Sunday, February 8, 2026
Sunday, February 8, 2026
Home Blog Page 1838

ಗೈರುಹಾಜರಿಯಾದ ಸಂಸದರಿಗೆ ಪ್ರಧಾನಿ ಮೃದು ಚಾಟಿ

0

ಸಂಸತ್ ಅಧಿವೇಶನಕ್ಕೆ ಗೈರುಹಾಜರಾಗುವ ಸಂಸದರಿಗೆ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

‘ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಿ. ಇಲ್ಲದೆ ಹೋದರೆ ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಬದಲಿಸುತ್ತೇವೆ’ ಎಂದು ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

ಸಂಸದರಿಗೆ ಸ್ವಯಂ ಶಿಸ್ತು ಬೇಕು. ಅಧಿವೇಶನ ಒಂದು ಗಂಭೀರವಾದ ವಿಷಯ. ಕಲಾಪದಲ್ಲಿ ಪಾಲ್ಗೊಳ್ಳದೇ ಇರುವುದಕ್ಕಿಂತಲೂ ಮುಖ್ಯವಾದ ಕೆಲಸ ಸಂಸದರಿಗೆ ಮತ್ತೇನು ಇರುತ್ತದೆ. ಗೈರು ಆಗಬೇಡಿ ಎಂದು ಎಷ್ಟು ಬಾರಿ ಹೇಳಬೇಕು? ನೀವು ಸಣ್ಣ ಮಕ್ಕಳಲ್ಲ, ಸಂಸದರು. ಪ್ರಸ್ತುತ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನೀವು ಬದಲಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಿಮ್ಮನ್ನು ಬದಲಿಸಲಾಗುತ್ತದೆ ಪ್ರಧಾನಿ ಎಚ್ಚರಿಕೆ ಸಂದೇಶವನ್ನು ಬಿಜೆಪಿ ಸಂಸದರರೊಬ್ಬರಿಗೆ ಹೇಳಿದ್ದಾರೆ.

ಅಧಿವೇಶನಕ್ಕೆ ಸಂಸದರೆಲ್ಲರೂ ಹಾಜರಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಎಲ್ಲಾ ಪಕ್ಷಗಳು ಫರ್ಮಾನು
ಹೊರಡಿಸುತ್ತವೆ. ಆದರೂ ಅನೇಕ ಸಂಸದರು ಒಂದಲ್ಲ ಒಂದು ಕಾರಣಕ್ಕೆ ಗೈರು ಹಾಜರಾಗುತ್ತಿದ್ದಾರೆ. ಇದಕ್ಕೆ ಆಡಳಿತಾರೂಢ ಬಿಜೆಪಿ ಸಂಸದರೂ ಹೊರತಲ್ಲ.

ತೋಟಗಾರಿಕೆ ಇಲಾಖೆ ನೇಮಕಾತಿ, ಆದೇಶ ಶೀಘ್ರ

0

ಸಹಾಯಕ ತೋಟಗಾರಿಕಾ ಅಧಿಕಾರಿಗಳು ನೇರನೇಮಕಾತಿ ಸಂಬಂಧಿಸಿದಂತೆ ಯಾರಾದರೂ ಕಾನೂನುಬಾಹಿರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣಗಳು ಇಲಾಖೆ ಗಮನಕ್ಕೆ ಬಂದರೆ ಅಂತಹವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ಸಚಿವ ಮುನಿರತ್ನ ಅವರು ತಿಳಿಸಿದ್ದಾರೆ.
ಆಯ್ಕೆಯಾಗಿರುವ 306 ಅಭ್ಯರ್ಥಿಗಳ ಪೈಕಿ 293 ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಮಾಣ ಪತ್ರ, ಪೊಲೀಸ್ ವರದಿ ಪರಿಶೀಲನೆ ಆಗಿದ್ದು, ವೈದ್ಯಕೀಯ ತಪಾಸಣೆಯೂ ಪೂರ್ಣಗೊಂಡಿದೆ. ಇನ್ನು 14 ಅಭ್ಯರ್ಥಿಗಳ ದಾಖಲೆಗಳು ಪರಿಶೀಲನಾ ಹಂತದಲ್ಲಿವೆ. ಆದರೂ ಸಹ ಇನ್ನುಳಿದ ಅಭ್ಯರ್ಥಿಗಳಿಗೆ ಕೂಡಲೇ ನೇಮಕಾತಿ ಆದೇಶ ನೀಡಿ,6 ತಿಂಗಳು ತರಬೇತಿ ನೀಡಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ಯವರಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಆಯ್ಕೆಯಾದ ಯಾರೊಬ್ಬರೂ ಅಂಕಪಟ್ಟಿ ಕೋರಿಕೆ ಸಲ್ಲಿಸಿಲ್ಲ. ಹಾಗೊಂದು ವೇಳೆ ಸಲ್ಲಿಸಿದ್ದರೆ ಅಂಕಪಟ್ಟಿ ನೀಡಲಾಗುವುದು. ಸಿಂಧುತ್ವ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ವ್ಯಾಸಂಗ ದೃಢೀಕರಣ ಪತ್ರ, ಮತ್ತು ಗ್ರಾಮೀಣ ಅಭ್ಯರ್ಥಿಯ ದೃಢೀಕರಣ ಪತ್ರಗಳನ್ನು ಹಾಜರುಪಡಿಸಿದೇ ಇರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ನೇಮಕಾತಿ ಆದೇಶ ಹೊರಡಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ನೇಮಕಾತಿ ಆದೇಶ ನೀಡಲು ಹಣಕ್ಕೆ ಬೇಡಿಕೆ ಇಡಲಾಗಿದೆ ಎಂಬ ಅಂಶ ಸತ್ಯಕ್ಕೆ ದೂರ ಎಂದು ತಿಳಿಸಿದೆ.

