Tuesday, May 5, 2026
Tuesday, May 5, 2026
Home Blog Page 1973

ಮನೆ ಮನೆಗೂ ಲಸಿಕೆ ವಿತರಣೆ

0

ಪ್ರಸ್ತುತ ಮನೆ ಮನೆಗೂ ತೆರಳಿ ಕೋವಿಡ್ ಲಸಿಕೆ ನೀಡುವ ಅಭಿಯಾನದ ಅಗತ್ಯವಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ದೇಶದಲ್ಲಿ ಲಸಿಕೆ ನೀಡಿಕೆಯಲ್ಲಿ ಹಿಂದುಳಿದಿರುವ 45 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.
ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಿಸಲು ವಿವಿಧ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಈವರೆಗೆ ಒಂದೂ ಲಸಿಕೆಯನ್ನು ತೆಗೆದುಕೊಳ್ಳದವರಿಗೆ ಮೊದಲ ಆದ್ಯತೆ ನೀಡಬೇಕು. ಅದರೊಂದಿಗೆ ಎರಡನೆಯ ಲಸಿಕೆ ಪಡೆಯಬೇಕಿರುವ ಜನರ ಕಡೆಯೂ ಅಷ್ಟೇ ಗಮನ ನೀಡಬೇಕು ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ
ಆರೋಗ್ಯ ಸಂಸ್ಥೆಯು ಭಾರತ್ ಬಯೋಟಿಕ್ ಕಂಪನಿಯ ಕೊವ್ಯಾಕ್ಸಿನ್ ಲಸಿಕೆ ತುರ್ತುಬಳಕೆಗೆ ಅನುಮತಿ ನೀಡಿದೆ. ಇದು ಭಾರತವು ಹೆಮ್ಮೆ ಪಡುವ ಸಂಗತಿಯಾಗಿದೆ.

ಪೆಟ್ರೋಲ್ – ಡಿಸೆಲ್ ದರ ಕಡಿತ

0

ಶತಕದ ಗಡಿ ದಾಟಿದ ಪೆಟ್ರೋಲ್ ಡೀಸೆಲ್ ದರದಿಂದ ಬೇಸರಗೊಂಡಿದ್ದ ಜನತೆಗೆ ಕೇಂದ್ರ ಸರ್ಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ರೂ.10 ಹಾಗೂ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂಪಾಯಿಗೆ ಕಡತಗೊಳಿಸಿದೆ.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರವೂ ಡೀಸೆಲ್ ಮತ್ತು ಪೆಟ್ರೋಲ್ ಮೇಲಿನ ತೆರಿಗೆಯನ್ನು ತಲಾ ಏಳು ರೂಪಾಯಿಯವರೆಗೆ ಕಡತ ಗೊಳಿಸಿದೆ.
ಕೇಂದ್ರ ಸರಕಾರ ಡಿಸೇಲ್ ಮೇಲೆ 10 ರೂಪಾಯಿ ಹಾಗೂ ಪೆಟ್ರೋಲ್ ಮೇಲೆ ಐದು ರೂಪಾಯಿ ಕಡಿಮೆಗೊಳಿಸಿದ್ದು, ಸ್ವಾಗತಾರ್ಹ. ಕರ್ನಾಟಕ ಸರ್ಕಾರವು ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ತಲೆ ಹೇಳಿ ರೂಪಾಯಿ ಕಡಿಮೆಗೊಳಿಸಲು ನಿರ್ಧರಿಸಿದೆ. ಇದರಿಂದಾಗಿ ಸರ್ಕಾರಕ್ಕೆ 2,100 ಕೋಟಿ ರೂಪಾಯಿ ಹೊರೆಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ದೇಶದ ರೈತರು ತಮ್ಮ ಶ್ರಮದ ಮೂಲಕ ಆರ್ಥಿಕ ಪ್ರಗತಿಯ ಗತಿಯನ್ನು ಕಾಪಾಡಿಕೊಂಡಿದ್ದರು. ಡೀಸೆಲ್ ಮೇಲಿನ ಎಕ್ಸೈಟ್ ಸುಂಕವನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸಿರುವುದು ಮುಂಬರುವ ಬಿತ್ತನೆ ಸಮಯದಲ್ಲಿ ಅವರಿಗೆ ಉತ್ತೇಜನ ನೀಡಲಿದೆ ಎಂದು ಕೇಂದ್ರವು ಹೇಳಿದೆ.
ಎಕ್ಸೈಸ್ ಸುಂಕ ಇಳಿಕೆ ತೀರ್ಮಾನವು ಹಬ್ಬದ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿಸಲು ನೆರವಾಗಲಿದೆ. ಹಣದುಬ್ಬರದ ಒತ್ತಡವನ್ನು ತಗ್ಗಿಸಲಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಜನರ ಓಡಾಟ ಹೆಚ್ಚಲಿದ್ದು, ಇದು ಕೇಂದ್ರದ ವರಮಾನ ನಷ್ಟದ ಪ್ರಮಾಣವನ್ನು ತಗ್ಗಿಸಲಿದೆ ಎಂದು ಐಸಿಆರ್ ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅಧಿತಿ ನಾಯರ್ ಹೇಳಿದ್ದಾರೆ.

ಮಿಥೇನ್ ಹೊರಸೂಸುವಿಕೆಗೆ ತಡೆ ; ಗ್ಲಾಸ್ಗೊ ಸಮಾವೇಶ

0

ಹವಾಮಾನ ಬದಲಾವಣೆಗೆ ಕಾರಣವಾಗುವ ಹಸಿರುಮನೆ ಅನಿಲ ಮಿಥೇನ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಗ್ಲಾಸ್ಗೊದಲ್ಲಿ ನಡೆದ ಹವಾಮಾನ ವೈಪರಿತ್ಯ ತಡೆ ಸಮಾವೇಶದಲ್ಲಿ ಹಲವು ನಾಯಕರು ಪ್ರತಿಜ್ಞೆ ಮಾಡಿದ್ದಾರೆ.

ಮಿಥೇನ್ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಅಮೆರಿಕ ಹಾಗೂ ಐರೋಪ್ಯ ನೇತೃತ್ವದ ನಿರ್ಧಾರವನ್ನು ನೂರು ದೇಶಗಳು ಬೆಂಬಲಿಸಿವೆ. 2030ರ ವೇಳೆಗೆ ಶೇಕಡ 30ರಷ್ಟು ಮಿಥೇನ್ ಕಡಿತಗೊಳಿಸುವುದಾಗಿ ದೇಶಗಳು ಒಪ್ಪಿಕೊಂಡಿವೆ ಎಂದು ಅಮೆರಿಕ ಸರ್ಕಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಿಥೇನ್ ನಾವು ವೇಗವಾಗಿ ಕಡಿತಗೊಳಿಸಬಹುದುದಾದ ಅನಿಲಗಳಲ್ಲಿ ಒಂದಾಗಿದೆ. ಇದರಿಂದ ಹವಾಮಾನ ಬದಲಾವಣೆ ತಕ್ಷಣವೇ ನಿಧಾನಗೊಳ್ಳುತ್ತದೆ ಎಂದು ಐರೋಪ್ಯ ಆಯೋಗದ ಅಧ್ಯಕ್ಷರಾದ ಉರ್ಸುಲಾವಾನ್ ಡೇರ್ ಲೇಯೆನ್ ಹೇಳಿದ್ದಾರೆ.

ನಮ್ಮ ಮಿಥೇನ್ ನ್ನು ಶೇ.30ರಷ್ಟು ಕಡಿಮೆಗೊಳಿಸಲು ಬದ್ಧರಾಗಿದ್ದೇವೆ. ನಾವು ಬಹುಷಃ ಅದನ್ನು ಮೀರಿ ಸಾಧಿಸಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೊಬೈಡನ್ ಹೇಳಿದ್ದಾರೆ. ಹಸುಗಳ ಜೀರ್ಣಾಂಗ ವ್ಯವಸ್ಥೆ,ಭೂ ತ್ಯಾಜ್ಯ ಮತ್ತು ತೈಲ ಅನಿಲ ಉತ್ಪಾದನೆಯಲ್ಲಿ ಮಿಥೇನ್ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಜಾಗತಿಕ ಮಿಥೇನ್ ಹೊರಸೂಸುವ 5 ದೇಶಗಳಲ್ಲಿ ಬ್ರೆಜಿಲ್ ಪ್ರಮುಖವಾಗಿದೆ. ಚೀನಾ,ರಷ್ಯಾ, ಮತ್ತು ಭಾರತ ಇನ್ನೂ ಇದಕ್ಕೆ ಸಹಿ ಮಾಡಿಲ್ಲ. ಹಾಗೂ ಈ ಘೋಷಣೆಯನ್ನು ಬೆಂಬಲಿಸುವುದಿಲ್ಲ ಎಂದು ಆಸ್ಟ್ರೇಲಿಯಾ ಹೇಳಿದೆ.
ಈ ದಶಕದಲ್ಲಿ ಮಿಥೇನ್ ಹೊರಸುಸುವಿಕೆಯನ್ನು ಕಡಿತ ಗೊಳಿಸುವುದರಿಂದ 2040ರ ವೇಳೆಗೆ ಸುಮಾರು 0.3 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವನ್ನು ಕಡಿತ ಮಾಡಬಹುದು ಎಂದು ವಿಶ್ವಸಂಸ್ಥೆ ಮೇ ತಿಂಗಳಲ್ಲಿ ವರದಿ ಸಲ್ಲಿಸಿದೆ.

