Wednesday, August 12, 2026
Wednesday, August 12, 2026
Home Blog Page 230

Madhu Bangarappa ಜಿರಲೆಕೊಪ್ಪದಲ್ಲಿ ಸಚಿವ ಮಧು ಬಂಗಾರಪ್ಪ ನೇರ ಜನರೊಂದಿಗೆ ಬೆರೆತು ಸಮಸ್ಯೆ ಆಲಿಸಿದರು

0

Madhu Bangarappa ಸೊರಬ ತಾಲೂಕಿನ ಜಿರಲೆಕೊಪ್ಪ ಗ್ರಾಮದಲ್ಲಿ ಜನವರಿ 11 ರಂದು “ಜನಸಂಪರ್ಕ ಸಭೆ”ಯನ್ನು ನಡೆಯಿತು.

ಜನರಿಂದ ನೇರವಾಗಿ ಸಚಿವ ಮಧುಬಂಗಾರಪ್ಪ ಅಹವಾಲು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಂದಂತಹ ದೂರುಗಳನ್ನು ಪರಿಶೀಲಿಸಿದರು. ಸ್ಥಳದಲ್ಲೇ ಅನೇಕರಿಗೆ ಪರಿಹಾರ ಒದಗಿಸಲಾಯಿತು.

ಕಾನೂನಿನ ಮಿತಿಯೊಳಗಿದ್ದ ಕೆಲವು ಅರ್ಜಿಗಳನ್ನು ಹೊರತುಪಡಿಸಿ ಉಳಿದವರೆಲ್ಲರ ಅರ್ಜಿಗಳನ್ನು ಕಾಲ ಮಿತಿಯೊಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಸೂಕ್ತ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದಾಗಿ ಸಚಿವ ಮಧು ಬಂಗಾರಪ್ಪ ತಿಳಿಸಿದರು

Madhu Bangarappa ಸಭೆಯಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವೀರೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.

ಹೊಸನಗರ ತಾಲ್ಲೂಕು ಯಡೂರಿನಲ್ಲಿ ಚಿರತೆಯ ಕಳೆವರ ಪತ್ತೆ

0

ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ ಚಿರತೆಯೊಂದರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.

ಅರಣ್ಯ ಸಿಬ್ಬಂದಿ ಗಸ್ತು ಕಾರ್ಯದಲ್ಲಿ ನಿರತರಾಗಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ, ಸುಮಾರು ಐದು ವರ್ಷದ ಪ್ರಾಯದ ಚಿರತೆ ಎಂದು ಹೇಳಲಾಗಿದೆ.

ಮೇಲ್ನೋಟಕ್ಕೆ ಇದು ಸ್ವಾಭಾವಿಕ ಸಾವಾಗಿರಬಹುದೆಂದು ಎಂದು ತಿಳಿಸಿದ ಅರಣ್ಯ ಇಲಾಖೆ ತಿಳಿಸಿದ್ದು, ಈ ಕುರಿತು ಅರಣ್ಯ ಇಲಾಖೆ ಸಿಬ್ಬಂದಿ ಆರ್‌ಎಫ್‌ಒ ದಾಖಲಸಿಕೊಂಡಿದ್ದಾರೆ.

ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಚಿರತೆಯ ಮೃತದೇಹ ಪತ್ತೆಯಾದ ಸ್ಥಳದಲ್ಲೇ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಗಿದೆ

ಈ ವೇಳೆ ತಹಸೀಲ್ದಾರ್ ಭರತ್ ರಾಜ್, ಎಸಿಎಫ್ ಮೋಹನ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Aghanashini ಅಘನಾಶಿನಿಗೆ ಬಂದಿದೆ ಕುತ್ತು. ಪ್ರಕೃತಿಯ ವರ ಕಾಪಾಡೋಣಲೇ:ಡಾ.ರವಿಕಿರಣ್ ಪಟವರ್ಧನ್.ಶಿರಸಿ

0

Aghanashini ಅಘನಾಶಿನಿ ನದಿಯು ಭಾರತದ ಪರ್ಯಾಯ ದ್ವೀಪದ (Peninsular India) ಅತ್ಯಂತ ಪ್ರಮುಖ ಮತ್ತು ಕೊನೆಯ ಅಣೆಕಟ್ಟು ರಹಿತ (Free-flowing) ನದಿಗಳಲ್ಲಿ ಒಂದಾಗಿದೆ. ಈ ನದಿಯು ಕೇವಲ ಒಂದು ಜಲಮೂಲವಲ್ಲ, ಇದೊಂದು ಸಂಪೂರ್ಣ ಪರಿಸರ ವ್ಯವಸ್ಥೆ (Ecosystem).