ಹವಾಮಾನ ವೈಪರೀತ್ಯ : ಚಂಡಮಾರುತಗಳ ಸೃಷ್ಟಿಗೆ ಕಾರಣ

0

ನಗರೀಕರಣ ಅರಣ್ಯ ನಾಶ ಹೀಗೆ ಆಧುನೀಕರಣಕ್ಕೆ ಪ್ರಕೃತಿಯ ಮೇಲೆ ಮಾನವನಿಂದ ಬೀರುತ್ತಿರುವ ದುಷ್ಪರಿಣಾಮಕ್ಕೆ ಪ್ರಕೃತಿ ಸಹಜವಾಗಿ ಆಗಾಗ ತಕ್ಕ ಉತ್ತರ ಕೊಡುತ್ತಿದೆ. ವಾತಾವರಣದಲ್ಲಿ ಆಗುತ್ತಿರುವ ವ್ಯತ್ಯಾಸದಿಂದಾಗಿ 2035 ರ ವೇಳೆಗೆ ದಕ್ಷಿಣ ಭಾರತದಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗಲಿದೆ. ಮಳೆ ಪ್ರಮಾಣ, ಸೈಕ್ಲೋನ್ ಸೃಷ್ಟಿ ನಿರೀಕ್ಷೆಗೂ ಮೀರಿ ಅಧಿಕವಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದೆ.

ವಾತಾವರಣದಿಂದ ಆಗುತ್ತಿರುವ ವೈಪರೀತ್ಯದಿಂದಾಗಿ ವರ್ಷದ ಮಳೆ ಒಂದೆರಡು ದಿನಗಳಲ್ಲಿ ಸುರಿಯುವಂತೆ ಮಾಡುತ್ತಿದೆ. ಇದರಿಂದಾಗಿ ವರ್ಷಕ್ಕೆ 6ಕ್ಕೂ ಹೆಚ್ಚು ಸೈಕ್ಲೋನ್ ಹೊಡೆತಗಳನ್ನ ಎದುರಿಸಲಾಗುತ್ತಿದೆ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

1880 ನಿಂದ 1980 ರ ನಡುವಿನ 1 ಶತಮಾನದಲ್ಲಿ ಒಂದು ಡಿಗ್ರಿ ತಾಪಮಾನ ಏರಿಕೆಯ ವ್ಯತ್ಯಾಸವಷ್ಟೇ ಇದೆ. ಆದರೆ ಆ ಬಳಿಕ ಕೇವಲ 20 ವರ್ಷಗಳಲ್ಲಿ ಏರಿಕೆ ಕಂಡುಬಂದಿದೆ. 2000 ರಿಂದ 2020 ರ ನಡುವೆ ಇದೇ ಬದಲಾವಣೆ ಮತ್ತಷ್ಟು ವೇಗವಾಗಿ ಕಂಡುಬಂದಿದೆ.

