Wednesday, August 12, 2026
Wednesday, August 12, 2026
Home Blog Page 229

National Youth Day ಭಾರತಕ್ಕೊಂದೇ ಅಲ್ಲ, ಇಡೀ ವಿಶ್ವಕ್ಕೇ ವಿವೇಕಾನಂದರು ಆಧ್ಯಾತ್ಮಿಕ ಗುರು : ಮಹೇಶ್ ಖಾರ್ವಿ

0

National Youth Day ಸ್ವಾಮಿ ವಿವೇಕಾನಂದರು ಭಾರತಕ್ಕೆ ಮಾತ್ರವಲ್ಲದೇ ಪ್ರಪಂಚದ ಇತರೆ ದೇಶಗಳಿಗೂ ಸಹ ಅವರ ತತ್ವಗಳು, ಬದುಕಿದ ಹಾದಿ, ಯುವ ಜನತೆಗೆ ನೀಡಿದ ಸ್ಫೂರ್ತಿಯ ಕರೆಗಳಿಂದ ಅವರು ಇಂದಿಗೂ ಎಂದೆಂದಿಗೂ ಆಧ್ಯಾತ್ಮಿಕ ಗುರು ಎಂದು ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ ಹೇಳಿದರು.

ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಶ್ರೀ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಯುವಾ ಬ್ರಿಗೇಡ್ ವತಿಯಿಂದ ವಿವೇಕಾನಂದ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರ ಜನ್ಮ ದಿನದಂದು ರಾಷ್ಟ್ರೀಯ ಯುವ ದಿನ ಆಚರಣೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ವಿಶ್ವಕ್ಕೆ ಭಾರತದ ಬಗ್ಗೆ ಹೆಮ್ಮೆ ಪಡುವಂತೆ ಚಿಕಾಗೋದಲ್ಲಿ ಭಾಷಣ ಮಾಡಿದರು.

ಹಿಂದೂ ಧರ್ಮವು ಒಂದು ಶ್ರೇಷ್ಠ ಧರ್ಮ ಎಂಬ ಭಾವನೆ ಮೂಡಿಸಿದರು. ಯುವ ಸಮೂಹದ ಶಕ್ತಿ, ಸಾಮರ್ಥ್ಯದ ಬಗ್ಗೆ ವಿಶ್ವಕ್ಕೆ ಸಾರಿ ಹೇಳಿದವರಲ್ಲಿ ಸ್ವಾಮಿ ವಿವೇಕಾನಂದರು ಮೊದಲಿಗರು ಎಂದರು.

National Youth Day ಈ‌ ಸಂದರ್ಭದಲ್ಲಿ ಯುವಾ ಬ್ರಿಗೇಡ್ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ಪ್ರಜಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಶೆಟ್ಟಿ, ಪ್ರಮುಖರಾದ ಬಸವರಾಜ ಪಾಟೀಲ್, ಚಂದ್ರಶೇಖರ ಜೈನ್, ಲಕ್ಷ್ಮೀಶ, ಅಣ್ಣಪ್ಪ, ರಾಘು ಆಚಾರ್, ಶಿವಕುಮಾರ್, ಸಲೀಂ, ಓಂಕಾರಪ್ಪ, ಷಣ್ಮುಖ, ಮಧನ್ ಚಂದ್ರಗುತ್ತಿ, ಮಧನ್ ಕುಮಾರ್, ಚಂದು ತಾವರೆಹಳ್ಳಿ ಸೇರಿದಂತೆ ಇತರರಿದ್ದರು.

Department of School Education and Literacy ಸೊರಬ ತಾಲ್ಲೂಕಿನ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಮಧು ಬಂಗಾರಪ್ಪನವರಿಂದ ಶಂಕುಸ್ಥಾಪನೆ

0

Department of School Education and Literacy ಸೊರಬ ತಾಲೂಕಿನ ತಲ್ಲೂರು ಗ್ರಾಮದ ಶ್ರೀ ಚಿರಂತಪ್ಪ ಇವರ ಮನೆಯಿಂದ ಸುಂಕಪ್ಪ ಇವರ ಮನೆವರೆಗೆ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಗೆ ಸನ್ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಶ್ರೀ ಎಸ್.ಮಧು ಬಂಗಾರಪ್ಪನವರು ನೆರವೇರಿಸಿದರು.

