Wednesday, August 12, 2026
Wednesday, August 12, 2026
Home Blog Page 232

Bharat Scouts and Guides ಭಾರತ್ ಸ್ಕೌಟ್ಸ್ & ಗೈಡ್ಸ್ ವತಿಯಿಂದ ಶತಮಾನೋತ್ಸವ ಸಂಭ್ರಮಕ್ಕೆ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಅವರಿಗೆ ಆಹ್ವಾನ.

0

Bharat Scouts and Guides ಜಿಲ್ಲಾ ವರಿಷ್ಟಾದಿಯಧಿಕಾರಿಗಳಾಗಿ ಶಿವಮೊಗ್ಗಕ್ಕೆ ಆಗಮಿಸಿ ಅಧಿಕಾರ ವಹಿಸಿಕೊಂಡ ನಿಖಿಲ್ ಸರ್. ರವರಿಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಇದೇ ತಿಂಗಳು ದಿನಾಂಕ 10 ಮತ್ತು 11ರಂದು. ಸ್ಕೌಟ್ಸ್ ಅಂಡ್ ಗೈಡ್ಸ್ ನ
ಶತಮಾನೋತ್ಸವ ಹಾಗೂ ಜಿಲ್ಲಾ ಮಟ್ಟದ ರ್ಯಾಲಿ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಆಮಂತ್ರಣ ಪತ್ರಿಕೆ ನೀಡಿ ವಿನಂತಿಸಿಕೊಳ್ಳಲಾಯಿತು.

Bharat Scouts and Guides ಕಾರ್ಯಕ್ರಮದಲ್ಲಿ ಪ್ರಧಾನ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್. ಕೇಂದ್ರ ಸ್ಟಾನಿಕ ಆಯುಕ್ತರುಗಳಾದ .. ಜಿ ವಿಜಯಕುಮಾರ್. ಕೆ ರವಿ. ಎಸ್ ಜಿ ಆನಂದ್. ಮಲ್ಲಿಕಾರ್ಜುನ ಖಾನೂರ್. ಜಿಲ್ಲಾ ಕಾರ್ಯದರ್ಶಿ ಕೆ ವಿ ಚಂದ್ರಶೇಖರಯ್ಯ ಜಿಲ್ಲಾ ಖಜಾಂಚಿ. ಚೂಡಾಮಣಿ ಈ ಪವಾರ್. ಜಿಲ್ಲಾ ತರಬೇತಿ ಆಯುಕ್ತರನಾದ ಚಂದ್ರಶೇಖರಯ್ಯ ಕೃಷ್ಣ ಸ್ವಾಮಿ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಚಟುವಟಿಕೆಗಳ ಬಗ್ಗೆ ತಿಳಿಸಿ ಮಕ್ಕಳಿಗೆ ರಸ್ತೆ ಅಪಘಾತ ಹಾಗೂ ಕಾನೂನಿನ ಬಗ್ಗೆ ಅರಿವು ಮೂಡಿಸಲು ಕೇಳಿಕೊಳ್ಳಲಾಯಿತು.

Krishna Byre Gowda ಈಗ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಕಛೇರಿ ದಾಖಲೆಗಳ ಡಿಜಿಟಲೀಕರಣ- ಸಚಿವ ಕೃಷ್ಣ ಬೈರೇಗೌಡ.

0

Krishna Byre Gowda ರಾಜ್ಯದಲ್ಲಿ ಭೂ ದಾಖಲೆಗಳನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲಾಗುತ್ತಿದೆ.

ಕಳೆದ ವರ್ಷ ಜನವರಿಯಲ್ಲಿ ಎಲ್ಲ ತಾಲೂಕು ಕಚೇರಿಗಳ ಮೂಲ ಭೂ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಡಿಜಿಟಲೀಕರಿಸಲಾಗಿತ್ತು.

Krishna Byre Gowda ಇದೀಗ ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ದಾಖಲೆಗಳ ಸ್ಕ್ಯಾನಿಂಗ್‌ಗೂ ಚಾಲನೆ ನೀಡಲಾಗಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.

e-Aasthi ನಗರ & ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸಾರ್ವಜನಿಕರಿಗೂ” ಇ- ಖಾತಾ ” ನೀಡಲು ತೀರ್ಮಾನ

0

e-Aasthi ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಿವೇಶನಗಳನ್ನು ರಚಿಸಿರುವ ಅಥವಾ ಮಾರಾಟ ಮಾಡುವ ಪ್ರಕ್ರಿಯೆಯನ್ನು ತಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ.

e-Aasthi ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ ಅನಧಿಕೃತವಾಗಿ ರಚಿಸಿರುವ ಬಡಾವಣೆಗಳ ಬಿ – ಖಾತಾ ನಿವೇಶನ / ಕಟ್ಟಡ / ಅಪಾರ್ಟ್‌ಮೆಂಟ್‌ಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಷರತ್ತಿಗೆ ಒಳಪಟ್ಟು ಎ – ಖಾತಾ ನೀಡಲು ತೀರ್ಮಾನಿಸಲಾಗಿದೆ.