‘ಪಶ್ಚಿಮಘಟ್ಟಗಳಲ್ಲಿ ವಾತಾವರಣದಲ್ಲಿನ ಉಷ್ಣತೆಯಿಂದಾಗಿ ಸಮಸ್ಯೆಗಳು ಹೆಚ್ಚಾಗಿದೆ. 2030ರ ವೇಳೆಗೆ ಶೇ. 30 ರಷ್ಟು ಪಶ್ಚಿಮ ಘಟ್ಟಗಳ ಅರಣ್ಯಕ್ಕೆ ಗಂಭೀರ ಸ್ವರೂಪದ ಹಾನಿ ಸೃಷ್ಟಿಯಾಗಲಿದೆ ಹಾಗೂ ಈಗಾಗಲೇ ಇಲ್ಲಿನ ಹಸಿರು ಪದರಕ್ಕೆ ತೀವ್ರ ಹಾನಿಯಾಗಿದೆ. ಈ ಕಾರಣದಿಂದಾಗಿ ಪಶ್ಚಿಮಘಟ್ಟ ಭಾಗದಲ್ಲಿ ಭೂಕುಸಿತ, ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತಿದೆ. ಪರಿಸ್ಥಿತಿಗಳು ಸುಸ್ಥಿತಿಗೆ ಬರಬೇಕೆಂದರೆ ಸರ್ಕಾರವು ಕೂಡಲೇ ವಿಜ್ಞಾನಿಗಳ ವರದಿಗಳಿಗೆ ಮಹತ್ವ ನೀಡಬೇಕಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಟಿ.ವಿ.ರಾಮಚಂದ್ರ ತಿಳಿಸಿದ್ದಾರೆ.

‘ತಾಪಮಾನ ಏರಿಕೆಯೊಂದಿಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿನ ನಗರೀಕರಣದ ಪರಿಣಾಮ ಹವಾಮಾನ ತೀವ್ರಗತಿಯಲ್ಲಿ ಬದಲಾಗುತ್ತಿದೆ’ ಎಂದು ಹಿರಿಯ ಹವಾಮಾನ ತಜ್ಞ ಎಂ.ಬಿ.ರಾಜೇಗೌಡ ಹೇಳಿದ್ದಾರೆ.

ಪ್ರತಿಭಾ ಕಾರಂಜಿ…ಆನ್ ಲೈನ್ ಆಶ್ರಯ?

0

ಕಳೆದ ವರ್ಷ ಕೊರೊನಾತಂಕದ ಕಾರಣ ಪ್ರತಿಭಾ ಕಾರಂಜಿ, ಕ್ರೀಡಾಕೂಟಗಳು ರದ್ದಾಗಿದ್ದವು.ಹೀಗಾಗಿ ವಿದ್ಯಾರ್ಥಿಗಳಿಗೆ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಈ ವರ್ಷವೂ ಓಮಿಕ್ರಾನ್ ಭೀತಿಯಿಂದಾಗಿ ಪ್ರತಿಭಾ ಕಾರಂಜಿ ಸೇರಿದಂತೆ ಪಠ್ಯೇತರ ಚಟುವಟಿಕೆಗಳು ನಡೆಯುವುದು ಕಷ್ಟಕರವಾಗಲಿದೆ. ಹೀಗಾಗಿ ಆನ್ಲೈನ್ ಕಾರ್ಯಚಟುವಟಿಕೆ ಸೇರಿದಂತೆ ಪರಿಹಾರದ ಬೇರೆ ದಾರಿಯನ್ನು ಸರ್ಕಾರ ಕಂಡುಕೊಳ್ಳಬೇಕಿದೆ.
ಗ್ರಾಮೀಣ ಮಾತ್ರವಲ್ಲದೆ ನಗರ ಪ್ರದೇಶಗಳನ್ನು ಬಹುತೇಕ ವಿದ್ಯಾರ್ಥಿಗಳು ರಜೆ ಅವಧಿಯಲ್ಲಿ ಮೊಬೈಲ್ ಗಳ ಮುಂದೆ ಕುಳಿತು ಬೊಜ್ಜು ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಒಂದೇ ಪ್ರದೇಶದಲ್ಲಿ ಮೊಬೈಲ್ ಕೇಂದ್ರಿತವಾಗಿ ಕುಳಿತುಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆ ಸೃಷ್ಟಿಯಾಗಿವೆ. ಪೋಷಕರು ಎಷ್ಟೇ ಹೇಳಿದರೂ ಈ ಅಭ್ಯಾಸಗಳನ್ನು ವಿದ್ಯಾರ್ಥಿಗಳು ಬದಲಿಸಿ ಕೊಳ್ಳುತ್ತಿಲ್ಲ. ಹೀಗಾಗಿ ಶಿಕ್ಷಕರು ಅಂಕದ ನೆಪದಲ್ಲಿ ಅಥವಾ ಸ್ಪರ್ಧಾಮನೋಭಾವದಲ್ಲಾದರೂ ಮಕ್ಕಳಿಗೆ ದೈಹಿಕ ಚಟುವಟಿಕೆಗಳನ್ನು ಆಸಕ್ತಿ ನಡೆಸಿಕೊಳ್ಳುವ ಹವ್ಯಾಸಗಳನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ.
ರಾಜ್ಯದಲ್ಲಿ ಕೊರೊನಾತಂಕ ಪೂರ್ಣಪ್ರಮಾಣದಲ್ಲಿ ಇಳಿಮುಖ ಕಾಣದ ಹಿನ್ನೆಲೆ ಈ ವರ್ಷವೂ ಪ್ರತಿಭಾ ಕಾರಂಜಿ ಕಾರ್ಯಕ್ರಮ ರದ್ದು ಮಾಡಲಾಗಿದ್ದು, ಶೈಕ್ಷಣಿಕ ಚಟುವಟಿಕೆಗೆ ಮತ್ತು ನೀಡಲಾಗಿದೆ ಎಂದು ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ತಿಳಿಸಿದ್ದಾರೆ.
ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಅಗತ್ಯವಿದ್ದು, ಶಾಲೆಗಳಲ್ಲಿ ಗುಂಪು ಸೇರಿಸದೆ ಆನ್ ಲೈನ್ನ್ ನಲ್ಲಿ ಆಯಾ ಮನೆಗಳಲ್ಲಿ ಪೋಷಕರು ಈ ಕಲೆಗಳಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾದ ಡಾ. ಪದ್ಮಾ ಪ್ರಕಾಶ್ ಅವರು ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಶಾಲೆಗಳಲ್ಲೂ ಪ್ರತ್ಯೇಕ ವಾಟ್ಸಪ್ ಗ್ರೂಪ್ ಗಳನ್ನು ಮಾಡಿಕೊಂಡಿದ್ದು, ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳತ್ತ ಮುಖ ಮಾಡಿದ್ದರು. ಈ ಗ್ರೂಪ್ ಗಳು ಟೆಸ್ಟ್ ನಡೆಸಲು, ನೋಟ್ಸ್ ಕಳಿಸಲಷ್ಟೇ ಸೀಮಿತಗೊಂಡಿವೆ. ಇದು ಗ್ರೂಪ್ ಗಳನ್ನು ಬಳಸಿಕೊಂಡು ವಾರಾಂತ್ಯದಲ್ಲಿ ಆನ್ಲೈನ್ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳನ್ನು ಮಾಡಬಹುದು. ಚರ್ಚಾ ಸ್ಪರ್ಧೆ, ಆಶುಭಾಷಣ, ಪ್ರಬಂಧದಂತಹ ಚಟುವಟಿಕೆಗಳ ಮೂಲಕ ನಾಯಕತ್ವ ಗುಣ, ಜ್ಞಾನವೃದ್ಧಿ, ದೇಶಕ್ಕೆ ಉಪಯುಕ್ತ ಸಲಹೆಗಳನ್ನು ನೀಡುವ ಕೌಶಲಗಳನ್ನು ಪ್ರೌಢಾವಸ್ಥೆಯಿಂದಲೇ ಬೆಳವಣಿಗೆ ಕಾಣಲು ಅವಕಾಶ ದಂತಾಗುತ್ತದೆ.

