Monday, August 10, 2026
Monday, August 10, 2026
Home Blog Page 201

Breaking News ಜೈಲಿನಿಂದ ಬಿಡುಗಡೆಯಾದ ರೌಡಿ ಶೀಟರ್ ಕಾಲಿಗೆ ಗುಂಡು

0

Breaking News ಶಿವಮೊಗ್ಗಜಿಲ್ಲೆಯ ಭದ್ರಾವತಿ ತಾಲೂಕಿನ ಶಿವಾನಿ ಕ್ರಾಸ್ ಬಳಿ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ. ರೌಡಿ ಶೀಟರ್ ಡಿಚ್ಚಿ ಮುಬಾರಕ್ ನನ್ನು ಚೇಸ್ ಮಾಡಿಕೊಂಡು ಬಂದ ಪೊಲೀಸರು ಕಾಲಿಗೆ ಗುಂಡು ಹಾರಿಸಬೇಕಾಯಿತು. ದರೋಡೆಗೆ ಹೊಂಚು ಹಾಕುತ್ತಿದ್ದ ಎಂದು ಮುಬಾರಕ್ ನನ್ನು ಸಂದೇಹಿಸಲಾಗಿದೆ.

ಶಾಸಕ ಸಂಗಮೇಶ್ವರ್ ಪುತ್ರ ಬಸವೇಶ್ ಕೊಲೆ ಬೆದರಿಕೆ ಹಾಕಿದ್ದ ಡಿಚ್ಚಿ ಮುಬಾರಕ್ ಸುಮಾರು ಒಂದುವರೆ ವರ್ಷದ ಹಿಂದೆ ಜೈಲು ಸೇರಿದ್ದ ನಿನ್ನೆ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದ ಡಿಚ್ಚಿ ಮುಬಾರಕ್ ಇದ್ದ ಕಾರಿನ ತುಂಬ ಮಾರಕಾಸ್ತ್ರಗಳು ಪತ್ತೆಯಾಗಿದೆ ಎಂಬ ಮಾಹಿತಿ ವರದಿಯಾಗಿದೆ.

Breaking News ಡಿಚ್ಚಿ ಮುಬಾರಕ್ ನ್ನ ಉಕ್ಕುಂದದಿಂದ ಚೇಸ್ ಮಾಡಿಕೊಂಡು ಬಂದ ಪೊಲೀಸರು
ಕಾರು ತೆಗೆಯಲಾಗದ ಹಿನ್ನಲೆಯಲ್ಲಿ ಡಿಚ್ಚಿ ಸೇರಿ ನಾಲ್ವರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಗನ್ ಸಮೇತ ಸಿಕ್ಕಿಹಾಕಿಕೊಂಡ ಮುಬಾರಕ್ ಎಂಬ ವ್ಯಕ್ತಿಯನ್ನು
ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಡಿಚ್ಚಿಗೆ ಚಿಕಿತ್ಸೆಗೆ ಸೇರಿಸಲಾಗಿದೆ. ಇದೇ ಸಂದರ್ಭದಲ್ಲಿ
ಪಿಎಸ್ಐ ಕೃಷ್ಣರಾಜ್ ಮೂವರು ಪಿಸಿ ಸಹ ಗಾಯಗೊಂಡಿದ್ದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

Shimoga News ಯಶಸ್ವಿ ಅಂಡಮಾನ್ ಪ್ರವಾಸ ಪೂರೈಸಿದ ಪ್ರವಾಸಿಗರ ” ಸ್ನೇಹ ಮಿಲನ” ಕಾರ್ಯಕ್ರಮ

0

Shimoga News ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ,ಯೂತ್ ಹಾಸ್ಟೆಲ್ಸ್ ವತಿಯಿಂದ ಅಂಡಮಾನ್ ಪ್ರವಾಸ ಸಂಪನ್ನಗೊಂಡಿತು.
ಶಿವಮೊಗ್ಗ ತಲುಪಿದ ನಂತರ
ಸಹ ಪ್ರವಾಸಿಗರೆಲ್ಲರೂ ಫೆ.7 ರಂದು ಸಂಜೆ
ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ‘ಸ್ನೇಹಮಿಲನ’ದಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗದ ಓಂಗಣೇಶ್ ಟ್ರ್ಯಾಕ್ಟರ್ಸ್ ನ ಮಾಲೀಕ‌ರು ಉದ್ಯಮಿ ಶ್ರೀ ಭಾಸ್ಕರ್ .ಜಿ. ಕಾಮತ್ ಅವರ ಉಲ್ಲಾಸಮಯ ಭಾಗಿತ್ವದಲ್ಲಿ ಈ ಸ್ನೇಹ ಮಿಲನ ಅತ್ಯಂತ ಹರ್ಷದಾಯಕವಾಗಿ ಜರುಗಿತು.
Shimoga News ವೇದಿಕೆ ಅಧ್ಯಕ್ಷ ಎನ್.ಗೋಪಿನಾಥ್ ಉಪಸ್ಥಿತರಿದ್ದರು. ಪ್ರವಾಸಿಗರ ಪರವಾಗಿ ಗುಂಪಿನ‌ ಹಿರಿಯ ಉಪೇಂದ್ರ ಮತ್ತು ಊಟ ತಿಂಡಿ ‘ಮೆನು’ ಗೈಡ್ ಆಗಿದ್ದ ಸ್ಮಿತಾ ಮೂರ್ತಿ ಅವರು ತಮ್ಮ ಅನುಭವ ಹಂಚಿಕೊಂಡರು.
ಪ್ರವಾಸ ತಂಡ ಮುನ್ನಡೆಸಿದ ಉತ್ಸಾಹಿ,ವೇದಿಕೆ ಸಹಕಾರ್ಯದರ್ಶಿ ಅರಿಶಿಣಗೆರೆ ನಾಡಿಗ್ ವಿಜಯೇಂದ್ರ ರಾವ್ ಚೇತೋಹಾರಿ ನಿರೂಪಕರಾಗಿದ್ದರು. ಸಹಪ್ರವಾಸಿಗರ ಆಮೋದ ಪ್ರಮೋದಗಳಿಗೆ ಮಿಲನ ಸಾಕ್ಷಿಯಾಯಿತು.
ಮರೆಲಾಗದ ದಿನ…ಸ್ನೇಹಮಿಲನ.