100 ಕ್ಕೂ ಹೆಚ್ಚು ದೇಶಗಳು ಶೇ.30 ರಷ್ಟು ಮಿಥೇನ್ ಹೊರಸೂಸುವಿಕೆಯನ್ನು ಕಡಿತಗೊಳಿಸಲು ಸಂಘಟಿತ ಪ್ರಯತ್ನ ಮಾಡಲಿವೆ ಎಂದು ವರದಿಯಾಗಿದೆ.

ಆಯುರ್ವೇದ ವಿವಿ : ಶೀಘ್ರ ಕ್ರಮ

0

ಶಿವಮೊಗ್ಗ ನಗರದಲ್ಲಿ ಆಯುರ್ವೇದ ವೈದ್ಯಕೀಯ ವಿಶ್ವವಿದ್ಯಾಲಯವನ್ನು ಶೀಘ್ರದಲ್ಲೇ ಸ್ಥಾಪಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ನಗರದ ಜಿಲ್ಲಾ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ 6ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು.
ಆಯುರ್ವೇದ ಕಾಲೇಜು ದೇವರಿಲ್ಲದ ದೇವಸ್ಥಾನ ಆಗಬಾರದು. ಹಿಂದೆ ಡಿ.ಎಚ್. ಶಂಕರಮೂರ್ತಿ, ಕೆ.ಎಸ್. ಈಶ್ವರಪ್ಪ ಅವರ ಪ್ರಯತ್ನದ ಫಲವಾಗಿ ಆಯುರ್ವೇದ ಕಾಲೇಜು ಆರಂಭವಾಗಿದೆ. ಯಡಿಯೂರಪ್ಪ ಅವರು ರಾಜ್ಯದ 105 ಆಯುಷ್ ಕಾಲೇಜುಗಳಿಗೆ ಶಿವಮೊಗ್ಗದಲ್ಲಿ ಆಯುಷ್ ವಿಶ್ವವಿದ್ಯಾಲಯ ಆಗಬೇಕು ಎಂದು 100 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಜೊತೆಗೆ 10 ಕೋಟಿ ರೂ. ಅನುದಾನವನ್ನು ಇರಿಸಿದರು. ಅಧಿಕಾರಿಗಳು ಇದನ್ನು ಕಾರ್ಯಗತ ಮಾಡಬೇಕು. ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದರು.
“ಚಿಕಿತ್ಸೆಗೆ ಬರುವ ಸಾರ್ವಜನಿಕರಲ್ಲಿ ಆಯುಷ್ ವೈದ್ಯರು ಆಯುರ್ವೇದ ಚಿಕಿತ್ಸೆ ಬಗ್ಗೆ ವಿಶ್ವಾಸ ತುಂಬಬೇಕು. ಜನರು ಒಪ್ಪುವ ರೀತಿ ಮಾತನಾಡಬೇಕು. ಆಯುರ್ವೇದ ಔಷಧಗಳು ಪರಿಣಾಮ ಬೀರುವುದು ನಿಧಾನವಾದರೂ, ದೇಹದ ಬೇರೆ ಯಾವುದೇ ಅಂಗಾಂಗಗಳಿಗೆ ತೊಂದರೆ ಉಂಟು ಮಾಡುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಅಲೋ ಪತಿ ಔಷಧಗಳಿಗೆ ಅವಲಂಬಿತರಾಗುವುದನ್ನು ಬಿಡಬೇಕು. ಆಯುರ್ವೇದ ಔಷಧ ಪ್ರಾಧಿಕಾರ ನಿರ್ಮಾಣವಾಗಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುಕೂಲವಾಗಲಿದೆ” ಎಂದು ವಿಧಾನಪರಿಷತ್ ಸದಸ್ಯ ಎಸ್ ರುದ್ರೇಗೌಡ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಎಸ್ ಎಸ್. ಜ್ಯೋತಿಪ್ರಕಾಶ್, ಕಾಡ ಅಧ್ಯಕ್ಷೆ ಪವಿತ್ರ ರಾಮಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಈ.ಎಸ್. ಪುಷ್ಪ, ಪಾಲಿಕೆ ಸದಸ್ಯೆ ಸುವರ್ಣ ಶಂಕರ್, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್‌. ದೊಡ್ಡಮನಿ, ಡಿಎಚ್ ಒ ಡಾ. ರಾಜೇಶ್ ಸುರಗಿಹಳ್ಳಿ, ಅಂಚೆ ಇಲಾಖೆಯ ಉಪನಿರ್ದೇಶಕ ಡಾ. ಅನಿಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಟಿ -20 ಬಾಂಗ್ಲಾ ಕನಸು ಭಗ್ನ

0

ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ A – ಗುಂಪಿನ ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಪಂದ್ಯ ನಡೆಯಿತು. ಬಾಂಗ್ಲಾದೇಶದ ವಿರುದ್ಧ ದಕ್ಷಿಣ ಆಫ್ರಿಕಾ ಜಯ ಸಾಧಿಸಿದೆ.
ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ 18.2 ಓವರ್ ಗಳಲ್ಲಿ ಆಲ್ ಔಟ್ ಆಗಿ ಕೇವಲ 84 ರನ್ ಗಳನ್ನ ಗಳಿಸಿತು. 84 ರನ್ ಗಳನ್ನ ಗಳಿಸಿ ಭದ್ರ ಮಾಡಿಕೊಳ್ಳಲು ಸಾಧ್ಯವಾಗದೆ ಸೋತು ಇದು ಬಾಂಗ್ಲಾದೇಶದ ಪಾಲಿಗೆ ಸತತ 4 ನೇ ಸೋಲು ಕಂಡು ಇದರೊಂದಿಗೆ ಗುಂಪಿನ ಹಂತದಲ್ಲಿ 1 ಪಂದ್ಯ ಬಾಕಿ ಇರುವಂತೆಯೇ ಸೆಮಿಫೈನಲಿಗೆ ತೇರ್ಗಡೆಗೊಳ್ಳುವ ಅವಕಾಶ ಕಳೆದುಕೊಂಡಿತು.
84 ರನ್ ಗಳ ಗೆಲುವಿನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ದಕ್ಷಿಣ ಆಫ್ರಿಕಾ ತಂಡ ಕೇವಲ 13.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 86 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿತು. ಯನ್ರಿಚ್ ಸೋರ್ಜೆ 8 ರನ್ ಗಳಿಗೆ 3 ವಿಕೆಟ್ ತೆಗೆದುಕೊಂಡರು. ಮತ್ತು ರಬಾಡ 20 ಓವರ್ ಗಳಿಗೆ 3 ವಿಕೆಟ್ ತೆಗೆದುಕೊಂಡರು.ಇವರಿಬ್ಬರ ಜೋಡಿಯ ನೇರ ಮತ್ತು ನಿಖರ ದಾಳಿಗೆ ಬಲದಿಂದ ದಕ್ಷಿಣ ಆಫ್ರಿಕಾ ತಂಡ ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್-12 ರ ಹಂತದ ತನ್ನ 4 ನೇ ಪಂದ್ಯದಲ್ಲಿ 6 ವಿಕೆಟ್ ಗಳ ಅಂಕಗಳೊಂದಿಗೆ ಸೆಮಿಫೈನಲ್ ಹಂತದತ್ತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ.
ಆರಂಭಿಕ ಹಿನ್ನಡೆ ಹೊರತಾಗಿಯೂ ರಾಸಿ ವ್ಯಾನ್ ಡೆಲ್ ಡುಸ್ಸನ್ 22 ರನ್ ಗಳಿಸಿ ಮತ್ತು ನಾಯಕ ತೆಂಬ ಬಹುಮಾ 31 ರನ್ ಗಳನ್ನ ಗಳಿಸಿ ತಂಡದ ಸುಲಭ ಜಯಕ್ಕೆ ಕಾರಣರಾದರು.