ಇದರೊಂದಿಗೆ ಮಧು ಬಂಗಾರಪ್ಪನವರ ಮತಕ್ಷೇತ್ರ ಸೊರಬ ತಾಲೂಕಿನ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೋಟಿಪುರ ಸೇವಾಲಾಲ್ ದೇವಸ್ಥಾನದಿಂದ ಪಿ.ಡಬ್ಲೂ.ಡಿ ಮುಖ್ಯ ರಸ್ತೆವರೆಗೆ ಸುಮಾರು 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಬಾಕ್ಸ್ ಚರಂಡಿ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಜನಪ್ರತಿನಿಧಿಗಳು ಹಾಗೂ ಮುಖಂಡರುಗಳೊಂದಿಗೆ ನೆರವೇರಿಸಿದರು.

Chennabasappa ಶಿವಮೊಗ್ಗದ 5ನೇ ವಾರ್ಡಿನಲ್ಲಿ ಜನರ ಸಮಸ್ಯೆ ಆಲಿಸಿ, ತಕ್ಷಣವೇ ಪರಿಹಾರಕ್ಕೆ ಸೂಚಿಸಿದ ಶಾಸಕ ಚೆನ್ನಿ

0

Chennabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂಬರ್ 5ರ ಗುರುಪುರ ವೆಂಕಟೇಶ ನಗರಕ್ಕೆ ಬೆಳಿಗ್ಗೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.

ಬಡಾವಣೆಯಲ್ಲಿ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ನಾಗರಿಕರು ಎದುರಿಸುತ್ತಿರುವ ಕುಡಿಯುವ ನೀರಿನ ಪೂರೈಕೆಯ ವ್ಯತ್ಯಯ ಹಾಗೂ ಚರಂಡಿ ನೈರ್ಮಲ್ಯದ ಸಮಸ್ಯೆಗಳ ಕುರಿತು ಸ್ಥಳೀಯ ನಿವಾಸಿಗಳು ಅಹವಾಲು ಸಲ್ಲಿಸಿದರು. ಈ ದೂರುಗಳಿಗೆ ತಕ್ಷಣವೇ ಸ್ಪಂದಿಸಿದ ಅವರು, ಸ್ಥಳದಲ್ಲಿದ್ದ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ , ನೀರಿನ ಪೂರೈಕೆ ಸಮರ್ಪಕಗೊಳಿಸಲು ಹಾಗೂ ಸ್ವಚ್ಛತಾ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಸೂಚಿಸಿದರು.

ಭೇಟಿಯ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಪ್ರಮುಖರಾದ ಶ್ರೀ ಮಲ್ಲಿಕಾರ್ಜುನ್, ಶ್ರೀ ಹರೀಶ್, ಶ್ರೀ ಆನಂದ್, ಶ್ರೀ ನಿತಿನ್, ಶ್ರೀ ಮಾಲತೇಶ್ ಸೇರಿದಂತೆ ನಮ್ಮ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Lions Club Shimoga ಪತ್ರಕರ್ತರ ಆರೋಗ್ಯ ರಕ್ಷಿಸುವ ಉದ್ದೇಶದ ಸೇವಾ ಚಟುವಟಿಕೆ ಅನುಕೂಲ & ಶ್ಲಾಘನೀಯ- ಎನ್.ಮಂಜುನಾಥ್

0

Lions Club Shimoga ಲಯನ್ಸ್ ಕ್ಲಬ್, ಶಿವಮೊಗ್ಗ ಆಪ್ಟಿಕಲ್ಸ್ ಹಾಗೂ ಪ್ರೆಸ್ ಟ್ರಸ್ಟ್ ಆಶ್ರಯದಲಿ ಮತ್ತು ಶಿವಮೊಗ್ಗ ಆಪ್ಟಿಕಲ್ಸ್‌ನ ನಂದೀಶ್ ಎನ್.ಟಿ. ಅವರ ಮಾರ್ಗದರ್ಶನದಲ್ಲಿ ಪತ್ರಕರ್ತರು ಮತ್ತು ಪತ್ರಿಕಾ ಸಿಬ್ಬಂಧಿಯವರಿಗಾಗಿ ಉಚಿತ ನೇತ್ರ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ ಶಿಬಿರ ಆಯೋಜಿಸಲಾಗಿತ್ತು.

