Sunday, February 8, 2026
Sunday, February 8, 2026
Home Blog Page 1836

ವಿಧಾನಪರಿಷತ್ ಚುನಾವಣೆ. ಜಿಲ್ಲಾಡಳಿತ ಸಜ್ಜು

0

ಶಿವಮೊಗ್ಗದಲ್ಲಿ ವಿಧಾನ ಪರಿಷತ್ ನ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಒಂದು ಕ್ಷೇತ್ರಕ್ಕೆ ಡಿ.10ರಂದು ಮತದಾನ ನಡೆಯಲಿದೆ. ಇದಕ್ಕೆ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ.
ಚುನಾವಣೆ ಕಾರ್ಯಕ್ಕೆ ಸಿಬ್ಬಂದಿ ಹಾಗೂ ವಿಶೇಷ ವಾಹನಗಳನ್ನು ನಿಯೋಜಿಸಲಾಗಿದೆ. ನಗರದ ಎನ್ ಇಎಸ್ ಮೈದಾನದಲ್ಲಿ ಅಣಕು ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ನಡೆಯಲಿದೆ.
ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಚುನಾವಣೆ ನಡೆಯಲಿದೆ. ಒಟ್ಟು 257 ಬೂತ್ ಗಳಿದ್ದು, ಇಲ್ಲಿ ಕಾರ್ಯನಿರ್ವಹಿಸಲು 338 ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.ಎಎಸ್ಐ, ಪಿಎಸ್ಐ ನೇತೃತ್ವದಲ್ಲಿ 30 ಸೆಕ್ಟರ್ ಗಳನ್ನು ರಚಿಸಲಾಗಿದೆ.
ಅವರುಗಳ ಮೇಲೆ ಮೇಲುಸ್ತುವಾರಿಗೆ 12 ಮೇಲ್ವಿಚಾರಣೆ ಸೆಕ್ಟರ್ ಗಳಿರಲಿವೆ. ಡಿಎಆರ್ 10,ಕೆಎಸ್ಆರ್ ಪಿ 2 ತುಕ್ಕಡಿಗಳು ನಿಯೋಜನೆ ಮಾಡಲಾಗಿದೆ.
ಸೂಕ್ಷ್ಮ ಪ್ರದೇಶಗಳ ಆಧಾರದ ಮೇಲೆ 70 ಪಾಯಿಂಟ್ ಗಳನ್ನು ಗುರುತಿಸಲಾಗಿದ್ದು, ಇಲ್ಲಿಯೂ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ವಿಧಾನಪರಿಷತ್ತಿನ ಚುನಾವಣೆ ಹಿನ್ನೆಲೆ ಜಿಲ್ಲೆಗಿಂತ ಡಿಸೆಂಬರ್ 10ರ ಸಂಜೆ 4 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಆದೇಶಿಸಿದ್ದಾರೆ.
ಮತದಾನ ಕೇಂದ್ರದ 1 ಕಿ.ಮೀ. ವ್ಯಾಪ್ತಿಯಲ್ಲಿ ಸಂತೆ ಮತ್ತು ಎಲ್ಲ ತರಹದ ಜಾತ್ರೆ ಹಾಗೂ ಭಾರಿ ಪ್ರಮಾಣದಲ್ಲಿ ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ನಿಷೇಧಾಜ್ಞೆ ಸರಕಾರಿ ಅಧಿಕಾರಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ. ಸದುದ್ದೇಶದ ಕಾರ್ಯಗಳಾದ ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ದೇವಸ್ಥಾನ, ಚರ್ಚ್, ಮಸೀದಿಗಳಿಗೆ ಪ್ರಾರ್ಥನೆಗೆ ತೆರಳುವವರಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಂಸ್ಕೃತಿ ಪರವಿದ್ದವರು ಕೋಮುವಾದಿಗಳಲ್ಲ

0

ಉಡುಪಿಯ ಶ್ರೀಕೃಷ್ಣ ಮಠದ ವತಿಯಿಂದ ಎರಡು ವರ್ಷಗಳ ಪರ್ಯಾಯ ವಿಶ್ವಾಪರ್ಣಂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ರಾಜ್ಯಸಭೆ ಸದಸ್ಯ ಡಾ. ಸುಬ್ರಮಣಿಯನ್ ಭಾಗವಹಿಸಿದ್ದರು. ಪ್ರಾಚೀನ ಹಾಗೂ ಜೀವಂತವಿರುವ ಹಿಂದೂ ನಾಗರಿಕತೆಯ ಕುರಿತು ಉಪನ್ಯಾಸವನ್ನು ನೀಡಿದರು.

ಆರ್ಯ, ದ್ರಾವಿಡರ ನೆಲೆಯಲ್ಲಿ ಬ್ರಿಟಿಷರ ಒಡೆದು ಆಳುತ್ತಿದ್ದರು. ಈ ನೀತಿಯನ್ನು ಭಾರತೀಯರು ಇಂದು ಜಾತಿ, ಧರ್ಮ ಗಳ ಹೆಸರಿನಲ್ಲಿ ಮುಂದುವರಿಸುತ್ತಿದ್ದಾರೆ ಎಂದು ಸುಬ್ರಮಣಿ ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಯುನೆಸ್ಕೋ ಪ್ರಕಾರ ಹಿಂದೂ ಸಂಸ್ಕೃತಿ ನಿರಂತರ ಬೆಳವಣಿಗೆ ಹೊಂದುತ್ತಿದೆ. ಜಗತ್ತಿನ ಏಕೈಕ ಜೀವಂತ ನಾಗರಿಕತೆ, ಸಂಸ್ಕೃತಿಯಾಗಿದೆ. ಸನಾತನ ಧರ್ಮವು ಭಗವಂತ, ಮೋಕ್ಷದ ಹಾದಿಯನ್ನು ತೋರುತ್ತಿದೆ. ದೇವರು ನೀಡಿದ ಉಪನಿಷತ್ತು ಋಷಿಮುನಿಗಳಿಂದ ಬಂದ ಸ್ಮೃತಿಗಳ ಮೂಲಕ ಸಂಶೋಧನೆಗಳು ಆಗಬೇಕು ಎಂದು ಕೂಡ ತಿಳಿಸಿದ್ದಾರೆ.

ವಿವಿಧ ಜಾತಿ, ಧರ್ಮದ ಜನರನ್ನು ಜೋಡಿಸುವ ಸಮನ್ವಯ ರಾಜಕೀಯ ನೀತಿ ಬೇಕೆ ಹೊರತು, ವಿಭಜನೆ ಸಲ್ಲದು. ಹಿಂದೂ ಧರ್ಮವನ್ನು ಜಗತ್ತಿನ ಯಾವ ಶಕ್ತಿಯಿಂದಲೂ ನಾಶಮಾಡಲು ಲಾಗದು. ಯೋಗ ಮತ್ತು ಸಂಸ್ಕೃತಿ ಭಾರತದ ಅಮೂಲ್ಯ ಸಂಪತ್ತಾಗಿದ್ದು, ಗರಿಷ್ಠ ಬುದ್ಧಿಮತ್ತೆ ಬೆಳವಣಿಗೆ ಸಾಧ್ಯ. ನಾಸಾ ಕೃತಕ ಬುದ್ಧಿಮತ್ತೆ ಸಂಶೋಧನೆಗೆ ಸಂಸ್ಕೃತಿ ಅನ್ವಯವಾಗುತ್ತಿದೆ. ಸಂಸ್ಕೃತಿ ಪರವಿದ್ದ ವರನ್ನು ಕೋಮುವಾದಿ, ಹಿಂದೂವಾದಿ ಎನ್ನುವುದು ಸರಿಯಲ್ಲ. ಶಾಲೆ-ಕಾಲೇಜು, ವಿವಿಗಳಿಂದ ದೂರವಾಗುತ್ತಿರುವ ಸಂಸ್ಕೃತಕ್ಕೆ ಮನೆಗಳಲ್ಲಿ ಪುನಶ್ಚೇತನ ನೀಡಬೇಕು ಎಂದರು.

ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ರಾಜ್ಯಸಭೆ ಸದಸ್ಯ ಡಾ. ಸುಬ್ರಮಣಿಯನ್ ಅವರನ್ನು ಸನ್ಮಾನಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದೇಶಕ್ಕಾಗಿ ಜೀವಧಾರೆಯೆರೆದ
ಜ.ಬಿಪಿನ್ ರಾವತ್ ಇನ್ನಿಲ್ಲ.

0

ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ
ಬಿಪಿನ್ ರಾವತ್ ಹೆಲಿಕಾಪ್ಟರ್ ದುರಂತದಲ್ಲಿ ಮಡಿದಿದ್ದಾರೆ.
ತಾ.8-12-21 ರಂದು ಮಧ್ಯಾಹ್ನ
ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನೆಲಸ್ಪರ್ಶಮಾಡಲು ಇನ್ನೂ ಐದು ನಿಮಿಷವಿತ್ತು.ಹೆಲಿಕಾಪ್ಟರ್ ಪತನವಾಗಿ ದುರಂತಕ್ಕೀಡಾಗಬೇಕಾಯಿತು. ಸಹ ಪ್ರಯಾಣಿಕರಾಗಿದ್ದ
ಪತ್ನಿ ಶ್ರೀಮತಿ ಮಧುಲಿಕಾ ರಾವತ್ ಅವರೂ ಅಪಘಾತ ಸ್ಥಳದಲ್ಲೇ ಮೃತರಾಗಿದ್ದಾರೆ. ಜೊತೆಯಲ್ಲಿದ್ದ ಮಿಕ್ಕ ಅಧಿಕಾರಿಗಳೂ ಸುಟ್ಟು ಹೆಣವಾಗಿದ್ದಾರೆ. ಬಿಪಿನ್ ರಾವತ್ ಮತ್ತು ಕ್ಯಾ.ಅರುಣ್ ಸಿಂಗ್ ಅವರನ್ನ ಚನ್ನೈನ ವೆಲ್ಲಿಂಗ್ಡನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಸಮಯದಲ್ಲೇ ರಾವತ್ ಅಸು ನೀಗಿದರು.

ಭಾರತೀಯ ಸೇನೆಗೆ ಆಧುನಿಕ ಸ್ಪರ್ಶ ನೀಡಿದ ಬಿ. ಪಿ. ರಾವತ್,ಒಬ್ಬ ದೇಶಪ್ರೇಮಿ.
ಅವರ ಹಠಾತ್ ಮರಣ ದೇಶಕ್ಕಾದ ನಷ್ಟ.

ಬಿಪಿನ್ ಲಕ್ಷ್ಮಣ ಸಿಂಗ್ ರಾವತ್ ಉತ್ತರಾಖಂಡ್ ನ ಪೌರಿಯಲ್ಲಿ 16-3-1958 ರಲ್ಲಿ ಜನಿಸಿದರು. ಅವರ ಕುಟುಂಬದಲ್ಲಿ ಹಿರಿಯರಾದಿಯಾಗಿ
ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದವರಾಗಿದ್ದಾರೆ. ತಂದೆ ಲಕ್ಷಣ ಸಿಂಗ್ ಅವರು ಲೆ.ಜನರಲ್ ಆಗಿ ಹೆಸರಾದವರು.
ರಾವತ್ ಅವರು ರಕ್ಷಣಾ ಸೇವಾ ಕಾಲೇಜಿನಲ್ಲಿ ಪದವಿ ಪಡೆದರು.ನಂತರ ಹೈಯರ್ ಕಮಾಂಡಿಂಗ್ ಕೋರ್ಸ್ ಅಧ್ಯಯನ.
ರಕ್ಷಣಾ ಸೇವೆಗಳ ಬಗ್ಗೆ ಎಮ್. ಫಿಲ್. ಪಡೆದರು.
ಅವರ ಅಧ್ಯಯನಾಸಕ್ತಿಗೆ ಕೊನೆಯೇ ಇಲ್ಲ. ಚೌಧರಿ ಚರಣ್ ಸಿಂಗ್ ವಿವಿ ಯಿಂದ
ಡಾಕ್ಟರೇಟ್ ಪದವಿಯನ್ನೂ ಪಡೆದರು.
ರಾವತ್ ಅವರು 1978 ರ ಡಿಸೆಂಬರ್ 16 ರಲ್ಲಿ 11 ಗೋರ್ಖಾ ರೈಫಲ್ಸ್ ನ 5 ನೇ ಬೆಟಾಲಿಯನ್ ನಲ್ಲಿ ಸೇರ್ಪಡೆಯಾದರು.
ಅಲ್ಲಿಂದ ಒಂದೊಂದೇ
ಪದೋನ್ನತಿ ಹೊಂದಿದರು.
17-12-2016 ರಾವತ್ ಅವರು ಭಾರತೀಯ ಸೇನೆಯ ಮುಖ್ಯಸ್ಥರಾದರು.
ಗೋರ್ಖಾ ಬ್ರಿಗೇಡ್ ನಿಂದ ಸೇನೆಯ ಉನ್ನತ ಸ್ಥಾನಕ್ಕೆ ಬಂದವರಲ್ಲಿ ಇವರು ಮೂರನೇಯವರಾಗಿದ್ದಾರೆ.

ಎರಡನೇ ಲೆಫ್ಡಿನೆಂಟ್,
ಲೆಫ್ಟಿನೆಂಟ್,ಕ್ಯಾಪ್ಟನ್
ಮೇಜರ್,ಲೆ.ಕರ್ನಲ್.
ಕರ್ನಲ್.ಬ್ರಗೆಡಿಯರ್,ಮೇಜರ್ ಜನರಲ್,ಲೆಫ್ಟಿನೆಂಟ್ ಜನರಲ್,ಜನರಲ್
( ಭೂಸೇನೆ) ನಂತರ ಇದೀಗ ದೇಶದ ಮೂರೂ ಪಡೆಗಳ
ಸಮನ್ವಯ ಮುಖ್ಯಸ್ಥರಾಗಿದ್ದರು.
ಹೀಗೆ
ಅವರು ಸೈನ್ಯದ ವಿವಿಧ ಹುದ್ದೆಯಲ್ಲಿದ್ದು ಅನುಪಮ ಸೇವೆ ಸಲ್ಲಿಸಿದ್ದಾರೆ..

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪಶ್ಚಿಮಘಟ್ಟದ ಅಪರೂಪದ ಪತಂಗಗಳು

0

ದಕ್ಷಿಣ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನ 8 ತಾಣಗಳಲ್ಲಿ ಒಟ್ಟು 175 ಪ್ರಭೇದದ ಚಿಟ್ಟೆಗಳನ್ನು ಮಂಗಳೂರು ವಿಶ್ವವಿದ್ಯಾಲಯದ ತಂಡ ಗುರುತಿಸಿದೆ. ಇದರೊಂದಿಗೆ ಅವುಗಳ ಬಗ್ಗೆ ಮಾಹಿತಿ ದಾಖಲಿಸಿದೆ.
ಎರಡು ವರ್ಷಗಳ ಸಮೀಕ್ಷೆಯ ಆಧಾರದ ಮೇಲೆ ಸಂಶೋಧಕರು ಪಶ್ಚಿಮ ಘಟ್ಟಗಳಲ್ಲಿ ಚಿಟ್ಟೆಗಳ ಯಥೇಚ್ಛ ವಿನ್ಯಾಸಗಳು ಮತ್ತು ಅವುಗಳು ಇಷ್ಟಪಡುವ ಆವಾಸಸ್ಥಾನಗಳ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.
ಅತ್ಯಂತ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟಗಳಲ್ಲಿ ಚಿಟ್ಟೆಗಳ ಭವಿಷ್ಯದ ಪರಿವೀಕ್ಷಣೆ ಮತ್ತು ಸಂರಕ್ಷಣಾ ಕಾರ್ಯ ಗಳಿಗೆ ಅಗತ್ಯವಿರುವ ಬೃಹತ್ ಪ್ರಮಾಣದ ಮೂಲ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ.
ಚಿಟ್ಟೆಗಳ ಆವಾಸಸ್ಥಾನ,ಅವುಗಳ ಆಹಾರ ಸಸ್ಯಗಳು, ಚಿಟ್ಟೆಗಳು ಕಾಣಸಿಗುವ ವಾತಾವರಣದ ಬಗ್ಗೆ ಮಾಹಿತಿಯನ್ನು ದಾಖಲಿಸಲಾಗಿದೆ. ಆಹಾರ ಸಸ್ಯಗಳನ್ನು ಬೆಳೆಸುವ ಮೂಲಕ ಚಿಟ್ಟೆಗಳ ಆವಾಸಸ್ಥಾನ ಸೃಷ್ಟಿಸಲು ಹಾಗೂ ಚಿಟ್ಟೆಗಳ ಸಂರಕ್ಷಣೆಗೆ ಅಧ್ಯಯನ ಸಹಕಾರಿಯಾಗಲಿದೆ ಎಂದು ಡಾ. ಮುಸ್ತಾಕ್ ಅವರು ತಿಳಿಸಿದ್ದಾರೆ.
ಯೇನೆಪೊಯ ವಿಶ್ವವಿದ್ಯಾಲಯದ ಸಂಶೋಧಕ ಡಾ.ಆರ್. ಶ್ಯಾಮ ಪ್ರಸಾದ್ ರಾವ್ ಮತ್ತು ಬೆಂಗಳೂರಿನ ರಾಷ್ಟ್ರೀಯ ಜೀವ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ದೀಪಕ್ ನಾಯ್ಕ ಮತ್ತು ಡಾ.ಎಂ.ಎಸ್.ಮುಸ್ತಾಕ್ ಈ ಅಧ್ಯಯನವನ್ನು ನಡೆಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಓಮಿಕ್ರಾನ್, ಕೋವಿಡ್ ನ ಕೊನೆಯ ಹೆಜ್ಜೆ…?

0

ವಿಶ್ವದಾದ್ಯಂತ ಕೊರೋನಾ ರೂಪಾಂತರ ತಳಿ ಓಮಿಕ್ರಾನ್ ಎಲ್ಲರಲ್ಲೂ ಆತಂಕವನ್ನು ಸೃಷ್ಟಿಸಿದೆ. ಈ ಹೆಚ್ಚಿದ ಆತಂಕದ ನಡುವೆ ತಜ್ಞರು ಸಮಾಧಾನದ ವಿಷಯವನ್ನು ಪ್ರಕಟಿಸಿದ್ದಾರೆ.

ಓಮಿಕ್ರಾನ್ ರೂಪಾಂತರಿ ಮಾರಣಾಂತಿಕ ಕೋವಿಡ್ ಸಾಂಕ್ರಾಮಿಕ ದ ಕೊನೆಯ ಕಾಲದ ಮೊದಲ ಹೆಜ್ಜೆ ಇರಬಹುದು ಎಂದು ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಪ್ರತ್ಯಕ್ಷವಾಗಿ ಓಮಿಕ್ರಾನ್ ವೇಗ ಹೊಂದಿದೆ. ಆದರೆ ಅದರಿಂದ ಪ್ರಾಣಹಾನಿ ಆಗಿಲ್ಲ. ತೀವ್ರ ರೋಗಲಕ್ಷಣಗಳು ಈವರೆಗೂ ಎಲ್ಲೂ ಕಂಡುಬಂದಿಲ್ಲ. ಹಾಗಾಗಿ ಇದು ‘ಜಾಗತಿಕ ಸಾಂಕ್ರಾಮಿಕ’ ಬದಲಾಗಿ ಇದೊಂದು ಸಾಮಾನ್ಯ ಸೋಂಕಾಗಿ ಉಳಿಯಬಹುದು.

ಆದರೆ ಇದು ಮೊದಲ ಹೆಜ್ಜೆ. ಈ ಸೋಂಕಿನ ಸಂಪೂರ್ಣ ಅಂತ್ಯ ಯಾವಾಗ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬೆಂಗಳೂರಿನಲ್ಲಿ ಹವಾಲಾ ದಂಧೆ ಪತ್ತೆ

0

ರಾಜ್ಯವನ್ನು ಕೇಂದ್ರವಾಗಿಸಿಕೊಂಡು ಹವಾಲಾ ದಂಧೆ ನಡೆಸುತ್ತಿದ್ದ ಜಾಲವನ್ನು ಇತ್ತೀಚೆಗಷ್ಟೇ
ಭೇದಿಸಿರುವ ಪುಟ್ಟೇನಹಳ್ಳಿ ಪೊಲೀಸರು, ಜಾಲದ ಪ್ರಮುಖ ಆರೋಪಿ ರಿಯಾಜ್ ಪತ್ತೆಗಾಗಿ ಶೋಧ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳು ದುಬೈನಲ್ಲಿರುವ ಕೆಲವು ವ್ಯಕ್ತಿಗಳ ಜೊತೆ ನಂಟು ಹೊಂದಿರುವುದು ತನಿಖೆಯಿಂದ ಗೊತ್ತಾಗಿದೆ. ದುಬೈನಿಂದ ಬರುತ್ತಿದ್ದ ಹಣವನ್ನು ಆರೋಪಿಗಳು, ಹವಾಲಾ ದಂಧೆ ಮೂಲಕ ವರ್ಗಾವಣೆ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದುಬೈನ ವ್ಯಕ್ತಿಗಳೇ ಕೇರಳಕ್ಕೆ ಹಣ ಕಳಿಸುತ್ತಿದ್ದರು. ಅದು ಹಣದ ಕಂತೆಗಳನ್ನು ಗೂಡ್ಸ್
ವಾಹನಗಳಲ್ಲಿ ಬಚ್ಚಿಟ್ಟು ಬೆಂಗಳೂರಿಗೆ ತರುತ್ತಿದ್ದ ಆರೋಪಿಗಳು, ಇಲ್ಲಿಂದಲೇ ರಾಜ್ಯದ ಹಲವು ನಿವಾಸಿಗಳ ಖಾತೆಗಳಿಗೆ ಜಮೆ ಮಾಡುತ್ತಿದ್ದ ಸಂಗತಿ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಜೆಪಿ ನಗರದ ಆರನೇ ಹಂತದ ಜರಗನಹಳ್ಳಿ ಯಲ್ಲಿ ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಆರೋಪಿ ಮೊಹಮ್ಮದ್ ಸಾಹಿಲ್, ಸ್ಥಳೀಯರಿಗೆ ಮಚ್ಚು ತೋರಿಸಿ ಕೊಲೆ ಬೆದರಿಕೆ ಹಾಕಿದ್ದ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹವಾಲಾ ದಂಧೆ ಮಾಹಿತಿ ಹೊರಬಿದ್ದಿತ್ತು. ಆತನ ಬಳಿ ದಾಖಲೆ ಇಲ್ಲದ 1 ಲಕ್ಷ ರೂಪಾಯಿ ಸಿಕ್ಕಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರೂ.2000 ನೋಟುಗಳು ಚಲಾವಣೆಯಿಂದ ಇಳಿಮುಖ?

0

ಚಲಾವಣೆಯಲ್ಲಿರುವ ಹುಟ್ಟು ನೋಟುಗಳಲ್ಲಿ ಎರಡು ಸಾವಿರ ರೂಪಾಯಿಗಳ ನೋಟುಗಳ ಪ್ರಮಾಣ ಕಳೆದ ನವೆಂಬರ್ ವೇಳೆಗೆ ಶೇ. 1.75ಕ್ಕೆ ಕುಸಿದಿದೆ. 223.3 ಕೋಟಿ ನೋಟುಗಳು ಇವೆ ಎಂದು ಕೇಂದ್ರ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧುರಿ ರಾಜ್ಯಸಭೆಗೆ ತಿಳಿಸಿದ್ದಾರೆ.

2018ರ ಮಾರ್ಚ್ ವೇಳೆಗೆ 2 ಸಾವಿರ ರೂ.ಗಳ ನೋಟುಗಳ ಪ್ರಮಾಣ ಶೇ.3.27 ಇತ್ತು. ಆ ವೇಳೆ 335.3 ಕೋಟಿ ನೋಟುಗಳಿದ್ದವು ಎಂದು ಹೇಳಿದರು.

ನೋಟು ಅಮಾನ್ಯತೆಯ ಬಳಿಕ ಬಿಡುಗಡೆಯಾಗಿದ್ದ 2,000.ರೂ ಮುಖಬೆಲೆಯ ನೋಟುಗಳನ್ನು 2018-19 ರ ನಂತರ ಹೊಸತಾಗಿ ಮುದ್ರಿಸಿರಲಿಲ್ಲ. ನೋಟುಗಳನ್ನು ಎಷ್ಟು ಮುದ್ರಿಸಬೇಕು ಎಂಬ ನಿರ್ಧಾರವನ್ನು ಸರ್ಕಾರ ಮತ್ತು ಆರ್ ಬಿ ಐ ನಡುವಣ ಸಮಾಲೋಚನೆ ನಂತರ ಕೈಗೊಳ್ಳಲಾಗುತ್ತದೆ. ನೋಟುಗಳು ವಿರೂಪ ವಾಗುವುದು ಹಾಳಾಗುವುದರಿಂದ ಚಲಾವಣೆಯಿಂದ ಕೊಡುತ್ತವೆ ಎಂದು ಸಚಿವರು ವಿವರಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಿಮಾನ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷೆ ಕಡ್ಡಾಯ, ನಿಗದಿತ ದರ ಪಟ್ಟಿ

0

ದೇಶದಾದ್ಯಂತ ಕೋವಿಡ್ ನ ಆತಂಕದ ಹಿನ್ನಲೆಯಲ್ಲಿ ಈ ಬಾರಿ ಕಾಣಿಸಿಕೊಂಡ ರೂಪಾಂತರ ತಳಿ ಓಮಿಕ್ರಾನ್ ಎಲ್ಲೆಡೆ ಭೀತಿಯನ್ನು ಸೃಷ್ಟಿಸಿದೆ.

ಬೇರೆಡೆಯಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ತಪಾಸಣೆ ಹಾಗೂ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯದ ವಿಮಾನನಿಲ್ದಾಣಗಳಲ್ಲಿ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಪ್ರಯಾಣಿಕರ ಪರೀಕ್ಷೆಗೆ ದರ ನಿಗದಿಪಡಿಸಲಾಗಿದೆ. ಈ ವಿಷಯವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶದಲ್ಲಿ ತಿಳಿಸಿದೆ.

ಓಮಿಕ್ರಾನ್ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಟ್ಟುನಿಟ್ಟಾದ ತಪಾಸಣೆ ಕಡ್ಡಾಯ ಗೊಳಿಸಲಾಗಿದೆ. ಆದ್ದರಿಂದ ಪ್ರಯಾಣಿಕರನ್ನು ಶೀಘ್ರದಲ್ಲೇ ಪರೀಕ್ಷೆಗೆ ಒಳಪಡಿಸಬೇಕು. ಹಾಗೂ ಪ್ರಯಾಣಿಕರು ವಿಮಾನ ನಿಲ್ದಾಣಗಳ ಆವರಣದಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳ ಬೇಕಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ವಿಮಾನ ನಿಲ್ದಾಣಗಳಲ್ಲಿನ ಕೊರೋನಾ ಪರೀಕ್ಷೆ ಪ್ರಯೋಗಾಲಯಗಳಲ್ಲಿ ಐಸಿಎಂಆರ್ ಪ್ರಮಾಣಿತ ಪರೀಕ್ಷೆಗಳಿಗೆ ದರ ನಿಗದಿ ಪಡಿಸಲಾಗಿದೆ. ಈ ವಿಷಯವನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ. ಕೆ. ಅನಿಲ್ ಕುಮಾರ್ ಅವರು ತಿಳಿಸಿದ್ದಾರೆ.

ಆರ್ ಟಿಪಿಸಿಆರ್ ಪರೀಕ್ಷೆಗೆ 500ರೂ, ಅಬ್ಬಾಟ್ ಐಡಿ 3000ರೂ, ಥರ್ಮೋ-ಫಿಷರ್ ಅಕ್ಯುಲಾ 1500ರೂ, ಟಾಟಾ ಎಂಡಿ 3 ಜೀನ್ ಫಾಸ್ಟ್ ಅಥವಾ ಟಾಟಾ ಎಂಡಿಎಕ್ಸ್ಎಫ್ 1200 ರೂ, ಹಾಗೂ ಸಿಫೈಡ್ ಜೀನ್ ಎಕ್ಸ್ ಪರ್ಟ್ 2,750 ರೂ. ಇದು ವಿಮಾನ ನಿಲ್ದಾಣಗಳಲ್ಲಿ ದರ ಪಟ್ಟಿ ಪ್ರದರ್ಶಿಸಲಾಗಿದೆ.

ದೇಶ ನಿರ್ಮಾಣದಲ್ಲಿ ವಕೀಲರ ಪಾತ್ರ ಮಹತ್ತರ

0

ದೇಶದ ನಿರ್ಮಾಣದಲ್ಲಿ ವಕೀಲರ ಮಹತ್ವವನ್ನು ಎಂದಿಗೂ ಅಲ್ಲಗಳೆಯಲಾಗದು. ಅಧ್ಯಯನ ಶೀಲತೆ ಇದ್ದಾಗ ಮಾತ್ರ ವಕೀಲ ವೃತ್ತಿಯಲ್ಲಿ ಯಶಸ್ಸು ಕಾಣಬಹುದು ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮಹಾಂತಪ್ಪ ಎ.ಡಿ ಅವರು ತಿಳಿಸಿದ್ದಾರೆ.
ಸಾಗರದ ಕೋರ್ಟ್ ಆವರಣದಲ್ಲಿ ವಕೀಲರ ಸಂಘ ಏರ್ಪಡಿಸಿದ್ದ ವಕೀಲರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲ ವೃತ್ತಿಗೆ ತನ್ನದೇ ಆದ
ಪಾವಿತ್ರ್ಯ, ಘನತೆಯಿದೆ. ವೃತ್ತಿಯಲ್ಲಿ ವಕೀಲರು ನೈತಿಕತೆ ಕಾಪಾಡಿಕೊಳ್ಳಬೇಕಾದದ್ದು ಅತ್ಯಂತ ಪ್ರಮುಖ ಸಂಗತಿಯಾಗಿದೆ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಮಹಾಂತಪ್ಪ ಎ.ಡಿ. ಹೇಳಿದರು.
ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಾದ ರಹೀಂ ಅಲಿ ನದಾಫ್, ವಕೀಲರಿಗೆ ಜ್ಞಾನವೇ ಸಂಪತ್ತು. ಈ ಕ್ಷೇತ್ರದಲ್ಲಿ ಸಾಧನೆಗೆ ಮಿತಿ ಎಂಬುದೇ ಇಲ್ಲ. ವೃತ್ತಿಯ ಬಗ್ಗೆ ಅಸಡ್ಡೆ ಮನೋಭಾವ ತೋರದೇ ಇರುವುದು ಪ್ರಮುಖವಾದ ಸಂಗತಿಯಾಗಿದೆ ಎಂದರು.
ಹಿರಿಯ ವಿಭಾಗದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ರೆಹೆನಾ ಸುಲ್ತಾನ ಅವರು, ಒಳ್ಳೆಯ ವಕೀಲರು ಇರುವಲ್ಲಿ ಮಾತ್ರ ಸಮಾಜದ ಸ್ವಾಸ್ಥ್ಯ ಸುಸ್ಥಿರವಾಗಿರುತ್ತದೆ. ವಕೀಲರಿಗೆ ಸಮಾಜದ ಜೊತೆ ನೇರ ಸಂಪರ್ಕ ಇರುವುದರಿಂದ ಸಾಮಾಜಿಕ ಬದಲಾವಣೆಯಲ್ಲಿ ಅವರು ಆಸಕ್ತಿ ತೋರುವ ಅವಕಾಶ ಮುಖ್ಯವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷರು ರವೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಎಂ.ಬಿ. ಪುಟ್ಟಸ್ವಾಮಿ, ಕೆ.ಎನ್. ಶ್ರೀಧರ್, ಎಚ್.ಎನ್. ದಿವಾಕರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ದಾರ್ಶನಿಕರನ್ನ ವೈಚಾರಿಕವಾಗಿ ನೋಡಬೇಕು.

0

ಬಸವಣ್ಣ, ಸಿದ್ದರಾಮ, ಅಲ್ಲಮಪ್ರಭು ಸೇರಿದಂತೆ ವಿವಿಧ ದಾರ್ಶನಿಕರ ನೀಡಿದ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಶಿಕಾರಿಪುರದ ಗುರುಭವನದಲ್ಲಿ ಜನಸ್ಪಂದನಾ ಟ್ರಸ್ಟ್ ಹಾಗೂ ಸುವ್ವಿ ಪಬ್ಲಿಕೇಷನ್ಸ್ ಆಶ್ರಯದಲ್ಲಿ ನಡೆದ ಉಪನ್ಯಾಸಕ ಪುಟ್ಟಪ್ಪ ಕೆ.ಎಚ್. ಬಿಳವಾಣಿ ಬರೆದ ಲೋಕ ಚಿಂತಕ ಸಿದ್ಧರಾಮ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜ ಚಿಂತಕ ಸೊರಬದ ರಾಜಪ್ಪ ಮಾಸ್ತರ್, ಸಿದ್ದರಾಮರು ಸೇರಿದಂತೆ ಅನೇಕ ದಾರ್ಶನಿಕರು ಸಮಾಜದಲ್ಲಿರುವ ಮೌಡ್ಯವನ್ನು ತೊಲಗಿಸಲು ಶ್ರಮಿಸಿದ್ದರು. ಈ ದಾರ್ಶನಿಕರನ್ನು ಪೌರಾಣಿಕ ಹಿನ್ನೆಲೆಯಿಂದ ನೋಡದೇ ವೈಚಾರಿಕ ಮನೋಭಾವದಿಂದ ನೋಡಬೇಕು. ದಾರ್ಶನಿಕರ ತತ್ವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಭೋವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್. ಜಯಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಡಿ. ಮಧುಕೇಶವ, ಜಾನಪದ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಸಾಹಿತಿ ಡಾ. ಸುಧಾಕರ ಹಿರೇಕಸವಿ, ಸುನಿಲ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.