Thursday, June 12, 2025
Thursday, June 12, 2025

Lions International Club ರಕ್ತದಾನದಿಂದ ಪರರ ಜೀವದ ಉಳಿವು ಮತ್ತು ದಾನಿಯ ಆರೋಗ್ಯ ರಕ್ಷಣೆಯಾಗುತ್ತದೆ- ಡಾ.ವಿಜಯ್ ಕುಮಾರ್

Date:

Lions International Club ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರೆ ಇನ್ನೊಂದು ಜೀವ ಉಳಿಸುವ ಜೊತೆಗೆ ಶರೀರವನ್ನು ಮಾರಕ ಕಾಯಿಲೆಗಳಿಂದ ತಡೆಗಟ್ಟಲು ಸಾಧ್ಯ ಎಂದು ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್‌ಕುಮಾರ್ ಹೇಳಿದರು.

ಶಿವಮೊಗ್ಗ ನಗರದ ಬೈಪಾಸ್ ಸಮೀಪದ ಬಿ.ಎಡ್ ಕಾಲೇಜಿನಲ್ಲಿ ಎಂ.ಎಲ್.ಎಂ.ಎನ್. ಶಿಕ್ಷಣ ಕಾಲೇಜು, ಲಯನ್ಸ್ ಅಂತರಾಷ್ಟ್ರೀಯ ಕ್ಲಬ್ ಹಾಗೂ ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಕ್ತದಾನದಿಂದ ಜೀವ ಉಳಿಸುವುದು ಮಾತ್ರವಲ್ಲದೇ ರಕ್ತದಾನಿಗಳಿಗೂ ಹೃದಯ ಸಂಬಂಧಿ ಕಾಯಿಲೆಗಳ ನಿವಾರಣೆ, ಮಾನಸಿಕ ಒತ್ತಡಗಳಿಂದ ಮುಕ್ತಿ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸ್ವಯಂ ಪ್ರೇರಿತವಾಗಿ ರಕ್ತದಾನಕ್ಕೆ ಮುಂದಾದರೆ ಆರೋಗ್ಯಯುತ ಬದುಕು ನಿಮ್ಮದಾಗಲಿದೆ ಎಂದು ಹೇಳಿದರು.

ಪ್ರಸ್ತುತ ದೃಶ್ಯಮಾಧ್ಯಮಗಳಲ್ಲಿ ಗಮನಿಸುವುದಾದರೆ ಪ್ರಪಂಚದ ಕೆಲವು ದೇಶಗಳು ನೆರೆದೇಶಗಳ ಮೇಲೆ ದಾಳಿ ನಡೆಸಿದ ಪರಿಣಾಮ ಹಲವಾರು ಮುಗ್ದರು ಹಾಗೂ ಸೈನಿಕರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದು ಬಹುತೇಕರು ಸೂಕ್ತ ಸಮಯಕ್ಕೆ ರಕ್ತ ಸಿಗದೇ ಸಾವಪ್ಪಿರುವ ಸಂಖ್ಯೆ ಹೆಚ್ಚಿದೆ. ಇದನ್ನು ನಿವಾರಿಸುವ ಸಲುವಾಗಿ ಪ್ರಪಂಚದ ರಕ್ತನಿಧಿ ಬ್ಯಾಂಕ್‌ಗಳು ವಿವಿಧ ದೇಶಗಳಲ್ಲಿ ರಕ್ತಕ್ಕಾಗಿ ಬೇಡಿಕೆಯಿಟ್ಟಿವೆ ಎಂದು ಹೇಳಿದರು.

ಜೀವ ಉಳಿಸುವ ಸಂದರ್ಭದಲ್ಲಿ ಪ್ರತಿಯೊಬ್ಬರು ಮನುಷ್ಯಧರ್ಮ ಪಾಲನೆ ಮಾಡಬೇಕು. ಸಮಯಕ್ಕೆ ಸರಿ ಯಾಗಿ ರಕ್ತ ಒದಗಿಸುವ ವ್ಯವಸ್ಥೆ ಅಥವಾ ಖುದ್ದಾಗಿ ನೀಡಲು ಮುಂದಾದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ರಕ್ತದಾನ ಪ್ರತಿಯೊಬ್ಬರಿಗೂ ತಿಳಿಸುವ ಮೂಲಕ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.
ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ|| ಮೋಹನ್‌ಕುಮಾರ್ ಮಾತನಾಡಿ ರಕ್ತವನ್ನು ಕೃತಕ ವಾಗಿ ಸೃಷ್ಟಿಮಾಡಲು ಅಸಾಧ್ಯವಾದುದರಿಂದ ಅದನ್ನು ಮನುಷ್ಯರಿಂದಲೇ ದಾನವಾಗಿಯೇ ಪಡೆಯಬೇಕು. ರಕ್ತ ದಾನವು ಮಹಾದಾನವಾಗಿದೆ. ರಕ್ತದಾನ ಮಾಡಿದವರಿಂದ ಜೀವ ಉಳಿಸುವ ಸಾರ್ಥಕತೆಯನ್ನು ಪಡೆಯುತ್ತಾರೆ ಎಂದು ತಿಳಿಸಿದರು.