ಟ್ರಸ್ಟ್ ಅಧ್ಯಕ್ಷ ಎನ್. ಮಂಜು ನಾಥ್ ಅವರು ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರ ಆರೋಗ್ಯ ಕಾಪಾಡುವ ಉದ್ದೇಶ ದಿಂದ ಇಂತಹ ಸೇವಾ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಿರುವುದು ಸಾಕಷ್ಟು ಅನುಕೂಲಕರ ಎಂದ ಅವರು, ಶಿವಮೊಗ್ಗ ಆಪ್ಟಿಕಲ್ಸ್‌ನ ನಂದೀಶ್ ಮತ್ತು ಲಯನ್ಸ್ ಕ್ಲಬ್ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿದರು.

ಸಮಾಜದ ವಿವಿಧ ವರ್ಗಗಳಿಗೆ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿ ದವರಿಗೆ ಉಚಿತ ಕನ್ನಡಕ ವಿತರಣೆ ಮೂಲಕ ದೃಷ್ಟಿ ಸಂರಕ್ಷಣೆಗೆ ಲಯನ್ಸ್ ಕ್ಲಬ್ ನೀಡುತ್ತಿರುವ ಕೊಡುಗೆ ಅತ್ಯಂತ ಶ್ಲಾಘನೀಯವಾಗಿದೆ ಎಂದರು. ನಂದೀಶ್ ಎನ್.ಟಿ. ಅವರು ಮಾತನಾಡಿ, ಪತ್ರಕರ್ತರು ದಿನನಿತ್ಯ ಮೊಬೈಲ್, ಕಂಪ್ಯೂಟರ್ ಹಾಗೂ ಕಡಿಮೆ ಬೆಳಕಿನಲ್ಲಿ ಕೆಲಸ ಮಾಡುವು ದರಿಂದ ಕಣ್ಣಿನ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಸಮಾಜದ ಸಮಸ್ಯೆ ಗಳನ್ನು ಮೊದಲು ಗುರುತಿಸುವ ಪತ್ರಕರ್ತರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುವ ಪರಿಸ್ಥಿತಿ ಹೆಚ್ಚಾಗಿದೆ. ಅದಕ್ಕಾಗಿ ಪತ್ರಕರ್ತ ಬಂಧುಗಳಿಗೆ ವಿಶೇಷವಾಗಿ ಈ ನೇತ್ರ ಶಿಬಿರವನ್ನು ಆಯೋಜಿಸಲಾಗಿತ್ತು ಎಂದರು.

Lions Club Shimoga ಇದುವರೆಗೆ 25 ಕ್ಕೂ ಹೆಚ್ಚು ನೇತ್ರ ಶಿಬಿರಗಳನ್ನು ನಡೆಸಲಾಗಿದ್ದು, 4500ಕ್ಕೂ ಹೆಚ್ಚು ಮಂದಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ 3ಸಾವಿರಕ್ಕೂ ಹೆಚ್ಚು ಕನ್ನಡಕಗಳನ್ನು ವಿತರಿಸುವ ಗುರಿಯೊಂದಿಗೆ ಈ ಸೇವೆಯನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

ಲಯನ್ ಅಧ್ಯಕ್ಷ ಶಿವರಾಂ, ಕಾರ್‍ಯದರ್ಶಿ ಕುಮಾರ್, ಡಾ. ಎಸ್.ಐ. ಬಿರಾದಾರ್, ಲಯನ್ಸ್ ಸದಸ್ಯರು ಹಾಗೂ ಶಿವಮೊಗ್ಗ ಆಪ್ಟಿಕಲ್ಸ್ ತಂಡದವರಿದ್ದರು.