​1. ನದಿಯ ಮೂಲ ಮತ್ತು ಭೌಗೋಳಿಕ ಹಾದಿ

  • ​ಮೂಲ: ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ‘ಶಂಕರಹೊಂಡ’ದಲ್ಲಿ ಉಗಮಿಸುತ್ತದೆ.ಅಂದರೆ ಶಿರಸಿ ಅಘನಾಶಿನಿಯ ತವರು.
  • ​ಹರಿವು: ಸುಮಾರು 124 ಕಿ.ಮೀ ವರೆಗೆ ಯಾವುದೇ ಅಡೆತಡೆಯಿಲ್ಲದೆ ಹರಿದು ಕುಮಟಾ ತಾಲೂಕಿನಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.
  • ​ವಿಶೇಷತೆ: ಮಲೆನಾಡಿನ ಕಡಿದಾದ ಕಣಿವೆಗಳಲ್ಲಿ ಹರಿಯುವ ಈ ನದಿಯು ಸುಮಾರು 116 ಮೀಟರ್ ಎತ್ತರದಿಂದ ಧುಮುಕಿ ವಿಶ್ವಪ್ರಸಿದ್ಧ ಉಂಚಳ್ಳಿ ಜಲಪಾತವನ್ನು ಸೃಷ್ಟಿಸುತ್ತದೆ. ಇದರ ಶಬ್ದವು ಅತ್ಯಂತ ರಭಸವಾಗಿರುವುದರಿಂದ ಇದನ್ನು ‘ಕೆಪ್ಪ ಜೋಗ’ ಎಂದೂ ಕರೆಯುತ್ತಾರೆ.
    ​2. ‘ರಾಮ್‌ಸರ್’ ಮಾನ್ಯತೆ ಮತ್ತು ಜೈವಿಕ ಸಂಪತ್ತು
    ​2024ರಲ್ಲಿ ಅಘನಾಶಿನಿ ಅಳಿವೆಯನ್ನು ಅಂತರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ರಾಮ್‌ಸರ್ ತಾಣ (Ramsar Site) ಎಂದು ಘೋಷಿಸಲಾಗಿದೆ.
  • ​ಮ್ಯಾಂಗ್ರೋವ್ ಕಾಡುಗಳು: 120 ಹೆಕ್ಟೇರ್‌ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿರುವ ಕಂಡ್ಲಾ ಕಾಡುಗಳು ಸಮುದ್ರದ ಅಲೆಗಳಿಂದ ಭೂಮಿಯನ್ನು ರಕ್ಷಿಸುತ್ತವೆ. ಇವು ವಾತಾವರಣದ ಇಂಗಾಲವನ್ನು ಹೀರಿಕೊಳ್ಳುವ ‘ಬ್ಲೂ ಕಾರ್ಬನ್’ (Blue Carbon) ತಾಣಗಳಾಗಿವೆ.
  • ​ಜೀವರಾಶಿ: ಇಲ್ಲಿ 80ಕ್ಕೂ ಹೆಚ್ಚು ಜಾತಿಯ ಮೀನುಗಳು, 120ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು (ಉದಾ: ಮಲಬಾರ್ ಪೈಡ್ ಹಾರ್ನ್‌ಬಿಲ್) ಮತ್ತು 20ಕ್ಕೂ ಹೆಚ್ಚು ಜಾತಿಯ ಮ್ಯಾಂಗ್ರೋವ್ ಸಸ್ಯಗಳಿವೆ.
    ​3. ವಿಶಿಷ್ಟ ಕೃಷಿ ಪದ್ಧತಿ ಮತ್ತು ಆರ್ಥಿಕತೆ
    ​ಈ ನದಿಯು ಸುಮಾರು 6,000ಕ್ಕೂ ಹೆಚ್ಚು ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದೆ.
  • ​ಗಜನಿ ಬೇಸಾಯ: ಉಪ್ಪು ನೀರಿನ ಜೌಗು ಪ್ರದೇಶದಲ್ಲಿ ಮಾಡುವ ಸಾಂಪ್ರದಾಯಿಕ ಕೃಷಿ. ಇಲ್ಲಿ ಬೆಳೆಯುವ ‘ಕಗ್ಗ’ ಭತ್ತವು ಉಪ್ಪು ನೀರನ್ನು ತಡೆದುಕೊಳ್ಳುವ ಮತ್ತು ಔಷಧೀಯ ಗುಣವುಳ್ಳ ಜಗತ್ತಿನ ಅಪರೂಪದ ತಳಿಯಾಗಿದೆ.
  • ​ಮತ್ಸ್ಯ ಸಂಪತ್ತು: ಇಲ್ಲಿ ವರ್ಷಕ್ಕೆ ಸುಮಾರು ₹100 ಕೋಟಿಗೂ ಹೆಚ್ಚು ಮೌಲ್ಯದ ಮೀನು ಮತ್ತು ಕೃಳ (Shellfish) ಸಿಗುತ್ತದೆ ಎಂದು ಅಂದಾಜಿಸಲಾಗಿದೆ. ಇದು ಯಾವುದೇ ಹೂಡಿಕೆ ಇಲ್ಲದ ನೈಸರ್ಗಿಕ ಉದ್ಯಮವಾಗಿದೆ.
    ​4. ಸಂರಕ್ಷಣೆಯ ಹೋರಾಟ ಮತ್ತು ಪ್ರಾಮುಖ್ಯತೆ
    ​ಅಘನಾಶಿನಿಯನ್ನು ಅಣೆಕಟ್ಟು ಮುಕ್ತವಾಗಿರಿಸಲು ಪರಿಸರವಾದಿಗಳು ಮತ್ತು ಸ್ಥಳೀಯ ಜನರು ದಶಕಗಳಿಂದ ಹೋರಾಡುತ್ತಿದ್ದಾರೆ.
  • ​ಪರಿಸರ ಸಮತೋಲನ: ಅಣೆಕಟ್ಟು ನಿರ್ಮಿಸಿದರೆ ನದಿಯ ನೀರಿನ ಲವಣಾಂಶ (Salinity) ಬದಲಾಗಿ ಮ್ಯಾಂಗ್ರೋವ್ ಮತ್ತು ಮೀನುಗಳ ಸಂತಾನೋತ್ಪತ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
  • ​ಸವಾಲುಗಳು: ಇತ್ತೀಚಿನ ‘ಅಘನಾಶಿನಿ-ವೇದಾವತಿ ನದಿ ತಿರುವು ಯೋಜನೆ’ ಮತ್ತು ತದಡಿ ಬಂದರು ಯೋಜನೆಗಳು ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿವೆ.
    ಅಘನಾಶಿನಿ ಎಂದರೆ ‘ಪಾಪಗಳನ್ನು ನಾಶ ಮಾಡುವವಳು’ ಎಂದರ್ಥ. ಈ ನದಿಯು ದಕ್ಷಿಣ ಭಾರತದ ನದಿಗಳು ಹೇಗೆ ಅಡೆತಡೆಯಿಲ್ಲದೆ ಹರಿದರೆ ಪ್ರಕೃತಿಯನ್ನು ಸಮೃದ್ಧವಾಗಿಡಬಲ್ಲವು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪ್ರಕಾರ, ಇದು ಪಶ್ಚಿಮ ಘಟ್ಟಗಳ ಪ್ರಮುಖ “Hotspot of Biodiversity” ಆಗಿದೆ

ಅಘನಾಶಿನಿ’ ಎಂಬ ಪದವು ಸಂಸ್ಕೃತ ಮೂಲದಿಂದ ಬಂದಿದ್ದು, ಅತ್ಯಂತ ಸುಂದರವಾದ ಮತ್ತು ಅರ್ಥಪೂರ್ಣವಾದ ಹೆಸರನ್ನು ಹೊಂದಿದೆ. ಇದರ ಬಿಡಿಸಿದ ರೂಪ ಮತ್ತು ಅರ್ಥ ಹೀಗಿದೆ:
​ಪದ ವಿಂಗಡಣೆ:

