Sunday, February 22, 2026
Sunday, February 22, 2026
Home Blog Page 228

Missing Case ಶಿವಮೊಗ್ಗದಿಂದ ಮಹಿಳೆ ನಾಪತ್ತೆ.ಸುಳಿವು ಸಿಕ್ಕವರು ಮಾಹಿತಿ ನೀಡಲು ಕೋಟೆ ಪೊಲೀಸ್ ಪ್ರಕಟಣೆ.

0

Missing Case ಖಿನ್ನತೆಯಿಂದ ಬಳಲುತ್ತಿದ್ದ ಸುಮಾರು 75 ವರ್ಷದ ನಿಂಗಮ್ಮ ಎಂಬುವವರು ಜು.12 ರಂದು ಮಧ್ಯಾಹ್ನ 3.45ಕ್ಕೆ ಮನೆ ಆಚೆ ಬಂದಿದ್ದು, ವಾಪಾಸ್ ಮನೆಗೆ ಬರದೆ ಕಾಣೆಯಾಗಿದ್ದಾರೆ.
ಕಾಣೆಯಾದ ವ್ಯಕ್ತಿ ಸುಮಾರು 5.5 ಡಿ ಎತ್ತರ, ಕೋಲು ಮುಖ, ಬಿಳಿ ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಚೆಕ್ಸ್, ಬಣ್ಣಧ Missing Case ಬ್ಲೌಸ್ ಹಾಗೂ ಗ್ರೇ ಬಣ್ಣದ ಸೇರೆ ಧರಿಸಿದ್ದಾರೆ, ಇವರು ಕನ್ನಡ ಮತ್ತು ಉರ್ದು ಭಾಷೆ ಮಾತಾನಾಡುತ್ತಾರೆ.
ಕಾಣೆಯಾದ ವ್ಯಕ್ತಿಯು ಎಲ್ಲಿಯಾದರೂ ಕಂಡುಬAದಲ್ಲಿ ಕೋಟೆ ಪೊಲೀಸ್ ಠಾಣೆ, ದೂ.ಸಂ: 08182-261415, 08182-261404, 261400, 08192-237830, sdposhimogashi@ksop.gov.in ಮಾಹಿತಿ ನೀಡಬೇಕೆಂದು ಕೋಟೆ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shivamogga Rangayana ರಂಗಾಯಣಕ್ಕೆ ತಂತ್ರಜ್ಞರು & ಕಲಾವಿದರಿಂದ ಅರ್ಜಿ ಆಹ್ವಾನ

