Tuesday, May 5, 2026
Tuesday, May 5, 2026
Home Blog Page 1971

ರಾಜಕುಮಾರ. ಬಸವಶ್ರೀ…ಪುನೀತ .

ಈಗ ಪುನೀತ್ ರಾಜ್ ಕುಮಾರ್
ಕೈಗೊಂಡ ಸಾಮಾಜಿಕ ಸೇವೆಗಳು
ಎಲ್ಲರ ಗಮನಕ್ಕೆ ಬಂದಿವೆ.
26 ಅನಾಥಾಶ್ರಮಗಳು, 45 ಉಚಿತ ಶಾಲೆ, 16 ವೃದ್ಧಾಶ್ರಮ, 19 ಗೋಶಾಲೆ, 1800 ಮಕ್ಕಳ ಸಂಪೂರ್ಣ ಶಿಕ್ಷಣ . ಹೆತ್ತವರಾದ ಕರ್ನಾಟಕ ರತ್ನ ಡಾ.ರಾಜ್ ಮತ್ತು ಪಾರ್ವತಮ್ಮನವರು ಸ್ಥಾಪಿಸಿದ ಮೈಸೂರಿನ” ಶಕ್ತಿ ಧಾಮ “ದಲ್ಲಿ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಯನ್ನು ಮಾಡಿದ್ದಾರೆ.

ಜೀವಮಾನದಲ್ಲಿ ಒಬ್ಬ ಮನುಷ್ಯ ಮಾಡಬಹುದಾದ ಕೊಡುಗೆಕಿಂತ
ಇವು ಹೆಚ್ಚಾಗಿಯೇ ಇವೆ.ಅವರ
‘ ರಾಜಕುಮಾರ’ ಸಿನಿಮಾ ಮಹತ್ವದ್ದು.ವೃದ್ದಾಪ್ಯದಲ್ಲಿ ಹೆತ್ತವರನ್ನ ವೃದ್ಧಾಶ್ರಮಕ್ಕೆ ತಳ್ಳುವ ಇಂದಿನ
ಪೀಳಿಗೆಗೆ ಕಣ್ತೆರೆಸುವ ಸಂದೇಶವಿದೆ.

ಅವರು ಹಿನ್ನೆಲೆಗಾಯನದಿಂದ ಬಂದ
ಹಣವನ್ನ ವೃದ್ಧಾಶ್ರಮಕ್ಕೇ ನೀಡುತ್ತಿದ್ದರಂತೆ. ಇನ್ನು ಜಾಹೀರಾತುಗಳಿಗೆ ಮಾಡೆಲ್ ಆಗಿ
ಸಂಪಾದಿಸಿದ ಹಣವೂ ಕೂಡ ಸಮಾಜ ಸೇವೆಗೇ ಮೀಸಲಾಗಿತ್ತು.
ಕೆಲವು ಸಾಮಾಜಿಕ ಬದ್ಧತೆಯುಳ್ಳ
ಸಂದೇಶಗಳಿಗೆ ರಾಯಭಾರಿಗಳಾಗಿದ್ದರು. ಅವುಗಳಿಂದ ಗೌರವಧನವನ್ನೇ ಸ್ವೀಕರಿಸುತ್ತಿರಲಿಲ್ಲ. ಸಮಾಜ ಸೇವೆ ಎಂದರೆ ಸ್ವೀಕರಿಸುವ ಹಣದಲ್ಲಿ
ಶೇಕಡಾವಾರು ಮೀಸಲಲ್ಲ.ಅಷ್ಡೂ ಇಡುಗಂಟನ್ನ ಆಯಾ ಸೇವೆಗೇ ಕೊಟ್ಟುಬಿಡುತ್ತಿದ್ದ ಧಾರಾಳಿ ಈ ‘ದೊಡ್ಮನೆ ಹುಡುಗ’.

ಇಪ್ಪತ್ತಾರು ಅನಾಥಾಶ್ರಮಗಳು.
ನಿಜಕ್ಕೂ ಅಲ್ಲಿನ ಮಕ್ಕಳು ಯುವರತ್ನನಿಗೆ ಸ್ವರ್ಗ ಸಿಗಲೆಂದೇ
ಮನಪೂರ್ತಿ ಹರಸುತ್ತಾರೆ.
ನಾಲ್ವತೈದು ಉಚಿತ ಶಾಲೆಗಳಲ್ಲಿ
ವಿದ್ಯಾದಾನ ಮಾಡಿದ ಪುಣ್ಯ ಪುನೀತನಿಗೆ. ಹತ್ತೊಂಬತ್ತು ಗೋಶಾಲೆಗಳು.ಅಲ್ಲಿನ ಮೂಕ ಗೋಮಾತೆ ಕೂಡ ಪುನೀತನಿಗೆ
ಪುಣ್ಯತುಂಬಿ ಹರಸುತ್ತಿವೆ.
ಸಾವಿರದ ಎಂಟುನೂರು ಮಕ್ಕಳಿರುವ ” ಶಕ್ತಿಧಾಮ”.ಅದರ ಹೊಣೆಯನ್ನ ಮಿತ್ರ ನಟ ವಿಶಾಲ್
ವಹಿಸಿಕೊಂಡಿದ್ದಾರೆ.
ಹಿರಿಯರು ಹೇಳುವ ಮಾತಿದೆ
ಈ ಜಗತ್ತಿಗೆ ಬರುವಾಗ ನಾವು
ಅಳುತ್ತಿರುತ್ತೇವೆ. ಪೋಷಕರು ಆನಂದದಿಂದ ನಗುತ್ತಿರುತ್ತಾರೆ.
ಆದರೆ ಜಗತ್ತನ್ನ ಬಿಟ್ಟು ಹೋಗುವಾಗ
,ನಗುತ್ತಾ ಹೋಗ ಬೇಕಂತೆ.ಆಗ ಸಮಾಜ ಅಳುತ್ತಿರುವುದಂತೆ.
ಹಾಗೆ ಅಪ್ಪು ನಗುತ್ತಲೇ ಹೋಗಿದ್ದಾರೆ.
ನಾವು ಅಗಲಿಕೆಯ ದುಃಖದಲ್ಲಿ
ಮುಳುಗಿದ್ದೇವೆ.

ಇಂತಹ ವ್ಯಕ್ತಿಗೆ ಬಸವಶ್ರೀ ಪ್ರಶಸ್ತಿ
ಅರಸಿ ಬಂದಿದೆ. ಸಾಮಾಜಿಕ ಕಳಕಳಿಯುಳ್ಳ ಮನುಷ್ಯರಿಗೆ ನೀಡುವ ಈ ಪುರಸ್ಕಾರಕ್ಕೆ ಬೆಲೆಬಾಳುವಂಥ ವ್ಯಕ್ತಿಯೇ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೂ ಮೌಲ್ಯ ಹೆಚ್ಚಿದೆ.

ನಾನು ಭೂಮಿತಾಯಿಯ ಪುತ್ರಿ : ವಿನಿಷಾ

0

ಸ್ಕಾಟ್ಲೆಂಡ್ನ ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಸಿಒಪಿ 26 ಹವಾಮಾನ ಶೃಂಗಸಭೆಗೆ ಇಂಗ್ಲೆಂಡಿನ ಪ್ರಿನ್ಸ್ ವಿಲಿಯಮ್ಸ್ ಅವರಿಂದ ಭಾರತದ ತಮಿಳುನಾಡು ಮೂಲದ 14 ವರ್ಷದ ಬಾಲಕಿ ವಿನಿಷಾ ಉಮಾಶಂಕರ್ ಆಹ್ವಾನಿತರಾಗಿದ್ದರು.

ಬಿಬಿಸಿ ಮಾಧ್ಯಮ ಸಂಸ್ಥೆಯ ಪ್ರತಿಷ್ಠಿತ ‘ಅರ್ಥ್ ಶಾರ್ಟ್’ ಪ್ರಶಸ್ತಿಯ ಫೈನಲ್ ತಲುಪಿದ್ದ 15 ಸ್ಪರ್ಧಿಗಳಲ್ಲಿ ಒಬ್ಬರಾದ ವಿನಿಷಾ ಸೌರಚಾಲಿತ ಐರನಿಂಗ್ ಕಾರ್ಟ್ ಯೋಜನೆ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ.

ಸಿಒಪಿ 26 ಹವಾಮಾನ ಶೃಂಗಸಭೆಯಲ್ಲಿ ವಿನಿಷಾ ಸುಮಾರು ಐದು ನಿಮಿಷ ತಂತ್ರಜ್ಞಾನ ಹಾಗೂ ನಾವಿನ್ಯತೆ ವಿಷಯ ಕುರಿತು ಮಾತನಾಡಿದರು. ” ಹವಾಮಾನ ಬದಲಾವಣೆ, ಪರಿಸರ ರಕ್ಷಣೆ ಕುರಿತು ನಾವೀಗ ಬರೀ ಮಾತನಾಡುವ ಹಂತದಲ್ಲಿಲ್ಲ. ಮಾತನಾಡುವುದನ್ನು ನಿಲ್ಲಿಸಿ, ಕೆಲಸ ಆರಂಭಿಸುವ ಹಂತದಲ್ಲಿದ್ದೇವೆ. ಹಾಗಾಗಿ ನಮ್ಮ ಮುಂದಿನ ಭವಿಷ್ಯಕ್ಕಾಗಿ ಸಮಯ, ಹಣ, ನೂತನ ಧೇಯೋದ್ದೇಶ ಅಳವಡಿಕೆಯ ಅಗತ್ಯವಿದೆ” ಎಂದು ಹೇಳಿದರು.

” ನಾವು ಸಿಟ್ಟು ಮಾಡಿಕೊಳ್ಳಲು ತುಂಬಾ ಕಾರಣಗಳಿವೆ. ಆದರೆ ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ. ಏಕೆಂದರೆ ಅದಕ್ಕೆಲ್ಲ ಈಗ ಸಮಯ ಇಲ್ಲ. ನಾನು ಕಾರ್ಯಪ್ರವೃತ್ತಳಾಗಲು ಇಷ್ಟಪಡುತ್ತೇನೆ. ನಾನು ಬರೀ ಭಾರತೀಯಳಲ್ಲ, ನಾನು ಭೂಮಿತಾಯಿಯ ಪುತ್ರಿ. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ವಿದ್ಯಾರ್ಥಿನಿಯಾಗಿ, ಪರಿಸರ ಕಾಳಜಿವುಳ್ಳವಳಾಗಿ, ಮೇಲಾಗಿ ಆಶಾವಾದ ಇಟ್ಟುಕೊಂಡ ವಳಗಿ ಹೇಳುತ್ತಿದ್ದೇನೆ. ಎಲ್ಲರೂ ಕಾರ್ಯಪ್ರವೃತ್ತರಾಗೋಣ. ನಮ್ಮ ಯುವಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಶ್ರಮ ವಹಿಸೋಣ” ಎಂದು ವಿನಿಷಾ ಹೇಳಿದರು.

ಬಾಲಕಿ ವಿನಿಷಾ ಅವರ ಮಾತುಗಳಿಗೆ ಪ್ರಧಾನಿ ಮೋದಿಜಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ವಿಶ್ವದ ಹಲವು ನಾಯಕರು ಎದ್ದುನಿಂತು ಗೌರವ ಸಲ್ಲಿಸಿದ್ದಾರೆ.

ಕೋವಿಡ್, ‘ವಿಆಸಂ’ ಆತಂಕ

0

ಅಮೆರಿಕ ಮೂಲದ ‘ಮೆರ್ಕ ಅಂಡ್ ರಿಡ್ಜ್ ಬ್ಯಾಕ್ ಬಯೋಥೆರಪ್ಯೂಟಿಕ್’ ಸಂಸ್ಥೆಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್-19 ನಿರೋಧಕ ಮಾತ್ರೆ ‘ಮೊಲ್ನುಪಿರಾವಿರ್’ ಬಳಕೆಗೆ ಬ್ರಿಟನ್ ಅನುಮೋದನೆ ನೀಡಿದೆ.
ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಯುರೋಪಿನಾದ್ಯಂತ ಹಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ದಾಖಲೆಯ ಮಟ್ಟವನ್ನು ಮುಟ್ಟುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ ಅಲೆಯು ತೀವ್ರ ಕಳವಳಕಾರಿಯಾದದ್ದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.
ಯುರೋಪಿನ 53 ದೇಶಗಳಲ್ಲಿ ಪ್ರಸ್ತುತ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಡೆಲ್ಟಾ ರೂಪಾಂತರಿ ವೈರಾಣುಗಳು ವೇಗವಾಗಿ ಹಬ್ಬುತ್ತಿರುವುದರಿಂದ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಹ್ಯಾನ್ಸ್ ಕ್ಲೂಗೆ ಹೇಳಿದ್ದಾರೆ.
ಚಳಿಗಾಲ ಆರಂಭವಾಗಿರುವ ಕಾರಣ, ಜನರು ಮನೆಯೊಳಗೆ ಉಳಿಯುತ್ತಿರುವುದು ಕೂಡ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ. ಯುರೋಪಿನಲ್ಲಿ ಇದೇ ರೀತಿಯ ಪರಿಸ್ಥಿತಿ ಮುಂದುವರಿದಲ್ಲಿ ಫೆಬ್ರುವರಿ ಹೊತ್ತಿಗೆ ಐದು ಲಕ್ಷ ಜನರು ಸಾವಿಗೀಡಾಗುವ ಸಾಧ್ಯತೆ ಇದೆ ಎಂದು ಕ್ಲೂಗೆ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ಮಾತ್ರೆಯ ಬಳಕೆಗೆ ಅನುಮೋದನೆ ನೀಡಿದ ವಿಶ್ವದ ಮೊದಲ ರಾಷ್ಟ್ರ ಬ್ರಿಟನ್ ಆಗಿದೆ. ಸೌಮ್ಯ ಪ್ರಮಾಣದ ಕೋವಿಡ್ ನಿಂದ ಮಧ್ಯಮ ಪ್ರಮಾಣದ ಕೋವಿಡ್ ಲಕ್ಷಣ ಹೊಂದಿರುವವರು ಮಾತ್ರೆ ಬಳಸಲು ಬ್ರಿಟನ್ ನ ಮೆಡಿಸನ್ಸ್ ಅಂಡ್ ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗುಲೇಟರಿ ಏಜೆನ್ಸಿ ( ಎಂಎಚ್ಆರ್ ಎ) ಶಿಫಾರಸು ಮಾಡಿದೆ.

ದೇಶರಕ್ಷಕರೊಂದಿಗೆ ಪ್ರಧಾನಿ ದೀಪಾವಳಿ

0

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ ನಲ್ಲಿ ಗುರುವಾರ ಭಾರತೀಯ ಯೋಧರೊಂದಿಗೆ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಯೋಧರಿಗೆ ಸಿಹಿ ತಿನ್ನಿಸಿ, ” ದೇಶ ಕಾಯುವ ಧೈರ್ಯವಂತರಾದ ತಾವೇ ನನ್ನ ಕುಟುಂಬ” ಇಂದು ಯೋಧರನ್ನು ಉದ್ದೇಶಿಸಿ ಭಾವುಕ ಭಾಷಣ ಮಾಡಿದರು.

ವಿಶ್ವದಾದ್ಯಂತ ಯುದ್ಧ ಮಾದರಿಗಳು ದಿನೇದಿನೇ ಬಾರಿ ಬದಲಾವಣೆ ಕಾಣುತ್ತೇವೆ. ಈ ನಿಟ್ಟಿನಲ್ಲಿ ಹೋರಾಟಕ್ಕಾಗಿ ಅಗತ್ಯವಾದ ಮಿಲಿಟರಿ ಸಾಮರ್ಥ್ಯವನ್ನು ಭಾರತ ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇದಕ್ಕೆ ತಕ್ಕಂತೆ ಗಡಿಯಲ್ಲಿ ಸಂಪರ್ಕ ಹೆಚ್ಚಳ ಹಾಗೂ ಸೇನೆ ನಿಯೋಜನೆಗೆ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿಗೊಳಿಸಲಾಗಿದೆ ಎಂದು ಮೋದಿಜಿಯವರು ಹೇಳಿದ್ದಾರೆ.

ಹಲವು ಸಾಮ್ರಾಜ್ಯಗಳು, ಕೌಟುಂಬಿಕ ಆಳ್ವಿಕೆಗಳು ಈ ನೆಲದಲ್ಲಿ ಬಂದುಹೋಗಿವೆ. ಕೇವಲ ಭೌಗೋಳಿಕ ಗಡಿಯನ್ನು ಕಾಯ್ದುಕೊಳ್ಳುವುದು ಮಾತ್ರವೇ ರಾಷ್ಟ್ರೀಯ ಭದ್ರತೆ ಅಲ್ಲ. ಭಾರತದಂತಹ ವಿಶಿಷ್ಟ ರಾಷ್ಟ್ರದ ವೈವಿದ್ಯತೆ, ಅಸ್ಮಿತೆ ಹಾಗೂ ಏಕತೆಯನ್ನು ಕಾಯ್ದುಕೊಳ್ಳುವುದು ಕೂಡ ರಾಷ್ಟ್ರೀಯ ಬದ್ಧತೆಯೇ ಆಗಿದೆ ಎಂದು ಯೋಧರನ್ನು ಉದ್ದೇಶಿಸಿ ಮೋದಿಜಿ ಮಾತನಾಡಿದರು.

ಹುಷಾರಿ ! ಹೋಟೆಲ್ ಬಿಲ್ ದುಬಾರಿ…

0

ಅಡುಗೆ ಅನಿಲ ಪೆಟ್ರೋಲ್ ಡೀಸೆಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಪರಿಣಾಮ ಈಗ ಹೋಟೆಲ್ ತಿಂಡಿ ತಿನಿಸುಗಳ ದರವನ್ನು ಏರಿಸಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ.

ರಾಜ್ಯದ್ಯಂತ ನವಂಬರ್ 8 ರ ಬಳಿಕ ಶೇ.15 ರಿಂದ 20 ರಷ್ಟು ದರ ಹೆಚ್ಚಳ ಆಗುವ ಸಾಧ್ಯತೆ ಇದೆ. ದೋಸೆ, ಇಡ್ಲಿ ಇತ್ಯಾದಿ ತಿನಿಸುಗಳ ಬೆಲೆಯಲ್ಲಿ 5 ರುಪಾಯಿ ಏರಿಕೆಯಾಗುವ ಸಂಭವವಿದ್ದು ಆಹಾರ ಪ್ರಿಯರಿಗೆ ಇದು ಹೊರೆಯಾಗಲಿದೆ.

ವಾಣಿಜ್ಯ ಅಡುಗೆ ಅನಿಲದ ಸಿಲಿಂಡರ್ ದರ ನವೆಂಬರ್ 1ರಂದು ಏಕಾಏಕಿ 266 ರೂಪಾಯಿ ಹೆಚ್ಚಳ ಮಾಡಿರುವುದರಿಂದ ಹೋಟೆಲ್, ರೆಸ್ಟೋರೆಂಟ್ ಗಳ ಮೇಲೆ ತೀವ್ರ ಪರಿಣಾಮ ಬೀರಿದೆ ರಸ್ತೆಬದಿಯ ಫಾಸ್ಟ್ ಫುಡ್ ಮಳಿಗೆಗಳು ಮುಚ್ಚುವ ಪರಿಸ್ಥಿತಿಗೆ ತಲುಪಿದೆ.

ಈಗ ಪ್ರತೀ ಸಿಲಿಂಡರ್ ಬೆಲೆ 2063 ರೂಪಾಯಿ ಇದೆ ಹೋಟೆಲ್ಗಳಲ್ಲಿ ಅತಿ ಹೆಚ್ಚು ಖರ್ಚು ಬರುವುದರಲ್ಲಿ ಅಡುಗೆ ಅನಿಲ ಕೂಡ ಒಂದು. ನಾವು ತಿಂಡಿತಿನಿಸು ದರ ಏರಿಕೆ ಮಾಡದಿದ್ದರೆ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಬೃಹತ್ ಬೆಂಗಳೂರು ಹೋಟೆಲ್ ಗಳ ಸಂಘ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.

ನೂರು ದಿನ ನೂರಾರು ತಲ್ಲಣ

0

“ಹೈಕಮಾಂಡ್ ನಿಂದ ನನಗೆ ಬುಲಾವ್ ಬಂದಿಲ್ಲ. ರಾಷ್ಟ್ರೀಯ ಕಾರ್ಯಕಾರಿಣಿಗೆ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಳ್ಳುವೆ ” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ತಮ್ಮ ನೇತೃತ್ವದ ರಾಜ್ಯ ಸರ್ಕಾರ ನೂರು ದಿನಗಳ ಆಡಳಿತ ಪೂರೈಸಿರುವುದು ದೊಡ್ಡ ಮೈಲಿಗಳು ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಜನಪರ ನಡೆ ಹೇಗಿರಲಿದೆ ಎಂಬುದರ ದಿಕ್ಸೂಚಿಯಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರು ದಿನಗಳಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ, ಸಂಧ್ಯಾ ಸುರಕ್ಷಾ, ವಿಧವಾ ವೇತನ ಹೆಚ್ಚಳ, ಅಮೃತ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜಾರಿಯಾಗಿವೆ. ಆರ್ಥಿಕ ವ್ಯವಸ್ಥೆ ಚೇತರಿಸಿಕೊಳ್ಳುತ್ತಿದ್ದು, ಮುಂದೆ ಮತ್ತಷ್ಟು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ವ್ಯವಸ್ಥೆಯ ಸುಧಾರಣೆಯ ಜೊತೆಗೆ, ಜನರ ಬಳಿಯೇ ಸರ್ಕಾರ ಹಾಗೂ ಯೋಚನೆಗಳು ಹೋಗಬೇಕಿವೆ. ಆರ್ಥಿಕ ಬೆಳವಣಿಗೆಗೆ ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಪರಿಶಿಷ್ಟರು ಹಿಂದುಳಿದ ವರ್ಗದವರು ಬಡವರು ಹಾಗೂ ಮಹಿಳೆಯರನ್ನು ತಲಾ ಆದಾಯ ಏರಿಕೆಗಾಗಿ ಒಳಪಡಿಸಿಕೊಳ್ಳಬೇಕು. ಅದಕ್ಕಾಗಿ ಆರ್ಥಿಕ ನೆರವು ನೀಡುವ ವಿಶೇಷ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಎಂಪಿಎಂ ಕಾರ್ಮಿಕರ ರಕ್ಷಣೆಗೆ ಸಂಸದರ ಯತ್ನ

0

ಭದ್ರಾವತಿಗೆ ಉಕ್ಕು ಮತ್ತು ಕಾಗದ ಕಾರ್ಖಾನೆಗಳು ಅರಿಶಿನ ಕುಂಕುಮಗಳೆನಿಸಿದ್ದವು.
ಆದರೆ ಕಾಗದ ಕಾರ್ಖಾನೆ ಬೀಗಜಡಿದು ಕಾರ್ಮಿಕರ ಬಾಳು ಈಗ ಮೂರಾಬಟ್ಟೆಯಾಗಿದೆ. ಎಂಪಿಎಂ ಎಂದೇ ಖ್ಯಾತಿ ಪಡೆದ ಕಾಗದ ಕಾರ್ಖಾನೆಯ ಮರು ಆರಂಭಕ್ಕೆ ಸದ್ಯ ಸಂಸದ ಬಿ. ವೈ. ರಾಘವೇಂದ್ರ ಪ್ರಯತ್ನಶೀಲರಾಗಿದ್ದಾರೆ.
ಕಾರ್ಖಾನೆಯ 209 ಮಂದಿ ನೌಕರರಲ್ಲಿ 129 ಮಂದಿ ವಿವಿಧ ನಿಗಮ ಮಂಡಳಿಯ 19 ಕಡೆಯಲ್ಲಿ ಎರವಲು ಸೇವೆ ಮೇಲೆ ಕೆಲಸ ಮಾಡುತ್ತಿದ್ದಾರೆ.
7 ಮಂದಿ ಎಂಪಿಎಂ ಫಾರೆಸ್ಟ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. 52 ಮಂದಿ ಎಂಪಿಎಂ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉಳಿದ 21 ಮಂದಿ ಕಾರ್ಮಿಕರು ಸರ್ಕಾರಿ ಸ್ವಾಮ್ಯದ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರಿ ಸಂದರ್ಶನದಲ್ಲಿ ಭಾಗವಹಿಸಿ ಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
“ನಮ್ಮ ಮನವಿಗೆ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳು ಸ್ಪಂದಿಸಿದರು.ಇದರ ಪರಿಣಾಮ ಸೇವೆಯಲ್ಲಿದ್ದ ನೌಕರರಿಗೆ ಸಿದ್ಧಪಡಿಸಿದ ವಿಮುಕ್ತಿ ಪತ್ರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮುಖ್ಯಮಂತ್ರಿಗಳ ನೇತೃತ್ವದ ಸಭೆ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ” ಎಂದು ಕಾರ್ಮಿಕ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.

ತಗ್ಗಿದ ಇಂಧನ ದರ : ಗ್ರಾಹಕರ ನಿಟ್ಟುಸಿರು

0

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ತೆರಿಗೆ ಮತ್ತು ರಾಜ್ಯ ಸರ್ಕಾರ ಮಾರಾಟ ತೆರಿಗೆಯನ್ನು ಇಳಿಕೆ ಮಾಡಿರುವುದರಿಂದ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 100.63 ಮತ್ತು ಡೀಸೆಲ್ 85.03ಕ್ಕೆ ತಗ್ಗಲಿದೆ.
“ಅಡುಗೆ ಅನಿಲ ಸೇರಿ ಎಲ್ಲಾ ವಸ್ತುಗಳ ಬೆಲೆ ಇಳಿಸುವವರೆಗೂ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ. ಇದೇ 14ರಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು” ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನ ತೀರ್ಪಿಗೆ ಎಷ್ಟು ಬೆಲೆ ಇದೆ, ಸರ್ಕಾರಗಳು ಹೇಗೆ ಹೆದರುತ್ತವೆ ಎಂಬುದಕ್ಕೆ ಉಪಚುನಾವಣೆ ಫಲಿತಾಂಶದ ನಂತರ ಇಂಧನ ದರ ಇಳಿಕೆಯೇ ಸಾಕ್ಷಿ ಎಂದರು.
ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ ರೂ.10 ಮತ್ತು 5ಕ್ಕೆ ಇಳಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದಲ್ಲಿಯೂ ತೆರಿಗೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದ್ದರು.

ಟ್ರ್ಯಾಪ್.. ಹನಿ ಟ್ರ್ಯಾಪ್….

0

ರಾಜ್ಯ ರಾಜಧಾನಿಯಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠಿತ ಕಂಪನಿಗಳ ಉದ್ಯೋಗಿಗಳು, ನಿವೃತ್ತರು, ಅವಿವಾಹಿತರು ಹಾಗೂ ವಿಚ್ಛೇದಿತರನ್ನು ಹನಿಟ್ರ್ಯಾಪ್ ಜಾಲದ ಮೂಲಕ ಸುಲಿಗೆ ಮಾಡುತ್ತಿದ್ದ ಅಂತಹ ನಾಲ್ವರು ಆರೋಪಿಗಳನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶ್ರೀರಾಮಪುರದ ತ್ರಿಷಾ(26), ಆಕೆಯ ಪ್ರಿಯಕರ ಮುತ್ತು (32) , ಸಹಚರರಾದ ದಾಮೋದರ್ (30) ಮತ್ತು ಪೆದ್ದರೆಡ್ಡಿ (31) ಎಂದು ತಿಳಿದುಬಂದಿದೆ.

ರಾಜಾಜಿನಗರದ ನಿವೃತ್ತ ಪ್ರಾಂಶುಪಾಲರಾದ ಚಂದ್ರಶೇಖರ್ ಅವರು ಬಾರ್ ಲೈಸೆನ್ಸ್ ಗೆ ಅರ್ಜಿ ಸಲ್ಲಿಸಿದ್ದರು. ಈ ವಿಷಯ ತಿಳಿದ ಆರೋಪಿಗಳು ಪ್ಲಾನ್ ಮಾಡಿ ಬಳಿಕ ತ್ರಿಶಾ ಮೂಲಕ ಅಕ್ಟೋಬರ್ 1ರಂದು ಚಂದ್ರಶೇಖರ್ ಅವರಿಗೆ ಕರೆ ಮಾಡಿ “ಬಾರ್ ಲೈಸೆನ್ಸ್ ಕೊಡಿಸುತ್ತೇವೆ ಲಗ್ಗೆರೆಯ ಸಾರ್ವಜನಿಕ ಆಸ್ಪತ್ರೆಗೆ ಬನ್ನಿ” ಎಂದು ತಿಳಿಸಿದ್ದಾಳೆ. ಚಂದ್ರಶೇಖರ್ ಯುವತಿ ತಿಳಿಸಿದ ಸ್ಥಳಕ್ಕೆ ತೆರಳಿದ್ದು ಆರೋಪಿಗಳು ತ್ರಿಷಾ ಮನೆಗೆ ಕರೆದಿದ್ದಾರೆ. ಇವತ್ತು ಜೊತೆ ಬಾರ್ ಲೈಸೆನ್ಸ್ ಬಗ್ಗೆ ಸ್ವಲ್ಪ ಹೊತ್ತು ಮಾತನಾಡುತ್ತಿದ್ದಂತೆಯೇ ಮುತ್ತು ಮತ್ತು ಆತನ ಸಹಚರರು ಏಕಾಏಕಿ ಮನೆಗೆ ನುಗ್ಗಿ ಚಂದ್ರಶೇಖರ್ ಅವರ ಮೇಲೆ ಹಲ್ಲೆ ನಡೆಸಿ ಮಾಧ್ಯಮ ಪ್ರತಿನಿಧಿಗಳನ್ನು ಕಳಿಸುವುದಾಗಿ ಬೆದರಿಕೆ ಹಾಕಿ 5 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ. ಅಷ್ಟೊಂದು ಹಣ ಇಲ್ಲ ಎಂದು ಹೇಳಿದಾಗ ಆರೋಪಿಗಳು ಮೂರು ಲಕ್ಷ ರೂಪಾಯಿಗೆ ಒತ್ತಾಯಿಸಿದ್ದಾರೆ. ಕೂಡಲಿ ಚಂದ್ರಶೇಖರ್ ಅವರು ತಮ್ಮ ಅಳಿಯನಿಗೆ ಕರೆ ಮಾಡಿ ತುರ್ತಾಗಿ 3 ಲಕ್ಷ ರೂಪಾಯಿ ತರಿಸಿ ಆರೋಪಿಗಳಿಗೆ ನೀಡಿದರು. ಈ ಸಂಬಂಧ ಚಂದ್ರಶೇಖರ್ ಅವರು ಕೂಡಲೇ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ಬಂಧಿತ ಆರೋಪಿಗಳಿಂದ ಲಕ್ಷಾಂತರ ರೂಪಾಯಿ ನಗದು ಟು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಪುನೀತ್ ಗೆ, ಪ್ರತಿಷ್ಠಿತ ಬಸವಶ್ರೀ

ಕನ್ನಡ ಚಿತ್ರರಂಗದ ಪ್ರಖ್ಯಾತ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಶ್ರೀ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ ಪ್ರತಿಷ್ಠಿತ 2021 ನೇ ಸಾಲಿನ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

ಮುರುಘಾ ಶರಣರು ಮಾತನಾಡಿ ಪುನೀತ್ ಅವರು ಬಾಲನಟನಾಗಿ, ನಾಯಕನಾಗಿ, ಹಿನ್ನೆಲೆ ಗಾಯಕರಾಗಿ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಅಲ್ಲದೆ ರಾಜ್ಯ ಸರ್ಕಾರದ ನಾನಾ ಯೋಜನೆಗಳ ರಾಯಭಾರಿಯಾಗಿ, ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿ ಸಮಾಜದಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂತಹ ಹೆಸರಾಂತ ನಟ ಹೃದಯಾಘಾತದಿಂದ ಕಳೆದವಾರ ನಮ್ಮನ್ನು ಆಗಲಿರುವುದು ಕೋಟ್ಯಂತರ ಅಭಿಮಾನಿಗಳಿಗೆ ನೋವನ್ನುಂಟುಮಾಡಿದೆ. ಅವರ ಕುಟುಂಬದವರು ನೋವನ್ನು ಸಹಿಸಿಕೊಳ್ಳಲು ಬಸವಾದಿ ಪ್ರಮಥರ ಆಶೀರ್ವಾದ ಸದಾ ಇರಲಿ.

ಮಾನವೀಯ ಮೌಲ್ಯಗಳನ್ನೊಳಳಗೊಂಡಿದ್ದ ಪುನೀತ್ ಅವರ ಸಾಧನೆ ದೊಡ್ಡದು. ಚಿಕ್ಕವಯಸ್ಸಿನಲ್ಲಿಯೇ ಅದ್ವಿತೀಯ ಸಾಧನೆ ಮಾಡಿ ಹೋಗಿದ್ದಾರೆ ಎಂದರು. ಹೀಗಾಗಿ ಮರಣೋತ್ತರವಾಗಿ ದಿವಂಗತ ಪುನೀತ್ ರಾಜಕುಮಾರ್ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಮುರುಘಾಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.