  • ​ಅಘ (Agha): ಎಂದರೆ ಪಾಪ, ದೋಷ ಅಥವಾ ಕೆಡುಕು.
  • ​ನಾಶಿನಿ (Nashini): ಎಂದರೆ ನಾಶ ಮಾಡುವವಳು ಅಥವಾ ಹೋಗಲಾಡಿಸುವವಳು.
    ​ಪೂರ್ಣ ಅರ್ಥ:
    “ಪಾಪಗಳನ್ನು ನಾಶ ಮಾಡುವವಳು” ಅಥವಾ “ಪಾಪ ವಿಮೋಚಕಿ” ಎಂದರ್ಥ.
    ಅಘನಾಶಿನಿ ನದಿ ಗಂಗೆಯಿಗಿಂತ ಅನೇಕ ಪಟ್ಟು ಹೆಚ್ಚು ಮಾಲಿನ್ಯರಹಿತ.
    ಇದು ಭಾವನಾತ್ಮಕ ಮಾತಲ್ಲ — ವೈಜ್ಞಾನಿಕ ಸತ್ಯ
    ಗಂಗಾ:
    ಭಾರತದ ಅತ್ಯಂತ ಪವಿತ್ರ ನದಿ
    ಆದರೆ ವೈಜ್ಞಾನಿಕವಾಗಿ ಅತ್ಯಂತ ಮಾಲಿನ್ಯಗೊಂಡ ನದಿಗಳಲ್ಲಿ ಒಂದು
    ಇಂದು ಗಂಗೆಯಲ್ಲಿ:
    400+ ನಗರಗಳ ಮಲಿನಜಲ
    ಸಾವಿರಾರು ಕೈಗಾರಿಕೆಗಳ ವಿಷಕಾರಿ ನೀರು
    ಶವಸಂಸ್ಕಾರ ಅವಶೇಷಗಳು
    ಪ್ಲಾಸ್ಟಿಕ್, ರಾಸಾಯನಿಕ ತ್ಯಾಜ್ಯ
    👉 ಅನೇಕ ಸ್ಥಳಗಳಲ್ಲಿ ಗಂಗೆಯ ನೀರು ಕುಡಿಯಲು ಅಸಾಧ್ಯ
    👉 ಹಲವೆಡೆ ಸ್ನಾನಕ್ಕೂ ಅಪಾಯಕಾರಿ
    ಅದಕ್ಕಾಗಿ ಸರ್ಕಾರವೇ “Namami Gange” ಎಂಬ ಸಾವಿರಾರು ಕೋಟಿ ರೂ ಯೋಜನೆ ನಡೆಸುತ್ತಿದೆ.
    ಅಘನಾಶಿನಿ ನದಿ – ಭಾರತದ ಕೊನೆಯ ಸ್ವಚ್ಛ ನದಿ ವ್ಯವಸ್ಥೆಗಳಲ್ಲಿ ಒಂದು
    ಅಘನಾಶಿನಿ:
    ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ
    ಯಾವುದೇ ದೊಡ್ಡ ಅಣೆಕಟ್ಟು ಇಲ್ಲದೆ
    ಕೈಗಾರಿಕೆಗಳಿಲ್ಲದೆ
    ನಗರ ಮಾಲಿನ್ಯವಿಲ್ಲದೆ ಸಮುದ್ರ ಸೇರುವ ಅಪರೂಪದ ನದಿ
    ಇಲ್ಲಿ:
    ನೀರು ನೇರವಾಗಿ ಕುಡಿಯಲು ಬಳಸುತ್ತಾರೆ
    ನದಿ ತೀರದಲ್ಲಿ ಶುದ್ಧ ಕೃಷಿ
    ಮ್ಯಾಂಗ್ರೋವ್ ಅರಣ್ಯ
    ಸಮೃದ್ಧ ಮೀನು ಸಂಕುಲ
    👉 ವೈಜ್ಞಾನಿಕವಾಗಿ ಇದನ್ನು “Pristine River System” ಎಂದು ಕರೆಯಲಾಗುತ್ತದೆ.
    ಒಟ್ಟಾರೆ ಯಲ್ಲಿ ಅಘನಾಶಿನಿ ಹೆಸರಿಗೆ ತಕ್ಕಂತೆ ವೈಜ್ಞಾನಿಕವಾಗಿ ಪಾಪನಾಶಿನಿ.

Aghanashini ಆದರೆ ಎಷ್ಟು ವಿರೋಧಾಭಾಸ ಗಂಗಾ ಶುದ್ಧಿ ಕರಣಕ್ಕೆ ಸರ್ಕಾರ ಹಲವು ವರ್ಷಗಳಿಂದ ಸಾವಿರಾರು ಕೋಟಿ ಖರ್ಚಾಮಾಡುತ್ತಿದೆ, ಆದರೂ ಫಲಿತಾಂಶ ಹೂಳೆಯಲ್ಲಿ ಹುಣಸೆಹಣ್ಣು ತೊಳೆದಂತೆ.

ಅಘನಾಶಿನಿ ಹೆಸರಿಗೆ ತಕ್ಕಂತೆ, ವೈಜ್ಞಾನಿಕ ಪವಿತ್ರ ನದಿ ಇದರ ನೈಸರ್ಗಿಕತೆ ಹಾಳುಮಾಡಲು ಸಾವಿರರಾರೂ ಕೋಟಿ ಖರ್ಚು ಮಾಡಲು ಹೊರಟಿದೆ. 124 ಕೀಮೀ ಉದ್ದದ ನದಿಗೆ 194 ಕೀಮೀ ಪೈಪ್ ಅಳವಡಿಸಿ ದೂರು ತೆಗೆದುಕೂಂಡು ಹೋಗುವ ವಿಚಾರ.

​ಸಾಂಸ್ಕೃತಿಕ ಹಿನ್ನೆಲೆ:
ಭಾರತೀಯ ಸಂಸ್ಕೃತಿಯಲ್ಲಿ ನದಿಗಳನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅಘನಾಶಿನಿ ನದಿಯಲ್ಲಿ ಸ್ನಾನ ಮಾಡುವುದರಿಂದ ಅಥವಾ ಅದರ ನೀರನ್ನು ಸ್ಪರ್ಶಿಸುವುದರಿಂದ ಮನುಷ್ಯನ ಪಾಪಗಳು ತೊಳೆದುಹೋಗುತ್ತವೆ ಎಂಬ ನಂಬಿಕೆ ಈ ಹೆಸರಿನ ಹಿಂದಿದೆ. ಈ ನದಿಯು ಯಾವುದೇ ಅಣೆಕಟ್ಟುಗಳಿಲ್ಲದೆ ಅಡೆತಡೆಯಿಲ್ಲದೆ ಹರಿಯುವುದರಿಂದ, ಇದು ಇಂದಿಗೂ ತನ್ನ “ಪವಿತ್ರ ಮತ್ತು ಶುದ್ಧ” ರೂಪವನ್ನು ಉಳಿಸಿಕೊಂಡಿದೆ ಎಂದು ಜನರು ನಂಬುತ್ತಾರೆ.

ಪೌರಾಣಿಕ ಹಿನ್ನೆಲೆ:
​ಪುರಾಣಗಳ ಪ್ರಕಾರ, ಹಿಂದೆ ಶಿವನು ಪಾರ್ವತಿಯೊಡನೆ ಪಶ್ಚಿಮ ಘಟ್ಟಗಳ ಈ ರಮಣೀಯ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗಿ ಲಿಂಗ ರೂಪದಲ್ಲಿ ನೆಲೆಸಿದನು ಎನ್ನಲಾಗುತ್ತದೆ. ಅದೇ ಶಿರಸಿ ದೂಡ್ಡಗಣಪತಿ ದೇವಸ್ಥಾನ ಹತ್ತಿರ ಇರುವ ಈಶ್ವರ್ ದೇವಸ್ಥಾನ.ಸಿರ್ಸಿಯ ‘ಶಂಕರಹೊಂಡ’ ಎಂಬಲ್ಲಿಂದ ಈ ನದಿ ಉಗಮಿಸುತ್ತದೆ.

​ಈ ಹೊಂಡದಲ್ಲಿ ಶಿವನು ನೆಲೆಸಿದ್ದರಿಂದ, ಇಲ್ಲಿ ಹರಿಯುವ ನೀರು ಅತ್ಯಂತ ಪವಿತ್ರವಾಯಿತು. ಈ ನದಿಯಲ್ಲಿ ಸ್ನಾನ ಮಾಡಿದರೆ ಅಥವಾ ಇದರ ಜಲವನ್ನು ಬಳಸಿದರೆ ಮನುಷ್ಯನು ಮಾಡಿದ ಅರಿವಿಲ್ಲದ ತಪ್ಪುಗಳು ಅಥವಾ ‘ಅಘ’ಗಳು (ಪಾಪಗಳು) ನಾಶವಾಗುತ್ತವೆ ಎಂಬ ನಂಬಿಕೆ ಬಲವಾಯಿತು. ಹಾಗಾಗಿ ಇದಕ್ಕೆ ‘ಅಘನಾಶಿನಿ’ ಎಂಬ ಹೆಸರು ಬಂದಿತು.

