Sunday, February 8, 2026
Sunday, February 8, 2026
Home Blog Page 1837

ಹಸ್ತಕ್ಷೇಪ,ಅಲ್ಲಗಳೆದ ಸಚಿವ ಕೆ ಎಸ್ ಈಶ್ವರಪ್ಪ.

0

ಸ್ಥಳೀಯ ಗ್ರಾಮ ಪಂಚಾಯತಿ ಆಡಳಿತದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತ ಇದ್ದರೂ ವಿಧಾನಪರಿಷತ್ತಿನಲ್ಲಿ ಬಹುಮತದ ಕೊರತೆಯಿಂದಾಗಿ ಕೆಲವು ಕಾನೂನು ಯಶಸ್ವಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ.

ಸ್ಥಳೀಯ ಅಭಿವೃದ್ಧಿ ಕ್ರಿಯಾಯೋಜನೆಗಳನ್ನು ಜಿಪಂಗಿ ಕಳುಹಿಸಿ, ಅನುಮೋದನೆ ಪಡೆದುಕೊಳ್ಳುವಲ್ಲಿ ಸಮಸ್ಯೆಗಳ ಆಗುವ ಸಾಧ್ಯತೆಗಳಿವೆ. ಇಂತಹ ತಾಂತ್ರಿಕ ಕಾರಣಗಳಿಂದಾಗಿ 39 ಯೋಜನೆಗಳು ವಿಫಲಗೊಂಡಿವೆ. 6ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿ 1453ಗ್ರಾ.ಪಂ ಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳು ಯಶಸ್ವಿಯಾಗಿ ಸ್ಥಾಪನೆಗೊಂಡಿವೆ. ಬೇರೆಡೆ ಡಿಪಿಆರ್ ಆಗಿದೆ. ಸ್ಥಳ ಸಮಸ್ಯೆ ಸೇರಿದಂತೆ ಕೆಲವು ಅಡ್ಡಿಗಳಿವೆ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಮೀಸಲಾತಿ ಸಂಬಂಧಿತ 2800 ಆಕ್ಷೇಪಗಳು ಇರುವ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಉಪವಿಭಾಗೀಯ ಮಟ್ಟದಲ್ಲಿನ ಕೆಲವು ಕಚೇರಿಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಗಳಿದ್ದರೂ ಕಡತ ವಿಲೇವಾರಿ ವಿಳಂಬವಾಗುತ್ತಿದೆ. ಆದ್ದರಿಂದ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಇಲಾಖೆಗಳ ಕಚೇರಿ ವ್ಯವಸ್ಥೆ ಬಗ್ಗೆ ಸಮಾಲೋಚನೆ ನಡೆಯುತ್ತಿದೆ ಎಂದು ಕೆಎಸ್ ಈಶ್ವರಪ್ಪ ಅವರು ತಿಳಿಸಿದರು.

ಗ್ರಾ. ಪಂ ಗಳಿಗೆ ಸೋಲಾರ್ ಅಳವಡಿಸುವ ವಿಚಾರದಲ್ಲಿ ರಾಜ್ಯ ಮಟ್ಟದಲ್ಲಿ ಗುತ್ತಿಗೆ ನೀಡಲಾಗಿದೆ. ಇದರಿಂದ ಗ್ರಾ ಪಂ ಗಳ ಅಧಿಕಾರ ವಿಕೇಂದ್ರೀಕರಣ ಕಲ್ಪನೆಯನ್ನು ಕಸಿದುಕೊಳ್ಳಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ. ರಾಜ್ಯ ಸರ್ಕಾರ ಸೂಚಿಸಿದ ಏಜೆನ್ಸಿಯಿಂದಲೇ ಪಂಚಾಯಿತಿಗಳು ಸೋಲಾರ್ ಹಾಕಿಸಬೇಕು ಎಂಬ ರಾಜ್ಯ ಸರ್ಕಾರ ಯಾವ ಆದೇಶವನ್ನು ಮಾಡಿಲ್ಲ.

