Wednesday, August 12, 2026
Wednesday, August 12, 2026
Home Blog Page 236

JCI Shivamogga ಜೆಸಿಐ ಸಂಸ್ಥೆಯು ಸಮಾಜಕ್ಕೆ ಯುವ ನಾಯಕರನ್ನು ತರುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ- ಭರತ್ ಎನ್ ಆಚಾರ್ಯ

0

JCI Shivamogga ಯುವ ಜನರು ಜೆಸಿಐ ಸಂಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಭರತ್ ಎನ್ ಆಚಾರ್ಯ ಹೇಳಿದರು.

ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಯುವ ಜನರಿಗೆ ಜೆಸಿಐ ಸಂಸ್ಥೆ ಅತ್ಯುತ್ತಮ ಸಂಸ್ಥೆಯಾಗಿದ್ದು, ಯುವ ನಾಯಕರನ್ನು ಸಮಾಜಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.

ವಲಯ 24ರ ಅಧ್ಯಕ್ಷ ಸಿ.ಎ.ಮಧುಸೂದನ್ ನಾವಡ ಮಾತನಾಡಿ, ಜೋನ್ 24ಕ್ಕೆ ಸುವರ್ಣ ಕಾಲ ಇದಾಗಿದ್ದು, ಕರ್ನಾಟಕದ ಭರತ್ ಎನ್.ಆಚಾರ್ಯ ಅವರು ನಮ್ಮ ರಾಷ್ಟ್ರೀಯ ನಾಯಕನಾಗಿದ್ದು, ಅನುಷ್ ಗೌಡ ಅವರು ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೇಳಿದರು.

ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುವುದರ ಜೊತೆಗೆ ಸಂಸ್ಥೆಗೆ ಸಮರ್ಪಕವಾಗಿ ಸೇವೆ ಸಲ್ಲಿಸಲು ಅತ್ಯುತ್ತಮ ಅವಕಾಶವನ್ನು ನೀಡಿವೆ. ಯುವಜನತೆಯನ್ನು ತೊಡಗಿಸಿಕೊಳ್ಳುವ ಮೂಲಕ, ಅವರಿಗೆ ಜೀವನದಲ್ಲಿ ಬೆಳೆಯಲು ವಿವಿಧ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಈ ದಿಕ್ಕಿನಲ್ಲಿ ಸಂಘಟನೆಯೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುವುದು ನಮಗೆ ಅಪಾರ ಸಂತೋಷ ಹಾಗೂ ಗೌರವದ ವಿಷಯವಾಗಿದೆ ಎಂದು ತಿಳಿಸಿದರು.

ವಲಯ ಉಪಾಧ್ಯಕ್ಷ ಅಮೃತ್ ಸಿ ಮಾತನಾಡಿ, ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗಿ ಜೆಸಿಐ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

JCI Shivamogga ಜೆಸಿಐ ಶಿವಮೊಗ್ಗ ರಾಯಲ್ಸ್ ಘಟಕದ ನೂತನ ಅಧ್ಯಕ್ಷೆ ಗಾನವಿ ಸುದರ್ಶನ್ ಅವರು ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ದೇಣಿಗೆ ನೀಡಿದರು. ಜೆಸಿ ಇಲ್ಲದ ಜಿಲ್ಲೆಗಳಲ್ಲಿ ಜೆಸಿ ಹುಟ್ಟು ಹಾಕುವ ಪ್ರಯತ್ನವನ್ನು ಮಾಡಿ ಚಿತ್ರದುರ್ಗ ಜಿಲ್ಲೆಯಲ್ಲಿ ಜೆಸಿಐ ಚಿತ್ರದುರ್ಗ ಫೋರ್ಟ್ ಎನ್ನುವ ಹೊಸ ಘಟಕವನ್ನು ರಾಯಲ್ಸ್ ವತಿಯಿಂದ ನೀಡಲಾಯಿತು.

ತಾಯಿಮನೆ ಸುದರ್ಶನ್, ರಾಜೇಶ್ ಕೀಳಂಬಿ, ಉದಯ್ ಕಡಂಬ, ಚಂದ್ರಹಾಸ್ ಶೆಟ್ಟಿ, ಕಿರಣ್, ಅನುಷ್ ಗೌಡ, ಗೌರೀಶ್, ಸ್ಮಿತಾ ಮೋಹನ್, ತೇಜಸ್ವಿನಿ ಪ್ರಶಾಂತ್, ನಿರ್ಮಲ, ಶ್ವೇತ ಪ್ರಶಾಂತ್, ತುಷಾರ್, ಮೋಹನ್ ಕಲ್ಪತರು, ಶೋಭಾ ಸತೀಶ್, ಸುರೇಖಾ ಮುರಳಿಧರ್, ಪುಷ್ಪ ಶೆಟ್ಟಿ, ಪ್ರತಿಮಾ ಡಾಕಪ್ಪ, ಭಾರತಿ ರಾಮಕೃಷ್ಣ, ಲಿಂಗರಾಜ್ ನಾಯ್ಕ್, ಗಿರಿ ಮಲ್ಲಿಕಾ ಇತರರಿದ್ದ

