Shivamogga Police ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣೆಯಲ್ಲಿ ವಾರಸುದಾರಿರಲ್ಲ 18 ದ್ವಿಚಕ್ರ ವಾಹನಗಳು ಹಾಗೂ 01 ಲಾರಿಯನ್ನು ಅಮಾನತ್ತುಗೊಳಿಸಿಗೊಂಡಿದ್ದು, ಈ ವಾಹನಗಳ ವಾರಸುದಾರರು ಪತ್ತೆಯಾಗದ ಕಾರಣ ಆ.08 ರಂದು ಬೆಳಿಗ್ಗೆ 11 ಗಂಟೆಗೆ ಕೋಟೆ ಪೊಲೀಸ್ ಠಾಣೆಯ ಆವರಣದಲ್ಲಿ ವಿಲೇವಾರಿ ಮಾಡಲು ಉದ್ದೇಶಿಸಿದ್ದು, ಬಹಿರಂಗ ಹರಾಜು ಹಾಕಲಾಗುವುದು. ಆಸಕ್ತರು ನಿಗದಿತ ಸಮಯದಲ್ಲಿ ಭಾಗವಹಿಸುವಂತೆ ಕೋಟೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರು ತಿಳಿಸಿದ್ದಾರೆ.
Araga Jnanendra ಕಾಂಗ್ರೆಸ್ ಪಕ್ಷ ತನ್ನ ಸೋಲಿಗೆ ನಿಜವಾದ ಕಾರಣ ಹುಡುಕದೇ ಚುನಾವಣಾ ಆಯೋಗದ ಮೇಲೆ ತಪ್ಪು ಹೊರಿಸುತ್ತಿದೆ- ಆರಗ ಜ್ಞಾನೇಂದ್ರ
Araga Jnanendra ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಪಾದಯಾತ್ರೆ ವಿಚಾರವಾಗಿ ಶಾಸಕರಾದ ಆರಗ ಜ್ಞಾನೇಂದ್ರ ವಿಡಂಬಿಸಿ ಮಾತನಾಡಿದರು
ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಚುನಾವಣಾ ಆಯೋಗ ವಿರುದ್ಧ ಆರೋಪ ಮಾಡುತ್ತದೆ
ಪಕ್ಷದ ಸೋಲಿಗೆ ಮತಗಳ ಕಳ್ಳತನ ಆಗಿದೆ, ಚುನಾವಣಾ ಆಯೋಗ ತಪ್ಪು ಮಾಡಿದೆ ಎಂದು ಆರೋಪಿಸುತ್ತದೆ
ಆದರೆ ಗೆದ್ದಾಗ ಏನನ್ನು ಹೇಳುವುದಿಲ್ಲ
ಕಾಂಗ್ರೆಸ್ ತನ್ನ ಸೋಲಿಗೆ ನಿಜವಾದ ಕಾರಣ ಏನು ಎಂಬುದನ್ನು ಕಂಡು ಹಿಡಿದುಕೊಳ್ಳುತ್ತಿಲ್ಲ
ಬದಲಿಗೆ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತದೆ
ಈ ಮೂಲಕ ಜನರ ಭಾವನೆಯಿಂದ ತೊಲಗುತ್ತಿದೆ
ಇಷ್ಟು ದಿನ ಇವಿಎಂ ಬಗ್ಗೆ ಆರೋಪಿಸುತ್ತಿದ್ದರು
ಆದರೆ ಕರ್ನಾಟಕದಲ್ಲಿ ಅವರೇ ಆಡಳಿತ ನಡೆಸುತ್ತಿದ್ದಾರೆ
ಅವರದೇ ಸಿಬ್ಬಂದಿ ಮತದಾರರ ಪಟ್ಟಿಯನ್ನು ತಯಾರು ಮಾಡಿದ್ದಾರೆ
ಇದು ಕಾಂಗ್ರೆಸ್ ನ ಕುತಂತ್ರದ ಒಂದು ಭಾಗ
ಚುನಾವಣಾ ಆಯೋಗ ಹಂಡ್ರೆಡ್ ಪರ್ಸೆಂಟ್ ಸರಿಯಾಗಿದೆ
ಮತದಾರರ ಪಟ್ಟಿಯಲ್ಲಿ ಇಲ್ಲದವರು, ಸತ್ತು ಹೋದವರ ಹೆಸರನ್ನ ಕೈ ಬಿಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು
ಅಮರಿಕದ ಟ್ರಂಪ್ ಹಾಗೂ ಕಾಂಗ್ರೆಸ್ ನ ರಾಹುಲ್ ಗಾಂಧಿ ಒಂದೇ ರೀತಿ ವರ್ತಿಸುತ್ತಿದ್ದಾರೆ
ಭಾರತದ ಆರ್ಥಿಕತೆ ಸತ್ತು ಹೋಗಿದೆ ಎಂದು ಟ್ರಂಪ್ ಹೇಳುತ್ತಾರೆ
ಅದಕ್ಕೆ ರಾಹುಲ್ ಗಾಂಧಿ ಹೌದೆಂದು ಹೇಳುವ ಮೂಲಕ ತಲೆ ಆಡಿಸುತ್ತಾರೆ.
ಈ ಪ್ರಪಂಚದಲ್ಲಿ ಒಬ್ಬ ಟ್ರಂಪ್ ಹಾಗೂ ಒಬ್ಬ ರಾಹುಲ್ ಗಾಂಧಿ ಮಾತ್ರ ಶ್ರೇಷ್ಠ ಆರ್ಥಿಕ ತಜ್ಞರು
ಅರ್ಥಶಾಸ್ತ್ರವನ್ನು ಅರ್ಥ ಮಾಡಿಕೊಂಡು ಇವರಿಬ್ಬರೇ
ಅವರು ಯಾವುದೇ ದೇಶದ ಆರ್ಥಿಕತೆ ಸತ್ತು ಹೋಗಿದೆ ಎಂದು ಹೇಳಬಹುದು
ಟ್ರಂಪ್ ಹೇಳಿಕೆಯಿಂದ ದೇಶಕ್ಕೆ
ಆಘಾತವಾಗಿದೆ
ಆದರೆ ರಾಹುಲ್ ಗಾಂಧಿ ಮಾತ್ರ ಇದಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಜ್ಞಾನೇಂದ್ರ ಟೀಕಿಸಿದರು.
