Wednesday, August 12, 2026
Wednesday, August 12, 2026
Home Blog Page 222

Shri Saraswati Music Institute “ವೀಣಾ ತ್ರಿಶತೋತ್ಸವ”ದಲ್ಲಿ ವೀಣೆಗಳ‌ ಝೇಂಕಾರ ಕೇಳಲು ರೋಮಾಂಚಕ ಅನುಭವ- ಬಿ.ವೈ.ರಾಘವೇಂದ್ರ.

0

Shri Saraswati Music Institute ಶಿವಮೊಗ್ಗದ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ, ಸುಶ್ರಾವ್ಯ ಸಂಗೀತ ವಿದ್ಯಾಲಯ ಹಾಗೂ ಶ್ರೀ ಸಾಯಿಶಕ್ತಿ ಸಂಗೀತ ವಿದ್ಯಾಲಯಗಳ ಸಹಯೋಗದೊಂದಿಗೆ ‘ವೀಣಾ ತ್ರಿಶತೋತ್ಸವ’ ಕಾರ್ಯಕ್ರಮವನ್ನು
ಆಯೋಜಿಸಲಾಗಿತ್ತು

ಮೈಸೂರು ರಾಜವಂಶಸ್ಥರು ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.

ಒಂದೇ ವೇದಿಕೆಯಲ್ಲಿ ‘301 ವೀಣಾ ನಾದ ಝೇಂಕಾರ’ ಮೊಳಗಿದ್ದು ನಿಜಕ್ಕೂ ರೋಮಾಂಚನಕಾರಿ ಮತ್ತು ಕಿವಿಗೆ ಇಂಪಾದ ಅನುಭವವಾಗಿತ್ತು. ನಮ್ಮ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಉಳಿಸಿ, ಬೆಳೆಸುತ್ತಿರುವ ಈ ಸಂಸ್ಥೆಗಳ ಕಾರ್ಯ ಶ್ಲಾಘನೀಯ.

Shri Saraswati Music Institute ಈ ಸಂದರ್ಭದಲ್ಲಿ ಶ್ರೀ ಡಿ. ಎಸ್. ಅರುಣ್ ವಿಧಾನ ಪರಿಷತ್ ಸದಸ್ಯರು, ಡಾ. ಧನಂಜಯ್ ಸರ್ಜಿ ವಿಧಾನ ಪರಿಷತ್ ಸದಸ್ಯರು, ಶಿವಮೊಗ್ಗ ನಗರದ ಶಾಸಕರಾದ ಎಸ್. ಏನ್ ಚೆನ್ನಬಸಪ್ಪ, ಶ್ರೀ ಕೆ. ಬಿ. ಪ್ರಸನ್ನ ಕುಮಾರ್ ಮಾಜಿ ಶಾಸಕರು, ಶ್ರೀಮತಿ ರೇವತಿ ಕಾಮತ್, ಶ್ರೀ ಉಮೇಶ್ ಹಾಲಾಡಿ ಸೇರಿದಂತೆ ವೇದಿಕೆಯಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ಮಾರಿ ಜಾತ್ರೆ ಅಂಗವಾಗಿ ” ಟಗರು ಕಾಳಗ” ಪೋಸ್ಟರ್ ಬಿಡುಗಡೆ ಸಮಾರಂಭ ಆಯೋಜನೆ

0

ನಮ್ಮೂರ ಬಳಗ, ಶಿವಮೊಗ್ಗ ವತಿಯಿಂದ, ಪ್ರತಿಷ್ಠಿತ ‘ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ’ ಅಂಗವಾಗಿ ಆಯೋಜಿಸಿರುವ “ರಾಷ್ಟ್ರಮಟ್ಟದ ಬಾರಿ ಟಗರು ಕಾಳಗ” ದ ಪೋಸ್ಟರ್ ಬಿಡುಗಡೆ ಹಾಗೂ ಸಾಮಾಜಿಕ ಜಾಲತಾಣದ ಮುಖಪುಟ ಚಾಲನೆ ಕಾರ್ಯಕ್ರಮವನ್ನು ದಿನಾಂಕ: 19 -1- 2026ನೇ ಸೋಮವಾರ , ನಾಳೆ ಬೆಳಗ್ಗೆ 11: 30 ಕ್ಕೆ ಕೋಟೆ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವನ್ನು ಕೋಟೆ ಮಾರಿಕಾಂಬ ದೇವಾಲಯ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಚಾಲನೆ ನೀಡುವರು ತಾವುಗಳು ಆಗಮಿಸಬೇಕಾಗಿ ವಿನಂತಿಸಲಾಗಿದೆ.

MESCOM ಜನವರಿ 21. ಮಾಚೇನಹಳ್ಳಿ ಸುತ್ತಮುತ್ತ ವಿದ್ಯುತ್ ನಿಲುಗಡೆ. ಮೆಸ್ಕಾಂ ಪ್ರಕಟಣೆ

0

MESCOM ಶಿವಮೊಗ್ಗ ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿದ್ದು, ಜ. 21 ರಂದು ಬೆಳಗ್ಗೆ 9.30 ರಿಂದ ಸಂಜೆ 6.00 ರವರೆಗೆ ಮಾಚೇನಹಳ್ಳಿ, ಬಿದರೆ, ಬಿದರೆ ಗೇಟ್, ನಿದಿಗೆ, ಓತಿಘಟ್ಟ, ಹಾರೇಕಟ್ಟೆ, ಸೋಗಾನೆ, ಜನತಾ ಕಾಲೋನಿ, ಶಿವಣ್ಣ ಕ್ಯಾಂಪ್, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ, ಜಯಂತಿಗ್ರಾಮ, ಹೊನ್ನವಿಲೆ, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ ಕಾಲೋನಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