0

Shivamogga Rangayana ಶಿವಮೊಗ್ಗ ರಂಗಾಯಣದ ರೆಪರ್ಟರಿಗೆ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರಿಗೆ 3 ಜನ ತಂತ್ರಜ್ಞರು ಹಾಗೂ 12 ಜನ ಕಲಾವಿದರನ್ನು ನೇಮಕ ಮಾಡಿಕೊಳ್ಳಲು ಆಸ್ತಕರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆ.11 ಕೊನೆಯ ದಿನಾಂಕವಾಗಿದ್ದು, ಅರ್ಜಿಯನ್ನು ರಂಗಾಯಣ ಶಿವಮೊಗ್ಗ ಕಚೇರಿಯಲ್ಲಿ ಖುದ್ದಾಗಿ ಪಡೆಯಬಹುದು ಅಥವಾ ಫೇಸ್‌ಬುಕ್ ಮೂಲಕ ಅಥವಾ rangayanashivamogga.karnataka.gov.in ಮೂಲಕ ಹಾಗೂ ಗೂಗಲ್ ಫಾರ್ಮ್ ಮೂಲಕ ಸಹ ಡೌನ್‌ಲೋಡ್ ಮಾಡಿಕೊಂಡು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
3 ಜನ ತಂತ್ರಜ್ಞರನ್ನು ಗೌರವ ಸಂಭಾವನೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುವುದು(ಸಂಗೀತ/ಧ್ವನಿ-ಬೆಳಕು/ರAಗಸಜ್ಜಿಕೆ-ವಸ್ತçವಿಭಾಗ). ಪ್ರತಿ ವಿಭಾಗದಲ್ಲಿ ಕನಿಷ್ಠ 10 ವರ್ಷಗಳ ರಂಗಾನುಭವ ಹೊಂದಿರಬೇಕು. ತಂತ್ರಜ್ಞರಿಗೆ ಕನ್ನಡ ಭಾಷೆ ಓದುವ, ಬರೆಯುವ, ಗ್ರಹಿಸುವ ಸಾಮರ್ಥ್ಯವಿರಬೇಕು. ರಂಗಾನುಭವದ ಜೊತೆಗೆ ಶೈಕ್ಷಣಿಕ ಅರ್ಹತೆಗಳಿರುವವರಿಗೆ ಆದ್ಯತೆ ನೀಡಲಾಗುವುದು. ಈ ಆಯ್ಕೆಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದ್ದು ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇರುತ್ತದೆ. ತಂತ್ರಜ್ಞರಿಗೆ ಗೌರವ ಸಂಭಾವನೆಯಾಗಿ ಮಾಸಿಕ
ರೂ. 25,000 ಗಳನ್ನು ನೀಡಲಾಗುವುದು. ಇತರೆ ಯಾವುದೇ ಭತ್ಯೆಗಳು ಇರವುದಿಲ್ಲ. ಊಟ ವಸತಿ ವ್ಯವಸ್ಥೆ ತಂತ್ರಜ್ಞರೆ ಮಾಡಿಕೊಳ್ಳಬೇಕು. ತಂತ್ರಜ್ಞರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ನಿರ್ವಹಿಸದೆ ಇದ್ದಲ್ಲಿ ಅವರ ನೇಮಕವನ್ನು ಯಾವುದೇ ಸಂದರ್ಭದಲ್ಲಿ ರದ್ದುಗೊಳಿಸುವ ಅಧಿಕಾರಿ ರಂಗಸಮಾಜಕ್ಕೆ ಇರುತ್ತದೆ. ತಂತ್ರಜ್ಞರ ನೇಮಕದ ಸಂದರ್ಭದಲ್ಲಿ ರೋಸ್ಟರ್ ನಿಯಮಗಳು ಕಡ್ಡಾಯವಾಗಿರುವುದಿಲ್ಲ. ತಂತ್ರಜ್ಞರಿಗೆ ವಯಸ್ಸಿನ ವಯೋಮಿತಿ ಇರುವುದಿಲ್ಲ.
Shivamogga Rangayana ಶಿವಮೊಗ್ಗ ರಂಗಾಯಣಕ್ಕೆ 12 ಜನ ಕಲಾವಿದರನ್ನು ಗೌರವ ಸಂಭಾವನೆಯ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು. 12 ಜನ ಕಲಾವಿದರಲ್ಲಿ ಕನಿಷ್ಟ 4 ಹುದ್ದೆ ಮಹಿಳೆಯರಿಗೆ ಮೀಸಲಿದ್ದು, 4 ಪರಿಶಿಷ್ಟ ಜಾತಿ/ವರ್ಗದ ಕಲಾವಿದರಿಗೆ ಮೀಸಲಾಗಿದೆ. ಈ ನೇಮಕದಲ್ಲಿ ಕನಿಷ್ಟ ಶೇ.50 ಹುದ್ದೆಗಳನ್ನು ಪ್ರಾದೇಶಿಕ ವಲಯದ ಕಲಾವಿದರಿಗೆ ಮೀಸಲಿಡಲಾಗಿದೆ. ರಂಗ ಪರಿಣತಿಯೇ ಪ್ರಥಮ ಅರ್ಹತೆ. ರಂಗಪ್ರಯೋಗಗಳಲ್ಲಿ ಭಾಗವಹಿಸಿದವರಿಗೆ ಆದ್ಯತೆಯನ್ನು ನೀಡಲಾಗುವುದು. ಆಯ್ಕೆಯಾಗುವ ಕಲಾವಿದರು ರೆಪರ್ಟರಿಯ ಭಾಗವಾಗಿದ್ದು, ರಂಗಶಿಕ್ಷಣ ಎಲ್ಲಾ ವಿಭಾಗಗಳಲ್ಲಿ ತರಬೇತಿ ಪಡೆಯುವುದರ ಜೊತೆಗೆ ಅಭಿಯನದ ಜವಾಬ್ದಾರಿಯನ್ನು ನಿಭಾಯಿಸಬೇಕು. ಆಯ್ಕೆಯಾದ ಕಲಾವಿದರಿಗೆ ಮಾಸಿಕ ರೂ.18,000 ಗೌರವ ಸಂಭಾವನೆಯಾಗಿ ನೀಡಲಾಗುವುದು. ಇತರೆ ಯಾವುದೇ ಭತ್ಯೆಗಳನ್ನು ನೀಡಲಾಗುವುದಿಲ್ಲ. ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲಾವಿದರೇ ಮಾಡಿಕೊಳ್ಳಬೇಕು. ಕಲಾವಿದರ ವಯಸ್ಸು ಕನಿಷ್ಟ 18 ವರ್ಷಗಳಿಂದ ಗರಿಷ್ಟ 32 ವರ್ಷ ಮೀರಬಾರದು. ಪಾರಂಪರಿಕ ಕಲೆಯ ಕುಟುಂಬಗಳಿAದ ಬಂದ ಕಲಾವಿದರಿಗೆ ಆದ್ಯತೆ ನೀಡಲಾಗುವುದು. ಇಂತಹ ಪ್ರಕರಣದಲ್ಲಿ ವಯೋಮಿತಿಯನ್ನು 5 ವರ್ಷ ಸಡಿಲಿಸಬಹುದು. ಕಲಾವಿದರ ಆಯ್ಕೆಯನ್ನು ಪಾರದರ್ಶಕವಾಗಿ ರಂಗಸಮಾಜವು ಆಯಾ ರಂಗಾಯಣಗಳ ಅಧ್ಯಕ್ಷತೆಯಲ್ಲಿ ರಚಿಸುವ ಉಪಸಮಿತಿಯು ಸಂದರ್ಶನದ ಮೂಲಕ ಮಾಡುತ್ತದೆ.
ಮೇಲ್ಕಂಡ ತಂತ್ರಜ್ಞರು ಹಾಗೂ ಕಲಾವಿದರು ಆಯಾ ರಂಗಾಯಣ ನಿರ್ದೇಶಕರ ಹಾಗೂ ಆಡಳಿತಾಧಿಕಾರಿಗಳ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ. ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯು ರಂಗಾಯಣ ಚಟುವಟಿಕೆಗಳ ಅಗತ್ಯದ ಹಿನ್ನೆಯಲ್ಲಿ ಗೌರವ ಸಂಭಾವನೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇವು ಸರ್ಕಾರದ ಖಾಯಂ ಹುದ್ದೆಗಳಾಗಿರುವುದಿಲ್ಲ. ಆಯ್ಕೆಯಾದ ಕಲಾವಿದರು ತಂತ್ರಜ್ಞರು ರಂಗಸಮಾಜವು ವಿಧಿಸುವ ಷರತ್ತುಗಳಿಗೆ ಬದ್ದರಾಗಿರತಕ್ಕದ್ದು.
ಆಸಕ್ತ ಕಲಾವಿದರು, ತಂತ್ರಜ್ಞರು ಭರ್ತಿ ಮಾಡಿದ ಅರ್ಜಿಯನ್ನು ಆ,11 ರೊಳಗೆ ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಂಸ್ಕೃತಿ ಭವನ, ಅಶೋಕನಗರ, ಹೆಲಿಪ್ಯಾಡ್ ಹಿಂಭಾಗ ಶಿವಮೊಗ್ಗ-577201 ಈ ವಿಳಾಸಕ್ಕೆ ಖುದ್ದಾಗಿ ಅಂಚೆ ಮೂಲಕ ಅಥವಾ ಇ-ಮೇಲ್ ವಿಳಾಸ; admn.rangayanashivamogga@gmail.com ಮೂಲಕ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:08182-256353 ಗೆ ಸಂಪರ್ಕಿಸಬಹುದು ಎಂದು ರಂಗಾಯಣದ ಆಡಳಿತಾಧಿಕಾರಿ ಡಾ.ಶೈಲಜಾ ಎ.ಸಿ. ತಿಳಿಸಿದ್ದಾರೆ.