ಗುಣಮಟ್ಟಕ್ಕೆ ರಾಜಿ ಇಲ್ಲದಂತೆ ಪ್ರತಿ ಜಿಲ್ಲೆಗೂ ಒಬ್ಬರಂತೆ ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗಿದೆ. ಏಜೆನ್ಸಿ ಐದು ವರ್ಷಗಳ ನಿರ್ವಹಣೆ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಆದರೆ ಏಜೆನ್ಸಿಗಳ ಮೂಲಕವೇ ಸೋಲಾರ್ ಹಾಕಿಸುವುದು ಕಡ್ಡಾಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಾಗರದ, ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎಂಎಸ್ಐಎಲ್ ಅಧ್ಯಕ್ಷ ಮತ್ತು ಶಾಸಕ ಎಚ್. ಹಾಲಪ್ಪ, ಪಕ್ಷದ ಅಭ್ಯರ್ಥಿ ಡಿ.ಎಸ್ ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ. ಡಿ. ಮೇಘರಾಜ್, ಸ್ಥಳೀಯ ಮಂಡಳಗಳ ಅಧ್ಯಕ್ಷರಾದ ಲೋಕನಾಥ್ ಬಿಳಿಸಿರಿ ಇನ್ನು ಮುಂತಾದವರು ಉಪಸ್ಥಿತರಿದ್ದರು.

ಕೋವಿಡ್ ,ದೀರ್ಘ ಚಿಕಿತ್ಸೆ ನಂತರ ಚೇತರಿಸಿಕೊಂಡ ಮಹಿಳೆ.

0

ಕೆಲವು ದಿನಗಳ ಹಿಂದೆ ಕೊಪ್ಪಳದ 43 ವರ್ಷದ ಮಹಿಳೆಯರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. 158 ದಿನಗಳ ಚಿಕಿತ್ಸೆ ನಂತರ ನಗರದ ಜಿಲ್ಲಾಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ.

ಮಹಿಳೆಯ ಧೈರ್ಯದಿಂದಲೇ ವೈದ್ಯಕೀಯ ತಂಡ ಯಶಸ್ವಿ ಚಿಕಿತ್ಸೆ ನೀಡಲು ಸಾಧ್ಯವಾಯಿತು. 158 ದಿನಗಳ ನಂತರ ಮಹಿಳೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸುಧೀರ್ಘ ಚಿಕಿತ್ಸೆಯಿಂದ ರೋಗ ಚೇತರಿಕೆ ಕಂಡ ಮೊದಲ ಪ್ರಕರಣವಾಗಿದೆ ಎಂದು ಕಿಮ್ಸ್ ವೈದ್ಯಕೀಯ ವಿಭಾಗದ ಡಾ. ವೇಣುಗೋಪಾಲ್ ತಿಳಿಸಿದ್ದಾರೆ.

ಜುಲೈ 13ರಂದು ಯಲಬುರ್ಗಾ ತಾಲೂಕಿನ ಬೇಲೂರು ಗ್ರಾಮದ ಮಹಿಳೆಯೊಬ್ಬರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರು ಕೋವಿಡ್ ನಿಂದ ತೀವ್ರ ಅಸ್ವಸ್ಥರಾಗಿದ್ದರು. ಈಕೆಗೆ ಸಿಟಿ ಸ್ಕ್ಯಾನ್ ಮಾಡಿಸಿದಾಗ ಶ್ವಾಸಕೋಶದ ಶೇ. 93ರಷ್ಟು ಭಾಗಕ್ಕೆ ಹಾನಿ ಉಂಟಾಗಿರುವುದು ಸ್ಪಷ್ಟವಾಗಿದೆ. ಮಹಿಳೆ ಬದುಕಿ ಉಳಿಯುವ ಸಾಧ್ಯತೆ ಕಡಿಮೆಯಿದೆ ಎಂದು ವೈದ್ಯರು ಭಾವಿಸಿ ಚಿಕಿತ್ಸೆಯನ್ನು ಪ್ರಾರಂಭಿಸಿದರು. ಆ ಚಿಕಿತ್ಸೆ ಫಲಕಾರಿಯಾಗಿ ಮಹಿಳೆ ಗುಣಮುಖರಾಗಿದ್ದಾರೆ.

ಈ ಮಹಿಳೆಯು ಆಸ್ಪತ್ರೆಯಲ್ಲಿದ್ದ 158 ದಿನದಲ್ಲಿ 104 ದಿನದವರೆಗೆ ವೆಂಟಿಲೇಟರ್ ಮೇಲೆ ಅವಲಂಬಿತರಾಗಿದ್ದರು. 8 ದಿನದವರೆಗೆ ಎಚ್ಎಫ್ ಎಂಸಿ ಎಲ್ಲಿ ಕಳೆದಿದ್ದಾರೆ. ಒಂದು ದಿನಕ್ಕೆ ಆರಂಭದಲ್ಲಿ 15ರಿಂದ 20 ಲೀಟರ್ ಆಕ್ಸಿಜನ್ ಬೇಕಾಗುತ್ತಿತ್ತು.

