Wednesday, August 12, 2026
Wednesday, August 12, 2026
Home Blog Page 227

ರಾಜ್ಯದಲ್ಲಿ ಆಸ್ಪತ್ರೆ ಕಟ್ಟಡ ನಿಯಮ ಮತ್ತು ಶಿಕ್ಷಣ ಕ್ಷೇತ್ರದ ಸುಧಾರಣೆ ಚರ್ಚೆಗೆ ಸದನದಲ್ಲಿ ಸರ್ಕಾರ ಸ್ಪಂದಿಸಿದೆ : ಡಾ.ಧನಂಜಯ ಸರ್ಜಿ

0

ವಿಧಾನ ಪರಿಷತ್ ಅಧಿವೇಶನದ ಸಂದರ್ಭದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನಡೆಸಿದ ಚರ್ಚೆಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಹತ್ವದ ಸುಧಾರಣೆಗಳನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿದೆ ಎಂದು ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು ತಮ್ಮ ವಿಧಾನ ಪರಿಷತ್ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಹಿಂದೆ ರಾಜ್ಯದ ಸಣ್ಣ ಕ್ಲಿನಿಕ್ ಅಥವಾ ಆಸ್ಪತ್ರೆಗಳು ಬಹುಮಹಡಿ ಕಟ್ಟಡದ ಒಂದು ಭಾಗದಲ್ಲಿದ್ದರೂ ಇಡೀ ಕಟ್ಟಡಕ್ಕೆ ಅಗ್ನಿಶಾಮಕ ಇಲಾಖೆಯಿಂದ ಎನ್.ಒ.ಸಿ (NOC) ಪಡೆಯುವುದು ಕಡ್ಡಾಯವಾಗಿತ್ತು. ಹಳೆಯ ಅಗ್ನಿಸುರಕ್ಷತಾ ಮಾನದಂಡದ ಪ್ರಕಾರ ಶೇ. 99ಕ್ಕೂ ಹೆಚ್ಚು ಆಸ್ಪತ್ರೆಗಳು ಪರವಾನಗಿ ಪಡೆಯಲು ಸಂಕಷ್ಟ ಎದುರಿಸುತ್ತಿದ್ದವು. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ, PHANA , ಕೂಡ್ಲಿಗಿ ಶಾಸಕರಾದ ಡಾ. ಶ್ರೀನಿವಾಸ್ ಅವರು ಒಡಗೂಡಿ ನಾನು ನಡೆಸಿದ ಹೋರಾಟದ ಫಲವಾಗಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ಗೃಹ ಸಚಿವರಾದ ಪರಮೇಶ್ವರ್ ಅವರು ಜಂಟಿ ಸಭೆ ನಡೆಸಿ ನಿಯಮಗಳನ್ನು ಸರಳೀಕರಿಸಿದ್ದಾರೆ.

ಅದರಂತೆ 20.99 ಮೀಟರ್‌ಗಿಂತ ಕಡಿಮೆ ಎತ್ತರವಿರುವ ಆಸ್ಪತ್ರೆಗಳಿಗೆ ಕನಿಷ್ಠ ಅಗ್ನಿ ಸುರಕ್ಷತಾ ಮಾನದಂಡ ನಿಗದಿಪಡಿಸಿ ಜನವರಿ 9, 2026ರಂದು ಆದೇಶ ಹೊರಡಿಸಲಾಗಿದೆ. ವಸತಿ ರಹಿತ 21 ಮೀಟರ್‌ಗಿಂತ ಕಡಿಮೆ ಎತ್ತರದ ಸಣ್ಣ ಕ್ಲಿನಿಕ್ ಹಾಗೂ ರಕ್ತನಿಧಿ ಕೇಂದ್ರಗಳು ಇನ್ನು ಮುಂದೆ ಅಗ್ನಿಶಾಮಕ ಇಲಾಖೆಯ ಬದಲು ಆರೋಗ್ಯ ಇಲಾಖೆ ಮಟ್ಟದಲ್ಲೇ ತಪಾಸಣೆಗೊಳಪಡಲಿವೆ ಮತ್ತು ನವೀಕರಣ ಶುಲ್ಕವನ್ನು ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗಿದೆ.

ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸೇರಿ ಒಟ್ಟು 8,728 ಆಸ್ಪತ್ರೆಗಳಿವೆ ಇವುಗಳಲ್ಲಿ 329 ಆಸ್ಪತ್ರೆಗಳು ಮಾತ್ರ ಫೈರ್ ಕ್ಲಿಯರೆನ್ಸ್ ಪಡೆದುಕೊಂಡಿದೆ. ಈ ಕಾನೂನು ತಿದ್ದುಪಡಿಯಿಂದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ಅನುಕೂಲವಾಗಿಲಿದೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದ ಸುಧಾರಣೆ ಕುರಿತು ಮಾತನಾಡಿದ ಶಾಸಕರು, ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳು ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗಳಿಗೆ ಅತಿ ಹೆಚ್ಚು ಸೀಟುಗಳನ್ನು ಮೀಸಲಿಟ್ಟು ಸರ್ಕಾರಿ ಕಾಲೇಜುಗಳಲ್ಲಿ ಕೇವಲ ಶೇ. 10ರಷ್ಟು ಮಾತ್ರ ಅವಕಾಶ ನೀಡುತ್ತಿರುವುದು ತಾರತಮ್ಯಕ್ಕೆ ಕಾರಣವಾಗಿತ್ತು. ಒಂದು ಖಾಸಗಿ ವಿವಿಯಲ್ಲಿ 4,320 ಇಂಜಿನಿಯರಿಂಗ್ ಸೀಟುಗಳಿದ್ದು ಅದರಲ್ಲಿ 4,100 ಸೀಟುಗಳು ಕಂಪ್ಯೂಟರ್ ಸೈನ್ಸ್ ಕೋರ್ಸ್ ಗಳಿಗೆ ಮೀಸಲಿದೆ, ಆದರೆ ರಾಜ್ಯದ ಒಟ್ಟು ಸರ್ಕಾರಿ ಕಾಲೇಜುಗಳಲ್ಲಿ ಕೇವಲ 6,495 ಸೀಟುಗಳಿದ್ದರೆ ಅದರಲ್ಲಿ ಕೇವಲ 700 ಸೀಟುಗಳು ಮಾತ್ರ ಕಂಪ್ಯೂಟರ್ ಸೈನ್ಸ್ ಕೋರ್ಸ್ ಗಳಿಗೆ ಮೀಸಲಿದೆ, ರಾಜ್ಯದಲ್ಲಿ ಖಾಸಗಿ ಮತ್ತು ಸರ್ಕಾರಿ ಇಂಜನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 1,50,000 ಸೀಟುಗಳಿದ್ದರೆ ಅದ್ರಲ್ಲಿ 1 ಲಕ್ಷ ಸೀಟುಗಳು ಕಂಪ್ಯೂಟರ್ ಸೈನ್ಸ್ ಕೋರ್ಸ್ ಗೆ ಇದೆ ಎಂಬ ಆಘಾತಕಾರಿ ವಿಷಯವನ್ನು ಗಮನ ಸೆಳೆದ ಪರಿಣಾಮವಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಒಂದೇ ಕೋರ್ಸಿಗೆ ಅಧಿಕ ಸೀಟು ಪಡೆಯುವುದನ್ನು ನಿರ್ಬಂಧಿಸಲು ಮತ್ತು ಸರ್ಕಾರಿ ಕಾಲೇಜುಗಳಲ್ಲಿ ಸೌಲಭ್ಯ ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದು ಖಾಸಗಿ ವಿವಿಗಳ ಹಾವಳಿಗೆ ಕಡಿವಾಣ ಹಾಕುವುದಲ್ಲದೆ, ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಹೇಳಿದರು.

ಮುಂದುವರಿದು, ವಿವಿಧ ಆರೋಗ್ಯ ಯೋಜನೆಗಳಡಿ ನೀಡಲಾಗುವ ಚಿಕಿತ್ಸಾ ದರಗಳ ತಾರತಮ್ಯ ನಿವಾರಣೆಯಲ್ಲಿ ಶಿವಮೊಗ್ಗ ಸಂಸದರಾದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನವನ್ನು ಶಾಸಕರು ಶ್ಲಾಘಿಸಿದರು. ಸಂಸದರು ಸಂಸತ್ತಿನಲ್ಲಿ ಮತ್ತು ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ. ನಡ್ಡಾ ಅವರಲ್ಲಿ ಮಾಡಿದ ಮನವಿಯ ಫಲವಾಗಿ ಅಕ್ಟೋಬರ್ 13, 2025 ರಿಂದ ಅನ್ವಯವಾಗುವಂತೆ ದೇಶಾದ್ಯಂತ CGHS ದರಗಳನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಷ್ಕರಿಸಲಾಗಿದೆ. ಸಿಸೇರಿಯನ್, ನಾರ್ಮಲ್ ಹೆರಿಗೆ ಮತ್ತು ಹಾರ್ಟ್ ಸರ್ಜರಿಗಳಂತಹ ಸುಮಾರು 2,000 ವೈದ್ಯಕೀಯ ಪ್ರಕ್ರಿಯೆಗಳ ದರವನ್ನು ಹೆಚ್ಚಿಸಲಾಗಿದೆ. ನಗರಗಳನ್ನು ಟೈರ್-1, 2, 3 ಎಂದು ವಿಂಗಡಿಸಿ, ಆಸ್ಪತ್ರೆಗಳ ಮಾನ್ಯತೆ (NABH) ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ.