Delhi World School ಕಂಸಾಳೆ ಜನಪದ ನೃತ್ಯಸ್ಪರ್ಧೆ ಡೆಲ್ಲಿವರ್ಡ್ ಶಾಲಾ ಮಕ್ಕಳಿಗೆ ಪ್ರಥಮ ಬಹುಮಾನ

Delhi World School ಶಿವಮೊಗ್ಗ ನಗರದ ಜ್ಞಾನದೀಪ ಶಾಲೆಯಲ್ಲಿ ನಡೆದ ಎಸ್‌ಎಸ್‌ಎಸ್‌ಸಿ ಆಯೋಜಿಸಿದ ಇಂಟರ್ ಸಿಬಿಎಸ್‌ಸಿ ಶಾಲೆಯ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಡೆಲ್ಲಿ ವರ್ಡ್ ಶಾಲೆಯ ಮಕ್ಕಳು ಜಾನಪದ ಕಲೆಗಳಲ್ಲಿ ಒಂದಾದ ಕಂಸಾಳೆ ಜಾನಪದ ನೃತ್ಯವನ್ನು ಮನಮೋಹಕವಾಗಿ ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮಕ್ಕಳಿಗೆ ಶಾಲೆಯ ನೃತ್ಯ ಶಿಕ್ಷಕ ಕಿರಣ್, ಶಾಲೆಯ ಪ್ರಾಂಶುಪಾಲೆ ದಿವ್ಯ ಶೆಟ್ಟಿ ಅಭಿನಂದಿಸಿದ್ದಾರೆ.

Sahyadri Narayana Multispeciality Hospital ಜುಲೈ 28. ವಿಶ್ವ ಹೆಪಟೈಟಿಸ್ ದಿನ. ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ

0

Sahyadri Narayana Multispeciality Hospital ವಿಶ್ವ ಹೆಪಟೈಟಿಸ್ ದಿನದ ಪ್ರಯುಕ್ತ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ
ಉಚಿತ ಹೆಪಟೈಟಿಸ್ ‘ಬಿ’ ತಪಾಸಣಾ ಶಿಬಿರ ನಡೆಯಲಿದೆ.

ಪ್ರತಿ ವರ್ಷ ಜುಲೈ ೨೮ರಂದು ವಿಶ್ವ ಹೆಪಟೈಟಿಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಪ್ರಯುಕ್ತ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜುಲೈ ೨೮ ರಿಂದ ಆಗಸ್ಟ್ ೨ನೇ ತಾರೀಖಿನವರೆಗೆ ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ರವರೆಗೆ ಉಚಿತವಾಗಿ ಹೆಪಟೈಟಿಸ್ ‘ಬಿ’ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಉಚಿತವಾಗಿ ನೊಂದಣಿ ಮಾಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಉಚಿತವಾಗಿ ಹೆಪಟೈಟಿಸ್‌ ʼಬಿʼ ಲಸಿಕೆ ಪಡೆಯಬಹುದು.

ಭಾರತ ದೇಶದಲ್ಲಿ ಹೆಪಟೈಟಿಸ್ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಗಣನಿಯವಾಗಿ ಏರಿಕೆಯಾಗುತ್ತಿದೆ. ಹೆಪಟೈಟಿಸ್ ‘ಬಿ’ ರೋಗಕ್ಕೆ ಔಷದಿ ಹಾಗೂ ಲಸಿಕೆ ನೀಡದಿದ್ದರೆ ಅದು ಅಪಾಯಕಾರಿ ಮತ್ತು ಮರಣಕ್ಕೆ ಕಾರಣವಾಗಬಹುದು ಎಂದು ಆಸ್ಪತ್ರೆಯ ಯಕೃತ್‌ ಮತ್ತು ಗ್ಯಾಸ್ಟೊಎಂಟರಾಲಜಿ ವಿಭಾಗದ ವೈದ್ಯರಾದ ಡಾ. ಶಿವಕುಮಾರ್ ವಿ. ಹಾಗೂ ಡಾ. ಸುಮೇಶ್ ನಾಯರ್ ಎಸ್ ತಿಳಿಸಿದರು.