ಜಿಲ್ಲಾದ್ಯಂತ ಕೊರೊನಾ ಸೋಂಕು ಇಳಿಮುಖವಾದರೂ, ಮಹಿಳೆಗೆ ಚಿಕಿತ್ಸೆ ಮುಂದುವರಿಸಲಾಗಿತ್ತು.

ಕಿಮ್ಸ್ ನ ವೈದ್ಯಕೀಯ ತಂಡ ನಿರಂತರವಾಗಿ ಚಿಕಿತ್ಸೆ ನೀಡಿದೆ. ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದರೂ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಗಿದೆ. ಮನೆಯಲ್ಲೂ ಆಕ್ಸಿಜನ್ ಗೆ ವ್ಯವಸ್ಥೆ ಮಾಡಿಕೊಡಲಾಗಿದೆ. ಮಹಿಳೆಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ ತಕ್ಷಣ ಚಿಕಿತ್ಸೆ ಸಿಗಲಿದೆ.

ರಕ್ಷಣಾ ಪಡೆ ಮುಖ್ಯಸ್ಥರಿದ್ದ ಹೆಲಿಕಾಪ್ಟರ್ ಪತನ

0

ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥರಾದ
ಶ್ರೀ ಬಿಪಿನ್ ರಾವತ್ ಪ್ರಯಾಣಿಸುತ್ತಿದ್ದ
ವಾಯುಪಡೆಯ ಹೆಲಿಕ್ಯಾಪ್ಟರ್ ಪತನಗೊಂಡಿದೆ. ತಮಿಳುನಾಡಿನ ಕುನೂರಿನಲ್ಲಿ ಈ ಘಟನೆ ಸಂಭವಿಸಿದೆ.
ರಕ್ಷಣಾ ಪಡೆಗಳ ಮುಖ್ಯಸ್ಥರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಪಿನ್ ರಾವತ್ ಅವರ ಪತ್ನಿ ಶ್ರೀಮತಿ ಮಧುಲಿಕಾ ರಾವತ್ ಅವರೂ ಪ್ರಯಾಣಿಸುತ್ತಿದ್ದರು ಎಂದು ವರದಿ ತಿಳಿದುಬಂದಿದೆ.
ರಕ್ಷಣಾ ಪಡೆಗಳ ಮುಖ್ಯಸ್ಥರೊಂದಿಗೆ ಇನ್ನೂ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಹೆಲಿಕಾಪ್ಟರ್ ನಲ್ಲಿದ್ದ 14 ರಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಈಗಾಗಲೇ ಘೋಷಿಸಲಾಗಿದೆ.

ಖರೀದಿ ಪ್ರಕ್ರಿಯೆ. ರೈತರಲ್ಲಿ ಭೇದ ಬೇಡ

0

ಮಳೆ ಮತ್ತು ಪ್ರವಾಹದಿಂದಾಗಿ ರೈತರ ಬೆಳೆಗಳು ನೀರುಪಾಲಾಗಿವೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಳಗಾವಿ ಅಧಿವೇಶನದಲ್ಲಿ ಬೆಳೆ ಪರಿಹಾರ ಘೋಷಿಸಬೇಕು. ಪ್ರಾಕೃತಿಕ ವಿಕೋಪದಲ್ಲಿ ರೈತರಿಗಾದ ನಷ್ಟ ಪರಿಹಾರ ಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂದು ರೈತ ನಾಯಕ ಕೆ.ಟಿ‌. ಗಂಗಾಧರ ಅವರು ತಿಳಿಸಿದ್ದಾರೆ .
ಎಸ್ ಡಿಆರ್ ಎಫ್ ಮತ್ತು ಎನ್ ಡಿಆರ್ ಎಫ್ ನಿಂದ ಬೆಳೆನಷ್ಟ ತುಂಬಿಕೊಡಬೇಕು. ಭತ್ತ ಮೆಕ್ಕೆಜೋಳಕ್ಕೆ, ಫಂಗಸ್ ತಗುಲಿದ ಪರಿಣಾಮ ತಿನ್ನಲು ಯೋಗ್ಯವಾಗಿಲ್ಲ. ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ರಾಷ್ಟ್ರೀಯ ವಿಕೋಪ ಪರಿಸ್ಥಿತಿ ಘೋಷಣೆ ಮಾಡಬೇಕು ಎಂದರು.
ಹಾವೇರಿಯ ಹುಕ್ಕೇರಿಮಠದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
ಕನಿಷ್ಠ ಬೆಂಬಲ ಬೆಲೆಯಡಿ ಸಣ್ಣ ರೈತರ ಬತ್ತವನ್ನು ಮಾತ್ರ ಖರೀದಿ ಮಾಡುತ್ತೇವೆ ಎಂದು ಸರ್ಕಾರ ಹೇಳುತ್ತಿರುವುದು ಸರಿಯಾದ ಕ್ರಮವಲ್ಲ. ರೈತರ ಮಧ್ಯೆ ಭೇದಭಾವ ಮಾಡದೇ, ಎಲ್ಲ ರೈತರ ಭತ್ತವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನೋಟರಿಗಳ ಕಾಯಿದೆ ಪರಿಷ್ಕರಣೆ