ಯಶಸ್ವಿನಿ ಮತ್ತು ಆಯುಷ್ಮಾನ್ ಭಾರತ್, ಜ್ಯೋತಿ ಸಂಜೀವಿನಿ, ಆರೋಗ್ಯ ಭಾಗ್ಯ , ಇ.ಎಸ್.ಐಮತ್ತು ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳಲ್ಲೂ ಈ ಪರಿಷ್ಕ್ರತ ದರವನ್ನು ಜಾರಿಗೆ ತರಲು ಸರ್ಕಾರಕ್ಕೆ ಒತ್ತಾಯಿಸಿದ್ದಿನಿ ಇದರ ಪರಿಣಾಮವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಜಾರಿಗೆ ತರುವ ಪ್ರಕ್ರಿಯೆಲ್ಲಿದೆ ಎಂದು ಡಾ.ಧನಂಜಯ ಸರ್ಜಿ ಹೇಳಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲೆ ಬಿಜೆಪಿ ಅಧ್ಯಕ್ಷರಾದ ಎನ್.ಕೆ. ಜಗದೀಶ್, ನಗರ ಬಿಜೆಪಿ ಅಧ್ಯಕ್ಷರಾದ ಮೋಹನ್ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಂ.ಬಿ. ಹರಿಕೃಷ್ಣ, ಹೆಚ್.ಸಿ. ಮಾಲತೇಶ್, ಮುಖಂಡರಾದ ಶಿವರಾಜ್ ಮತ್ತು ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಉಪಸ್ಥಿತರಿದ್ದರು.

MESCOM ಜನವರಿ 16. ಶಿರಾಳಕೊಪ್ಪ ಮೆಸ್ಕಾಂ ಜನ ಸಂಪರ್ಕ ಸಭೆ

0

MESCOM ಶಿರಾಳಕೊಪ್ಪ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜ .16 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;.9448998776.

Shimoga District Sports Karate Association ಶಿವಮೊಗ್ಗದಲ್ಲಿ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧಾವಳಿ

0

Shimoga District Sports Karate Association ಕರಾಟೆ ಕ್ರೀಡೆಯ, ಆತ್ಮವಿಶ್ವಾಸ, ಶಿಸ್ತು ಮತ್ತು ಕ್ರೀಡಾತ್ಮಕತೆಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ – 3ನೇ ರಾಷ್ಟ್ರೀಯ ಮಟ್ಟದ ಓಪನ್ ಕರಾಟೆ ಪಂದ್ಯಾವಳಿಯು –2026 ಜನವರಿ 11 ರಂದು ,ಶಿವಮೊಗ್ಗ ಜಿಲ್ಲೆಯ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಸಹ್ಯಾದ್ರಿ ಶಿವಮೊಗ್ಗ ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸನ್ ಸೈ ನವೀನ್, ಉಪಾಧ್ಯಕ್ಷರಾದ ಶ್ರೀಯುತ ಸನ್ ಸೈ ಸಾಧಿಕ್, ಶ್ರೀಯುತ ಸನ್ ಸೈ ಮಂಜುನಾಥ್ , ರವರು ಆಯೋಜಿಸಲಾದ ಈ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ 1,000 ಕ್ಕೂ ಹೆಚ್ಚು ಕರಾಟೆ ಕ್ರೀಡಾಪಟುಗಳು ಭಾಗವಹಿಸಿದ್ದರು. ತಮಿಳುನಾಡು, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಸ್ಪರ್ಧಾಳುಗಳು ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ಭಾಗವಹಿಸಿ ತಮ್ಮ ಅತ್ಯುತ್ತಮ ಕೌಶಲ್ಯ, ಶಿಸ್ತು ಮತ್ತು ಕ್ರೀಡಾಸ್ಫೂರ್ತಿಯನ್ನು ಪ್ರದರ್ಶಿಸಿದರು. ಹಾಗೂ ವಿಜೇತರಾದಂತಹ ಕ್ರೀಡಾಪಟುಗಳಿಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು.

