Friday, February 13, 2026
Friday, February 13, 2026
Home Blog Page 1781

ದೇಶದ ಪ್ರಗತಿ ವಿಕಾಸಕ್ಕೆ ಯುವಜನ ಮುಂದಾಗಬೇಕು – ರಾಜ್ಯಪಾಲರು

0

ಭಾರತದ ಅಭ್ಯುದಯ ಯುವಜನರ ಕೈಯಲ್ಲಿದೆ. ಆದ್ದರಿಂದ ದೇಶದ ಪ್ರಗತಿ ಮತ್ತು ವಿಕಾಸಕ್ಕೆ ಅಗತ್ಯವಾದ ಕಾರ್ಯ ಯೋಜನೆಗಳನ್ನು ರೂಪಿಸಲು ಯುವಶಕ್ತಿ ಮುಂದಾಗಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದ್ದಾರೆ.

ಮಂಡ್ಯದ, ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಡ್ಯ ಜಿಲ್ಲಾಡಳಿತ, ಜಿ. ಪಂ. ನಿಂದ ಆರಂಭಗೊಂಡ 2 ದಿನಗಳ ರಾಜ್ಯ ಯುವ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

‘ನಾವು ನಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸದ ಹೊರತು ದೇಶದ ಪ್ರಗತಿ ಅಸಾಧ್ಯ. ದೇಶದಲ್ಲಿ ಶೇ.40 ರಷ್ಟು ಯುವ ಜನರಿದ್ದಾರೆ. ಇವರೆಲ್ಲರ ಶಕ್ತಿ ಸದ್ಬಳಕೆಯಾಗಬೇಕು. ಭಾರತವು ಹಿಂದೆಯೂ ವಿಶ್ವಗುರುವಾಗಿತ್ತು. ಮುಂದೆಯೂ ಆಗಲಿದೆ. ಇದರಲ್ಲಿ ಯುವ ಜನರ ಪಾತ್ರ ಮಹತ್ವದ್ದು. ವಿವೇಕಾನಂದರ ನಂತರ ಈಗ ಸಬಲೀಕರಣವನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಚಾರ. ಯುವಶಕ್ತಿ ಮನಸ್ಸು ಮಾಡಿದರೆ ನದಿಗಳ ಮಾರ್ಗವನ್ನೇ ಬದಲಾಯಿಸಬಹುದು’ ಎಂದು ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

“ದೇಶದ ಅಭಿವೃದ್ಧಿಯಲ್ಲಿ ಯುವಜನಾಂಗದ ಪಾತ್ರ ಅತಿ ಮುಖ್ಯ. ಮಾನವ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡಾಗ ಮಾತ್ರ ಭಾರತದ ನಿರ್ಮಾಣ ಸಾಧ್ಯ ಎಂದು ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧೀಶರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕರ್ತವ್ಯ ನ್ಯೂನ ಆಸ್ಪತ್ರೆ ಸಿಬ್ಬಂದಿಗಳಿಗೆ ಕೋರ್ಟ್ ಶಿಕ್ಷೆ

0

ವೆಂಟಿಲೇಟರ್ ಇಲ್ಲದೆ ಗರ್ಭಕೋಶದ ಶಸ್ತ್ರ ಚಿಕಿತ್ಸೆ ಮಾಡಿ ರೋಗಿಯ ಸಾವಿಗೆ ಕಾರಣರಾದ ಇಬ್ಬರೂ ವೈದ್ಯರನ್ನು ಮತ್ತು ಒಬ್ಬ ಸಿಬ್ಬಂದಿ ಮತ್ತು ಮೃತರಿಗೆ ಚಿಕಿತ್ಸೆ ನೀಡಿದ ಮತ್ತು ವೈದ್ಯ ನಿಗೆ ಬೀದರ್ ನಲ್ಲಿನ ಎರಡನೇ ಸಿವಿಲ್ ಮತ್ತು ಜೆಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ಖಾದರ್ ಅವರು ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದಾರೆ. ಸಾಕ್ಷಾಧಾರಗಳನ್ನು ಪರಿಶೀಲಿಸಿದ ನಂತರ ಮೂರು ಆರೋಪಿತರಿಗೆ ಶಿಕ್ಷೆಯ ತೀರ್ಪು ಪ್ರಕಟಿಸಿದ್ದಾರೆ.