B.Y.Raghavendra ಮಾಧ್ಯಮ ಪ್ರಶಸ್ತಿ ಪುರಸ್ಕೃತ ಭರತ್ ರಾಜ್ ಸಿಂಗ್ ಗೆ ಸನ್ಮಾನಿಸಿದ ಸಂಸದ ರಾಘವೇಂದ್ರ

0

B.Y.Raghavendra 2025ನೇ ಸಾಲಿನ ಪ್ರತಿಷ್ಠಿತ ‘ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ’ ಭಾಜನರಾದ ಶಿವಮೊಗ್ಗದ ಹಿರಿಯ ಪತ್ರಕರ್ತರು ಹಾಗೂ ‘ಶಿವಮೊಗ್ಗ ಟೆಲೆಕ್ಸ್’ ಕನ್ನಡ ದಿನಪತ್ರಿಕೆಯ ಉಪಸಂಪಾದಕರಾದ ಶ್ರೀ ಆರ್.ಪಿ. ಭರತ್ ರಾಜ್ ಸಿಂಗ್ ಅವರಿಗೆ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಹಾರ್ದಿಕವಾಗಿ ಅಭಿನಂದಿಸಿದರು.

CM Siddharamaiah ನಾಡಿನ ಜನರೆಲ್ಲ ವಿವೇಕಾನಂದರ ಚಿಂತನೆಗಳನ್ನ ಅರಿತು ವಿವೇಕ ಬೆಳೆಸಿಕೊಳ್ಳಲಿ- ಸಿದ್ಧರಾಮಯ್ಯ

0

CM Siddharamaiah ಭಾರತ ಬಲಿಷ್ಠವಾಗಿ ಬೆಳೆಯಬೇಕಾದರೆ ಮೊದಲು ಬಡವರಿಗೆ ಹೊಟ್ಟೆ ತುಂಬಾ ಅನ್ನ ಮತ್ತು ಸ್ವತಂತ್ರ ಚಿಂತನೆಗೆ ಅವಕಾಶ ನೀಡುವ ಶಿಕ್ಷಣ ಸಿಗಬೇಕು, ಪುರೋಹಿತಷಾಹಿ ಯಜಮಾನಿಕೆ ಮತ್ತು ಸಾಮಾಜಿಕ ಶೋಷಣೆ ಕೊನೆಗೊಳ್ಳಬೇಕು ಎಂದು ದಿಟ್ಟತನದಿಂದ ಹೇಳಿದವರು ಸ್ವಾಮಿ ವಿವೇಕಾನಂದರು ಎಂದು ಸಿದ್ಧರಾಮಯ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಹಿಂದೂ ಮತ್ತು ಇಸ್ಲಾಂ ಧರ್ಮಗಳ ಚಿಂತನೆಗಳ ಮಿಲನವಾಗಬೇಕು, ವೇದಾಂತದ ಮೆದುಳು ಮತ್ತು ಇಸ್ಲಾಮಿನ ದೇಹ – ಇದು ನಮ್ಮ ಮುನ್ನಡೆಗೆ ದಾರಿ ತೋರಬೇಕು ಎಂಬ ದಾರ್ಶನಿಕ ನುಡಿಗಳನ್ನಾಡಿದವರು ಸ್ವಾಮಿ ವಿವೇಕಾನಂದರು..

ರಾಜಕಾರಣಿ ಮತ್ತು ಆಡಳಿತಗಾರನಾಗಿ ನಾನು ಕೈಗೊಳ್ಳುತ್ತಾ ಬಂದ ನೀತಿ-ನಿರ್ಧಾರಗಳಲ್ಲಿ ಹಿಂದೂ ಧರ್ಮದ ಸುಧಾರಕ ಸ್ವಾಮಿ ವಿವೇಕಾನಂದರ ಚಿಂತನೆಗಳ ಪ್ರೇರಣೆ ಇದೆ ಎನ್ನುವುದನ್ನು ವಿನೀತನಾಗಿ ಅರಿಕೆ ಮಾಡಿಕೊಳ್ಳುವೆ.