Siddaramaiah ಎಂಎಸ್ಐಎಲ್ ವತಿಯಿಂದ ಚಿಟ್ಸ್ ಮತ್ತು ಸಾಫ್ಟ್ ವೇರ್ ,ಮೊಬೈಲ್ ಆ್ಯಪ್ ಬಿಡುಗಡೆ.

0

Siddaramaiah ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ವಿಧಾನಸೌಧದ ಬ್ಯಾಕ್ವಿಂಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL) ಚಿಟ್ಸ್ ಹೊಸ ಸಾಫ್ಟ್ ವೆರ್ ಹಾಗೂ ಮೊಬೈಲ್ ಆಪ್ ಬಿಡುಗಡೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

Siddaramaiah ಈ ಕಾರ್ಯಕ್ರಮದಲ್ಲಿ, ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL)
ಅಧ್ಯಕ್ಷರಾದ ಸಿ. ಪುಟ್ಟರಂಗಶೆಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Shimoga Bharat Scouts and Guides ಶಿಬಿರಗಳು ಮಕ್ಕಳ ನಡುವೆ ಉತ್ತಮ ಬಾಂಧವ್ಯ ರೂಪಿಸುತ್ತವೆ- ಶಕುಂತಲಾ ಚಂದ್ರಶೇಖರ್

0

Shimoga Bharat Scouts and Guides ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಹೊರ ತರಲು ಶಿಬಿರಗಳು ಸಹಾಯಕ – ಶ್ರೀಮತಿ ಶಕುಂತಲಾ ಚಂದ್ರಶೇಖರ್ ಜಿಲ್ಲಾ ಮುಖ್ಯ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗ

ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆ ಜಾವಳ್ಳಿಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ವತಿಯಿಂದ ದಿ: 07-02-2026 ರಂದು ಒಂದು ದಿನದ ರಾತ್ರಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗಣ್ಯರು ಬೇಡನ್ ಪೌಲ್ ರವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಗೌರವವನ್ನು ಸೂಚಿಸಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಜಿಲ್ಲಾ ಮುಖ್ಯ ಆಯುಕ್ತರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗ ಇವರು ಮಾತನಾಡುತ್ತಾ ಶಿಬಿರವೆಂದರೆ ಎಲ್ಲರೂ ಒಟ್ಟಾಗಿ ಸೇರಿ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ತಮ್ಮ ಅವಶ್ಯಕತೆಗಳನ್ನು ಪೂರೈಸುವ ಒಂದು ಅವಕಾಶವಾಗಿದೆ. ಇಂತಹ ಶಿಬಿರಗಳು ಮಕ್ಕಳ ನಡುವೆ ಉತ್ತಮ ಬಾಂಧವ್ಯಗಳನ್ನು ಬೆಳೆಸುತ್ತವೆ. ಜೀವನ ಕಲೆ ಹಾಗೂ ಅನುಭವದ ಕಲಿಕೆಯನ್ನು ಉಂಟುಮಾಡುತ್ತವೆ. ಎಲ್ಲಾ ಮಕ್ಕಳು ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಬೆಳೆಸುತ್ತವೆ. ಮಕ್ಕಳಿಗೆ ಪಠ್ಯಕ್ರಮದಷ್ಟೇ ಪಠ್ಯೇತರ ಚಟುವಟಿಕೆಗಳು ಸಹ ಮುಖ್ಯವಾಗುತ್ತವೆ. ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಹೊರ ತರಲು ಶಿಬಿರಗಳು ಸಹಾಯಕವಾಗಿವೆ. ಶಾಂತಿ ಮತ್ತು ಶಿಸ್ತನ್ನು ಮೂಡಿಸುವುದೇ ಈ ಸ್ಕೌಟ್ಸ್ ಅಂಡ್ ಗೈಡ್ಸ್ ನ ಉದ್ದೇಶವಾಗಿದೆ ಎಂದು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿದ್ದ ಶ್ರೀಯುತ ವೆಂಕಟಾಚಲ ಶಾಸ್ತ್ರಿ, ಜಿಲ್ಲಾ ಆಯುಕ್ತರು, ಕಬ್ಸ್ ವಿಭಾಗ ಇವರು ಮಾತನಾಡುತ್ತ ವಿದ್ಯಾರ್ಥಿಗಳು ತಮಗೆ ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ನಮ್ಮ ದೇಶದ ಧ್ಯೇಯಗಳಾದ ಸತ್ಯ, ಶಾಂತಿ, ಪ್ರೀತಿ, ಸ್ನೇಹ ಹಾಗೂ ಸೇವೆ ಇವುಗಳನ್ನು ಎತ್ತಿ ಹಿಡಿಯಬೇಕು. ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳುವುದರಿಂದ ಒಳ್ಳೆಯ ನೆನಪುಗಳು ಇರುವಂತೆ ಮಾಡುತ್ತವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಪ್ರಾಚಾರ್ಯರಾದ ಶ್ರೀಯುತ ಶ್ರೀಕಾಂತ್ ಎಂ ಹೆಗಡೆ ಇವರು ಮಾತನಾಡುತ್ತಾ ಈಗಿನ ಮಕ್ಕಳಿಗೆ ಮನೆಯಲ್ಲಿ ಬೇರೆ ಬೇರೆಯವರ ಜೊತೆ ಹೆಚ್ಚಾಗಿ ಬೆರೆಯಲು ಸಾಧ್ಯವಾಗುವುದಿಲ್ಲ. ಇಂತಹ ಶಿಬಿರಗಳ ಮೂಲಕ ಮಕ್ಕಳು ತಮ್ಮ ಗೆಳೆಯರ ಜೊತೆ, ಶಿಕ್ಷಕರ ಜೊತೆ ಬೆರೆತು ಉತ್ತಮವಾದ ಬಾಂಧವ್ಯವನ್ನು ಹೊಂದಲು ಇದು ಸೂಕ್ತ ವೇದಿಕೆಯಾಗಿದೆ. ಇಂತಹ ಶಿಬಿರಗಳಿಂದ ಜೀವನದಲ್ಲಿ ಮರೆಯಲಾಗದ ಅನುಭವಗಳು ದೊರೆಯುತ್ತವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ನ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

Shimoga Bharat Scouts and Guides ಶ್ರೀಮತಿ ವಿದ್ಯಾ ಎಸ್. ಫ್ಲಾಕ್ ಲೀಡರ್, ಬುಲ್ ಬುಲ್ಸ್ ವಿಭಾಗ ಇವರು ಕಾರ್ಯಕ್ರಮದಲ್ಲಿ ನೆರೆದಿರುವವರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಈ ಕಾರ್ಯಕ್ರಮದಲ್ಲಿ ಶ್ರೀಯುತ ಎಚ್.ಎನ್. ಎಸ್. ರಾವ್ ಟ್ರಸ್ಟಿಗಳು ಮತ್ತು ಶೈಕ್ಷಣಿಕ ನಿರ್ದೇಶಕರು ಜ್ಞಾನದೀಪ ವಿದ್ಯಾ ಸಂಸ್ಥೆ, ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ಹಿರಿಯ ಉಪ ಪ್ರಾಂಶುಪಾಲರಾದ ಡಾ. ರೆಜಿ ಜೋಸೆಫ್, ಉಪ ಪ್ರಾಂಶುಪಾಲರಾದ ಶ್ರೀಮತಿ ವಾಣಿ ಕೃಷ್ಣಪ್ರಸಾದ್, ಶ್ರೀಯುತ ಎಚ್. ಶಿವಶಂಕರಪ್ಪ ಜಿಲ್ಲಾ ತರಬೇತಿ ಆಯುಕ್ತರು ಸ್ಕೌಟ್ಸ್ ವಿಭಾಗ ಶಿವಮೊಗ್ಗ, ಶ್ರೀಯುತ ಜಿ ವಿಜಯಕುಮಾರ್ ಸಾರ್ವಜನಿಕ ಸಂಪರ್ಕ ಅಧಿಕಾರಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಜಿಲ್ಲಾ ಸಂಸ್ಥೆ ಶಿವಮೊಗ್ಗ, ಹಾಗೂ ಶಿಬಿರದ ನಾಯಕರು ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳು, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜೇಶ್ ಅವಲಕ್ಕಿ, ಇತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಕಾತ್ಯಾಯಿನಿ, ಶ್ರೀಮತಿ ಹೇಮಲತಾ, ಶ್ರೀ ಆಂಜನೇಯ ಹಾಗೂ ಶ್ರೀಮತಿ ಶಾಂತಮ್ಮ ರವರು ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ ಜ್ಞಾನದೀಪ ಪೂರ್ವ ಪ್ರಾಥಮಿಕ ಶಾಖೆಗಳಾದ ಚನ್ನಗಿರಿ, ಭದ್ರಾವತಿ ಶಿವಮೊಗ್ಗ ಕೈಮರ ಹಾಗೂ ಗುರುಪುರದ ಶಾಲೆಗಳಲ್ಲಿನ 194 ಬನ್ನೀಸ್ ಮತ್ತು ಟ್ಯಾಮ್ ಟೋಲ, ಜ್ಞಾನದೀಪ ಶಾಲೆಯ 60 ಕಬ್ಸ್ ಮತ್ತು 40 ಬುಲ್ ಬುಲ್ಸ್, 48 ಸ್ಕೌಟ್ಸ್ ಮತ್ತು 58 ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಲಿಕಾ ಅನುಭವಗಳನ್ನು ಪಡೆದುಕೊಂಡರು.