ಬೀದರ್ ನ ಜೆಪಿ ನಗರದ ಡಾ. ಬಿರಾದಾರ್ ಶೂಶ್ರೂತ ನರ್ಸಿಂಗ್ ಹೋಂ ನ ಡಾ. ರಾಜಶ್ರೀ ಬಿರಾದಾರ್, ಡಾ. ವೈಜನಾಥ ಬಿರಾದಾರ್, ಸಾಯಿಬಣ್ಣ ಮಾಣಿಕ ಅಂಬಾಟೆ ಮತ್ತು ಡಾ. ರಾಜಶೇಖರ ಪಾಟೀಲ್ ಶಿಕ್ಷೆಗೊಳಗಾದವರು.

ಸೆಕ್ಷನ್ 304(ಎ) ಮತ್ತು ಐಪಿಸಿ 34 ಅಪರಾಧಕ್ಕೆ 2 ವರ್ಷ ಜೈಲು ಶಿಕ್ಷೆ ಹಾಗೂ ತಲಾ ಹತ್ತು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ನೀಡದಿದ್ದರೆ ಆರು ತಿಂಗಳ ಸಾದಾ ಕಾರಾಗೃಹ ಶಿಕ್ಷೆಯನ್ನು ನೀಡಲಾಗುತ್ತದೆ. ನಾಲ್ಕನೇ ಆರೋಪಿ ಡಾ. ರಾಜಶೇಖರ್ ಪಾಟೀಲ್ ಗೆ ಸೆಕ್ಷನ್ 202 ರ ಜೊತೆ ಐಪಿಸಿ 34 ಅಪರಾಧಕ್ಕೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡವನ್ನು ಬರಿಸಲಾಗದೆ ಇದ್ದಲ್ಲಿ ಒಂದು ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆ ವಿಧಿಸಲಾಗಿದೆ.

ಸರ್ಕಾರಿ ಅಭಿಯೋಜಕರಾದ ಶರಣಗೌಡ ಮತ್ತು ಸಹಾಯಕ ಸರ್ಕಾರಿ ಅಭಿಯೋಜಕರಾದ ಸುನಿಲ್ ಕಾಂಬಳೆ ವಾದವನ್ನು ಮಂಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಹನಿ ನೀರಾವರಿ ಸಬ್ಸಿಡಿ:ರೈತರಲ್ಲಿ ಜಾತಿ ನೋಡಬೇಡಿ-ಶಾಂತಕುಮಾರ್