ತಮ್ಮ ಅಲ್ಪಾಯುಷ್ಯದ ಅವಧಿಯ ಪ್ರತಿಯೊಂದು ಗಳಿಗೆಯನ್ನು ಹಿಂದೂ ಧರ್ಮದ ಸುಧಾರಣೆಗಾಗಿ ಅವಿರತವಾಗಿ ಶ್ರಮಿಸಿದ ದಾರ್ಶನಿಕ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬದ ದಿನ ಅವರನ್ನು ಗೌರವ ಮತ್ತು ಕೃತಜ್ಞತಾ ಭಾವದಿಂದ ನೆನೆಯುವೆ.

CM Siddharamaiah ನಾಡಿನ ಜನರೆಲ್ಲರು ವಿವೇಕಾನಂದರ ಚಿಂತನೆಗಳನ್ನು ಅರಿತುಕೊಂಡು ವಿವೇಕವನ್ನು ಬೆಳೆಸಿಕೊಳ್ಳಲಿ ಎಂದು ಹಾರೈಸುವೆ ಎಂದು
ನಾಡಿನ ಯುವಜನತೆಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಷ್ಟ್ರೀಯ ಯುವದಿನ ಶುಭಾಶಯಗಳನ್ನ ಕೋರಿದ್ದಾರೆ.

Department of Kannada and Culture ಜನವರಿ 14. ಶರಣ ಸಿದ್ಧರಾಮೇಶ್ವರ ಜಯಂತಿಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

0

Department of Kannada and Culture ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಜ. 14 ರಂದು ಬೆಳಗ್ಗೆ 11.00ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ತಂಗಡಗಿ ಶಿವರಾಜ್ ಸಂಗಪ್ಪ ವಿಶೇಷ ಆಹ್ವಾನಿತರಾಗಿ ಆಗಮಿಸುವರು.
Department of Kannada and Culture ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಎಸ್.ಎನ್.ಚನ್ನಬಸಪ್ಪ ವಹಿಸಲಿದ್ದು, ಭದ್ರಾವತಿ ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ, ಸಾಗರ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮ ನಿಯಮಿತದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನಸಭೆ ಮತ್ತು ವಿಧಾನ ಪರಿಷತ್ ಶಾಸಕರುಗಳು, ವಿವಿಧ ನಿಗಮ/ ಮಂಡಳಿ/ ಪ್ರಾಧಿಕಾರಗಳ ಅಧ್ಯಕ್ಷರುಗಳು, ಜಿಲ್ಲಾ ಮತ್ತು ತಾಲೂಕು ಭೋವಿ ವಿದ್ಯಾವರ್ಧಕ ಸಂಘದ ಅಧ್ಯಕ್ಷರುಗಳು, ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಪೊಲೀಸ್ ಅಧೀಕ್ಷಕರು, ಮಹಾನಗರಪಾಲಿಕೆ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿ, ಸಿಬ್ಬಂದಿ ವರ್ಗ ಮತ್ತು ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಳ್ಳುವರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ದೇಶಾದ್ರಿ ಹೊಸ್ಮನೆ ವಿಶೇಷ ಉಪನ್ಯಾಸ ನೀಡುವರು.

India Scouts and Guides ನೀತಿ ಬೋಧಕ ಪಾಠವನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಲು ಕ್ರಮ – ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ

0

India Scouts and Guides ಸಮಾಜಮುಖಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಸ್ಕೌಟ್ಸ್, ಗೈಡ್ ದಳ ಸ್ಥಾಪಿಸಲು ಚಿಂತನೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಶತಮಾನೋತ್ಸವ ಹಾಗೂ ಜಿಲ್ಲಾ ಮಟ್ಟದ ರ‍್ಯಾಲಿ ಉದ್ಘಾಟಿಸಿ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗುತ್ತಾರೆ. ನೀತಿ ಬೋಧನೆ ಮಾಡುವ ಒಂದು ಪಾಠವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಸಮಾಜ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಉತ್ತಮವಾದ ಅವಕಾಶವಿದೆ. ಸ್ಕೌಟ್ಸ್ ಗೈಡ್ಸ್ ಚಳುವಳಿ ಮನೆ ಮನೆಗಳನ್ನು ತಲುಪಬೇಕು ಎಂದು ಹೇಳಿದರು.

ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಸಂಸ್ಥೆ ಈ ಮಟ್ಟಕ್ಕೆ ಬೆಳೆಯಲು ಶ್ರಮಿಸಿದ ಗಣ್ಯರನ್ನು ನಾವು ನೆನಪು ಮಾಡಿಕೊಳ್ಳಲೇಬೇಕು. ಶಿವಮೊಗ್ಗದ ಜಿಲ್ಲಾ ಸಂಸ್ಥೆ ಶತಮಾನೋತ್ಸವ ಹಾಗೂ ಟಿ.ವಿ.ನಾರಾಯಣಶಾಸ್ತ್ರಿಗಳ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಮ್ಮ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ಮುಖ್ಯ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಮಾತನಾಡಿ, ಶತಮಾನೋತ್ಸವ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲಾ ಜಿಲ್ಲೆಯ ಪದಾಧಿಕಾರಿಗಳಿಗೆ ಸಾರ್ವಜನಿಕರಿಗೆ ದಾನಿಗಳಿಗೆ ಅಭಿನಂದಿಸಿ ಗೌರವಿಸಿದರು. ಸಂಸ್ಥೆ ಕಟ್ಟಿ ಬೆಳೆಸಲು ಸಹಕರಿಸಿದ ನೂರು ಜನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು.

India Scouts and Guides ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ರುದ್ರೇಗೌಡ, ಎಂಎಲ್‌ಸಿ ಬಲ್ಕಿಶ್ ಬಾನು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಡಿಸಿ ಅಭಿಷೇಕ್, ಭಾರತಿ ಚಂದ್ರಶೇಖರ, ರಾಜ್ಯ ಉಪಾಧ್ಯಕ್ಷ ಮಹೇಶ್, ಆಯುಕ್ತ ಕೆ.ರವಿ, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಚೂಡಾಮಣಿ ಪವಾರ್, ಎಸ್.ಜಿ.ಆನಂದ್ ಇತರರಿದ್ದರು.

Rotary Club Shimoga ಇಂದಿನ ಕೆಲವು ತಂದೆ-ತಾಯಂದಿರು ಮಕ್ಕಳಿಗೆ ಸಂಸ್ಕಾರ, ಶಿಸ್ತು ಕಲಿಸುವಲ್ಲಿ ವಿಫಲರಾಗಿದ್ದಾರೆ- ಡಾ.ನಾಗೇಶ್ ಬಿದರಗೋಡು

0

Rotary Club Shimoga ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಜತೆಯಲ್ಲಿ ಬಾಲ್ಯದಿಂದಲೇ ಸಂಸ್ಕಾರ ಕಲಿಸಬೇಕು. ಪಾಲಕರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಉಪನ್ಯಾಸಕ ಡಾ. ನಾಗೇಶ್ ಬಿದಿರಗೋಡು ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಮತ್ತು ವೈಜ್ಞಾನಿಕ ಶಿಕ್ಷಣ ಪದ್ಧತಿಗೂ ಬಹಳ ವ್ಯತ್ಯಾಸ ಕಾಣುತ್ತಿದ್ದೇವೆ. ಅಂದು ತಂದೆ ತಾಯಿಯರಿಗೆ ಗೌರವ ಕೊಡುವುದರ ಜತೆ ಸಂಸ್ಕಾರ ತಿಳಿಸಿಕೊಡುತ್ತಿದ್ದರು. ಆದರೆ ತಂದೆ ತಾಯಿಯರು ಸಂಸ್ಕಾರ ಮತ್ತು ಶಿಸ್ತು ಕಲಿಸುವಲ್ಲಿ ವಿಫಲವಾಗಿದ್ದಾರೆ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ಪ್ರತಿ ನಿತ್ಯ ಜೀವನವನ್ನು ಉತ್ತಮವಾಗಿ ಮುನ್ನಡೆಸಬೇಕು. ಅನಾವಶ್ಯಕ ಚಿಂತನೆಗಳನ್ನು ಮಾಡಬಾರದು. ಮಕ್ಕಳಿಗೆ ಹಿರಿಯರು ಅಗತ್ಯ ತಿಳವಳಿಕೆಗಳನ್ನು ಒದಗಿಸಬೇಕು ಎಂದು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಜತೆಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಉಚಿತ ಆರೋಗ್ಯ ಶಿಬಿರ ಹಾಗೂ ಜಾಗೃತಿ ಶಿಬಿರಗಳನ್ನು ನಡೆಸುತ್ತಿದೆ. ಸಂಪನ್ಮೂಲ ವ್ಯಕ್ತಿಗಳ ಮುಖಾಂತರ ವೈವಿಧ್ಯ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ ರಾಂಪುರ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಯಲ್ಲಿ ಶಿಸ್ತಿನ ಜೀವನಶೈಲಿ ರೂಪಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಉನ್ನತ ಸಾಧನೆ ಮಾಡುವಂತೆ ಪ್ರೇರಣೆ ನೀಡಬೇಕು ಎಂದು ತಿಳಿಸಿದರು.