Consumer Disputes Redressal Commission ವಿಮಾ ಮೊತ್ತ ಪರಿಹಾರ ನೀಡದೇ ವಿಳಂಬ ದೂರುದಾರರ ಪರ ತೀರ್ಪಿತ್ತ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ

0

Consumer Disputes Redressal Commission ಶಿವಮೊಗ್ಗದ ಲಷ್ಕರ್ ಮೊಹಲ್ಲಾ ನಿವಾಸಿ ಇರ್ಫಾನ್ ಪಾಷ ಎಂಬುವವರು ಚೆನೈನ ಚೋಳ ಎಂಎಸ್ ಜನರಲ್ ಇನ್ಸೂರನ್ಸ್ ಕಂ.ಲಿ., ಮತ್ತು ಶಿವಮೊಗ್ಗದ ಚೋಳ ಎಂಎಸ್ ಜನರಲ್ ಇನ್ಸೂರನ್ಸ್ ಕಂ.ಲಿ., ಇವರುಗಳ ವಿರುದ್ದ ದ್ವಿಚಕ್ರ ವಾಹನದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.

ದೂರುದಾರರು ತಾವು ಖರೀದಿಸಿದ ಸುಜುಕಿ ಎಕ್ಸೆಸ್ ದ್ವಿಚಕ್ರ ವಾಹನಕ್ಕೆ ಎದುರುದಾರರಿಂದ ವಿಮೆಯನ್ನು ಮಾಡಿಸಿದ್ದು, 2024ರ ಅಕ್ಟೋಬರ್‌ನಲ್ಲಿ ವಾಹನಕ್ಕೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಶಿವಮೊಗ್ಗದ ಎದುರುದಾರರಿಗೆ ವಾಹನದ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ವಿಮೆಯನ್ನು ಪಾವತಿಸಲು ಕೋರಿರುತ್ತಾರೆ.

ಆದರೆ ಎದುರುದಾರರು ಈ ಕುರಿತು ವಿಮೆ ಮೊತ್ತ ಪಾವತಿಸದಿರುವುದರಿಂದ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿರುತ್ತಾರೆ.

Consumer Disputes Redressal Commission ದೂರನ್ನು ದಾಖಲಿಸಿಕೊಂಡ ಆಯೋಗವು ಎದುರುದಾರರಿಗೆ ನೋಟಿಸ್ ನೀಡಿದ್ದು, ಎದುರುದಾರರು ವಕೀಲರ ಮೂಲಕ ಹಾಜರಾಗಿ ತಕರಾರು ಸಲ್ಲಿಸಿರುತ್ತಾರೆ.
ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರುದಾರರು ಸಲ್ಲಿಸಿರುವ ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ವಾಹನದ ಐಡಿವಿ ಮೌಲ್ಯ ರೂ. 88,053/- ಗಳನ್ನು ಹಾಗೂ ರೂ. 10,000/-ಗಳನ್ನು ದೂರಿನ ಖರ್ಚುವೆಚ್ಚಕ್ಕಾಗಿ ವಾರ್ಷಿಕ ಶೇ. 9 ರ ಬಡ್ಡಿಯನ್ನು ಸೇರಿಸಿ, 2025 ಜನವರಿಯಿಂದ ಅನ್ವಯವಾಗುವಂತೆ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 12ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಡಿ.31 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.

District Chamber of Commerce and Industry ಸಂಗೀತ ಕಲಿಕೆಯಿಂದ ಏಕಾಗ್ರತೆ ಮತ್ತು ಕ್ರಿಯಾಶೀಲತೆ ವೃದ್ಧಿ- ಎಸ್.ಆರ್.ಮಂಜುನಾಥ್

0

District Chamber of Commerce and Industry ಒತ್ತಡದ ಕಾರ್ಯ ಹಾಗೂ ಜೀವನಶೈಲಿಯಿಂದ ಹೊರಬರಲು ಸಂಗೀತ ಆಲಿಸುವಿಕೆ ಮತ್ತು ಕಲಿಕೆಯು ಸಹಕಾರಿಯಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಆರ್.ಮಂಜುನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಶಿಕ್ಷಕರ ಗಾಯನ ವೇದಿಕೆಯಿಂದ ಆಯೋಜಿಸಿದ್ದ ಗಾಯನ ಸಮ್ಮಿಲನ 1 ಕಾರ್ಯಕ್ರಮದಲ್ಲಿ ಮಾತನಾಡಿ, ಸುಮಧುರವಾದ ಸಂಗೀತ ಆಲಿಸುವಿಕೆಯು ಮನಸ್ಸನ್ನು ಸಂತೋಷಗೊಳಿಸುತ್ತದೆ. ಸಂಗೀತ ಕಲಿಯುವುದರಿಂದ ಏಕಾಗ್ರತೆ ಮತ್ತು ಕ್ರಿಯಾಶೀಲತೆ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.