ಅಲ್ಲಿ “ಬಿಗ್ ಬಾಸ್” .”ಗಿಲ್ಲಿ “ಫುಲ್ ಪಾಸ್

0

“ಬಿಗ್ ಬಾಸ್ ” ನೋಡುತ್ತಿರುವವರು ಈವರೆಗೂ ಒಂದು ರೀತಿ ಇದೇನು ಮಾಧ್ಯಮ ಯಾವ ಲೆವೆಲ್ಲಿಗೆ ಇಳೀತು ಅಂತ ಅಂದುಕೊಂಡಿದ್ದು ಸಹಜ. ಈಗ ಖ್ಯಾತ ನಟ ಸುದೀಪ್ ನಡೆಸಿಕೊಟ್ಟ
” ಬಿಗ್ ಬಾಸ್ -12″
ಅದನ್ನೆಲ್ಲಾ ಹಿಂಡಿಹಾಕಿದೆ.
ಕಾರಣ ಇಷ್ಟೆ. ಇಲ್ಲಿಯವರೆಗೂ ರಿಯಾಲಿಟಿ ಶೋ ಗಳಲ್ಲಿ ಯಾರು ಗೆದ್ರೆ ಏನು ? ಎಂಬಂತೆ ಮೂಗುಮ್ಮಾಗಿದ್ದ ಪ್ರೇಕ್ಷಕ ವರ್ಗ ಈ ಹನ್ನೆರಡನೇ ಸಂಚಿಕೆಯನ್ನ ಎಂದಿಗಿಂತ ಆಸಕ್ತಿ,ಕುತೂಹಲಗಳಿಂದಲೇ ವೀಕ್ಷಿಸಿತು.

ಅದಕ್ಕೆ ಎರಡು ಮುಖ್ಯ ಕಾರಣಗಳಿವೆ. ಒಂದು ವಾರದಿಂದ ವಾರಕ್ಕೆ ಪಾದರಸದಂತೆ ಆಟ ನಿರ್ವಹಿಸುವ ಓರ್ವ ಕಲಾವಿದ. ಮತ್ತು ಎರಡನೇಯದು ಅಣ ಕಲಾವಿದನ ಬ್ಯಾಗ್ರೌಂಡು. ಈ ಎರಡೂ ಅಂಶಗಳು ಗಿಲ್ಲಿ ನಟನ ಅದೃಷ್ಟ ಬರೆದಿವೆ ಎನ್ನಬಹುದು.
ಈಗಾಗಲೇ ಬೇರೆ ಬೇರೆ ಟೀವಿ ಶೋಗಳಲ್ಲಿ ಮಾಧ್ಯಮ ಮತ್ತು ಚಿತ್ರ ನಟರ ಗಮನ ಸೆಳಯುವಲ್ಲಿ “ಗಿಲ್ಲಿ ನಟ “
ಯಶಸ್ವಿಯಾಗಿದ್ದರು.
ಅದೊಂದು ಇಮೇಜೇ ಸೃಷ್ಟಿಯಾಗಿತ್ತು. ಜೊತೆಗೆ ಆತನ ಗ್ರಾಮೀಣ ಹಿನ್ನೆಲೆ ಮುಂಚಿತವಾಗೇ ಓಪನ್ ಸೀಕ್ರೆಟ್ ಆಗಿಬಿಟ್ಟಿತ್ತು. ನಾಲ್ವೆತ್ತೆಂಟು ಕೋಟಿಗೂ ಅಧಿಕ ಮತಗಳು ಸೆಳೆದನೆಂದರೆ ಅದೇ ಆತನ ಜನಪ್ರಿಯತೆಗೆ ಸಾಕ್ಷಿ.

ಈಗ ಐವತ್ತುಲಕ್ಷರೂಪಾಯಿ ಜೇಬಿಗಳಿಸಿದ್ದಲ್ಲದೇ ಸುದೀಪ್ ಮನಮೆಚ್ಚಿ ಹತ್ತು ಲಕ್ಷರೂಪಾಯಿ ನೀಡಿದ್ದಾರೆ. ಜೊತೆ ಒಂದು ಕಾರನ್ನೂ ಪ್ರಾಯೋಜಕರು ನೀಡಿದ್ದಾರೆ.
ಯಾರೂ ಹುಬ್ಬೇರಿಸಬೇಕಿಲ್ಲ. ಅದು ನಟನ ತಾಕತ್ತು.ಯೋಗ್ಯತೆಗೆ ಸಿಕ್ಕ ಪ್ರತಿಫಲ.

ಖ್ಯಾತ ಚಿತ್ರನಟ ಜಗ್ಗೇಶ್ ,ಗಿಲ್ಲಿ ಬಗ್ಗೆ ” ಮುಂದೊಂದು ದಿನ ನಿನಗೆ ಜೊತೇಲಿ ಒಬ್ಬ ಚತ್ರಿ ಹಿಡೀತಾನೆ. ಮತ್ತೆ ಸುತ್ತ ನಾಕುಜನ ಬಾಡಿಗಾರ್ಡ್ ಗಳು ಬರ್ತಾರೆ” ಅಂತ ಹೇಳಿದ ಮಾತು ಇಂತಹ ಗ್ರಾಮೀಣ ಪ್ರತಿಭೆಗೆ ಆಶೀರ್ವಾದ ಮಾಡಿ ಹೇಳಿದ ಮಾತು ಅತಿಶಯೊಕ್ತಿ ಅಲ್ಲ.

Klive Special Article ಭೂಗೋಲದ ಸುತ್ತ. ಆತಂಕಗಳ ಹುತ್ತ… ಲೇ: ಸುಧೀರ್ ಕೀಳಂಬಿ

0

Klive Special Article ಯುದ್ಧ ಮತ್ತು ಶಾಂತಿ: ಇಂದಿನ ಅಗತ್ಯತೆ
೨೦೨೬ರ ಆರಂಭವೇ ಜಾಗತಿಕ ಅಶಾಂತಿಯ ಹೊಸ ಅಧ್ಯಾಯವನ್ನು ತೆರೆದಿದೆ. ೨೦೨೫ರಲ್ಲಿ ನಡೆದ ಅನೇಕ ಸಂಘರ್ಷಗಳ ಗಾಯಗಳು ಇನ್ನೂ ಮಸುಕಾಗದಿರುವಾಗಲೇ, ಹೊಸ ಉದ್ವಿಗ್ನತೆಗಳು ವಿಶ್ವವನ್ನು ಮತ್ತೊಮ್ಮೆ ಯುದ್ಧದ ಅಂಚಿನತ್ತ ತಳ್ಳುತ್ತಿರುವುದು ಆತಂಕಕಾರಿ. ಶಾಂತಿಯನ್ನು ಬಯಸುವ ಜನ-ಮನಗಳ ನಡುವೆ ಕೆಲವೇ ನಾಯಕರು ತೋರಿಸುತ್ತಿರುವ ದುರಾಸೆ ಮತ್ತು ಅಧಿಕಾರಲಾಲಸೆ, ಜಗತ್ತಿನ ಸ್ಥಿರತೆಗೆ, ಶಾಂತಿ ಸೌಹಾರ್ದಕ್ಕೆ ಗಂಭೀರ ಸವಾಲು ಹಾಕುತ್ತಿದೆ.
ಅಮೇರಿಕಾದ ನಡೆ
ಜಗತ್ತಿನ ದೊಡ್ಡಣ್ಣ ಅಮೇರಿಕ ಇತ್ತೀಚಿಗೆ ವೆನಿಜುವೆಲಾ ದಲ್ಲಿ ನಡೆದುಕೊಂಡ ರೀತಿ ಹಾಗೂ ಇರಾನ್ ಮತ್ತು ಗ್ರೀನ್ಲ್ಯಾಂಡ್ ಕುರಿತಾದ ಹೇಳಿಕೆಗಳು ಮಿತ್ರ ರಾಷ್ಟ್ರಗಳಲ್ಲಿ ಒಡಕು ಮೂಡಿಸಿ, ಅಂತರ ರಾಷ್ಟೀಯ ವ್ಯವಸ್ಥೆಯ ಅಲ್ಲೊಲ್ಲ ಕಲ್ಲೋಲಕ್ಕೆ ಮುನ್ನುಡಿ ಬರೆಯುತ್ತಿದೆ. ಇದರ ಮುಂದುವರಿದ ಭಾಗ ಯುದ್ಧವಾಗಿ ಪರಿವರ್ತನೆ ಆಗಲಿದೆಯೇ ಎಂಬ ಆತಂಕ ಎಲ್ಲರಲ್ಲಿ ಮನೆಮಾಡಿದೆ.
ಮಧ್ಯಪ್ರಾಚ್ಯ: ನಿರಂತರ ಕದನದ ವಲಯ
ಗಾಜಾದಲ್ಲಿ ಇಸ್ರೇಲ್–ಹಮಾಸ್ ಯುದ್ಧ ತೀವ್ರಗೊಂಡಿದ್ದು, ಅಲ್ಲಿನ ನಾಗರಿಕರಲ್ಲಿ ಭಾರೀ ಮಾನವೀಯ ಸಂಕಷ್ಟವನ್ನು ಉಂಟುಮಾಡಿದೆ. ವೆಸ್ಟ್ ಬ್ಯಾಂಕ್‌ನಲ್ಲಿನ ಘರ್ಷಣೆಗಳು ಹೆಚ್ಚಾಗಿದ್ದು, ಲೆಬನಾನ್ ಗಡಿಯಲ್ಲಿ ಇಸ್ರೇಲ್–ಹೆಜ್ಬೊಲ್ಲಾ ನಡುವಿನ ಉದ್ವಿಗ್ನತೆ ಮತ್ತಷ್ಟು ಗಂಭೀರವಾಗಿದೆ. ಅಮೇರಿಕಾ-ಇರಾನ್–ಇಸ್ರೇಲ್ ನಡುವಿನ ಏರಿಳಿತಗಳು ಪ್ರಾದೇಶಿಕ ಯುದ್ಧದ ಭೀತಿಯನ್ನು ಹೆಚ್ಚಿಸುತ್ತಿವೆ. ಸಿರಿಯಾ, ಯೆಮೆನ್ ನಲ್ಲಿನ ಸಶಸ್ತ್ರ ಗುಂಪುಗಳ ನಡುವಿನ ಅಧಿಕಾರ ಹೋರಾಟ ಶರಣಾರ್ಥಿ ಸಂಕಷ್ಟವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಉಕ್ರೇನ್-ರಷ್ಯಾ: ಯುದ್ಧ, ಭಾರೀ ನಾಶ
ಉಕ್ರೇನ್‌-ರಷ್ಯಾ ನಡುವಿನ ಭೂಪ್ರದೇಶ ಸಂಭಂದಿತ ಯುದ್ಧ ಮುಗಿಯುವ ಸೂಚನೆ ಇಲ್ಲದೇ ಮುಂದುವರೆಯುತ್ತಿದೆ. ಅಮೇರಿಕದ ಮಧ್ಯಸ್ಥಿಕೆ ಕೆಲವು ಭರವಸೆ ಮೂಡಿಸಿದ್ದರೂ ಈಗ ಮತ್ತೆ ಯಾವ ಆಶಾಭಾವ ಇಲ್ಲದೇ, ಯುದ್ಧದ ಕಾರ್ಮೋಡ ಮತ್ತೆ ಭುಗಿದೇಳುತ್ತಿದೆ.
ಆಫ್ರಿಕಾ: ಮರೆಮಾಚಲಾಗದ ಮಾನವೀಯ ದುರಂತಗಳು
ಸುಡಾನ್‌ನ ಗೃಹಯುದ್ಧವು ೧೪ ಮಿಲಿಯನ್ ಜನರನ್ನು ಸ್ಥಳಾಂತರಗೊಳಿಸಿರುವ ವಿಶ್ವದ ಅತಿದೊಡ್ಡ ಮಾನವೀಯ ದುರಂತಗಳಲ್ಲಿ ಒಂದಾಗಿದೆ. ಕಾಂಗೋದಲ್ಲಿನ ಬಂಡುಕೋರರ ಚಟುವಟಿಕೆಗಳು ಪ್ರಾದೇಶಿಕ ಯುದ್ಧದ ಅಪಾಯವನ್ನು ಹೆಚ್ಚಿಸಿವೆ. ಸೋಮಾಲಿಯಾ, ಇಥಿಯೋಪಿಯಾ ಮತ್ತು ಮೊಜಾಂಬಿಕ್‌ನ ಹಿಂಸಾಚಾರ ಮಾನವೀಯ ನೆರವಿನ ಅಗತ್ಯವನ್ನು ತೀವ್ರಗೊಳಿಸಿದೆ.
ಏಷ್ಯಾ–ಪೆಸಿಫಿಕ್: ಉದ್ವಿಗ್ನತೆಯ ಹೊಸ ಕೇಂದ್ರಬಿಂದು
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಚಟುವಟಿಕೆಗಳು, ವಿಶೇಷವಾಗಿ ಫಿಲಿಪೈನ್ಸ್ ವಿರುದ್ಧ, ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳನ್ನು ಒಳಗೊಳ್ಳುವ ಸಂಘರ್ಷದ ಭೀತಿಯನ್ನು ಹೆಚ್ಚಿಸುತ್ತಿವೆ. ತೈವಾನ್ ಗೆ ಸಂಭದಿಸಿದಂತೆ ಚೀನಾ ಮತ್ತು ಜಪಾನ್ ಹಾಗೂ ಇತರ ದೇಶಗಳ ನಿರ್ಧಾರಗಳು ಶಾಂತಿ ಕದಡುವ ಪ್ರಯತ್ನ ನಡೆಯುತ್ತಿದೆ. ಕಾಶ್ಮೀರದಲ್ಲಿ ಪಾಕಿಸ್ತಾನದ ಕುಮ್ಮಕ್ಕಿನಿಂದ ನಡೆದ ಹೀನ ಭಯೋತ್ಪಾದಕ ಕೃತ್ಯ, ಶಾಂತಿಯನ್ನು ಸಾರುವ ಭಾರತವೂ ಶಸ್ತ್ರವನ್ನು ಕೈಗೆ ತೆಗೆದುಕೊಳ್ಳಲೇಬೇಕಾದಂತ ಪರಿಸ್ಥಿತಿಯನ್ನು ಸೃಷ್ಟಿಸಿದ್ದು ವಿಪರ್ಯಾಸ. ಥೈಲ್ಯಾಂಡ್ – ಕಾಂಬೋಡಿಯಾ ನಡುವೆ ಆಗಾಗ್ಗೆ ಆಗುತ್ತಿರುವ ತಿಕ್ಕಾಟ ಕೊನೆಗೊಂಡರೆ ಸಾಕು. ಮ್ಯಾನ್ಮಾರ್‌ನ ಗೃಹಯುದ್ಧ ಮತ್ತು ಅಫ್ಘಾನಿಸ್ತಾನದ ಅಸ್ಥಿರತೆ ಮುಂದುವರಿಯುತ್ತಿವೆ.
ವಿಶ್ವಸಂಸ್ಥೆಯ ಕನಸಿನಿಂದ ಇಂದಿನ ವಾಸ್ತವತೆವರೆಗೆ
Klive Special Article ಎರಡು ಮಹಾಯುದ್ಧಗಳ ನಂತರ “ಮುಂದಿನ ಪೀಳಿಗೆಯನ್ನು ಯುದ್ಧದ ವಿಪತ್ತಿನಿಂದ ರಕ್ಷಿಸುವುದು” ಎಂಬ ಗುರಿಯೊಂದಿಗೆ ಸ್ಥಾಪಿತವಾದ ವಿಶ್ವಸಂಸ್ಥೆ, ಇಂದಿನ ಜಗತ್ತಿನ ಸಂಕೀರ್ಣ ಸಂಘರ್ಷಗಳನ್ನು ತಡೆಗಟ್ಟುವಲ್ಲಿ ವಿಫಲವಾಗುತ್ತಿದೆಯೋನೋ ಎಂಬ ದಿಟ್ಟ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಓಸ್ಲೋ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ, ೨೦೨೪ನೇ ವರ್ಷವು ವಿಶ್ವಸಂಸ್ಥೆ ಸ್ಥಾಪನೆಯ ನಂತರದ ಅತ್ಯಂತ ಹಿಂಸಾತ್ಮಕ ವರ್ಷ. ೩೬ ದೇಶಗಳಲ್ಲಿ ೬೧ ಯುದ್ಧಗಳು ದಾಖಲಾಗಿವೆ. ೨೦೨೫ ಮತ್ತು ೨೦೨೬ರ ಆರಂಭವೂ ಇದೇ ದಿಕ್ಕಿನಲ್ಲಿ ಸಾಗುತ್ತಿರುವುದು ಆತಂಕಕಾರಿ.