Sahyadri Narayana Multispeciality Hospital ಹೆಪಟೈಟಿಸ್ ‘ಬಿ’ ರೋಗವನ್ನು ತಡೆಗಟ್ಟಲು ಹೆಪಟೈಟಿಸ್ ‘ಬಿ’ ಲಸಿಕೆಯು ಹೇರಳವಾಗಿ ಲಭ್ಯವಿದ್ದು ಅದನ್ನು ಮುಂಚಿತವಾಗಿ ಹಾಕಿಸಿಕೊಂಡಲ್ಲಿ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದಾಗಿದೆ. ಹೆಪಟೈಟಿಸ್ ‘ಸಿ’ ದೃಢಪಟ್ಟಲ್ಲಿ ಅಂತಹ ರೋಗಿಗಳಿಗೆ ಚಿಕಿತ್ಸೆಯು ಲಭ್ಯವಿರುತ್ತದೆ ಎಂದು ಆಸ್ಪತ್ರೆಯ ವೈವಸ್ಥಾಪಕ ನಿರ್ದೆಶಕರಾದ ಶ್ರೀಯುತ ವರ್ಗೀಸ್ ಪಿ ಜಾನ್ ರವರು ತಿಳಿಸಿದ್ದಾರೆ.
ಮುಂಗಡವಾಗಿ ನೋಂದಣಿ ಮಾಡಿಸಲು ಕರೆಮಾಡಿ – ೯೫೧೩೦೯೭೪೦೦
ದಿನಾಂಕ – ಜುಲೈ ೨೮ರಿಂದ ಆಗಸ್ಟ್ ೨ರವರೆಗೆ
ಸಮಯ – ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೨ ರವರೆಗೆ ಶಿಬಿರ ನಡೆಯಲಿದೆ.

Department of School Education Education ಉತ್ತಮ ಶಿಕ್ಷಕ/ ಶಿಕ್ಷಕಿ ರಾಜ್ಯಮಟ್ಟದ ಪ್ರಶಸ್ತಿಗೆ ಆನ್ ಲೈನ್ ಅರ್ಜಿ ಆಹ್ವಾನ

0

Department of School Education Education ಶಾಲಾ ಶಿಕ್ಷಣ ಶಿಕ್ಷಣ ಇಲಾಖೆಯು 2025-26 ನೇ ಸಾಲಿನ “ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ / ಶಿಕ್ಷಕ” ಪ್ರಶಸ್ತಿಗೆ ಆನ್-ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ನಿಗಧಿತ ದಿನಾಂಕದೊಳಗಾಗಿ ಅಗತ್ಯ ದಾಖಲೆಗಳೊಂದಿಗೆ ತಮ್ಮ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ ಅವರು ತಿಳಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ತರಗತಿ ಕೋಣೆಯಲ್ಲಿ ವಿಷಯ ಪಾಂಡಿತ್ಯದ ಜೊತೆಗೆ ಪೂರಕ ಪರಿಕರಗಳೊಂದಿಗೆ ಬೋಧನಾ ಚಟುವಟಿಕೆಗಳನ್ನು Department of School Education Education ಸಾದರಪಡಿಸಿ ಮಕ್ಕಳಲ್ಲಿ ಶಾಶ್ವತ ಮತ್ತು ಸಂತಸದಾಯಕ ಕಲಿಕೆಯನ್ನುಂಟು ಮಾಡುವ ಬಹುಮುಖ ವ್ಯಕ್ತಿತ್ವದ ಶಿಕ್ಷಕರನ್ನು, ಉಪನ್ಯಾಸಕರನ್ನು, ಹಾಗೂ ಪ್ರಾಂಶುಪಾಲರನ್ನು, ಗುರುತಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ವರ್ಷ ಸಪ್ಟೆಂಬರ್-05 ರಂದು ಕ್ರಮವಾಗಿ ರಾಷ್ಟ್ರ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡುವುದರ ಮೂಲಕ ಗೌರವಿಸುತ್ತಿದೆ. ಇದರನ್ವಯ ಶಿಕ್ಷಕರಿಗೆ ಆನ್‌-ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ಶಿಕ್ಷಕರು ದಿನಾಂಕ:25/07/2025 ರಿಂದ ದಿನಾಂಕ; 10/08/2025 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shimoga News ಪ್ರವಾಸದಿಂದ ಜೀವನೋತ್ಸಾಹ,ಜ್ಞಾನವೃದ್ಧಿ- ಅ.ನಾ.ವಿಜೇಂದ್ರರಾವ್