ಶಿಕ್ಷಕರು ಕಾಲಕಾಲಕ್ಕೆ ಈ ರೀತಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಚಿತ್ರಗೀತೆ, ಭಾವಗೀತೆ ಹಾಗೂ ಜಾನಪದ ಗೀತೆಗಳನ್ನು ಹಾಡಬೇಕು. ಇಂತಹ ಸಾಂಸ್ಕೃತಿಕ ವೇದಿಕೆಗಳು ಅತ್ಯಂತ ಅವಶ್ಯಕ ಎಂದರು.

ರಾಗರಂಜಿನಿ ಟ್ರಸ್ಟ್ ಸ್ವರ ಸಂಯೋಜಕ ಪ್ರಹ್ಲಾದ್ ದೀಕ್ಷಿತ್ ಮಾತನಾಡಿ, ಸಂಗೀತ ಆಸಕ್ತರು ಗುರುಗಳ ಮಾರ್ಗದರ್ಶನದಲ್ಲಿ ನಿರಂತರ ಅಭ್ಯಾಸ ಮಾಡಬೇಕು. ಜೀವನ ಸುಂದರಗೊಳಿಸಲು ಸಂಗೀತ ನೆರವಾಗುತ್ತದೆ ಎಂದು ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂಗೀತ ಆಲಿಸುವುದರಿಂದ ಮನಸ್ಸು ಸಂತಸಗೊಂಡು ಒತ್ತಡಮುಕ್ತರಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

District Chamber of Commerce and Industry ಎಸ್.ಆರ್.ಮಂಜುನಾಥ್, ಪ್ರಹ್ಲಾದ್ ದೀಕ್ಷಿತ್ ಹಾಗೂ ಜಿ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಶಿವಮೊಗ್ಗ ಶಿಕ್ಷಕರ ಗಾಯನ ವೇದಿಕೆ ಸಂಸ್ಥಾಪಕ, ಆಯೋಜಕರಾದ ಶಿಕ್ಷಕ ಬಿ.ಕುಬೇರ್ ನಾಯ್ಕ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕಿ ಕೆ.ಕೆ.ಶಶಿರೇಖಾ ವಂದನಾರ್ಪಣೆ ನಡೆಸಿಕೊಟ್ಟರು. ರಾಜ್ಯ, ರಾಷ್ಟ್ರಮಟ್ಟದ ಕ್ರೀಡೆ, ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಗೌರವಿಸಲಾಯಿತು. ಶಿಕ್ಷಕಿ ಸುಮಾ ಮತ್ತಿತರರು ಹಾಜರಿದ್ದರು.

Akhila Bharatiya Sahitya Parishath ಪರಿಸರ ರಕ್ಷಣೆ ಕುರಿತ ಕವಿತೆ ರಚಿಸಲು ಕವಿಗಳಿಗೆ ಅಭಾಸಾಪ ಆಹ್ವಾನ

0

Akhila Bharatiya Sahitya Parishath ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಶಾಖೆಯ ವತಿಯಿಂದ ಜನವರಿ ೧೦ರ ಶನಿವಾರ ಸಂಜೆ ೫.೩೦ ಗಂಟೆಗೆ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ವಿನೋಬಾ ನಗರದ ವಿಕಾಸ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ನಡೆಯಲಿದೆ.
ಈ ಬಾರಿ ಕವಿಗೋಷ್ಠಿಗೆ “ಪರಿಸರ ರಕ್ಷಣೆ” ವಿಷಯವನ್ನು ನಿಗದಿಪಡಿಸಲಾಗಿದ್ದು, ಕವಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಕವಿತೆಗಳನ್ನು ರಚಿಸಿ ಪ್ರಸ್ತುತಪಡಿಸಲು ಕೋರಲಾಗಿದೆ. ಪರಿಷತ್ತಿನ ಕವಿತಾ ರಚನಾ ಕಮ್ಮಟದಲ್ಲಿ ಛಂದೋಬದ್ಧ ರಚನೆಗಳ ಕುರಿತು ತರಬೇತಿ ಪಡೆದ ಕವಿಗಳು ಛಂದೋಬದ್ಧ ಕವಿತೆಗಳೊಂದಿಗೆ ಗೋಷ್ಠಿಯಲ್ಲಿ ಪಾಲ್ಗೊಳ್ಳಬಹುದಾಗಿದೆ. ಇತರೆ ಕವಿಗಳು ತಮ್ಮದೇ ಶೈಲಿಯ ಕವಿತೆಗಳನ್ನು ವಾಚಿಸಬಹುದಾಗಿದೆ.
ಕವಿಗೋಷ್ಠಿಯನ್ನು ಖ್ಯಾತ ವೈದ್ಯಕೀಯ ಲೇಖಕ ಹಾಗೂ ಹಿರಿಯ ಕುಟುಂಬ ಸಲಹಾ ವೈದ್ಯರಾದ ಡಾ. ಕೃಷ್ಣ ಎಸ್. ಭಟ್ ಅವರು ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಶಿವಮೊಗ್ಗ ಶಾಖೆಯ ಅಧ್ಯಕ್ಷ ಡಾ. ಸುಧೀಂದ್ರ ವಹಿಸಲಿದ್ದಾರೆ.
Akhila Bharatiya Sahitya Parishath ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತರಾದ ಕವಿಗಳು ಸುರೇಶ್ ಭಟ್ ಅವರನ್ನು ಮೊಬೈಲ್ ಸಂಖ್ಯೆ ೯೪೪೮೩ ೦೩೭೪೦ರಲ್ಲಿ ಸಂಪರ್ಕಿಸುವಂತೆ ಸಂಘಟಕರು ತಿಳಿಸಿದ್ದಾರೆ. ಸಾಹಿತ್ಯಾಸಕ್ತರಿಗೆ ಕಾರ್ಯಕ್ರಮಕ್ಕೆ ಆದರದ ಸ್ವಾಗತವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Department of Agriculture ಪೂರ್ವಿಕರು ಮಾಡುತ್ತಿದ್ದ ಹಳೆಯ ಖಾದ್ಯಗಳು ಆರೋಗ್ಯಕರ, ಅದನ್ನ ಸಿದ್ಧಪಡಿಸುವಲ್ಲಿ ಉತ್ತೇಜನ ಅವಶ್ಯವಿದೆ- ಕಿರಣ್ ಕುಮಾರ್.

0

Department of Agriculture ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪೌಷ್ಟಿಕಾಂಶಗಳಿAದ ಕೂಡಿದೆ. ಹಾಗೂ ನಮ್ಮ ಪೂರ್ವಿಕರು ತಯಾರಿಸುತ್ತಿದ್ದ ಹಳೆಯ ಖಾದ್ಯಗಳು ಆರೋಗ್ಯಕರವಾಗಿದ್ದು, ಅವುಗಳನ್ನು ಉತ್ತೇಜಿಸುವ ಅವಶ್ಯಕತೆ ಇದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ಕಿರಣ್ ಕಮಾರ್ ತಿಳಿಸಿದರು.
ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026 ರ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಶಿವಮೊಗ್ಗದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ “ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ” ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಿರಿಧಾನ್ಯಗಳಲ್ಲಿ ಉತ್ತಮ ಕಾರ್ಬೋಹೈಡ್ರೇಟ್, ನಾರು, ಪ್ರೋಟಿನ್ ಮತ್ತು ಖನಿಜಗಳು ಇದ್ದು ಉತ್ತಮ ಆಹಾರವಾಗಿದೆ. ವಿಶೇಷವಾಗಿ ಸಕ್ಕರೆ ಖಾಯಿಲೆ ಇರುವವರಿಗೆ ಒಳ್ಳೆಯ ಆಹಾರ. ಸಿರಿಧಾನ್ಯಗಳಿಗೆ ಉತ್ತೇಜನ ನೀಡುವುದರೊಂದಿಗೆ ಇದರ ಮೌಲ್ಯವರ್ಧನೆ ಸಹ ಅಷ್ಟೇ ಮುಖ್ಯವಾಗಿದೆ. ಆದ್ದರಿಂದ ಪ್ರತಿ ವರ್ಷ ಸಿರಿಧಾನ್ಯ ಖಾದ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತಿದೆ.
ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆ ತೀರಾ ಕಡಿಮೆ. ಆದರೆ ಬಳಕೆದಾರರ ಸಂಖ್ಯೆ ಹೆಚ್ಚಿದ್ದು, ಸಿರಿಧಾನ್ಯದ ವಿವಿಧ ರೀತಿಯ ಖಾದ್ಯಗಳ ತಯಾರಿಕೆ, ಬಳಕೆ ಮಾಡಲಾದ ಸಿರಿಧಾನ್ಯಗಳ ವಿವರ ಸೇರಿದಂತೆ ಖಾದ್ಯಗಳ ಸಂಪೂರ್ಣ ವಿವರಗಳೊಂದಿಗೆ ಸ್ಪರ್ಧಾಳುಗಳು ಉತ್ತಮವಾಗಿ ಖಾದ್ಯಗಳನ್ನು ಪ್ರದರ್ಶಿಸಿದ್ದಾರೆ. ಈ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅತಿ ಮುಖ್ಯವಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಅಭ್ಯರ್ಥಿಗಳು ಒಟ್ಟು 38 ಜನರು ಸ್ಪರ್ಧಿಸಿದ್ದಾರೆ.
