Friday, February 13, 2026
Friday, February 13, 2026
Home Blog Page 1782

ಶಿವಮೊಗ್ಗ ಜಿಲ್ಲೆ : ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ

0

ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಕಾಡುತ್ತಿದೆ. 901 ಹುದ್ದೆಗಳು ಖಾಲಿ ಉಳಿದಿವೆ.
ಸರ್ಕಾರಿ ಶಾಲೆಗಳಿಗೆ ಎಲ್ಲ ಸವಲತ್ತು ಕೊಟ್ಟೂ ಮಕ್ಕಳು ಬರುತ್ತಿಲ್ಲ ಎಂಬ ಕೊರಗಿನ ನಡುವೆಯೇ ಬರುವ ಮಕ್ಕಳಿಗೆ ಪಾಠ ಹೇಳಿಕೊಡಲು ಶಿಕ್ಷಕರ ಕೊರತೆ ಇದೆ ಎನ್ನುವುದು ಆತಂಕದ ವಿಷಯ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಸರಿದೂಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿರುವ ಶಿಕ್ಷಣ ಇಲಾಖೆ, ಖಾಲಿ ಇರುವ ಖಾಯಂ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬುದು ಶಿಕ್ಷಕರ ವಲಯದಲ್ಲೇ ಕೇಳಿಬರುತ್ತಿರುವ ಗಂಭೀರ ಆರೋಪವಾಗಿದೆ.
ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ. ಜಿಲ್ಲೆಯ ಶಾಲೆಗಳೂ ಇದರಿಂದ ಹೊರತಾಗಿಲ್ಲ. ಮಕ್ಕಳಿಗೆ ಪಾಠ ಮಾಡಬೇಕಾದ ಶಿಕ್ಷಕರ ಕೊರತೆಯಿಂದಾಗಿ ಪ್ರತಿ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗೆ ಅಡ್ಡಿಯಾಗಿದ್ದು , ಶೈಕ್ಷಣಿಕ ಪ್ರಗತಿಗೆ ಕುಂಠಿತದ ಭೀತಿ ಎದುರಾಗಿದೆ.
ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 6,383 ಹುದ್ದೆಗಳಲ್ಲಿ 5,482 ಶಿಕ್ಷಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇನ್ನಾದರೂ ಸರ್ಕಾರ ಕಣ್ತೆರೆದು ಶಿಕ್ಷಕರ ಕೊರತೆಯನ್ನು ನೀಗಿಸಬೇಕಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಯಕರ ಮಾಹಿತಿ ಸಲ್ಲಿಕೆ: ತಪ್ಪಿದರೆ ದಂಡ ಶುಲ್ಕ ಮಾಹಿತಿ

0

ನವದೆಹಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ( 2020-21) ಡಿಸೆಂಬರ್ 31ರ ಗಡುವು ಮುಕ್ತವಾಗಿದೆ. ಒಂದು ವೇಳೆ ಗಡುವಿನ ಒಳಗೆ ಐಟಿ ರಿಟರ್ನ್ ಸಲ್ಲಿಸದಿದ್ದರೆ, ಮುಂದೇನು ಮಾಡಬಹುದು ಎಂಬುದಕ್ಕೆ ಉತ್ತರ ಇಲ್ಲಿದೆ.

ಡಿಸೆಂಬರ್ 31ರ ಗಡುವು ತಪ್ಪಿಸಿಕೊಂಡವರು 2022ರ ಮಾರ್ಚ್ 31ರೊಳಗೆ ವಿಲಂಬಿತ ಐಟಿಆರ್ ಸಲ್ಲಿಸಲು ಅವಕಾಶ ಇದೆ. ಹೀಗಿದ್ದರೂ ಸಹ ಹಣಕಾಸು ಕಾಯ್ದೆಯ ಅಡಿಯಲ್ಲಿ 5 ಸಾವಿರ ರೂಪಾಯಿ ತನಕ ದಂಡ ಇರುತ್ತದೆ.

ವಾರ್ಷಿಕ ಒಟ್ಟು ಆದಾಯವು ಐದು ಲಕ್ಷ ರೂ. ದಾಟದಿದ್ದರೆ ಅಂತ ತೆರಿಗೆದಾರರಿಗೆ ಒಂದು ಸಾವಿರ ರೂಪಾಯಿ ಮತ್ತು ಒಟ್ಟು ಆದಾಯವು ಐದು ಲಕ್ಷ ರೂಪಾಯಿ ಗಿಂತ ಮೇಲಿದ್ದರೆ ಐದು ಸಾವಿರ ರೂಪಾಯಿ ದಂಡ ಅನ್ವಯವಾಗುತ್ತದೆ. ವಾರ್ಷಿಕ 2. 50 ಲಕ್ಷ ರೂ.ಗಿಂತ ಕಡಿಮೆ ಆದಾಯವಿದ್ದರೆ ದಂಡ ಇರುವುದಿಲ್ಲ.

ಈಗಾಗಲೇ ಐಐಟಿಆರ್ ಸಲ್ಲಿಸಿದವರು ಕೂಡ ಮೂಲ ರಿಟರ್ನ್ ನಲ್ಲಿ ಏನಾದರೂ ಬಿಟ್ಟು ಹೋಗಿದ್ದರೆ, 2020 ರ ಮಾರ್ಚ್ 31ರೊಳಗೆ ಅದನ್ನು ಪರಿಷ್ಕರಿಸಬಹುದು.

ಡಿಸೆಂಬರ್ 31 ರೊಳಗೆ 5.89 ಕೋಟಿ ಮಂದಿ ಹೊಸ ಐಟಿ ವೆಬ್ ಪೋರ್ಟಲ್ ಮೂಲಕ ರಿಟರ್ನ್ ಸಲ್ಲಿಸಿದ್ದರು.

2020-21ರ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನಾಂಕವಾಗಿತ್ತು. ಈ ಹಿಂದೆ ಜೂನ್ 30 ಕೊನೆಯ ದಿನವಾಗಿತ್ತು. ನಂತರ ಸೆಪ್ಟೆಂಬರ್ 30 ಹಾಗೂ ನಂತರ ಡಿಸೆಂಬರ್ 31ಕ್ಕೆ ವಿಸ್ತರಣೆಯಾಗಿತ್ತು. ಹಲವು ಬಾರಿ ಮುಂದೂಡಿಕೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ವಿಸ್ತರಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕಾರ್ಪೋರೇಟ್ ವಲಯ: ಉದ್ಯೋಗಾವಕಾಶ ಹೆಚ್ಚಳ

0

ಕಾರ್ಪೊರೇಟ್ ವಲಯದಲ್ಲಿ ಈಗ ಎಲ್ಲಿಂದ ಬೇಕಾದರೂ ಕೆಲಸ ಮಾಡುವ ಆಯ್ಕೆಗಳು ಹೆಚ್ಚಾಗುತ್ತಿದೆ. ತಂತ್ರಜ್ಞಾನದ ನೆರವಿನಿಂದ ಈ ಬದಲಾವಣೆ ಉಂಟಾಗಿದೆ. ಇದರ ಪರಿಣಾಮ ಮಹಾನಗರಗಳಲ್ಲಿ ಮಾತ್ರವಲ್ಲದೆ, ಎರಡನೇ ಸ್ತರದ ನಗರಗಳಲ್ಲಿ ಕೂಡ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತಿವೆ. ಮತ್ತು ವೇತನ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ಮೊದಲ ಸ್ತರದ ನಗರಗಳ ಪೈಕಿ ಬೆಂಗಳೂರು ವೇತನದ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಕಿರಿಯ ಹಂತದ ಹುದ್ದೆಗಳಿಗೆ ಸರಾಸರಿ ವಾರ್ಷಿಕ ವೇತನ 6.7 ಲಕ್ಷ ರೂ. ಗಳಾಗಿದೆ. ಮಧ್ಯಂತರದ ಹುದ್ದೆಗಳಿಗೆ 18.1 ಲಕ್ಷ ರೂ. ವೇತನ ಇದೆ. ಆದರೆ ಈ ಉನ್ನತಮಟ್ಟದ ಉದ್ಯೋಗಗಳು ಸಾಮಾನ್ಯವಾಗಿ ತಂತ್ರಜ್ಞಾನ ಪ್ರಮುಖ ಕಂಪನಿಗಳಲ್ಲಿ ಇರುತ್ತದೆ.

ಎಲ್ಲ ಕ್ಷೇತ್ರಗಳ ಕಂಪನಿಗಳಲ್ಲೂ ಇದೇ ರೀತಿಯ ಹೆಚ್ಚು ವೇತನದ ಪ್ಯಾಕೇಜ್ ಸಿಗುವುದಿಲ್ಲ. ರಿಯಲ್ ಎಸ್ಟೇಟ್, ಹೆಲ್ತ್ ಕೇರ್, ರಿಟೇಲ್, ಶಿಕ್ಷಣ ಸಂಸ್ಥೆಗಳಲ್ಲಿಯೂ ಕೂಡ ಉನ್ನತಮಟ್ಟದ ವೇತನದ ಉದ್ಯೋಗಾವಕಾಶಗಳು ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಯಾಗುತ್ತಿವೆ. ಈ ಟ್ರೆಂಡ್ ಮುಂದುವರಿಯಲಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಅಹಮದಾಬಾದ್, ತಿರುವನಂತಪುರಂ, ಭುವನೇಶ್ವರ, ನಾಗ್ಪುರ್, ಜೈಪುರ ಇನ್ನು ಮುಂತಾದ ಎರಡನೇ ಸ್ತರದ ನಗರಗಳಲ್ಲಿ ಕೂಡ ವೇತನ ಹಾಗೂ ಉದ್ಯೋಗಾವಕಾಶಗಳು ಸೃಷ್ಟಿಯಾಗಿದೆ ಎಂದು ರಾಂಡ್ ಸ್ಟಡ್ಸ್ ಸಮೀಕ್ಷೆ ತಿಳಿಸಿದೆ. ಎರಡನೇ ಸ್ತರದ ನಗರಗಳಲ್ಲಿ ಅಹಮದಾಬಾದ್ ವೇಗವಾಗಿ ಬೆಳೆಯುತ್ತಿರುವ ಮೊದಲ ನಗರವಾಗಿ ಹೊರಹೊಮ್ಮಿದೆ. ವೇತನ ಹೆಚ್ಚಳದ ನಿಟ್ಟಿನಲ್ಲಿ ಚಂಡಿಘಡ ಮೊದಲ ಸ್ಥಾನದಲ್ಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನೀರಾವರಿ ಯೋಜನೆ ಬೇಗ ಪೂರ್ಣಗೊಳಿಸಿ

0

ಬಿ ಆರ್ ಪಿಯ ಭದ್ರಾಮೇಲ್ದಂಡೆ ಈ ಕಚೇರಿಯ ಮುಂದೆ ಆರು ಜಿಲ್ಲೆಗಳ ರೈತರು ನೀರಾವರಿ ಯೋಜನೆ ತ್ವರಿತ ಪೂರ್ಣಕ್ಕೆ ಆಗ್ರಹಿಸಿ ಪಾದಯಾತ್ರೆಯನ್ನು ನಡೆಸಿದರು. ಪಾದಯಾತ್ರೆಯಲ್ಲಿ 2000 ಸಾವಿರಕ್ಕೂ ಅಧಿಕ ರೈತರು ಭಾಗವಹಿಸಿದ್ದರು.

ತುಂಗಾ ದಿಂದ ಭದ್ರಾಕ್ಕೆ ನೀರೆತ್ತುವ ಎರಡನೇ ಪಂಪ್ಸೆಟ್ ಇರುವ ಮಾರಿದಿಬ್ಬದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ ಟಿ ಗಂಗಾಧರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಜಂಕ್ಷನ್ ನಿಂದ ಪಾದಯಾತ್ರೆ ಮಾಡಲಾಯಿತು. ಭದ್ರಾ ಮೇಲ್ದಂಡೆ ಎಸ್ ಇ ಕಚೇರಿಯ ಮುಂದೆ ರೈತರ ಸಭೆ ನಡೆಸಲಾಯಿತು.

“ಅಧಿಕಾರಿಗಳು ಮತ್ತು ರಾಜಕಾರಣಿಗಳು ನಮ್ಮ ಬೇಡಿಕೆ ಈಡೇರಿಸದೇ ಇದ್ದಲ್ಲಿ ಹಿರಿಯೂರಿನಲ್ಲಿ ದೊಡ್ಡ ಸಮಾವೇಶ ನಡೆಸಲಾಗುವುದು” ಎಂದು ರೆಡ್ಡಿ ವೀರಣ್ಣ ಅವರು ಎಚ್ಚರಿಕೆ ನೀಡಿದರು.

ರೈತ ಸಂಘದ ಹಿರಿಯ ನಾಯಕ ಕೆ.ಟಿ.ಗಂಗಾಧರ್ ಅವರು “ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಆದಷ್ಟು ಬೇಗ ರೈತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಸರ್ಕಾರದ ಸ್ಪಂದನೆ ನೀಡಬೇಕು. ಎಲ್ಲಾ ನಿರ್ಣಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು” ಎಂದು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಲಾಕ್ ಡೌನ್ ಕುರಿತು ಸರ್ಕಾರದ ಸಭೆಯಲ್ಲಿ ಗಂಭೀರ ಚರ್ಚೆ

0

ಕೋವಿಡ್ ಸೋಂಕಿನಿಂದ ರಾಜ್ಯದಲ್ಲಿ ಎರಡು ವರ್ಷಗಳ ಕಾಲ ಶಾಲಾ-ಕಾಲೇಜುಗಳು ಬಂದ್ ಮಾಡಲಾಗಿತ್ತು. ಬಳಿಕ ಕಳೆದ ವರ್ಷ ನವೆಂಬರ್ ನಲ್ಲಿ ಕೋವಿಡ್ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶಾಲೆಗಳ ಪುನರ್ ಪ್ರಾರಂಭಕ್ಕೆ ಅನುಮತಿ ನೀಡಿತ್ತು. ಆದರೆ ಇದೀಗ ರಾಜ್ಯದಲ್ಲಿ ಮತ್ತೆ ಕೋವಿಡ್ ಸೋಂಕು ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ ಮತ್ತೆ ಲಾಕ್ ಡೌನ್ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸುತ್ತಿದೆ. ಇತ್ತ ಸರ್ಕಾರಕ್ಕೆ ಖಾಸಗಿ ಶಾಲಾ ಮಂಡಳಿಗಳು ಶಾಲೆ ಬಂದ್ ಮಾಡಬೇಡಿ ಎಂದು ಒತ್ತಾಯ ಮಾಡುತ್ತಿವೆ.

“ಕೋವಿಡ್ ಸೋಂಕು ಹೆಚ್ಚಾಗಲು ಶಿಕ್ಷಣ ಸಂಸ್ಥೆಯ ಪ್ರಮುಖ ಕಾರಣ ಎಂದು ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆಗಳು ಶಾಲಾ ಕಾಲೇಜುಗಳನ್ನು ಮುಚ್ಚುವ ಬಗ್ಗೆ ಚರ್ಚೆ ನಡೆಸುತ್ತಿರುವ ಸಂಗತಿ ತಿಳಿದುಬಂದಿದೆ. ಸರ್ಕಾರ ಸೂಚಿಸಿರುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ. ಆದರೆ ಮಕ್ಕಳು ಶಾಲೆಯಿಂದ ಮನೆಗೆ ಮತ್ತು ಮನೆಯಿಂದ ಶಾಲೆಗೆ ಹೋಗುವ ಮಧ್ಯೆ ಬಸ್ ಗಳಲ್ಲಿ, ಬಸ್ ನಿಲ್ದಾಣ, ಮಾಲ್, ರೆಸ್ಟೋರೆಂಟ್, ಟ್ಯುಟೋರಿಯಲ್ಸ್, ಕೋಚಿಂಗ್ ಸೆಂಟರ್, ಆಟದ ಮೈದಾನ ಇತ್ಯಾದಿ ಕಡೆಗಳಲ್ಲಿ ಯಾವುದೇ ನಿಯಮ ಪಾಲನೆ ಯಾಗದೇ ಕೋವಿಡ್ ಹರಡುವ ಸಾಧ್ಯತೆ ಹೆಚ್ಚಿದೆ” ಎಂದು ಕ್ಯಾಮ್ಸ್ ಮತ್ತು ರುಪ್ಸಾ ಸಂಘಟನೆಗಳು ಸರ್ಕಾರಕ್ಕೆ ತಿಳಿಸಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಲ್ಲಿ 76 ಒಮಿಕ್ರಾನ್ ಪ್ರಕರಣ

0

ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಶೇ.1.60ಕ್ಕೆ ಏರಿಕೆಯಾಗಿದೆ. ಸೋಮವಾರ ಒಂದೇ ದಿನ 1,290 ರಾಜ್ಯದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿವೆ. ಐದು ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. 11,345 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಸೋಂಕಿತರ ಸಂಖ್ಯೆ 30.10 ಲಕ್ಷಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 38,351ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಂದ ಗುಣಮುಖರಾಗಿ 232 ಬಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇದುವರೆಗೆ ಆಸ್ಪತ್ರೆಯಿಂದ ಒಟ್ಟು 29.61ಏರಿಕೆಯಾಗಿದೆ. ಸಾವಿನ ಪ್ರಮಾಣ ಶೇ.0.38 ರಷ್ಟಿದೆ.

ಕೋವಿಡ್ ಜೊತೆಗೆ ರಾಜ್ಯದಲ್ಲಿ ಸೋಮವಾರ ರೂಪಾಂತರಿ ತಳಿ ಓಮಿಕ್ರಾನ್ ನ 10 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಓಮಿಕ್ರಾನ್ ಸಂಖ್ಯೆ 76ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಎಂಟು ಮಂದಿ ಹಾಗೂ ಧಾರವಾಡದ ಇಬ್ಬರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸಾರ್ಕ್ ಶೃಂಗಸಭೆ ಪಾಕ್ ನಿಂದ ಭಾರತಕ್ಕೆ ಆಮಂತ್ರಣ?

0

ಸಾರ್ಕ್ ಶೃಂಗ ಸಭೆಯಲ್ಲಿ ಭಾಗವಹಿಸಲು ಪಾಕಿಸ್ತಾನವು ಭಾರತಕ್ಕೆ ಆಮಂತ್ರಣ ನೀಡಿದೆ. ಕೊರೋನಾ ಕಾರಣದಿಂದ ಭೌತಿಕವಾಗಿ ಭಾಗವಹಿಸಲು ಸಾಧ್ಯವಾಗದಿದ್ದರೆ ಭಾರತವು ವರ್ಚ್ಯುವಲ್ ಮೂಲಕವೂ ಭಾಗಿಯಾಗಬಹುದು” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರು ತಿಳಿಸಿದ್ದಾರೆ.

ಆದರೆ ಸಾರ್ಕ್ ಶೃಂಗಸಭೆ ಕುರಿತಂತೆ ಪಾಕಿಸ್ತಾನದಿಂದ ಇದುವರೆಗೆ ಭಾರತಕ್ಕೆ ಯಾವುದೇ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ಪಷ್ಟಪಡಿಸಿದೆ.

2016ರ ನವೆಂಬರ್ ನಲ್ಲಿ ನಡೆದ ಸಾರ್ಕ್ ನ ದ್ವೈವಾರ್ಷಿಕ ಶೃಂಗಸಭೆಯಲ್ಲಿ ಭಾರತ ಭಾಗವಹಿಸಿರಲಿಲ್ಲ. ಆ ವರ್ಷದ ಸೆಪ್ಟೆಂಬರ್ ನಲ್ಲಿ ಉರಿ ಸೇನಾ ಶಿಬಿರದ ಮೇಲೆ ನಡೆದ ಉಗ್ರ ದಾಳಿ ಹಿನ್ನೆಲೆಯಲ್ಲಿ ಭಾರತವು ಶೃಂಗ ಸಭೆಯಲ್ಲಿ ಭಾಗವಹಿಸಲು ನಿರಾಕರಿಸಿತ್ತು. ಭೂತಾನ್, ಬಾಂಗ್ಲಾದೇಶ, ಆಫ್ಘಾನಿಸ್ತಾನ ದೇಶಗಳು ಕೂಡ ಭಾರತಕ್ಕೆ ಬೆಂಬಲ ಸೂಚಿಸಿ ಶೃಂಗದಲ್ಲಿ ಭಾಗವಹಿಸಲು ನಿರಾಕರಿಸಿದ್ದವು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಎರಡನೇ ಟೆಸ್ಟ್ : ಭಾರತ ಅಲ್ಪಮೊತ್ತಕ್ಕೆ ಆಲ್ ಔಟ್

0

ದಕ್ಷಿಣಾ ಆಫ್ರಿಕಾ ಮತ್ತು ಭಾರತ ತಂಡಗಳ ನಡುವಿನ 2 ನೇ ಟೆಸ್ಟ್ ಸರಣಿಯು ಸೋಮವಾರದಿಂದ ಆರಂಭವಾಗಿದ್ದು ಭಾರತ ತಂಡವು ಮೊದಲ ದಿನದಲ್ಲೇ ಅಲ್ಪಮೊತ್ತದ ರನ್ ಕಲೆ ಹಾಕಿದೆ.

ವಾಂಡರರ್ಸ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.63.1 ಓವರ್ ಗಳಲ್ಲಿ 202 ರನ್ ಗಳಿಸಿಕೊಂಡಿತು.

ಮೊದಲ ವಿಕೆಟ್ ಜೊತೆಯಾಟದಲ್ಲಿ ಅಂಕಣಕ್ಕೆ ಇಳಿದ K.L ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ 36 ರನ್ ತಂಡಕ್ಕೆ ಸೇರಿಸಿ ಭರವಸೆ ಮೂಡಿಸಿದರು.ಆದರೆ, ಮಯಾಂಕ್ ಔಟಾದ ಬಳಿಕ ತಂಡ ಪತನದತ್ತ ಸಾಗಿತು.ಚೇತೇಶ್ವರ ಪೂಜಾರ 33 ಎಸೆತಗಳಲ್ಲಿ 3 ರನ್ ಗಳಿಸಿ ಔಟಾದರೆ ಅಜಿಂಕ್ಯ ರಹಾನೆ ಖಾತೆ ತೆರೆಯದೆ ವಾಪಸಾದರು.

ಕುಸಿತದ ಹಾದಿಯಲ್ಲಿ ಸಾಗಿದ್ದ ಇನ್ನಿಂಗ್ಸ್ ಗೆ ರವಿಚಂದ್ರನ್ ಅಶ್ವಿನ್ ಚೇತರಿಕೆ ತುಂಬಿದರು.ಆದರೆ,ಬಾಲಾಂಗೋಚಿಗಳಿಗೆ ಕಾಗಿಸೊ ರಬಾಡ ಮಾರಕವಾದರು.ಬೌಂಡರಿಗಳೊಂದಿಗೆ ಮಿಂಚಿದ ಅವರು ವೇಗವಾಗಿ ರನ್ ಗಳಿಸಿ ತಂಡವನ್ನು 200 ರನ್ ಗಳ ಸಮೀಪ ತಲುಪಿಸಿದರು.

ಕೊನೆಯಲ್ಲಿ ಜಸ್ ಪ್ರೀತ್ ಬುಮ್ರಾ ಅವರು ಕೂಡ ಮಿಂಚಿದರು.ರವಿಚಂದ್ರನ್ ಅಶ್ವಿನ್ ಅವರ ಸ್ಫೋಟಕ ಬ್ಯಾಟಿಂಗ್ ಮತ್ತು ಇನ್ನಿಂಗ್ಸ್ ಏಕೈಕ ಸಿಕ್ಸರ್ ಸಿಡಿಸಿದ ಜಸ್ ಪ್ರೀತ್ ಬುಮ್ರಾ ಅವರ ದಿಟ್ಟ ಆಟದಿಂದಾಗಿ ತಂಡದ ಮೊತ್ತ 200 ರನ್ ದಾಟಿಸಿದರು.

ದಿನದಾಟದ ಕೊನೆಯಲ್ಲಿ ದಕ್ಷಿಣ ಆಫ್ರಿಕಾ ತಂಡ 1 ವಿಕೆಟ್ ಪತನಕ್ಕೆ 35 ರನ್ ಗಳಿಸಿತು.ಟೆಸ್ಟ್ ನ ಎರೆಡನೇ ದಿನದಾಟ ಇಂದು ಮುಂದುವರೆದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ ಕಬಡ್ಡಿ ಲೀಗ್ ಬೆಂಗಾಲ್ ವಾರಿಯರ್ಸ್ ಮತ್ತು ಪಟ್ನಾ ಪೈರೇಟ್ಸ್ ಜಯಭೇರಿ

0

ಬೆಂಗಳೂರಿನಲ್ಲಿರುವ ವೈಟ್ ಫೀಲ್ಡ್ ಗ್ರ್ಯಾಂಡ್ ಹೋಟೆಲ್ ಮೈದಾನದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಟೂರ್ನಿ 4 ತಂಡಗಳ ನಡುವೆ ಪಂದ್ಯ ನಡೆಯಿತು.

ವಾರಿಯರ್ಸ್ ವಿರುದ್ಧ ಪ್ಯಾಂಥರ್ಸ್ ಗೆ ಸೋಲು.

ಮೊದಲನೇ ಪಂದ್ಯವು:
ಬೆಂಗಾಲ್ ವಾರಿಯರ್ಸ್ (31) ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ (28) ತಂಡಗಳ ನಡುವೆ ಪಂದ್ಯ ನಡೆಯಿತು. ಬೆಂಗಾಲ್ ವಾರಿಯರ್ಸ್ ವಿರುದ್ಧ ಜೈಪುರ್ ಪಿಂಕ್ ಪ್ಯಾಂಥರ್ಸ್ ಹೀನಾಯ ಸೋಲು ಅನುಭವಿಸಿತು.

ಜಿದ್ದಾಜಿದ್ದಿಯ ಹೋರಾಟ ನಡೆಸಿದ ಬೆಂಗಾಲ್ ವಾರಿಯರ್ಸ್ ತಂಡದ ರೇಡರ್ ಮಣಿಂದರ್ ಸಿಂಗ್ 1 ಬೋನಸ್ ಪಾಯಿಂಟ್ ಹಾಗೂ 11 ಟಚ್ ಪಾಯಿಂಟ್ ಮೂಲಕ 13 ರನ್ ಗಳನ್ನ ಕಲೆಹಾಕಿ ಇದರೊಂದಿಗೆ ಪ್ರೊ ಕಬಡ್ಡಿ ಲೀಗ್ ನಲ್ಲಿ 800 ರೇಡ್ ಪಾಯಿಂಟ್ ಗಳಿಸಿ ಮೇಲುಗೈ ಸಾಧಿಸಿದ್ದಾರೆ.
ಹಾಗೆಯೇ ಆಲ್ ರೌಂಡರ್ ಮೊಹಮ್ಮದ್ ನಬಿಭಕ್ಷ್ ರೇಡಿಂಗ್ ಮತ್ತು ಟ್ಯಾಕ್ಲಿಂಗ್ ಎರೆಡರಲ್ಲೂ ಮಿಂಚಿದರು.6 ಟಚ್ ಪಾಯಿಂಟ್ ಮತ್ತು 3 ಟ್ಯಾಕ್ಲಿಂಗ್ ಪಾಯಿಂಟ್ ಗಳೊಂದಿಗೆ ಅವರು 10 ಪಾಯಿಂಟ್ ಗಳಿಸಿದರು.

ಪಿಂಕ್ ಪ್ಯಾಂಥರ್ಸ್ ಪರವಾಗಿ ಒಟ್ಟು 16 ಪಾಯಿಂಟ್ ಸಂಪಾದಿಸಿದ ಅರ್ಜುನ್ ದೇಸ್ವಾಲ್ ಏಕಾಂಗಿ ಹೋರಾಟ ನಡೆಸಿದರು.ಇವರಿಗೆ ದೀಪಕ್ ಹೂಡಾ ಕೊಂಚ ಸಹಕಾರ ನೀಡಿದರು.

ಇವರುಗಳ ಸಹಕಾರದಿಂದಾಗಿ ಬೆಂಗಾಲ್ ವಾರಿಯರ್ಸ್ ತಂಡವು ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ 28-31 ರಿಂದ ರೋಚಕ ಜಯ ಸಾಧಿಸಿತು.

ಟೈಟ್ಟನ್ಸ್ ವಿರುದ್ಧ ಪೈರೇಟ್ಸ್ ಗೆ ರೋಚಕ ಜಯ
ಎರೆಡನೇ ಪಂದ್ಯವು:
ತೆಲುಗು ಟೈಟನ್ಸ್(30) ಮತ್ತು ಪಟ್ನಾ ಪೈರೇಟ್ಸ್ (31) ತಂಡಗಳ ನಡುವೆ ಪಂದ್ಯ ನಡೆಯಿತು.ತೆಲುಗು ವಿರುದ್ಧ ಪಟ್ನಾ ಭರ್ಜರಿ ಜಯ ಸಾಧಿಸಿದೆ.

ಮೋನು ಗೋಯಸ್,ಸಚಿನ್ ಮತ್ತು ಪ್ರಶಾಂತ್ ಕುಮಾರ್ ಮೂವರು ಕ್ರಮವಾಗಿ 7.6 ಮತ್ತು 5 ಪಾಯಿಂಟ್ ಕಲೆ ಹಾಕಿದರು.
ಇವರುಗಳ ಸಂಘಟಿತ ಬಲ ಪ್ರದರ್ಶನದಿಂದಾಗಿ ತಂಡ 31-30 ರಿಂದ ಕೇವಲ 1 ಅಂಕದ ಅಂತರದಿಂದ ರೋಚಕ ಜಯ ಸಾಧಿಸಿತು.

ಇಂದು ನಡೆಯಲಿರುವ ಪಂದ್ಯಗಳು:
೧. ಹರಿಯಾಣ ಸ್ಟೀಲರ್ಸ್ ಮತ್ತು ಯು.ಮುಂಬಾ
ಸಮಯ:7.30
೨. ಯು.ಪಿ ಯೋಧಾ ಮತ್ತು ತಮಿಳ್ ತಲೈವಾರ್ಸ್
ಸಮಯ:8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ನಿರ್ವಹಣೆ ಪ್ರಧಾನಿ ಯಶಸ್ವಿ : ಸಿಎಂ ಬೊಮ್ಮಾಯಿ

0

ದೇಶಾದ್ಯಂತ 15 ರಿಂದ 18 ಮಕ್ಕಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಕೇಂದ್ರ ಸರ್ಕಾರದ ಅಭಿಯಾನಕ್ಕೆ ಸೋಮವಾರದಿಂದ ಚಾಲನೆ ನೀಡಲಾಗಿದೆ. ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋಮವಾರ ಒಂದೇ ದಿನ 40 ಲಕ್ಷಕ್ಕೂ ಅಧಿಕ ಮಕ್ಕಳು ಲಸಿಕೆ ಪಡೆದಿದ್ದಾರೆ. ಇದು ಹೀಗೆ ಮುಂದುವರೆದರೆ ಅಲ್ಪ ಅವಧಿಯಲ್ಲಿ ಈ ವಯೋಮಾನದ ಎಲ್ಲ ಮಕ್ಕಳಿಗೂ ಲಸಿಕೆ ನೀಡುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.

“ಸೋಮವಾರ ಬೆಳಗ್ಗೆಯಿಂದ ಲಸಿಕಾ ಕೇಂದ್ರಗಳಿಗೆ ಮಕ್ಕಳು ಧಾವಿಸಿ ಲಸಿಕೆ ಪಡೆಯುತ್ತಿದ್ದಾರೆ. ಅವರು ಲಸಿಕೆ ಪಡೆಯಲು ಉತ್ಸಾಹ ತೋರಿಸುತ್ತಿರುವ ಜೊತೆಗೆ ಅಭಿಯಾನದ ಕುರಿತು ಗಂಭೀರವಾಗಿ ಇದ್ದಾರೆ. ಹಾಗಾಗಿಯೇ ಮೊದಲ ದಿನವೇ ಲಕ್ಷಾಂತರ ಮಕ್ಕಳಿಗೆ ಲಸಿಕೆ ನೀಡಲು ಸಾಧ್ಯವಾಗಿದೆ” ಎಂದು ಕೋವಿಡ್ ಮುಖ್ಯಸ್ಥ ಡಾ.ಆರ್.ಎಸ್.ಶರ್ಮಾ ಅವರು ಈ ಬಗ್ಗೆ ಮಾಹಿತಿ ನೀಡಿದರು.

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 15-18 ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ದೇಶದಲ್ಲಿ ಈ ವಯೋಮಾನದ 7.4 ಕೋಟಿ ಮಕ್ಕಳಿದ್ದಾರೆ ಎಂದು ಅಂದಾಜಿಸಲಾಗಿದೆ. ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲಾಗುತ್ತಿದೆ.

ಕರ್ನಾಟಕದಲ್ಲೂ ಲಸಿಕೆ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಮೊದಲ ದಿನವೇ 4.14 ಲಕ್ಷ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಆರೋಗ್ಯ ಇಲಾಖೆಯು ಒಟ್ಟು 6.38 ಲಕ್ಷ ಲಸಿಕೆ ನೀಡುವ ಗುರಿ ಹೊಂದಿತ್ತು. ಈ ಗುರಿಯಲ್ಲಿ ಶೇ. 65 ರಷ್ಟು ಸಾಧ್ಯವಾಗಿದೆ.

ಹಾವೇರಿ ಜಿಲ್ಲೆಯಲ್ಲಿ ಮೊದಲ ದಿನವೇ ಗುರಿಗಿಂತ ಶೇ.281 ರಷ್ಟು ಅಧಿಕ ಲಸಿಕೆ ನೀಡಲಾಗಿದೆ. ಹಾವೇರಿ ಜಿಲ್ಲೆಗೆ 5000 ಲಸಿಕೆ ನೀಡುವ ಗುರಿಯನ್ನು ನಿಗದಿಪಡಿಸಲಾಗಿತ್ತು. ಆದರೆ 14,066 ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಹಾವೇರಿ ಮೊದಲ ಸ್ಥಾನ ಪಡೆದಿದೆ. ಬೆಳಗಾವಿ ಜಿಲ್ಲೆ ಶೇ.240 ರಷ್ಟು ಲಸಿಕೆ ನೀಡಿ ಎರಡನೇ ಸ್ಥಾನ ಪಡೆದಿದೆ. ಶೇ. 26 ರಷ್ಟು ಮಕ್ಕಳಿಗೆ ಮಾತ್ರ ಲಸಿಕೆ ನೀಡಿ ಮೈಸೂರು ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

“ಕೋವಿಡ್ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿಯಾಗಿದ್ದು, ಆರೋಗ್ಯದ ಸವಾಲುಗಳ ಜೊತೆಗೆ ಆರ್ಥಿಕ ಹಿಂಜರಿತ ತಡೆಗೂ ಯತ್ನಿಸಿದ್ದಾರೆ. ಅವರು ಕಾಲಕಾಲಕ್ಕೆ ತೆಗೆದುಕೊಂಡ ತೀರ್ಮಾನ ವಿಶ್ವಕ್ಕೆ ಮಾದರಿಯಾಗಿವೆ. 140 ಕೋಟಿ ಜನರಿಗೆ ಲಸಿಕೆ ಹಾಕುವುದನ್ನು ಹಂತಹಂತವಾಗಿ ನಡೆಸಿ ಶೇ.97 ರಷ್ಟು ಜನರಿಗೆ ಲಸಿಕೆ ಪೂರೈಕೆ ಮಾಡಿರುವುದು ಒಂದು ದಾಖಲೆ” ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.