ಕ್ಷಯ ರೋಗ ತಡೆಗೆ ಕ್ರಮ

0

ಜಿಲ್ಲೆಯ ಜನರ ಆರೋಗ್ಯ ಸಮಸ್ಯೆಗಳ ಸಕಾಲಿಕ ಪರಿಹಾರಕ್ಕೆ ಸರ್ಕಾರ ಎಲ್ಲಾ ಸಂದರ್ಭಗಳಲ್ಲಿಯೂ ಆರ್ಥಿಕ, ತಾಂತ್ರಿಕ ಹಾಗೂ ಅಗತ್ಯವಿರುವ ಎಲ್ಲಾ ರೀತಿಯ ನೆರವನ್ನು ನೀಡಿ ಸಹಕರಿಸಿದ್ದು, ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಪಕ್ಕದಲ್ಲಿ ನಿರ್ಮಿಸಿರುವ ಕ್ಷಯ ರೋಗ ಪ್ರಯೋಗಾಲಯವನ್ನು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉದ್ಘಾಟಿಸಿದರು.
ಕೋವಿಡ್ ಸೇರಿದಂತೆ ಅನೇಕ ಸಂದಿಗ್ಧ ಸಂದರ್ಭಗಳಲ್ಲಿ ಎಲ್ಲಾ ಹಂತದ ಆರೋಗ್ಯ ಇಲಾಖೆ ಸಿಬ್ಬಂಧಿಗಳು, ವೈದ್ಯಾಧಿಕಾರಿಗಳು ಮತ್ತು ತಂತ್ರಜ್ಞರ ಸಂಘಟಿತ ಪ್ರಯತ್ನದಿಂದಾಗಿ ಉತ್ತಮ ಸೇವೆ ಒದಗಿಸಲು ಸಾಧ್ಯವಾಗಿದೆ ಎಂದರು.
ಕ್ಷಯ ರೋಗ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರೋಗಿಯು ತಕ್ಷಣ ವೈದ್ಯರ ಮಾತನ್ನು ಒಪ್ಪಿ ಚಿಕಿತ್ಸೆಗೆ ಮುಂದಾಗುವುದು ಕಡಿಮೆ. ಆದ್ದರಿಂದ ವೈದ್ಯರು ರೋಗಿಯನ್ನು ವಿಶ್ವಾಸದಿಂದ ಉಪಚರಿಸಿ ಸೇವೆ ಒದಗಿಸಬೇಕು. ಈ ಹಂತದಲ್ಲಿ ವೈದ್ಯರಿಗೆ ತಾಳ್ಮೆ, ಸಮಾಧಾನ ಅಗತ್ಯ. ಇದರಿಂದಾಗಿ ನಿರೀಕ್ಷಿತ ಯೋಜನೆಯ ಅನುಷ್ಠಾನದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಷಯ ರೋಗ ಘಟಕದ ನೋಡಲ್ ಅಧಿಕಾರಿ ಡಾ.ಅನಿಲ್ ಅವರು ಮಾತನಾಡಿ, ದೇಶದಲ್ಲಿ ಸುಮಾರು 26 ಲಕ್ಷ ಮಂದಿ ಕ್ಷಯರೋಗ ಬಾಧಿತರಿದ್ದು, ಪ್ರತಿವರ್ಷ 4 ಲಕ್ಷ ಮಂದಿ ಮರಣ ಹೊಂದುತ್ತಿದ್ದಾರೆ. ಕೊರೋನದಂತಹ ಸಮಯದಲ್ಲಿ ರಾಜ್ಯದ 57000 ಮಂದಿಗೆ ಕ್ಷಯ ರೋಗ ನಿಯಂತ್ರಣಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದರು.
ವೈದ್ಯರ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಸಂಘಟಿತ ಪ್ರಯತ್ನದಿಂದಾಗಿ 5000 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಕ್ಷಯ ರೋಗ ಇನ್ನಿಲ್ಲದಂತೆ ನಿಯಂತ್ರಿಸಬಹುದಾಗಿದೆ ಎಂದ ಅವರು, ಈ ಅವಧಿಯಲ್ಲಿ ರೋಗದ ನಿಯಂತ್ರಣಕ್ಕಾಗಿ ಹಲವು ಪ್ರಯೋಗಗಳನ್ನು ನಡೆಸಲಾಗಿದೆ. ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಪ್ರಸ್ತತ 2025ಕ್ಕೆ ಕ್ಷಯ ರೋಗ ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಸಂಕಲ್ಪ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಅವರು ಮಾತನಾಡಿ, ಕ್ಷಯ ರೋಗ ಗುಣವಾಗ ಬಹುದಾದ ಕಾಯಿಲೆಯಾಗಿದ್ದು, ಬಾಧಿತರಿಗೆ ಸಕಾಲಿಕ ಸಮಾಲೋಚನೆ ಮೂಲಕ ರೋಗ ನಿಯಂತ್ರಣಕ್ಕೆ ಮುನ್ನಡಿ ಬರೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಎಂ.ಎಲ್.ವೈಶಾಲಿ, ಡಾ.ಅನಿಲ್, ಡಾ. ಸ್ಫೂರ್ತಿಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಡಾ.ರಘುನಂದನ್ ಮುಂತಾದವರು ಉಪಸ್ಥಿತರಿದ್ದರು.

ಭಾರತ ಸೈನ್ಯಕ್ಕೆ ಮತ್ತಷ್ಟು ಬಲ

0

ಎಚ್ಎಎಲ್ ನಿಂದ 12 ಲಘು ಬಹುಪಯೋಗಿ ಹೇಳೆಕ್ಯಾಪ್ಟರ್ ಗಳು ಸೇರಿದಂತೆ 7,965 ಕೋಟಿ ರೂ. ವೆಚ್ಚದಲ್ಲಿ ಮಿಲಿಟರಿ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳ ಖರೀದಿಗೆ ರಕ್ಷಣಾ ಸಚಿವಾಲಯವು ಅನುಮೋದನೆ ನೀಡಿದೆ.
12 ಹೆಲಿಕ್ಯಾಪ್ಟರ್ ಗಳ ಜೊತೆಗೆ ವಿವಿಧ ಸೇನಾ ಪರಿಕರಗಳ ಖರೀದಿಗೆ, ಲಿಂಕ್ಸ್ ಯು 2 ನೇವಲ್ ಗನ್ ಫೈರ್ ಕಂಟ್ರೋಲ್ ಸಿಸ್ಟಂಗಳ ಖರೀದಿಗೂ ಒಪ್ಪಿಗೆ ನೀಡಲಾಗಿದೆ.
ಇವು ಯುದ್ಧನೌಕೆಗಳ ಸಾಮರ್ಥ್ಯಗಳನ್ನು ಹೆಚ್ಚಿಸಲಿವೆ. ರಕ್ಷಣಾ ಖರೀದಿ ಮಂಡಳಿ ಸಭೆಯಲ್ಲಿ ಖರೀದಿ ಪ್ರಸ್ತಾವಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವಾಲಯವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
‘ಆತ್ಮ ನಿರ್ಭರ ಭಾರತ’ ಚಿಂತನೆಗೆ ಹೆಚ್ಚಿನ ಒತ್ತು ನೀಡಲು ನೌಕಾಪಡೆ ಗಾಗಿ ಜಾಗತಿಕ ಮಟ್ಟದಲ್ಲಿ ಗನ್ ಗಳ ಖರೀದಿಯನ್ನು ಕೈಬಿಡಲಾಗಿದೆ. ಈಗ ಬಿಹೆಚ್ಇಎಲ್ ಗನ್ ಮೌಂಟ್ ಗಳನ್ನು ಅಭಿವೃದ್ಧಿಪಡಿಸಲಿದೆ. ನಿರ್ದಿಷ್ಟ ಗುರಿಗೆ ಅನುಗುಣವಾಗಿ ಪ್ರಯೋಗಿಸ ಬಹುದಾದ ಇಂಥ ಗಣಗಳನ್ನು ನೌಕದಳದ ಯುದ್ಧ ಹಡಗುಗಳಿಗೆ ಅಳವಡಿಸಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.
ಈ ಎಲ್ಲಾ ಖರೀದಿ ಪ್ರಸ್ತಾವಗಳು ‘ಮೇಕ್ ಇನ್ ಇಂಡಿಯಾ’ದಡಿ ದೇಶಿಯ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಗೆ ಒತ್ತು ನೀಡಲಿದೆ ಎಂದು ಹೇಳಿಕೆ ತಿಳಿಸಿದೆ.

ಪ್ಯಾರಿಸ್ ಭೇಟಿ : ಫಲಶ್ರುತಿ

0

ಇತ್ತೀಚೆಗೆ ಇಟಲಿ ಮತ್ತು ಸ್ಕಾಟ್ಲ್ಯಾಂಡ್ ಪ್ರವಾಸ ಮುಗಿಸಿ ಬಂದ ಪ್ರಧಾನಿ ಮೋದಿ ಜಿ ಅವರು ಎರಡು ರಾಷ್ಟ್ರಗಳಲ್ಲಿ ನಡೆದ ಸಮಾವೇಶದ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ.

” ನನಗೆ ಪ್ಯಾರಿಸ್ನಲ್ಲಿ ನಡೆದ ಸಮಾವೇಶ ಕೇವಲ ಶಿಖರ ಸಮಾವೇಶವಾಗಿಲ್ಲ. ಅದು ನನಗೆ ಭಾವನಾತ್ಮಕ, ಬದ್ಧತೆಯುಳ್ಳದ್ದಾಗಿದೆ. ಅಲ್ಲಿ ನೀಡಿದ ಭರವಸೆ ಕೇವಲ ಇತರ ರಾಷ್ಟ್ರಗಳಿಗೆ ನೀಡಿದ ಹೇಳಿಕೆ ಆಗಿಲ್ಲ. ಆದರೆ ಎಲ್ಲಾ ಭರವಸೆಗಳು ಭಾರತದ 125 ಕೋಟಿ ಪ್ರಜೆಗಳು ತಮಗೆ ತಾವೇ ನೀಡಿದ ಭರವಸೆಗಳಾಗಿವೆ ಎಂದಿದ್ದಾರೆ. ಜಗತ್ತು ಇಂದು ಭಾರತದ ಬೃಹತ್ ಆರ್ಥಿಕ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿವೆ. ಇದು ಪ್ಯಾರಿಸ್ ಶೃಂಗಸಭೆಯಲ್ಲಿ ಶೃತಪಟ್ಟಿದೆ. ನಾವು ಕಠಿಣ ಪರಿಶ್ರಮ ಹಾಗೂ ನಿರ್ಧಾರಗಳಿಂದ ಉತ್ತಮ ಫಲಿತಾಂಶವನ್ನು ನೀಡಲಿದ್ದೇವೆ” ಎಂದರು.

ಆರೋಗ್ಯಕರ ಹವಾಮಾನದತ್ತ ಭಾರತದ ಚಿತ್ತ

0

“ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಮಿತಗೊಳಿಸುವ ನೆಟ್ ಝೀರೋ ಗುರಿಯನ್ನು ಭಾರತವು 2070 ತಲುಪಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯ ತಡೆ ಸಮಾವೇಶದಲ್ಲಿ ಘೋಷಿಸಿದ್ದಾರೆ.
ಅಭಿವೃದ್ಧಿಶೀಲ ದೇಶಗಳಲ್ಲಿ ಈ ಗುರಿ ಹಾಕಿಕೊಂಡ ಮೊದಲ ದೇಶ ಭಾರತ ವಾಗಿದೆ. 2015ರ ಪ್ಯಾರಿಸ್ ಶೃಂಗಸಭೆಯಲ್ಲಿ ಹಾಕಿಕೊಂಡಿದ್ದ ಗುರಿಗಳನ್ನು ಪೂರ್ಣಪ್ರಮಾಣದಲ್ಲಿ ತಲುಪುವಲ್ಲಿ ಭಾರತವು ವಿಫಲವಾಗಿದೆ.
ಹೀಗಾಗಿ ಈ ನೂತನ ಕಾರ್ಯ ಯೋಜನೆಯನ್ನು ಪ್ರಕಟಿಸಿದೆ. ಈ ಮೂಲಕ ನೆಟ್ ಜೀರೋ ಗುರಿಯನ್ನು ತಲುಪಲು ಅವಕಾಶ ಮಾಡಿಕೊಂಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
“2070ರ ವೇಳೆಗೆ ನೆಟ್ ಝಿರೋ ಸಾಧಿಸುತ್ತೇವೆ ಎಂಬುವುದು ಮಹತ್ವಕಾಂಕ್ಷಿ ಘೋಷಣೆ. ಈ ಗುರಿಯನ್ನು ತಲುಪುವುದು ಸವಾಲಿನ ಕೆಲಸ” ಎಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರೋನ್ಮೆಂಟ್ ನಿರ್ದೇಶಕಿ ಸುನಿತಾ ನಾರಾಯಣ ಅವರು ತಿಳಿಸಿದ್ದಾರೆ.
ಮೋದಿಯವರು ಈ ಗುರಿಯನ್ನು ಘೋಷಿಸುವ ಮೂಲಕ, ಅಭಿವೃದ್ಧಿ ಹೊಂದಿದ ದೇಶಗಳ ಮೇಲೆ ಮತ್ತೆ ಒತ್ತಡ ಸೃಷ್ಟಿಸಲು ಯತ್ನಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳು ಈಗ ಆರ್ಥಿಕ ನೆರವು ನೀಡಲೇಬೇಕಾದ ಒತ್ತಡದ ಪರಿಸ್ಥಿತಿಗೆ ಸಿಲುಕಲಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಗ್ಲಾಸ್ಗೋ ಸಮಾವೇಶದಲ್ಲಿ ನೇಪಾಳ ಪ್ರಧಾನಿ ಹಾಗೂ ಇಸ್ರೇಲ್ ಪ್ರಧಾನಿ ಜತೆಗೆ ಮಾತುಕತೆ ನಡೆಸಿದರು. ಗೇಟ್ಸ್ ಪ್ರತಿಷ್ಠಾನದ ಬಿಲ್ ಗೇಟ್ಸ್ ಅವರ ಜೊತೆಯೂ ಮೋದಿ ಮಾತುಕತೆ ನಡೆಸಿದರು.
2030ರ ವೇಳೆಗೆ ದೇಶದಲ್ಲಿ 450- 500 ಗಿಗಾವಾಟ್ ನಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುವುದು. 2030ರ ವೇಳೆಗೆ ರೈಲ್ವೆಯ ಇಂಗಾಲ ಹೊರಸೂಸುವಿಕೆಯನ್ನು ಶೇಕಡ ನೂರರಷ್ಟು ಕಡಿತ ಮಾಡಲಾಗುವುದು. ಇದರಿಂದ ವಾರ್ಷಿಕ 6 ಕೋಟಿ ಟನ್ ಇಂಗಾಲದ ಮಾಲಿನ್ಯ ಕಡಿಮೆಯಾಗಲಿದೆ ಎಂಬ ಘೋಷಣೆಯನ್ನು ಮೋದಿ ಮಾಡಿದರು.

‘ಪಂಪ’ನ ಬನವಾಸಿಯಲ್ಲಿ ರಾಜ್ಯೋತ್ಸವ ವೈಭವ

0

ಬನವಾಸಿ , ಉತ್ತರ ಕನ್ನಡ

ಬನವಾಸಿ ಎಂದಾಕ್ಷಣ ಕನ್ನಡಿಗರ ಕಣ್ಮನದಲ್ಲಿ ನಿಲ್ಲುವುದು ಕನ್ನಡದ ಆದಿಕವಿ ಪಂಪನ ಚಿತ್ರ. “ಆರಂಕುಸವಿಟ್ಟೊಡಂ, ನೆನೆವುದೆನ್ನ ಮನಂ ಬನವಾಸಿ ದೇಶಮಂ” ಇದು ಪಂಪನ ಕಾವ್ಯದ ಪ್ರಖ್ಯಾತ ಸಾಲು. ಬನವಾಸಿ ಕದಂಬರ ಮೂಲ ಸ್ಥಳ ಹಾಗೂ ರಾಜಧಾನಿ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಕನ್ನಡ ರಾಜ್ಯೋತ್ಸವವು ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜು ಮಕ್ಕಳು, ಕಿತ್ತೂರು ರಾಣಿ ಚೆನ್ನಮ್ಮ, ಡಾಕ್ಟರ್ ಬಿ.ಆರ್ ಅಂಬೇಡ್ಕರ್, ಒನಕೆ ಓಬವ್ವ, ಟಿಪ್ಪು ಸುಲ್ತಾನ್, ಸೇರಿದಂತೆ ಹಲವಾರು ದೇಶಭಕ್ತರ ಹಾಗೂ ಮಹಾನ್ ವ್ಯಕ್ತಿಗಳ ವೇಷಭೂಷಣ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಯಕ್ಷಗಾನ, ಡೊಳ್ಳುಕುಣಿತ ಸೇರಿದಂತೆ ಮುಂತಾದ ಮಾತುಗಳಿಂದ ಕೂಡಿದ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.