ಮರೆತುಹೋದ ಖಾದ್ಯಗಳಲ್ಲಿ ಮಲೆನಾಡು ಭಾಗದಲ್ಲಿ ತಯಾರಿಸುವ ಬಾಣಂತಿಯರ ಖಾದ್ಯಗಳು ಎಲ್ಲರ ಗಮನ ಸೆಳೆದಿದ್ದು, ಜೋಳದ ಗುಗ್ಗರಿ, ನವಣೆ ಖಿಲ್ಸ, ಸಜ್ಜೆ ಮಾದಲಿ, ಸುಕ್ಕಿನುಂಡೆ, ಕಡುಬುಗಳು, ಗಾರ್ಗೆಯಂತಹ ಅನೇಕ ಮರೆತು ಹೋದ ಖಾದ್ಯಗಳನ್ನು ಸ್ಪರ್ಧಾಳುಗಳು ವಿಶೇಷವಾಗಿ ತಯಾರಿಸಿದ್ದಾರೆ. ಸ್ಪರ್ಧೆಯ ನಿಯಮದಂತೆ ತಿನಿಸುಗಳನ್ನು ಮನೆಯಲ್ಲಿಯೇ ತಯಾರಿಸಿ ಪಾಕ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಪ್ರದರ್ಶಿಸಿದ್ದಾರೆ.
Department of Agriculture ಮರೆತು ಹೋದ ಖಾದ್ಯ, ಸಿರಿಧಾನ್ಯ ಸಿಹಿ ಮತ್ತು ಖಾರ ಮೂರು ವಿಭಾಗಗಳಲ್ಲಿ ಕ್ರಮವಾಗಿ ಪ್ರಥಮ ಸ್ಥಾನಕ್ಕೆ ರೂ.5000, ದ್ವಿತೀಯ ಸ್ಥಾನಕ್ಕೆ ರೂ.3000 ಹಾಗೂ ತೃತೀಯ ಸ್ಥಾನಕ್ಕೆ ರೂ.2000 ಬಹುಮಾನವನ್ನು ನೀಡಲಾಗುವುದು ಎಂದರು.
ಸ್ಪರ್ಧೆಯಲ್ಲಿ ಸಿರಿಧಾನ್ಯದ ಸಿಹಿ ಮಂಡಿಗೆ, ಹುರುಳಿ ಉಂಡೆ ಮತ್ತು ಸಾಮೆ ಅಡೆ ಪಾಯಸ, ಹುರುಳಿ ಲೇಹ್ಯಗಳು, ನವಣೆ ಕಡಬು, ಸಿರಿಧಾನ್ಯಗಳ ಮಫಿನ್, ಕೇಕ್ ಬಿಸ್ಕತ್ತು, ನವಣೆ ತೊಡೆದೇವು, ಸಿರಿಧಾನ್ಯ ಮಿಠಾಯಿಗಳು, ಕರಡಿ ಸೊಪ್ಪಿನ ಚಟ್ನಿ, ಬಾಳೆ ಮೂತಿ ಖಾರ(ಬಾಣಂತಿಯರಿಗೆ), ಪೊಂಗಲ, ಪರೋಟ, ಕಡುಬು, ಗಾರ್ಗೆ, ನವಧಾನ್ಯ ಮುದ್ದೆ, ಜೋಳ ಗುಗರಿ, ನವಣೆ ಖಿಲ್ಸ, ಸಿರಿಧಾನ್ಯ ಬರ್ಫಿ, ಮಾಲದಿ, ಸಿರಿಧಾನ್ಯ ಹೋಳಿಗೆ, ಉಂಡೆಗಳನ್ನು ತಯಾರಿಸಿ ಪ್ರದರ್ಶಿಸಿದ್ದು, ವೈವಿಧ್ಯಮಯವಾಗಿ ಅಲಂಕಾರಗೊಳಿಸಿ ಪ್ರದರ್ಶಿಸಿದ ರೀತಿ ಕಣ್ಮನ ಸೆಳೆದು, ಅಡುಗೆಯ ಘಮ ಬಾಯಲ್ಲಿ ನೀರೂರಿಸುವಂತಿತ್ತು.
ಕಾರ್ಯಕ್ರಮದಲ್ಲಿ ಉಪ ಕೃಷಿ ನಿದೇಶಕರಾದ ಮಂಜುಳಾ , ಲೋಕೇಶ್, ಸಹಾಯಕ ಕೃಷಿ ನಿರ್ದೇಶಕರಾದ ಕಾಶಿನಾಥ, ಸುನೀತಾ ಇತರೆ ಅಧಿಕಾರಿಗಳು, ಸ್ಪರ್ಧಿಗಳು ಪಾಲ್ಗೊಂಡಿದ್ದರು.

Karnataka Ex-Servicemen Association ಮಾಜಿ ಸೈನಿಕರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕರಿಸಿ ಗೌರವ ಅರ್ಪಣೆ

0

Karnataka Ex-Servicemen Association ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ವಾರ್ಷಿಕ ಮಹಾಸಭೆ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಸಲಾಯಿತು.

ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರ ಪತ್ನಿಯರನ್ನು (ವೀರನಾರಿಯರು) ಗೌರವಿಸಲಾಯಿತು.

ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಕಾನೂನು ನೆರವು ಮತ್ತು ಆರ್ಥಿಕ ಭದ್ರತೆ ನೀಡಲು ನಿರ್ಣಯಿಸಲಾಯಿತು.

ಮಾಜಿ ಸೈನಿಕರ ಪೋಷಕರನ್ನು ಹಾಗೂ ಸಂಘದ ಹಿರಿಯ ಮಾಜಿ ಸೈನಿಕರನ್ನು ಅವರ ಅಮೂಲ್ಯ ಸೇವೆಗಾಗಿ ಸನ್ಮಾನಿಸಲಾಯಿತು.

ಎಸ್‌ಎಸ್‌ಎಲ್‌ಸಿ (10th) ಮತ್ತು ಪಿಯುಸಿ (PUC) ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಮಾಜಿ ಸೈನಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.

ಪ್ರತಿಯೊಬ್ಬ ಮಾಜಿ ಸೈನಿಕನಿಗೂ ಆರೋಗ್ಯ ಮತ್ತು ಸಾಮಾಜಿಕ ಸೌಲಭ್ಯಗಳು ತಲುಪುವಂತೆ ಸಂಘವು ಬೆಂಬಲ ನೀಡಲಿದೆ ಎಂದು ಘೋಷಿಸಲಾಯಿತು.

Karnataka Ex-Servicemen Association 2024-25ನೇ ಸಾಲಿನ ಆಯವ್ಯಯ ಮತ್ತು ಆಡಿಟ್ ವರದಿಯನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಮಧ್ಯಾಹ್ನದ ಭೋಸಭೆಯ ಕಾರ್ಯಕಲಾಪಗಳು ಮುಗಿದ ನಂತರ, ಬಂದಿದ್ದ ಎಲ್ಲಾ ಸದಸ್ಯರಿಗೂ, ಸನ್ಮಾನಿತರಿಗೂ ಹಾಗೂ ಅತಿಥಿಗಳಿಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸೌಹಾರ್ದಯುತ ಭೋಜನದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

DC Shivamogga ಮಾದಕ ವಸ್ತು ಮಾರಾಟ ಸೇವನೆ, ಕಳ್ಳ ಸಾಗಣೆ ವಿರುದ್ಧ ಜನಜಾಗೃತಿ ಮಾಡೋಣ- ಪ್ರಭುಲಿಂಗ ಕವಳಿಕಟ್ಟಿ

0

DC Shivamogga ದೇಶದ ರಕ್ಷಣೆ, ಸ್ವಸ್ಥ ಸಮಾಜ ನಿರ್ಮಾಣ, ಭಾರತದ ಭವ್ಯಭವಿಷ್ಯಕ್ಕಾಗಿ ಮಾದಕ ವಸ್ತುಗಳ ವ್ಯಸನ, ಮಾರಾಟ ಮತ್ತು ಕಳ್ಳಸಾಗಾಣೆ ವಿರುದ್ಧ ಜನಜಾಗೃತಿಗೊಳಿಸಲು ಹಾಗೂ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಂಕಲ್ಪ ಮಾಡುವಂತೆ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಅವರು ಪರಿವರ್ತನಾ ಟ್ರಸ್ಟ್, ಬೆಂಗಳೂರು, ಜಿಲ್ಲಾಡಳಿತ, ರೋಟರಿ ಸಂಸ್ಥೆ ಶಿವಮೊಗ್ಗದ ವಿವಿಧ ವಲಯಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಡ್ರಗ್ಸ್ ಮುಕ್ತ ಕರ್ನಾಟಕ ಜನಜಾಗೃತಿ ವಾಹನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಸಹಜ ಕುತೂಹಲದಿಂದ ನಿಧಾನವಾಗಿ ಆರಂಭಗೊಳ್ಳುವ ಮಾದಕ ವಸ್ತುಗಳ ಸೇವನೆ, ಕೊನೆಯಲ್ಲಿ ಚಟವಾಗಿ ಪರಿಣಮಿಸಲಿದೆ. ಇದರಿಂದಾಗಿ ಅಸಂಖ್ಯಾತ ಯುವಕ-ಯುವತಿಯರು ತಮಗೆ ಅರಿವಿಲ್ಲದೆಯೆ ಅಮೂಲ್ಯವಾದ ಭವಿಷ್ಯವನ್ನು ಯಾತನಾಮಯವಾಗಿಸಿಕೊಳ್ಳುತ್ತಿದ್ದಾರೆ ಎಂದರು.
ಮನೋರಂಜನೆ, ಹವ್ಯಾಸಿ ಕ್ಲಬ್ ಗಳು, ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಅಭಿವೃದ್ದಿಯಾದಂತೆ ಪರಿಸರದ ಮೇಲೆ ಆಗಿರುವ ಪ್ರಭಾವ, ಅದರ ಪರಿಣಾಮಗಳು ಗೋರವಾಗಿವೆ. ಇಂದಿನ ಯುವ ಪೀಳಿಗೆ ಮಾದಕ ವಸ್ತುಗಳ ಮೋಹಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ಕ್ರಮ ಅಗತ್ಯವಾಗಿದೆ. ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳದೆ ಇರುವಂತೆ ಯುವಕರ ಗಮನ ಕೇಂದ್ರೀಕರಿಸಬೇಕಾದ ಅಗತ್ಯವಿದೆ. ನೈತಿಕ ಸ್ವಭಾವವೂ ಬದಲಾಗದಂತೆ ನೋಡಿಕೊಳ್ಳಬೇಕಾದ ಅಗತ್ಯ ಸಮಾಜ ಹಾಗೂ ಪೋಷಕರ ಮೇಲಿದೆ ಎಂದರು.
ಮಾದಕ ವ್ಯಸನ ಎಂಬ ಮಾಯಾಜಾಲಕ್ಕೆ ಬೀಳುವ ಮೊದಲು ಅದನ್ನು ಬಲವಾಗಿ ಕಟ್ಟಿಹಾಕಬೇಕಾಗಿದೆ. ಅದಕ್ಕಾಗಿ ಇಡಿ ಸಮಾಜವೇ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಜಾಗೃತ ಸಮಾಜ ನಿರ್ಮಿಸುವಲ್ಲಿ ಹಾಗೂ ಭಾರತದ ಭವಿಷ್ಯವನ್ನು ಸಂರಕ್ಷಿತಗೊಳಸುವ ರೂಪಿಸುವ ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರ ಭಾಗವಹಿಸುವಿಕೆ ಅಗತ್ಯವಾಗಿದೆ ಎಂದರು.
ಮಾದಕ ವಸ್ತು ವ್ಯವನಿಗಳನ್ನು ಮಾತ್ರವಲ್ಲದೇ ಅವರ ಮೂಲಕ ಇಡೀ ಸಮಾಜವನ್ನು ಆವರಿಸಿಕೊಂಡು ವಿನಾಶದಂಚಿಗೆ ಕೊಂಡೊಯ್ಯುತ್ತದೆ. ಭವ್ಯ ಇತಿಹಾಸ, ಸಾಂಸ್ಕೃತಿಕ-ಆಧ್ಯಾತ್ಮಿಕ ಪರಂಪರೆ ಹೊಂದಿರುವ ಈ ನಾಡಿನಲ್ಲಿ ಹಿರಿಯರ ಆಶಯದಂತೆ ನಡೆದುಕೊಳ್ಳುವ, ಅನುಸರಿಸುವ ಅಗತ್ಯವಿದೆ ಎಂದರು.
DC Shivamogga ಮದ್ಯ, ಮಾದಕ ವಸ್ತುಗಳ ನಿಯಂತ್ರಣ, ನಶೆ ಮುಕ್ತ ಸಮಾಜ ನಿರ್ಮಾಣ ಎಂಬ ಹೆಸರಿನಲ್ಲಿ ಅನೇಕ ಜನಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದರೆ, ಇನ್ನೊಂದು ಕಡೆಯಲ್ಲಿ ಮದ್ಯದಂಗಡಿಗಳಿಗೆ ಸರ್ಕಾರವೇ ಪರವಾನಿಗೆ ನೀಡುತ್ತಿದೆ. ಎಂತಹ ವಿಪರ್ಯಾಸ. – ಎಸ್.ಎನ್.ಚನ್ನಬಸಪ್ಪ, ಶಾಸಕರು. ಶಿವಮೊಗ್ಗ ನಗರ.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಬಲ್ಕಿಶ್ ಬಾನು , ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ.., ಚಂದ್ರಶೇಖರ್, ಹರ್ಷಕಾಮತ್, ಬಿ.ಜಿ.ಧನರಾಜ್, ಶ್ರೀಮತಿ ಭಾರತಿ ಚಂದ್ರಶೇಖರ್, ಸುದರ್ಶನ್, ಉದಯಕದಂಬ, ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Backward Classes Welfare Department ಪಿಹೆಚ್ ಡಿ ವಿದ್ಯಾರ್ಥಿಗಳಿಗೆ ವ್ಯಾಸಂಗವೇತನ/ ಫೆಲೋಷಿಪ್ ಪಡೆಯಲು ಅರ್ಜಿ ಆಹ್ವಾನ, ಹಿಂದುಳಿದ ವರ್ಗಗಳ ಇಲಾಖೆ ಪ್ರಕಟಣೆ

0

Backward Classes Welfare Department ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2025-26ನೇ ಸಾಲಿನಲ್ಲಿ ಕರ್ನಾಟಕದ ಶಾಸನಬದ್ಧ ವಿಶ್ವವಿದ್ಯಾಲಯಗಳಲ್ಲಿ/ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿಹೆಚ್.ಡಿ. ಅಧ್ಯಯನ ಮಾಡುತ್ತಿರುವ (ಫೆ.10, 2025 ಮತ್ತು ಅದರ ನಂತರ ಪ್ರಥಮ ವರ್ಷದ ಪಿಹೆಚ್.ಡಿ ಪ್ರಾರಂಭಿಸಿರಬೇಕು) ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ)ಗೆ ಸೇರಿದ ಹೊಸ ವಿದ್ಯಾರ್ಥಿಗಳಿಂದ ಮಾತ್ರ ಮಾಸಿಕ ವ್ಯಾಸಂಗ ವೇತನ/ಫೆಲೋಶಿಫ್ ಪಡೆಯಲು ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ದೃಢೀಕೃತ ದಾಖಲಾತಿಗಳನ್ನು ಲಗತ್ತಿಸಿ ದಿ: 09/01/2026 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Backward Classes Welfare Department ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂ.: 8050770004, ವೆಬ್‌ಸೈಟ್ https://bcwd.karnataka.gov.in, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯನ್ನು ಖುದ್ದಾಗಿ ಅಥವಾ ದೂ.ಸಂ.: 08182-222129 ನ್ನು ಸಂಪರ್ಕಿಸುವುದು.

Newspaper Distributors Trust ಶಿವಮೊಗ್ಗದಲ್ಲಿ ಪತ್ರಿಕಾ ವಿತರಕರ ಟ್ರಸ್ಟ್ ಸ್ಥಾಪನೆ

0

Newspaper Distributors Trust ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು
ಪತ್ರಿಕಾ ವಿತರಕರ ಏಳಿಗೆಗಾಗಿ ವಿನೂತನವಾಗಿ ತನ್ನ ಅಂಗ ಸಂಸ್ಥೆಯಾಗಿ ಪತ್ರಿಕಾ ವಿತರಕರ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಲು ನಿರ್ಧರಿಸಿದೆ

ಚಾರಿಟಬಲ್ ಟ್ರಸ್ಟ್ ಮೂಲಕ ಪತ್ರಿಕಾ ವಿತರಕರ ಸಂಕಷ್ಟಗಳು, ಸಮಸ್ಯೆಗಳ ನಿವಾರಣೆಗಾಗಿ ಕ್ಷೇಮಾಭಿವೃದ್ಧಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಪತ್ರಿಕಾ ವಿತರಕರ ಚಾರಿಟಬಲ್ ಟ್ರಸ್ಟ್ ಸ್ಥಾಪನೆ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟವು ನಿರ್ಧರಿಸಿದೆ

ಪತ್ರಿಕಾ ವಿತರಕರ ಚಾರಿಟಬಲ್ ಟ್ರಸ್ಟ್ ನ ನಿರ್ದೇಶಕ ಮಂಡಳಿಯ ವಿವರ ಮುಂದಿನಂತಿದೆ

ಹೆಸರು. ಪತ್ರಿಕಾ ವಿತರಕರ ಚಾರಿಟಬಲ್ ಟ್ರಸ್ಟ್

  1. ಪ್ರಶಾಂತ್ ಕುಮಾರ್ ಎನ್. ಅಧ್ಯಕ್ಷರು
  2. ಸಂಗಮ್ ಸುರೇಶ್. ಪಿ ಉಪಾಧ್ಯಕ್ಷರು
  3. ವೀರಭದ್ರ ವೈ.ಸಿ. ಕಾರ್ಯದರ್ಶಿಗಳು
  4. ನಾದೂರು ವಾಸುದೇವ. ನಿರ್ದೇಶಕರು
  5. ಎಂ ಟಿ ಗೋಪಾಲ್ . ನಿರ್ದೇಶಕರು ಸಂಗಂ ಸುರೇಶ್ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ

ಕೆ ಶಂಭುಲಿಂಗ
ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ (ರಿ)

MESCOM ಇಂದು ಮತ್ತು ನಾಳೆ ಶಿವಮೊಗ್ಗದಲ್ಲಿ ಎಲ್ಲೆಲ್ಲಿ ಕುಡಿಯುವ ನೀರು ಸರಬರಾಜು ಇಲ್ಲ? ಮಾಹಿತಿ ಓದಿ

0

MESCOM ಮೆಸ್ಕಾಂ ವತಿಯಿಂದ ತುರ್ತು ಕಾಮಗರಿಯಿರುವುದರಿಂದ ಲಾಲ್ ಬಹದ್ದೂರ್ ಶಾಸ್ತ್ರೀ ಮಧ್ಯಂತರ ಯಂತ್ರಗಾರಕ್ಕೆ ಜ. 07 ರಂದು ವಿದ್ಯುತ್ ನಿಲುಗಡೆ ಮಾಡುವುದರಿಂದ ಜ.07 ಮತ್ತು 08 ರಂದು ಸೋಮಿನಕೊಪ್ಪ, ತ್ಯಾವರೆಚಟ್ನಹಳ್ಳಿ, ಬೊಮ್ಮನಕಟ್ಟೆ, ಶಾಂತಿನಗರ ಪ್ರದೇಶಗಳಲ್ಲಿ ದೈನಂದಿನ ಕುಡಿಯುವ ನೀರಿನ ಸರಬರಾಜು ವ್ಯತ್ಯಯವಾಗುತ್ತಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿರುತ್ತಾರೆ.