ಶಾಲೆಯ ಸ್ಕೌಟ್ ಮಾಸ್ಟರ್ ಶ್ರೀ ಶ್ರೀಕಾಂತ್ ಗೋಸಾವಿಯವರು ನಿರೂಪಿಸಿ, ಕಬ್ ಮಾಸ್ಟರ್ ದಿನೇಶ್ ಸಿಂಗ್ ವಂದಿಸಿದರು

Sri Sri Sri Dr.Nirmalanandanatha Maha Swamiji ಪೋಷಕರು ,ಮಕ್ಕಳ ಅಭಿರುಚಿಯನ್ನ ಪ್ರೋತ್ಸಾಹಿಸಬೇಕು- ಶ್ರೀನಾದಮಯಾನಂದನಾಥ ಶ್ರೀ.

0

Sri Sri Sri Dr.Nirmalanandanatha Maha Swamiji “ಮಗು ಮೊದಲು ತನ್ನಲ್ಲಿ ತಾನು ಆತ್ಮವಿಶ್ವಾಸ ಮೂಡಿಸಿಕೊಳ್ಳುವುದು ಅವಶ್ಯಕ – ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಕಿವಿ ಮಾತು.”
ಶಿವಮೊಗ್ಗ,ಫೆ,07: ಮಗು ಮೊದಲು ತನ್ನಲ್ಲಿ ತಾನು ಆತ್ಮವಿಶ್ವಾಸ ಮೂಡಿಸಿಕೊಳ್ಳುವುದು ಅತ್ಯಾವಶ್ಯಕ. ತನ್ನ ಕಲಿಕೆ ತನ್ನ ಏಳಿಗೆ ಎಂಬ ಅರಿವು ಮೂಡಿದರೆ ಕಲಿಕೆಯ ಶ್ರಮ ಸಾರ್ಥಕವಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಶಾಖಾಮಠದ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಅವರು ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಶಾಲೆಯ ಸಭಾಂಗಣದಲ್ಲಿ ಪ್ರೌಢ ಶಾಲೆಯ ವಿಭಾಗದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು
ಪರೀಕ್ಷೆಯ ಅಂಕಗಳಿಕೆಯೇ ಜೀವನವಲ್ಲ, ವ್ಯಾಸಂಗದ ಮೂಲಕ ಬದುಕಿನ ಪ್ರತಿ ಗಳಿಕೆಯನ್ನು ಪ್ರಜ್ಞಾಪೂರ್ವಕವಾಗಿ ಕಳೆಯಬೇಕು. ಮೊದಲು ನಮಗೆ ನಾವು ಬೆಳಕಾಗಬೇಕು, ನಮ್ಮ ಬದುಕು ಬೆಳಗುತ್ತಿದ್ದರೆ, ಬೇರೆಯವರಿಗೆ ಬೆಳಕು ಸಿಗುತ್ತದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೇ ರೀತಿಯ ಗ್ರಹಿಕ ಶಕ್ತಿ ಹಾಗೂ ಸಾಮರ್ಥ್ಯ ಇರಲು ಸಾಧ್ಯವಿಲ್ಲ.ಹಾಗಾಗಿ ಪೋಷಕರು ಮಕ್ಕಳ ಅಭಿರುಚಿಗೆ ತಕ್ಕ ಪ್ರೋತ್ಸಾಹ ನೀಡಿದರೆ ಅವರು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ, ಖ್ಯಾತ ಮನೋವೈದ್ಯರು ಹಾಗೂ ಕೌನ್ಸೆಲರ್ ಆಗಿರುವ ಡಾ. ಐಶ್ವರ್ಯ ವಿ .ಎಚ್. ವಿದ್ಯಾರ್ಥಿಗಳನ್ನು ಕುರಿತು ಮಾತನಾಡುತ್ತಾ,
Sri Sri Sri Dr.Nirmalanandanatha Maha Swamiji ಪರೀಕ್ಷೆಗೆ ಕೆಲವೇ ದಿನಗಳು ಇರುವ ಈ ಸಂದರ್ಭದಲ್ಲಿ ಪ್ರತಿ ನಿಮಿಷವನ್ನೂ ಕೂಡ ವ್ಯಯಮಾಡದೇ ಸದುಪಯೋಗ ಪಡಿಸಿಕೊಂಡು ಅಭ್ಯಾಸ ಮಾಡಿದ್ದೇ ಆದರೆ ಪರೀಕ್ಷೆಯಲ್ಲಿ ನಿಮ್ಮ ನಿರೀಕ್ಷೆಯ ಗೋಲನ್ನು ಮುಟ್ಟಲು ಸಾಧ್ಯವಾಗುತ್ತದೆ ಎಂದರು.
ತಾನು ಓದಲು ಕೂರುವ ಸ್ಥಳದಲ್ಲಿ ವೇಳಾ ಪಟ್ಟಿ, ದಿನಚರಿಯ ಪಟ್ಟಿಯನ್ನು ಸದಾ ಕಣ್ಣಿಗೆ ಕಾಣುವಂತೆ ಇರಿಸಿಕೊಳ್ಳಬೇಕು. ತರಗತಿಯಲ್ಲಿ ತನಗಿಂತ ಹೆಚ್ಚು ಅಂಕ ಪಡೆದ ಸಹಪಾಠಿಯನ್ನು ಕಂಡು ಅಸೂಯೆ ಪಡದೆ ಅವನ ಓದಿನ ವಿಧಾನವನ್ನು ಅರಿತು ತಾನೂ ಅದನ್ನು ಕ್ರಮೇಣ ಅಳವಡಿಸಿಕೊಳ್ಳಬಹುದು.ಓದುವಾಗ ಏಕಾಗ್ರತೆ ಹೆಚ್ಚಲು ತನಗೆ ತಾನೆ ಸಕಾರತ್ಮಾಕವಾದ ಅಂಶಗಳನ್ನು ಹೇಳಿಕೊಂಡು ಓದಲು ಕೂರುವ ಮುನ್ನ ಎಲ್ಲವನ್ನು ಬಳೆಯಲ್ಲಿರಿಸಿಕೊಂಡು ಒಂದೆಡೆ ಏಕಾಗ್ರತೆಯಿಂದ ಕೂತು ಕಲಿಯಲು ಪ್ರಯತ್ನಿಸಬೇಕು. 10 ನಿಮಿಷಗಳ ನಂತರ ಪುಸ್ತಕವನ್ನು ಮುಚ್ಚಿ ಅಲ್ಲಿಯವರೆಗೆ ಓದಿದ್ದನ್ನು ಮರುಕಳಿಸಬೇಕು.
ನಿಮ್ಮ ಜೀವನದಲ್ಲಿ ನಿಮಗೆ ತಂದೆ-ತಾಯಿಗಳೇ ಶಕ್ತಿ ಮತ್ತು ಆಸರೆ ಹಾಗಾಗಿ ನಿಮ್ಮ ಈ ಒಂದು ಎರಡು ವರ್ಷ ಮೊಬೈಲ್,ರೀಲ್ಸ್, ಫೇಸ್ಬುಕ್,ಇನ್ಸ್ಟಾಗ್ರಾಮ್ ಸಾಮಾಜಿಕ ಜಾಲತಾಣಗಳಿಂದ ದೂರ ಇದ್ದರೆ ನಿಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಠ ಮಾಡುವುದು ಒಂದು ಕಲೆ, ಯಾವುದೋ ಒಂದು ಪರೀಕ್ಷೆಯಲ್ಲಿ ಮಗು ಶೂನ್ಯ ಅಂಕವನ್ನು ಪಡೆಯಿತು ಎಂದರೆ ಅದರ ಭವಿಷ್ಯವೇ ಮುಗಿದಂತೆ ಅಲ್ಲ. ಇದನ್ನು ಅರ್ಥ ಮಾಡಿಕೊಂಡು ಶಿಕ್ಷಕರು ಮಗುವನ್ನು ಹುರಿದುಂಬಿಸುವಂತಹ ಕಾರ್ಯವನ್ನು ಮಾಡಬೇಕು.ಪ್ರತಿಯೊಂದು ಮಗುವಿನಲ್ಲಿಯೂ ಕೂಡ ಅದರದ್ದೇ ಆದ ಜ್ಞಾನ ಮಟ್ಟವಿರುತ್ತದೆ. ಅದನ್ನು ಪುನಶ್ಚೇತನಗೊಳಿಸುವ ಕಾರ್ಯ ನಿಮ್ಮದಾಗಿರುತ್ತದೆ ಎಂದು ಶಿಕ್ಷಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್.ಹೆಚ್, ಮತ್ತು ಗಣ್ಯರು ಹಾಗೂ ವಿದ್ಯಾರ್ಥಿಗಳು,ಪೋಷಕರು ಉಪಸ್ಥಿತರಿದ್ದರು.

Rotary Club Shimoga ಪ್ರತಿಯೊಬ್ಬರೂ ಸಮಾಜಮುಖಿ ಮನೋಭಾವ ಬೆಳೆಸಿಕೊಳ್ಳಬೇಕು- ಪ್ರಭಂಜನ.

0

Rotary Club Shimoga ಶಾಲೆ, ಮನೆಗಳಲ್ಲಿ ಮಕ್ಕಳಿಗೆ ಸಂಸ್ಕಾರ, ನೈತಿಕ ಮತ್ತು ಮೌಲ್ಯಗಳನ್ನು ಕಲಿಸಬೇಕು ಎಂದು ಮೈಸೂರು ವಿವೇಕವಂಶಿ ಫೌಂಡೇಷನ್ ಸಂಯೋಜಕ, ಯುವ ವಾಗ್ಮಿ ಪ್ರಭಂಜನ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಸಮಾಜಮುಖಿ ಮನೋಭಾವ ಬೆಳೆಸಿಕೊಳ್ಳಬೇಕು. ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ತ್ಯಾಗ ಮತ್ತು ಸೇವೆಯು ಜೀವನದಲ್ಲಿ ಸಾರ್ಥಕ ಭಾವ ಮೂಡಿಸುತ್ತದೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದರ ವಾಣಿಯಂತೆ ಪ್ರತಿಯೊಬ್ಬ ಮನುಷ್ಯ ಸಮಾಜ ಮತ್ತು ದೇಶದ ಒಳಿತಿಗೆ ಯೋಚಿಸಬೇಕು. ತ್ಯಾಗ, ನೈತಿಕತೆ ಮತ್ತು ಸೇವಾ ಮನೋಭಾವ ಮನುಷ್ಯನಲ್ಲಿ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುತ್ತದೆ. ಮಕ್ಕಳಲ್ಲಿ ಬಾಲ್ಯದಿಂದಲೇ ಇನ್ನೊಬ್ಬರಿಗೆ ನೆರವು ಒದಗಿಸುವ ಗುಣ ಬೆಳೆಸಬೇಕು ಎಂದು ಹೇಳಿದರು.

Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ಕೂಡ ಜೀವನದಲ್ಲಿ ಸಂಸ್ಕಾರಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಆದರ್ಶವಾಗಿರಬೇಕು. ಹಿರಿಯರು ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಸಂಸ್ಥೆಯು ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ವಿಶೇಷ ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಆಗುತ್ತಿದೆ ಎಂದು ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಧನಂಜಯ, ನಿಯೋಜಿತ ಗವರ್ನರ್ ವಸಂತ್ ಹೋಬಳಿದಾರ್, ನಿಯೋಜಿತ ವಲಯ ಸೇನಾನಿ ಮಹೇಶ್ ಎ.ಒ., ಶ್ರೀಕಾಂತ್, ಪರಮೇಶ್ವರ್ ಶಿಗ್ಗಾವ್, ಚಂದ್ರಹಾಸ ರಾಯ್ಕರ್, ನಿಯೋಜಿತ ಅಧ್ಯಕ್ಷ ಡಿ.ಕೆ.ಶೇಷಗಿರಿ, ರಮೇಶ ಭಟ್, ಸೂರ್ಯನಾರಾಯಣ ಎಚ್.ಎಸ್., ಗಂಗಪ್ಪ.ಬಿ., ವೀಣಾ ಕಿಶೋರ್, ಗಣೇಶ್ ಹಾಗೂ ರೋಟರಿ ಸದಸ್ಯರು ಉಪಸ್ಥಿತರಿದ್ದರು.

Beluru Ramamurthy ಇಂದು‌ ಮಾನವೀಯ ಮೌಲ್ಯಗಳು ಅತ್ಯಂತ ಆವಶ್ಯಕವಾಗಿವೆ- ಬೇಲೂರು ರಾಮ ಮೂರ್ತಿ.

0

Beluru Ramamurthy ವಿದ್ಯಾರ್ಜನೆಗೆ ಬಂದಿರುವ ಮಕ್ಕಳು ಕಲಿಕೆ ಜೊತೆಗೆ ಕೆಲವು ಗುಣಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ತಮ್ಮ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಕುವೆಂಪು ಹಾಗೂ ರನ್ನ ಪ್ರಶಸ್ತಿ ಪುರಸ್ಕೃತರಾದ ಬೇಲೂರು ರಾಮಮೂರ್ತಿ ಅಭಿಮತ ವ್ಯಕ್ತಪಡಿಸಿದರು . ಅವರು ಸಹ್ಯಾದ್ರಿ ಲಲಿತಕಲಾ ಅಕಾಡೆಮಿ ವತಿಯಿಂದ ಕೀರ್ತಿನಗರದ ವನಿತಾ ವಿದ್ಯಾಲಯದಲ್ಲಿ ನಡೆದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಹಾಗೂ ಸಂಸ್ಕಾರದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಅವರು ಮುಂದುವರೆದು ಮಾತನಾಡಿ
ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಅತ್ಯಂತ ಅವಶ್ಯಕ ಎಂದು ಪ್ರತಿಪಾದಿಸಿದರು. ಜೊತೆಗೆ ಹಾಸ್ಯ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಜೀವನ ಆಕರ್ಷಕವಾಗಿ ಕಾಣುತ್ತದೆ ಎಂದು ನುಡಿದರು. ಹಠ ಮತ್ತು ಛಲ ಇವೆರಡರ ಬಗ್ಗೆ ಸಾಕಷ್ಟು ವ್ಯತ್ಯಾಸ ಇದೆ ಎಂದು ಸೋದಾಹರಣೆಯಾಗಿ ಮನವರಿಕೆ ಮಾಡಿಕೊಟ್ಟರು. ಸ್ನೇಹ, ಸದ್ಭಾವನೆ ಬೆಳೆಸುವ ವಿದ್ಯೆ ಇಂದಿನ ಅವಶ್ಯಕತೆ ಎಂದು ತಿಳಿಸಿದರು.
Beluru Ramamurthy ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೊ.ವಿಜಯಕುಮಾರ್ ಮಾತನಾಡಿ ಜೀವನ ಕೌಶಲ್ಯ ಬೆಳೆಸಿಕೊಂಡು, ಓದಿನಲ್ಲಿ ಆಸಕ್ತಿ ಹೊಂದಿರಬೇಕೆಂದು ತಂತ್ರಜ್ಞಾನ ಮುಂದುವರೆದ ಹಾಗೆ ಮಕ್ಕಳಲ್ಲಿ ಸಂಸ್ಕಾರ ಹಾಗೂ ಮಾನವೀಯ ಗುಣಗಳು ಕಡಿಮೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ್ದರು
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷೆ ತಾರಾಪ್ರಸಾದ್ ಮಾತನಾಡಿ ನಮ್ಮ ಅಕಾಡೆಮಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ರಾಮ್ ಸುಬ್ರಾಯ ಶೇಟ್, ಹಾಲೇಶ್ ಮತ್ತು ಹರಿಪ್ರಸಾದ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ರುಕ್ಮಿಣಿ ಆನಂದ್ ವಂದನಾರ್ಪಣೆ ನಡೆಸಿಕೊಟ್ಟರು.
ಪುಟ್ಟಮ್ಮ ಶಿವಾನಿ ಯವರು ಕಾರ್ಯಕ್ರಮ ನಿರೂಪಿಸಿದರು.

ಪ್ರಾರಂಭದಲ್ಲಿ ಅಶ್ವತ್ ಅವರಿಂದ ಪ್ರಾರ್ಥನೆ, ಆರತಿ ತಿವಾರಿಯವರಿಂದ ಸ್ವಾಗತ ನಡೆಯಿತು.
ಎಂ. ಎನ್.ಸುಂದರ್ ರಾಜ್ ಕಾರ್ಯಕ್ರಮದ ಉದ್ಘಾಟನೆ ಮಾಡಿದರು

Sagara Marikamba Jatre 2026 ಸಾಗರ ಜಾತ್ರೆಯಲ್ಲಿ ಮಿಂಚಿದ ಸಿನಿಮಾ ತಾರೆಯರಾದ ಧ್ರುವ ಸರ್ಜಾ ಮತ್ತು ರಚಿತಾ ರಾಂ.

0

Sagara Marikamba Jatre 2026 ಪ್ರಸಿದ್ಧ ಐತಿಹಾಸಿಕ ಸಾಗರದ ಮಾರಿಕಾಂಬ ಜಾತ್ರೆ ಗೆ
ಕಳೆದ ದಿನ ಸಂಜೆ ಖ್ಯಾತ ಸಿನಿಮಾ ನಟ ಧ್ರುವಾ ಸರ್ಜಾ ಹಾಗೂ ನಟಿ ರಚಿತಾ ರಾಮ್ ಆಗಮಿಸಿ ದೇವಿಯ ದರ್ಶನ ಪಡೆದರು.

ನಾಲ್ಕನೆಯ ದಿನದ ಜಾತ್ರೆಯಲ್ಲಿ ಈ‌ ಕಲಾವಿದರು ಅತ್ಯಂತ ಭಕ್ತಿಯಿಂದ ಪಾಲ್ಗೊಂಡರು.
ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದರು.

ಧ್ರುವಸರ್ಜಾ ಹಾಗೂ ನಟಿ ರಚಿತಾ ರಾಮ್ ಅವರು ತಮ್ಮ ಅಭಿಮಾನಿಗಳಿಗೆ
ಕೈಬೀಸಿ ಸಂತೋಷ ವ್ಯಕ್ತಪಡಿಸಿದರು.

Shimoga APMC ಫೆಬ್ರವರಿ 28 ರೊಳಗೆ ವರ್ತಕರ ಪರವಾನಗಿ ನವೀಕರಿಸಲು ಸೂಚನೆ

0

Shimoga APMC ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 2016 ರಿಂದ 2026 ನೇ ಸಾಲಿಗೆ ಲೈಸೆನ್ಸ್ ಪಡೆದ ವರ್ತಕರ ಪರವಾನಿಗೆ ಅವಧಿಯು 2026 ರ ಮಾರ್ಚ್ 31 ರಂದು ಮುಕ್ತಾಯಗೊಳಲ್ಲಿದ್ದು, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ 1966 ರ ಕಲಂ 72 ಮತ್ತು ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ನಿಯಮಾವಳಿ 1968 ರ ನಿಯಮ 76(ಎ) ಲೈಸೆನ್ಸ್ ನವೀಕರಿಸಲು ಇಚ್ಛಿಸುವ ಪೇಟೆಕಾರ್ಯಕರ್ತರು ನಿಗಧಿತ ಲೈಸೆನ್ಸ್ ಫಾರಂನ್ನು ಭರ್ತಿ ಮಾಡಿ, ನಿಗಧಿತ Shimoga APMC ಶುಲ್ಕ ಪಾವತಿಸಿ, ಅವಶ್ಯಕ ದಾಖಲೆಗಳೊಂದಿಗೆ ಫೆ. 28 ರೊಳಗಾಗಿ ಕಾರ್ಯದರ್ಶಿ, ಎಪಿಎಂಸಿ, ಶಿವಮೊಗ್ಗ ಮತ್ತು ಉಪ/ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಶಿವಮೊಗ್ಗ ಇವರಿಗೆ ಸಲ್ಲಿಸುವುದು. ಫೆ. 28 ರ ನಂತರ ಲೈಸೆನ್ಸ್ ಗಳನ್ನು ನವೀಕರಿಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ನಿಗಧಿತ ಅವಧಿಯೊಳಗೆ ಅರ್ಜಿ ಸಲ್ಲಿಸುವುದು, ತಪ್ಪಿದಲ್ಲಿ ವರ್ತಕರೇ ಹೊಣೆಗಾರರಾಗಿರುತ್ತೀರಿ ಹಾಗೂ ಸಮಿತಿಯಿಂದ ನಿಯಮಾನುಸಾರ ಕಾನೂನಾತ್ಮಕ ಕ್ರಮಗೊಳ್ಳಲಾಗುವುದು ಎಂದು ಕೃಷಿ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಮಯದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ

Coop Societies Karnataka. ಸೌಹಾರ್ದ ಸಹಕಾರಿ ಸಂಘಗಳ ಸಮಾಪನೆಗೆ ಕ್ರಮ: ಆಕ್ಷೇಪಣೆಗಳಿಗೆ

0

Coop Societies Karnataka. ಶಿವಮೊಗ್ಗ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ, ಶಿವಮೊಗ್ಗ ಉಪವಿಭಾಗವು ಶಿವಮೊಗ್ಗ ತಾಲೂಕಿನಲ್ಲಿ ಸ್ಥಗಿತಗೊಂಡಿದ್ದ ಅಬ್ಬಲಗೆರೆಯ ಹಿತೈಷಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿ., ಶಿವಮೊಗ್ಗ ನಗರದ ಗಾಂಧಿಬಜಾರ್ ಎಲೆರೇವಣ್ಣನ ಬೀದಿ, 4ನೇ ತಿರುವಿನಲ್ಲಿರುವ ಸಾನಿಧ್ಯ ಮಹಿಳಾ ಪತ್ತಿನ ಸೌಹಾರ್ದ ಸಹಕಾರ ನಿ., ವಿನೋಬನಗರ 60 ಅಡಿ ರಸ್ತೆ, ಎಪಿಎಂಸಿ ಹತ್ತಿರ ಸಪ್ನ ಬಿಲ್ಡಿಂಗ್‌ನಲ್ಲಿರುವ ಪ್ರಗತಿ ಸಿಟಿ ಸೌಹಾರ್ದ ಸಹಕಾರಿ ನಿ., ಸವಳಂಗ ರಸ್ತೆ, ವೆಂಕಟಪುರದ 2ನೇ ತಿರುವು, ಶ್ರೀನಿವಾಸ ನಿಲಯದ ಶಿವಮೊಗ್ಗ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ ಲಿ., ಈ 4 ಸೌಹಾರ್ದ ಸಹಕಾರಿ ಸಂಘಗಳನ್ನು ಸಮಾಪನೆ ಮಾಡಲು ಕ್ರಮಕೈಗೊಂಡಿದೆ.
Coop Societies Karnataka. ಈ ಬಗ್ಗೆ ಸಹಕಾರ ಸಂಘಗಳಿಂದ ಅಕ್ಷೇಪಣೆಗಳಿದ್ದಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಫೆ. 24 ರೊಳಗಾಗಿ ಸಲ್ಲಿಸುವಂತೆ ಶಿವಮೊಗ್ಗ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.