​ಹೆಸರಿನ ಆಳವಾದ ಅರ್ಥ:
​ ಇದು ಪಾಪಗಳನ್ನು ತೊಳೆಯುವ ನದಿ ಎನಿಸಿಕೊಂಡರೂ, ವೈಜ್ಞಾನಿಕವಾಗಿ ಪರಿಸರದ ದೃಷ್ಟಿಯಿಂದಲೂ ಇದು ತನ್ನ ಹೆಸರನ್ನು ಸಾರ್ಥಕಗೊಳಿಸಿದೆ:

  • ​ನೈಸರ್ಗಿಕ ಶುದ್ಧೀಕರಣ: ಅಣೆಕಟ್ಟುಗಳಿಲ್ಲದ ಕಾರಣ, ಈ ನದಿಯು ತನ್ನ ಹಾದಿಯಲ್ಲಿನ ಕಸ-ಕಡ್ಡಿಗಳನ್ನು ಮತ್ತು ಮಲಿನತೆಯನ್ನು ನೈಸರ್ಗಿಕವಾಗಿಯೇ ಶುದ್ಧೀಕರಿಸುತ್ತಾ ಸಾಗುತ್ತದೆ.
  • ​ಜೀವ ಸಂರಕ್ಷಣೆ: ಸಾವಿರಾರು ಜೀವಿಗಳಿಗೆ ಆಶ್ರಯ ನೀಡಿ, ಸಮುದ್ರದ ಉಪ್ಪು ಮತ್ತು ನದಿಯ ಸಿಹಿ ನೀರಿನ ಸಮತೋಲನ ಕಾಯ್ದುಕೊಳ್ಳುವ ಮೂಲಕ ಇದು ಪ್ರಕೃತಿಯ ದೋಷಗಳನ್ನು (ಇಂಬ್ಯಾಲೆನ್ಸ್) ನಿವಾರಿಸುತ್ತದೆ.
    ​ಉಂಚಳ್ಳಿ ಜಲಪಾತದ ವಿಶೇಷತೆ:
    ​ನದಿಯು ಬೆಟ್ಟಗಳಿಂದ ಧುಮುಕುವಾಗ ಸೃಷ್ಟಿಸುವ ಉಂಚಳ್ಳಿ (Lushington Falls) ಜಲಪಾತವನ್ನು ನೋಡಲು ಎರಡು ಕಣ್ಣು ಸಾಲದು. ಅಲ್ಲಿನ ಭೋರ್ಗರೆಯುವ ಶಬ್ದ ಮತ್ತು ಮಂಜಿನಂತೆ ಹರಡುವ ನೀರಿನ ಹನಿಗಳು ಪ್ರಕೃತಿಯ ಶಕ್ತಿಯನ್ನು ಪ್ರದರ್ಶಿಸುತ್ತವೆ.
    ​ಸಣ್ಣ ಕುತೂಹಲದ ಮಾಹಿತಿ: ಅಘನಾಶಿನಿ ನದಿಯ ತೀರದಲ್ಲಿ ಇಂದಿಗೂ ಅನೇಕ ಪುರಾತನ ಶಿಲೆಗಳು ಮತ್ತು ಶಾಸನಗಳು ಕಂಡುಬರುತ್ತವೆ, ಇವು ಈ ನದಿಯ ಪ್ರಾಚೀನತೆಗೆ ಸಾಕ್ಷಿಯಾಗಿವೆ. ಪ್ರಕೃತಿಯನ್ನು ದೈವವೆಂದು ಪೂಜಿಸುವ ನಮ್ಮ ಸಂಸ್ಕೃತಿಯಲ್ಲಿ, ಜೀವಂತವಾಗಿ ಹರಿಯುವ ನದಿಯನ್ನು ಕಟ್ಟಿಹಾಕುವುದು ಕೇವಲ ಪರಿಸರ ಹಾನಿಯಲ್ಲ, ಅದು ಸಾಂಸ್ಕೃತಿಕ ಮತ್ತು ಧಾರ್ಮಿಕ ಅಧಃಪತನವೂ ಹೌದು.
  1. ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಿಣಾಮಗಳು
    ಹಿಂದೂ ಧರ್ಮದಲ್ಲಿ ನದಿಗಳನ್ನು ‘ಜೀವಂತ ದೇವತೆಗಳು’ ಎಂದು ಕರೆಯಲಾಗುತ್ತದೆ. ಅಘನಾಶಿನಿಯಂತಹ ನದಿಗಳು ‘ಅವಿಚ್ಛಿನ್ನ ಧಾರೆ’ಯನ್ನು (ತಡೆಯಿಲ್ಲದ ಹರಿವು) ಹೊಂದಿವೆ.
  • ನದಿ ಬಂಧನ – ದೇವತಾ ಶಾಪ: ಪುರಾಣಗಳ ಪ್ರಕಾರ, ಪವಿತ್ರ ನದಿಯ ಹರಿವನ್ನು ಅನಗತ್ಯವಾಗಿ ತಡೆಯುವುದು ಅಥವಾ ಅದರ ದಿಕ್ಕನ್ನು ಬದಲಿಸುವುದು ಆ ಪ್ರದೇಶದ ‘ನದೀ ದೇವತೆ’ಗೆ ಮಾಡುವ ಅಪಚಾರವೆಂದು ಪರಿಗಣಿಸಲಾಗುತ್ತದೆ. ಇದು ಆ ಭಾಗದಲ್ಲಿ ಪ್ರಾಕೃತಿಕ ವಿಕೋಪಗಳಿಗೆ (ಧಾರ್ಮಿಕ ಭಾಷೆಯಲ್ಲಿ ದೇವತಾ ಕೋಪ) ಕಾರಣವಾಗಬಹುದು ಎಂಬ ನಂಬಿಕೆಯಿದೆ.
  • ಪಾಪ ವಿಮೋಚನೆಯ ಶಕ್ತಿ ಕ್ಷೀಣತೆ: ಹೆಸರೇ ಹೇಳುವಂತೆ ಇದು ‘ಪಾಪ ನಾಶಿನಿ’. ನದಿ ಹರಿಯುತ್ತಿದ್ದರೆ ಮಾತ್ರ ಅದು ತನ್ನ ಶುದ್ಧತೆಯನ್ನು ಕಾಪಾಡಿಕೊಳ್ಳುತ್ತದೆ. ಅಣೆಕಟ್ಟು ಕಟ್ಟಿ ನೀರನ್ನು ನಿಲ್ಲಿಸಿದರೆ, ಅದು ‘ಸ್ಥಗಿತ ಜಲ’ವಾಗಿ (Stagnant water) ತನ್ನ ಪವಿತ್ರತೆಯನ್ನು ಕಳೆದುಕೊಳ್ಳುತ್ತದೆ.