0

ರಾಜ್ಯ ತೋಟಗಾರಿಕೆ ಇಲಾಖೆಯು ಕಳೆದ ಎರಡು ವರ್ಷಗಳಿಂದ ರೈತರಿಗೆ ಹನಿ ನೀರಾವರಿ ಯೋಜನೆಯ ಸಬ್ಸಿಡಿ ಹಣ ಬಿಡುಗಡೆ ಮಾಡಿಲ್ಲ. ಪರಿಣಾಮ 23,551 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿದ್ದು, 176 ಕೋಟಿ ರೂ. ಅನುದಾನ ನೀಡಬೇಕಿದೆ.
ಈ ಹಿಂದೆ ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಮಾನವಾಗಿ ಅಂದರೆ ಶೇ.90ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತು. ಇದೀಗ ಸಾಮಾನ್ಯ ವರ್ಗದ ರೈತರಿಗೆ ಶೇ.45 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.90ರಷ್ಟು ಸಬ್ಸಿಡಿ ನೀಡುವುದಾಗಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಇದರ ಪರಿಣಾಮ 2019-20 ಹಾಗೂ 2020-21ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿರುವ ಸಾಮಾನ್ಯ ವರ್ಗದ ರೈತರಿಗೆ ಶೇ.45ರಷ್ಟೇ ಸಬ್ಸಿಡಿ ನೀಡಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಆದರೆ, ಈ ಬಗ್ಗೆ ಇಲಾಖೆ ಈವರೆಗೆ ಹೊಸ ಆದೇಶದ ಮಾರ್ಗಸೂಚಿ ಪ್ರಕಟಿಸಿಲ್ಲ.
ರೈತರಿಗೆ ಜಾತಿ ಆಧಾರದಲ್ಲಿ ಸೇವೆಗಳನ್ನು ನೀಡುವುದು ಸರಿಯಲ್ಲ. ರೈತರಲ್ಲಿ ಯಾವುದೇ ಜಾತಿಯಿಲ್ಲ. ಹೀಗಾಗಿ, ಈ ಹಿಂದೆ ಹೇಗೆ ಶೇ.90ರಷ್ಟು ಸಬ್ಸಿಡಿ ನೀಡಲಾಗುತ್ತಿತ್ತೋ ಅದೇ ರೀತಿ ಈಗಲೂ ನೀಡಬೇಕು. ಬಾಕಿ ಇರುವ ಸಬ್ಸಿಡಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಅವರು ತಿಳಿಸಿದ್ದಾರೆ.
ಹನಿ ನೀರಾವರಿ ಅಳವಡಿಸಿದ ರೈತರಿಗೆ ಈ ಹಿಂದೆ ಸಂಸ್ಥೆಗಳ ಮೂಲಕ ಖಜಾನೆಯಿಂದ ಸಬ್ಸಿಡಿ ಹಣ ತಲುಪಿಸಲಾಗುತ್ತಿತ್ತು‌. ಈ ವೇಳೆ ಕೆಲ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಸಂಸ್ಥೆಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ರೈತರಿಗೂ, ಸರ್ಕಾರಕ್ಕೆ ವಂಚನೆ ಮಾಡಲು ಆರಂಭಿಸಿದವು. ಇದನ್ನು ತೋಟಗಾರಿಕೆ ಇಲಾಖೆಯು ಪರಿಶೀಲಿಸುವ ಗೋಜಿಗೆ ಹೋಗಲಿಲ್ಲ. ಇದನ್ನು ಮನಗಂಡ ಕೇಂದ್ರ ಸರ್ಕಾರ ಸಂಸ್ಥೆಗಳ ಮೂಲಕ ಹಣ ವಿತರಿಸುವುದನ್ನು ರದ್ದುಪಡಿಸಿ ನೇರವಾಗಿ ರೈತರಿಗೆ ತಲುಪಿಸುವ ಪಬ್ಲಿಕ್ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಸಿಸ್ಟಮ್ ಜಾರಿಗೆ ತಂದಿತು.
ಇದೀಗ ಅರ್ಹ ರೈತರ ಅರ್ಜಿಗಳ ಜತೆಗೆ ಸಂಸ್ಥೆಗಳು ಸಲ್ಲಿಸಿದ ನಕಲಿ ಅರ್ಜಿಗಳನ್ನು ಪತ್ತೆ ಮಾಡಲಾಗುತ್ತಿಲ್ಲ. ತೋಟಗಾರಿಕೆ ಇಲಾಖೆ ಗೊಂದಲಕ್ಕೆ ಸಿಲುಕಿದೆ. ಸಾಲ ಮಾಡಿ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡು ಸಬ್ಸಿಡಿ ಕಾಯುತ್ತಿರುವ ನೈಜ ರೈತರಿಗೆ ತೀವ್ರ ತೊಂದರೆಯಾಗಿದೆ.
ತರಕಾರಿ, ಹಣ್ಣಿನ ಬೆಳೆ, ವಾಣಿಜ್ಯ ಬೆಳೆಗಳಿಗೆ ಯೋಜನೆಯ ನೆರವು ಸಿಗಲಿದೆ. ರೈತರಿಗೆ ಮೊದಲ ಎರಡು ಹೆಕ್ಟೇರ್ ಗೆ ಸಬ್ಸಿಡಿ ಸಿಗಲಿದೆ. ಕನಿಷ್ಠ 70 ಸಾವಿರ ರೂ.ನಿಂದ ಗರಿಷ್ಠ 2 ಲಕ್ಷ ರೂ. ವರೆಗೆ ನೆರವು ಸಿಗಲಿದೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಲ್ಲಿ ವಸತಿ ಯೋಜನೆ ಪ್ರಗತಿ