ರಕ್ತದಾನದಿಂದ ತುರ್ತು ಸನ್ನಿವೇಶದಲ್ಲಿ ಹಲವರ ಜೀವ ಉಳಿಸಬಹುದು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿರಬೇಕು. ಅದೇ ರಕ್ತದಾನಕ್ಕೆ ಪ್ರೇರಣೆಯಾಗಬೇಕು. ಆ ನಿಟ್ಟಿನಲ್ಲಿ ಯುವಕರು ಅತಿಹೆಚ್ಚು ಸಂಖ್ಯೆಯಲ್ಲಿ ರಕ್ತ ದಾನ ಮಾಡಿದರೆ ಯಾವುದೇ ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.

Lions International Club ಎಂ.ಎಲ್.ಎಂ.ಎನ್. ಶಿಕ್ಷಣ ಕಾಲೇಜು ಪ್ರಾಂಶುಪಾಲ ಡಾ|| ಜಿ.ಎಂ.ಗಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಬಿ.ಎಡ್ ಕಾಲೇಜು ಸ್ಥಾಪನೆಯಾಗಿ ಸುಮಾರು ನಾಲ್ಕು ದಶಕಗಳೇ ಕಳದಿವೆ. ಇದೇ ಮೊದಲ ಬಾರಿಗೆ ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಗುಣಾತ್ಮಕ ಕಾರ್ಯ ಕ್ರಮಗಳನ್ನು ರೂಪಿಸುವ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ರಮೇಶ್ ರಕ್ತದಾನ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಲಯನ್ಸ್ ಮಾಡಿಕೊಂಡು ಬಂದಿದೆ.

ಪ್ರಸ್ತುತ ಯುವಕರಲ್ಲಿ ರಕ್ತದಾನ ಕ್ಕೆ ಪ್ರೇರೇಪಿಸುವ ಮೂಲಕ ಒಟ್ಟು 500 ಯುನಿಟ್ ಸಂಗ್ರಹಿಸಿ ರಕ್ತನಿಧಿ ಕೇಂದ್ರಕ್ಕೆ ಬಳಕೆಗೆ ನೀಡಲು ಶಿಬಿರವನ್ನು ಆಯೋಜಿಸಿ ಮುನ್ನಡೆಸುತ್ತಿದ್ದು ಇದೀಗ ೧೯೩ ಯುನಿಟ್ ರಕ್ತಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ರಕ್ತನಿಧಿ ಕೇಂದ್ರದ ಹಿರಿಯ ವೈದ್ಯ ಡಾ|| ಮುರುಳಿಧರ್ ರಕ್ತದಾನದಿಂದಾಗುವ ಉಪಯೋಗ ವನ್ನು ಪ್ರಶಿಕ್ಷಾರ್ಥಿಗಳಿಗೆ ವಿವರಿಸಿದರು. ಬಳಿಕ ೪೧ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಮಲೆನಾಡು ವಿದ್ಯಾಸಂಸ್ಥೆ ಉಪಾಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ, ವ್ಯವಸ್ಥಾಪಕಿ ಲಕ್ಷ್ಮೀ, ಎಂ.ಎಲ್.ಎಂ.ಎನ್. ಸಾಹಿತಿ ನಾಗರಾಜ್ ರಾವ್ ಕಲ್ಕಟ್ಟೆ ಉಪಸ್ಥಿತರಿದ್ದರು.

ಪ್ರಶಿಕ್ಷಣಾರ್ಥಿ ಶ್ರೀಮತಿ ರಮ್ಯ ಎಸ್.ರಾವ್ ಪ್ರಾರ್ಥಿಸಿದರು. ಕು.ಹರ್ಷಿತಾ ನಿರೂಪಿಸಿದರು. ಡಾ|| ಗಣೇಶ್ ಸ್ವಾಗತಿಸಿದರು. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರುದ್ರಪ್ಪ ಎನ್ ತಳವಾರ್ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪರಿಚಿತ ವ್ಯಕ್ತಿ ಸಾವು

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ...

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು...

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ...

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು...