S.N.Chennabasappa ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್.ಚೆನ್ನಬಸಪ್ಪನವರು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಮಾಯಣ್ಣಗೌಡರೊಂದಿಗೆ ಶಿವಮೊಗ್ಗ ನಗರದ ಮಿಳಗಟ್ಟ ಹಾಗೂ ಅಣ್ಣನಗರದ ಮುಖ್ಯ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು,ವರ್ತಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ ಆದಷ್ಟು ಬೇಗ ಕಾಮಗಾರಿ ಮುಗಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
S.N.Chennabasappa ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು,ಸ್ಥಳೀಯ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.
S.N.Chennabasappa ಶಿವಮೊಗ್ಗ ನಗರದ ಮಿಳಗಟ್ಟ, ಅಣ್ಣಾನಗರದ ರಸ್ತೆ ಕಾಮಗಾರಿ ಪರಿಶೀಲನೆ
ಬಾಲ್ಯ ವಿವಾಹ , ನಿಶ್ಚಿತಾರ್ಥಕ್ಕೆ ಹಾಜರಾದವರ ಮೇಲೂ ಅಪರಾಧದ ಪ್ರಕರಣ ದಾಖಲು
ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ, 2025”ಕ್ಕೆ ಅನುಮೋದನೆ; ಮತ್ತು ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು; ಸಚಿವ ಸಂಪುಟ ನಿರ್ಧರಿಸಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ತಿಳಿಸಿದರು.
ಸದರಿ 2023-24ರ ಅವಧಿಯಲ್ಲಿ ಸುಮಾರು 700 ಬಾಲ್ಯವಿವಾಹಗಳು ರಾಜ್ಯಾದ್ಯಂತ ವರದಿಯಾಗಿವೆ. ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ಕ್ರಮಗಳು ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಈ ಪ್ರಸ್ತಾವನೆ ಮಂಡಿಸಲಾಗಿತ್ತು.
Shivamogga Railway ಯಶವಂತಪುರ & ತಾಳಗುಪ್ಪ ನಡುವಣ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ, ಎಲ್ಲೆಲ್ಲಿ ನಿಲುಗಡೆ? ಮಾಹಿತಿ ಓದಿ
Shivamogga Railway ಪ್ರಯಾಣಿಕರ ಹೆಚ್ಚಿದ ಬೇಡಿಕೆಯನ್ನು ಪೂರೈಸುವ ಸಲುವಾಗಿ, ರೈಲು ಸಂಖ್ಯೆ 06587/06588 ಯಶವಂತಪುರ – ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ಪ್ರತಿ ದಿಕ್ಕಿನಲ್ಲಿ ತಲಾ ಎರಡು ಹೆಚ್ಚುವರಿ ಟ್ರಿಪ್’ಗಳಿಗೆ ನೈಋತ್ಯ ರೈಲ್ವೆಯು ವಿಸ್ತರಿಸಿದೆ.
ರೈಲು ಸಂಖ್ಯೆ 06587 ಯಶವಂತಪುರ – ತಾಳಗುಪ್ಪ ವಿಶೇಷ ಎಕ್ಸ್ ಪ್ರೆಸ್ ರೈಲು ಆಗಸ್ಟ್ 1 ಮತ್ತು 8, 2025 ರಂದು (ಶುಕ್ರವಾರ) ಯಶವಂತಪುರದಿಂದ ರಾತ್ರಿ 10:30 ಗಂಟೆಗೆ ಹೊರಟು, ಮರುದಿನ (ಶನಿವಾರ) ಬೆಳಗಿನ ಜಾವ 04:15 ಗಂಟೆಗೆ ತಾಳಗುಪ್ಪ ತಲುಪಲಿದೆ.
ರೈಲು ಸಂಖ್ಯೆ 06588 ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸ್ ಪ್ರೆಸ್ ರೈಲು ಆಗಸ್ಟ್ 2 ಮತ್ತು 9, 2025 ರಂದು (ಶನಿವಾರ) ತಾಳಗುಪ್ಪದಿಂದ ಬೆಳಿಗ್ಗೆ 08:15 ಗಂಟೆಗೆ ಹೊರಟು, ಅದೇ ದಿನ ಸಂಜೆ 04:50 ಗಂಟೆಗೆ ಯಶವಂತಪುರ ತಲುಪಲಿದೆ.
ಈ ರೈಲು ಎರಡೂ ಮಾರ್ಗದಲ್ಲಿ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.
JCI Shivamogga ಶಿವಮೊಗ್ಗದ ಎಂ ಆರ್ ಎಸ್ ವೃತ್ತದಲ್ಲಿ ಜೆಸಿಐ ಸ್ವಾಗತ ಫಲಕ ಅನಾವರಣ
JCI Shivamogga ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದದಿಂದ M. R. S ವೃತ್ತದಲ್ಲಿ ಸ್ವಾಗತ ನಾಮಫಲಕವನ್ನು ಅಳವಡಿಸಿದ್ದು ಈ ನಾಮಫಲಕವನ್ನು jci ರಾಷ್ಟ್ರೀಯ ಅಧ್ಯಕ್ಷರಾದ ಅಂಕುರ್ ಜುನ್ ಜುನ್ವಾಲಾ ರವರು ಉದ್ಘಾಟಿಸಿದರು.. ಈ ಕಾರ್ಯಕ್ರಮದಲ್ಲಿ JCI ಶಿವಮೊಗ್ಗ ರಾಯಲ್ಸ್ ಅಧ್ಯಕ್ಷರಾದ Jc ಸ್ಮಿತಾಮೋಹನ್ ಪದಾಧಿಕಾರಿಗಳು ಹಾಗೂ JCI ವಲಯದ ಅಧ್ಯಕ್ಷರಾದ ಗೌರೀಶ್ ಭಾರ್ಗವ್ ಉಪಾಧ್ಯಕ್ಷರಾದ ಸುದರ್ಶನ್ ತಾಯಿ ಮನೆ. ಚೇರ್ಮನ್ ಗಣೇಶ್ ಜಿ ಮತ್ತು ಹಲವಾರು ಉಪಸ್ಥಿತರಿದ್ದರು.
CM Siddaramaiah ಸಣ್ಣ ವ್ಯಾಪಾರಸ್ಥರಿಗೆ ಜಿಎಸ್ ಟಿ ನೋಟೀಸ್, ಮುಖ್ಯಮಂತ್ರಿಗಳಿಂದ ಸ್ಪಷ್ಟನೆ
CM Siddaramaiah ಸಣ್ಣ ವ್ಯಾಪಾರಿಗಳಲ್ಲಿ ಜಿಎಸ್‌ಟಿ ನೋಟಿಸ್ ಕುರಿತು ಗೊಂದಲ ಇದೆ. ಜಿಎಸ್‌ಟಿ ಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿಯಮಾವಳಿಗಳನ್ನು ಕೇಂದ್ರ ಸರ್ಕಾರವೇ ರಚಿಸಿದೆ. ಅವುಗಳ ಪಾಲನೆ ಮಾಡುವುದಷ್ಟೇ ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಈ ನೀತಿ-ನಿಯಮಾವಳಿಗಳ ರಚನೆಯಲ್ಲಿ ರಾಜ್ಯಗಳ ಪಾತ್ರ ಇಲ್ಲ.
ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂತಹ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು.
CM Siddaramaiah ಯಾರಿಗಾದರೂ ನಿಯಮಬಾಹಿರವಾಗಿ ಹಳೆಯ ತೆರಿಗೆ ಬಾಕಿಗಾಗಿ ನೋಟಿಸ್ ನೀಡಿದ್ದರೆ ಆ ಹಳೆ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್ ಟಿ ನೋಂದಣಿಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
Klive Special Article ರಾಣಿ ಚೆನ್ನಭೈರಾದೇವಿ ಅಂಚೆ ಚೀಟಿ ಬಿಡುಗಡೆ, ಅಭಿನಂದಿಸಿದ ಕಾದಂಬರಿಕಾರ ಡಾ.ಗಜಾನನ ಶರ್ಮ
Klive Special Article “ರಾಣಿ ಚೆನ್ನಭೈರಾದೇವಿಯ ಧೈರ್ಯ, ಸ್ಥೈರ್ಯ ಮತ್ತು ಸಾಧನೆಯನ್ನು ನಾವು ಸುವರ್ಣಾಕ್ಷರಗಳಲ್ಲಿ ಮಾತ್ರವಲ್ಲ, ವಜ್ರದ ಅಕ್ಷರಗಳಲ್ಲಿ ಕೆತ್ತಬೇಕು”
ಇದು, ಗೌರವಾನ್ವಿತ ರಾಷ್ಟ್ರಪತಿ ಸನ್ಮಾನ್ಯ ಡಾ. ದ್ರೌಪದಿ ಮುರ್ಮುರವರು ಇಂದು ರಾಷ್ಟ್ರಪತಿ ಭವನದಲ್ಲಿ ರಾಣಿಯ ನೆನಪಿನ ಅಂಚೆಚೀಟಿ ಬಿಡುಗಡೆಯ ಸಂದರ್ಭದಲ್ಲಿ ನುಡಿದ ಮಾತು….
ಇದೊಂದು ಅವಿಸ್ಮರಣೀಯ ಘಟನೆ. ನಿಜವೇ ಎಂದು ಮೈ ಚಿವುಟಿ ನೋಡಿಕೊಳ್ಳಬೇಕಾದ ಸಂಗತಿ. ಯಾಕೆಂದರೆ ನನ್ನಂಥವರಿಗೆ ರಾಷ್ಟ್ರಪತಿ ಭವನವನ್ನು ಪ್ರವೇಶಿಸುವ ಅವಕಾಶವೇ ದೊಡ್ಡದು. ಇನ್ನು ಅವರನ್ನು ಸಮೀಪದಲ್ಲಿ ಕಾಣುವ ಭಾಗ್ಯ ಮತ್ತಷ್ಟು ಹಿರಿದಾದುದು.
ಯಾವ ಮಹಾರಾಣಿ ದೇಶದಲ್ಲಿ ಇನ್ನಾವ ಮಹಾರಾಣಿಯೂ ಆಳದಷ್ಟು ಸುದೀರ್ಘ ಐವತ್ನಾಲ್ಕು ವರ್ಷಗಳಷ್ಟು ಕಾಲ ರಾಜ್ಯವಾಳಿದ್ದಳೋ, ಯಾವ ಮಹಾರಾಣಿ ಇಡಿಯ ಯುರೋಪಿನ ಕಾಳುಮೆಣಸು, ದಾಲ್ಚಿನ್ನಿ, ಭತ್ತ, ಶುಂಠಿ ವ್ಯವಹಾರಗಳನ್ನು ಸಂಪೂರ್ಣ ಹಿಡಿತದಲ್ಲಿ ಇಟ್ಟುಕೊಂಡಿದ್ದಳೋ, ಯಾವ ರಾಣಿ ಪೂರ್ಚುಗೀಸರು ದಕ್ಷಿಣ ಕೊಂಕಣಕ್ಕೆ ಕಾಲಿಟ್ಟು ರಾಜಕೀಯ ಮತ್ತು ಮತೀಯ ಅತಿರೇಕಗಳನ್ನು ಎಸಗದಂತೆ ಅವರನ್ನು ಕಾಳಿ ನದಿಯಾಚೆಯ ತೀರದಲ್ಲೇ ತಡೆದು ನಿಲ್ಲಿಸಿದ್ದಳೋ, ಯಾವ ರಾಣಿ ಸ್ವತಃ ಯಾರ ಮೇಲೂ ತಾನಾಗಿ ಯುದ್ದ ಸಾರದಿದ್ದರೂ ತಾವಾಗಿ ಮೇಲೆ ಬಿದ್ದ ಯಾರನ್ನೂ ಬಗ್ಗು ಬಡಿಯದೆ ಬಿಟ್ಟಿರಲಿಲ್ಲವೋ, ಯಾವ ಮಹಾರಾಣಿ ಸರ್ವಸಮನ್ವಯತೆಯಿಂದ ಎಲ್ಲರನ್ನೂ ಒಳಗೊಂಡು ಆಡಳಿತ ನಡೆಸಿ, ನಾಡಿನ ಸರ್ವೋದಯಕ್ಕೆ ಕಾರಣಳಾಗಿದ್ದಳೋ, ಯಾವ ರಾಣಿ ತನ್ನ ವ್ಯಾಪಾರ, ವ್ಯವಹಾರ ಮತ್ತು ಆಡಳಿತ ಕೌಶಲ್ಯಗಳಿಂದ ರಾಜ್ಯವನ್ನು ಸಮೃದ್ಧವಾಗಿ, ಶ್ರೀಮಂತವಾಗಿ ಸುರಕ್ಷಿತವಾಗಿ ಕಟ್ಟಿದ್ದಳೋ ಆ ಮಹಾರಾಣಿಯ ಘನತೆಗೆ ತಕ್ಕ ಗೌರವ ನೀಡಿದ ಕಾರ್ಯಕ್ರಮವಾಗಿತ್ತು ಇಂದು ನಡೆದ ಸಮಾರಂಭ.

Klive Special Article ಅವಳ ಕುರಿತು ಅಮೆರಿಕೆಯ ಟೆಕ್ಸಾಸ್ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಚಾರ್ಯೆ ಡಾ. ಹನ್ನಾ ಚಾಪೆಲ್ ವೋಜೋಸ್ಕಿ ತನ್ನ ಪ್ರಬಂಧವೊಂದರಲ್ಲಿ ಹೀಗೆ ಬರೆದಿದ್ದಾರೆ.
Her story—what little we know of it today—is important for a variety of reasons, not least because it counters the masculinist narratives of conquest and dominance penned by European chroniclers from the beginning of the colonial period. Chennabhairadevi was almost an exact contemporary of Queen Elizabeth I of England, and in many ways she was her counterpart. Chennabhairadevi succeeded in holding onto her kingdom for over 50 years, outwitting multiple adversaries through shrewd alliances, and in leveraging a great deal of political, cultural, and economic power.
ದೌರ್ಭಾಗ್ಯವೆಂದರೆ ವಿದೇಶೀಯರಿಂದ ಇಂತಹ ಶ್ಲಾಘನೆ ಪಡೆದ ರಾಣಿ ಚೆನ್ನಭೈರಾದೇವಿ ಅದೇಕೋ ನಮ್ಮ ಇತಿಹಾಸದ ಮುಖ್ಯ ವಾಹಿನಿಯ ಪುಟಗಳನ್ನು ಅಲಂಕರಿಸಲೇ ಇಲ್ಲ. ಅವಳನ್ನು ನಾವು ಬದಿಗಿಟ್ಟೆವು. ಯಾವ ಪೋರ್ಚುಗೀಸರೊಂದಿಗೆ ಆಕೆ ಘೋರ ಸಂಗ್ರಾಮಕ್ಕೆ ಇಳಿದಿದ್ದಳೋ ಆ ಪೋರ್ಚುಗೀಸರೇ ಆಕೆಗೆ ರೈನಾ ದಿ ಪೆಮೆಂಟಾ ಅರ್ಥಾತ್ “ಕಾಳುಮೆಣಸಿನ ರಾಣಿ” ಎಂಬ ಬಿರುದನ್ನಿತ್ತು ಗೌರವಿಸಿದ್ದರು.
ಅವಳ ಕುರಿತು ಪೋರ್ಚುಗೀಸರಿಗೆ ಅದೆಷ್ಟು ಅಂಜಿಕೆ ಇತ್ತೆಂದರೆ 1590ರ ದಶಕದಲ್ಲಿ ಪೋರ್ಚುಗಲ್ಲಿನ ರಾಜಪ್ರಮುಖರು ಗೋವೆಯ ಗವರ್ನರ್ ಸಾಹೇಬನಿಗೆ ಹೀಗೆ ಬರೆದಿದ್ದರು…
“We must deal with her most carefully and diplomatically. We must be courteous, polite, and diplomatic to win her to our side.”
ಹೀಗೆ ಪೋರ್ಚುಗೀಸರು ತಮ್ಮ ಉಚ್ಛ್ರಾಯ ಕಾಲದಲ್ಲೇ ತನ್ನ ಕುರಿತು ಭಯಪಡುವಂತೆ ಅವರನ್ನು ನಡುಗಿಸಿದ್ದ ನಮ್ಮ ನೆಲದ ದಿಟ್ಟ ಹೆಣ್ಣಿನ ಕುರಿತು, ಈ ರಾಷ್ಟ್ರದ ಪ್ರಥಮ ಪ್ರಜೆಯೇ ಇಂದು ಸ್ವತಃ ಅವಳ ಸಾಧನೆಗಳನ್ನು ವಜ್ರಾಕ್ಷರಗಳಲ್ಲಿ ಕೆತ್ತಿಡಬೇಕೆಂದು ಹೇಳಿದರೆಂದರೆ ಅದು ಆಕೆಗೆ ಸಂದ ಪರಮ ಗೌರವ.
1552 ರಿಂದ 1606 ರವರೆಗೆ ಒಟ್ಟು 54 ವರ್ಷಗಳ ಕಾಲ ಹೈವ, ತುಳುವ, ಕೊಂಕಣ ಪ್ರದೇಶಗಳನ್ನು ಹಾಡುವಳ್ಳಿ ಗೇರುಸೊಪ್ಪೆ ಅವಳಿ ಪಟ್ಟಣಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಆಳಿದ ವೀರ ರಾಣಿ ಚೆನ್ನಭೈರಾದೇವಿ ಸರ್ವಧರ್ಮ ಸಮನ್ವಯ ಸಾಧಿಸಿದ ಜಿನಮಾನಿನಿ. ಎಲ್ಲ ಸಮಾಜದ ಎಲ್ಲ ಪ್ರಜೆಗಳಿಗೂ ಕೃಷಿ, ವ್ಯಾಪಾರ ಮತ್ತು ವ್ಯವಹಾರವನ್ನು ಕಲಿಸಿ ತನ್ನ ಸಾಮ್ರಾಜ್ಯದ ಆದಾಯವನ್ನು ಹೆಚ್ಚಿಸಿದ್ದಳು. 1606ರಲ್ಲಿ ಕೆಳದಿ ಅರಸರ ತಂತ್ರಗಾರಿಕೆಯಿಂದ ಬಂಧನಕ್ಕೆ ಒಳಗಾಗಿ ಸಾಮ್ರಾಜ್ಯವನ್ನು ಕಳೆದುಕೊಂಡು ಹಳೆ ಇಕ್ಕೇರಿಯಲ್ಲಿ ಬಂಧನದಲ್ಲಿದ್ದು, ಜಿನಪದ್ಧತಿಗೆ ಅನುಗುಣವಾಗಿ ನಿರಾಹಾರ ವ್ರತಧಾರಿಯಾಗಿ ಸಲ್ಲೇಖದ ಮೂಲಕ ಇಹಲೋಕ ತ್ಯಜಿಸಿದ್ದಳು.
ಸನ್ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮುರವರು, ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯರಾದ ಪೂಜ್ಯ ವೀರೇಂದ್ರ ಹೆಗಡೆಯವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು, ಪೋಸ್ಟ್ ಮಾಸ್ಟರ್ ಜನರಲ್ಲರು, ಎಕ್ಸಲೆಂಟ್ ಅಕಾಡೆಮಿಯ ಯುವರಾಜ್ ಮತ್ತು ಅವರ ಪತ್ನಿ ರಶ್ಮಿಕಾರವರು, ಮಹೇಂದ್ರಸಿಂಗ್ ರವರು, ಮಹಾವೀರ ಕುಂದೂರ್, ಸುರದ್ರ ಹೆಗ್ಗಡೆಯವರು, ಸಂಪತ್ ಕಮಾರ್ ಹಾಲೆಮನೆ ಸಂತೋಷ್ ಪಾಟೀಲ್ ಮುಂತಾದ ಗಣ್ಯರ ಸಮಕ್ಷಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಜೊತೆಗೂಡಿ ಅಂಚೆಚೀಟಿ ಬಿಡುಗಡೆ ಮಾಡಿ, “ಭವ್ಯ ಭಾರತದ ಇತಿಹಾಸದಲ್ಲಿ ರಾಣಿ ಚೆನ್ನಭೈರಾದೇವಿಯಂತಹ ಹಲವು ಧೀರ ವನಿತೆಯರು ನಮ್ಮ ದೇಶದ ಪ್ರಾಂತ್ಯ ಪ್ರಾಂತ್ಯಗಳಲ್ಲಿ ಅದೆಷ್ಟು ಮಂದಿ ಆಗಿಹೋಗಿದ್ದಾರೋ…ನಾವು ಒಬ್ಬಿಬ್ಬರನ್ನಷ್ಟೇ ಕೊಂಡಾಡಿ, ಇಂತಹ ಅನೇಕ ಮಹಾನ್ ವನಿತೆಯರನ್ನು ಮರೆತುಬಿಟ್ಟಿದ್ದೇವೆ. ಇತಿಹಾಸದ ಮುಖ್ಯ ವಾಹಿನಿಯಿಂದ ಇಂಥವರನ್ನು ಬದಿಗಿಟ್ಟು ನಮ್ಮ ಇತಿಹಾಸದ ಮಹತ್ವವನ್ನು ನಾವೇ ಕಡಿಮೆ ಮಾಡಿಕೊಂಡಿದ್ದೇವೆ. ಕೊನೆಯ ಪಕ್ಷ ಈಗಲಾದರೂ ಈ ಮಹಾನ್ ಆಡಳಿತಗಾರ್ತಿ, ವ್ಯವಹಾರ ನಿಪುಣೆ, ವೀರ ಧೀರ ಮಹಿಳೆಗೆ ನ್ಯಾಯ ಸಿಗುತ್ತಿದೆ. ಅಂಥದ್ದೊಂದು ಪ್ರಯತ್ನಕ್ಕೆ ಕೈಜೋಡಿಸಿದ ಎಲ್ಲರಿಗೂ ಅಭಿನಂದನೆಗಳು” ಎಂದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು “ಚೆನ್ನಭೈರಾದೇವಿ ಕರ್ನಾಟಕದ ಹೆಮ್ಮೆ. ಆಕೆ ನಮ್ಮ ಹೆಣ್ಣು ಮಕ್ಕಳು ಮತ್ತು ಸಹೋದರಿಯರಿಗೆ ಸ್ಫೂರ್ತಿಯ ಚಿಲುಮೆ. ಐನೂರು ವರ್ಷಗಳ ಹಿಂದೆಯೇ ನಮ್ಮ ಮಹಿಳೆಯರ ಸ್ವಾವಲಂಬನೆ ಮತ್ತು ಆತ್ಮರಕ್ಷಣೆಗೆ ಬೇಕಾದ ಕಲಿಕೆಗೆ ಅವಕಾಶ ಕಲ್ಪಿಸಿ ಅವರ ಸಬಲೀಕರಣಕ್ಕೆ ಕಾರಣಳಾದ ಜಿನ ಮಹಿಳೆ ಆಕೆ. ವಾಣಿಜ್ಯ ವ್ಯವಹಾರದಲ್ಲಿ ನಮ್ಮ ನೆಲಕ್ಕೆ ನೈಪುಣ್ಯತೆ ಗಳಿಸಿಕೊಟ್ಟವಳು. ಕೌಶಲದ ಜೊತೆಗೆ ಹೃದಯವಂತಿಕೆ, ಶೌರ್ಯದ ಜೊತೆಗೆ ದಯೆ ಕರುಣೆ ಇಟ್ಟುಕೊಂಡ ಘನ ವ್ಯಕ್ತಿತ್ವ ಆಕೆಯದು” ಎಂದರು. ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯರಾದ ಪೂಜ್ಯ ವೀರೇಂದ್ರ ಹೆಗಡೆವರು, ಇತಿಹಾಸದ ಗರ್ಭದಲ್ಲಿ ಅಡಗಿಹೋದ ಚೆನ್ನಭೈರಾದೇವಿಯಂತಹ ವ್ಯಕ್ತಿತ್ವಕ್ಕೆ ನ್ಯಾಯ ಸಂದಾಯವಾಗುತ್ತಿರುವ ಈ ಸಂದರ್ಭದಲ್ಲಿ ಆಕೆಯ ಸಾಧನೆಯನ್ನು ಸ್ಮರಿಸುವುದು ನಮ್ಮೆಲ್ಲರ ಹೊಣೆಗಾರಿಕೆ ಎಂದು ಹೇಳಿ ಎಲ್ಲರನ್ನೂ ಸ್ವಾಗತಿಸಿದರು. ಇದೆಲ್ಲದರ ನಡುವೆ ಚೆನ್ನಭೈರಾದೇವಿಯ ಕುರಿತು ಕಾದಂಬರಿಯೊಂದನ್ನು ರಚಿಸಿದ ನನಗೂ ಇಂದಿನ ಸಮಾರಂಭಕ್ಕೆ ಆಹ್ವಾನಿಸಿ, ಭಾಗಿಯಾಗಲು ಅವಕಾಶ ದೊರೆಯುವಂತೆ ಮಾಡಿದ ಚೆನ್ನಭೈರಾದೇವಿಯ ದಿವ್ಯ ಚೈತನ್ಯ ನಾನು ಸಂತೃಪ್ತಿ ಮತ್ತು ಧನ್ಯತೆಯ ಭಾವದೊಂದಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತಿದ್ದೇನೆ..

District Agriculture Department ಯೂರಿಯ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯ ಬಳಸಲು ಜಿಲ್ಲಾ ಕೃಷಿ ಇಲಾಖೆಯಿಂದ ರೈತರಿಗೆ ಪ್ರಕಟಣೆ
District Agriculture Department ಶಿವಮೊಗ್ಗ ತಾಲ್ಲೂಕಿನಾದ್ಯಂತ ಜುಲೈ ತಿಂಗಳಿನಲ್ಲಿ ಸತತವಾಗಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ರೈತರು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಬಳಕೆ ಮಾಡಲು ಕೃಷಿ ಇಲಾಖೆ ಸಲಹೆ ನೀಡಿದೆ.
ಜುಲೈ ಮಾಹೆಯಲ್ಲಿ ಕಸಬಾ ಹೋಬಳಿಯಲ್ಲಿ ವಾಡಿಕೆ ಮಳೆಗೆ 163.4 ಮಿಮಿ ಗೆ 93 ಮಿಮಿ (ಶೇ.43 ರಷ್ಟು ಕಡಿಮೆ ಮಳೆ), ನಿದಿಗೆ-1 ಹೋಬಳಿ ವಾಡಿಕೆ ಮಳೆ 169.4 ಮಿಮಿ ಗೆ 123.5 ಮಿಮಿ(ಶೇ.27 ರಷ್ಟು ಕಡಿಮೆ ಮಳೆ), ನಿದಿಗೆ-2 ಹೋಬಳಿ ವಾಡಿಕೆ ಮಳೆ 235 ಮಿಮಿ ಗೆ 216.7 ಮಿಮಿ (ಶೇ.8 ರಷ್ಟು ಕಡಿಮೆ ಮಳೆ), ಹೊಳಲೂರು-2 ಹೋಬಳಿ ವಾಡಿಕೆ ಮಳೆ 157.6 ಮಿಮಿ ಮಳೆಗೆ 81.6ಮಿಮಿ (ಶೇ.48 ರಷ್ಟು ಕಡಿಮೆ ಮಳೆ), ಹೊಳಲೂರು-1 ಹೋಬಳಿ ವಾಡಿಕೆ ಮಳೆ 139.1 ಮಿಮಿ ಗೆ 72.8 ಮಿಮಿ (ಶೇ.48ರಷ್ಟು ಕಡಿಮೆ ಮಳೆ) ಹಾರನಹಳ್ಳಿ ಹೋಬಳಿ ವಾಡಿಕೆ ಮಳೆ 214 ಮಿಮಿ ಗೆ 77.7 ಮಿಮಿ (ಶೇ.64 ರಷ್ಟು ಕಡಿಮೆ ಮಳೆ) ಕುಂಸಿ ಹೋಬಳಿ ವಾಡಿಕೆ ಮಳೆ 203 ಮಿಮಿ ಗೆ 151.4 ಮಿಮಿ (ಶೇ.25 ರಷ್ಟು ಕಡಿಮೆ ಮಳೆ) ಮತ್ತು ಆಯನೂರು ಹೋಬಳಿ ವಾಡಿಕೆ ಮಳೆ 216 ಮಿಮಿ ಗೆ 135.8 ಮಿಮಿ (ಶೇ.37ರಷ್ಟು ಕಡಿಮೆ ಮಳೆ) ಬಿದ್ದಿರುತ್ತದೆ.
ಈ ಭಾರಿ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆ ಆಗಿದ್ದರೂ ಸಹ ಸತತವಾಗಿ ಪ್ರತಿದಿನ ಮಳೆ ಆಗುತ್ತಿರುವುದರಿಂದ ಯೂರಿಯಾ ಮೇಲುಗೊಬ್ಬರ ನೀಡುವುದು, ಎಡೆ ಕುಂಟೆ ಹೊಡೆಯುವುದು, ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ತುಂಬಾ ತೊಂದರೆ ಉಂಟಾಗಿರುತ್ತದೆ.
ಈ ನಿಟ್ಟಿನಲ್ಲಿ ರೈತರು ಶಿಫಾರಸ್ಸಿಗಿಂತ ಅತೀ ಹೆಚ್ಚು ಯೂರಿಯಾ ರಸಗೊಬ್ಬರವನ್ನು ಮಳೆಯಲ್ಲಿಯೇ ಅಥವಾ ಕೊಂಚ ಮಳೆ ಕಡಿಮೆಯಾದಾಗ ಕೊಡುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಈ ಹಂತದಲ್ಲಿ ಸಾರಜನಕ ಕೊರತೆ ಕಂಡುಬAದರೂ ಸಹ ಯೂರಿಯಾ ರಸಗೊಬ್ಬರವನ್ನು ಸರಿಯಾಗಿ ಮಣ್ಣಿನಲ್ಲಿ ಸೇರಿಸಲು ಸಾಧ್ಯವಿರದ ಕಾರಣ ಬೆಳೆಗಳು ಶೀತದಿಂದ ಬೇರುಗಳ ಬೆಳವಣಿಗೆ ಕುಂಠಿತವಾಗಿ ಗಿಡಗಳ ಬೆಳವಣಿಗೆಯೂ ಸಹ ಕುಂಠಿತವಾಗಿ ಇಳುವರಿ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ.
ಆದ್ದರಿಂದ ರೈತರು 4 ರಿಂದ 5 ತಾಸು ಮಳೆ ಕಡಿಮೆ ಅದಾಗ ಯೂರಿಯಾ ರಸಗೊಬ್ಬರವನ್ನು ಕೊಡುವ ಬದಲಾಗಿ ನ್ಯಾನೋ ಯೂರಿಯಾ (ಶೇ.20 ಸಾರಜನಕ )-500ಮಿಲಿ ಬಾಟಲಿನಲ್ಲಿ ಲಭ್ಯವಿದ್ದು (ರೂ.225 ದರ) ಅಥವಾ ನ್ಯಾನೋ ಡಿಎಪಿ (ಶೇ.8 ಸಾರಜನಕ ಮತ್ತು ಶೇ.16 ರಂಜಕ)-500 ಮಿಲಿ ಬಾಟಲಿನಲ್ಲಿ ಲಭ್ಯವಿರುವ (ರೂ.600) ದ್ರವ ರೂಪದ ಸಾರಜನಕವನ್ನು ಪ್ರತಿ ಲೀಟರ್ ನೀರಿಗೆ 3 ರಿಂದ 5 ಮಿಲಿ ಬೆರೆಸಿ ಸಿಂಪಡಿಸಲು ಕೋರಿದೆ.
District Agriculture Department ಈ ದ್ರವ ಗೊಬ್ಬರವನ್ನು 30 ರಿಂದ 35 ದಿನಗಳು ಮೊದಲನೇ ಹಂತ ಮತ್ತು 50 ರಿಂದ 60 ದಿನಗಳಲ್ಲಿ ಸಿಂಪಡಿಸುವುದರಿAದ ಪೋಷಕಾಂಶಗಳ ಸದ್ಬಳಕೆಯಾಗಿ ಉತ್ತಮ ಬೆಳೆ ಬೆಳವಣಿಗೆ ಮತ್ತು ಉತ್ತಮ ಇಳುವರಿ ಸಾಧ್ಯವಾಗುತ್ತದೆ. ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಅಧಿಕ ಹರಡುವಿಕೆ ಸಾಮರ್ಥ್ಯ ಹೊಂದಿರುವುದರಿAದ ಇವುಗಳನ್ನು ಇತರೆ ಕೀಟನಾಶಕ, ಶಿಲೀಂಧ್ರನಾಶಕ ಮತ್ತು ನೀರಿನಲ್ಲಿ ಕರಗುವ ರಸಗೊಬ್ಬರಗಳೊಂದಿಗೆ ಸೇರಿಸಿ ಸಿಂಪರಣೆ ಮಾಡಬಹುದಾಗಿದೆ. ಮೇಲು ಗೊಬ್ಬರವಾಗಿ ಬಳಸುವ ಯೂರಿಯಾ ಚೀಲವನ್ನು ಶೇ.50 ರಷ್ಟು ಕಡಿಮೆ ಮಾಡಬಹುದಾಗಿದೆ ಎಂದು ಶಿವಮೊಗ್ಗ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
Rotary Club Shimoga ಗರ್ಭಿಣಿಯರಿಗೆ ಸರ್ಕಾರವು ‘ ತಾಯಿ ಕಾರ್ಡ್ ” ಸೌಲಭ್ಯ ಕಲ್ಪಿಸಿದೆ, ಇದರಿಂದ ತಾಯಿಮಗುವಿನ ಆರೋಗ್ಯದ ಮಾಹಿತಿ- ಡಾ.ಉಮಾ
Rotary Club Shimoga ಗರ್ಭಿಣಿ ಮತ್ತು ಹೊಟ್ಟೆಯಲ್ಲಿರುವ ಮಗುವಿನ ಆರೈಕೆಯು ಅತ್ಯಂತ ಮುಖ್ಯ ಆಗಿರುತ್ತದೆ ಎಂದು ಶರಾವತಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಉಮಾ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಜ್ಯೂಬಿಲಿ ವತಿಯಿಂದ ಆಯೋಜಿಸಿದ್ದ ಮೆಟರ್ನಿಟಿ & ಚೈಲ್ಡ್ ಕೇರ್ ಹೆಲ್ತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗರ್ಭಿಣಿಯು ಮೂರು ತಿಂಗಳು ಆದಾಗ ನೋಂದಾಯಿಸಿಕೊಳ್ಳಬೇಕು. ಉತ್ತಮ ಪೌಷ್ಠಿಕ ಆಹಾರ, ಮಾತ್ರೆ, ಹಣ್ಣುಗಳನ್ನು ಕ್ರಮಬದ್ಧವಾಗಿ ಸ್ವೀಕರಿಸಬೇಕು. ಹೊಸದಾಗಿ ಸರ್ಕಾರ ಕಾರ್ಯಕ್ರಮ ಪ್ರಾರಂಭಿಸಿದ್ದು, ತಾಯಿ ಕಾರ್ಡ್ನಲ್ಲಿ ಅಂಕವನ್ನು ನೀಡುತ್ತಿದ್ದು, ಇದರಿಂದ ತಾಯಿ-ಮಗುವಿನ ಆರೋಗ್ಯ ಗುಣಮಟ್ಟದ ಅರಿವಾಗುತ್ತದೆ ಎಂದು ತಿಳಿಸಿದರು.
ತಾಲೂಕು ಕಾರ್ಯಕ್ರಮ ಅಧಿಕಾರಿ ಡಾ. ಗುಡದಪ್ಪ ಕಸಬಿ ಮಾತನಾಡಿ, ಮಹಿಳೆಯರು, ಮುಂದಿನ ಪ್ರಜೆಗಳಾದ ಮಕ್ಕಳ ಆರೋಗ್ಯಕ್ಕೆ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಅತ್ಯುತ್ತಮ ಕಾರ್ಯಕ್ರಮಗಳ ಸದುಪಯೋಗವನ್ನು ಹಲವಾರು ಪಡೆಯುತ್ತಿದ್ದು, ತಾಯಿ ಕಾರ್ಡಿನಲ್ಲಿರುವ ಅಂಶಗಳನ್ನು, ತಂದೆ-ತಾಯಿ ಅರ್ಥಮಾಡಿಕೊಳ್ಳಬೇಕು. ರೋಟರಿ ಜ್ಯುಬಿಲಿ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
Rotary Club Shimoga ಸಹಾಯಕ ಗವರ್ನರ್ ಕೆ.ಪಿ.ಶೆಟ್ಟಿ ಮಾತನಾಡಿ, ಆರೋಗ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ರೋಟರಿ ಸಂಸ್ಥೆ ಕೋಟ್ಯಾಂತರ ರೂಪಾಯಿಗಳನ್ನು ವಿನಿಯೋಗಿಸುತ್ತಿದೆ. ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ ಎಂದರು.
ರೋಟರಿ ಕ್ಲಬ್ ಶಿವಮೊಗ್ಗ ಜ್ಯುಬಿಲಿ ಅಧ್ಯಕ್ಷ ಬಿ.ಎಸ್.ಅಶ್ವಥ್ ಮಾತನಾಡಿ, ಈಗಾಗಲೇ ನಮ್ಮ ಕ್ಲಬ್ ವತಿಯಿಂದ 30ಕ್ಕಿಂತ ಹೆಚ್ಚು ಉಚಿತ ಕಣ್ಣಿನ ತಪಾಸಣೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ವಿಶ್ವಾದ್ಯಂತ ಈ ತಿಂಗಳ ಕಾರ್ಯಕ್ರಮವಾಗಿ ತಾಯಿ-ಮಗು ಆರೋಗ್ಯ ಕುರಿತು ಜನಜಾಗೃತಿ ನಡೆಸಲಾಗುತ್ತಿದೆ ಎಂದರು.
ಎಲ್ಲರಿಗೂ ಪೌಷ್ಠಿಕ ಆಹಾರದ ಪೊಟ್ಟಣವನ್ನು ರೋಟರಿ ಸದಸ್ಯರು ನೀಡಿದರು. ಎಸ್.ಎಸ್.ವಾಗೇಶ್ ಸ್ವಾಗತಿಸಿದರು, ಕಾರ್ಯದರ್ಶಿ ರೇವಣ ಸಿದ್ದಪ್ಪ ವಂದಿಸಿದರು, ಭಾರದ್ವಾಜ್, ಎನ್.ವಿ.ಭಟ್, ಉಮಾದೇವಿ ಇತರ ಸದಸ್ಯರು ಭಾಗವಹಿಸಿದ್ದರು.
Shivamogga Police ಪೊಲೀಸರು ತಾಳ್ಮೆಯಿಂದ ಜನರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಬೇಕು- ನ್ಯಾ. ಮಂಜುನಾಥ ನಾಯಕ್
Shivamogga Police ಮನೆ ಮನೆಗೆ ಪೊಲೀಸ್’ ಸೇವೆ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಪೊಲೀಸರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಬೇಕು ಹಾಗೂ ಜನರು ಕೂಡ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ತಿಳಿಸಿದರು.
ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರೊಂದಿಗೆ ಪೊಲೀಸ್ ಇಲಾಖೆಯ ಉತ್ತಮ ಹಾಗೂ ಸ್ನೇಹಪರ ಸಂಬಂಧವನ್ನು ಬೆಸೆದು ಸೌಹಾರ್ದ ಸಮಾಜ ನಿರ್ಮಿಸುವ ಉದ್ದೇಶದಿಂದ ನಗರದ ರಾಮಣ್ಣ ಶೆಟ್ಟಿ ಪಾರ್ಕ್ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೊಲೀಸರು ಮನೆಗೆ ಬರುವುದು, ಜನರು ಪೊಲೀಸ್ ಠಾಣೆಗೆ ಹೋಗುವುದನ್ನು ಯಾರೂ ಅಪೇಕ್ಷಿಸುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ಆಡಳಿತ ಸ್ನೇಹಿಯಾಗಿಸಲು ಸರ್ಕಾರ ಮುಂದಾಗಿದ್ದು ಗೃಹ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು.
ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿ ಇರುವ ಹೆದರಿಕೆ ತೊಲಗಬೇಕು. ಈ ಯೋಜನೆಯಡಿ ಸ್ಥಳೀಯ ಪೊಲೀಸ್ ಸಿಬ್ಬಂದಿಗಳು ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸುವುದು ಸ್ವಾಗತಾರ್ಹ. ಮನೆಗಳಿಗೆ ಭೇಟಿ ನೀಡುವ ವೇಳೆ ಸಮವಸ್ತç ಧರಿಸದಿದ್ದರೆ ಉತ್ತಮ. ಹಾಗೂ ಮಕ್ಕಳೊಂದಿಗೆ ಸ್ನೇಹದಿಂದ ಮಾತನಾಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸಲಹೆ ನೀಡಿದ ಅವರು ಜನರ ಮಾತನ್ನು ತಾಳ್ಮೆಯಿಂದ ಆಲಿಸಿ, ಸ್ಪಂದಿಸಬೇಕು ಎಂದರು.
ಸಾರ್ವಜನಿಕರು ಕೂಡ ಪೊಲೀಸರು ನೀಡುವ ಸಲಹೆ ಸೂಚನೆಗಳನ್ನು ಹಾಗೂ ನಿಯಮಗಳನ್ನು ಪಾಲಿಸುವ ಮೂಲಕ ಅವರೊಂದಿಗೆ ಸಹಕರಿಸಬೇಕು. ಈ ವಿನೂತನ ಕಾರ್ಯಕ್ರಮ ಬಹಳಷ್ಟು ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ಜನರು ಮತ್ತು ಪೊಲೀಸರು ಇಬ್ಬರೂ ಕೂಡ ಒಬ್ಬರನ್ನೊಬ್ಬರು ಸಹಕರಿಸಬೇಕು ಎಂದರು.
Shivamogga Police ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮಾತನಾಡಿ, ಪೊಲೀಸರು ಎಂದರೆ ಮೊದಲಿನಿಂದಲೂ ಒಂದು ರೀತಿಯ ಭಯ ಮತ್ತು ಅಸಡ್ಡೆ ಇದೆ. ಇದಕ್ಕೆ ಕಾರಣ ಸ್ವಾತಂತ್ರ‍್ಯ ಹೋರಾಟದ ಸಮಯದಲ್ಲಿ ಬ್ರಿಟಿಷರು ಜನರ ಮೇಲೆ ನಿಯಂತ್ರಣ ಸಾಧಿಸಲು ಅನುಸರಿಸುತ್ತಿದ್ದ ಕ್ರಮ. ಈ ಬ್ರಿಟಿಷ್ ಲೆಗೆಸಿ ಭಯ ಈಗಲೂ ಇದೆ. ಇದನ್ನು ಹೋಗಲಾಡಿಸಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಸಾಮಾನ್ಯವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿಗೆ ಸಂಬAಧಿಸಿದAತೆ ಸಾಕಷ್ಟು ಒಡನಾಟ ಇರುವವರಲ್ಲಿ ಈ ವ್ಯವಸ್ಥೆ ಬಗ್ಗೆ ಶೇ.90 ರಷ್ಟು ಉತ್ತಮ ಪ್ರತಿಕ್ರಿಯೆ ಇದೆ. ಅದೇ ಈ ರೀತಿ ಸಿನೆಮಾ ಮತ್ತು ಸೀರಿಯಲ್‌ನಲ್ಲಿನ ಪೊಲೀಸ್ ವ್ಯವಸ್ಥೆ ನೋಡಿದವರಲ್ಲಿ ಪೊಲೀಸ್ ಇಲಾಖೆ ಬಗ್ಗೆ ಕೆಟ್ಟ ಅಭಿಪ್ರಾಯವೂ ಸಾಕಷ್ಟಿದೆ.
ಸರ್ಕಾರವು ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ಸೌಹರ್ದಯುತ ಸಮಾಜ ನಿರ್ಮಿಸಲು ಈ ಯೋಜನೆ ಜಾರಿಗೆ ತಂದಿದೆ. ಈ ಮುಂಚೆಯೂ ಬೀಟ್ ಮತ್ತು ಸಬ್ ಬೀಟ್ ವ್ಯವಸ್ಥೆ ಇತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದಿನ ಮೈಕ್ರೊ ಲೆವೆಲ್ ಇದು. ಜನರು ಮತ್ತು ಪೊಲೀಸರು ಸ್ಥಳೀಯವಾಗಿ ನಡೆಯುವ ಹಲವಾರು ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಅರಿವು ಮೂಡುತ್ತದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಜನರಲ್ಲಿ ಸುರಕ್ಷತಾ ಭಾವ ಸೃಷ್ಟಿಯಾಗುತ್ತದೆ. ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ ವೇಳೆ ಏನೇ ಸಮಸ್ಯೆ ಇದ್ದರೂ ಮುಕ್ತವಾಗಿ ತಿಳಿಸಬೇಕು. ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಅವರು ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಒಳ್ಳೆಯ ಸಂಬAಧ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸಲು ಇಲಾಖೆ ನಗರ ಪ್ರದೇಶದಲ್ಲಿ ಮೊಹಲ್ಲಾ ಸಭೆ, ಗ್ರಾಮಗಳಲ್ಲಿ ಬೀಟ್ ಮಾಡುತ್ತಲಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಶುರುವಾಗಿದೆ. ಈ ಯೋಜನೆಯನ್ವಯ 50-60 ಮನೆಗಳ ಸಮೂಹ ರಚಿಸಿ, ಪ್ರತಿ ಬೀಟ್ ಪೊಲೀಸ್‌ಗೆ ಆಯಾ ಜವಾಬ್ದಾರಿ ನೀಡಿ, ಸಾರ್ವಜನಿಕರೊಂದಿಗೆ ಸಂವಾದ ಮಾಡಲಾಗುತ್ತದೆ. ಓಣಿ ಓಣಿಗೆ ಪೊಲೀಸರು ಬಂದು ಮಾತನಾಡುತ್ತಾರೆ. ಸಮಸ್ಯೆಗಳಿದ್ದರೆ ಠಾಣಾ ವ್ಯಾಪ್ತಿ, ಉಪವಿಭಾಗ ಹೀಗೆ ವಿವಿಧ ಹಂತಗಳಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಭದ್ರತೆ, ಸುರಕ್ಷತೆ, ಅಪರಾಧಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಪ್ರತಿ ತಿಂಗಳ 2ನೇ ಶನಿವಾರದಂದು ಆಯಾ ಠಾಣಾ ವ್ಯಾಪ್ತಿಗಳಲ್ಲಿನ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮ ಕುರಿತಾದ ಕರಪತ್ರ, ಬೀಟ್ ಬುಕ್ ಬಿಡುಗಡೆ ಮಾಡಲಾಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ, ರಾಮಣ್ಣ ಶೆಟ್ಟಿ ಗಣಪತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಇತರೆ ಅಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.
Ishwar Khandre ಮೂಲಭೂತ ಸೌಕರ್ಯ ಪೂರೈಕೆಗೆ ಅಡ್ಡಿಮಾಡದೇ ಅರಣ್ಯ ಹಿತಾಸಕ್ತಿ ಕಾಯ್ದುಕೊಳ್ಳಿ- ಸಚಿವ ಚಲುವರಾಯ ಸ್ವಾಮಿ
Ishwar Khandre ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಹಿತಾಸಕ್ತಿ ಹಾಗೂ ಅರಣ್ಯ ಸಂರಕ್ಷಣೆಗಳೆರೆಡೂ ಮುಖ್ಯ.ಸಮತೋಲನ ಕಾಯ್ದುಕೋಂಡು ಪರಸ್ಪರ ಸಮನ್ವಯದಿಂದ ಯೋಜನೆಗಳನ್ನು ಅನುಷ್ಠಾನ ಗೊಳಿಸಿ ಎಂದು ಕೃಷಿ ಸಚಿವರು ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ.
ವಿಧಾ ಸೌಧದ ಸಮಿತಿ ಕೊಠಡಿಯಲ್ಲಿ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರ ಉಪಸ್ಥಿತಿಯಲ್ಲಿ ಮಂಡ್ಯ ಜಿಲ್ಲೆಯ ಜನ ಪ್ರತಿನಿಧಿಗಳು ಹಾಗೂ ಕಂದಾಯ ಅರಣ್ಯ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಕೃಷಿ ಸಚಿವರು ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಸಂದರ್ಭಗಳಲ್ಲಿ ಅರಣ್ಯದ ವಿಚಾರವಾಗಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು ಉಬಯ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದು ಹಲವು ಸಲಹೆ, ಸೂಚನೆ ನಿರ್ದೇಶನಗಳನ್ನು ನೀಡಿದರು.
ಅರಣ್ಯ ನಿಯಮಾವಳಿಗಳ ಬಗ್ಗೆ ಸರ್ವೊಚ್ಚ ನ್ಯಾಯಾಲಯ ಬಿಗಿ ನಿಲುವು ಹೊಂದಿರುವುದು ಗಮನಾರ್ಹ ಅದರೆ ಕುಡಿಯುವ ನೀರು,ವಿದ್ಯುತ್ ಸಂಪರ್ಕಗಳಂತಹ ಮೂಲಭೂತ ಸೌಕರ್ಯಗಳಿಗೆ ಮಾನವೀಯ ದೃಷ್ಟಿ ಅಗತ್ಯ ಎಂದು ಚಲುವರಾಯಸ್ವಾಮಿ ಹೇಳಿದರು.
ಕುಡಿಯುವ ನೀರು ವಿದ್ಯುತ್ ಸರಬರಾಜಿನಂತಹ ಮೂಲಭೂತ ಸೌಕರ್ಯ ಪೂರೈಕೆಗೆ ಅಡ್ಡಿ ಮಾಡಡೆ ಅರಣ್ಯ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಹಂಗರಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪರಿಭಾವಿತ ಅರಣ್ಯ ಪ್ರದೇಶಗಳ ನಕಾಶೆ ಸರಿಪಡಿಸಬೇಕಿದೆ ಎಂದು ಅಧಿಕಾರಿಗಳು ಶಾಸಕರು ಅಭಿಪ್ರಾಯ ಪಟ್ಟಿದ್ದು ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೆ ನಡೆಸಿ ಗೊಂದಲಗಳನ್ನು ಇತ್ಯರ್ಥ ಪಡಿಸುವಂತೆ ಸೂಚಿಸಲಾಯಿತು.
Ishwar Khandre ಬೆಂಗಳೂರು ಸೋಮವಾರ ಪೇಟೆ ರಾಜ್ಯ ಹೆದ್ದಾರಿ ಕಾಮಗಾರಿ, ವಿವಿಧ ರಸ್ತೆ ಕಾಮಗಾರಿಗಳು ನೀರು ಸರಬರಾಜು ಯೋಜನೆಗಳ ಅನುಷ್ಠಾನಕ್ಕೆ ಉಂಟಾಗಿರುವ ಅಡ್ಡಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಅಧಿಕಾರಿಗಳು ನಿಯಮಾವಳಿಗಳ ವ್ಯಾಪ್ತಿಯೊಳಗೆ ಇರುವ ಪರಿಹಾರ ಮಾರ್ಗಗಳನ್ನು ಕಂಡಕೊಳ್ಳುಬೇಕು. ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಹಾಗೂ ಮಾನವ ವನ್ಯಜೀವಿ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಿ ಎಂದು ಸಚಿವರಾದ ಎನ್. ಚಲುವರಾಯಸ್ವಾಮಿ ಹಾಗೂ ಈಶ್ವರ್ ಖಂಡ್ರೆ ಅವರು ನಿರ್ದೇಶನ ನೀಡಿದರು.
ನಿಯಮಾವಳಿಗಳ ಒಳಗೆ ರಾಜ್ಯ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಪರಿಹಾರದ ಕ್ರಮಗಳು,ಬದಲಿ ಜಾಗ ಪಡೆದು ಮಾಡಬಹುದಾದ ಮಾರ್ಪಾಡುಗಳ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಅರಣ್ಯ ಸಚಿವರಾದ ಈಶ್ಚರ್ ಖಂಡ್ರೆ ಸೂಚನೆ ನೀಡಿದರು
ಮಂಡ್ಯ ಜಿಲ್ಲಾಧಿಕಾರಿ ಕುಮಾರ್ ಅವರು ಜಿಲ್ಲೆಯ ವ್ಯಾಪ್ತಿ ಅರಣ್ಯ ಇಲಾಖೆಯಿಂದ ಅನುಮತಿ ಬೇಕಿರುವ ಕಾಮಗಾರಿಗಳ ವಿವರ ಮಂಡಿಸಿದರು.
ಚೆಸ್ಕಾಂ ಅಧ್ಯಕ್ಷರು ಹಾಗೂ ಶ್ರವಣಬೆಳಗೊಳ ಶಾಸಕರಾದ ರಮೇಶ್ ಬಂಡಿ ಸಿದ್ದೇಗೌಡ, ಶಾಸಕರಾರ ಉದಯ್ ಗೌಡ ,ದರ್ಶನ್ ಪುಟ್ಟಣಯ್ಯ,ರವಿ ಗೌಡ, ಹೆಚ್.ಟಿ ಮಂಜು, ಮಧುಮಾದೇಗೌಡ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
