Sunday, February 22, 2026
Sunday, February 22, 2026
Home Blog Page 221

Scout Scarf Day ವಿಶ್ವ ಸ್ಕೌಟ್ ಸ್ಕಾರ್ಫ್ ಡೇ, ವಿಶ್ವ ಸೂರ್ಯೋದಯ ದಿನವಿದ್ದಂತೆ- ಶಕುಂತಲಾ ಚಂದ್ರಶೇಖರ್

0

Scout Scarf Day ಮಾನವೀಯ ಮೌಲ್ಯಗಳನ್ನು ಹೊತ್ತು, ಅಪಘಾತ ನೈಸರ್ಗಿಕ ವಿಕೋಪ, ಯುದ್ಧ ಮುಂತಾದ ಅವಘಡಗಳು ಸಂಭವಿಸಿದಾಗ ಅತ್ಯಂತ ಪ್ರಾಮಾಣಿಕ ಮತ್ತು ಉತ್ಸಾಹಿ ಸೇವಾ ಕಾರ್ಯ ಮಾಡುವ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಇಂದಿಗೂ ಸಹ ಪ್ರಸ್ತುತ ಹಾಗೂ ಮಾದರಿಯಾಗಿವೆ ಎಂದು ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಅವರು ನುಡಿದರು. ಅವರು ಶಿವಮೊಗ್ಗ ನಗರದ ಬಿ. ಹೆಚ್. ರಸ್ತೆಯಲ್ಲಿ ಇರುವ ಸ್ಕೌಟ್ಸ್ ಭಾವನದಲ್ಲಿ ವಿಶ್ವ ಸ್ಕೌಟ್ಸ್ ಶಿರೋ ವಸ್ತ್ರ ದಿನ ಮತ್ತು ಸ್ಕೌಟ್ಸ್ ಸನ್ ರೈಸ್ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿವರ್ಷ ಆಗಸ್ಟ್ ಒಂದರಂದು ಸ್ಕೌಟ್ ಸ್ಕಾರ್ಫ್ ಡೇ ಮತ್ತು ಸ್ಕೌಟಿಂಗ್ ಸನ್ರೈಸ್ ಡೇ ಆಚರಿಸಲಾಗುತ್ತದೆ. ಒಮ್ಮೆ ಸ್ಕೌಟ್ ಚಳುವಳಿಯಲ್ಲಿ ತೊಡಗಿಕೊಂಡರೆ ಅವರು ಯಾವಾಗಲೂ ಸ್ಕೌಟ್ ಆಗಿರುವವರು ಎಂದು ನುಡಿದರು. 1907ರಲ್ಲಿ ಬ್ರೌನ್ಸಿ ದೀಪದಲ್ಲಿ ನಡೆದ ಮೊದಲ ಸ್ಕೌಟ್ ಕ್ಯಾಂಪಿನಲ್ಲಿ ಕೇವಲ 20 ಮಕ್ಕಳೊಂದಿಗೆ ಪ್ರಾರಂಭವಾದ ಈ ಚಳುವಳಿ ಇಂದು ನೂರಾ ಅರವತ್ತಕ್ಕಿಂತ ಹೆಚ್ಚು ದೇಶದಲ್ಲಿ ಸೇವೆಯನ್ನು ಸಲ್ಲಿಸುತ್ತಿದೆ ಎಂದು ನುಡಿದರು ಇದೇ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳಾದ ರಾಜೇಶ್ ಅವಲಕ್ಕಿ ಅವರು ಮಾತನಾಡುತ್ತಾ ಸಹಜವಾಗಿ ಸ್ಕಾರ್ಫ್ ಕೇವಲ ಒಂದು ಸಂಕೇತವಾಗಿದೆ ಆದರೆ ಸ್ಕೌಟ್ಸ್ ಭರವಸೆ ಮತ್ತು ಜಗತ್ತನ್ನು ನಮಗಿಂತ ಸ್ವಲ್ಪ ಉತ್ತಮವಾದ ಸ್ಥಳವಾಗಿ ಬಿಡುವ ನಮ್ಮ ಧ್ಯೇಯಕ್ಕೆ ಬಲವಾದ ಸಂಕೇತವಾಗಿದೆ ಎಂದು ನುಡಿದರು. Scout Scarf Day ಜಿಲ್ಲಾ ಕಾರ್ಯದರ್ಶಿಗಳಾದ ಚಂದ್ರಶೇಖರಯ್ಯನವರು ಸ್ಕೌಟ್ಸ್ ಅಂಡ್ ಗೈಡ್ಸ್ ನಾ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಹಾಗೆ ವಿಶ್ವದಾದ್ಯಂತ ಇಂದು ನಡೆಯುವ ಈ ಸ್ಕಾರ್ಫ್ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ಸ್ಕೌಟಿಗೆ ಹೆಚ್ಚು ಯುವಜನರನ್ನು ಪರಿಚಯಿಸಲು ಈ ದಿನವೂ ಉತ್ತಮ ಅವಕಾಶವಾಗಿದೆ. ಸ್ಕೌಟ್ಸ್ ಗಳ ಪೋಷಕರು ಸಹೋದರರು ಮತ್ತು ಸಹೋದರಿಯರನ್ನು ಚಟುವಟಿಕೆಗಳಲ್ಲಿ ಭಾಗವಹಿಸಲು ಯುವಜನರನ್ನು ಸ್ಕೌಟಿಂಗಿಗೆ ಸೇರಲು ಆಹ್ವಾನಿಸೋಣ ಹಾಗೆ ಸೂರ್ಯೋದಯ ದಿನವನ್ನು ಆಚರಿಸುವ ಮೂಲಕ ಸ್ವಾಸ್ಥ ಸಮಾಜ ಕಟ್ಟೋಣ ಎಂದು ನುಡಿದರು. ಕಾರ್ಯಕ್ರಮದಲ್ಲಿ ಶಾಲಾ ಸ್ಕೌಟ್ – ಗೈಡ್ ಮಕ್ಕಳು, ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಚುಡಾಮಣಿ ಈ ಪವಾರ್. ಜಿ ವಿಜಯಕುಮಾರ್. ಮಲ್ಲಿಕಾರ್ಜುನ್ ಖಾನೂರ್. ರುದ್ರಪ್ಪ ಚೀಲೂರ್, ಚಂದ್ರಶೇಖರ, ದೇವಣ್ಣ, ಸ್ಕೌಟ್ ಶಿಕ್ಷಕ ಶ್ರೀ ರಾಜಕುಮಾರ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

CM Siddharamaiah ಜಾತಿ ವರ್ಗರಹಿತ ಸಮಾಜದ ನಿರ್ಮಾಣ ನಮ್ಮ ಗುರಿ- ಸಿದ್ಧರಾಮಯ್ಯ

0

CM Siddharamaiah ದೆಹಲಿಯಲ್ಲಿ ನಡೆದ ಎಐಸಿಸಿ ಏರ್ಪಡಿಸಿದ್ದ ರಾಷ್ಟ್ರೀಯ ಕಾನೂನು ಸಮಾವೇಶದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿದರು.

ಎಐಸಿಸಿಯ ಕಾನೂನು ವಿಭಾಗವು ಆಯೋಜಿಸಿರುವ ಈ ಅದ್ಭುತ ಮತ್ತು ಪ್ರಸ್ತುತವೆನಿಸಿರುವ ಕಾರ್ಯಕ್ರಮದಲ್ಲಿ, ಸಮಾನತೆ ಮತ್ತು ಭ್ರಾತೃತ್ವದ ವಿಚಾರಗಳ ಆಧಾರದ ಮೇಲೆ ಸಾಮಾಜಿಕ ನ್ಯಾಯದ ಸಾಂವಿಧಾನಿಕ ಆದರ್ಶಗಳನ್ನು ಅನ್ವೇಷಿಸಲು ನಾವು ಪ್ರಾರಂಭಿಸಿರುವ ಹೊತ್ತಿನಲ್ಲಿಯೇ, ಭಾರತವನ್ನು ಸಾಮಾಜಿಕ ನ್ಯಾಯದ ಪಥದಲ್ಲಿ ನಡೆಸಿದ ನಮ್ಮ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಈ ರಾಷ್ಟ್ರದ ಅತ್ಯುತ್ತಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಉನ್ನತ ಆದರ್ಶಗಳ ಪರಂಪರೆಯನ್ನು ಹಿಂತಿರುಗಿ ನೋಡಬೇಕಿದೆ.