Araga Jnanendra ರಾಹುಲ್ ಗಾಂಧಿ ನಮ್ಮ ದೇಶದ ಪರವಾಗಿ ಯಾವಾಗಲೂ ಯೋಚನೆಯನ್ನು ಮಾಡಿಲ್ಲ
ದೇಶದ ವಿರೋಧಿಗಳ ರೀತಿಯಲ್ಲೇ ಅವರು ಯಾವಾಗಲೂ ಮಾತನಾಡುತ್ತಾರೆ
ಹಾಗಾಗಿ ರಾಹುಲ್ ಗಾಂಧಿ ಅಂತಹ ನಾಯಕತ್ವ ಇರುವ ತನಕ ಕಾಂಗ್ರೆಸ್ ಮಣ್ಣಾಗಿ ಹೋಗುತ್ತದೆ ಎಂದು ರಾಜ್ಯದ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಿಷಾದದ ಧ್ವನಿಯಲ್ಲಿ ನುಡಿದಿದ್ದಾರೆ
Shivamogga Minority Welfare Department ಕಾನೂನು ತರಬೇತಿಯಲ್ಲಿ ಶಿಷ್ಯವೇತನ ಪಡೆಯಲು ಅಲ್ಪ ಸಂಖ್ಯಾತ ಇಲಾಖೆಯಿಂದ ಅರ್ಜಿ ಆಹ್ವಾನ
Shivamogga Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಕಾನೂನು ಪದವಿಯಲ್ಲಿ ಉತ್ತೀರ್ಣರಾದ ಅಲ್ಸಸಂಖ್ಯಾತರ ವರ್ಗಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ದ, ಪಾರ್ಸಿ ಅಭ್ಯರ್ಥಿಗಳಿಗೆ 2025-26 ನೇ ಸಾಲಿನಿಂದ ನಾಲ್ಕು ವರ್ಷಗಳ ತರಬೇತಿ ಅವಧಿಯಲ್ಲಿ ಶಿಷ್ಯವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಕಾನೂನು ತರಬೇತಿಯು 4 ವರ್ಷಗಳ ಅವಧಿಯಾಗಿದ್ದು, ಮಾಸಿಕ ರೂ.5000/- ಗಳನ್ನು ಶಿಷ್ಯವೇತನ ನೀಡಲಾಗುವುದು. ಅಭ್ಯರ್ಥಿಯು ಅಡ್ವೊಕೇಟ್ ಆಗಿ ಕಾರ್ಯ ನಿರ್ವಹಿಸಲು ನಿಗದಿಪಡಿಸಿದ ಕಾನೂನು ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2 ವರ್ಷಗಳ ಅವಧಿಯೊಳಗಿದ್ದು, ವಯೋಮಿತಿ 30 ವರ್ಷದೊಳಗಿರಬೇಕು. ತಮ್ಮ ಹೆಸರನ್ನು ಬಾರ್ ಕೌನ್ಸಿಲ್‌ನಲ್ಲಿ ನೋಂದಾಯಿಸಿರಬೇಕು ಹಾಗೂ ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಸರ್ಕಾರಿ ವಕೀಲರು ಅಥವಾ ಕನಿಷ್ಠ 20 ವರ್ಷಗಳ ವೃತ್ತಿ ಅನುಭವವಿರುವ ವಕೀಲರ ಅಧೀನದಲ್ಲಿ ತರಬೇತಿ ಪಡೆಯುವುದು. Shivamogga Minority Welfare Department ಕುಟುಂಬದ ವಾರ್ಷಿಕ ಆದಾಯ ರೂ.3.50 ಲಕ್ಷ ಮೀರಿರಬಾರದು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಇಲಾಖಾ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಆಗಸ್ಟ್ 14 ರೊಳಗಾಗಿ ಸಲ್ಲಿಸುವಂತೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಅರ್ಜಿ ಹಾಗೂ ಹೆಚ್ಚಿನ ವಿವರಗಳಿಗೆ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, 1ನೇ ಮಹಡಿ, ಸತ್ಯಶ್ರೀ ಆರ್ಕೇಡ್, 5ನೇ ಪ್ಯಾರಲ್ ರಸ್ತೆ, ದುರ್ಗಿಗುಡಿ, ಶಿವಮೊಗ್ಗ ದೂ.ಸಂ: 08182-220206 ನ್ನು ಸಂಪರ್ಕಿಸುವುದು.
S.N. Chennabasappa ಶಾಸಕರಿಂದ ನವುಲೆ ಭಾಗದ ಪ್ರದೇಶದಲ್ಲಿ ಪೌರಕಾರ್ಮಿಕರಿಗೆ ನಿರ್ಮಿಸುತ್ತಿರುವ ಗೃಹ ಭಾಗ್ಯ ಯೋಜನೆ ಕಾಮಗಾರಿ ವೀಕ್ಷಣೆ
S.N. Chennabasappa ಶಾಸಕರಿಂದ ನವುಲೆ ಭಾಗದ ಪ್ರದೇಶದಲ್ಲಿ ಪೌರಕಾರ್ಮಿಕರಿಗೆ ನಿರ್ಮಿಸುತ್ತಿರುವ ಗೃಹ ಭಾಗ್ಯ ಯೋಜನೆ ಕಾಮಗಾರಿ ವೀಕ್ಷಣೆ ನವುಲೆ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಯ ಪ್ರಗತಿ ಕಂಟುತ್ತಿರುವ ಹಿನ್ನೆಲೆಯಲ್ಲಿ, ಶಾಸಕರಾದ ಎಸ್ಎನ್ ಚೆನ್ನಬಸಪ್ಪ ಅವರು ಪಾಲಿಕೆ ಆಯುಕ್ತರಾದ ಶ್ರೀ ಮಾಯಣ್ಣಗೌಡರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾರ್ಯವೈಖರಿಯನ್ನು ಪರಿಶೀಲಿಸಿದರು.
ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಪೌರಕಾರ್ಮಿಕರಿಗೆ ಶೀಘ್ರದಲ್ಲೇ ಸೂರು ಕಲ್ಪಿಸುವಂತೆ ಸೂಕ್ತ ನಿರ್ದೇಶನ ನೀಡಿದರು.
ಮೇ 31 ರ ಒಳಗಾಗಿ ಯೋಜನೆಯನ್ನು ಪೂರ್ಣಗೊಳಿಸಿ ಪೌರಕಾರ್ಮಿಕರಿಗೆ ಹಾಸ್ತಾಂತರಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.
