಮಾಡಿರುತ್ತಾರೆಂದು ಆಯೋಗದ ಮುಂದೆ ದೂರನ್ನು ಸಲ್ಲಿಸಿರುತ್ತಾರೆ.
1ನೇ ಎದುರುದಾರರು ತಕರಾರನ್ನು ಸಲ್ಲಿಸಿ, 3ನೇ ಎದುರುದಾರರಿಗೆ ಗುಂಪು ವಿಮೆ ಪಾಲಿಸಿಯ 2457 ಸದಸ್ಯರಿಗೆ ದಿ:01.01.2022 ರಿಂದ 31.12.2022ರ ಅವಧಿಯವರೆಗೆ ನೀಡಿದ್ದು, 3ನೇ ಎದುರುದಾರರು ದಿ:13.12.2022ರ ನಂತರ ಪಾಲಿಸಿಯನ್ನು ನವೀಕರಿಸಲು ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ದೂರುದಾರರು ಕ್ಲೇಂ ಮಾಡಿರುವ ವಿಮಾ ಮೊತ್ತವನ್ನು ಪಾವತಿಸುವ ಕುರಿತು ಯಾವುದೇ ಸೇವಾನ್ಯೂನ್ಯತೆ ಎಸಗದೇ ಇರುವುದರಿಂದ ದೂರನ್ನು ತಿರಸ್ಕರಿಸಲು ಕೋರಿರುತ್ತಾರೆ.
District Consumer Disputes Redressal Commission ದೂರುದಾರರು, ಹಾಗೂ 1 ಮತ್ತು 3ನೇ ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ವಾದ-ವಿವಾದಗಳನ್ನು ಆಲಿಸಿ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ, 3ನೇ ಎದುರುದಾರರು ದೂರುದಾರರ ಗುಂಪು ವಿಮೆ ಸದಸ್ಯತ್ವ ಪಾಲಿಸಿಯನ್ನು ನಿಗಧಿತ ಅವಧಿಗೆ ನವೀಕರಿಸಲು ಕ್ರಮವಹಿಸದೇ ಸೇವಾ ನ್ಯೂನತೆ ಮಾಡಿರುತ್ತಾರೆ ಎಂದು ತೀರ್ಮಾನಿಸಿ, 3ನೇ ಎದುರುದಾರರು ದೂರುದಾರರಿಗೆ ವೈದ್ಯಕೀಯ ವೆಚ್ಚ ರೂ.246289/-ಗಳಿಗೆ ವಾರ್ಷಿಕ ಶೇ 9ರಷ್ಟು ಬಡ್ಡಿಯನ್ನು ಸೇರಿಸಿ, ದಿ:02.09.2203 ರಿಂದ ಈ ಆದೇಶವಾದ 45 ದಿನಗಳೊಳಗೆ ಪಾವತಿಸುವುದು, ತಪ್ಪಿದ್ದಲ್ಲಿ ವಾರ್ಷಿಕ ಶೇ. 12 ರಷ್ಟು ಬಡ್ಡಿಯನ್ನು ಸೇರಿಸಿ, ಈ ಆದೇಶವಾದ ದಿನದಿಂದ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದ್ದು ಹಾಗೂ ಮಾನಸಿಕ ಹಿಂಸೆಗೆ ಪರಿಹಾರವಾಗಿ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ರೂ.30,000/- ಗಳನ್ನು ಈ ಆದೇಶವಾದ 45 ದಿನಗಳ ಒಳಗಾಗಿ ಪಾವತಿಸುವುದು. ತಪ್ಪಿದ್ದಲ್ಲಿ ವಾರ್ಷಿಕ ಶೇ. 12gಯಂತೆ ಬಡ್ಡಿಯನ್ನು ಸೇರಿಸಿ, ಈ ಆದೇಶವಾದ ದಿನದಿಂದ ಪೂರ್ತಿ ಹಣ ಪಾವತಿಸುವವರೆಗೆ ನೀಡತಕ್ಕದೆಂದು ಹಾಗೂ 1 ಮತ್ತು 2ನೇ ಎದುರುದಾರರ ವಿರುದ್ಧದ ದೂರನ್ನು ವಜಾಗೊಳಿಸಿರುವುದಾಗಿ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ ಯೋಗಾನಂದ ಭಾಂಡ್ಯರವರನ್ನು ಒಳಗೊಂಡ ಪೀಠ ದಿ:17/07/2025 ರಂದು ಆದೇಶಿಸಿದೆ.
MESCOM ಜುಲೈ 25 & 27 ಮೆಸ್ಕಾಂ ಸಂಬಂಧಿತ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ, ಎಲ್ಲೆಲ್ಲಿ? ತಿಳಿಯಲು ಮಾಹಿತಿ ಓದಿ
MESCOM ದಿನಾಂಕ: 25.07.2025 ರಂದು ರಾತ್ರಿ 8.30 ಗಂಟೆಯಿAದ 27.07.2025 ರ ರಾತಿ 10:00 ಗಂಟೆಯವರೆಗೆ ಮೆಸ್ಕಾಂ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಉನ್ನತೀಕರಣ ಕಾರ್ಯವನ್ನು ಕೈಗೊಂಡಿದ್ದು, ಮೆಸ್ಕಾಂ ಆನ್‌ಲೈನ್ ಸೇವೆಗಳಾದ ವಿದ್ಯುತ್ ಬಿಲ್‌ಗಳ ಪಾವತಿ, ಹೊಸ ಸಂಪರ್ಕ ಸೇವೆಗಳು, ಹೆಸರು ಮತ್ತು ಜಕಾತಿ ಬದಲಾವಣೆ ಇತ್ಯಾದಿ ಆನ್ಲೈನ್ ಆಧಾರಿತ ಸೇವೆಗಳು ಮೆಸ್ಕಾಂ ವ್ಯಾಪ್ತಿಯ ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭಧ್ರಾವತಿ, ಚಿಕ್ಕಮಗಳೂರು ಆರ್‌ಎಪಿಡಿಆರ್‌ಪಿ ನಗರ ಪ್ರದೇಶಗಳ ಗ್ರಾಹಕರಿಗೆ ಲಭ್ಯವಿರುವುದಿಲ್ಲ ಎಂದು ಮೆಸ್ಕಾಂ ತಿಳಿಸಿದೆ.
DC Shivamogga ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಿಂದ ತ್ಯಾಜ್ಯ ವಿಸರ್ಜನೆ, ದುಷ್ಪರಿಣಾಮ ತಪ್ಪಿಸಲು ತ್ಯಾಜ್ಯ ವಿಲೇಕ್ರಮ ಕೈಗೊಳ್ಳಬೇಕು- ಡೀಸಿ ಗುರುದತ್ತ ಹೆಗಡೆ
DC Shivamogga ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಿಂದ ಉತ್ಪಾದನೆಗೊಳ್ಳುತ್ತಿರುವ ಭಾರೀ ಪ್ರಮಾಣದ ರಸಾಯನಿಕ ಮಿಶ್ರಿತ ಮರಳು ತ್ಯಾಜ್ಯದಿಂದ ಪರಿಸರದ ಮೇಲೆ ದುಷ್ಪರಿಣಾಮಗಳಾಗುತ್ತಿರುವುದಲ್ಲದೇ ಅಂತರ್ಜಲದಲ್ಲಿ ಸೇರ್ಪಡೆಯಾಗುತ್ತಿರುವ ಸಾಧ್ಯತೆ ಹೆಚ್ಚಾಗುತ್ತಿರುವುದರಿಂದ ಘನತ್ಯಾಜ್ಯವನ್ನು ವ್ಯವಸ್ಥಿತವಾಗಿ ಸಂಸ್ಕರಿಸಿ, ವಿಲೇ ಮಾಡಬಹುದಾದ ಆಧುನಿಕ ವಿಧಾನಗಳ ಬಗ್ಗೆ ಅರಿತು ಅಳವಡಿಸಿಕೊಳ್ಬಬಹುದಾದ ತುರ್ತು ಅನಿವಾರ್ಯತೆ ಇದೆ ಎಂದು ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಹೇಳಿದರು.
ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ 193ನೇ ಏಕಗವಾಕ್ಷಿ ಸಮಿತಿ ಹಾಗಹೂ ಕೈಗಾರಿಕಾ ಸ್ಪಂದನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿನ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಪಡಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಬಗ್ಗೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಕೆ.ಐ.ಎ.ಡಿ.ಬಿ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಆಟೋಕಾಂಪ್ಲೆಕ್ಸ್‌ಮತ್ತು ಸಾಗರ ರಸ್ತೆ ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಬಗ್ಗೆ ಮಹಾನಗರಪಾಲಿಕೆಯ ಅಧಿಕಾರಿಗಳು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಕಲ್ಲೂರು ಮಂಡ್ಲಿ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್‌ಉಪಕೇಂದ್ರ ಸ್ಥಾಪಿಸಲು ಅಗತ್ಯವಾಗಿರುವ ಭೂಮಿಯನ್ನು ಗುರುತಿಸಲು ತಹಶೀಲ್ದಾರರಿಗೆ ಸೂಚಿಸಿದ ಅವರು, ಭದ್ರಾವತಿ ಮತ್ತು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳು ಕ್ರಮಕೈಗೊಳ್ಳಲು ಸೂಚಿಸಿದರು.
DC Shivamogga ಕೆ.ಎಸ್.ಎಸ್.ಐ.ಡಿ.ಸಿ.,ಸಿದ್ಲೀಪುರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಹೆಚ್ಚುವರಿ ವಿದ್ಯುತ್‌ಶುಲ್ಕ ಪಡೆಯುತ್ತಿರುವ ಬಗ್ಗೆ ಪರಿಶೀಲಿಸಲಾಗಿ, ಈ ಸಮಸ್ಯೆಯ ಇತ್ಯರ್ಥಗೊಳಿಸುವ ಮುನ್ನ ಸದರಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳು ಮನವಿ ಸಲ್ಲಿಸಿದಲ್ಲಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಶುಲ್ಕ ಪಾವತಿಸಲು ವಿನಾಯಿತಿ ನೀಡಬಹುದೆ ಅಥವಾ ಮೇಲಾಧಿಕಾರಿಗಳ ಗಮನಸೆಳೆದು ವಿನಾಯಿತಿ ನೀಡುವಂತೆ ಮನವಿ ಮಾಡುವ ಬಗ್ಗೆ ಪರಿಶೀಲಿಸುವುದಾಗಿ ಅವರು ತಿಳಿಸಿದರು.
ಸಾಗರ ರಸ್ತೆಯ ಕೆ.ಎಸ್.ಎಸ್.ಐ.ಡಿ.ಸಿ. ಕೈಗಾರಿಕಾ ವಸಾಹತು ಶಿವಮೊಗ್ಗ ಮಹಾನಗರಪಾಲಿಕೆಗೆ ಹಸ್ತಾಂತರವಾಗಿದ್ದು, ಸದರಿ ಕೈಗಾರಿಕಾ ಪ್ರದೇಶದ ನಿರ್ವಹಣೆಯಲ್ಲಿ ತೀವ್ರತರಹದ ನ್ಯೂನತೆಗಳಿರುವುದನ್ನು ಕೈಗಾರಿಕಾ ಸಂಘದ ಪದಾಧಿಕಾರಿಗಳು ಗಮನಸೆಳೆದಾಗ, ಪಾಲಿಕೆಯ ಪರಿಸರ ಅಧಿಕಾರಿಗಳು ಕೂಡಲೇ ಅಲ್ಲಿನ ಸಮರ್ಪಕ ಕಸವಿಲೇವಾರಿಯಲ್ಲಿ ವಿಶೇಷ ಗಮನಸೆಳೆಯುವಂತೆ ಸೂಚಿಸಿದ ಅವರು, ಸ್ಥಳೀಯ ಪ್ರದೇಶದ ಕೈಗಾರಿಕಾ ಸಂಘದ ಪದಾಧಿಕಾರಿಗಳು ಆಂತರಿಕ ಸಭೆ ನಡೆಸಿ, ಅಲ್ಲಿ ಕೈಗೊಳ್ಳಬಹುದಾದ ಸುಧಾರಣಾ ಕ್ರಮಗಳ ಬಗ್ಗೆಯೂ ಚರ್ಚಿಸುವಂತೆ ಅವರು ಸೂಚಿಸಿದರು.