CM Siddaramaiah ರಾಜ್ಯದ ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಸರ್ಕಾರ ಬದ್ಧ.- ಸಿದ್ಧರಾಮಯ್ಯ.

0

CM Siddaramaiah ‘ಶುಚಿತ್ವದ ನಡಿಗೆ – ಹೆಣ್ಣುಮಕ್ಕಳ ಆತ್ಮವಿಶ್ವಾಸದ ಕಡೆಗೆ’ ಎಂಬ ಘೋಷವಾಕ್ಯದೊಂದಿಗೆ ರಾಜ್ಯ ಸರ್ಕಾರವು ಹೆಣ್ಣುಮಕ್ಕಳ ಸಬಲೀಕರಣಕ್ಕೆ ಬದ್ಧವಾಗಿದ್ದು, ರಾಜ್ಯದ ಹದಿಹರೆಯದ ಹೆಣ್ಣುಮಕ್ಕಳ ಋತುಚಕ್ರದ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ 71.83 ಕೋಟಿ ರೂ ಅನುದಾನ ಬಿಡುಗಡೆ ಮಾಡುವ ಮೂಲಕ ‘ಶುಚಿ’ ಯೋಜನೆಗೆ ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದರು.

CM Siddaramaiah ನಾಡಿನ ಸುಮಾರು 19 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ಯೋಜನೆಯ ಫಲಾನುಭವಿಗಳು. ‘ಶುಚಿ’ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದ 2,35,74,084 ಸ್ಯಾನಿಟರಿ ಪ್ಯಾಡ್ ಯುನಿಟ್‌ಗಳ ವಿತರಣೆ ಮಾಡಲಾಗುತ್ತಿದೆ. 10,38,912 ಸುಸ್ಥಿರ ‘ಮುಟ್ಟಿನ ಕಪ್’ (Menstrual Cups) ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಹಾಗೂ ಅನುದಾನಿತ ಶಾಲೆ, ಕಾಲೇಜು ಮತ್ತು ಹಾಸ್ಟೆಲ್‌ಗಳ ಎಲ್ಲಾ ನೋಂದಾಯಿತ ವಿದ್ಯಾರ್ಥಿನಿಯರಿಗೆ ಇದರ ಸೌಲಭ್ಯ ತಲುಪುತ್ತದೆ. 6 ರಿಂದ 8ನೇ ತರಗತಿ ಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ಹಾಗೂ 9ನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿನಿಯರಿಗೆ ಪ್ಯಾಡ್‌ಗಳ ಜೊತೆಗೆ ಪರಿಸರ ಸ್ನೇಹಿ ಮುಟ್ಟಿನ ಕಪ್ ನೀಡಲಾಗುತ್ತಿದೆ ಎಂದರು.

IMA KARNATAKA ಆನಂದಗಳಲ್ಲಿ ಆತ್ಮಾನಂದವೇ ಬದುಕಿಗೆ ಮುಖ್ಯವಾಗಿದೆ- ಡಾ.ಕೆ.ಪಿ.ಪುತ್ತೂರಾಯ.

0

IMA KARNATAKA ಮನುಷ್ಯ ಆತ್ಮತೃಪ್ತಿ ಆಗುವ ರೀತಿಯಲ್ಲಿ ಕಾರ್ಯ ನಿರ್ವಹಿಸುವುದರಿಂದ ಜೀವನ ಸಾರ್ಥಕ ಆಗುತ್ತದೆ ಎಂದು ವೈದ್ಯ, ಬರಹಗಾರ ಡಾ. ಕೆ.ಪಿ.ಪುತ್ತುರಾಯ ಹೇಳಿದರು.

ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಘಟಕದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತಸದಿಂದ ಇರುವುದ ಹೇಗೆ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಆನಂದಗಳಲ್ಲಿ ಮೂರು ವಿಧ ಇದ್ದು, ದೈಹಿಕ ಆನಂದ, ಚಿದಾನಂದ ಮತ್ತು ಆತ್ಮಾನಂದ ಆಗಿದ್ದು, ಆತ್ಮಾನಂದವೇ ಬದುಕಿಗೆ ಮುಖ್ಯವಾಗಿದೆ. ಅದನ್ನು ಸಾಧಿಸಿದಾಗ ಜೀವನ ಸಾರ್ಥಕ ಎನಿಸುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಐಎಂಎ ಶಿವಮೊಗ್ಗದಲ್ಲಿ “ಪರಿಸರ ವೈದ್ಯರಾಗಿ” ಕೆಲಸ ಮಾಡುವ ಉದ್ದೇಶದಿಂದ “ಐಎಂಎ ಎನ್ವಿರಾನ್‌ಮೆಂಟ್ ಕ್ಲಬ್” ಉದ್ಘಾಟಿಸಲಾಯಿತು. ಡಾ. ರತ್ನಾಕರ್ ಮತ್ತು ಡಾ. ಪ್ರೀತಿ ಪೈ ಅವರು ಸಂಯೋಜಕರಾಗಿ, ವೈದ್ಯರ ಕ್ಲಬ್‌ನಿಂದ ವಿವಿಧ ಪರಿಸರ ಸಂರಕ್ಷಿಸುವ ಕಾರ್ಯಕ್ರಮಗಳನ್ನು ಭಾರತೀಯ ವೈದ್ಯಕೀಯ ಸಂಘದಿಂದ ಆಯೋಜಿಸಲಿದೆ.