ಆದಾಯ ತೆರಿಗೆ ರಿಟರ್ನ್ಸ್ ಹೆಚ್ಚಳ

0

ಇದುವರೆಗೆ 2020 21ರ ಸಾಲಿಗೆ ಸಂಬಂಧಿಸಿದಂತೆ ಮೂರು ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಇಮೇಲ್, ಎಸ್ಎಂಎಸ್ ,ಮತ್ತು ಮಾಧ್ಯಮಗಳಲ್ಲಿ ಪ್ರಚಾರದ ಮೂಲಕ ತೆರಿಗೆ ರಿಟರ್ನ್ಸ್ ಸಲ್ಲಿಸಲು ಉತ್ತೇಜಿಸುತ್ತಿದೆ. ಇದುವರೆಗೆ ಶೇ.52ಐಟಿಆರ್ ಗಳು ಆನ್ಲೈನ್ ಮೂಲಕ ಸಲ್ಲಿಕೆಯಾಗಿದೆ.2.69 ಕೋಟಿ ರಿಟರ್ನ್ಸ್ ಗಳು ಆನ್ಲೈನ್ ಮೂಲಕ ದೃಢೀಕರಣವಾಗಿದೆ ಎಂದು ಇಲಾಖೆ ತಿಳಿಸಿದೆ.
ತೆರಿಗೆದಾರರಿಗೆ ಸಾಧ್ಯವಾದಷ್ಟು ಬೇಗ ಐಟಿಆರ್ ಸಲ್ಲಿಸುವಂತೆ ಮನವಿ ಮಾಡಿದೆ. ಸರ್ಕಾರ ಐಟಿಆರ್ ಸಲ್ಲಿಕೆಗೆ ಗುಡುವನ್ನು ಡಿಸೆಂಬರ್ 31ಕ್ಕೆ ವಿಸ್ತರಿಸಿದ ನಂತರ ಸಲ್ಲಿಕೆಯಲ್ಲಿ ಪ್ರತಿದಿನ ಏರಿಕೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂವಿಧಾನದಿಂದ ಪ್ರಜಾಪ್ರಭುತ್ವ ಬಲವಾಗಿದೆ – ಸಚಿವ ನಾಗೇಶ್

0

ಸರ್ವರನ್ನು ಒಳಗೊಂಡ ಸಮಸಮಾಜ ನಿರ್ಮಾಣಕ್ಕಾಗಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ನೀಡಿರುವ ಸಂದೇಶಗಳನ್ನು ಎಲ್ಲರೂ ಅಳವಡಿಸಿಕೊಂಡು ಪಾಲಿಸಬೇಕು ಎಂದು ಸಚಿವ ಬಿ.ಸಿ.ನಾಗೇಶ್ ಅವರು ತಿಳಿಸಿದ್ದಾರೆ.
ಪ್ರಜಾಪ್ರಭುತ್ವಕ್ಕೆ ಸಂವಿಧಾನವೇ ಅಡಿಪಾಯ. ಸಂವಿಧಾನದಿಂದ ಭಾರತದ ಪ್ರಜಾಪ್ರಭುತ್ವದ ಬೇರುಗಳು ಬಲವಾಗಿವೆ. ದೇಶದಲ್ಲಿರುವಷ್ಟು ಸ್ವಾತಂತ್ರ ಬೇರೆ ಯಾವ ದೇಶಗಳಲ್ಲಿಯೂ ಇಲ್ಲ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಜನತೆಯನ್ನು ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಿರುವ ಸಂವಿಧಾನ ಎತ್ತಿ ಹಿಡಿದಿದೆ ಎಂದರು.
ಡಾ. ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ತಮ್ಮ ಜೀವನವಿಡೀ ದೇಶದ ಏಳಿಗೆ, ಸಮಾಜದ ಉನ್ನತಿಗಾಗಿ ಶ್ರಮಿಸಿದ ಅಂಬೇಡ್ಕರ್ ಅವರು ಉಜ್ವಲ ಭಾರತದ ಕನಸು ಕಂಡಿದ್ದರು. ಅಸ್ಪೃಶ್ಯತೆ, ಅಸಮಾನತೆ ತೊಡೆದು ಹಾಕುವುದು, ಎಲ್ಲರಿಗೂ ಶಿಕ್ಷಣ, ಉದ್ಯೋಗದ ಸಮಾನ ಅವಕಾಶಗಳು ಸಿಗಬೇಕು ಎಂಬುದು ಅವರ ಮಹದಾಸೆಯಾಗಿತ್ತು. ಆ ದಾರಿಯಲ್ಲಿರುವ ಕೇಂದ್ರ, ರಾಜ್ಯ ಸರ್ಕಾರಗಳು, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಹಲವು ಜನಪರ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುತ್ತಿವೆ ಎಂದರು.
ಈ ಸಂದೇಶದಲ್ಲಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

ಭಾರತ – ನ್ಯೂಜಿಲೆಂಡ್ ಕ್ರಿಕೆಟ್. ಟೀಮ್ ಇಂಡಿಯ ಗೆಲುವಿನಲೆಯಲ್ಲಿ.

0

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ದಿನವಾದ ಸೋಮವಾರ 5 ವಿಕೇಟ್ ಗೆ 140 ರನ್ ಗಳಿಂದ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ತಂಡ, ಹಿಂದಿನ ಮೊತ್ತಕ್ಕೆ 27 ರನ್ ಸೇರಿಸಿ ಕೇವಲ ಒಂದೇ ತಾಸಿನೊಳಗೆ ಸರ್ವ ಪತನಗೊಂಡಿತು.
ಇದರೊಂದಿಗೆ ಆತಿಥೇಯ ತಂಡ ಒಂದುವರೆ ದಿನ ಬಾಕಿ ಇರುವಂತೆಯೇ ಬೃಹತ್ ರನ್ ಅಂತರದ ಜಯ ದಾಖಲಿಸಿದೆ.
ಪ್ರವಾಸಿ ತಂಡಕ್ಕೆ ಭಾರಿ ಅಂತರದ ಸೋಲಾಗಿದೆ. 2015ರಲ್ಲಿ ದೆಹಲಿಯಲ್ಲಿದ್ದ ಆಫ್ರಿಕಾ ವಿರುದ್ಧ 337 ರನ್ ಗಳಿಂದ ಜಯಗಳಿಸಿದ್ದು , ಇದುವರೆಗಿನ ಭಾರತದ ಅತಿ ದೊಡ್ಡ ಗೆಲುವಾಗಿತ್ತು.
ರವಿಚಂದ್ರನ್ ಅಶ್ವಿನ್ 34ಕ್ಕೆ 4 ಮತ್ತು ಜಯಂತ್ ಯಾದವ್49ಕ್ಕೆ 4 ಅವರ ಕರಾರುವಾಕ್ ಬೌಲಿಂಗ್ ನಿರ್ವಹಣೆ ನೆರವು ಪಡೆದ ಭಾರತ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ 372 ರನ್ ಗಳ ಅಂತರದಿಂದ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು.
ಈ ಮೂಲಕ ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿತು.
ಇದಲ್ಲದೆ, ಕಳೆದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಾನ್ಸ್ ಸೋಲಿಗೆ ಕೊಹ್ಲಿ ಬಳಗ ಸೇಡು ತೀರಿಸಿಕೊಂಡಿತು. ಈ ಜಯದೊಂದಿಗೆ ಐಸಿಸಿ ಟೆಸ್ಟ್ ರಾಂಕಿಂಗ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಏರಿದರೆ, ಕಿವೀಸ್ ದ್ವಿತೀಯ ಸ್ಥಾನಕ್ಕೆ ಕುಸಿಯಿತು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಇತಿಹಾಸದ ಪುಟದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟಿ 20 ಏಕದಿನ ಹಾಗೂ ಟೆಸ್ಟ್ ಸೇರಿ ಮೂರು ಮಾದರಿಯ ಅಂತರಾಷ್ಟ್ರೀಯ ಪಂದ್ಯಗಳಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಗೆದ್ದ ಮೊದಲ ಕ್ರಿಕೆಟಿಗ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಗೆಲುವು ಕಂಡ ಬಳಿಕ ಅವರು ಈ ಹಿರಿಮೆಗೆ ಪಾತ್ರರಾದರು.
ಕೊಹ್ಲಿ 50 ಟೆಸ್ಟ್ ಪಂದ್ಯಗಳು,153 ಏಕದಿನ ಪಂದ್ಯಗಳು ಹಾಗೂ 59 ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದ್ದಾರೆ.

ಓಮಿಕ್ರಾನ್, ಸೌಮ್ಯ ಆದರೂ ಎಚ್ಚರವಿರಬೇಕು

0

ಕೊರೋನಾ ವೈರಸ್ ರೂಪಾಂತರ ತಳಿ ಓಮಿಕ್ರಾನ್ ಕೆಲವು ರಾಜ್ಯಗಳಲ್ಲಿ ಕಾಣಿಸಿಕೊಂಡಿದೆ. ದೇಶದಲ್ಲಿ ಫೆಬ್ರವರಿ ತಿಂಗಳ ಹೊತ್ತಿಗೆ ಮೂರನೇ ಅಲೆ ಹೇಳುವ ಸಾಧ್ಯತೆ ಇದೆ ಎಂದು ಐಐಟಿ ವಿಜ್ಞಾನಿ ಮಣೀಂದ್ರ ಅಗರ್ ವಾಲ್ ತಿಳಿಸಿದ್ದಾರೆ.

ಗಣಿತಶಾಸ್ತ್ರೀಯ ಮಾದರಿಯ ಆಧಾರದ ಮೇಲೆ ಅವರು ತಿಳಿಸಿದ್ದಾರೆ.

ಡೆಲ್ಟಾ ತಳಿಯಂತೆ ಪ್ರಸರಣ ಕಂಡುಬಂದಲ್ಲಿ ರಾತ್ರಿ ಕರ್ಫ್ಯೂ, ಜನಸಂದಣಿ ನಿರ್ಬಂಧ ದಂತಹ ಸೌಮ್ಯ ರೀತಿಯ ಲಾಕ್ ಡೌನ್ ನಿಂದ ಅದನ್ನು ನಿಯಂತ್ರಿಸಬಹುದು ಎಂದು ಕೂಡ ತಿಳಿಸಿದ್ದಾರೆ.

ಮೂರನೇ ಅಲೆಗೆ ಓಮಿಕ್ರಾನ್ ಕಾರಣವಾಗಲಿದೆ. ಆದರೆ ಎರಡನೆಯ ತಳಿಯ ತೀವ್ರತೆಗೆ ಹೋಲಿಸಿದರೆ ಮೂರನೆಯ ಅಲೆ ಸೌಮ್ಯ ಸ್ವರೂಪದಲ್ಲಿದೆ. ಈ ಹಿಂದಿನ ಡೆಲ್ಟಾ ತಳಿಗೆ ಹೋಲಿಸಿದರೆ, ಓಮಿಕ್ರಾನ್ ಸೋಂಕಿತರಲ್ಲಿ ತೀವ್ರತೆ ಅಷ್ಟಾಗಿ ಕಂಡು ಬಂದಿಲ್ಲ ಎಂದು ಮನಿಂದ ಅಗರ್ ವಾಲ್ ತಿಳಿಸಿದ್ದಾರೆ.

ಓಮಿಕ್ರಾನ್ ನ ಅಧಿಕ ಪ್ರಕರಣಗಳು ವರದಿಯಾಗಿರುವ ದಕ್ಷಿಣ ಆಫ್ರಿಕಾದ ಬೆಳವಣಿಗೆಗಳ ಮೇಲೆ ಕಣ್ಣಿಡಬೇಕು. ಈಗ ಅಲ್ಲಿ ಹೆಚ್ಚಾಗಿ ಆಸ್ಪತ್ರೆ ಸೇರುವ ಪ್ರವೃತ್ತಿ ಕಂಡುಬಂದಿಲ್ಲ ಎಂದಿದ್ದಾರೆ.

ಓಮಿಕ್ರಾನ್ ನ ಹೊಸ ದತ್ತಾಂಶಗಳು ಮತ್ತು ಆಸ್ಪತ್ರೆ ಸೇರುವವರ ಸಂಖ್ಯೆ ಯು ವೈರಸ್ ಹರಡುವಿಕೆಯ ಸ್ಪಷ್ಟ ಚಿತ್ರಣವನ್ನು ನೀಡಲಿದೆ. ವೈರಸ್ ನ ಪ್ರಸರಣ ಅತಿ ಹೆಚ್ಚು ಎಂದು ತೋರಿಸಿದ್ದರೂ, ಅದರ ಪರಿಣಾಮ ಅಷ್ಟಾಗಿಲ್ಲ ಎಂದು ಅವರು ಹೇಳಿದ್ದಾರೆ. ಡೆಲ್ಟಾ ಗಿಂತ ಹೆಚ್ಚು ಪ್ರಸರಣ ಸಾಮರ್ಥ್ಯದ, ತೀವ್ರವಾಗಿರುವ ಕರೋನವೈರಸ್ ನ ಹೊಸ ತಳಿ ಪತ್ತೆಯಾಗಿದೆ. ಅಕ್ಟೋಬರ್ ನಲ್ಲಿ ಮೂರನೇ ಅಲೆ ಉಂಟಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ನವೆಂಬರ್ ಕೊನೆಯವರೆಗೆ ಹೊಸ ತಳಿ ಕಾಣಿಸಿರಲಿಲ್ಲ. ಹೊಸ ರೂಪಾಂತರ ತಳಿಯ ತೀವ್ರ ಸ್ವರೂಪದಲ್ಲಿದ್ದು ಅಥವಾ ಮಾನವನ ರೋಗನಿರೋಧಕ ಶಕ್ತಿಯನ್ನು ಭೇದಿಸಲಿದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲ ಎಂದು ಐಐಟಿ ವಿಜ್ಞಾನಿ ಮಣೀಂದ್ರ ಅಗರ್ ವಾಲ್ ತಿಳಿಸಿದ್ದಾರೆ.

ಈಗಿನ ಜಗತ್ತಿನಲ್ಲಿ ಸ್ರ್ರೀಪರ ಚಿಂತನೆ ಸೇರಿಸಿಕೊಳ್ಳಬೇಕು

0

ವಾತ್ಸ್ಯಾಯನ ಸೇರಿದಂತೆ ರಚಿಸಿದ ಗ್ರಂಥಗಳಲ್ಲಿ ಪುರುಷ ಪಾರಮ್ಯವಿದೆ ಎಂದು ಹೇಳಲಾಗುತ್ತದೆ. ಹೌದು, ಪುರುಷ ಪಾರಮ್ಯ ಇದೆ. ಆಗಿನ ಜಗತ್ತು ಹಾಗಿತ್ತು. ಈಗಿನ ಜಗತ್ತು ಬಿನ್ನವಾಗಿದೆ. ಹಾಗಂತ ವಾತ್ಸ್ಯಾಯನ ಕೃತಿಯನ್ನು ತಿದ್ದುವ ಹಾಗಿಲ್ಲ. ಅದನ್ನು ಒಪ್ಪಿಕೊಂಡು ಅದರ ಜೊತೆಗೆ ಸ್ತ್ರೀಪರವಾದ ವಿಚಾರವನ್ನು ಸೇರಿಸಿಕೊಂಡರಾಯಿತು ಎಂದು ವಿದ್ವಾಂಸರಾದ ಶತಾವಧಾನಿ ಡಾ.ಆರ್. ಗಣೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಯೋಧ್ಯ ಪ್ರಕಾಶನವು ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ಹೊರತರಲಾದ ‘ವಾತ್ಸ್ಯಾಯನ ಕಾಮಸೂತ್ರ’ಕನ್ನಡ ಅನುವಾದ ( ಕನ್ನಡಕ್ಕೆ ಡಾ. ವಿಶ್ವನಾಥ ಕೃ.ಹಂಪಿಹೊಳಿ ) ಕೃತಿಯನ್ನು ಬಿಡುಗಡೆ ಮಾಡಿದರು.
ಪುರಾತನ ಕಾಲದಲ್ಲಿ ರಚನೆಯಾದ ಧರ್ಮಾರ್ಥ ಶಾಸ್ತ್ರಗಳನ್ನು ಪರಸ್ಪರ ಹೊಂದಾಣಿಕೆಯಿಂದ ನೋಡದೆ ತೆಗಳುವುದು ಆತ್ಮವಂಚನೆ, ಜ್ಞಾನ ವಂಚನೆ, ವಿದ್ಯಾ ವಂಚನೆಯಾಗುತ್ತದೆ. ನಮ್ಮ ಭಾರತೀಯ ಪರಂಪರೆಯಲ್ಲಿ ಜಗತ್ತಿಗೆ ಕೊಟ್ಟ ಅತ್ಯಂತ ಜನಪ್ರಿಯ ಗ್ರಂಥಗಳಲ್ಲಿ ವಾತ್ಸ್ಯಾಯನ ಕಾಮಸೂತ್ರ ಕೂಡ ಒಂದು. ಜಗತ್ತಿಗೆ ಭಾಷೆಯನ್ನು ಹೇಗೆ ನೋಡಬೇಕು ಎಂಬುದನ್ನು ಹೇಳಿಕೊಟ್ಟವರು ನಾವು. ಬದುಕನ್ನು ನೋಡುವುದು ಹೇಗೆ ಎಂದು ಭಗವದ್ಗೀತೆಯ ಮೂಲಕ ತಿಳಿಯಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ರಂಗಭೂಮಿ ನಟ ಎಸ್. ಎನ್. ಸೇತುರಾಮ್, ವಿದ್ವಾಂಸರಾದ ವೀಣಾ ಬನ್ನಂಜೆ,ಕೃತಿಯ ಅನುವಾದಕರಾದ ಡಾ. ವಿಶ್ವನಾಥ ಕೃ.ಹಂಪಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬೇಕು ಸ್ಪೀಡ್ ಬ್ರೇಕರ್- ಸಾಗರ ವಿದ್ಯಾರ್ಥಿ ಒಕ್ಕೂಟ

0

ಸಾಗರದ ವಿದ್ಯಾರ್ಥಿ ಒಕ್ಕೂಟದ ಪ್ರಮುಖರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬರುವ ಶಾಲೆ-ಕಾಲೇಜುಗಳು ಎದುರಿನ ರಸ್ತೆಗೆ ಸ್ಪೀಡ್ ಬ್ರೇಕರ್ ಅಳವಡಿಸುವಂತೆ ಒತ್ತಾಯಿಸಿ ಉಪವಿಭಾಗಧಿಕಾರಿ ಮನವಿ ಸಲ್ಲಿಸಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಇಂದಿರಾ ಗಾಂಧಿ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು, ಎಲ್ ಬಿ ಇನ್ನು ಮುಂತಾದ ಕಾಲೇಜುಗಳ ಎದುರಿನ ರಸ್ತೆ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಇದೆ. ವಿದ್ಯಾರ್ಥಿಗಳ ಗುಂಪು ಹೆಚ್ಚಿರುವ ಕಾರಣ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಹೆದ್ದಾರಿಗೆ ಹೊಂದಿಕೊಂಡಂತೆ ಕೆಲವು ಕಾಲೇಜುಗಳ ಎದುರಿನ ರಸ್ತೆ ಬರುವುದರಿಂದ ವಿದ್ಯಾರ್ಥಿಗಳು ರಸ್ತೆದಾಟಲು ತೊಂದರೆ ಉಂಟಾಗುತ್ತಿದೆ. ಹೆದ್ದಾರಿಯಲ್ಲಿ ವಾಹನ ಚಾಲಕರು ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುತ್ತಿದ್ದಾರೆ. ಇದರಿಂದಾಗಿ ಕಾಲೇಜಿನ ಎದುರಿನ ರಸ್ತೆಗೆ ಸ್ಪೀಡ್ ಬ್ರೇಕರ್ ಅಳವಡಿಸುವುದು ಅಗತ್ಯವಾಗಿದೆ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.