0

ಬಹು ದಿನಗಳಿಂದ ವಸತಿ ಯೋಜನೆಯಡಿ ಹೊಸ ಮನೆಗಳ ನಿರ್ಮಾಣಕ್ಕೆ ಕಾಯುತ್ತಿದ್ದ ಫಲಾನುಭವಿಗಳಿಗೆ ಅವಕಾಶ ಒದಗಿ ಬಂದಿದೆ.
ಸರ್ಕಾರವು ರಾಜ್ಯಾದ್ಯಂತ ಐದು ಲಕ್ಷ ಹೊಸ ಮನೆಗಳನ್ನು ನಿರ್ಮಾಣ ಮಾಡಲಿದೆ. ಈ ಪೈಕಿ 4 ಲಕ್ಷ ಮನೆಗಳು ಗ್ರಾಮೀಣ ಪ್ರದೇಶಕ್ಕೆ ಮೀಸಲಿದ್ದು, ಈ ಮನೆಗಳು ಆಯಾ ಗ್ರಾಮ ಪಂಚಾಯಿತಿ ಸದಸ್ಯರು ಸಂಖ್ಯೆಗನುಗುಣವಾಗಿ ಸಿಗಲಿವೆ.
ಗ್ರಾಮೀಣ ಪ್ರದೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ ಎಸ್ ಸಿ,ಎಸ್ ಟಿ ವರ್ಗದವರಿಗೆ 53,190, ಅಲ್ಪಸಂಖ್ಯಾತ ವರ್ಗ ಸೇರಿ ಸಾಮಾನ್ಯ ವರ್ಗದವರಿಗೆ 16,5510 ಮನೆಗಳು ನಿಗದಿಯಾಗಿವೆ. ಅಲ್ಪಸಂಖ್ಯಾತರಿಗೆ ಶೇ.10 ಮೀಸಲಾತಿ ಇದ್ದು, ಗ್ರಾಮ ಪಂಚಾಯಿತಿ ನಿಗದಿಪಡಿಸಿದ ಗುರಿಯನ್ನು ಅಲ್ಪಸಂಖ್ಯಾತ ವಸತಿ ರಹಿತರು ಲಭ್ಯವಿಲ್ಲದಿದ್ದರೆ ಅದೇ ವಿಧಾನಸಭಾ ಕ್ಷೇತ್ರದ ಹೆಚ್ಚು ಲಭ್ಯವಿರುವ ಬೇರೆ ಗ್ರಾಮ ಪಂಚಾಯಿತಿಗೆ ವರ್ಗಾಯಿಸಬಹುದು.
ವಿವಿಧ ವಸತಿ ಯೋಜನೆಯಡಿ ನಾಲ್ಕು ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ರಾಜ್ಯ ಪುರಸ್ಕೃತ ಯೋಜನೆಯಡಿ ಗ್ರಾಮೀಣ ಪ್ರದೇಶಕ್ಕೆ ಬಸವ ಯೋಜನೆಯಡಿ 3.50 ಲಕ್ಷ, ಡಾ.ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆಯಡಿ 50 ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನಗರಪ್ರದೇಶಕ್ಕೆ ಮಂಜೂರಾದ 1 ಲಕ್ಷ ಮನೆಗಳ ಪೈಕಿ ವಾಜಪೇಯಿ ನಗರ ವಸತಿ ಯೋಜನೆಯಡಿ 50 ಸಾವಿರ, ಅಂಬೇಡ್ಕರ್ ವಸತಿ ಯೋಜನೆಯಡಿ 25 ಸಾವಿರ ಮನೆಗಳು, ದೇವರಾಜ ಅರಸು ಯೋಜನೆಯಡಿ 25 ಸಾವಿರ ಮನೆಗಳ ಗುರಿಯನ್ನು ನಿಗದಿಪಡಿಸಿ ಆದೇಶಿಸಲಾಗಿದೆ.
ಹೊಸ ಮನೆ ಮಂಜೂರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಲಾನುಭವಿಗಳಿಂದ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಇದರಿಂದ ಗ್ರಾಮ ಪಂಚಾಯಿತಿ ಸದಸ್ಯರ ಮೇಲೆ ಒತ್ತಡವಿತ್ತು. ಸರ್ಕಾರದ ನಿರ್ಧಾರವು ಗ್ರಾಮೀಣ ಭಾಗದ ಜನರ ಸಂತೋಷಕ್ಕೆ ಕಾರಣವಾಗಿದೆ.
ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳಲ್ಲಿ ಫಲಾನುಭವಿಗಳ ಆಯ್ಕೆಗೆ ಸರ್ಕಾರ ಈಗಾಗಲೇ ಸುತ್ತೋಲೆಯನ್ನು ಕಳುಹಿಸಿದೆ. ವಸತಿ ರಹಿತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೊಸಕೋಟೆಯ ವಸತಿ ಯೋಜನೆಯ ನೋಡಲ್ ಅಧಿಕಾರಿ ಸಿದ್ದು ಮುನಿಯಪ್ಪ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅತಿಥಿ ಉಪನ್ಯಾಸಕರ ಬೇಡಿಕೆಗಳ ಬಗ್ಗೆ ಚರ್ಚಿಸುವೆ- ಅಶ್ವತ್ಥನಾರಾಯಣ

0

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಕೆಲ ದಿನಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಎಲ್ಲಾ ಅತಿಥಿ ಉಪನ್ಯಾಸಕರು ತರಗತಿಗಳನ್ನು ಬಹಿಷ್ಕಾರ ಮಾಡಲಿದ್ದಾರೆ.
ಈ ಕೂಡಲೇ ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ಅವರ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ವಾರಕ್ಕೆ 10ರಿಂದ 12 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರ ನೀಡಬಾರದು ಎಂದು ಸಂಘಟನಾ ಸಂಚಾಲಕ ರಾಜೇಶ್ ಭಟ್ ತಿಳಿಸಿದ್ದಾರೆ.
ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವ ಕುರಿತಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಅವರು ತಿಳಿಸಿದ್ದಾರೆ.
ಸಚಿವರನ್ನು ಭೇಟಿ ಮಾಡಿದ ವಿಧಾನಪರಿಷತ್ ಬಿಜೆಪಿ ಸದಸ್ಯರಾದ ಅರುಣ ಶಹಾಪುರ ಮತ್ತು ಎಸ್.ವಿ.ಸಂಕನೂರ, ಸೇವಾ ಭದ್ರತೆಯೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಈ ಕುರಿತು ಚರ್ಚಿಸಲು ಶಿಕ್ಷಕ ಹಾಗೂ ಪದವೀಧರ ಕ್ಷೇತ್ರಗಳನ್ನು ಪ್ರತಿನಿಧಿಸುವ ಮೇಲ್ಮನೆ ಸದಸ್ಯರು ಮತ್ತು ಅತಿಥಿ ಉಪನ್ಯಾಸಕರ ಸಂಘಟನೆಗಳ ಜೊತೆ ಸಭೆ ನಡೆಸುವಂತೆ ಸಚಿವರಲ್ಲಿ ಮನವಿ ಮಾಡಿದ್ದೇವೆ. ಶೀಘ್ರದಲ್ಲೇ ಸಭೆ ಕರೆಯುವ ಭರವಸೆ ನೀಡಿದ್ದಾರೆ ಎಂದು ಅರುಣ ಶಹಾಪುರ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಡಿಜಿಟಲ್ ಪಾವತಿ ಆರ್ ಬಿ ಐ ನಿಬಂಧನೆಗಳು

0

ಭಾರತೀಯ ರಿಸರ್ವ್ ಬ್ಯಾಂಕ್ ಆನ್ಲೈನ್ ಪೇಮೆಂಟ್ ವ್ಯವಸ್ಥೆಗೆ ಅನುಮೋದನೆ ನೀಡುವ ಮೂಲಕ ಡಿಜಿಟಲ್ ಪಾವತಿಯ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ರಿಸರ್ವ್ ಬ್ಯಾಂಕ್ ಈ ಸಂಬಂಧ ಕೆಲವೊಂದು ನಿಯಮಗಳನ್ನು ತಿಳಿಸಿದೆ. ಮೊಬೈಲ್ ನೆಟ್ವರ್ಕ್ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆಯೇ ಹಣ ಪಾವತಿ ಅಥವಾ ವರ್ಗಾವಣೆಗೆ ಅವಕಾಶವಿದೆ. ಈ ವ್ಯವಸ್ಥೆ ಗ್ರಾಮಾಂತರ ಪ್ರದೇಶಗಳ ಜನರಿಗೆ ಹೆಚ್ಚು ಅನುಕೂಲವಾಗಲಿದೆ.

ಈ ಪಾವತಿ ವ್ಯವಸ್ಥೆಯಲ್ಲಿ ಯಾವುದೇ ಓಟಿಪಿ ದೃಢೀಕರಣ ಇರುವುದಿಲ್ಲ, ಆದರೆ ಇಬ್ಬರು ವ್ಯಕ್ತಿಗಳು ಮುಖಾಮುಖಿ ಅಂತರದಲ್ಲಿರಬೇಕು. ಆಫ್ಲೈನ್ ಪಾವತಿಯಲ್ಲಿ ಒಮ್ಮೆಗೆ 200 ರೂ.ವರೆಗೆ ಮತ್ತು ಒಟ್ಟಾರೆ 2000 ರೂ.ರವರೆಗೆ ವಿಧಿಸಲಾಗಿದೆ.

ಎನ್ ಎಫ್ ಸಿ, ಕ್ಯೂಆರ್ ಕೋಡ್, ಚಿಪ್ ಆಧರಿತ ಹಾಡುಗಳ ಮೂಲಕ ಆನ್ಲೈನ್ ಪಾವತಿ ಮಾಡಬಹುದಾಗಿದೆ.

ಈ ಸಂಬಂಧ 2020 ರ ಸೆಪ್ಟೆಂಬರ್ ನಿಂದ 2021ರ ಜೂನ್ ವರೆಗೆ ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿತ್ತು. ಆಫ್ ಲೈನ್ ಡಿಜಿಟಲ್ ಪೇಮೆಂಟ್ ನಲ್ಲಿ ಬಳಸುವ ಸಾಧನಗಳು ಮುಖಾಮುಖಿಯಾಗಿ ಇದ್ದಾಗ ಮಾತ್ರ ಪಾವತಿ ಸಾಧ್ಯ. ಕಾರ್ಡ್, ವ್ಯಾಲೆಟ್, ಮೊಬೈಲ್ ಬಳಸಿ ವರ್ಗಾಯಿಸಬಹುದು. ಈ ವ್ಯವಸ್ಥೆಯಲ್ಲಿ ಬಳಕೆದಾರರ ದೃಢೀಕರಣದ ನಂತರ ವರ್ಗಾವಣೆ ಸಾಧ್ಯವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಮುನ್ನೆಚ್ಚರಿಕೆ ಮಾರ್ಗಸೂಚಿ.

0

ರಾಜ್ಯದಲ್ಲಿ ಶರವೇಗದಲ್ಲಿ ಕೋವಿಡ್ ಮತ್ತು ಓಮಿಕ್ರಾನ್ ಮುಂದುವರೆದ ಹಿನ್ನೆಲೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ರಾಜ್ಯದ ಶೇ.90ರಷ್ಟು ಸೋಂಕಿತರು ಬೆಂಗಳೂರಿನಲ್ಲಿ ಇರುವುದರಿಂದ ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇ.3ಕ್ಕಿಂತ ಹೆಚ್ಚು ದಾಖಲಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಲಹೆ ಪಡೆದು ಕೆಲವೊಂದು ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರಾದ ಆರ್.ಅಶೋಕ್ ಹಾಗೂ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು ನಗರವೊಂದರಲ್ಲೇ ಮಂಗಳವಾರ ಒಟ್ಟು 2,053 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ ಮೂವರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಸೇರಿದಂತೆ ಒಟ್ಟು ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ.

  • ರಾಜ್ಯಾದ್ಯಂತ ನೈಟ್ ಕರ್ಫ್ಯೂ ಇನ್ನು ಎರಡು ವಾರದವರೆಗೆ ಮುಂದುವರಿಸಲಾಗಿದೆ.
  • ಗುರುವಾರದಿಂದ ಬೆಂಗಳೂರಿನಾದ್ಯಂತ ಶಾಲಾ-ಕಾಲೇಜುಗಳು ಬಂದ್ ಮಾಡಲಾಗಿದ್ದು, ಆನ್ಲೈನ್ ತರಗತಿಗಳು ನಡೆಯಲಿವೆ.
  • ಸರ್ಕಾರಿ ಕಚೇರಿಗಳಲ್ಲಿ 50:50 ಸಿಬ್ಬಂದಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.

*ಮದುವೆ ಸೇರಿ ಎಲ್ಲಾ ಸಭೆ-ಸಮಾರಂಭಗಳಿಗೆ ಜನರ ಗರಿಷ್ಠ ಮಿತಿ ನಿಗದಿ ಮಾಡಲಾಗಿದ್ದು, ಹೊರಾಂಗಣದಲ್ಲಿ 200 ಜನರು, ಒಳಾಂಗಣದಲ್ಲಿ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

  • ಜಾತ್ರೆ, ಪ್ರತಿಭಟನೆ, ಜಾಥ, ಪ್ರಚಾರ ಸಭೆಗಳಿಗೂ ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ.

*ಹೋಟೆಲ್, ಪಬ್, ಬಾರ್, ಜಿಮ್, ಥಿಯೇಟರ್ ಗಳಲ್ಲಿ 50% ಸೀಟಿಂಗ್ ಗೆ ಅವಕಾಶ ಕೊಡಲಾಗಿದೆ ಹಾಗೂ ಹೊರರಾಜ್ಯದಿಂದ ಬರುವವರಿಗೆ ಆರ್ ಟಿ ಪಿ ಸಿ ಆರ್ ನೆಗೆಟಿವ್ ಕಡ್ಡಾಯ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ರಾಜ್ಯದಲ್ಲಿ ಕೋವಿಡ್ ತಡೆಗೆ ಅಗತ್ಯವಿರುವ ನಿರ್ವಹಣಾ ಕ್ರಮಗಳನ್ನು ತಕ್ಷಣ ಜಾರಿಗೆ ತರಲು ಮತ್ತು ಅದರ ಮೇಲ್ವಿಚಾರಣೆಗೆ ರಾಜ್ಯ ಸರ್ಕಾರ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದೆ.

ಈ ಸಮಿತಿಯಲ್ಲಿ ಕೋವಿಡ್ ವಾರ್ ರೂಂ, ಆಂಬ್ಯುಲೆನ್ಸ್ ನಿರ್ವಹಣಾ ಸಮಿತಿ, ಸ್ಯಾಂಪಲ್ ಸಂಗ್ರಹ-ಪರೀಕ್ಷೆ- ಪ್ರಯೋಗಾಲಯ ನಿಯಂತ್ರಣ ಸಮಿತಿ, ಹೋಮ್ ಐಸೋಲೇಷನ್ ಸಮಿತಿ, ಆಕ್ಸಿಜನ್ ಟ್ಯಾಂಕರ್ ಮೇಲ್ವಿಚಾರಣಾ ಸಮಿತಿ, ಬಳ್ಳಾರಿಯಿಂದ ರಾಜ್ಯದ್ಯಂತ ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ ಪೂರೈಕೆ ನಿರ್ವಹಣಾ ಸಮಿತಿ, ರಾಜ್ಯಮಟ್ಟದ ಸಹಾಯವಾಣಿ, ಖಾಸಗಿ/ ಎನ್ ಜಿ ಒ/ ಕಾರ್ಪೊರೇಟ್ ವಲಯಗಳೊಂದಿಗೆ ಸಮನ್ವಯ ಸಮಿತಿ, ಕೋವಿಡ್ ನಿಂದ ಮೃತಪಟ್ಟ ಮಕ್ಕಳಿಗೆ ಸರ್ಕಾರದ ಸೌಲಭ್ಯ. ಅಂತರರಾಷ್ಟ್ರೀಯ ಸಂಸ್ಥೆ ಸಮುದಾಯಗಳೊಂದಿಗೆ ಸಮನ್ವಯ ಸಮಿತಿ ಹಾಗೂ ಪರಿಕರಗಳನ್ನು ಆಮದು ನೋಡಲ್ ಅಧಿಕಾರಿಗಳ ಸಮಿತಿಗಳನ್ನು ಸರ್ಕಾರ ಜಾರಿಗೊಳಿಸಿದೆ.

ಒಟ್ಟಾರೆ ರಾಜ್ಯ ಸರ್ಕಾರ ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸಜ್ಜಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ಲಸಿಕೆ ಪೂರೈಕೆಯಲ್ಲಿ ಕರ್ನಾಟಕ ದ್ವಿತೀಯ ಸ್ಥಾನ

0

ಕೋವಿಡ್ ಲಸಿಕೆ ಪೂರೈಕೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಉತ್ತಮ ಸಾಧನೆ ಮಾಡಿದೆ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ ನಾಯ್ಕ ಅವರು ಹೇಳಿದ್ದಾರೆ.

ಹೊಳೆಹೊನ್ನೂರಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ಆರೋಗ್ಯ ರಕ್ಷಾ ಸಮಿತಿ ಇಲ್ಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ 18 ವರ್ಷದೊಳಗಿನವರಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಸೋಂಕಿನ ವಿರುದ್ಧದ ಹೋರಾಟದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಇದೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಟ್ಟು ಲಸಿಕೆ ತೆಗೆದುಕೊಳ್ಳುವುದರಿಂದ ವಂಚಿತರಾಗಬಾರದು ಎಂದು ಕೆ.ಬಿ. ಅಶೋಕ್ ನಾಯ್ಕ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಅಶೋಕ್, ಪ. ಪಂ. ಮುಖ್ಯಾಧಿಕಾರಿ ಸ್ಟ್ಯಾನಿ ಫರ್ನಾಂಡಿಸ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಪ್ರಭುಗೌಡ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಒಮಿಕ್ರಾನ್ ಪ್ರಕರಣ: ನಿರುದ್ಯೋಗ ಪ್ರಮಾಣ ಏರಿಕೆ

0

ದೇಶದಲ್ಲಿನ ನಿರುದ್ಯೋಗ ಪ್ರಮಾಣವು ಡಿಸೆಂಬರ್ ತಿಂಗಳಲ್ಲಿ 4 ತಿಂಗಳ ಗರಿಷ್ಠ ಮಟ್ಟ ತಲುಪಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಸಂಸ್ಥೆಯ ವರದಿ ಹೇಳಿದೆ.
ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಹಲವು ರಾಜ್ಯಗಳಲ್ಲಿ ನಿರ್ಬಂಧಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದಾಗಿ ಆರ್ಥಿಕ ಚಟುವಟಿಕೆಗಳು ಮತ್ತು ಗ್ರಾಹಕರ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಿದೆ.
ಡಿಸೆಂಬರ್ ನಲ್ಲಿ ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣವು ಶೇ.9.3ಕ್ಕೆ ಏರಿದೆ. ನವೆಂಬರ್ ನಲ್ಲಿ ಶೇ.8.2ರಷ್ಟಿತ್ತು. ಗ್ರಾಮೀಣ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣವು ಶೇ.7.3ಕ್ಕೆ ಹೆಚ್ಚಳ ಆಗಿದೆ ಎಂದು ಸಿಎಂಐಇ ಅಂಕಿಅಂಶಗಳು ತಿಳಿಸಿವೆ.
ನಿರುದ್ಯೋಗ ಪ್ರಮಾಣವು ನವೆಂಬರ್ ನಲ್ಲಿ ಶೇ 7ರಷ್ಟು ಇತ್ತು. ನವೆಂಬರ್ ಗೆ ಹೋಲಿಸಿದರೆ ಡಿಸೆಂಬರ್ ನಲ್ಲಿ ನಿರುದ್ಯೋಗ ಹೆಚ್ಚಳ ಆಗಿದೆ. ಆಗಸ್ಟ್ ನಲ್ಲಿ ನಿರುದ್ಯೋಗ ಪ್ರಮಾಣವು ಶೇ.8.3ರ ಮಟ್ಟವನ್ನು ತಲುಪಿತ್ತು.
ಹಿಂದಿನ ತ್ರೈಮಾಸಿಕದಲ್ಲಿ ಕಂಡುಬಂದಿದ್ದ ಆರ್ಥಿಕ ಚೇತರಿಕೆಯು ಒಮಿಕ್ರಾನ್ ಪ್ರಕರಣಗಳ ಹೆಚ್ಚಳದಿಂದಾಗಿ ಹಳಿ ತಪ್ಪಬಹುದು ಎಂದು ಹಲವು ಅರ್ಥಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸುಡಾನ್ ಪ್ರಧಾನಿ ರಾಜಿನಾಮೆ

0

ಸುಡಾನ್ ನಲ್ಲಿ ಉಂಟಾಗಿರುವ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳು ಮತ್ತು ರಾಜಕೀಯ ಕ್ಷೋಭೆಯಿಂದ ಅಲ್ಲಿಯ ಪ್ರಧಾನಿ ಅಬ್ದುಲ್ಲಾ ಹ್ಯಾಮ್ ಡೋಕ್ ರಾಜೀನಾಮೆ ಘೋಷಿಸಿದ್ದಾರೆ.
ದೇಶದಲ್ಲಿ ಅಭದ್ರತೆ ಮತ್ತು ಆರ್ಥಿಕ ಸವಾಲುಗಳ ನಡುವೆ ಪ್ರಧಾನಿ ಹ್ಯಾಮ್ ಡೋಕ್ ರಾಜಿನಾಮೆಯು ರಾಜಕೀಯ ಸ್ಥಿತ್ಯಂತರ ಉಂಟುಮಾಡಿದೆ.
ಅಕ್ಟೋಬರ್ ನಲ್ಲಿ ದಂಗೆಯ ನಂತರ ಮಿಲಿಟರಿಯೊಂದಿಗಿನ ಒಪ್ಪಂದದ ಭಾಗವಾಗಿ ವಿಶ್ವಸಂಸ್ಥೆಯ ಮಾಜಿ ಅಧಿಕಾರಿ ಹ್ಯಾಮ್ ಡೋಕ್ ಅವರನ್ನು ಕಳೆದ ವರ್ಷ ನವೆಂಬರ್ ನಲ್ಲಿ ಸುಡಾನ್ ಸರ್ಕಾರದ ಪ್ರಧಾನಿಯಾಗಿ ಮರು ನೇಮಕ ಮಾಡಲಾಗಿತ್ತು. ಈ ವೇಳೆ ಹ್ಯಾಮ್ ಡೋಕ್ ಸಂಪುಟ ರಚಿಸಲು ವಿಫಲವಾಗಿದ್ದರು.
ನಾನು ನನ್ನ ಜವಾಬ್ದಾರಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದು ಪ್ರಧಾನಿ ಹುದ್ದೆಗೆ ರಾಜಿನಾಮೆ ಘೋಷಿಸುತ್ತೇನೆ. ಇದರಿಂದ ಮತ್ತೊಬ್ಬ ವ್ಯಕ್ತಿಯು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರುಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ದೂರದರ್ಶನ ವಾಹಿನಿಯ ಭಾಷಣದಲ್ಲಿ ತಿಳಿಸಿದರು.