0

ನೋಟರಿ ಗಳಾಗಿ ಕಾರ್ಯನಿರ್ವಹಿಸಲು ಇನ್ನಷ್ಟು ಯುವಕರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ನೋಟರಿ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ.

ಈ ಸಂಬಂಧ ಕರಡು ವಿಧೇಯಕವೂ ಸಿದ್ಧವಾಗಿದೆ. ಇದು ಕಾನೂನಾಗಿ ಜಾರಿಗೆ ಬಂದರೆ ,ನೋಟರಿ ಗಳು ತಮ್ಮ ವೃತ್ತಿಯಲ್ಲಿ ಮುಂದುವರಿಸಲು ನವೀಕರಣಗಳ ಸಂಖ್ಯೆಗೆ ಮಿತಿ ಬೀಳಲಿದೆ.

ಪ್ರಸ್ತುತ ನೋಟರಿ ಗಳು ಯಾವುದೇ ಮಿತಿಯಿಲ್ಲದೆ ಎಷ್ಟು ಬಾರಿ ಬೇಕಾದರೂ ತಮ್ಮ ಪ್ರಮಾಣಪತ್ರವನ್ನು ನವೀಕರಿಸಿಕೊಳ್ಳಲು ಅವಕಾಶವಿದೆ. ಇದರಿಂದ ಹೊಸಬರಿಗೆ ಅದರಲ್ಲೂ ಯುವಕರಿಗೆ ಅವಕಾಶ ಕೈತಪ್ಪುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ನವೀಕರಣಗಳ ಸಂಖ್ಯೆಯನ್ನು ಗರಿಷ್ಠ 15 ಕ್ಕೆ ಮಿತಿಗೊಳಿಸಲು ಕೇಂದ್ರ ಕಾನೂನು ಸಚಿವಾಲಯ ಮುಂದಾಗಿದೆ.

ಪರಿಷ್ಕೃತ ಕಾಯ್ದೆ ಪ್ರಕಾರ ಪ್ರಥಮ ಬಾರಿಗೆ ಐದು ವರ್ಷ, ಮತ್ತೆರಡು ಬಾರಿ ಐದು ವರ್ಷ ಸೇರಿದಂತೆ ಒಟ್ಟು ಹದಿನೈದು ವರ್ಷ ಮಾತ್ರ ಒಬ್ಬ ವ್ಯಕ್ತಿ ನೋಟರಿಯಾಗಿ ಕೆಲಸ ಮಾಡಬಹುದು ಎಂದು ಸಚಿವಾಲಯ ತಿಳಿಸಿದೆ. ಕಾನೂನು ಇಲಾಖೆಯ ವೆಬ್ ಸೈಟ್ ನಲ್ಲಿ ಕರಡು ವಿಧೇಯಕ ದ ಪ್ರತಿಯನ್ನು ಅಪ್ಲೋಡ್ ಮಾಡಲಾಗಿದೆ. ಜನರು ಡಿಸೆಂಬರ್ 15ರೊಳಗೆ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಬಹುದು.

ಲಸಿಕೆ ಸ್ಟಾಕ್ ಇದೆ, ಪಡೆಯುವವರೇ ಕಡಿಮೆ!

0

ಕೋವಿಡ್-19ನ ರೂಪಾಂತರಿ ವೈರಸ್ ಓಮಿಕ್ರಾನ್ ವಿಶ್ವವನ್ನೇ ಆತಂಕಕ್ಕೆ ನೂಕಿದೆ. ಈ ಬಗ್ಗೆ ಕ್ಷಿಪ್ರವಾಗಿ ಎಲ್ಲಾ ರಾಷ್ಟ್ರಗಳಲ್ಲಿ ಲಸಿಕೆ ಅಭಿಯಾನವನ್ನು ವೇಗವಾಗಿ ಕೈಗೊಳ್ಳಬೇಕು ಜಾಗತಿಕ ತಜ್ಞರು ತಿಳಿಸಿದ್ದಾರೆ.