0

Shimoga News ನಮ್ಮ ದಿನನಿತ್ಯದ ಕಾರ್ಯ ಚಟುವಟಿಕೆ ನಡುವೆ ಆಗಾಗ ಪ್ರವಾಸ ಕೈಗೊಳ್ಳುವುದರಿಂದ ಜೀವನದಲ್ಲಿ ಹೊಸ ಉತ್ಸಾಹ ಬರುವುದರ ಜೊತೆಗೆ ದೈಹಿಕ ಮಾನಸಿಕ ಸದೃಢತೆ. ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಪ್ರವಾಸೋದ್ಯಮ ವೇದಿಕೆ ಸಂಚಾಲಕರಾದ ಅ.ನಾ ವಿಜಯೇಂದ್ರ ರಾವ್ ನುಡಿದರು ಅವರು ಸಿಗಂದೂರುಚೌಡೇಶ್ವರಿ ಸೇತುವೆಗೆ ಹಾಗೂ ಐತಿಹಾಸಿಕ ಸ್ಥಳಗಳಿಗೆ ಏರ್ಪಡಿಸಲಾದ ಪ್ರವಾಸ ಉದ್ಘಾಟಿಸಿ ಮಾತನಾಡಿದರು
ಶಿವಮೊಗ್ಗ ಸುತ್ತಮುತ್ತಲವ ಪ್ರದೇಶಗಳನ್ನು ಜನಸಾಮಾನ್ಯರಿಗೂ ತಿಳುವಳಿಕೆ ಮೂಡಿಸುವ ಕಾರ್ಯವನ್ನು ಈ ರೀತಿ ಹಮ್ಮಿಕೊಳ್ಳುತ್ತಿದ್ದೇವೆ. ಇದಕ್ಕೆ ನಗರದ ಜನತೆಯ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದರು. ಈಗಾಗಲೇ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯಿಂದ ಅಂಡಮಾನ್ ಪ್ರವಾಸಗಳನ್ನು ಸಾಕಷ್ಟು ಬಾರಿ ಮಾಡಿದ್ದೇವೆ ಮುಂಬರುವ ದಿನಗಳಲ್ಲಿ ಇನ್ನು ಅನೇಕ ಪ್ರವಾಸಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು
ಅಧ್ಯಕ್ಷತೆ ವಹಿಸಿದ್ದ ಡಿ ಎಂ ಶಂಕರಪ್ಪನವರು ಮಾತನಾಡುತ್ತಾ, ಕಳೆದ ಒಂದು ತಿಂಗಳಿನಿಂದ ಶ್ರೀಂಗೆರಿ, ಬಂಗಾರಮಕ್ಕಿ, ಬನವಾಸಿ ಇಂದು ಸಿಗಂದೂರು ಹೀಗೆ ವಾರದ ರಜಾ ದಿನಗಳಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ, ಯಶಸ್ಸಿಗೆ. ಹಾಗೆ ಈ ಪ್ರವಾಸಗಳಿಗೆ ಬೇರೆ ಬೇರೆ ಜಿಲ್ಲೆಗಳಿಂದಲೂ ಸಹ ಬರುತ್ತಿರುವುದು ವಿಶೇಷವಾಗಿದೆ ಎಂದು
ಸಹಕರಿಸುತ್ತಿರುವ ಎಲ್ಲರಿಗೂ
ಧನ್ಯವಾದಗಳನ್ನು ತಿಳಿಸಿದರು
Shimoga News ಬಸ್ ಮಾಲಿಕರ ಸಂಘದ ಅಧ್ಯಕ್ಷರಾದ ರಂಗಪ್ಪನವರು ಮಾತನಾಡುತ್ತಾ ನಗರದ ಹಲವರು ಸೇರಿ ಮಾಡಿಕೊಂಡಿರುವ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ವತಿಯಿಂದ ಇನ್ನೂ ಹಲವಾರು ಕಾರ್ಯಕ್ರಮ ಮಾಡುವ ಯೋಜನೆ ಮಾಡಿಕೊಂಡಿದ್ದಾರೆ, ಜನರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಪ್ರವಾಸಿ ತಾಣಗಳ ಪರಿಚಯವನ್ನು ಮಾಡಿಸುವುದರ ಜೊತೆಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಅದಕ್ಕೆ ನಮ್ಮ ಬಸ್ ಮಾಲಿಕರ ಸಹಕಾರ ಎಂದೆಂದು ಹೀಗೆ ಇರುತ್ತದೆ. ಪ್ರವಾಸಿಗರ ಸಂತೋಷವೆ ನಮ್ಮ ಸಂತೋಷ, ಸೇವೆಯೆ ನಮ್ಮ ಧ್ಯೇಯ ಎಂದರು.
ಸಿದ್ದಲಿಂಗಪ್ಪನವರು ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು, ಗೋಪಿನಾಥ್ ವಂದಿಸಿದರು ಜಿ.ವಿಜಯಕುಮಾರ್ ನಿರೂಪಿಸಿದರು.

Rotary Club Shimoga ನಿತ್ಯ ವ್ಯಾಯಾಮ, ಸತ್ವಯುತ ಆಹಾರ, ಸ್ವಚ್ಛ ಪರಿಸರದಿಂದ ಆರೋಗ್ಯ ರಕ್ಷಣೆ- ಆರ್.ಟಿ.ಎನ್.ಪ್ರಕಾಶ್

0

Rotary Club Shimoga ಶಿವಮೊಗ್ಗ ಆರೋಗ್ಯವಂತ ಮಕ್ಕಳಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಅದರಂತೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದರಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಶಿವಮೊಗ್ಗ ಮಲೆನಾಡು ರೋಟರಿ ಕ್ಲಬ್ ನ ಅಧ್ಯಕ್ಷರಾದ ಆರ್.ಟಿ.ಎನ್. ಪಿ.ಎಚ್.ಎಫ್. ಪ್ರಕಾಶ್ ಮೂರ್ತಿ ಹೇಳಿದರು.

ರೋಟರಿ ಇಂಟರ್ನ್ಯಾಷನಲ್‌ನ ಜುಲೈ ಥೀಮ್‌ಗೆ ಅನುಗುಣವಾಗಿ ಅರ್ಥಪೂರ್ಣವಾದ ಮಾತೃ ಮತ್ತು ಮಕ್ಕಳ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿನಿತ್ಯ ವ್ಯಾಯಾಮ ಸತ್ವಯುತ ಆಹಾರ ಬಳಕೆ ಸ್ವಚ್ಛತೆಯ ಪರಿಸರದಿಂದ ಬಾಣಂತಿಯರ ಹಾಗೂ ಗರ್ಭಿಣಿ ಮಹಿಳೆಯರ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ಸಮುದಾಯ ಸೇವೆಯ ಆಧಾರಸ್ತಂಭವಾಗಿ ತಾಯಿ ಮತ್ತು ಮಕ್ಕಳ ಆರೋಗ್ಯದ ಮೇಲೆ ರೋಟರಿ ಗಮನಹರಿಸುವ ಮಹತ್ವವನ್ನು ಎತ್ತಿ ತೋರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರಸಿದ್ಧ ಸ್ತ್ರೀರೋಗತಜ್ಞ ಡಾ. ಶ್ರೇಯಾ ಮಲ್ಲೇಶ್ ಮಾತನಾಡಿ, ಮಹಿಳೆಯರಲ್ಲಿ ಉಂಟಾಗುವ ಸಮಸ್ಯೆಯ ಲಕ್ಷಣ ಗುರುತಿಸುವುದು ಹಾಗೂ ವೈದ್ಯಕೀಯ ಪರೀಕ್ಷೆ ಬಗ್ಗೆ ಸೂಕ್ತ ಮಾಹಿತಿ ನೀಡಿದರು. ಪ್ರಸವಪೂರ್ವ ಮತ್ತು ಪ್ರಸವಪೂರ್ವ ಆರೈಕೆಯ ಬಗ್ಗೆ ಆಳವಾದ ಒಳನೋಟಗಳನ್ನು ಹಂಚಿಕೊಂಡರು. ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಆಹಾರ ಸಲಹೆಗಳ ಮೇಲೆ ಕೇಂದ್ರೀಕರಿಸುವ ಕ್ಲೀನ್ ಈಟ್ಸ್‌ನ ಶ್ರೀಮತಿ ಇಂಪಾನಾ ಅವರು ಅಮೂಲ್ಯವಾದ ಪೌಷ್ಟಿಕಾಂಶ ಅಧಿವೇಶನವನ್ನು ನಡೆಸಿದರು.