  1. ಜ್ಯೋತಿಷ್ಯ ಮತ್ತು ವಾಸ್ತು ಪರಿಣಾಮಗಳು
    ಜ್ಯೋತಿಷ್ಯ ಶಾಸ್ತ್ರದಲ್ಲಿ ನದಿಗಳು ಚಂದ್ರ ಮತ್ತು ಶುಕ್ರ ಗ್ರಹಗಳ ಕಾರಕತ್ವವನ್ನು ಹೊಂದಿರುತ್ತವೆ.
  • ಚಂದ್ರನ ಬಲ ಕುಸಿತ: ಚಂದ್ರನು ಮನಸ್ಸು ಮತ್ತು ಜಲತತ್ವದ ಸಂಕೇತ. ನೈಸರ್ಗಿಕ ಹರಿವನ್ನು ತಡೆದಾಗ ಆ ಭಾಗದ ಜನರ ಮಾನಸಿಕ ಶಾಂತಿ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ.
  • ವಾಸ್ತು ದೋಷ: ಭೂಮಿಯ ನೈಸರ್ಗಿಕ ಇಳಿಜಾರು ಮತ್ತು ನೀರಿನ ಹರಿವಿನ ದಿಕ್ಕನ್ನು ಬದಲಿಸುವುದು ಇಡೀ ಪ್ರದೇಶದ ‘ಭೂ-ವಾಸ್ತು’ವಿನ ಮೇಲೆ ಪರಿಣಾಮ ಬೀರುತ್ತದೆ. ಪಶ್ಚಿಮಕ್ಕೆ ಹರಿಯುವ ನದಿಯನ್ನು ಬಲವಂತವಾಗಿ ಪೂರ್ವಕ್ಕೆ ತಿರುಗಿಸುವುದು ಪ್ರಕೃತಿಯ ವಿರುದ್ಧದ ಕ್ರಿಯೆಯಾಗಿರುವುದರಿಂದ, ಇದು ಆ ಪ್ರದೇಶದ ಸಮೃದ್ಧಿಯನ್ನು ಕುಂಠಿತಗೊಳಿಸಬಹುದು.
  1. ಪ್ರಕೃತಿಯ ಸಮತೋಲನವೇ ಧರ್ಮ
    “ಧರ್ಮೋ ರಕ್ಷತಿ ರಕ್ಷಿತಃ” – ಅಂದರೆ ನಾವು ಧರ್ಮವನ್ನು (ಪ್ರಕೃತಿಯನ್ನು) ರಕ್ಷಿಸಿದರೆ, ಅದು ನಮ್ಮನ್ನು ರಕ್ಷಿಸುತ್ತದೆ.
  • ಅಘನಾಶಿನಿ ಅಣೆಕಟ್ಟು ರಹಿತವಾಗಿರುವುದರಿಂದಲೇ ಉತ್ತರ ಕನ್ನಡದ ಈ ಭಾಗ ಇಂದಿಗೂ ಸುಭಿಕ್ಷವಾಗಿದೆ.
  • ಅಣೆಕಟ್ಟು ಕಟ್ಟುವ ಮೂಲಕ ಸರ್ಕಾರ ಪ್ರಕೃತಿಯ ನಿಯಮವನ್ನು ಮೀರಿದರೆ, ಅದು ಮಣ್ಣಿನ ಸಾರವನ್ನು ಕುಂದಿಸಿ, ಸಮುದ್ರದ ಉಪ್ಪು ನೀರು ಭೂಮಿಗೆ ನುಗ್ಗುವಂತೆ ಮಾಡುತ್ತದೆ. ಜ್ಯೋತಿಷ್ಯದ ಪ್ರಕಾರ ಇದು ‘ಕ್ಷೇತ್ರ ದೋಷ’ಕ್ಕೆ ಕಾರಣವಾಗಿ ಮುಂದೆ ಸಂತಾನೋತ್ಪತ್ತಿ ಮತ್ತು ಕೃಷಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
    ಸರ್ಕಾರ ಯಾಕೆ ಈ ‘ಪಾಪ’ ಮಾಡುತ್ತಿದೆ?
    ಸರಳವಾಗಿ ಹೇಳುವುದಾದರೆ, ಸರ್ಕಾರದ ದೃಷ್ಟಿಯಲ್ಲಿ ‘ಅಭಿವೃದ್ಧಿ’ ಎಂದರೆ ಕೇವಲ ಅಂಕಿ-ಅಂಶಗಳು ಮತ್ತು ಸಿಮೆಂಟ್ ಕಟ್ಟಡಗಳು.
  • ಅಲ್ಪಾವಧಿ ಲಾಭ: ತಕ್ಷಣಕ್ಕೆ ಸಿಗುವ ವಿದ್ಯುತ್ ಅಥವಾ ನೀರಿಗಾಗಿ ಅವರು ಸಾವಿರಾರು ವರ್ಷಗಳ ಇತಿಹಾಸವಿರುವ ನೈಸರ್ಗಿಕ ವ್ಯವಸ್ಥೆಯನ್ನು ಬಲಿಕೊಡಲು ಸಿದ್ಧರಾಗುತ್ತಾರೆ.
  • ದೂರದೃಷ್ಟಿಯ ಕೊರತೆ: ಪ್ರಕೃತಿಯನ್ನು ಒಂದು ಯಂತ್ರವೆಂದು ಭಾವಿಸುವ ಆಧುನಿಕ ಇಂಜಿನಿಯರಿಂಗ್ ಮನೋಭಾವ, ಅದರ ಹಿಂದಿರುವ ದೈವಿಕ ಮತ್ತು ಪರಿಸರ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ವಿಫಲವಾಗಿದೆ. ಅಘನಾಶಿನಿಯಂತಹ ನದಿಗಳು ನಮ್ಮ ಪೂರ್ವಜರು ನಮಗೆ ಬಿಟ್ಟುಹೋದ ಆಸ್ತಿಯಲ್ಲ, ಬದಲಾಗಿ ನಾವು ನಮ್ಮ ಮುಂದಿನ ಪೀಳಿಗೆಯಿಂದ ಪಡೆದ ಸಾಲ. ಈ ಸಾಲವನ್ನು ತೀರಿಸಬೇಕಾದರೆ ನದಿಯನ್ನು ಅದರ ಮೂಲ ರೂಪದಲ್ಲಿ ಉಳಿಸುವುದು ಅನಿವಾರ್ಯ.

Madhu Bangarappa ಮಹಿಳೆಯರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಸಚಿವರಿಂದ ಸ್ಥಳ ಪರಿಶೀಲನೆ.

0

Madhu Bangarappa ರಾಜ್ಯದ ಶಾಲಾಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರು
ಶಿವಮೊಗ್ಗ ನಗರದಲ್ಲಿ ನೂತನವಾಗಿ ನಿರ್ಮಿಸಲಿರುವ “ಪ್ರಥಮ ದರ್ಜೆ ಮಹಿಳಾ ಕಾಲೇಜು” ಕಟ್ಟಡಕ್ಕೆ ಸ್ಥಳ ಪರಿಶೀಲನೆ ನಡೆಸಿದರು.

Madhu Bangarappa ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಶ್‌ ಬಾನು, ಜಿಲ್ಲಾಧ್ಯಕ್ಷರಾದ ಶ್ರೀ ಆರ್.ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ಶ್ರೀ ಪ್ರಭುಲಿಂಗ ಕವಲಿಕಟ್ಟಿ, ಸಿಇಒ ಶ್ರೀ ಹೇಮಂತ್ ಕುಮಾರ್ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Bharat Scouts and Guides ಜಿಲ್ಲಾ ಸ್ಕೌಟ್ಸ್ & ಗೈಡ್ಸ್ ಶತಮಾನೋತ್ಸವ:ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ

0

Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ಇವರ ಸಹಯೋಗದೊಂದಿಗೆ ಶಿವಮೊಗ್ಗ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ಆಯೋಜಿಸಿದ್ದ “ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಶತಮಾನೋತ್ಸವ ಸಮಾರಂಭ ಹಾಗೂ ದಿII ಟಿ.ವಿ ನಾರಾಯಣ ಶಾಸ್ತ್ರಿಗಳ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ “ಜಿಲ್ಲಾ ಮಟ್ಟದ ಸ್ಕೌಟ್ಸ್ – ಗೈಡ್ಸ್ ಮತ್ತು ರೋವರ್ಸ್ – ರೇಂಜರ್ಸ್ ರ್ಯಾಲಿ” ಯನ್ನು ಸಚಿವ ಮಧು ಬಂಗಾರಪ್ಪನವರು ಉದ್ಘಾಟಿಸಿದರು.

Bharat Scouts and Guides ಈ ಸಂದರ್ಭದಲ್ಲಿ ವಿಧಾನಪರಿಷತ್ ಶಾಸಕರಾದ ಶ್ರೀಮತಿ ಬಲ್ಕಿಶ್ ಬಾನು, ಮಾಜಿ ವಿಧಾನಪರಿಷತ್ ಶಾಸಕರಾದ ಶ್ರೀ ರುದ್ರೇಗೌಡ್ರು, ಮಾಜಿ ಸಚಿವರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮುಖ್ಯ ಆಯುಕ್ತರಾದ ಶ್ರೀ ಪಿ.ಜಿ.ಆರ್ ಸಿಂಧ್ಯ ಸೇರಿದಂತೆ ಹಲವು ಗಣ್ಯರು ಮತ್ತು ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Rangayana ಶಿವಮೊಗ್ಗ ರಂಗಾಯಣದಲ್ಲಿ ಜನವರಿ 14 ರಿಂದ “ರಂಗ ಸಂಕ್ರಾಂತಿ ನಾಟಕೋತ್ಸವ” ನಾಟಕ ಪ್ರಿಯರಿಗೆ ‘ರಂಗ ಸುಗ್ಗಿ!’

0

Rangayana ರಂಗಾಯಣ, ಶಿವಮೊಗ್ಗವು ರಂಗಬೆಳಕು (ರಿ), ಶಿವಮೊಗ್ಗ ಹಾಗೂ ಕಡೆಕೊಪ್ಪಲ ಪ್ರತಿಷ್ಠಾನ (ರಿ), ಶಿವಮೊಗ್ಗ ಇವರ ಸಹಯೋಗದಲ್ಲಿ ದಿನಾಂಕ:14-01-2026 ರಿಂದ 19-01-2026 ರವರೆಗೆ ‘ರಂಗ ಸಂಕ್ರಾಂತಿ‘ ನಾಟಕೋತ್ಸವ -2026 ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ. ಆರು ದಿನಗಳು ನಡೆಯಲಿರುವ ಈ ನಾಟಕೋತ್ಸವದಲ್ಲಿ ವಿವಿಧ ನಾಟಕಗಳು ಪ್ರತಿ ದಿನ ಸಂಜೆ 6.30ಕ್ಕೆ ಸುವರ್ಣ ಸಂಸ್ಕೃತಿ ಭವನ, ಅಶೋಕ ನಗರ, ಶಿವಮೊಗ್ಗದಲ್ಲಿ ಪ್ರದರ್ಶನಗೊಳ್ಳಲಿವೆ. ಟಿಕೆಟ್ ದರ ಒಂದು ನಾಟಕಕ್ಕೆ ರೂ.30/- ಎಂದು ಪ್ರಕಟಣೆ ಶಿವಮೊಗ್ಗ ರಂಗಾಯಣದ ತಿಳಿಸುತ್ತದೆ

CM Siddaramaiah ದ್ವೇಷ ಭಾಷಣ ಪ್ರತಿಬಂಧಕ ಮಸೂದೆಯನ್ನ ರಾಜ್ಯಪಾಲರು ತಿಸ್ಕರಿಸಿಲ್ಲ- ಸಿದ್ಧರಾಮಯ್ಯ.

0

CM Siddaramaiah ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಇದನ್ನು ವಾಪಸ್ಸು ಕಳಿಸಿಲ್ಲ, ತಿರಸ್ಕರಿಸಿಯೂ ಇಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಮಸೂದೆಯ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

“ಬ್ಯಾನರ್ ತೆರವು ಬಳ್ಳಾರಿ ಘಟನೆಗೆ ಪ್ರಚೋದನೆ” ಎಂದು ಬಳ್ಳಾರಿ ಬ್ಯಾನರ್ ಪ್ರಕರಣದ ಬಗ್ಗೆಯೂ ಅನಿಸಿಕೆ ಹಂಚಿಕೊಂಡರು.

ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ಅವರು ತಾಕತ್ತಿದ್ದರೆ ಬಳ್ಳಾರಿಗೆ ಬರುವಂತೆ ಸವಾಲು ಹಾಕಿದ್ದರು. ಅದಕ್ಕಾಗಿ ಪಾದಯಾತ್ರೆ ಕೈಗೊಳ್ಳಲಾಯಿತು. ಬಿಜೆಪಿ ಪಕ್ಷ ಪಾದಯಾತ್ರೆ ಮಾಡುವ ಅಗತ್ಯ ಏನಿದೆ?

CM Siddaramaiah ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಬಗ್ಗೆ ಹಾಕಿದ್ದ ಬ್ಯಾನರನ್ನು ತೆಗೆಯಬೇಕಾದ ಅಗತ್ಯವೇನಿತ್ತು? ಅದನ್ನು ತೆಗೆದದ್ದೆ ಘಟನೆಗೆ ಕಾರಣವಾಯಿತು. ಜನಾರ್ದನ ರೆಡ್ಡಿ, ಶ್ರೀರಾಮುಲು ಅವರು ಸ್ಥಾನ ಕಳೆದುಕೊಂಡಿದ್ದರ ಮೇಲಿನ ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳು ನುಡಿದರು.

Shimoga News ಕಳೆದುಕೊಂಡ ಮೊಬೈಲ್ . ಪತ್ತೆ ಮಾಡಿ ವಾರಸುದಾರರಿಗೆ ನೀಡಿದ ಪೊಲೀಸ್ ಇಲಾಖೆ.

0

Shimoga News ಮೊಬೈಲ್ ಕಳೆದಾಕ್ಷಣ ಪೊಲೀಸ್ ಠಾಣೆಗೆ ದೂರು ಕೊಡಬೇಕು. ಆದರೆ ಕಳೆದ ಮೊಬೈಲ್ ಸಿಕ್ಕಿತೆ? ಎಂಬ ಪ್ರಶ್ನೆ ಸಹಜ. ಅದಕ್ಕೆ ಉತ್ತರ ಮಾಳೂರು ಪೊಲೀಸ್ ಠಾಣೆಯಲ್ಲಿ ದೊರೆತಿದೆ .
ದಿನಾಂಕ: 11-01-2026 ರಂದು ಸಾರ್ವಜನಿಕರು ಕಳೆದುಕೊಂಡಿದ್ದ ಮೊಬೈಲ್ ಫೋನ್ ಅನ್ನು ಮಾಳೂರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಗಳು CEIR ಪೋರ್ಟಲ್ ನ ಮೂಲಕ ಪತ್ತೆ ಮಾಡಿರುತ್ತಾರೆ.
ನಂತರ ಸದರಿ ಮೊಬೈಲ್ ಫೋನ್ ಅನ್ನು ವಾರಸುದಾರರಿಗೆ ವಾಪಸ್ ನೀಡಿರುತ್ತಾರೆ.

Bharat Scouts and Guides ಪೃಥ್ವಿ ಗಿರಿಮಾಜಿ,ರೇಣುಕಯ್ಯ ಅವರಿಗೆ ರೋವರ್ ವಿಭಾಗ ಮತ್ತು ಸುಶ್ಮಿತಾ ಗೆ ಗೈಡ್ ವಿಭಾಗದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ

0

Bharat Scouts and Guides ಬೆಳಗಾವಿಯಲ್ಲಿ ಏರ್ಪಡಿಸಿದ್ದ ಜಾಂಬುರೇಟ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಗಳಿಗೆ ಪಿಜಿಆರ್ ಸಿಂಧ್ಯಾ ಅವರು ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಿದರು.

ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಲೀಡರ್ ಟ್ರೈನರ್ ಎ.ವಿ.ರಾಜೇಶ್ ಅವರ ಮಾರ್ಗದರ್ಶನದಲ್ಲಿ ರೋವರ್ ವಿಭಾಗದ ಪೃಥ್ವಿ ಗಿರಿಮಾಜಿ, ರೇಣುಕಯ್ಯ, ಗೈಡ್ ವಿಭಾಗದಲ್ಲಿ ಸುಶ್ಮಿತಾ ರಾಷ್ಟ್ರಪತಿ ಪುರಸ್ಕಾರ ಪ್ರಶಸ್ತಿ ಪತ್ರ ಪಡೆದಿದ್ದಾರೆ. ಸಿಹಿಮೊಗೆ ಓಪನ್ ಗ್ರೂಪ್ ವತಿಯಿಂದ ಲೀಡರ್ ಟ್ರೈನರ್ ಗೈಡ್ ಕಾತ್ಯಾಯಿನಿ ಅವರ ಮಾರ್ಗದರ್ಶನದಲ್ಲಿ ಗೈಡ್ ಅಲ್ಮಾಜ್ ಮತ್ತು ಎ.ಸಿಂಚನಾ ಅವರು ಪ್ರಶಸ್ತಿ ಪತ್ರ ಪಡೆದಿದ್ದಾರೆ.

ಪ್ರಶಸ್ತಿ ಪತ್ರ ಪುರಸ್ಕೃತರಿಗೆ ಜಿಲ್ಲಾ ಸಂಸ್ಥೆ ವತಿಯಿಂದ ಅಭಿನಂದಿಸಲಾಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ನ ಪ್ರತಿಷ್ಠಿತ ಉನ್ನತ ಪ್ರಶಸ್ತಿ ಪಡೆದ ಮಕ್ಕಳಿಗೆ ಸನ್ಮಾನಿಸಲಾಯಿತು. ಪ್ರಶಸ್ತಿ ಪತ್ರವು ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಮಾಡಿರುತ್ತಾರೆ.

Bharat Scouts and Guides ಇದೇ ಸಂದರ್ಭದಲ್ಲಿ ನಾಯಕಿ ತರಬೇತಿ ಪಡೆದಿರುವ ಹೇಮಲತಾ ಅವರನ್ನು ಸನ್ಮಾನಿಸಲಾಯಿತು. ಪಿಜಿಆರ್ ಸಿಂಧ್ಯಾ ಅವರು ಶಿವಮೊಗ್ಗ ದಿನವನ್ನು ಉದ್ಘಾಟಿಸಿ ಜಿಲ್ಲೆಯ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಆಯುಕ್ತ ಎಸ್.ಜಿ.ಆನಂದ್, ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಗೈಡ್ ಆಯುಕ್ತೆ ಲಕ್ಷ್ಮೀ ಕೆ.ರವಿ, ಮಲ್ಲಿಕಾರ್ಜುನ ಕಾನೂರು, ಹೇಮಲತಾ, ಚೂಡಾಮಣಿ ಪವಾರ್, ಸುಮನ್ ಶೇಖರ್, ಕೆ.ರವಿ, ಶಿವಶಂಕರ್ ಮತ್ತಿತರರು ಇದ್ದರು.

Madhu Bangarappa ಇನ್ಮುಂದೆ ಹೊಳೆಹೊನ್ನೂರು, ಶಿಕಾರಿಪುರ ಆನವಟ್ಟಿಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸುವ ಪ್ರಸ್ತಾವನೆ – ಮಧು ಬಂಗಾರಪ್ಪ.

0

Madhu Bangarappa ಹಸಿವು ಮುಕ್ತ ಕರ್ನಾಟಕ ನಿರ್ಮಾಣ, ಬಡವರು ಮತ್ತು ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಆಹಾರ ನೀಡುವುದು. ನಗರ ಪ್ರದೇಶದ ಬಡವರಿಗೆ ಸಮತೋಲಿತ ಆಹಾರವನ್ನು ಒದಗಿಸುವ ಸದುದ್ದೇಶದಿಂದ ಆಡಳಿತಾರೂಢ ಸರ್ಕಾರವು ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್‌ ವ್ಯವಸ್ಥೆಯನ್ನು ರೂಪಿಸಿ ಅನುಷ್ಟಾನಗೊಳಿಸಿದ್ದು, ದಿನನಿತ್ಯ ಸಹಸ್ರಾರು ಸಂಖ್ಯೆಯ ಜನಸಾಮಾನ್ಯರಿಗೆ ಅತಿ ಕಡಿಮೆ ದರದಲ್ಲಿ ಉತ್ತಮ ಊಟೋಪಹಾರ ಒದಗಿಸಲಾಗುತ್ತಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.

ಅವರು ವಿದ್ಯಾನಗರ ಮತ್ತು ಗುತ್ಯಪ್ಪ ಕಾಲೋನಿಗಳಲ್ಲಿ ನೂತನವಾಗಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಲೋಕಾರ್ಪಣೆಗೊಳಿಸಿದ ನಂತರ ಏರ್ಪಡಿಸಿದ್ದ ಸರಳ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸದರಿ ಯೋಜನೆಯು ಮಾದರಿ ಯೋಜನೆಯಾಗಿದ್ದು, ಇತ್ತೀಚೆಗೆ ಮತ್ತಷ್ಟು ಹೊಸ ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಲು ಮಂಜೂರಾತಿ ನೀಡಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ 12 ಇಂದಿರಾ ಕ್ಯಾಂಟೀನ್‌ಗಳು ಸಾರ್ವಜನಿಕ ಸೇವೆಗೆ ಮುಕ್ತವಾಗಿವೆ. ಹೊಳೆಹೊನ್ನೂರು, ಶಿಕಾರಿಪುರ ಮತ್ತು ಆನವಟ್ಟಿ ಕೇಂದ್ರಗಳಲ್ಲಿಯೂ ಶೀಘ್ರದಲ್ಲಿ ಆರಂಭಿಸಲು ದಿನಾಂಕ ನಿಗಧಿಪಡಿಸಲಾಗುವುದು. ಅಲ್ಲದೇ ನಗರದ ಜನನಿಬಿಡ ಸ್ಥಳಗಳಿದ್ದಲ್ಲಿ ಅವುಗಳನ್ನು ಗುರುತಿಸಿ, ವಿಳಂಬಕ್ಕೆ ಅವಕಾಶವಿಲ್ಲದಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಅವುಗಳನ್ನು ಹಂತಹಂತವಾಗಿ ಆರಂಭಿಸಲು ವಿಶೇಷ ಗಮನಹರಿಸಲಾಗುವುದು ಎಂದರು.

ಈ ಯೋಜನೆಯ ಸಮರ್ಪಕ ಅನುಷ್ಟಾನದಿಂದಾಗಿ ಹಸಿದ ಒಡಲಿಗೆ ಅನ್ನ ದೊರೆತು ಅನೇಕ ಜನರ ಹಸಿವು ನೀಗಲಿದೆ. ಅಲ್ಲದೇ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗಲಿದೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ಸಾರ್ವಜನಿಕರಿಗೆ ವಿತರಿಸಲಾಗುವ ಆಹಾರ ಗುಣಮಟ್ಟದ್ದಾಗಿರುವಂತೆ ನೋಡಿಕೊಳ್ಳಬೇಕು. ನಗರದ ಮೆಗ್ಗಾನ್‌ ಆಸ್ಪತ್ರೆಗೆ ಪ್ರತಿದಿನ ಸಹಸ್ರಾರು ಸಂಖ್ಯೆಯ ಜನರು ಚಿಕಿತ್ಸೆಗಾಗಿ ಆಗಮಿಸುತ್ತಿದ್ದು, ಅವರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆಹಾರ ದೊರೆತಲ್ಲಿ ಅನುಕೂಲವಾಗಲಿದೆ.

ಇದರಿಂದಾಗಿ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲಿದೆ ಎಂದರು.

Madhu Bangarappa ನಗರದ ಬಿ.ಹೆಚ್. ರಸ್ತೆಯಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಹಾಗೂ ಸೈನ್ಸ್‌ ಕಾಲೇಜಿನ ವಿಶಾಲ ಪ್ರದೇಶದಲ್ಲಿ ಕೆ.ಪಿ.ಎಸ್. ಶಾಲೆಯನ್ನು ಆರಂಭಿಸಲು ಅಗತ್ಯವಿರುವ ಭೂಮಿಯನ್ನು ಪರಿಶೀಲಿಸಿದರು. ಇವುಗಳ ನಿರ್ಮಾಣಕ್ಕೆ ಹಣಕಾಸಿನ ಯಾವುದೆ ಅಡಚಣೆ ಇಲ್ಲ. ನೂತನ ಕಟ್ಟಡಗಳು ಹಾಗೂ ಅನೇಕ ಜನೋಪಯೋಗಿ ಕಾರ್ಯಕ್ರಮಗಳ ಉದ್ಘಾಟನೆಗೆ ಶೀಘ್ರದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿರುವುದಾಗಿ ಅವರು ನುಡಿದರು.

ಮಕ್ಕಳಿಗೆ ಶಿಕ್ಷಣ ನೀಡುವುದು ಇಂದಿನ ತುರ್ತು ಅಗತ್ಯ ಕಾರ್ಯಕ್ರಮಗಳಲ್ಲಿ ಪ್ರಧಾನವಾದುದ್ದಾಗಿದೆ. ಶಿಕ್ಷಣ ನೀಡುವುದರಿಂದಾಗಿ ದೇಶದ ಪ್ರಗತಿ ಹಾಗೂ ಮುಂಚೂಣಿ ದೇಶಗಳಲ್ಲಿ ಗುರುತಿಸಲು ಸಾಧ್ಯವಾಗಲಿದೆ. ಎಲ್ಲರಿಗೂ ಸಮಾನತೆಯ ಶಿಕ್ಷಣ ನೀಡುವುದು ಸರ್ಕಾರದ ಪ್ರಮುಖ ಆಶಯವಾಗಿದೆ. ಪ್ರಸಕ್ತ ಸಾಲಿನಲ್ಲಿ ನೂತನವಾಗಿ 50ಪದವಿಪೂರ್ವ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಈಗಾಗಲೇ ಮಂಜೂರಾತಿ ನೀಡಿದೆ. ಕಳೆದ ಸಾಲಿನಲ್ಲಿ 173 ಪ್ರೌಢಶಾಲೆಗಳನ್ನು ಆರಂಭಿಸಲು ಅನುಮತಿ ನೀಡಿತ್ತು ಎಂದವರು ನುಡಿದರು.

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧ ಕೊಳಚೆ ಪ್ರದೇಶಗಳಲ್ಲಿನ ಅರ್ಹ ಬಡ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚಿಸಲಾಗಿದೆ. ಶೀಘ್ರದಲ್ಲಿ ನಗರದ 2000ಜನರಿಗೆ ಹಕ್ಕುಪತ್ರ ವಿತರಿಸಲು ಕಾರ್ಯಕ್ರಮ ರೂಪಿಸಲಾಗುವುದು. ಇದನ್ನು ಒಳಗೊಂಡಂತೆ ಸುಮಾರು 12000ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದಂತಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನಪರಿಷತ್‌ ಸದಸ್ಯೆ ಶ್ರೀಮತಿ ಬಲ್ಕೀಸ್‌ ಬಾನು ಅವರು ಮಾತನಾಡಿ, ಈ ಸಾಮಾಜಿಕ ವ್ಯವಸ್ಥೆಯಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲುವಂತಾಗಬಾರದು ಎಂಬ ಉದ್ದೇಶದಿಂದ ಮಾನ್ಯ ಮುಖ್ಯಮಂತ್ರಿಗಳು ಕಾರ್ಮಿಕರು, ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅರ್ಥಪೂರ್ಣವಾದ ಕಾರ್ಯಕ್ರಮವನ್ನು ರೂಪಿಸಿ ಅನುಷ್ಟಾನಗೊಳಿಸಿರುವುದು ಸಹಜವಾಗಿ ಎಲ್ಲರಲ್ಲೂ ಹರ್ಷವೆನಿಸಿದೆ ಎಂದರು.

ಮುಂದಿನ 15ದಿನಗಳೊಳಗಾಗಿ ಉಳಿದ ಇಂದಿರಾ ಕ್ಯಾಂಟೀನ್‌ಗಳನ್ನು ಲೋಕಾರ್ಪಣೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜನಸಾಮಾನ್ಯರು ಈ ಕ್ಯಾಂಟೀನಿನ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ನಿಖಿಲ್‌, ಅಪರ ಜಿಲ್ಲಾಧಿಕಾರಿ ಅಭಿಷೇಕ್‌ ವಿ., ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಚಂದ್ರಭೂಪಾಲ, ಮುಖಂಡರಾದ ಪ್ರಸನ್ನಕುಮಾರ್‌, ಕಲಗೋಡು ರತ್ನಾಕರ ಮತ್ತಿತರರು ಉಪಸ್ಥಿತರಿದ್ದರು.