“ದೇಶಾದ್ಯಂತ 23 ಕೋಟಿ ಡೋಸ್ ಲಸಿಕೆ ಬಾಕಿ ಉಳಿದಿದೆ. ಉತ್ತರ ಪ್ರದೇಶ ಮಹಾರಾಷ್ಟ್ರ ಪಶ್ಚಿಮ ಬಂಗಾಳ ಬಿಹಾರ ಹಾಗೂ ರಾಜಸ್ಥಾನದಲ್ಲಿ 11 ಕೋಟಿಗೂ ಅಧಿಕ ಡೋಸ್ ಗಳನ್ನು ಇನ್ನು ಕೂಡ ಜನರಿಗೆ ನೀಡಿಲ್ಲ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಉತ್ತರಪ್ರದೇಶದಲ್ಲಿ 3.5 ಕೋಟಿ ಜನ ಇನ್ನೂ 1 ಡೋಸ್ ಲಸಿಕೆ ಪಡೆದಿಲ್ಲ. ಬಿಹಾರದಲ್ಲಿ ಕೂಡ 1.89 ಕೋಟಿ, ಮಹಾರಾಷ್ಟ್ರ 1.71 ಕೋಟಿ ಹಾಗೂ ತಮಿಳುನಾಡಿನಲ್ಲಿ 1.54 ಕೋಟಿ ಮಂದಿ ಲಸಿಕೆ ಪಡೆದಿಲ್ಲ ಎಂದು ತಿಳಿದುಬಂದಿದೆ. ರಾಜ್ಯ ಸರ್ಕಾರಗಳು ಲಸಿಕ ಅಭಿಯಾನಕ್ಕೆ ವೇಗ ನೀಡದಿರುವುದೇ ಕೋಟ್ಯಾಂತರ ಲಸಿಕೆ ಉಳಿಯಲು ಕಾರಣ ಎಂದು ತಿಳಿದುಬಂದಿದೆ.

ಹೆದ್ದಾರಿ ಜೀವ ಸುರಕ್ಷತೆಗೆ ಕ್ರಮ ಕೈಗೊಳ್ಳಿ

0

ಕುಂಸಿಯ ರಾಷ್ಟ್ರೀಯ ಹೆದ್ದಾರಿ 206 ಈಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಕುಂಸಿ ಆಯನೂರು, ಚೋರಡಿ ಭಾಗದ ಜನರಲ್ಲಿ ಆತಂಕ ಉಂಟುಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ರಸ್ತೆಯಲ್ಲಿ ತ್ಯಾವರೆಕೊಪ್ಪದ ಸಿಂಹಧಾಮ ದವರೆಗೂ ದ್ವಿಪಥ ರಸ್ತೆಯಾಗಿದೆ. ತ್ಯಾವರೆಕೊಪ್ಪ ದಿಂದ ಸಾಗರದವರೆಗೂ ಒಂದೇ ರಸ್ತೆಯಿದೆ.
ಆಯನೂರು ಹಾಗೂ ಚೋರಡಿಗೆ ಹೋಲಿಸಿದರೆ ಕುಂಸಿಯ ರಾಷ್ಟ್ರೀಯ ಹೆದ್ದಾರಿ ಅತ್ಯಂತ ಸಣ್ಣದಾಗಿದೆ. ರಸ್ತೆ ಬದಿ ನಿಂತಿದ್ದ ನಮ್ಮ ತಂದೆ ನನ್ನ ಕಣ್ಣೆದುರೇ ರಸ್ತೆ ಅಪಘಾತದಲ್ಲಿ ಮೃತರಾದರು. ದಯವಿಟ್ಟು ರಸ್ತೆ ವಿಸ್ತರಣೆ ಮಾಡಿ, ಅಪಘಾತಗಳನ್ನು ತಪ್ಪಿಸಿ ಎಂದು ಸ್ಥಳೀಯರಾದ ಪ್ರಶಾಂತ್ ಡಿ.ಎನ್.ಅವರು ಮನವಿ ಮಾಡಿದ್ದಾರೆ.
ಆಯನೂರಿನಿಂದ ಕುಂಸಿಯನ್ನು ಹಾಯ್ದು ಚೋರಡಿ ತಲುಪುವ ರಸ್ತೆಯಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತಿವೆ.ಈ ಮಾರ್ಗದಲ್ಲಿ ಸುಮಾರು 6 ಶಾಲೆಗಳಿದ್ದು, 3 ಕಾಲೇಜುಗಳಿವೆ. ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದೇ ಶಾಲಾ-ಕಾಲೇಜುಗಳಿಗೆ ಜೀವ ಭಯದ ಹಂಗು ತೊರೆದು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಭಾಗದ ರಸ್ತೆ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ತಾತ್ಕಾಲಿಕವಾಗಿ ರಸ್ತೆ ನಿಯಮಗಳ ಸೂಚನಾ ಫಲಕ, ಹಂಪ್ಸ್ ಹಾಗೂ ಶಾಲಾ-ಕಾಲೇಜು ವಲಯಗಳಲ್ಲಿ ಝೀಬ್ರಾ ಗೆರೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಹಾಕಿಸಲಾಗುವುದು. ರಸ್ತೆ ವಿಸ್ತರಣೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಿವಮೊಗ್ಗದ ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ನಿಂಗಪ್ಪ ಅವರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ: ಯುವಜನರೇ ಜಾಗೃತೆ ವಹಿಸಿ

