ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹವಾಲ ದಂಧೆ ಪ್ರಕರಣ ಪತ್ತೆಯಾಗಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಕ್ಷಿಣ ವಿಭಾಗದ ಪೊಲೀಸರನ್ನು ಸಂಪರ್ಕಿಸಿ ಅವಳ ಪ್ರಕರಣ ಮತ್ತು ಹಣ ವರ್ಗಾವಣೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಹಣ ವರ್ಗಾವಣೆ ಯಾಗಿರುವ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಹವಾಲ ಜಾಲದಲ್ಲಿ ಸಿಲುಕಿರುವ ಇರುವವರಿಗೆ ಇಡಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಪ್ರಕರಣ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಪೊಲೀಸರು ಜೆಪಿ ನಗರದಲ್ಲಿ ಕೇರಳ ಮೂಲದ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಾದ ಮೊಹಮ್ಮದ್ ಸಾಹಿಲ್, ಫೈಸಲ್ ಫಜಲ್ ಮತ್ತು ಅಬ್ದುಲ್ ಮನಾಸ್.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಬ್ಯಾಂಕ್ ಗಳ 2,656 ಖಾತೆಗಳಿಗೆ ನೂರಾರು ಕೋಟಿ ರೂಪಾಯಿ ಪಾವತಿ ಆಗಿರುವುದು ಬೆಳಕಿಗೆ
ಬಂದಿದ್ದರಿಂದ, ಸುಮಾರು 21 ಲಕ್ಷ ರೂ. ನಗದು ಹಣ ಹಾಗೂ ಬ್ಯಾಂಕ್ ಖಾತೆಗಳ ಹಣ ಜಮೆ ಮಾಡಿರುವ ರಶೀದಿಗಳನ್ನು ಜಪ್ತಿ ಮಾಡಲಾಗಿದೆ.
ಪೊಲೀಸರು ಆರೋಪಿಗಳು ಜೆ. ಪಿ. ನಗರದ ಬಾಡಿಗೆ ಮನೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಸಿಡಿಎಂ ಯಂತ್ರದಲ್ಲಿ ಹಣ ಪಾವತಿಸಿ ಪಡೆದಿರುವ ಚೀಟಿಗಳ ಬಂಡಲ್ ಸಿಕ್ಕಿದೆ. ಈ ರಶೀದಿ ಗಳ ಮಾಹಿತಿ ಪ್ರಕಾರ ಮೂರು ತಿಂಗಳಲ್ಲಿ 185 ಖಾತೆಗಳಿಗೆ ಸುಮಾರು 31ಕೋಟಿ ಇರುವ ಜಮೆ ಮಾಡಲಾಗಿದೆ. ಈ ಮೂರು ತಿಂಗಳಿಗೂ ಮೊದಲು ಜಮೆ ಮಾಡಿದ ಹಣದ ಚೀಟಿಗಳನ್ನು ಸುಟ್ಟಿರುವುದಾಗಿ ಆರೋಪಿಗಳು ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾರೆ.
ಈ ಜಾಲದ ಪ್ರಮುಖ ಆರೋಪಿ ರಿಯಾಜ್ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.