ಸಾಗರ ರಸ್ತೆ ಕೈಗಾರಿಕಾ ಪ್ರದೇಶದಲ್ಲಿ ವಾಹನಗಳ ನಿಲುಗಡೆಯಿಂದಾಗಿ ಆಕಸ್ಮಿಕ ಅಪಘಾತಗಳು ಉಂಟಾಗುತ್ತಿವೆ. ಆದ್ದರಿಂದ ವಾಹನಗಳ ನಿಲುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ. ಅಲ್ಲಿನ ಕಸ ವಿಲೇವಾರಿ ಬಗ್ಗೆಯೂ ಪಾಲಿಕೆ ಅಧಿಕಾರಿಗಳು ಗಮನಹರಿಸುವಂತೆ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಸೆಳೆದರು. ಆಟೋ ಕಾಂಪ್ಲೆಕ್ಸ್‌ನಲ್ಲಿರುವ ಪ್ರತಿ ಕೈಗಾರಿಕಾ ಘಟಕಗಳಿಗೆ ಪ್ರತ್ಯೇಕ ಯು.ಜಿ.ಡಿ.ಸಂಪರ್ಕ ಕಲ್ಪಿಸಿಕೊಳ್ಳಲು ನೋಟೀಸ್‌ಜಾರಿಗೊಳಿಸುವಂತೆಯೂ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪ್ರೊಬೇಷನರ್‌ಜಿಲ್ಲಾಧಿಕಾರಿ ನಾಗೇಂದ್ರಕುಮಾರ್‌ಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಶ್ರೀಮತಿ ಸುಜಾತಾ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ರಾಮಾಚಾರ್, ಬೆನಕಪ್ಪ, ಮಲ್ಲಿಕಾರ್ಜುನ, ಗೇವರ್‌ಚಂದ್, ರಮೇಶ್‌ಹೆಗ್ಡೆ, ಜಿಲ್ಲಾ ಕೈಗಾರಿಕಾ ಸಂಘದ ಜಂಟಿ ನಿರ್ದೇಶಕ ಗಣೇಶ್, ಉಪನಿರ್ದೇಶಕ ಸುರೇಶ್‌ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
International JCI organization ಮಾನವೀಯ ಸೇವೆ, ವ್ಯಕ್ತಿತ್ವ ವಿಕಸನ & ಜೀವನ ಕಲೆಯ ಕಲಿಕೆ ಮೂಲಕ ಜೆಸಿಐ ನಿಂದ ಸಮಾಜ ನಿರ್ಮಾಣ- ಅಂಕುರ್ ಜುಂಜುನ್ ವಾಲಾ
International JCI organization ಜೆಸಿಐ ಸಂಸ್ಥೆ ಮಾನವೀಯ ಸೇವೆಗಳೊಂದಿಗೆ ವ್ಯಕ್ತಿತ್ವ ವಿಕಸನ ಹಾಗೂ ಜೀವನದ ಕಲೆಯನ್ನು ಕಲಿಸುವುದರ ಮುಖಾಂತರ ಸದೃಢ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಿದೆ ಎಂದು ಜೆಸಿಐ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಅಂಕುರ್ ಜುಂಜುನ್‌ವಾಲಾ ಹೇಳಿದರು.
ಶಿವಮೊಗ್ಗ ನಗರಕ್ಕೆ ಆಗಮಿಸಿ ವಲಯ 24ರ ಅಧಿಕೃತ ಭೇಟಿ ಸಮಯದಲ್ಲಿ ವಲಯದ ಎಲ್ಲ ಉಪಾಧ್ಯಕ್ಷರು, ವಲಯ ಮಂಡಳಿ ಎಲ್ಲ ಸದಸ್ಯರು, ಜಿಲ್ಲೆಯ ಎಲ್ಲ ಜೆಸಿಐ ಘಟಕದ ಸದಸ್ಯರ ಸಹಯೋಗದಲ್ಲಿ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತರಾಷ್ಟ್ರೀಯ ಜೆಸಿಐ ಸಂಸ್ಥೆ ಮನುಕುಲದ ಸೇವೆ, ಒಡನಾಟ, ಪ್ರೀತಿ ಮತ್ತು ಉತ್ತಮವಾದ ಮಾನವೀಯ ಸಂಬಂಧಗಳು ಹಾಗೂ ಮಕ್ಕಳಲ್ಲಿ ಜೀವನ ಕೌಶಲ್ಯ, ನಾಯಕತ್ವದ ಗುಣ ಮತ್ತು ಸಂಘಟನೆ ಶಕ್ತಿ ತುಂಬುವುದರ ಜೊತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳನ್ನಾಗಿ ನಿರ್ಮಾಣ ಮಾಡುವಲ್ಲಿ ಜೆಸಿಐ ಪಾತ್ರ ಪ್ರಮುಖ ಎಂದು ತಿಳಿಸಿದರು.
ವಲಯ 24ರಲ್ಲಿ ಎಲ್ಲ ಜೆಸಿ ಘಟಕಗಳು ತುಂಬಾ ವಿಶೇಷ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿದೆ ಎಂದರು.
ವಲಯ 24ರ ಅಧ್ಯಕ್ಷ ಜೆಸಿಐ ಸೆನೇಟರ್ ಗೌರೀಶ್ ಭಾರ್ಗವ್ ಮಾತನಾಡಿ, ವಲಯ 24 ಈಗ ಜೆಸಿಐನಲ್ಲೇ ವಿಶೇಷವಾದ ಸಂಚಲನ ಮೂಡಿಸಿದೆ. ಹೊಸ ಹೊಸ ಸದಸ್ಯರ ಸೇರ್ಪಡೆ ಹಾಗೂ ಹೊಸ ಘಟಕಗಳ ಸ್ಥಾಪನೆ ಹಾಗೂ ವಿಶೇಷವಾದ ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ. ಜೆಸಿಐ ಫೌಂಡೇಷನ್ಸ್ಗೆ ಅತಿ ಹೆಚ್ಚಿನ ದೇಣಿಗೆ ನೀಡಿವೆ ಎಂದರು.
ರಾಷ್ಟ್ರೀಯ ಅಧ್ಯಕ್ಷರ ಟೂರ್ ಡೈರೆಕ್ಟರ್ ಸುದರ್ಶನ್ ತಾಯಿಮನೆ ಅವರು ಜೆಸಿಐ ಸಂಸ್ಥೆ ನಡೆದು ಬಂದ ದಾರಿ ಹಾಗೂ ರಾಷ್ಟ್ರೀಯ ಅಧ್ಯಕ್ಷರ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.
International JCI organization ಜೆಸಿಐ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ ಗಣೇಶ ಮಾತನಾಡಿ, ರಾಷ್ಟ್ರೀಯ ಅಧ್ಯಕ್ಷರ ಭೇಟಿಯಿಂದ ಎಲ್ಲ ಜೆಸಿಐ ಘಟಕಗಳಿಗೆ ಅವರ ಮಾರ್ಗದರ್ಶನ, ಸಲಹೆ ಹಾಗೂ ಸಹಕಾರ ಇನ್ನಷ್ಟು ಹುಮ್ಮಸ್ಸು ಮೂಡಿಸಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ಜೆಸಿಐನ 22 ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಸದಸ್ಯರು, ಹಿರಿಯ ಜೆಸಿಐ ಸದಸ್ಯರುಗಳು ಉಪಸ್ಥಿತರಿದ್ದರು. ವೇದಿಕೆಯಲ್ಲಿ ಮಧುಸೂದನ್ ನಾವಡ, ಪ್ರಮೋದ್ ಶಾಸ್ತ್ರಿ. ವಿನೀತ್ ಆರ್., ಜೆಸಿಐನ ಎಲ್ಲ ಹಿರಿಯ ಸದಸ್ಯರು ಉಪಸ್ಥಿತರಿದ್ದರು.
Shambhu Jakkeshwara Temple ಜಂಬೂರಿನ ಶಂಭು ಜಕ್ಕೇಶ್ವರ ದೇಗುಲ ಶೀಘ್ರ ಜೀರ್ಣೋದ್ಧಾರ ಕಾಮಗಾರಿ, ಪ್ರವಾಸೋದ್ಯಮ ಇಲಾಖೆ ಮಾಹಿತಿ
Shambhu Jakkeshwara Temple ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಂದಳಿಕೆ ಸಮೀಪದ ಜೈನ ಬಸದಿಯು ದಯಾನೀಯ ಸ್ಥಿತಿಯಲ್ಲಿದೆ. ಜೊತೆಗೆ ತಾಲ್ಲೂಕಿನ ಹಿರೇ ಜಂಬೂರು ಗ್ರಾಮದಲ್ಲಿರುವ ಶಂಭು ಜಕ್ಕೇಶ್ವರ ದೇವಾಲಯದ ಜೀರ್ಣೋದ್ಧಾರ ಆಗಬೇಕಾಗಿದೆ ಎಂಬ ವಿಚಾರವನ್ನು ʼಎಕ್ಸ್ʼ ಬಳಕೆದಾರರೊಬ್ಬರು ಮುಖ್ಯಮಂತ್ರಿಗಳ ಕಚೇರಿಯ ಕುಂದು ಕೊರತೆ ವಿಭಾಗದ ಗಮನಕ್ಕೆ ತಂದಿದ್ದು, ತಕ್ಷಣವೇ ಸ್ಪಂದಿಸಿದ ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.
Shambhu Jakkeshwara Temple ಅದರಂತೆ ಪರಿಶೀಲಿಸಿದಾಗ ಸದರಿ ಪ್ರವಾಸಿ ತಾಣವು ಭಾರತೀಯ ಪುರಾತತ್ವ ಇಲಾಖೆಗೆ ಒಳಪಡುವುದರಿಂದ ಸಂರಕ್ಷಣಾ ಕಾರ್ಯಗಳನ್ನು ಪುರಾತತ್ವ ಇಲಾಖೆಯಿಂದ ಕೈಗೊಳ್ಳಲಾಗುವುದು. ಜೊತೆಗೆ ಶಂಭು ಜಕ್ಕೇಶ್ವರ ದೇವಾಲಯವು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವುದರಿಂದ ಸದರಿ ತಾಣದ ಜೀರ್ಣೋದ್ಧಾರ ಕಾಮಗಾರಿಗಳನ್ನು ಕೈಗೊಂಡು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಶಿವಮೊಗ್ಗ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Shivamogga Police ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮಕ್ಕೆ ಇಂದು ಚಾಲನೆ
Shivamogga Police ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆಯ ಉತ್ತಮ ಹಾಗೂ ಸ್ನೇಹಪರ ಸಂಬಂಧವನ್ನು ಬೆಸೆದು ಸೌಹಾರ್ದ ಸಮಾಜ ನಿರ್ಮಿಸುವ ಉದ್ದೇಶದಿಂದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಜಾರಿಗೊಳಿಸಲಾಗಿದ್ದು, ಜು.24 ರ ಸಂಜೆ 4 ಗಂಟೆಗೆ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಆರ್‌ಎಸ್ ಪಾರ್ಕ್ ನಲ್ಲಿ ‘ಮನೆ ಮನೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.
Shivamogga Police ಸಮಾಜದಲ್ಲಿ ಆಗಬಹುದಾದ ಅಪರಾಧಗಳನ್ನು ತಡೆದು ಘಟಿಸಿದ ಅಪರಾಧಗಳನ್ನು ಪರಿಣಾಮಕಾರಿಯಾಗಿ ಪತ್ತೆ ಮಾಡಲು ಹಾಗೂ ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಿ, ಇಲಾಖೆಯನ್ನು ಸಾರ್ವಜನಿಕ ಸ್ನೇಹಿಯಾಗಿಸಿ, ಸಮಾಜಕ್ಕೆ ಉತ್ತಮ ಸಕ್ರಿಯ ಪೊಲೀಸ್ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಮಹಾತ್ವಾಕಾಂಕ್ಷೆಯ ‘ಮನೆ-ಮನೆ ಪೊಲೀಸ್’ ಯೋಜನೆ ಜಾರಿಗೊಳಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
N. Chaluvaraya Swamy ಕೃಷಿ ಚಟುವಟಿಕೆಗೆ ಯೂರಿಯಾ ರಸಗೊಬ್ಬರದ ಕೊರತೆಯಿಲ್ಲ- ಸಚಿವ ಚಲುವರಾಯಸ್ವಾಮಿ
N. Chaluvaraya Swamy ರಾಜ್ಯದ ಕೃಷಿ ಚಟುವಟಿಕೆ ಬೇಕಾಗಿರುವ ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ದಾಸ್ತಾನು ಇದೆ ಹಾಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲವೆಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿಯವರು ತಿಳಿಸಿದ್ದಾರೆ.
ಮುಂದೆ ಬೇಕಾಗಿರುವ ರಸಗೊಬ್ಬರಕ್ಕೆ ರೈತರು ಈಗಲೇ ಖರೀದಿಗೆ ಮುಂದಾಗಿರುವುದು ಒತ್ತಡಕ್ಕೆ ಕಾರಣವಾಗಿದೆ. ತಡವಾದರೆ ರಸಗೊಬ್ಬರ ಸಿಗದಿರಬಹುದು ಎಂಬ ಆತಂಕವನ್ನು ರೈತರು ಬಿಡಬೇಕು ಎಂದು ಮನವಿ ಮಾಡಿದರು.
ರಾಜ್ಯದೆಲ್ಲೆಡೆ ಡಿಎಪಿ, ಯೂರಿಯಾ ಗೊಬ್ಬರದ ಅಭಾವ ಎದುರಾಗಿದೆ. ದೊರೆತರೂ ಹೆಚ್ಚಿನ ಹಣ ಕೊಡಬೇಕಿದೆ. ಷಡ್ಯಂತ್ರದ ಮೂಲಕ ಗೊಬ್ಬರ ಅಭಾವ ಸೃಷ್ಟಿಸಿದ್ದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ರೈತರು ಕೇಳಿದ ಗೊಬ್ಬರ ಸಿಗುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ ಅವರು ತಿಳಿಸಿದ್ದಾರೆ.
N. Chaluvaraya Swamy 8 ಲಕ್ಷ ಮೆಟ್ರಿಕ್ ಟನ್ ಯೂರಿಯಾ ದಾಸ್ತಾನು ಇದ್ದು, ವಿತರಣೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸವಾದ ಮಾತ್ರಕ್ಕೆ ರೈತರು ಆತಂಕ ಪಡಬೇಕಿಲ್ಲ. ಇಲಾಖೆ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದು ಕೇಂದ್ರ ಸರ್ಕಾರದ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಇಡೀ ದೇಶದಲ್ಲಿ ರಸಗೊಬ್ಬರದ ಸಮಸ್ಯೆ ಇರುವುದು ಸತ್ಯ. ಇರಾನ್ ಯುದ್ಧದ ಕಾರಣಕ್ಕೆ ರಸಗೊಬ್ಬರ ಆಮದು ಆಗುತ್ತಿಲ್ಲ. ಚೀನಾ ರಫ್ತು ಸ್ಥಗಿತ ಮಾಡಿರುವುದರಿಂದ ಗೊಬ್ಬರ ಸಮಸ್ಯೆ ಇದೆ. ಕೇಂದ್ರದಿಂದ ರಾಜ್ಯಗಳಿಗೆ ನಿಗದಿತ ಪ್ರಮಾಣದಲ್ಲಿ ಗೊಬ್ಬರ ಪೂರೈಕೆ ಆಗುತ್ತಿಲ್ಲವಾದರೂ, ರಾಜ್ಯದಲ್ಲಿ ಅಗತ್ಯ ಪ್ರಮಾಣದ ದಾಸ್ತಾನು ಇರುವ ಕಾರಣ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು .
National Health Campaign ಎನ್ ಹೆಚ್ ಎಂ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ವೈದ್ಯಕೀಯ ಹುದ್ದೆ ಭರ್ತಿ ತಾತ್ಕಾಲಿಕ ಪಟ್ಟಿ ಪ್ರಕಟಣೆ
National Health Campaign ರಾಷ್ಟ್ರೀಯ ಆರೋಗ್ಯ ಅಭಿಯಾನ ಎನ್‌ಹೆಚ್‌ಎಂ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಖಾಲಿಯಿರುವ ವೈದ್ಯಕೀಯ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ನೇರ ಸಂದರ್ಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳ ರೋಸ್ಟರ್ ಕಂ ಮೇರಿಟ್ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳ ಆಕ್ಷೇಪಣೆ ಇದ್ದಲ್ಲಿ ಲಿಖಿತ ರೂಪದಲ್ಲಿ ಜು.28 ರೊಳಗಾಗಿ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಎನ್.ಹೆಚ್.ಎಂ. ವಿಭಾಗಕ್ಕೆ ಸಲ್ಲಿಸುವಂತೆ ಸಂಘದ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.
