ದೇಶ
ದೇಶದ ಅತಿದೊಡ್ಡ ತೈಲ ಮಾರಾಟ ಕಂಪನಿಯಾಗಿರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ವಿದ್ಯುತ್ ಚಾಲಿತ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳಲು ಮುಂದಿನ ಮೂರು ವರ್ಷಗಳಲ್ಲಿ ಒಟ್ಟು ಹತ್ತು ಸಾವಿರ ಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲಿದೆ.
ಪ್ರತಿ ಇಪ್ಪತ್ತೈದು ಕಿಲೋಮೀಟರ್ ಗೆ ಒಂದು 50 ಕೆಡಬ್ಲ್ಯೂ ಸಾಮರ್ಥ್ಯದ ಚಾರ್ಜಿಂಗ್ ಕೇಂದ್ರವನ್ನು, ಪ್ರತಿ 100 ಕಿಲೋಮೀಟರ್ ಗೆ ಒಂದು ನೂರು ಕೆ ಡಬ್ಲ್ಯೂ ಸಾಮರ್ಥ್ಯದ ಚಾರ್ಜಿಂಗ್ ಕೇಂದ್ರವನ್ನು ಸ್ಥಾಪಿಸುವ ಉದ್ದೇಶವನ್ನು ಐಒಸಿ ಹೊಂದಿದೆ.
ಮೊದಲ ವರ್ಷದಲ್ಲಿ ಕಂಪನಿಯು ಮುಂಬೈ ,ಬೆಂಗಳೂರು, ಅಹಮದಾಬಾದ್, ದೆಹಲಿ, ಹೈದರಾಬಾದ್ , ಸೂರತ್ ಮತ್ತು ಕೊಲ್ಕತ್ತಾ, ಚೆನ್ನೈ ,ಪುಣೆ ನಗರಗಳಲ್ಲಿ ಒಟ್ಟು 231 ಚಾರ್ಜಿಂಗ್ ಕೇಂದ್ರ ಆರಂಭಿಸಲು ಗಮನ ಹರಿಸಲಿದೆ.
ನಗರಗಳಲ್ಲಿ ಎರಡನೆಯ ವರ್ಷದಲ್ಲಿ ಹೆಚ್ಚುವರಿಯಾಗಿ 375 ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಮೂರನೇ ವರ್ಷದಲ್ಲಿ 215 ಹೊಸ ಕೇಂದ್ರಗಳು ತಲೆಯೆತ್ತಲಿವೆ. ಒಟ್ಟು 10,ಸಾವಿರ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಕಂಪನಿಯು 150 ರಿಂದ 200 ಕೋಟಿ ವೆಚ್ಚ ಮಾಡಲಿದೆ.