ಈ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲೆಯ ವಿಧಾನ ಪರಿಷತ್ ಶಾಸಕರಾದ ಶ್ರೀಯುತ.ಡಿ.ಎಸ್.ಅರುಣ್ ಅವರು ಅಧಿಕೃತವಾಗಿ ಉದ್ಘಾಟಿಸಿ ತಮ್ಮ ಹಿತ ನುಡಿಗಳನ್ನು ನುಡಿದರು ಮಾತು ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಧ್ಯಕ್ಷರಾದ ಶ್ರೀಯುತ ಕಲಗೋಡು ರತ್ನಾಕರ್, DSP ರಾಚಪ್ಪ, ನ್ಯೂಸ್ ವಾರಿಯರ್ಸ್ ಸಂಪಾದಕರಾದ ಶ್ರೀಯುತ ರಘುರಾಜ್ , ಮಮಕೋಸ್ ನಿರ್ದೇಶಕರಾದ ವಿರೂಪಾಕ್ಷಪ್ಪ , ರಾಷ್ಟ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ವಾಸುದೇವ್, ಶ್ರೀಯುತ ಡಾ. ಶಿಹಾನ್ ಎ .ಝೆಡ್ ಮುಹಿಬ್ ರವರು, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ರೆಫ್ರೀ ಕಮಿಷನರ್ ಸನ್ ಸೈ .ಕೆ.ಪಿ.ಜೊಸ್, ಬೆಳಗಾವಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸನ್ ಸೈ ಜಿತೇಂದ್ರ ಕಾಕಟೇಕರ್, ಹಾವೇರಿ ಜಿಲ್ಲೆಯ ಅಧ್ಯಕ್ಷರಾದ ಶ್ರೀಯುತ ಶಿಹಾನ್ ನಾರಾಯಣ್ ಪೂಜಾರ್ , ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಶ್ರೀಯುತ ಎನ್ ಮಾಲತೇಶ್, ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಮತ್ತು ಅನೇಕ ಗಣ್ಯರು ಉಪಸ್ಥಿತರಿದು ,ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ- ಉತ್ತೇಜನ ನೀಡಿ ಗೌರವವನ್ನು ತಂದರು.

ಸ್ಪರ್ಧೆಯು ಅತ್ಯಂತ ಶಿಸ್ತುಬದ್ಧವಾಗಿ, ನ್ಯಾಯಸಮ್ಮತವಾಗಿ ಹಾಗೂ ಉತ್ಸಾಹಭರಿತವಾಗಿ ನಡೆಯಿತು. ಕ್ರೀಡಾಪಟುಗಳ ಪ್ರದರ್ಶನ ಪ್ರೇಕ್ಷಕರನ್ನು ಆಕರ್ಷಿಸಿದ್ದು, ಕರಾಟೆ ಕ್ರೀಡೆಯ ಮಹತ್ವವನ್ನು ಮತ್ತಷ್ಟು ಬೆಳಗಿಸಿತು. ಈ ಚಾಂಪಿಯನ್‌ಶಿಪ್ ಕೇವಲ ಸ್ಪರ್ಧೆಯಷ್ಟೇ ಅಲ್ಲದೆ, ಏಕತೆ, ಶ್ರೇಷ್ಠತೆ ಮತ್ತು ಕ್ರೀಡಾತ್ಮಕ ಮನೋಭಾವವನ್ನು ಉತ್ತೇಜಿಸುವ ಹಬ್ಬವಾಗಿ ಮೂಡಿಬಂದಿತು.

ಈ ಕ್ರೀಡಾಕೂಟಕ್ಕೆ ಮೈಸೂರು ಜಿಲ್ಲೆಯಿಂದ ಆಗಮಿಸಿದಂತಹ ಸನ್ ಸೈ ಸೌಜನ್ಯ ಮತ್ತು ಸನ್ ಸೈ ಮನೋಜ್ ಹಾವೇರಿ ಜಿಲ್ಲೆಯ ಸನ್ ಸೈ ಮೋನಿಷಾ ,ದಾವಣಗೆರೆ ಜಿಲ್ಲೆಯ ಸನ್ ಸೈ ಗೌತಮ್, ಹಾವೇರಿ ಜಿಲ್ಲೆಯ ಸನ್ ಸೈ ಮಂಜುನಾಥ್,ಮೈಸೂರು ಜಿಲ್ಲೆಯಿಂದ ಸನ್ ಸೈ ನವೀನ್ , ದಾವಣಗೆರೆ ಜಿಲ್ಲೆಯ ಸನ್ ಸೈ ವೆಂಕಟೇಶ್ ಮತ್ತು ಸನ್ ಸೈ ಅನಿಲ್, ಬಿಜಾಪುರ್ ಜಿಲ್ಲೆಯ ಪ್ರೇಮ್, ಶಿವಮೊಗ್ಗ ಜಿಲ್ಲೆಯ ಸನ್ ಸೈ ಚಂದ್ರಕಾಂತ, ಸನ್ ಸೈ ಮಹಾಬಲೇಶ್ ಜ್ಯೋಯಿಶ್, ಸನ್ ಸೈ ಸತೀಶ್ ಮತ್ತು ಇನ್ನೂ ಹಲವು ಜಿಲ್ಲೆಯವರ ಕರಾಟೆ ಶಿಕ್ಷಕರು ಕ್ರೀಡಾಪಟುಗಳೊಂದಿಗೆ ಸಹಕಾರವನ್ನು ನೀಡಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ.

ಈ ಯಶಸ್ವಿ ಆಯೋಜನೆಗೆ ಸಹಕಾರ ನೀಡಿದ ಎಲ್ಲಾ ಕ್ರೀಡಾಪಟುಗಳು, ತರಬೇತುದಾರರು, ತೀರ್ಪುಗಾರರು, ಸ್ವಯಂಸೇವಕರು, ಆಡಳಿತ ಮಂಡಳಿ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳಿಗೆ.

Shimoga District Sports Karate Association ಈ ಪಂದಾವಳಿಯನ್ನು ಆಯೋಜಿಸಿದ ಸಹ್ಯಾದ್ರಿ ಶಿವಮೊಗ್ಗ ಜಿಲ್ಲೆಯ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿಯಾದ ಶ್ರೀಯುತ ಸನ್ ಸೈ ನವೀನ್, ಉಪಾಧ್ಯಕ್ಷರಾದ ಶ್ರೀಯುತ ಸನ್ ಸೈ ಸಾಧಿಕ್, ಶ್ರೀಯುತ ಸನ್ ಸೈ ಮಂಜುನಾಥ್ , ಸನ್ ಸೈ ಕಿರಣ್, ಸನ್ ಸೈ ಸತೀಶ್, ನವೀನ್ ಪ್ರಕಾಶ್, ಅಪೂರ್ವ, ದೀಕ್ಷಾ, ಮೊಹಮ್ಮದ್ ಗೌಸ್, ಆಶಿಕ್ , ಪೃಥ್ವಿ ,ರಕ್ಷಿತ್ ಹೊಳ್ಳ , ಮೋನಿಕಾ, ಮಧು, ಗಿರೀಶ್ ರವರು ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸಿರುತ್ತಾರೆ .

Alva’s Education Foundation ಎತ್ತರಜಿಗಿತದಲ್ಲಿ ಶಿವಮೊಗ್ಗದ ಸುದೀಪ್ ಗೆ ಚಿನ್ನದ ಪದಕ

0

Alva’s Education Foundation ಮೂಡುಬಿದಿರೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಆಲ್ ಇಂಡಿಯಾ ಅಂತರ ವಿವಿ ಕ್ರೀಡಾಕೂಟದ ಪುರುಷರ ವಿಭಾಗದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಕುವೆಂಪು ವಿಶ್ವವಿದ್ಯಾಲಯ ಪ್ರತಿನಿಧಿಸಿದ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿ ಸುದೀಪ್ ಚಿನ್ನದ ಪದಕ ವಿಜೇತರಾಗಿದ್ದಾರೆ.
2.11 ಮೀ. ಎತ್ತರ ಹಾರುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ದೇಶೀಯ ವಿದ್ಯಾಶಾಲಾ ಸಮಿತಿ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಹಾಗೂ ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿದ್ಯಾರ್ಥಿ ಸುದೀಪ್ ಸಾಧನೆಯನ್ನು ಶ್ಲಾಘಿಸಿದ್ದಾರೆ.
Alva’s Education Foundation ಇತ್ತೀಚೆಗೆ ರಾಜಸ್ಥಾನದಲ್ಲಿ ಆಯೋಜಿದ್ದ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲೂ ಸಹ ಚಿನ್ನದ ಪದಕ ವಿಜೇತರಾಗಿದ್ದಾರೆ.