ಅಧಿವೇಶನವನ್ನು ಆರ್.ಟಿ.ಎನ್. ಪಿ.ಡಿ.ಜಿ. ರವಿ.ಹೆಚ್.ಎಲ್ ರವರು ಆಯೋಜಿಸಿ ಬೆಂಬಲಿಸಿದರು, ಅವರು ಕ್ಲಬ್ ಕಲಿಕಾ ಸಹಾಯಕರಾಗಿ ಸೇವೆ ಸಲ್ಲಿಸಿದರು, ಅವರು ರೋಟರಿಯ ವಿಶಾಲ ಗುರಿಗಳು ಮತ್ತು ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯ ತಂತ್ರಗಳ ಕುರಿತು ಸದಸ್ಯರಿಗೆ ಮಾರ್ಗದರ್ಶನ ನೀಡಿದರು.

Rotary Club Shimoga ಇದೇ ಸಂದರ್ಭದಲ್ಲಿ ಸಮುದಾಯ ಸಂಪರ್ಕದ ಭಾಗವಾಗಿ, ಹೊಸ ಮತ್ತು ನಿರೀಕ್ಷಿತ ತಾಯಂದಿರಿಗೆ ಬೇಬಿ ಕಿಟ್‌ಗಳು ಮತ್ತು ಪೌಷ್ಠಿಕ ಆಹಾರವನ್ನು ವಿತರಿಸಲಾಯಿತು.

ಶಿವಮೊಗ್ಗ ಮಲೆನಾಡು ರೋಟರಿ ಕ್ಲಬ್ ಆರೋಗ್ಯ ಜಾಗೃತಿ ಮತ್ತು ಸಮುದಾಯ ಸೇವೆಯ ಮೂಲಕ ಶಾಶ್ವತ ಬದಲಾವಣೆಯನ್ನು ಸೃಷ್ಟಿಸಲು ಬದ್ಧವಾಗಿದ್ದು, ಈ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿದ ರೋಟೇರಿಯನ್‌ಗಳು, ಅತಿಥಿಗಳು ಮತ್ತು ಭಾಗವಹಿಸುವವರ ಬೆಂಬಲವನ್ನು ಶ್ಲಾಘಿಸಿದರು.

ಒಂದು ಸಭೆಗೆ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ನ ಎಲ್ಲಾ ಸದಸ್ಯರು, ಕುಟುಂಬ ವರ್ಗದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಆರ್.ಟಿ.ಎನ್.
ಉಮಾ ಕುಲಕರ್ಣಿ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ಆರ್.ಟಿ.ಎನ್. ರಶ್ಮಿ ವಂದಿಸಿದರು. ರೋ. ರವಿ, ಜೋನಲ್ ಕೋ ಆರ್ಡಿನೇಟರ್ ಮಂಜುಳಾ ರಾಜು, ಆರ್.ಟಿ.ಎನ್. ಡಾ. ಸಿದ್ದಲಿಂಗ ಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Bhagavad Gita ಮಕ್ಕಳಲ್ಲಿ ಭಗವದ್ಗೀತೆ ಕಲಿಕೆ ಹೆಚ್ಚಾಗಬೇಕು- ಹನಿಯ ರವಿ

