Monday, February 9, 2026
Monday, February 9, 2026
Home Blog Page 1835

ಸೈನ್ಯಕ್ಕೆ ಚೈತನ್ಯ : ಬ್ರಹ್ಮೋಸ್ ಕ್ಷಿಪಣಿ

0

ಅಣ್ವಸ್ತ್ರ ಹೊತ್ತೊಯ್ಯಬಲ್ಲ ಸಾಮರ್ಥ್ಯದ ದೇಶೀಯ ನಿರ್ಮಿತ ‘ಬ್ರಹ್ಮೋಸ್’ ಕ್ಷಿಪಣಿಯ ವಾಯುದಾಳಿ ಪರೀಕ್ಷೆಯು ಒಡಿಶಾ ಕಡಲತೀರದಲ್ಲಿ ಯಶಸ್ವಿಯಾಗಿ ನೆರವೇರಿದೆ.

ಶಬ್ದಾತೀತ ವೇಗದಲ್ಲಿ ಕ್ರಮಿಸಿ ಶತ್ರು ಪಡೆ ಶಿಬಿರ ಮತ್ತು ಯುದ್ಧ ವಿಮಾನಗಳನ್ನು ಕ್ಷಣಮಾತ್ರದಲ್ಲಿ ಹೊಡೆದುರುಳಿಸಬಲ್ಲ ಸಾಮರ್ಥ್ಯಹೊಂದಿದೆ.

ಸುಖೋಯ್ 30 ಎಂ ಕೆ-1 ಯುದ್ಧ ವಿಮಾನಕ್ಕೆ ಅಳವಡಿಸಲಾದ ಬ್ರಹ್ಮೋಸ್ ಕ್ಷಿಪಣಿಯು ಬುಧವಾರ ಬೆಳಗ್ಗೆ 10:30ಕ್ಕೆ ಯಶಸ್ವಿಯಾಗಿ ಉಡಾವಣೆಗೊಂಡಿದೆ ನಿಖರವಾಗಿ ಅಪ್ಪಳಿಸಿದೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ) ತಿಳಿಸಿದೆ.

ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಉಡಾವಣೆ ಬಳಿಕ ಇದರ ತಯಾರಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಭಾರತೀಯ ವಾಯುಪಡೆ ತೆಕ್ಕೆಗೆ ಶೀಘ್ರದಲ್ಲಿ ನೂರಾರು ಬ್ರಹ್ಮೋಸ್ ಕ್ಷಿಪಣಿಗಳು ಸೇರಲಿವೆ ಎಂದು ಡಿಆರ್ ಡಿಓ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಬ್ರಹ್ಮೋಸ್’ ಕ್ಷಿಪಣಿಯ ಯಶಸ್ವಿ ಪರೀಕ್ಷೆಗಾಗಿ ವಿಜ್ಞಾನಿಗಳು ಮತ್ತು ಅಧಿಕಾರಿಗಳ ತಂಡಕ್ಕೆ ಶುಭಕೋರಿ ಮೆಚ್ಚುಗೆ ಸೂಚಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಿಜಯ್ ಹಜಾರೆ ಟ್ರೋಫಿ ಟೂರ್ನಿ: ಕರ್ನಾಟಕಕ್ಕೆ ಮೊದಲ ಜಯ.

0

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯವು ಕರ್ನಾಟಕ ಮತ್ತು ಪುದುಚೇರಿ ತಂಡಗಳ ನಡುವೆ ಪಂದ್ಯ ನಡೆಯಿತು. ಪುದುಚೇರಿ ವಿರುದ್ಧ ಕರ್ನಾಟಕ ರೋಚಕ ಜಯ ಸಾಧಿಸಿದೆ.

ತಿರುವನಂತಪುರದ ಮಂಗಳಪುರಂ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪುದುಚೆರಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 288 ರನ್ ಗಳಿಸಿತ್ತು.

ಮೊದಲ ವಿಕೆಟ್ ಜೊತೆಯಾಟದಲ್ಲಿ ಆಡಿದ ರೋಹನ್ ಕದಂ ಹೆಚ್ಚು ಹೊತ್ತು ಆಡಲಿಲ್ಲ, ಪುದುಚೆರಿಯ ಬೌಲರ್ ಸುಭೋದ್ ಭಾಟಿ ಅವರ ಅಮೋಘ ಬೌಲಿಂಗ್ ನಿಂದ ಮೊದಲ ಓವರ್ ನಲ್ಲಿಯೇ ರೋಹನ್ ವಿಕೆಟ್ ಅನ್ನು ಕಬಳಿಸಿಕೊಂಡರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಆರ್.ಸಮರ್ಥ್ (107) ಎಸೆತಗಳಲ್ಲಿ (10) ಬೌಂಡರಿ ಸಿಡಿಸಿ 95 ರನ್ ಗಳಿಸಿಕೊಂಡರು ಮತ್ತು ಕೆ.ವಿ.ಸಿದ್ದಾರ್ಥ್ 93 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 61 ರನ್ ಗಳಿಸಿಕೊಂಡರು. ಇವರ ಅಮೋಘ ಬ್ಯಾಟಿಂಗ್ ನಿಂದಾಗಿ 154 ರನ್ ಗಳನ್ನ ತಂಡಕ್ಕೆ ಸೇರಿಸಿದರು. ಆದರೆ ಇವರ ಅಮೋಘ ಬ್ಯಾಟಿಂಗ್ ಮಾಡುತ್ತಿರುವಾಗಲೇ ಸಿದ್ದಾರ್ಥ್ ಮತ್ತು ಸಮರ್ಥ್ ವಿಕೆಟ್ ಗಳು ಪತನವಾದವು, ಷಬೀದ್-ಅಹಮದ್ಧ್ 33ನೇ ಓವರ್ ನಲ್ಲಿ ಸಿದ್ದಾರ್ಥ್ ವಿಕೆಟ್ ಕಬಳಿಸಿಕೊಂಡರೆ ಶತಕದತ್ತ ದಾಪುಗಾಲು ಇಟ್ಟಿದ್ದ ಸಮರ್ಥ್, ಸಾಗರ್ ತ್ರಿವೇದಿ ತಡೆಯೊಡ್ಡಿ ಜೊತೆಯಾಟ ಮುರಿದರು.

ಈ ಹಂತದಲ್ಲಿ ಜೊತೆಗೂಡಿದ ನಾಯಕ ಮನೀಷ್ ಪಾಂಡೆ ಔಟಾಗದೆ 64ರನ್‌ಗಳಿಸಿಕೊಂಡರು ಮತ್ತು ವಿಕೆಟ್ ಕೀಪರ್- ಬ್ಯಾಟರ್ ಶರತ್ ಶ್ರೀನಿವಾಸ್ 42 ಎಸೆತಗಳಲ್ಲಿ ಗಳಿಸಿಕೊಂಡು ತಂಡದ ಮೊತ್ತ 288 ಗಳಿಸಲು ತಂಡಕ್ಕೆ ಇವರಿಬ್ಬರು ಆಸರೆಯಾದರು.

289 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿ ಆಡಿದ ಪುದುಚೇರಿ ತಂಡ 17. 3 ಓವರ್ಗಳಲ್ಲಿ 53 ರನ್ ಗಳಿಸಿ ಆಲ್ – ಔಟ್ ಆಯಿತು.
ಮಧ್ಯಮ ವೇಗಿ ವಾಸುಕಿ ಕೌಶಿಕ್ ಮತ್ತು ಸ್ಪಿನ್ನರ್ ಜಗದೀಶ ಸುಚಿತ್ ಅವರ ಅಮೋಘ ಬೌಲಿಂಗ್ ನಿಂದ ಪುದುಚೇರಿ ತಂಡದ ವಿಕೆಟ್ಗಳು ತರಗೆಲೆಯಂತೆ ಉದುರಿದವು.
ಪುದುಚೇರಿ ತಂಡದಲ್ಲಿರುವ ಕನ್ನಡಿಗ ಪವನ್ ದೇಶಪಾಂಡೆ 25 ಗಳಲ್ಲಿ 3 ಬೌಂಡರಿ ಬಾರಿಸಿ 16 ರನ್ ಗಳಿಸಿ ಕೊಂಡರು. ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡುವಾಗಲೇ, ರೋಹನ್ ಕದಂ ಚುರುಕಿನ ಫೀಲ್ಡಿಂಗ್ ಮತ್ತು ನಿಖರ ಥ್ರೋ ನಿಂದಾಗಿ ರನ್ – ಔಟ್ ಆದರು.

ನಾಲ್ಕನೇ ಓವರ್ನಲ್ಲಿ ಕರ್ನಾಟಕದ ವಿದ್ಯಾಧರ್ ಪಾಟೀಲ ಮೊದಲ ಹೊಡೆತ ಕೊಟ್ಟರು. ಎಸ್.ಕಾರ್ತಿಕ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ನಂತರದ ಬೇಟೆಯ ಕೆಲಸವನ್ನು ವಿ. ಕೌಶಿಕ್ ನಿಭಾಯಿಸಿ ಮುಂದುವರೆಸಿದರು. ಗೋವಿಂದರಾಜನ್ ರೋಹಿತ್ ಮತ್ತು ಕಾರ್ತಿಕೇಯನ್ ಜಯಸುಂದರ ವಿಕೆಟ್ ಗಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಅಪಘಾತದಲ್ಲಿ ಬದುಕುಳಿದ ವರುಣ್ ಸಿಂಗ್

0

ಹೆಲಿಕಾಪ್ಟರ್ ಅಪಘಾತದಲ್ಲಿ ಶೌರ್ಯ ಚಕ್ರ ಪುರಸ್ಕೃತರಾದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬದುಕುಳಿದಿದ್ದಾರೆ.
ಇವರು 2020ರ ಅಕ್ಟೋಬರ್ 12ರಂದು ಹತ್ತು ಸಾವಿರ ಅಡಿಗಳಷ್ಟು ಎತ್ತರದಲ್ಲಿ ಪರೀಕ್ಷಾರ್ಥ ಹಾರೈಸಿದ ವೇಳೆ ತುರ್ತು ಭೂಸ್ಪರ್ಶದ ಅಪಾಯದಲ್ಲಿದ್ದ ಎಲ್ ಸಿಎ ತೇಜಸ್ ಯುದ್ಧ ವಿಮಾನವನ್ನು ಬಹಳ ಚಾಣಾಕ್ಷತೆಯಿಂದ ಉಳಿಸಿದ್ದರು.
ಈ ಸಾಹಸಕ್ಕಾಗಿ ಅವರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಶೌರ್ಯ ಚಕ್ರ ಪುರಸ್ಕಾರವನ್ನು ನೀಡಲಾಗಿತ್ತು.
ಹೆಲಿಕಾಪ್ಟರ್ ಅಪಘಾತದಲ್ಲಿ ಅವರಿಗೆ ತೀವ್ರ ಸ್ವರೂಪದ ಸುಟ್ಟ ಗಾಯಗಳಾಗಿವೆ. ವೆಲ್ಲಿಂಗ್ಟನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೆಲಿಕ್ಯಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು 14 ಮಂದಿಯ ಪೈಕಿ ಬದುಕುಳಿದಿರುವ ಕ್ಯಾಪ್ಟನ್ ವರುಣ್ ಸಿಂಗ್ ಬಹು ಬೇಗ ಚೇತರಿಸಿಕೊಳ್ಳಲಿ ಎಂದು ನಾನು ದೇವರನ್ನು ಪ್ರಾರ್ಥಿಸುವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ವರುಣ್ ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿರುವ ಹಲವು ನಾಯಕರು ಅವರ ಚೇತರಿಕೆಯನ್ನು ಆತ್ಮವಿಶ್ವಾಸದಿಂದ ಹೇಳಿ ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ.
ವರುಣ್ ಅಪಾರ ಕೌಶಲ್ಯವಿರುವ ಪೈಲಟ್ ಮಾತ್ರವಲ್ಲ, ಪ್ರತಿಕೂಲ ಪರಿಸ್ಥಿತಿಯಲ್ಲೂ ಕ್ಷಮತೆಯನ್ನು ಕಾಯ್ದುಕೊಳ್ಳಬಲ್ಲ ಶಕ್ತಿ ಇರುವ ವ್ಯಕ್ತಿ. ಸೀನು ಪಡೆಗಳು ಇವರ ಆರೋಗ್ಯ ಸುಧಾರಣೆಗೆ ಹಂಬಲಿಸುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದೇವಾಲಯಗಳ ಲೆಕ್ಕಪರಿಶೋಧನಾವರದಿ ಕಡ್ಡಾಯ

0

ವರ್ಷದ ಲೆಕ್ಕ ಪರಿಶೋಧನಾ ವರದಿ ಸಲ್ಲಿಸಿದ ಮುಜರಾಯಿ ಇಲಾಖೆಯ ಎ ಹಾಗೂ ಬಿ ದರ್ಜೆಯ ದೇವಾಲಯಗಳ ಆಡಳಿತ ಮಂಡಳಿಗಳು ಇನ್ಮುಂದೆ ಕಾನೂನು ಕ್ರಮಕ್ಕೆ ಒಳಪಡಬೇಕಾಗುತ್ತದೆ.

ರಾಜ್ಯದಲ್ಲಿ ಹಲವು ದೇವಾಲಯಗಳಿವೆ. ಎ ದರ್ಜೆ ಹೊಂದಿರುವ 207 ದೇವಾಲಯಗಳು. 139 ಬಿ ದರ್ಜೆಯ ದೇವಾಲಯಗಳು. ಹಾಗೂ 34,217 ಆದಾಯ ಕಡಿಮೆ ಇರುವ ದೇವಾಲಯಗಳಿವೆ. ಪ್ರತಿವರ್ಷ ಎ ಮತ್ತು ದೇವಾಲಯಗಳು ಪ್ರತಿವರ್ಷ ಖರ್ಚುವೆಚ್ಚಗಳ ಪರಿಶೋಧನಾ ವರದಿ ಸಲ್ಲಿಸಲೇಬೇಕು ಎಂಬ ನಿಯಮವಿದೆ. ಆದರೆ ಕೇವಲ ನಾಲ್ಕು ದೇವಾಲಯಗಳು ಮಾತ್ರ ಲೆಕ್ಕಪರಿಶೋಧನಾ ವರದಿ ಸಲ್ಲಿಸುತ್ತಿವೆ. ಉಳಿದ ದೇವಾಲಯಗಳು ಒಂದು ದಶಕದಿಂದ ನೀಡುತ್ತಿಲ್ಲ. ಈ ನಡತೆ ಕಾನೂನು ಉಲ್ಲಂಘಿಸುವುದರ ಜೊತೆಗೆ ಸರ್ಕಾರ ಮತ್ತು ಮುಜರಾಯಿ ಇಲಾಖೆಗೆ ದೊಡ್ಡ ಪ್ರಮಾಣದ ವಂಚನೆಯಾಗಿದೆ.

ಈ ಬಗ್ಗೆ ಇಲ್ಲಿಯವರೆಗೆ ಬಂದ ಸಚಿವರು, ಅಧಿಕಾರಿಗಳು ಯಾರು ಕೂಡ ಪ್ರಶ್ನೆ ಮಾಡಿಲ್ಲ. ಕೆಲವು ದೇವಾಲಯಗಳು ಕೊಟ್ಟ ಲೆಕ್ಕವನ್ನೇ ಪಡೆದು ಸುಮ್ಮನಾಗುತ್ತಿದ್ದಾರೆ. ಮುಜರಾಯಿ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರ ಅಧ್ಯಕ್ಷತೆಯಲ್ಲಿ ಈ ಕುರಿತು ಸಭೆ ನಡೆಸಲಾಯಿತು. ಎಲ್ಲಾ ದೇವಾಲಯಗಳ ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳ ಕರ್ತವ್ಯ ಲೋಪದ ಕುರಿತು ಚರ್ಚೆ ನಡೆಸಲಾಯಿತು. ಭಕ್ತರ ಕಾಣಿಕೆ ಗೆ ಸರಿಯಾದ ಹೊಣೆಗಾರಿಕೆ ತೋರಿಸುವುದು ವ್ಯವಸ್ಥಾಪಕ ಮಂಡಳಿ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಆದ್ಯ ಕರ್ತವ್ಯವಾಗಿದೆ. ಆದ್ದರಿಂದ, 2020ರ ಜನವರಿ 30 ರೊಳಗೆ ಎಲ್ಲಾ ಎ ಹಾಗೂ ಬಿ ದರ್ಜೆಯ ದೇವಾಲಯಗಳು ವಾರ್ಷಿಕ ಲೆಕ್ಕ ಪರಿಶೋಧನೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಪಾರದರ್ಶಕತೆ ತರಬೇಕು. ಈ ನಿಟ್ಟಿನಲ್ಲಿ ಎಲ್ಲಾ ಎ ಮತ್ತು ಡಿ ದರ್ಜೆಯ ದೇವಾಲಯಗಳು 2020 ಜನವರಿ 30ರೊಳಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ತಪ್ಪಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅಮಾನತು ಅಥವಾ ದೇವಾಲಯದ ಅಧಿಕಾರಿಗಳ ವಿರುದ್ಧ ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮಗಳು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ರ ಕಾಲಂ 39(2) ರ ಅನ್ವಯ ಕ್ರಮಕ್ಕೆ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಆಡಿಟ್ ವರದಿಯನ್ನು ಕಡ್ಡಾಯಗೊಳಿಸುವುದರಿಂದ ದೇವಾಲಯದ ಹಣದ ಖರ್ಚು, ವೆಚ್ಚಗಳ ಕುರಿತು ನಿಖರ ಮಾಹಿತಿ ದೊರೆಯುತ್ತದೆ. ದೇವಸ್ಥಾನಕ್ಕೆ ಸೇರಿದ ಹಲವಾರು ಆಭರಣಗಳು ಮತ್ತು ಆಸ್ತಿಗಳ ಬಗ್ಗೆಯೂ ಸ್ಪಷ್ಟತೆ ದೊರೆಯುತ್ತದೆ. ವಿಜಯ್ ದೇವಾಲಯಗಳ ಆಡಳಿತದಲ್ಲಿ ಪಾರದರ್ಶಕತೆ ಇರುತ್ತದೆ. ಭಕ್ತರು ನೀಡಿದ ಕಾಣಿಕೆ ಗೆ ಪರ್ಯಾಯವಾಗಿ ಹೊಣೆಗಾರಿಕೆ ವರದಿ ನೀಡಲು ಕೂಡ ಇದು ನೆರವಾಗುತ್ತದೆ. ಇದು ಆಡಿಟ್ ವರದಿಯ ಪ್ರಮುಖ ಉದ್ದೇಶವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸುವರ್ಣಸೌಧಕ್ಕೆ ಮಣ್ಣಿನ ಮಕ್ಕಳ ಮುತ್ತಿಗೆ

0

ಅತಿವೃಷ್ಟಿಯಿಂದಾಗಿ ಜನ-ಜಾನುವಾರು ಪ್ರಾಣಹಾನಿ, ಮನೆ ಹಾನಿಯಾಗಿದೆ. ಎಲ್ಲಾ ಬೆಳೆಗಳಿಗೆ ನ್ಯಾಯಯುತ ಪರಿಹಾರ ಕೊಡಬೇಕು. ಭತ್ತ ಮತ್ತು ಮೆಕ್ಕೆಜೋಳಕ್ಕೆ ನ್ಯಾಯಯುತ ಬೆಲೆ ಕ್ವಿಂಟಲ್ ಒಂದಕ್ಕೆ 3000ರೂ. ನಿಗದಿ ಮಾಡಿ, ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,ಡಿ.13ರಂದು ಬೆಳಗಾವಿ ಸುವರ್ಣಸೌಧದಲ್ಲಿ ನಡೆಯಲಿರುವ ಅಧಿವೇಶನಕ್ಕೆ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಮುತ್ತಿಗೆ ಹಾಕುವ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು .
ರೈತ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿಪಡಿಸುವುದು, ಲೋಕಸಭೆಯಲ್ಲಿ ಮಂಡಿಸಿರುವ ವಿದ್ಯುತ್ ಖಾಸಗೀಕರಣ ಮಸೂದೆ ವಾಪಸ್ ಪಡೆಯುವುದು, ರೈತರ ಮೇಲೆ ಹಾಕಿರುವ ಎಲ್ಲಾ ಕೇಸ್ ಗಳನ್ನು ವಾಪಸ್ ಪಡೆಯುವುದು, ಚಳವಳಿಯಲ್ಲಿ ಮಡಿದ 700ಕ್ಕೂ ಹೆಚ್ಚು ಜನ ರೈತ ಕುಟುಂಬಗಳಿಗೆ ಪರಿಹಾರ ಕೊಡುವುದು,ಇಂತಹ ವಿವಿಧ ಬೇಡಿಕೆ ಇಟ್ಟುಕೊಂಡು ಮುತ್ತಿಗೆ ಹಾಕಲಾಗುತ್ತಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೃಷಿಕರ ಧರಣಿ ವಾಪಸ್

0

ಕೇಂದ್ರ ಸರ್ಕಾರದ 3 ಕೃಷಿ ಕಾಯ್ದೆ ವಿರೋಧಿಸಿ ಸತತ 13 ತಿಂಗಳಿನಿಂದ ಸಿಂಘು ಗಡಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಕೊನೆಗೂ ಅಂತ್ಯಗೊಂಡಿದೆ.

ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರು 3 ಕಾಯಿದೆಯನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರು ಅದರಂತೆ ಲೋಕಸಭೆಯಲ್ಲಿ ಕಾಯ್ದೆಯನ್ನು ರದ್ದುಗೊಳಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರದಿಂದ ರೈತರ ಮೇಲೆ ಪ್ರತಿಭಟನೆ ಹಾಗೂ ಹಿಂಸಾಚಾರ ಸಂಬಂಧಿತ ಕೇಸ್ ವಾಪಸಾತಿ ಭರವಸೆ ಸಿಗದ ಹಿನ್ನೆಲೆಯಲ್ಲಿ ರೈತರ ಪ್ರತಿಭಟನೆಯನ್ನು ಮುಂದುವರೆಸಿದ್ದರು.

“ಮಂಗಳವಾರ ರಾತ್ರಿ ಸರ್ಕಾರದಿಂದ ಕೆಲವು ಆಶ್ವಾಸನೆಗಳ ಪ್ರಸ್ತಾವನೆ ಯುಳ್ಳ ಪತ್ರ ಸಿಕ್ಕಿತು ಆದರೆ ಅದರಲ್ಲಿ ನಮ್ಮ ಬೇಡಿಕೆಗಳಿಗೆ ಸೂಕ್ತ ಮನ್ನಣೆ ಇರಲಿಲ್ಲ ಹಾಗಾಗಿ ಪ್ರಸ್ತಾವನೆ ಪತ್ರವನ್ನು ಸರ್ಕಾರಕ್ಕೆ ವಾಪಸ್ಸು ಕಳುಹಿಸಿದೆವು. ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರದ ಒಪ್ಪಿದೆ, ಹೀಗಾಗಿ ಕಾಯುತ್ತಿದ್ದೇವೆ” ಎಂದು ಎಸ್ ಕೆ ಎಂ ಸಮಿತಿಯ ಸದಸ್ಯ ಅಶೋಕ್ ಧಾವ್ಲೆ ಬುಧವಾರ ತಿಳಿಸಿದರು.

ಇಂದು ಸಂಯುಕ್ತ ಕಿಸಾನ್ ಮೋರ್ಚಾ ರೈತರ ಹೋರಾಟವನ್ನು ಅಂತ್ಯಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾದ ಅವರು ಸಮಿತಿ ಸದಸ್ಯರಲ್ಲಿ ಒಬ್ಬರಾದ ಅಶೋಕ್ ಧಾವ್ಲೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಾಹಸಿ, ಸೊರಬದ ಐಶ್ವರ್ಯ.

0

ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವ ಅಂಗವಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ “ಶಿಖರದಿಂದ ಸಾಗರ” ಎಂಬ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯದಿಂದ ಆಯ್ಕೆಯಾದ ಐವರು ಯುವತಿಯರ ತಂಡದಲ್ಲಿ ಶಿವಮೊಗ್ಗದ ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ ವಿ. ಐಶ್ವರ್ಯ ಭಾಗಿಯಾಗಿದ್ದರು.
ಸೊರಬ ತಾಲೂಕಿನ ಚಂದ್ರಗುತ್ತಿ ವೆಂಕಟೇಶ್, ಮಂಜುಳಾ ದಂಪತಿಯ ಹಿರಿಯ ಮಗಳಾದ ಐಶ್ವರ್ಯ, ಶಿವಮೊಗ್ಗದ ಬಿಬಿ ರಸ್ತೆಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿದ್ದು ಕೊಂಡು ಶಿಕ್ಷಣ ಪಡೆಯುತ್ತಿದ್ದಾರೆ. 2017 ರಲ್ಲಿ ಇವರು ಪರ್ವತಾರೋಹಣ ಮತ್ತು ಸಮುದ್ರಯಾನ ಕಯಾಕಿಂಗ್ ನಲ್ಲಿ ವಿಶೇಷ ಪರಿಣತಿಯನ್ನು ಪಡೆದು ವಿವಿಧ ಕೋರ್ಸ್ ಗಳಲ್ಲಿ
ತೇರ್ಗಡೆಯಾಗಿದ್ದಾರೆ.
ಕಾಶ್ಮೀರದ ಕರದೂಂಗ್ಲದಿಂದ ಕರ್ನಾಟಕದ ಕಾರವಾರದ ತನಕ ಒಟ್ಟು 3,350 ಕಿ.ಮೀ. ಸೈಕ್ಲಿಂಗ್ ಪ್ರಯಾಣ ಮಾಡಿರುವ ಈ ತಂಡ 5,359 ಮೀ. ಎತ್ತರದ ಕರದೂಂಗ್ಲ ಪಾಸ್ ಅನ್ನು ಕೇವಲ 7 ದಿನಗಳಲ್ಲಿ ಸೈಕ್ಲಿಂಗ್ ಮೂಲಕ ಯಶಸ್ವಿಯಾಗಿ ಕ್ರಮಿಸಿದ್ದಾರೆ. ಕಾರವಾರದಿಂದ ಮಂಗಳೂರಿನ 300 ಕಿ.ಮೀ. ದೂರವನ್ನು ಸಮುದ್ರಯಾನ ಕಯಾಕಿಂಗ್ ಮೂಲಕ ಕ್ರಮಿಸಿ 72 ದಿನಗಳಲ್ಲಿ ತಮ್ಮ ಗುರಿಯನ್ನು ಮುಟ್ಟಿದ್ದಾರೆ.
ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಕಯಾಕಿಂಗ್ ತಂಡಗಳಲ್ಲಿ ಆಯ್ಕೆಯಾಗಿ ಹಲವಾರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2020- 21 ರಲ್ಲಿ ಮದ್ಯ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ವೈಟ್ ವಾಟರ್ ಕಯಾಕಿಂಗ್ ಸ್ಪರ್ಧೆಯಲ್ಲಿ ತಂಡದೊಂದಿಗೆ ಭಾಗವಹಿಸಿ ಕ್ರಮವಾಗಿ ಕಂಚು ಮತ್ತು ರಜತ ಪದಕಗಳನ್ನು ಪಡೆದಿದ್ದಾರೆ. ಇವರ ಸಾಧನೆಗೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಿ. ನಾಗರಾಜ್, ಸಹಾಯಕ ನಿರ್ದೇಶಕ ಡಿ. ಮಲ್ಲೇಶಪ್ಪ, ನೀಲಯ ಮೇಲ್ವಿಚಾರಕಿ ಬಿ.ಎಸ್.ವಿನಯಾ ಅಭಿನಂದನೆ ಸಲ್ಲಿಸಿದ್ದಾರೆ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹಸುವಿನ ಹೊಟ್ಟೆಯಲ್ಲಿ ಚಿನ್ನದಸರ!

0

ಶಿರಸಿಯ ಹೀಪನಹಳ್ಳಿ ಸಂಕದ ಮನೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಪಶುವೈದ್ಯರು ಹಸುವಿನ ಹೊಟ್ಟೆಯಿಂದ ಬಂಗಾರದ ಸರವನ್ನು ಹೊರತೆಗೆದಿರುವ ಘಟನೆ ನಡೆದಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಂಗಾರದ ಸರ ಕಾಣೆಯಾಗಿತ್ತು. ಈ ಸರವು ಹಸುವಿನ ಪತ್ತೆಹಚ್ಚಿ ಯಶಸ್ವಿ ಶಸ್ತ್ರಚಿಕಿತ್ಸೆ ಯ ಮೂಲಕ ಪಶುವೈದ್ಯರು ಹೊರತೆಗೆದಿದ್ದಾರೆ.

ಹಸುವಿನ ಎರಡನೆಯ ಹೊಟ್ಟೆಯೊಳಗಿನ ರಚನೆ ಜೇನುಗೂಡಿನಂತಿರುತ್ತದೆ. ಎಲ್ಲ ಭಾರವಾದ ವಸ್ತುಗಳು ಅಲ್ಲೇ ಇರುತ್ತವೆ. ಇದನ್ನು ಸುರಕ್ಷಿತವಾಗಿ ತೆಗೆದು ನಮ್ಮ ಕರ್ತವ್ಯ ಪೂರೈಸಿದ್ದೇವೆ ಪಶುವೈದ್ಯರಾದ ಡಾ. ರಾಜೇಶ್ ಅವರು ತಿಳಿಸಿದ್ದಾರೆ.

ದೀಪಾವಳಿಯ ದಿನ ಹೀಪನಹಳ್ಳಿಯ ಶ್ರೀಕಾಂತ ಹೆಗಡೆ ಅವರ ಮನೆಯ ಹಸುವಿಗೆ ಕಟ್ಟಿದ್ದ ಲಕ್ಷ್ಮಿ ಸರ ಕೆಳಗೆ ಬಿದ್ದು ಕಳೆದು ಹೋಗಿತ್ತು. ಎಷ್ಟು ಹುಡುಕಿದರು ಸರ ಮಾತ್ರ ಸಿಕ್ಕಿರಲಿಲ್ಲ. ಹುಡುಕಿ ಸುಸ್ತಾದ ಮಾಲೀಕರು ಸರವನ್ನು ತಿಂದಿದ್ದು ಹಸುವು ಅಥವಾ ಕರುವೊ ಎಂಬ ಅನುಮಾನದಲ್ಲಿ ಕೆಲವು ತಿಂಗಳು ಕಳೆದರು. ಆದರೂ ಸಹ ಸಗಣಿಯ ರೂಪದಲ್ಲಿ ಕೂಡ ಬಂದಿರಲಿಲ್ಲ.

ನಂತರ ಪಶು ಆಸ್ಪತ್ರೆಯ ಡಾ. ಪಿ. ಎಸ್ ಹೆಗಡೆ ಅವರು ಶೋಧಕ ಯಂತ್ರದೊಂದಿಗೆ ಪರಿಶೀಲಿಸಿ ನುಂಗಿದ್ದು ಹಸು ಎಂದು ಪತ್ತೆ ಹಚ್ಚಿದ್ದಾರೆ.

ಉಮ್ಮಚಗಿ ಶಸ್ತ್ರಚಿಕಿತ್ಸಾ ಪಶುವೈದ್ಯ ಡಾ. ರಾಜೇಶ್ ಅವರೊಂದಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಹೊಟ್ಟೆಯಲ್ಲಿದ್ದ ಸರವನ್ನು ಹೊರತೆಗೆದಿದ್ದಾರೆ.

ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದೆ. ರಘುಪತಿ ಭಟ್ ಗಡಿಗೆಹೊಳೆ, ಉಮ್ಮಚಗಿ ಯ ವಾಣಿ ಮತ್ತು ಶ್ರೀಧರ ಸಹಕಾರ ನೀಡಿದ್ದಾರೆ. ಸರದ ಜೊತೆಗೆ ಒಂದು ತಾಳಿ ಕರುವಿನ ಹೊಟ್ಟೆ ಸೇರಿದೆ. ಅದನ್ನು ಪಶುವೈದ್ಯರು ಪತ್ತೆಹಚ್ಚಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸದ್ಯಕ್ಕೆ ಗಂಭೀರ ಕ್ರಮವಿಲ್ಲ, ಜನತೆ ಜಾಗ್ರತೆಯಾಗಿರಬೇಕು : ಸಿ.ಎಂ

0

ಕೋವಿಡ್ 19 ರೂಪಾಂತರಿ ವೈರಸ್ ಓಮಿಕ್ರಾನ್ ನಿಯಂತ್ರಣ ಸಂಬಂಧ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟ ಸಭೆ ನಡೆಯಿತು.

ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಕುರಿತು ಜನರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರೂ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸದ್ಯಕ್ಕೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡುವುದಿಲ್ಲ. ವಾರದ ಬಳಿಕ ಈ ಕುರಿತು ಪರಿಸ್ಥಿತಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು.

“ಶಾಲೆಗಳನ್ನು ಮುಚ್ಚುವ ಗಂಭೀರ ಸ್ಥಿತಿ ಸದ್ಯಕ್ಕೆ ಇಲ್ಲ. ನರ್ಸಿಂಗ್ ವಿದ್ಯಾರ್ಥಿಗಳಿಗೆ ಎರಡು ಡೋಸ್ ಕಡ್ಡಾಯ. ಕ್ರಿಸ್ಮಸ್, ಹೊಸ ವರ್ಷಕ್ಕೆ ಒಂದು ವಾರ ನೋಡಿಕೊಂಡು ನಿರ್ಧಾರಗಳನ್ನು ವಿಧಿಸಲಾಗುವುದು” ಎಂದು ಮಾಧ್ಯಮ ಮಿತ್ರರಿಗೆ ಸಿಎಂ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಿಬ್ಬಂದಿ ಕೊರತೆ, ಆದರೂ ಎಸಿಬಿ ಚುರುಕು.

0

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಭ್ರಷ್ಟರು ನಿದ್ದೆಯಲ್ಲೂ ಎದ್ದೇಳುವ ಸ್ಥಿತಿ ನಿರ್ಮಾಣ ಮಾಡಿದೆ. ಆರಂಭಗೊಂಡ ಅಲ್ಪ ಅವಧಿಯಲ್ಲಿಯೇ ಉತ್ತಮ ಕಾರ್ಯಗಳ ಮೂಲಕ ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿ ತನಿಖಾ ಸಂಸ್ಥೆ ಕಾಡುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಭ್ರಷ್ಟಾಚಾರಿಗಳ ಮೇಲೆ ನಿರಂತರ ದಾಳಿ ನಡೆಸುವುದೂ ಸೇರಿ ಲಂಚಕ್ಕಾಗಿ ಬೇಡಿಕೆ ಇಡುವ ಅಧಿಕಾರಿಗಳ ಚಳಿಯನ್ನೂ ಬಿಡಿಸಿದೆ.
ಜಿಲ್ಲೆಯಲ್ಲಿ ಕಳೆದ 5ವರ್ಷಗಳಲ್ಲಿ 59 ಜನ ಎಸಿಬಿ ಬಲೆಗೆ ಬಿದ್ದಿದ್ದು, ಐವರ ಮೇಲೆ ದಾಳಿ ಮಾಡಲಾಗಿದೆ.
ಲೋಕಾಯುಕ್ತಕ್ಕೆ ಹೋಲಿಸಿದರೆ ಎಸಿಬಿಯಲ್ಲಿ ಮಾನವ ಸಂಪನ್ಮೂಲ ಕಡಿಮೆ. ಪ್ರತಿ ಎಸಿಬಿ ಠಾಣೆಯಲ್ಲಿ 4ಪಿಸಿ,2ಪಿಐ, 1 ಡಿವೈಎಸ್ ಪಿ ,1ಕ್ಲರ್ಕ ಇದ್ದಾರೆ. ಸೀಮಿತ ಸಿಬ್ಬಂದಿ ವರ್ಗದೊಂದಿಗೆ ಹೆಚ್ಚಿನ ಪ್ರಕರಣಗಳನ್ನು ಭೇದಿಸುವುದು ಕಷ್ಟಸಾಧ್ಯ. ಅದಕ್ಕಾಗಿ, ಎಸಿಬಿ ಎಲ್ಲೂ ಇನ್ನಷ್ಟು ಬಲವರ್ಧನಗೊಳಿಸುವ ಕಡೆಗೆ ರಾಜ್ಯ ಸರ್ಕಾರ ಗಮನಹರಿಸಬೇಕು. ಜೊತೆಗೆ, ಈಗ 47 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, ಸಿಬ್ಬಂದಿ ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ದೂರುಗಳಿಗೆ ಸ್ಪಂದಿಸುವುದು ಮತ್ತು ಭ್ರಷ್ಟ ಮೇಲಿನ ದಾಳಿ ಇತ್ಯಾದಿಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ತಿಳಿದು ಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.