Monday, February 9, 2026
Monday, February 9, 2026
Home Blog Page 1834

ಬೆಳೆನಷ್ಟ ಪರಿಹಾರ ನೀಡಿಕೆ ಪ್ರಗತಿಯಲ್ಲಿದೆ

0

ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ 10.62 ಲಕ್ಷ ರೈತರಿಗೆ 681.90 ಕೋಟಿ ರೂ. ಇನ್ ಪುಟ್ ಸಬ್ಸಿಡಿಯನ್ನು ನೇರವಾಗಿ ರೈತರ ಖಾತೆಗೆ ಪಾವತಿಸಲಾಗಿದೆ. “ರೈತರಿಗೆ ಕಡಿಮೆ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆ ಪರಿಹಾರ ವಿತರಿಸಿರುವುದು ದಾಖಲೆ ಎನಿಸಿದೆ” ಎಂದು ಸಚಿವ ಆರ್.ಅಶೋಕ್ ತಿಳಿಸಿದರು.

ಬೆಳೆ ಪರಿಹಾರಕ್ಕೆ ನವೆಂಬರ್.30 ರೊಳಗೆ ಅರ್ಜಿ ಸ್ವೀಕರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ಅದರಂತೆ ಅರ್ಜಿ ಸ್ವೀಕರಿಸಿ ಪರಿಹಾರ ವಿತರಿಸಲಾಗುತ್ತಿದೆ. ಕಳೆದ 21 ದಿನದಲ್ಲಿ 551 ಕೋಟಿ.ರೂ. ಪರಿಹಾರ ಬಿಡುಗಡೆಯಾಗಿದೆ. ಬೆಳೆ ನಷ್ಟ ಪರಿಹಾರಕ್ಕೆ ಇನ್ನೂ ಅರ್ಜಿಗಳು ಸಲ್ಲಿಕೆಯಾಗುತ್ತಿವೆ”. ಎಂದು ಹೇಳಿದರು.

ಕೋವಿಡ್ ಪರಿಹಾರ ಕೋರಿ ಈವರೆಗೆ 15999 ಅರ್ಜಿ ಸಲ್ಲಿಕೆಯಾಗಿವೆ. ಈ ಪೈಕಿ ಬಿಪಿಎಲ್ ಕುಟುಂಬದ 9080 ಹಾಗೂ ಎಪಿಎಲ್ ಕುಟುಂಬದ 5242 ಪ್ರಕರಣಗಳಿಗೆ ಜಿಲ್ಲಾಧಿಕಾರಿಗಳ ಅನುಮೋದನೆ ದೊರಕಿದೆ. 9647 ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದಿಂದ 50,000 ರೂ. ಪರಿಹಾರ ಪಾವತಿಯಾಗಿದೆ”. ಎಂದು ಆರ್ ಅಶೋಕ್ ತಿಳಿಸಿದ್ದಾರೆ.

ಕೋವಿಡ್ ನಿಂದ ಬಿಪಿಎಲ್ ಕುಟುಂಬಗಳು ಅವಲಂಬಿಸಿದ್ದ. ದುಡಿಯುವವರನ್ನು ಕಳೆದುಕೊಂಡಿದ್ದರಷ್ಟೇ 1 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಲಾಗಿತ್ತು. ಈಗ ದುಡಿಯುವ ಎಂಬ ಪದ ತೆಗೆದುಹಾಕಲಾಗಿದೆ. ಪರಿಹಾರ ಕೋರಿ ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಿಲ್ಲ. ಅರ್ಹರು ಅರ್ಜಿ ಸಲ್ಲಿಸುವಂತೆ ಜಾಗೃತಿ ಮೂಡಿಸಲಾಗುವುದು” ಎಂದು ಸಚಿವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾವಳಿ : ಮುಂಬೈ ಜಯ

0

ಬ್ಯಾಂಬೊಲಿಮ್ ನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಮುಂಬೈ ಸಿಟಿ ಎಫ್ ಸಿ ಕಂಡವು ಸತತ ಮೂರನೇ ಬಾರಿ ಜಯಗಳಿಸಿದೆ.

ಮುಂಬೈ ಸಿಟಿ ತಂಡವು ಪಂದ್ಯದ ಮೊದಲಾರ್ಧದಲ್ಲೇ 3 ಗೋಲುಗಳನ್ನು ಗಳಿಸಿ ಮುನ್ನಡೆ ಸಾಧಿಸಿತು. ಕ್ಯಾಸಿಯೋ ಗ್ಯಾಬ್ರಿಯೆಲ್ ಅವರು ಮೂರನೇ ನಿಮಿಷದಲ್ಲಿ ಮೊದಲ ಗೋಲ್ ಗಳಿಸಿದರು.

17ನೇ ನಿಮಿಷದಲ್ಲಿ ಕ್ಲೀನ್ಸಿಂಗ್ ಯಶಸ್ಸು ಸಾಧಿಸಿದರು. ಮಿಥಿಲ್ ಭಾಗದಿಂದ ಚೆಂಡಿನೊಂದಿಗೆ ಧಾವಿಸಿದ ಕ್ಯಾಸಿಯೊ ಎದುರಾಳಿ ತಂಡದ ಆವರಣಕ್ಕೆ ತಲುಪುತ್ತಿದ್ದಂತೆ ಅವರತ್ತ ಕ್ರಾಸ್ ಮಾಡಿದರು. ಅವರು ನಿರಾಯಾಸದಿಂದ ಗೋಲು ಪಟ್ಟಿಯೋಳಗೆ ತಳ್ಳಿದರು.

ಇಗರ್ ಆಂಗುಲೊ 24ನೇ ನಿಮಿಷದಲ್ಲಿ ಗಳಿಸಿದವನು ತಂಡಕ್ಕೆ 3-0 ಮುನ್ನಡೆ ಕಳುಹಿಸಿಕೊಟ್ಟಿತ್ತು. 48ನೇ ನಿಮಿಷದಲ್ಲಿ ಕೋಮಲ್ ತಾತನ್ ಮತ್ತು 50ನೇ ನಿಮಿಷದಲ್ಲಿ ಎಲಿ ಸಾಬಿಯಾ ಚೆಂಡನ್ನು ಗುರಿ ತಲುಪುವಲ್ಲಿ ಯಶಸ್ವಿಯಾದರು. 70ನೇ ನಿಮಿಷದಲ್ಲಿ ವೈಗರ್ ಕಟಾಟು ಅವರ ಗೋಲಿನೊಂದಿಗೆ ಮುಂಬೈ ತಂಡವು ಜಯಗಳಿಸಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಯುವಸಬಲೀಕರಣ: ಕೋಡ್ ಉನ್ನತಿ ಉಪಕ್ರಮ

0

ರಾಜ್ಯದಲ್ಲಿ ಯುವಜನ ಸಬಲೀಕರಣ ಮತ್ತು ಮಹಿಳಾ ಉದ್ಯಮಶೀಲತೆಯನ್ನು ಸಾಧಿಸುವ ಮಹತ್ತ್ವಾಕಾಂಕ್ಷೆಯನ್ನುಳ್ಳ `ಕೋಡ್ ಉನ್ನತಿ’ ಉಪಕ್ರಮಕ್ಕೆ ಐಟಿ, ಬಿಟಿ ಮತ್ತು ಕೌಶಲ್ಯ ಪೂರೈಕೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಯೋಜನೆಯ ಅಂಗವಾಗಿ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮ (ಯುಎನ್ ಡಿಪಿ) ಮತ್ತು ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳು ಒಡಂಬಡಿಕೆಗೆ ಸಹಿ ಹಾಕಿದವು.

ಇದರ ಅಂಗವಾಗ ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಕೋಡ್ ಉನ್ನತಿ’ ಯೋಜನೆಯು ಮೊದಲಿಗೆ ಬೆಂಗಳೂರು ಗ್ರಾಮಾಂತರ, ರಾಮನಗರ, ದಕ್ಷಿಣ ಕನ್ನಡ ಮತ್ತು ರಾಯಚೂರು ಜಿಲ್ಲೆಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕಗಳ ಮೂಲಕ ಜಾರಿಗೆ ಬರಲಿದೆ. ನಂತರ ಉಳಿದ ಜಿಲ್ಲೆಗಳಿಗೆ ವಿಸ್ತರಣೆಗೊಳ್ಳಲಿರುವ ಈ ಯೋಜನೆಗೆಸಿಸ್ಟಮ್ಸ್, ಅಪ್ಲಿಕೇಶನ್ಸ್ ಅಂಡ್ ಪ್ರಾಡಕ್ಟ್ಸ್ ಇನ್ ಡೇಟಾ ಪ್ರೋಸೆಸಿಂಗ್’ ಪ್ರಯೋಗಾಲಯ (ಸ್ಯಾಪ್ ಲ್ಯಾಬ್ಸ್ ಇಂಡಿಯಾ) ನೆರವು ನೀಡಲಿದೆ ಎಂದರು.

ಯೋಜನೆಯ ಗುರಿಗಳನ್ನು ತಲುಪಲು ರಾಜ್ಯದಲ್ಲಿ ಈಗಾಗಲೇ 50 ಸರಕಾರಿ ಪದವಿಪೂರ್ವ, ಐಟಿಐ, ಪಾಲಿಟೆಕ್ನಿಕ್, ಕಲಾ ಮತ್ತು ವಿಜ್ಞಾನ ಕಾಲೇಜುಗಳನ್ನು ಗುರುತಿಸಲಾಗಿದೆ. ಮೊದಲ ಹೆಜ್ಜೆಯಾಗಿ 100 ಜನ ಎನ್ಎಸ್ಎಸ್ ಅಧಿಕಾರಿಗಳಿಗೆ ಉದ್ಯೋಗ ಮಾಹಿತಿ, ವೃತ್ತಿ ಮಾರ್ಗದರ್ಶನ, ಕೌನ್ಸೆಲಿಂಗ್, ಡಿಜಿಟಲ್ ಕೌಶಲಗಳಿಗೆ ಸಂಬಂಧಿಸಿದಂತೆ 3 ದಿನಗಳ ತರಬೇತಿ ಕೊಡಲಾಗುವುದು. ನಂತರ, ಎರಡು ಶೈಕ್ಷಣಿಕ ವರ್ಷಗಳ ಅವಧಿಯಲ್ಲಿ ಈ ಕಾಲೇಜುಗಳಲ್ಲಿ ಓದುತ್ತಿರುವ 20 ಸಾವಿರ ವಿದ್ಯಾರ್ಥಿಗಳಿಗೆ 200 ಗಂಟೆಗಳ ಕಾಲದ ಡಿಜಿಟಲ್ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.

3,000 ವಿದ್ಯಾರ್ಥಿಗಳಿಗೆ ಉದ್ಯಮಶೀಲತೆಯ ಬಗ್ಗೆ ಜಾಗೃತಿ ಮೂಡಿಸುವ ತರಬೇತಿಯನ್ನು ಏರ್ಪಡಿಸಲಾಗುವುದು. ಈ ಮೂಲಕ ವಿದ್ಯಾರ್ಥಿಗಳಲ್ಲಿರುವ ಆಸಕ್ತಿಗಳನ್ನು ನಿಖರವಾಗಿ ತಿಳಿದುಕೊಳ್ಳಲಾಗುವುದು. ತರಬೇತಿಯ ಬಳಿಕ ವಿದ್ಯಾರ್ಥಿಗಳು ತಮಗಿರುವ ಉದ್ಯಮಶೀಲತೆಯ ಯೋಜನೆಗಳನ್ನು ಪರಿಣತರ ತಂಡಕ್ಕೆ ಸಲ್ಲಿಸಿ, ಸೂಕ್ತ ಮಾರ್ಗದರ್ಶನ ಪಡೆಯಲು `ಬೂಟ್ ಕ್ಯಾಂಪಸ್’ ಎನ್ನುವ ಕಾರ್ಯಕ್ರಮವನ್ನೂ ಈ ಯೋಜನೆಯಲ್ಲಿ ಅಳವಡಿಸಲಾಗಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಯುವಜನ ಸಬಲೀಕರಣವನ್ನು ಸಾಕಾರಗೊಳಿಸುವ ಉದ್ದೇಶದಿಂದ ಈಗಾಗಲೇ `ಕರ್ನಾಟಕ ರಾಜ್ಯ ಕೌಶಲ್ಯ ಮತ್ತು ಉದ್ಯಮಶೀಲತಾ ಕಾರ್ಯಪಡೆ’ಯನ್ನು ರಚಿಸಲಾಗಿದ್ದು, ಶಿಕ್ಷಣ, ಕೃಷಿ ಮುಂತಾದ 20 ಇಲಾಖೆಗಳನ್ನು ಒಂದೇ ಸೂತ್ರದಡಿ ತರಲಾಗಿದೆ. ಈ ಮೂಲಕ ಮುಂಬರುವ ವರ್ಷಗಳಲ್ಲಿ ಒಂದು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಸಂಕಲ್ಪ ಸರಕಾರದ್ದಾಗಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಕಾರ್ಯಕ್ರಮದಲ್ಲಿ ಯುಎನ್ ಡಿಪಿ ಇಂಡಿಯಾದ ಮುಖ್ಯಸ್ಥ ಅಮಿತ್ ಕುಮಾರ್, ಸ್ಯಾಪ್ ಲ್ಯಾಬ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಸಿಂಧೂ ಗಂಗಾಧರನ್, ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ತಾಪಕ ನಿರ್ದೇಶಕ ಅಶ್ವಿನ್ ಗೌಡ, ಯೋಜನೆ ಮತ್ತು ಅಂಕಿಅಂಶ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹವಾಲ ದಂಧೆ: ಆರೋಪಿಗಳ ಸೆರೆ

0

ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹವಾಲ ದಂಧೆ ಪ್ರಕರಣ ಪತ್ತೆಯಾಗಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಕ್ಷಿಣ ವಿಭಾಗದ ಪೊಲೀಸರನ್ನು ಸಂಪರ್ಕಿಸಿ ಅವಳ ಪ್ರಕರಣ ಮತ್ತು ಹಣ ವರ್ಗಾವಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಹಣ ವರ್ಗಾವಣೆ ಯಾಗಿರುವ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಹವಾಲ ಜಾಲದಲ್ಲಿ ಸಿಲುಕಿರುವ ಇರುವವರಿಗೆ ಇಡಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಪ್ರಕರಣ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಪೊಲೀಸರು ಜೆಪಿ ನಗರದಲ್ಲಿ ಕೇರಳ ಮೂಲದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಸಾಹಿಲ್, ಫೈಸಲ್ ಫಜಲ್ ಮತ್ತು ಅಬ್ದುಲ್ ಮನಾಸ್.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಬ್ಯಾಂಕ್ ಗಳ 2,656 ಖಾತೆಗಳಿಗೆ ನೂರಾರು ಕೋಟಿ ರೂಪಾಯಿ ಪಾವತಿ ಆಗಿರುವುದು ಬೆಳಕಿಗೆ
ಬಂದಿದ್ದರಿಂದ, ಸುಮಾರು 21 ಲಕ್ಷ ರೂ. ನಗದು ಹಣ ಹಾಗೂ ಬ್ಯಾಂಕ್ ಖಾತೆಗಳ ಹಣ ಜಮೆ ಮಾಡಿರುವ ರಶೀದಿಗಳನ್ನು ಜಪ್ತಿ ಮಾಡಲಾಗಿದೆ.

ಪೊಲೀಸರು ಆರೋಪಿಗಳು ಜೆ. ಪಿ. ನಗರದ ಬಾಡಿಗೆ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸಿಡಿಎಂ ಯಂತ್ರದಲ್ಲಿ ಹಣ ಪಾವತಿಸಿ ಪಡೆದಿರುವ ಚೀಟಿಗಳ ಬಂಡಲ್ ಸಿಕ್ಕಿದೆ. ಈ ರಶೀದಿ ಗಳ ಮಾಹಿತಿ ಪ್ರಕಾರ ಮೂರು ತಿಂಗಳಲ್ಲಿ 185 ಖಾತೆಗಳಿಗೆ ಸುಮಾರು 31ಕೋಟಿ ಇರುವ ಜಮೆ ಮಾಡಲಾಗಿದೆ. ಈ ಮೂರು ತಿಂಗಳಿಗೂ ಮೊದಲು ಜಮೆ ಮಾಡಿದ ಹಣದ ಚೀಟಿಗಳನ್ನು ಸುಟ್ಟಿರುವುದಾಗಿ ಆರೋಪಿಗಳು ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾರೆ.

ಈ ಜಾಲದ ಪ್ರಮುಖ ಆರೋಪಿ ರಿಯಾಜ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಿಸಿಯೂಟದಲ್ಲಿ ಮೊಟ್ಟೆ ಬೇಡ,ಪ್ರತಿಭಟನೆ

0

ಕೆಲವು ದಿನಗಳ ಹಿಂದೆ ಸರ್ಕಾರ ಏಳು ಜಿಲ್ಲೆಗಳಲ್ಲಿ 1ರಿಂದ 8 ನೇ ತರಗತಿ ಮಕ್ಕಳ ಬಿಸಿಯೂಟದಲ್ಲಿ ಮೊಟ್ಟೆ ನೀಡುವುದಾಗಿ ನಿರ್ಧರಿಸಿದೆ. ಆದರೆ ಯೋಜನೆಯನ್ನು ತಕ್ಷಣವೇ ಹಿಂಪಡೆಯಲು ಕೆಲ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ.

ಅಪೌಷ್ಟಿಕತೆ ಹೋಗಲಾಡಿಸಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಬಿಸಿಯೂಟದ ಜೊತೆ ಮೊಟ್ಟೆ ನೀಡುತ್ತಿದೆ. ಮೊಟ್ಟೆ ಸೇವಿಸದೆ ಇರುವವರಿಗೆ ಬಾಳೆಹಣ್ಣನ್ನು ನೀಡಲಾಗುತ್ತಿದೆ. ಇದಕ್ಕೆ ರಾಜ್ಯಾದ್ಯಂತ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಕೆಲ ಮಠಾಧೀಶರು, ಜಾತಿ ಸಂಘಟನೆಗಳು, ಸಸ್ಯಹಾರಿ ಸಂಘಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತವೆ. ಇನ್ನೊಂದೆಡೆ ಇದನ್ನು ರಾಜ್ಯದ್ಯಂತ ವಿಸ್ತರಿಸಬೇಕು. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ರದ್ದು ಮಾಡಬಾರದು ಎಂದು ಕೆಲವು ಸಂಘಟನೆಗಳು ದನಿ ಎತ್ತಿವೆ. ಹೈಸ್ಕೂಲ್ ವಿದ್ಯಾರ್ಥಿಗಳು ನಮಗೂ ಕೊಡಿ ಎಂದು ಹೇಳುತ್ತಿದ್ದಾರೆ.

ಬೆಳಗಾವಿಯಲ್ಲಿ ಕೆಲವು ಸಂಘಟನೆಗಳು ಮೊಟ್ಟೆ ಬೇಡವೆಂದರೆ ಕೆಲವು ಸಂಘಟನೆಗಳು ಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಅಂಗನವಾಡಿ ಹಾಗೂ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಮೊಟ್ಟೆ ನೀಡುತ್ತಿರುವ ಸರ್ಕಾರದ ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಿ ಬೆಳಗಾವಿಯ ಸಸ್ಯಾಹಾರಿ ನಾಗರೀಕರ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

ಮಕ್ಕಳು ಶಾಲೆಯಲ್ಲಿ ಊಟಕ್ಕೆ ಕುಳಿತಾಗ ಎಲ್ಲರಿಗೂ ಒಂದೇ ತರಹದ ಆಹಾರವನ್ನು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ರಾಜೇಶ್ ಕಟಾರಿಯ ಜೈನ್, ವಿಶ್ವಗುರು ಬಸವ ಮಂಟಪದ ಅಧ್ಯಕ್ಷ ಶ್ರೀ ಸದ್ಗುರು ಬಸವ ಪ್ರಕಾಶ್ ಸ್ವಾಮೀಜಿ ಹೀಗೆ ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹೊಸ ಹುರುಪು,ಹೊಸ ಯೋಜನೆಗಳು : ಸಿ.ಎಂ

0

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿಧಾನಪರಿಷತ್ ಚುನಾವಣೆ ಬಳಿಕ ಹೊಸ ಹುರುಪಿನೊಂದಿಗೆ ಆಡಳಿತ ನಡೆಸುವ ನಿಟ್ಟಿನಲ್ಲಿ ಸರ್ಕಾರದ ರಿಪೋರ್ಟ್ ಬಿಡುಗಡೆ ಮಾಡಲಿದ್ದಾರೆ.