ಯುದ್ಧದ ಕಾನೂನು: ಕಾಗದದಲ್ಲೇ ಉಳಿದ ನಿಯಮಗಳು
ಜಿನೀವಾ ಒಪ್ಪಂದಗಳು ನಾಗರೀಕರ ರಕ್ಷಣೆಯಿಂದ ಹಿಡಿದು, ಶಾಲೆ–ಆಸ್ಪತ್ರೆಗಳ ಮೇಲೆ ದಾಳಿ ಮಾಡಬಾರದೆಂಬ ನಿಯಮಗಳವರೆಗೆ ಅನೇಕ ನಿರ್ಬಂಧಗಳನ್ನು ವಿಧಿಸುತ್ತವೆ. ಆದರೆ ಗಾಜಾ, ಉಕ್ರೇನ್, ಸುಡಾನ್, ಸಿರಿಯಾ—ಎಲ್ಲೆಡೆ ಈ ನಿಯಮಗಳ ಉಲ್ಲಂಘನೆ ಸಾಮಾನ್ಯವಾಗಿದೆ. ಅಂತರರಾಷ್ಟ್ರೀಯ ರೆಡ್ ಕ್ರಾಸ್‌ಗೆ ನೀಡಲಾದ ಮೇಲ್ವಿಚಾರಣಾ ಜವಾಬ್ದಾರಿ ನೆಲಮಟ್ಟದಲ್ಲಿ ಪರಿಣಾಮಕಾರಿಯಾಗದಿರುವುದು ಸ್ಪಷ್ಟ.

ಸುಧೀರ್ ಕೀಳಂಬಿ ಅವರು ಜಿನೀವಾದಲ್ಲಿನ ಭಾರತದ ಮಿಷನ್ ನಲ್ಲಿ ಭಾರತದ ರಾಜತಾಂತ್ರಿಕ ಪ್ರತಿನಿಧಿ.
(ಇದು ಲೇಖಕರ ವೈಯುಕ್ತಿಕ ಅಭಿಪ್ರಾಯವಾಗಿದ್ದು, ಭಾರತ ಸರ್ಕಾರದ ದೃಷ್ಟಿಕೋನವನ್ನು ಪ್ರತಿಬಿಂಭಿಸುವುದಿಲ್ಲ.)

Shimoga-Bhadravati Urban Development Authority ಜನರ ಆರೋಗ್ಯ ದೃಷ್ಟಿಯಿಂದ ಸೂಡಾ ವ್ಯಾಪ್ತಿಯ ಕೆರೆಗಳು & ಪಾರ್ಕುಗಳನ್ನ ಅಭಿವೃದ್ಧಿ ಪಡಿಸಲಾಗುತ್ತಿದೆ- ಹೆಚ್.ಎಸ್.ಸುಂದರೇಶ್

0

ಶಿವಮೊಗ್ಗ ನಗರವನ್ನು ಸುಂದರಗೊಳಿಸುವುದು ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಸೂಡಾ ವ್ಯಾಪ್ತಿಯಲ್ಲಿ ಪಾರ್ಕ್ಗಳು ಮತ್ತು ಕೆರೆಗಳ ಅಭಿವೃದ್ದಿ, ಅಪಾರ್ಟ್ಮೆಂಟ್‌ಗಳ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ಸೋಮವಾರ ನಗರದ ಸಾಗರ ರಸ್ತೆಯ ಕೊಡಚಾದ್ರಿ ಬಡಾವಣೆಯಲ್ಲಿ ಪಾರ್ಕ್ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಹಾಗೂ ಶರಾವತಿ ಡೆಂಟಲ್ ಕಾಲೇಜ್ ಬಳಿಯ ಗೋಲ್ಡನ್ ಸಿಟಿ ಬಡಾವಣೆಯಲ್ಲಿ ಓಪನ್ ಜಿಮ್ ಉದ್ಘಾಟಿಸಿ ಅವರು ಮಾತನಾಡಿದರು.
ಸಾಗರ ರಸ್ತೆಯ ಕೊಡಚಾದ್ರಿ ಬಡಾವಣೆಯಲ್ಲಿ ನೂತನವಾಗಿ ರೂ.25 ಲಕ್ಷ ಮೊತ್ತದಲ್ಲಿ ಪಾರ್ಕ್ ಅಭಿವೃದ್ದಿ ಮತ್ತು ರೂ.25 ಲಕ್ಷದಲ್ಲಿ ರಸ್ತೆ ಅಭಿವೃದ್ದಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಹಾಗೂ ಶರಾವತಿ ಡೆಂಟಲ್ ಕಾಲೇಜ್ ಬಳಿಯ ಗೋಲ್ಡನ್ ಸಿಟಿ ಬಡಾವಣೆಯಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಓಪನ್ ಜಿಮ್ ಉದ್ಘಾಟಿಸಲಾಗಿದ್ದು ಜನರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಇತ್ತೀಚೆಗೆ ಮಲೆನಾಡಿನ ಸೊಬಗು ಮರೆಯಾಗುತ್ತಿದ್ದು, ಉಷ್ಣಾಂಶ ಹೆಚ್ಚುತ್ತಿದೆ. ಆದ್ದರಿಂದ ನಗರದಲ್ಲಿ ಗಿಡಗಳನ್ನು ನೆಡುವುದು, ಪಾರ್ಕ್ ಅಭಿವೃದ್ದಿ ಪಡಿಸುವುದು ಅತ್ಯವಶ್ಯಕವಾಗಿದೆ. ಕಳೆದ ಬಾರಿ ವಾಜಪೇಯಿ ಬಡಾವಣೆಯಲ್ಲಿ 3 ಸಾವಿರ ಗಿಡಗಳನ್ನು ನೆಡಲಾಗಿತ್ತು. ಈ ಬಾರಿ ನಗರದಲ್ಲಿ 5 ಸಾವಿರ ಗಿಡಗಳನ್ನು ನೆಡುವ ಬಗ್ಗೆ ಅರಣ್ಯ ಇಲಾಖೆಯೊಂದಿಗೆ ಮಾತನಾಡಿದ್ದೇನೆ. ನಗರನ್ನು ಹಸಿರಾಗಿಡಲು ಮತ್ತು ಜನರ ಆರೋಗ್ಯ ದೃಷ್ಟಿಯಿಂದ ಈಗಾಗಲೇ 50 ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ 50 ಪಾರ್ಕ್ಗಳನ್ನು ಅಭಿವೃದ್ದಿಪಡಿಸಿ, ಉದ್ಘಾಟನೆ ಮಾಡಲಾಗುತ್ತಿದೆ. ಶಿವಮೊಗ್ಗ ನಗರ ತನ್ನದೇ ಆದ ಇತಿಹಾಸ ಹೊಂದಿದ್ದು, ಎಲ್ಲ ಮೂಲಭೂತ ಸೌಕರ್ಯ ಇರುವುದರಿಂದ ಹೂಡಿಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಇಂತಹ ನಗರವನ್ನು ನಾವು ಸುಂದರವಾಗಿ ಮತ್ತು ಹಸಿರಾಗಿ ಇಟ್ಟುಕೊಳ್ಳಬೇಕು. ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಗಿಡಗಳನ್ನು ನೆಡಬೇಕು ಎಂದರು.
ಶಿವಮೊಗ್ಗ-ಭದ್ರಾವತಿ ವ್ಯಾಪ್ತಿಯಲ್ಲಿ ರೂ.50 ಕೋಟಿ ವೆಚ್ಚದಲ್ಲಿ 22 ಕೆರೆಗಳನ್ನು ಹೈಟೆಕ್ ಆಗಿ ಅಭಿವೃದ್ದಿಪಡಿಸಲಾಗುವುದು. 12 ಕೆರೆ ಅಭಿವೃದ್ದಿಗೆ ಈಗಾಗಲೇ ಟೆಂಡರ್ ಆಗಿದೆ. ವಾಕಿಂಗ್ ಪಾಥ್, ಮಕ್ಕಳ ಆಟಿಕೆಗಳು, ಫೆನ್ಸ್, ಲೈಟ್, ಐಲ್ಯಾಂಡ್ ನಿರ್ಮಾಣ ಸೇರಿದಂತೆ ಅತ್ಯಂತ ಸುಂದರವಾಗಿ ಕೆರೆಗಳನ್ನು ಅಭಿವೃದ್ದಿಸಲು ಯೋಜನೆ ರೂಪಿಸಲಾಗಿದೆ.
ನಗರದಲ್ಲಿ ಇತ್ತೀಚೆಗೆ ನಿವೇಶನಗಳು ಸಿಗುವುದು ಬಹಳ ಕಷ್ಟವಾಗಿರುವ ಕಾರಣ ನಗರ ವ್ಯಾಪ್ತಿಯಲ್ಲಿ ಸುಮಾರು 1000 ಅಪಾರ್ಟ್ಮೆಂಟ್ ನಿರ್ಮಾಣ ಮಾಡಿ ಜನರಿಗೆ ನೀಡಲು ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಹಾಗೂ ಜನರಿಗೆ ಕಡಿಮೆ ಬೆಲೆಯಲ್ಲಿ ನಿವೇಶನ ನೀಡುವ ಉದ್ದೇಶದಿಂದ ಗೋಪಿಶೆಟ್ಟಿಕೊಪ್ಪದಲ್ಲಿ 33 ಎಕರೆಯನ್ನು ರೈತರಿಂದ ಖರೀದಿಸಿ ನಿವೇಶನ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
Shimoga-Bhadravati Urban Development Authority ಶಾಸಕರಾದ ಎಸ್ ಎನ್ ಚನ್ನಬಸಪ್ಪ ಮಾತನಾಡಿ, ಬಡಾವಣೆಗಳ ನಿವಾಸಿಗಳು ಕೋರಿರುವಂತೆ ಬಡಾವಣೆಗಳಲ್ಲಿನ ರಸ್ತೆ ಮರು ಡಾಂಬರೀಕರಣ, ಪಾರ್ಕ್ ಅಭಿವೃದ್ದಿ, ಸಮುದಾಯ ಭವನ ನಿರ್ಮಾಣ ಇತರೆ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದ ಅವರು ಪ್ರಸ್ತುತ ಇರುವ ಓಪನ್ ಜಿಮ್, ಪಾರ್ಕ್ ಇತರೆ ಸೌಲಭ್ಯಗಳನ್ನು ನಿವಾಸಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಎಇಇ ಬಸವರಾಪ್ಪ, ಎಇಇ ಗಂಗಾಧರಸ್ವಾಮಿ, ಟಿಪಿಎಂ ಅಭಿಲಾಷ್, ಸೂಡಾ ಮಾಜಿ ಅಧ್ಯಕ್ಷರಾದ ಜ್ಞಾನೇಶ್ವರ್, ನಾಗರಾಜ್, ಮಣಿ, ದೇವೇಂದ್ರಪ್ಪ, ಚಂದ್ರಶೇಖರ್, ಬಡಾವಣೆಗಳ ನಿವಾಸಿಗಳು ಹಾಜರಿದ್ದರು.