S.N. Chennabasappa ಈ ಸಂದರ್ಭ ಕಾರ್ಯಪಾಲಕ ಅಭಿಯಂತರರಾದ ಶ್ರೀ ಭರತ್, ಪೌರಕಾರ್ಮಿಕರ ಸಂಘದ ಅಧ್ಯಕ್ಷರಾದ ಶ್ರೀ ಗೋವಿಂದ್, ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Yuvajaya Foundation ಪದವೀಧರರಿಗೆ ಉದ್ಯೋಗಾವಕಾಶ ಮಾಹಿತಿ
Yuvajaya Foundation ನೀವು ಪದವೀಧರರೇ? ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಹುಡುಕುತ್ತಿರುವಿರಾ?
ಇಲ್ಲಿದೆ ಸುವರ್ಣಾವಕಾಶ. ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗ ಸಿದ್ದತೆಯ ಕೌಶಲ್ಯ ನೀಡುವ ಮತ್ತು ಉದ್ಯೋಗ ದೊರಕಿಸಿಕೊಡುವಲ್ಲಿ ನೆರವು ನೀಡುವ ನಿಮ್ಮ ಯುವಜಯ ಫೌಂಡೇಶನ್ ಈಗ ಸಿರಸಿ ಮುಂಡಗೋಡ್ ಮತ್ತು ಚಿತ್ರದುರ್ಗದಲ್ಲಿ ಹೊಸದಾಗಿ ತರಬೇತಿ ಕೇಂದ್ರವನ್ನ ಪ್ರಾರಂಭಿಸಿದೆ.
21ನೇ ಬ್ಯಾಚ್‌ನ ಕೆರಿಯರ್ ಕನೆಕ್ಟ್ ಪ್ರೋಗ್ರಾಮ್‌ಗೆ ಈಗ ಅರ್ಜಿಗಳು ತೆರೆದಿವೆ. ಆನ್ಲೈನ್ ಅಥವಾ ಸೆಂಟರ್ ತರಬೇತಿಗೆ ನಿಮ್ಮ ಹೆಸರು ನೋಂದಾಯಿಸಲು ಕೂಡಲೇ ಈ ಮೇಲಿನ ಸೆಂಟರ್ ಗೆ ಭೇಟಿ ನೀಡಬಹುದು.
ಅಥವಾ 8088547193 ಗೆ “Hi” ವಾಟ್ಸಆಪ್ ಮೆಸೇಜ್ ಅಥವಾ ಕರೆ ಮಾಡಬಹುದು
Acharya Tulsi National College of Commerce ಸಂತೃಪ್ತಿ ಕೊಡುವ ಉದ್ಯೋಗವು ಜೀವನದಲ್ಲಿ ಸಾರ್ಥಕತೆಮೂಡಿಸುತ್ತದೆ- ಪ್ರೊ.ಕೆ.ಎಂ.ನಾಗರಾಜು
Acharya Tulsi National College of Commerce ಜೀವನ ಕಟ್ಟಿಕೊಳ್ಳಲು ಉದ್ಯೋಗ ಅವಶ್ಯ. ನಮ್ಮ ಜೀವನದಲ್ಲಿ ಸಂತೃಪ್ತಿ ತಂದುಕೊಡುವ ಉದ್ಯೋಗವು ಜೀವನದಲ್ಲಿ ಸಾರ್ಥಕತೆ ಮೂಡಿಸುತ್ತದೆ ಎಂದು ಎಟಿಎನ್‌ಸಿಸಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಎಂ.ನಾಗರಾಜು ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ ಅವಧಿ ಸಂತೃಪ್ತಿ ತಂದಿದೆ ಎಂದರು.
ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಎಲ್ಲರ ಸಹಕಾರದಿಂದ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ದೇಶದಲ್ಲೇ ವಾಣಿಜ್ಯಶಾಸ್ತ್ರದಲ್ಲಿ ಹೆಸರು ಮಾಡಿರುವ ಎಟಿಎನ್‌ಸಿಸಿ ಕಾಲೇಜಿನಲ್ಲಿ ಅಳಿಲುಸೇವೆ ಸಲ್ಲಿಸಿದ್ದೇನೆ. ಎಲ್ಲ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ನನ್ನ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತು ಕಾರ್ಯಕ್ರಮಗಳು ಯಶಸ್ಸು ಕಾಣಲು ಸಹಕರಿಸಿದ್ದಾರೆ ಎಂದು ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ವಿಷ್ಣುಮೂರ್ತಿ ಕೆ.ಎ. ಮಾತನಾಡಿ, ಎನ್‌ಎಸ್‌ಎಸ್ ಅಧಿಕಾರಿಯಾಗಿ ರಾಜ್ಯದಲ್ಲೇ ಅತ್ಯುತ್ತಮ ಹೆಸರು ಗಳಿಸಿರುವ ನಾಗರಾಜ್ 34 ವರ್ಷ ಸಾರ್ಥಕ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಮಾತನಾಡಿ, ಅತ್ಯುತ್ತಮ ಕ್ರೀಡಾಪಟುಗಳನ್ನು ಸೃಷ್ಟಿಸಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸಿದ್ದಾರೆ. ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮಾತನಾಡಿ, ಹಿಡಿದ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಿದ್ದರು. ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಅವರ ಯೋಜನೆಗಳಿಗೆ ಸಮಿತಿ ಅಗತ್ಯ ಸಹಕಾರ ನೀಡುತ್ತಿತ್ತು ಎಂದು ಹೇಳಿದರು.
Acharya Tulsi National College of Commerce ಪ್ರಾಚಾರ್ಯೆ ಪ್ರೊ. ಮಮತಾ ಪಿ.ಆರ್. ಮಾತನಾಡಿ, ನಾಗರಾಜ್ ಅವರಿಗೆ ಎರಡು ಬಾರಿ ಅತ್ಯುತ್ತಮ ಎನ್‌ಎಸ್‌ಎಸ್ ಅಧಿಕಾರಿ ಪ್ರಶಸ್ತಿ ಬಂದಿದ್ದು, ರಾಜ್ಯಮಟ್ಟದ ವಿಶ್ವವಿದ್ಯಾಲಯ ಕ್ರೀಡಾಕೂಟಗಳನ್ನು ಅತ್ಯಂತ ವ್ಯವಸ್ಥಿತವಾಗಿ ನಿಭಾಯಿಸಿದ್ದರು. ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಉದ್ಯೋಗ ಶಿಬಿರ ಆಯೋಜಿಸಿ ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು ಎಂದು ತಿಳಿಸಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಪ್ರಮುಖರಾದ ಅಶ್ವತ್ಥ ನಾರಾಯಣ ಶೆಟ್ಟಿ, ಧನಂಜಯ್, ವಾಗೇಶ್, ಸುರೇಶ್, ಕಿರಣ್, ಧರ್ಮೇಂದರ್ ಸಿಂಗ್, ಅಶೋಕ್ ಮತ್ತಿತರರು ಇದ್ದರು.
