ಹವಾಮಾನ ಬದಲಾವಣೆಗೆ ಕಾರಣವಾಗುವ ಹಸಿರುಮನೆ ಅನಿಲ ಮಿಥೇನ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸಲು ಗ್ಲಾಸ್ಗೊದಲ್ಲಿ ನಡೆದ ಹವಾಮಾನ ವೈಪರಿತ್ಯ ತಡೆ ಸಮಾವೇಶದಲ್ಲಿ ಹಲವು ನಾಯಕರು ಪ್ರತಿಜ್ಞೆ ಮಾಡಿದ್ದಾರೆ.
ಮಿಥೇನ್ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಅಮೆರಿಕ ಹಾಗೂ ಐರೋಪ್ಯ ನೇತೃತ್ವದ ನಿರ್ಧಾರವನ್ನು ನೂರು ದೇಶಗಳು ಬೆಂಬಲಿಸಿವೆ. 2030ರ ವೇಳೆಗೆ ಶೇಕಡ 30ರಷ್ಟು ಮಿಥೇನ್ ಕಡಿತಗೊಳಿಸುವುದಾಗಿ ದೇಶಗಳು ಒಪ್ಪಿಕೊಂಡಿವೆ ಎಂದು ಅಮೆರಿಕ ಸರ್ಕಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಿಥೇನ್ ನಾವು ವೇಗವಾಗಿ ಕಡಿತಗೊಳಿಸಬಹುದುದಾದ ಅನಿಲಗಳಲ್ಲಿ ಒಂದಾಗಿದೆ. ಇದರಿಂದ ಹವಾಮಾನ ಬದಲಾವಣೆ ತಕ್ಷಣವೇ ನಿಧಾನಗೊಳ್ಳುತ್ತದೆ ಎಂದು ಐರೋಪ್ಯ ಆಯೋಗದ ಅಧ್ಯಕ್ಷರಾದ ಉರ್ಸುಲಾವಾನ್ ಡೇರ್ ಲೇಯೆನ್ ಹೇಳಿದ್ದಾರೆ.
ನಮ್ಮ ಮಿಥೇನ್ ನ್ನು ಶೇ.30ರಷ್ಟು ಕಡಿಮೆಗೊಳಿಸಲು ಬದ್ಧರಾಗಿದ್ದೇವೆ. ನಾವು ಬಹುಷಃ ಅದನ್ನು ಮೀರಿ ಸಾಧಿಸಲಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಜೊಬೈಡನ್ ಹೇಳಿದ್ದಾರೆ. ಹಸುಗಳ ಜೀರ್ಣಾಂಗ ವ್ಯವಸ್ಥೆ,ಭೂ ತ್ಯಾಜ್ಯ ಮತ್ತು ತೈಲ ಅನಿಲ ಉತ್ಪಾದನೆಯಲ್ಲಿ ಮಿಥೇನ್ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಜಾಗತಿಕ ಮಿಥೇನ್ ಹೊರಸೂಸುವ 5 ದೇಶಗಳಲ್ಲಿ ಬ್ರೆಜಿಲ್ ಪ್ರಮುಖವಾಗಿದೆ. ಚೀನಾ,ರಷ್ಯಾ, ಮತ್ತು ಭಾರತ ಇನ್ನೂ ಇದಕ್ಕೆ ಸಹಿ ಮಾಡಿಲ್ಲ. ಹಾಗೂ ಈ ಘೋಷಣೆಯನ್ನು ಬೆಂಬಲಿಸುವುದಿಲ್ಲ ಎಂದು ಆಸ್ಟ್ರೇಲಿಯಾ ಹೇಳಿದೆ.
ಈ ದಶಕದಲ್ಲಿ ಮಿಥೇನ್ ಹೊರಸುಸುವಿಕೆಯನ್ನು ಕಡಿತ ಗೊಳಿಸುವುದರಿಂದ 2040ರ ವೇಳೆಗೆ ಸುಮಾರು 0.3 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನವನ್ನು ಕಡಿತ ಮಾಡಬಹುದು ಎಂದು ವಿಶ್ವಸಂಸ್ಥೆ ಮೇ ತಿಂಗಳಲ್ಲಿ ವರದಿ ಸಲ್ಲಿಸಿದೆ.
100 ಕ್ಕೂ ಹೆಚ್ಚು ದೇಶಗಳು ಶೇ.30 ರಷ್ಟು ಮಿಥೇನ್ ಹೊರಸೂಸುವಿಕೆಯನ್ನು ಕಡಿತಗೊಳಿಸಲು ಸಂಘಟಿತ ಪ್ರಯತ್ನ ಮಾಡಲಿವೆ ಎಂದು ವರದಿಯಾಗಿದೆ.