Rotary Club Shivamogga ಕೌಶಲ್ಯ ಕಲಿಕೆಗೆ ಆದ್ಯತೆ ನೀಡಿ.ಉದ್ಯಮದಲ್ಲಿ ಯಶಸ್ಸು ಸಾಧ್ಯ- ನಿವೇದಿತಾ ವಿಕಾಸ್

0

Rotary Club Shivamogga ಜೀವನದಲ್ಲಿ ಕೌಶಲ್ಯಗಳ ಕಲಿಕೆಗೆ ಆದ್ಯತೆ ನೀಡುವುದರಿಂದ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಜೆಸಿಐ ತರಬೇತುದಾರರಾದ ನಿವೇದಿತಾ ವಿಕಾಸ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಾರುಕಟ್ಟೆಯಲ್ಲಿ ಅತ್ಯಂತ ಪೈಪೋಟಿ ಇದ್ದು, ಉದ್ಯಮದಲ್ಲಿ ಯಶಸ್ವಿಯಾಗಲು ಕೌಶಲ್ಯಗಳು ಅತ್ಯಂತ ಮುಖ್ಯ. ಪರಿಣಾಮಕಾರಿಯಾಗಿ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಉದ್ಯಮಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಪ್ರತಿಯೊಬ್ಬ ವ್ಯಕ್ತಿ ಯಾವುದೇ ವೃತ್ತಿಯಲ್ಲಿ ಸೇವೆ ಸಲ್ಲಿಸುವುದಕ್ಕಿಂತ ಮುಂಚೆ ತನ್ನ ಕೌಶಲ್ಯ ತಿಳಿದುಕೊಂಡು ತನ್ನ ವೃತ್ತಿಯನ್ನು ಪ್ರಾರಂಭಿಸಬೇಕು. ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಪೂರಕವಾಗಿ ಮಾಹಿತಿಗಳನ್ನು ಅಧ್ಯಯನ ನಡೆಸಬೇಕು ಎಂದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ರೋಟರಿ ಕ್ಲಬ್ ವತಿಯಿಂದ ಯುವಜನರಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಗೂ ಉದ್ಯಮ ನಡೆಸಲು ಪೂರಕವಾಗಿ ಅನುಕೂಲವಾಗುವಂತೆ ಮಾರ್ಗದರ್ಶನಕ್ಕಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಧನಂಜಯ ರಾಂಪುರ ಮಾತನಾಡಿ, ಯಾವುದೇ ವೃತ್ತಿ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಎಸ್ ಡಬ್ಲ್ಯೂ ಒ ಟಿ ವಿಶ್ಲೇಷಣೆ ಅರ್ಥ ಮಾಡಿಕೊಂಡು ವ್ಯವಹಾರ ನಡೆಸಬೇಕು ಎಂದು ತಿಳಿಸಿದರು.

Rotary Club Shivamogga ಕಾರ್ಯಕ್ರಮದಲ್ಲಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಶ್ರೀಕಾಂತ್, ಮಹೇಶ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಪರಮೇಶ್ವರ್ ಶಿಗ್ಗಾವ್, ಚಂದ್ರಹಾಸ ಪಿ.ರಾಯ್ಕರ್, ಬಿ.ಗಂಗಪ್ಪ, ಶ್ರೀನಿವಾಸ್ ಗೌಡ, ಮಾಜಿ ಅಧ್ಯಕ್ಷ ಅರುಣ್ ದೀಕ್ಷಿತ್, ರೋಟರಿ ಸದಸ್ಯರು ಹಾಜರಿದ್ದರು.

Sahitya Akademi “ಸ್ವಾತಂತ್ರ್ಯದ ಓಟ” ಕಾದಂಬರಿಯ ನಾಟಕ ರೂಪದಲ್ಲಿ ಅಭಿನಯಿಸಲು ಕಲಾವಿದರಿಂದ ಅರ್ಜಿ ಆಹ್ವಾನ

0

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೊಳುವಾರು ಮೊಹಮ್ಮದ್ ಕುಂಞ ಅವರ ಸ್ವಾತಂತ್ರ್ಯದ ಓಟ ಕಾದಂಬರಿಯನ್ನು ನಾಟಕ ರೂಪದಲ್ಲಿ ರಂಗಾಯಣ, ಶಿವಮೊಗ್ಗ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸುವ ಯೋಜನೆ ಹಮ್ಮಿಕೊಂಡಿದ್ದು, ಈ ಯೋಜನೆಗೆ 2026 ರ ಫೆಬ್ರವರಿಯಿಂದ 2026 ರ ಜೂನ್‌ವರೆಗೆ ಐದು ತಿಂಗಳ ಅವಧಿಗೆ ರೆಪರ್ಟರಿ ಕಲಾವಿದರಲ್ಲದೇ 15 ಜನ ಆಸಕ್ತ ಹಾಗೂ ಅನುಭವಿ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜ. 28 ರವರೆಗೆ ವಿಸ್ತರಿಸಲಾಗಿದೆ.
ಕಲಾವಿದರ ವಯಸ್ಸು ಕನಿಷ್ಟ 20 ರಿಂದ ಗರಿಷ್ಟ 40 ಇರಬೇಕು. ಆಯ್ಕೆಯಾದ ಕಲಾವಿದರಿಗೆ ಮಾಹೆಯಾನ ರೂ.22 ಸಾವಿರ ಗೌರವ ಸಂಭಾವನೆ, ಊಟ, ಉಪಹಾರ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು. ಯೋಜನೆಯು 5 ತಿಂಗಳ ಅವಧಿಯಾಗಿದ್ದು ಅರ್ಜಿ ಸಲ್ಲಿಸಲು ಜ.28 ಕಡೆಯ ದಿನವಾಗಿರುತ್ತದೆ. ಅರ್ಜಿಯನ್ನು ಆಡಳಿತಾಧಿಕಾರಿಗಳು, ರಂಗಾಯಣ, ಹೆಲಿಪ್ಯಾಡ್ ಹಿಂಭಾಗ, ಅಶೋಕನಗರ, ಶಿವಮೊಗ್ಗ 577201 ಇಲ್ಲಿಗೆ ಖುದ್ದಾಗಿ, ಅಂಚೆ ಮೂಲಕ ಅಥವಾ ಇ-ಮೇಲ್ admin.rangayanashivamogga@gmail.com ಮೂಲಕ ಕಳುಹಿಸಬಹುದಾಗಿದೆ.
Sahitya Akademi ಹೆಚ್ಚಿನ ಮಾಹಿತಿಗೆ ರಂಗಾಯಣ, ಶಿವಮೊಗ್ಗ ಕಚೇರಿ, ದೂರವಾಣಿ ಸಂಖ್ಯೆ : 08182-256353, 7975229166 ನ್ನು ಸಂಪರ್ಕಿಸಬಹುದಾಗಿದೆ. ಅರ್ಜಿಯೊಂದಿಗೆ ತಮ್ಮ ಇತ್ತೀಚಿನ ಭಾವಚಿತ್ರ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ರಂಗಭೂಮಿ ಅನುಭವದ ವಿವರ, ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಬೇಕೆಂದು ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ ತಿಳಿಸಿದ್ದಾರೆ.

Purandara Dasa ನೆನೆ ಪುರಂದರ ದಾಸರ…

0

ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.