Navodaya Vidyalaya Gajanur ನವೋದಯ 6 ನೇ ತರಗತಿ ಪ್ರವೇಶಕ್ಕೆ ಆನ್ ಲೈನ್ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
Navodaya Vidyalaya Gajanur ಶಿವಮೊಗ್ಗ ಜಿಲ್ಲೆಯ ಗಾಜನೂರಿನ ನವೋದಯ ವಿದ್ಯಾಲಯದ 2026-27 ನೇ ಸಾಲಿಗೆ ಆರನೇ ತರಗತಿ ಪ್ರವೇಶ ಪರೀಕ್ಷೆಯ ಆನ್‌ಲೈನ್ ಅರ್ಜಿ ಅವಧಿಯನ್ನು ಆ.13 ರವರೆಗೆ ವಿಸ್ತರಿಸಲಾಗಿದೆ.
ಈಗಾಗಲೇ 5ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆನ್‌ಲೈನ್ ವಿಳಾಸ cbseitms.rcil.gov.in.nvs ಇಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಶಿವಮೊಗ್ಗ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ತಿಳಿಸಿದ್ದಾರೆ.
Shiralakoppa Lions Club ಶಿವಮೊಗ್ಗ ಜಿಲ್ಲೆಯ ಸಮಸ್ಯೆ & ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಿದ್ಧರಾಮಯ್ಯ ಅವರನ್ನ ಭೇಟಿ ಮಾಡಿದ ಸಚಿವ ಮಧು ಬಂಗಾರಪ್ಪ
Shiralakoppa Lions Club ಶಿರಾಳಕೊಪ್ಪ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಶ್ರೀ ವಾಸವಿ ಸಮುದಾಯ ಭವನದಲ್ಲಿ ಇಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಲಯನ್ಸ್ ಜಿಲ್ಲೆ 317 Bಯ ಮಾಜಿ ಜಿಲ್ಲಾ ಸಂಪುಟ ಕಾರ್ಯದರ್ಶಿ, ಹೊನ್ನಾವರದ ಸದಾನಂದ ಖೈರನ್ನ ಅವರು ಮಾತಾಡುತ್ತಾ, ನಾವು ಮೊದಲು ಮನೆಯಲ್ಲಿ ಲಯನ್ ಆಗಬೇಕು. ಅಂದರೆ ಲಯನ್ಸ್ ನ ಮೌಲ್ಯ, ತತ್ವಾದರ್ಶಗಳನ್ನು ಪೋಷಕರು, ಬಂಧು ಬಳಗದವರೊಂದಿಗೆ ಬಳಸಿ ಸ್ಪಂದಿಸುವ ಮೂಲಕ ಪ್ರಾರಂಭವಾಗಬೇಕು ಎಂದರು.
ಮನೆಗೆ ಮಾರಿ ಊರಿಗೆ ಉಪಕಾರಿಯಾದರೇನು ಫಲ? ವಿದ್ಯೆಗಿಂತ ಮಾನವೀಯತೆ ಬಹಳ ಶ್ರೇಷ್ಠ ಎಂದು ಬಡ ತಂದೆ ಮತ್ತು ವಿದ್ಯಾವಂತ ಮಗನ ನೈಜ ಘಟನೆಯ ಕಥೆ ಹೇಳುವ ಮೂಲಕ ಮನೋಜ್ಞ ಸಂದೇಶ ನೀಡಿದರು.
ಶಿರಾಳಕೊಪ್ಪ ಲಯನ್ಸ್ ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಪದವಿ ಪ್ರದಾನ ಮಾಡಿದರು.
ಅಧ್ಯಕ್ಷರಾಗಿ ಯೋಗಿರಾಜ್ , ಕಾರ್ಯದರ್ಶಿಯಾಗಿ ರೇಣುಕಯ್ಯ, ಖಜಾಂಚಿಯಾಗಿ ಮೋಹನ್ ಸೇರಿದಂತೆ ಪೂರ್ಣ ಪ್ರಮಾಣದ ತಂಡ ಅಧಿಕಾರ ಸ್ವೀಕರಿಸಿತು.
ಹೊಸ ಲಯನ್ ವರ್ಷದ ಸೇವಾ ಕಾರ್ಯಕ್ರಮಗಳಿಗೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು. 250 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರೈನ್ ಕೋಟ್ ವಿತರಣೆ, ಗ್ರೀನ್ ಬೋರ್ಡ್, ಹೊದಿಕೆ ವಿತರಣೆ ಮುಖ್ಯ ಅಥಿತಿ ಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ವಿತರಿಸಲಾಯಿತು. SSLC ಯಲ್ಲಿ 623/ 625 ಅಂಕ ಗಳಿಸಿದ ಮಿಥುನ್ M D ಹಾಗೂ ಪಿಯುಸಿ ವಿಜ್ಞಾನ ವಿಭಾಗದಲ್ಲಿ 589/600 ಅಂಕಗಳಿಸಿದ ಸಿರಿ ಎಂ ಅವರನ್ನು ಪೋಷಕರೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ, ಶಿರಾಳಕೊಪ್ಪದ ಡಾ. ಗಿರಿರಾಜ್ ಇಸ್ಲೂರ್ ರವರ 28 ವರ್ಷಗಳ ಸುಧೀರ್ಘ ಗ್ರಾಮೀಣ ಸೇವೆಯನ್ನು ಗುರುತಿಸಿ ವೈದ್ಯ ದಿನಾಚರಣೆ ಅಂಗವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಗಿಲ್ ವಿಜಯ್ ದಿವಸ್ ಪ್ರಯುಕ್ತ ಕಾರ್ಗಿಲ್ ಹುತಾತ್ಮ ಯೋಧರನ್ನು ಸ್ಮರಿಸಿ ಗೌರವ ನಮನ ಸಲ್ಲಿಸಲಾಯಿತು. Shiralakoppa Lions Club ಸಮಾರಂಭದಲ್ಲಿ ಮಾಜಿ ಜಿಲ್ಲಾ ಗೌರ್ನರ್ ಎಂ ಕೆ ಭಟ್, ಪ್ರಾಂತಿಯ ಅಧ್ಯಕ್ಷ ಮಹಾಬಲೇಶ K.B, ವಲಯ ಅಧ್ಯಕ್ಷ ಕುಮಾರಸ್ವಾಮಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ಅಧ್ಯಕ್ಷ ಯೋಗಿರಾಜ್ ಮಾತನಾಡಿ, ತಮ್ಮ ಯೋಚನೆ ಹಾಗೂ ಯೋಜನೆಗಳಿಗೆ ಎಲ್ಲರ ಸಹಕಾರ ಕೋರಿದರು. ಕ್ಲಬ್ ನ ಹಿರಿಮೆಗನುಗುಣವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಆಶ್ವಾಸನೆ ನೀಡಿದರು.
ಸೊರಬ, ಸಾಗರ, ಶಿಕಾರಿಪುರ, ಉಳವಿ ಹಾಗೂ ಹೊನ್ನಾವರ ಕ್ಲಬ್ ಗಳ ಪದಾಧಿಕಾರಿಗಳು, ಸದಸ್ಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭ ಕೋರಿದರು.
ಆಶಾ ಮಂಜುನಾಥ್ ಪ್ರಾರ್ಥಿಸಿದರು. ವೇದಮೂರ್ತಿ ಮುಖ್ಯ ಅತಿಥಿ ಪರಿಚಯ ಮಾಡಿದರು. ವಸುಮತಿ ಅಮಿತ್ ಸೇವಾ ವರದಿ ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ 2024-25 ಸಾಲಿನ ಅಧ್ಯಕ್ಷೆ ಪ್ರತಿಭಾ ಇಸ್ಲೂರ್ ಸ್ವಾಗತಿಸಿ ತಮ್ಮ ಅಧಿಕಾರ ಅವಧಿಯ ಅನುಭವ ಹಂಚಿಕೊಂಡರು. ಶೃತಿ ಗಿರೀಶ್ ಮನರಂಜನಾ ಕಾರ್ಯಕ್ರಮ ನಡೆಸಿಕೊಟ್ಟರು. ರೇಣುಕಯ್ಯ ವಂದಿಸಿದರು
Klive Special Article ಆಗಸ್ಟ್ 1. ವ್ಯಸನಮುಕ್ತ ದಿನಾಚರಣೆ
ವಿಶೇಷ ಲೇಖನ
ಆರ್ ಎಸ್. ಆಕಾಶ್
Klive Special Article ಮಾದಕ ವ್ಯಸನಗಳಿಗೆ ಯುವಜನತೆಯೇ ಹೆಚ್ಚು ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ವ್ಯಸನಮುಕ್ತ ಸಮಾಜ ನಿರ್ಮಿಸಲು ಸರ್ಕಾರ ಹಲವಾರು ಬಗೆಯಲ್ಲಿ ಪ್ರಯತ್ನಿಸುತ್ತಿದ್ದು ವ್ಯಸನಮುಕ್ತಗೊಳಿಸಲು ಶ್ರಮಿಸಿದ ಡಾ.ಮಹಾಂತ ಶಿವಯೋಗಿರವರ ಜನ್ಮ ದಿನಾಚರಣೆ ಆ.01 ನ್ನು ವ್ಯಸನಮುಕ್ತ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆ.01 ರಂದು ವ್ಯಸನ ಮುಕ್ತ ದಿನಾಚರಣೆ ಮಾಡಲು ಆದೇಶಿಸಿದೆ. ವಿಶೇಷವಾಗಿ ಯುವ ಸಮೂಹದಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದ್ದು ಆರೋಗ್ಯ ಇಲಾಖೆ, ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಮೂಲಕ ಅನೇಕ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಿದೆ.
ಡಾ.ಮಹಾಂತ ಶಿವಯೋಗಿ ಸ್ವಾಮೀಜಿಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ‘ಜೋಳಿಗೆ’ ಕಾರ್ಯಕ್ರಮದ ಮೂಲಕ 42 ವರ್ಷಗಳ ಕಾಲ ದೇಶ, ವಿದೇಶಗಳಲ್ಲಿ ದುಶ್ಚಟಗಳ ವಿರುದ್ದ ಜಾಗೃತಿ ಮೂಡಿಸಿದ ಸಮಾಜ ಸುಧಾರಕ. ಜನರ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಪಡೆದು, ಗಣ್ಯ ವ್ಯಕ್ತಿಗಳನ್ನು ಕರೆಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು.
ಜೂ.26 ರಂದು ವಿಶ್ವ ಮಟ್ಟದಲ್ಲೂ ಅಂತರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನವನ್ನು ಕೂಡ ನಡೆಸಲಾಗುತ್ತದೆ. ಆ ದಿನದಂದು ಹಲವಾರು ವ್ಯಕ್ತಿಗಳು, ಸಮುದಾಯಗಳು ಮತ್ತು ಪ್ರಪಂಚದಾದ್ಯAತ ವಿವಿಧ ಸಂಸ್ಥೆಗಳು, ಈ ಜಾಗತಿಕ ಆಚರಣೆಯನ್ನು ಬೆಂಬಲಿಸುತ್ತದೆ.
ಭಾರತದಲ್ಲಿ ಮಾದಕ ದ್ರವ್ಯಗಳನ್ನು ಮೂರು ವಿಧದಲ್ಲಿ ವಿಂಗಡಿಸಬಹುದು : ಕಾನೂನು ಬದ್ಧ ಮಾದಕವಸ್ತುಗಳು – ಮದ್ಯ ಮತ್ತು ತಂಬಾಕು /ಸಿಗರೇಟ್. ಅಕ್ರಮ ಮಾದಕ ವಸ್ತುಗಳು ಮತ್ತು ವಿನೋದ ಉಂಟುಮಾಡುವ ಡ್ರಗ್ಸ್ ಹಾಗೂ ಅಂಗಡಿಗಳಲ್ಲಿ ದೊರೆಯುವ ಅಥವಾ ವೈದ್ಯರು ಸೂಚಿಸಿದ ಔಷಧಗಳು.
ಮಾದಕ ವಸ್ತುಗಳ ಬಳಕೆ: ಮಾದಕ ವಸ್ತುಗಳಲ್ಲಿ ನಾನಾ ಬಗೆಗಳಿದ್ದು, ಅವುಗಳು ಸದಾ ಮನುಷ್ಯನನ್ನು ಚಟಕ್ಕೀಡು ಮಾಡುತ್ತಿರುತ್ತವೆ. ಧೂಮಪಾನ, ಗಾಂಜಾದಂತಹ ಮಾದಕಗಳನ್ನು ಸೇದುವುದು, ಚುಚ್ಚಿಕೊಳ್ಳುವುದು ಸೇರಿದಂತೆ ಮುಂತಾದ ಅನೇಕ ಮಾದಕ ದ್ರವ್ಯಗಳನ್ನು ಬಳಸಲಾಗುತ್ತದೆ. ಇನ್ನೂ ಡ್ರಗ್ಸ್ನಂತಹ ಮಾದಕ ದ್ರವ್ಯಗಳು ಮೆದುಳಿನ ಕ್ರಿಯೆಗಳಾದ ಕಲಿಕೆ, ತೀರ್ಪು, ನಿರ್ಧಾರ, ವರ್ತನೆ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರೊಂದಿಗೆ ವ್ಯಕ್ತಿಗಳು ಕಾಲಕ್ರಮೇಣ ದುರ್ಬಲರಾಗಿ ಖಿನ್ನತೆ ಮತ್ತು ಬೇರೆ ರೀತಿಯ ಮಾನಸಿಕ ಅಸ್ವಸ್ಥತೆಗಳಿಗೆ ಒಳಗಾಗಬಹುದು.
ಬರಬರುತ್ತಾ ವ್ಯಸನಿಗಳು ಇದನ್ನು ಸೇವಿಸಿದರೆ ಮಾತ್ರ ಸ್ವಾಭಾವಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಭಾವಿಸಿದ್ದಾರೆ. ಇದಿಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲ ಎಂಬಷ್ಟು ಮಟ್ಟಿಗೆ ಈ ಚಟಕ್ಕೆ ಅವಲಂಬಿತರಾಗುತ್ತಾರೆ.
ಮಾದಕ ವ್ಯಸನಿಗಳಲ್ಲಿ ಯುವಜನರೇ ಹೆಚ್ಚು:
ದೇಶದಲ್ಲಿ ಇಂತಹ ಮಾದಕ ವ್ಯಸನಗಳಿಗೆ 18 + ಯುವಕರೇ ಹೆಚ್ಚು ದಾಸರಾಗುತ್ತಿದ್ದಾರೆ ಎಂದು ಡಬ್ಲೂö್ಯ ಎಚ್‌ಓ ನ ಸಂಶೋಧನೆಯ ಮೂಲಕ ತಿಳಿದು ಬಂದಿದೆ. ದೇಶದಲ್ಲಿ ಶೇ.14.6 ರಷ್ಟು ಜನ ಮದ್ಯಪಾನದ ವ್ಯಸನಕ್ಕೆ ಒಳಗಾಗಿದ್ದು, ಶೇ.5.2 ಜನ ತಮ್ಮ ವೈಯಕ್ತಿಕ ಸಮಸ್ಯೆಗಳಿಗಾಗಿ ಹಾಗೂ ಶೇ.2.7 ಜನ ಚಟಕ್ಕೆ ಅವಲಂಬಿತವಾಗಿ ಸೇವನೆ ಮಾಡುತ್ತಿದ್ದಾರೆ. ಇದರಲ್ಲಿ ಶೇ.27.3 ರಷ್ಟು ಪುರುಷರು, 1.6 ರಷ್ಟು ಮಹಿಳೆಯರು, 1.3 ರಷ್ಟು 10 ರಿಂದ 17 ವಯಸ್ಸಿನವರು ಹಾಗೂ 17.1 ರಷ್ಟು 18 ವರ್ಷದ ಮೇಲ್ಪಟ್ಟ ಯುವಕರು ವ್ಯಸನಕ್ಕೆ ಒಳಾಗಿದ್ದಾರೆ.
2018 ರ ವರದಿ ಪ್ರಕಾರ ಕರ್ನಾಟಕದಲ್ಲಿ ಮದ್ಯಪಾನ ಸಮಸ್ಯೆಯಿಂದ ಬಳಲುತ್ತಿರುವ 20 ಲಕ್ಷ ಜನರು ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಬಯಸಿದ್ದಾರೆ.
Klive Special Article ಸೇದುವ ಮಾದಕ ದ್ರವ್ಯ: ದೇಶದಲ್ಲಿ ಶೇ.0.7 ಜನ ಒಳಸೇದುವ(ಇನ್ಹಲೆಂಟ್) ಮಾದಕ ದ್ರವ್ಯಗಳ ವ್ಯಸನಿಗಳಾಗಿದ್ದು ಶೇ. 0.21 ಜನ ತಮ್ಮ ವೈಯಕ್ತಿಕ ಸಮಸ್ಯೆಗಾಗಿ ಹಾಗೂ ಶೇ. 0.09 ಜನ ವ್ಯಸನಕ್ಕೆ ಅವಲಂಬಿತರಾಗಿದ್ದರೆ.
ಗಾAಜಾ: ದೇಶದಲ್ಲಿ ಶೇ.2.8 ಜನ ಗಾಂಜಾದ ವ್ಯಸನಕ್ಕೆ ಒಳಗಾಗಿದ್ದು, ಶೇ.0.66 ತಮ್ಮ ವೈಯಕ್ತಿಕ ಸಮಸ್ಯೆಗೆ ಹಾಗೂ ಶೇ.0.25 ಜನ ಚಟಕ್ಕೆ ಅವಲಂಬಿತರಾಗಿದ್ದಾರೆ. ಇದರಲ್ಲಿ 40 ಲಕ್ಷ ಜನ ಭಂಗಿ ಹಾಗೂ 50 ಲಕ್ಷ ಜನ ಗಾಂಜಾಕ್ಕೆ ದಾಸರಾಗಿದ್ದಾರೆ. ಶೇ.5.0 ಪುರುಷರು, ಶೇ.0.6 ಮಹಿಳೆಯರು, ಶೇ.0.9 10 ರಿಂದ 17 ವಯಸ್ಸಿ ಯುವಕರು ಹಾಗೂ ಶೇ.3.3 18 ವರ್ಷದ ಮೇಲ್ಪಟ್ಟ ಯುವಕರು ದಾಸರಾಗಿದ್ದಾರೆ.
ಒಪಿಯಾಡ್ : ದೇಶದಲ್ಲಿ ಶೇ.2.1 ಜನ ಒಪಿಯಾಡ್ ವ್ಯಸನಕ್ಕೆ ಒಳಗಾಗಿದ್ದು, ಶೇ.0.70 ವೈಯಕ್ತಿಕ ಸಮಸ್ಯೆಗಳಿಗೆ ಹಾಗೂ ಶೇ.0.26 ಜನ ಇದರ ಚಟಕ್ಕೆ ಅವಲಂಬಿತರಾಗಿದ್ದಾರೆ. ಇದರಲ್ಲಿ ಓಪಿಯಮ್‌ಗೆ 11 ಲಕ್ಷ, ಹೆರಾಯಿನ್‌ಗೆ 63 ಲಕ್ಷ ಹಾಗೂ ಫಾರ್ಮ್ ಓಪಿಯಾಡ್‌ಗೆ 25 ಲಕ್ಷ ಜನ ದಾಸರಾಗಿದ್ದಾರೆ.
ಮದ್ಯ- ವ್ಯಸನದ ಕುರಿತಾದ ಕೆಲವು ವಾಸ್ತವಾಂಶಗಳು:
ಮದ್ಯ ಸೇವಿಸುವ ಪ್ರತಿ ಇಬ್ಬರಲ್ಲಿ ಒಬ್ಬನು ತೀವ್ರವಾಗಿ ಈ ವ್ಯಸನಕ್ಕೆ ಬಲಿಯಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ. ಮದ್ಯ ಸೇವಿಸುವ ವ್ಯಕ್ತಿಗಳು ಮದ್ಯ ಸೇವಿಸದ ವ್ಯಕ್ತಿಗಳಿಗಿಂತ ಮೂರು ಪಟ್ಟು ಹೆಚ್ಚು ಗಂಭೀರ ಅನಾರೋಗ್ಯಕ್ಕೊಳಗಾಗುವ ಸಾಧ್ಯತೆಯಿದೆ. ಭಾರತದ ಆಸ್ಪತ್ರೆಗಳಲ್ಲಿ ದಾಖಲಾಗುವ ಪ್ರತಿ ಐದು ರೋಗಿಗಳಲ್ಲಿ ಒಬ್ಬರು ನೇರವಾಗಿ ಮದ್ಯವ್ಯಸನಕ್ಕೆ ಸಂಬಂಧಿಸಿದವರಾಗಿರುತ್ತಾರೆ.
ಮದ್ಯ ಸೇವನೆ ಮತ್ತು ಮಾದಕ ವ್ಯಸನಿಗಳು ಹಿಂಸೆಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚು. ಅದರಲ್ಲೂ ಅವರ ಸಂಗಾತಿಗಳೊAದಿಗೆ ಈ ಸಾಧ್ಯತೆ ಅಧಿಕ. ಈ ರೀತಿಯ ಹಿಂಸೆಯು ದೈಹಿಕವಾಗಿ, ಮಾನಸಿಕವಾಗಿ, ಲೈಂಗಿಕವಾಗಿ ಅಥವಾ ಆರ್ಥಿಕವಾಗಿಯೂ ಕೂಡ ನಡೆಯಬಹುದು.
ಮದ್ಯಪಾನ ವ್ಯಸನಕ್ಕೆ ದಾಸರಾದವರು ಆತ್ಮಹತ್ಯೆ ಪ್ರಯತ್ನ ಮಾಡಬಹುದು ಅಥವಾ ಅಪಾಯಕಾರಿಯಾದ ಲೈಂಗಿಕ ವರ್ತನೆ ತೋರಬಹುದು. ಅಥವಾ ಹೆಚ್‌ಐವಿ ಸೋಂಕು, ಕ್ಷಯ, ಅನ್ನನಾಳದ ಕ್ಯಾನ್ಸರ್, ಲಿವರ್ ಸಮಸ್ಯೆ ಮತ್ತು ಇನ್ನಿತರ ಕಾಯಿಲೆಗಳಿಂದ ಕರುಳಿನ ಹುಣ್ಣು ಉಂಟಾಗಬಹುದು.
ಮದ್ಯವು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಮದ್ಯಪಾನದಿಂದ ಲಿವರ್ ಸಮಸ್ಯೆ, ಭ್ರೂಣಕ್ಕೆ ತೊಂದರೆ, ಮೆದುಳಿನ ಜೀವಕೋಶಗಳ ಕುಗ್ಗುವಿಕೆ, ಕ್ಯಾನ್ಸರ್‌ನ ಅಪಾಯದ ಹೆಚ್ಚಳ, ಖಿನ್ನತೆ, ಹೃದಯ ಸ್ನಾಯುಗಳ ದೌರ್ಬಲ್ಯ ಮತ್ತು ಕಿರಿಕಿರಿ ಅಥವಾ ಮನಸ್ಥಿತಿ ಬದಲಾಣೆ, ಪಾರ್ಶ್ಚವಾಯುವಿನ ತೊಂದರೆ, ಅಧಿಕ ರಕ್ತದೊತ್ತಡ, ಅಜೀರ್ಣ ತೊಂದರೆಗಳು, ಲೈಂಗಿಕ ದೌರ್ಬಲ್ಯ, ಅಕಾಲಿಕ ಮುಪ್ಪು ಸಂಭವಿಸಬಹುದು.
ದೀರ್ಘಕಾಲದ ಮದ್ಯ ಸೇವನೆಯಿಂದಾಗುವ ಸಮಸ್ಯೆಗಳು:-
ವ್ಯಕ್ತಿಯು ಮಾದಕ ವಸ್ತುವಿನ ಬಗ್ಗೆ ಯಾವಾಗಲೂ ಯೋಚಿಸುವುದು(ನಾನು ಮತ್ತೆ ಯಾವಾಗ ಕುಡಿಯುತ್ತೇನೆ /ಧೂಮಪಾನ ಮಾಡುತ್ತೇನೆ, ಇದರ ಬದಲಿಗೆ ಏನನ್ನು ತೆಗೆದುಕೊಳ್ಳಲಿ, ಅದನ್ನು ಎಲ್ಲಿಂದ ಪಡೆಯಲಿ? ಹೇಗೆ ಪಡೆಯಲಿ? ಇತ್ಯಾದದಿ ಚಿಂತನೆಗಳು.)
ವಿತ್‌ಡ್ರಾವಲ್ ಲಕ್ಷಣಗಳು– ವ್ಯಕ್ತಿಯು ಒಂದಷ್ಟು ದಿನ ಮಾದಕ ವಸ್ತುಗಳನ್ನು ಸೇವಿಸದೇ ಇದ್ದಾಗ ಅವರಲ್ಲಿ ನಡುಕ, ಕಿರಿಕಿರಿ, ತೀವ್ರ ಬಯಕೆ ಉಂಟಾಗಿ, ಮಾನಸಿಕ ಹಾಗೂ ಭಾವನಾತ್ಮಕ ಅಂಶಗಳ ಮೇಲೆ ಪರಿಣಾಮ.
ನಿಯಂತ್ರಣದ ಕೊರತೆ– ಇಡೀ ದಿನ ಮಾದಕ ವಸ್ತುಗಳನ್ನು ತೆಗೆದುಕೊಳ್ಳದೆ ಇರಬೇಕೆಂದು ನಿರ್ಧರಿಸಿ, ಅದಕ್ಕೆ ಬದ್ದರಾಗದೆ ವಿಫಲರಾಗುವುದು .
ಬಯಕೆ-ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ತೀವ್ರವಾದ ಬಯಕೆ. ನಿರಂತರ ಸೇವೆಯಿಂದ ತನಗೆ ಹಾಗೂ ಸುತ್ತ-ಮುತ್ತಲಿನವರಿಗೆ ತೊಂದರೆಯಾಗುವುದನ್ನು ತಿಳಿದಿದ್ದೂ ಅದನ್ನು ಮುಂದುವರಿಸುವುದು.
ಆರೋಗ್ಯ ಇಲಾಖೆಯಿಂದ ವ್ಯಸನಮುಕ್ತಿಗೆ ಆಪ್ತಸಮಾಲೋಚನೆ-ಚಿಕಿತ್ಸೆ:
ಮಾದಕ ವ್ಯಸನಗಳಿಂದ ಬಳಲುತ್ತಿರುವವರು ಹಾಗೂ ಅದರಿಂದ ಆಚೆ ಬರಲು ಹಂಬಲಿಸುತ್ತಿವವರಿಗೆ ಆಪ್ತ-ಸಮಾಲೋಚನೆ ಹೆಚ್ಚು ಸಹಕಾರಿಯಾಗತ್ತದೆ. ಅದರಂತೆ ಶಿವಮೊಗ್ಗ ಜಿಲ್ಲೆ ಒಳಗೊಂಡಂತೆ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಜಿಲ್ಲಾ, ತಾಲ್ಲೂಕು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವ್ಯಸನಕ್ಕೆ ತುತ್ತಾದಾವರಿಗೆ ಮನೋಚೈತನ್ಯ ಕಾರ್ಯಕ್ರಮದ ಮೂಲಕ ಸ್ವ – ಇಚ್ಛೆಯಿಂದ ಮಧ್ಯಪಾನ ತ್ಯಜಿಸಲು ಬಯಸುವವರಿಗೆ ಔಷಧೋಪಚಾರ ಹಾಗೂ ಆಪ್ತಸಮಾಲೋಚನೆ ಮುಖಾಂತರ ಸಹಾಯ ಹಸ್ತ ನೀಡಲಾಗುತ್ತದೆ. ಮದ್ಯ ಅಥವಾ ಯಾವುದೇ ವ್ಯಸನ ತ್ಯಜಿಸಲು ಇಚ್ಛಿಸುವವರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮನೋವೈದ್ಯರ ತಂಡದ ಸಹಾಯ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ/ಸಮುದಾಯ ಆರೋಗ್ಯ ಕೇಂದ್ರ/ತಾಲ್ಲೂಕು ಆಸ್ಪತ್ರೆ/ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸಿ ಅಥವಾ ಆರೋಗ್ಯ ಸಹಾಯವಾಣಿ ‘104’ಗೆ ಕರೆ ಮಾಡಬಹುದು.
- ಆಕಾಶ್.ಆರ್.ಎಸ್, ಪ್ರಶೀಕ್ಷಾಣಾರ್ಥಿ, ವಾರ್ತಾ ಇಲಾಖೆ
Shivamogga Police ಶಿವಮೊಗ್ಗದಲ್ಲಿ ದಿಢೀರ್ ದಾಳಿ, ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸಿರುವ 23 ಪ್ರಕರಣ ದಾಖಲು
Shivamogga Police ತಂಬಾಕು ನಿಯಂತ್ರಣ ಕೋಶದ ವತಿಯಿಂದ ಶಿವಮೊಗ್ಗ ನಗರದ ಗಾಡಿಕೊಪ್ಪ ಹಾಗೂ ಆಲ್ಕೊಳ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ಕಾನೂನು ಉಲ್ಲಂಘಿಸುವವರ ವಿರುದ್ಧ ದಾಳಿಗಳನ್ನು ಹಮ್ಮಿಕೊಳ್ಳಲಾಯಿತು. ಒಟ್ಟು 23 ಪ್ರಕರಣಗಳನ್ನು ದಾಖಲಿಸಿ, ಸ್ಥಳದಲ್ಲೇ ರೂ. 3500 ದಂಡವನ್ನು ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ತಂಬಾಕು ಮಾರಾಟಗಾರರಿಗೆ ಹಾಗು ಸಾರ್ವಜನಿಕರಿಗೆ ತಂಬಾಕು ದುಷ್ಪರಿಣಾಮಗಳು ಹಾಗೂ ಕೋಟ್ಪಾ ಕಾಯ್ದೆ ಕುರಿತು ಅರಿವು ಮೂಡಿಸಲಾಯಿತು.
Shivamogga Police ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಹೇಮಂತರಾಜ್ ಅರಸ್, ಸಾಮಾಜಿಕ ಕಾರ್ಯಕರ್ತರಾದ ರವಿರಾಜ್ ಜಿ ಕೆ, ಡಿಇಓ ಪ್ರವೀಣ್ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