ಈ ರಿಪೋರ್ಟ್ ಸರ್ಕಾರದ ಪ್ರಾಬಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜನಪರ ಯೋಜನೆಯ ಪ್ರಕಟಿಸುವ ಸಿದ್ಧತೆಯಲ್ಲಿದೆ. ಈ ಮೂಲಕ ರಿಪೋರ್ಟ್ ಕಾರ್ಡ್ ಸ್ಪೆಷಲ್ ಪ್ರಾಜೆಕ್ಟ್ ನತ್ತ ಫೋಕಸ್ ಮಾಡಲು ಸಿಎಂ ಮುಂದಾಗಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಲಿಜೆಂಡ್ಸ್ ಲೀಗ್ ಕ್ರಿಕೆಟ್ : ಅಮಿತಾಬ್ ರಾಯಭಾರಿ

ನಿವೃತ್ತ ಅಂತರರಾಷ್ಟ್ರೀಯ ಕ್ರಿಕೆಟ್ ಆಟಗಾರರನ್ನೊಳಗೊಂಡ ಲೆಜೆಂಡ್ಸ್ ಲೀಗ್ ಕ್ರಿಕೆಟ್ ರಾಯಭಾರಿಯಾಗಿ ಬಾಲಿವುಡ್ ನ ನಟ ಅಮಿತಾ ಬಚ್ಚನ್ ಅವರೊಂದಿಗೆ ಲೀಗ್ ಆಡಳಿತ ಮಂಡಳಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದೆ.

“ಹಳೆಯ ನೆನಪುಗಳನ್ನು ಮೆಲುಕು ಹಾಕಲು ಇದು ಉತ್ತಮ ವೇದಿಕೆಯಾಗಲಿದೆ. ಪಂದ್ಯಗಳನ್ನು ವೀಕ್ಷಿಸಲು ಕಾತರನಾಗಿದ್ದೇನೆ” ಎಂದು ಬಿಗ್ ಬಿ ಅಮಿತಾಬ್ ಬಚ್ಚನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಒಮನ್ ನ ಅಲ್ ಅಮೆರತ್ ಕ್ರೀಡಾಂಗಣದಲ್ಲಿ ಭಾರತ ಏಷ್ಯಾ ಮತ್ತು ವಿಶ್ವದ ಇತರೆ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ನಟಿ ಕತ್ರಿನಾ,ವಿಕ್ಕಿ ಅದ್ಧೂರಿ ಮದುವೆ

ಬಾಲಿವುಡ್ ನ ಖ್ಯಾತ ನಟಿ ಕತ್ರಿನಾ ಕೈಫ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ವಿವಾಹವೂ ರಾಜಾಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ಬರ್ವರಾ ದಲಚ್ಲಿನ ಸಿಕ್ಸ್ ಸೆನ್ಸಸ್ ರೆಸಾರ್ಟ್ ನಲ್ಲಿ ನಡೆಯಿತು.

ಕತ್ರಿನಾ ತಮ್ಮ ಜೀವನ ಸಂಗಾತಿಯನ್ನಾಗಿ ವಿಕ್ಕಿ ಕೌಶಲ್ ಎಂಬ ವರನ ಕೈಹಿಡಿದಿದ್ದಾರೆ. ಕತ್ರಿನಾ ಅವರನ್ನು ಹೂವಿನ ಪಲ್ಲಕ್ಕಿಯಲ್ಲಿ ಮಂಟಪಕ್ಕೆ ಕರೆತರಲಾಯಿತು. ಕೆಂಪು ಮತ್ತು ಬಂಗಾರ ಬಣ್ಣದ ಅಂಚನ್ನು ಹೊಂದಿರುವ ಲೇಹೆಂಗಾ ಧರಿಸಿದ್ದರು.

ಕೊರೋನಾ ಮುಂಜಾಗ್ರತಾ ಕ್ರಮಗಳ ಪಾಲನೆಗಾಗಿ ಕೆಲವೇ ಕೆಲವು ಗಣ್ಯರನ್ನು ಮಾತ್ರ ಆಹ್ವಾನಿಸಲಾಗಿತ್ತು.

ವಿವಾಹದ ನಂತರ ಕತ್ರಿನಾ ಕೈಫ್ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.”ನಾವಿಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಿದ್ದೇವೆ. ನಿಮ್ಮ ಪ್ರೀತಿ ತುಂಬಿದ ಪಯಣಕ್ಕೆ ನಾನು ಋಣಿಯಾಗಿದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ, ಹಾಗೂ ಬೆಂಬಲ ಹೀಗೆಯೇ ಇರಲಿ”ಎಂದು ಕತ್ರಿನಾ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಕತ್ರಿನಾ ಅವರ ಪೋಸ್ಟ್ ಗೆ ಅನೇಕ ಶುಭ ಹಾರೈಕೆಯ ಸುರಿಮಳೆ ಸುರಿದಿದೆ.

ಇವರ ಮದುವೆಯ ಕುರಿತು ಕೊನೆಯ ಕ್ಷಣದವರೆಗೂ ಸಹ ಯಾರೂ ಮಾಹಿತಿ ನೀಡಿರಲಿಲ್ಲ. ಒಟಿಟಿ ವೇದಿಕೆಯಲ್ಲಿ ವಿವಾಹದ ವಿಡಿಯೋ ಬಿಡುಗಡೆಯಾಗುತ್ತಿರುವ ಕಾರಣ, ಇದಕ್ಕೆ ಸುಮಾರು 80 ಕೋಟಿ ರೂ. ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದೇಶ ರಕ್ಷಣೆಯೇ ಧ್ಯೇಯವಾಗಿದ್ದ, ಜನರಲ್ ಬಿಪಿನ್ ರಾವತ್

0

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ಭಾರತೀಯ ವಾಯುಪಡೆಯ ಎಂಐ- 17ವಿ5 ಹೆಲಿಕ್ಯಾಪ್ಟರ್ ಪತನಗೊಂಡಿತು. ಈ ದುರಂತದಲ್ಲಿ, ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ (63), ಅವರ ಪತ್ನಿ ಮಧುಲಿಕಾ, 7 ಅಧಿಕಾರಿಗಳು ಹಾಗೂ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ.
ರಾವತ್ ಅವರು ವೆಲ್ಲಿಂಗ್ ಟನ್ ನಲ್ಲಿನ ರಕ್ಷಣಾ ಸೇವಾ ಸಿಬ್ಬಂದಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಉಪನ್ಯಾಸ ನೀಡಲು ತೆರಳುತ್ತಿದ್ದರು.
ರಾವತ್, 2019ರಲ್ಲಿ ಭಾರತದ ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಬಿಪಿನ್ ರಾವತ್ ಅವರು, ಈ ಸ್ವರೂಪದ ಅಪಘಾತದಲ್ಲಿ ಮೃತಪಟ್ಟ ಸೇನೆಯ ಮೊದಲ ಅತ್ಯುನ್ನತ ಅಧಿಕಾರಿ.
ವೆಲ್ಲಿಂಗ್ ಟನ್ ನಿಂದ 88 ಕಿ.ಮೀ. ದೂರದಲ್ಲಿರುವ ಸೂಲೂರಿಗೆ ದಂಪತಿಗಳು ದೆಹಲಿಯಿಂದ ವಾಯುಪಡೆಯ ವಿಮಾನದ ಮೂಲಕ ಬುಧವಾರ ಬೆಳಿಗ್ಗೆ ಬಂದಿಳಿದಿದ್ದರು.
ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ವೆಲ್ಲಿಂಗ್ ಟನ್ ಗೆ ವಾಯುಪಡೆಯ ಹೆಲಿಕ್ಯಾಪ್ಟರ್ ನಲ್ಲಿ ಹೊರಟಿದ್ದರು. ವೆಲ್ಲಿಂಗ್ ಟನ್ ಹೆಲಿಪ್ಯಾಡ್ ನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದಾಗ, ಕೂನೂರಿನ ಬಳಿ ಹೆಲಿಕಾಪ್ಟರ್ ಪತನವಾಗಿದೆ.
ಕೂನೂರಿನ ಹೊರವಲಯದಲ್ಲಿದ್ದ ಮನೆಗಳಿಂದ ಕೆಲವೇ ಅಡಿ ದೂರದಲ್ಲಿ ಹೆಲಿಕ್ಯಾಪ್ಟರ್ ನೆಲಕ್ಕೆ ಅಪ್ಪಳಿಸಿದೆ.
ಅವಘಡದಲ್ಲಿ ಬದುಕುಳಿದಿದ್ದ ಇಬ್ಬರನ್ನು ವೆಲ್ಲಿಂಗ್ ಟನ್ ಸೇನಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾವತ್ ಅವರು ಅಸುನೀಗಿದ್ದಾರೆ. ಆರು ವರ್ಷಗಳ ಹಿಂದೆ ಅಂದರೆ 2015ರಲ್ಲಿ ನಾಗಾಲ್ಯಾಂಡ್ ನಲ್ಲಿ ಸಂಭವಿಸಿದ ಚೀತಾ ಹೆಲಿಕ್ಯಾಪ್ಟರ್ ಅಪಘಾತದಿಂದ ಪಾರಾಗಿದ್ದರು.
ಸದಾ ನಗುಮೊಗದ ಸೈನಿಕರಾಗಿದ್ದ ಜನರಲ್ ಬಿಪಿನ್ ರಾವತ್ ಅವರು ದೇಶದಲ್ಲಿ ಉನ್ನತ ರಕ್ಷಣಾ ವಿಭಾಗದಲ್ಲಿ ಸುಧಾರಣೆ ಆರಂಭಿಸಿದ ಸಾಹಸಿ.
ಬಿಪಿನ್ ರಾವತ್ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನ್ಯೂಕ್ಲಿಯರ್ ಕಮಾಂಡ್ ಅಥಾರಿಟಿಯ ಸದಸ್ಯರಾಗಿದ್ದರು.
ರಕ್ಷಣಾ ಸ್ವಾಧೀನ ಸಮಿತಿ, ರಕ್ಷಣಾ ಯೋಜನಾ ಸಮಿತಿ ಸದಸ್ಯರಾಗಿದ್ದರು.
ಅಂತರಾಷ್ಟ್ರೀಯ ಸಹಕಾರ ಯೋಜನೆ ರೂಪಿಸುವುದು, ಮಾನವೀಯ ನೆರವು ನೀಡುವುದು ಇವರ ಕಾರ್ಯವಾಗಿತ್ತು.
ಮೂರೂ ಪಡೆಗಳ ದಕ್ಷತೆ ಹೆಚ್ಚಿಸುವುದು, ಶೋಧ, ಪ್ರತಿದಾಳಿಗೆ ಅಣಿಗೊಳಿಸುವುದು. ದೇಶಿಯವಾಗಿ ಶಸ್ತ್ರಾಸ್ತ್ರ ಉತ್ಪಾದನೆ ಹೆಚ್ಚಿಸಲು ಯೋಜನೆ ಸಿದ್ಧಪಡಿಸುವುದು ಇವರ ಕಾರ್ಯವಾಗಿತ್ತು.
ಸೇನೆಯ ಮೂರು ಪಡೆಗಳಿಗೆ ಅವರು ನೀಡುತ್ತಿದ್ದ ರಕ್ಷಣಾ ಸಲಹೆ ಪ್ರಮುಖವಾಗಿತ್ತು. ಮೂರು ಪಡೆಗಳ ಮಧ್ಯೆ ಸಂವಹನ, ಸಂಪರ್ಕ ಸಾಧಿಸುವುದು ಅವರ ಹೊಣೆಗಾರಿಕೆಯಾಗಿತ್ತು.
ನಿರೀಕ್ಷಿತ ಬಜೆಟ್ ಆಧಾರದ ಮೇಲೆ ಬಂಡವಾಳ ಸ್ವಾಧೀನ ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದರು.
ಐದು ವರ್ಷದ ರಕ್ಷಣಾ ಬಂಡವಾಳ ಸ್ವಾಧೀನ ಯೋಜನೆ ರೂಪಿಸಿದ್ದರು.
ಗಡಿ ಬಿಕ್ಕಟ್ಟೇ ಉಂಟಾಗಲಿ, ವೈರಿಗಳಿಂದ ದಾಳಿಯೇ ಆಗಲಿ, ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಳೇ ಕೈಗೊಳ್ಳಲಿ, ಸೈನಿಕರನ್ನು ಮುನ್ನಡೆಸುವುದೇ ಇರಲಿ…ಅಲ್ಲೆಲ್ಲ ರಾವತ್ ಅವರು ತೋರಿದ ದಿಟ್ಟತನ, ಕೈಗೊಂಡ ಕ್ರಮಗಳು, ವಹಿಸಿದ ನಾಯಕತ್ವದಲ್ಲಿ ದೇಶಪ್ರೇಮ ತುಂಬಿತ್ತು.
ಚಾಕಚಕ್ಯತೆ, ಚಾಣಾಕ್ಷತನಕ್ಕೆ ಹೆಸರಾಗಿದ್ದ ಬಿಪಿನ್ ರಾವತ್ ಅವರು 2016 ಡಿ.31ರಂದು ದೇಶದ ಮೊದಲ ಸೇನಾ ಪಡೆಗಳ ಮುಖ್ಯಸ್ಥರಾಗಿ ಆಯ್ಕೆಯಾದರು. ಸೇನೆಯ ಮೂರೂ ಪಡೆಗಳ ಮಧ್ಯೆ ಸಂಪರ್ಕ, ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಸಿಡಿಎಸ್ ಸ್ಥಾಪಿಸಿತು. ಎರಡು ವರ್ಷದಿಂದ ನೂತನ ಜವಾಬ್ದಾರಿಯನ್ನು ರಾವತ್ ಅವರು ಸಮರ್ಪಕವಾಗಿ ನಿರ್ವಹಿಸುತ್ತಿದ್ದರು.
ಇವರಿಗೆ ಪರಮ ವಿಶಿಷ್ಟ ಸೇವಾ ಮೆಡಲ್, ಉತ್ತಮ ಯುದ್ಧ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ಯುದ್ದ ಸೇವಾ ಮೆಡಲ್ ( ವೈಎಸ್ಎಂ) , ಸೇನಾ ಮೆಡಲ್, ವಿಶಿಷ್ಟ ಸೇವಾ ಮೆಡಲ್ ಗಳು ಸಂದಿವೆ.
ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕುಲದೀಪ್, ಜೆಡಬ್ಲ್ಯೂ ಒ ಪ್ರದೀಪ್, ಜೆಡಬ್ಲ್ಯೂ ಒ ದಾಸ್, ನಾಯಕ್ ಗೂರ್ ಸೇವಕ್ ಸಿಂಗ್, ನಾಯಕ್ ಜಿತೇಂದ್ರ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ.ಸಾಯಿ ತೇಜ, ಹವಾಲ್ದಾರ್ ಸತ್ಪಾಲ್ ಅವರು ಮರಣ ಹೊಂದಿದ್ದಾರೆ. ಒಟ್ಟು 14 ಜನರಲ್ಲಿ 13 ಜನ ಮರಣ ಹೊಂದಿದ್ದು, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬದುಕುಳಿದಿದ್ದಾರೆ.
ಬಿಪಿನ್ ರಾವತ್ ಸೇರಿದಂತೆ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಎಲ್ಲರಿಗೂ ಹಲವು ಗಣ್ಯರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
“ರಾವತ್ ನಿಧನ ನನ್ನಲ್ಲಿ ದಿಗ್ಭ್ರಮೆ ಮೂಡಿಸಿದೆ. ಭಾರತವು ತನ್ನ ವೀರಪುತ್ರನೊಬ್ಬನನ್ನು ಕಳೆದುಕೊಂಡಿದೆ. ಅವರಿಗೆ ದೊರೆತ ಪ್ರಶಸ್ತಿಗಳು ಅವರು ನಾಲ್ಕು ದಶಕಗಳಲ್ಲಿ ದೇಶಕ್ಕಾಗಿ ಮಾಡಿರುವ ಸೇವೆಯನ್ನು ತೋರಿಸುತ್ತದೆ” ಎಂದು ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ಸಂತಾಪ ಸೂಚಿಸಿದ್ದಾರೆ.
“ಬಿಪಿನ್ ರಾವತ್ ಅತ್ಯುತ್ತಮ ಯುದ್ಧ ಮತ್ತು ನಿಜವಾದ ದೇಶಭಕ್ತರಾಗಿದ್ದರು. ತಂತ್ರ ಕುಶಲತೆ ಕುರಿತು ರಾವತ್ ಅವರು ಅಸಾಧಾರಣ ಒಳನೋಟ ಮತ್ತು ಮುನ್ನೋಟಗಳನ್ನು ಹೊಂದಿದ್ದರು. ಅವರ ನಿಧನ ನನ್ನನ್ನು ತೀವ್ರವಾಗಿ ಬಾಧಿಸುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.
“ಜನರಲ್ ರಾವತ್ ಅವರು ಅಸಾಧಾರಣ ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ದೇಶಕ್ಕೆ ಸೇವೆ ನೀಡಿದ್ದಾರೆ. ಸೇನಾಪಡೆಗಳ ಮುಖ್ಯಸ್ಥರಾಗಿ ಅವರು ಸೇನಾಪಡೆಗಳನ್ನು ಒಗ್ಗೂಡಿಸುವ ಯೋಜನೆಯನ್ನು ಹೊಂದಿದ್ದರು” ಎಂದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಸಂತಾಪ ಸೂಚಿಸಿದ್ದಾರೆ.
ಬಿಪಿನ್ ರಾವತ್ ದೇಶ ಕಂಡ ಅಪ್ರತಿಮ ಯೋಧರಲ್ಲಿ ಒಬ್ಬರು. ನಿಷ್ಠೆಯಿಂದ ತಾಯಿನಾಡಿನ ಸೇವೆ ಮಾಡಿದ್ದಾರೆ. ಅವರ ಕೊಡುಗೆ ಮತ್ತು ಬದ್ಧತೆಯನ್ನು ಪದಗಳಲ್ಲಿ ವರ್ಣಿಸಲಾಗುವುದಿಲ್ಲ. ಅವರ ಮರಣ ತುಂಬಾ ನೋವು ತಂದಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂತಾಪ ಸೂಚಿಸಿದ್ದಾರೆ.
” ಇದು ಹಿಂದೆಂದೂ ಕಂಡಿರದಂಥ ದುರಂತ. ಜನರಲ್ ಬಿಪಿನ್ ರಾವತ್ ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ದುರಂತದಲ್ಲಿ ಮಡಿದ ಇತರರಿಗೂ ನನ್ನ ಸಂತಾಪಗಳು. ಈ ನೋವಿನ ಸಂದರ್ಭದಲ್ಲಿ ದೇಶ ಒಟ್ಟಾಗಿ ನಿಲ್ಲುತ್ತದೆ”ಎಂದು ಕಾಂಗ್ರೆಸ್ ನಾಯಕ ಸಂಸದ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ.
ಹೆಲಿಕ್ಯಾಪ್ಟರ್ ಅಪಘಾತ ಪ್ರಕರಣದ ಬಗ್ಗೆ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಸಂಸತ್ತಿಗೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಒಮಿಕ್ರಾನ್ : ಆರ್ಥಿಕ ಪ್ರಗತಿಗೆ ಬಾಧಕ

0

ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧ ಸೆಣೆಸಲು ಭಾರತವು ಹೆಚ್ಚು ಸನ್ನದ್ಧವಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಕೋವಿಡ್ ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ನಿಂದಾಗಿ ಆರ್ಥಿಕ ಚೇತರಿಕೆಗೆ ಅಪಾಯ ಇದೆ ಎಂಬ ಕಾರಣಕ್ಕೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ತೀರ್ಮಾನಕ್ಕೆ ಬಂದಿದೆ.
ಈ ತೀರ್ಮಾನದಿಂದಾಗಿ ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರಗಳು ಇನ್ನೂ ಕೆಲವು ಸಮಯದವರೆಗೆ ಈಗಿರುವ ಮಟ್ಟದಲ್ಲಿಯೇ ಮುಂದುವರಿಯಲಿವೆ. ಅಲ್ಲದೇ ಇದು ಮಾರುಕಟ್ಟೆಯಲ್ಲಿ ಸಾರ್ವಜನಿಕರ ಕಡೆಯಿಂದ ಆಗುವ ಖರೀದಿ ಚಟುವಟಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡುವ ನಿರೀಕ್ಷೆಯಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ತಿಳಿಸಿದ್ದಾರೆ.
ಜುಲೈ ಮತ್ತು ಸೆಪ್ಟೆಂಬರ್ ಅವಧಿಯಲ್ಲಿ ದೇಶದ ಅರ್ಥವ್ಯವಸ್ಥೆಯು ಶೇ.8.4ರಷ್ಟು ಬೆಳವಣಿಗೆ ಸಾಧಿಸಿದೆ. ಇದು ವಿಶ್ವದ ಪ್ರಮುಖ ವ್ಯವಸ್ಥೆಗಳ ಪೈಕಿ ಅತಿ ವೇಗದ ಬೆಳವಣಿಗೆ. ಆದರೆ, ಕೊರೊನಾದ ಒಮಿಕ್ರಾನ್ ತಳಿಯು ಆರ್ಥಿಕ ಪುನಶ್ಚೇತನಕ್ಕೆ ಅಡ್ಡಿ ಉಂಟುಮಾಡಬಲ್ಲದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ.
ಒಮಿಕ್ರಾನ್ ತಳಿಯು ಹರಡುತ್ತಿರುವುದು ಮತ್ತು 5 ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಆರ್ಥಿಕ ಬೆಳವಣಿಗೆ ದರವನ್ನು ತಗ್ಗಿಸಬಲ್ಲ ಅಪಾಯಗಳಾಗಿ ಕಾಣುತ್ತಿವೆ ಎಂದು ದಾಸ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.