Purandara Dasa ಪುರಂದರದಾಸರು
ಮೊದಲ ಹೆಸರು
ಶ್ರೀನಿವಾಸನಾಯಕರು
ತಿರುಪತಿ ತಿಮ್ಮಪ್ಪನ
ದಯದಿಂದ
ಹುಟ್ಟಿದವರು.
ತಂದೆ ವರದಪ್ಪನಾಯಕರು
ದೊಡ್ಡ ಚಿನ್ನಬೆಳ್ಳಿ ವ್ಯಾಪಾರಸ್ಥರು
ಮಗನೂ ತಂದೆಯ ವ್ಯವಹಾರ
ಮುಂದುವರೆಸಿದನು.
ನವಕೋಟಿ ನಾರಾಯಣ ಎಂದು
ಕರೆಸಿಕೊಂಡನು.
ಸರಸ್ವತೀದೇವಿ ಸಾಧ್ವಿ
ಕೈಹಿಡಿದವಳು
ಸಂಪತ್ತು ಗಳಿಕೆಯಲ್ಲೇ
ತಲ್ಲೀನನಾದವನು
ಸಂಸಾರದ ಜಂಜಾಟ ತಲೆಗೆ
ಹಚ್ಚಿಕೊಳ್ಳದವನು.
ಜಿಪುಣಾಗ್ರೇಸ ಚಕ್ರವರ್ತಿ
ಎಂದು ಕರೆಸಿಕೊಂಡವನು.
ಪರೀಕ್ಷೆ ಮಾಡಲೆಂದೇ ವಿಠ್ಠಲನೇ
ವೇಷ ಮರೆಸಿಕೊಂಡು
ನಾಯಕನ ಬಳಿ ಬಂದನು.
ಮಗನ ಉಪನಯನಕ್ಕೆಂದು
ಹಣ ಯಾಚಿಸಿದನು.
ಪರೀಕ್ಷೆಯಲಿ ಪಾಸಾದವರು
ನಾಯಕರ ಪತ್ನಿ ಸರಸ್ವತಮ್ಮ
ನವರು
ವಿಠ್ಠಲನ ಕೃಪಾಂಕದ
ದಯೆಯಿಂದ ಪಾಸಾದರು
ನಾಯಕರು.
ಹೆಂಡತಿಯಿಂದ ಜ್ಞಾನೋದಯ
ವಾಯಿತೆಂದು
ಹಾಡಿ ಹೊಗಳಿದರು.
ಹೆಂಡತಿಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ
ಹಿಡಿಸಿದಳಯ್ಯ ಎಂದು
ಕೊಂಡಾಡಿದರು.
ಧನಕನಕಾದಿ ಸಂಪತ್ತೆಲ್ಲವನ್ನು
ನಾರಾಯಣನ ಪಾದಕ್ಕೆ
ಸಮರ್ಪಿಸಿದರು.
ಕೃಷ್ಣಾರ್ಪಣ
ಎಂದರು.
Purandara Dasa ತಾವು ಭಕ್ತಿಯೆಂಬೋ ಸಂಪತ್ತಿಗೆ
ಒಡೆಯರಾದರು.
ತಾಳ ತಂಬೂರಿ ಹಿಡಿದು
ವಿಜಯನಗರಕ್ಕೆ ಹೊರಟರು.
ವ್ಯಾಸರಾಯ ಗುರುಗಳಿಗೆ
ಅಡ್ಡಬಿದ್ದು ಶರಣೆಂದರು.
ಗುರುಗಳು ಆಶೀರ್ವದಿಸಿ
ದಾಸ ದೀಕ್ಷೆ ಬೋಧಿಸಿದರು
ಪುರಂದರವಿಠಲ ಅಂಕಿತ
ಪ್ರದಾನ ಮಾಡಿದರು.
ಶ್ರೀನಿವಾಸ ನಾಯಕರು
ತುಂಗಭದ್ರೆಯಲಿ ಮುಳುಗಿ
ಪುರಂದರದಾಸರಾಗಿ ಬಂದರು.
ಇವರು ಆಡಿದ ಮಾತೆಲ್ಲಾ
ಹಾಡಾಯಿತು.
ಕೇಳುವವರಿಗೆ ಬುದ್ಧಿಮಾತಾಯಿತು.
ಹಂಪಿಯನ್ನೇ ಕಾರ್ಯಕ್ಷೇತ್ರ
ಮಾಡಿಕೊಂಡರು.
ಯಂತ್ರೋದ್ಧಾರಕ ಪ್ರಾಣದೇವರ
ಪೂಜೆಮಾಡಿದರು
ತೀರ್ಥಕ್ಷೇತ್ರಗಳ ಯಾತ್ರೆ
ಮಾಡಿದರು.
ನಾಲ್ಕುಲಕ್ಷಕ್ಕೂ ಹೆಚ್ಚು
ಹಾಡು ಬರೆದರು.
ಸಂಗೀತಕ್ಷೇತ್ರದ ಸಾಧನೆಗೆ
ಸಂಗೀತಪಿತಾಮಹರೆಂದು
ಕರೆಸಿಕೊಂಡರು.
ಪುಷ್ಯ ಅಮಾವಾಸ್ಯೆಯಂದು
ಹರಿಪಾದ ಸೇರಿದರು.
ಇದನ್ನು ಆರಾಧನಾ ದಿನವನ್ನಾಗಿ
ಆಚರಿಸುವರು.
ಭಕ್ತಿಯಿಂದ ನಮನ
ಸಲ್ಲಿಸಿದವರಿಗೆ
ಹರಸುವರು
ಪುರಂದರದಾಸರು.

Bhadravati Assembly constituency ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ( SIR) ಭದ್ರಾವತಿ ವಿಧಾನ ಸಭಾಕ್ಷೇತ್ರದ ಪ್ರಗತಿ ಕ್ಷಿಪ್ರ ಗತಿ ಮಾಡಲು ಸೂಚನೆ

0

Bhadravati Assembly constituency ಮಾನ್ಯ ಜಿಲ್ಲಾಧಿಕಾರಿಗಳು ಶಿವಮೊಗ್ಗ ಹಾಗೂ ಉಪ ವಿಭಾಗ ಅಧಿಕಾರಿಗಳು ಶಿವಮೊಗ್ಗ ರವರು ಚುನಾವಣೆ SIR 2002 ರ ಮತದಾರರ ಪಟ್ಟಿಯೊಂದಿಗೆ 2025 ರ ಮತದಾರರ ಪಟ್ಟಿಯನ್ನು Mapping & Progeny ಕಾರ್ಯ ಕುರಿತು 112-ಭದ್ರಾವತಿ ವಿಧಾನಸಭಾ ಕ್ಷೇತ್ರದ ಪ್ರಗತಿ ಕಡಿಮೆ ಇರುವ ಎಲ್ಲಾ BLO ರವರುಗಳೊಂದಿಗೆ ಸಭೆ ನಡೆಸಿ, ಮುಂದಿನ ಒಂದು ವಾರದೊಳಗಾಗಿ ಹೆಚ್ಚಿನ ಪ್ರಗತಿ ಸಾಧಿಸಲು ಸೂಚಿಸಿರುತ್ತಾರೆ. ಒಂದು ವಾರದೊಳಗೆ ಪ್ರಗತಿ ಸಾಧಿಸದಿದ್ದಲ್ಲಿ ಸಂಬಂಧಪಟ್ಟ BLO ರವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ.