Tuesday, May 5, 2026
Tuesday, May 5, 2026
Home Blog Page 1972

ಎಲ್ ಕೆಜಿ – ಯುಕೆಜಿ ಆರಂಭಕ್ಕೆ ಅನುಮತಿ ಮಾರ್ಗಸೂಚಿ

ಕನ್ನಡ ಚಿತ್ರರಂಗದ ಪ್ರಖ್ಯಾತ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ ಪ್ರತಿಷ್ಠಿತ 2021 ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಮುರುಘಾ ಶರಣರು ಮಾತನಾಡಿ ಪುನೀತ್ ಅವರು ಬಾಲನಟನಾಗಿ, ನಾಯಕನಾಗಿ, ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಅಲ್ಲದೆ ರಾಜ್ಯ ಸರ್ಕಾರದ ನಾನಾ ಯೋಜನೆಗಳ ರಾಯಭಾರಿಯಾಗಿ, ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿ ಸಮಾಜದಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂತಹ ಹೆಸರಾಂತ ನಟ ಹೃದಯಾಘಾತದಿಂದ ಕಳೆದವಾರ ನಮ್ಮನ್ನು ಆಗಲಿರುವುದು ಕೋಟ್ಯಂತರ ಅಭಿಮಾನಿಗಳಿಗೆ ನೋವನ್ನುಂಟುಮಾಡಿದೆ. ಅವರ ಕುಟುಂಬದವರು ನೋವನ್ನು ಸಹಿಸಿಕೊಳ್ಳಲು ಬಸವಾದಿ ಪ್ರಮಥರ ಆಶೀರ್ವಾದ ಸದಾ ಇರಲಿ.

ಮಾನವೀಯ ಮೌಲ್ಯಗಳನ್ನೊಳಳಗೊಂಡಿದ್ದ ಪುನೀತ್ ಅವರ ಸಾಧನೆ ದೊಡ್ಡದು. ಚಿಕ್ಕವಯಸ್ಸಿನಲ್ಲಿಯೇ ಅದ್ವಿತೀಯ ಸಾಧನೆ ಮಾಡಿ ಹೋಗಿದ್ದಾರೆ ಎಂದರು. ಹೀಗಾಗಿ ಮರಣೋತ್ತರವಾಗಿ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಮುರುಘಾಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಬ್ಬ ಜೋರು : ಬೆಳಕಿಗೆ ಮಂಕು

0

ದೀಪಾವಳಿ ಎಂದರೆ ದೀಪಗಳ ಹಬ್ಬ. ಎಲ್ಲೆಲ್ಲಿಯೂ ಪಟಾಕಿಯ ಸದ್ದು. ದೀಪಾವಳಿಯು ನರಕ ಚತುರ್ಥಿಯಿಂದ ಆರಂಭ. ಮನೆಗಳಲ್ಲಿ ನೀರು ತುಂಬುವ ಹಬ್ಬ. ಎಲ್ಲರೂ ಎಣ್ಣೆ ಸ್ನಾನ ಮಾಡುವ ಪರಿಪಾಠ. ಹಬ್ಬ ಎಂದೂ ಅರ್ಥ ಕಳೆದುಕೊಂಡಿಲ್ಲ. ಆದರೆ ಈ ಎರಡು ವರ್ಷ ಕೊರೋನಾ ಮಹಾಮಾರಿಯ ಕರಾಳ ನೆರಳಿನಿಂದ ದೀಪ ಹಚ್ಚಿದರೂ, ಸಮಾಧಾನಕ್ಕೆ ಏನೋ ಕೊರತೆ. ದೀಪಾವಳಿ ಅಮಾವಾಸ್ಯೆಯಂದು ಸಾಮಾನ್ಯವಾಗಿ ಲಕ್ಷ್ಮಿ ಪೂಜೆ ಮತ್ತು ವಾಹನ ಪೂಜೆ ನಡೆಯುತ್ತದೆ. ಶಿವಮೊಗ್ಗದ ಸಾಗರ ರಸ್ತೆಯ ಇಕ್ಕೆಲ ಬಣ್ಣಬಣ್ಣದ ಚಂಡುಹೂ, ಸೇವಂತಿಗೆ, ಬಾಳೆಕಂಬ, ಹಸಿರು ಮಾವಿನ ಎಲೆ, ಮಹಾಲಿಂಗನ ಬಳ್ಳಿ ನೋಡುಗರ ಕಣ್ತುಂಬಿಕೊಳ್ಳುತ್ತಿದ್ದವು. ಇಲ್ ನೋಡಿ, ದೀಪ ಬೆಳಗಿಸಲು ವಿವಿಧ ವಿನ್ಯಾಸದ ವರ್ಣಮಯ ಹಣತೆಗಳು ದೀಪ ಹಚ್ಚುವವರಿಗಾಗಿ ಕಾಯುತ್ತಿವೆ. ಆದರೆ ಕೊಳ್ಳುವವರೇ ವಿರಳ. ದೂರದ ಹಾನಗಲ್ ನಿಂದ ಬಂದಿರುವ ಚೆಂಡು ಹೂ ಮಾರಾಟಗಾರ ಕಣ್ಣಲ್ಲಿ ಭರ್ಜರಿ ವ್ಯಾಪಾರ ತುಂಬಿಕೊಂಡಿದ್ದರು. ಆದರೆ, ಅವರು ನಮ್ಮೊಂದಿಗೆ ಮಾತನಾಡಿ, ಇಂದಿನ ಗ್ರಾಹಕರ ಪರಿಸ್ಥಿತಿ ಮತ್ತು ಹೂವಿನ ವ್ಯಾಪಾರದ ಬಗ್ಗೆ ತಿಳಿಸಿದರು.

ಈಗಲೇ ಎಲ್ ಕೆಜಿ ಪ್ರವೇಶ: ಅನುಮತಿ ಇಲ್ಲ.

0

ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿ ಮಾರ್ಗಸೂಚಿ ಹೊರಡಿಸಿದೆ. ಕೋವಿಡ್ -19 ನಿಂದಾಗಿ ಕಳೆದ ಒಂದುವರೆ ವರ್ಷದಿಂದ ಮಕ್ಕಳು ಶಾಲೆಗಳಿಂದ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಹಂತ-ಹಂತವಾಗಿ ಶಾಲೆಗಳ ತರಗತಿಯನ್ನು ಪ್ರಾರಂಭಿಸುತ್ತಿದೆ ಈಗ ಅಂಗನವಾಡಿ ಕೇಂದ್ರಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದೆ. ಹೀಗಾಗಿ ಎಲ್ ಕೆಜಿ ಮತ್ತು ಯುಕೆಜಿ ಪೂರ್ವ ಪ್ರಾಥಮಿಕ ಶಾಲೆಗಳ ಆರಂಭಕ್ಕೆ ಸರ್ಕಾರದ ಬಳಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಮಾಂಟೆಸ್ಸರಿಗಳು ಒತ್ತಾಯಿಸಿವೆ.

ಕೋವಿಡ್ -19 ನಿಂದ ಅಂಗನವಾಡಿ ಕೇಂದ್ರಗಳು ಫಲಾನುಭವಿಗಳ ಮನೆ ಬಾಗಿಲಿಗೆ ಪೂರಕ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿತ್ತು. ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖವಾದರಿಂದ ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಆರಂಭಗೊಳಿಸಲಿದೆ.

ರಾಜ್ಯದಲ್ಲಿ ಈಗಾಗಲೇ 1ರಿಂದ 10 ತರಗತಿಯ ಆರಂಭಗೊಂಡಿವೆ. ” ಮಕ್ಕಳು ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯಲ್ಲಿ ಅಕ್ಷರಭ್ಯಾಸ, ಭಾಷಾ ಕಲಿಕೆ, ಬಣ್ಣ, ವಸ್ತುಗಳ ಆಕಾರ ಗುರುತಿಸುವುದು, ಸಂಖ್ಯೆಗಳಲ್ಲಿ ಪರಿಣಿತಿ ಹೊಂದಿದ ಬಳಿಕವಷ್ಟೇ ಪ್ರಾರ್ಥಮಿಕ ತರಗತಿಗಳಲ್ಲಿ ಉತ್ತಮವಾಗಿ ಕಲಿಯಲು ಸಾಧ್ಯ. ಪ್ರತಿವರ್ಷ ಸುಮಾರು 25 ಲಕ್ಷಕ್ಕೂ ಹೆಚ್ಚು ಮಕ್ಕಳು ಎಲ್ ಕೆಜಿ ತರಗತಿಗಳಿಗೆ ಸೇರುತ್ತಿದ್ದರು. ಆದರೆ ಲಾಕ್ಡೌನ್ ನಿಂದ ಶಾಲೆಗಳು ಮುಚ್ಚಿದ್ದ ಪರಿಣಾಮ ಪೂರ್ವ ಪ್ರಾರ್ಥಮಿಕ ಶಾಲೆಗಳಿಗೆ ಸಮರ್ಪಕವಾಗಿ ದಾಖಲಾತಿ ನಡೆದಿಲ್ಲ. ಅಂಗನವಾಡಿ ಕೇಂದ್ರದ ಮಕ್ಕಳು ಮತ್ತು ಪೂರ್ವ ಪ್ರಾಥಮಿಕ ತರಗತಿಗಳ ಮಕ್ಕಳ ವಯಸ್ಸು ಒಂದೇ ಆಗಿದೆ. ಆದ್ದರಿಂದ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳ ಆರಂಭಕ್ಕೆ ಅನುಮತಿ ನೀಡಿ” ಎಂದು ರುಪ್ಸಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಬೇಗ ಬರಲಿದೆ ಗಡಗಡ ಚಳಿ

0

ರಾಜ್ಯದ ಕೆಲವೆಡೆ ಇನ್ನೂ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನವಂಬರ್ ಮಧ್ಯದ ಬದಲಿಗೆ ಈ ತಿಂಗಳ ಅಂತ್ಯಕ್ಕೆ ಚಳಿಗಾಲ ಆರಂಭವಾಗಲಿದೆ.
ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ‌. ಇದರಿಂದ ಮಲೆನಾಡು ಮತ್ತು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ತಣ್ಣನೆಯ ಗಾಳಿ ಬೀಸುತ್ತಿದೆ. ಇದು ಚಳಿಗಾಲ ಅಲ್ಲ ಶೀತಗಾಳಿ ಎಂದು ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
ಈ ವರ್ಷ ನವೆಂಬರ್ 6ರವರೆಗೂ ಮಳೆ ಬೀಳುವ ಸಾಧ್ಯತೆ ಹೆಚ್ಚಿದೆ. ಅನಂತರ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ತಿಂಗಳ ಅಂತ್ಯಕ್ಕೆ ಚಳಿಗಾಲ ಆರಂಭವಾಗುತ್ತದೆ ಎನ್ನುತ್ತಾರೆ ತಜ್ಞರು.
ಮಳೆ ತರುವ ಯಾವುದೇ ಚಂಡಮಾರುತಗಳು ಸೃಷ್ಟಿಯಾಗದಿದ್ದರೆ ನವೆಂಬರ್ ಮಧ್ಯದ ವೇಳೆಗೆ ಚಳಿಗಾಲ ಪ್ರಾರಂಭವಾಗಬಹುದು ಎಂದು ಹವಾಮಾನ ತಜ್ಞರು ಸೂಚಿಸಿದ್ದಾರೆ.
ಉತ್ತರ ಭಾರತದ ರಾಜ್ಯಗಳಲ್ಲಿ ಯಾವಾಗ ಚಳಿ ಆರಂಭವಾಗುತ್ತದೆಯೋ, ಅದಾಗಿ ಕೆಲವೇ ದಿನದಲ್ಲಿ ಅಲ್ಲಿಂದ ತೇವಾಂಶವನ್ನು ಮಾರುತಗಳು ನಮ್ಮ ರಾಜ್ಯದ ಕಡೆಗೆ ಹೊತ್ತು ತರುತ್ತವೆ. ಆಗ ರಾಜ್ಯದಲ್ಲಿ ಚಳಿ ಆರಂಭವಾಗುತ್ತದೆ. ನಮ್ಮ ರಾಜ್ಯದಲ್ಲಿ ನವೆಂಬರ್ ಅಂತ್ಯಕ್ಕೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಳಿ ಪ್ರಾರಂಭವಾಗುತ್ತದೆ ಎಂದು ಹವಾಮಾನ ತಜ್ಞ ಶ್ರೀನಿವಾಸ್ ರೆಡ್ಡಿ ಅವರು ಹೇಳಿದ್ದಾರೆ.

ಬರಲಿವೆ ಚಾರ್ಜಿಂಗ್ ಕೇಂದ್ರಗಳು

0

ದೇಶ

ದೇಶದ ಅತಿದೊಡ್ಡ ತೈಲ ಮಾರಾಟ ಕಂಪನಿಯಾಗಿರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ವಿದ್ಯುತ್ ಚಾಲಿತ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಲು ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಹತ್ತು ಸಾವಿರ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಿದೆ.
ಪ್ರತಿ ಇಪ್ಪತ್ತೈದು ಕಿಲೋಮೀಟರ್ ಗೆ ಒಂದು 50 ಕೆಡಬ್ಲ್ಯೂ ಸಾಮರ್ಥ್ಯದ ಚಾರ್ಜಿಂಗ್ ಕೇಂದ್ರವನ್ನು, ಪ್ರತಿ 100 ಕಿಲೋಮೀಟರ್ ಗೆ ಒಂದು ನೂರು ಕೆ ಡಬ್ಲ್ಯೂ ಸಾಮರ್ಥ್ಯದ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸುವ ಉದ್ದೇಶವನ್ನು ಐಒಸಿ ಹೊಂದಿದೆ.
ಮೊದಲ ವರ್ಷದಲ್ಲಿ ಕಂಪನಿಯು ಮುಂಬೈ ,ಬೆಂಗಳೂರು, ಅಹಮದಾಬಾದ್, ದೆಹಲಿ, ಹೈದರಾಬಾದ್ , ಸೂರತ್ ಮತ್ತು ಕೊಲ್ಕತ್ತಾ, ಚೆನ್ನೈ ,ಪುಣೆ ನಗರಗಳಲ್ಲಿ ಒಟ್ಟು 231 ಚಾರ್ಜಿಂಗ್ ಕೇಂದ್ರ ಆರಂಭಿಸಲು ಗಮನ ಹರಿಸಲಿದೆ.
ನಗರಗಳಲ್ಲಿ ಎರಡನೆಯ ವರ್ಷದಲ್ಲಿ ಹೆಚ್ಚುವರಿಯಾಗಿ 375 ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಮೂರನೇ ವರ್ಷದಲ್ಲಿ 215 ಹೊಸ ಕೇಂದ್ರಗಳು ತಲೆಯೆತ್ತಲಿವೆ. ಒಟ್ಟು 10,ಸಾವಿರ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಕಂಪನಿಯು 150 ರಿಂದ 200 ಕೋಟಿ ವೆಚ್ಚ ಮಾಡಲಿದೆ.

ಹೊಸನಗರ : ಕುಂಬತ್ತಿ ಕಲ್ಲುಗಣಿಗಾರಿಕೆ ಬೇಡ

0

ಹೊಸನಗರ ತಾಲೂಕಿನ ರಾಮಚಂದ್ರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬತ್ತಿ ಗ್ರಾಮದ ದಟ್ಟ ಕಾಡಿನಲ್ಲಿ ಗಣಿಗಾರಿಕೆ ನಡೆಯಬಾರದು. ಉದ್ದೇಶಿತ ಕಲ್ಲುಗಣಿಗಾರಿಕೆ ತಡೆಹಿಡಿದು ಅದರ ಪರವಾನಗಿ ರದ್ದುಪಡಿಸಬೇಕು ಎಂದು ಜನಸಂಗ್ರಾಮ ಪರಿಷತ್ತಿನ ಸಂಸ್ಥಾಪಕ ಎಸ್.ಆರ್. ಹಿರೇಮಠ್ ಹೇಳಿದ್ದಾರೆ.
ಹೊಸನಗರ ತಾಲೂಕಿನ ಕುಂಬತ್ತಿ ಗ್ರಾಮದಲ್ಲಿ ಕಲ್ಲುಗಣಿಗಾರಿಕೆ ಪ್ರದೇಶಕ್ಕೆ ಎಸ್‌.ಆರ್.ಹಿರೇಮಠ್ ಅವರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಅರಣ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಕಲ್ಲುಗಣಿಗಾರಿಕೆಯ ಕ್ರಮದಲ್ಲಿ ಶಾಮೀಲಾಗಿದೆ. ಇಲಾಖಾಧಿಕಾರಿಗಳ ನಿರ್ಲಕ್ಷದಿಂದ ಕುಂಬತ್ತಿ ಗ್ರಾಮದ ಅರಣ್ಯದಲ್ಲಿ ಅಕ್ರಮ ನಾಂದಿ ಹಾಡುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಜನಸಂಗ್ರಾಮ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅಖಿಲೇಶ್ ಚಿಪ್ಳಿ, ಜಿಲ್ಲಾ ಕಾರ್ಯದರ್ಶಿ ಗಿರೀಶ ಆಚಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಕೃಷ್ಣಮೂರ್ತಿ, ಮಾಜಿ ಅಧ್ಯಕ್ಷ ಜೈರಾಮ್ ಕಾರ್ಗಡಿ ಉಪಸ್ಥಿತರಿದ್ದರು.

ಪರಿಸರ ಸ್ನೇಹಿ : ಹಸಿರು ಪಟಾಕಿ

0

ದೇಶದಲ್ಲಿ ಸಾಮಾನ್ಯ ಪಟಾಕಿಗಳನ್ನು ನಿಷೇಧಿಸಿ, ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಸುಪ್ರೀಂಕೋರ್ಟ್ 2018ರಲ್ಲಿ ಆದೇಶ ನೀಡಿತ್ತು. ಆದರೆ ಈ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿಲ್ಲ ಎಂದು ಸುಪ್ರೀಂಕೋರ್ಟ್ ಕಳೆದ ವಾರವಷ್ಟೇ ಅಸಮಾಧಾನ ವ್ಯಕ್ತಪಡಿಸಿತ್ತು. ತನ್ನ ಆದೇಶವನ್ನು ಸಂಪೂರ್ಣವಾಗಿ ಮತ್ತು ಯಥಾವತ್ತಾಗಿ ಜಾರಿಗೆ ತರುವ ಪ್ರಯತ್ನಗಳು ಸರ್ಕಾರಗಳು ಮಾಡಬೇಕು ಎಂದು ಸೂಚಿಸಿದೆ.
ಹಸಿರು ಪಟಾಕಿ ಎಂಬುವುದು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯ ಪರಿಕಲ್ಪನೆ. ಪರಿಸರ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಹಸಿರು ಪಟಾಕಿ ಬಳಕೆಗೆ ಅನುಮತಿ ನೀಡಲಾಗಿದೆ.
ಹಸಿರು ಪಟಾಕಿಗಳು ಪರಿಸರ ಮತ್ತು ಮನುಷ್ಯನ ಆರೋಗ್ಯದ ಮೇಲೆ ಕಡಿಮೆ ಅಪಾಯ ಉಂಟು ಮಾಡುತ್ತವೆ. ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ಪಟಾಕಿಗಳನ್ನು ಬಳಸುವ ಕಚ್ಚಾ ವಸ್ತುಗಳಿಗೆ ಬದಲಾಗಿ, ಪರ್ಯಾಯ ಕಚ್ಚಾವಸ್ತುಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ. ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಹಸಿರು ಪಟಾಕಿಗಳು ಶೇಕಡಾ 30ರಷ್ಟು ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆ. ಬೇರಿಯಂ ನೈಟ್ರೇಟ್ ರಾಸಾಯನಿಕವು ಹೆಚ್ಚು ಹೊಗೆಹೊರಸೂಸುತ್ತದೆ. ಆದರೆ ಹಸಿರು ಪಟಾಕಿಗಳಿಗೆ ಬೇರೆಯ ನೈಟ್ರೇಟನ್ನು ಕಡಿಮೆ ಪ್ರಮಾಣದಲ್ಲಿ ಬಳಸಲಾಗುತ್ತದೆ ಅಥವಾ ಈ ರಾಸಾಯನಿಕ ಇಲ್ಲದೆ ಪಟಾಕಿ ತಯಾರಿಸುವುದರಿಂದ ಹೊರಸೂಸುವಿಕೆ ಇರುವುದಿಲ್ಲ ಎಂದು ಹೇಳುತ್ತಾರೆ.
ಎಲ್ಲಾ ಅನುಕೂಲಗಳು ಕಂಡುಬಂದರೂ, ಈ ಪಟಾಕಿಗಳು ಸಾಮಾನ್ಯ ಪಟಾಕಗಳಿಗಿಂತ ದುಬಾರಿಯಾಗಿವೆ. ಸರ್ಕಾರದಿಂದ ನೊಂದಣಿಯಾಗಿರುವ ಮಾರಾಟಗಾರರಿಂದ ಅಥವಾ ಆನ್ಲೈನ್ನಲ್ಲಿ ಹೆಸರು ಪಟಾಕಿ ಖರೀದಿಸಬಹುದು. ಮಾರುಕಟ್ಟೆಯಲ್ಲಿರುವ ಯಾವುದು ಹಸಿರು ಪಟಾಕಿ ಎಂದು ಗುರುತಿಸಲು ಜನರಿಗೆ ಅನುಕೂಲವಾಗಲಿ ಎಂದು ಪೊಟ್ಟಣಗಳ ಮೇಲೆ ಲೋಗೋ ಮುದ್ರಿತವಾಗಿರುತ್ತದೆ. ಜೊತೆಗೆ ಕ್ಯೂಆರ್ ಕೋಡ್ ಸಹ ಇದ್ದು, ಜನರು ಅವುಗಳನ್ನು ಸ್ಕ್ಯಾನ್ ಮಾಡಿ ಗುರುತಿಸಬಹುದು‌.

ಭೇಷ್… ಜಗ್ಗೇಶ್…ಭೇಷ್!

ಕನ್ನಡದ ಚಿತ್ರರಂಗವೇಕೆ ಇಡೀ ಕನ್ನಡಿಗರೇ ಸ್ಥಂಭೀಭೂತ. ಯುವ ತಾರಾ ಕಣ್ಮಣಿ,ಪುನೀತ್ ಹಠಾತ್ ನಿಧನಕ್ಕೆ ಗಾಢ ದುಃಖಕ್ಕೆ ಜಾರಿದ್ದಾರೆ‌. ಸಾವು ಕಟ್ಟಿಟ್ಟ ಬುತ್ತಿ.ಅದರೆ ಇಡೀ ಕಲಾವಿದ ಗಣವೇ ಗರಬಡಿದಂತಾಗಿದೆ.!
ಎಲ್ಲರ ಮನದಲ್ಲೂ ಕಟ್ಟುಮಸ್ತಾದ ಹುಡುಗ,ಪುನೀತ್ ಸುಮ್ಮಸುಮ್ಮನೇ
ವಿಧಿವಶನಾದನಲ್ಲ!. ಪುನೀತರ ಸಾವಿನ ಬಗ್ಗೆ ಹಲವಾರು ಗಣ್ಯರು,ವೈದ್ಯರು
ತಮ್ಮದೇ ವಿಶ್ಲೇಷಣೆ ನೀಡುತ್ತಿದ್ದಾರೆ.

ಗಮನ ಸೆಳೆಯುವುದೆಂದರೆ ನಮ್ಮ ದೈಹಿಕ ಕಸರತ್ತು ಮಾಡುವ ಯುವಜನ. ಅವರೀಗ ಈಗ ಆಸ್ಪತ್ರೆಗೆ ಹೃದಯ ತಪಾಸಣೆಗೆ ನುಗ್ಗುತ್ತಿರುವುದು.!
ಈಗಾಗಲೇ ತಜ್ಞ ಡಾ.ಮಂಜುನಾಥ್ ಅವರು ಸ್ಯಾಚುರೇಟೆಡ್ ಎಣ್ಣೆ ಬಳಸದೇ
ಗಾಣೋತ್ಪನ್ನ ಎಣ್ಣೆಯನ್ನ ಆಹಾರದಲ್ಲಿ ಬಳಸಲು ಸೂಚಿಸಿದ್ದಾರೆ.

ಭವಿಷ್ಯದಲ್ಲಿ ಪ್ರಜ್ವಲ ತಾರೆಯಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಪುನೀತ್
ಹೀಗೆ ಥಟ್ಟನೆ ಬಿಟ್ಟುಹೋಗಬಾರದಿತ್ತು.
ಈಗ ಅವರ ಸಾಮಾಜಿಕ ಸೇವಾಕಾರ್ಯಗಳು ಸಾರ್ವಜನಿಕರಿಗೆ ಗೊತ್ತಾಗುತ್ತಿವೆ. ಅವರ ಗೆಳೆಯ, ತಮಿಳು ಚಿತ್ರ ನಟ ವಿಶಾಲ್ ,ಮಿತ್ರ ಪುನೀತರ ಒಂದಿಷ್ಟು ಸೇವಾ ಹೊಣೆಯನ್ನ ಹೊತ್ತಿರುವುದು ಮಾದರಿಯಾಗಿದೆ.

ಈ ಸನ್ನಿವೇಶದಲ್ಲಿ ನವರಸನಾಯಕ ಜಗ್ಗೇಶ್ ಅವರ ಹೇಳಿಕೆ ಎಲ್ಲರ ಗಮನ ಸೆಳೆದಿದೆ. ” ನಾವೆಲ್ಲರೂ ಶಾರದೆಯ ಮಕ್ಕಳು. ಚಿತ್ರರಂಗವೇ ನಮ್ಮ ಮನೆ.ಕನ್ನಡಿಗರು ನಮ್ಮ ಬಂಧುಗಳು. ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿತ್ತು. ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು. ಈಗ ಇದನ್ನ ನೋಡಿ ಹಾಲು ಜೇನು ಸವಿದಂತೆ ಆಯಿತು. ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೇ ಮುಂದುವರೆಯಲಿ ..ಲವ್ ಆಲ್..!”

ನಿಜಕ್ಕೂ ತಾರೆಯರು ಪರಸ್ಪರ ಮುನಿಸು ಮರೆಯಬೇಕು. ಚಿತ್ರರಂಗದಲ್ಲಿ ವ್ಯವಹಾರ ಕೇವಲ ಒಂದು ಮುಖ.ಅಷ್ಟೆ.! ಆದರೆ ಅದಕ್ಕೆ ಮಿತ್ರತ್ವ, ಬಂಧುತ್ವ,ಮಾನವೀಯತೆ ಎಂಬ ಹಿನ್ನೆಲೆಯೂ ಇದೆ. ಇಡೀ ಚಿತ್ರ ರಸಿಕರ ಅಭಿಮಾನವೇ ಎಲ್ಲರನ್ನ ಕಾಯುವ ಪ್ರಬಲ ಶಕ್ತಿ. ಇದನ್ನ ನಟ ಸಾರ್ವಭೌಮ ಡಾ.ರಾಜ್ ,ಆರಂಭದಿಂದಲೂ ಸಾಕ್ಷಾತ್ಕರಿಸಿಕೊಂಡು ಬಂದಿದ್ದಾರೆ. ಅವರನ್ನ ಮಾದರಿಯಾಗಿಸಿ ಮಿಕ್ಕ ತಾರಾವಳಿ ಮುನ್ನಡೆಯಬೇಕಿದೆ.ಅದೇ ಯುವರತ್ನ
ಪುನೀತ್ ಗೆ ನೀಡುವ ಶ್ರದ್ಧಾಂಜಲಿಯೂ ಹೌದು.

ಕ್ರಿಕೆಟ್ ತಡೆ ಗೋಡೆ ಈಗ ಮುಖ್ಯ ಕೋಚ್

0

ಭಾರತ ಕ್ರಿಕೆಟ್ ತಂಡಕ್ಕೆ ರಾಹುಲ್ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಇದೇ ತಿಂಗಳು ಭಾರತದಲ್ಲಿಯೇ
ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಾರ್ಯರಂಭ ಮಾಡಲಿದ್ದಾರೆ.
ಭಾರತ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುವುದು ಬಹುದೊಡ್ಡ ಗೌರವ. ಇದಕ್ಕೆ ಪ್ರತಿಯಾಗಿ ಉತ್ತಮ ಕೆಲಸ ಮಾಡುವತ್ತ ಗಮನ ಹರಿಸುತ್ತೇನೆ. ಎಂದು ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ದುಬೈನಲ್ಲಿ ಹೋದ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ನಡೆಯುವ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ದ್ರಾವಿಡ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಕೋಚ್ ಹುದ್ದೆ ಸ್ವೀಕರಿಸಲು ದ್ರಾವಿಡ್ ಅವರನ್ನು ಮನವೊಲಿಸಿದರು.
2023ರ ಏಕದಿನ ವಿಶ್ವಕಪ್ ಟೂರ್ನಿಯ ವರೆಗೂ ಅವರು ಕೆಲಸ ಮಾಡಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಮತಿ ಸುಲಕ್ಷಣ ನಾಯ್ಕ, ಶ್ರೀ ಆರ್ ಪಿ ಸಿಂಗ್, ಅವರನ್ನ ಒಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಅವಿರೋಧವಾಗಿ ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾ ತರಬೇತುದಾರರನ್ನಾಗಿ ಆಯ್ಕೆ ಮಾಡಿದೆ.
ಅವರಿಗೆ ನೀಡುವ ವಾರ್ಷಿಕ ಸಂಭಾವನೆ 10 ಕೋಟಿ ರೂಪಾಯಿಯಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಭಾರತ – ಬ್ರಿಟನ್ ಗ್ರಿಡ್ ಯೋಜನೆ

0

ವಿಶ್ವದ ಬಡರಾಷ್ಟ್ರಗಳಿಗೆ ನವೀಕರಿಸಬಹುದಾದ ಮೂಲದ ವಿದ್ಯುತ್ ಅನ್ನು ಪೂರೈಸುವ ವಿಶ್ವ ವಿದ್ಯುತ್ ಗ್ರಿಡ್ ಯೋಚನೆಗೆ ಭಾರತ ಮತ್ತು ಬ್ರಿಟನ್ ಚಾಲನೆ ನೀಡಿದೆ.
ವಿಶ್ವದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತವು, ಪಳೆಯುಳಿಕೆ ಇಂಧನ ಕಡಿತದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಸಮನಾಗಿಯೇ ಗುರಿಯನ್ನು ಹಾಕಿಕೊಂಡಿದೆ. ಜಾಗತಿಕ ವಿದ್ಯುತ್
ಗ್ರಿಡ್ ಯೋಜನೆಯು ಭಾರತದ ಇಂಗಾಲ ಕಡಿತದ ಸಾಧ್ಯತೆಗಳನ್ನು ತೋರಿಸುತ್ತದೆ ಎಂದು ಇನ್ಫೆಕ್ಟೆಡ್ ಮ್ಯಾನೇಜ್ಮೆಂಟ್ ಹಿರಿಯ ಉಪಾಧ್ಯಕ್ಷ ಜೂನಿ ಗೋರ್ಟೆ ಹೇಳಿದ್ದಾರೆ.
ಜಾಗತಿಕ ವಿದ್ಯುತ್ ಗ್ರಿಡ್ ಯೋಜನೆಗೆ 80 ದೇಶಗಳು ಬೆಂಬಲ ಸೂಚಿಸಿವೆ.
ವಿಶ್ವವು ಶುದ್ಧ ಮತ್ತು ನವೀಕರಿಸಬಹುದಾದ ವಿದ್ಯುತ್ ನತ್ತ ಚಲಿಸಬೇಕಾದರೆ, ಎಲ್ಲ ದೇಶಗಳನ್ನು ಒಳಗೊಂಡ ಈ ಜಾಗತಿಕ ಗ್ರಿಡ್ ಮಾತ್ರವೇ ಏಕೈಕ ಪರಿಹಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗ್ಲಾಸ್ಗೊ ಹವಾಮಾನ ವ್ಯತಿರೀತ್ಯ ಶೃಂಗ ಸಭೆಯಲ್ಲಿ ಭಾಗಿಯಾಗಿದ್ದ ನರೇಂದ್ರ ಮೋದಿಯವರು ದೆಹಲಿಗೆ ವಾಪಸಾಗಿದ್ದಾರೆ. ಅದಕ್ಕೂ ಮುನ್ನ ಹಲವು ದೇಶಗಳ ಪ್ರಧಾನಿ ಮತ್ತು ಅಧ್ಯಕ್ಷರ ಜೊತೆಗೆ ಮಾತುಕತೆ ನಡೆಸಿದರು. ಈ ಭೇಟಿಯ ವೇಳೆ, ಕೋವಿಡ್ ಸಾಂಕ್ರಮಿಕ ಸಂದರ್ಭದಲ್ಲಿ ನೆರವು ನೀಡಿದ್ದಕ್ಕೆ ನೇಪಾಳವು ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ.