Thursday, June 18, 2026
Thursday, June 18, 2026

Aam Aadmi Party ಅನೇಕ ಭಾಗಗಳಲ್ಲಿ ಬರ ಬಂದಿದೆ.ಕೇವಲ ಘೋಷಣೆ ಸಾಲದು ಪರಿಹಾರ ಕೈಗೊಳ್ಳಿ- ಡಾ.ಸುಂದರಗೌಡ

Date:

Aam Aadmi Party ನಾಡಿನ ರೈತರು ಬರಪೀಡಿತದಿಂದ ಅನುಭವಿಸುತ್ತಿರುವ ಸಂದರ್ಭದಲ್ಲಿ ರಾಜ್ಯಸರ್ಕಾರ ಪರಿಹಾರ ನೀಡುವ ಬಗ್ಗೆ ಚಿಂತಿಸುವ ಬದಲು ಘೋಷಿಸಿದರೆ ರೈತರ ಬದುಕು ಎಂದಿಗೂ ಹಸನಾಗಲು ಸಾಧ್ಯವಿಲ್ಲ ಎಂದು ಆಮ್‌ಆದ್ಮಿ ಜಿಲ್ಲಾ ಮಾಧ್ಯಮ ಉಸ್ತುವಾರಿ ಡಾ|| ಕೆ.ಸುಂದರಗೌಡ ಹೇಳಿದ್ದಾರೆ.

ಈ ಸಂಬಂಧ ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಯಲುಸೀಮೆಯ ಅನೇಕ ಭಾಗಗಳಲ್ಲಿ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ರೈತರ ಮುಂದಿನ ಜೀವನಕ್ಕೆ ರಾಜ್ಯಸರ್ಕಾರ ಸವಲತ್ತುಗಳನ್ನು ಒದಗಿಸುವ ಬದಲು ಘೋಷಣೆಯಿಂದ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಬಯಲುನಾಡಿನ ಮುಖ್ಯ ಕೃಷಿ ಉತ್ಪನ್ನವು ಕೊಬ್ಬರಿಯಾಗಿದೆ. ಕಡೂರಿನಲ್ಲಿ ಕಳೆದ ವರ್ಷ 20 ಸಾವಿರ ಕ್ವಿಂಟಾಲ್ ಕೊಬ್ಬರಿಯನ್ನು 8 ಸಾವಿರಕ್ಕೆ ಇಳಿಸಿರುವುದು ಸರ್ಕಾರದ ಬರ ಪರಿಹಾರದ ತೀವ್ರತೆಗೆ ಹಿಡಿದ ಕೈಗನ್ನಡಿ ಯಾಗಿದ್ದು ಕೊಬ್ಬರಿ ಉತ್ಪತ್ತಿ ತೀವ್ರಗತಿಯಲ್ಲಿ ಇಳಿಮುಖವನ್ನು ಕಂಡಿರುವುದು ರೈತರ ಆತ್ಮಹತ್ಯಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ರೈತರು ತೀವ್ರ ಬರವನ್ನು ಅನುಭವಿಸುತ್ತಿರುವ ಸಮಯದಲ್ಲಿ ಬ್ಯಾಂಕಿನವರು, ಮೈಕ್ರೋ ಫೈನಾನ್ಸ್ ನವರು ಹಿಂಸಿಸುವುದರಿಂದ ರೈತ ಮಹಿಳೆಯರು ಕೂಡಾ ಆತ್ಮಹತ್ಯೆಗೆ ಬಲಿಯಾಗಿದ್ದಾರೆ, ರೈತರ ಸ್ವಾಭಿಮಾನ ಮತ್ತು ಸ್ವಾವಲಂಬನೆಯನ್ನು ಕಾಪಾಡುವಲ್ಲಿ ರಾಜ್ಯಸರ್ಕಾರ ವಿಫಲತೆ ಕಾಣಲಾಗುತ್ತಿದೆ ಎಂದು ದೂರಿದ್ದಾರೆ.

Aam Aadmi Party ಇದರ ನಡುವೆ ಮದ್ಯ ಮತ್ತು ವಿದ್ಯುಚ್ಚಕ್ತಿಯ ದುಬಾರಿತನದಿಂದ ಮದ್ಯವನ್ನು ಪ್ರತಿ ಗ್ರಾಮ ಪಂಚಾಯಿತಿ ಮಟ್ಟ ದಲ್ಲಿ ತೆರೆಯಲು ಮುಂದಾಗಿರುವುದು ರೈತರ ಶಕ್ತಿಗುಂದಿಸುವ ಮೂಲಕ ಮಾನವ ಶಕ್ತಿಯ ನಾಶಕ್ಕೆ ಸರ್ಕಾರ ಮುಂದಾಗಿರುವುದಕ್ಕೆ ನಿದರ್ಶನವಾಗಿದೆ. ಇನ್ನೊಂದೆಡೆ ವ್ಯಸಮುಕ್ತ ಚಟುವಟಿಕೆ ನಡೆಸಲು ಕರೆ ನೀಡುವ ಸರ್ಕಾರ ಮತ್ತೊಂದೆಡೆ ಮದ್ಯದಾಸರಾಗಲು ಗ್ರಾ.ಪಂ.ಗಳಲ್ಲಿ ತೆರೆಯಲು ಮುಂದಾಗಿರುವುದು ಸರಿಯಿಲ್ಲ.
ವಿದ್ಯುತ್ ಉಚಿತವಾಗಿ ನೀಡುತ್ತೇವೆಂದು ಗ್ರಾಮೀಣ ಜನರಿಂದ ಲೋಡ್‌ಶೆಡ್ಡಿಂಗ್ ಮಾಡುವ ಮುಖಾಂತರ ಉತ್ಪತ್ತಿ ಕುಗ್ಗಿಸುವುದೇ ಸರ್ಕಾರದ ಗುರಿಯೇ.ಇಷ್ಟೆಲ್ಲಾ ಸಾಮಾನ್ಯಜನತೆಗೆ ಉಚಿತವೆಂದು ಹೇಳುವ ಮೂಲಕ ಕಂಡಿಷನ್, ಕಡಿವಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಇನ್ನೆಷ್ಟು ದಿನ ಅಧಿಕಾರದಲ್ಲಿ ಮುಂದುವರೆಯಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...

ಸಮಾನತೆ, ಸ್ವಾವಲಂಬನೆ ಸಾಧಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಅಪಾರ : ಶ್ರೀರಂಭಾಪುರಿಶ್ರೀ

ಸಮಾನತೆ, ಸ್ವಾವಲಂಬನೆ ಸಾಧನೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವವಾದದು. ಅಭಿವೃದ್ಧಿಯನ್ನು ಸಾಧಿಸಲು...