ವಾಯುಮಾಲಿನ್ಯ, ಅಶುದ್ಧ ನೀರು, ಹವಾಮಾನ ಬದಲಾವಣೆ, ಶಬ್ದ ಮಾಲಿನ್ಯ ಹಾಗೂ ರಾಸಾಯನಿಕಗಳಿಂದ ಉಸಿರಾಟದ ರೋಗಗಳು, ಹೃದಯ ರೋಗಗಳು, ಕ್ಯಾನ್ಸರ್, ಅಲರ್ಜಿಗಳು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ವೈದ್ಯರು ಪ್ರತಿದಿನ ಈ ಪರಿಣಾಮಗಳಿಗೆ ಚಿಕಿತ್ಸೆ ನೀಡುತ್ತಾರೆ. ಕಾರಣವನ್ನು ತಡೆಯುವುದೂ ಸಹ ವೈದ್ಯಕೀಯ ಕರ್ತವ್ಯವೇ ಆಗಿರುತ್ತದೆ.

IMA KARNATAKA ಪರಿಸರ ಸಂರಕ್ಷಣೆಯು ಆರೋಗ್ಯದ ಪ್ರಾಥಮಿಕ ಅಂಶ ಮಾಲಿನ್ಯ ತಡೆಗಟ್ಟುವುದು. ಶುದ್ಧ ಗಾಳಿ, ಸುರಕ್ಷಿತ ನೀರು, ಹಸಿರು ವಾತಾವರಣ ಮತ್ತು ಕಡಿಮೆ ತ್ಯಾಜ್ಯವು ಅನೇಕ ರೋಗಗಳನ್ನು ತಡೆಯಬಹುದು. ಇದರಿಂದ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.

ಇದೇ ಸಂದರ್ಭದಲ್ಲಿ ಡಾ. ವಿನಯಾ ಶ್ರೀನಿವಾಸ್ ಅವರ ಸಂಪಾದಕತ್ವದಲ್ಲಿ “ಐಎಂಎ ಶಿವಮೊಗ್ಗ ಪಲ್ಸ್” ನಿಯತಕಾಲಿಕ ಬಿಡುಗಡೆ ಆಯಿತು. ಕಾರ್ಯಕ್ರಮದಲ್ಲಿ ಐಎಂಎ ಶಿವಮೊಗ್ಗ ಘಟಕದ ಅಧ್ಯಕ್ಷ ಡಾ. ಕೆ.ಆರ್.ರವೀಶ್, ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಖಜಾಂಚಿ ಡಾ. ಎಚ್.ಎಲ್.ಶಶಿಧರ, ಮಹಿಳಾ ಘಟಕದ ಅಧ್ಯಕ್ಷೆ ಡಾ. ಕೌಸ್ತುಭ ಅರುಣ್, ಡಾ. ಜೀವಂತಿ, ಡಾ. ಪ್ರೀತಿ ಪೈ ಉಪಸ್ಥಿತರಿದ್ದರು.

Adichunchanagiri ಜನವರಿ13 ರಿಂದ 18 . ಶ್ರೀಆದಿಚುಂಚನಗಿರಿ ಮಠದಲ್ಲಿ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ ಮತ್ತು ಧಾರ್ಮಿಕ ವಿಚಾರಗೋಷ್ಠಿ.

0

Adichunchanagiri ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾ ಸ್ವಾಮಿಗಳವರು ಜನಸಾಮಾನ್ಯರ ಉದ್ಧಾರಕ್ಕಾಗಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಆಕಳು, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಆಂದೋಲನವನ್ನೇ ಮಾಡಿದರು. ಶೈಕ್ಷಣಿಕ,ಧಾರ್ಮಿಕ ಹಾಗೂ ಸಮಾಜ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ.
ಪರಮ ಪೂಜ್ಯರ ಅವಿಶ್ರಾಂತ ಕಾಯಕದ ಫಲವಾಗಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಅಡಿಯಲ್ಲಿ 475 ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳು ಸ್ಥಾಪನೆಗೊಂಡಿದ್ದು, ಶಿಕ್ಜ್ಹಣ ಸಂಸ್ಥೆಗಳಲ್ಲಿ ಒಂದು ಲಕ್ಷದ ಅರವತ್ತು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪೂರ್ವ ಪ್ರಾಥಮಿಕ ಶಾಲೆಯಿಂದ ಸಂಸ್ಕೃತ ವೇದಾಗಮ ಹಾಗೂ ತಾಂತ್ರಿಕ, ವೈದ್ಯಕೀಯ ವಿಜ್ಞಾನದ ವರಗೆ ಯಾವುದೇ ಜಾತಿ, ಮತ, ಲಿಂಗ ಭೇದ ವಿಲ್ಲದೆ ವ್ಯಾಸಂಗ ಮಾಡುತ್ತಿದ್ದಾರೆ.
Adichunchanagiri ಶ್ರೀ ಮಠದ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು:
ಜನವರಿ 13ರಿಂದ 18ರ ವರೆಗೆ 13ನೇ ಸಂಸ್ಮರಣಾ ಮಹೋತ್ಸವ ನಡೆಯಲಿದ್ದು,ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸಲಿದ್ದು, 13.1.2026 ರಂದು ಮಂಗಳವಾರ ಹೋಮ, ಹವನಾದಿ,ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ, 14.1.2026ರ ಬುಧುವಾರ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳ ಕಾರ್ಯಗಾರ,15.1.2026 ಗುರುವಾರ ಹಿರಿಯ ವಿದ್ಯಾರ್ಥಿಗಳ ಸಂಗಮ,ಸನ್ಮಾನ ಸಮಾರಂಭ, 16.1.2026,ಶುಕ್ರವಾರ ದಂದು ರಾಜ್ಯ ಮಟ್ಟದ ಮಕ್ಜಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. 17.1.2026, ಶನಿವಾರ ರಾಜ್ಯ ಮಟ್ಟದ ಚುಂಚಾದ್ರಿ ಮಹಿಳಾ ಸಮಾವೇಶ, 18.1.2026,ರಂದು ಭಾನುವಾರ ಜಯಂತ್ಯುತ್ಸವ ಹಾಗೂ ಸಂತ ಭಕ್ತ – ಸಂಗಮ ನಡೆಯಲಿದೆ, ಈ ಎಲ್ಲಾ ಕಾರ್ಯಕ್ರಮ ಜೊತೆಗೆ ಪ್ರತಿದಿನ ಗೀತಗಾಯನ ಹಮ್ಮಿಕೊಳ್ಳಲಾಗಿದೆ, ವಿಶಿಷ್ಟ ವಿನೂತನ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಗುವುದು. ಅಂದು ನಾಡಿನ ಸಾಧು ಸಂತರು, ಗಣ್ಯ ವ್ಯಕ್ತಿಗಳು, ಶ್ರೀಮಠದ ಸದ್ಭಕ್ತರು, ಪರಮ ಪೂಜ್ಯರ ಶಿಷ್ಯ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು
ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shri Vishwavallabha Theertharu ಜನವರಿ 10. ಶಿವಮೊಗ್ಗಕ್ಕೆ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರ ಆಗಮನ. ಭಕ್ತರಿಗೆ ಆಮಂತ್ರಣ

0

Shri Vishwavallabha Theertharu ಶ್ರೀ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀಶ್ರೀಶ್ರೀ ವಿಶ್ವವಲ್ಲಭ ತೀರ್ಥರ ದಿವ್ಯಉಪಸ್ಥಿತಿಯೊಂದಿಗೆ ಶಿವಮೊಗ್ಗ ನಗರಕ್ಕೆ ದಿನಾಂಕ: 10-01-2026 ಶಿವಮೊಗ್ಗ ಆಗಮಿಸುತ್ತಿದ್ದಾರೆ.

ಸೋದೆ ಮಠದ ಪರಂಪರೆಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದಲ್ಲಿ ಸೇರಿದ ಶ್ರೀಶ್ರೀಶ್ರೀ ಮದ್ವಚಾರ್ಯರ ಮುಖ್ಯ ಗುರುಗಳಂತೆಯೆ ಶ್ರೀ ವಾದಿರಾಜ ಗುರುಸಾರ್ವಭೌಮರು ಸರ್ವರ ಗೌರವಗಳೊಂದಿಗೆ ಪಾತ್ರರಾಗಿದ್ದಾರೆ ಅದೊಂದು ಅನುಭೂತಿಯಗಳಿಗೆ ದೈವಜ್ಞ ಬ್ರಾಹ್ಮಣ ಸಮಾಜ ಇದಕ್ಕೆ ಸೇರಿದ ಮಹನುಭಾವರೊಂದಿಗೆ ತಮ್ಮ ಸಂಕಲ್ಪದಂತೆ ಅಚ್ಚಿನಲ್ಲಿ ಪಂಚಲೋಹ ಎರಕವೈದು ಶ್ರೀಶ್ರೀಶ್ರೀ ಗಣಪತಿ ಮೂರ್ತಿಯ ವಿಗ್ರಹ ಬದಲು ದೈವಾಂಶಸಂಭೂತರಾದ ಶ್ರೀ ಹಯಗ್ರೀವ ದೇವರು ಪ್ರತ್ಯಕ್ಷವಾಯಿತು.

ಈ ವೈಕ್ತಿಗೆ ಸ್ವಪ್ನವಾಸ್ಥೆಯಲ್ಲಿ ಮಹಯೋಗಿಯೋರ್ವದಿಂದ ಅಭಯವಾಯಿತು. ಅ ಯತಿಯೇ ಶ್ರೀ ಗುರುಸಾರ್ವಭೌಮ ವಾದಿರಾಜ ಶ್ರೀಗಳು.
ಶ್ರೀ ಗುರುಸಾರ್ವಭೌಮರು ಶ್ರೇಷ್ಟಿಯ ಬಳಿ ತೆರಳಿ ಹಯಗ್ರೀವ ದೇವರ ವಿಗ್ರಹ ಮೂರ್ತಿಯನ್ನು ಪಟ್ಟದೇವರಾಗಿ ಪೂಜಿಸಲು ಸಂಕಲ್ಪಿಸಿರುತ್ತಾರೆ. ತದನಂತರ ಸಂಸ್ಕೃತಿ ಸಂಪ್ರಾದಾಯ, ಆಚಾರ, ವಿಚಾರ ಅವರ ಅನುಷ್ಟಾನುಸುತ್ತಿದ್ದ ಷಟ್ಕರ್ಮ ಇತ್ಯಾದಿಗಳು ಶ್ರೀಗಳ ದಿವ್ಯದೃಷ್ಟಿಗೆ ಗೋಚರವಾಗುತ್ತದೆ.

Shri Vishwavallabha Theertharu ಇವರನ್ನು ಮಠದ ಮುಖ್ಯಶಿಷ್ಯರನ್ನಾಗಿ ಸ್ವೀಕರಿಸಲು ನಿರ್ದರಿಸಿರುತ್ತಾರೆ ಅಂದಿನಿAದ ದೈವಜ್ಞ ಬ್ರಾಹ್ಮಣರು ಶ್ರೀ ಹಯಗ್ರೀವ ದೇವರನ್ನು ಸ್ವೀಕರಿಸಿ ಶ್ರೀ ಸೋದೆ ಮಠದ ವಾದಿರಾಜ ಮಠದ ಮುಖ್ಯಶಿಷ್ಯರಾಗಿ ಇದ್ದಾರೆ. ದೈವಜ್ಞ ಬ್ರಾಹ್ಮಣ ಸಮಾಜ ಹಾಗೂ ವಾದಿರಾಜ ದೇವರಿಗೆ ಸಂಪರ್ಕ ಸೇತು ಶ್ರೀ ಹಯಗ್ರೀವ ದೇವರು ಬೇರ್ಪಡಿಸಲಾಗದ ಅಂತಹ ಸಂಬಂಧ ದೆವಜ್ಞ ಸಮಾಜ ಹಾಗೂ ಸೋದೆ ಮಠದ ನಡುವೆ ಇದೆ. ಹಾಗೂ ಶಿವಮೊಗ್ಗ ದೈವಜ್ಞ ಕಲ್ಯಾಣ ಮಂಟಪ ದಿನಾಂಕ:03-02-1984ರಂದು ಹಾಗೂ ದಿನಾಂಕ: 12-02-1992ಗಣಪತಿ ದೇವಸ್ಥಾನ ಹಿಂದಿನ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀಶ್ರೀಶ್ರೀ ವಿಶ್ವೋತ್ತಮ ತೀರ್ಥ ಪಾದಂಗಳವರ ಅಮೃತ ಹಸ್ತದಿಂದ ಉದ್ಘಾಟಿಸಿರುವುದರಿಂದ ಇದು ನಮ್ಮ ಭಾಗ್ಯವೇ ಸರಿ.
ಜನವರಿ 10ರ ಶನಿವಾರ ಸಂಜೆ 4:00ಗಂಟೆಗೆ ನಗರದ ಶ್ರೀರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಗೋಪಿ ಸರ್ಕಲ್, ತಿಲಕನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದವರೆಗೆ ಪೂರ್ಣಕುಂಭಾ ಸಮೇತ ಚಂಡೆ ವಾಧ್ಯಗಳೊಂದಿಗೆ ಸಂಜೆ 04 ಗಂಟೆಗೆ ಬಂದು ತಲುಪುವುದು.

ಶ್ರೀಶ್ರೀಶ್ರೀ ವಿಶ್ವವಲ್ಲಭ ಗುರುಗಳಿಂದ ಭೂತರಾಜರ ಪೂಜೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾರ್ಯಕ್ರಮ, ಜನವರಿ 10ರ ಭಾನುವಾರ ಬೆಳಿಗ್ಗೆ 07 ಗಂಟೆಗೆ ಶ್ರೀಶ್ರೀಶ್ರೀ ವಿಶ್ವವಲ್ಲಭ ಗುರುಗಳಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸಂಸ್ಥಾನ ಪೂಜೆ ಅದೇ ದಿನ ಭಾನುವಾರ ಬೆಳಿಗ್ಗೆ 10 ಗಂಟೆಗೆ ದೈವಜ್ಞ ಬ್ರಾಹ್ಮಣ ಸಮಾಜದ ಕಲ್ಯಾಣ ಮಂದಿರದಲ್ಲಿ ಗುರುಗಳಿಗೆ ಸದ್ಭಕ್ತರಿಂದ ಸಾಮೂಹಿಕ ಪಾದಪೂಜೆ ಹಾಗೂ ಫಲ ಮಂತ್ರಾಕ್ಷತೆ ಕಾರ್ಯಕ್ರಮ ಇರುತ್ತದೆ ನಂತರ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.

ಸದ್ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

State Newspaper Distributors ಪತ್ರಿಕಾ ವಿತರಕರ ಒಕ್ಕೂಟದಿಂದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಗೆ ಸನ್ಮಾನ

0

State Newspaper Distributors ಜ.12ಕ್ಕೆ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರ ಪ್ಯಾರಡೈಸ್‌ನಲ್ಲಿ ಬೆಳಿಗ್ಗೆ 11 ಗಂಟೆಗೆ ಪತ್ರಿಕಾ ವಿತರಕರ ಒಕ್ಕೂಟದ 2026ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಮಾಲತೇಶ್ ಪ್ರಕಟಣೆಯಲ್ಲಿ ತಿಳಿಸಿದೆ.

ವಿತರಕರ ಕ್ಯಾಲೆಂಡರ್ ಕರ್ನಾಟಕ ಕಾರ್ಯನಿರಂತ ಪತ್ರಕರ್ತರ ಸಂಘ ಜಿಲ್ಲಾ ಅಧ್ಯಕ್ಷರಾದ ವೈದ್ಯನಾಥ್ ಹಾಗೂ ಪದಾಧಿಕಾರಿಗಳು ಬಿಡುಗಡೆಗೊಳಿಸಲಿದ್ದಾರೆಂದರು.

State Newspaper Distributors ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಹೆಚ್.ಯು.ವೈದ್ಯನಾಥ್ (ವೈದ್ಯ,) ಪ್ರಧಾನ ಕಾರ್ಯದರ್ಶಿ ಆರ್.ಎಸ್.ಹಾಲಸ್ವಾಮಿ ರಾಜ್ಯ ಸಮಿತಿ ಸದಸ್ಯರಾದ ಕೆ.ವಿ.ಶಿವಕುಮಾರ್, ರಾಜ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎನ್.ರವಿಕುಮಾರ್ (ಟೆಲೆಕ್ಸ್) ರಾಷ್ಟ್ರೀಯ ಮಂಡಳಿ ಸದಸ್ಯರು ಭಂಡಿಗಡಿ ಆರ್.ನಂಜುಂಡಪ್ಪ, ಹಿರಿಯ ಪತ್ರಕರ್ತರಾದ ಪಾವನ ಕನ್ನಡ ದಿನಪತ್ರಿಕೆ ಸಂಪಾದಕರು ತ್ಯಾಗರಾಜ್‌ಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದರು
ಮುಖ್ಯ ಅತಿಥಿಗಳಾಗಿ ಕರವೇ ಜನಮನ ರಾಜ್ಯ ಸಂಘಟನೆ ರಾಜ್ಯ ಅಧ್ಯಕ್ಷರಾದ ಜನಾರ್ಧನ್ ಸಾಲಿಯನ್ ಹಾಗೂ ಪದಾಧಿಕಾರಿಗಳು ಮಧುರ ಪ್ಯಾರಡೈಸ್ ಗೋಪಿನಾಥ್, ಆ.ನಾ.ವಿಜೇಂದ್ರ, ಕಾಂಗ್ರೆಸ್ ಮುಖಂಡ ಕೆ,.ದೇವೇಂದ್ರಪ್ಪ ಇನ್ನು ಮುಂತಾದ ಗಣ್ಯರು ಭಾಗವಹಿಸಲಿದ್ದಾರೆಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಗೌರವ ಅಧ್ಯಕ್ಷರು ಶಿಕಾರಿಪುರ ಹುಲಿಗಿ ಕೃಷ್ಣ, ಉಪಾಧ್ಯಕ್ಷರು ರಾಮು ಜಿ, ತೀರ್ಥಹಳ್ಳಿ ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ಮುಖ್ತಾರ್ ಅಹಮದ್( ನಜೀರ್) ಉಪಾಧ್ಯಕ್ಷರು ವಿನಯ್ ಕುಮಾರ್ ಎಸ್. ವಾಲಿ ತೊಗರ್ಸಿ, ಸಂಘಟನಾ ಕಾರ್ಯದರ್ಶಿ ಶಿಕಾರಿಪುರ ಗಜೇಂದ್ರ, ಭದ್ರಾವತಿ ಪರಶುರಾಮ್ ರಾವ್, ಭದ್ರಾವತಿ ತಾಲೂಕು ಅಧ್ಯಕ್ಷರು ಜಿ,ಐ, ಮಲ್ಲಿಕಾರ್ಜುನ ನಿರ್ದೇಶಕರು ಹರ್ಷ ಎನ್, ಆರ್, ಪಾರ್ತಿಬನ್. ಪಿ, ರಾಜವರ್ಮ ಜೈನ್, ಶಿರಾಳಕೊಪ್ಪ ರಾಘವೇಂದ್ರ ಉಪಸ್ಥಿತರಿರುವರು ಎಂದರು.

CM Siddaramaiah ಮಲೆಯಾಳಿ ಭಾಷಾ ಮಸೂದೆ.ಕೇರಳ ಸರ್ಕಾರ ವಾಪಸು ಪಡೆಯಲಿ. ಕಾಸರಗೋಡು ಕನ್ನಡಿಗರ ಪರ ಸಿದ್ಧರಾಮಯ್ಯ

0

CM Siddaramaiah ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರವಾಗಿದೆ ಎಂದು ಹೇಳಲು ವಿಷಾಧಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ.

ಕಾಸರಗೋಡು ಇಂದು ಆಡಳಿತಾತ್ಮಕವಾಗಿ ಕೇರಳ ರಾಜ್ಯಕ್ಕೆ ಸೇರಿದ್ದರೂ ಅದು ಭಾವನಾತ್ಮಕವಾಗಿ ಕರ್ನಾಟಕ ರಾಜ್ಯಕ್ಕೆ ಸೇರಿದ್ದಾಗಿದೆ. ಅಲ್ಲಿನ ಜನ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯದ ಜೊತೆ ಮಿಳಿತವಾಗಿದ್ದಾರೆ. ಅವರು ಕರ್ನಾಟಕದ ಕನ್ನಡಿಗರಿಗಿಂತ ಕಡಿಮೆ ಕನ್ನಡಿಗರೇನಲ್ಲ. ಅವರ ಹಿತವನ್ನು ರಕ್ಷಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಭಾರತದ ಪ್ರತಿಯೊಬ್ಬ ಪ್ರಜೆಗೂ ಅವರ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯ ಇದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರನ್ನು ಆಗ್ರಹಿಸುತ್ತೇನೆ.

ಭಾಷಾ ಅಲ್ಪಸಂಖ್ಯಾತರಿಗೆ ಮಾತೃಭಾಷೆ ಎನ್ನುವುದು ಕೇವಲ ಭಾಷೆ ಅಲ್ಲ, ಅದು ಅವರಿಗೆ ಘನತೆಯ ಬದುಕು ನೀಡುವ ಅಸ್ಮಿತೆಯಾಗಿರುತ್ತದೆ. ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳು ಸುಲಭದಲ್ಲಿ ವಿಷಯಗಳನ್ನು ಗ್ರಹಿಸುತ್ತಾರೆ ಎನ್ನುವದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅವರ ಮೇಲೆ ಅನ್ಯಭಾಷೆಯನ್ನು ಹೇರುವುದರಿಂದ ಅವರ ಕಲಿಕಾ ಸಾಮರ್ಥ್ಯವನ್ನು ಕುಂದಿಸುವುದು ಮಾತ್ರವಲ್ಲ, ಒಂದು ಸ್ವತಂತ್ರಭಾಷೆಯ ಅವಸಾನಕ್ಕೆ ದಾರಿ ಮಾಡಿಕೊಟ್ಟ ಹಾಗಾಗುತ್ತದೆ.

CM Siddaramaiah ಕಾಸರಗೋಡಿನ ಜನ ಹಲವು ತಲೆಮಾರುಗಳಿಂದ ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ, ನಿತ್ಯದ ಬದುಕಿನಲ್ಲಿ ಕನ್ನಡವನ್ನು ನಿರಂತರವಾಗಿ ಬಳಸುತ್ತಾ ಬಂದಿದ್ದಾರೆ. ಕಾಸರಗೋಡು ಜಿಲ್ಲೆಯ ಶೇಕಡಾ 70ರಷ್ಟು ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಮತ್ತು ಕನ್ನಡ ಮಾಧ್ಯಮದಲ್ಲಿಯೇ ಕಲಿಯುವುದನ್ನು ಬಯಸುತ್ತಾರೆ ಎಂಬುದು ಅಲ್ಲಿನ ಕನ್ನಡಿಗರ ಒಕ್ಕೊರಲ ಅಭಿಪ್ರಾಯವಾಗಿದೆ. ಯಾವುದೇ ಒಂದು ಭಾಷೆ ಮತ್ತೊಂದು ಭಾಷೆಯ ವಿರುದ್ಧವಾಗಿ ಇರುವುದಿಲ್ಲ. ಭಾರತ ಬಹುಭಾಷೆ, ಬಹುಸಂಸ್ಕೃತಿ ಮತ್ತು ಬಹುಧರ್ಮದ ತೊಟ್ಟಿಲಾಗಿದೆ. ಈ ಬಹುತ್ವದ ವಾತಾವರಣಕ್ಕೆ ಧಕ್ಕೆ ಉಂಟು ಮಾಡುವ ಪ್ರಯತ್ನ ಅಪಾಯಕಾರಿಯಾಗಿದೆ.

ಭಾಷೆಯೂ ಸೇರಿದಂತೆ ಅಲ್ಪಸಂಖ್ಯಾತರ ಹಿತರಕ್ಷಣೆಯ ವಿಚಾರದಲ್ಲಿ ನಾವೆಲ್ಲರೂ ಗೌರವಿಸುವ ಸಂವಿಧಾನದಲ್ಲಿ ಸ್ಪಷ್ಟವಾಗಿದೆ. ಸಂವಿಧಾನದ 29 ಮತ್ತು 30ನೇ ಪರಿಚ‍್ಛೇದಗಳು ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿರುವವರಿಗೆ ತಮ್ಮ ಭಾಷೆ, ಲಿಪಿ ಮತ್ತು ಸಂಸ್ಕೃತಿ ರಕ್ಷಿಸಿಕೊಳ್ಳುವ ಹಕ್ಕನ್ನು ನೀಡಿದೆ. ಅವರಿಗೆ ತಮ್ಮ ಆಯ್ಕೆಯ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವ ಹಕ್ಕನ್ನೂ ನೀಡುತ್ತದೆ. ಸಂವಿಧಾನದ 350 (ಎ) ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಕಲಿಯುವ ಸ್ವಾತಂತ್ರ್ಯವನ್ನು ನೀಡಿದೆ. ಸಂವಿಧಾನದ 350(ಬಿ) ಅಲ್ಪಸಂಖ್ಯಾತರ ರಕ್ಷಣೆಯ ಖಾತರಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರ ಅಲ್ಪಸಂಖ್ಯಾತರ ಭಾಷಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು ಎಂದಿದ್ದಾರೆ.

ಕರ್ನಾಟಕದಲ್ಲಿ ನಾವು ಕನ್ನಡ ಭಾಷೆಯನ್ನು ಪೊರೆಯುವ ಕೆಲಸ ಮಾಡಿದ ಹಾಗೆ, ಕೇರಳ ರಾಜ್ಯದಲ್ಲಿ ಮಲೆಯಾಳಿ ಭಾಷೆಯನ್ನು ಬೆಳೆಸುವ ಮತ್ತು ಉಳಿಸುವ ಸರ್ವ ಸ್ವಾತಂತ್ರ್ಯ ಅಲ್ಲಿನ ರಾಜ್ಯ ಸರ್ಕಾರಕ್ಕೆ ಇದೆ. ಆದರೆ ಒಂದು ಭಾಷೆಯ ಮೇಲೆ ಇನ್ನೊಂದು ಭಾಷೆಯನ್ನು ಹೇರುವ ಪ್ರಯತ್ನ ಸಲ್ಲದು.

ಕೇರಳ ಸರ್ಕಾರ ಈ ಮಸೂದೆಯನ್ನು ಜಾರಿಗೊಳಿಸಲು ಹೊರಟರೆ ಕನ್ನಡಿಗರು ಇದನ್ನು ಒಕ್ಕೊರಲಿನಿಂದ ವಿರೋಧಿಸಲಿದ್ದಾರೆ. ಕಾಸರಗೋಡಿನ ಕನ್ನಡಿಗರ ಜೊತೆಯಲ್ಲಿ ನಿಂತು ಅವರ ಭಾಷಾ ಸ್ವಾತಂತ್ರ್ಯದ ರಕ್ಷಣೆಗೆ ಸರ್ವರೀತಿಯ ಬೆಂಬಲವನ್ನು ನೀಡಲಿದ್ದಾರೆ ಎಂದಿದ್ದಾರೆ

Shiralakoppa Police Station ಕಾಣೆಯಾಗಿದ್ದಾರೆ. ಶಿರಾಳಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ.

0

Shiralakoppa Police Station ಶಿಕಾರಿಪುರ ತಾಲೂಕು ಶೀರಿಹಳ್ಳಿ ಗ್ರಾಮ ವಾಸಿ ಲಲಿತಾ ಬಾಯಿ ಎಂಬುವವರ ಪತಿ ಹಾಲಾ ನಾಯ್ಕ ಬಿನ್ ಸೋಮ್ಲಾ ನಾಯ್ಕ ಎಂಬ 47 ವರ್ಷದ ವ್ಯಕ್ತಿ ಡಿ. 15 ರಂದು ತನ್ನ ಅತ್ತೆ ಮನೆಯಿಂದ ಕಾಣೆಯಾದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ.
Shiralakoppa Police Station ಈ ವ್ಯಕ್ತಿಯ ಚಹರೆ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಮತ್ತು ಲಂಬಾಣಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಬಿಳಿ ಪಂಚೆ ಹಾಗೂ ಹಸಿರು ಜರ್ಕಿನ್ ಧರಿಸಿರುತ್ತಾರೆ.
ಈ ವ್ಯಕ್ತಿಯ ಕುರಿತು ಸುಳಿವು ಸಿಕ್ಕಲ್ಲಿ ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಖುದ್ದಾಗಿ ಅಥವಾ ದೂ.ಸಂ.: 9480803367 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.