0

Bhagavad Gita ಭಗವದ್ ಗೀತೆ ಪ್ರಶಿಕ್ಷಣ ಶಿಬಿರ ಶ್ರಿ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ ಇವರ ಆಶ್ರಯ ದ ಲ್ಲಿ ಭಗವದ್ ಗೀತೆ ಅಭಿಯಾನ ದ ಪ್ರಶಿಕ್ಷಣ ಶಿಬಿರ ಕಾರಣ ಗಿರಿ ಸಿದ್ಧಿವಿನಾಯಕ ಸಭಾ ಭವನ ದಲ್ಲಿ ಸಂಪನ್ನ ಗೊಂಡಿತು.
ಗಾಯತ್ರಿ ಅರುಣ್ ಮತ್ತು ಸಂಗಡಿಗರು ಪ್ರಾರ್ಥಸಿದರು.
ಹೊಸನಗರ ತಾಲೂಕು ಗೀತಾ ಅಭಿಯಾನ ಸಮಿತಿಯ ಗೌರವ ಅಧ್ಯಕ್ಷ ರಾದ ಡಾ‌ ರಾಮಚಂದ್ರ ರಾವ್ ಅವರು ಪ್ರಶಿಕ್ಷಣ ಶಿಬಿರ ಉದ್ಘಾಟಿಸಿದ ರೆ ‌. ಸಂಚಾಲಕ ರಾದ ಶ್ರೀಮತಿ ಅನುಪಮ ಸುರೇಶ್ ಅತಿಥಿ ಗಳನ್ನು ಸ್ವಾಗತಿಸಿದರು. ಶ್ರೀಯುತ ಹನಿಯ ರವಿ ಅವರು ಪ್ರಾಸ್ತಾವಿಕ ನುಡಿ ಗಳನ್ನಾಡಿ ಭಗವದ್ ಗೀತೆ ಮಕ್ಕಳು ಹೆಚ್ಚು ಕಲಿಯುವ ಕೆಲಸ ಆಗಬೇಕು ಎಂದರು ಭಗವದ್ ಗೀತೆ ಅಭಿಯಾನ Bhagavad Gita ಸಮಿತಿಯ ಅಧ್ಯಕ್ಷ ರಾದ ವಿಜೇಂದ್ರ ಶೇ ಟ್ ಅವರು ಬೇರೆ ಧರ್ಮದವರು ಅವರ ಗ್ರಂಥ ವನ್ನು ಓದುವ ಹಾಗೆ ನಾವು ಭಗವದ್ ಗೀತೆ ಪುಸ್ತಕ ಪ್ರತೀ ಒಬ್ಬರ ಮನೆಯಲ್ಲಿ ಇಟ್ಟುಕೊಂಡು ದಿನಾ ಪಠಣ ಮಾಡಬೇಕು ಎಂದರು. ಸಂಚಾಲಕ ರಾದ ಸದಾಶಿವ ಶ್ರೇಷ್ಟಿ ಅವರು ವಂದನಾರ್ಪಣೆ ಮಾಡಿದರು ಶ್ರೀಲಕ್ಷ್ಮೀ ಶ್ರೀಪತಿ ಅವರು ನಿರೂಪಿಸಿದರು. ಮಳೆಯ ನಡುವೆಯೂ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದ್ದರು

Vijaya Karnataka “ವಿಕ” ಎಕ್ಸಲೆನ್ಸ್ & ಹಾನರ್ ಪುರಸ್ಕಾರ ಪಡೆದ ಶಿವಮೊಗ್ಗದ ಹೆಮ್ಮೆಯ ಮನೋವೈದ್ಯ ಡಾ.ಟಿ.ಅರವಿಂದ್

0

Vijaya Karnataka ವಿಕ ಏರ್ಪಡಿಸುವ ಎಕ್ಸಲೆನ್ಸ್ & ಹಾನರ್ ಪುರಸ್ಕಾರವನ್ನ ಶಿವಮೊಗ್ಗದ ಖ್ಯಾತ ಮನೋವೈದ್ಯ ಡಾ.ಅರವಿಂದ್ ತಿಮ್ಮಯ್ಯ ಪಡೆದಿದ್ದಾರೆ.
ಅವರೆಂದಿಗೂ ಪ್ರಶಸ್ತಿಗಳ ಹಿಂದೆ ಬಿದ್ದವರಲ್ಲ. ತಂದೆ ಎಸ್ ,ತಿಮ್ಮಯ್ಯ ನವರಂತೆ ಸಮಾಜಪ್ರೀತಿ ರೂಢಿಸಿಕೊಂಡವರು ಮತ್ತು ಅರ್ಪಣಾ ಮನೋಭಾವದವರು.
ದೂರದ ಇಂಗ್ಲೆಂಡಿನಲ್ಲಿ ವೈದ್ಯಕೀಯ ಅಧ್ಯಯನ ಮಾಡಿದವರು. ಮನಸ್ಸು ಮಾಡಿದ್ದರೆ ಅಲ್ಲಿಯೇ ನೆಲೆಸಬಹುದಿತ್ತು.ಆದರೆ ತಾಯ್ನಾಡಿನ ಸೆಳೆತ,ಹೆತ್ತವರ ಪ್ರೀತಿ ಅವರನ್ನ ಭಾರತಕ್ಕೆ ಬರುವಂತೆ ಮಾಡಿತು.
ಈಗ ತಮ್ಮ ಚಿಕಿತ್ಸೆ ಮತ್ತು ಪಡೆದ ಕ್ಷೇತ್ರ ಜ್ಞಾನದ ಮೂಲಕ ಸಾಮಾಜಿವಾಗಿ ಮನೋವೈದ್ಯಕೀಯ ಕ್ಷೇತ್ರದಲ್ಲಿ ಅಪಾರವಾಗಿ‌
ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಅರವಿಂದರಿಗೆ ಅರವಿಂದರೇ ಸಮ.

ಪ್ರಸಿದ್ಧ ಪತ್ರಿಕೆ ವಿಜಯ ಕರ್ನಾಟಕ ಸೇವೆ ,ಅರ್ಪಣೆ ಮನೋಭಾವದ ಇಂತಹವರನ್ನ ಗುರುತಿಸಿ
ವಾರ್ಷಿಕ ಪುರಸ್ಕಾರ ವಿತರಿಸುತ್ತಿದೆ.
ಈ ಬಗ್ಗೆ ಡಾ.ಅರವಿಂದ ಏನು ಹೇಳುತ್ತಾರೆ ,ಓದಿ….

…..ಈ ಪ್ರಶಸ್ತಿ ಮನೋವೈದ್ಯನಾಗಿ ಸಂತಸ ತಂದಿದೆ.
2 ದಶಕಗಳ ನನ್ನ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮಗಳು ಹಾಗೂ ಚಿಕಿತ್ಸೆಗಳಿಗೆ ಹೊಸ ಶಕ್ತಿ, ವಿಜಯ ಕರ್ನಾಟಕದ ಪ್ರಶಸ್ತಿ ಮೂಲಕ ಬಂದಿದೆ.

Vijaya Karnataka ಸಮಾಜದಲ್ಲಿ ಮಾನಸಿಕ ಆರೋಗ್ಯ ನಿರ್ಲಕ್ಷ್ಯದಿಂದ , ಮೂಢನಂಬಿಕೆಗಳು ,
ತಪ್ಪುಗಹಿಕೆಗಳಿಂದ ಪ್ರಪಂಚದಾದ್ಯಂತ ಪ್ರತಿ ವರ್ಷ 8 ಲಕ್ಷಕ್ಕೂ ಅಧಿಕ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಕೋಟ್ಯಾಂತರ ಜನ ಖಿನ್ನತೆ,ಆತಂಕ ,ಭ್ರಮೆಗೆ, ಮಾದಕ ವ್ಯಸನಕ್ಕೆ, ಮೊಬೈಲ್ ಗೀಳಿಗೆ
ಒಳಗಾಗುತ್ತಿದ್ದಾರೆ. ಜನರು ಮುಕ್ತವಾಗಿ
ಮನೋವೈದ್ಯರನ್ನು ಭೇಟಿ ಮಾಡಿ ಇಂಥ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕು, ಪ್ರಜ್ಞಾವಂತ ನಾಗರಿಕರು ಹಾಗೂ ಮಾಧ್ಯಮಗಳು ಜಾಗೃತಿ ಮೂಡಿಸಲು ಕೈಜೋಡಿಸಬೇಕು.

UK ಲಂಡನ್ ನಲ್ಲಿ MRCP ವ್ಯಾಸಂಗ ಹಾಗೂ ಮನೋವೈದ್ಯನಾಗಿ
ಕೆಲಸ ಮಾಡಿ ಮರಳಿ ತಾಯ್ನಾಡಿಗೆ ಬಂದು ಸೇವೆ ಸಲ್ಲಿಸಿದ್ದು ಸಾರ್ಥಕ ಅನ್ನಿಸುತ್ತಿದೆ.

ಮನೋವೈದ್ಯನಾಗಲು ನಮ್ಮ ತಾಯಿ ನನಗೆ ದೊಡ್ಡ ಪ್ರೇರಣೆ, ಈ ಪ್ರಶಸ್ತಿಯನ್ನು ಅವರಿಗೆ ,ಮಾನಸಿಕ ರೋಗಿಗಳಿಗೆ ,ನನ್ನ ಸ್ಟಾಫ್ ಹಾಗೂ ಕುಟುಂಬದವರಿಗೆ ಸಮರ್ಪಿಸುತ್ತೇನೆ.
…ನಿಜಕ್ಕೂ ಡಾ.ಅರವಿಂದ ಅವರನ್ನ ಪಡೆದ “ಸಿಹಿಮೊಗೆ” ಧನ್ಯ ಅಲ್ಲವೆ?

D. K. Shivakumar ಮಹದಾಯಿ ಯೋಜನೆ ಬಗ್ಗೆ ಐತೀರ್ಪು ಬೆಂಬಲವಿದೆ.ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡನೀಯ- ಡೀಸಿಎಂ ಡಿ.ಕೆ.ಶಿವಕುಮಾರ್

0

D. K. Shivakumar ಮಹದಾಯಿ ಕೇವಲ ನದಿಯಲ್ಲ, ಅವಳು ನಮ್ಮ ಮಹಾತಾಯಿ. ಕೇಂದ್ರವು ಮಹದಾಯಿ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಹೇಳಿಕೆ ನಿಜಕ್ಕೂ ಆಘಾತಕಾರಿ. 2018ರಲ್ಲಿ ಮಹದಾಯಿ ಜಲವಿವಾದ ನ್ಯಾಯಮಂಡಳಿ 13.42 ಟಿಎಂಸಿ ನೀರನ್ನು ನಮ್ಮ ರಾಜ್ಯಕ್ಕೆ ನಿಗದಿಪಡಿಸಿ ಐತೀರ್ಪು ನೀಡಿದ್ದರೂ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ.
ಮಹದಾಯಿ ಯೋಜನೆಯು ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆಯ ಸುಮಾರು 40 ಲಕ್ಷಕ್ಕೂ ಹೆಚ್ಚು ಜನರಿಗೆ ನೀರು ಒದಗಿಸಲಿದೆ. ಉತ್ತರ ಕರ್ನಾಟಕದ ಜನರ ಮತ್ತು ರೈತರ ಹಿತಾಸಕ್ತಿ ಪರಿಗಣಿಸಿ, ಕೇಂದ್ರ ಸರ್ಕಾರವು ತಕ್ಷಣವೇ ಈ ಯೋಜನೆಗೆ ಅನುಮೋದನೆ ನೀಡಬೇಕು. ನಾನು ಇತ್ತೀಚೆಗೆ ದೆಹಲಿಗೆ ತೆರಳಿದ ಸಂದರ್ಭದಲ್ಲಿ ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ತಕ್ಷಣವೇ ಮಹದಾಯಿ ಯೋಜನೆಗೆ ಅನುಮತಿ ನೀಡುವಂತೆ ಒತ್ತಾಯಿಸಿದ್ದೇನೆ.

D. K. Shivakumar ಮಹದಾಯಿಗಾಗಿ ನಮ್ಮದು ನ್ಯಾಯಯುತವಾದ ಹೋರಾಟ. ನಮ್ಮ ಪಾಲಿನ ನೀರು ಸಿಗುವವರೆಗೂ ಈ ಹೋರಾಟ ನಿರಂತರ.
ನಮ್ಮ ನೀರು. ನಮ್ಮ ಹಕ್ಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಮಹದಾಯಿ ಯೋಜನೆ ಕುರಿತು ಸ್ಪಷ್ಟ ಅಭಿಪ್ರಾಯ ಹಂಚಿಕೊಂಡಿದ್ದಾರೆ