Karnataka State Guarantee Schemes Implementation Authority ಜನವರಿ 21. ಗ್ಯಾರಂಟಿ ಯೋಜನೆ ಫಲಾನುಭವಿಗಳ ಜಿಲ್ಲಾಮಟ್ಟದ ಕಾರ್ಯಾಗಾರ

0

Karnataka State Guarantee Schemes Implementation Authority ಶಿವಮೊಗ್ಗಜಿಲ್ಲಾ ಪಂಚಾಯತ್ ಕಛೇರಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆಗಳು ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಮತ್ತು ವಿಧಾನ ಪರಿಷತ್ತಿನ ಶಾಸಕರಾಗಿರುವ
ಶ್ರೀ ದಿನೇಶ್ ಗೋಳಿಗೌಡರ ಅಧ್ಯಕ್ಷತೆ
ಯಲ್ಲಿ ಮತ್ತು ಜಿಲ್ಲಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ರವರ ಉಪಸ್ಥಿತಿಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ನಿರ್ಣಯಿಸಲಾಗಿದೆ

ಜಿಲ್ಲಾಧಿಕಾರಿಗಳಾದ ಶ್ರೀ ಪ್ರಭುಲಿಂಗ ಕಬಲಿಕಟ್ಟಿ ಮತ್ತು ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಗಳಾದ ಶ್ರೀ ಹೇಮಂತ್ .ಎನ್ ರವರು ಉಪಸ್ಥಿತರಿದ್ದರು

Karnataka State Guarantee Schemes Implementation Authority ಜಿಲ್ಲಾ ಪಂಚ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರು
ಸದಸ್ಯರು ಮತ್ತು ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರು / ಸದಸ್ಯರು ಮತ್ತು ಜಿಲ್ಲಾ
ಪಂಚಾಯತ್ ಅಧಿಕಾರಿಗಳು ಜೊತೆಗೆ
ಗ್ಯಾರೆಂಟಿ ಯೋಜನೆಗೆ ಸಂಬಂಧಿಸಿದ ಐದು ಇಲಾಖೆಗಳ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.

Shivamogga Youth Empowerment and Sports Department ತಾಲ್ಲೂಕು ಮಟ್ಟದಿಂದ ಕ್ರೀಡಾಶಾಲೆ/ ನಿಲಯಗಳಿಗೆ ಜಿಲ್ಲೆಯಲ್ಲಿ ಆಯ್ಕೆ ಪ್ರಕ್ರಿಯೆ

0

Shivamogga Youth Empowerment and Sports Department ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ವಹಿಸುತ್ತಿರುವ ಜಿಲ್ಲಾ ಕ್ರೀಡಾಶಾಲೆಗೆ 2026-27 ನೇ ಸಾಲಿನ ಪ್ರವೇಶಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಆಯ್ಕೆಯನ್ನು ನಡೆಸಲಾಗುವುದು

ಅಥ್ಲೆಟಿಕ್ಸ್, ಹಾಕಿ, ಫುಟ್‌ಬಾಲ್, ಕುಸ್ತಿ ಕ್ರೀಡೆಗಳಲ್ಲಿ ಆಯಾ ತಾಲ್ಲೂಕುಗಳಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಜ.16 ರಂದು ತೀರ್ಥಹಳ್ಳಿ ತಾಲ್ಲೂಕಿಗೆ ಸ.ಪ.ಪೂ ಕಾಲೇಜು, ತೀರ್ಥಹಳ್ಳಿ. ಸಾಗರ ತಾಲ್ಲೂಕಿಗೆ ಸಾಗರ ತಾಲ್ಲೂಕು ಕ್ರೀಡಾಂಗಣ, ಹೊಸನಗರ ತಾಲ್ಲೂಕಿಗೆ ಹೊಸನಗರ ತಾಲ್ಲೂಕು ಕ್ರೀಡಾಂಗಣ. ಆ.19 ರಂದು ಸೊರಬ ತಾಲ್ಲೂಕಿಗೆ ಸ.ಪ.ಪೂ ಕಾಲೇಜು ಆನವಟ್ಟಿ, ಶಿಕಾರಿಪುರ ತಾಲ್ಲೂಕಿಗೆ ಶಿಕಾರಿಪುರ ತಾಲ್ಲೂಕು ಕ್ರೀಡಾಂಗನ. ಭದ್ರಾವತಿ ತಾಲ್ಲೂಕಿಗೆ ಕನಕ ಮಂಟಪ ಮೈದಾನ ಭದ್ರಾವತಿ. ಹಾಗೂ ಜ.24 ರಂದು ಶಿವಮೊಗ್ಗ ತಾಲ್ಲೂಕಿಗೆ ಶಿವಮೊಗ್ಗ ನೆಹರೂ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಆಯ್ಕೆ ನಡೆಸಲಾಗುವುದು.

Shivamogga Youth Empowerment and Sports Department ಆಯ್ಕೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ಶಾಲಾ ಮುಖ್ಯಸ್ಥರಿಂದ ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೂ ವ್ಯಾಸಂಗ ಮಾಡುತ್ತಿರುವ ತರಗತಿಯ ವಿವರಗಳನ್ನೊಳಗೊಂಡ ದೃಢೀಕರಣ ಪತ್ರವನ್ನು ಆಯ್ಕೆಯ ದಿನದಂದು ಕಡ್ಡಾಯವಾಗಿ ತಮ್ಮೊಂದಿಗೆ ತರತಕ್ಕದ್ದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್ ತಿಳಿಸಿದ್ದಾರೆ.

Shivamogga City Water Supply and Board ಜನವರಿ 18. ನೀರಿನ ಬಾಕಿ ಕರ ಪಾವತಿಮಾಡಲು ವಿಶೇಷ ಕೌಂಟರ್. ನೀರಿ ಸರಬರಾಜು & ಒಳಚರಂಡಿ ಪ್ರಕಟಣೆ

0

Shivamogga City Water Supply and Board ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ 2025-26 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ಜ. 18 ರಂದು ನಗರದ ವಿವಿಧ ಸ್ಥಳಗಳಲ್ಲಿ ವಿಶೇಷ ಕರ ವಸೂಲಾತಿ ಕೌಂಟರ್‌ಗಳನ್ನು ತೆರೆಯಲಾಗಿದೆ.
ಚಿಕ್ಕಲ್ ಶಿವನ ಪಾರ್ಕ್ ಹತ್ತಿರ, ಗಾಂಧೀನಗರ ಪಾರ್ಕ್ ಹತ್ತಿರ, ವಿನೋಬನಗರ ಕಲ್ಲಹಳ್ಳಿ ಅಭೀಷ್ಟವರ ಗಣಪತಿ ದೇವಸ್ಥಾನದ ಹತ್ತಿರ-ಕೆ.ಹೆಚ್.ಬಿ., ಪರಿಚಯ ಸ್ಟೋರ್ ಎದುರು ಓ.ಟಿ.ರಸ್ತೆ, ಕೃಷಿನಗರ ಗಣಪತಿ ದೇವಸ್ಥಾನದ ಹತ್ತಿರ. ಈ ಸ್ಥಳಗಳಲ್ಲಿ ಕೌಂಟರ್ ತೆರೆಯಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದು ನೀರಿನ ಬಾಕಿ ಕಂದಾಯ ಹಾಗೂ ಬಾಕಿ ಕರವಸೂಲಾತಿ ಉಳಿಸಿಕೊಂಡಿರುವ ಗ್ರಾಹಕರು ಕಂದಾಯ ಪಾವತಿ ಮಾಡಿಕೊಳ್ಳಬೇಕೆಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಜರ್ಮನಿಯ ಚಾನ್ಸಲರ್ ಫೆಡ್ರಿಕ್ ಮೆರ್ಜ್ ಅವರಿಗೆ ಬೆಂಗಳೂರಲ್ಲಿ ಭವ್ಯ ಸ್ವಾಗತ

0

ಬೆಂಗಳೂರು ಭೇಟಿ ಸಂಬಂಧ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸೆಲರ್ ಫೆಡ್ರಿಕ್ ಮೆರ್ಜ್ ಅವರು ತಮ್ಮ ನಿಯೋಗದೊಂದಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.

ಫೆಡರಲ್‌ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸಲರ್ ಮತ್ತು ಅವರ ನಿಯೋಗದವರನ್ನು ಬಾರೀ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ್ ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಈ ಸಮಯದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಕೆ.ಜಿ ಜಗದೀಶ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ. ಜಗದೀಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್,
ಬೆಂಗಳೂರು ಪ್ರಾದೇಶಿಕ ಪಾಸ್ ಪೋರ್ಟ್ ಅಧಿಕಾರಿಗಳು ಹಾಗೂ ಜರ್ಮನಿ ಕಾನ್ಸೂಲೇಟ್ ಜನರಲ್ ನವದೆಹಲಿ ಕಚೇರಿಯ ಅಧಿಕಾರಿಗಳು ಸೇರಿದಂತೆ ಇತರೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಫೆಡರಲ್‌ ರಿಪಬ್ಲಿಕ್ ಆಫ್ ಜರ್ಮನಿಯ ಚಾನ್ಸಲರ್ ಮತ್ತು ಅವರ ನಿಯೋಗವು ಇಂದು ಬೆಂಗಳೂರಿನ ವಿವಿಧ ಸಂಸ್ಥೆಗಳಿಗೆ ಭೇಟಿ ನೀಡಿ ಇಂದು ಸಂಜೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಾಪಸ್ಸಾಗಲಿದ್ದಾರೆ.

ದೇವಿಕೊಪ್ಪದಲ್ಲಿ ಸಾಲಬಾಧೆ ತಾಳದೇ ವ್ಯಕ್ತಿ ನೇಣಿಗೆ ಶರಣು

0

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಹರತಾಳಿನ ದೇವಿಕೊಪ್ಪದಲ್ಲಿ
ಸಾಲಭಾದೆಗೆ -ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ
ಘಟನೆ ನಡೆದಿದೆ.

ಮೃತರನ್ನು ಗುರುರಾಜ್ ಬಿನ್ ನಾರಾಯಣ್ ಆಚಾರ್ (45) ಎಂದು ಗುರುತಿಸಲಾಗಿದೆ. ಸಾಲ ಭಾದೆಯಿಂದ ಬೇಸತ್ತು ಮನೆ ಸಮೀಪದ ಕೊಟ್ಟಿಗೆಯಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪೋಲಿಸರಿಗೆ ವಿಷಯ ತಿಳಿಸಿದ್ದಾರೆ . ಸ್ಥಳಕ್ಕೆ ರಿಪ್ಪನ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

Department of Animal Husbandry and Veterinary Services ಸಾಕು ನಾಯಿ ಮಾಲೀಕರೇ, ಜನವರಿ 25, ಜಿಲ್ಲಾಮಟ್ಟದ ಸಾಕು ನಾಯಿ ಪ್ರದರ್ಶನಕ್ಕೆ ಸಜ್ಜಾಗಿರಿ

0

Department of Animal Husbandry and Veterinary Services ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಶಿವಮೊಗ್ಗ ಕೆನಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜ.25 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಸಾಗರ ರಸ್ತೆಯ ಎಪಿಎಂಸಿ ಮಾರುಕಟ್ಟೆ ಬಳಿಯ ಪಶು ಆಸ್ಪತ್ರೆ ಆವರಣದಲ್ಲಿ ಸಾಕು ನಾಯಿಗಳ ಪ್ರದರ್ಶವನ್ನು ಏರ್ಪಡಿಸಲಾಗಿದೆ.
Department of Animal Husbandry and Veterinary Services ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿಗೆ ಜ.22 ಕಡೆಯ ದಿನವಾಗಿದ್ದು ನೋಂದಣಿ ಶುಲ್ಕ ರೂ.200 ಕಡ್ಡಾಯವಾಗಿರುತ್ತದೆ. 6 ತಿಂಗಳ ಒಳಗಿನ ವಯಸ್ಸಿನ ಶ್ವಾನಗಳಿಗೆ ಅವಕಾಶವಿಲ್ಲ. ಸ್ಪರ್ಧೆ ನಡೆಯುವ ಸ್ಥಳದಲ್ಲಿ ನೋಂದಾಯಿಸಲು ಅವಕಾಶವಿರುವುದಿಲ್ಲ. ಇತರೆ ನಿಬಂಧನೆಗಳಿದ್ದು, ನೋಂದಣಿಗಾಗಿ ಡಾ.ಪ್ರಸನ್ನ ಕೆ ಎಂ, ಮೊ.ಸಂ: 9343464008, ಡಾ.ಶಿವರಾಜ್ 9448318878, ಡಾ.ಕೆಂದೇಶ್ 9880043904, ಡಾ.ಒ.ಎಸ್.ಪ್ರಕಾಶ್ 7628659762, ಎನ್.ರಾಜೇಂದ್ರ ಕಾಮತ್ 9902191333, ಗಜಾನನ ಹೆಗಡೆ 9742352112, 9448007542, 9482635093, 9480467707, 8762099569, 9980371799, 7337629259, 9611948135 ನ್ನು ಸಂಪರ್ಕಿಸಬಹುದೆAದು ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.