ನ್ಯಾಯದ ಕಲ್ಪನೆಯನ್ನು ಸಮಾನತೆಯ ತಳಹದಿಯ ಮೇಲೆ ನಿರ್ಮಿಸಲಾಗಿದೆ. ಭಾರತದ ಸಂವಿಧಾನವು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಭ್ರಾತೃತ್ವದ ಸಾಕಾರ ರೂಪವಾಗಿದೆ. ನಮ್ಮ ಪೂರ್ವಜರ ಕನಸಾದ ಜಾತಿರಹಿತ, ವರ್ಗರಹಿತ, ಸಮಾಜವಾದಿ ಸಮಾಜವನ್ನು ಸಾಧಿಸುವ ಗುರಿಯನ್ನು ಇದು ಹೊಂದಿದೆ. ಮೂಲಭೂತ ಹಕ್ಕುಗಳ ರಕ್ಷಕ ದೇವತೆ ಎಂದು ಕರೆಯಲ್ಪಡುವ ಭಾರತೀಯ ಸಂವಿಧಾನವು ಭಾರತೀಯ ಸಮಾಜದಲ್ಲಿ ಸಂಪನ್ಮೂಲಗಳ ವಿತರಣೆಯಲ್ಲಿನ ಐತಿಹಾಸಿಕ ಅಸಮಾನತೆಗಳು ಮತ್ತು ಸಮಾನ ಅವಕಾಶಗಳ ನಿರಾಕರಣೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ನ್ಯಾಯದ ಅತ್ಯಂತ ವಿಶಿಷ್ಟ ಪರಿಕಲ್ಪನೆಯನ್ನು ಚಿತ್ರಿಸಿದೆ.

CM Siddharamaiah ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ಜನಸಂಖ್ಯೆಯ ಒಂದು ದೊಡ್ಡ ಭಾಗವು ಮೂಲಭೂತ ಹಕ್ಕುಗಳಿಂದ ವಂಚಿತವಾಯಿತಲ್ಲದೆ ದಬ್ಬಾಳಿಕೆ, ಸಾಮಾಜಿಕ ಕಳಂಕ ಮತ್ತು ಜಾತಿ/ವರ್ಗ ಆಧಾರಿತ ತಾರತಮ್ಯಕ್ಕೆ ಒಳಗಾಯಿತು. ಭಾರತವು ಸ್ವಾತಂತ್ರ್ಯ ಪಡೆದ ಮಧ್ಯರಾತ್ರಿಯ ಸಮಯದಲ್ಲಿ, ನಾವು ಬ್ರಿಟಿಷ್ ಸಂಸತ್ತಿನ ಕಾನೂನಿನ ಅಡಿಯಲ್ಲಿದ್ದ ಆಡಳಿತವಿತ್ತು. ಯಾವುದೇ ಮೂಲಭೂತ ಹಕ್ಕುಗಳು ಅಥವಾ ಸಮಾನತೆ ಮತ್ತು ಭ್ರಾತೃತ್ವದ ಪರಿಕಲ್ಪನೆಯನ್ನೂ ಅದು ಹೊಂದಿರಲಿಲ್ಲ.

ಗಣ್ಯರಿಗೆ ಮಾತ್ರ ಸೀಮಿತವಾಗಿದ್ದ ನ್ಯಾಯ ಹಾಗೂ ಬಡತನವೇ ಹೆಚ್ಚಿದ್ದ ಸಂದರ್ಭದಲ್ಲಿ ಸಂವಿಧಾನದ ಸ್ಥಾಪಕರು ಈ ಐತಿಹಾಸಿಕ ಅನ್ಯಾಯವನ್ನು ರದ್ದುಗೊಳಿಸುವ ಗುರಿಯನ್ನು ಹೊಂದಿದ್ದರು. ಸಾಮಾಜಿಕ ನ್ಯಾಯ ಮತ್ತು ಭ್ರಾತೃತ್ವದ ಮೇಲೆ ಸ್ಥಾಪಿಸಲಾದ ಅಂತರ್ಗತ, ಬಹುತ್ವವಾದಿ ಸಮಾಜವನ್ನು ಪರಿಕಲ್ಪನೆಯನ್ನು ಅವರು ರೂಪಿಸಿದರು ಎಂದು ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ತಿಳಿಸಿದರು

H.C.Yogesh ಶಿವಮೊಗ್ಗ ಆಟೋ ಕಾಂಪ್ಲೆಕ್ಸ್ ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಾರ್ಯರೂಪಕ್ಕೆ ತನ್ನಿ-ಹೆಚ್.ಸಿ.ಯೋಗೇಶ್

0

H.C.Yogesh ಶಿವಮೊಗ್ಗ ನಗರದ ಆಟೋ ಕಾಂಪ್ಲೆಕ್ಸ್ ಮಾಲೀಕರ ಸಂಘದಿಂದ ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜಿಲ್ಲಾ ಕಾಂಗ್ರೆಸ್ ಮುಖಂಡರು ಹಾಗೂ ನಿಕಟಪೂರ್ವ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ. ಯೋಗೇಶ್ ರವರ ನೇತೃತ್ವದಲ್ಲಿ ನೀರು ಸರಬರಾಜು ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಜೀವನ್ ಕುಮಾರ್‌ರವರಿಗೆ ಮನವಿ ಸಲ್ಲಿಸಲಾಯಿತು.

ಇದೇ ಮನವಿಯನ್ನು ಆ. 4ರ ಸೋಮವಾರ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಕಾರ್ಮಿಕ ಇಲಾಖೆಯ ಸಚಿವ ಸಂತೋಷ್ ಲಾಡ್ ರವರಿಗೂ ನೀಡಲಾಗುವುದು ಎಂದು ಸಂಘ ತಿಳಿಸಿದೆ. ಮಾಜಿ ಪಾಲಿಕೆ ಸದಸ್ಯ ಪಾಲಾಕ್ಷಿ, ನಗರ ಕಾಂಗ್ರೆಸ್ ನಾರ್ತ್ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ಎಸ್. ಚಿನ್ನಪ್ಪ, ವೆಂಕಟೇಶ್ ವಿ., ಮಾಲತೇಶ್, ರಂಗನಾಥ್ ಈ., ಪಿ. ವೆಂಕಟೇಶ್, ಅಂತೋಣಿ, ಜನ್ ಮ್ಯಾಥ್ಯೂ, ಶಿವಮೂರ್ತಿ, ಹಿದಾಯತ್, ಪ್ರಕಾಶ್ ಆರ್., ವೇಲು, ರಾಘವೇಂದ್ರ, ಕಿರಣ್ ಪಿ., ಇಕ್ಬಾಲ್, ಭಾಸ್ಕರ್ ಇನ್ನಿತರರಿದ್ದರು.

Karnataka State Bioenergy Development Board ರಾಜ್ಯದ 234 ತಾಂತ್ರಿಕ ವಿವಿಗಳ ಸಾಲಿನಲ್ಲಿ ಶಿವಮೊಗ್ಗ ಜೆ ಎನ್ ಸಿ ಇ ಐದನೇ ಸ್ಥಾನದಲ್ಲಿರುವುದು ಹೆಮ್ಮೆ- ಎಸ್.ಈ.ಸುಧೀಂದ್ರ

0

Karnataka State Bioenergy Development Board ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾನ್ಯ ಅಧ್ಯಕ್ಷರಾದ ಶ್ರೀ ಎಸ್ ಈ ಸುಧೀಂದ್ರ ಅವರು ದಿನಾಂಕ 2.08.2025 ರಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಭಾರತೀಯ ವಿಜ್ಞಾನ ಮಂದಿರ, ಬೆಂಗಳೂರು ಹಾಗೂ ಜವಹರಲಾಲ್ ನೆಹರು ಕಾಲೇಜ್ ಆಫ್ ಇಂಜಿನಿಯರಿಂಗ್, ಶಿವಮೊಗ್ಗ ಅವರ ಸಹಯೋಗದಲ್ಲಿ ಆಯೋಜಿಸಲಾಗಿರುವ 48 ನೇ ಆಯೋಜಿಸಲಾಗಿರುವ 48 ನೇ ಸ್ಟೂಡೆಂಟ್ ಪ್ರಾಜೆಕ್ಟ್ ಪ್ರೋಗ್ರಾಮ್(SPP) ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಈ ಸಮಾರೋಪ ಕಾರ್ಯಕ್ರಮಕ್ಕೆ
ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿರುವುದು ಹಾಗೂ ಇದೇ ಸಂದರ್ಭದಲ್ಲಿ ಮಂಡಳಿಯ ಬಿ ಆರ್ ಐ ಡಿ ಸಿ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯನ್ನು ಜೈವಿಕ ಇಂಧನ ಸಸಿಗಳನ್ನು ನೀಡುವುದರ ಮೂಲಕ ಹಾಗೂ ವಾಹನಗಳಿಗೆ ಬಯೋ ಡೀಸೆಲ್ ಹಾಕುವುದರ ಮೂಲಕ ಆಚರಣೆ ಮಾಡಿದ್ದಕ್ಕೂ ಧನ್ಯವಾದಗಳನ್ನು ತಿಳಿಸಿದರು.

ಜವಹರಲಾಲ್ ನೆಹರು ಕಾಲೇಜ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ಬಗ್ಗೆ ಮಾತನಾಡುತ್ತಾ, ಈ ತಾಂತ್ರಿಕ ಸಂಸ್ಥೆ ಸ್ವಾತಂತ್ರ್ಯ ಪೂರ್ವ1946 ರಲ್ಲಿ ಪ್ರಾರಂಭವಾಗಿದ್ದು,44 ವರ್ಷಗಳ ಇತಿಹಾಸವನ್ನು ಹೊಂದಿದೆ. ಬೆಳಗಾವಿ ತಾಂತ್ರಿಕ ವಿಶ್ವವಿದ್ಯಾಲಯದಡಿ ಬರುವ 233 ಕಾಲೇಜುಗಳ ಪೈಕಿ 5ನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ.

ಇದೇ ಸಂದರ್ಭದಲ್ಲಿ ಜೈವಿಕ ಇಂಧನ ಪಿತಾಮಹ ಸರ್ ರುಢಾಲ್ಪ್ ಡೀಸೆಲ್ ಅವರ ನೆನಪಿನಲ್ಲಿ ಪ್ರತಿವರ್ಷ ಆಗಸ್ಟ್ ತಿಂಗಳಲ್ಲಿ ಆಚರಿಸಲಾಗುತ್ತಿರುವ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಗೆ, ಜೆಎನ್ಸಿಯ ಬಿಆರ್‌ಐಡಿಸಿ ಕೇಂದ್ರದಲ್ಲಿ ಜೈವಿಕ ಇಂಧನ ಸಸಿಗಳನ್ನು ನೆಡುವುದು, ವಾಹನಗಳಿಗೆ ಜೈವಿಕ ಇಂಧನ ಹಾಕುವುದರ ಮೂಲಕ ಚಾಲನೆ ನೀಡಿರುವುದು ನನಗೆ ಸಂತೋಷದ ಹಾಗೂ ಹೆಮ್ಮೆಯ ವಿಚಾರವಾಗಿದೆ.

01.8 .2025 , ರಂದು ರಾಜ್ಯದ ವಿವಿಧ ಇಂಜಿನಿಯರಿಂಗ್ ಸಂಸ್ಥೆಗಳ ಮತ್ತು ಮ್ಯಾನೇಜ್ಮೆಂಟ್ ಸಂಸ್ಥೆಗಳ ವಿದ್ಯಾರ್ಥಿಗಳು ಮಂಡಿಸಿರುವ ಸ್ಟೂಡೆಂಟ್ ಪ್ರಾಜೆಕ್ಟ್ ಗಳು, ಎಕ್ಸಿಬಿಷನ್ ಹಾಗೂ ಪೋಸ್ಟರ್ ಪ್ರೆಸೆಂಟೇಶನ್ ಗಳ ಮೌಲ್ಯಮಾಪನ ಕಾರ್ಯ ಮುಗಿದಿದ್ದು, ಇಂದು ಈ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಹಾಗೂ ಪ್ರಶಸ್ತಿ ಪತ್ರಗಳ ವಿತರಣೆ ಅಂತಿಮ ಘಟ್ಟದ ಕಾರ್ಯಕ್ರಮ ಜರಗುತ್ತಿದ್ದು, ಈ ರಾಜ್ಯ ಮಟ್ಟದ ವಿಜ್ಞಾನ ಮತ್ತು ತಾಂತ್ರಿಕತೆಯ ಪ್ರದರ್ಶನವು ಮಹತ್ತರ ಮತ್ತು ಇಂದಿನ ಅವಶ್ಯಕತೆಗಳನ್ನು ಪೂರೈಸುವಲ್ಲಿ ಯಶಸ್ವಿಯಾಗಲಿದೆ ಎಂದು ನಂಬಿದ್ದೇನೆ. ಈ ಕಾರ್ಯಕ್ರಮಕ್ಕೆ ಅಸ್ಸಾಂ, ಕೇರಳ ರಾಜ್ಯಗಳ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಗಳಿಂದ ವಿಜಯ್ ಕೃಷ್ಣ ಮಲ್ಲೋತರ, ಇಬ್ರಾಹಿ ಇಬ್ರಾಹಿಂ ಬತ್ತಿಸ್ ಈ ಸಂದರ್ಭದಲ್ಲಿ ಸ್ವಾಗತಿಸಿ ಅಭಿನಂದಿಸಿದರು.

Karnataka State Bioenergy Development Board ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ವಿಜ್ಞಾನ ಮತ್ತು ತಾಂತ್ರಿಕತೆಯ ಅಭಿವೃದ್ಧಿ ರಾಜ್ಯದ ಎಲ್ಲಾ ರಂಗಗಳಲ್ಲಿನ ಮುಂದುವರಿಕೆಗೆ ಅವರ ದೂರ ದೃಷ್ಟಿ ಕಾರಣ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯವರೇ ಆದ ರಾಜ್ಯದ ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರ ಆಕಾಂಕ್ಷೆ ಪ್ರಾಥಮಿಕ ಶಿಕ್ಷಣದಿಂದಲೇ ಮಕ್ಕಳಲ್ಲಿ ವಿಜ್ಞಾನ ಮತ್ತು ತಾಂತ್ರಿಕತೆಯ ಕುರಿತು ಆಸಕ್ತಿ ಬೆಳೆಸುವುದಾಗಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು 2010 – 11ರಿಂದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯೊಂದಿಗೆ ಕೈಜೋಡಿಸಿದ್ದು , ಒಡಂಬಡಿಕೆ ಮೂಲಕ ಕೆ ಎಸ್ ಸಿ ಎಸ್ ಟಿ ಬಯೋಫಿಯಲ್ ಸೆಲ್ ನಿರಂತರವಾಗಿ ಮಂಡಳಿಯ ಸಹಯೋಗದಲ್ಲಿರುವುದು ಹೆಮ್ಮೆಯ ಮತ್ತು ವಿಜ್ಞಾನ ಮತ್ತು ತಾಂತ್ರಿಕತೆಗೆ ಆದ್ಯತೆ ನೀಡಿರುವುದು ಪ್ರಮುಖ ಅಂಶವಾಗಿದೆ. ಮಂಡಳಿ ಇದುವರೆಗೆ ಕೆ ಎಸ್ ಸಿ ಎಸ್ ಟಿ ಗೆ 1.50 ಕೋಟಿಗೂ ಹೆಚ್ಚಿನ ಅನುದಾನವನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ವಿಜ್ಞಾನ ಮತ್ತು ತಾಂತ್ರಿಕ ಪ್ರಾಜೆಕ್ಟ್ ಗಳ ಅನುಷ್ಠಾನಕ್ಕಾಗಿ ಒದಗಿಸಲಿದೆ ಎಂದು ಈ ಸಂದರ್ಭದಲ್ಲಿ ಹೇಳಬಯಸಿದ್ದೇನೆ. ಎಸ್ ಸಿ ಎಸ್ ಟಿ ಹಾಗೂ ಕೆ ಎಸ್ ಬಿ ಡಿ ಬಿ ಒಂದೇ ಫ್ಯಾಮಿಲಿಯಂತೆ ಜೈವಿಕ ಇಂಧನ ಕಾರ್ಯಕ್ಷೇತ್ರಗಳ ಅನುಷ್ಠಾನ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತಾ ಕ್ರಿಯಾಶೀಲವಾಗಿ ಮುಂದುವರಿಯುತ್ತಿರುವುದನ್ನು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ನಾನು ಹೇಳಲೇಬೇಕಾದ ಹಾಗೂ ಅಭಿನಂದಿಸಬೇಕಾದ ವಿಷಯವಾಗಿದೆ.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ತಮಗೆಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಕ್ರಮಗಳ ಕುರಿತು ಅರಿವು, ಜಾಗೃತಿ ಮೂಡಿಸಲು ಕಾರ್ಯಾಗಾರಗಳು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಮ್ಮೇಳನಗಳು, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಿ ಆರ್ ಐ ಡಿ ಸಿ ಕೇಂದ್ರಗಳು, ನಾಲ್ಕು ಕಂದಾಯ ವಿಭಾಗಗಳಲ್ಲಿ ಜೈವಿಕ ಇಂಧನ ಉದ್ಯಾನಗಳು, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆಯಲ್ಲಿ ಅಂತರಾಷ್ಟ್ರೀಯ ಮಟ್ಟದ ಜೈವಿಕ ಇಂಧನ ಸಂಶೋಧನೆ ಮತ್ತು ಗುಣಮಟ್ಟ ಖಾತ್ರಿ ಪ್ರಯೋಗ ಶಾಲೆ, 12 ಜಿಲ್ಲೆಗಳಲ್ಲಿ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಸಹಯೋಗ ಮತ್ತು ಅತಿ ಮುಖ್ಯವಾಗಿ ವಿಜ್ಞಾನ ಮತ್ತು ತಾಂತ್ರಿಕತೆಯ ವಿಭಾಗದಲ್ಲಿ ಕೆ ಎಸ್ ಸಿ ಎಸ್ ಟಿ ಯೊಂದಿಗೆ ಒಡಂಬಡಿಕೆ ತಮಗೆಲ್ಲರಿಗೂ ತಿಳಿದ ವಿಷಯವಾಗಿದೆ. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು 2010 – 11ರಿಂದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಂಶೋಧನೆ ಕೈಗೊಂಡು, ಸಂಶೋಧನೆಗಳ ಪ್ರಬಂಧಗಳನ್ನು ಮಂಡಿಸಲು, ಎಕ್ಸಿಬಿಷನ್ ಹಾಗೂ ಪೋಸ್ಟರ್ ಗಳನ್ನು ಪ್ರದರ್ಶಿಸಲು ಸಹಕಾರ ನೀಡುತ್ತಾ ಬಂದಿದೆ.

ಇದುವರೆಗೂ ಸುಮಾರು 500ಕ್ಕೂ ಹೆಚ್ಚಿನ ವಿಜ್ಞಾನ ಮತ್ತು ತಾಂತ್ರಿಕತೆಯ ಪ್ರಬಂಧ ಗಳು ಮಂಡನೆಯಾಗಿದ್ದು, ನೂರಕ್ಕೂ ಹೆಚ್ಚಿನ ಎಕ್ಸಿಬಿಷನ್ ಮತ್ತು ಪೋಸ್ಟರ್ ಪ್ರೆಸೆಂಟೇಶನ್ಗಳಾಗಿರಬಹುದು ವಿದ್ಯಾರ್ಥಿಗಳು ಜೈವಿಕ ಇಂಧನ ಕ್ಷೇತ್ರದಲ್ಲಿ ತೋರಿಸಿರುವ ಅಪಾರ ಆಸಕ್ತಿ ಮತ್ತು ಜಾಗತಿಕ ಮಟ್ಟದಲ್ಲಿ ಇಂಧನ ಕ್ಷೇತ್ರದಲ್ಲಿ ಜೈವಿಕ ಇಂಧನಗಳು ತನ್ನದೇ ಆದ ಪ್ರಭಾವ ಬೀರಲು ಕೊಡುಗೆ ನೀಡಿವೆ ಎಂದರೆ ತಪ್ಪಾಗಲಾರದು.

ಜವಾಹರ್ ಲಾಲ್ ನೆಹರು ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಶಿವಮೊಗ್ಗ ಜಿಲ್ಲೆಯ ಜೈವಿಕ ಇಂಧನ ಮಾಹಿತಿ ಸಂಶೋಧನೆ ಮತ್ತು ಪ್ರಾತ್ಯಕ್ಷಿಕೆ ಕೇಂದ್ರವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ಕಂದಾಯ ವಿಭಾಗದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಶಿವಮೊಗ್ಗದ ಇರುವಕ್ಕಿಯಲ್ಲಿ 50 ಎಕರೆ ಪ್ರದೇಶದಲ್ಲಿ ಜೈವಿಕ ಇಂಧನ ಉದ್ಯಾನವನ ಸ್ಥಾಪಿಸಲಾಗಿದೆ. ಶಿವಮೊಗ್ಗದಲ್ಲಿ ಐ ಡಿ ಸಿ ಕೇಂದ್ರ ಇನ್ನೊಂದು ಜೈವಿಕ ಇಂಧನ ಉದ್ಯಾನ ಗಳು ಕಾರ್ಯನಿರ್ವಹಿಸುತ್ತಿದ್ದು ಜೈವಿಕ ಇಂಧನ ಕ್ಷೇತ್ರದ ಸಮಗ್ರ ಪರಿಚಯ ಮಾಡಿಕೊಡುವಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲು ಸಂತೋಷಪಡುತ್ತೇನೆ.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿ ಕಳೆದ ಒಂದು ಸಾಲಿನಲ್ಲಿ ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣ ಹಾಗೂ ವಾಣಿಜ್ಯೀಕರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ಮುಂದಿನ ವರ್ಷದಲ್ಲಿ ಈ ಎಲ್ಲಾ ಕಾರ್ಯ ಯೋಜನೆಗಳು ಅನುಷ್ಠಾನಗೊಂಡು ಕರ್ನಾಟಕ ರಾಜ್ಯವು ಇಡೀ ರಾಷ್ಟ್ರದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಜೈವಿಕ ಇಂಧನ ಕ್ಷೇತ್ರದ ಮಾದರಿಯಾಗುವ ನಿಟ್ಟಿನಲ್ಲಿ ಕಾರ್ಯನಿರತನಾಗಿದ್ದು ಎಲ್ಲಾ ಕೃಷಿ ವಿಶ್ವವಿದ್ಯಾಲಯಗಳ, ತಾಂತ್ರಿಕ ಸಂಸ್ಥೆಗಳ, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ, ವಿಜ್ಞಾನ ಕೇಂದ್ರಗಳ ಸಹಕಾರವು ಈ ಜೈವಿಕ ಇಂಧನ ಮಿಷನ್ ನಲ್ಲಿ ಕೈಜೋಡಿಸಬೇಕೆಂದು ತಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇನೆ.

ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಹಲವಾರು ನೂತನ ಕಾರ್ಯಯೋಜನೆಗಳ ಮೂಲಕ ಜೈವಿಕ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ಮೂಲಸೌಕರ್ಯಗಳ ಸೃಜನೆ, ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಸಹಯೋಗ, ವಿಷಯ ಪರಿಣಿತರು, ತಾಂತ್ರಿಕ ತಜ್ಞರು, ಸಲಹೆಗಾರರು, ವಿವಿಧ ವಿಶ್ವವಿದ್ಯಾಲಯಗಳು, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂರ್ಕಿಣಗಳು, ದೇಶ, ವಿದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸರ್ಕಾರಗಳೊಂದಿಗೆ ನಡೆಸಿರುವ  ಚರ್ಚೆಗಳ ಕುರಿತು ವಿವರಣೆ ನೀಡಿದರು. ಪ್ರಸ್ತಾಪಿತ ನೂತನ ಜೈವಿಕ ಇಂಧನ ನೀತಿಯ ಮುಖ್ಯ ಉದ್ದೇಶಗಳು, ಗುರಿಗಳು ಹಾಗೂ ಮುಂದಿನ 05 ವರ್ಷಗಳಲ್ಲಿ ಜೈವಿಕ ಇಂಧನ ಕ್ಷೇತ್ರದ ಬೆಳವಣಿಗೆ ಕುರಿತು ಪರಿಚಯಿಸಿ,  ಉದ್ದೇಶಿತ ಜೈವಿಕ ಇಂಧನ ನೀತಿಯು ಪ್ರಮುಖವಾಗಿ ಕೈಗಾರಿಕರಣಕ್ಕೆ ಒತ್ತು ನೀಡುವುದು ಹಾಗೂ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ವಿವಿಧ ಜೈವಿಕ ಇಂಧನ ಉತ್ಪಾದನಾ ಘಟಕಗಳ ಆರಂಭಕ್ಕೆ ಅವಕಾಶಗಳಿರುವುದನ್ನು ಇರುವುದನ್ನು ಪ್ರತಿಪಾಧಿಸಿದರು. ಪ್ರಸ್ತುತ ಕೇಂದ್ರ ಸರ್ಕಾರದಿಂದ ಪ್ರಾಯೋಜಿತಗೊಂಡಿರುವ SATAT, ಗೋಬರ್ದನ್‌ ಯೋಜನೆಗಳಲ್ಲಿ ಉತ್ಪಾದನೆಯಾಗುವ ಜೈವಿಕ ಇಂಧನ ಉತ್ಪನ್ನಗಳ ಕೊಂಡುಕೊಳ್ಳುವ ಒಡಂಬಡಿಕೆ ಸರ್ಕಾರ ಬದ್ದವಾಗಿದೆ.
ಉದ್ದೇಶಿತ ನೂತನ ಜೈವಿಕ ಇಂಧನ ನೀತಿಯ ಕುರಿತು ಪ್ರಸ್ತಾಪಿಸಿ ರಾಜ್ಯದಲ್ಲಿ ಮುಂದಿನ 05 ವರ್ಷಗಳಲ್ಲಿ 01 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆ ನಿರೀಕ್ಷಿಸಲಾಗಿದ್ದು, 03 ಲಕ್ಷಕ್ಕೂ ಹೆಚ್ಚಿನ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಸೃಜನೆ, ರೈತರ ಕುಟುಂಬಗಳ ಆದಾಯದ ಹೆಚ್ಚಳ, ಯುವ ಉದ್ದಿಮೆದಾರರಿಗೆ ಪ್ರೋತ್ಸಾಹ ದೊರೆಯಲಿದ್ದು, ಮುಂದಿನ ಐದು ವರ್ಷಗಳು ಕರ್ನಾಟಕ ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಲಿದ್ದು, ನೂತನ ಜೈವಿಕ ಇಂಧನ ನೀತಿಯಲ್ಲಿ ಪ್ರಸ್ತಾಪಿಸಿದ ಪ್ರಸ್ತಾಪಿತ ಉದ್ದೇಶಗಳು ಭವಿಷ್ಯ ಭಾರತದ ನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಲಿವೆ. ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಕೊಡುಗೆಯು ರಾಷ್ಟ್ರವನ್ನು ವಿಶ್ವದಲ್ಲಿ ಮೂರನೇ ಆರ್ಥಿಕ ಸ್ಥಾನವನ್ನು ತಲುಪಲು ತನ್ನದೇ ಆದ ಕೊಡುಗೆಯನ್ನು ನೀಡಲಿದೆ ಎಂದು ಆಶಿಸಿದರು.

ಇಂದಿನ ಈ ಸಮಾರೋಪ ಸಮಾರಂಭದಲ್ಲಿ ಎಸ್.ಎನ್. ನಾಗರಾಜ, ಪ್ರೊ. ಅಶೋಕ್ ಎಂ ರಾಯಚೂರ್, ಕಾರ್ಯದರ್ಶಿಗಳು, ಕೆ ಎಸ್ ಸಿ ಎಸ್ ಟಿ, ಡಾ. ವೈ ವಿಜಯಕುಮಾರ್, ಪ್ರಿನ್ಸಿಪಾಲ್ ಜೆಎನ್ಸ್ ಸಿಇ, ಕೆ.ಎಸ್ .ಬಿ.ಡಿ.ಯ ಯೋಜನಾ ಸಲಹೆಗಾರರಾದ ಡಾ.ದಯಾನಂದ ಜಿ.ಎನ್ . ಕೆ ಎಸ್ ಸಿ ಎಸ್ ಟಿ ಸೀನಿಯರ್ ಪ್ರಾಜೆಕ್ಟ್ ಇಂಜಿನಿಯರ್ ಡಾ. ಕೆ ಎನ್ ವೆಂಕಟೇಶ್, ಜೈರಾಮ್, ಡಾ. ಚೇತನ್ ಎಸ್ ಜಿ, ಡಾ. ರವಿ ಕುಮಾರ್, ಕೋರ್ಡಿನೇಟರ್ ಬಿ ಆರ್ ಐ ಡಿ ಸಿ, ಜೆ ಎಂ ಸಿ ಇ ಬೋಧಕ ಹಾಗೂ ಎಲ್ಲಾ ಸಿಬ್ಬಂದಿಗಳು, ರಾಜ್ಯದ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳಿಂದ ಆಗಮಿಸಿದ್ದ ಪ್ರಾಚಾರ್ಯರು, ವಿದ್ಯಾರ್ಥಿಗಳು, ಪ್ರಾಜೆಕ್ಟ್ ಮೌಲ್ಯಮಾಪಕರು, ಮಾರ್ಗದರ್ಶಕರು ಭಾಗವಹಿಸಿದ್ದರು.

ತಂಬಾಕು ನಿಯಂತ್ರಣ ಕೋಶ ಸಿಬ್ಬಂದಿಯಿಂದ ದಿಢೀರ್ ದಾಳಿ.43 ಪ್ರಕರಣ ದಾಖಲು

0

ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ದಿನಾಂಕ 31/7/2025 ರಂದು ಶಿವಮೊಗ್ಗ ನಗರದ ಮಂಜುನಾಥ ಬಡಾವಣೆಯಲ್ಲಿ ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಸುವವರ ವಿರುದ್ದ ದಾಳಿಗಳನ್ನು ಹಮ್ಮಿಕೊಳ್ಳಲಾಯಿತು.

ಒಟ್ಟು 43 ಪ್ರಕರಣಗಳನ್ನು ದಾಖಲಿಸಿ ರೂ. 3750 ದಂಡವನ್ನು ಸಂಗ್ರಹಿಸಲಾಯಿತು. ಹಾಗೂ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಪಾ ಕಾಯ್ದೆಯ ಕುರಿತು ತಂಬಾಕು ಮಾರಾಟಗಾರರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ತಂಬಾಕು ಜಾಹಿರಾತು ಫಲಕಗಳನ್ನು ತೆರವುಗೊಳಿಸಲಾಯಿತು.

ತಂಡದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಹೇಮಂತ್ ರಾಜ್ ಅರಸ್ , ಸಮಾಜ ಕಾರ್ಯಕರ್ತರಾದ ರವಿರಾಜ್ , ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರಾದ ವಿಕಾಸ್ ಮತ್ತು ಪೊಲೀಸ್ ಇಲಾಖೆ ಹಾಗು ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಶಿವಮೊಗ್ಗದಲ್ಲಿ ಶಾಲಾಭಿವೃದ್ಧಿ & ಮೇಲುಸ್ತುವಾರಿ‌ ಸಮನ್ವಯ ವೇದಿಕೆ ವಾರ್ಷಿಕೋತ್ಸವ

0

ಶಿವಮೊಗ್ಗ ತಾಲ್ಲೂಕು ಮತ್ತು ಶಿವಮೊಗ್ಗ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ವತಿಯಿಂದ ವೇದಿಕೆಯ 1 ವರ್ಷ ಅವಧಿ ಪೂರ್ಣಗೊಂಡಿರುವ ನಿಮಿತ್ತ ಹಾಗೂ ರಚನೆಯಾಗಿ 25 ವರ್ಷ ಪೂರ್ಣಗೊಂಡಿರುವ ಸವಿನೆನಪಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಸಿ ನೆಡಲಾಯಿತು.

ಈ ವೇಳೆ ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ, ಡಿ.ಎಸ್ ಅರುಣ್ ಅವರು, ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಶ್ರೀ ಗುರುದತ್ತ ಹೆಗಡೆ ಅವರು, ಶಿವಮೊಗ್ಗ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Karnataka State Human Rights Commission ಮಹಿಳೆ & ಮಕ್ಕಳ ಅನೈತಿಕ ಕಳ್ಳಸಾಗಣೆ ಬಗ್ಗೆ ರಾಷ್ಟ್ರೀಯ ಆಯೋಗದ ಸದಸ್ಯ ಪ್ರಿಯಾಂಕ ಕಾನೂಂಗೊ‌ ಅವರ ಅಧ್ಯಕ್ಷತೆಯಲ್ಲಿ ಉನ್ನತ ಸಭೆ

0

Karnataka State Human Rights Commission ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆ ಒಂದು ಸಂಘಟಿತ ಅಪರಾಧವಾಗಿದ್ದು, ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ವ್ಯಕ್ತಿಗಳ ಘನತೆ, ಸ್ವಾತಂತ್ರ ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದೊಂದಿಗೆ “ಮಹಿಳೆಯರು ಮತ್ತು ಮಕ್ಕಳ ಮೇಲಿನ ಅನೈತಿಕ ಕಳ್ಳಸಾಗಣೆ” ಕುರಿತು ಸಭೆಯನ್ನು ನವದೆಹಲಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಪ್ರಿಯಾಂಕ್ ಕಾನೂಂಗೊ, ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.

ಮಾನವ ಕಳ್ಳಸಾಗಣೆಯಿಂದ ನಡೆಸಲ್ಪಡುವ ಈ ಆಧುನಿಕ ರೂಪದ ಗುಲಾಮಗಿರಿಯನ್ನು ನಿರ್ಮೂಲನೆ ಮಾಡಲು ಸಾಮೂಹಿಕ ಪ್ರಯತ್ನಗಳನ್ನು ಬಲಪಡಿಸುವುದು ಸಭೆಯ ಉದ್ದೇಶವಾಗಿತ್ತು. ಮಾನವ ಕಳ್ಳಸಾಗಣೆ ಒಂದು ಘೋರ ಅಪರಾಧವಾಗಿದ್ದು, ಇದು ಲಾಭಕ್ಕಾಗಿ ಅತ್ಯಂತ ದುರ್ಬಲರನ್ನು ಬಳಸಿಕೊಳ್ಳುವ ಭಯಾನಕ ಅಪರಾಧವಾಗಿದೆ. ಮಹಿಳೆಯರು ಮತ್ತು ಮಕ್ಕಳ ಸಾಗಣೆಯನ್ನು ತಡೆಗಟ್ಟುವಲ್ಲಿ ಸಾಮೂಹಿಕ ಜವಾಬ್ದಾರಿಯನ್ನು ಬಲಪಡಿಸುವ ಮತ್ತು ಬಲಿಪಶುಗಳು ಹಾಗೂ ಬದುಕುಳಿದವರಿಗೆ ಬೆಂಬಲ ಮತ್ತು ಪರಿಹಾರಗಳನ್ನು ನೀಡುವ ಉದ್ದೇಶದಿಂದ ಸಂಬಂಧಪಟ್ಟ ಇಲಾಖೆಗಳು ಮತ್ತು ಇತರ ಪಾಲುದಾರರು ಅಳವಡಿಸಿಕೊಂಡ ವಿವಿಧ ಕ್ರಮಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

Karnataka State Human Rights Commission ಸಭೆಯಲ್ಲಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರಾದ ಡಾ. ಟಿ. ಶ್ಯಾಮ್ ಭಟ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್. ಕೆ. ವಂಟಿಗೋಡಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೆ. ನಾಗಣ್ಣ ಗೌಡ ಮತ್ತು ಸದಸ್ಯರುಗಳು, ಅಪರಾಧ ಮತ್ತು ತಾಂತ್ರಿಕ ಸೇವೆಗಳು ಮತ್ತು ರಾಜ್ಯ ನೋಡಲ್ ಅಧಿಕಾರಿ, ಮಾನವ ಕಳ್ಳಸಾಗಾಣಿಕೆ ವಿರೋಧಿ ಘಟಕದ ಹೆಚ್ಚುವರಿ ಪೆÇಲೀಸ್ ಮಹಾ ನಿರ್ದೇಶಕರಾದ, ಪಿ. ಹರಿಶೇಖರನ್, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಚ್ಚುವರಿ ಪೆÇಲೀಸ್ ಮಹಾ ನಿರ್ದೇಶಕರಾದ ದೇವಜ್ಯೋತಿ ರೇ ಹಾಗೂ ಸಂಬಂಧಪಟ್ಟ ಇಲಾಖೆಗಳ ಮತ್ತು ಆಯೋಗಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Karnataka Textile Infrastructure Development Corporation ಚೀನಾದ ಜವಳಿ ಉದ್ಯಮಿ ಪಾಲ್ ಪುರಾಜ್ಯದಲ್ಲಿ ₹100 ಬಂಡವಾಳ ಹೂಡಲು ಸಿದ್ಧರಿದ್ದಾರೆ – ಸಚಿವ ಶಿವಾನಂದ ಪಾಟೀಲ್

0

Karnataka Textile Infrastructure Development Corporation ಚೀನಾದ ಜವಳಿ ಉದ್ಯಮಿ ಪಾಲ್‌ ಪು ಅವರು ರಾಜ್ಯದಲ್ಲಿ ನೂರು ಕೋಟಿ ರೂ. ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ.

ಕರ್ನಾಟಕ ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರನ್ನು ಭೇಟಿ ಮಾಡಿ ಚರ್ಚಿಸಿದ ಪಾಲ್‌ ಪು ಅವರು ಸೆಪ್ಟೆಂಬರ್‌ವರೆಗೆ ಕರ್ನಾಟಕದಲ್ಲೇ ಇದ್ದು, ಯೋಜನಾ ಸ್ಥಳ ಫೈನಲ್‌ ಮಾಡುವ ಉದ್ದೇಶವಿದೆ ಎಂದು ಹೇಳಿದರು.

ಉತ್ತರ ಕರ್ನಾಟಕದಲ್ಲಿ ತಕ್ಷಣಕ್ಕೆ ಅಗತ್ಯ ಮೂಲಸೌಕರ್ಯ ಇರುವ ಭೂಮಿ ಲಭ್ಯವಿದೆ. ವರ್ಷದಲ್ಲಿ 365 ದಿನ ನೀರು, ಸಮರ್ಪಕ ವಿದ್ಯುತ್‌, ರಾಷ್ಟ್ರೀಯ ಹೆದ್ದಾರಿ, ವಿಮಾನಯಾನ ಸೌಲಭ್ಯ ಇರುವ ಕಡೆ ಅಗತ್ಯ ಪ್ರಮಾಣದ ಭೂಮಿ ಒದಗಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ಸಚಿವರ ಸಲಹೆಗೆ ಸಮ್ಮತಿಸಿದ ಉದ್ಯಮಿ, ಮೊದಲ ಹಂತದಲ್ಲಿ ಹಳೆಯ ಮೈಸೂರು ಭಾಗದಲ್ಲಿ, ಎರಡನೆಯ ಹಂತದಲ್ಲಿ ಉತ್ತರ ಕರ್ನಾಟಕದಲ್ಲಿ ಉದ್ಯಮ ಸ್ಥಾಪನೆ ಮಾಡಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲೂ ಉದ್ಯಮ ಸ್ಥಾಪನೆ ನಿಶ್ಚಿತ ಎಂದು ಭರವಸೆ ನೀಡಿದರು.

ಮೊದಲ ಹಂತದ ಯೋಜನೆಯಲ್ಲಿ ನೂರು ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಿದ್ದು, ಐದು ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು. ತಕ್ಷಣವೇ ಬಂಡವಾಳ ಹೂಡಲು ಸಿದ್ಧರಿದ್ದು, 20 ಎಕರೆ ಭೂಮಿಯ ಅಗತ್ಯವಿದ್ದು, ಕರ್ನಾಟಕ ಸರ್ಕಾರದಿಂದ ಅಗತ್ಯ ಸಹಕಾರ ನಿರೀಕ್ಷೆ ಹೊಂದಿದ್ದೇನೆ ಎಂದರು.

Karnataka Textile Infrastructure Development Corporation ಉದ್ಯಮ ಸ್ಥಾಪನೆಗೆ ಸೂಕ್ತವಾದ ಸ್ಥಳಗಳನ್ನು ಪಾಲ್‌ ಪು ಅವರಿಗೆ ತೋರಿಸಿ, ಅವರಿಗೆ ಸೂಕ್ತ ಎನಿಸಿದ ನಿವೇಶನ ಮಂಜೂರಾತಿಗೆ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಭಾಗವಹಿಸಿದ್ದ ಜವಳಿ ಇಲಾಖೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಜವಳಿ ಇಲಾಖೆ ಆಯುಕ್ತೆ ಜ್ಯೋತಿ ಹಾಗೂ ಇತರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು, ನಾಳೆಯಿಂದಲೇ ಉದ್ಯಮ ಸ್ಥಾಪನೆಗೆ ಅಗತ್ಯವಾದ ಭೂಮಿಯನ್ನು ಪಾಲ್‌ ಪು ಅವರಿಗೆ ತೋರಿಸಿ ಎಂದು ಸೂಚನೆ ನೀಡಿದರು.

Quantum India Bangalore ವಿಶ್ವ ಕ್ವಾಂಟಂ ಭೂಪಟದಲ್ಲಿ ಬೆಂಗಳೂರಿನ ಕ್ವಾಂಟಮ್ ಸಮಾವೇಶ -2025 ಯಶಸ್ವಿ,- ಸಚಿವ ಬೋಸರಾಜು

0

Quantum India Bangalore ವಿಶ್ವ ಕ್ವಾಂಟಮ್‌ ಭೂಪಟದಲ್ಲಿ ವಿಶಿಷ್ಟ ಮೈಲುಗಲ್ಲು ನೆಡುವಲ್ಲಿ “ಕ್ವಾಂಟಮ್‌ ಇಂಡಿಯಾ ಬೆಂಗಳೂರು ಸಮಾವೇಶ – 2025” ಯಶಸ್ವಿಯಾಗಿದೆ. ಪ್ರಥಮ ಆವೃತ್ತಿಯ ಯಶಸ್ಸು ಹಾಗೂ ಪರಿಣಾಮಗಳನ್ನು ಕಂಡು, ಮುಂದಿನ ವರ್ಷಗಳಲ್ಲಿ ಈ ಸಮಾವೇಶವನ್ನು ವಾರ್ಷಿಕ ಕಾರ್ಯಕ್ರಮವಾಗಿ ಆಯೋಜಿಸಲು ಚಿಂತನೆ ನಡೆಸಲಾಗುತ್ತಿದೆ *ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಭೋಸರಾಜು ತಿಳಿಸಿದರು.

“ಕ್ವಾಂಟಮ್‌ ಇಂಡಿಯಾ ಬೆಂಗಳೂರು ಸಮಾವೇಶ – 2025″*‌ ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎರಡು ದಿನಗಳ ಈ ಸಮಾವೇಶಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. 1,951 ಕ್ಕೂ ಹೆಚ್ಚು ಪ್ರತಿನಿಧಿಗಳೂ ದೇಶ ಹಾಗೂ ವಿದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದಾರೆ. ನೊಬೆಲ್‌ ಪ್ರಶಸ್ತಿ ಪುರಸ್ಕೃತರು ಕ್ವಾಂಟಮ್‌ ಕ್ಷೇತ್ರದಲ್ಲಿರುವ ಅವಕಾಶಗಳು, ಅವುಗಳನ್ನು ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಿದ್ದಾರೆ.

ರಾಷ್ಟ್ರೀಯ ಕ್ವಾಂಟಮ್‌ ಮಿಷನ್‌ನ ಅಧ್ಯಕ್ಷರು ಸಮಾವೇಶದಲ್ಲಿ ಭಾಗಿಯಾಗುವ ಮೂಲಕ, ಕರ್ನಾಟಕ ರಾಜ್ಯ ಈ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನಪಡೆದುಕೊಳ್ಳುವ ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿರುವುದನ್ನು ಸಾರಿ ಹೇಳೀದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರಾಜ್ಯದಲ್ಲಿ ಕ್ವಾಂಟಮ್‌ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈಗಾಗಲೇ ಅಗತ್ಯ ಭೂಮಿ, ಕೌಶಲ್ಯಾಭಿವೃದ್ದಿಗೆ ಅಗತ್ಯವಾಗಿರುವ ಪಠ್ಯಕ್ರಮಗಳ ಅಳವಡಿಕೆ ಹಾಗೂ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಾಗಿರುವುದನ್ನು ತಿಳಿಸಿದ್ದಾರೆ.

ಅಲ್ಲದೇ,2035 ವೇಳೆಗೆ ಕ್ವಾಂಟಮ್‌ ಬೇಸ್ಡ್‌ ಆರ್ಥಿಕತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಬೇಕಾದ ಕೌಶಲ್ಯ, ಮೂಲಸೌಕರ್ಯ ಮತ್ತು ಸ್ಟಾರ್ಪ್‌ಗಳಿಗೆ 1 ಸಾವಿರ ಕೋಟಿ ನಿಧಿಯನ್ನು ಮೀಸಲಿರಿಸಿ ಕರ್ನಾಟಕ ಕ್ವಾಂಟಮ್‌ ಮಿಷಯ್‌ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.

ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರ ನೇತೃತ್ವದಲ್ಲಿ ನಡೆದ ರೌಂಡ್‌ ಟೇಬಲ್‌ ಸಭೆಯಲ್ಲಿ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಾಂಗ್ಲಾದೇಶ, ಕೆನಡಾ, ಡೆನ್ಮಾರ್ಕ್‌, ಫಿನ್‌ಲ್ಯಾಂಡ್‌, ಫ್ರಾನ್ಸ್‌, ಜೆರ್ಮನಿ, ಇಸ್ರೇಲ್‌, ಇಟಲಿ, ಜಪಾನ್‌, ನೇಪಾಳ, ನೆದರ್ಲಾಂಡ್, ಓಮನ್‌, ಸೌದಿ ಅರೇಬಿಯಾ, ಸಿಂಗಾಪೂರ್‌, ಸ್ವಿರ್ಜರ್ಲೆಂಡ್‌, ಯುನೈಟೆಡ್‌ ಕಿಂಗ್ಡಮ್‌, ಅಮೇರಿಕಾ ಸೇರಿದಂತೆ ವಿವಿಧ ದೇಶಗಳ ಪ್ರತಿನಿಧಿಗಳು, ಕ್ವಾಂಟಮ್‌ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ಕ್ವಾಂಟಮ್‌ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವ ಕ್ರಮಗಳ ಅಳವಡಿಕೆಯ ಬಗ್ಗೆ ವಿಸ್ತ್ರುತವಾಗಿ ಚರ್ಚಿಸಲಾಗಿದೆ. ಹಾಗೆಯೇ, ಹಲವಾರು ದೇಶಗಳ ಪ್ರತಿನಿಧಿಗಳು ನಮ್ಮ ರಾಜ್ಯದ ಜೊತೆ ಕೈಜೋಡಿಸಲು ಹಾಗೂ ಉದ್ದಿಮೆಗಳನ್ನು ಸ್ಥಾಪಿಸಲು, ಹಲವಾರು ಸಂಸ್ಥೆಗಳು ರಾಜ್ಯದಲ್ಲಿ ಹೂಡಿಕೆಗೂ ಒಲವು ತೋರಿಸಿದ್ದಾರೆ ಎಂದರು.

Quantum India Bangalore ಜಾಗತಿಕ ಕ್ವಾಂಟಮ್ ಪವರ್‌ಹೌಸ್‌ ಆಗಿ ಕರ್ನಾಟಕವನ್ನು ಕೊಂಡೊಯ್ಯಲು ಹಿರಿಯ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸ್ಟ್ರೀಮ್ ಲ್ಯಾಬ್ಸ್ ಯೋಜನೆಯ ಮೂಲಕ ಕ್ವಾಂಟಮ್ ಪಠ್ಯಕ್ರಮ ಪರಿಚಯಿಸಲಾಗುವುದು. ವಿದ್ಯಾರ್ಥಿಗಳಿಗೆ ಮೀಸಲಾದ ಡಿಎಸ್‌ಟಿ ಪಿಎಚ್‌ಡಿ ಫೆಲೋಶಿಪ್‌ಗಳನ್ನು ವಿಸ್ತರಿಸಲಾಗುವುದು. ಈ ಫೆಲೋಶಿಪ್ ಗಳು ಕ್ವಾಂಟಮ್ ಕಂಪ್ಯೂಟಿಂಗ್, ಕ್ವಾಂಟಮ್ ಸಂವಹನ ಮತ್ತು ಕ್ವಾಂಟಮ್ ಸೆನ್ಸಿಂಗ್, ಕ್ವಾಂಟಮ್ ಸಾಧನಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಮುಂದಿನ ದಿನಗಳಲ್ಲಿ ಈ ಉತ್ಸಾಹವನ್ನು ಮುಂದುವರೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ದೇಶದ ವಿವಿಧ ರಾಜ್ಯಗಳಿಗೆ ತೆರಳಿ ನಮ್ಮ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ಅಲ್ಲಿನ ಉದ್ಯಮಿಗಳಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡಲಿದ್ದೇವೆ. ಪ್ರಥಮ ಆವೃತ್ತಿ ಸಮಾವೇಶದ ಯಶಸ್ಸನ್ನು ಕಂಡು ನಾವು ಉತ್ಸಾಹಭರಿತರಾಗಿದ್ದೇವೆ. ಈ ಸಮಾವೇಶವು ಸ್ಟಾರ್ಟ್‌ಅಪ್ಸ್‌, ಕಾರ್ಪೊರೇಟ್ಸ್‌, ಕೈಗಾರಿಕೆಗಳು ಮತ್ತು ಅಕಾಡೆಮಿಕ್‌ ಕ್ಷೇತ್ರಗಳಿಗೆ ಜಾಗತಿಕ ಕ್ವಾಂಟಮ್‌ ತಂತ್ರಜ್ಞಾನಗಳ ಮುಂಚೂಣಿ ನಾಯಕರೊಂದಿಗೆ ನೇರವಾಗಿ ಸಂವಾದ ನಡೆಸಿ, ತಂತ್ರಜ್ಞಾನ ವಿನಿಮಯ, ತಂತ್ರಾತ್ಮಕ ಸಹಕಾರ ಮತ್ತು ಭವಿಷ್ಯದ ದೃಷ್ಟಿಕೋಣಗಳನ್ನು ಹಂಚಿಕೊಳ್ಳಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸಿದೆ. ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಕ್ವಾಂಟಮ್‌ ಸಮಾವೇಶವನ್ನು ವಾರ್ಷಿಕವಾಗಿ ಆಯೋಜಿಸಲು ಚಿಂತಿಸಲಾಗುತ್ತಿದೆ ಎಂದು ಸಚಿವ ಎನ್‌ ಎಸ್‌ ಭೋಸರಾಜು ತಿಳಿಸಿದರು.

ಸಮಾವೇಶದ ಹೈಲೈಟ್ಸ್‌:
ಕೇವಲ 500 ಪ್ರತಿನಿಧಿಗಳನ್ನು ನಿರೀಕ್ಷಿಸಿದ್ದ ಸಮಾವೇಶಕ್ಕೆ 1951 ಪ್ರತಿನಿಧಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಆಯೋಜಿಸಲಾಗಿದ್ದ 24 ಸೆಷನ್ಸ್‌ಗಳಲ್ಲಿ 75 ಸ್ಪೀಕರ್ಸ್‌ ಭಾಗವಹಿಸಿ ಕ್ವಾಂಟಮ್‌ ಕ್ಷೇತ್ರದ ಬೆಳವಣಿಗೆಗಳು ಹಾಗೂ ಹೊಸ ಸಾಧ್ಯತೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆಸ್ಟ್ರೇಲಿಯಾ, ಆಸ್ಟ್ರಿಯಾ, ಬಾಂಗ್ಲಾದೇಶ, ಕೆನಡಾ, ಡೆನ್ಮಾರ್ಕ್‌, ಫಿನ್‌ಲ್ಯಾಂಡ್‌, ಫ್ರಾನ್ಸ್‌, ಜೆರ್ಮನಿ, ಇಸ್ರೇಲ್‌, ಇಟಲಿ, ಜಪಾನ್‌, ನೇಪಾಳ, ನೆದರ್ಲಾಂಡ್, ಓಮನ್‌, ಸೌದಿ ಅರೇಬಿಯಾ, ಸಿಂಗಾಪೂರ್‌, ಸ್ವಿರ್ಜರ್ಲೆಂಡ್‌, ಯುನೈಟೆಡ್‌ ಕಿಂಗ್ಡಮ್‌, ಅಮೇರಿಕಾ ಸೇರಿದಂತೆ 19 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಐಐಐಟಿ ಧಾರವಾಡ ಹಾಗೂ ರಾಯಚೂರು ಸಂಸ್ಥೆಗಳ ಜೊತೆ ಒಪ್ಪಂದ:
ಸಮಾವೇಶದಲ್ಲಿ IIIT ಧಾರವಾಡ ಹಾಗೂ ರಾಯಚೂರು ಸಂಸ್ಥೆಗಳು ಕ್ಯೂಪೈಎಐ ಜೊತೆ Q-ವಿದ್ಯಾ 8 ಕ್ಯೂಬಿಟ್‌ ಕ್ವಾಂಟಮ್‌ ಕಂಪ್ಯೂಟರ್ ಸ್ಥಾಪನೆಗಾಗಿ ಒಪ್ಪಂದ (MoU) ಸಹಿ ಮಾಡಲಾಯಿತು. ಈ ಯೋಜನೆಯು ಟ್ರೇನ್-ದಿ-ಟ್ರೈನರ್ಸ್ ಕಾರ್ಯಕ್ರಮಗಳನ್ನು ಆರಂಭಿಸಿ, ಕ್ವಾಂಟಮ್‌ ಸಂಶೋಧಕರನ್ನು ಶಕ್ತಿಪಡಿಸಿ, ಕ್ವಾಂಟಮ್‌ ತಂತ್ರಜ್ಞಾನಗಳ ಸಾಮರ್ಥ್ಯ ವೃದ್ಧಿಗೆ ನೆರವಾಗುವ ಉದ್ದೇಶ ಹೊಂದಿದೆ.

District Consumer Disputes Redressal Commission ವಿಮಾ ಮೊತ್ತ‌ ಮಂಜೂರಿಗೆ ನಿರಾಕರಿಸಿ ಸೇವಾ ನ್ಯೂನತೆ. ಪರಿಹಾರ ನೀಡಲು ಆದೇಶ

0

District Consumer Disputes Redressal Commission ಶ್ರೀಮತಿ ಆರ್. ರಾಜೇಶ್ವರಿ ಕೋಂ ಲೇಟ್ ಟಿ.ಎಸ್. ಶಿವಕುಮಾರ್, ಶ್ರೀ ದುರ್ಗಮ್ಮ ದೇವಸ್ಥಾನ, ಕಾಮಾಕ್ಷಿ ಬೀದಿ, ಶಿವಮೊಗ್ಗ ಇವರು ಐಸಿಐಸಿಐ ಪ್ರಡೆನ್ಷಿಯಲ್ ಲೈಫ್ ಇನ್ಷೂರನ್ಸ್- ಬೆಂಗಳೂರು, ಐಸಿಐಸಿಐ ಪ್ರಡೆನ್ಷಿಯಲ್ ಲೈಫ್ ಇನ್ಷೂರನ್ಸ್- ಮುಂಬೈ, ಇಂಡಸಿಂಡ್ ಬ್ಯಾಂಕ್ ಲಿ., ಶಿವಮೊಗ್ಗ ಮತ್ತು ಇಂಡಸಿಂಡ್ ಬ್ಯಾಂಕ್ ಲಿ., ಬೆಂಗಳೂರು ಇವರುಗಳ ವಿರುದ್ದ ವಿಮಾ ಸೌಲಭ್ಯ ನೀಡುವಲ್ಲಿನ ಸೇವಾ ನ್ಯೂನತೆ ಕುರಿತು ವಕೀಲರ ಮೂಲಕ ಸಲ್ಲಿಸಿದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವಿಮಾ ಕಂಪೆನಿಯು ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರಾದ ಶ್ರೀಮತಿ ಆರ್. ರಾಜೇಶ್ವರಿಯವರ ಪತಿ ಖರೀದಿಸಿದ್ದ ಅಶೋಕ ಲೈಲ್ಯಾಂಡ್ ಬೋರ್‌ವೆಲ್ ಲಾರಿಯ ಮೇಲೆ ಐಸಿಐಸಿಐ ಪ್ರಡೆನ್ಷಿಯಲ್ ಲೈಫ್ ಇನ್ಷೂರನ್ಸ್ ರವರಿಂದ ರೂ. 1,04,878/- ವಿಮಾ ಫ್ರಿಮಿಯಂ ಪಡೆದಿದ್ದು, 2024ರಲ್ಲಿ ಪಾಲಿಸಿದಾರರು ತೀರಿಕೊಂಡಿದ್ದರು. ಈ ಕುರಿತು ಇನ್ಷೂರನ್ಸ್ ಕಂಪನಿಗೆ ತಿಳಿಸಿ, ವಿಮಾ ಭರವಸೆಯ ಮೊತ್ತದಲ್ಲಿ ಸಾಲದ ಮೊತ್ತವನ್ನು ಭರಿಸಲು ಕೋರಿರುತ್ತಾರೆ. 1 ಮತ್ತು 2ನೇ ಎದುರುದಾರರಿಂದ ವಿಮಾ ಪಾಲಿಸಿಯ ಪ್ರೀಮಿಯಂ ಹಣವನ್ನು 3ನೇ ಎದುರುದಾರರಿಂದ 2023ರಂದು ಪಡೆದಿದ್ದು, ದೂರುದಾರರ ಪತಿ ಮರಣ ಹೊಂದಿದ ನಂತರ ದೂರುದಾರರ ಪತಿಯ ಸಾಲದ ಖಾತೆಗೆ ಜಮಾ ಮಾಡಿರುವುದರಿಂದ ಎಲ್ಲಾ ಎದುರುದಾರರು ಸೇವಾ ನ್ಯೂನ್ಯತೆಯನ್ನುಂಟು ಮಾಡಿರುತ್ತಾರೆ ಎಂದು ದೂರು ಸಲ್ಲಿರುತ್ತಾರೆ.
District Consumer Disputes Redressal Commission ದೂರನ್ನು ದಾಖಲಿಸಿಕೊಂಡ ಆಯೋಗವು ನೀಡಿದ ನೋಟಿಸ್‌ಗೆ ಎದುರುದಾರರು ವಕೀಲರ ಮೂಲಕ ಹಾಜರಾಗಿ ದೂರುದಾರರು ಪಾಲಿಸಿಯನ್ನು ಪಡೆಯುವ ಪೂರ್ವದಲ್ಲಿ ಟಿ.ಎಂ.ಟಿ. ವೈದ್ಯಕೀಯ ತಪಾಸಣೆಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರುವುದಿಲ್ಲ ಹಾಗೂ ನಿಧನ ಹೊಂದಿದ ದಿನದಂದು ಪಾಲಿಸಿಯು ಚಾಲ್ತಿಯಲ್ಲಿರಲಿಲ್ಲ ಎಂಬ ಕಾರಣದೊಂದಿಗೆ ಪಾಲಿಸಿಯ ಭರವಸೆ ಮೊತ್ತ ಪಾವತಿಸಲು ಸಾಧ್ಯವಿಲ್ಲವೆಂದು ತಕರಾರು ಸಲ್ಲಿಸಿರುತ್ತಾರೆ. ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮತ್ತು ಉಭಯ ಪಕ್ಷಗಾರರ ವಕೀಲರ ವಾದವನ್ನು ಆಲಿಸಿ, ಎದುರುದಾರರು ಸೇವಾ ನ್ಯೂನತೆ ಎಸಗಿರುವುದಾಗಿ ಪರಿಗಣಿಸಿ ದೂರುದಾರರು ಸಲ್ಲಿಸಿರುವ ದೂರನ್ನು ಭಾಗಶಃ ಪುರಸ್ಕರಿಸಿ, 1 ಮತ್ತು 2ನೇ ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಪಾಲಿಸಿ ಪ್ರಸ್ಥಾವನೆಯಲ್ಲಿರುವ ಮೊತ್ತ ರೂ.36,38,583/- ಗಳನ್ನು ಈ ಆದೇಶವಾದ 45 ದಿನಗಳೊಳಗೆ ಪಾವತಿಸಲು ತಪ್ಪಿದ್ದಲ್ಲಿ ದಿ:21/04/2025 ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.10.45 ರಂತೆ ಬಡ್ಡಿ ಸಹಿತ ಪಾವತಿಸುವುದು. 3 ಮತ್ತು 4ನೇ ಎದುರುದಾರರು ದೂರುದಾರರ ಪತಿಯ ಉಳಿಕೆ ಸಾಲದ ವಿವರಗಳನ್ನು 1 ಮತ್ತು 2ನೇ ಎದುರುದಾರರಿಗೆ ಒದಗಿಸಿ, ಪಾಲಿಸಿಯ ಮೊತ್ತವನ್ನು ದೂರುದಾರರ ಸಾಲದ ಖಾತೆಗೆ ಜಮೆ ಪಡೆಯಲು ಕ್ರಮವಹಿಸಲು ಹಾಗೂ 1 ರಿಂದ 4ನೇ ಎದುರುದಾರರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ರೂ. 40,000 ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ.10,000 ಗಳನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು, ತಪ್ಪಿದ್ದಲ್ಲಿ ಈ ಆದೇಶವಾದ ದಿನದಿಂದ ಪೂರ್ತಿ ಹಣ ಪಾವತಿಸುವವರೆಗೆ ಮೇಲ್ಕಂಡ ಮೊತ್ತಕ್ಕೆ ವಾರ್ಷಿಕ ಶೇ. 12 ರಂತೆ ಬಡ್ಡಿಯನ್ನು ಸೇರಿಸಿ ನೀಡತಕ್ಕದ್ದು ಎಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಜು.16 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಗಂಗಾಧರ ನಾಯ್ಕ್ ತಿಳಿಸಿದ್ದಾರೆ.