0

ಯುವಕ-ಯುವತಿಯರನ್ನು ಮೋಸಗೊಳಿಸಲು ಸಮಾಜದಲ್ಲಿ ಲೆಕ್ಕವಿಲ್ಲದಷ್ಟು ಮೋಸಗಾರರು ಹುಟ್ಟಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಯುವತಿಯರನ್ನು ಅವರ ಗಮನಕ್ಕೆ ಬರದೇ ಸಂಪರ್ಕಿಸುತ್ತಿದ್ದಾರೆ. ಮೋಸದ ಬಲೆಗೆ ಸೆಳೆಯುತ್ತಿದ್ದಾರೆ. ಇದರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಕೋಟಿ ಪೊಲೀಸ್ ಠಾಣೆಯ ಡಿವೈಎಸ್ ಪಿ ಗಜಾನನ ಸುತಾರಾ ಸಲಹೆ ನೀಡಿದ್ದಾರೆ.
ಶಿವಮೊಗ್ಗದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ವಯಂ ರಕ್ಷಣೆ ಕುರಿತು ಅರಿವು ಕಾರ್ಯಕ್ರಮವನ್ನು ಡಿವೈಎಸ್ಪಿ ಗಜಾನನ ಅವರು ಉದ್ಘಾಟಿಸಿದರು.
ಸೈಬರ್ ಅಪರಾಧದ ಕಡಿವಾಣಕ್ಕೆ ಸಂಬಂಧಿಸಿದ ಸರ್ಕಾರಗಳು ಹತ್ತು ಹಲವು ಕಾನೂನುಗಳನ್ನು ಜಾರಿಗೆ ತಂದಿದೆ. ಆದರೂ ಕಾನೂನುಗಳ ಕೆಳಗೆ ನುಸುಳಿ ಸೈಬರ್ ಕ
ಖದೀಮರು ಜನರನ್ನು ಯಾಮಾರಿಸುತ್ತಿದ್ದಾರೆ. ಅಪರಿಚಿತರಿಗೆ ಯಾವುದೇ ಓಟಿಪಿ, ಆಧಾರ್ ಕಾರ್ಡ್ ಸಂಖ್ಯೆ, ಈ ತಿಂಗಳ ಮಾಹಿತಿ ನೀಡದಂತೆ ಮಾಹಿತಿ ನೀಡಿದರು.
ಅಭಿವೃದ್ಧಿ ಹೊಂದುತ್ತಿರುವ ವಿಜ್ಞಾನ-ತಂತ್ರಜ್ಞಾನದ ಸಮಾಜದಲ್ಲಿ ಕಾಲೇಜು ಯುವತಿಯರು ಅತ್ಯಂತ ಜಾಗೃತರಾಗಿ ಸ್ಪಂದಿಸಬೇಕು ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಎಚ್‌.ಎಸ್. ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಾಧಿಕಾರಿ ಡಾ. ಬಾಲಕೃಷ್ಣ ಹೆಗಡೆ, ವಿ. ದೀಪಿಕಾ, ಐಕ್ಯೂಎಸಿ ಸಂಯೋಜಕ ಡಾ.ಓಂಕಾರಪ್ಪ, ಎನ್.ನಾಗವೇಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯ್ ಹಜಾರೆ ಟ್ರೋಫಿ : ಟೀಮ್ ಕರ್ನಾಟಕ