Rotary Club Shimoga ರೋಟರಿ ಜಿಲ್ಲೆ ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್, ರವಿಶಂಕರ್, ಚಂದ್ರಹಾಸ್ ರಾಯ್ಕರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಆದಿಮೂರ್ತಿ, ಕೇಶವಪ್ಪ, ಶ್ರೀಕಾಂತ್, ಎ.ಒ.ಮಹೇಶ್, ರಮೇಶ್ ಭಟ್, ಸುವರ್ಣಾ, ಧರಣೇಂದ್ರ ದಿನಕರ್, ಡಿ ಎಸ್ ರವಿಶಂಕರ್, ರೋಟರಿ ಶಿವಮೊಗ್ಗ ಪೂರ್ವ ಸದಸ್ಯರು ಹಾಜರಿದ್ದರು.

Western Ghats ಪಶ್ಚಿಮ ಘಟ್ಟ ಉಳಿಸುವ ಹೋರಾಟದಲ್ಲಿ ನಿಮ್ಮೊಂದಿಗಿದ್ದೇನೆ- ಶಾಸಕ ಭೀಮಣ್ಣ ನಾಯಕ್

0

Western Ghats ಪಶ್ಚಿಮ ಘಟ್ಟವನ್ನು ಉಳಿಸುವುದು ಮತ್ತು ನದಿ ಕಣಿವೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ” ಎಂದು ಪರಿಸರ ವಾದಿಗಳು ಮತ್ತು ಆತಂಕದಲ್ಲಿರುವ ಅಪಾರ ಕೃಷಿ ಕುಟುಂಬಗಳ ಸಮಾವೇಶವನ್ನು ಉದ್ದೇಶಿಸಿ ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯಕ್ ಮಾತನಾಡಿದರು‌.

Western Ghats ಸೋಂದಾ ಸ್ವರ್ಣವಲ್ಲಿ ಶ್ರೀಗಳು ಹಾಗೂ ಮಲೆಮಠದ ಶ್ರೀಗಳ ಪಾವನ ಸಾನ್ನಿಧ್ಯದಲ್ಲಿ ನಡೆದ ಈ ಬೃಹತ್ ಸಮಾವೇಶದಲ್ಲಿ ‘ಪಶ್ಚಿಮ ಘಟ್ಟ ಉಳಿಸೋಣ, ನದಿ ಕಣಿವೆ ಸಂರಕ್ಷಿಸೋಣ’ ಎಂಬ ಘೋಷವಾಕ್ಯಗಳು ಮೊಳಗಿದವು. ನೈಸರ್ಗಿಕ ಸಮತೋಲನಕ್ಕೆ ಧಕ್ಕೆ ತರುವ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿರುವ ಆತಂಕವನ್ನು ಶಮನಗೊಳಿಸುವ ಅಗತ್ಯವಿದ್ದು, ಪರಿಸರ ರಕ್ಷಣೆಯ ಈ ಮಹತ್ವದ ಹೋರಾಟದಲ್ಲಿ ನಾನು ಸದಾ ನಿಮ್ಮೊಂದಿಗಿದ್ದೇನೆ ಎಂದು ಶಾಸಕ ಭೀಮಣ್ಣ ನಾಯಕ್ ಭರವಸೆ ನೀಡಿದರು.