0

ವಿಜಯ್ ಹಜಾರೆ ಟ್ರೋಪಿ ಕ್ರಿಕೆಟ್ ಟೂರ್ನಿಯು ಇಂದಿನಿಂದ ತಿರುವನಂತಪುರದ ಮಂಗಳಪುರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈಚೆಗಷ್ಟೆ ನಡೆದ ಸೈಯದ್ ಮುಸ್ತಾಕ್ ಅಲಿ ಟಿ – 20 ಕ್ರಿಕೆಟ್ ಟೂರ್ನಿಯಲ್ಲಿ ಮನೀಶ್ ಬಳಗವು ರನ್ನರ್ಸ್ ಅಪ್ ಆಗಿತ್ತು. ರೋಚಕ ಫೈನಲ್ ನಲ್ಲಿ ತಮಿಳುನಾಡು ತಂಡವು ಚಾಂಪಿಯನ್ ಆಗಿದೆ.

‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವು ಪುದುಚೇರಿ ಎದುರು ಕಣಕ್ಕಿಳಿಯಲಿದೆ.ಪುದುಚೇರಿ ತಂಡದಲ್ಲಿ ಕನ್ನಡಿಗ ಪವನ್ ದೇಶಪಾಂಡೆ ಇದ್ದಾರೆ. ತಂಡದ ನಾಯಕತ್ವವನ್ನು ದಾಮೋದರನ್ ರೋಹಿತ್ ವಹಿಸಿದ್ದಾರೆ.ಮನೀಶ್ ಬಳಕ್ಕೆ ಮೊದಲ ಗುಂಪಿನಲ್ಲಿ ಬಲಾಡ್ಯ ತಂಡಗಳು ಇವೆ. ಆದರೆ ಪ್ರತಿ ಪಂದ್ಯದಲ್ಲಿ ಜಯಿಸುವುದು ಮಹತ್ವದ್ದಾಗಿದೆ.

ಸ್ಪಿನ್ನರ್ ಕೆ.ಸಿ. ಕಾರ್ಯಪ್ಪ ಮತ್ತು ಜೆ. ಸುಚಿತ್ ತಮಗಿರುವ ಅಲ್ಪಸ್ವಲ್ಪ ಅನುಭವವನ್ನು ಟಿ-20 ಟೂರ್ನಿಯಲ್ಲಿ ಸಮರ್ಥವಾಗಿ ಬಳಸಿಕೊಂಡರು. ಆದರೆ 50-50 ಯ ಮಾದರಿಯಲ್ಲಿ ಅನುಭವ ಆಲ್-ರೌಂಡರ್. ಸ್ಪಿನ್ನರ್ ಶ್ರೇಯಸ್ ಗೋಪಾಲ್ ಅವರಿಗೆ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆ. ಒಂದೊಮ್ಮೆ ಶ್ರೇಯಸ್ ಆಡಿದರೆ, ಕಾರ್ಯಪ್ಪನಿಗೆ ಅವಕಾಶ ಸಿಗುವುದು ಅನುಮಾನ. ತಿರುವನಂತಪುರದ ಪಿಚ್ ಸ್ಪಿನ್ನರ್ ಗಳಿಗೆ ನೆರವಾದರೆ 3 ಸ್ಪಿನ್ನರ್ ಮತ್ತು 2 ಮಧ್ಯಮಗಳನ್ನು ಕಣಕ್ಕಿಳಿಸಲು ಪಾಂಡೆ ಮನಸ್ಸು ಮಾಡಬಹುದು.

ಈಚೆಗೆ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡು ವಿರುದ್ಧ ಆಡಿರುವ ಅನುಭವ ಬೌಲರ್ ಗಳಿಲ್ಲದ ತಂಡವನ್ನು ಮನೀಶ್ ಫೈನಲ್ ನವರಿಗೆ ಮುನ್ನಡೆಸಿದ್ದರು. ತಮ್ಮ ಅಮೋಘ ಬ್ಯಾಟಿಂಗ್ ಮತ್ತು ಚುರುಕಾದ ಫಿಲ್ಡಿಂಗ್ ನಿಂದಾಗಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವಿದ್ಯಾಧರ್ ಪಾಟೀಲ್, ಎಂ.ಬಿ. ದರ್ಶನ್, ವೈಶಾಖ್ ವಿಜಯ್ ಕುಮಾರ್, ಬೌಲಿಂಗ್ ವಿಭಾಗದ ಉದಯೋನ್ಮುಖ ಪ್ರತಿಭೆ ಗಳಾಗಿವೆ. ಅನುಭವಿ ರೋನಿತ್ ಮೋರೆ ಮತ್ತು ಪ್ರಸಿದ್ಧ ಕೃಷ್ಣ ಮರಳಿದರೆ, ತಂಡದ ಬಲ ಹೆಚ್ಚುವ ನಿರೀಕ್ಷೆ ಇದೆ.

ಪಾಂಡೆ, ಕರುಣ್ ನಾಯರ್, ರೋಹನ್ ಕದಂ, ಆರ್. ಸಮರ್ಥ್ ಇವರುಗಳ ಜವಾಬ್ದಾರಿ ಹೆಚ್ಚಿದೆ. ಹೊಸ ಪ್ರತಿಭೆ ಅಭಿನವ್ ಮನೋಹರ್ ಇಲ್ಲಿಯೂ ಉತ್ತಮವಾಗಿ ಆಡುವ ಭರವಸೆ ಮೂಡಿಸಿದ್ದಾರೆ.

ಪೂರ್ವ ಸಿದ್ಧತಾ ಪರೀಕ್ಷೆ : ಶುಲ್ಕ ಹೆಚ್ಚಳ

0

ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಫೆಬ್ರವರಿ ತಿಂಗಳ ಮೊದಲನೇ ವಾರದಲ್ಲಿ ನಡೆಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ತೀರ್ಮಾನಿಸಿದೆ. ಪರೀಕ್ಷಾ ಮಂಡಳಿ ಪರೀಕ್ಷಾ ಶುಲ್ಕವನ್ನು 35.ರೂ. ಏಕಾಏಕಿ ಹೆಚ್ಚಿಸಿದೆ.

ಈ ಮೊದಲು ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯ ಪ್ರತಿ ವಿದ್ಯಾರ್ಥಿಯಿಂದ 25 ರೂ. ಶುಲ್ಕವನ್ನು ಪಡೆಯುತ್ತಿತ್ತು. ಈಗ ಪರೀಕ್ಷಾ ಶುಲ್ಕವನ್ನು 60 ರೂ. ಏರಿಕೆ ಮಾಡುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿ ಆದೇಶಿಸಿದೆ.

ರಾಜ್ಯದಲ್ಲಿ ಒಟ್ಟು 15 ಸಾವಿರ ಪ್ರೌಢಶಾಲೆಗಳಿದ್ದು, ಈ ಬಾರಿ 8 ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಗೆ ಕುಳಿತುಕೊಳ್ಳಬಹುದು ಎಂದು ಪರೀಕ್ಷಾ ಮಂಡಳಿ ಅಂದಾಜಿಸಿದೆ.

ಕೋವಿಡ್-19 ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ 2020-21 ನೇ ಸಾಲಿನಲ್ಲಿ ಕೇವಲ 40 ಅಂಕಗಳಿಗೆ ವಸ್ತುನಿಷ್ಠ ಮಾದರಿ ಪ್ರಶ್ನೆಗಳುಳ್ಳ ಪರೀಕ್ಷೆ ನಡೆಸಿತ್ತು. ಉತ್ತರಗಳನ್ನು ಒಎಂಆರ್ ಶೀಟ್ ಲ್ಲಿ ಬರೆಸಿ, ಮೌಲ್ಯಮಾಪನ ಮಾಡಲಾಗಿತ್ತು. ಆದರೆ ಈ ವರ್ಷ ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆ ಹಾಗೂ ಪೂರ್ವಸಿದ್ಧತಾ ಪರೀಕ್ಷೆಗಳನ್ನು 2019-20ನೇ ಸಾಲಿನಲ್ಲಿ ನಡೆಸಿದ ಮಾದರಿಯಲ್ಲೇ ಒಟ್ಟು 625 ಅಂಕಗಳಿಗೆ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಥಮಭಾಷಾ ವಿಷಯಕ್ಕೆ ಒಟ್ಟು 100 ಅಂಕಗಳಿಗೆ ಪರೀಕ್ಷೆ ಹಾಗೂ 25 ಅಂಕಗಳಿಗೆ ಆಂತರಿಕ ಮೂಲಕ ಮೌಲ್ಯಮಾಪನ ನಡೆಸಲಾಗುತ್ತದೆ ಉಳಿದ ಎಲ್ಲಾ ವಿಷಯಗಳಿಗೆ 80 ಅಂಕಗಳಿಗೆ ಪರೀಕ್ಷೆ ಮತ್ತು 20 ಅಂಕಗಳಿಗೆ ಆಂತರಿಕವಾಗಿ ಮೌಲ್ಯಮಾಪನ ನಡೆಯಲಿದೆ ಎಂದು ಪ್ರೌಢಶಿಕ್ಷಣ ಇಲಾಖೆಯ ತಿಳಿಸಿದೆ.